crime – Peepal Media

ಗ್ರೀನ್ ಗ್ರಾನೈಟ್ ದುರಂತ : ಮೂಟೆಯಲ್ಲಿ ಕಾರ್ಮಿಕರ ಶವ ಸಾಗಿಸಿ ಪ್ರಕರಣ ಮುಚ್ಚುವ ಪ್ರಯತ್ನ ಸತ್ತವರೆಷ್ಟು?
ಹಾಸನ : ಹಾಸನ ತಾಲೂಕಿನ ಧೂಮಗೆರೆ ಗ್ರಾಮದ ನವ್ಯಶ್ರೀ ಮಿನರಲ್ಸ್‌ಗೆ ಸೇರಿದ ಗ್ರೀನ್ ಗ್ರಾನೈಟ್ ಕ್ವಾರಿಯಲ್ಲಿ ಗುರುವಾರ ನಡೆದ ಭೀಕರ ಅವಘಡದಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗ್ರಾನೈಟ್ ಕಲ್ಲು ಕತ್ತರಿಸುವ ವೈರ್ ಕಟ್ ಕಾರ್ಯಾಚರಣೆ ವೇಳೆ ಬಂಡೆ ಮತ್ತು ಮಣ್ಣು ಕುಸಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ.ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆದರೆ, ಮಣಿ ಎಂಬ ಕಾರ್ಮಿಕನನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾನೆ. ಈ ಘಟನೆಯ ಬಗ್ಗೆ ಸ್ಥಳೀಯರಲ್ಲಿ ಗೊಂದಲ ಉಂಟಾಗಿದ್ದು, ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು.ಆದರೆ, ಪೊಲೀಸರು ಒಬ್ಬರ ಸಾವು ಮತ್ತು ನಾಲ್ವರ ಗಾಯಾಳಿತ ಘಟನೆಯನ್ನು ದೃಢಪಡಿಸಿದ್ದಾರೆ.ಕ್ವಾರಿಯ ಮಾಲೀಕ ದೇವರಾಜ್, ಅವರ ಪುತ್ರ ಅರ್ಜುನ್ ಮತ್ತು ಕ್ವಾರಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಎಂಬ ಮೂವರನ್ನು ಹಾಸನದ ಶಾಂತಿಗ್ರಾಮ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಮಿಕನ ಸಾವಿನ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿದ ಆರೋಪದ ಮೇಲೆ ಕ್ವಾರಿ ಮಾಲೀಕ ಅರ್ಜುನ್ ಕಾರ್ಮಿಕನ ಶವವನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲಕ್ಕೆ ರಹಸ್ಯವಾಗಿ ಸಾಗಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆಯಲು ಶಾಂತಿಗ್ರಾಮ ಪೊಲೀಸರು ಕೊಳ್ಳೆಗಾಲಕ್ಕೆ ತೆರಳಿದ್ದಾರೆ.ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮೊಹಮ್ಮದ್ ಸುಜಿತಾ ಮತ್ತು ಜಿಲ್ಲಾಧಿಕಾರಿ (ಡಿಸಿ) ಸತ್ಯಭಾಮ ಅವರು ಮಧ್ಯರಾತ್ರಿಯೇ ಕ್ವಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ತನಿಖೆ ಆರಂಭವಾಗಿದ್ದು, ಕ್ವಾರಿಯ ಸುರಕ್ಷತಾ ಕ್ರಮಗಳು ಮತ್ತು ಕಾರ್ಮಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಕ್ವಾರಿ ಮಾಲಿಕರ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನಿಖೆಯಿಂದ ಹೆಚ್ಚಿನ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.

ಅರಸೀಕೆರೆ: ಚಿನ್ನಾಭರಣಕ್ಕಾಗಿ ಗುತ್ತಿಗೆದಾರನ ಕೊಲೆ ಮಾಡಿದ್ದ ಆರೋಪಿಗಳು 10 ಗಂಟೆಗಳಲ್ಲೇ ಅಂದರ್
ಹಾಸನ : ಚಿನ್ನಾಭರಣ ದೋಚುವ ಉದ್ದೇಶದಿಂದ ಗುತ್ತಿಗೆದಾರ ವಿಜಯ್‌ಕುಮಾರ್‌ನನ್ನು ಕೊಲೆಗೈದ ಪ್ರಕರಣದಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರು ಕೇವಲ ಹತ್ತು ಗಂಟೆಗಳಲ್ಲಿ ಆರೋಪಿಗಳಾದ ಬಿಕ್ರಂಕುಮಾರ್ (25) ಮತ್ತು ಕಾನೂನು ಸಂಘರ್ಷಕ್ಕೊಳಗಾದ 15 ವರ್ಷದ ಅಪ್ರಾಪ್ತನನ್ನು  ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬಿಹಾರ ರಾಜ್ಯದ ಪೂರ್ನಿಯಾ ಜಿಲ್ಲೆಯ ರಾಂಪುರ ಗ್ರಾಮದ ಬಿಕ್ರಂಕುಮಾರ್ ಮತ್ತು ರೂಪೋಲಿ ಗ್ರಾಮದ ಬಾಲಕ, ಎರಡು ತಿಂಗಳ ಹಿಂದೆ ಕುಟುಂಬ ಸಮೇತ ಕೆಲಸಕ್ಕಾಗಿ ಅರಸೀಕೆರೆಗೆ ಬಂದಿದ್ದರು.

