cyber crime – Peepal Media

ಅರಸೀಕೆರೆ: ಚಿನ್ನಾಭರಣಕ್ಕಾಗಿ ಗುತ್ತಿಗೆದಾರನ ಕೊಲೆ ಮಾಡಿದ್ದ ಆರೋಪಿಗಳು 10 ಗಂಟೆಗಳಲ್ಲೇ ಅಂದರ್
ಹಾಸನ : ಚಿನ್ನಾಭರಣ ದೋಚುವ ಉದ್ದೇಶದಿಂದ ಗುತ್ತಿಗೆದಾರ ವಿಜಯ್‌ಕುಮಾರ್‌ನನ್ನು ಕೊಲೆಗೈದ ಪ್ರಕರಣದಲ್ಲಿ ಅರಸೀಕೆರೆ ನಗರ ಠಾಣೆ ಪೊಲೀಸರು ಕೇವಲ ಹತ್ತು ಗಂಟೆಗಳಲ್ಲಿ ಆರೋಪಿಗಳಾದ ಬಿಕ್ರಂಕುಮಾರ್ (25) ಮತ್ತು ಕಾನೂನು ಸಂಘರ್ಷಕ್ಕೊಳಗಾದ 15 ವರ್ಷದ ಅಪ್ರಾಪ್ತನನ್ನು  ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬಿಹಾರ ರಾಜ್ಯದ ಪೂರ್ನಿಯಾ ಜಿಲ್ಲೆಯ ರಾಂಪುರ ಗ್ರಾಮದ ಬಿಕ್ರಂಕುಮಾರ್ ಮತ್ತು ರೂಪೋಲಿ ಗ್ರಾಮದ ಬಾಲಕ, ಎರಡು ತಿಂಗಳ ಹಿಂದೆ ಕುಟುಂಬ ಸಮೇತ ಕೆಲಸಕ್ಕಾಗಿ ಅರಸೀಕೆರೆಗೆ ಬಂದಿದ್ದರು.

ಬಿಕ್ರಂಕುಮಾರ್ ಒಂದೂವರೆ ತಿಂಗಳ ಕಾಲ ವಿಜಯ್‌ಕುಮಾರ್‌ನೊಂದಿಗೆ ಕೆಲಸ ಮಾಡಿದ್ದ. ಆದರೆ, ಹಬ್ಬದ ನೆವದಲ್ಲಿ ಗ್ರಾಮಕ್ಕೆ ತೆರಳಿ, ಪತ್ನಿ ಮತ್ತು ಮಗುವನ್ನು ಬಿಟ್ಟು ಬಾಲಕನನ್ನು ಕರೆದುಕೊಂಡು ಬಂದಿದ್ದ. ಹಂಚಿಕೆಯಂತೆ ಚಿನ್ನಾಭರಣ ದೋಚಲು ಗುತ್ತಿಗೆದಾರ ವಿಜಯ್‌ಕುಮಾರ್‌ರನ್ನೇ ಕೊಲೆಗೈದಿದ್ದಾನೆ.

ಪೊಲೀಸರು ಬಂಧಿತರಿಂದ ಒಂದು ಚಿನ್ನದ ಸರ, ಚಿನ್ನದ ಉಂಗುರಗಳು ಮತ್ತು ಒಂದು ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೀತಾ  ತಿಳಿಸಿದ್ದಾರೆ.

ಅರಸೀಕೆರೆ ಪೊಲೀಸರ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2021 ರಿಂದ ಭಾರತದಲ್ಲಿ 38 ಲಕ್ಷಕ್ಕೂ ಹೆಚ್ಚು ಸೈಬರ್ ವಂಚನೆ ದೂರುಗಳು: ಕೇಂದ್ರ
2021 ರಲ್ಲಿ ಪ್ರಾರಂಭವಾದ ಮತ್ತು ಫೆಬ್ರವರಿ 2025 ರ ನಡುವೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್‌ನಲ್ಲಿ 38 ಲಕ್ಷಕ್ಕೂ ಹೆಚ್ಚು ಸೈಬರ್ ವಂಚನೆ ದೂರುಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ಈ ದೂರುಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಕರ್ನಾಟಕ ಮತ್ತು ತೆಲಂಗಾಣದಲ್ಲಿ ದಾಖಲಾಗಿವೆ ಎಂದು ಕೇಂದ್ರ ಗೃಹ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.

ಸೈಬರ್ ವಂಚನೆಗಳಿಂದ ಒಟ್ಟು 36,448 ಕೋಟಿ ರೂ. ನಷ್ಟವಾಗಿದೆ ಎಂದು ದೂರುದಾರರು ವರದಿ ಮಾಡಿದ್ದಾರೆ. ಈ ನಷ್ಟಗಳಲ್ಲಿ ಹೆಚ್ಚಿನವು ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಿಂದ ಬಂದಿವೆ.

ಇದರಲ್ಲಿ 4,380 ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಗಳಲ್ಲಿ ಸ್ಥಗಿತಗೊಳಿಸಲಾಗಿದ್ದು, ಸುಮಾರು 60.5 ಕೋಟಿ ರೂ.ಗಳನ್ನು ಮರುಪಾವತಿಸಲಾಗಿದೆ.

ಸೈಬರ್ ವಂಚನೆಗಳನ್ನು ತಡೆಯಲು ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಸಂಸದರೊಬ್ಬರ ಪ್ರಶ್ನೆಗಳಿಗೆ ಉತ್ತರವಾಗಿ ಈ ಡೇಟಾವನ್ನು ಒದಗಿಸಲಾಗಿದೆ.

2022 ಮತ್ತು ಫೆಬ್ರವರಿ 2025 ರ ನಡುವೆ “ಡಿಜಿಟಲ್ ಬಂಧನ ಹಗರಣಗಳು ಮತ್ತು ಸಂಬಂಧಿತ ಸೈಬರ್ ಅಪರಾಧಗಳಿಂದ” ಭಾರತೀಯರು 2,576 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ ಎಂದು ಪ್ರತ್ಯೇಕ ಪ್ರಶ್ನೆಗೆ ಬುಧವಾರ ಉತ್ತರಿಸುತ್ತಾ ಗೃಹ ಸಚಿವಾಲಯ ತಿಳಿಸಿದೆ .

ಈ ಅವಧಿಯಲ್ಲಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್‌ನಲ್ಲಿ “ಡಿಜಿಟಲ್ ಬಂಧನ”ಗಳ ಕುರಿತು 2.4 ಲಕ್ಷಕ್ಕೂ ಹೆಚ್ಚು ದೂರುಗಳು ವರದಿಯಾಗಿವೆ.

2024 ರಲ್ಲಿ ಅತಿ ಹೆಚ್ಚು ದೂರುಗಳು (1.2 ಲಕ್ಷ) ಮತ್ತು ನಷ್ಟಗಳು (ರೂ. 1,935 ಕೋಟಿ) ದಾಖಲಾಗಿವೆ.

“ಡಿಜಿಟಲ್ ಬಂಧನ” ಪ್ರಕರಣಗಳಲ್ಲಿ, ಅಪರಾಧಿಗಳು ಸಾಮಾನ್ಯವಾಗಿ ಕಾನೂನು ಜಾರಿ ಅಧಿಕಾರಿಗಳಂತೆ ನಟಿಸುವ ಮೂಲಕ ವಂಚನೆಯನ್ನು ಮಾಡುತ್ತಾರೆ. ಆಗಾಗ್ಗೆ ಸಮವಸ್ತ್ರ ಧರಿಸಿ ಸರ್ಕಾರಿ ಕಚೇರಿಗಳು ಅಥವಾ ಪೊಲೀಸ್ ಠಾಣೆಗಳನ್ನು ಹೋಲುವ ಸ್ಥಳಗಳಿಂದ ಸಂತ್ರಸ್ತರಿಗೆ ವೀಡಿಯೊ ಕರೆಗಳನ್ನು ಮಾಡುತ್ತಾರೆ . ಬಲಿಪಶುಗಳ ವಿರುದ್ಧ “ರಾಜಿ” ಮತ್ತು “ಪ್ರಕರಣವನ್ನು ಮುಚ್ಚಲು” ಅವರು ಹಣವನ್ನು ಕೇಳುತ್ತಾರೆ.

ಕೆಲವು ಸಂದರ್ಭಗಳಲ್ಲಿ, ಬಲಿಪಶುಗಳನ್ನು “ಡಿಜಿಟಲ್ ಬಂಧನ” ಮಾಡಲಾಗುತ್ತದೆ ಮತ್ತು ವಂಚಕರು ತಮ್ಮ ಬೇಡಿಕೆಗಳು ಈಡೇರುವವರೆಗೆ ವ್ಯಕ್ತಿಗಳು ಸ್ಕ್ರೀನ್‌ ಬಿಟ್ಟು ಅಲ್ಲಾಡದಂತೆ ಹೇಳಿಕೊಳ್ಳುತ್ತಾರೆ.

ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೈಬರ್ ವಂಚನೆಯ ಈ ವಿಧಾನದ ವಿರುದ್ಧ ನಾಗರಿಕರಿಗೆ ಎಚ್ಚರಿಕೆ ನೀಡಿದ್ದರು.

ರಾಷ್ಟ್ರೀಯ ಮಟ್ಟದಲ್ಲಿ ಸೈಬರ್ ಅಪರಾಧಗಳನ್ನು ಮೇಲ್ವಿಚಾರಣೆ ಮಾಡುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು, ಜನವರಿ 2024 ರಿಂದ ಏಪ್ರಿಲ್ 2024 ರವರೆಗೆ ವರದಿಯಾದ ಸೈಬರ್ ವಂಚನೆಗಳಲ್ಲಿ 46% ಕಾಂಬೋಡಿಯಾ, ಲಾವೋಸ್ ಮತ್ತು ಮ್ಯಾನ್ಮಾರ್‌ನಲ್ಲಿ ಹುಟ್ಟಿಕೊಂಡಿವೆ ಎಂದು ಕಂಡುಹಿಡಿದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ಅಕ್ಟೋಬರ್‌ನಲ್ಲಿ ವರದಿ ಮಾಡಿದೆ.

2024 ಜನವರಿ-ಏಪ್ರಿಲ್ ತ್ರೈಮಾಸಿಕದಲ್ಲಿ ₹120 ಕೋಟಿಯ ಡಿಜಿಟಲ್ ಬಂಧನ ವಂಚನೆ
ಬೆಂಗಳೂರು: ಸರ್ಕಾರದ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ‘ಡಿಜಿಟಲ್ ಬಂಧನ’ ವಂಚನೆಗಳಲ್ಲಿ ಭಾರತೀಯರು ಸುಮಾರು ₹ 120.3 ಕೋಟಿ ಕಳೆದುಕೊಂಡಿದ್ದಾರೆ. ವಂಚನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್‌ 27 ಭಾನುವಾರ ಮಾತನಾಡಿದ್ದಾರೆ.

ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (ಎನ್‌ಸಿಆರ್‌ಪಿ) ಡೇಟಾ ಪ್ರಕಾರ ಈ ವರ್ಷದ ಜನವರಿ 1 ರಿಂದ ಏಪ್ರಿಲ್ 30 ರ ನಡುವೆ 7.4 ಲಕ್ಷ ದೂರುಗಳನ್ನು ಸ್ವೀಕರಿಸಲಾಗಿದೆ, ಆದರೆ 2023 ರಲ್ಲಿ 15.56 ಲಕ್ಷ ದೂರುಗಳನ್ನು ಸ್ವೀಕರಿಸಲಾಗಿದೆ. 2022 ರಲ್ಲಿ 9.66 ಲಕ್ಷ ದೂರುಗಳು ವರದಿಯಾಗಿದ್ದು, 2021 ರಲ್ಲಿ ದೂರುಗಳ ಸಂಖ್ಯೆ 4.52 ಲಕ್ಷಕ್ಕೆ ಏರಿಕೆಯಾಗಿದೆ.

