DB Chandre Gowda – Peepal Media

ಚಂದ್ರೇಗೌಡ ನಿಧನ ತುಂಬಲಾರದ ನಷ್ಟವೇ ಸರಿ : ಬೆಳಗೂರು ಸಮೀಯುಲ್ಲಾ
ಚಂದ್ರೇಗೌಡರದ್ದು ಎತ್ತರದ ವ್ಯಕ್ತಿತ್ವ. ರಾಜಕಾರಣಿಗಳ ಬಗ್ಗೆ ಗೌರವ ಹೆಚ್ಚಿಸುವ ನಡವಳಿಕೆ. ಒಂದು ತಲೆಮಾರಿನ ಮೇಲೆ ಪ್ರಭಾವ ಬೀರುವಷ್ಟು, ತರುಣ ಸಮುದಾಯ ಅವರ ಬಗ್ಗೆ ಹೆಮ್ಮೆಪಡುವಷ್ಟು. ತಾವೂ ಕೂಡ ರಾಜಕಾರಣಕ್ಕೆ ಬರಬೇಕು ಎಂದು ಯುವಕರಿಗೆ ಪ್ರೇರೇಪಿಸುವಷ್ಟು ಪ್ರಭಾವಶಾಲಿ.

ಆ ಕಾಲಕ್ಕೆ ಶ್ರೀಮಂತ ಮನೆತನದಿಂದ ಬಂದ ಚಂದ್ರೇಗೌಡರ ಆಲೋಚನೆ, ದೂರದೃಷ್ಟಿ ಹೊಸತನದಿಂದ ಕೂಡಿರುತ್ತಿತ್ತು. ಆಡಳಿತ ಮತ್ತು ಕಾನೂನು ಹೇಗೆ ಜನಪರವಾಗಿರಬೇಕು. ಸರಳವಾಗಿರಬೇಕು ಎಂಬ ಬಗ್ಗೆ ಅವರು ಸದಾ ಅಧ್ಯಯನ ನಡೆಸುತ್ತಿದ್ದರು.ಅದನ್ನು ಆಡಳಿತದಲ್ಲಿ ಜಾರಿ ಮಾಡಲು ಯತ್ನಿಸುತ್ತಿದ್ದರು.

ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಗ್ರಾಮೀಣ ಕೃಪಾಂಕ ಪದ್ಧತಿಯನ್ನು ಬಂಗಾರಪ್ಪ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಜಾರಿಗೆ ತಂದರು. ಮುಂದೆ ಅದನ್ನು ಸುಪ್ರೀಂ ಕೋರ್ಟ್ ಅವೈಜ್ಞಾನಿಕ ಎಂದು ರದ್ದು ಮಾಡಿತು. ಈ ಪದ್ಧತಿಯಲ್ಲಿ ಕೆಲ್ಸ ಗಿಟ್ಟಿಸಿಕೊಂಡಿದ್ದ ಸಾವಿರಾರು ಸರಕಾರಿ ನೌಕರರು ಬೀದಿ ಪಾಲಾಗುವ ಪರಿಸ್ಥಿತಿ ಬಂದಾಗ ಅವರನ್ನು ಉಳಿಸಿಕೊಳ್ಳಲು ಚಂದ್ರೇಗೌಡರು ನಡೆಸಿದ ಕಾನೂನು ಹೋರಾಟ ಅಂತಿಥದ್ದಲ್ಲ.

ಕಾನೂನಿನ ಬಳಕೆ ಹಾಗೂ ತಮ್ಮದೇ ಶೈಲಿಯಲ್ಲಿ ತಮ್ಮ ವಾದಕ್ಕೆ ಬೇಕಾದಂತೆ ಅದನ್ನು ವಿಶ್ಲೇಷಿಸುವ ಅವರ ಒಳನೋಟ, ಸಾಮರ್ಥ್ಯ ಅದ್ಭುತ. ಹೀಗಾಗಿ ಅವರು ಜಾಣ ಮತ್ತು ಚಾಣಾಕ್ಷರು ಆಗಿದ್ದರು.

