devegowda – Peepal Media

ದೊಡ್ಡಗೌಡ್ರಿಗೆ ಆತ್ಮಸಾಕ್ಷಿ ಅಂತ ಇದ್ದಿದ್ದರೆ ಅವರು ಹೀಗೆ ಪತ್ರ ಬರೆಯುತ್ತಿದ್ದರು (ಕಾಲ್ಪನಿಕ ಪತ್ರ)
ಇಂದ

ದೊಡ್ಡಗೌಡರು, ಬೆಂಗಳೂರು

ಇವರಿಗೆ,

ರಾಜ್ಯದ ಜನತೆಗೆ

ಮಹಾಜನರೇ, ನಿನ್ನೆಯಿಂದ ನಾನು ಬರೆದಿರುವೇ ಎನ್ನಲಾದ ಪತ್ರ ಒಂದು ವೈರಲ್‌ ಆಗಿದೆ. ನಿಜ ಹೇಳಬೇಕೆಂದ್ರೆ ಅದು ನಾನು ಬರೆದದ್ದಲ್ಲ, ನನ್ನ ಮಕ್ಕಳು ತಮ್ಮ ರಾಜಕೀಯ ಷಡ್ಯಂತ್ರಕ್ಕಾಗಿ  ನಮ್ಮ ಪಕ್ಷದ  ಒಬ್ಬ ಒಳ್ಳೆಯ ವಂದಿಮಾಗದ ಆಸ್ಥಾನ ಲೇಖಕನಿಗೆ ದೊಡ್ಡ ಸಂಬಳ ಕೊಟ್ಟು ಹೀಗ್ಹೀಗೆ ಎಂದು ಹೇಳಿ ಬರೆಸಿದ ಪತ್ರವದು. ಅದು ಪ್ರಜ್ವಲ್‌ ರೇವಣ್ಣನಿಗೆ ಎಂದು ಹೇಳಲಾಗಿದ್ದರೂ ಅದರ ಒಳ ಉದ್ದೇಶ ರಾಜ್ಯ ಜನತೆಗೆ ತಲುಪಿಸುವುದೇ ಆಗಿತ್ತು. ಆ ಉದ್ದೇಶ ಈಡೇರಿಯಾಗಿದೆ.

ಕಳೆದೊಂದು ತಿಂಗಳಿನಿಂದ ನಾನು ಬಳಷ್ಟು ತೊಳಲಾಡಿದ್ದೇನೆ. ನಾವು ರಾಜಕಾರಣಿಗಳು. ನಮಗೂ ಒಂದು ಮನಸ್ಸಿರುತ್ತದೆ. ಆದರೆ, ನಮ್ಮ ಮನಸ್ಸಿನಲ್ಲಿ ಮೂಡುವ ಸತ್ಯವನ್ನು ನಮಗೆ ಹೇಳಲು ಸಾಧ್ಯವಾಗುದಿಲ್ಲ. ನಾವು ಏನಾದರೂ  ನಮ್ಮೊಳಗೆ ಇರುವ ಸತ್ಯ ಹೇಳಿದರೆ ಅದ್ರಿಂದ ಪಕ್ಷದ ಕಾರ್ಯಕರ್ತರು ಮತದಾರರು ಏನೆಂದುಕೊಳ್ಳುತ್ತಾರೋ ಎಂದು ನಾವು ಅವರಿಗೆ ಬೇಕಾದಂತೆ ಸತ್ಯಕ್ಕೆ ತರಾವರಿ ಬಣ್ಣದ ಲೇಪ ಮಾಡಿಕೊಂಡೇ ಮಾತಾಡಬೇಕಾಗುತ್ತದೆ. ಆದರೆ, ಇವತ್ತು ತಡೆದುಕೊಳ್ಳಲಿಕ್ಕಾಗದೇ ಈ ಪತ್ರವನ್ನು ಬರೆಯುತ್ತಿದ್ದೇನೆ.

