cricket – Peepal Media

ಲೋಕಸಭೆ ಚುನಾವಣೆ: ಕ್ರಿಕೆಟಿಗ ಶಮಿ ಬಿಜೆಪಿಯಿಂದ ಕಣಕ್ಕೆ?
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಂಗಾಳದಿಂದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರನ್ನು ನಾಮನಿರ್ದೇಶನ ಮಾಡುವ ಸಾಧ್ಯತೆಯನ್ನು ಬಿಜೆಪಿ ಆಲೋಚಿಸುತ್ತಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಶಮಿ ರಣಜಿ ಟ್ರೋಫಿಯಲ್ಲಿ ಬಂಗಾಳವನ್ನು ಪ್ರತಿನಿಧಿಸುತ್ತಿದ್ದು, ಆ ರಾಜ್ಯದ ಪರವಾಗಿ ದೇಸಿ ಪಂದ್ಯಾಟಗಳಲ್ಲಿ ಭಾಗವಹಿಸುತ್ತಿದ್ದಾರೆ.

ಈ ಪ್ರಸ್ತಾವನೆಯನ್ನು ಬಿಜೆಪಿ ನಾಯಕತ್ವ ಶಮಿಗೆ ತಲುಪಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕ್ರಿಕೆಟಿಗ ಇನ್ನೂ ಈ ಕುರಿತು ನಿರ್ಧಾರ ಕೈಗೊಂಡಿಲ್ಲ.

ಪ್ರಸ್ತುತ, ಶಮಿ ಇತ್ತೀಚಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಳ್ಳುತ್ತಿದ್ದು, ವಿರಾಮದಲ್ಲಿದ್ದಾರೆ. ಈ ಕುರಿತು ಶಮಿ ಹಾಕಿದ್ದ ಪೋಸ್ಟಿಗೆ ನರೇಂದ್ರ ಮೋದಿ ಪ್ರತಿಕ್ರಿಯಿಸಿ ಬೇಗನೇ ಗುಣಮುಖರಾಗಿ ಎಂದು ಹಾರೈಸಿದ್ದರು.

ಭಾರತದ ODI ವಿಶ್ವಕಪ್ ಅಭಿಯಾನದ ನಂತರ ಶಮಿ ಕ್ರಿಕೆಟ್‌ ಅಂಗಳಕ್ಕೆ ಇಳಿದಿಲ್ಲ, ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವರು ಏಳು ಪಂದ್ಯಗಳಲ್ಲಿ 10.70 ಸರಾಸರಿ ಮತ್ತು 12.20 ಸ್ಟ್ರೈಕ್ ರೇಟ್‌ನಲ್ಲಿ 24 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡವನ್ನು ಫೈನಲ್ ತಲುಪಲು ಸಹಾಯ ಮಾಡಿದ್ದರು.

ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ಸೋತ ನಂತರ, ಪ್ರಧಾನಿ ಮೋದಿ ಅವರು ಎಲ್ಲಾ ಆಟಗಾರರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಾಂತ್ವನ ಹೇಳಿದರು. ಆ ಸಂದರ್ಭದಲ್ಲಿ ಪ್ರಧಾನಿ ಶಮಿಯನ್ನು ವಿಶೇಷವಾಗಿ ಹೊಗಳಿ ತಬ್ಬಿಕೊಂಡಿದ್ದರು,

ಆ ವಿಡಿಯೋ ಆಗ ವೈರಲ್‌ ಆಗಿತ್ತು

ಶಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಹ ಭೇಟಿ ಮಾಡಿದ್ದಾರೆ.

ಇದಲ್ಲದೇ ಶಮಿ ಅವರ ಹುಟ್ಟೂರು ಅಮ್ರೋಹಾದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದರು.

ಬಿಜೆಪಿಯ ಉನ್ನತ ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಶಮಿ ಅವರನ್ನು ಅಭ್ಯರ್ಥಿಯಾಗಿ ಪ್ರಸ್ತಾಪಿಸಲಾಗಿದೆ ಮತ್ತು ಚರ್ಚೆಗಳು ಸಕಾರಾತ್ಮಕವಾಗಿವೆ. ಬಿಜೆಪಿಯೊಳಗಿನ ಆಂತರಿಕ ಚರ್ಚೆಗಳು ಶಮಿಯನ್ನು ಕಣಕ್ಕಿಳಿಸುವುದು ಬಂಗಾಳದ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವು ಸಾಧಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸಿವೆ.

ಬಿಜೆಪಿ ಮೂಲಗಳ ಪ್ರಕಾರ, ಬಂಗಾಳದ ಗಡಿಯೊಳಗಿನ ಸಂದೇಶಖಾಲಿ ಗ್ರಾಮವು ಹಿಂಸಾಚಾರಕ್ಕೆ ಸಾಕ್ಷಿಯಾದ ನಂತರ ಸುದ್ದಿಯಲ್ಲಿರುವ ಬಸಿರ್ಹತ್ ಲೋಕಸಭಾ ಕ್ಷೇತ್ರದಿಂದ ಶಮಿಯನ್ನು ಕಣಕ್ಕಿಳಿಸುವುದು ಬಿಜೆಪಿಯ ಯೋಚನೆಯಾಗಿದೆ

ಬಿಜೆಪಿ ಸಂಸದ ಗೌತಮ್ ಗಂಭೀರ್ ರಾಜಕೀಯ ನಿವೃತ್ತಿ
ನವದೆಹಲಿ: ಅಲ್ಪಾವಧಿಯ ರಾಜಕೀಯ ಜೀವನದಿಂದ ಬೇಸತ್ತಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು, ತಮ್ಮನ್ನು ರಾಜಕೀಯ ಕರ್ತವ್ಯಗಳಿಂದ ಬಿಡುಗಡೆಗೊಳಿಸುವಂತೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಪೂರ್ವ ದೆಹಲಿಯ ಸಂಸದರಾಗಿರುವ ಗಂಭೀರ್, ತಮ್ಮ X ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ಜನರ ಸೇವೆ ಮಾಡಲು ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದ ಸಲ್ಲಸಿದ್ದಾರೆ.

“ನನ್ನ ಮೇಲೆ ಬೇಕಾದಷ್ಟು ಕ್ರಿಕೆಟ್ ಸಂಬಂಧಿತ ಜವಾಬ್ದಾರಿಗಳಿವೆ. ನಾನು ಆ ಕಡೆಗೆ ಗಮನ ನೀಡಬೇಕಿದೆ. ಹಾಗಾಗಿ ನನ್ನನ್ನು ರಾಜಕೀಯ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮನವಿ ಮಾಡಿದ್ದೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ, ಜೈ ಹಿಂದ್,” ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಭಾರತೀಯ ಕ್ರಿಕೇಟ್ ತಂಡದ ಮಾಜಿ ಕ್ರಿಕೆಟಿಗರಾಗಿರುವ‌ ಗೌತಮ್ ಗಂಭೀರ್, 2007ರಲ್ಲಿ ಟಿ20 ಹಾಗೂ 2011ರಲ್ಲಿ ಏಕದಿನ‌ ಪಂದ್ಯದಲ್ಲಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ಪರ 147 ಏಕದಿನ, 58 ಟೆಸ್ಟ್ ಹಾಗೂ 37 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 5,238 ರನ್, 4,154 ರನ್ ಮತ್ತು 932 ರನ್. ಅವರು 154 ಐಪಿಎಲ್ ಪಂದ್ಯಗಳಿಂದ 4,218 ರನ್ ಭಾರಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಗಂಭೀರ್ ನಾಯಕತ್ವದಲ್ಲಿ 2012 ಮತ್ತು 2014 ರಲ್ಲಿ ಚಾಂಪಿಯನ್‌ಶಿಪ್ ಗೆದ್ದಿತ್ತು. ಕಳೆದ ಎರಡು ಎಡಿಷನ್‌ಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಇವರು, ಈಗ ಮತ್ತೊಮ್ಮೆ ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕಗೊಂಡಿರುವುದನ್ನು ನಾವು ನೆನಪಿಸಿಕೊಳ್ಳಬಹುದು.

ಪಾಕ್ ನಟಿ ಸನಾ ಜಾವೇದ್ ವರಿಸಿದ ಶೋಯೆಬ್ ಮಲಿಕ್ ; ಸಾನಿಯಾ ಬಗ್ಗೆ ದುಪ್ಪಟ್ಟಾದ ಪ್ರಶ್ನೆಗಳು!
ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ದಾಂಪತ್ಯ ಜೀವನದ ಬಗ್ಗೆ ಬರುತ್ತಿದ್ದ ಅಲ್ಲೊಂದು ಇಲ್ಲೊಂದು ಊಹಾಪೋಹಗಳಿಗೆ ಈಗ ಸಂಪೂರ್ಣ ತೆರೆ ಬಿದ್ದಂತಾಗಿದೆ. ಶೋಯೆಬ್ ಮಲಿಕ್ ಈಗ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ವಿವಾಹವಾದ ಬಗ್ಗೆ ಈಗ ಖುದ್ದು ಶೋಯೆಬ್ ಮಲಿಕ್ ಖಚಿತಪಡಿಸಿದ್ದಾರೆ.

ಜನವರಿ 20 ರ ಶನಿವಾರ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೋಯೆಬ್ ಮಲಿಕ್ ಹಂಚಿಕೊಂಡಿದ್ದಾರೆ. ಮಲಿಕ್ ಅವರ ಕ್ರಿಕೆಟ್ ಮ್ಯಾನೇಜರ್ ಕೂಡ ಸನಾ ಜಾವೇದ್ ಅವರನ್ನು ವಿವಾಹವಾದ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಈ ಮೂಲಕ ಮಲಿಕ್ ಮತ್ತು ಸಾನಿಯಾ ಮಿರ್ಜಾ ದಾಂಪತ್ಯದ ಬಗ್ಗೆ ಹರಿದಾಡುತ್ತಿರುವ ಊಹಾಪೋಹ ಈಗ ಇನ್ನೊಂದು ಮಜಲಿನತ್ತ ವಾಲಿದೆ.

ಮಲಿಕ್ ಸನಾ ಅವರೊಂದಿಗಿನ ಮದುವೆಯ ಕೆಲವು ಚಿತ್ರಗಳನ್ನು ಹಂಚಿಕೊಂಡ ಮಲಿಕ್ ತಮ್ಮ ಇನಿಸ್ಟಾಗ್ರಾಂ ಖಾತೆಯಲ್ಲಿ “ಅಲ್ಹಮ್ದುಲ್ಲಿಲಾಹ್. ಮತ್ತು ನಾವು ನಿಮ್ಮನ್ನು ಜೋಡಿಯಾಗಿ ಸ್ವೀಕರಿಸಿದ್ದೇವೆ” ಎಂದು ಬರೆದುಕೊಂಡಿದ್ದಾರೆ. ಮಲಿಕ್ ಅವರ ಈ ಘೋಷಣೆ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದೆ.

– Alhamdullilah ♥️

"And We created you in pairs" وَخَلَقْنَاكُمْ أَزْوَاجًا pic.twitter.com/nPzKYYvTcV
— Shoaib Malik 🇵🇰 (@realshoaibmalik) January 20, 2024

ಏತನ್ಮಧ್ಯೆ, ಕೆಲವೇ ದಿನಗಳ ಹಿಂದೆ, ಸಾನಿಯಾ ಮಿರ್ಜಾ ಇನ್ಸ್ಟಾಗ್ರಾಮ್ನಲ್ಲಿ ರಹಸ್ಯವಾದ ಪೋಸ್ಟ್ ಒಂದನ್ನು ಹಂಚಿಕೊಂಡು, “ವಿಚ್ಛೇದನ ಕಷ್ಟ” ಎಂಬ ಶೀರ್ಷಿಕೆ ಕೊಟ್ಟಿದ್ದರು. ಆಗಿನಿಂದ ಇವರ ದಾಂಪತ್ಯದ ಬಗ್ಗೆ ಹೆಚ್ಚು ಚರ್ಚೆ ಹುಟ್ಟಿಕೊಂಡಿತ್ತು. ಸನಾ ಜೊತೆಗಿನ ವಿವಾಹದ ನಂತರ ಈಗ ಮಲಿಕ್ ಮತ್ತು ಸಾನಿಯಾ ನಡುವಿನ ದಾಂಪತ್ಯ ಏನಾಗಲಿದೆ ಎಂಬುದೇ ಈಗ ಇಬ್ಬರ ಅಭಿಮಾನಿಗಳು ಮತ್ತು ಕ್ರೀಡಾ ಕ್ಷೇತ್ರದ ಹಲವರಲ್ಲಿ ಪ್ರಶ್ನೆ ಹುಟ್ಟು ಹಾಕಿದೆ.