ಭಾರತೀಯರು ಡಿಜಿಟಲ್ ಬಂಧನದಲ್ಲಿ ₹ 120.30 ಕೋಟಿ, ಟ್ರೇಡಿಂಗ್ ಹಗರಣದಲ್ಲಿ ₹ 1,420.48 ಕೋಟಿ, ಹೂಡಿಕೆ ಹಗರಣದಲ್ಲಿ
₹ 222.58 ಕೋಟಿ ಮತ್ತು ರಿಲೇಷನ್‌ಶಿಪ್/ಡೇಟಿಂಗ್‌ ಆಪ್‌ ಹಗರಣದಲ್ಲಿ ₹ 13.23 ಕೋಟಿ ಕಳೆದುಕೊಂಡಿದ್ದಾರೆ ಎಂದು ಮೇ ತಿಂಗಳಲ್ಲಿ ಜನವರಿ-ಏಪ್ರಿಲ್ ಡೇಟಾವನ್ನು ಬಿಡುಗಡೆ ಮಾಡುವಾಗ ಭಾರತೀಯ ಸೈಬರ್‌ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.

ಗೃಹ ವ್ಯವಹಾರಗಳ ಸಚಿವಾಲಯ (MHA) ಸೈಬರ್ ಅಪರಾಧ I4C ಅನ್ನು ಮೇಲ್ವಿಚಾರಣೆ ಮಾಡುತ್ತದೆ. ಸಚಿವಾಲಯದ ಪ್ರಕಾರ, ಡಿಜಿಟಲ್ ಬಂಧನಗಳು ಕಾಲಾಂತರದಲ್ಲಿ ಡಿಜಿಟಲ್ ವಂಚನೆಯ ಪ್ರಚಲಿತ ವಿಧಾನವಾಗಿ ಬದಲಾಗಿದೆ. ಈ ವಂಚನೆಗಳನ್ನು ನಡೆಸುತ್ತಿರುವವರಲ್ಲಿ ಅನೇಕರು ಮೂರು ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಮ್ಯಾನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾದಲ್ಲಿ ನೆಲೆಸಿದ್ದಾರೆ.

ಪ್ರಧಾನಿ ಮೋದಿ ಎಚ್ಚರಿಕೆ

ಅಕ್ಟೋಬರ್ 27 ರಂದು ‘ಮನ್ ಕಿ ಬಾತ್’ ನ 115 ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು “ಡಿಜಿಟಲ್ ಬಂಧನ ವಂಚನೆ” ಕುರಿತು ಕಳವಳ ವ್ಯಕ್ತಪಡಿಸಿದರು. ಮೋದಿ ಅವರು ಪೊಲೀಸ್ ಸಮವಸ್ತ್ರವನ್ನು ಧರಿಸಿ ವ್ಯಕ್ತಿಯೊಬ್ಬ ವಂಚನೆಯ ಬಲಿಪಶುವಿನ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಲು ತನ್ನ ಆಧಾರ್ ಸಂಖ್ಯೆಯನ್ನು ಕೇಳುತ್ತಿರುವ ಆಡಿಯೋ-ವಿಡಿಯೋ ಕ್ಲಿಪ್ ಅನ್ನು ಪ್ಲೇ ಮಾಡಿದ್ದರು.

“ಈ ಆಡಿಯೋ ಕೇವಲ ಮಾಹಿತಿಗಾಗಿ ಅಲ್ಲ, ಇದು ಮನರಂಜನಾ ಆಡಿಯೋ ಅಲ್ಲ … ಇದು ಗಂಭೀರ ವಿಚಾರ. ನೀವು ಈಗಷ್ಟೇ ಕೇಳಿದ ಸಂಭಾಷಣೆಯು ಡಿಜಿಟಲ್ ಬಂಧನದ ವಂಚನೆಗೆ ಸಂಬಂಧಿಸಿದ್ದು. ಈ ಸಂಭಾಷಣೆ ಸಂತ್ರಸ್ತ ಮತ್ತು ವಂಚಕರ ನಡುವಿನ ಸಂಭಾಷಣೆಯಾಗಿದೆ,” ಎಂದು ಮೋದಿ ಹೇಳಿದ್ದರು.

ಡಿಜಿಟಲ್ ಅರೆಸ್ಟ್ ಎಂದರೇನು? ಮೋಸ ಹೋಗುವ ಮೊದಲೇ ಹೇಗೆ ಎಚ್ಚರಗೊಳ್ಳುವುದು?

ಮೋಡಸ್ ಆಪರೇಂಡಿ ಸರಳವಾಗಿದೆ. ಈ ವಂಚನೆಗಳಲ್ಲಿ, ಸಂಭಾವ್ಯ ಬಲಿಪಶುಗಳಿಗೆ ಫೋನ್ ಕರೆಯ ಬರುತ್ತದೆ, ಅದರಲ್ಲಿ ಅವರು ಅಕ್ರಮ ಸರಕುಗಳು, ಮಾದಕ ದ್ರವ್ಯಗಳು, ನಕಲಿ ಪಾಸ್‌ಪೋರ್ಟ್‌ಗಳು ಅಥವಾ ಇತರ ನಿಷಿದ್ಧ ವಸ್ತುಗಳನ್ನು ಹೊಂದಿರುವ ಪಾರ್ಸೆಲ್ ಅನ್ನು ಕಳುಹಿಸಿದ್ದಾರೆ ಅಥವಾ ಸ್ವೀಕರಿಸಲು ಕಾಯುತ್ತಿದ್ದಾರೆ ಎಂದು ಕರೆ ಮಾಡಿದವರು ತಿಳಿಸುತ್ತಾರೆ. ನಂತರ ಅಪರಾಧಿಗಳು ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ವೀಡಿಯೊ ಕರೆಗಳ ಮೂಲಕ ಸಂಪರ್ಕಿಸುತ್ತಾರೆ ಮತ್ತು ‘ರಾಜಿ’ ಮತ್ತು ‘ಪ್ರಕರಣವನ್ನು ಮುಚ್ಚಲು’ ಹಣದ ಬೇಡಿಕೆಯಿಡುತ್ತಾರೆ.

ಬಲಿಪಶುಗಳನ್ನು ‘ಡಿಜಿಟಲ್ ಬಂಧನ’ಕ್ಕೆ ಒಳಗಾಗುವಂತೆ ಮಾಡಲಾಗುತ್ತದೆ ಮತ್ತು ಬೇಡಿಕೆಗಳು ಪೂರ್ಣವಾಗುವ ವರೆಗೆ ವೀಡಿಯೊ ಕರೆಯಲ್ಲಿಯೇ ಇರುವಂತೆ ನಿರ್ಬಂಧ ಹೇರುತ್ತಾರೆ. ಬಲಿಪಶುಗಳು ಸಾಮಾನ್ಯವಾಗಿ ಪೊಲೀಸ್-ಕೋರ್ಟ್-ಶಿಕ್ಷೆಗೆ ಹೆದರಿ ವಂಚಕರು ಬೇಡಿಕೆಯಿರುವ ಹಣವನ್ನು ಕಳುಹಿಸುತ್ತಾರೆ.

ಜನವರಿಯಿಂದ ಏಪ್ರಿಲ್‌ವರೆಗಿನ ಟ್ರೆಂಡ್‌ಗಳ ವಿಶ್ಲೇಷಣೆಯಲ್ಲಿ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಈ ಅವಧಿಯಲ್ಲಿ ವರದಿಯಾದ 46% ಸೈಬರ್ ವಂಚನೆಗಳನ್ನು ಕಂಡುಹಿಡಿದಿದೆ-ಇದರಲ್ಲಿ ಬಲಿಪಶುಗಳು ಒಟ್ಟು ₹ 1,776 ಕೋಟಿಗಳನ್ನು ಕಳೆದುಕೊಂಡಿದ್ದಾರೆ.

ಸೈಬರ್‌ ಕ್ರೈಮ್‌ – ವಂಚನೆಗೆ ಒಳಗಾದರೆ ಈ ಸೈಬರ್ ಅಪರಾಧ ಸಹಾಯವಾಣಿಗೆ ಕರೆಮಾಡಿ: 1930

ಸೈಬರ್ ವಂಚನೆ: ನಿಮ್ಮ ಹಣ ನಿಮ್ಮದಲ್ಲ!
ಎಂ ನಾಗರಾಜ ಶೆಟ್ಟಿ

ಬೆಳಿಗ್ಗೆ ಹನ್ನೊಂದು ಗಂಟೆಗೆ ಸ್ಥಿರ ದೂರವಾಣಿ ರಿಂಗಿಣಿಸಿತು.
ʼ ಹಲೋʼ
ʼ ಮಿಸ್ಟರ್‌ … ಇದಾರಾ? ʼ ಹಿಂದಿಯಲ್ಲಿ ಕೇಳಿದರು. ಅವರಿಗೆ ಕನ್ನಡ ಅಥವಾ ಇಂಗ್ಲೀಷಲ್ಲಿ ಮಾತನಾಡಲು ಹೇಳಿದೆ. ಸರಿ ಎಂದು ಅದೇ ಪ್ರಶ್ನೆಯನ್ನು ಇಂಗ್ಲೀಷಲ್ಲಿ ಕೇಳಿದರು.
ʼ ಹೌದು, ನಾನೇ ಮಾತಾಡುತ್ತಿದ್ದೇನೆ. ತಾವು ಯಾರು?ʼ
ʼ ನಾವು ಡೆಲ್ಲಿಯಿಂದ ಫೈನಾನ್ಸ್‌ ಮಿನಿಸ್ಟ್ರೀ, ಪಬ್ಲಿಕ್‌ ಅಫೈರ್ಸ್‌ ನಿಂದ ಮಾತನಾಡುತ್ತಿದ್ದೇವೆʼ
ಕೊಂಚ ಗಾಬರಿಯಾಯಿತು. ʼ ಏನು ವಿಷಯ? ʼ ಕೇಳಿದೆ
ʼ ನೀವು ಬ್ಯಾಂಕ್‌ ಸೇವೆಯಿಂದ ನಿವೃತ್ತರಾಗಿದ್ದೀರಲ್ಲವೇ?ʼ
ʼ ಹೌದುʼ
ʼ ನಿಮಗೆ ನಿವೃತ್ತರಾಗುವಾಗ ಸಿಗುವ ಎಲ್ಲಾ ಸೌಲಭ್ಯಗಳು ದೊರೆತಿವೆಯೇ? ʼ
ʼ ಎಲ್ಲವೂ ಸಿಕ್ಕಿದೆ ʼ
ʼ ಇಲ್ಲ. ನಿಮ್ಮ ಪ್ರಾವಿಡೆಂಟ್‌ ಫಂಡಿನ ಕೊನೆಯ ವರ್ಷಗಳ ಬಡ್ಡಿಯನ್ನು ಕೊಟ್ಟಿಲ್ಲ. ಪ್ರಧಾನ ಮಂತ್ರಿಯವರು ಖುದ್ದು ಆಸಕ್ತಿ ವಹಿಸಿ ಎಲ್ಲಾ ನಿವೃತ್ತರಿಗೆ ಸೇರಬೇಕಾದ ಪೂರ್ಣ ಮೊತ್ತವನ್ನು ಬಿಡುಗಡೆ ಮಾಡಲು ಹೇಳಿದ್ದಾರೆʼ
ಹಿರಿಯ ನಾಗರಿಕರ ಬಗ್ಗೆ ಯಾವ ಕಾಳಜಿಯನ್ನೂ ತೋರದ ಕೇಂದ್ರ ಸರಕಾರ ಇದ್ದಕ್ಕಿದ್ದಂತೆ ಆಸಕ್ತಿ ವಹಿಸಿದ್ದಕ್ಕೆ ಬೆರಗಾದೆ. ಪ್ರಾವಿಡೆಂಟ್‌ ಫಂಡಿನ ಎಲ್ಲಾ ಹಣ ನನಗೆ ಪಾವತಿಯಾಗಿತ್ತು. ಇದೇನು ಬಡ್ಡಿಯ ವಿಚಾರ ಹೇಳುತ್ತಿದ್ದಾರೆಂದು ತಿಳಿಯಲಿಲ್ಲ.
ʼ ನನಗೆ ಬರಬೇಕಾದ್ದು ಬಂದಂತಿದೆ. ನೀವು ತಪ್ಪಾಗಿ ಕರೆ ಮಾಡಿರಬಹುದುʼ
ನನ್ನ ಪೂರ್ತಿ ಹೆಸರನ್ನು, ನಾನು ಕೆಲಸ ಮಾಡಿದ ಕೊನೆಯ ಬ್ರಾಂಚಿನ ಹೆಸರನ್ನೂ ಹೇಳಿ, ʼ ನಾವು ಖಚಿತ ಪಡಿಸಿಕೊಂಡಿದ್ದೇವೆ. ನಿಮಗೆ ಬಡ್ಡಿ ಹಣ ರೂ 78944 ಜಮಾ ಆಗಬೇಕಿದೆʼ
ನನಗೆ ಅಶ್ಚರ್ಯ, ಸಂತೋಷ ಎರಡೂ ಆಯಿತು.
ʼ ಸರಿ. ಅದಕ್ಕೆ ನಾನು ಏನು ಮಾಡಬೇಕು?ʼ
ʼ ಬಹಳ ಸುಲಭ. ನೀವೇನೂ ಮಾಡಬೇಕಿಲ್ಲ. ನೀವು ಪೆನ್ಶನ್‌ ಪಡೆಯುವ ಬ್ಯಾಂಕಿನ ಅಕೌಂಟ್‌ ಡೀಟೇಲ್ಸ್‌ ಕೊಡಿʼ
ʼ ನಿಮಗೆ ನನ್ನ ಹೆಸರು ಫೋನ್‌ ನಂಬರ್‌ ಗೊತ್ತಿದೆ. ಬ್ಯಾಂಕ್‌ ಅಕೌಂಟ್‌ ಡಿಟೇಲ್ಸ್‌ ಗೊತ್ತಿಲ್ಲವೇ?ʼ
ʼ ಇಲ್ಲ ಸಾರ್. ಐಎಫ್‌ಎಸ್ಸಿ ನಂಬರ್‌ ಸಮೇತ ಎಲ್ಲಾ ಡಿಟೇಲ್ಸ್‌ ಬೇಕುʼ
ನನಗೆ ಅನುಮಾನ ಬಂತು.
ʼ ನೋಡಿ ಹೇಳುತ್ತೇನೆʼ
ʼ ಸರಿ. ನಾವು ಕಾಯುತ್ತೇವೆʼ
ʼ ಬೇಡ. ನಿಮ್ಮ ಫೋನ್‌ ನಂಬರ್‌ ಕೊಡಿ ನಾನೇ ಮಾಡುತ್ತೇನೆʼ
ʼ ಪರವಾಗಿಲ್ಲ. ವೈಟ್‌ ಮಾಡುತ್ತೇವೆʼ
ʼ ನೀವು ಲ್ಯಾಂಡ್‌ ಫೋನಿಗೆ ಮಾಡಿದ್ದೀರಿ. ನಾನು ಒಳಗೆ ಹೋಗಿ ಪಾಸ್‌ ಬುಕ್‌ ನೋಡಿ ಹೇಳಬೇಕು. ನಿಮ್ಮ ಲ್ಯಾಂಡ್ ಫೋನ್‌ ನಂಬರ್‌ ಅಥವಾ ಮೊಬೈಲ್‌ ನಂಬರ್‌ ಕೊಡಿʼ ನಾನಂದೆ. ಕನೆಕ್ಷನ್‌ ಕಟ್ಟಾಯಿತು. ಮತ್ತೆ ಕರೆ ಮಾಡಿದರೆ ಶಬ್ದವೇ ಇಲ್ಲ! ಅನಾಯಾಸವಾಗಿ ದೊರಕುವ ಮೊತ್ತ ತಪ್ಪಿ ಹೋಯಿತಲ್ಲಾ ಎಂದು ಖೇದವಾಯಿತು!

