davanagere – Peepal Media

ದಾವಣಗೆರೆ| ಮಲೆನಾಡಿನಲ್ಲಿ ವ್ಯಾಪಕ ಮಳೆ: ತುಂಗಾ-ಭದ್ರಾ ನದಿ ಪಾತ್ರದ ಜನರಿಗೆ ಜಿಲ್ಲಾಧಿಕಾರಿ ಎಚ್ಚರಿಕೆ
ದಾವಣಗೆರೆ ಜು.31 (ಕರ್ನಾಟಕ ವಾರ್ತೆ): ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಭದ್ರಾ ಜಲಾಶಯ ಭರ್ತಿಯಾಗಿದೆ ಮತ್ತು ತುಂಗಾ ನದಿಯಿಂದಲೂ ಎಲ್ಲಾ ಕ್ರೆಸ್ ಗೇಟ್‌ಗಳ ಮೂಲಕ ನೀರನ್ನು ನದಿಗೆ ಹೊರಬಿಡಲಾಗುತ್ತಿದ್ದು ತುಂಗಭದ್ರಾ ನದಿಯಲ್ಲಿ 1,44,468 ಕ್ಯೂಸೆಕ್ಸ್ಗೆ ಏರಿಕೆಯಾಗಿದ್ದು ಇದು ಅಪಾಯ ಮಟ್ಟವನ್ನು ತಲುಪಿರುವುದರಿಂದ ನದಿಪಾತ್ರದಲ್ಲಿನ ಜನರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಜನರಿಗೆ ಮನವಿ ಮಾಡಿದ್ದಾರೆ.

ಅವರು ಬುಧವಾರ ಹೊನ್ನಾಳಿಯ ಸಾಸ್ವೇಹಳ್ಳಿ, ಬಾಲರಾಜ್‌ಘಾಟ್, ಬಂಬೂ ಬಜಾರ್ ಪ್ರದೇಶಗಳಿಗೆ ಶಾಸಕರಾದ ಡಿ.ಜಿ.ಶಾಂತನಗೌಡ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರವಾಹದಿಂದ ತೊಂದರೆಯುಂಟಾಗುವ ಪ್ರದೇಶಗಳ ವೀಕ್ಷಣೆ ಮಾಡಿದರು.

ತುಂಗಾ ನದಿಯಿಂದ 82053 ಮತ್ತು ಭದ್ರಾದಿಂದ 62415 ಕ್ಯೂಸೆಕ್ಸ್ ನೀರು ಬರುತ್ತಿದ್ದು ತುಂಗಭದ್ರಾ ನದಿಯಲ್ಲಿ ಒಂದೂವರೆ ಲಕ್ಷ ಕ್ಯೂಸೆಕ್ಸ್ವರೆಗೆ ನದಿಯಲ್ಲಿ ನೀರು ಹರಿಯುತ್ತಿದೆ. ಇದರಿಂದ ಹೊನ್ನಾಳಿ ಬಾಲರಾಜ್‌ಘಾಟ್, ಬಂಬೂ ಬಜಾರ್ ಪ್ರದೇಶದ ನದಿಪಾತ್ರದಲ್ಲಿನ ಮನೆಗಳಿಗೆ ನೀರು ಬರಲಿದೆ. ಇದಕ್ಕಾಗಿ ಅಂಬೇಡ್ಕರ್ ಭವನ ಇಲ್ಲಿ 20 ಕುಟುಂಬಗಳ 93 ಜನರು, ಗುರುಭವನದಲ್ಲಿ 6 ಕುಟುಂಬದ 27 ಜನರಿಗೆ ಕಾಳಜಿ ಕೇಂದ್ರ ತೆರೆದು ಪ್ರವಾಹಪೀಡಿತ ಪ್ರದೇಶದಿಂದ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಮತ್ತು ಹರಿಹರದಲ್ಲಿನ ಗಂಗಾನಗರದಲ್ಲಿನ ಪ್ರವಾಹ ಉಂಟಾಗಬಹುದೆಂದು ಎಪಿಎಂಸಿಯಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ನದಿಗೆ ಇಳಿಯದಂತೆ ಎಚ್ಚರಿಕೆ, ನಿಷೇಧ, ಸನ್ನದ್ದವಾದ ಎಸ್‌ಡಿಆರ್‌ಎಫ್, ಅಗ್ನಿಶಾಮಕ ಪಡೆ; ತುಂಗಭದ್ರಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಎಸ್.ಡಿ.ಆರ್.ಎಫ್ ಪಡೆ ಮತ್ತು ಅಗ್ನಿ ಶಾಮಕ ಇಲಾಖೆ ತಂಡವು ರಕ್ಷಣಾ ಪರಿಕರಗಳೊಂದಿಗೆ ಸನ್ನದ್ದವಾಗಿಡಲಾಗಿದೆ. ಮತ್ತು ನದಿಪಾತ್ರದಲ್ಲಿ ಜನ, ಜಾನುವಾರುಗಳು ನದಿಗೆ ಇಳಿಯದಂತೆ ಅಪಾಯಕಾರಿ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತ್ತು ಗ್ರಾಮ ಮಟ್ಟದಲ್ಲಿನ ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಿ ನದಿಪಾತ್ರದಲ್ಲಿನ ಎಲ್ಲಾ ಗ್ರಾಮಗಳಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಗ್ರಾಮಾಡಳಿತ ಅಧಿಕಾರಿಗಳು ಸೇರಿದಂತೆ ತಹಶೀಲ್ದಾರರು ಕಟ್ಟೆಚ್ಚರ ವಹಿಸಲು ಸೂಚನೆ ನೀಡಿ ನದಿಗೆ ಇಳಿಯದಂತೆ ಡಂಗೂರ ಹಾಗೂ ಮೈಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಪಥ ಬದಲಿಸಲು ಸೂಚನೆ; ನದಿ ಪ್ರವಾಹದಿಂದ ಕೆಲವು ರಸ್ತೆ ಸಂಪರ್ಕಗಳು ಕಡಿತವಾಗಿದ್ದು ಇಲ್ಲಿ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಷೇಧಿತ ಮಾರ್ಗದ ಬದಲಾಗಿ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನ ವಿಜಯಪುರ-ಕೋಟೆಮಲ್ಲೂರು ರಸ್ತೆ ಬದಲಾಗಿ ಹಾರಕೆರೆ ರಸ್ತೆ, ಕಮ್ಮಾರಗಟ್ಟೆ-ಬೆನಕನಹಳ್ಳಿ ಬದಲಾಗಿ ಕೈಮರ ಕ್ಯಾಂಪ್ ರಸ್ತೆ, ಹರಿಹರ ತಾ; ನಂದಿಗುಡಿ-ಪತ್ಯಾಪುರ-ಉಕ್ಕಡಗಾತ್ರಿ ರಸ್ತೆ ಸೇತುವೆ ಮುಳುಗಡೆಯಾಗಿದ್ದು ಇದರ ಬದಲಾಗಿ ನಂದಿಗುಡಿ-ತುಮ್ಮಿನಕಟ್ಟೆ ರಸ್ತೆ ಬಳಕೆಗೆ ಸೂಚಿಸಲಾಗಿದೆ.