BCCI ನಿಂದ ಜೆರ್ಸಿ ನಂ 7 ಕ್ಕೆ ನಿವೃತ್ತಿ : ಎಂಎಸ್ ದೋನಿ ಜೆರ್ಸಿಗೆ ಇರೋ ವಿಶೇಷತೆ ಏನು ಗೊತ್ತಾ?
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಜೆರ್ಸಿ ನಂ 7 ಕ್ಕೆ ನಿವೃತ್ತಿ ಘೋಷಿಸಲು ತೀರ್ಮಾನಿಸಿದೆ. ಭಾರತೀಯ ಕ್ರಿಕೆಟ್ ನ ದಂತಕಥೆ ಮಹೇಂದ್ರ ಸಿಂಗ್ ಧೋನಿ ಅವರ ಅಸ್ಮಿತೆಯಂತಿದ್ದ ಈ ಸಂಖ್ಯೆಯ ಜೆರ್ಸಿ ಇನ್ನು ಮುಂದೆ ನಿವೃತ್ತಿ ಪಡೆಯಲಿದೆ. ಅಷ್ಟಕ್ಕೂ ಈ ಜೆರ್ಸಿ ಹಾಗೂ ಮಹೇಂದ್ರ ಸಿಂಗ್ ಧೋನಿಯವರಿಗೆ ಇರುವ ಅವಿನಾಭಾವ ಸಂಬಂಧ ಏನು ಅಂತೀರಾ.. ಈ ಸ್ಟೋರಿ ಓದಿ.

ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಮಹೇಂದ್ರ ಸಿಂಗ್ ಧೋನಿ ಅಗ್ರಗಣ್ಯರು. ಭಾರತ ತಂಡಕ್ಕೆ ಮೂರು ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ಏಕೈಕ ನಾಯಕರಾಗಿ ಮಹೇಂದ್ರ ಸಿಂಗ್ ಧೋನಿ ನಿಲ್ಲುತ್ತಾರೆ. ಎಂಎಸ್ ದೋನಿಯವರ ಸೌಮ್ಯ ಸ್ವಭಾವ, ಸಹ ಆಟಗಾರರನ್ನು ಒಮ್ಮತಕ್ಕೆ ತಂದು ತಂಡವನ್ನು ಮುನ್ನಡೆಸುವ ರೀತಿಗೆ ದೋನಿಗೆ ದೋನಿಯವರೇ ಸಾಟಿ.

ಐಸಿಸಿ ಟೂರ್ನಿಗಳ ವಿಷಯಕ್ಕೆ ಬಂದಾಗ ಭಾರತ ತಂಡದ ಅತ್ಯಂತ ಯಶಸ್ವಿ ನಾಯಕನಾಗಿ ಉಳಿದಿರುವ ಎಂಎಸ್ ಧೋನಿಗೆ ಸಮನಾರ್ಥಕವಾಗಿ ಜೆರ್ಸಿ ನಂ 7 ಅನ್ನು ಪರಿಗಣಿಸಲಾಗಿದೆ. ಐಸಿಸಿ ಟೂರ್ನಿಯಲ್ಲಿ ದೋನಿಯ ಆಟ ಶುರುವಾದಾಗಿನಿಂದ ಈ ಸಂಖ್ಯೆ ದೋನಿಯವರ ಅದೃಷ್ಟ ಸಂಖ್ಯೆಯಂತೆ ನಡೆದು ಬಂದಿದೆ.

ಭಾರತದ ಮತ್ತೋರ್ವ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ನಂ.10 ಜೆರ್ಸಿ ಈಗಾಗಲೇ ಭಾರತೀಯ ಕ್ರಿಕೆಟ್ ಮಂಡಳಿಯಿಂದ ನಿವೃತ್ತಿ ಹೊಂದಿದ್ದು, ಭಾರತ ತಂಡಕ್ಕೆ ವಿಕೆಟ್ ಕೀಪರ್, ಬ್ಯಾಟರ್ ನೀಡಿದ ಕೊಡುಗೆಯನ್ನು ಗೌರವಿಸಿ, ಎಂಎಸ್ ಧೋನಿಯ ನಂ.7 ಜೆರ್ಸಿಯನ್ನು ಆ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಚಿನ್ ತೆಂಡೂಲ್ಕರ್ ಅವರನ್ನು ಗುರುತಿಸುವ ನಂ.10 ಜೆರ್ಸಿಯನ್ನು ಆಯ್ಕೆ ಮಾಡಲು ಯಾರಿಗೂ ಅವಕಾಶವಿಲ್ಲದಂತೆ, ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಧರಿಸುವಾಗ ತಮ್ಮ ಬೆನ್ನಿನಲ್ಲಿ ನಂ.7 ಅನ್ನು ಧರಿಸುವಂತಿಲ್ಲ ಎಂದು ಬಿಸಿಸಿಐ ಭಾರತೀಯ ಕ್ರಿಕೆಟ್ ತಂಡದ ಆಟಗಾರರಿಗೆ ತಿಳಿಸಿದೆ ಎಂದು ಗೊತ್ತಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ನಂ.7 ಜೆರ್ಸಿ ಭಾರತೀಯ ಆಟಗಾರರ ಕಪಾಟಿನಲ್ಲಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ದೃಢಪಡಿಸಿದೆ.

ಪ್ರಸ್ತುತ ಭಾರತ ತಂಡದ ಆಟಗಾರರಿಗೆ ಒಟ್ಟು 60 ಸಂಖ್ಯೆಗಳನ್ನು ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿ ಖಚಿತಪಡಿಸಿದ್ದಾರೆ. “ಸದ್ಯ 60-ಬೆಸ ಸಂಖ್ಯೆಗಳನ್ನು ಭಾರತೀಯ ತಂಡದಲ್ಲಿನ ನಿಯಮಿತ ಆಟಗಾರರಿಗೆ ಮತ್ತು ಸ್ಪರ್ಧೆಯಲ್ಲಿರುವವರಿಗೆ ಗೊತ್ತುಪಡಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಪೆ : Mykhel

ಲಗಾನ್ ಮತ್ತು ಅಸ್ಪೃಶ್ಯತೆ
ಪುರುಷರ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಸೋತ ಹಿನ್ನೆಲೆಯಲ್ಲಿ ಹಲವು ಬಗೆಯ ಚರ್ಚೆಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಕ್ರೀಡೆಯಲ್ಲಿ ಸಾಮಾಜಿಕ ಪ್ರಾತಿನಿಧ್ಯ ತರಲು ಕ್ರಿಕೆಟ್‌ ತಂಡಗಳಲ್ಲೂ ಮೀಸಲಾತಿ ತರಬೇಕಿದೆ ಎಂದು ಚಿತ್ರ ನಟ ಮತ್ತು ವಿಚಾರವಾದಿ ಚೇತನ್‌ ಅಹಿಂಸಾ ಪ್ರತಿಪಾದಿಸಿದ್ದರು. ನಂತರ ಆ ಚರ್ಚೆಯು ಒಂದು ತಂಡ ಲಗಾನ್‌ ಚಿತ್ರದಲ್ಲಿದ್ದ ಕ್ರಿಕೆಟ್‌ ತಂಡದಂತಿರಬೇಕು ಎನ್ನುವಲ್ಲಿಗೆ ಬಂದು ನಿಂತಿತು. ಆದರೆ ಲಗಾನ್‌ ಚಿತ್ರದಲ್ಲಿ ದಲಿತ ವಿಷಯವನ್ನು ಬಳಸಿಕೊಂಡಿರುವ ರೀತಿ ಎಷ್ಟು ಸಮಸ್ಯಾತ್ಮಕವಾದ್ದು ಎನ್ನುವುದನ್ನು ಲೇಖಕ ಹಾಗೂ ಉಪನ್ಯಾಸಕ ಹರೀಶ್‌ ಗಂಗಾಧರ್‌ ವಿವರಿಸಿದ್ದಾರೆ

ಭಾರತ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಸೋತ ನಂತರ ಲಗಾನ್ ಚಿತ್ರದಲ್ಲಿನ ತಂಡವನ್ನು ಮಾದರಿಯಾಗಿಟ್ಟುಕೊಂಡು ತಂಡ ಕಟ್ಟಬೇಕು ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಲಗಾನ್ ಚಿತ್ರದ ಕಚ್ರ ಪಾತ್ರ ಎಷ್ಟು ಸಮಸ್ಯಾತ್ಮಕವಾಗಿದೆ ಎಂಬುದರ ಕುರಿತು ಈ ಲೇಖನ.
ಲಗಾನ್ ಮತ್ತು ಅಸ್ಪೃಶ್ಯತೆ

2001ರಲ್ಲಿ ತರೆಕಂಡ ಅಶುತೋಷ್ ಗೌವರಿಕರ್ ನಿರ್ದೇಶನದ ಬಾಲಿವುಡ್ ಚಿತ್ರ ಲಗಾನ್. ಆ ವರ್ಷ ಅಮೆರಿಕನ್ ಅಕಾಡೆಮಿಯ ಶ್ರೇಷ್ಠ ವಿದೇಶಿ ಭಾಷಾ ಪುರಸ್ಕಾರಕ್ಕೆ (ಆಸ್ಕರ್) ಈ ಚಿತ್ರ ನಾಮಿನೇಟ್ ಕೂಡ ಆಗಿ ಕೊನೆಯ ಟಾಪ್ 5 ನಲ್ಲಿತ್ತು. ಆದರೆ ಪ್ರಶಸ್ತಿ ಬೋಸ್ನಿಯ ಯುದ್ಧ ಚಿತ್ರ “ನೊ ಮ್ಯಾನ್ಸ್ ಲ್ಯಾಂಡ್” ಪಾಲಾಗಿತ್ತು. ವಸಾಹತುಗಾರ ಮತ್ತು ವಸಾಹತುಶಾಹಿಗೆ ಒಳಪಟ್ಟವರ ನಡುವೆ ನಡೆಯುವ ಒಂದು ಕ್ರಿಕೆಟ್ ಪಂದ್ಯದ ಮೂಲಕ “ಲಗಾನ್” ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಅವನತಿಯ ಪತನದ ದೃಷ್ಟಾಂತ ಹೇಳಿತ್ತು. ಬೆಂಗಳೂರಿನ ಅಭಿಮಾನ ಚಿತ್ರಮಂದಿರದಲ್ಲಿ ನಾನು ಈ ಚಿತ್ರ ನೋಡುವಾಗ ಜನ ಹುಚ್ಚೆದ್ದು ಕುಣಿದದ್ದು ನೆನಪಿದೆ.

ಭಾರತೀಯರಿಗಿರುವ ಬಹುದೊಡ್ಡ ಚಟಗಳಾದ- ಕ್ರಿಕೆಟ್ ಮತ್ತು ಸಿನಿಮಾದ ಸರಿಯಾದ ಮಿಶ್ರಣ ಈ ಚಿತ್ರದಲ್ಲಿತ್ತು. ಧರ್ಮ, ಜಾತಿ, ಭಾಷಾ ಕಲಹಗಳಿಂದ ಹರಿದು ಹಂಚಿ ಹೋಗಿರುವ ಭಾರತೀಯರು ಎಲ್ಲಾ ಭೇದಗಳನ್ನು ಮರೆತು ಮುಕ್ತ ಮನಸ್ಸಿನಿಂದ ಒಟ್ಟಿಗೆ ಸೇರುವುದು ಕ್ರಿಕೆಟ್ ಕ್ರೀಡಾಂಗಣ ಮತ್ತು ಸಿನಿಮಾ ಥೀಯೇಟರ್ಗಳಲ್ಲಿ ಮಾತ್ರ. ದೇಶ ವಿಭಜನೆಯಾದ ನಂತರ ಧರ್ಮಾಧಾರಿತವಾಗಿ ಹೊಡೆದುಹೋಗಿ ಘಾಸಿಗೊಂಡ ಮನಸ್ಸುಗಳಿಗೆ ಮುಲಾಮು ಹಚ್ಚಿದ್ದು ಬಹುಶಃ ಕ್ರಿಕೆಟ್ ಮತ್ತು ಸಿನಿಮಾ ಮಾತ್ರವಿರಬೇಕು. ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮವೇ ಆಗಿಹೋದರೆ, ಸಿನಿಮಾ ತನ್ನ ವಾಸ್ತವಲ್ಲದ ಐಡಿಯಲ್, ಓವರ್ ದ ಟಾಪ್ ನಾಯಕ/ನಾಯಕಿಯರ ಮೂಲಕ, ವರ್ಣರಂಜಿತ ಪ್ರೇಮ ಕಥನಗಳ ಮೂಲಕ ಭಾರತೀಯರ ಮೇಲೆ ಅಪಾರ ಮೋಡಿಯನ್ನೇ ಮಾಡಿದೆ.