ನಾನು ಈ ದೇಶದ ಪ್ರಧಾನಿಯಾದುದು ನನ್ನ ಅದೃಷ್ಟ. ಇದ್ರಿಂದ ನನಗೆ ಮತ್ತು ನನ್ನ ಪಕ್ಷಕ್ಕೆ ಒಳ್ಳೆಯ ಹೆಸರು ಬಂತು. ಈ ನಾಡಿನ ಸೂಕ್ಷ್ಮ ಸಂವೇದನೆಯ ರಾಜಕಾರಣಿಗಳೆಲ್ಲ ನನ್ನ ಪಕ್ಷಕ್ಕೆ ಬಂದು ಸೇರಿಕೊಂಡರು. ದಕ್ಷಿಣ ಭಾರತದ ಹಿಂದಿವಾಲಾ ಪಕ್ಷಗಳ ವಿರುದ್ಧ ನಮ್ಮದೇ ನೆಲದ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸೋಣ ಅವರ ಕನಸಾಗಿತ್ತು. ಆರಂಭದಲ್ಲಿಯೇ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ, ನನ್ನ ಪುತ್ರ ವಾತ್ಸಲ್ಯ ಮತ್ತು ಕುಟುಂಬ ಪ್ರೇಮ ನನ್ನನ್ನು ಕುರುಡನ್ನಾಗಿ ಮಾಡಿತ್ತು. ಅದೇ ನಾನು ಮಾಡಿದ ದೊಡ್ಡ ತಪ್ಪು.

ಇವನಿಗೆ ಸೀಟು ಕೊಟ್ಟರೆ ಅವನಿಗೆ ಸಿಟ್ಟು, ಅವನಿಗೆ ಕೊಟ್ರೆ ಇವನಿಗೆ ಸಿಟ್ಟು. ಹಾಗಾಗಿ ನಾನು ಬರಬರುತ್ತಾ ನನ್ನ ಮಕ್ಕಳಿಗೆ, ಸೊಸೆಯಂದಿರಿಗೆ, ಅಳಿಯಂದಿರಿಗೆ, ಮೊಮ್ಮಕ್ಕಳಿಗೆ ಇದ್ದುಬಿದ್ದ ಸಂಬಂಧಿಕರಿಗೆಲ್ಲ ನನ್ನ ಪಕ್ಷದ ಟಿಕೇಟ್‌ಗಳನ್ನು ಹಂಚುತ್ತಾ ಹೋದೆ. ಪ್ರಾದೇಶಿಕ ಪಕ್ಷ ಅಂತ ಬಂದವರೆಲ್ಲ ಒಬ್ಬೊಬ್ಬರು ಪಕ್ಷ ಬಿಟ್ಟು ಹೋದರು. ನಮ್ಮ ಪಕ್ಷ ಅನ್ನುವುದು ನನ್ನ ಕುಟುಂಬದ ಪಕ್ಷವಾಗಿ ಮಾತ್ರ ಉಳಿಯಿತು. ಹಾಗೆ ನೋಡಿದರೆ ನಾನು ಪ್ರಜಾಪ್ರಬುತ್ವ ವ್ಯವಸ್ಥೆಯ ವಿರೋಧಿ. ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಇರುವ ಪ್ರಜಾ ರಾಜಕಾರಣವನ್ನು ನಮ್ಮ ಕರ್ನಾಟಕದಲ್ಲಿ ಕುಟುಂಬ ರಾಜಕಾರಣಕ್ಕೆ ಸೀಮಿತ ಮಾಡಿದ ಕುಖ್ಯಾತಿ ನನ್ನದೇ ಎನ್ನಬಹುದು. ಇದಷ್ಟೇ ಅಲ್ಲ, ನನ್ನ ಕುಟುಂಬದವರೆಲ್ಲ ಅವರವರ  ಕ್ಷೇತ್ರಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಿದರು. ರಾಜರಂತೆ ವರ್ತಿಸುತ್ತಾ ರಾಜಸತ್ತೆ ಸ್ಥಾಪಿಸತೊಡಗಿದರು. ತಮ್ಮ ತಮ್ಮ ಕ್ಷೇತ್ರಗಳನ್ನು, ಕ್ಷೇತ್ರದ ಜನರನ್ನು, ಹೆಂಗಸರನ್ನು ಆಸ್ತಿಯಂತೆ ಬಳಸತೊಡಗಿದರು. ಇದಕ್ಕೆ ನನ್ನ ದೊಡ್ಡ ಮಗ ಒಂದು ಸಿಂಪಲ್‌ ಉದಾಹರಣೆ.