ಹೊನ್ನಾಳಿ ಬೇಸ್ ಸ್ಟೇಷನ್; ಹೊನ್ನಾಳಿಯಲ್ಲಿ ತುಂಗಭದ್ರಾ ನದಿಯ ನೀರಿನ ಮಟ್ಟ ಅಳತೆಗೆ ಕೇಂದ್ರ ವಾಟರ್ ಬೋರ್ಡ್ನ ಬೇಸ್ ಸ್ಟೇಷನ್ ಇದ್ದು ಇಲ್ಲಿ ಜುಲೈ 31 ರ ಸಂಜೆ 6 ಗಂಟೆ ವೇಳೆಗೆ 12.06 ಮೀಟರ್ ಪ್ರಮಾಣದಲ್ಲಿ ನೀರು ಹರಿಯುತ್ತಿದೆ, ಇದು ಅಪಾಯ ಮಟ್ಟವಾಗಿದೆ. ಈ ಸ್ಟೇಷನ್‌ನಲ್ಲಿ 10.85 ಮೀಟರ್ ಹರಿವು ದಾಖಲಾದರೆ ಅಪಾಯದ ಮಟ್ಟ ಎಂದೇ ಪರಿಗಣಿಸಲಾಗುತ್ತದೆ. 12.57 ಮೀಟರ್ ದಾಖಲಾದರೆ ಪ್ರವಾಗ ಉಂಟಾಗಿ ಹಾನಿಯ ಮಟ್ಟವೆಂದು ಪರಿಗಣಿಸಲಾಗುತ್ತದೆ. ಪ್ರತಿ ಗಂಟೆಗೆ ಇಲ್ಲಿನ ದಾಖಲೆಯಲ್ಲಿ ಪಡೆದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತದೆ.

ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಸ್ಥಾಪನೆ; ಜಿಲ್ಲಾಧಿಕಾರಿಗಳ ಕಚೇರಿ 08192-234034, 1077, ಎಸ್‌ಡಿಆರ್‌ಎಫ್ ಘಟಕ, ದೇವರಬೆಳೆಕೆರೆ 7411308591, ದಾವಣಗೆರೆ ಅಗ್ನಿಶಾಮಕ ಇಲಾಖೆ 08192-258101, 112, ದಾವಣಗೆರೆ ಮಹಾನಗರ ಪಾಲಿಕೆ 08192-234444, 8277234444, ದಾವಣಗೆರೆ ತಾ; ಕಚೇರಿ 9036396101, ಹರಿಹರ 08192-272959, ಜಗಳೂರು 08196-227242, ಹೊನ್ನಾಳಿ 08188-252108, ನ್ಯಾಮತಿ 8073951245, ಚನ್ನಗಿರಿ 7892481962 ದೂರವಾಣಿ, ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ.

ದಾವಣಗೆರೆ: ಕೋತಿ ದಾಳಿಗೆ ವ್ಯಕ್ತಿ ಸಾವು
ದಾವಣಗೆರೆ: ಮಂಗಗಳ ಗುಂಪಿನ ದಾಳಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕರ್ನಾಟಕದ ದಾವಣಗೆರೆಯಿಂದ ಸೋಮವಾರ ವರದಿಯಾಗಿದೆ.

ಮೃತರನ್ನು ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ನಿವಾಸಿ 60 ವರ್ಷದ ಗುಟ್ಟೆಪ್ಪ ಎಂದು ಗುರುತಿಸಲಾಗಿದ್ದು, ಇವರು ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದರು.

ಗುಟ್ಟೆಪ್ಪ ಬೆಳಗ್ಗೆ ವಾಕಿಂಗ್‌ಗೆಂದು ಮನೆಯಿಂದ ಹೊರಗೆ ಬಂದಾಗ ಕೋತಿ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಗುಟ್ಟೆಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬಿಜೆಪಿ ಮಾಜಿ ಶಾಸಕ, ಎಮ್‌ ಪಿ ರೇಣುಕಾಚಾರ್ಯ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಗ್ರಾಮದಲ್ಲಿ ಕೋತಿ, ಕರಡಿ, ಚಿರತೆಗಳ ಹಾವಳಿ ಕುರಿತು ಗ್ರಾಮಸ್ಥರು ರೇಣುಕಾಚಾರ್ಯ ಅವರಿಗೆ ದೂರು ನೀಡಿದ್ದರು.

