D. Devaraj Urs – Peepal Media

‘ದೇವರಾಜ ಅರಸು’ ಎಂಬ ತಬ್ಬಲಿ ಜಾತಿಗಳ ತಂದೆ
ದೇವರಾಜ ಅರಸು ಅವರ 107ನೆಯ ಜನ್ಮದಿನದ  ಈ ಸಂದರ್ಭದಲ್ಲಿ ಅರಸು ಅವರು ಕಟ್ಟಿಕೊಟ್ಟ ಬಹುಜನ ರಾಜಕಾರಣವನ್ನು , ಸೌಹಾರ್ದ ಕರ್ನಾಟಕವನ್ನು ಉಳಿಸಿಕೊಳ್ಳುವ , ಮುನ್ನಡೆಸುವ ದೊಡ್ಡ  ಸವಾಲು ಮತ್ತು ಹೊಣೆಗಾರಿಕೆ ಈ ನಾಡಿನ  ದಲಿತ, ದಮನಿತ  ಮತೀಯ ಅಲ್ಪಸಂಖ್ಯಾತ  ಸಮುದಾಯಗಳ ಮುಂದಿದೆ. ಅದನ್ನು ಸಾಕಾರಗೊಳಿಸಿದ್ದೇ  ಅದರೆ ಅದುವೇ ದೇವರಾಜ ಅರಸು ಎಂಬ ತಬ್ಬಲಿ ಜಾತಿಗಳ ತಂದೆಗೆ ಸಲ್ಲಿಸಬಹುದಾದ ನಿಜ  ಗೌರವ ಎನ್ನುತ್ತಾ ತಮ್ಮ ಭಾವಲೋಕಕ್ಕೆ ದಕ್ಕಿದ   ಅರಸು ಅವರ ರಾಜಕೀಯ ಬದುಕಿನ ಈಜುಗಾರಿಕೆಯನ್ನು ಸೊಗಸಾಗಿ  ಕಟ್ಟಿಕೊಟ್ಟಿದ್ದಾರೆ ಎನ್ ರವಿಕುಮಾರ್.

ಬಲಾಢ್ಯ ಜಾತಿಗಳ ವಿಕೃತ ಹರಿವಿನ ಉಸುಕಿನಲ್ಲಿ ಹುದುಗಿ ಹೋದ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಬಗೆದು  ಈ ನಾಡಿನ ಬಹುಸಂಖ್ಯಾತ ದುರ್ಬಲ ಜಾತಿಗಳ ನ್ಯಾಯದ ಹಕ್ಕು ಮತ್ತು ಅನ್ನವನ್ನಾಗಿ ಮಾಡಿದವರು ದೇವರಾಜ ಅರಸು. ಅರಸು ಬಲಾಢ್ಯ ಜಾತಿಗಳ ಜಾತಿಕೋರರ ಕಣ್ಣಿಗೆ ಕೆಂಡದುಂಡೆಯಂತೆ ಕಂಡರೆ, ಇದೇ ಅರಸು ಅನಾಥ ಜಾತಿಗಳ ಪಾಲಿಗೆ ಅಂತಃಕರಣ ತುಂಬಿದ ತಂದೆಯಂತೆ ಸದಾ ಕಾಣುತ್ತಾರೆ. ಇಂತಹ  ತಂದೆಯ ಕುರಿತು ಮಾತಾಡುವುದು ಎಂದರೆ ಈ ನಾಡಿನ ತಬ್ಬಲಿ ಜಾತಿಗಳ ಹಸಿವು, ಅವಮಾನ, ರಾಜಕಾರಣ, ಸಾಮಾಜಿಕ ಸಂಘರ್ಷಗಳ ಬದುಕಿನ ಕುರಿತು ಮಾತಾಡಿದಂತೆಯೇ.

1915 ಆಗಸ್ಟ್ 20 ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಳ್ಳಿಯಲ್ಲಿ ಜನಿಸಿದ ದೇವರಾಜ ಅರಸು(ತಂದೆ ದೇವರಾಜ ಅರಸು, ತಾಯಿ ದೇವಿರಮ್ಮಣ್ಣಿ) ಅಂತಹ ಸ್ಥಿತಿವಂತರಲ್ಲದ ಅಪ್ಪಟ ರೈತಾಪಿ ಕುಟುಂಬದವರು. 1941 ರಿಂದ ಆರಂಭಗೊಂಡ ಅರಸು ಅವರ ರಾಜಕೀಯ ಹೋರಾಟದ ಬದುಕು ನಿರಂತರ ಸಂಘರ್ಷಗಳಿಂದಲೇ 1982 ರಂದು ಅಕಾಲಿಕವಾಗಿ ಕೊನೆಗೊಂಡಿತು (1942 ಜೂನ್ 6). ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಈ ನಾಡನ್ನು ಆಳಿದ ಅರಸು ಅವರು ಕರ್ನಾಟಕ ರಾಜಕೀಯ ಚರಿತ್ರೆ ಮತ್ತು ವರ್ತಮಾನ ಎಂದೆಂದಿಗೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುವ, ಮಾದರಿ ಆದರ್ಶ  ರಾಜಕಾರಣ ಅಳವಡಿಸಿಕೊಳ್ಳಬಹುದಾದ  ಹತ್ತಾರು ಜನಕಲ್ಯಾಣ ಯೋಜನೆಗಳನ್ನು ಬಿಟ್ಟು ಹೋಗಿದ್ದಾರೆ. ಸಮಸಮಾಜದ ದಾರಿಯನ್ನು  ಹಾಕಿಕೊಟ್ಟಿದ್ದಾರೆ.

ಕರ್ನಾಟಕದ ರಾಜಕಾರಣ ಬಲಾಢ್ಯ ಜಾತಿಗಳ ಹಿಡಿತದಲ್ಲಿ ವಿಜೃಂಭಿಸುತ್ತಿದ್ದ ಕಾಲಘಟ್ಟದಲ್ಲಿ ಸಾಮಾನ್ಯ ರೈತ ಕುಟುಂಬದಿಂದ ಬಂದ ಸಣ್ಣ ಜಾತಿಯೊಂದರ ದೇವರಾಜ ಅರಸು ಅವರು ಈ ರಾಜ್ಯದ ರಾಜಕಾರಣದ ಮುಂಚೂಣಿ ನಾಯಕನಾಗಿ ಬೆಳೆದು ನಿಂತದ್ದು ಅಷ್ಟು ಸುಲಭದ ಮಾತಲ್ಲ. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತ ಆ ದಿನಗಳು ನಾಡಿನ ಅನಾಥ ಜನಜಾತಿಗಳ ಪಾಲಿಗೆ ಸುವರ್ಣ ಯುಗವೇ ಆಗಿತ್ತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸೂತ್ರವನ್ನು ಅತ್ಯಂತ ಕರಾರುವಕ್ಕಾಗಿ ಅನುಷ್ಠಾನಗೊಳಿಸುವಲ್ಲಿ ಅರಸು ತೋರಿದ ದಾರ್ಷ್ಟ್ಯತೆ ಗೆ ಸರಿಸಾಟಿ ಇಲ್ಲ. ಈ ಸಮಾಜ ಜಾತಿ, ಧರ್ಮದ ಕೇಡಿನಲ್ಲಿ  ತನ್ನಂತೆ ಇರುವ ಜನಸಮುದಾಯವೊಂದರಲ್ಲಿ ಮಲಹೊರುವಂತಹ ಅಸಹ್ಯ ನರಕವನ್ನು ಸೃಷ್ಟಿಸಿತ್ತು. ಅರಸು  1977 ರಲ್ಲಿ “ಮಲಹೊರುವ ಪದ್ಧತಿ ನಿಷೇಧ ಶಾಸನ” ತರುವ ಮೂಲಕ ದಲಿತರ ಬದುಕನ್ನು  ಜಾತಿ ನಿರ್ಮಿತ ಕ್ರೌರ್ಯದಿಂದ ಬಿಡುಗಡೆಗೊಳಿಸಿ  ಮಹಾ ವಿಮೋಚಕನಂತೆ ಕಂಡರು.

ಬಸವಲಿಂಗಪ್ಪ ಎಂಬ ಇನ್ನೋರ್ವ ಜನನಾಯಕ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಮೂಲಕ ಅರಸು ಅವರ ಬೆನ್ನಿಗೆ ನಿಂತಿದ್ದರು. 1972 ರಿಂದ 1977 ರವರೆಗಿನ ಕರ್ನಾಟಕ ಕಂಡ ಅರಸು ಯುಗ ಸಾಮಾಜಿಕ ಪರಿವರ್ತನೆ ಯುಗವಾಗಿ ಜನದನಿ ಮೊಳಗಿಸಿತ್ತು. ಹಿಂದುಳಿದ ವರ್ಗಗಳಿಗೆ ಉದ್ಯೋಗ, ಶೈಕ್ಷಣಿಕ ಮೀಸಲಾತಿಗೆ ಹಾವನೂರು ಆಯೋಗ ರಚಿಸುವ ಮೂಲಕ ಹಿಂದುಳಿದ ಜಾತಿಗಳಲ್ಲಿ ಹಕ್ಕಿನ ಎಚ್ಚರವನ್ನು ಬಿತ್ತಿದವರು ಅರಸು. ‘ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಯೋಜನೆ’, ‘ಜೀತಪದ್ಧತಿ ನಿಷೇಧ ಕಾಯ್ದೆ’, ಶ್ರೀಮಂತರ ಸಾಲದ ಶೂಲದಲ್ಲಿ ಸಿಲುಕಿ ನರಳುತ್ತಿದ್ದ ಬಡವರ ಸಾಲ ಮನ್ನಕ್ಕಾಗಿ ‘ಋಣ ಪರಿಹಾರ ಕಾಯ್ದೆ’, ‘ಕನಿಷ್ಟ ಕೂಲಿ ನಿಗದಿ ಕಾಯ್ದೆ’, ‘ ಭಾಗ್ಯಜ್ಯೋತಿ ಯೋಜನೆ’, ಇಂದಿರಾ ಗಾಂಧಿ ಅವರ ಮಹತ್ವಾಕಾಂಕ್ಷೆಯ 20 ಅಂಶಗಳ ಕಾರ್ಯಕ್ರಮಗಳನ್ನು ಬದ್ಧತೆಯಿಂದ ಅನುಷ್ಠಾನ , ‘ಆಹಾರ ದಂಗೆ’ ಯನ್ನು ಹತ್ತಿಕ್ಕಿದ್ದಲ್ಲದೆ ಅದಕ್ಕೆ ಕಾರಣವಾದ ನಿರುದ್ಯೋಗ ಸಮಸ್ಯೆಯ ನಿವಾರಣೆಗೆ  ‘ಸ್ಟೈಫಂಡ್ ಯೋಜನೆ’ ಹೀಗೆ.. ಒಂದು ನಾಡಿನ ಬಹುಜನರ ಏಳಿಗೆಗಾಗಿ ಹತ್ತಾರು ಯೋಜನೆಗಳನ್ನು ತಪಸ್ಸಿನಂತೆ ಜಾರಿಗೊಳಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ.

ಜನರಿಗೆ ಶಿಕ್ಷಣ ಮತ್ತು ಭೂಮಿಯ ಹಕ್ಕನ್ನು ಕೊಟ್ಟಾಗ ಮಾತ್ರ ಅವರ ಮತ್ತು ಈ ನಾಡಿನ ಅಭ್ಯುದಯ ಮತ್ತು ಸಾಮಾಜಿಕ ಅಸಮಾನತೆ ನಿವಾರಣೆ ಸಾಧ್ಯ ಎಂಬ ಸತ್ಯವನ್ನು ಮನಗಂಡ ಅರಸು ಅವರು ತಂದ ಕ್ರಾಂತಿಕಾರಿ ಕಾಯ್ದೆಯೆಂದರೆ ಅದು ‘ಭೂ ಸುಧಾರಣ ಕಾಯ್ದೆ’ (1974). ಇದುವರೆಗೂ ಇದ್ದ ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಿನ ಸಾಮಾಜಿಕ ಸಂಘರ್ಷವನ್ನು ಆರ್ಥಿಕ ಸಂಘರ್ಷಕ್ಕೆ ತಂದು ನಿಲ್ಲಿಸಿದರು ಅರಸು. ಇದು ಭೂಮಾಲೀಕರೇ ಆಗಿದ್ದ ಬಲಾಢ್ಯ ಜಾತಿಗಳನ್ನು ಕೆರಳಿಸಿದರೂ ಅದಾವುದಕ್ಕೂ ಸೊಪ್ಪು ಹಾಕದೆ ನಿರ್ಗತಿಕ ಜಾತಿಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಬಲವನ್ನು ತುಂಬುವ ಕೆಲಸವನ್ನು ತಪಸ್ಸಿನಂತೆ, ರಾಜಧರ್ಮದಂತೆ ಪರಿಪಾಲಿಸುತ್ತಾ ನಡೆದರು.

ದೇವರಾಜ ಅರಸು

ಜಾತಿ ಶ್ರೇಷ್ಠತೆಯ ಮಲವನ್ನೇ ಮೆದುಳಲ್ಲಿ ತುಂಬಿಕೊಂಡ ಪತ್ರಕರ್ತರಿಗೆ ಎಂದಿಗೂ ಅರಸು ಓರ್ವ ಜನನಾಯಕ, ಪರಿವರ್ತನೆಯ ಹರಿಕಾರ, ಅಸಂಖ್ಯಾತ ದುರ್ಬಲ ಜಾತಿಗಳನ್ನು ಪರಂಪರಾಗತ ದುಃಖ ಮತ್ತು ದೌರ್ಜನ್ಯ-ಅವಮಾನಗಳಿಂದ ಬಿಡುಗಡೆ ಗೊಳಿಸಿದ ವಿಮೋಚಕ ಎಂದು ಅನ್ನಿಸಲೇ ಇಲ್ಲ. ಬದಲಾಗಿ ಅವರನ್ನು ಭ್ರಷ್ಟ, ದುರಹಂಕಾರಿ ಎಂದು ಬಿಂಬಿಸಿದವು. ಅವತ್ತಿನ ಪತ್ರಿಕಾ ಕ್ಷೇತ್ರದಲ್ಲಿ ಮೇಲ್ಜಾತಿಗಳವರೆ ಪತ್ರಕರ್ತರಾಗಿ ಇದ್ದಿದ್ದರಿಂದ ಅರಸು ಅವರ ಜನಕಲ್ಯಾಣ ಕೆಲಸಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮಗಳೇ ಇಲ್ಲವಾಗಿ ಹೋಗಿ ಬಿಟ್ಟವು. (ಹಾಗಂತ ಅವರು ಪತ್ರಿಕೆಗಳ ವಿರುದ್ದ ಸೇಡಿಗೆ ಇಳಿಯಲಿಲ್ಲ. ಬ್ರಾಹ್ಮಣರೇ ತುಂಬಿದ್ದ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯನ್ನು ಉಳಿಸಿದ್ದು ಅವರ ಉದಾತ್ತತೆಗೆ ನಿದರ್ಶನ) ಅರಸು ಅವರ ತೇಜೋವಧೆಯ ಹನನ ನಡೆಯಿತು.

ಬಲಾಢ್ಯ ಜಾತಿಗಳ ಸೊಕ್ಕು ಮುರಿದು ದುರ್ಬಲ ಮತ್ತು ಮತೀಯ ಅಲ್ಪಸಂಖ್ಯಾತ ಜಾತಿಗಳ ಬೆನ್ನುಮೂಳೆ  ಬಲಪಡಿಸಿದ ಅರಸು 1972 ರ ವಿಧಾನಸಭಾ ಚುನಾವಣೆಯಲ್ಲಿ ದನಿಸತ್ತ ದುರ್ಬಲ ಜಾತಿಗಳಿಗೆ ಮಣೆ ಹಾಕಿ ಹೊಸ ರಾಜಕೀಯ ಕ್ರಾಂತಿಯನ್ನೆ ಮಾಡಿದರು. ಅದುವರೆಗೂ ಕಾಂಗ್ರೆಸ್ 223 ವಿಧಾನಸಭಾ ಕ್ಷೇತ್ರಗಳಲ್ಲಿ, 150 ಕ್ಷೇತ್ರಗಳಲ್ಲಿ  ಲಿಂಗಾಯಿತರು, ಒಕ್ಕಲಿಗರು, ಬ್ರಾಹ್ಮಣರಿಗೆ ಟಿಕೆಟ್ ನೀಡುತ್ತಿದ್ದರೆ, ಉಳಿದ 73 ಸ್ಥಾನಗಳನ್ನು ದಲಿತರು, ಶೂದ್ರರು, ಅಲ್ಪಸಂಖ್ಯಾತರಿಗೆ ಹಂಚಿ ತಮ್ಮ ಉದಾರತೆಯನ್ನು ತೋರುತ್ತಿತ್ತು. 1972 ರಲ್ಲಿ ಇಂತಹ ಕಣ್ಕಟ್ಟು ‘ಉದಾರತೆ’ಯನ್ನು ಧಿಕ್ಕರಿಸಿದ ಅರಸು ಅವರು 223 ಕ್ಷೇತ್ರಗಳ ಪೈಕಿ 133 ಕ್ಷೇತ್ರಗಳಲ್ಲಿ  ದಲಿತರು, ಹಿಂದುಳಿದ ವರ್ಗಗಳು, ಮತೀಯ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಸಾಮಾಜಿಕ ನ್ಯಾಯದ ದಿಟ್ಟತನವನ್ನು ತೋರಿದರು. 163 ಕ್ಷೇತ್ರಗಳಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ನಲ್ಲಿ  92 ಜನ ದುರ್ಬಲ ಜಾತಿಗಳ ಅಪ್ರತಿಷ್ಠರನ್ನು ನೆಲೆಗೊಳಿಸುವ ಮೂಲಕ ಅಹಿಂದ ರಾಜಕಾರಣಕ್ಕೆ ಭಾಷ್ಯವನ್ನೆ ಬರೆದರು!

ಸಂಘಟಿತ ಜಾತಿಗಳ ಮತ ಬ್ಯಾಂಕುಗಳ ಮುಂದೆ ತಮಗೆ ‘ಅದೃಶ್ಯ ಮತದಾರರೇ’ ಅಗಿದ್ದ ಅಸಂಘಟಿತ ತಬ್ಬಲಿ ಜಾತಿಗಳಲ್ಲಿ ಆತ್ಮವಿಶ್ವಾಸವನ್ನು ಬಿತ್ತಿ ಅದರ ಬಲದಿಂದಲೇ ಪರ‍್ಯಾಯ ರಾಜಕಾರಣವನ್ನು ಕಟ್ಟಿದರು.  ರಾಜಕೀಯ ಗೆಲುವು ಸಾಧಿಸುತ್ತಾ ಬಂದ ಅರಸು ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಲ್ಲಿಸಿ ಇಂದಿರಾಗಾಂಧಿ ಎಂಬ ದೈತ್ಯ ನಾಯಕಿಗೆ ರಾಜಕೀಯ ಮರುಹುಟ್ಟು ಕೊಡುವ ಮೂಲಕ ಭಾರತದ ರಾಜಕಾರಣದಲ್ಲಿ ತನಗಿದ್ದ ಜನಶಕ್ತಿಯನ್ನು ಸಾಬೀತು ಪಡಿಸಿದರು.  ಇಂದಿರಾಗಾಂಧಿ ಅವರ ವಿರೋಚಿತ ಗೆಲುವಿನ ಹಿಂದಿದ್ದ ಅರಸು ಅವರ ಖ್ಯಾತಿ ಇಮ್ಮಡಿಸಿತು. ಆದರೆ ಸಂಚುಗಳನ್ನು ಅರಿಯದ ಮುಗ್ಧ ಅರಸು ಅವರು ಇಂದಿರಾಗಾಂಧಿ ಕೂಟದ ಸಂಚಿಗೆ ಬಲಿಯಾಗಿ ಪಕ್ಷದಿಂದಲೇ ಹೊರಬಿದ್ದರು.