ಬಿಕ್ರಂಕುಮಾರ್ ಒಂದೂವರೆ ತಿಂಗಳ ಕಾಲ ವಿಜಯ್‌ಕುಮಾರ್‌ನೊಂದಿಗೆ ಕೆಲಸ ಮಾಡಿದ್ದ. ಆದರೆ, ಹಬ್ಬದ ನೆವದಲ್ಲಿ ಗ್ರಾಮಕ್ಕೆ ತೆರಳಿ, ಪತ್ನಿ ಮತ್ತು ಮಗುವನ್ನು ಬಿಟ್ಟು ಬಾಲಕನನ್ನು ಕರೆದುಕೊಂಡು ಬಂದಿದ್ದ. ಹಂಚಿಕೆಯಂತೆ ಚಿನ್ನಾಭರಣ ದೋಚಲು ಗುತ್ತಿಗೆದಾರ ವಿಜಯ್‌ಕುಮಾರ್‌ರನ್ನೇ ಕೊಲೆಗೈದಿದ್ದಾನೆ.

ಪೊಲೀಸರು ಬಂಧಿತರಿಂದ ಒಂದು ಚಿನ್ನದ ಸರ, ಚಿನ್ನದ ಉಂಗುರಗಳು ಮತ್ತು ಒಂದು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ  ತಿಳಿಸಿದ್ದಾರೆ.

ಅರಸೀಕೆರೆ ಪೊಲೀಸರ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಮಂಗಳೂರಲ್ಲಿ ಮೂವರಿಗೆ ಚಾಕು ಇರಿತ
ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಯಿಂದ ಕೋಮು ಸೂಕ್ಷ್ಮ ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಪ್ರಕ್ಷುಬ್ಧಗೊಂಡಿದೆ.ನಿನ್ನೆ ರಾತ್ರಿ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಮುನ್ನೆಚರಿಕಾ ಕ್ರಮ ಕೈಗೊಂಡಿರುವ ಪೊಲೀಸರು ಮೇ 6ರ ತನಕ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ಆದ್ರೆ ಈ ಮಧ್ಯೆ ಕಣ್ಣೂರು, ಕೊಂಚಾಡಿ ಮತ್ತು ಉಳ್ಳಾಲದಲ್ಲಿ ಮೂರು ಚಾಕು ಇರಿತ ಘಟನೆಗಳು ನಡೆದಿವೆ. ಉಡುಪಿಯಲ್ಲಿ ಕೊಲೆ ಯತ್ನವೂ ಸಹ ನಡೆದಿದೆ.ಸುಹಾಸ್​ ಶೆಟ್ಟಿ ಕೊಲೆಗೆ ಪ್ರತಿಯಾಗಿ ಈ ದಾಳಿಗಳು ನಡೆದಿದೆ.

ಇನ್ನು ದಾಳಿ ಒಳಗಾದ ಉಳ್ಳಾಲದ ಫೈಝಲ್​, ಕೊಂಚಾಡಿಯ ಮೊಹ್ಮದ್​ ಲುಕ್ಮಾನ್,​​ ಕಣ್ಣೂರಿನ ಇರ್ಶಾದ್​ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.ಸದ್ಯ ಹಲ್ಲೆಗೊಳಗಾದ ಮೂವರಿಗೂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.ಇದನ್ನು ಹೊರತುಪಡಿಸಿ ಉಡುಪಿಯ ಆತ್ರಾಡಿಯಲ್ಲಿ ಗುರುವಾರ ರಾತ್ರಿ ಮುಸ್ಲಿಂ ಯುವಕನ ಕೊಲೆಗೆ ಯತ್ನಿಸಲಾಗಿದೆ. ಚಾಲಕ ಅಬೂಬಕ್ಕರ್ ಯೆಮಾಬತನ ಆಟೋ ಅಡ್ಡಗಟ್ಟಿ ದುಷ್ಕರ್ಮಿಗಳು ತಲ್ವಾರ್ ಮತ್ತು ಬಾಟಲ್​ನಿಂದ ಹಲ್ಲೆ ಮಾಡಲು ಮಾಡಿದ್ದಾರೆ.

ಈ ವೇಳೆ ದಾಳಿಕೋರರಿಂದ ತಪ್ಪಿಸಿಕೊಂಡ ಅಬೂಬಕ್ಕರ್ ಕೂಡಲೇ ಹಿರಿಯಡಕ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.ಹೀಗಾಗಿ ತಕ್ಷಣವೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಈಗಾಗಲೇ ಸುಶಾಂತ್, ಸಂದೇಶ್ ಪೂಜಾರಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹಂಪಿ: ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂರನೇ ಆರೋಪಿಯ ಬಂಧನ
ಕರ್ನಾಟಕದ ಹಂಪಿ ಬಳಿ ನಡೆದ ಪ್ರವಾಸಿಗರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮೂರನೇ ಶಂಕಿತನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇತರ ಇಬ್ಬರು ಶಂಕಿತರನ್ನು ಶನಿವಾರ ಬಂಧಿಸಲಾಗಿದೆ.