ಕಾವೇರಿ ನದಿ ವಿವಾದ ಸೇರಿ ರಾಜ್ಯದ ಹಿತಾಸಕ್ತಿಯ ಪ್ರತಿಪಾದಿಸುವ ಕಾನೂನು ಹೋರಾಟ ಬಂದರೆ, ಕಪ್ಪು ಕೋಟು ಹಾಕಿಕೊಂಡು ಸುಪ್ರೀಂ ಕೋರ್ಟ್ ಗೆ ಹೋಗಿ ವಾದ ಮಂಡಿಸುತ್ತಿದ್ದ ವಕೀಲರಿಗೆ ಬೇಕಾದ ಪೂರಕ ಅಂಶಗಳನ್ನು ಅವರೇ ಒದಗಿಸುತ್ತಿದ್ದರು.

ವೈಯುಕ್ತಿಕವಾಗಿ ಅಪಾರ ಸಜ್ಜನಿಕೆಯ ಮನುಷ್ಯ ಅವರು. ಪತ್ರಕರ್ತರ ಬಗ್ಗೆ ಪ್ರೀತಿ , ಗೌರವ ಇಟ್ಟುಕೊಂಡವರು. ಇಂಥ ಅಪರೂಪದ ನಾಯಕನ ಕಣ್ಮರೆ ನಿಜವಾದ ಅರ್ಥದಲ್ಲಿ “ತುಂಬಲಾರದ ನಷ್ಟ”ವೇ ಆಗಿದೆ.

ಬೆಳಗೂರು ಸಮೀಯುಲ್ಲಾ

ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ ನಿಧನಕ್ಕೆ ಮುಖ್ಯಮಂತ್ರಿಗಳ ಸಂತಾಪ
ಡಿ.ಬಿ.ಚಂದ್ರೇಗೌಡ ಬುದ್ದಿವಂತ ರಾಜಕಾರಣಿ: ಸಿಎಂ ಸಿದ್ದರಾಮಯ್ಯ‌

ಬೆಂಗಳೂರು, ನವೆಂಬರ್ 07; ಹಿರಿಯ ರಾಜಕಾರಣಿ ಡಿ.ಬಿ.ಚಂದ್ರೇಗೌಡ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು.

ಚಂದ್ರೇಗೌಡ ಅವರು ರಾಜಕಾರಣದಲ್ಲಿ ಬಹಳ ದೀರ್ಘಕಾಲ ಇದ್ದವರು. ಕಾಂಗ್ರೆಸ್ ಬಿಟ್ಟು ಜನತಾ ಪಕ್ಷ ಸೇರಿದ್ದರು. ವಿಧಾನಸಭಾಧ್ಯಕ್ಷರಾಗಿದ್ದರು,ವಿವಿಧಪಕ್ಷದ ನಾಯಕರಾಗಿದ್ದರು. ಮತ್ತೆ ಕಾಂಗ್ರೆಸ್ ಸೇರಿ ಕಾನೂನು ಸಚಿವ ರಾಗಿದ್ದರು. ಬಿಜೆಪಿಗೆ ಸೇರಿ ಸಂಸದರಾಗಿದ್ದರು. ವಿವಿಧ ಹಂತಗಳಲ್ಲಿ ಕೆಲಸ ಮಾಡಿದವರು. ಅತ್ಯಂತ ಹಿರಿಯ ಹಾಗೂ ಬುದ್ದಿವಂತ ರಾಜಕಾರಣಿಯಾಗಿದ್ದ ಅವರು ಸಾಹಿತ್ಯದ ಬಗ್ಗೆಯೂ ಅಪಾರವಾಗಿ ಓದಿ ತಿಳಿದುಕೊಂಡಿದ್ದರು. ಅವರು ನಿಧನರಾಗಿರುವುದು ಕರ್ನಾಟಕದ ರಾಜಕಾರಣಕ್ಕೆ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಪ್ರಾರ್ಥನೆ ಮಾಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಬಿ.ಎಸ್.ಯಡಿಯೂರಪ್ಪ ಅವರಿಂದ ಬರ ಅಧ್ಯಯನ ನಮ್ಮ ತಕರಾರಿಲ್ಲ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬರ ಅಧ್ಯಯನಕ್ಕೆ ಹಾಸನಕ್ಕೆ ತೆರಳಿರುವ ಕುರಿತು ಮಾತನಾಡಿ ಬರ ಅಧ್ಯಯನವನ್ನು ಕೇಂದ್ರದ ತಂಡ ನಡೆಸಿ ಹೋಗಿದ್ದಾರೆ. ಕೇಂದ್ರ ಸರ್ಕಾರಕ್ಕೆಅವರಿನ್ನೂ ವರದಿ ನೀಡಿಲ್ಲ. ಬಿಜೆಪಿ ಯವರು ರಾಜಕಾರಣ ಮಾಡಲು ಅಧ್ಯಯನ ಮಾಡುತ್ತೇವೆ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರದ ಬಳಿ ಕೇಳಿ ನಮಗೆ ಪರಿಹಾರ ಕೊಡಿಸಲಿ. ಅದನ್ನು ಬಿಟ್ಟು ಅಧ್ಯಯನ ಮಾಡುತ್ತೇವೆ ಎನ್ನುತ್ತಾರೆ. ಮಾಡಲಿ, ನಮ್ಮ ತಕರಾರು ಇಲ್ಲ ಎಂದರು.