“ಬಡವರಿಗಾಗಿ ನಾವು ಏನೂ ಮಾಡದೆ ಹೋದರೆ ಅವರ ಬಿಸಿಯುಸಿರಿನಲ್ಲಿ ಸುಟ್ಟು ಹೋಗುತ್ತೇವೆ. ಶೇ. 10 ರಷ್ಟು ಇರುವ ಮೇಲ್ವರ್ಗದ ಜನ ಕೈ ಕಟ್ಟಿ ಕುಳಿತರೆ ಯಾವ ಅನಾಹುತವೂ ಆಗುವುದಿಲ್ಲ. ಆದರೆ ಈ ದುಡಿಮೆಗಾರರೆಲ್ಲ ಒಂದು ವರ್ಷ ಕೈ ಕಟ್ಟಿ ಕುಳಿತರೆ ಇಡೀ ಸಮಾಜ ಸತ್ತು ಹೋಗುತ್ತದೆ. ಆದುದರಿಂದ ದುಡಿಯುವ ವರ್ಗಕ್ಕೆ ಸಲ್ಲಬೇಕಾದ ಗೌರವ, ಪ್ರತಿಫಲ, ನೆಮ್ಮದಿಯನ್ನು ಒದಗಿಸಿಕೊಡದಿದ್ದರೆ ಸರಕಾರಗಳು ಯಾತಕ್ಕಾದರೂ ಇರಬೇಕು”

~ ಡಿ. ದೇವರಾಜ ಅರಸು

ಅಪ್ಪಟ ಸ್ವಾಭಿಮಾನಿ ಅರಸು ಕಾಂಗ್ರೆಸ್ ತೊರೆದು  ಸಮಾಜವಾದಿ ಚಳವಳಿಯ ತಾತ್ವಿಕ ನಿಲುವುಗಳನ್ನು ಬೆಂಬಲಿಸುವ ಮೂಲಕ ಕ್ರಾಂತಿರಂಗವನ್ನು ಬಲಪಡಿಸುವ ಕೆಲಸಕ್ಕೆ ಕೈ ಹಾಕಿದ್ದು ಒಂದು ಸಾಹಸ.  ಯಾವ ಅರಸು ತಮ್ಮೊಳಗಿನ ಆತ್ಮ ಬಲ, ಛಲ ಅದಕ್ಕೂ ಮಿಗಿಲಾದ ಬಹುಜನರ ಬಗೆಗಿನ ಬದ್ಧತೆಯಿಂದ  ದಲಿತ-ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಅಸ್ಮಿತೆಯ ಬೀಜ ಬಿತ್ತಿದರೋ, ಸಾಮಾಜಿಕ ನ್ಯಾಯದ ಹಕ್ಕುದಾರಿಕೆಯನ್ನು ಹೆಪ್ಪುಗಟ್ಟಿಸಿದರೋ ಅದೇ ದಲಿತ-ಹಿಂದುಳಿದ ವರ್ಗಗಳ ರಾಜಕೀಯ ನಾಯಕರುಗಳಾದ ವೀರಪ್ಪ ಮೊಯ್ಲಿ, ಧರಂ ಸಿಂಗ್, ಬಂಗಾರಪ್ಪ, ಖರ್ಗೆ ಸೇರಿದಂತೆ 35 ಕ್ಕೂ ಹೆಚ್ಚು ಶಾಸಕರುಗಳು ಅರಸು ಅವರನ್ನು ಹೊತ್ತಲ್ಲದ ಹೊತ್ತಲ್ಲಿ ಇರಿದು ಹೋದರು.

ಬಲಾಢ್ಯ ಜಾತಿಗಳು  ಅರಸು ವಿರುದ್ದ ಪಿತೂರಿಗಿಳಿದವು.  ಇದಾವುದಕ್ಕೂ ತಲೆ ಕೆಡಿಸಿಕೊಳ್ಳದ ಅರಸು ಅವರು ಪ್ರವಾಹದ ವಿರುದ್ಧ ಈಜುವಂತೆ ರಾಜಕೀಯ ಬದುಕಿನಲ್ಲಿ ಈಜುತ್ತಲೆ ಇದ್ದರು. ಕೊನೆಗಾಲದಲ್ಲಿ ರಾಜಕೀಯ ಕಾರಣಕ್ಕಾಗಿ ದೆಹಲಿಗೆ ಹೋಗಲು ವಿಮಾನದ ಟಿಕೆಟ್ ಗೂ ಅವರಲ್ಲಿ ದುಡ್ಡಿರಲಿಲ್ಲ ಎಂದರೆ ನಂಬಲಾದೀತಾ? ಇದುವರೆಗೂ ವಿಮಾನ ಬುಕ್ ಮಾಡುತ್ತಿದ್ದ ಏಜೆನ್ಸಿ ಸಾಲ ಜಾಸ್ತಿಯಾಗಿದೆ ಎಂದು ಎಂಟು ವರ್ಷ ಈ ನಾಡಿನ ಸುಭಿಕ್ಷೆಗಾಗಿ ಆಳಿದ, ಅಸಂಖ್ಯಾತ ಜನರ ಬದುಕನ್ನು ಬೆಳಕಾಗಿಸಿದ ಅರಸು ಎಂಬ ನಾಯಕನಿಗೆ ಒಂದು ವಿಮಾನದ ಟಿಕೆಟ್ ಬುಕ್ ಮಾಡಲು ನಿರಾಕರಿಸಿತು. ಜೇಬಿನಲ್ಲಿ ದುಡ್ಡು, ಹೊಲ, ಗದ್ದೆ, ಮಹಲುಗಳಿಲ್ಲದೆ ಅರಸು ಬದುಕಿರುವಾಗ ಅವರು ಕರ್ನಾಟಕವನ್ನು ಲೂಟಿ ಹೊಡೆದ ಭ್ರಷ್ಟಾಚಾರಿ ಎಂದು ಮನುವ್ಯಾಧಿ ಪತ್ರಕರ್ತರು, ಪತ್ರಿಕೆಗಳು ಅವರ ವಿರುದ್ಧ ಜಾತಿಯ ಸೇಡು ಬಗೆಯುತ್ತಿದ್ದವು. ಇದು ಕರ್ನಾಟಕದ ಪತ್ರಿಕೋದ್ಯಮ ಈ ನಾಡಿನ ಜನನಾಯಕನೊಬ್ಬನಿಗೆ ಬಗೆದ ದ್ರೋಹವೇ ಆಗಿತ್ತು.

ಅರಸು ಕೂಡ ಕಲ್ಯಾಣದ ಬಸವಣ್ಣನಂತೆ ವಿದ್ರೋಹಗಳಿಗೆ ತುತ್ತಾಗಿ ನಲುಗಿದರು. ಅದು 1982ನೇ ಇಸವಿ. ಅರಸು ಯುಗ ಪುನರುತ್ಥಾನಗೊಳ್ಳುವ ಕಾಲಘಟ್ಟ. ರಾಷ್ಟ್ರ ರಾಜಕಾರಣವೂ ಅರಸು ಇದ್ದ ಕರ್ನಾಟಕದತ್ತ ನೋಡುತ್ತಿತ್ತು. ಈ ನಾಡಿನ ಸಾಮಾಜಿಕ ಮತ್ತು ರಾಜಕೀಯದ ಮತ್ತೊಂದು ಅಭಿವೃದ್ಧಿ ಪರ್ವ ಎದ್ದುನಿಲ್ಲುವ ಸಂದರ್ಭದಲ್ಲಿ ಯುಗ ಪುರುಷ ದೇವರಾಜ ಅರಸು ಎಂಬ ‘ತಂದೆಯನ್ನು’ ಕಳೆದು ಕೊಂಡ ತಬ್ಬಲಿ ಜಾತಿಗಳು  ಕಣ್ಣೀರಿನ ಮಡುವಿಗೆ ಬಿದ್ದವು.

ಅರಸು ಅವರ ದಿಟ್ಟ ಸೈದ್ಧಾಂತಿಕತೆ ಕಾರಣದಿಂದಲೇ ಜಾತಿ ವ್ಯವಸ್ಥೆಯ ಗುಲಾಮಗಿರಿಯಿಂದ ಮುಕ್ತಿಗೊಂಡು ಸುಖವುಂಡ ಜನಜಾತಿ ಸಮುದಾಯಗಳು ಮತ್ತು ಅರಸು ಹೆಸರೇಳಿಕೊಂಡೆ ರಾಜಕೀಯ ಅಸ್ತಿತ್ವ ಉಳಿಸಿಕೊಂಡ ಹಿಂದುಳಿದ- ದಮನಿತ ಸಮುದಾಯಗಳ ಸೋಕಾಲ್ಡ್ ನಾಯಕರುಗಳು ವರ್ತಮಾನದ ರಾಜಕಾರಣದಲ್ಲಿ ಅರಸು ವಿಚಾರಧಾರೆಯ ವಿರೋಧಿ ರಾಜಕೀಯ ಚಕ್ರಾಧಿಪತ್ಯಕ್ಕೆ, ಜಾತಿ ವ್ಯವಸ್ಥೆ ಮತ್ತು ಧರ್ಮ ರಕ್ಷಕರ ಪರಿವಾರಕ್ಕೆ ಸೇರುತ್ತಾ , ನೀರೆರೆಯುತ್ತಾ ಕೃತಘ್ನರಂತೆ ವರ್ತಿಸುತ್ತಿರುವುದು ಘೋರ ವಿಪರ್ಯಾಸ.

‘ದೇವರಾಜ ಅರಸು’ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಬದುಕಿನ ದೊಡ್ಡ ಪರಿವರ್ತಕ ಶಕ್ತಿ. ಅರಸು ಅವರ 107ನೆಯ ಜನ್ಮದಿನದ ಈ ಸಂದರ್ಭದಲ್ಲಿ ದೇವರಾಜ ಅರಸು ಅವರು ಕಟ್ಟಿಕೊಟ್ಟ  ಬಹುಜನ ರಾಜಕಾರಣವನ್ನು , ಸೌಹಾರ್ದ ಕರ್ನಾಟಕವನ್ನು ಉಳಿಸಿಕೊಳ್ಳುವ , ಮುನ್ನಡೆಸುವ ದೊಡ್ಡ  ಸವಾಲು ಮತ್ತು ಹೊಣೆಗಾರಿಕೆ ಈ ನಾಡಿನ  ದಲಿತ, ದಮನಿತ ಮತೀಯ ಅಲ್ಪಸಂಖ್ಯಾತ ಸಮುದಾಯಗಳ ಮುಂದಿದೆ. ಅದನ್ನು ಸಾಕಾರಗೊಳಿಸಿದ್ದೇ ಅದರೆ ಅದುವೇ ದೇವರಾಜ ಅರಸು ಎಂಬ ತಬ್ಬಲಿ ಜಾತಿಗಳ ತಂದೆಗೆ ಸಲ್ಲಿಸಬಹುದಾದ ನಿಜ ಗೌರವ. ದೇವರಾಜ ಅರಸು ಅವರ ತ್ಯಾಗ, ಹೋರಾಟದ ಮುಂಬೆಳಕಲ್ಲಿ ಕರ್ನಾಟಕವನ್ನು ಮುನ್ನಡೆಸಲು ಸಂಕಲ್ಪ ಮಾಡಬೇಕಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಎನ್.ರವಿಕುಮಾರ್
ಕಳೆದ 28‍ ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರು. ಕವಿ, ಸಾಮಾಜಿಕ ಹೋರಾಟಗಾರ ಹಾಗೂ ‘ಶಿವಮೊಗ್ಗ ಟೆಲೆಕ್ಸ್’ ಕನ್ನಡ ದಿನಪತ್ರಿಕೆಯ ಸಂಪಾದಕ.

‘ಕರ್ನಾಟಕ’ದ ಚರಿತ್ರೆ ಬದಲಿಸಿದ ಅಂತಃಕರಣದ ಅರಸು
ಅರಸು ಅವರು ಜಾರಿ ಮಾಡಿದ ಭೂಸುಧಾರಣೆಯ ಕಾರಣಕ್ಕೆ 7,80,000 ಕ್ಕಿಂತ ಹೆಚ್ಚಿನ ಬಡ ಗೇಣಿದಾರರು ಭೂಮಾಲಿಕರಾದರು. ಈ ಭೂಮಾಲಿಕರ ಮಕ್ಕಳು ಇಂದು ಶಾಲೆ ಕಲಿತು ಉದ್ಯೋಗ ಹಿಡಿದಿದ್ದಾರೆ. ಹಾವನೂರು ವರದಿಯ ಮೂಲಕ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿದರು, ಈ ಮೀಸಲಾತಿ ಬಳಸಿಕೊಂಡು ಇಂದು ಲಕ್ಷಾಂತರ ಯುವಕ ಯುವತಿಯರು ಹುದ್ದೆ ಹಿಡಿದು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಜೀತ ಪದ್ದತಿ ನಿರ್ಮೂಲನೆಯಿಂದ ಧಣಿಗಳ ಮನೆಯಲ್ಲಿ ದುಡಿಯಬೇಕಾದ ಎಷ್ಟೋ ಯುವಕ-ಯುವತಿಯರು ವಿದ್ಯಾವಂತರಾಗಿದ್ದಾರೆ. ಮಲಹೊರುವ ಪದ್ಧತಿಯ ನಿಶೇಧದಿಂದ ದಲಿತ ಮಕ್ಕಳಿಗೆ ಇಂತಹದ್ದೊಂದು ಅಸಹ್ಯ ಕಲ್ಪನೆಗೂ ಬರದೆ ಬದುಕು ಕಟ್ಟಿಕೊಂಡಿದ್ದಾರೆ. ಭಾಗ್ಯಜ್ಯೋತಿ ಯೋಜನೆಯಲ್ಲಿ ಕೋಟ್ಯಾಂತರ ಮನೆಗಳು ಬೆಳಗಿವೆ. ಹಿಂದುಳಿದ, ದಲಿತ, ದಮನಿತ, ಅಲ್ಪಸಂಖ್ಯಾತ, ಬುಡಕಟ್ಟು ಆದಿವಾಸಿಗಳನ್ನು ಒಳಗೊಂಡಂತೆ ಅಧಿಕಾರ ರಹಿತ ಅಂಚಿನ ಸಮುದಾಯಗಳ ಇಂದಿನ ಹೊಸ ತಲೆಮಾರು ಅರಸು ಕಾಲದ ಕ್ರಾಂತಿಕಾರಿ ಯೋಜನೆಯ ಫಲಾನುಭವಿಗಳಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಹೊತ್ತಿನ ಹೊಸತಲೆಮಾರಿನ ಕರ್ನಾಟಕ ಅದು `ಅರಸು ಕರ್ನಾಟಕ’.

ಮೊದಲಿಗೆ ನನಗೆ ಅರಸು ಕುರಿತು ತಿಳಿಯುವ ಸಂದರ್ಭ ಒದಗಿದ್ದು 2007 ರಲ್ಲಿ. ಆಗ ನಾನು 1973 ರಲ್ಲಿ ಸಮಾಜವಾದಿಗಳು ನಡೆಸಿದ ಸಂಡೂರು ಭೂ ಹೋರಾಟದ ಬಗ್ಗೆ ಸಂಶೋಧನೆ ಮಾಡತೊಡಗಿದೆ. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಪ್ರೊ.ಬಿ.ಎ.ವಿವೇಕ ರೈ ಅವರು ಮತ್ತು ರಾಮಮನೋಹರ ಲೋಹಿಯಾ ಅಧ್ಯಯನ ಪೀಠದ ಆಗಿನ ಸಂಚಾಲಕರಾಗಿದ್ದ ಪ್ರೊ.ರಹಮತ್ ತರೀಕೆರೆ ಅವರು ನನಗೆ ಈ ಜವಾಬ್ದಾರಿಯನ್ನು ವಹಿಸಿದ್ದರು. ಪಿಹೆಚ್.ಡಿ ಮಾಡುವ ಹಂತದಲ್ಲೆ ಯುನಿವರ್ಸಿಟಿಯ ಪುಸ್ತಕ ಬರೆವ ಸದಾವಕಾಶ ಒದಗಿದ್ದಕ್ಕೆ ಉತ್ಸಾಹದಲ್ಲಿ ಈ ಸಂಶೋಧನೆ ಕೈಗೊಂಡೆ. ಈ ಸಂಶೋಧನೆಗಾಗಿ ಮಾಡಿದ ರೈತರ ಸಂದರ್ಶನಗಳಲ್ಲಿ ಮೊದಲು ಅರಸು ಅವರ ಬಗ್ಗೆ ತಿಳಿದೆ. ಅಂತೆಯೇ ಈ ಸಂಶೋಧನೆಗಾಗಿ ವಿಧಾನಸೌಧದಲ್ಲಿ ಅಸೆಂಬ್ಲಿ ಡಿಬೇಟಿನ ಸಂಪುಟಗಳನ್ನು ಅಧ್ಯಯನ ಮಾಡಬೇಕಾಯಿತು.

ಹದಿನೈದು ದಿನ ವಿಧಾನಸೌಧದಲ್ಲಿ ಕುಳಿತು ಅಧ್ಯಯನ ಮಾಡುವಾಗ ದೇವರಾಜ ಅರಸು ಅವರ ಅಸೆಂಬ್ಲಿಯಲ್ಲಿ ಮಾತನಾಡುತ್ತಿದ್ದ ಮಾತುಗಳು ಕಣ್ಣಿಗೆ ಕಟ್ಟಿದಂತೆ ಚಿತ್ರಗಳು ಬರತೊಡಗಿದ್ದವು. ಯಾವುದೇ ವಿಷಯವನ್ನು ಸಾಮಾಜಿಕ ನ್ಯಾಯದ ನೆಲೆಯಲ್ಲಿ ವಿಶ್ಲೇಷಿಸುವುದು, ಆಳವಾದ ಅಧ್ಯಯನದ ನೆಲೆಯಲ್ಲಿ ಸಮಸ್ಯೆಯನ್ನು ವಿವರಿಸುವುದು, ಬೇರೆಯವರ ಪ್ರಶ್ನೆಗಳನ್ನು ಸಮಚಿತ್ತದಿಂದ ಕೇಳಿಸಿಕೊಳ್ಳುವುದು, ಅಷ್ಟೇ ಸಾವಧಾನದಿಂದ ಪ್ರಶ್ನೆಗಳಿಗೆ ಪ್ರಬುದ್ಧವಾಗಿ ಉತ್ತರಿಸುವುದು. ಈ ಎಲ್ಲವನ್ನೂ ಓದುತ್ತಾ ಹೋದಂತೆ ನನ್ನೊಳಗೆ ಅರಸು ಚಿತ್ರಗಳು ಮೂಡತೊಡಗಿದವು. ಆದರೆ ಅರಸು ಅವಧಿಯಲ್ಲೆ ನಡೆದ `ಸಂಡೂರು ಭೂ ಹೋರಾಟಕ್ಕೆ’ ಅರಸು ಸ್ಪಂದಿಸದಾದರು. ಕಾರಣ ಸಂಡೂರಿನ ಎಂ.ವೈ ಘೋರ್ಪಡೆಯವರು ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದರು. ಅಂತೆಯೇ ಇಂದಿರಾಗಾಂಧಿಯವರ ಜತೆ ಅತ್ಯುತ್ತಮ ಒಡನಾಟವಿತ್ತು. ಈ ಸಂದರ್ಭದಲ್ಲಿ ಅರಸು ಅವರಿಗೆ ಘೋರ್ಪಡೆ ವಿರುದ್ಧ ನಿಲುವು ತಾಳುವುದು, ತಮ್ಮದೆ ಪಕ್ಷದ ವಿರುದ್ಧ ನಡೆದಂತಾಗುತ್ತಿತ್ತು. ಹಾಗಾಗಿ ಅರಸು ಮೌನ ತಾಳಿದರು. ಆ ಸಂದರ್ಭಕ್ಕೆ ಸಂಡೂರಿನ ರೈತರ ಕಣ್ಣಲ್ಲಿ ಅವರು ವಿಲನ್ ಆದ ಅರಸು ಭೂಸುಧಾರಣ ಕಾಯ್ದೆಯಿಂದ ಮತ್ತೆ ಅವರ ಗೌರವಕ್ಕೆ ಪಾತ್ರರಾದರು. ಕಾರಣ ಘೋರ್ಪಡೆ ವಂಶಸ್ಥರ ಸುಮಾರು 15 ಸಾವಿರ ಎಕರೆ ಭೂಮಿ ರೈತರಿಗೆ ದಕ್ಕಿತು. ನಾನು ಈ ಕೃತಿಯಲ್ಲಿ ಅರಸು ಅವರ ಮೌನದ ಬಿಕ್ಕಟ್ಟಿನ ಬಗ್ಗೆ ವಿಮರ್ಶಿಸಿ ಬರೆದೆ. ಈ ಕೃತಿ 2008 ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟವಾಯಿತು. ಆಗ ನನ್ನೊಳಗೆ ಅರಸು ಕುರಿತ ಕೆಲವು ಬ್ಲಾಕ್ ಅಂಡ್ ವೈಟ್ ಚಿತ್ರಗಳು ಮೂಡಿದ್ದವು.