ಮಾನವ-ಪ್ರಾಣಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆಯೊಂದಿಗೆ ಮನವಿ ಮಾಡುವುದಾಗಿ ರೇಣುಕಾಚಾರ್ಯ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಡಾ.ಬಿ.ಎಂ.ತಿಪ್ಪೆಸ್ವಾಮಿ ಸಮಾಧಿ ದ್ವಂಸ: ನ್ಯಾಯಕ್ಕೆ ಆಗ್ರಹಿಸಿ ನಾಳೆ ದಾವಣಗೆರೆಯಲ್ಲಿ ಪ್ರತಿಭಟನೆ
ದಾವಣಗೆರೆ: ಪ್ರಖ್ಯಾತ ನೇತ್ರ ತಜ್ಞ, ಮಾಜಿ ಶಾಸಕ, ಜನಾನುರಾಗಿ ದಿ.ಡಾ.ಬಿ.ಎಂ. ತಿಪ್ಪೆಸ್ವಾಮಿಯವರ ಸಮಾಧಿ ಧ್ವಂಸ ಮಾಡಿರುವುದುನ್ನು ಖಂಡಿಸಿ ನ. 24ರ ಗುರುವಾರ ದಾವಣಗೆರೆಯಲ್ಲಿ ಪ್ರತಿಭಟನೆ ಜರುಗಲಿದೆ.

ಗುರುವಾರ ಬೆಳಗ್ಗೆ 11.30 ಕ್ಕೆ ಆರಂಭಗೊಳ್ಳಲಿರುವ ಪ್ರತಿಭಟನಾ ಮೆರವಣಿಗೆಯು ದಾವಣಗೆರೆಯ ವಿದ್ಯುತ್ ನಗರದ ಶಿವಕುಮಾರ್ ಬಡಾವಣೆಯಿಂದ ನಗರದ ಸಹಾಯಕ ಆಯುಕ್ತರ ಕಚೇರಿಯವರೆಗೆ (AC OFFICE) ನಡೆಯಲಿದೆ.

ದಾವಣಗೆರೆಯ ವಿದ್ಯುತ್ ನಗರದ ಶಿವಕುಮಾರ್ ಬಡಾವಣೆಯಲ್ಲಿ ಇರುವ ದಾವಣಗೆರೆ ಮಾಜಿ ಶಾಸಕರಾದ ದಿ. ಬಿ.ಎಂ. ತಿಪ್ಪೇಸ್ವಾಮಿ ಅವರಿಗೆ ಸೇರಿದ್ದ ಜಾಗ ಮತ್ತು ಅವರ ಸಮಾಧಿಯನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದು, ಅದನ್ನು ತಡೆಯಲು ಹೋದ ತಿಪ್ಪೇಸ್ವಾಮಿಯವರ ಮಗಳು, ಲೇಖಕಿ ಬಿ.ಟಿ.ಜಾಹ್ನವಿ ಮತ್ತು ಕುಟುಂಬಸ್ಥರ ಮೇಲೂ ಸಹ ದುಷ್ಕರ್ಮಿಗಳು ಹಲ್ಲೆ ಮಾಡಲು ಯತ್ನಿಸಿದ್ದರು. ನಂತರ ಅವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ಬಿ.ಎಂ. ತಿಪ್ಪೇಸ್ವಾಮಿಯವರ ಪುತ್ರಿ ಖ್ಯಾತ ಲೇಖಕಿ ಬಿ.ಟಿ ಜಾಹ್ನವಿ ತಿಳಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಮಾಜಿ ಶಾಸಕರ ಸಮಾಧಿ ಒಡೆದ ದುಷ್ಕರ್ಮಿಗಳು ; ಜಮೀನಿನ ಅಕ್ರಮ ಪರಭಾರೆ ನಡೆದ ಬಗ್ಗೆ ಶಂಕೆ

ಬಿ.ಟಿ. ಜಾಹ್ನವಿಯವರು ನೀಡಿರುವ ಮಾಹಿತಿ ಪ್ರಕಾರ ಜಾಗದ ಎಲ್ಲಾ ಹಕ್ಕು ಬಿ.ಎಂ.ತಿಪ್ಪೇಸ್ವಾಮಿಯವರ ಕುಟುಂಬಕ್ಕೆ ಇದ್ದರೂ, ಕುಟುಂಬದ ನಾಲ್ವರು ಸದಸ್ಯರ ಸಮಾಧಿ ದ್ವಂಸಮಾಡಿರುವ ವ್ಯಕ್ತಿಗಳು, ಅಧಿಕಾರಿ ವರ್ಗದವರು ಭಷ್ಟಾಚಾರದ ಮೂಲಕ ಜಮೀನಿನ ನಕಲಿ ದಾಖಲೆ ಸೃಷ್ಟಿಸಿರುವ ಅನುಮಾನ ವ್ಯಕ್ತವಾಗುತ್ತಿದ್ದು, ಈ ಕುರಿತು ತಿನಿಖೆಯಾಗಬೇಕು ಎಂದು ಜಾಹ್ನವಿ ಮತ್ತು ಕುಟುಂಬದವರು ಆಗ್ರಹಿಸಿದ್ದರು. ತಮ್ಮ ಕುಟುಂಬಕ್ಕೆ ಆಗಿರುವ ಅನ್ಯಾಯದ ಕುರಿತು ಲೇಖಕಿ ಬಿ ಟಿ ಜಾಹ್ನವಿ ಕಣ್ಣೀರಿಟ್ಟು ನ್ಯಾಯಕ್ಕಾಗಿ ವಿನಂತಿಸಿಕೊಂಡ ವಿಡಿಯೋ ವೈರಲ್‌ ಆಗಿತ್ತು.

ಈ ಹಿನ್ನಲೆಯಲ್ಲಿ ಡಾ.ಬಿ.ಎಂ.ತಿಪ್ಪೆಸ್ವಾಮಿಯವರ ಕುಟುಂಬಕ್ಕಾಗಿರುವ ಅನ್ಯಾಯವನ್ನು ವಿರೋಧಿಸಿ, ಕುಟುಂಬದ ಜೊತೆ ನಾಡಿನ ಹಲವು ಪ್ರಗತಿಪರ ಮನಸ್ಸುಗಳು ಗುರುವಾರ ಪ್ರತಿಭಟನೆಯಲ್ಲಿ ಜೊತೆಗೂಡಲಿವೆ.