ಆದರೆ ಇದು ಅಕೌಂಟಿಗೆ ಬೀಳುವ ಹಣವಲ್ಲ ಖಾತೆ ವಿವರ ಕೊಟ್ಟಿದ್ದರೆ ನಾನು ಅಕೌಂಟಲ್ಲಿ ಇದ್ದದ್ದನ್ನು ಕಳೆದುಕೊಳ್ಳಬೇಕಾಗಿತ್ತು!

ಸೈಬರ್‌ ವಂಚನೆಯ ಹಲವು ಹತ್ತು ವಿಧಾನಗಳಲ್ಲಿ ಇದೂ ಒಂದು. ಹೊಸ ಹೊಸ ಬಗೆಯಲ್ಲಿ ಸೈಬರ್‌ ಅಪರಾಧಗಳು ನಡೆಯತ್ತಲೇ ಇವೆ. ಇದು ಭಾರತಕ್ಕೆ ಸೀಮಿತವಾದದ್ದೂ ಅಲ್ಲ. ಜಗತ್ತಿನ ಎಲ್ಲೆಡೆ ಸೈಬರ್ ವಂಚನೆಗಳು ನಡೆಯುತ್ತಿವೆ. ಅದನ್ನು ತಡೆಯಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ; ಕಾನೂನುಗಳನ್ನು ರೂಪಿಸಲಾಗುತ್ತಿದೆ. ಕೆಲವು ರಾಷ್ಟ್ರಗಳು ಸೈಬರ್ ವಂಚನೆಯಾಗದಂತೆ ಭದ್ರತೆಗಳನ್ನು ಹೆಚ್ಚಿಸಿವೆ.

20ನೇ ಶತಮಾನದ ಕೊನೆಯ ವರ್ಷಗಳಲ್ಲಿ ಮತ್ತು 2000 ಇಸವಿಯ ನಂತರ ಇ- ವಾಣಿಜ್ಯ, ಆನ್ ಲೈನ್ ಬ್ಯಾಂಕಿಂಗ್ ಮತ್ತು ಸರಕಾರಿ ಸೇವೆಗಳ ದಿಜಿಟಲೀಕರಣವಾಯಿತು. ಜನರು ಕೂತಲ್ಲಿಯೇ ವ್ಯವಹಾರಗಳನ್ನು ನಡೆಸತೊಡಗಿದರು. ಎಟಿಎಂಗಳು, ಕ್ರೆಡಿಟ್ ಕಾರ್ಡ್ ಗಳು, ಇಂಟರ್ ನೆಟ್ ವ್ಯವಹಾರಗಳು ಕೊಡುಕೊಳುವುದನ್ನು ಸುಗಮಗೊಳಿಸಿದವು. ಇದರ ಜೊತೆಯಲ್ಲೇ ಈ ಸೌಲಭ್ಯಗಳನ್ನು ದುರುಪಯೋಗ ಮಾಡುವ ಹಂಚಿಕೆಗಳೂ ಹುಟ್ಟಿಕೊಂಡವು. ಸೈಬರ್ ಭದ್ರತೆಗಳನ್ನು ಅಳವಡಿಸುವ ಮೊದಲೇ ಸೈಬರ್ ಕಳ್ಳರು ಕನ್ನ ಹಾಕತೊಡಗಿದರು. ಸೈಬರ್ ವಂಚನೆಗಳಿಗೆ ಪ್ರತ್ಯಸ್ತ್ರಗಳನ್ನು ಸಿದ್ಧ ಪಡಿಸಿದಂತೆಲ್ಲ ಚಾಲಾಕಿಗಳು ಹೊಸ ಬಗೆಯಲ್ಲಿ ವಂಚಿಸಲು ಶುರುವಿಟ್ಟುಕೊಂಡರು.

ಸೈಬರ್ ವಂಚನೆಗಳನ್ನು ಹಲವು ಬಗೆಯಲ್ಲಿ ಗುರುತಿಸಲಾಗುತ್ತಿದೆ. ಅವುಗಳಲ್ಲಿ ಹೆಚ್ಚು ಕುಖ್ಯಾತವಾದದ್ದು ಫಿಶಿಂಗ್(Phishing). ಗ್ರಾಹಕರ ಐಡಿ, ಐಪಿನ್, ಕ್ರೆಡಿಟ್- ಡೆಬಿಟ್ ಕಾರ್ಡ್ ನಂಬರ್, ಕಾರ್ಡ್ ನ ಮುಕ್ತಾಯ ದಿನಾಂಕ ಮತ್ತು ಸಿವಿಸಿ ಇದನ್ನು ಕದಿಯುವುದಕ್ಕೆ ಫಿಶಿಂಗ್ ಅನ್ನುತ್ತಾರೆ. ಇಮೈಲ್, ಮೊಬೈಲ್ಗೆ ಬರುವ ಪಠ್ಯಗಳು, ಅನಾಮಧೇಯ ಫೋನ್ ಕರೆ ಇವುಗಳ ಮುಖಾಂತರ ಇವನ್ನು ಕದಿಯಲಾಗುತ್ತದೆ. ನಮ್ಮ ದೇಶದಲ್ಲಿ ಹೆಚ್ಚು ಜನ ಹಣ ಕಳೆದುಕೊಂಡಿರುವುದು ಇದರಿಂದಲೇ.

ವಿಶಿಂಗ್ ಇನ್ನೊಂದು ಬಗೆಯ ಸೈಬರ್ ವಂಚನೆ. ನಾನು ಲೇಖನದ ಮೊದಲಲ್ಲಿ ಉದಾಹರಿಸಿದ ಫೋನ್ ಕರೆ ವಿಶಿಂಗ್ ನ ಮಾದರಿ. ವ್ಯಕ್ತಿಗಳಿಗೆ ಫೋನ್ ಮಾಡಿ ಸಹಾಯ ಮಾಡುವವರಂತೆ, ಸಾಲ ಕೊಡುವವರಂತೆ ನಟಿಸಿ, ವಿವರಗಳನ್ನು ಪಡೆದುಕೊಂಡು ವಂಚಿಸುವುದಕ್ಕೆ ವಿಶಿಂಗ್ ಅನ್ನುತ್ತಾರೆ.

ಸ್ಮಿಶಿಂಗ್ ಎನ್ನುವ ಸೈಬರ್ ವಂಚನೆಯಲ್ಲಿ ಚಿಕ್ಕ ಮೆಸೇಜ್ ಕಳಿಸಿ ತೆರೆಯಲು ಹೇಳುತ್ತಾರೆ. ಆ ಮೂಲಕ ಗ್ರಾಹಕರ ಖಾತೆಗಳ ವಿವರ ಪಡೆದುಕೊಳ್ಳುತ್ತಾರೆ. ಇವಲ್ಲದೆ ವೈಯಕ್ತಿಕ ಸಂಬಂಧಗಳನ್ನು ಜಾಹೀರು ಪಡಿಸುವ ಸೆಕ್ಸ್ಟೋರ್ಶನ್, ಬೇಹುಗಾರಿಕೆ ನಡೆಸುವ ಸ್ಟಾಂಕಿಂಗ್ ಮುಂತಾಗಿ ಸೈಬರ್ ವಂಚನೆಗಳನ್ನು ಹೆಸರಿಸಲಾಗಿದೆ.

ಸೈಬರ್ ವಂಚನೆಗಳನ್ನು ನಡೆಸುವ ವ್ಯವಸ್ಥಿತ ತಾಣಗಳಿವೆ. ಅಪರಾಧಿಗಳು ಏನೇನೂ ಸುಳಿವು ಸಿಗದಂತೆ ಅಡಗುತಾಣಗಳಲ್ಲಿದ್ದು ಅಪರಾಧಗಳನ್ನು ನಡೆಸುತ್ತಾರೆ. ಜಾರ್ಖಂಡಿನ ಜಮ್ತಾರ, ರಾಜಸ್ತಾನದ ಭರತ್ಪುರ್, ಮಧ್ಯಪ್ರದೇಶದ ಮಥುರಾ, ಹರಿಯಾಣದ ನೂಹ್ ಸೈಬರ್ ವಂಚನೆಗಳಿಗೆ ಹೆಸರಾಗಿವೆ. ಕಳೆದ ಎರಡು ಮೂರು ವರ್ಷಗಳಿಂದ ಬೆಂಗಳೂರಿನಲ್ಲೂ ಸೈಬರ್ ವಂಚನೆಗಳು ಹೆಚ್ಚುತ್ತಿವೆ. 2023 ರಲ್ಲಿ ಕರ್ನಾಟಕದಲ್ಲಿ 21868 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಬೆಂಗಳೂರಲ್ಲೇ 17623 ಪ್ರಕರಣಗಳಿವೆ. ಇವು ವಂಚನೆಗೊಳಗಾದವರು ದೂರು ನೀಡಿದ ಪ್ರಕರಣಗಳು. ಬೆಂಗಳೂರು ಹೊರತು ಪಡಿಸಿ ಇತರ ಕಡೆಗಳಲ್ಲಿ ಈ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲು ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ದೂರು ನೀಡಲು ಸಾಧ್ಯವಾಗದಿರುವುದು, ದೂರು ನೀಡುವ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಕಾರಣವಾಗಿರಬಹುದು.