ಎರಡನೆಯದಾಗಿ, 2019 ರಲ್ಲಿ ಕನ್ನಡ ವಿಶ್ವವಿದ್ಯಾಲಯ ದೇವರಾಜ ಅರಸು ಬಗ್ಗೆ ಒಂದು ಸೆಮಿನಾರ್ ಆಯೋಜನೆಗೊಂಡಿತ್ತು. ಆಗಿನ ಕುಲಪತಿಗಳಾಗಿದ್ದ ಪ್ರೊ.ಮಲ್ಲಿಕಾ ಘಂಟಿ ಅವರು ನನಗೆ ಅರಸು ಕುರಿತಂತೆ ಮಾತನಾಡಲು ಅವಕಾಶ ಕಲ್ಪಿಸಿದ್ದರು. ಈ ಮಾತಿಗಾಗಿ ನಾನು ಗ್ರಂಥಾಲಯದಲ್ಲಿ ಅರಸು ಕುರಿತ ಲಭ್ಯ ಪುಸ್ತಕಗಳನ್ನೆಲ್ಲಾ ಗುಡ್ಡೆಹಾಕಿಕೊಂಡು ಓದಿದೆ. ರಾಷ್ಟ್ರಕವಿ ಕುವೆಂಪು, ಬೇಂದ್ರೆ ಅರಸು ಕುರಿತಂತೆ ಮಾತನಾಡಿದ್ದು ಅಚ್ಚರಿ ಹುಟ್ಟಿಸಿತು. ಅಂದು ನಾನು ಮಾತನಾಡುತ್ತಾ, ಅರಸು ಕಾಲದ ಕೆಲವು ಸುಧಾರಣೆಗಳನ್ನು ನೋಡಿದರೆ, ಟಿಪ್ಪುಸುಲ್ತಾನ್ ತರಬಯಸಿದ ಕೆಲವು ಯೋಜನೆಗಳನ್ನು ಅರಸು ತಂದರು. ಟಿಪ್ಪು ಕನಸುಗಳನ್ನು ಅರಸು ನನಸು ಮಾಡಿದರು ಎಂದು ವಿಶ್ಲೇಷಿಸಿದೆ. ಆಗ ಅರಸು ಕುರಿತಂತೆ ಇನ್ನಷ್ಟು ಆಳವಾದ ವಿಸ್ತಾರವಾದ ಪುಸ್ತಕವೊಂದರ ಅಗತ್ಯವಿದೆ ಅನ್ನಿಸಿತು.

ಪಲ್ಲವ ಪ್ರಕಾಶನದ ಪುಸ್ತಕ

ಕರ್ನಾಟಕದ ರಾಜಕಾರಣದಲ್ಲಿ ಚಾರಿತ್ರಿಕ ಬದಲಾವಣೆಯ ಬೀಜ ಬಿತ್ತಿದ್ದು ನಿಸ್ಸಂಶಯವಾಗಿ ದೇವರಾಜ ಅರಸು. ಅರಸು ಕುರಿತಂತೆ ಸಾಕಷ್ಟು ಚರ್ಚೆ ಸಂವಾದಗಳು, ಬರಹಗಳು, ಅರಸು ಶತಮಾನೋತ್ಸವ ಸಂದರ್ಭದಲ್ಲಿ ಪ್ರಕಟವಾದ ಹಲವು ಪುಸ್ತಕಗಳಿವೆ. ಇಷ್ಟಾಗಿಯೂ ನಿಜಾರ್ಥದಲ್ಲಿ ಅರಸು ಅವರನ್ನು ಎಲ್ಲಾ ಮಗ್ಗಲುಗಳಿಂದ ಕಟ್ಟಿಕೊಡುವ ಪುಸ್ತಕವೊಂದರ ಅಗತ್ಯವಿತ್ತು. ಪಲ್ಲವ ಪ್ರಕಾಶನದ ಕೆ.ವೆಂಕಟೇಶ್ ಅವರು ಪ್ರಕಟಿಸಿರುವ, ಬಸವರಾಜು ಮೇಗಲಕೇರಿ ವಾರ್ತಾಭಾರತಿಗೆ ಸರಣಿ ರೂಪದಲ್ಲಿ ಪ್ರಕಟಿಸಿದ ಸಂದರ್ಶನಗಳ ಸಂಪಾದಿತ ಕೃತಿ `ನಮ್ಮ ಅರಸು’ ಅಂತಹದ್ದೊಂದು ಸಾರ್ಥಕ ಪ್ರಯತ್ನ. ಒನ್ ಬೈ ಫೋರ್ ಸೈಜಿನ 550 ಪುಟಗಳ ಈ ಬೃಹತ್ ಪುಸ್ತಕವನ್ನು ಓದಿದಾಗ ನಮ್ಮೊಳಗೆ ಅರಸು ಅವರ ಅಂತಃಕರಣದ ಎಳೆಗಳು ಆಪ್ತವಾಗಿ ತಾಕುತ್ತವೆ, ಎಷ್ಟೋ ಕಡೆಗಳಲ್ಲಿ ಹೃದಯ ಭಾರವಾಗುತ್ತದೆ, ದುಃಖ ಉಮ್ಮಳಿಸಿ ಕಣ್ಣುಗಳು ಒದ್ದೆಯಾಗುತ್ತವೆ. ಈ ಕೃತಿಯಲ್ಲಿ ಹಾದು ಹೋಗಿರುವ ಅರಸು ವ್ಯಕ್ತಿತ್ವದ ಪ್ರಮುಖ ಎಳೆಗಳನ್ನು ಗುರುತಿಸುವ ಪ್ರಯತ್ನ ಇಲ್ಲಿದೆ.

ಅರಸು ಅವರ ಬಾಲ್ಯದ ಹಿನ್ನೆಲೆಯನ್ನು ಹಲವರು ಹಂಚಿಕೊಂಡಿದ್ದಾರೆ. ಅದರಲ್ಲಿ ಕನ್ನಡದ ಪ್ರಸಿದ್ಧ ಕಾದಂಬರಿಕಾರರಾದ ಅರಸು ಅವರ ಸಂಬಂಧಿಕರಾದ ಚದುರಂಗರ ಮಗ ವಿಕ್ರಂರಾಜೇ ಅರಸ್ ಅವರು ಹೇಳುವಂತೆ, ಕಲ್ಲಹಳ್ಳಿ ಒಂದು ಕಾಲಕ್ಕೆ ಜೈನರ ನಾಡು. ಈಗಲೂ ಕಲ್ಲಹಳ್ಳಿಯಲ್ಲಿ ಎಂಟನೆ ತೀರ್ಥಂಕರ ಚಂದ್ರನಾಥ ಬಸದಿ ಇದೆ. ನಮ್ಮದು ಜೈನ ಕ್ಷತ್ರಿಯ ಪರಂಪರೆ. ನಾವು ಖ್ಯಾತ ಕವಿ ಮಂಗರಸನ ವಂಶಕ್ಕೆ ಸೇರಿಸವರು. ಎಂದು ಹೇಳುತ್ತಾರೆ. ಅರಸು ಅವರ ಹುಟ್ಟಿದೂರು ಬೆಟ್ಟದತುಂಗ. ಅವರ ತಂದೆಯ ಹೆಸರು ದೇವರಾಜ ಅರಸು ತಾಯಿ ದೊಡ್ಡಮ್ಮಣ್ಣಿ. ದೊಡ್ಡಬಳ್ಳಾಪುರದವರಾದ ಟಿ.ಸಿದ್ಧಲಿಂಗಯ್ಯನವರು ಮೈಸೂರು ಕಾಂಗ್ರೇಸ್ ಅಧ್ಯಕ್ಷರಾಗಿದ್ದರು. ಅವರು 1947-48 ರಲ್ಲಿ ದೇವರಾಜ ಅರಸು ಅವರನ್ನು ಕಲ್ಲಳ್ಳಿಗೆ ಹೋಗಿ ಕಾಂಗ್ರೇಸ್ ಪಕ್ಷಕ್ಕೆ ಕರೆತರುತ್ತಾರೆ. ಆಗ ಬಿಎಸ್ಸಿ ಮುಗಿಸಿ ಕೃಷಿ ಮಾಡುತ್ತಿರುವ ಅರಸರ ರಾಜಕೀಯ ಪ್ರವೇಶವಾಗುತ್ತದೆ. ಅಲ್ಲಿಂದ ಅರಸು ಕಾಲ ಆರಂಭವಾಗುತ್ತದೆ.

ಅಧಿಕಾರ ರಹಿತರು ಮುನ್ನೆಲೆಗೆ..

ಅರಸು ಕರ್ನಾಟಕ ರಾಜಕಾರಣದ ದಿಕ್ಕನ್ನು ಬದಲಿಸಿದ ಸಂಗತಿಯೆಂದರೆ ಅಧಿಕಾರ ರಹಿತ ಜನರ ಮನೆ ಬಾಗಿಲಿಗೆ ಅಧಿಕಾರವನ್ನು ಒಯ್ದು ಹಂಚಿದ್ದು. 1972ರ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ರಹಿತ ಅಂಚಿನ 70 ಜನ ಹೊಸಬರಿಗೆ ಸೀಟ್ ಕೊಟ್ಟರು. ಕುರುಬರ ಡಿ.ಕೆ.ನಾಯ್ಕರ್, ದೇವಾಡಿಗರ ವೀರಪ್ಪ ಮೊಯ್ಲಿ, ಕೋಲಿ ಸಮಾಜದ ಘಾಳಪ್ಪ, ಬಂಜಾರ ಸಮುದಾಯದ ರಾಠೋಡ್, ಎಡಗೈ ದಲಿತರ ಆರ್.ಡಿ ಕಿತ್ತೂರ, ಬೆಸ್ತರ ಮನೋರಮಾ ಭಾರದ್ವಾಜ್, ಕ್ರಿಶ್ಚಿಯನ್ನರ ಇ.ಇ.ವಾಜ್, ಒಕ್ಕಲಿಗರ ಹೆಚ್.ಎನ್. ನಂಜೇಗೌಡ, ಬಂಟರ ಸುಬ್ಬಯ್ಯ ಶೆಟ್ಟಿ, ಮುಸ್ಲಿಂ ಅಜೀಜ್ ಶೇಟ್, ಮಹಮದ್ ಅಲಿ, ನಾಯ್ಡು ಕಮುನಿಟಿಯ ರಾಮುಲು- ಹೀಗೆ ಮೊದಲಬಾರಿಗೆ ಚುನಾವಣೆ ಎದುರಿಸಿ ಗೆದ್ದು ಬಂದರು.

ಡಿ. ದೇವರಾಜ್‌ ಅರಸ್

1978ರ ಚುನಾವಣೆಯಲ್ಲಿ 40 ರಷ್ಟು ಅಂಚಿನ ಸಮುದಾಯದ ಹೊಸ ನಾಯಕರು ಅರಸರ ಕಾರಣಕ್ಕೆ ವಿಧಾನಸಭೆಗೆ ಆಯ್ಕೆಯಾದರು. ಕೋಲಾರದ ವಡ್ಡರ ಸಮುದಾಯದ ವೆಂಕಟೇಶಪ್ಪ ತಾಲೂಕು ಬೋರ್ಡ್ ಮೆಂಬರ್ ಆಗಿದ್ದವ ಶಾಸಕನಾಗುತ್ತಾನೆ, ಬೆಳಗಾವಿಯಲ್ಲಿ 1970 ರಲ್ಲಿ ದಲಿತ ನಾಯಕ ಬಿ.ಶಂಕರಾನಂದರನ್ನು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರನ್ನಾಗಿ ನೇಮಿಸಿ, ಲಿಂಗಾಯತ ಎಸ್.ಬಿ.ಸಿದ್ನಾಳ್ ಅವರನ್ನು ಕಾರ್ಯದರ್ಶಿ ಮಾಡುತ್ತಾರೆ. ಹೀಗೆ ಹೆಚ್.ವಿಶ್ವನಾಥ, ವೀರಣ್ಣ ಮತ್ತೀಕಟ್ಟಿ, ಬಿ.ಎ.ಮೋಹಿದ್ದೀನ್, ರಮೇಶ್ ಕುಮಾರ್ ಮುಂತಾದವರು ತಮ್ಮ ರಾಜಕೀಯ ಜೀವನ ಆರಂಭಿಸುತ್ತಾರೆ. 1970 ರಲ್ಲಿ ಮೂರು ಉಪ ಚುನಾವಣೆಗಳು ನಡೆದವು. ಅದರಲ್ಲಿ ಶಿವಾಜಿನಗರದ ಕೋಲ್ಸ್ ಫಾರ್ಕಿನಲ್ಲಿ ಕಡಲೆಕಾಯಿ ಮಾರಿ ಜೀವನ ಸಾಗಿಸುತ್ತಿದ್ದ ಹಮೀದ್ ಷಾ ಎನ್ನುವವರನ್ನು ನಿಲ್ಲಿಸುತ್ತಾರೆ. ಇದನ್ನು ನೋಡಿ ಪ್ರತಿಪಕ್ಷದವರು ನಗುತ್ತಾರೆ. ಆದರೆ ಷಾ 10 ಸಾವಿರ ಲೀಡಲ್ಲಿ ಗೆಲ್ಲುತ್ತಾರೆ. 1971 ರ ಲೋಕಸಭಾ ಚುನಾವಣೆಯಲ್ಲೂ ಹಾಗೆಯೆ, ತುಮಕೂರಲ್ಲಿ ಕುಂಚುಟಿಗರ ಮಲ್ಲಣ್ಣ, ಬಾಗಲಕೋಟೆ-ಬಿಜಾಪುರ ಕ್ಷೇತ್ರದಿಂದ ಮೀನುಗಾರ ಸಮುದಾಯದ ಬಿ.ಇ.ಚೌದರಿ ಗೆಲ್ಲುತ್ತಾರೆ. ಈ ಎರಡು ಚುನಾವಣೆಗಳು ಕರ್ನಾಟಕದ ರಾಜಕಾರಣದಲ್ಲಿ ಅಧಿಕಾರ ರಹಿತ ಸಮುದಾಯಗಳು ಅಧಿಕಾರಕ್ಕೆ ಪ್ರವೇಶಿಸಿದ ಚಾರಿತ್ರಿಕ ಘಟ್ಟಗಳು. ಇದನ್ನೆಲ್ಲಾ ಸಾಧ್ಯವಾಗಿಸಿದ್ದು ಅರಸು. ಅರಸು ಆಗ ಆರಿಸಿದ ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್, ಮತ್ತು ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳಾದರು. ಈ ಸಮೀಕರಣ ಸಾಧ್ಯವಾದದ್ದು ಅರಸು ಅವರ ಮುನ್ನೋಟದ ದೃಷ್ಟಿಕೋನದ ಫಲ.

ಪತ್ರಕರ್ತರಾಗಿದ್ದ ಡಿ.ವಿ ರಾಜಶೇಖರ್ `ಅರಸು ಲೋಹಿಯಾವಾದದ ಒಂದು ಎಳೆ, ಕಮ್ಯುನಿಸಮ್‍ನ ಒಂದು ಎಳೆಯನ್ನು ಎತ್ತಿಕೊಂಡು, ತಮ್ಮದೇ ಆದ ಒಂದು ಹೊಸ ವರ್ಗವೊಂದನ್ನು ಹುಟ್ಟುಹಾಕಲು ಪ್ರಯತ್ನಿಸಿದ್ದರು. ಇದರಲ್ಲಿ ಸೋಷಿಯಲ್ ಇಂಜಿನಿಯರಿಂಗ್ ಕೂಡ ಇತ್ತು. ಇದನ್ನು ಕರ್ನಾಟಕದ ರಾಜಕಾರಣದಲ್ಲಿ ಜಾರಿಗೆ ತಂದರು. ಅಲ್ಲಿಯವರೆಗೆ ಜಾತಿಯ ಆಧಾರದ ಮೇಲೆ ನಡೆಯುತ್ತಿದ್ದ ರಾಜಕಾರಣವನ್ನು ಪಕ್ಕಕ್ಕಿಟ್ಟು, ಸಣ್ಣಪುಟ್ಟ ಜಾತಿಯವರನ್ನೆಲ್ಲಾ ಒಂದುಗೂಡಿಸಿ, ಅದಕ್ಕೆ ಹಿಂದುಳಿದ ವರ್ಗ, ಬ್ಯಾಕ್ ವರ್ಡ ಕ್ಲಾಸ್ ಎಂದು ಹೆಸರಿಸಿ, ಆ ವರ್ಗದ ಶಾಸಕರ ಸಂಖ್ಯೆಯನ್ನು ಹೆಚ್ಚಿಸಿ, ಆ ವರ್ಗಕ್ಕೆ ಶಕ್ತಿ ತುಂಬಿ, ಸಧೃಡಗೊಳಿಸಿ, ಆ ಮೂಲಕ ಮೇಲ್ಜಾತಿಗಳನ್ನು ನಿಯಂತ್ರಣದಲ್ಲಿಟ್ಟು ರಾಜಕಾರಣ ಮಾಡುವುದು ಅರಸರ ದೂರದೃಷ್ಟಿಯಾಗಿತ್ತು ಎಂದು ಗುರುತಿಸುತ್ತಾರೆ.