ರೈತರು ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಪರಿಹಾರ ಕೊಡಿಸಲಿ

ಕೇಂದ್ರ ಸರ್ಕಾರಕ್ಕೆ 17900 ಕೋಟಿ ರೂ ಗಳ ಪರಿಹಾರ ಕೊರಲಾಗಿದೆ. ರಾಜ್ಯದಲ್ಲಿ ಸುಮಾರು 33,700 ಕೋಟಿ ನಷ್ಟವಾಗಿದೆ. ರೈತರು ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಪರಿಹಾರ ಕೊಡಿಸಲಿ ಎಂದರು. 25 ಬಿಜೆಪಿ ಸಂಸದರು ಪರಿಹಾರ ಕೊಡಿಸುವುದನ್ನು ಮೊದಲು ಮಾಡಲಿ. ನಮ್ಮ ಮಂತ್ರಿಗಳಿಗೆ ಸಂಬಂಧ ಪಟ್ಟ ಸಚಿವರು ಬಿಜೆಪಿಗೆ ಸಮಯವನ್ನೇ ನೀಡಿಲ್ಲ. ಇವರಿಗೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ ಎಂದರು.

ಬರದ ಕುರಿತು ವೈಜ್ಞಾನಿಕ ಸಮೀಕ್ಷೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿರುವ ಬಗ್ಗೆ ಮಾತನಾಡಿ ಸಮೀಕ್ಷೆ ಮಾಡಿದವರು ಕೇಂದ್ರ ಸರ್ಕಾರದ ತಂಡ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬರೆಯಬೇಕು ಎಂದರು.

ಹಿರಿಯ ನಾಯಕ ಡಿ.ಬಿ.ಚಂದ್ರೇಗೌಡ ನಿಧನ
ಹಲವು ದಿನಗಳ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ, ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ (87) ಇಂದು ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಜನತಾದಳದಿಂದ ತಮ್ಮ ರಾಜಕೀಯ ಜೀವನ ಶುರು ಮಾಡಿದ್ದ ಡಿ.ಬಿ.ಚಂದ್ರೇಗೌಡರು ರಾಜ್ಯದಲ್ಲಿ 3 ಬಾರಿ ಶಾಸಕರಾಗಿ, ಮೂರು ಬಾರಿ ಸಂಸದರಾಗಿ, ರಾಜ್ಯ ಕಾನೂನು ಸಚಿವರಾಗಿ, ರಾಜ್ಯಸಭಾ ಸದಸ್ಯ ಹೀಗೆ ನಾನಾ ಹುದ್ದೆಗಳನ್ನು ನಿಭಾಯಿಸಿ ಬಂದವರಾಗಿದ್ದರು.

ತಮ್ಮ ರಾಜಕೀಯ ಜೀವನದ ಕಡೆಯ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದರು. ಆದರೆ ಬಿಜೆಪಿ ಪಕ್ಷದಿಂದ ಯಾವುದೇ ಹುದ್ದೆ ಪಡೆದಿರಲಿಲ್ಲ.