ಗುರುವಾರ ರಾತ್ರಿ, ಹಂಪಿ ಬಳಿಯ ಸಣಾಪುರ ಗ್ರಾಮದಲ್ಲಿ ಇಸ್ರೇಲ್‌ನ 27 ವರ್ಷದ ಮಹಿಳೆ ಮತ್ತು ಕೊಪ್ಪಳ ಜಿಲ್ಲೆಯ 29 ವರ್ಷದ ಹೋಂಸ್ಟೇ ಮಾಲಕಿಯ ಮೇಲೆ ಮೂವರು ಪುರುಷರು ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆಯರು ಅಮೆರಿಕ, ಒಡಿಶಾ ಮತ್ತು ಮಹಾರಾಷ್ಟ್ರದ ಮೂವರು ಪುರುಷ ಪ್ರಯಾಣಿಕರನ್ನು ಒಳಗೊಂಡ ಐದು ಜನರ ಗುಂಪಿನ ಭಾಗವಾಗಿದ್ದರು. ಒಡಿಶಾದ ಪುರುಷ ಪ್ರವಾಸಿ ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ.

ಪ್ರಕರಣ

ಹೋಂಸ್ಟೇ ಮಾಲೀಕಿ ತಮ್ಮ ದೂರಿನಲ್ಲಿ, ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಬಳಿ ಊಟದ ನಂತರ ತಾನು ಮತ್ತು ತನ್ನ ನಾಲ್ವರು ಅತಿಥಿಗಳು ನಕ್ಷತ್ರ ವೀಕ್ಷಣೆ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.

ಮೂವರು ಪುರುಷರು ಮೋಟಾರ್ ಸೈಕಲ್‌ನಲ್ಲಿ ಬಂದು ಪೆಟ್ರೋಲ್ ಎಲ್ಲಿ ಸಿಗುತ್ತದೆ ಎಂದು ಕೇಳಿದರು. ನಂತರ, ಅವರಲ್ಲಿ ಒಬ್ಬ ಪ್ರವಾಸಿಗರಿಂದ 100 ರೂ.ಗೆ ಬೇಡಿಕೆ ಇಟ್ಟನು, ಆಗ ಅವರು ನಿರಾಕರಿಸಿದಾಗ ಆತ ಜಗಳವಾಡಲು ಪ್ರಾರಂಭಿಸಿ ಅವರ ಮೇಲೆ ಹಲ್ಲೆ ನಡೆಸಿದನು. ನಂತರ ಮೂವರು ಪುರುಷರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಕಾಲುವೆಗೆ ತಳ್ಳಿ, ನಂತರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿತು.

ಕನ್ನಡ ಮತ್ತು ತೆಲುಗು ಮಾತನಾಡುತ್ತಿದ್ದ ಮೂವರು ಅಪರಿಚಿತ ದುಷ್ಕರ್ಮಿಗಳು, ನಂತರ ಪ್ರಯಾಣಿಕರಿಂದ ಎರಡು ಮೊಬೈಲ್ ಫೋನ್‌ಗಳು ಮತ್ತು 9,500 ರೂ. ನಗದನ್ನು ತೆಗೆದುಕೊಂಡು ತಮ್ಮ ಬೈಕ್‌ನಲ್ಲಿ ಅಪರಾಧ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ .

ಆಪಾದಿತ ಘಟನೆಯ ಎರಡು ದಿನಗಳ ನಂತರ, ಶೋಧ ತಂಡಗಳು ಒಡಿಶಾ ಮೂಲದ 26 ವರ್ಷದ ಬಿಬಾಶ್ ಅವರ ಶವವನ್ನು ವಶಪಡಿಸಿಕೊಂಡರೆ, 23 ವರ್ಷದ ಡೇನಿಯಲ್ ಮತ್ತು 42 ವರ್ಷದ ಪಂಕಜ್ ಎಂಬ ಇಬ್ಬರು ಪುರುಷರು ಕಾಲುವೆಯಲ್ಲಿ ಈಜಿ ಬಚಾವಾಗಿದ್ದಾರೆ.

ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ದರೋಡೆ, ಹಲ್ಲೆ ಮತ್ತು ಕೊಲೆಯತ್ನ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮೂವರು ಶಂಕಿತರನ್ನು ಹುಡುಕಲು ಪೊಲೀಸರು ಆರು ತಂಡಗಳನ್ನು ನಿಯೋಜಿಸಿದ್ದರು.

ತಿರುವನಂತಪುರಂ: ಸ್ನೇಹಿತೆ ಮತ್ತು ಕುಟುಂಬದ ನಾಲ್ವರನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಯುವಕ
ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ಸೋಮವಾರ 23 ವರ್ಷದ ಯುವಕನೊಬ್ಬ ತನ್ನ ಕುಟುಂಬದ ನಾಲ್ವರು ಸದಸ್ಯರು ಮತ್ತು ಸ್ನೇಹಿತೆಯನ್ನು ಕೊಲೆ ಮಾಡಿರುವುದಾಗಿ ಹೇಳಿಕೊಂಡು ಪೊಲೀಸರ ಮುಂದೆ ಶರಣಾಗಿದ್ದಾನೆ.

ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಫಾನ್ ವೆಂಜರಮೂಡು ಪೊಲೀಸ್ ಠಾಣೆಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಕೊಲೆಗಳ ಹಿಂದಿನ ಉದ್ದೇಶ ಸದ್ಯ ಸ್ಪಷ್ಟವಾಗಿಲ್ಲ.

ಮೃತರನ್ನು ಅಫಾನ್ ನ 13 ವರ್ಷದ ಸಹೋದರ ಅಫ್ಸಾನ್, ಚಿಕ್ಕಪ್ಪ ಲತೀಫ್, ಚಿಕ್ಕಮ್ಮ ಶಾಹಿದಾ, ಅಜ್ಜಿ ಸಲ್ಮಾ ಬೀವಿ ಮತ್ತು ಸ್ನೇಹಿತೆ ಫರ್ಸಾನಾ ಎಂದು ಗುರುತಿಸಲಾಗಿದೆ. ತಿರುವನಂತಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾಯಿ ಶೆಮಿ ಮೇಲೆಯೂ ಅಫಾನ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ರಾಜ್ಯ ರಾಜಧಾನಿಯ ಬಳಿಯ ವೆಂಜರಮೂಡು, ಎಸ್‌ಎನ್ ಪುರಂ ಮತ್ತು ಪಾಂಗೋಡ್ ಪ್ರದೇಶಗಳಲ್ಲಿ ಈ ಕೊಲೆಗಳು ನಡೆದಿವೆ.

ಶರಣಾಗುವಾಗ, ಅಫಾನ್ ತನ್ನ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ತೆರೆದಿಟ್ಟು ವಿಷ ಸೇವಿಸಿರುವುದಾಗಿ ಪೊಲೀಸರಿಗೆ ತಿಳಿಸಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮೂರು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಫಾನ್ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದೆ ಎಂದು ವಾಮನಪುರಂ ಶಾಸಕ ಡಿ.ಕೆ. ಮುರಳಿ ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ . ಅಫಾನ್ ಅವರ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.

ಚಾಕೊಲೇಟ್ ಕೊಡಿಸುವ ನೆಪದಲ್ಲಿ ಕೀಚಕನಿಂದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ
ಹಾಸನ: ಜಿಲ್ಲೆಯಲ್ಲೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ನೆರೆಮನೆಯ ನಿವಾಸಿಯೇ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬೇಲೂರು ತಾಲೂಕಿನಲ್ಲಿ ಘಟನೆ ನಡೆದಿದ್ದು, ಬಾಲಕಿಯ ಪೋಷಕರು ಮಧ್ಯಾಹ್ನ ಬೀಗರ ಔತಣವೊಂದಕ್ಕೆ ಹೋಗಿದ್ದರು. ಆ ಸಮಯದಲ್ಲಿ ಬಾಲಕಿ ಮನೆಯಲ್ಲಿ ಒಂಟಿಯಾಗಿದ್ದಳು.

ಆಗ ನೆರೆಮನೆಯ ಕೀಚಕ ಚಾಕೊಲೇಟ್ ಕೊಡುವ ನೆಪದಲ್ಲಿ ಬಂದು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಏನೂ ನಡೆದೇ ಇಲ್ಲ ಎಂಬಂತೆ ತನ್ನ ಮನೆಯಲ್ಲೇ ಇದ್ದನು.ಬಾಲಕಿ ಪೋಷಕರು ಮನೆಗೆ ಮರಳಿದಾಗ ಬಾಲಕಿಯ ವರ್ತನೆ ಬದಲಾಗಿದ್ದನ್ನು ಹಾಗೂ ಆಕೆ ನೋವು ಅನುಭವಿಸುತ್ತಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಮೇಲೆ ಅತ್ಯಾಚರವಾಗಿರುವುದು ಗೊತ್ತಾಗಿದೆ.

ತಾನು ಎಸಗಿರುವ ಪೈಶಾಚಿಕ ಕೃತ್ಯ ಬಹಿರಂಗವಾದ ತಕ್ಷಣ ಎರಡು ಮಕ್ಕಳ ತಂದೆಯಾಗಿರುವ ಆರೋಪಿ ಮನೆಯ ಹಿಂಬಾಗಿಲಿನಿಂದ ಪರಾರಿಯಾಗಿದ್ದಾನೆ. ಹಳೇಬೀಡು ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಗನಿಂದಲೇ ತಂದೆಯ ಹತ್ಯೆ? ಅರೇಹಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆ
ಹೃದಯಾಘಾತದಿಂದ ಸಾವು ಎಂದಿದ್ದ ಕುಟುಂಬದ ವಿರುದ್ಧ ಗ್ರಾಮಸ್ಥರು ಹತ್ಯೆ ಎಂದು ಆಪಾದಿಸಿದ್ದೇಕೆ?