ಅಂತಃಕರಣದ ಅರಸು

ಎಸ್.ಸಿದ್ನಾಳ್ ಉಲ್ಲೇಕಿಸುವ ಒಂದು ಘಟನೆ: ಒಮ್ಮೆ ನಾನು ಅರಸು ಕಾಣಲು ಬೆಂಗಳೂರಿಗೆ ಹೋಗಿದ್ದೆ, ಅವರ ಮನೆ ಬಾಲಬ್ರೂಯಿಯ ಹೊರಗೆ ನಿಂತಿದ್ದೆ. ಅಲ್ಲಿಗೆ ಒಬ್ಬ ಬಡ ವಯಸ್ಸಾದ ಮುದುಕನೊಬ್ಬ ಬಂದು ಅರಸು ಅವರನ್ನು ಬೇಟಿಯಾಗಬೇಕೆಂದು ಗೇಟಿನಲ್ಲಿದ್ದ ಪೋಲೀಸರಿಗೆ ಹೇಳಿ, ಹೊರಗೆ ಕಾಯುತ್ತಾ ಕುಳಿತಿದ್ದ. ಆತನನ್ನು ಗಮನಿಸಿದರೆ ಆತ ಕಣ್ಣಿಲ್ಲದ ಕುರುಡ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿತ್ತು. ಮನೆಯೊಳಗಿನಿಂದ ಸಿದ್ಧರಾಗಿ ಅರಸು ಹೊರಬಂದರು. ಇನ್ನೇನು ವಿಧಾನ ಸೌಧಕ್ಕೆ ಹೊರಡಬೇಕು, ಆಗ ಗೇಟಿನ ಬಳಿ ನಿಂತ ಆ ವ್ಯಕ್ತಿಯನ್ನು ಗಮನಿಸಿದರು. ಅಷ್ಟೇ ಅಲ್ಲ ಅವರೆ ಸ್ವತಃ ಆತನ ಬಳಿ ಹೋಗಿ,ಅಜ್ಜಪ್ಪ ಏನಾಗಬೇಕು? ಎಂದು ಕೇಳಿದರು. ಆ ಮುದುಕನಿಗೆ ಇವರೆ ಅರಸು ಅಂತ ಗೊತ್ತಿರಲಿಲ್ಲ. ಏನಪ್ಪಾ ಇಲ್ಲಿ ಯಾರೋ ದೊರೆ ಅರಸು ಅಂತ ಇದ್ದಾರಂತಲ್ಲಾ, ನನ್ನನ್ನು ಅವರ ಬಳಿ ಕರೆದುಕೊಂಡು ಹೋಗಪ್ಪ’ ಎಂದರು. ಅರಸುಅವರನ್ನು ಯಾಕೆ ನೋಡಬೇಕು ಅಜ್ಜ’ ಎನ್ನುತ್ತಾರೆ. ಈ ವರ್ಷ ಮಳೆ ಆಗಲಿಲ್ಲ, ಮೊಮ್ಮಗಳ ಮದುವೆ ಇದೆ. ಅವರ ಅಪ್ಪ ತೀರಿಕೊಂಡ. ನಾನು ಮುದುಕ. ಈಗ ದುಡಿಯಲು ಆಗುತ್ತಿಲ್ಲ. ಅದಕ್ಕೆ ದೊರೆ ಹತ್ತಿರ ಇದೆಲ್ಲವನ್ನೂ ಹೇಳಿಕೊಂಡರೆ, ಅವರು ಸ್ವಲ್ಪ ಸಹಾಯ ಮಾಡಿದರೆ, ಆಕೆಯ ಮದುವೆ ಮಾಡಿ ನಿಶ್ಚಿಂತೆಯಿಂದ ದೇವರ ಪಾದ ಸೇರಕೋ ಬಹುದು’ ಅಂದರು. ಆ ಬಡ ಮುದುಕನ ಮಾತು ಕೇಳಿದ ಅರಸು ನಾನೇ ಅರಸು ಅಜ್ಜಪ್ಪ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು. ಇದನ್ನು ನೋಡಿ ನನಗೂ ಕಣ್ಣೀರು ಬಂತು. ಸಾವರಿಸಿಕೊಂಡುಸರ್ ನೀವೇ ಹೀಗೆ ಅತ್ತರೆ ಹೇಗೆ ಅಂದೆ. ಸಿದ್ನಾಳ್, ಈ ನಮ್ಮ ಜನರನ್ನು ನಾವು ಯಾವಾಗ ಕಷ್ಟದಿಂದ ಮುಕ್ತಿಗೊಳಿಸೋದು?’ ನಾವು ಎಂದರು. ಅದು ಅಂತಿಂಥ ಮಾತಲ್ಲ. ಕರುಳಿನಿಂದ ಬಂದ ಮಾತು. ಅಲ್ಲಿ ಯಾರೂ ಮಾಧ್ಯಮದವರಿರಲಿಲ್ಲ. ಪ್ರಚಾರಕ್ಕೆ ಕಣ್ಣೀರು ಹಾಕಿದ್ದೂ ಅಲ್ಲ. ಆ ತಕ್ಷಣವೇ ಜೇಬಿಗೆ ಕೈಹಾಕಿ, ಸಿಕ್ಕಷ್ಟು ಕೈಗಿಟ್ಟು,ಹೋಗಿ ಬನ್ನಿ’ ಎಂದರು. ಅಲ್ಲಿದ್ದ ಪೋಲೀಸರಿಗೆ `ಇವರು ಯಾವ ಊರು ಎಂದು ಕೇಳಿ, ಬಸ್‍ಗೆ ಕೂರಿಸಿ ಬನ್ನಿ’ ಎಂದರೆಂದು ಹೇಳುತ್ತಾ, ಯಾರಿದಾರೆ ಇಂಥವರು, ಈಗ? ಎನ್ನುತ್ತಾರೆ. ಇಡೀ ಕೃತಿಯುದ್ಧಕ್ಕೂ ಇಂತಹದ್ದೇ ಘಟನೆಗಳ ಸರಣಿ ಸಿಗುತ್ತವೆ. ಈ ಎಲ್ಲಾ ಘಟನಾವಳಿಗಳು ಅರಸು ಒಬ್ಬ ಅಂತಃಕರಣದ ವ್ಯಕ್ತಿ ಹೇಗೆ ಎನ್ನುವುದನ್ನು ಮನವರಿಕೆ ಮಾಡುತ್ತವೆ.

ಗರುಗಡನಗಿರಿ ನಾಗರಾಜ ಅವರು ಹೇಳುವ ಒಂದು ಘಟನೆ: ಬಿಜಾಪುರದ ಗೆಸ್ಟ್ ಹೌಸಿನಲ್ಲಿ ನಮ್ಮ ವಾಸ್ತವ್ಯ. ಒಂದು ದಿನ ಬೆಳಗ್ಗೆ ಐದು ಗಂಟೆಗೆ ಎದ್ದು ಹೊರಗೆ ಒಂದು ಸಿಗರೇಟ್ ಸೇದುತ್ತಾ ನಿಂತಿದ್ದೆ. ಅಲ್ಲಿಗೆ ಚಡ್ಡಿ, ಜುಬ್ಬ, ತಲೆಗೆ ಟರ್ಕಿ ಟವಲ್ ಸುತ್ತಿಕೊಂಡ ವ್ಯಕ್ತಿ ಬಂದರು. ಹತ್ತಿರ ಬಂದಾಗ ಗೊತ್ತಾಯಿತು ಅವರು ಮುಖ್ಯಮಂತ್ರಿ ಅರಸು ಎಂದು.ಬನ್ನಿ, ಇಲ್ಲೇ ಹೋಗಿ ಬರೋಣ ಎಂದು ಅವರೆ ಕಾರನ್ನು ಡ್ರೈವ್ ಮಾಡಿಕೊಂಡು ಕುಷ್ಠರೋಗಿಗಳ ಪುನರ್ ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅವರಿಗೆ ಇವರು ಯಾರು ಎನ್ನುವುದು ಗೊತ್ತಿಲ್ಲ. ಇವರೂ ಹೇಳಿಕೊಳ್ಳಲಿಲ್ಲ. ಅವರನ್ನೆಲ್ಲ ಕರೆದು, ಊಟ ತಿಂಡಿ ವ್ಯವಸ್ಥೆ ಹೇಗಿದೆ ಎಂದು ಕೇಳಿದರು. ಅಲ್ಲಿದ್ದ ಒಬ್ಬರು, ಒಬ್ಬರಿಗೆ ತಿಂಗಳಿಗೆ 20 ರಿಂದ 25 ರೂಪಾಯಿ ಕೊಡ್ತಾರೆ. ಏನೇನೂ ಸಾಲದು, ಯಾವ ಸೌಕರ್ಯವೂ ಇಲ್ಲ’ ಎಂದರು. ಅಷ್ಟೇ ಎಲ್ಲವನ್ನೂ ಕೇಳಿಸಿಕೊಂಡ ಅರಸು ಸೀದಾ ಗೆಸ್ಟ್ ಹೌಸಿಗೆ ಬಂದವರೆ ಅಧಿಕಾರಿಗಳನ್ನು ಕರೆದು, ಊಟ ತಿಂಡಿಗೆ ಒಬ್ಬ ಕುಷ್ಟ ರೋಗಿಗೆ ಇವತ್ತಿನಿಂದ 50 ರೂಪಾಯಿ ಕೊಡಿ’ ಎಂದರು. ಅಧಿಕಾರಿ ಕಾನೂನಿನ ಪ್ರಕಾರ ಅದು..’ ಅಂದ. ಬಾಯಿ ಮುಚ್ಚು, ನಾನು ಹೇಳಿದ್ದು ಮಾಡು’ ಎಂದರು. ಇಂತಹದ್ದೆ ನೂರಾರು ಘಟನೆಗಳು ಅರಸು ಅವರ ಮಾನವೀಯತೆಯನ್ನು ಎತ್ತಿ ತೋರುತ್ತವೆ. ಹೀಗಾಗಿ ಈ ಕೃತಿಯನ್ನು ಓದುತ್ತಾ ಹೋದಂತೆ ಸಾಕ್ಷ್ಯಚಿತ್ರವೊಂದು ಕಣ್ಮುಂದೆ ಬಿಚ್ಚಿಕೊಂಡಂತಹ ಅನುಭವವಾಗುತ್ತದೆ.

ಎನ್.ಎ ಎಲ್ಲಪ್ಪರೆಡ್ಡಿ ಅವರ ಅನುಭವಗಳು ಅರಸು ಹೇಗೇ ಒಬ್ಬ ಪರಿಸರದ ಬಗ್ಗೆ ಅನನ್ಯ ಕಾಳಜಿಯ ಮನುಷ್ಯನಾಗಿದ್ದ ಎಂದು ವಿವರಿಸುತ್ತವೆ. ಇವು ರಾಜಕಾರಣಿ ಅಧಿಕಾರಿಯ ಬಗ್ಗೆ ನಡೆದುಕೊಳ್ಳುವ ನಡಾವಳಿಗಳ ಮೂಲಕ ಗಮನಸೆಳೆಯುತ್ತಾರೆ. ಅರಸು ಅವರು ಟ್ರೀ ಪ್ರೊಟೆಕ್ಷನ್ ಆಕ್ಟ್’ ತರುವುದಕ್ಕೆ ಸಮ್ಮತಿಸಿದ್ದರು. ಯಾವುದೇ ಮರ ಕಡಿಯಲು ಸರಕಾರದ ಅನುಮತಿ ಪಡೆಯುವ ಮತ್ತು ಒಂದು ಮರ ಕಡಿದರೆ, ನಾಲ್ಕು ಮರ ನೆಡುವ ಯೋಜನೆ ನಿಜಕ್ಕೂ ದೂರದೃಷ್ಠಿಯದು. ಆಗ ಈ ಯೋಜನೆ ಕುರಿತಂತೆ ಬಿಬಿಸಿಯಲ್ಲಿ ಚರ್ಚೆಯಾಗಿತ್ತು. ಭೂಮಿಯ ತಾಪಮಾನ ಏರುತ್ತಿರುವ ಬಗ್ಗೆ ಅರಸು ಅವರ ಗಮನಸೆಳೆದಾಗ ಸರಕಾರಿ ಜಮೀನನ್ನು ಬೇರೆಯವರು ಕಬಳಿಸದಂತೆಗ್ರೀನ್ ಬೆಲ್ಟ್’ ಮಾಡಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ತಂದಿದ್ದರು. ನಂತರದಲ್ಲಿ ಬಂದ ಸರಕಾರದ ರಾಜಕಾರಣಿಗಳು ಈ ಎಲ್ಲಾ ಗ್ರೀನ್ ಬೆಲ್ಟ್‍ನ್ನು ಡಿನೋಟಿಫೈ ಮಾಡಿ ಕಬಳಿಸಿದರು ಎನ್ನುತ್ತಾರೆ.

ಅರಸು ದಲಿತ ಪಕ್ಷಪಾತಿಯಾಗಿದ್ದರು. ಹುಣಸೂರಿನ ಡಾ.ಡಿ.ತಿಮ್ಮಯ್ಯ ಅವರಿಗೆ ಅರಸು ನೇರ ವೈದ್ಯಾಧಿಕಾರಿ ಹುದ್ದೆ ಕೊಡಿಸಿದಾಗ ವಿಧಾನಸಭೆಯಲ್ಲಿ ಈ ವಿಷಯ ಅಧಿಕಾರ ದುರುಪಯೋಗ ಎನ್ನುವ ಚರ್ಚೆಗೆ ಬರುತ್ತದೆ. ಆಗ ಅರಸು `ನೋಡಿ ನನ್ನ ಮಕ್ಕಳಿಗೆ ಮೊಮ್ಮಕ್ಕಳಿಗೆ ಕೆಲಸ ಕೊಟ್ಟಿಲ್ಲ, ಒಬ್ಬ ಪರಿಶಿಷ್ಟಜಾತಿಯಲ್ಲಿ ಹುಟ್ಟಿ, ಕಷ್ಟಪಟ್ಟು ಓದಿ ಉತ್ತಮ ಅಂಕ ಪಡೆದು ಪಾಸಾದ ಪ್ರತಿಭಾವಂತನಿಗೆ, ತಂದೆ ಇಲ್ಲದ ಹುಡುಗನಿಗೆ ಕೊಟ್ಟಿದ್ದೇನೆ. ನನ್ನ ತಾಲೂಕಿನ ಮೊದಲ ಎಂ.ಬಿ.ಬಿ.ಎಸ್ ಪದವಿ ಪಡೆದ ದಲಿತ ಹುಡುಗ ಎನ್ನುವ ಕಾರಣಕ್ಕಾಗಿ ಕೊಟ್ಟಿದ್ದೇನೆ. ನನ್ನ ವಿವೇಚನೆಗೆ ಸರಿ ಅನ್ನಿಸಿದ್ದನ್ನು ಮಾಡಿದ್ದೇನೆ. ತಪ್ಪಾಗಿದ್ದಲ್ಲಿ ಹೇಳಿ. ಅಧಿಕಾರ ದುರುಪಯೋಗ ಮಾಡಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಾರೆ.

ಮಂಡ್ಯದ ನಗರ ಸಭೆಗೆ ದಲಿತ ಎಸ್.ಹೊನ್ನಯ್ಯ ಎನ್ನುವವರನ್ನು ನಗರಸಭೆಯ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಈಚೆಗೆ ನಮ್ಮನ್ನು ಅಗಲಿದ ಬಿ.ನಾರಾಯಣ ರಾವ್ ಅವರು ಬೀದರಿನ ಟೋಕ್ರೆಕೋಳಿ ಬುಡಕಟ್ಟು ಸಮುದಾಯದವರು. ಅವರ ಜತೆಗಿನ ಅರಸು ನಡವಳಿಕೆ ಕಣ್ಣನ್ನು ಒದ್ದೆ ಮಾಡುತ್ತದೆ. ಕಾರ್ಯಕ್ರಮಕ್ಕೆಂದು ಬೀದರಿಗೆ ಹೋದವರು ಅವರ ಮನೆಗೆ ಹೋಗುತ್ತಾರೆ. ತಾಯಿ ಚೆಂಬಿನಲ್ಲಿ ಮಜ್ಜಿಗೆಯನ್ನು ಲೋಟಕ್ಕೆ ಹಾಕುವಾಗ ಚೆಂಬನ್ನೆ ಕೊಡುತಾಯಿ, ನಿನ್ನ ಮಗನ ಜವಾಬ್ದಾರಿ ನನಗೆ ಬಿಡು’ ಎನ್ನುವುದು ಬಹಳ ಮುಖ್ಯ ಸಂಗತಿ. ಬಲಾಡ್ಯ ಜಾತಿ ಜನ ಹತ್ತು ರೊಟ್ಟಿ ತಿನ್ನುತ್ತಿದ್ದರು, ಹಿಂದುಳಿದವರು ಉಪವಾಸವಿದ್ದರು. ಅದರಲ್ಲಿ ಅರಸು ನಾಲ್ಕು ರೊಟ್ಟಿಯನ್ನು ಹಿಂದುಳಿದವರಿಗೂ ಹಂಚಿದರು. ಎಂದು ನಾರಾಯಣರಾವ್ ಇಲ್ಲಿ ಹೇಳುತ್ತಾರೆ. 1972 ರಲ್ಲಿ ಶಿರಹಟ್ಟಿಯ ಮುಸ್ಲಿಂ ಸಮುದಾಯದ ಐ.ಜಿ.ಸನದಿ ಅಲ್ಪಸಂಖ್ಯಾತರಾಗಿ ಹುಬ್ಬಳ್ಳಿ ನಗರದ ವಿಧಾನಸಭೆಗೆ ನಿಲ್ಲಿಸುತ್ತಾರೆ. ಸನದಿ ಚುನಾವಣೆಯಲ್ಲಿ ಗೆದ್ದು, ಚುನಾವಣೆ ಖರ್ಚಲ್ಲಿ ಉಳಿದಿದ್ದ ಹತ್ತು ಸಾವಿರದಲ್ಲಿ ಕಾರು ತೆಗೆದುಕೊಳ್ಳಲೆ ಎಂದಾಗ ಅರಸರುಸನದಿಯವರೆ ನಾವು ಬಡವರಾಗಿದ್ದವರು ನಾವು ಹಾಗೆಯೆ ಇರಬೇಕು. ಇವತ್ತು ಅಧಿಕಾರ ಬಂತು ಎಂದು ಕಾರಲ್ಲಿ ಮೆರೆದಾಡಿದರೆ ಜನ ತಪ್ಪು ತಿಳೀತಾರೆ. ಅಧಿಕಾರ ಹೋದಮೇಲೆ ಬಾಳ ಕಷ್ಟ ಆಗುತ್ತೆ ಪಕ್ಷ ಕಟ್ಟುವಾಗ ನಾನು ಸಣ್ಣ ಹೋಟಲಲ್ಲಿ ಉಳೀತಿದ್ದೆ. ಧೋತ್ರ ಹರಿದಿರತಿತ್ತು. ಚಪ್ಪಲಿ ಕಿತ್ತೋಗಿರತಿತ್ತು. ಅದನ್ನು ನಾನು ಸ್ವತಃ ರಿಪೇರಿ ಮಾಡಿ ಹಾಕೊಂಡಿದ್ದೇನೆ. ಮುಂದೆ ಅಧಿಕಾರ ಇಲ್ಲದಾಗ ನಿಮಗೆ ಬೇಕಾಗುತ್ತೆ ನಿಮ್ಮಲ್ಲಿರಲಿ’ ಎನ್ನುತ್ತಾರೆ. ಇದು ಅರಸು ಅಂಚಿನ ಸಮುದಾಯದ ಯುವಕರನ್ನು ರಾಜಕಾರಣಕ್ಕೆ ತಂದಾಗ ಹೇಳುತ್ತಿದ್ದ ರಾಜನೀತಿ. ಆದರೂ ಸನದಿ ಕಾರು ತೆಗೆದುಕೊಳ್ಳುತ್ತಾರೆ. ಮಾದ್ಯಮದಲ್ಲಿ ಸುದ್ದಿಯೂ ಆಗುತ್ತೆ. ಮುಜುಗರಕ್ಕೀಡಾಗಿ ಅರಸು ಮಾತನ್ನು ನೆನೆಯುತ್ತಾರೆ.