ಇಡಿಯ ಲಗಾನ್ ಚಿತ್ರ ಕ್ರಿಕೆಟ್ ಪಂದ್ಯವೊಂದರ ಸುತ್ತಾ ಸುತ್ತುತ್ತದೆ. 19ನೆ ಶತಮಾನದ ಅಂತ್ಯಕ್ಕೆ ಸಾಮ್ರಾಜ್ಯಶಾಹಿಗಳಾದ ಬ್ರಿಟಿಷರು ಮತ್ತು ಕ್ರಿಕೆಟಿನ ಗಂಧಗಾಳಿಯಿಲ್ಲದ ಹಳ್ಳಿ ಹೈಕಳುಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯವೇ ಚಿತ್ರದ ಕಥಾವಸ್ತು. ಬ್ರಿಟಿಷ್ ಕಂಟೋನ್ಮೆಂಟ್ ಪಕ್ಕದ ಒಂದು ಕಾಲ್ಪನಿಕ ಪುಟ್ಟ ಹಳ್ಳಿ ಚಂಪಾನೇರ್. ಚಿತ್ರದ ಕೇಂದ್ರ ಬಿಂದು ಕೂಡ ಈ ಹಳ್ಳಿಯೇ. ಚಂಪಾನೇರ್ ಬ್ರಿಟಿಷ್ ಆಕ್ರಮಿತ ಮತ್ತು ಅವರ ಆಳ್ವಿಕೆಗೊಳಗಾಪಟ್ಟ ಭಾರತದ ಯಾವುದೇ ಹಳ್ಳಿಯಾಗಿರಲುಬಹುದು.

1893 ಆ ವರ್ಷ ಮಳೆ ಕೈಕೊಟ್ಟಿದೆ, ಎಲ್ಲವೂ ಬರಡು. ಊರಿನ ಜನ ಬೆಳೆ ಬೆಳೆದು ಪ್ರಾಂತ್ಯದ ರಾಜನಿಗೆ ಮತ್ತು ಆತನಿಗೆ ಶ್ರೀರಕ್ಷೆ ನೀಡಿರುವ ಬ್ರಿಟಿಷರಿಗೆ ತೆರಿಗೆ ಕಟ್ಟಬೇಕು. ಲಗಾನ್ ಎಂದರೆ ತೆರಿಗೆ ಅಂತಲೇ ಅರ್ಥ.

ಬರಗಾಲದಿಂದ ಬೇಸತ್ತ ಜನ ರಾಜನ ಮೊರೆಹೋಗುತ್ತಾರೆ. ಕಟ್ಟಬೇಕಾದ ತೆರಿಗೆಯನ್ನ ಮಾಫಿಮಾಡಬೇಕೆಂದು ಬ್ರಿಟಿಷರಲ್ಲಿ ಮನವಿ ಮಾಡಿಕೊಳ್ಳುವಂತೆ ರಾಜನನ್ನ ವಿನಂತಿಸಿಕೊಳ್ಳುತ್ತಾರೆ. ನಿರ್ದೇಶನಾಧಿಕಾರಿ, ನಿಷ್ಕರುಣಿಯು, ದಾರ್ಷ್ಟ್ಯನು ಆದ ಕ್ಯಾಪ್ಟನ್ ರಸೆಲ್, ಹಳ್ಳಿಗರ ಈ ಶೋಚನೀಯ ಸ್ಥಿತಿಗೆ ಮರುಗದೆ ಸವಾಲೊಂದೊನ್ನ ಅವರ ಮುಂದಿಡುತ್ತಾನೆ. ಹಳ್ಳಿಯ ಹೈಕಳು ಬ್ರಿಟಿಷ ತಂಡದ ವಿರುದ್ದ ಕ್ರಿಕೆಟ್ ಪಂದ್ಯವೊಂದೊನ್ನು ಆಡಬೇಕು. ಅದರಲ್ಲಿ ಗೆದ್ದರೆ ಮೂರು ವರ್ಷಗಳ ಕಾಲ ತೆರಿಗೆ ಮಾಫಿಯಾಗುತ್ತೆ ಸೋತರೆ ಮೂರು ಪಟ್ಟು ಹೆಚ್ಚು ತೆರಿಗೆ ಕಟ್ಟಬೇಕೆಂದು ಷರತ್ತಿಡುತ್ತಾನೆ. ದುಡುಕಿನ ಪ್ರವೃತ್ತಿಯವನಾದ ಭುವನ್ ಈ ಸವಾಲನ್ನ ಸ್ವೀಕರಿಸಿಯೇ ಬಿಡುತ್ತಾನೆ!!!

ಮೊದಲಿಗೆ ಊರಿನ ಜನರೆಲ್ಲಾ ಅಸಮಾಧಾನಗೊಂಡರು, ಮುನಿಸಿಕೊಂಡರು ನಂತರದಲ್ಲಿ ಕ್ರಿಕೆಟ್ ಗಿಲ್ಲಿ ದಾಂಡಿನಂತಹ ಸುಲಭವಾದ ಕ್ರೀಡೆ ಮಾತ್ರವೆಂದು ಭುವನ್ ನೀಡುವ ಸಮಜಾಯಿಷಿಗೆ ಒಪ್ಪಿ ಹಳ್ಳಿಯ ಸಾಧಾರಣ ತಂಡ ಕಟ್ಟಲು ಅವನಿಗೆ ಸಹಕರಿಸುತ್ತಾರೆ. ಹೀಗೆ ಹಳ್ಳಿಯ ದೇವಸ್ಥಾನದ ಡೋಲು ಬಾರಿಸುವ ಕಿವುಡ ಭಾಘ, ಎಲ್ಲರ ಭವಿಷ್ಯ ಹೇಳುವ ಗೂರನ್, ಕುಂಬಾರ ಇಸ್ಮಾಯಿಲ್, ಸಿಖ್ ಸಿಪಾಯಿ ದೇವನ್ ಹಾಗು ಊರಿನ ಅಸ್ಪೃಶ್ಯ ಕಚ್ರ (ಕೊಳಕು) ಮತ್ತಿತರರು ತಂಡದೊಳಗೆ ಸೇರಿಕೊಳ್ಳುತ್ತಾರೆ. ಇದಕ್ಕಾಗಿ ಲಗಾನ್ ಚಿತ್ರದ ಭುವನ್ನನ್ನು ಜಾತಿ, ಧರ್ಮ, ಭಾಷೆಗಳ ಮೇಲೆ ಹರಿದು ಹಂಚಿ ಹೋಗಿದ್ದ ಭಾರತದಲ್ಲಿ ಎಲ್ಲರಲ್ಲೂ ಸೌಹಾರ್ದತೆ ಮೂಡಿಸಿ, ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಅಹಿಂಸ ಮಾರ್ಗದಲ್ಲಿ ಹೋರಾಟ ನಡೆಸಿದ ಗಾಂಧಿಗೆ ಹೋಲಿಕೆ ಮಾಡಿದರೆ ತಪ್ಪಾಗಲಾರದು.

ಬಹುಶಃ ಭುವನ್ ಮತ್ತು ಗಾಂಧಿಗಿದ್ದ ಕನಸು ಒಂದೆಯಾಗಿತ್ತು- ಬ್ರಿಟಿಷ್ ಮುಕ್ತ ವಸಹತೋತ್ತರ ಸಮೃದ್ದ ಸೌಹಾರ್ದ ಭಾರತ.

ದೇಶ ವಿಭಜನೆ, ಹಿಂದೂ ಮುಸ್ಲಿಂ ದಂಗೆಗಳು, 1984ರ ಸಿಖ್ ಹತ್ಯಾಕಾಂಡ, ಬಾಬ್ರಿ ಮಸೀದಿ ವಿವಾದ, ಗಾಂಧಿಯ ಕಂಡ ಕನಸುಗಳನ್ನು ಭಗ್ನಗೊಳಿಸಿದರು 2001ರ ಲಗಾನ್ ಚಿತ್ರ ಆ ಸತ್ತ ಕನಸುಗಳಿಗೆ ಮರು ಜೀವ ಕೊಡಲು ಪ್ರಯತ್ನಿಸುತ್ತದೆ. ಚಿತ್ರದ ಚಂಪಾನೇರ್ ಭಾರತ ಮೈಕ್ರೋಕಾಸ್ಮ್ ಅಂತಲೇ ನಾವು ನೋಡಬೇಕು. ಚಿತ್ರದ ಚಂಪಾನೇರ್ನ ಬೆಟ್ಟದ ಮೇಲೆ ರಾಧಾ ಕೃಷ್ಣ ದೇವಸ್ತಾನವಿದೆ ಅಲ್ಲಿ ಜನ ಪ್ರಾರ್ಥನೆ ಸಲ್ಲಿಸುತ್ತಾರೆ, ಆದರೆ ಚಿತ್ರದ ಯಾವ ಸೀನ್ನಲ್ಲೂ ಮಸೀದಿಯಿಲ್ಲದಿದ್ದರು ಆ ಹಳ್ಳಿಯಲ್ಲಿ ಸೌಹಾರ್ದತೆಗೇನು ಕಮ್ಮಿಯಿಲ್ಲ. ಹಳ್ಳಿ ಭಾರತದ ಡೆಮೋಗ್ರಫಿಯನ್ನು ಸೂಚಿಸುತ್ತದೆ. ಹಿಂದೂ ಧರ್ಮದೊಳಗಿನ ಆಂತರಿಕ ಕಿತ್ತಾಟಗಳ ಸೂಚಕವಾಗಿ ಗೋಲಿ ಮತ್ತು ಭೂರನ ಜಗಳವನ್ನು ತೋರಿಸಲಾಗಿದೆ. ಇಸ್ಮಾಯಿಲ್ ಭುವನ್ ಕಟ್ಟಲು ಹೊರಟಿರುವ ಕ್ರಿಕೆಟ್ ತಂಡಕ್ಕೆ ಮೊದಲು ಸೇರಿಕೊಳ್ಳುತ್ತಾನೆ. ಪಂದ್ಯದ ವೇಳೆ ಭುವನ್ ಮತ್ತು ಇಸ್ಮಾಯಿಲ್ ಜೊತೆಯಾಟ ಬಹುಮುಖ್ಯವಾಗುತ್ತದೆ. ಪಂದ್ಯದ ವೇಳೆಯಲ್ಲಿ ಗಾಯಳುವಾದರು ಆತ ಕೆಚ್ಚೆದೆಯಿಂದ ಹೋರಾಟ ಮಾಡಿ ಬ್ರಿಟಿಷರ ವಿರುದ್ದ ಪಂದ್ಯ ಗೆಲ್ಲಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತಾನೆ. ಹಿಂದೂ ಬಹುಸಂಖ್ಯಾತ ಭಾರತದಲ್ಲಿ/ಚಂಪಾನೇರ್ನಲ್ಲಿ ಇಸ್ಮಾಯಿಲ್ನಂತಹ ಅಲ್ಪಸಂಖ್ಯಾತ ಮುಸ್ಲಿಮ್ಗಿರುವ ದೇಶಪ್ರೇಮ, ಬದ್ದತೆಯನ್ನ ಯಾರು ಪ್ರಶ್ನಿಸಲು ಸಾಧ್ಯವಿಲ್ಲವೆಂದು ಸಾರುತ್ತದೆ.