ಅರೇಹಳ್ಳಿ: ಹಾಸನ ಜಿಲ್ಲೆಯ  ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶಶಿಧರ(58 ವರ್ಷ) ಎಂಬುವವರನ್ನ ತನ್ನ ಹೆತ್ತ ಮಗನೆ ಹತ್ಯೆ ಮಾಡಿ ಬಲಿ ಪಡೆದಿದ್ದಾನೆ ಎಂದು ಮಗನ ವಿರುದ್ಧ ಸ್ವತಃ ಹೆತ್ತ ತಾಯಿ ಪೊಲೀಸರಿಗೆ ದೂರು ನೀಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಇಂದು ಸಂಜೆ ಸುಮಾರು 8 ಗಂಟೆಯ ಹೊತ್ತಿನಲ್ಲಿ ಶಶಿಧರ ಎಂಬುವವರಿಗೆ ಹೃದಯಾಘಾತವಾಗಿದೆ ಎಂದು ಕುಟುಂಬಸ್ಥರು ಚಿಕಿತ್ಸೆಗಾಗಿ ಅರೇಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ತಪಾಸಣೆ ನಡೆಸಿದ ವೈಧ್ಯಾಧಿಕಾರಿ ಮರಣಹೊಂದಿರುವುದನ್ನು ದೃಢಪಡಿಸಿರುತ್ತಾರೆ ಇದಾದ ಬಳಿಕ ಮೃತ ದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಸ್ವಗೃಹಕ್ಕೆ ತಂದಿರುತ್ತಾರೆ.

ಈ ವೇಳೆಗಾಗಲೆ ಹತ್ಯೆಯಾಗಿದೆ ಎನ್ನಲಾದ ಮನೆಯಲ್ಲಿ ಕೆಲ ಹೊತ್ತಿನ ಹಿಂದೆ ಜಗಳವಾಡುತ್ತಿರುವ ಶಬ್ದವನ್ನು ಆಲಿಸಿದ ಅಕ್ಕ ಪಕ್ಕದ ಮನೆಯವರು ಹಾಗು ಗ್ರಾಮದ ಮುಖಂ ಡರು ಜಮಾಯಿಸಿ ವಿಕೃತ ಮನಸ್ಸಿನ ಮಗನಿಂದಲೇ ಹತ್ಯೆಯಾಗಿರುವುದನ್ನು ಮರೆಮಾಚಿ ಹೃದಯಾ ಘಾತವಾಗಿ ಸಹಜ ಸಾವು ಆಗಿದೆ ಎಂದು ಯಾಕೆ ಸುಳ್ಳು ಹೇಳುತ್ತಿರುವಿರಿ? ಒಂದು ವೇಳೆ ಹತ್ಯೆಯನ್ನು ಸಹಜವಾಗಿ ಮರಣ ಹೊಂದಿದ್ದಾರೆ ಎಂದು ಸುಳ್ಳು ಹೇಳುವುದಾದರೆ ಅಂತ್ಯ ಸಂಸ್ಕಾರಕ್ಕಾಗಲೀ ಅಥವಾ ಇನ್ನೂ ಮುಂದೆ ನಿಮ್ಮ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಗಳಿಗೆ ನಾವುಗಳು ಬಾಗಿಯಾಗುವುದಿಲ್ಲ ಎಂದು ಸಂಬಂಧಿಕರ ಬಳಿ ಆಕ್ರೋಶಗೊಂಡು ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ ಪತಿಯ ಮರಣದ ವಿಷಯ ತಿಳಿದ ಕ್ಷಣದಿಂದ ಕಣ್ಣೀರಿಟ್ಟು ನಿತ್ರಣಗೊಂಡಿದ್ದ ಪತ್ನಿಯು ಎಚ್ಚೆತ್ತು ಪತಿಯ ಸಾವಿನ ಮೊದಲು ಮನೆಯಲ್ಲಿ ಅಪ್ಪ ಮಗ ಜಗಳ ವಾಡುತ್ತಿದ್ದರು ಆಗ ನಾನು ಅವನಿಂದ ಬಿಡಿಸಿಕೊಂಡು ಸಹೋದರನ ಮನೆಗೆ ಓಡಿ ತಪ್ಪಿಸಿಕೊಂಡಿರು ವುದು ನಿಜ, ಇಂತಹ ಮಗನನ್ನು ಹೆತ್ತು ದಿನ ಜಗಳವಾಡುವುದು ಕಣ್ಣೀರಿಡುವುದು ಸಾಮಾನ್ಯವಾಗಿದೆ ,ಇವನನ್ನು ಹೀಗೆ ಬಿಟ್ಟರೆ ನನ್ನನ್ನು ಒಂದಲ್ಲ ಒಂದು ದಿನ ಸಾಯಿಸುತ್ತಾನೆ, ನೀವೇ ಸರಿಯಾದ ಬುದ್ದಿ ಕಲಿಸಿ ಎಂದು ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀ ಸರಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ, ನಂತರ ಪೂರಕ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲು ಮಾಡಿರುತ್ತಾರೆ