ಮಕ್ಕಳ ತಟ್ಟೆಯಲ್ಲಿನ ಹುಳುಗಳ ಹುಳುಕನ್ನ ಮುಚ್ಚಿಕೊಳ್ಳಲು ಶಾಲೆಗಳಿಗೆ ಬಣ್ಣ ಬಳಿಯಲು ಹೊರಟಿದೆ ಸರ್ಕಾರ : ರಾಜ್ಯ ಕಾಂಗ್ರೆಸ್‌ ವಾಗ್ದಾಳಿ
ದಾವಣಗೆರೆ:  ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಬಿಸಿ ಉಟಕ್ಕೆ ವಿತರಿಸುವ ಆಹಾರ ಪದಾರ್ಥಗಳಲ್ಲಿ ಹುಳುಗಳು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ, ರಾಜ್ಯ ಕಾಂಗ್ರೆಸ್‌ ಘಟಕವು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ, ಬಿಸಿ ಉಟಕ್ಕೆ ವಿತರಿಸುವ ಆಹಾರ ಪದಾರ್ಥಗಳಲ್ಲಿ, ಹುಳುಗಳು ಕಂಡುಬರುವುದನ್ನು ಶಾಲೆಯ ಮಕ್ಕಳು ತಮ್ಮ ಪೋಷಕರಿಗೆ ತಿಳಿಸಿದ್ದಾರೆ. ಕೂಡಲೇ ಪೋಷಕರು ಮಕ್ಕಳ ಜೊತೆ ಗ್ರಾಮ ಪಂಚಾಯಿತಿಗೆ ವಿಷಯ ತಿಳಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಕ್ಕಳು ಮತ್ತು ಪೋಷಕರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಒಂದು ವಾರದಿಂದ ಬಿಸಿ ಊಟದಲ್ಲಿ ಸಿಗುವ ಬೇಳೆಗಳಲ್ಲಿ, ಹುಳುಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ನಾವುಗಳು ಊಟ ಮಾಡಲು ಭಯವಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದಲ್ಲದೇ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿರುವ ಪೋಷಕರು, ಸರ್ಕಾರ ಕೂಡಲೇ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟ್ವೀಟ್‌ ಮಾಡಿದ್ದು, ಮಕ್ಕಳ ಬಿಸಿಯೂಟದಲ್ಲೂ ಲೂಟಿಗೆ ಇಳಿದಿದೆಯೇ 40% ಸರ್ಕಾರ. ಕಳಪೆ ಆಹಾರ ಸಾಮಗ್ರಿಗಳನ್ನು ನೀಡಿ, ಅನ್ನದ ಬದಲು ಅನ್ನದಲ್ಲಿ ಹುಳುಗಳನ್ನು ಕೊಡುತ್ತಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಮಿತಿ ಇಲ್ಲದಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮಕ್ಕಳ ತಟ್ಟೆಯಲ್ಲಿನ ಹುಳುಗಳ ಹುಳುಕನ್ನ ಮುಚ್ಚಿಕೊಳ್ಳಲು ಶಾಲೆಗಳಿಗೆ ಬಣ್ಣ ಬಳಿಯಲು ಹೊರಟಿರಾ? ಎಂದು ಕಿಡಿಕಾರಿದೆ.

ಮಕ್ಕಳ ಬಿಸಿಯೂಟದಲ್ಲೂ ಲೂಟಿಗೆ ಇಳಿದಿದೆಯೇ #40PercentSarkara.

ಕಳಪೆ ಆಹಾರ ಸಾಮಗ್ರಿಗಳನ್ನು ನೀಡಿ,
ಅನ್ನದ ಬದಲು ಅನ್ನದಲ್ಲಿ ಹುಳುಗಳನ್ನು ಕೊಡುತ್ತಿರುವ @BJP4Karnataka ಸರ್ಕಾರದ ಭ್ರಷ್ಟಾಚಾರಕ್ಕೆ ಮಿತಿ ಇಲ್ಲದಾಗಿದೆ.@BSBommai ಅವರೇ, ಮಕ್ಕಳ ತಟ್ಟೆಯಲ್ಲಿನ ಹುಳುಗಳ ಹುಳುಕನ್ನ ಮುಚ್ಚಿಕೊಳ್ಳಲು ಶಾಲೆಗಳಿಗೆ ಬಣ್ಣ ಬಳಿಯಲು ಹೊರಟಿರಾ? pic.twitter.com/xLaYX4Zenn
— Karnataka Congress (@INCKarnataka) November 22, 2022

ದಾವಣಗೆರೆ ಮಾಜಿ ಶಾಸಕರ ಸಮಾಧಿ ಒಡೆದ ದುಷ್ಕರ್ಮಿಗಳು ; ಜಮೀನಿನ ಅಕ್ರಮ ಪರಭಾರೆ ನಡೆದ ಬಗ್ಗೆ ಶಂಕೆ
ದಾವಣಗೆರೆಯ ವಿದ್ಯುತ್ ನಗರದ ಶಿವಕುಮಾರ್ ಬಡಾವಣೆಯಲ್ಲಿ ಇರುವ ದಾವಣಗೆರೆ ಮಾಜಿ ಶಾಸಕರಾದ ದಿ. ಬಿ.ಎಂ. ತಿಪ್ಪೇಸ್ವಾಮಿ ಅವರಿಗೆ ಸೇರಿದ್ದ ಜಾಗ ಮತ್ತು ಅವರ ಸಮಾಧಿಯನ್ನು ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ಈ ಬಗ್ಗೆ ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದ ಬಿ‌.ಎಂ. ತಿಪ್ಪೇಸ್ವಾಮಿ ಅವರ ಮಗಳು, ಖ್ಯಾತ ಲೇಖಕಿ ಬಿ.ಟಿ. ಜಾಹ್ನವಿಯವರು ನಡೆದ ಘಟನೆಯನ್ನು ವಿವರಿಸಿದ್ದಾರೆ