ಬರ ವೀಕ್ಷಣೆ ಸಂದರ್ಭದಲ್ಲಿ ಮುಂಡರಗಿ ಕಡೆ ಹೋಗುವಾಗ ಬಿಸಿಲಲ್ಲಿ ಕೆರೆ ಹೂಳೆತ್ತುವ ಕೂಲಿಗಳ ನೋಡಿ ಕಾರು ನಿಲ್ಲಿಸಿ ಹೋಗಿ, ಒಬ್ಬ ಮಹಿಳೆಯನ್ನು ಮಾತನಾಡಿಸಿ ದಿನಕ್ಕೆ ಎಷ್ಟು ಕೂಲಿ ಸಿಗುತ್ತಮ್ಮಾ ಅಂತ ಕೇಳುತ್ತಾರೆ. ಮಹಿಳೆ 5 ರೂಪಾಯಿ ಹತ್ತು ಪೈಸೆ ಎನ್ನುತ್ತಾ, ನಮ್ಮೂರ ಡಾಕ್ಟರ್ ಒಂದು ಸೂಜಿ ಮಾಡಿದ್ರೆ ಹತ್ತು ರೂಪಾಯಿ ತಗೊಳ್ತಾನೆ ಎನ್ನುತ್ತಾಳೆ. ಕೂಡಲೆ ಕಾರ್ಯದರ್ಶಿ ಕರೆದು ಆ ಡಾಕ್ಟರನನ್ನು ಸಸ್ಪೆಂಡ್ ಮಾಡಿ ಎನ್ನುತ್ತಾರೆ. ಹೀಗೆ ಅರಸು ಕಾರಲ್ಲಿ ಸಾಗುವಾಗ ಎಲ್ಲೆಂದರಲ್ಲಿ ನಿಲ್ಲಿಸಿ ಜನರ ಕಷ್ಟ ಸುಖ ವಿಚಾರಿಸುವ ಸಂಗತಿ ಇಂದು ಅಪರೂಪದ ಘಟನೆಗಳಂತೆ ಕಾಣುತ್ತವೆ. ಸ್ವತಃ ಅರಸು ಕಾರಿಗೆ ಬಡಜನರನ್ನು ಕಂಡೊಡನೆ ನಿಲ್ಲುವ ಚಾಳಿಯೂ ಇದ್ದಿರಬಹುದು.

ಆರ್.ಸಿ ಹಿರೇಮಠ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಆಯ್ಕೆ ಮಾಡಿದ ಸಂದರ್ಭದಲ್ಲಿ ಅರಸು ಸ್ವಾಮಿಗಳೆ, ನಿಮ್ಮಿಂದ ಜನರು ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಎಂದಿಗೂ ಕರ್ತವ್ಯಕ್ಕೆ ದ್ರೋಹ ಬಗೆಯಬೇಡಿ, ಯುನಿವರ್ಸಿಟಿಗೆ ಒಳ್ಳೆಯ ಹೆಸರು ತನ್ನಿ’ ಎಂದು ಅವರನ್ನು ಕರ್ನಾಟಕ ವಿವಿಗೆ ಅರಸು ಆಯ್ಕೆ ಮಾಡುತ್ತಾರೆ. ಇಂದು ಕೋಟಿಗಟ್ಟಲೆ ಕೊಟ್ಟು ಕುಲಪತಿಗಳಾಗುವ ವರ್ತಮಾನವನ್ನು ನೋಡಿದರೆ ಅರಸು ಒಂದು ವಿಶ್ವವಿದ್ಯಾಲಯದ ಕುಲಪತಿ ಆಯ್ಕೆಯನ್ನೂ ಎಷ್ಟು ಜವಾಬ್ದಾರಿಯಿಂದ ನಡೆಸುತ್ತಿದ್ದರು ಎನ್ನುವುದು ತಿಳಿಯುತ್ತದೆ. 1976 ರಲ್ಲಿ ಮೈಸೂರು ವಿವಿ ರಾಜ್ ಕುಮಾರ್ ಅವರಿಗೆ ಡಾಕ್ಟರೇಟ್ ಕೊಟ್ಟ ಸಂದರ್ಭದಲ್ಲಿ ಅರಸು ಡಾಕ್ಟರೇಟ್ ಬಗ್ಗೆ ಮಾತನಾಡಿರುವುದು ಅವರೊಬ್ಬ ಎಂತಹ ಮುತ್ಸದ್ದಿ ಎನ್ನುವುದಕ್ಕೆ ಸಾಕ್ಷಿಯಾಗುತ್ತವೆ.ವಿಶ್ವವಿದ್ಯಾಲಯಗಳು ಕೊಡುವುದು ಬರಿ ಅಕ್ಷರ ಜ್ಞಾನವನ್ನು. ಆದರೆ ಅನುಭವ ಎನ್ನುವ ಜ್ಞಾನ ನಮ್ಮ ಹಳ್ಳಿಯಲ್ಲಿದೆ. ನಮ್ಮ ಹಾಡಿಯ ಬುಡಕಟ್ಟಿನ ಜನರಲ್ಲಿದೆ. ಒಬ್ಬ ಟ್ರೈಬಲ್ ಹತ್ತು ಜನ ಐಎಸ್‍ಎಫ್ ಅಧಿಕಾರಿಗಳಿಗೆ ಸಮ. ಈ ಜ್ಞಾನ ಎಷ್ಟು ಅಗಾಧ. ಹಳ್ಳಿಯಲ್ಲಿ ಹಿಟ್ಟು-ಬಸ್ಸಾರು ಮಾಡ್ತಾಳಲ್ಲ ಮಹಿಳೆ, ಅದೂ ಕೂಡ ವಿದ್ಯೆಯೇ, ಜ್ಞಾನವೆ. ಅವರಿಗೆ ಕೊಡಬೇಕು ಡಾಕ್ಟರೇಟು, ಆರು ಕಟ್ಟಿ ನೆಟ್ಟಗೆ ಉಕ್ಕೆ ಹೊಡಿತಾನಲ್ಲ, ಅವನಿಗೆ ಕೊಡಬೇಕು ಡಾಕ್ಟರೇಟ್, ಆದರೆ ನೀವು ಯಾರಾರಿಗೋ ಕೊಟ್ಟು ಅದರ ಬೆಲೆಯನ್ನು ಘನತೆಯನ್ನು ಕಡಿಮೆ ಮಾಡ್ತಿದಿರಿ. ನೀವು ರಾಜಕುಮಾರ್ ಅವರಿಗೆ ಕೊಡುವ ಡಾಕ್ಟರೇಟ್ ಹಳ್ಳಿಗಾಡಿನ ಜ್ಞಾನಕ್ಕೆ, ವಿದ್ಯೆಗೆ ಅನುಭವಕ್ಕೆ ಸಿಕ್ಕಂತಹ ಗೌರವ’ ಎನ್ನುತ್ತಾರೆ.

ಅರಸು ಅವರಲ್ಲಿ ಭಿನ್ನಾಭಿಪ್ರಾಯಕ್ಕೆ ಮನ್ನಣೆಯಿತ್ತು. ಎಲ್ಲರ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಿತ್ತು. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಶಿವರಾಮ ಕಾರಂತ, ಗೋಪಾಲ ಕೃಷ್ಣ ಅಡಿಗ, ಲಂಕೇಶ, ಮಾಷ್ಟರ್ ಹಿರಣ್ಣಯ್ಯ ಅವರು ತುರ್ತುಪರಿಸ್ಥಿತಿ ವಿರೋಧಿಸಿ ಭಾಷಣ ಮಾಡಿದರೂ ಬಂಧಿಸಲಿಲ್ಲ. ಬಿಹಾರದಿಂದ ಕರೆತಂದಿದ್ದ ಒಬ್ಬನ ಕಾಲಿಗೆ ಸರಪಣಿ ಹಾಕಿದ್ದನ್ನು ಕಂಡು, ಜೈಲ್ ಐಜಿ ಮಲ್ಲಯ್ಯನವರನ್ನು ಕರೆದು ಮೊದಲು ಬಿಚ್ಚಿ, ಆತ ಖೈದಿಯಲ್ಲ, ಚೆನ್ನಾಗಿ ನೋಡಿಕೊಳ್ಳಿ’ ಎಂದಿದ್ದರು. ಗೋಪಾಲ ಕೃಷ್ಣ ಅಡಿಗರು ಜನಸಂಘದಲ್ಲಿ ಚುನಾವಣೆಗೆ ನಿಂತು ಸೋತು ಕೆಲಸ ಕಳೆದುಕೊಂಡಾಗ ದೇವರಾಜ ಅರಸು ಅಡಿಗರಿಗೆ ನೆರವಾಗುತ್ತಾರೆ. ಅಡಿಗರೆನಿಮ್ಮ ಬಗ್ಗೆ ತಪ್ಪು ತಿಳಿದಿದ್ದೆ, ನೀವು ನಿಜವಾಗಿಯೂ ದೊಡ್ಡ ಮನುಷ್ಯರಪ್ಪ. ನಿಮ್ಮ ಹೃದಯವಂತಿಕೆಯಿಂದ ನನ್ನ ಮನ ತುಂಬಿ ಬಂತು’ ಎನ್ನುತ್ತಾರೆ.

ಖಾಸಗಿಯಾಗಿ ಹೊರಗಡೆ ಹೋದರೆ ಕಾರ್ ಡ್ರೈವ್ ಮಾಡ್ತಿದ್ದ ಶ್ರೀಹರಿ ಖೋಡೆ ಒಮ್ಮೆ ಅರಸು ಅವರನ್ನು ಕರೆದುಕೊಂಡು ಕಲ್ಲಹಳ್ಳಿಗೆ ಹೋಗಿರುತ್ತಾರೆ. ಅಲ್ಲಿ ನಡೆದ ಒಂದು ಘಟನೆ ಒಂದ್ಸಲ ಬೆಳಗ್ಗೆನೆ ಸುತ್ತಾಡೋದಕ್ಕೆ ಕರಕೊಂಡು ಹೋದ್ರು. ಹುಟ್ಟುವ ಸೂರ್ಯನನ್ನು ತೋರಿಸಿ,ನೋಡಿ, ಅವನಿಗೆ ಅಹಂಕಾರನೆ ಇಲ್ಲ. ನನ್ನಿಂದ ಈ ಜಗತ್ತು ಬೆಳಗಾಯ್ತಿದೆ, ಈ ಗಿಡಮರಗಳು ಹಸಿರು ಉತ್ಪತ್ತಿ ಮಾಡ್ತಿವೆ, ಅದನ್ನ ಪ್ರಾಣಿ ಪಕ್ಷಿಗಳು ಅವಲಂಬಿಸಿವೆ ಎನ್ನುವುದರ ಪರಿವೆಯೇ ಇಲ್ಲ. ಸೂರ್ಯನಿಗೆ ವಂಚನೆ ಗೊತ್ತಿಲ್ಲ. ಮನುಷ್ಯ ಪ್ರಾಣಿಗೆ ಮಾತ್ರ ಅಹಂಕಾರ, ವಂಚನೆ, ಪದವಿ, ಪ್ರತಿಷ್ಠೆ ಎಲ್ಲ’ ಎಂದರು. ಇದನ್ನು ಯಾವ ಸಂತನಿಂದಲೂ, ವಿಜ್ಞಾನಿಯಿಂದಲೂ ಮಠಾಧೀಶರಿಂದಲೂ ಕೇಳಲು ಸಾಧ್ಯವಿಲ್ಲ ಎನ್ನುತ್ತಾರೆ. ಅರಸು ಖೋಡೆಯನ್ನು ಕಾಡು ನೋಡಿ ಬರೋಣ ಅಂತ ಕರೆದುಕೊಂಡು ಹೋಗುತ್ತಿದ್ದರಂತೆ, ಕಾಡಿನಲ್ಲಿ ನಡೆದುಕೊಂಡು ಹೋಗಿ 2-3 ಗಂಟೆ ಒಬ್ಬರೆ ಕಾಡೊಳಗೆ ಕೂತು ವಾಪಾಸ್ ಬರುತ್ತಿದ್ದರಂತೆ, ಆಗ ಅರಸು `ಜನ ನನ್ನನ್ನು ಆರಿಸಿ ಕಳಿಸಿರುವುದು ನನ್ನ ಬುದ್ಧಿ ಖರ್ಚು ಮಾಡಿ ನಿರ್ಧಾರ ತೆಗೆದುಕೊಳ್ಳಲಿ ಎಂದು. ನಾನ್ಯಾಕೆ ಯಾರು ಯಾರದೋ ಬುದ್ಧಿಯನ್ನು ಸಿದ್ಧಾಂತವನ್ನು ಆಲೋಚನೆಗಳನ್ನು ಅವಲಂಬಿಸಬೇಕು? ನನಗೆ ಯೋಚಿಸಲು ಸಮಯ ಬೇಕು. ಪ್ರಶಾಂತ ವಾತಾವರಣವಿರಬೇಕು. ಅದು ಈ ಕಾಡಿನಲ್ಲಿ ಸಿಗುತ್ತದೆ, ಬಂದೆ. ಎನ್ನುತ್ತಿದ್ದರಂತೆ. ಇಷ್ಟೆಲ್ಲಾ ಒತ್ತಡದ ನಡುವೆಯೂ ಒಬ್ಬರೇ ಕೂತು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಿದ್ದ ನಡೆ ಅಪರೂಪದ್ದು.

ಹಿಂದುಳಿದವರು ಯಾರು ಎಂದರೆ-ಆರೋಗ್ಯ, ಆಶ್ರಯ, ಶಿಕ್ಷಣ ಮತ್ತು ತಮ್ಮ ಕಾಲ ಮೇಲೆ ತಾವು ನಿಲ್ಲಲು ಶಕ್ತಿ ಇಲ್ಲದವರು ಎಂದು ವ್ಯಾಖ್ಯಾನಿಸುತ್ತಿದ್ದರು. ಎಲ್ಲರೂ ಸುಖವಾಗಿರಬೇಕು-ಲಕ್ಷುರಿ ಇಲ್ಲದೆ ಇದ್ದರೂ ಪರವಾಗಿಲ್ಲ, ಮಾನ ಕಾಪಾಡಿಕೊಳ್ಳುವಷ್ಟಾದರೂ ಹಣ ಇರಬೇಕು. ಮುಂದುವರಿದವರು ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತಾರೆ. ಆದರೆ ಹಿಂದುಳಿದವರಿಗೆ ಪ್ಲಾನ್ ಇರಲಿ, ಟೂಲ್ಸೇ ಇರಲ್ಲ. ನಾನು ಆ ಟೂಲ್ಸ್ ಕೊಡಲು ಪ್ರಯತ್ನಿಸುತ್ತಿದ್ದೇನೆ’ ಎನ್ನುತ್ತಿದ್ದರು. ಹಾಗಾಗಿಯೇ ಮಾರ್ಗರೇಟ್ ಆಳ್ವ `ನಮ್ಮಂಥವರ ಪೊಲಿಟಿಕಲ್ ಗಾಡ್ ಫಾದರ್. ನಿರ್ಲಕ್ಷಿತ ಸಮುದಾಯಗಳನ್ನು, ಕಡೆಗಣಿಸಲ್ಪಟ್ಟ ಕಡಿಮೆ ಸಂಖ್ಯೆಯ ಜಾತಿಯ ಜನರನ್ನು, ರಾಜಕಾರಣದಿಂದ ಮಾರುದೂರವಿದ್ದ ಮೈನೂಟ್ ಕಮ್ಯುನಿಟಿಯನ್ನು ಅಧಿಕಾರದ ವ್ಯಾಪ್ತಿಗೆ ತಂದರು’ ಎನ್ನುತ್ತಾರೆ. ಅರಸು ಕೆ.ಎಸ್.ನಾಗರತ್ನಮ್ಮ ಅವರನ್ನು ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಆರಿಸುತ್ತಾರೆ.

ಅರಸು ಅವರನ್ನು ಒಬ್ಬ ಅಂತಃಕರಣದ ಮನುಷ್ಯನನ್ನಾಗಿಸಿದ್ದರಲ್ಲಿ ಅವರ ಪುಸ್ತಕ ಓದುವ ಹವ್ಯಾಸವೂ ಮುಖ್ಯವಾಗಿತ್ತು. ಈ ಕೃತಿಯಲ್ಲಿ ಹಲವರು ಅವರ ಓದು ಹವ್ಯಾಸದ ಬಗ್ಗೆ ಉಲ್ಲೇಖಿಸಿದ್ದಾರೆ. ಹೆಜ್ಜೂರು ಸೋಮಶೇಖರ್ ಅವರು ಹೇಳುವಂತೆ, ಕೌಟಿಲ್ಯನ ಅರ್ಥಶಾಸ್ತ್ರವನ್ನು ತಿಂಗಳಿಗೊಮ್ಮೆ ಖಡ್ಡಾಯವಾಗಿ ಓದುತ್ತಿದ್ದರು. ಜೇನು ಸಾಕಾಣಿಕೆ, ಎರೆಹುಳುವಿನ ಅಗತ್ಯತೆ, ಕೃಷಿಯಲ್ಲಿ ಹಕ್ಕಿಗಳ ಪಾತ್ರ ಕುರಿತ ಪುಸ್ತಕಗಳನ್ನು ತರಿಸಿಕೊಂಡಿದ್ದರು ಎನ್ನುತ್ತಾರೆ. ಡಿ.ವಿ ರಾಜಶೇಖರ್ಅರಸರು ಸಮಾಜವಾದ, ಲೋಹಿಯಾವಾದ ಮತ್ತು ಸ್ಮಾಲ್ ಈಜ್ ಬ್ಯುವ್ಟಿಫುಲ್..ಹೀಗೆ ಎಲ್ಲವನ್ನೂ ಓದಿಕೊಂಡಿದ್ದರು’ ಎನ್ನುತ್ತಾರೆ. ಜನಪರ ನಿಲುವುಗಳಿಗಾಗಿ ಅಂತರಾಷ್ಟ್ರೀಯ ಖ್ಯಾತಿ ಪಡೆದಿದ್ದ ‘ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ’ ಪತ್ರಿಕೆಯಲ್ಲಿ ವಿ.ಕೆ ನಟರಾಜ್ ಅವರು ದೇವರಾಜ ಅರಸು ಪ್ರಯೋಗಗಳ ಬಗ್ಗೆ ಸೆಪ್ಟಂಬರ್ 11, 1981 ರಲ್ಲಿ ಬರೆಯುತ್ತಾರೆ. ಅದು ರಾಷ್ಟ್ರವ್ಯಾಪಿ ವಿದ್ವತ್ ಲೋಕ ಕೂಡ ಅರಸು ಅವರನ್ನು ಗಮನಿಸುವಂತೆ ಮಾಡುತ್ತದೆ.

ಹರಕಂಗಿ ಕಂಪನಿಯೋರು..

ಅರಸು ಬಡವರು, ದುರ್ಬಲರನ್ನು ಹರಕಂಗಿ ಕಂಪನಿಯೋರು ಎಂದು ಕರೆಯುತ್ತಿದ್ದರು. 1978 ರ ಚುನಾವಣೆಯಲ್ಲಿ ರೋಣ ಕ್ಷೇತ್ರದಿಂದ ವೀರಣ್ಣ ಮತ್ತಿಕಟ್ಟಿ ಅವರನ್ನು ನಿಲ್ಲಿಸಬೇಕೆಂದಾಗ, ತಾನು ಬಡವನೆನ್ನುವ ಕಾರಣಕ್ಕೆ ಹಿಂದೇಟು ಹಾಕುತ್ತಾರೆ. ಆಗ ಅರಸು `ನಮಗೆ ನಿಮ್ಮಂತಹ ಪ್ರಗತಿಪರ ಸಮಾಜಮುಖಿ ಯುವಕರ ಅಗತ್ಯವಿದೆ. ಪ್ರಭಾವಿಗಳು, ಶ್ರೀಮಂತರು, ಬಲಾಢ್ಯ ಲಿಂಗಾಯತ ನಾಯಕರು ನಮ್ಮ ಎದುರಾಳಿಗಳಾದರೂ, ನಮ್ಮ ಪರವಾಗಿ ಬಡವರು-ಹರಕಂಗಿ ಕಂಪನಿಯೋರು ಇದಾರೆ, ಅದೃಶ್ಯ ಮತದಾರರಿದ್ದಾರೆ ಅವರು ಗೆಲ್ಲಿಸ್ತಾರೆ ನಿಲ್ಲಿ’ ಎನ್ನುತ್ತಾರೆ. ಅರಸರು ಮತ್ತೆ ಮತ್ತೆ ಅದೃಶ್ಯ ಮತದಾರರ ಬಗ್ಗೆ ಮಾತನಾಡುತ್ತಾರೆ. ಆ ಅದೃಶ್ಯ ಮತದಾರರೆ ಅರಸು ಅವರನ್ನು ಮುಖ್ಯಮಂತ್ರಿ ಮಾಡಿದ್ದು ಅನ್ನಿಸುತ್ತೆ.