ಹತ್ಯೆ ಮಾಡಿದ್ದಾನೆ ಎನ್ನಲಾದ ಆಪಾದಿತ ದಿನೇಶ್(34ವರ್ಷ) ಎಂಬುವವರು ತುಂಬಾ ವರ್ಷಗಳಿಂದ ಮನೆಯಲ್ಲಿ ಮದ್ಯಪಾನ ಮಾಡಿ ನಿತ್ಯ ಅಪ್ಪ ಅಮ್ಮನೊಂದಿಗೆ ಜಗಳವಾಡುವುದು, ಸಿಕ್ಕ ಸಿಕ್ಕಲ್ಲಿ ಹೊಡೆಯುವುದು ಸಾಮಾನ್ಯವಾಗಿದೆ, ಈಗಾಗಲೇ ಬಹಳಷ್ಟು ಬಾರಿ ಸಾರ್ವಜನಿಕರು ಮನೆಯಲ್ಲಿ ಹೊಡೆದಾಟ ವಾಗುತ್ತಿದ್ದಾಗ ಬಿಡಿಸಿದ್ದು ಉಂಟು, ಅಪ್ಪ ಅಮ್ಮನಿಗೆ ಹೊಡೆದು ಗಾಯಗಳಾಗಿ ಆಸ್ಪತ್ರೆಯಲ್ಲಿ ಎಷ್ಟೋ ಬಾರಿ ಚಿಕಿತ್ಸೆಯನ್ನು ಸಹಾ ಪಡೆದುಕೊಂಡು ಇನ್ನಾ ದರೂ ಬದಲಾಗುತ್ತಾನೆ ಎಂದು ಸಹಿಸಿಕೊಂಡಿದ್ದು ಇದೀಗ ತನ್ನ ವಿಕೃತ ಮನಸ್ಥಿತಿಯನ್ನು ತೋರಿಸಿದ್ದಾನೆ,ಏನೇ ಆಗಲಿ ಜನುಮ ನೀಡುವ ತಂದೆ ತಾಯಿಗೆ ಹೊಡೆಯ ದಿರಲಿ ಹತ್ಯೆ ಮಾಡುವ ವರು ನಮ್ಮಲ್ಲಿ ಇದ್ದಾರಲ್ಲ ಇಂಥಹ ಮನಸ್ಥಿತಿ ಇನ್ನೂ ಮುಂದೆ ಯಾರಿಗೂ ಬರಬಾರದು, ಇಂಥವರಿಗೆ ತಕ್ಕ ಶಿಕ್ಷೆ ಆಗಬೇಕು ಎಂಬುವುದು ಗ್ರಾಮಸ್ಥರ ಅಭಿಪ್ರಾಯ

ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ಕೊಲೆ: ಮಗನಿಗೆ ನ್ಯಾಯ ಕೊಡಿಸುವಂತೆ ತಾಯಿ ನಿಂಗಮ್ಮ ಒತ್ತಾಯ
ಹಾಸನ: ತನ್ನ ಮಗನ ಮೇಲೆ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಬಗ್ಗೆ ಮೊಮ್ಮಗ ಹೇಳಿರುವ ವಿಡಿಯೋ ಇದ್ದು, ಗ್ರಾಮಸ್ಥರು ಮಾತನಾಡಿರುವ ವಿಡಿಯೋ ಇದ್ದು, ನನ್ನ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಿ ನ್ಯಾಯ ಕೊಡಿಸುವಂತೆ ಅರಕಲಗೂಡು ತಾಲೂಕಿನ ಕ್ಯಾತನಹಳ್ಳಿ ತಾಯಿ ನಿಂಗಮ್ಮ ಹಾಗೂ ಗ್ರಾಮದ ಸಂಬಂಧಿಕ ಅಭಿಷೇಕ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತಾಡಿದ ಅವರು, ತನ್ನ ಸೊಸೆ ಲಕ್ಷ್ಮಿ ಎಂಬುವವರು ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಅದನ್ನು ನನ್ನ ಮಗನಾದ ಮಂಜು ಅವರು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಇದೆ ವಿಚಾರಕ್ಕೆ ಜಗಳ ನಡೆದಿತ್ತು. ನಂತರ ನನ್ನ ಸೊಸೆ ತನ್ನ ಮಗನ ಮೇಲೆ ಇಂಧನ ಎರಚಿ ಬೆಂಕಿ ಹಚ್ಚಿದ್ದಾಳೆ. ಅಕ್ಟೋಬರ್ ೧ ರಂದು ಈ ಘಟನೆ ನಡೆದಿದ್ದು, ಬಳಿಕ ನಗರದ ಸರ್ಕಾರಿ ಆಸ್ಪತ್ರೆಗೆ ಮಂಜು ಅವರನ್ನು ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅ.೩ ರಂದು ಮೃತಪಟ್ಟಿದ್ದಾರೆ ಎಂದರು. ಈ ಎಲ್ಲಾ ಘಟನೆಗೆ ಪ್ರತ್ಯೇಕ್ಷ ಸಾಕ್ಷಿಯಾಗಿ ತನ್ನ ಮಗನ ೮ ವರ್ಷದ ಮಗು ಈ ಘಟನೆಯ ಎಲ್ಲಾ ವಿಚಾರಗಳನ್ನು ವಿವರಿಸಿರುವ ಸಾಕ್ಷಿ ಹೇಳಿರುವ ವೀಡಿಯೋ ಜೊತೆಗೆ ಮಗ ಸಾವನ್ನಪ್ಪುವ ಮುನ್ನ ಪತ್ನಿ ಮಾಡಿರುವ ಕೃತ್ಯದ ಬಗ್ಗೆ ನಮ್ಮ ಬಳಿಯೂ ಹೇಳಿಕೊಂಡಿದ್ದಾನೆ. ಆದ್ದರಿಂದ ನನ್ನ ಮಗನಿಗೆ ಲಕ್ಷ್ಮಿಯು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿರುವ ಬಗ್ಗೆ ಮೊಮ್ಮಗ ಕೀರ್ತನ್ ಗೌಡ ಹೇಳಿರುವ ವೀಡಿಯೋ ಸಹ ಇದೆ. ಅದೇ ರೀತಿ ಊರಿನ ಗ್ರಾಮಸ್ಥರು ಮಾತನಾಡಿರುವ ಆಡಿಯೋ ರೆಕಾರ್ಡ್ ಇದೆ. ನನ್ನ ಮಗನ ಸಾವು ಕೊಲೆಯಾಗಿದೆ. ಆದ್ದರಿಂದ ನನ್ನ ಮಗನ ಸಾವಿಗೆ ಕಾರಣರಾದವರನ್ನು ಬಂಧಿಸಿ ನನ್ನ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಈ ವರೆಗೆ ಆರೋಪಿ ಸೊಸೆಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರಿದರು. ಜೊತೆಗೆ ಈ ಹಿಂದೆ ಎಸ್ಪಿ ಅವರನ್ನು ಭೇಟಿ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ ಆದಾಗ್ಯೂ ಈ ವರೆಗೆ ಆರೋಪಿಯನ್ನು ಬಂಧಿಸಿಲ್ಲ. ಕೂಡಲೇ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸಹೋದರಿಯರಾದ ಪಾರ್ವತಿ ರೇಣುಕಾ, ಸಾಕಮ್ಮ, ಹಾಗೂ ಸಂಬಂಧಿಕರಾದ ಕುಮಾರ್ ಇತರರು ಉಪಸ್ಥಿತರಿದ್ದರು.