1978 ರಲ್ಲಿ ಬಿ.ಎಂ.ತಿಪ್ಪೇಸ್ವಾಮಿಯವರಿಗೆ ಅವರ ಸಮಾಜ ಸೇವೆ ಮತ್ತು ಶಾಸಕರಾಗಿ ಕಾರ್ಯ ನಿರ್ವಹಿಸಿದ ಕಾರಣಕ್ಕೆ ಸರ್ಕಾರದಿಂದ ಈ ಜಾಗದಲ್ಲಿ 2 ಎಕರೆ ಜಾಗ ನೀಡಲಾಗಿತ್ತು. ಅಂದಿನಿಂದ 1990 ರ ವರೆಗೂ ಈ ಜಾಗವನ್ನು ತಿಪ್ಪೇಸ್ವಾಮಿಯವರು ಯಾವುದೇ ಕಾಮಗಾರಿ ಮಾಡದೇ ಹಾಗೆಯೇ ಇರಿಸಿಕೊಂಡಿದ್ದರು.

ಮಾಜಿ ಶಾಸಕರಾದ ಡಾ.ಬಿ.ಎಂ.ತಿಪ್ಪೇಸ್ವಾಮಿಯವರು

1990 ರ ನಂತರ ತಿಪ್ಪೇಸ್ವಾಮಿಯವರ ಅಗಲಿಕೆಯ ನಂತರ ಅದೇ ಜಾಗದಲ್ಲಿ ಅವರ ಅಂತ್ಯಕ್ರಿಯೆ ನಡೆಸಿ ಅಲ್ಲೇ ಸಮಾಧಿ ಕಟ್ಟಲಾಗಿತ್ತು. ಆ ನಂತರದ ದಿನಗಳಲ್ಲಿ ಅವರ ಕುಟುಂಬ ವರ್ಗದವರಿಗೂ ತಂದೆಯ ಸಮಾಧಿ ಅಕ್ಕ ಪಕ್ಕದಲ್ಲೇ ಸಮಾಧಿ ನಿರ್ಮಾಣ ಮಾಡಲಾಗಿತ್ತು.

ತಿಪ್ಪೇಸ್ವಾಮಿಯವರ  ಸಮಾಧಿ ಸ್ಥಳ

ಆದರೆ ನಿನ್ನೆ ಭಾನುವಾರದ ದಿನ ಅನಿರೀಕ್ಷಿತವಾಗಿ ದುಷ್ಕರ್ಮಿಗಳು ಇವರ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಜೊತೆಗೆ ಜೆಸಿಬಿ ಟ್ರಾಕ್ಟರ್ ಗಳ ಸಮೇತರಾಗಿ ಬಂದು ತಿಪ್ಪೇಸ್ವಾಮಿಯವರ ಸಮಾಧಿಯನ್ನು ಧ್ವಂಸ ಮಾಡಿದ್ದಾರೆ. ಇದನ್ನು ತಡೆಯಲು ಹೋದ ತಿಪ್ಪೇಸ್ವಾಮಿಯವರ ಮಗಳು, ಲೇಖಕಿ ಬಿ.ಟಿ.ಜಾಹ್ನವಿ ಮತ್ತು ಕುಟುಂಬಸ್ಥರ ಮೇಲೂ ಸಹ ದುಷ್ಕರ್ಮಿಗಳು ಹಲ್ಲೆಗೆ ಮುಂದಾಗಿದ್ದಾರೆ.

ಸಧ್ಯದ ಪರಿಸ್ಥಿತಿಯಲ್ಲಿ ತಮ್ಮ ನೆರವಿಗೆ ಯಾರೂ ಬಾರದಿರುವ ಹಿನ್ನೆಲೆಯಲ್ಲಿ ಅಲ್ಲಿಂದ ತೆರಳಿದ ಬಿ.ಟಿ.ಜಾಹ್ನವಿಯವರು ಇಂದು ಸೋಮವಾರ ಬೆಳಿಗ್ಗೆ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಸಂಪರ್ಕಿಸಿ ತಮಗಾದ ಅನ್ಯಾಯವನ್ನು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ

ದಾಖಲೆಗಳ ಆಧಾರದಲ್ಲಿ ಜಾಗದ ಎಲ್ಲಾ ಹಕ್ಕುಗಳು ಬಿ.ಎಂ. ತಿಪ್ಪೇಸ್ವಾಮಿಯವರ ಕುಟುಂಬಕ್ಕೆ ಇದ್ದರೂ ಅತಿಕ್ರಮ ಪ್ರವೇಶ ಮಾಡಿದ ವ್ಯಕ್ತಿಗಳು ಪಹಣಿ ಪತ್ರದಲ್ಲಿ ತಮ್ಮ ಹೆಸರು ಇರುವುದನ್ನು ತೋರಿಸಿದ್ದಾರೆ. ಇದನ್ನೆಲ್ಲಾ ನೋಡಿದರೆ ಅಧಿಕಾರಿ ವರ್ಗದವರು ಭ್ರಷ್ಟಾಚಾರದ ಮೂಲಕ ಜಮೀನಿನ ನಕಲಿ ದಾಖಲೆ ಸೃಷ್ಟಿಸಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಇದನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂದು ಪೀಪಲ್ ಮೀಡಿಯಾ ಜೊತೆಗೆ ಮಾತನಾಡಿದ ಲೇಖಕಿ ಬಿ.ಟಿ.ಜಾಹ್ನವಿಯವರು ತಿಳಿಸಿದ್ದಾರೆ.

ಶಾಸಕ ರೇಣುಕಾಚಾರ್ಯ ಕುಟುಂಬಕ್ಕೆ ಸಿಎಂ ಸಾಂತ್ವನ
ಹೊನ್ನಾಳಿ, ದಾವಣಗೆರೆ: ಇಂದು ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಕುರಿತು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದು,  ಸಂಪೂರ್ಣ ತನಿಖೆಯಾಗುವವರೆಗೂ, ಕಾರಣ ನಿಖರವಾಗಿ ಪತ್ತೆಯಾಗುವವರೆಗೆ ಯಾವುದೇ  ತೀರ್ಮಾನಕ್ಕೆ ಬರುವುದು ಬೇಡ ಎಂದು ಕುಟುಂಬದವರಿಗೆ ಸಾಂತ್ವನ ಸೂಚಿಸಿದರು.