ಇನ್ನೊಂದು ನನ್ನ ಮುಖ್ಯವಾದ ೨ನೇ ತಪ್ಪೆಂದರೆ ಪ್ರಜ್ವಲ್‌ ರೇವಣ್ಣ ಪ್ರಕರಣ ಐದಾರು ವರ್ಷಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿದ್ದರೂ ನಾನು ನಿರ್ಲಕ್ಷ ಮಾಡಿದ್ದು. ಆಗ ನನ್ನ ಬುದ್ಧಿಗೆ ಮಂಕು ಕವಿದಿತ್ತು. ಪ್ರಜ್ವಲನ ಭಾಷಣ ಕೇಳುತ್ತಿದ್ದರೆ. ನಿಜ ಹೇಳಬೇಕೆಂದರೆ ಅವನ ಗತ್ತು ಗೈರತ್ತು ನೋಡುತ್ತಿದ್ದರೆ, ನನಗೆ ನನ್ನ ಕುಟುಂಬದ ಜೀನ್ಸ್‌ ಬಗ್ಗೆ ಬಹಳಷ್ಟು ಹೆಮ್ಮೆಯಾಗುತ್ತಿತ್ತು. ಈ ಪಜ್ವಲ ನಮ್ಮ ಪಕ್ಷವನ್ನು ಉಜ್ವಲಗೊಳಿಸುತ್ತಾನೆ ಎಂದೇ ನಾನು ನಂಬಿದ್ದೆ.

ರಾಜಕಾರಣಿಗಳ ಸುತ್ತಮುತ್ತಲೆಲ್ಲ ಸ್ವಜಾತಿಯ ಹೊಗಳುಭಟ್ಟ ವಂದಿ ಮಾಗದರೇ ತುಂಬಿಕೊಂಡಿರುತ್ತಾರೆ. ಅಂತ ವಂದಿಮಾಗದರು ಐದಾರು ವರ್ಷಗಳ ಹಿಂದೆಯೇ ಪ್ರಜ್ವಲನ ಕಾಮ ಕ್ರೀಡೋತ್ಸವಗಳನ್ನು ನನಗೆ ಹೇಳಿದ್ದರು. ಹೇಳಿದ ಮರುಗಳಿಗೆಯೇ ವಯಸ್ಸಿನ ಹುಡುಗ ಗೌಡ್ರೆ, ಅದರಲ್ಲೂ ನಮ್ಮಗೌಡ್ರ ಜಾತಿ ಹುಡುಗ, ಗಂಡು ಹುಡುಗ, ಇದೆಲ್ಲ ಕಾಮನ್ನು ಎಂದು ಅವರೇ ಸಮಾಧಾನ ಮಾಡಿದ್ದರು. ಸುಳ್ಳು ಯಾಕೆ ಹೇಳಲಿ ಆಗ ನನ್ನ ಸುತ್ತಲಿದ್ದವರ ಮಾತು ಕೇಳಿ ನನ್ನೊಳಗೂ ಗರ್ವ ತುಸು ಹೆಚ್ಚೇ ಇತ್ತು.  ಅದು ನನ್ನನ್ನು ಮರುಳನನ್ನಾಗಿಸಿತು,

ಅವನ ಚಿಕ್ಕಪ್ಪ ಮಾಡಿದ ಪ್ರಕರಣ ಕಣ್ಮುಂದೆ ಇತ್ತಲ್ಲ. ಅವನ ಚಿಕ್ಕಪ್ಪನೂ ಹಾಗೆ ಒಂದಿಷ್ಟು ದಿನ ಹಾರಾಡಿ, ಊರೆಲ್ಲ ಸುತ್ತಾಡಿ ಆಮೇಲೆ ಮನೆಗೆ ಹತ್ತಿದವನು. ಇವನಿಗೂ ಮದುವೆ ಅನ್ನೋದೊಂದು ಮಾಡಿದ ಮೇಲೆ ಸರಿ ಹೋಗ್ತಾನೆ. ಅಲ್ಲಿಯವರೆಗೂ ಹಾರಾಡಿಕೊಂಡಿರಲಿ ಎಂದು ನಾನು ಸುಮ್ಮನಾಗಿದ್ದೆ.