ಈ ಕೃತಿಯ ಸಂಪಾದಕರಾದ ಬಸವರಾಜು ಅವರು ತಮ್ಮ ಸಂದರ್ಶನದಲ್ಲಿ ಒಂದು ಪ್ರಶ್ನೆಯನ್ನು ಬಿಟ್ಟೂ ಬಿಡದೆ ಕೇಳಿದ್ದಾರೆ. ಅದೆಂದರೆ ಅರಸು ಕಾಲದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತಂತಲ್ಲ ಎಂದು. ಈ ಪ್ರಶ್ನೆಗೆ ಉತ್ತರಿಸಿದವರೆಲ್ಲಾ ಅರಸು ಕಾಲದ ಭ್ರಷ್ಟಾಚಾರದ ಹಲವು ವಾಸ್ತವ ನೆಲೆಗಳನ್ನು ವಿವರಿಸಿದ್ದಾರೆ. ಈ ವಿವರಗಳನ್ನು ಓದಿದರೆ ಅರಸು ಕಾಲ ಭ್ರಷ್ಟಾಚಾರದ ಗಂಗೋತ್ರಿಯಾಗಿದ್ದು ಹೇಗೆ ಮತ್ತು ಅದರಲ್ಲಿ ಅರಸು ಪಾಲೆಷ್ಟು ಎನ್ನುವುದು ತಿಳಿಯುತ್ತದೆ. ಸ್ವತಃ ಅರಸು ಅವರನ್ನೆ ನಿಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿದೆಯಂತೆ’ ಹೇಗೆ ಎಂದು ಆಪ್ತರು ಕೇಳಿದಾಗಲೂ ಸ್ವತಃ ಅರಸರೂ ಈ ಕುರಿತು ಮಾತನಾಡಿದ್ದು ದಾಖಲಾಗಿದೆ. ಇದರಲ್ಲಿ ಮುಖ್ಯವಾಗಿ ಅರಸು ಸಂಬಂಧಿ ನಂಜರಾಜೇ ಅರಸ್ ಒಮ್ಮೆಹೊರ ಜಗತ್ತು ನೀವು ಭ್ರಷ್ಟ ಎನ್ನುವ ಮಾತಾಡುತ್ತಿದೆ’ ಎಂದು ಕೇಳುತ್ತಾರೆ. ಆಗ ಅರಸು ಹೌದು ನಾನು ಕರಪ್ಟ್, ಅದನ್ನು ನೆಗೆಟಿವ್ ಆಗಿ ಯಾಕೆ ನೋಡುತ್ತೀರಿ, ಪಾಸಿಟಿವ್ ಆಗಿ ನೋಡಿ’, ನನ್ನ ಒಳ್ಳೆಯ ಕೆಲಸವನ್ನು ನೋಡಿ, ನಾನು ಬಡ ಜನರಿಗಾಗಿ ತಂದ ಕಾಯ್ದೆ ಕಾನೂನುಗಳನ್ನು ನೋಡಿ, ಅದರಿಂದ ಜನರಿಗೆ ಅನುಕೂಲವಾಗಿರುವುದನ್ನು ನೋಡಿ. ಜನಕ್ಕೆ ಒಳ್ಳೆಯದು ಮಾಡಬೇಕಾದರೆ ಅಧಿಕಾರ ಬೇಕು. ಸಿಎಂ ಆಗಿರಬೇಕು. ಸಿಎಂ ಆಗಿರಬೇಕೆಂದರೆ ಶಾಸಕರ ಬೆಂಬಲ ಬೇಕು. ಶಾಸಕರ ಬೇಕು ಬೇಡಗಳನ್ನು ಪೂರೈಸಬೇಕು. ಅದಕ್ಕೆಲ್ಲ ಹಣ ಬೇಕು’ ಎನ್ನುತ್ತಾರೆ. ಇದೇ ಪ್ರಶ್ನೆಯನ್ನು ಕಾದಂಬರಿಕಾರ ಚದುರಂಗರು ಕೇಳಿದಾಗಸುಬ್ರಮಣ್ಯ (ಚದುರಂಗರ ನಿಜ ಹೆಸರು) ರಾಜಕಾರಣದಲ್ಲಿ ಭ್ರಷ್ಟಾಚಾರವನ್ನು ಬಿಟ್ಟು ಮಾತನಾಡುವಂತಿಲ್ಲ. ಅಷ್ಟಕ್ಕೂ ಈ ಹಣವನ್ನು ನಾನು ಮುಟ್ಟಿ ನೋಡಿದವನೂ ಅಲ್ಲ. ನನಗಾಗಿ ಅಲ್ಲ, ಶಾಸಕರನ್ನು ಸಾಕಲು, ಅಧಿಕಾರದಲ್ಲಿ ಉಳಿಯಲು ಭ್ರಷ್ಟಾಚಾರಿ ಎಂಬ ಆರೋಪಕ್ಕೆ ಗುರಿಯಾಗಿದ್ದೇನೆ’ ಎನ್ನುತ್ತಾರೆ. ಈ ಮಾತುಗಳು ಅರಸು ಕಾಲದ ಭ್ರಷ್ಟಾಚಾರದ ಬಗ್ಗೆ ಕನ್ನಡಿಯಂತಿವೆ.

ಈ ಕೃತಿಯಲ್ಲಿ 61 ಜನರು ಬೇರೆ ಬೇರೆ ಹಿನ್ನೆಲೆಯ ಹಿರಿಯರು, ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಸಾಮಾನ್ಯ ವರ್ಗದವರು, ಕುಟುಂಬದವರು ಹೀಗೆ ಎಲ್ಲರೂ ತಮ್ಮ ತಮ್ಮ ಆತ್ಮಕಥನದಲ್ಲಿ ಅರಸು’ ಅವರಿಗಾಗಿ ಮೀಸಲಿಟ್ಟ ಭಾಗವನ್ನು ಹಾಗೆ ಎತ್ತಿಕೊಟ್ಟಂತಿದೆ. ಹಾಗಾಗಿ ಇಡೀ ಕೃತಿ ಅರವತ್ತೊಂದು ಜನರ ಆತ್ಮಕಥನದ ಭಾಗಗಳಿಂದ ಪೊಣಿಸಿದ ಒಂದು ಬೃಹತ್ ಅರಸು ಆತ್ಮಕಥನದಂತೆ ಅನ್ನಿಸುತ್ತದೆ. ಈ ಕಾರಣಕ್ಕೆ 550 ಪುಟದ ಈ ಪುಸ್ತಕವನ್ನು ನೀವು ಓದಲು ಕೈಗೆತ್ತಿಕೊಂಡರೆ, ಒಂದು ಕಾದಂಬರಿಯಂತೆ ಓದು ನಿರಾಳವಾಗಿ ಸಾಗುತ್ತದೆ, ಅಲ್ಲಲ್ಲಿ ನಿಮ್ಮನ್ನು ಭಾವೋದ್ವೇಗಕ್ಕೆ ಒಳಗಾಗಿಸುತ್ತದೆ. ಇಲ್ಲಿನ ಅನುಭವಗಳಲ್ಲಿ ಕೆಲವರು ಪ್ರಾಮಾಣಿಕವಾಗಿ ತಪ್ಪೊಪ್ಪಿಗೆಯನ್ನು ಮಾಡಿದ್ದರೆ, ಮತ್ತೆ ಕೆಲವರು ಅಪ್ರಾಮಾಣಿಕವಾಗಿ ಈಗಲೂ ಸತ್ಯ ಹೇಳಲು ಹಿಂಜರಿದು ತಮ್ಮನ್ನು ತಾವು ಮತ್ತದೆಸುಳ್ಳಿನ ಕೋಟೆ’ಯೊಳಗೆ ಬಂಧಿಸಿಕೊಂಡಿರುವ ಸಾಕ್ಷ್ಯಗಳೂ ಸಿಗುತ್ತವೆ. ಇಡೀ ಕೃತಿಯಲ್ಲಿ ಇಂದಿರಾಗಾಂಧಿಯ ವ್ಯಕ್ತಿತ್ವವೂ ಅನಾವರಗೊಂಡಿದೆ. ಅರಸು ಅವರ ದೌರ್ಬಲ್ಯಗಳು, ಮಿತಿಗಳು, ತಪ್ಪುಗಳು, ಕೊನೆ ಕೊನೆಗೆ ಮೂಢನಂಬಿಕೆಯಲ್ಲಿ ಕಳೆದುಹೋದದ್ದು, ಅಹಂಕಾರ ರಹಿತ ಅರಸು ಅಹಂಕಾರಿಯಾದದ್ದೂ ಎಲ್ಲವೂ ದಾಖಲಾಗಿವೆ. ಹಾಗಾಗಿ ಈ ಕೃತಿ ಅರಸು ಅವರನ್ನು ಸತ್ವ ಪರೀಕ್ಷೆಗೆ ಒಳಪಡಿಸಿದೆ. ಈ ಕಾರಣಕ್ಕೂ ಈ ಕೃತಿ ಮುಖ್ಯವಾಗುತ್ತದೆ. ಈ ಹೊತ್ತು ರಾಜಕಾರಣ ಪ್ರವೇಶಿಸುವ ಹೊಸ ತಲೆಮಾರು ಈ ಕೃತಿಯನ್ನು ಅವಶ್ಯ ಓದಬೇಕಾಗಿದೆ. ಅರಸು ಕರ್ನಾಟಕವನ್ನು ಅರಿಯಲು ನಾಡಿನ ಪ್ರತಿಯೊಬ್ಬ ಪ್ರಜ್ಞಾವಂತರೂ ಈ ಪುಸ್ತಕವನ್ನು ಓದಬೇಕು. ಈ ಕೃತಿಯನ್ನು ಸಂಪಾದಿಸಿದ ಬಸವರಾಜು ಅವರ ಶ್ರಮ ಅಪಾರವಾದುದು. ಈ ಕೃತಿಯನ್ನು ಅತೀವ ಕಾಳಜಿ ಶ್ರದ್ಧೆಯಿಂದ ಪಲ್ಲವ ಪ್ರಕಾಶನ ಪ್ರಕಟಿಸಿದೆ. ಈ ಇಬ್ಬರೂ ಅಭಿನಂದನಾರ್ಹರು.

ಅರಸು ಅವರು ಜಾರಿ ಮಾಡಿದ ಭೂಸುಧಾರಣೆಯ ಕಾರಣಕ್ಕೆ 7,80,000 ಕ್ಕಿಂತ ಹೆಚ್ಚಿನ ಬಡ ಗೇಣಿದಾರರು ಭೂಮಾಲಿಕರಾದರು. ಈ ಭೂಮಾಲಿಕರ ಮಕ್ಕಳು ಇಂದು ಶಾಲೆ ಕಲಿತು ಉದ್ಯೋಗ ಹಿಡಿದಿದ್ದಾರೆ. ಹಾವನೂರು ವರದಿಯ ಮೂಲಕ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಿದರು, ಈ ಮೀಸಲಾತಿ ಬಳಸಿಕೊಂಡು ಇಂದು ಲಕ್ಷಾಂತರ ಯುವಕ ಯುವತಿಯರು ಹುದ್ದೆ ಹಿಡಿದು ನೆಮ್ಮದಿಯ ಬದುಕು ಕಂಡುಕೊಂಡಿದ್ದಾರೆ. ಜೀತ ಪದ್ದತಿ ನಿರ್ಮೂಲನೆಯಿಂದ ಧಣಿಗಳ ಮನೆಯಲ್ಲಿ ದುಡಿಯಬೇಕಾದ ಎಷ್ಟೋ ಯುವಕ-ಯುವತಿಯರು ವಿದ್ಯಾವಂತರಾಗಿದ್ದಾರೆ. ಮಲಹೊರುವ ಪದ್ಧತಿಯ ನಿಶೇಧದಿಂದ ದಲಿತ ಮಕ್ಕಳಿಗೆ ಇಂತಹದ್ದೊಂದು ಅಸಹ್ಯ ಕಲ್ಪನೆಗೂ ಬರದೆ ಬದುಕು ಕಟ್ಟಿಕೊಂಡಿದ್ದಾರೆ. ಭಾಗ್ಯಜ್ಯೋತಿ ಯೋಜನೆಯಲ್ಲಿ ಕೋಟ್ಯಾಂತರ ಮನೆಗಳು ಬೆಳಗಿವೆ. ಹಿಂದುಳಿದ, ದಲಿತ, ದಮನಿತ, ಅಲ್ಪಸಂಖ್ಯಾತ, ಬುಡಕಟ್ಟು ಆದಿವಾಸಿಗಳನ್ನು ಒಳಗೊಂಡಂತೆ ಅಧಿಕಾರ ರಹಿತ ಅಂಚಿನ ಸಮುದಾಯಗಳ ಇಂದಿನ ಹೊಸ ತಲೆಮಾರು ಅರಸು ಕಾಲದ ಕ್ರಾಂತಿಕಾರಿ ಯೋಜನೆಯ ಫಲಾನುಭವಿಗಳಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ಹೊತ್ತಿನ ಹೊಸತಲೆಮಾರಿನ ಕರ್ನಾಟಕ ಅದು `ಅರಸು ಕರ್ನಾಟಕ’.

ಅರುಣ್ ಜೋಳದಕೂಡ್ಲಿಗಿ
ಚಿಂತಕರು ಮತ್ತು ಬರಹಗಾರರು

IAS ಅಧಿಕಾರಿ ಚಿರಂಜೀವಿ ಸಿಂಗ್‌ ಕಂಡ ದೇವರಾಜ ಅರಸು : ಒಂದು ಅಪರೂಪದ ಸಂದರ್ಶನ
ಚಿರಂಜೀವಿ ಸಿಂಗ್‌

ನಿವೃತ್ತ IAS ಅಧಿಕಾರಿ ಚಿರಂಜೀವಿ ಸಿಂಗ್, ತಮ್ಮ ಸರಳ, ಸೌಮ್ಯ ಮತ್ತು ಸಜ್ಜನಿಕೆಯಿಂದಾಗಿ ‘ಸಂತ’ ಎಂಬ ಬಿರುದಿಗೆ ಪಾತ್ರರಾದವರು. 70ರ ದಶಕದಲ್ಲಿ ದೂರದ ಪಂಜಾಬಿನಿಂದ ಕರ್ನಾಟಕಕ್ಕೆ ಬಂದು ನಮಗಿಂತಲೂ ಹೆಚ್ಚು ಕನ್ನಡಿಗರಾದವರು. ನಮ್ಮ ನಾಡಿನ ಹೆಮ್ಮೆಯ ಸಂಸ್ಕೃತಿ ಚಿಂತಕರಾಗಿದ್ದಾರೆ. ಸಹಾಯಕ ಆಯುಕ್ತರಿಂದ ಹಿಡಿದು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿವರೆಗೆ, ಸುದೀರ್ಘ ಕಾಲ ಸೇವೆ ಸಲ್ಲಿಸಿದ ಸಿಂಗ್, ತಮ್ಮ ಸರಳತೆ, ದಕ್ಷತೆ, ಪ್ರಾಮಾಣಿಕತೆಯ ಮೂಲಕ ಎಲ್ಲರ ಪ್ರೀತಿ ಗಳಿಸಿಕೊಂಡವರು. ಸರಕಾರದ ಉನ್ನತ ಹಂತದ ಅಧಿಕಾರಿಯಾಗಿದ್ದರೂ ವೈಚಾರಿಕ ಬದ್ಧತೆಯನ್ನುಳಿಸಿಕೊಂಡವರು. ಸೇವೆಯುದ್ದಕ್ಕೂ ಜನಪರ ಕಾರ್ಯಕ್ರಮಗಳನ್ನು ಕುರಿತು ಚಿಂತಿಸುತ್ತ, ಕೈ-ಬಾಯಿ ಶುದ್ಧವಾಗಿಟ್ಟುಕೊಂಡವರು. ಯೋಚನೆ ಆಲೋಚನೆಗಳನ್ನು ಸ್ವಚ್ಛವಾಗಿಟ್ಟುಕೊಂಡವರು.

ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಕುರಿತು ಅಗಾಧ ಅರಿವುಳ್ಳ ಚಿರಂಜೀವಿ ಸಿಂಗ್, ಇವತ್ತಿಗೂ ಸಾಧಕರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು, ಶಿಸ್ತು, ಶ್ರದ್ಧೆ ಮತ್ತು ನಿಯಮಪಾಲನೆಗಳನ್ನು ಪ್ರಶದಂತೆ ಪಾಲಿಸಿಕೊಂಡು ಬಂದವರು, ನಿವೃತ್ತಿಯಾದ ದಿನ ಸಮಸ್ಯೆ ಸರಕಾರಿ ಸವಲತ್ತು, ಸೌಲಭ್ಯಗಳನ್ನು ಬದಿಗೊತ್ತಿ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಆಟೋ ಹತ್ತಿ ಮನೆಗೆ ತೆರಳಿದವರು. ನಿವೃತ್ತರಾಗಿ ಹತ್ತು ಹದಿನೈದು ವರ್ಷ ಕಳೆದರೂ ಇಂದಿಗೂ ಓಡಾಟಕ್ಕೆ ಸ್ವಂತ ಕಾರಿಲ್ಲದ, ಮೊಬೈಲ್ ಫೋನ್ ಬಳಸದ, ಪ್ರಚಾರ ಬಯಸದ ಅಪರೂಪದ ಹಿರಿಯ ಅಧಿಕಾರಿ ಎನಿಸಿಕೊಂಡವರು, ಅವರ ಬೆಳ್ಳನೆಯ ನೀಳ ಗಡ್ಡ, ಪುಟ್ಟ ಕಣ್ಣಳ ನಗುಮೊಗ, ಪಂಜಾಬಿ ಪೇಟ, ತಿಳಿಗೊಳದಂತಹ ತಣ್ಣಗಿನ ಸ್ಥಿತಿ.. ಸಂತನ ಸ್ಥಾನಕ್ಕೇರಿಸಿವೆ. ಅಧಿಕಾರಿವರ್ಗಕ್ಕೆ, ಸಮಾಜಕ್ಕೆ ಮಾದರಿಯಾಗಿದ್ದಾರೆ.

ತಮ್ಮ 78ರ ಹರೆಯದಲ್ಲಿ ಸಹ ಸದಾ ಚಟುವಟಿಕೆಯಿಂದಿರುವ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಚಿರಂಜೀವಿ ಸಿಂಗ್, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಅಪ್ತ ಅಧಿಕಾರಿಗಳಲ್ಲೊಬ್ಬರು.  1973ರಿಂದ 77ರವರೆಗೆ, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಡೆಪ್ಯುಟಿ ಸೆಕ್ರೆಟರಿ ಟು ಸಿಎಂ ಆಗಿ ಸೇವೆ ಸಲ್ಲಿಸಿದ ಸಿಂಗ್, ಅರಸು ಅವರೊಂದಿಗಿನ 5 ವರ್ಷಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ. ಈ ಸಂದರ್ಶನವನ್ನು ಪತ್ರಕರ್ತರಾದ ಬಸವರಾಜು ಮೇಗಲಕೇರಿ ಅವರು ನಡೆಸಿದ್ದು, ನಮ್ಮ ಅರಸು, ಒಡನಾಡಿಗಳು ಕಂಡಂತೆ ಎಂಬ ಕೃತಿಯಲ್ಲಿ ಪ್ರಕಟಾಗಿದೆ.