ಆದರೆ ಈ ಚಿತ್ರದಲ್ಲಿ ತುಂಬ ಸಮಸ್ಯಾತ್ಮಕವಾಗಿ ಕಂಡದ್ದು ಕಚ್ರನೆಂಬ ಅಸ್ಪೃಶ್ಯನ ಪಾತ್ರ. ಭಾರತದಲ್ಲಿ ಮುಸ್ಲಿಮರಿಗಿಂತ ಹೆಚ್ಚಾಗಿ ತುಳಿತಕ್ಕೆ ಒಳಗಾದವರು ಅಸ್ಪೃಶ್ಯರು. ಮೇಲ್ಜಾತಿಯವರ ಕೋಪ, ಕ್ರೌರ್ಯ, ದಬ್ಬಾಳಿಕೆ, ಅವಮಾನಗಳಿಗೆ ಇಂದಿಗೂ ಅವರು ಬಲಿಯಾಗುತ್ತಿದ್ದಾರೆ. ಒಬ್ಬ ಮೇಲ್ಜಾತಿಯ ಹಿಂದೂ ಗಟ್ಟಿ ಮನಸ್ಸು ಮಾಡಿ ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಸಿಖ್ನನ್ನು ಒಪ್ಪಿಕೊಂಡಾನು ಆದರೆ ಕೆಳಜಾತಿಯ ಅಸ್ಪೃಶ್ಯನನ್ನು ಒಪ್ಪಿಕೊಳ್ಳಲಾರ. ಜೊತೆಗೆ ಕೂತು ಕಸಿವಿಸಿಯಿಲ್ಲದೆ ತಿನ್ನಲಾರ, ಅಂತರಜಾತಿ ವಿವಾಹವನ್ನು ಒಪ್ಪಲಾರ, ಮುಕ್ತ ಮನಸ್ಸಿನಿಂದ ತನ್ನ ದೇವಸ್ಥಾನ ಬಿಟ್ಟುಕೊಳ್ಳಲಾರ. ಆತನ ಸ್ಪರ್ಶ ಮಾತ್ರವಲ್ಲದೆ ಆತನ ಇರುವಿಕೆಯೇ ಮೇಲ್ಜಾತಿಯವರಲ್ಲಿ ಮೈಲಿಗೆ ಹುಟ್ಟಿಸಬಹುದು.

ಸ್ವಾತಂತ್ರ್ಯನಂತರದ ಭಾರತದಲ್ಲಿ ಅಸ್ಪೃಶ್ಯತೆಯಂತಹ ನೀಚ ಪದ್ಧತಿ ಇನ್ನು ಉಳಿದುಕೊಂಡರೆ, ಬ್ರಿಟಿಷರ ವಿರುದ್ದದ ಹೋರಾಟ, ವಾದಗಳಿಗೆ ಯಾವ ಉನ್ನತ ನೈತಿಕ ನೆಲೆಯು ಇರಲಾರದೆಂದು ಗಾಂಧಿ ಅಭಿಪ್ರಾಯಪಟ್ಟಿದ್ದರು. ಬ್ರಿಟಿಷರು ನಮ್ಮ ಮೇಲೆ ಇಷ್ಟು ವರ್ಷಗಳ ಕಾಲ ದಬ್ಬಾಳಿಕೆ ನಡೆಸಲು ಮೇಲ್ಜಾತಿಯವರು ತಮ್ಮವರೇ ಆದ ಕೆಳಜಾತಿಯವರ ಮೇಲೆ ಯುಗಯುಗಗಳಿಂದ ನಡೆಸಿಕೊಂಡು ಬಂದ ದಬ್ಬಾಳಿಕೆಯ ಕರ್ಮಫಲವೆಂದ ಗಾಂಧಿ ನಂಬಿದ್ದರು ಕೂಡ!!! (ರಾಮಚಂದ್ರ ಗುಹ) ಗಾಂಧಿಯ ಸುದೀರ್ಘ ಹೋರಾಟ ಅಸ್ಪೃಶ್ಯತೆ ಕುರಿತಾದ ಕಾನೂನು ಕಾಯಿದೆಗಳಲ್ಲಿ ಗಮನಾರ್ಹ ಬದಲಾವಣೆಯನ್ನೇನೊ ತಂದಿತು ಆದರೆ ನಮ್ಮ ದೇಶದ ಜನಗಳ ಹೃದಯದಾಳದಲ್ಲಿ ಯಾವುದೇ ಬದಲಾವಣೆಯನ್ನ ತರಲಿಲ್ಲ. ಭಾರತೀಯ ಸಂವಿಧಾನ ನಿಷೇಧ ಹೇರಿದ್ದರು, ಗಾಂಧಿಯನ್ನ ಗೋಡ್ಸೆ ಕೊಂದು ಏಳೆಂಟು ದಶಕಗಳೇ ಕಳೆದಿದ್ದರು ಅಸ್ಪೃಶ್ಯತೆಯಂತಹ “ಗುಪ್ತ ವರ್ಣಬೇಧ” (Hidden Apartheid) ನೀತಿಗೆ ಕೊನೆಬಿದ್ದಿಲ್ಲ. ದಲಿತರ ಮೇಲಿನ ಅಸಾಧಾರಣ ಕ್ರೌರ್ಯ, ಹಿಂಸೆಯೆಲ್ಲವೂ ದಿನಪತ್ರಿಕೆಗಳ ಒಂದು ಸಣ್ಣ ಬದಿಯಲ್ಲಿ ಪ್ರಕಟವಾಗುವ ಸುದ್ದಿ ಮಾತ್ರ.

ಲಗಾನ್ ಚಿತ್ರದಲ್ಲಿ ಒಮ್ಮೆ ದೇವನ್ ಚೆಂಡನ್ನು ಸಾಕಷ್ಟು ದೂರಕ್ಕೆ ಹೊಡೆಯುತ್ತಾನೆ. ಆ ಚೆಂಡು ಊರಿನ ಕಸ ಗುಡಿಸುವ ಅಸ್ಪೃಶ್ಯನಾದ ಕಚ್ರನ ಕಾಲುಗಳ ಬಳಿ ಬಿಳತ್ತೆ. ಭುವನ್ ಚೆಂಡನ್ನು ಎಸೆಯಲು ಹೇಳುತ್ತಾನೆ. ತನ್ನ ಊನಾದ (crippled) ಕೈಗಳಿಂದ ಚೆಂಡನ್ನು ಭುವನತ್ತ ಕಚ್ರ ಎಸೆಯುತ್ತಾನೆ. ಹಾಗೆ ಬಿದ್ದ ಚೆಂಡು ಸ್ಪಿನ್ ಆಗುತ್ತೆ. ಆಕಸ್ಮಿಕವಾಗಿ ಅದ್ಭುತ ಪ್ರತಿಭೆಯೊಂದು ಭುವನ್ ಕಣ್ಣಿಗೆ ಬಿಳತ್ತೆ. ಅತ್ಯಂತ ಸಂತಸದಿಂದ ಸ್ಪಿನ್ ಮಾಂತ್ರಿಕ ಕಚ್ರನನ್ನು ಟೀಮ್ಗೆ ಸೇರಿಸಿಕೊಳ್ಳುವುದಾಗಿ ಭುವನ್ ಘೋಷಿಸುತ್ತಾನೆ. ಆ ಘಟನಾಸ್ಥಳದಲ್ಲಿದ್ದವರೆಲ್ಲ ಒಂದು ಕ್ಷಣ ದಂಗಾಗಿ ಹೋಗುತ್ತಾರೆ. ಊರಿನ ಪ್ರಮುಖನಾದ ಬ್ರಾಹ್ಮಣ ಅಸಹ್ಯ, ಅಸಹನೆ ವ್ಯಕ್ತಪಡಿಸುತ್ತಾ ಹೇಳುತ್ತಾನೆ- “ ಬ್ರಿಟಿಷರನ್ನು ಸದೆ ಬಡಿಯುವುದು ನಮ್ಮ ಕರ್ತವ್ಯ ಆದರೆ ಅದಕೊಸ್ಕರ ಈ ಕೆಳಜಾತಿಯವರ ಜೊತೆ ಸೇರುವುದು ಹಾಲಿನ ಜೊತೆ ವಿಷ ಸೇರಿಕೊಂಡಂತೆ. ನಾನದಕ್ಕೆ ಎಂದು ಅವಕಾಶಕೊಡುವುದಿಲ್ಲ.” ಎನ್ನುತ್ತಾನೆ.

ಭುವನ್ ತಕ್ಷಣಕ್ಕೆ ಕಸಿವಿಸಿಗೊಂಡರು ಕಚ್ರನನ್ನು ಮುಟ್ಟಿ ನೆರೆದಿರುವ ಜನರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ನಡೆದ ಪ್ರಮಾದವನ್ನ ಅರಗಿಸಿಕೊಳ್ಳಲಾಗದೆ ಜನ ಹೌಹಾರುತ್ತಾರೆ. ಉಸಿರು ಬಿಗಿ ಹಿಡಿದು ನಿಲ್ಲುತ್ತಾರೆ. ಆದರೆ ಭುವನ್ ಈ ಎಲ್ಲ ತಂತ್ರಗಳಿಗೆ, ಧಮಕಿಗಳಿಗೆ ಬಗ್ಗುವುದಿಲ್ಲ. ಹೆದರದೆ ನಿಂತು, ಗಾಂಧಿಯಂತೆ ಎಲ್ಲರನ್ನು ಚಾಲೆಂಜ್ ಮಾಡುತ್ತಾನೆ. “ಅಸ್ಪೃಶ್ಯರು ಎಂಬ ಹಣೆಪಟ್ಟಿ ತೊಡಿಸಿ ಇಡಿಯ ಮನುಷ್ಯಕುಲವನ್ನೇ ಕಲುಷಿತಗೊಳಿಸುತ್ತಿದ್ದೀರಿ. ಈ ಜಾತಿ ಪದ್ಧತಿಯಿಂದ ಹಳ್ಳಿಯ ವಾತಾವರಣವನ್ನೇ ಹಾಳು ಮಾಡುತ್ತಿದ್ದೀರಿ. ಅದರ ಉಸಿರುಗಟ್ಟಿಸುತ್ತಿದ್ದೀರಿ. ಜಾತಿ, ಮೈಬಣ್ಣದ ಹೆಸರಲ್ಲಿ ಎಲ್ಲರ ಮನಸ್ಸುಗಳನ್ನ ಹೊಡೆಯತ್ತಿದ್ದೀರಿ.” ಎನ್ನುತ್ತಾನೆ. ಅಸ್ಪೃಶ್ಯರನ್ನು ಉಪಯೋಗಕ್ಕೆ ಬಾರದವರೆನ್ನುವ ಲಾಖನನ್ನು ಕುರಿತು “ ನೋಡಿ ನೀವು ಹೆಳವನೆಂದು ಕರೆಯುವ ಕಚ್ರ ನಮ್ಮೆಲರ ಶಕ್ತಿಯಾಗುತ್ತಾನೆ. ಆತನೇ ಪಂದ್ಯವನ್ನ ಗೆಲ್ಲಿಸಿಕೊಡುತ್ತಾನೆಂದು” ಹೇಳುತ್ತಾನೆ. ಅದೇ ರೀತಿ ಕಚ್ರ ಕ್ಯಾಪ್ಟನ್ ರಸೆಲ್ ನಾಯಕತ್ವದ ಬ್ರಿಟಿಷ ತಂಡದ ವಿರುದ್ದ ಹ್ಯಾಟ್ರಿಕ್ ಪಡೆಯುತ್ತಾನೆ. ಕೊನೆವರೆಗೂ ಬ್ಯಾಟಿಂಗ್ನಲ್ಲಿ ಭುವನ್ಗೆ ಸಾತ್ ನೀಡಿ ಪಂದ್ಯ ಗೆಲ್ಲಿಸುವಲ್ಲಿ ವಿಶೇಷ ಪಾತ್ರವಹಿಸುತ್ತಾನೆ.

(ಕಚ್ರನನ್ನು ಎಡಗೈ ಸ್ಪಿನ್ ಬೌಲರ್- ದಲಿತ ಕಾರ್ಯಕರ್ತ ಪಲ್ವಂಕರ್ ಬಾಲೂಗೆ (1876-1955) ಹೋಲಿಸಬಹುದು. ಈತ ಭಾರತ ಕ್ರಿಕೆಟ್ ಇತಿಹಾಸದ ಆರಂಭಿಕ ದಿನಗಳ ಬಹುದೊಡ್ಡ ಸ್ಟಾರ್ ಅಂತಲೇ ಗುರುತಿಸಬಹುದು. ಮೈದಾನದಲ್ಲಿ ಬೇರೆಯವರೊಡಗೂಡಿ ಒಟ್ಟಿಗೆ ಆಡಿ ಪಂದ್ಯಗಳನ್ನ ಗೆಲ್ಲಿಸಿಕೊಡುತ್ತಿದ್ದ. ಆದರೆ ಡ್ರೆಸ್ಸಿಂಗ್ ರೂಮ್ನಲ್ಲಿ ಯಾರು ಈತನನ್ನು ಮುಟ್ಟುತ್ತಿರಲಿಲ್ಲ. ಪೆವಿಲಿಯನ್ನಲ್ಲಿ ಈತನಿಗೆ ಪ್ರತ್ಯೇಕ ತಟ್ಟೆಗಳನ್ನ ಹಿಡಲಾಗುತ್ತಿತ್ತು, ಬೇರೆ ಆಟಗಾರರ ಜೊತೆ ಕೂತು ಊಟಮಾಡಲು ಅನುಮತಿಯಿರಲಿಲ್ಲ. ಈ ಅವಮಾನವನ್ನ ಸಹಿಸಲಾಗದೆ ಆತ ಮೈದಾನಹೊರಗೆ ತಿಂದುಬರುತ್ತಿದ್ದ. ಕೆಳಜಾತಿಯವನಾದುದರಿಂದ ಪ್ರತಿಭೆ ಕ್ಷಮತೆ ಅನುಭವವಿದ್ದರು ಈತನಿಗೆ ತಂಡದ ನಾಯಕತ್ವ ಸಿಗಲೇ ಇಲ್ಲ.)