ಸೈಬರ್ ವಂಚನೆಗಳ ಬಗ್ಗೆ ದೂರು ನೀಡಿದರೂ ವಂಚನೆಗೆ ಒಳಗಾದವರು ಕಳೆದುಕೊಂಡ ಹಣವನ್ನು ಮರಳಿ ಪಡೆಯುವ ಸಂದರ್ಭಗಳು ತೀರಾ ಕಡಿಮೆ ಇರುವುದು ದುರಂತ. ಇದಕ್ಕೆ ಕಾರಣಗಳು ಹಲವಾರು. ಹೆಚ್ಚಿನ ಸಂದರ್ಭಗಳಲ್ಲಿ ವಂಚಕರ ಜಾಲದ ಪತ್ತೆಯಾಗುವುದಿಲ್ಲ. ವಂಚಕರು ವಿದೇಶದಲ್ಲಿದ್ದರೆ ಮಾಹಿತಿ ಸಿಗುವುದೇ ಇಲ್ಲ. ಬೇರೆ ರಾಜ್ಯದ ವಂಚಕರನ್ನು ಹಿಡಿಯಲು ಅಲ್ಲಿಯ ಪೊಲೀಸರ ನೆರವಿನ ಅಗತ್ಯವಿರುತ್ತದೆ. ಕೆಲವೊಮ್ಮೆ ವಂಚಕರಿಗೆ ಪೊಲೀಸರ ಮಾಹಿತಿ ಮೊದಲೇ ದೊರೆತು ಪರಾರಿಯಾಗುತ್ತಾರೆ. ದೂರು ನೀಡುವಲ್ಲಿ ಗ್ರಾಹಕರು ಮಾಡುವ ವಿಳಂಬ ಕೂಡಾ ಪತ್ತೆ ಮಾಡಲು ತೊಡಕುಂಟು ಮಾಡುತ್ತದೆ.

ಭಾರತದಲ್ಲಿ ಸೈಬರ್ ಅಪರಾಧಗಳಿಗೆ ಅತಿ ಹೆಚ್ಚು ಎಫ್ಐಆರ್ ದಾಖಲಾದ ರಾಜ್ಯ ತೆಲಂಗಾಣ(ವಿವರಗಳಿಗೆ ನಕ್ಷೆ ನೋಡಿ). ಅತಿ ದೊಡ್ಡ ಸೈಬರ್ ವಂಚನೆ ನಡೆದಿದ್ದೂ ಅಲ್ಲಿಯೇ! ಹೈದರಾಬಾದಿನ 75 ವರ್ಷದ ವಯೋವೃದ್ಧರ ಖಾತೆಯಿಂದ 13 ಕೋಟಿ ರೂಪಾಯಿಗಳನ್ನು ದೋಚಲಾಯಿತು. ವ್ಯವಸ್ಥಿತ ರೀತಿಯಲ್ಲಿ ಯಾಮಾರಿಸಿದ್ದರಿಂದ ಆ ವ್ಯಕ್ತಿ ದೂರು ಕೊಡಲು ತಡ ಮಾಡಿದರು. ಪತ್ತೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆದರೂ ವಂಚಕ ಜಾಲದ ಪತ್ತೆ ಆಗಲಿಲ್ಲ. ರಾಜಸ್ತಾನ, ಕೇರಳ, ಮಧ್ಯಪ್ರದೇಶದಲ್ಲಿ ರವಾನಿಸಲಾಗದೆ ಉಳಿದಿದ್ದ 20 ಲಕ್ಷವಷ್ಟೇ ದಕ್ಕಿತು.

ಸೈಬರ್ ವಂಚಕರು ವಂಚಿಸಲು ಹೊಸ
ಹೊಸ ವಿಧಾನಗಳನ್ನು ಹುಡುಕುತ್ತಿರುತ್ತಾರೆ. ಕೆಲವು ತಿಂಗಳುಗಳಿಂದ ವಿಶಿಷ್ಟ ರೀತಿಯಲ್ಲಿ ವಂಚನೆಗಳು ನಡೆಯುತ್ತಿವೆ. ಕಂಪ್ಯೂಟರ್, ವಾಟ್ಸಾಪ್ ಮೂಲಕ ವಂಚಕರು ಸಂಪರ್ಕ ಬೆಳೆಸುತ್ತಾರೆ. ಪೊಲೀಸ್, ಸಿಬಿಐ, ಈಡಿ, ಇನ್ ಕಂ ಟ್ಯಾಕ್ಸ್ ಅಧಿಕಾರಿಗಳ ವೇಷ ಹಾಕಿ, ಸಂಬಂಧಪಟ್ಟ ಇಲಾಖೆಯ ಗುರುತು, ಮೊಹರುಗಳನ್ನು ತೋರಿಸಿ, ವರಮಾನ ತೆರಿಗೆ ವಂಚಿಸಿದ್ದೀರೆಂದು, ನಿಯಮ ಉಲ್ಲಂಘನೆ ಮಾಡಿದ್ದೀರೆಂದು, ಸೆಕ್ಸ್ ಸಂಬಂಧಿ ದೂರು ದಾಖಲಾಗಿದೆಯೆಂದು ಹೀಗೆ ಕಾನೂನು ಬಾಹಿರ ಕೃತ್ಯ ನಡೆಸಿರುವ ಬೆದರಿಕೆ ಒಡ್ಡುತ್ತಾರೆ. ಅಪ್ರಾಪ್ತ ವಯಸ್ಕರ ಕಾಮಕೇಳಿಯ ವಿಡಿಯೋ ನೋಡಿದ್ದೀರಿ- ಹಂಚಿಕೊಂಡಿದ್ದೀರೆಂದು ಬೆದರಿಸುವುದೂ ಉಂಟು. ಇದರಿಂದ ನಿಮಗೆ ಶಿಕ್ಷೆಯಾಗುತ್ತದೆ, ಮಾನ ಹಾನಿಯಾಗುತ್ತದೆ ಎಂದೆಲ್ಲಾ ಹೇಳಿ ಅಕೌಂಟ್ ವಿವರಗಳ ಸಮೇತ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡು ಕೆಲವೇ ನಿಮಿಷಗಳಲ್ಲಿ ಇರುವುದೆಲ್ಲವನ್ನೂ ದೋಚುತ್ತಾರೆ. ಈಗಾಗಲೇ ಬೆಂಗಳೂರು, ಮುಂಬಯಿ, ದೆಹಲಿಯಲ್ಲಿ ಹಲವರು ಈ ವಂಚನೆಗೆ ಗುರಿಯಾಗಿದ್ದಾರೆ.

ಈ ಲೇಖನವನ್ನು ಬರೆಯುತ್ತಿರುವಾಗಲೇ ಪ್ರಮುಖ ಕೈಗಾರಿಕೋದ್ಯಮಿ, ವರ್ಧಮಾನ್ ಗ್ರೂಪಿನ ಮಾಲೀಕರಾದ ಶ್ರೀಪಾಲ್ ಓಸ್ವಾಲ್ ಅವರನ್ನು ವಂಚಿಸಿದ ಸುದ್ದಿ ಬಂದಿದೆ. ಈ ಪ್ರಕರಣದಲ್ಲಿ ವಂಚಕರಲ್ಲಿ ಒಬ್ಬರು ಸಿಬಿಐ ಅಧಿಕಾರಿಯಂತೆ ನಟಿಸಿ, ನಕಲಿ ಬಂಧನದ ವಾರಂಟ್ ಅವರ ಮುಂದಿಟ್ಟಿದ್ದರು. ಡಿಜಿಟಲ್ ಬಂಧನಕ್ಕೆ ಹೆದರಿದ ಓಸ್ವಾಲ್ ಆನ್ಲೈನ್ ಮೂಲಕ 7 ಕೋಟಿ ಕಳೆದುಕೊಂಡಿದ್ದರು. ಅದರಲ್ಲಿ 5.25 ಕೋಟಿಯನ್ನು ವಸೂಲು ಮಾಡಲಾಗಿದ್ದು ಅಸ್ಸಾಂ ಮೂಲದ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ.

ಬೆದರಿಕೆ ಒಡ್ಡಿ, ಸಿಬಿಐ, ಈಡಿ ಮುಂತಾದ ಸರಕಾರಿ ಇಲಾಖೆಗಳು ನಡೆಸುವ ದಾಳಿಯನ್ನು ದುರುಪಯೋಗ ಪಡಿಸಿಕೊಂಡು ಮೋಸ ಮಾಡುವ ವಿಧಾನ ಇದು. ವರಮಾನ ಇಲಾಖೆ ಸೇರಿದಂತೆ ಈ ಎಲ್ಲಾ ಸರಕಾರೀ ಇಲಾಖೆಗಳ ಅಧಿಕಾರಿಗಳು ಕಂಪ್ಯೂಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮುಖಾಂತರ ಮುಖಾಮುಖಿಯಾಗುವುದಿಲ್ಲ. ಅಂತಹ ಸನ್ನಿವೇಶ ಎದುರಾದಾಗ ಸೈಬರ್ ಬ್ಯೂರೋಗೆ, ಪೊಲೀಸ್ ಠಾಣೆಗೆ ಕೂಡಲೇ ಕರೆ ಮಾಡಿ ತಿಳಿಸಬೇಕು.

ಸೈಬರ್ ವಂಚನೆಗಳನ್ನು ಪತ್ತೆ ಮಾಡಲು ಪ್ರತ್ಯೇಕ ವ್ಯವಸ್ಥೆ ಇರುವುದಾದರೂ ಅವನ್ನು ನೆಚ್ಚಿಕೊಳ್ಳಲಾಗುವುದಿಲ್ಲ. ಪ್ರತಿಯೊಬ್ಬನೂ/ಳೂ ವಂಚನೆಗೆ ಒಳಗಾಗದಂತೆ ಜಾಗರೂಕರಾಗುವುದು ವಂಚನೆ ತಡೆಯುವ ಪ್ರಾಥಮಿಕ ಮಾರ್ಗ. ಕ್ರೆಡಿಟ್ ಡೆಬಿಟ್ ಕಾರ್ಡ್ ಗಳು, ಸಿವಿಸಿ ಸಂಖ್ಯೆ , ಪಾಸ್ ವರ್ಡ್, ಐಪಿನ್ ಗಳನ್ನು ಹಂಚಿಕೊಳ್ಳಲೇ ಬಾರದು. ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಪಾಸ್ ವರ್ಡ್ ಆಗಾಗ್ಗೆ ಬದಲಿಸುತ್ತಿರಬೇಕು. ಬ್ಯಾಂಕು, ಸರಕಾರದ ಇಲಾಖೆಗಳು ನೀವಾಗಿ ವ್ಯವಹರಿಸದೆ (ಉದಾ: ಹಣ ವರ್ಗಾವಣೆ, ಇನ್ಕಂಟ್ಯಾಕ್ಸ್ ಫೈಲಿಂಗ್) ಒಟಿಪಿ ಕೇಳುವುದಿಲ್ಲ. ನಿಮ್ಮ ವ್ಯವಹಾರ, ಪಾವತಿ, ವರ್ಗಾವಣೆಗಳನ್ನು ಹೊರತು ಪಡಿಸಿ ಬೇರೆ ರೀತಿಯಲ್ಲಿ
ಯಾವುದೇ ಕ್ರೆಡಿಟ್, ಡೆಬಿಟ್ ಕಾರ್ಡ್, ಒಟಿಪಿ, ಐಪಿನ್ ಗಳನ್ನು ಹಂಚಿಕೊಳ್ಳಬಾರದು. ಶಂಕಾಸ್ಪದ ಕಿರು ಪಠ್ಯ, ಎಸ್ ಎಂ ಎಸ್, ಇಮೈಲ್ ಗಳನ್ನು ತೆರೆಯಬಾರದು. ಈ ಎಚ್ಚರಿಕೆಗಳು ಅಂತಿಮವಲ್ಲ. ವಂಚಕರು ಯಾವ ರೀತಿಯಲ್ಲಿ ಕಾರಸ್ತಾನ ನಡೆಸುತ್ತಾರೆಂದು ಹೇಳಲಾಗದು. ಡಿಜಿಟಲ್ ವ್ಯವಹಾರದಲ್ಲಿ ಜಾಗರೂಕರಾಗಿರುವುದು ಅತಿ ಅಗತ್ಯ.