ನೀವು ಅರಸು ಅವರ ಆಪ್ತವರ್ಗದ ಅಧಿಕಾರಿಯಾಗಿ ಸೇರಿದ್ದು ಹೇಗೆ?

ದೇವರಾಜ ಅರಸು

ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ರೆಬೆಲೊ ಸಾಹೇಬರು ಚೀಫ್ ಸೆಕ್ರೆಟರಿಯಾಗಿದ್ದರು. ಆಗ ಪಿಎಸ್ ಟು ಸಿಎಂ ಹುದ್ದೆ ಇದ್ದು, ಜೆ.ಸಿ. ಲಿನ್ ಸಾಹೇಬರು ನಿರ್ವಹಿಸುತ್ತಿದ್ದರು. ಫೈಲ್ ನೋಡುವುದು, ನೋಟ್ಸ್ ಮಾಡುವುದು, ಸಮ್ಮರಿ ಬರೆಯುವುದು, ಪುಟಪ್ …ಹೀಗೆ ಒಬ್ಬರಿಗೆ ಹೆಚ್ಚೆನ್ನಿಸುವಷ್ಟು ಕೆಲಸವಿತ್ತು. ಅದನ್ನು ಗಮನಿಸಿದ ರೆಬೆಲೊ ಸಾಹೇಬರು, ಪಿಎಸ್ ಟು ಸಿಎಂ ಪೋಸ್ಟನ್ನು ರಿಡಿಸೈನ್ ಮಾಡಿ, ಸೆಕ್ರೆಟರಿ ಟು ಸಿಎಂ ಅಂತ ಮಾಡಿದರು. ಆ ಸೆಕ್ರೆಟರಿಗೆ ಕೆಲಸದ ಹೊರೆ ಹೆಚ್ಚು ಅನ್ನುವ ಕಾರಣಕ್ಕೆ ಅವರಿಗೊಬ್ಬರು ಡೆಪ್ಯುಟಿ ಸೆಕ್ರೆಟರಿ ಹುದ್ದೆಯನ್ನು ಕ್ರಿಯೇಟ್ ಮಾಡಿದರು.

ಹೀಗೆ ರಿಡಿಸೈನ್ ಆದ ಸೆಕ್ರೆಟರಿ ಟು ಸಿಎಂ ಹುದ್ದೆಗೆ ಜೆ.ಸಿ.ಲಿನ್ ಸಾಹೇಬರೇ ಮುಂದುವರೆದರು. ನಂತರದ ಹುದ್ದೆಗೆ ಯಾರನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಕೇಳಿದರು. ಅವರು ‘ಒಕ್ಕಲಿಗರು ಲಿಂಗಾಯತರು ಬೇಡ, ಪ್ರಿಫರಬಲಿ… ಔಟ್‌ ಸೈಡರ್ ಇದ್ದರೆ ಒಳ್ಳೆಯದು’ ಅಂದರು. ಹಾಗಾಗಿ ಆ ಹುದ್ದೆಗೆ ನಾನು ಬರುವಂತಾಯಿತು, ಆ ಹುದ್ದೆಯಲ್ಲಿ ಬರವಣಿಗೆ ಕೆಲಸ ಹೆಚ್ಚಾಗಿತ್ತು. ಅದು ನನಗೆ ಅನುಕೂಲವೇ ಆಯಿತು. ನೋಡಿ, ಅಲ್ಲೂ ಅರಸರು ತಮ್ಮ ಸಾಮಾಜಿಕ ನ್ಯಾಯಕ್ಕೆ – ಲಿನ್ ಮತ್ತು ಸಿಂಗ್‌ ರನ್ನು ನೇಮಿಸುವ ಮೂಲಕ ಒತ್ತು ಕೊಟ್ಟಿದ್ದರು.

ಅರಸು ಅವರ ಆಡಳಿತ ಶೈಲಿ ಹೇಗಿತ್ತು?

ದೇವರಾಜ ಅರಸು ಅತ್ಯುತ್ತಮ ಆಡಳಿತಗಾರರು. ಜೆ. ಲಿನ್ ಹೇಬರು ಮುಖ್ಯಮಂತ್ರಿ ಅರಸು ಅವರಿಗೆ ಸೆಕ್ರೆಟರಿ, ನಾನು ಡೆಪ್ಯುಟಿ ಸೆಕ್ರೆಟರಿ, ನನಗಿನ್ನು ಚಿಕ್ಕ ವಯಸ್ಸು, ಆ ವಯೋಸಹಜ ಬುದ್ಧಿಯಿಂದ ಕೆಲವು ಸಲ ನೇರವಾಗಿ ಮಾತನಾಡಿಬಿಡುತ್ತಿದ್ದೆ, ಆದರೆ ಅವರು ಬೇಸರಿಸಿಕೊಳ್ಳದೆ ನಮ್ಮನ್ನು ಮನೆಮಕ್ಕಳಂತೆ ಟ್ರೇಟ್ ಮಾಡುತ್ತಿದ್ದರು. ‘ಯಂಗ್ ಫೆಲೋ’ ಎಂದು ಬೆನ್ನುತಟ್ಟುತ್ತಿದ್ದರು. ಆವರೊಂದಿಗೆ ಆತ್ಮೀಯ ಸಂಬಂಧವೇರ್ಪಟ್ಟಿತ್ತು, ನಾನು ಮತ್ತು ಲಿನ್ ಸಾಹೇಬರು ಪತ್ರಿಕೆಗಳಲ್ಲಿ ಬಂದ ಉತ್ತಮ ಲೇಖನಗಳನ್ನು ಅರಸು ಅವರಿಗೆ ರೆಫರ್ ಮಾಡುತ್ತಿದ್ದವು, ಹಾಗೂ ನಾನು ಓದಿದ ಪುಸ್ತಕಗಳನ್ನು, ಓದಲೇಬೇಕೆನಿಸಿದ ಪುಸ್ತಕಗಳನ್ನು ಅವರಿಗೆ ಕೊಡುತ್ತಿದ್ದೆ, ಅವುಗಳನ್ನು ಅವರು ಓದಿ ನಮ್ಮೊಂದಿಗೆ ಮುಕ್ತವಾಗಿ ಚರ್ಚೆ ಮಾಡುತ್ತಿದ್ದರು.

ಅರಸು ಅವರದು ಸುಸಂಸ್ಕೃತ ನಡವಳಿಕೆ. ಪರ್ಸನಲ್ ಸ್ಟಾಫ್ ‌ಗೆ ಫುಲ್ ಫ್ರೀಡಂ ಕೊಟ್ಟಿದ್ದರು. ನಾನು ಅವರ ಮನೆಗೆ ಹೋದರೆ, ಬೆಡ್ ರೂಮಿಗೂ ಎಂಟ್ರಿ ಇರ್ತಿತ್ತು. ಅವರು ಎಲ್ಲಿದ್ದರೂ ಕರೆದು ಕೂರಿಸಿಕೊಂಡು ಮಾತನಾಡುತ್ತಿದ್ದರು. ನಾವೂ ಅಷ್ಟೆ, ಸುಮ್ಮನೆ ಅವರ ಮನೆಗೆ ಹೋದವರಲ್ಲ. ನಾವು ಹೋಗಿದ್ದೀವಿ ಅಂದರೆ ಅದು ಅರ್ಜೆಂಟ್ ಕೆಲಸವಿದೆ ಎಂದೇ ಅವರು ಭಾವಿಸುತ್ತಿದ್ದರು.

ಅರಸು ಅವರೊಂದಿಗೆ ಪ್ರವಾಸ ಮಾಡಿದವರು ನೀವು, ಅಲ್ಲಿ ಕಂಡ ಅರಸು ಹೇಗಿದ್ದರು?

ದೇವರಾಜ ಅರಸು ಅವರೊಂದಿಗೆ ತುಂಬಾನೆ ಪ್ರವಾಸ ಮಾಡಿದ್ದೇನೆ. ಅವರು ಮುಖ್ಯಮಂತ್ರಿಯಾಗಿ ನಾನು ಅಧಿಕಾರಿಯಾಗಿ, ಐದರಿಂದ ಎಂಟು ಗಂಟೆಗಳ ಕಾಲ, ದೂರದ ಬಿಜಾಪುರ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಅನೇಕ ಕಡೆಗೆ ಅವರೊಂದಿಗೆ ಹೋಗಿದ್ದೇನೆ. ಅರಸರೊಂದಿಗೆ ವಿಮಾನದಲ್ಲಿ ದೆಹಲಿಗೂ ಹೋಗಿದ್ದೇನೆ, ರಾಜಕೀಯ ಪ್ರವಾಸವಾದರೆ ಮೊಯಿದ್ದೀನ್ ಮತ್ತು ಗೋಪಾಲಶಾಸ್ತ್ರಿ ಹೋಗುತ್ತಿದ್ದರು. ಆಡಳಿತಾತ್ಮಕವಾಗಿದ್ದರೆ ನಾನು ಹೋಗುತ್ತಿದ್ದೆ. ಆಗ ಈಗಿನಂತೆ ಹೆಲಿಕಾಪ್ಟರ್, ಹತ್ತಾರು ಎಸ್ಕಾರ್ಟ್ ಕಾರು, ಜೇವಗಳು, ಪೊಲೀಸ್‌ನವರ ಭದ್ರತೆ ಏನೂ ಇರುತ್ತಿರಲಿಲ್ಲ. ಅವುಗಳನ್ನು ಅವರೂ ಬಯಸುತ್ತಿರಲಿಲ್ಲ. ಎಷ್ಟೇ ದೂರವಿರಲಿ ಕಾರಿನಲ್ಲಿಯೇ ಪ್ರವಾಸ, ಡ್ರೈವರ್, ಹಿಂದೆ ನಾನು ಮತ್ತು ಅವರು. ಆ ದೃಶ್ಯ ನನಗೆ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಜಿಯಾಲಜಿ ಓದಿಕೊಂಡಿದ್ದು ಜಿಯಾಗ್ರಫಿ ಓದಿದ್ದ ನನ್ನ ಜೊತೆ ಚರ್ಚಿಸುತ್ತಿದ್ದರು. ಭಾಟ್ಟಿ ಬಗ್ಗೆ. ಸಾಹಿತ್ಯದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಮಹಾಭಾರತದ ಬಗ್ಗೆ, ಅದರಲ್ಲಿ ಬರುವ ಪಾತ್ರಗಳ ಕುರಿತು ವಿಶೇಷ ಆಸಕ್ತಿಯಿಂದ ಮಾತನಾಡುತ್ತಿದ್ದರು. ಚಾರ್ಲ್ಸ್ ಡಿಕನ್ಸ್ ಅವರಿಗೆ ಪ್ರಿಯವಾದ ಕಾದಂಬರಿಕಾರ, ಪ್ರಕೃತಿ ಪರಿಸರ-ವನಸ್ಪತಿ ಬಗ್ಗೆ ಮಾತನಾಡುತ್ತಿದ್ದರು. ಕರ್ನಾಟಿಕ್ ಸಂಗೀತ ಇಷ್ಟಪಡುತ್ತಿದ್ದರು. ಕೆಲವೊಂದು ಸಲ ಕಾರಿನಲ್ಲಿಯೇ ಹಾಡುತ್ತಿದ್ದರು. ಅಧಿಕಾರಿಗಳ ಮುಂದೆ ಹಾಡುವುದೇ ಎಂಬ ಹಮ್ಮು ಬಿಮ್ಮು ಏನೊಂದು ಇರುತ್ತಿರಲಿಲ್ಲ. ಎಲ್ಲವೂ ಸಹಜ ಸುಂದರ.

ಇದನ್ನು ಗಮನಿಸಿದ ನಾನು ಅವರನ್ನು ಕೆಲವು ಸಾರ್ವಜನಿಕ ಕಾರ್ಯಕ್ರಮಗಳಿಗೆ, ಅವರಿಗೆ ತಿಳಿಸದಂತೆ ಕರೆದುಕೊಂಡು ಹೋದ ಪ್ರಸಂಗಗಳೂ ಇವೆ. ಮುಖ್ಯಮಂತ್ರಿಗಳು ಬರುತ್ತಾರೆಂದು ಕಾರ್ಯಕ್ರಮ ಆಯೋಜಕರಿಗೂ ಗೊತ್ತಿರಲಿಲ್ಲ, ಮುಖ್ಯಮಂತ್ರಿ ಅರಸು ಅವರಿಗೂ ವಿಷಯವನ್ನು ಮೊದಲೇ ತಿಳಿಸುತ್ತಿರಲಿಲ್ಲ, ಅಂತಹ ಕೆಲವು ಸಂಗೀತ ಕಾರ್ಯಕ್ರಮಗಳಿಗೆ ಹೋದಾಗ, ಅರಸು ಅವರು ಸಂಗೀತಗಾರರಿಗೆ ಗೌರವ ತೋರಿ, ಕತ್ತಲಲ್ಲಿ ಕೂತು ತನ್ಮಯರಾಗಿ  ಸಂಗೀತ ಆಲಿಸಿದ್ದನ್ನು ಕಂಡಿದ್ದೇನೆ.

ಪ್ರವಾಸದಲ್ಲಿದ್ದಾಗ ಅವರದೊಂದು ಶೈಲಿ ಇತ್ತು.  ಆ ಜಿಲ್ಲೆಗೆ ಎಂಟ್ರಿಯಾಗುತ್ತಿದ್ದಂತೆ ಡಿಸಿ, ಎಸ್ಪಿ ರಿಸೀವ್ ಮಾಡಿಕೊಳ್ಳುತ್ತಿದ್ದರಲ್ಲ, ಅವರೊಂದಿಗೆ ಆ ಜಿಲ್ಲೆಯ ಜನಜೀವನ, ಆಗುಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದರು. ಅಲ್ಲಿಯೇ ವಿವರವಾಗಿ ಬ್ರೀಫಿಂಗ್‌ ಕೂಡ ನಡೆಯುತ್ತಿತ್ತು.

ಪ್ರವಾಸದುದ್ದಕ್ಕೂ ಕೆರೆ ಕಟ್ಟಿ ನೋಡ್ತಿದ್ರು, ಹೊಲ ಗದ್ದೆಗಳನ್ನು ಗಮನಿಸುತ್ತಿದ್ದರು. ಮಳೆ-ಬೆಳೆ ಆಗಿಲ್ಲ. ಅಂದರೆ, ಈ ಪ್ರದೇಶ ಬರಗಾಲಕ್ಕೆ ತುತ್ತಾಗಿದೆ, ಹಿಂದುಳಿದಿದೆ, ಜನ ಕಷ್ಟಕ್ಕೆ ಸಿಲುಕಿದ್ದಾರೆ. ಎನ್ನುತ್ತಿದ್ದರು. ನೀರಾವರಿಗೆ ಅವರು ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಕಾಳಿ ಪ್ರಾಜೆಕ್ಟ್ ಬಗ್ಗೆ ವಿಶೇಷ ಒಲವಿತ್ತು. ಬಡವರಿಗೆ ಮನೆ ಕೊಡುವ ಹೌಸಿಂಗ್ ಸ್ಟೀಮ್ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದರು. ಎಲ್ಲೆಂದರಲ್ಲಿ, ಜನ ಕಂಡ ತಕ್ಷಣ ಕಾರು ನಿಲ್ಲಿಸುತ್ತಿದ್ದರು. ಅವರನ್ನು ಆತ್ಮೀಯವಾಗಿ ಮಾತನಾಡಿಸಿ, ಅವರಿಂದ ಮನವಿಗಳನ್ನು ಸ್ವೀಕರಿಸುತ್ತಿದ್ದರು. ಅವರಿಗೆ ಅವರ ಸ್ವಂತ ಕ್ಷೇತ್ರ ಹುಣಸೂರಿನಲ್ಲಿ ಎಲ್ಲರ ಪರಿಚಯವಿತ್ತು. ಹೆಸರಿಡಿದು ಕರೆದು ಮಾತನಾಡಿಸುತ್ತಿದ್ದರು.

ಅವರ ರಾಜಕೀಯ ಜಂಜಾಟಗಳ ನಡುವೆ ಫೈಲ್ ಕ್ಲಿಯರ್ ಮಾಡುವುದು ತಡವಾದಾಗ, ನಮ್ಮ ಲಿನ್ ಸಾಹೇಬರು ಮತ್ತು ನಾನು ಅವರನ್ನು ತಿಪ್ಪಗೊಂಡನಹಳ್ಳಿ ಅಥವಾ ಪ್ಯಾಲೆಸ್ ಗೆಸ್ಟ್‌ಹೌಸ್‌ಗೆ ಕರೆದುಕೊಂಡು ಹೋಗುತ್ತಿದ್ದೆವು, ಅಲ್ಲಿ ನಾವು ಮೂವರೆ, ರಾಜ್ಯದ ಆಗುಹೋಗುಗಳ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದೆವು. ನಮ್ಮ ಅಭಿಪ್ರಾಯಗಳನ್ನು ಕೇಳಿ, ಸರಿ ಎನಿಸಿದರೆ ಅಲ್ಲಿಯೇ ಕಾರ್ಯಕ್ರಮಗಳಿಗೆ, ಅನುಷ್ಟಾನಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದರು.

ಶಾಸನಸಭೆಯಲ್ಲಿ ಅವರು ಹೇಗಿರುತ್ತಿದ್ದರು?

ಎಲ್ಲರ ಪ್ರಶ್ನೆಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದರು. ಎಲ್ಲದಕ್ಕೂ ಉತ್ತರ ಕೊಡುತ್ತಿದ್ದರು. ಅವರ ಉತ್ತರದಲ್ಲಿದ್ದ ಪ್ರಮುಖ ಅಂಶವೆಂದರೆ, ಅಂಕಿ ಅಂಶ. ಅದಿಲ್ಲದೆ ಅವರು ಮಾತನಾಡುತ್ತಿರಲಿಲ್ಲ. ಅದರಲ್ಲೂ ಮೇಲ್ಮನೆಯಲ್ಲಿ ಆಗ ವಿರೋಧಪಕ್ಷದ ನಾಯಕರಾಗಿದ್ದ ರಾಮಕೃಷ್ಣ ಹೆಗಡೆಯವರು ಇದ್ದಾರೆಂದರೆ, ಅವರು ಪ್ರಶ್ನೆ ಕೇಳಲು ಎದ್ದು ನಿಂತರೆ, ಅರಸು ಅಲರ್ಟ್ ಆಗುತ್ತಿದ್ದರು. ಉತ್ತರಕ್ಕೆ ತುಂಬಾ ತಯಾರಿ ಮಾಡಿಕೊಳ್ಳುತ್ತಿದ್ದರು. ನಾನು ಶಾಸನಸಭೆಯಲ್ಲಿ ಅಧಿಕಾರಿಗಳ ಗ್ಯಾಲರಿಯಲ್ಲಿ ಕೂತಿರುತ್ತಿದ್ದೆ. ಅವರು ಕೇಳಿದ ಅಂಕಿ ಅಂಶಗಳನ್ನು ಒದಗಿಸಲು ಎದ್ದು ಹೊರಗೆ ಹೋಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಪಡೆದು ಕೊಡುತ್ತಿದ್ದೆ. ಅರಸು ಯಾವಾಗಲೂ ನಿಜಲಿಂಗಪ್ಪನವರ ಕಾಲದ್ದು ಮತ್ತು ತಮ್ಮ ಕಾಲದ್ದನ್ನು ಹೋಲಿಕೆ ಮತ್ತು ವ್ಯತ್ಯಾಸಗಳನ್ನಿಟ್ಟು ಮಾತನಾಡುತ್ತಿದ್ದರು. ಅದರಲ್ಲಿ ಅಂಕಿ ಅಂಶಗಳು ಕಡ್ಡಾಯ. ಆಗ ನಾನು ಗಮನಿಸಿದಂತೆ, ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಮತ್ತು ಕೋಣಂದೂರು ಲಿಂಗಪ್ಪನವರು ಸರಕಾರದ ಬಗ್ಗೆ, ಅರಸು ಅವರ ಆಡಳಿತದ ಬಗ್ಗೆ ಭಾರೀ ಜೋರಾಗಿ ಟೀಕೆಗಳನ್ನು ಮಾಡುತ್ತಿದ್ದರು. ಅವರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ಅರಸು, ಹೆಗಡೆ ಅಂದಾಕ್ಷಣ ಅಲರ್ಟ್‌ ಆಗುತ್ತಿದ್ದುದು ವಿಶೇಷವಾಗಿತ್ತು.