ಭುವನ್ ಈ ರೀತಿ ಊರಿನ ಜನರಿಗೆಲ್ಲ ಪಾಠ ಹೇಳಿ ಕಚ್ರನನ್ನು ತಂಡಗೊಳಗೆ ಸೇರಿಸಿಕೊಳ್ಳುವ ದೃಶ್ಯ ಚಿತ್ರದ ಅತ್ಯಂತ ಭಾವುಕ ದೃಶ್ಯವೆಂದರೆ ತಪ್ಪಾಗಲಾರದು. ಭುವನ್-ಗಾಂಧಿ ಇಬ್ಬರೂ ಒಂದೇ ಎಂದು ಅ ಕ್ಷಣ ಅನ್ನಿಸಿಬಿಡತ್ತೆ. ಆದರೆ ಈ ದೃಶ್ಯವನ್ನ ಆಳವಾಗಿ ವಿಶ್ಲೇಷಿಸಿದರೆ ಅದು ತೀವ್ರ ಕ್ಷೋಭೆಗೊಳಪಡಿಸುತ್ತೆ ಕೂಡ.

ದಲಿತ ಕಾರ್ಯಕರ್ತ ಸಿರಿಯವನ್ ಆನಂದ್ ಪ್ರಕಾರ ಕಚ್ರ ಅತ್ಯತ್ತಮವಾಗಿ ಆಡಿ ಪಂದ್ಯ ಗೆಲ್ಲಿಸಿಕೊಟ್ಟರು ಪಂದ್ಯದ ನಂತರ ಆತನ ಪರಿಸ್ಥಿತಿಯೇನು ಬದಲಾಗದು. ಆತ ಮತ್ತದೇ ಮಲ ಹೊರುವ, ಕಸ ಗುಡಿಸುವ ಕಾರ್ಯಕ್ಕೆ ಮರಳಬೇಕು. ಆತ ಅಸ್ಪೃಶ್ಯನಾಗಿಯೇ ಉಳಿದುಕೊಳ್ಳುಬೇಕು. ಇನ್ನೆರಡು ಗಮನಿಸಬೇಕಾದ ವಿಚಾರಗಳಿವೆ. ಈ ವಿಚಾರಗಳು ಅಸಹ್ಯಕರ ಹಾಗು ಆಕ್ಷೇಪಣೀಯವಾದವು ಕೂಡ. ಭುವನ್ ಕಚ್ರನನ್ನು ತಂಡದೊಳಗೆ ಸೇರಿಸಿಕೊಳ್ಳುವುದು ಆಕಸ್ಮಿಕವಾಗಿಯೇ ಹೊರತು ಸ್ವಯಿಚ್ಚೆಯಿಂದ ನೀಡಿದ ಅವಕಾಶದಿಂದಲ್ಲ. ಕಚ್ರನ ಪ್ರತಿಭೆ, ಕ್ಷಮತೆ ಇರುವುದು ಆತನ ಅಂಗವೈಕಲ್ಯದಲ್ಲಿ! ಶೋಷಿತ ದಲಿತನನ್ನು ಈ ರೀತಿ ತೋರಿಸಿರುವುದರಿಂದ ಅವರನ್ನು ಮತ್ತಷ್ಟು ಶೋಷಣೆಗೊಳಪಡಿಸಲಾಗಿದೆ. The token Dalit is further Dalitised.

ಚಿತ್ರದಲ್ಲಿ ಕಚ್ರ ತನ್ನ ಬಳಸುವ ಸಶಕ್ತ ಕೈಗಳಿಂದ ಚೆಂಡನ್ನು ಎಸೆದಾಗ ಭುವನ್ ಆ ಕೈಯಿಂದ ಅಲ್ಲ, ಇನ್ನೊಂದು ಊನಾದ (disabled) ಕೈಯಿಂದ ಚೆಂಡನ್ನು ಎಸೆಯಲು ಒತ್ತಾಯಿಸುತ್ತಾನೆ!!!! ಇಲ್ಲಿ ಅಸ್ಪೃಶ್ಯ ಕಚ್ರ ಮುಖ್ಯವಾಗದೆ ಆತನ ಅಂಗವೈಕಲ್ಯ ಮುಖ್ಯವಾಗುತ್ತದೆ. ಕಚ್ರನ ಅರ್ಹತೆ ಆತನ ಪ್ರತಿಭೆ, ವೈರಿಗಳನ್ನು ಸೋಲಿಸಬೇಕೆಂಬ ಛಲ, ಗೆಲ್ಲಲ್ಲೇಬೇಕೆಂಬ ದೃಢ ಮನಸ್ಸಿನ ಮೇಲೆ ಅವಲಂಬಿತವಾಗದೆ ಹುಟ್ಟಿನಿಂದಲೆ ಬಂದ ಅಸ್ಪೃಶ್ಯತೆಯಂತೆ ಆತನ ಅಂಗವೈಕಲ್ಯದಲ್ಲಿದೆ. ಭುವನ್ ಆ “ಸ್ವಾಭಾವಿಕ ಒಳ” ಪ್ರತಿಭೆಗೆ ಹೊರಗೆಡಹುತ್ತಾನೆಯಷ್ಟೇ. ಕಚ್ರನಿಗೆ ತನ್ನ ಪ್ರತಿಭೆಯ ಅರಿವಿಲ್ಲ ಕೂಡ.

ಚಿತ್ರದುದ್ದಕ್ಕೂ ಅತಿ ಅಂಜಿಕೆಯಿಂದ ತಪ್ಪೋಪ್ಪಿಕೊಳ್ಳುವವನಂತೆ ಚಿತ್ರಿತನಾದ ಕಚ್ರನಿಗೆ ಒಂದು ಡೈಲಾಗ್ ಕೂಡ ಇಲ್ಲ. He is stripped of ಸ್ಪೀಚ್ and ಏಜನ್ಸಿ. ಭುವನ್ ಕಚ್ರನನ್ನು ತಂಡದೊಳಗೆ ಸೇರಿಕೊಳ್ಳುವ ಆಸೆಯಿದೆಯೇ ಎಂದು ಒಂದು ಮಾತು ಕೇಳುವುದಿಲ್ಲ. ಕಚ್ರ ಪಂದ್ಯದಲ್ಲಿ ಆಡುತ್ತಾನೆಂದು “offcamera” ತಿಳಿಸಲಾಗುತ್ತೆ. ನಮ್ಮ ದೇಶದ ಹಳ್ಳಿಯ ಅಸ್ಪೃಶ್ಯರ ಧಾರುಣ ಬದುಕು ಕೂಡ offcamera ಅಲ್ಲವೆ? ತಂಡಕ್ಕೆ ಸೇರಿಸಿಕೊಂಡಂತೆಯೆ ಮಲ ಹೊರಲು,ಸತ್ತ ದನಗಳನ್ನು ಹೊತ್ತೊಯ್ಯಲು ಕಚ್ರನಿಗೆ ಹೇಳಬಹುದು… ಆತ ವಿನಮ್ರವಾಗಿಯೇ ಹೇಳಿದೆಲ್ಲವನ್ನು ಮಾಡುತ್ತಾನೆ.

ಕಚ್ರನ ಅಂಗವೈಕಲ್ಯ ಏನೇ ಇರಲಿ ತಂಡಕ್ಕೆ ಆತನ ಕೊಡುಗೆ ಪ್ರಶಂಸನೀಯ. ಭಾರತೀಯ ಸಮಾಜಕ್ಕೆ ದಲಿತರು, ಅಸ್ಪೃಶ್ಯರು ನೀಡಿದ ಮತ್ತು ನಾವು ಗುರುತಿಸದ ಕೊಡುಗೆಗಳ ರೂಪಕ ಕೂಡ ಇದಾಗಿದೆ. ಮೇಲ್ಜಾತಿಯ ಜನರು ಎಷ್ಟೇ ಬೆಂಕಿಯುಗುಳಿದರು ಭಾರತೀಯ ಸಮಾಜಕ್ಕೆ ಆರ್ಥಿಕತೆಗೆ ದಲಿತರ ಕೊಡುಗೆ ಗಮನಾರ್ಹ. ದಲಿತರ ಸೇವೆ ಭಾಗವಹಿಸುವಿಕೆ ಕೊಡುಗೆಯಿಲ್ಲದೆ ನಮ್ಮ ಸಮಾಜದ ಅಭಿವೃದ್ದಿ ಸಾಧ್ಯವೆ?

ಗಾಂಧಿಯಂತೆ ಭುವನ್ ಕೂಡ ಮೇಲ್ಜಾತಿ ಜನರ ಯೋಚನಾಕ್ರಮಗಳಲ್ಲಿ ಯಾವುದೇ ಬದಲಾವಣೆ ತರಲಾಗಲಿಲ್ಲ ಎಂಬುದಂತೂ ಸತ್ಯ. ಪಂದ್ಯ ಮುಗಿದ ಮೇಲೆ, ಮಳೆಯಲ್ಲಿ ಭುವನ್ ಮತ್ತು ಗೌರಿ ಕುಣಿದು ಮದುವೆಯಾದ ನಂತರ ಕಚ್ರನನ್ನು ಹಳ್ಳಿಯ ಜನರು ಅಪ್ಪಿಕೊಂಡರೆ? ಅವರ ಸಮಾಜದಲ್ಲಿ ಸೇರಿಸಿಕೊಂಡರೆ? ಜೊತೆಗೆ ಕೂತು ಉಂಡರೆ? ಮೇಲು-ಕೀಳೆಂಬ ಮನಸ್ಥಿತಿ ಮರೆತರೆ? ಇಲ್ಲ ಇಂದಿಗೂ ಜಾತಿ ಪದ್ಧತಿ ಜೀವಂತವಾಗಿಯೇ ಇದೆ. ಸಮರಗಳಲ್ಲಿ, ವೋಟಿಗಾಗಿ, ಅಧಿಕಾರಕ್ಕಾಗಿ ದಲಿತರನ್ನು ಬಳಸಿಕೊಂಡು ಅವರ ಸಬಲೀಕರಣಕ್ಕೆ ಯಾವ ಆದ್ಯತೆಯನ್ನೂ ನೀಡದೆ ಹಾಗೆ ಉಳಿಸಿದ್ದೇವೆ. ಕಚ್ರ ಎಂಬ ಕೊಳಕ ಅವರ ಪ್ರತಿನಿಧಿ.
ಚಿತ್ರದ detail ವಿಶ್ಲೇಷಣೆಗೆ ರಾಬರ್ಟ್ ಕ್ರಾಸ್ ಬರೆದ- A Postcolonial Reading of Lagaan ಓದಿ

– ಹರೀಶ್‌ ಗಂಗಾಧರ್

ವಿಶ್ವಕಪ್- 2023: ವಿಶ್ವಕಿರೀಟಕ್ಕಾಗಿ ಹಣಾಹಣಿ, ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭ
ಅಹಮದಾಬಾದ್: ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿರುವ 2023 ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಪೈಪೋಟಿ ನೀಡಲಿವೆ.

ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ ತಂಡವನ್ನು, ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಗೆದ್ದು ಫೈನಲ್ ಗೇರಿವೆ. ಉಭಯ ತಂಡಗಳು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸುಮಾರು 1,30,000 ಪ್ರೇಕ್ಷಕರ ಮುಂದೆ ಕೊನೆಯ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿವೆ.

ಭಾರತ ತಂಡವು ಈ ಪಂದ್ಯಾವಳಿಯಲ್ಲಿ ಇದುವರೆಗೆ ಅಜೇಯವಾಗಿಯೇ ಉಳಿದಿದೆ. ನ್ಯೂಜಿಲೆಂಡ್ ತಂಡವನ್ನು ಹೊರತುಪಡಿಸಿ ಇನ್ಯಾವುದೇ ತಂಡವೂ ಸಹ ಭಾರತದ ಎದುರು ತಕ್ಕ ಸ್ಪರ್ಧೆ ನೀಡಲು ವಿಫಲವಾದವು. ಬಹುತೇಕ ಪಂದ್ಯಗಳನ್ನು ಭಾರತ ಅಧಿಕಾರಯುತವಾಗಿ ಗೆದ್ದು ಫೈನಲ್ ವರೆಗೆ ಸಾಗಿ ಬಂದಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಹಿಂದೆಂದಿಗಿಂತಲೂ ಶಕ್ತಿಶಾಲಿಯಾಗಿ ಬೆಳೆದುನಿಂತಿದ್ದು, ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಆತ್ಮವಿಶ್ವಾಸದಲ್ಲಿದೆ.