ಸಾಮಾನ್ಯ ಖರ್ಚು- ವೆಚ್ಚಗಳಿಗೆ, ಹಣ ವರ್ಗಾವಣೆಗೆ ಬ್ಯಾಂಕ್ ಆಪ್ ಗಳನ್ನು ಅವಲಂಬಿಸುವುದು ವಂಚನೆ ತಡೆಯುವ ಇನ್ನೊಂದು ವಿಧಾನ. ಈಗ ಎಲ್ಲಾ ಬ್ಯಾಂಕುಗಳು ಆಪ್ ಗಳನ್ನು ಹೊಂದಿದ್ದು ಅವನ್ನು ಮೊಬೈಲ್ ಗೆ ಡೌನ್ ಲೋಡ್ ಮಾಡಿ, ಆಕ್ಟಿವೇಟ್ ಮಾಡಿಕೊಂಡರೆ ಇಂಟರ್ನೆಂಟ್ ಗಿಂತ ಸುಲಭದಲ್ಲಿ ಮತ್ತು ತೊಂದರೆ ಇಲ್ಲದೆ ಹಣದ ವರ್ಗಾವಣೆ ಮಾಡಬಹುದು. ಇವುಗಳು ಸಾಕಷ್ಟು ಸುರಕ್ಷಿತವಾಗಿವೆ. ಡಿಜಿಟಲ್ ಪೇಮೆಂಟ್ ಆಪ್ ಆದ ಗೂಗಲ್ ಪೇ ಮುಂತಾದ ಯುಪಿಐ ಪೇಮೆಂಟ್ ವಿಧಾನ ಜನಪ್ರಿಯವಾಗುತ್ತಿದೆ. ಇದು ಸುರಕ್ಷಿತವಾದರೂ ಎಚ್ಚರಿಕೆ ಇರಬೇಕು. ಅಮಾಯಕರನ್ನು ಯುಪಿಐ ಪಾವತಿಯಲ್ಲಿಯೂ ವಂಚಿಸಲಾಗುತ್ತಿದೆ ಎನ್ನುವುದು ಗಮನದಲ್ಲಿರಲಿ.

ಡಿಜಿಟಲ್ ವ್ಯವಹಾರಗಳಿಂದ ಬಹಳ ಅನುಕೂಲತೆಗಳಿವೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ವಂಚನೆಗಳಾಗುತ್ತಿವೆ ಎನ್ನುವ ಕಾರಣದಿಂದ ಡಿಜಿಟಲ್ ವ್ಯವಹಾರಗಳನ್ನು ನಿರಾಕರಿಸಲಾಗದು. ಒಂದಿಲ್ಲೊಂದು ರೀತಿಯಲ್ಲಿ ನಾವೆಲ್ಲಾ ಡಿಜಿಟಲ್ ವ್ಯವಹಾರ ನಡೆಸುತ್ತಿರುತ್ತೇವೆ. ಹೊಳೆ, ಸಮುದ್ರದ ಬದಿಯಲ್ಲಿ ವಾಸಿಸುವವರು ಈಜು ಕಲಿಯುವಂತೆ ಡಿಜಿಟಲ್ ಯುಗದಲ್ಲಿ ಅದಕ್ಕೆ ಸಂಬಂಧ ಪಟ್ಟ ಕುಶಲತೆಯನ್ನು ರೂಢಿಸಿಕೊಳ್ಳುವುದು ಅವಶ್ಯ. ವಂಚನೆಗೊಳಗಾಗಿರುವ ಅನುಮಾನ ಬಂದರೆ ಕೂಡಲೇ ಬ್ಯಾಂಕ್, ಪೊಲೀಸ್, ಸೈಬರ್ ಬ್ಯೂರೋ ಸಂಪರ್ಕಿಸಬೇಕು.

ಇತ್ತೀಚೆಗೆ ನನ್ನ ಗೆಳೆಯನೊಬ್ಬ ತಕ್ಷಣ ಕಾರ್ಯ ಪ್ರವೃತ್ತನಾದ್ದರಿಂದ ಸೈಬರ್ ವಂಚನೆಗೊಳಗಾಗುವುದು ತಪ್ಪಿತು. ಅವನ ಹೆಂಡತಿ ಅಸ್ವಸ್ಥಳಾಗಿದ್ದು ಮೂರ್ನಾಲ್ಕು ವರ್ಷಗಳಿಂದ ಬ್ಯಾಂಕ್ ವ್ಯವಹಾರ ನಡೆಸಿರಲಿಲ್ಲ. ಹೆಂಡತಿಯ ಎಟಿಎಂ ಕಾರ್ಡ್ ಮೂಲಕ ಸಾವಿರ ರೂಪಾಯಿ ಅವನೇ ಪಡೆದ. ಸ್ವಲ್ಪ ಹೊತ್ತಲ್ಲೇ ಹೆಂಡತಿಗೆ ಕರೆ ಬಂತು. ನೀವು ಬಹಳ ವರ್ಷಗಳಿಂದ ಬ್ಯಾಂಕ್ ವ್ಯವಹಾರ ನಡೆಸಿಲ್ಲ; ನಿಮ್ಮ ಖಾತೆಯನ್ನು ಆಕ್ಟಿವೇಟ್ ಮಾಡಬೇಕಾದರೆ ಕೆವೈಸಿ ಕೊಡಬೇಕು ಎಂದರು. ಆಕೆ ನನಗೆ ಹುಷಾರಿಲ್ಲ, ಬ್ಯಾಂಕಿಗೆ ಬರಲಾಗುತ್ತಿಲ್ಲ ಎಂದರು. ಆ ಬಗ್ಗೆ ಯೋಚಿಸಬೇಡಿ, ನಾವು ಬ್ಯಾಂಕಿನವರು ಎಂದು ಹೇಳಿ ಖಾತೆಯ ವಿವರಗಳನ್ನು ಪಡೆದರು. ಆಕೆ ಸಲೀಸಾಗಿ ಆಗುತ್ತಲ್ಲಾ ಎಂದು ಅಕೌಂಟ್ ನಂಬರ್ ಕೊಟ್ಟರು.
ತಕ್ಷಣವೇ ಮೊಬೈಲ್ಗೆ ಓಟಿಪಿ ಬಂತು.

ʼ ನಿಮ್ಮ ಮೊಬೈಲಿಗೆ ಓಟಿಪಿ ಬಂದಿದೆ. ಹೇಳಿʼ ಎಂದರು. ಅಮಾಯಕಳಾದ ಆಕೆ ಓಟಿಪಿ ಕೊಟ್ಟರು. ಹೆಂಡತಿ ಮಾತನಾಡುವುದನ್ನು ಕೇಳಿಸಿದ ಗೆಳೆಯ ʼ ಏನು ʼ ಎಂದು ಕೇಳಿದ. ಆಕೆ ಬ್ಯಾಂಕಿನವರ ಫೋನ್ ಎಂದು ಗಂಡನಿಗೆ ಕೊಟ್ಟರು. ಅಷ್ಟೊತ್ತಿಗೆ ಇನ್ನೊಂದು ಒಟಿಪಿ ಬಂತು. ಗಂಡ ಫೋನ್ ಕೈಗೆತ್ತಿಕೊಳ್ಳುತ್ತಿದ್ದಂತೆ ಒಟಿಪಿ ಕೇಳಿದರು. ಗಂಡನಿಗೆ ಅನುಮಾನ ಬಂತು. ʼ ನಾನೇ ಬ್ಯಾಂಕಿಗೆ ಬರುತ್ತೇನೆʼ ಎಂದ. ʼ ಬೇಡ, ಬೇಡ, ನಾವು ಎಲ್ಲಾ ಮಾಡಿದ್ದೇವೆ. ಓಟಿಪಿ ಕೊಡಿ ಸಾಕು. ಅಕೌಂಟ್ ಆಕ್ಟಿವೇಟ್ ಆಗುತ್ತೆʼ ಎಂದರು. ಗಂಡ ಫೋನ್ ಕಟ್ ಮಾಡಿ ನೋಡಿದಾಗ ಅಕೌಂಟಲ್ಲಿದ್ದ ಅರವತ್ತು ಸಾವಿರ ಖಾಲಿಯಾಗಿತ್ತು.

ಗೆಳೆಯ ಗಾಬರಿಯಲ್ಲಿ ಬ್ಯಾಂಕಿಗೆ ದೌಡಾಯಿಸಿದ. ಫೋನ್ ರಿಂಗಿಣಿಸುತ್ತಲೇ ಇತ್ತು. ಹೆಂಡತಿಯ ಪಾಸ್ ಬುಕ್ ತೋರಿಸಿ ನಡೆದುದನ್ನು ವಿವರಿಸಿದ. ಅಕೌಂಟಲ್ಲಿದ್ದ ದುಡ್ಡೆಲ್ಲವೂ ಖಾಲಿಯಾಗಿತ್ತು. ಬ್ಯಾಂಕಿನವರು ಓಟಿಪಿ ಕೊಟ್ಟಿದ್ದೇಕೆ? ಎಂದು ಆಕ್ಷೇಪಿಸಿದರು. ಮೊಬೈಲ್ ತೆಗೆದು ನೋಡಿದರೆ ಗೆಳೆಯನ ಹೆಂಡತಿಯ ಹೆಸರಲ್ಲಿ ಅದೇ ಮೊತ್ತಕ್ಕೆ ಆರ್ ಡಿ ಓಪನ್ ಆಗಿತ್ತು. ಓಟಿಪಿಯೂ ಬಂದಿತ್ತು. ಮತ್ತೆ ವಂಚಕರಿಂದ ಫೋನ್ ಬಂತು! ಗೆಳೆಯ ಬ್ಯಾಂಕಿನವರಿಗೆ ಮೊಬೈಲ್ ಕೊಟ್ಟ. ಅವರು ವಿಚಾರಿಸುತ್ತಿದ್ದಂತೆ ಫೋನ್ ಕಟ್ಟಾಯಿತು.

ಅಕೌಂಟಿನಿಂದ ಹಣ ತೆಗೆದಾಗಿತ್ತು. ಅದರ ವರ್ಗಾವಣೆಗೆ ಇನ್ನೊಂದು ಓಟಿಪಿಯ ಅಗತ್ಯವಿತ್ತು. ಗೆಳೆಯನ ಹೆಂಡತಿ ಎರಡನೇ ಸಲ ಓಟಿಪಿ ಕೊಡದಿದ್ದುದರಿಂದ ಹಣ ಉಳಿಯಿತು. ಸ್ವಂತ ಖಾತೆ ತೆರೆಯಲು ಓಟಿಪಿಯ ಅಗತ್ಯವಿಲ್ಲ. ವಂಚಕರು ತೆಗೆದ ಹಣವನ್ನು ವರ್ಗಾಯಿಸಲಾರದೆ ಆಕೆಯ ಹೆಸರಲ್ಲೇ ಆರ್ ಡಿ ಅಕೌಂಟ್ ಮಾಡಿದ್ದರು. ಬ್ಯಾಂಕಿನವರು ಆರ್ ಡಿ ಕ್ಲೋಸ್ ಮಾಡಿ, ಹಣವನ್ನು ಕೊಟ್ಟು, ಅಕೌಂಟ್ ಬ್ಲಾಕ್ ಮಾಡಿದರು.