ಒಂದು ಸಲ, ಶಾಸನಸಭೆಗೆ ಹೋಗುವ ಮುಂಚೆ ಮುಖ್ಯಮಂತ್ರಿ ಅರಸು ಮತ್ತು ಲಿನ್ ಸಾಹೇಬರ ನಡುವೆ ಯಾವುದೋ ಗಹನವಾದ ವಿಚಾರ ಚರ್ಚೆಯಾಗುತ್ತಿತ್ತು. ಅದು ಫೈನಲೈಸ್ ಆಗಬೇಕು ಎನ್ನುವಾಗ, ಪಕ್ಕದಲ್ಲಿಯೇ ಇದ್ದ ನನಗೆ ಅದು ಸರಿ ಇಲ್ಲ ಅನ್ನಿಸಿ, ಹೇಳಲು ಮುಂದಾದೆ, ಆದರೆ ಲಿನ್ ಸಾಹೇಬರು, ಕೈ ಸನ್ನೆಯ ಮೂಲಕ ಸುಮ್ಮನಿರಿಸಲು ಸೂಚಿಸಿದರು. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಅರಸು, ಚಿರಂಜೀವಿ ಸಿಂಗ್ ಹೇಳಲಿ, ನಾನು ಇವರ ಮಾತನ್ನೇ ಕೇಳದಿದ್ದರೆ, 300 ಜನ ಶಾಸಕರು ಹೇಗೆ ನನ್ನ ಮಾತು ಕೇಳುತ್ತಾರೆ’ ಎಂದರು. ಅದು ಆ ಕ್ಷಣದ ಮಾತಾಗಿರಬಹುದು, ಆದರೆ ಅದರಲ್ಲಿ ಅಡಗಿರುವ ವಿವೇಕ ಮತ್ತು ದೂರದೃಷ್ಟಿತ್ವ ಸಾಮಾನ್ಯದ್ದಲ್ಲ.

ದೇವರಾಜ ಅರಸು

ತುರ್ತು ಪರಿಸ್ಥಿತಿಯ ಸಂದರ್ಭವನ್ನು ಅರಸು ನಿಭಾಯಿಸಿದ ಬಗೆ ಹೇಗಿತ್ತು?

ತುರ್ತು ಪರಿಸ್ಥಿತಿಯನ್ನು ಅರಸು ಅವರು ಸಮರ್ಥವಾಗಿಯೇ ನಿಭಾಯಿಸಿದರು. ವಿರೋಧಿಗಳನ್ನು ವಿರೋಧಿಗಳೆಂದು ಪರಿಗಣಿಸದೆ, ಎಲ್ಲರನ್ನು ಸಮಾನವಾಗಿ ನೋಡಿಕೊಂಡರು. ನಾನು ಗಮನಿಸಿದಂತೆ, ಆ ಸಂದರ್ಭದಲ್ಲಿ 2-3 ಜಿಲ್ಲೆಗಳು ವಿವಿಧ ಕಾರಣಗಳಿಗಾಗಿ ಸುದ್ದಿಯಾದವು. ಅದಕ್ಕೆ ಕಾರಣ ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಹೊರತು ಅರಸು ಅವರಲ್ಲ. ನನ್ನ ಪ್ರಕಾರ ತುರ್ತು ಪರಿಸ್ಥಿತಿಯಿಂದ ಅರಸು ಅವರ ಸರಕಾರಕ್ಕೆ ಯಾವ ಅನುಕೂಲವೂ ಆಗಲಿಲ್ಲ. ಅರಸು ಅಂದುಕೊಂಡದ್ದು ತುರ್ತು ಪರಿಸ್ಥಿತಿಯಲ್ಲಿ ನೆರವೇರಲಿಲ್ಲ. ಉದಾಹರಣೆಗೆ ಭೂಸುಧಾರಣೆ ಕಾಯ್ದೆ ಇದೆಯಲ್ಲ, ಅದು ಕರಾವಳಿಯಲ್ಲಿ ಸ್ವಲ್ಪ ಯಶಸ್ವಿಯಾದದ್ದನ್ನು ಬಿಟ್ಟರೆ, ಬೇರೆ ಪ್ರಯೋಜನ ಆಗಲಿಲ್ಲ. ಈಗ ನೋಡಿದ್ರೆ ಅಂಥದ್ದೇನೂ ಆಗಿಯೇ ಇಲ್ಲವೇನೋ ಅನ್ನಿಸುತ್ತಿದೆ. ತುರ್ತು ಪರಿಸ್ಥಿತಿ ಬರದೆ ಇದ್ದಿದ್ದರೆ, ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಅರಸು ಅವರಿಗೆ ಫ್ರೀ ಹ್ಯಾಂಡ್ ಸಿಕ್ಕಿತ್ತು ಅನ್ನುವುದು ನನ್ನ ಅನಿಸಿಕೆ, ಅಷ್ಟರಮಟ್ಟಿಗೆ ಅವರಲ್ಲಿ ಕನಸುಗಳಿದ್ದವು, ಕಾರ್ಯಕ್ರಮಗಳಿದ್ದವು.

ಇಷ್ಟಿದ್ದರೂ ಕನ್ನಡದ ಚಿಂತಕರು, ಬುದ್ಧಿಜೀವಿಗಳು ಅರಸು ವಿರುದ್ಧವಿದ್ದರಲ್ಲ?

ಬುದ್ಧಿಜೀವಿಗಳ ದೃಷ್ಟಿಯೆಲ್ಲ ಇಂದಿರಾ ಮತ್ತು ಕಾಂಗ್ರೆಸ್ ವಿರುದ್ಧವಿತ್ತು, ತುರ್ತು ಪರಿಸ್ಥಿತಿ ಹೇರಿಕೆ ಅದಕ್ಕೆ ಪೂರಕವಾಗಿ ಕೆಲಸ ಮಾಡಿತ್ತು. ಆ ಸಂದರ್ಭದಲ್ಲಿ, ನಾನು ವಾರ್ತಾ ಇಲಾಖೆಯ ನಿರ್ದೇಶಕ (ಅಡಿಷನಲ್ ಇನ್‌ಚಾರ್ಜ್‌) ನಾಗಿದ್ದಾಗ, ಪತ್ರಿಕಾ ಸಂಪಾದಕರು, ಹಿರಿಯ ಪತ್ರಕರ್ತರು ಮತ್ತು ಕೆಲ ಬುದ್ಧಿಜೀವಿಗಳ ಜೊತೆ ಅರಸು ಅವರನ್ನು ಒನ್‌ ಟು ಒನ್‌ ಡಿಸ್ಕಷನ್‌ಗೆ, ಡಿನ್ನರ್‌ ಗೆ ಅರೇಂಜ್ ಮಾಡಿದ್ದೆ. ಆಗ ಅರಸು ಅವರ ಮೇಲಿದ್ದ ಅಭಿಪ್ರಾಯ ಕೊಂಚ ಬದಲಾಗಿತ್ತು.

ಲಂಕೇಶರು ಕೂಡ ಅರಸರನ್ನು ಕಟುವಾಗಿ ಟೀಕಿಸುತ್ತಿದ್ದರಲ್ಲ?

ಲಂಕೇಶ್ ನನ್ನ ಒಳ್ಳೆಯ ಸ್ನೇಹಿತರು. ಅವರೊಂದಿಗೆ ಕಾಲ ಕಳೆಯುವ, ಕೂತು ಮಾತನಾಡುವ ಸಂದರ್ಭ ಒದಗಿ ಬಂದಾಗಲೆಲ್ಲ ನಾನು ದೇವರಾಜ ಅರಸು ಅವರ ಬಗ್ಗೆ, ಅವರ ಕಾರ್ಯಕ್ರಮಗಳ ಬಗ್ಗೆ, ಅವರ ಗುಣ-ಸ್ವಭಾವಗಳ ಬಗ್ಗೆ… ಹೀಗೆ ನಾನು ಹತ್ತಿರದಿಂದ ಕಂಡ ಚಿತ್ರಣವನ್ನು ಸಾಕಷ್ಟು ವಿವರವಾಗಿ ಹೇಳುತ್ತಿದ್ದೆ, ಅದನ್ನು ಕೇಳಿಸಿಕೊಂಡ ಲಂಕೇಶ್, ‘ನಮಗೆ ಇದೆಲ್ಲ ಗೊತ್ತೇ ಇರಲಿಲ್ಲ’ ಎ೦ದಿದ್ದೂ ಇದೆ.

ಅಷ್ಟೇ ಅಲ್ಲ, ಲಂಕೇಶ್ ಅಲ್ಲಿಗೇ ಸುಮ್ಮನಾಗದೆ ನನ್ನ ಆಫೀಸಿಗೂ ಎರಡು ಮೂರು ಸಲ ಬಂದಿದ್ದರು, ಬಂದಾಗ ಸರಕಾರದ ಯೋಜನೆಗಳು, ಕಾರ್ಯಕ್ರಮಗಳಿಗೆ ಸಂಬಂಧಿಸಿದ ಫೈಲ್‌ಗಳನ್ನು ತೋರಿಸಿದ್ದೆ. ಮುಂದುವರೆದು ಅರಸು ಮತ್ತು ಲಂಕೇಶ್ ಭೇಟಿಗಾಗಿ ಎರಡು ಸಲ ದಿನಾಂಕ ಕೂಡ ಗೊತ್ತು ಮಾಡಿದ್ದೆ, ಇದೆಲ್ಲ ಆದ ಮೇಲೆ ಲಂಕೇಶರು, ‘ಅರಸು ಬಗ್ಗೆ ನನ್ನ ಅಭಿಪ್ರಾಯ ಬೇರೆ ಇತ್ತು, ಈಗ ಬದಲಾಗಿದೆ’ ಎಂದಿದ್ದರು. ಅರಸು ತೀರಿಕೊಂಡ ನಂತರ, ಆದನ್ನವರು ಅವರ ಪತ್ರಿಕೆಯಲ್ಲೂ ಬರೆದರು.

ಅರಸು ಅವರ ಗುಣ-ಸ್ವಭಾವಗಳು ಹೇಗಿದ್ದವು?

ಅರಸು ಅವರದು ಬಹಳ ದೊಡ್ಡ ಮನಸ್ಸು, ಮಾನವೀಯ ವ್ಯಕ್ತಿತ್ವ, ಆಗ ಅವರದೇ ಪಕ್ಷದಲ್ಲಿದ್ದ, ಲಿಂಗಾಯತ ನಾಯಕರಾದ ಕೆ.ಎಚ್.ಪಾಟೀಲ್, ಅರಸು ಅವರ ಕ್ಯಾಬಿನೆಟ್ ಸಚಿವರಾಗಿದ್ದರೂ, ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು, ಆದರೆ ಕೆ.ಎಚ್‌.ಪಾಟೀಲ್‌ ಮತ್ತು ಅರಸು ಇಬ್ಬರೂ ದೊಡ್ಡಮನಸ್ಸಿನ ದೊಡ್ಡ ನಾಯಕರು. ಇಬ್ಬರಲ್ಲೂ ಸಣ್ಣತನವಿರಲಿಲ್ಲ. ಸಾರ್ವಜನಿಕವಾಗಿ, ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಗೌರವಿಸುವ, ಘನತೆಯಿಂದ ನಡೆಸಿಕೊಳ್ಳುವ ಬಗೆಯಲ್ಲಿ ಇಬ್ಬರದೂ ಮೇಲುಗೈ.

ಅರಸು ಅವರ ದೊಡ್ಡ ಗುಣ ಅಂದಿರಿ, ಅದಕ್ಕೊಂದು ಉದಾಹರಣೆ…

ಅರಸು ಅವರಿಗೆ ಮುಸ್ಲಿಮರ ಜೊತೆ ಬಹಳ ಒಳ್ಳೆಯ ಬಾಂಧವ್ಯವಿತ್ತು. ಮುಸ್ಲಿಮರ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದರು. ಮುಸ್ಲಿಮ್ ನಾಯಕರನ್ನು ಗುರುತಿಸಿ, ಅಧಿಕಾರದ ಸ್ಥಾನಗಳೆಂಬ ಅವಕಾಶಗಳನ್ನು ಸೃಷ್ಟಿಸಿ ಕಲ್ಪಿಸಿಕೊಟ್ಟಿದ್ದರು. ಅದರಲ್ಲಿ ಮೈಸೂರಿನ ಅಜೀಜ್ ಸೇನ್ ಕೂಡ ಒಬ್ಬರು. ಇವರು ಅರಸು ಅವರಿಗೆ ಆತ್ಮೀಯರಾಗಿದ್ದರು. ಅರಸು ಅವರ ಕೊನೆಯ ದಿನಗಳಲ್ಲಿ, ಅಜೀಜ್ ಸೇಠ, ‘ಸ್ವಲ್ಪ ಹಣ ಸಹಾಯ ಬೇಕಾಗಿತ್ತು’ ಎಂದು ಕೇಳಿಕೊಂಡರು. ತಕ್ಷಣ ಅರಸು ಅವರು, ಮೊಯಿದ್ದೀನ್ ಕರೆಸಿ, ʼಸೇಠ್‌ ರಿಗೆ ಏನೋ ಪ್ರಾಬ್ಲೆಂ ಅಂತೆ, ಹಣದ ಅವಶ್ಯಕತೆ ಇದೆಯಂತೆ, ಕೊಟ್ಟುಬಿಟ್ಟು ಬಾ’ ಎಂದರು. ಆದರೆ, ಅಜೀಜ್ ಸೇ‌ಠ್‌ ರ ಅವತ್ತಿನ ರಾಜಕೀಯ ನಡೆಯನ್ನು ಮತ್ತು ನಾಯಕನಿಷ್ಠೆಯನ್ನು ಬಹಳ ಹತ್ತಿರದಿಂದ ಕಂಡಿದ್ದ ಮೊಯಿದ್ದೀನ್, ‘ಸಾರ್, ಅವರು ನಿಮ್ಮನ್ನು ಬಿಟ್ಟು, ನಮ್ಮ ವಿರೋಧಿ ಪಾಳೆಯವಾದ ಗುಂಡೂರಾವ್ ಜೊತೆ ಸೇರಿಕೊಳ್ಳಲು ಓಡಾಡುತ್ತಿದ್ದಾರೆʼ ಎಂದು ಖಚಿತ ಮಾಹಿತಿಗಳನ್ನೊಳಗೊಂಡ ಸುದ್ದಿಯನ್ನು ಕೊಟ್ಟರು. ‘ಇಲ್ಲ, ಅವರು ಕಷ್ಟದಲ್ಲಿದ್ದಾರಂತೆ, ಹಣ ಕೊಟ್ಟು ಬಾ’ ಎಂದು ಹೇಳಿ ಕೊಡಿಸಿದರು. ಹಣ ಪಡೆದ ಅಜೀಜ್ ಸೇಠ್‌, ಮಾರನೆ ದಿನ ಬೆಳಗ್ಗೆ ಗುಂಡೂರಾಯರ ಪಕ್ಷದಲ್ಲಿದ್ದರು.

ಅಜೀಜ್ ಸೇಠ್‌ ಅಲ್ಲಿಗೆ ಹಾರುವುದು ಅರಸು ಅವರಿಗೆ ಗೊತ್ತಿತ್ತು, ಗೊತ್ತಿದ್ದೂ ಅವರಿಗೆ ಹಣ ಕೊಡಿಸಿದರು. ಇದು ಅರಸು ಅವರ ದೊಡ್ಡ ಗುಣ, ಸೇಠರ ಸಣ್ಣತನ.

ಅರಸು ಅವರಿಂದ ನಾಯಕರಾಗಿ, ಅಧಿಕಾರ ಅನುಭವಿಸಿ, ಅವರನ್ನೇ ತೊರೆದು ಹೋದವರ ಬಗ್ಗೆ ಏನಾದರೂ…

ಅವರನ್ನು ತೊರೆದು ಹೋದವರ ಬಗ್ಗೆ ವಿಷಾದವಿತ್ತು. ಆದರೆ ಎಂದೂ ತೋರಿಸಿಕೊಳ್ಳುತ್ತಿರಲಿಲ್ಲ, ವಿಷಾದದ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದರು. ಅವರು ಸಾಯುವ ಒಂದು ತಿಂಗಳು ಮುಂಚೆ ನಾನು ಅವರ ಬಳಿ ಹೋದಾಗ, ಸುದೀರ್ಘವಾಗಿ ಮಾತನಾಡಿದ್ದರು. ಅದಾಗ ತಾನೆ ದಿಲ್ಲಿಗೆ ಹೋಗಿ ಬಂದಿದ್ದ ಅರಸು, ರೇಡಿಯೋದಲ್ಲಿ ಬಿತ್ತರವಾಗುತ್ತಿದ್ದ ಉತ್ತರ ಪ್ರದೇಶ ಮತ್ತು ಹರ್ಯಾಣ್ ರಾಜ್ಯಗಳ ಚುನಾವಣಾ ಫಲಿತಾಂಶದ ಸುದ್ದಿ ಕೇಳುತ್ತಿದ್ದರು, ಫಲಿತಾಂಶ ಕಾಂಗ್ರೆಸ್ಸಿನ ವಿರುದ್ಧವಾಗಿತ್ತು, ಇಂದಿರಾ ಗಾಂಧಿ ಪಕ್ಷಕ್ಕೆ ಸೋಲಾಗಿತ್ತು. ಆಗ ಅರಸು, ‘ನೋಡ್ತಾ ಇರಿ, ನಾರ್ಥ್‌ನಲ್ಲಾಗಿದ್ದು ಇಲ್ಲೂ ಆಗುತ್ತೆ. ಆಕೆಗೆ ಸೋಲು ಗ್ಯಾರಂಟಿ’ ಅಂದೆಲ್ಲ ಹೇಳಿದ್ದರು.

ಇಂದಿರಾ ಸೋಲನ್ನು, ಅವರ ಗೆಲುವನ್ನು ನೋಡಲು ಅವರೇ ಇರಲಿಲ್ಲ, ಅರಸು ಅವರನ್ನುಕಳೆದುಕೊಂಡಿದ್ದು, ಕರ್ನಾಟಕದ ದುರಂತ.

ಕೃಪೆ: ನಮ್ಮ ಅರಸು : ಒಡನಾಡಿಗಳು ಕಂಡಂತೆ, ಬಸವರಾಜು ಮೇಗಲಕೇರಿ (2020), ಪಲ್ಲವ ಪ್ರಕಾಶನ, ಚನ್ನಪಟ್ಟಣ

ಚಿರಂಜೀವಿ ಸಿಂಗ್‌

ಬಸವರಾಜು ಮೇಗಲಕೇರಿ ಪುಸ್ತಕ ದಿಂದ.