ಲೀಗ್ ಹಂತದ ಮೊದಲ ಎರಡು ಪಂದ್ಯಗಳನ್ನು ಸೋತರೂ ನಂತರ ಚೇತರಿಸಿಕೊಂಡ ಆಸ್ಟ್ರೇಲಿಯಾ ಸತತ ಗೆಲುವನ್ನು ಸಾಧಿಸುತ್ತ ಫೈನಲ್ ತಲುಪಿಕೊಂಡಿದೆ. ಒಟ್ಟು ಐದು ವಿಶ್ವಕಪ್ ಗಳನ್ನು ಗೆದ್ದಿರುವ ಆಸ್ಟ್ರೇಲಿಯಾ 1999, 2003, 2007ರ ವಿಶ್ವಕಪ್ ಪಂದ್ಯಾವಳಿಗಳನ್ನು ಸತತ ಗೆದ್ದು ಹ್ಯಾಟ್ರಿಕ್ ಸಾಧಿಸಿ ವಿಶ್ವಕಪ್ ಕ್ರಿಕೆಟ್ ನಲ್ಲಿ ತನ್ನ ಪಾರಮ್ಯವನ್ನು ಸ್ಥಾಪಿಸಿತ್ತು. ಆದರೆ ಆಗಿನ ಆಸ್ಟ್ರೇಲಿಯಾ ತಂಡದಷ್ಟು ಪ್ರಬಲವಾಗಿಲ್ಲ ಇಂದಿನ ತಂಡ. ಆದರೂ ಅದು ದುರ್ಬಲವಾಗಿಯೂ ಇಲ್ಲ. ಡೇವಿಡ್ ವಾರ್ನರ್, ಮಿಚಲ್ ಮಾರ್ಶ್, ಮಾನಸ್ ಲಾಬುಶೇನ್ ಎಂಥ ಸಂದರ್ಭದಲ್ಲೂ ಸ್ಫೋಟಕ ಆಟ ನಡೆಸಬಲ್ಲರು. ವಿರಾಟ್ ಕೊಹ್ಲಿಗೆ ಪ್ರತಿಯಾಗಿ ಆಸ್ಟ್ರೇಲಿಯಾ ಬಳಿ ಸ್ಟೀವ್ ಸ್ಮಿತ್ ಇದ್ದಾರೆ. ಈ ಪಂದ್ಯಾವಳಿಯಲ್ಲಿ ಅಷ್ಟೇನು ದೊಡ್ಡ ಕೊಡುಗೆ ನೀಡದ ಸ್ಮಿತ್ ಫೈನಲ್ ನಲ್ಲಿ ಸಿಡಿದರೆ ಆಶ್ಚರ್ಯವಿಲ್ಲ. ಗ್ಲೆನ್ ಮ್ಯಾಕ್ಸ್ ವೆಲ್ ಅಫಘಾನಿಸ್ತಾನ ವಿರುದ್ಧ ಹೊಡೆ ಡಬಲ್ ಸೆಂಚುರಿ ಕಂಡು ಜಗತ್ತೇ ಬೆರಗಾಗಿದೆ. ಇನ್ನು ಟ್ರಾವಿಸ್ ಹೆಡ್ ಕೆಲವು ಪಂದ್ಯಗಳ ನಂತರ ಬಂದು ತಂಡವನ್ನು ಕೂಡಿದರೂ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಲೈನ್ ಅಪ್ ಗೆ ಬಲ ತುಂಬಿದ್ದಾರೆ.

ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ತಂಡದ ನಾಯಕ ಪ್ಯಾಟ್ ಕಮಿನ್ಸ್ ಜೊತೆಗೆ ಮಿಚೆಲ್ ಸ್ಟಾಕ್, ಹೇಜಲ್ ವುಡ್ ವೇಗದ ಬೌಲಿಂಗ್ ನಲ್ಲಿ ಎದುರಾಳಿ ತಂಡಗಳು ಪರದಾಡಿವೆ. ಸ್ಪಿನ್ನರ್ ಆಡಂ ಜಂಪಾ ಕೂಡ ತಿರುಗುವ ಪಿಚ್ ನಲ್ಲಿ ಅಪಾಯಕಾರಿಯಾಗಬಲ್ಲರು.

ಭಾರತ ತಂಡದ ಇದುವರೆಗಿನ ಯಶಸ್ಸು ನೋಡಿದರೆ, ನಿಸ್ಸಂಶಯವಾಗಿ ಅದು ಆಸ್ಟ್ರೇಲಿಯಾಗಿಂದ ಬಲಶಾಲಿಯಾಗಿದೆ. ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಸ್ಫೋಟಕ ಆರಂಭ ನೀಡುತ್ತಿದ್ದಾರೆ. ಇವರಿಬ್ಬರು ಹಾಕಿಕೊಟ್ಟ ಬುನಾದಿಯ ಮೇಲೆ ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ಕೆ.ಎಲ್ ರಾಹುಲ್ ಭರ್ಜರಿ ಇನ್ನಿಂಗ್ಸ್ ಕಟ್ಟುತ್ತಿದ್ದಾರೆ. ಟೀಂ ಮ್ಯಾನೇಜ್ ಮೆಂಟ್ ಎಲ್ಲ ಆಟಗಾರರಿಗೂ ಭಿನ್ನ ಭಿನ್ನ ಟಾಸ್ಕ್ ಕೊಟ್ಟಿದ್ದು, ಅದೇ ಪ್ರಕಾರವಾಗಿ ಎಲ್ಲರೂ ಆಡಿ ಸಫಲರಾಗಿದ್ದಾರೆ. ಈ ಐದೂ ಆಟಗಾರರ ನಂತರ ರವೀಂದ್ರ ಜಡೇಜಾ ಕೂಡ ಉಪಯುಕ್ತ ಇನ್ನಿಂಗ್ಸ್ ಗಳನ್ನು ಆಡಿದ್ದಾರೆ.

ಬ್ಯಾಟಿಂಗ್ ಗಿಂತಲೂ ಭಾರತದ ಬೌಲಿಂಗ್ ಪಡೆ ಎದುರಾಳಿಗಳ ನಿದ್ದೆಗೆಡಿಸಿದೆ. ಜಸ್ಪಿತ್ ಬುಮ್ರಾ ಎಂದೂ ಲಯ ಕಳೆದುಕೊಂಡಿದ್ದೇ ಇಲ್ಲ. ಈ ಟೂರ್ನಿಯಲ್ಲೂ ಅವರ ನಿಖರ ಬೌಲಿಂಗ್ ಮುಂದುವರೆದಿದೆ. ಮಹಮದ್ ಸಿರಾಜ್ ಸ್ವಿಂಗ್ ಮತ್ತು ಸೀಮ್ ಗಿಂತಲೂ ತನ್ನ ವಿಭಿನ್ನ ಲೈನ್ ಗಳ ಮೂಲಕ ಬ್ಯಾಟ್ಸ್ಮನ್ ಗಳ ಏಕಾಗ್ರತೆಯನ್ನು ಕದಡುತ್ತಿದ್ದಾರೆ. ಇವರಿಬ್ಬರೂ ಹೊಸ ಚೆಂಡ್ ನಲ್ಲಿ ಬೌಲ್ ಮಾಡುತ್ತಿದ್ದರೆ ರನ್ ಗಳಿಸುವುದು ಅಷ್ಟು ಸುಲಭವಲ್ಲ. ಇನ್ನು ಮಹಮದ್ ಶಮಿ ಈ ಪಂದ್ಯಾವಳಿಯಲ್ಲಿ ಸುನಾಮಿಯಂತೆ ಅಬ್ಬರಿಸಿದ್ದಾರೆ. ಮೊದಲ ನಾಲ್ಕು ಪಂದ್ಯಗಳನ್ನು ಆಡದೇ ಇದ್ದರೂ ಈ ಪಂದ್ಯಾವಳಿಯಲ್ಲಿ ಮಹಮದ್ ಶಮಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವುದೇ ಇದಕ್ಕೆ ಸಾಕ್ಷಿ. ಈಗಾಗಲೇ ಮೂರು ಬಾರಿ ಪಂದ್ಯ ಪುರುಷ ಪ್ರಶಸ್ತಿ ಪಡೆದಿರುವ ಶಮಿ ಫೈನಲ್ ನಲ್ಲೂ ಅದೇ ಪ್ರದರ್ಶನ ಮುಂದುವರೆಸುತ್ತಾರಾ ಎಂದು ಕಾದುನೋಡಬೇಕಿದೆ. ಭಾರತದ ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್, ರವೀಂದ್ರ ಜಡೇಜಾ ಎಂಥ ಸಂದರ್ಭದಲ್ಲೂ ವಿಕೆಟ್ ಗಳಿಸುವ ಶಕ್ತಿ ಹೊಂದಿದ್ದಾರೆ. ಇಬ್ಬರೂ ಭಿನ್ನ ಬಗೆಯ ಸ್ಪಿನ್ನರ್ ಗಳಾದ್ದರಿಂದ ಇಪ್ಪತ್ತರಿಂದ ನಲವತ್ತನೇ ಓವರ್ ಗಳಲ್ಲಿ ಎದುರಾಳಿ ತಂಡ ರನ್ ಗಳಿಸುವುದು ಕಷ್ಟ.

ಭಾರತ-ಆಸ್ಟ್ರೇಲಿಯಾ ಫೈನಲ್ ಹಣಾಹಣಿ ಭಾರತೀಯ ಕಾಲಮಾನ 2 ಗಂಟೆಗೆ ಆರಂಭವಾಗಲಿದ್ದು, ಭಾರತ ಮಾತ್ರವಲ್ಲದೇ ಜಗತ್ತಿನ ಕೋಟ್ಯಂತರ ಅಭಿಮಾನಿಗಳು ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಕಾದುನಿಂತಿದ್ದಾರೆ.

ವಿಶ್ವಕಪ್‌ ಫೈನಲ್‌ ನಲ್ಲಿ ಭಾರತ ತಂಡ: ರಾಹುಲ್‌ ದ್ರಾವಿಡ್‌ ಪಾತ್ರ ಎಷ್ಟು ಗೊತ್ತೇ?
ಬೆಂಗಳೂರು: ಭಾರತ ಕ್ರಿಕೆಟ್‌ ತಂಡ ಫೈನಲ್‌ ಗೇರಿದೆ. ಎಲ್ಲರ ಬಾಯಲ್ಲೂ ಕೊಹ್ಲಿ-ರೋಹಿತ್‌, ಬುಮ್ರಾ-ಶಮಿ, ರಾಹುಲ್-ಶ್ರೇಯಸ್‌ ಹೆಸರುಗಳು ಕೇಳಿಬರುತ್ತಿವೆ. ನಿಜ, ಈ ಬಾರಿಯ ಭಾರತ ಕ್ರಿಕೆಟ್‌ ತಂಡದ ಪ್ರತಿಯೊಬ್ಬ ಆಟಗಾರನೂ ಎಲ್ಲರ ಮನಗೆದ್ದಿದ್ದಾರೆ. ಅವರೆಲ್ಲರೂ ಒಂದು ತಂಡವಾಗಿ ಆಡಿದ್ದಾರೆ. ಅಸಾಧ್ಯಗಳನ್ನು ಸಾಧಿಸಿದ್ದಾರೆ. ಸವಾಲುಗಳನ್ನು ದಿಟ್ಟತನದಿಂದ ಎದುರಿಸಿ ಗೆದ್ದಿದ್ದಾರೆ. ವಿಶ್ವಕಪ್‌ ಪಂದ್ಯಾವಳಿಯಲ್ಲಿ ಸತತ ಹತ್ತು ಗೆಲುವುಗಳು ಅಷ್ಟು ಸುಲಭವಲ್ಲ. ಎಲ್ಲ ವಿಭಾಗಗಳಲ್ಲೂ ಬಲಶಾಲಿಯಾಗಿರುವ ತಂಡವಷ್ಟೇ ಹೀಗೆ ಗೆಲ್ಲಲು ಸಾಧ್ಯ