ʼಚಂದ್ರು ಸಾವು ನಮ್ಮೆಲ್ಲರಿಗೂ ಕಾಡುತ್ತಿದೆ. ಇಲ್ಲಿಗೆ ನಾನು ಮುಖ್ಯಮಂತ್ರಿಯಾಗಿ ಬಂದಿಲ್ಲ. ನಾನೊಬ್ಬ ಸಹೋದರನಾಗಿ ಬಂದಿದ್ದೇನೆ. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ.   ಎರಡು ರೀತಿಯ ಸಾಧ್ಯಾಸಾಧ್ಯತೆಗಳಿವೆ. ಚಂದ್ರು  ಹಿನ್ನೆಲೆ ಗಮನಿಸಿದರೆ ಕೊಲೆಯಾಗಿರುವ ಸಂಭವವಿರಬಹುದು ಎಂಬ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಕಾರಿನ ಸ್ಥಿತಿ ನೋಡಿದರೆ ಅಪಘಾತವಾಗಿರಬಹುದುದೆಂಬ ಸಾಧ್ಯತೆಯೂ ಇದೆ. ಯಾವುದನ್ನೂ ನಾವು ತೆಗೆದುಹಾಕುವಂತಿಲ್ಲ. ಎರಡೂ ಆಯಾಮದಲ್ಲಿ ತನಿಖೆ  ಮಾಡಲು ಸೂಚಿಸಲಾಗಿದೆʼ ಎಂದು ಮಾತನಾಡಿದರು.

ʼಸಾಕ್ಷ್ಯಾಧಾರಗಳು ಬಹಳ ಮುಖ್ಯ. ಚಂದ್ರು ಹಿಂದಿನ ಸೀಟಿಗೆ ಯಾಕೆ ಬಂದ ಎನ್ನುವ ಪ್ರಶ್ನೆಯಿದೆ. ಅವನ ತಲೆಯಲ್ಲಿ ಕೂದಲು ಹೋಗಿರುವುದು, ಕಾರಿನ ಮುಂದಿನ ಗಾಜು ಒಡೆದಿದೆ, ಹಿಂದಿನ ಗಾಜಿಗೆ ಏನೂ ಆಗದಿರುವುದು ಎನ್ನುವುದು ಮೇಲ್ನೋಟಕ್ಕೆ ಸಾಮಾನ್ಯರಿಗೆ ಕಾಡುವ ಪ್ರಶ್ನೆಗಳು. ಆದರೆ ತನಿಖಾಧಿಕಾರಿಗಳು ಮರಣೋತ್ತರ ಪರೀಕ್ಷೆ ವರದಿ ಬರಬೇಕು. ಅದಕ್ಕೆ ಬೆಂಬಲವಾಗಿ ಎಫ್. ಎಸ್.ಎಲ್ ವರದಿಯೂ ಮುಖ್ಯ. ಅಲ್ಲಿನ ಪದಾರ್ಥಗಳನ್ನು ಆಯ್ಕೆ ಮಾಡಿ ತನಿಖೆ ಮಾಡುತ್ತಾರೆ. ದೇಹದ ನೀರು, ಕಾಲುವೆ ನೀರು ಇವುಗಳ ವರದಿ ಅಗತ್ಯ. ಅಪರಾಧ ಹೇಗಾಗಿರಬಹುದೆಂಬ ಮರುಸೃಷ್ಟಿ ಮಾಡಿ ಪರಿಣಿತರು ನೋಡುತ್ತಾರೆ. ಈ ಮೂರು ತನಿಖೆ ಆದ ನಂತರ ಮುಂದಿನ ತನಿಖೆಯ ಕೈಗೊಳ್ಳಲಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಪ್ರತ್ಯೇಕ ತನಿಖಾ ತಂಡದ ಅಗತ್ಯತೆಯ ಬಗ್ಗೆ ತೀರ್ಮಾನಿಸಲಾಗುವುದುʼ ಎಂದು ಹೇಳಿದರು.

ʼಚಂದ್ರಶೇಖರ್ ಅಗಲಿರುವುದು ಅವರ ಪೋಷಕರಿಗೆ ಭರಿಸಲಾಗದ ದುಃಖವಾಗಿದೆ. ಚಂದ್ರು ಅವರನ್ನು ಶಾಸಕ ರೇಣುಕಾಚಾರ್ಯ ತುಂಬಾ ಹಚ್ಚಿಕೊಂಡಿದ್ದರು. ಸಿವಿಲ್ ಇಂಜಿನಿಯರ್ ಆಗಿಯೂ ಕೂಡ  ತಮ್ಮ ದೊಡ್ಡಪ್ಪನಿಗೆ ಸಹಾಯವಾಗಲು ಬಡವರ ಕಣ್ಣೀರು ಒರೆಸುತ್ತಾ, ಇಲ್ಲದವರಿಗೆ ಸಹಾಯ ಮಾಡುತ್ತಾ ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತಾ ಜನಪ್ರಿಯನಾಗಿದ್ದ. ರೇಣುಕಾಚಾರ್ಯರ ಅರ್ಧ ಭಾರವನ್ನು ಅವನೇ ಹೊತ್ತಿದ್ದ. ಈ ರೀತಿ ಸಾವಾಗುತ್ತದೆ ಎಂದು ಯಾರೂ ಕನಸು ಮನಸಿನಲ್ಲಿ ನೆನಸಿರಲಿಲ್ಲ. ರೇಣುಕಾಚಾರ್ಯ ವರಿಗೆ ಆಘಾತವಾಗಿದೆ. ದೊಡ್ಡ ಯಕ್ಷಪ್ರಶ್ನೆಯಾಗಿ ಈ ಸಾವು ನಮ್ಮೆಲ್ಲರನ್ನು ಕಾಡುತ್ತಿದೆ.  ರೇಣುಕಾಚಾರ್ಯ ಸಹೋದರ ಇದ್ದಂತೆ. ಅವರ ಸಂಕಟ  ನಮ್ಮ ಸಂಕಟ ಕೂಡʼ ಎಂದು ಮಾತನಾಡಿದರು.