ನಾಗಪುರ: ಒಂದೇ ಮನೆಯ ನಾಲ್ವರು ನೇಣು ಹಾಕಿಕೊಂಡು ಆತ್ಮಹತ್ಯೆ
ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದಂಪತಿ ಮತ್ತು ಅವರ ಇಬ್ಬರು ಪುತ್ರರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮನೆಯಲ್ಲಿ ಪತ್ತೆಯಾದ ಸೂಸೈಡ್ ನೋಟ್‌ನಲ್ಲಿ ವಂಚನೆ ಪ್ರಕರಣವೊಂದರಲ್ಲಿ ಪುತ್ರನೊಬ್ಬನ ಬಂಧನದಿಂದಾಗಿ ಕುಟುಂಬವು ಒತ್ತಡದಲ್ಲಿದೆ ಎಂದು ಬರೆಯಲಾಗಿದೆ ಎಂದು ನಾಗ್ಪುರ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊವಾಡ್ ಗ್ರಾಮದಲ್ಲಿರುವ ಇವರ ಮನೆಯಲ್ಲಿ ಯಾವುದೇ ಶಬ್ಧಗಳು ಬಾರದೆ ಇದ್ದದ್ದನ್ನು ಗಮನಿಸಿ ಕೆಲವು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದರು.

ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಕುಟುಂಬದ ನಾಲ್ವರು ಸೀಲಿಂಗ್ ಕೊಕ್ಕೆಗಳಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತರನ್ನು ನಿವೃತ್ತ ಶಿಕ್ಷಕ ವಿಜಯ್ ಮಧುಕರ್ ಪಚೋರಿ (68), ಅವರ ಪತ್ನಿ ಮಾಲಾ (55) ಮತ್ತು ಅವರ ಮಕ್ಕಳಾದ ಗಣೇಶ್ (38) ಮತ್ತು ದೀಪಕ್ (36) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮಧ್ಯಪ್ರದೇಶದ ಪಾಂಡುರ್ನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಗಣೇಶ್ ಬಂಧನದಿಂದಾಗಿ ಕುಟುಂಬವು ಅಪಾರ ಒತ್ತಡದಲ್ಲಿದ್ದುದು ಸೂಸೈಡ್ ನೋಟ್‌ನಲ್ಲಿ ಕಂಡುಬಂದಿದೆ.  ಇದರಲ್ಲಿ ಕುಟುಂಬದ ನಾಲ್ಕು ಸದಸ್ಯರ ಸಹಿಯನ್ನುಇತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ನಾರ್ಖೇಡ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ದರೋಡೆಕೋರರ ಬಂಧನ: 1.9 ಕೋಟಿ ಮೌಲ್ಯದ ಚಿನ್ನಾಭರಣ ವಶ
ಬೆಂಗಳೂರು: ಹಗಲಿನ ಹೊತ್ತು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ರಾತ್ರಿ ದರೋಡೆ ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಉತ್ತರ ವಿಭಾಗದ ಪೊಲೀಸರು ಬೇಟೆಯಾಡಿ ಬಂಧಿಸಿದ್ದಾರೆ. 1.9 ಕೋಟಿ ಮೌಲ್ಯದ ವಜ್ರ, ಚಿನ್ನ,ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.