ತಕ್ಷಣ ಜಾಗೃತರಾದರೆ ಹಣ ಕಳೆದುಕೊಳ್ಳುವುದನ್ನು ತಪ್ಪಿಸಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ. ದೂರು ಕೊಡಲು ಉದಾಸೀನ ಮಾಡಬೇಡಿ. ತಡಮಾಡಿದರೆ ನಿಮ್ಮ ಹಣ ನಿಮ್ಮದಾಗಿರುವುದಿಲ್ಲ!

ಸೈಬರ್ ಅಪರಾಧಗಳ ಸಹಾಯವಾಣಿ ಸಂಖ್ಯೆ 1930

“ಮನೆಯಿಂದಲೇ ದಿನಕ್ಕೆ 20,000 ಸಂಪಾದಿಸಿ!”: ವಂಚನೆಯ ಆಳ-ಅಗಲ
ಮನೆಯಿಂದಲೇ ನೀವು 20,000 ರುಪಾಯಿ ಗಳಿಸಬಹುದು. ಇದು ವರ್ಕ್‌ ಫ್ರೊಂ ಹೋಮ್‌ ಉದ್ಯೋಗ..ಈ ರೀತಿಯ ಮೆಸೆಜ್‌ಗಳು ನಿಮ್ಮ ವಾಟ್ಸಾಪ್‌, ಟೆಲಿಗ್ರಾಮಿಗೆ ಬಂದಿರಬಹುದು. ಆರಂಭದಲ್ಲಿ ಚೆನ್ನಾಗಿ ಸಂವಹನ ನಡೆಸಿ ವಿಶ್ವಾಸವನ್ನು ಗಳಿಸುತ್ತಾರೆ. ಅವರು ಹೇಳಿದಂತೆ ನಡೆದುಕೊಂಡರೆ ಮೋಸ ಖಚಿತ. ಈ ವಂಚನೆಯ ಆಳ-ಅಗಲ ಇಲ್ಲಿದೆ

ಬೆಂಗಳೂರು,ಅಕ್ಟೋಬರ್.‌20: “ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ 10,000 ರುಪಾಯಿ ಗಳಿಸಿ” ಎಂಬ ಮೆಸೆಜ್‌ಗಳನ್ನು ನಿಮ್ಮ ಫೋನ್‌ನಲ್ಲಿ  ನೋಡಿರುತ್ತೀರಿ. ರಿಪ್ಲೈ ಮಾಡಿದ್ದೀರಾ? ಹಾಗಾದರೆ ಎಚ್ಚರವಾಗಿರಿ! ಈಗ ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವಿಸ್ಟಿಗೇಷನ್‌ (ಸಿಬಿಐ) ಇಂತಹ ಮೋಸದ ಪ್ರಕರಣಗಳ ಬೆನ್ನ ಹಿಂದೆ ಬಿದ್ದಿದೆ. ವಂಚನೆಗಳ ಜಾಡನ್ನು ಬೇಧಿಸಲು ಹೊರಡಿದೆ. ಈ ಆಪರೇಷನ್‌ಗೆ ಸಿಬಿಐ ಇಟ್ಟ ಹೆಸರು “ಆಪರೇಷನ್ ಚಕ್ರ 2”.

ಭಾರತದ ನಿರುದ್ಯೋಗಿಗಳನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಈ ಸ್ಕ್ಯಾಮರ್‌ಗಳು ಹಲವಾರು ವಾಟ್ಸಾಪ್ ನಂಬರ್‌ಗಳನ್ನು ಬಳಸಿಕೊಂಡು ದೇಶ-ವಿದೇಶಗಳಲ್ಲಿ ಕುಳಿತುಕೊಂಡು ಕೆಲಸದ ಆಮಿಷ ಒಡ್ಡಿ ಜನರಿಗೆ ಹಣದ ವಂಚನೆ ಮಾಡುತ್ತಿದ್ದಾರೆ.  ಈ ಹಣವನ್ನು ನಂತರ ಶೆಲ್ ಕಂಪನಿಗಳ ಮೂಲಕ ಕಳುಹಿಸಿ, ಲಾಂಡರಿಂಗ್ ಮಾಡಲಾಗುತ್ತಿದೆ. ಸಿಬಿಐ ಪ್ರಕಾರ, ಇದೊಂದು ದೇಶದ ಅತ್ಯಂತ ದೊಡ್ಡ ಸೈಬರ್-ಮನಿ ಲಾಂಡರಿಂಗ್‌ ವಂಚನೆಯ ಜಾಲ.

ಈ ವಾರ ಸಿಬಿಐ “ಆಪರೇಷನ್ ಚಕ್ರ 2” ಎಂಬ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ, ಕೇರಳ, ತಮಿಳುನಾಡು, ಪಂಜಾಬ್, ಬಿಹಾರ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳ 76 ಸ್ಥಳಗಳಲ್ಲಿ ಐದು ಪ್ರತ್ಯೇಕ ಪ್ರಕರಣಗಳಲ್ಲಿ ದಾಳಿಯನ್ನು ನಡೆಸಿದೆ. ಈ ಬಗ್ಗೆ ಅಕ್ಟೋಬರ್‌  19 ಮತ್ತು ಅಕ್ಟೋಬರ್‌ 20 ರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತನಿಖೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ.

ಈ ಸಂದರ್ಭದಲ್ಲಿ 32 ಮೊಬೈಲ್ ಫೋನ್‌ಗಳು, 48 ಲ್ಯಾಪ್‌ಟಾಪ್‌ಗಳು-ಹಾರ್ಡ್ ಡಿಸ್ಕ್‌ಗಳು, ಎರಡು ಸರ್ವರ್‌ಗಳ ಫೋಟೋಗಳು, 33 ಸಿಮ್ ಕಾರ್ಡ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ಜಪ್ತಿ ಮಾಡಲಾಗಿದೆ. ಹಲವಾರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಸಿಬಿಐ 15 ಇಮೇಲ್ ಖಾತೆಗಳ ಡಂಪ್‌ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಹೆಣೆದಿರುವ ವಂಚನೆಯ ಸಂಕೀರ್ಣ ಜಾಲವನ್ನು ಬೆಳಕಿಗೆ ತಂದಿದೆ.

ಹೂಡಿಕೆ ಮತ್ತು ಉದ್ಯೋಗದ ಆಸೆ ತೋರಿಸಿ ಅಮಾಯಕರನ್ನು ವಂಚಿಸುತ್ತಿರುವ ಈ ಹಗರಣದ ವಿರುದ್ಧ ಸಿಬಿಐನಲ್ಲಿ ಕಳೆದ ವರ್ಷ ಎಫ್‌ಐಆರ್ ದಾಖಲಿಸಲಾಗಿತ್ತು. ಸತತ ಅಧ್ಯಯನಗಳ ನಂತರ ಸಿಬಿಐ ಈ ಜಾಲದ ಒಳಸುಳಿವು, ತಂತ್ರಜ್ಞಾನಗಳ ಬಳಕೆಯನ್ನು ಬೇಧಿಸಿ ದಂಧೆಯನ್ನು ಬಹಿರಂಗಪಡಿಸಿದೆ.

ಈ ದಂಧೆಯಲ್ಲಿ ಹಲವು ವಂಚಕರು ಬೇರೆ ಬೇರೆ ಮೊಬೈಲ್‌ ಸಂಖ್ಯೆಗಳ ಮೂಲಕ ಜನರನ್ನು ಸಂಪರ್ಕಿಸಿ ಹೂಡಿಕೆ , ಇಲ್ಲವೇ ಅರೆಕಾಲಿಕ ಉದ್ಯೋಗ ನೀಡುವುದಾಗಿ ನಂಬಿಸಿ ಹಣವನ್ನು ಸಂಗ್ರಹಿಸುತ್ತಾರೆ. ಇದಕ್ಕಾಗಿ ಬೇರೆ ಬೇರೆ ಬ್ಯಾಂಕ್ ಖಾತೆಗಳು ಮತ್ತು ಯುಪಿಐಗಳನ್ನು ಬಳಸಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ವಿವಿಧ ಬ್ಯಾಂಕ್ ಖಾತೆಗಳು ಮತ್ತು ವಿದೇಶಿ ಮೂಲದ ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿನ ಹಣವನ್ನು ಡ್ರಾ ಮಾಡಲು ವಿವಿಧ ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂಬುದು ಸಿಬಿಐ ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ, ಈ ಹೆಚ್ಚಿನ ಶೆಲ್‌ ಕಂಪನಿಗಳು ಚೀನಾದ ಜೊತೆಗೆ ಸಂಬಂಧವನ್ನು ಹೊಂದಿದ್ದು, ತನಿಖೆ ಪ್ರಗತಿಯಲ್ಲಿದೆ.

ಸೈಬರ್ ವಂಚನಕರು “ಗೂಗಲ್ ಜಾಹೀರಾತುಗಳು, ಎಸ್‌ಎಂಎಸ್, ಸಿಮ್ ಬಾಕ್ಸ್ ಆಧಾರಿತ ಎಸ್‌ಎಂಎಸ್, ಕ್ಲೌಡ್ ಸೇವೆಗಳು, ಫಿನ್‌ಟೆಕ್ ಕಂಪನಿಗಳು, ಪಾಪ್‌ಅಪ್‌ ಮೆಸೆಜ್‌ಗಳು ಮತ್ತು ಎಪಿಐ” ಗಳನ್ನು ಬಳಸುತ್ತಾರೆ ಎಂಬುದು ತಿಳಿದುಬಂದಿದೆ. ಸಿಬಿಐ ಪ್ರಕಾರ “ಸಾಮಾಜಿಕ ಮಾಧ್ಯಮಗಳು ಮತ್ತು ಜಾಹೀರಾತು ಪೋರ್ಟಲ್‌ಗಳು, ಎನ್‌ಕ್ರಿಪ್ಟ್ ಮಾಡಿದ ಚಾಟ್ ಅಪ್ಲಿಕೇಶನ್‌ಗಳು, ಪೊಂಜಿ ಸ್ಕೀಮ್‌ಗಳು ಮತ್ತು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಬಳಸಿ ಜನರ ಗಮನ ಸೆಳೆಯುತ್ತಾರೆ.” ಅಲ್ಲದೇ, ವಂಚಕರ ಸರ್ಚ್ ಇಂಜಿನ್‌ನ ಜಾಹೀರಾತು ಟೂಲ್‌ಗಳನ್ನು ಬಳಸುತ್ತಿದ್ದಾರೆ, ಜೊತೆಗೆ ಬೃಹತ್ ಗಾತ್ರದಲ್ಲಿ ಬಲ್ಕ್‌ SMS ಕಳುಹಿಸಲು ರೆಂಟೆಡ್ ಹೆಡರ್‌ಗಳನ್ನು ಬಳಸುತ್ತಿದ್ದಾರೆ.

ವಿದೇಶಿ ಪ್ರಜೆಗಳನ್ನು ವಂಚಿಸಲು ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ಗೆ ತಾಂತ್ರಿಕ ಬೆಂಬಲ ನೀಡುವವರಂತೆ‌ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ 72 ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ದಾಳಿ ನಡೆಸಿದೆ. ಚೀನೀ ಲಿಂಕ್‌ಗಳನ್ನು ಹೊಂದಿರುವ ಕಂಪನಿಗಳ “ಕ್ರಿಪ್ಟೋಕರೆನ್ಸಿ ವಂಚನೆ” ಗೆ ಸಂಬಂಧಿಸಿದ ಇತರ ಮೂರು ಪ್ರಕರಣಗಳಲ್ಲಿ ಹುಡುಕಾಟಗಳನ್ನು ನಡೆಸಲಾಗಿದೆ.

ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್-ಇಂಡಿಯಾ (ಎಫ್‌ಐಯು-ಇಂಡಿಯಾ)ದ ಮಾಹಿತಿಯಂತೆ ಆಪರೇಷನ್ ಚಕ್ರ-II ಕ್ರಿಪ್ಟೋ-ಕರೆನ್ಸಿ ವಂಚನೆಯನ್ನು ಭೇದಿಸಿತು. ಈ ವಂಚನೆಯನ್ನು ಭಾರತೀಯರನ್ನು ಗುರಿಯಾಗಿಸಿ ನಡೆಸಲಾಗುತ್ತಿದ್ದು, ಸುಮಾರು 100 ಕೋಟಿ ರುಪಾಯಿಗೂ ಅಧಿಕ ಹಣ ವಂಚಕರ ಪಾಲಾಗಿದೆ.

ವಂಚಕ ಇದಕ್ಕಾಗಿ ಫೇಕ್ ಕ್ರಿಪ್ಟೋಕರೆನ್ಸಿ ಟೋಕನ್ ಅನ್ನು ಅಭಿವೃದ್ಧಿಪಡಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.  ಈ ಪ್ರಕರಣದಲ್ಲಿ ಆರೋಪಿಯು ಭಾರತ ಮೂಲದ ಹೆಸರಾಂತ ಅಮೇರಿಕನ್ ಕ್ರಿಪ್ಟೋ ಟೆಕ್ನಾಲಜಿಸ್ಟ್‌ ಒಬ್ಬರ ಫೋಟೋವನ್ನು ಬಳಸಿಕೊಂಡು ವೆಬ್‌ಸೈಟ್ ಮಾಡಿದ್ದಾನೆ. ಗಣಿಗಾರಿಕೆ ಯಂತ್ರಗಳನ್ನು ಖರೀದಿಸಲು ಹೂಡಿಕೆದಾರರ ಹಣವನ್ನು ಬಳಸುತ್ತಾರೆ ಎಂಬಂತೆ ನಂಬಿಸಿ,  ಬಂದ ಲಾಭವನ್ನು ಮುದ್ರಿಸಲಾದ ಕ್ರಿಪ್ಟೋಕರೆನ್ಸಿಗಳ ಮೂಲಕ ವಿತರಿಸಲಾಗಿದೆ.

ಈ ಅಪ್ಲಿಕೇಷನ್‌ ಆಗಸ್ಟ್ 2021 ರವರೆಗೆ ಕಾರ್ಯನಿರ್ವಹಿಸಿತ್ತು. ಈ ಸಮಯದಲ್ಲಿ ಅನೇಕ ಭಾರತೀಯರು ವಿವಿಧ ಗೇಟ್‌ವೇಗಳ ಮೂಲಕ ಹೂಡಿಕೆ ಮಾಡಿದ್ದರು. ಆರಂಭದಲ್ಲಿ, ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ರಿಟರ್ನ್ಸ್ ಕೂಡ ನೀಡಲಾಯಿತು, ಆದರೆ ಆಗಸ್ಟ್ 2021ರ ನಂತರ ಎಲ್ಲಾ ಪಾವತಿಗಳು ಸ್ಥಗಿತಗೊಂಡವು.

Payment aggregator ಸರ್ವಿಸ್‌ಗಳನ್ನು ಬಳಸಿ ಆರೋಪಿಯು ಅಂದಾಜು 168.75 ಕೋಟಿ ರುಪಾಯಿಯ ವಂಚನೆ ನಡೆಸಿದ್ದ. ತನಿಖೆಯ ಸಮಯದಲ್ಲಿ 150 ಖಾತೆಗಳನ್ನು ಪತ್ತೆಮಾಡಲಾಗಿದ್ದು, ಇದರಲ್ಲಿ 46 ಶೆಲ್ ಕಂಪನಿಗಳು, 42 ಮಾಲೀಕತ್ವ ಸಂಸ್ಥೆಗಳು ಮತ್ತು 50 ವೈಯಕ್ತಿಕ ಖಾತೆಗಳು, ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲು, ಸ್ವೀಕರಿಸಿದ ಹಣವನ್ನು ಲಾಂಡರಿಂಗ್ ಮಾಡಲು ಮತ್ತು ಅಂತಿಮ ಫಲಾನುಭವಿಗಳಿಗೆ ವರ್ಗಾಯಿಸಲು ಮಾರ್ಗಗಳಾಗಿ ಕಾರ್ಯನಿರ್ವಹಿಸಿರುವುದು ಕಂಡು ಬಂದಿದೆ. ಎರಡು ಖಾಸಗಿ ಕಂಪನಿಗಳು, ಅದರ ನಿರ್ದೇಶಕರು ಸೇರಿದಂತೆ ಅನೇಕರ ವಿರುದ್ಧ ಈ ಪ್ರಕರಣವನ್ನು ದಾಖಲಿಸಲಾಗಿದೆ.

ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳ ಸಹಯೋಗದೊಂದಿಗೆ ಆಪರೇಷನ್ ಚಕ್ರ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸಿಬಿಐ ತಿಳಿಸಿವೆ.

ಬೆಂಗಳೂರಿನಲ್ಲಿ ಕೂತು ಸಿಂಗಾಪುರದವರಿಗೆ ವಂಚನೆ!

ಈ ವಂಚಕರ 137 ಶೆಲ್ ಕಂಪನಿಗಳನ್ನು ಸಿಬಿಐ ಗುರುತಿಸಿದ್ದು, ಹೆಚ್ಚಿನ ಸಂಖ್ಯೆಯ ಘಟಕಗಳು ಬೆಂಗಳೂರಿನ ಕಂಪನಿಗಳ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಲ್ಪಟ್ಟಿವೆ. ಸಿಬಿಐಯ ತನಿಖೆಯ ನಂತರ ಈ ಕಂಪನಿಗಳ ನಿರ್ದೇಶಕರನ್ನು ಗುರುತಿಸಲಾಗಿದ್ದು, ಹೆಚ್ಚಿನವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಕೆಲವು ನಿರ್ದೇಶಕರು ಬೆಂಗಳೂರು ಮೂಲದ ಪಾವತಿ ವ್ಯಾಪಾರಿಯೊಂದಿಗೆ (ಪೇಮೆಂಟ್‌ ಮರ್ಚೆಂಟ್‌) ಸಂಬಂಧ ಹೊಂದಿದ್ದರು. ವಂಚನೆಯ ಕೇಂದ್ರವಾಗಿರುವ ಈ ವ್ಯಾಪಾರಿ ಸುಮಾರು 16 ವಿಭಿನ್ನ ಬ್ಯಾಂಕ್ ಖಾತೆಗಳನ್ನು ನಿಯಂತ್ರಿಸುತ್ತಿದ್ದಾನೆ, ಅಲ್ಲಿ ಬೃಹತ್ ಮೊತ್ತ ಅಂದಾಜು 357 ಕೋಟಿ ರುಪಾಯಿಯ ಹಣ ಹರಿದು ಬಂದಿದೆ.

ಈ ಹಣದ ಜಾಡನ್ನು ಯಾರಿಗೂ ಪತ್ತೆ ಮಾಡಲು ಸಾಧ್ಯವಾಗದಂತೆ ಉದ್ದೇಶಪೂರ್ವಕವಾಗಿ ಹಣ ಜಮೆಯಾದ ನಂತರ ನಂತರ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಬೆಂಗಳೂರು, ಕೊಚ್ಚಿನ್ ಮತ್ತು ಗುರ್‌ಗಾಂವ್‌ನಲ್ಲಿ ನಡೆಸಲಾದ ಹುಡುಕಾಟಗಳಿಂದ ಸಿಬಿಐಗೆ ಗಣನೀಯ ಸಂಖ್ಯೆಯ ಪುರಾವೆಗಳನ್ನು ಸಿಕ್ಕಿದ್ದು, ಶೆಲ್ ಕಂಪನಿಗಳ ನಿರ್ದೇಶಕರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದೆ.

ಈ ಆರೋಪಿಗೆ ವಿದೇಶಿ ಪ್ರಜೆಯ ಜತೆಗಿನ ಒಡನಾಟವೂ ಇದ್ದು, ಈ ವಂಚಕ ಘಟಕಗಳ ನಿರ್ದೇಶಕರು ಮತ್ತು ಸಂಪರ್ಕ ಮಾಹಿತಿಯನ್ನು ಬದಲಾಯಿಸುವಲ್ಲಿ ಬೆಂಗಳೂರಿನ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರವೂ ಕಂಡುಬಂದಿದೆ.

ಸಿಂಗಾಪುರದ ನಾಗರಿಕರನ್ನು ಗುರಿಯಾಗಿಸಿಕೊಂಡು ಮಾಡಿರುವ ಸೈಬರ್ ಆರ್ಥಿಕ ಅಪರಾಧಗಳ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎರಡನೇ ಪ್ರಕರಣವನ್ನು ಸಿಬಿಐ ದಾಖಲಿಸಲಾಗಿದೆ. ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 100 ಭಾರತೀಯ ಬ್ಯಾಂಕ್ ಖಾತೆಗಳನ್ನು ಒಳಗೊಂಡಿರುವ ಸಿಂಗಾಪುರ ನಾಗರಿಕರ ಮೇಲೆ ನಡೆಸಲಾದ 300 ಕ್ಕೂ ಹೆಚ್ಚು ಸೈಬರ್ ವಂಚನೆಗಳು ನಡೆದಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು INTERPOL ಚಾನೆಲ್‌ಗಳ ಮೂಲಕ ಸಿಂಗಾಪುರ್ ಪೋಲೀಸ್ ಫೋರ್ಸ್‌ ನೀಡಿದೆ.

ಫಿಶಿಂಗ್, ವಿಶಿಂಗ್, ಸ್ಮಿಶಿಂಗ್ ಮತ್ತು ಮೋಸದ ತಂತ್ರಜ್ಞಾನ (phishing, vishing, smishing, & fraudulent tech support) ದಂತಹ ಸೋಷಿಯಲ್ ಎಂಜಿನಿಯರಿಂಗ್ ವಿಧಾನಗಳನ್ನು ಬಳಸಿ ಅಪರಾಧಿಗಳು 400 ಸಿಂಗಾಪುರ್ ನಾಗರಿಕರಿಗೆ ವಂಚನೆ ಮಾಡಿದ್ದಾರೆ. ಈ ತಂತ್ರಗಾರಿಕೆಯನ್ನು ಬಳಸಿಕೊಂಡು ವಂಚಕರು ಸಿಂಗಪುರದ ಬ್ಯಾಂಕ್‌ ಖಾತೆಗಳಿಂದ ಭಾರತೀಯ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ 150 ಕ್ಕೂ ಅಧಿಕ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಪಾಟ್ನಾ, ಕೋಲ್ಕತ್ತಾ, ಲಕ್ನೋ, ವಾರಣಾಸಿ, ಚಂಡೀಗಢ, ಜಲಂಧರ್, ಭೋಪಾಲ್, ಚೆನ್ನೈ, ಕೊಚ್ಚಿ ಮತ್ತು ಮಧುರೈ ಸೇರಿದಂತೆ 35 ಸ್ಥಳಗಳಲ್ಲಿ ಆರೋಪಿಗಳ ಸಮ್ಮುಖದಲ್ಲೇ ಶೋಧ ನಡೆಸಿದಾಗ ಗುರುತಿನ ಪುರಾವೆಗಳಿಗೆ ಸಂಬಂಧಿಸಿದ ದೋಷಾರೋಪಣೆ ದಾಖಲೆಗಳು, ಮೋಸದ ಬ್ಯಾಂಕಿಂಗ್ ವ್ಯವಹಾರಗಳು ಮತ್ತು ಇತರ ಸಾಕ್ಷ್ಯಗಳು ಲಭ್ಯವಾಗಿವೆ.

ಹೇಗೆ ಮೋಸ ಮಾಡುತ್ತಾರೆ?

ಸಿಬಿಐ ಮೂಲಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ಗೂಗಲ್, ಫೇಸ್‌ಬುಕ್ ಜಾಹೀರಾತುಗಳು, ಟೆಲಿಗ್ರಾಮ್ ಅಪ್ಲಿಕೇಶನ್ ಮತ್ತು ಎಸ್‌ಎಂಎಸ್‌ಗಳ ಮೂಲಕ ಸಂಪರ್ಕಿಸಲಾಗುತ್ತದೆ. ಬೇಗ ಹಣ ಗಳಿಸಲು ಅವರಿಗೆ ಉದ್ಯೋಗಗಳನ್ನು ನೀಡುವ ಬರವಸೆ ನೀಡುತ್ತವೆ.