ನವೆಂಬರ್‌ 11 ರಂದು ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ರಾಜ್ಯ ತಂಡದ ಆಯ್ಕೆ
ದಾವಣಗೆರೆ : ರಾಷ್ಟೀಯ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ ಕರ್ನಾಟಕ ರಾಜ್ಯ ಟೀಮ್‌ ಆಯ್ಕೆಯಾಗಿದ್ದು, ನವೆಂಬರ್‌ 11ರಂದು ರಾಜ್ಯ ಮಟ್ಟದ ಪವರ್‌ ಲಿಫ್ಟಿಂಗ್‌ ತಂಡದ ಆಯ್ಕೆ ನಡೆಯಲಿದೆ. ಸಂಜೆ ಸಮಾರಂಭದಲ್ಲಿ ಕ್ರೀಡಾಪಟುಗಳಾದ ಕೆ.ಎಸ್‌ ಸಾಯಿನಾಥ್‌, ಫಕ್ರುದ್ದೀನ್‌ರವರಿಗೆ ʼಡಾ.ಪುನೀತ್‌ ರಾಜ್ ಕುಮಾರ್‌ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಆಂದ್ರ ಪ್ರದೇಶದ ವಿಶಾಕಪಟ್ಟಣಂನಲ್ಲಿ ಜನವರಿ 4 ರಿಂದ 8ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಪವರ್‌ ಲಿಫ್ಟಿಂಗ್‌ ಸ್ಪರ್ಧೆಗೆ  ಆಯ್ಕೆ ಮಾಡಲಾಗುವುದು. ಈ ಸಲುವಾಗಿ ನವೆಂಬರ್‌ 11ರಂದು ಕರ್ನಾಟಕ ರಾಜ್ಯ ಪವರ್‌ ಲಿಫ್ಟಿಂಗ್‌ ಅಸೋಸಿಯೇಷನ್‌ ವತಿಯಿಂದ  ರಾಜ್ಯ ಮಟ್ಟದ ಪವರ್‌ ಲಿಫ್ಟಿಂಗ್‌ ತಂಡದ ಆಯ್ಕೆ ಪ್ರಕ್ರಿಯೆಗೆ ಸ್ಪರ್ಧೆಗಳನ್ನು ಹಮ್ಮಿಗೊಳ್ಳಲಾಗಿದೆ.

ದಾವಣಗರೆ ನಗರದ ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಸ್ಪರ್ಧೆಗಳು ನಡೆಯಲಿದ್ದು ರಾಜ್ಯದ ನಾನಾ ಜಿಲ್ಲೆಯ ಪುರುಷ ಹಾಗೂ ಮಹಿಳೆಯರು ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಸ್ಪರ್ಧೆಯು ಕಿರಿಯ, ಹಿರಿಯ ಮತ್ತು ವಯಸ್ಕರ ಎಂಬ 3 ವಯೋಮಾನಗಳಲ್ಲಿ ನಡೆಯಲಿದ್ದು, ದೇಹದ ತೂಕದ ಆಧಾರದ ಮೇಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಶುಕ್ರವಾರ ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಸಂಸ್ಥೆಯ ಅಧ್ಯಕ್ಷರು ಶಾಸಕರ ಆದ ಎಸ್‌.ವಿ.ರಾಮಚಂದ್ರರು ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.

ಸಮಾರಂಭದಲ್ಲಿ ಪವರ್‌ ಲಿಫ್ಟಿಂಗ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ, ಅನೇಕ ಕ್ರೀಡಾಪಟುಗಳಿಗೆ ಮಾರ್ಗದರ್ಶಿಯಾದ ಅಂತರಾಷ್ಟ್ರೀಯ ಕ್ರೀಡಾ ಪಟುವಾದ ಕೆ.ಎಸ್‌.ಸಾಯಿನಾಥ್‌ ಮತ್ತು ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಫಕ್ರುದ್ದೀನ್‌ ಇಬ್ಬರಿಗೂ ʼಡಾ.ಪುನೀತ್‌ ರಾಜ್ ಕುಮಾರ್‌ ಕ್ರೀಡಾ ರತ್ನ ಪ್ರಶಸ್ತಿʼ ನೀಡಿ ಗೌರವಿಸಲಾಗುವುದು. ಹಾಗೆಯೇ ಸ್ಪರ್ಧೆಯ ವಿಜೇತರಿಗೆ ಪದಕ ಪ್ರಶಸ್ತಿ ನೀಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಪವರ್‌ ಲಿಫ್ಟಿಂಗ್‌ ಅಸೋಸಿಯೇಷನ್‌ ಕಾರ್ಯದರ್ಶಿ ಲಕ್ಶ್ಮೀದೇವಿ ದಯಾನಂದ್‌ ಮಾಹಿತಿ ನೀಡದ್ದಾರೆ.

ರಾಜ್ಯದ ಐದು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ: ಸಚಿವ ಮುರುಗೇಶ್‌ ನಿರಾಣಿ
ಹುಬ್ಬಳ್ಳಿ: ರಾಜ್ಯದ ದಾವಣಗೆರೆ, ಬಾದಾಮಿ, ರಾಯಚೂರು, ಕೊಪ್ಪಳ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 94ನೇ ಸಂಸ್ಥಾಪನಾ ದಿನ ಹಾಗೂ ‘ವಾಣಿಜ್ಯ ರತ್ನʼಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಸಾಕಷ್ಟು ಉದ್ಯಮಿಗಳು ಒಲವು ತೋರಿಸುತ್ತಿದ್ದಾರೆ. ಹೀಗಾಗಿ ರಾಜ್ಯದ ಎಲ್ಲ ಕಡೆಯೂ ಕೈಗಾರಿಕೆಗಳು ಸ್ಥಾಪನೆಯಾಗಬೇಕು. ಅದಕ್ಕೆ ಅನುಕೂಲವಾಗುವಂತೆ ರಾಜ್ಯದ ಈ ಐದು ಜಿಲ್ಲೆಗಳಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದು ಮುರುಗೇಶ್‌ ನಿರಾಣಿ ಹೇಳಿದರು.