ಆದರೆ ಕೇವಲ ಆಡುವ ಹನ್ನೊಂದು ಆಟಗಾರರಿಂದ ಇದೆಲ್ಲ ಸಾಧನೆ ಸಾಧ್ಯವೇ? ಭಾರತ ತಂಡ ಇವತ್ತು ಎದುರಾಳಿಗಳಿಗೆ ನಡುಕ ಹುಟ್ಟಿಸುವ ಪಡೆಯಾಗಿ ನಿಲ್ಲಲು ಮುಖ್ಯಕಾರಣ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್.‌ ಹೀಗಾಗಿ ಭಾರತ ತಂಡದ ಸಾಧನೆಯನ್ನು ದ್ರಾವಿಡ್‌ ಹೆಸರು ಹೇಳದೇ ಶ್ಲಾಘಿಸುವುದು ಅನ್ಯಾಯ. ಹಾಗೆ ನೋಡಿದರೆ ದ್ರಾವಿಡ್‌ ಎಂದೂ ತನ್ನ ಬಗ್ಗೆ ತಾನು ಕೊಚ್ಚಿಕೊಂಡು ಮಾತನಾಡಿದ್ದಿಲ್ಲ. ತಂಡದ ನಾಯಕನನ್ನು ಹಿಂದೆ ಸರಿಸಿ ಎಲ್ಲ ತನ್ನಿಂದನೇ ಆಗುತ್ತಿದೆ ಎಂಬಂತೆ ಫೋಜು ಕೊಟ್ಟವರೂ ಅಲ್ಲ. ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತ, ತಂಡದ ಗೆಲುವಿಗೆ ಏನೇನು ಸ್ಟ್ರಾಟರ್ಜಿಗಳನ್ನು ಮಾಡಬೇಕೋ ಮಾಡುತ್ತ, ಆಟಗಾರರನ್ನು ತಿದ್ದುತ್ತ ವಿಶ್ವಕಪ್‌ ಗೆಲ್ಲುವ ಹಂತಕ್ಕೆ ತಂದುನಿಲ್ಲಿಸಿರುವ ದ್ರಾವಿಡ್‌ ನಿಜವಾದ ಅರ್ಥದಲ್ಲಿ ನಿಸ್ವಾರ್ಥಿ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡುವ ಕಾಲಕ್ಕೆ ದ್ರಾವಿಡ್‌ ʻದಿ ವಾಲ್‌ʼ (ಗೋಡೆ) ಎಂದೇ ಹೆಸರಾದವರು. ಸಾಧಾರಣವಾಗಿ ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ದ್ರಾವಿಡ್‌ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಪಾರು ಮಾಡುತ್ತಿದ್ದವರು. ಯಾರನ್ನು ಬೇಕಾದರೂ ಔಟ್‌ ಮಾಡಬಹುದು, ಆದರೆ ರಾಹುಲ್‌ ಅವರನ್ನಲ್ಲ ಎಂದು ಇತರೆ ದೇಶಗಳ ಬೌಲರ್‌ ಗಳು ಪರಿತಪಿಸುವಷ್ಟು ಅವರು ಕ್ರೀಜ್‌ ಗೆ ಅಂಟಿ ನಿಲ್ಲುತ್ತಿದ್ದರು. 2011ರಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದಾಗ ಅತ್ಯಂತ ಹೀನಾಯವಾಗಿ 4-0 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಸೋತಿತ್ತು. ಆದರೆ ರಾಹುಲ್‌ ದ್ರಾವಿಡ್‌ ಆ ಸರಣಿಯಲ್ಲಿ ಗಳಿಸಿದ ರನ್‌ ಗಳ ಸಂಖ್ಯೆ 602! ಛಲ ಬಿಡದೆ ಹೋರಾಡುವುದು ರಾಹುಲ್‌ ಸ್ವಭಾವ.

ದ್ರಾವಿಡ್‌ ಕೋಚ್‌ ಹುದ್ದೆಗೆ ದಿಢೀರನೇ ಬರಲಿಲ್ಲ. ಅದಕ್ಕೆ ಅವರು ಪೂರ್ವ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದರು. ಮೊದಲು ಅವರು 2016ರಲ್ಲಿ ಅಂಡರ್‌-19 ಭಾರತ ತಂಡಕ್ಕೆ ಕೋಚ್‌ ಆದರು. ಆ ಹುದ್ದೆಗೆ ಅಂಥ ಡಿಮ್ಯಾಂಡೇನೂ ಇರಲಿಲ್ಲ. ಆದರೆ ದ್ರಾವಿಡ್‌ ಹೊಸ ತಲೆಮಾರಿನ ಕ್ರಿಕೆಟಿಗರನ್ನು ತಯಾರು ಮಾಡುವ ಕಾರ್ಯದಲ್ಲಿ ತಾವೇ ಆಸಕ್ತಿ ವಹಿಸಿ ಈ ಹುದ್ದೆಗೆ ಬಂದಿದ್ದರು. ಈಗ ಭಾರತ ಕ್ರಿಕೆಟ್‌ ತಂಡದಲ್ಲಿ ಆಡುತ್ತಿರುವ ಹಲವು ಆಟಗಾರರು ದ್ರಾವಿಡ್‌ ಗರಡಿಯಲ್ಲಿ ಪಳಗಿದವರೇ ಆಗಿದ್ದಾರೆ. ಮೂರು ವರ್ಷಗಳ ಕಾಲ ಹೊಸ ಹುಡುಗರಿಗೆ ತರಬೇತಿ ನೀಡಿದ ನಂತರ ದ್ರಾವಿಡ್‌ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ (ಎನ್‌ ಸಿ ಎ) ನಿರ್ದೇಶಕರಾಗಿ ಬಂದರು. ಎನ್.ಸಿ.ಎ ಒಂದು ಬಗೆಯಲ್ಲಿ ಆಟಗಾರರಿಗೆ ಸಂಜೀವಿನಿ ಇದ್ದಂತೆ. ಗಾಯಗೊಂಡವರು, ಫಿಟ್ನೆಸ್‌ ಕಳೆದುಕೊಂಡವರು ಇಲ್ಲಿ ಬಂದು ಪರಿಪೂರ್ಣವಾಗಿ ಸಿದ್ಧರಾಗುತ್ತಾರೆ. ಎನ್‌.ಸಿ.ಎ ಯನ್ನು ಸಮರ್ಥವಾಗಿ ಕಟ್ಟುವಲ್ಲಿ ದ್ರಾವಿಡ್‌ ಯಶಸ್ವಿಯಾದರು.

ಇದಾದ ನಂತರವೇ ದ್ರಾವಿಡ್‌ ಭಾರತ ತಂಡದ ಮುಖ್ಯ ಕೋಚ್‌ ಆದರು. ಅವರು ಕೋಚ್‌ ಆದಾಗ ವಿರಾಟ್‌ ಕೊಹ್ಲಿ ತಂಡದ ನಾಯಕರಾಗಿದ್ದರು. ಆದರೆ ಕೊಹ್ಲಿಯನ್ನು ಒಂದು ಬಗೆಯಲ್ಲಿ ಅಪಮಾನಿಸಿ ನಾಯಕತ್ವದಿಂದ ಇಳಿಯುವಂತೆ ಮಾಡಿತು ಬಿಸಿಸಿಐ. ರೋಹಿತ್‌ ಶರ್ಮಾ ನಾಯಕರಾದರು. ಇಂಥ ಸಂದರ್ಭದಲ್ಲಿ ತಂಡವನ್ನು ಕಟ್ಟುವುದು ಕಷ್ಟದ ಕೆಲಸ. ದ್ರಾವಿಡ್‌ ಸವಾಲಾಗಿ ತೆಗೆದುಕೊಂಡು ಸತತ ಶ್ರಮವಹಿಸಿ ತಂಡ ಕಟ್ಟುತ್ತ ಹೋದರು. ಹೊಸಹೊಸ ಪ್ರಯೋಗಗಳನ್ನು ಮಾಡಿದರು. ಫಾರ್ಮ್‌ ಕಳೆದುಕೊಂಡಿದ್ದ ಕೆ.ಎಲ್.ರಾಹುಲ್‌ ಕೈಗೆ ಗ್ಲೌಸ್‌ ಕೊಟ್ಟು ವಿಕೆಟ್‌ ಕೀಪಿಂಗ್‌ ಗೆ ಹಚ್ಚಿದರು. ತಂಡದ ನಾಯಕ ರೋಹಿತ್‌ ಶರ್ಮಾ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡರು. ಭಾರತ ತಂಡದ ಡ್ರೆಸಿಂಗ್‌ ರೂಮ್‌ ಲವಲವಿಕೆಯಿಂದ ತುಂಬಿ ತುಳುಕಿತು. ದ್ರಾವಿಡ್‌ ಎಲ್ಲರಿಗೂ ಸ್ಪೂರ್ತಿಯಾಗಿ ನಿಂತರು.

ದ್ರಾವಿಡ್‌ ಎಂದರೆ ಹಾಗೆಯೇ. ಸದ್ದುಗದ್ದಲವಿಲ್ಲದೆ ತಮ್ಮ ಕೆಲಸ ತಾವು ಮಾಡುವವರು. ಅವರು ಜೋರಾಗಿ ಮಾತಾಡಿದ್ದನ್ನು ನೋಡಿದವರೇ ವಿರಳ. ಎಲ್ಲಿ ಯಾವಾಗ ಎಷ್ಟು ಮಾತಾಡಬೇಕು ಎಂಬುದು ಅವರಿಗೆ ಗೊತ್ತು. ಅಷ್ಟೆಲ್ಲ ದೊಡ್ಡ ಸಾಧನೆ ಮಾಡಿಯೂ ಅವರು ಎಲೆಮರೆಯ ಕಾಯಿಯಂತೆ ಉಳಿದವರು. ಈಗಲೂ ಅಷ್ಟೆ. ಭಾರತ ವಿಶ್ವಕಪ್‌ ಗೆದ್ದು ನಿಂತಾಗ ಅವರು ಇದು ನನ್ನ ಸಾಧನೆ ಎಂದು ಬಡಾಯಿ ಕೊಚ್ಚಿಕೊಳ್ಳುವುದಿಲ್ಲ. ಮೀಡಿಯಾಗಳ ಕಣ್ಣಿಗೂ ಪದೇಪದೇ ಬೀಳುವುದಿಲ್ಲ. ಅವರು ಹಿನ್ನೆಲೆಯಲ್ಲೇ ನಿಂತು ಸಂಭ್ರಮಿಸುವ ಜೀವ. ದ್ರಾವಿಡ್‌ ಅಂದರೆ ಹಾಗೆಯೇ, ʻಕಾಣ್ತಿದೆ, ಆದರೆ ಕಾಣಾಕಿಲ್ಲʼ!

ಸರಿಯಾಗಿ ನಡೆಸಿಕೊಂಡಿಲ್ಲ: ಭಾರತದ ವಿರುದ್ಧ ಐಸಿಸಿಗೆ ಪಾಕ್‌ ತಂಡ ದೂರು
ಬೆಂಗಳೂರು,ಅಕ್ಟೋಬರ್.‌18:  ಐಸಿಸಿ ಪುರುಷರ ODI ವಿಶ್ವಕಪ್ 2023 ರಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಮಾಧ್ಯಮಗಳಿಗೆ ಮತ್ತು ಪಾಕಿಸ್ತಾನಿ ಬೆಂಬಲಿಗರಿಗೆ ವೀಸಾ ನೀಡುವಲ್ಲಿ ವಿಳಂಬ  ಮಾಡಿರುವುದಕ್ಕೆ  ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ( International Cricket Council) ತನ್ನ ಪ್ರತಿಭಟನಾತ್ಮಕ ಮನವಿಯನ್ನು ಮಂಗಳವಾರ ಸಲ್ಲಿಸಿದೆ.

ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ – ಪಾಕಿಸ್ತಾನ ಪಂದ್ಯದ ವೇಳೆ ಪಾಕಿಸ್ತಾನ ತಂಡವನ್ನು ಗುರಿಯಾಗಿಟ್ಟುಕೊಂಡು  ಮಾಡಿರುವ ಅನುಚಿತ ವರ್ತನೆಗೆ ಪಾಕಿಸ್ತಾನ ತಂಡ ಪ್ರತಿಭಟನೆಯನ್ನು ದಾಖಲಿಸಿದೆ.