ಸಾಮಾನ್ಯವಾಗಿ ಈ ಮೆಸೆಜ್‌ಗಳು,

“ಸರ್, ಅಮೆಜಾನ್  ಅರೆಕಾಲಿಕ ಉದ್ಯೋಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ, ನೀವು ದಿನನಿತ್ಯ 3000-10000 ರುಪಾಯಿ ಗಳಿಸಬಹುದು”

“ಆತ್ಮೀಯ ನಾನು ಎಚ್‌ಆರ್‌. ನೀವು ಪಾರ್ಟ್‌ಟೈಮ್‌ ಹಾಗೂ ಫುಲ್‌ ಟೈಮ್ ಉದ್ಯೋಗಕ್ಕೆ ಆಯ್ಕೆಯಾಗಿದ್ದೀರಿ, ಈಗ ನೀವು ದಿನಕ್ಕೆ 20000 ರುಪಾಯಿ ಗಳಿಸಬಹುದು. ಅದಕ್ಕಾಗಿ, ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿ…”.

ಲೇಖಕರ ವೈಯಕ್ತಿಕ ಸಂಭಾಷಣೆ

ಸಾಮಾನ್ಯವಾಗಿ ಇಂತಹ ಮೆಸೆಜ್‌ಗಳ ಜೊತೆಗೆ ವಾಟ್ಸಾಪ್‌ ಅಥವಾ ಟೆಲಿಗ್ರಾಮ್‌ಗಳ ಲಿಂಕ್‌ಗಳು ಇರುತ್ತವೆ. ಇದರ ಮೇಲೆ ಕ್ಲಿಕ್‌ ಮಾಡಿದರೆ, ಅದು ನೇರವಾಗಿ ಚ್ಯಾಟಿಂಗ್‌ಗೆ ಹೋಗುತ್ತದೆ. ಈ ಸಂದರ್ಭದಲ್ಲಿ ವಂಚಕ ಸಂಭಾಷಣೆಯನ್ನು ನಡೆಸಿ, ಹೂಡಿಕೆಯ ವೆಬ್‌ಸೈಟ್‌ ಲಿಂಕ್‌ ಕಳಿಸುತ್ತಾನೆ.

ಇಷ್ಟು ಮಾತ್ರವಲ್ಲದೇ, ಕೆಲವೊಮ್ಮೆ ಚ್ಯಾಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ತಕ್ಷಣವೇ ಲಾಭವನ್ನು ಪಡೆಯುವ ಬಗ್ಗೆ ಜನರಿಗೆ ಹೇಳಲಾಗುತ್ತದೆ. ಜೊತೆಗೆ, ಡಾಕ್ಯುಮೆಂಟ್‌ ಟೈಪ್‌ ಮಾಡುವ, ಯೂಟ್ಯೂಬ್‌ ಚಾನೆಲ್‌ ಲೈಕ್‌ ಮಾಡುವ, ಇ-ಮೇಲ್‌ ಟೈಪ್‌ ಮಾಡುವ ಸಣ್ಣ ಸಣ್ಣ ಕೆಲಸಗಳನ್ನು ನೀಡಲಾಗುತ್ತದೆ. ಇದರಲ್ಲಿ ಕಡ್ಡಾಯದ ಷರತ್ತು ಏನೆಂದರೆ, ವ್ಯಕ್ತಿ ತನ್ನ ಕ್ರೆಡೆನ್ಷಿಯಲ್ಸ್‌ ಪ್ರೂವ್‌ (ವಿಶ್ವಾಸಾರ್ಹತೆ) ಮಾಡಲು ತನ್ನ UPI ವ್ಯಾಲೆಟ್‌ನಲ್ಲಿ ಹಣ ಹಾಕಬೇಕು. ಇದಕ್ಕಾಗಿ ವಂಚಕರ ಸೈಟ್‌ಗಳು ಅನಧಿಕೃತ ಪೇಮೆಂಟ್‌ ಗೇಟ್‌ವೇಗಳನ್ನು ನೀಡುತ್ತಾರೆ.

ಲೇಖಕರ ವೈಯಕ್ತಿಕ ಸಂಭಾಷಣೆ

ಇಂತಹ  ಗೇಟ್‌ವೇಗಳು ಭಾರತದಲ್ಲಿ ಕೆಲಸ ಮಾಡಲು ಯಾವುದೇ ಅಧಿಕಾರ ಹೊಂದಿಲ್ಲ. ಈ ಎಲ್ಲಾ ಪಾವತಿಗಳನ್ನು ಇಂಟರ್ನೆಟ್ ಲಿಂಕ್‌ಗಳನ್ನು ಬಳಸಿಕೊಂಡು UPI ಮೂಲಕ ಮಾಡಲಾಗುತ್ತದೆ.

ಕೆಲವು ಬಾರಿ, ಟೆಲಿಗ್ರಾಮ್‌ಗಳಲ್ಲಿ ಸಂಪರ್ಕಿಸಿ, ಉದ್ಯೋಗದ ಆಮಿಷವನ್ನು ತೋರಿಸಿ ಯೂಟ್ಯೂಬ್‌ ಚಾನೆಲ್‌ಗಳಿಗೆ ಸಬ್‌ಸ್ಕ್ರೈಬ್‌ ಮಾಡುವ ಸಣ್ಣ ಸಣ್ಣ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಇದರ ಸ್ಕ್ರೀನ್‌ಶಾಟ್‌ಗಳನ್ನು ಕಳಿಸಬೇಕು. ಇದಾದ ನಂತರ, ಬೋನಸ್‌ ಹಣಕ್ಕಾಗಿ ಇನ್ನೊಂದು ಟೆಲಿಗ್ರಾಮ್‌ ಲಿಂಕ್‌ ಕಳಿಸುತ್ತಾರೆ. ಆ ಲಿಂಕ್‌ ತೆರೆದು ಮೊದಲಿನ ವ್ಯಕ್ತಿ ನೀಡಿದ ಕೋಡ್‌ ಒಂದನ್ನು ನೀಡಬೇಕು… ಹೀಗೆ ವಂಚಕರು ಇ-ಮೇಲ್, UPI ಮೊದಲಾದ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ.

ಈ ರೀತಿಯ ಮೆಸೆಜ್‌ಗಳನ್ನುವಾಟ್ಸಾಪ್‌, ಟೆಲಿಗ್ರಾಮ್‌ ಮೊದಲಾದ ಕಡೆ ಲಿಂಕ್‌ಗಳನ್ನು ಕಳುಹಿಸಲು ಬಳಸುವ‌ ಮೊಬೈಲ್ ಸಂಖ್ಯೆಗಳು ಬೇರೆ ಬೇರೆ ಸ್ಥಳಗಳನ್ನು ಆಧರಿಸಿರುತ್ತವೆ.‌ ಟೆಲಿಗ್ರಾಮಿನಲ್ಲಿ ಯಾವುದೇ ಮೊಬೈಲ್‌ ಸಂಖ್ಯೆ ಇರುವುದಿಲ್ಲ. ವಾಟ್ಸಾಪ್‌ನಲ್ಲಿ ಬಳಸುವ ಸಂಖ್ಯೆಗಳು ಅವುಗಳ ಮೂಲ ಬಳಕೆದಾರರಿಗೆ ತಿಳಿಯದಂತೆ ವಂಚಕರು ಬಳಸುತ್ತಿರುತ್ತಾರೆ.

ಈ ಜಾಲದಲ್ಲಿ ವಂಚಕರು ಕಾಲ್‌ ಸೆಂಟರ್‌ಗಳನ್ನು ಮಾಡಿಕೊಂಡು ಕೆಲಸ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಜನರೊಂದಿಗೆ ಸಂಭಾಷನೆ ನಡೆಸುವ ಇವರು, ಉಳಿದ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಿಂದ ವಾಟ್ಸಾಪ್‌, ಟೆಲಿಗ್ರಾಮ್ ಮೂಲಕ ಚಾಟಿಂಗ್‌ ನಡೆಸುತ್ತಾರೆ. ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ ಚಾಟಿಂಗ್‌ ನಡೆಸುವ ಇವರು, ಗೂಗಲ್‌ ಟ್ರಾನ್ಸ್‌ಲೇಷನ್‌ ಕೂಡಾ ಬಳಸುತ್ತಾರೆ.

ಹಣದ ವ್ಯವಹಾರಕ್ಕೆ ವಿದೇಶಿಗರು ಉಪಯೋಗಿಸುವ ಗೇಟ್‌ವೇಗಳನ್ನು ಬಳಸುತ್ತಾರೆ. ಈ ಪೇಮೆಂಟ್‌ ಗೇಟ್‌ವೇಗಳು UPI ಮೂಲಕ ಹಣವನ್ನು ಸ್ವೀಕರಿಸುತ್ತವೆ. ಯುಪಿಐಗಳನ್ನು RazorPay, BharatPe, ಇತ್ಯಾದಿಗಳ ಹಿಂದೆ ಲೇಯರಿಂಗ್ ರಚಿಸಲು ಬಳಸಿ, ದಿನದ ಕೊನೆಯಲ್ಲಿ ವ್ಯವಹಾರವನ್ನು ಮುಗಿಸುತ್ತಾರೆ. ರೇಜರ್ ಪೇ, ಈಸ್ ಬಝ್, ಪೇಟಿಎಂ, ಸ್ಪೀಡಿ ಪೇ, ಇನ್‌ಸ್ಟಂಟ್ ಪೇ, ಕ್ಯಾಶ್ ಫ್ರೀ ಮುಂತಾದ ಫಿನ್‌ಟೆಕ್ ಕಂಪನಿಗಳನ್ನು ಪಾವತಿಗಳಿಗೆ ಬಳಸಲಾಗುತ್ತದೆ.

ಆದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಶೆಲ್ ಕಂಪನಿಗಳು ಮತ್ತು ಬಾಡಿಗೆ ಕಂಪನಿಗಳು ಹೇಗೆ ವ್ಯವಹರಿಸಲು ಸಾಧ್ಯ? ಪಾವತಿಗಳಿಗೆ ಸೇವೆಗಳನ್ನು ಪಡೆಯಲು ನೋಂದಣಿ ಪ್ರಮಾಣಪತ್ರಗಳನ್ನು ಬಳಸಲಾಗುತ್ತದೆ. ಈ ಫಿನ್‌ಟೆಕ್ ಕಂಪನಿಗಳಲ್ಲಿ ಹೆಚ್ಚಿನವು ಮಾನ್ಯತೆ ಪಡೆದಿಲ್ಲ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೇರವಾಗಿ ನಿಯಂತ್ರಿಸಲ್ಪಡುವುದಿಲ್ಲ.

ನಿಮ್ಮ ಫೋನ್‌ಗೆ ಇಂತಹ ಮೆಸೆಜ್‌ಗಳು ಬಂದರೆ ಅವುಗಳನ್ನು ಬ್ಲಾಕ್‌ ಮಾಡುವುದೇ ಒಳಿತು. ಅವರ ನಿರ್ದೇಶನದಂತೆ ನಾವು ಮುಂದುವರಿಸಿ, ನಮ್ಮೆಲ್ಲಾ ಮಾಹಿತಿಗಳನ್ನು ಅವರಿಗೆ ನೀಡಿದರೆ ಅಥವಾ ಹಣದ ವ್ಯವಹಾರ ನಡೆಸಿದರೆ ಮೋಸ ಖಚಿತ. ಹಣದ ವ್ಯವಹಾರ ಮುಗಿದ ತಕ್ಷಣ ನಾವು ಹಣ ಕಳುಹಿಸಿದ ವ್ಯಕ್ತಿ ಪತ್ತಯೇ ಇರುವುದಿಲ್ಲ!

ಎಚ್ಚರ….

ಲೇಖನ: ಚರಣ್‌ ಐವರ್ನಾಡು, ಬೆಂಗಳೂರು