ಸನ್ಯಾಸಿ ಮತ ನಂದೀಶ್(25), ನಂದೀಶ್(25) ಹಾಗೂ ಪ್ರತಾಪ್ ಕುಮಾರ್ (25) ಬಂಧಿತ ಕನ್ನಗಳ್ಳರಾಗಿದ್ದು,ಮೂವರಿಂದ 1 ಕೋಟಿ 9 ಲಕ್ಷ 20 ಸಾವಿರ ಮೌಲ್ಯದ 1 ಕೆಜಿ 802 ಗ್ರಾಂ ಚಿನ್ನಾಭರಣಗಳು, ವಜ್ರದ ಆಭರಣಗಳು, 110 ಗ್ರಾಂ ತೂಕದ ಬೆಳ್ಳಿ ಚೈನುಗಳು, 8 ವಾಚುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಬ್ಬಿಣದ ರಾಡು, ಒಂದು ಹೆಲ್ಮೆಟ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುಬ್ರಮಣ್ಯನಗರ ಮಾರುತಿ ಎಕ್ಸ್ ಟೆಕ್ಷನ್‍ನ 3ನೇ ಮುಖ್ಯರಸ್ತೆಯ ಮನೆಯವರು ಬೀಗ ಹಾಕಿಕೊಂಡು ಕಳೆದ ಸೆ.21 ರಂದು ರಾತ್ರಿ ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗಿದ್ದರು. ಮರುದಿನ ರಾತ್ರಿ ವಾಪಾಸು ಬರುವಷ್ಟರಲ್ಲಿ ಮನೆಯ 1ನೇ ಮಹಡಿಯ ಕಿಟಕಿಯ ಕಬ್ಬಿಣದ ಗ್ರಿಲ್‍ಗಳನ್ನು ಕತ್ತರಿಸಿ ಒಳನುಗ್ಗಿ ಕೊಠಡಿಯಲ್ಲಿದ್ದ ಕಬೋರ್ಡ್ ಬಾಗಿಲು ಮುರಿದು ವಜ್ರದ ಆಭರಣಗಳು, ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳು ಮತ್ತು ನಗದು ದರೋಡೆ ಮಾಡಿದ್ದರು.

ಮನೆಯವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿದ ಸುಬ್ರಮಣ್ಯನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಒಬ್ಬನನ್ನು ಕುಟುಂಬ ಸಮೇತ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ವಾಪಸ್ ಬರುತ್ತಿರುವಾಗ ತುಮಕೂರು ಜಲ್ಲೆ, ಸಿರಾ ತಾಲ್ಲೂಕು, ಹುಳಿಯಾರು ಗ್ರಾಮದ ಬಳಿ ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆ ನಡೆಸಿದಾಗ ಇತರ ಆರೋಪಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆ ಆಧಾರದ ಮೇಲೆ ವಿಜಯನಗರ ಜಿಲ್ಲೆಯ

ಹಗರಿಬೊಮ್ಮನಹಳ್ಳಿ ತಾಲ್ಲೂಕು, ಉಲುವತ್ತಿ ಗ್ರಾಮದ ಮನೆಯಲ್ಲಿದ್ದ ಇನ್ನಿಬ್ಬರನ್ನೂ ಬಂಧಿಸಿ ಓರ್ವ ಆರೋಪಿತನ ಮನೆಯಿಂದ 18 ಸಾವಿರ ನಗದನ್ನು ಜಪ್ತಿ ಮಾಡಲಾಗಿದೆ. ಮೂವರು ಬಂಧಿತರ ಪೈಕಿ ಧರ್ಮಸ್ಥಳದಿಂದ ವಾಪಸಾಗುತ್ತಿದ್ದ ಆರೋಪಿಯ ಮನೆಯಿಂದ ಕಳವು ಮಾಡಿದ್ದ 1 ಕೆ.ಜಿ 802 ಗ್ರಾಂ ತೂಕದ ಚಿನ್ನಾಭರಣಗಳು, ವಜ್ರದ ಆಭರಣಗಳು, 110 ಗ್ರಾಂ ತೂಕದ ಬೆಳ್ಳಿ ಚೈನುಗಳು, 8-ವಾಚುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಬ್ಬಿಣದ ರಾಡು, ಒಂದು ಹೆಲ್ಮೆಟ್‍ನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯು ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಲು ಅಡಾವತ್ ಮಾರ್ಗದರ್ಶನದಲ್ಲಿ ಸುಬ್ರಮಣ್ಯನಗರ ಪೊಲೀಸ್ ಇನ್ಸ್‍ಪೆಕ್ಟರ್ ಸುರೇಶ ಹೆಚ್.ವಿ. ಮತ್ತವರ ಅಧಿಕಾರಿಗಳ ತಂಡ ಯಶಸ್ವಿಯಾಗಿ ನಡೆಸಿದೆ.