ಈ ಹಿನ್ನಲೆ ರಾಜ್ಯವು ಅಭಿವೃದ್ಧಿಯತ್ತ ಸಾಗುತ್ತಿದ್ದು, 18 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ, ಹಾಗೆಯೇ ತುಮಕೂರು ಮತ್ತು ಶಿರಾ ನಡುವೆ ಹಾಗೂ ಬೆಳಗಾವಿಯ ಕಿತ್ತೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಬೆಣ್ಣೆನಗರಿಯಲ್ಲಿ ಹಿರಿಯ ನಾಗರಿಕರಿಗಾಗಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ದೆ
ದಾವಣಗೆರೆ: ನಗರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೆಪ್ಟಂಬರ್‌ 25 ರಂದು ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಈ ಸ್ಪರ್ಧೆಗಳು ನಗರದ ಎಂ.ಸಿ.ಸಿ ಬಿ ಬ್ಲಾಕ್‍ನ ಬಾಪೂಜಿ ಸ್ಕೂಲ್ ಆವರಣದಲ್ಲಿ ನಡೆಯಲಿದ್ದು, ಈ ಸ್ಪರ್ಧೆಗಳಲ್ಲಿ 60ರಿಂದ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸ್ಪರ್ಧಿಸಬಹುದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ.ಕೆ.ಕೆ. ಪ್ರಕಾಶ್‌ ಅವರು, ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ನಡೆಸುತ್ತಿರುವ ಈ ಸ್ಪರ್ಧೆಯಲ್ಲಿ, ಕ್ರೀಡಾ ವಿಭಾಗದಲ್ಲಿ ನಡಿಗೆ, ರಿಂಗ್‍ನ್ನು ಬಕೇಟ್‍ಗೆ ಎಸೆಯುವುದು, ಮ್ಯೂಸಿಕಲ್ ಚೇರ್ಸ್, ಕ್ರೀಡೆಗಳು ಇದ್ದು, ಸಾಂಸ್ಕøತಿಕ ಸ್ಪರ್ಧೆಯಲ್ಲಿ ಏಕಪಾತ್ರ ಅಭಿನಯ, ಗಾಯನ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಈ ಹಿನ್ನಲೆ ಆಸಕ್ತರು ಹಿರಿಯ ನಾಗರಿಕರಾದ ಎಸ್.ಗುರುಮೂರ್ತಿ:6364282359, ನವೀನ್: 7483968224, ತಿಪ್ಪೇಶ್: 9148672498, ಮಾಲತೇಶ್ – 6362295320 ಅವರ ದೂರವಾಣಿ ಸಂಖ್ಯೆಗೆ ಕರೆಮಾಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.

ನ್ಯಾಯಬೆಲೆಯಲ್ಲಿ ಅಕ್ರಮ: ಮನನೊಂದು ಆತ್ಮಹತ್ಯೆ
ದಾವಣಗೆರೆ: ಪರಿಸರ ಪ್ರೇಮಿ, ಸಾಲು ಮರದ ವೀರಾಚಾರಿ ಎಂದೇ ಖ್ಯಾತಿ ಪಡೆದಿದ್ದ ರಾಜ್ಯ ಪ್ರಶಸ್ತಿ ವಿಜೇತ ಮಿಟ್ಲಕಟ್ಟೆ ವೀರಾಚಾರಿ ಅವರು ಕಳೆದ ಮಧ್ಯರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕ ಜನರಿಗೆ ವಿತರಿಸುವ ಅಕ್ಕಿಯ ವಿಚಾರದಲ್ಲಿ ಅಕ್ರಮ ನಡೆಸುತ್ತಿದ್ದಾರೆ ಎಂದು ಅಕ್ರಮದ ವಿರುದ್ಧ ಹೋರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಈ ಹಿನ್ನಲೆ ನ್ಯಾಯ ಸಿಗದ ಕಾರಣ ಮನನೊಂದು ವೀರಾಚಾರಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾಹಿತಿ ಪ್ರಕಾರ ಸೋಮವಾರ(ನಿನ್ನೆ) ರಾತ್ರಿ ಈ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ್ಯಾಯಬೆಲೆ ಅಂಗಡಿ ರದ್ದು ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಈ ವೇಳೆ ಜನರಿಗೆ ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಅಕ್ರಮ ವಿರುದ್ಧದ ಹೋರಾಟದಲ್ಲಿ ನ್ಯಾಯ ಸಿಗದ ಕಾರಣ ತಮ್ಮ ಮಾತಿನಂತೆ ತಡರಾತ್ರಿ 2 ಗಂಟೆಯ ಸುಮಾರು ನೇಣುಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಹಿನ್ನಲೆ  ಮಿಟ್ಲಕಟ್ಟೆ ಗ್ರಾಮದ ಜನರು  ಯಾರು ಕೂಡ ಊರಿಗೆ ಬರದಂತೆ ರಸ್ತೆಗಳನ್ನು ಬಂದ್ ಮಾಡಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಜಿಲ್ಲಾಧಿಕಾರಿ ಆಹಾರ ಇಲಾಖೆ ಅಧಿಕಾರಿಗಳು ಬರುವರೆಗೂ ಶವವನ್ನು ಕುಣಿಕೆಯಿಂದ ಕೆಳಗಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದು, ಸಾವಿಗೆ ಸ್ಪಷ್ಟ ಕಾರಣ ತನಿಖೆಯಿಂದ ತಿಳಿಯಬೇಕಿದೆ ಎಂದು ಆಗ್ರಹಿಸಿದ್ದಾರೆ.