ಯಾವ ದುಷ್ಕೃತ್ಯದ ವಿರುದ್ಧ PCB ನಿರ್ದಿಷ್ಟವಾಗಿ ದೂರು ನೀಡುತ್ತಿದೆ ಎಂಬುದು ಅಸ್ಪಷ್ಟವಾಗಿದೆ. ಭಾರತ-ಪಾಕಿಸ್ತಾನ ಪಂದ್ಯದ ನಂತರ, ಪಾಕಿಸ್ತಾನಿ ಆಟಗಾರ ಮುಹಮ್ಮದ್ ರಿಜ್ವಾನ್ ಡ್ರೆಸ್ಸಿಂಗ್ ರೂಮ್‌ಗೆ ಹಿಂತಿರುಗುತ್ತಿದ್ದಂತೆ ಭಾರತೀಯ ಅಭಿಮಾನಿಗಳು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದ ವೀಡಿಯೊಗಳು Xನಲ್ಲಿ ವೈರಲ್‌ ಆಗಿದ್ದವು.

ವಿಶ್ವಕಪ್‌ ಪಂದ್ಯಾಟದಲ್ಲಿ ಪಾಲ್ಗೊಳ್ಳಲು ಬಯಸುವ ಪಾಕಿಸ್ತಾನಿ ಅಭಿಮಾನಿಗಳು ಮತ್ತು ಪತ್ರಕರ್ತರಿಗೆ ನಿಧಾನಗತಿಯಲ್ಲಿ ವೀಸಾ ನೀಡುವಿಕೆಯ ಬಗ್ಗೆ ಚರ್ಚಿಸಲು ಪಿಸಿಬಿ ಮಧ್ಯಂತರ ನಿರ್ವಹಣಾ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್ ಸೋಮವಾರ ಸೈರಸ್ ಸಜ್ಜದ್ ಖಾಜಿ ಅವರನ್ನು ಭೇಟಿ ಮಾಡಿದ್ದಾರೆ.

ಅಲ್ಲದೇ, ಪಾಕಿಸ್ತಾನದ ವಿಕೆಟ್ ಕೀಪರ್ ರಿಜ್ವಾನ್ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಗ್ಗೆ ಭಾರತೀಯ ವಕೀಲರು ಐಸಿಸಿಗೆ ದೂರು ಸಲ್ಲಿಸಿದ್ದರು. ಶ್ರೀಲಂಕಾ ವಿರುದ್ಧದ ಗೆಲುವಿನಲ್ಲಿ ತನ್ನ ಕೊಡುಗೆಯನ್ನು ಪ್ಯಾಲೆಸ್ತೀನ್‌ನ ಸಂತ್ರಸ್ತರಿಗೆ ಅರ್ಪಿಸುವ ಮೂಲಕ ರಿಜ್ವಾನ್ ಆಟದ ಸ್ಪಿರಿಟ್‌ಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ವಕೀಲರು ತಮ್ಮ ಪ್ರಕರಣದಲ್ಲಿ ಹೇಳಿದ್ದಾರೆ.

ಹತ್ತು ವರ್ಷಗಳ ಹಿಂದಿನ ಟ್ವೀಟ್‌ಗಳ ಆಧಾರದ ಮೇಲೆ ಪಾಕಿಸ್ತಾನಿ ಕ್ರೀಡಾ ನಿರೂಪಕಿ ಜೈನಾಬ್ ಅಬ್ಬಾಸ್ ವಿರುದ್ಧ ಕೂಡ ಎಫ್‌ಐಆರ್ ದಾಖಲಾಗಿದೆ.

IND vs SL Final: ಎಂಟನೇ ಬಾರಿಗೆ ಏಷ್ಯಾ ಕಪ್‌ ಎತ್ತಿ ಬೀಗಿದ ಭಾರತ ತಂಡ
IND Vs SL Final: 2023 ರ ಏಷ್ಯಾ ಕಪ್‌ನ ಫೈನಲ್‌ನಲ್ಲಿ, ಟೀಮ್ ಇಂಡಿಯಾ ಶ್ರೀಲಂಕಾವನ್ನು ಸುಲಭವಾಗಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಭಾರತ ದಾಖಲೆಯ ಎಂಟನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಗೆದ್ದಿದೆ.

ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡ ಕೇವಲ 50 ರನ್‌ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಭಾರತ ತಂಡ ಕೇವಲ 6.1 ಓವರ್‌ಗಳಲ್ಲಿ ಸುಲಭವಾಗಿ ಗುರಿ ಮುಟ್ಟಿತು.

ಶ್ರೀಲಂಕಾ ಮೊದಲು ಆಡಿ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕೇವಲ 51 ರನ್‌ಗಳ ಗುರಿ ನೀಡಿತು. ಈ ಸಾಧಾರಣ ಗುರಿಯನ್ನು ಭಾರತ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ಕೇವಲ 37 ಎಸೆತಗಳಲ್ಲಿ ಸಾಧಿಸಿತು. ಶುಭ್ಮನ್ ಗಿಲ್ 19 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗಿ ಮರಳಿದರು ಮತ್ತು ಇಶಾನ್ ಕಿಶನ್ 18 ಎಸೆತಗಳಲ್ಲಿ 23 ರನ್ ಗಳಿಸಿ ಅಜೇಯರಾಗಿ ಮರಳಿದರು. ಗಿಲ್ 6 ಬೌಂಡರಿ ಬಾರಿಸಿದರೆ, ಇಶಾನ್ ಮೂರು ಬೌಂಡರಿ ಬಾರಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಕೇವಲ 15.2 ಓವರ್‌ಗಳಲ್ಲಿ 50 ರನ್‌ಗಳಿಗೆ ಆಲೌಟಾಯಿತು. ಇದು ಭಾರತದ ವಿರುದ್ಧ ಎದುರಾಳಿ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ. ಭಾರತದ ಪರ ಮೊಹಮ್ಮದ್ ಸಿರಾಜ್ ಗರಿಷ್ಠ 6 ವಿಕೆಟ್ ಪಡೆದರು.

9 ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ

ಭಾರತದ ವೇಗಿಗಳ ಮಾರಕ ಬೌಲಿಂಗ್ ಮುಂದೆ ಶ್ರೀಲಂಕಾದ 9 ಆಟಗಾರರು ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ. ಕುಸಾಲ್ ಮೆಂಡಿಸ್ (17) ಮತ್ತು ದುಶನ್ ಹೇಮಂತ (13) ಮಾತ್ರ ಎರಡಂಕಿ ಮುಟ್ಟಲು ಸಾಧ್ಯವಾಯಿತು. ಪಾತುಮ್ ನಿಸ್ಸಾಂಕ 02, ಕುಸಾಲ್ ಪೆರೇರಾ 00, ಸದಿರ ಸಮರವಿಕ್ರಮ 00, ಚರಿತ್ ಅಸಲಂಕ 00, ಧನಂಜಯ್ ಡಿ ಸಿಲ್ವ 04, ದಸುನ್ ಶನಕ 00, ದುನಿತ್ ವೆಲ್ಲಲಾಗೆ 08 ಮತ್ತು ಪ್ರಮೋದ್ ಮಧುಶನ್ 01 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.

ವೇಗದ ಬೌಲರ್‌ಗಳ ಪಾಲಾದ ಎಲ್ಲಾ 10 ವಿಕೆಟುಗಳು

ಅಂತಿಮ ಪಂದ್ಯದಲ್ಲಿ ಸಿರಾಜ್ ಎದುರು ಶ್ರೀಲಂಕಾ ಬ್ಯಾಟ್ಸ್ ಮನ್‌ಗಳು ಅಸಹಾಯಕರಾಗಿ ಕಾಣುತ್ತಿದ್ದರು. ಕುತೂಹಲಕಾರಿ ಸಂಗತಿಯೆಂದರೆ ಶ್ರೀಲಂಕಾದ ಎಲ್ಲಾ 10 ವಿಕೆಟ್‌ಗಳನ್ನು ಭಾರತದ ವೇಗದ ಬೌಲರ್‌ಗಳು ಕಬಳಿಸಿದರು. ಏಷ್ಯಾಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ ವೇಗದ ಬೌಲರ್‌ಗಳು ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ ಘಟನೆ ನಡೆದಿದೆ. ಭಾರತದ ಪರ ಮೊಹಮ್ಮದ್ ಸಿರಾಜ್ 6, ಹಾರ್ದಿಕ್ ಪಾಂಡ್ಯ 3 ಹಾಗೂ ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಪಡೆದರು.

ಮಹಾರಾಜ ಟಿ20 ಟ್ರೋಫಿ-2023 | ಅಬ್ಬರಿಸಿದ ಮನೀಶ್ ಪಾಂಡೆ.. ಗುಡುಗಿದ ಕರುಣ್ ನಾಯರ್
ಕರ್ನಾಟಕ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಮಹಾರಾಜ ಟಿ20 ಟ್ರೋಫಿ-2023ರಲ್ಲಿ ಹುಬ್ಬಳ್ಳಿ ಟೈಗರ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಇಂದು (ಆಗಸ್ಟ್ 29) ನಡೆದ ಫೈನಲ್ಸ್ ನಲ್ಲಿ ಟೈಗರ್ಸ್ ತಂಡವು ಮೈಸೂರು ವಾರಿಯರ್ಸ್ ತಂಡವನ್ನು 8 ರನ್‌ಗಳಿಂದ ಸೋಲಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ಮೊಹಮ್ಮದ್ ತಾಹಾ (40 ಎಸೆತಗಳಲ್ಲಿ 72; 7 ಬೌಂಡರಿ, 4 ಸಿಕ್ಸರ್) ಮತ್ತು ಮನೀಷ್ ಪಾಂಡೆ (ಔಟಾಗದೆ 50, 23 ಎಸೆತಗಳಿಂದ; 3 ಬೌಂಡರಿ, 4 ಸಿಕ್ಸರ್). ಅವರ ಅರ್ಧಶತಕದಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.

ಟೈಗರ್ಸ್ ಇನ್ನಿಂಗ್ಸ್ ನಲ್ಲಿ ತಾಹಾ ಮತ್ತು ಮನೀಷ್ ಜೊತೆಗೆ ಕೃಷ್ಣನ್ ಶ್ರೀಜಿತ್ (31 ಎಸೆತ; 5 ಬೌಂಡರಿ) ಮತ್ತು ಮನ್ವಂತ್ ಕುಮಾರ್ (5 ಎಸೆತ; 2 ಸಿಕ್ಸರ್) ಕೂಡ ಸಾಧಾರಣ ಸ್ಕೋರ್ ಮಾಡಿದರು. ಮೈಸೂರು ವಾರಿಯರ್ಸ್ ಬೌಲರ್‌ಗಳಲ್ಲಿ ಕಾರ್ತಿಕ್, ಮೋನಿಸ್ ರೆಡ್ಡಿ, ಸುಚಿತ್ ಮತ್ತು ಕುಶಾಲ್ ವಾಧ್ವಾನಿ 2 ವಿಕೆಟ್ ಪಡೆದರು.

204 ರನ್ ಗಳ ಬೃಹತ್ ಗುರಿಯನ್ನು ಮುರಿಯಲು ಅಖಾಡಕ್ಕಿಳಿದ ಮೈಸೂರು ವಾರಿಯರ್ಸ್ ರವಿಕುಮಾರ್ ಸಮರ್ಥ್ (35 ಎಸೆತಗಳಲ್ಲಿ 63; 4 ಬೌಂಡರಿ, 4 ಸಿಕ್ಸರ್) ಮತ್ತು ಕರುಣ್ ನಾಯರ್ ಅವರ ಅಮೋಘ ಪ್ರದರ್ಶನದಿಂದ ಇನಿಂಗ್ಸ್ ಆರಂಭದಲ್ಲೇ ನಿರಾಯಾಸವಾಗಿ ಗೆಲುವು ಸಾಧಿಸಲಿದೆ ಎಂದು ಭಾವಿಸಿತ್ತು. (20 ಎಸೆತಗಳಲ್ಲಿ 37; 6 ಬೌಂಡರಿ).

ಆದರೆ ಅಂತಿಮವಾಗಿ ಹುಬ್ಬಳ್ಳಿ ಟೈಗರ್ಸ್ ಬೌಲರ್ ಗಳ ಬಿಗಿ ಬೌಲಿಂಗ್ ನಿಂದಾಗಿ ಮೈಸೂರು ವಾರಿಯರ್ಸ್ ತಂಡ ನಿಗದಿತ ಓವರ್ ಗಳಲ್ಲಿ 195 ರನ್ ಗಳಿಗೆ ಸೀಮಿತವಾಯಿತು. ಹುಬ್ಬಳ್ಳಿ ಬೌಲರ್‌ಗಳಲ್ಲಿ ಮನ್ವಂತ್ ಕುಮಾರ್ 3, ವಿದ್ವತ್ ಕಾವೇರಪ್ಪ 2, ಮಿತ್ರಕಾಂತ್ ಮತ್ತು ಕರಿಯಪ್ಪ ತಲಾ 2 ವಿಕೆಟ್ ಪಡೆದರು.