ಬಹುಶಃ ಯಾರಿಗೆಲ್ಲ ಹಣ, ಅಧಿಕಾರ, ಕೀರ್ತಿ ಬರುತ್ತದೆಯೋ ಅವರೆಲ್ಲ ಹೀಗೆ ದಾರಿ ತಪ್ಪುತ್ತಾರೆ ಅನಿಸುತ್ತದೆ.  ಈ ಕಾರಣಕ್ಕಾಗಿಯೇ ರಾಜರ ಅಂತಪುರಗಳಲ್ಲೆ ಎಲ್ಲ ಕಾಲದಲ್ಲೂ ತುಂಬಿ ತುಳುಕುತ್ತಿದ್ದವು. ಸಣ್ಣ ವಯಸ್ಸಿನ ಮಕ್ಕಳಿಗೆ ಅಧಿಕಾರ, ಸ್ಥಾನಮಾನ, ಟಿಕೇಟ್‌ ಕೊಡಲೇಬಾರದು ಎಂದು ಈಗನಿಸುತ್ತದೆ. ಇದು ನನ್ನ ಮೊಮ್ಮಕ್ಕಳದ್ದೇ ತಪ್ಪಲ್ಲ. ಎಲ್ಲೆಲ್ಲಿ ಕುಟುಂಬ ರಾಜಕಾರಣ ಇದೆಯO ಅಲ್ಲೆಲ್ಲ ಹಿರಿಯ ರಾಜಕಾರಣಿಗಳ ಮಕ್ಕಳು ಮೊಮ್ಮಕ್ಕಳು  ಹಿಂಗೆ ಮೆರಿತಿದ್ದಾರೆ. ಆದರೆ, ಗುಂಡಿ ಒಳಗೆ ಬಿದ್ದೋನಿಗೆ ಆಳಿಗೊಂದು ಕಲ್ಲು.

ನನ್ನ ಸುತ್ತಲಿದ್ದ ಹೊಗಳುಭಟ್ಟರೆಲ್ಲ ನಮ್ಮನ್ನು ನೀವು ದೇಶ ಆಳಕ್ಕೆ ಬಂದವರು ಎಂದೆಲ್ಲ ಯಾವಾಗಲೂ ಹೇಳುತ್ತಲೇ ಇದ್ದರು. ನಾನು ನನ್ನ ಕುಟುಂಬದವರು ಕೂಡ ಅದನ್ನೆ ನಂಬಿ ಆಳುವುದಕ್ಕಾಗಿ ಹೋರಾಡುತ್ತಲೇ ಇದ್ದೇವು. ಆದರೆ, ದೇಶ ಆಳಕ್ಕೆ ಹೋಗಿ ನಮ್ಮ ನಮ್ಮ ಮನೆಯ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದರ ಕಡೆ ನಾವು ಗಮನ ಕೊಡಲೇ ಇಲ್ಲ. ಮಕ್ಕಳಿಗೆ ತುಸುವಾದರೂ ಸಂವೇದನೆ ಕಲಿಸಿದ್ದರೆ, ಸಮಾಜದ ಬಗ್ಗೆ ಅರ್ಥ ಮಾಡಿಸಿದ್ದರೆ ಹೀಗಾಗುತ್ತಿರಲಿಲ್ಲ.

ಅದರ ಪ್ರತಿಫಲವೇ ಈಗ ಇಷ್ಟೆಲ್ಲ ಆಗಿದೆ.  ನನ್ನ ಎರಡನೇ ಮಗ ಎರಡು ಸಂಸಾರ ಕಟ್ಟಿಕೊಂಡಾಗ, ನನ್ನ ದೊಡ್ಡಮಗ ಕೊರೊನಾ ಕಾಲದಲ್ಲಿ ಜನರಿಗೆ ಕಿಟ್‌ ಹಂಚುವಾಗ ಬೀಕ್ಷುಕರಿಗೆ ಎಸೆಯುವಂತೆ  ಕಿಟ್‌ ಎಸೆದಾಗ, ನನ್ನ ಸೊಸೆ ಒಂದು ಯಕಶ್ಚಿತ್‌ ಕಾರು ಡ್ಯಾಮೇಜ್‌ ಆದಾಗ ಗೌಡ್ರಾಳ್ವಿಕೆಯ ಪೊಗರಿನ ಮಾತಾಡಿದಾಗ, ಪ್ರಜ್ವಲನ ಕಾಮಕ್ರೀಡೆಗಳ ವಿಚಾರ ಕಿವಿಗೆ ಬಿದ್ದಾಗ… ಹೀಗೆ ಆಗಲೇ ಎಚೆತ್ತುಕೊಂಡು ಬುದ್ಧಿ ಹೇಳಿದ್ದರೆ ಇದೆಲ್ಲ ನಡೆಯುತ್ತಲೇ ಇರಲಿಲ್ಲ. ಈಗ ಕಾಲ ಮಿಂಚಿ ಹೋಗಿಬಿಟ್ಟಿದೆ.

ಇನ್ನು ನನ್ನ ಕಣ್ಣಾರೆ ಏನೇನೋ ನೋಡುವುದಿದೆಯೋ ಎಂದು ಅಲವತ್ತುಕೊಳ್ಳುತ್ತಾ ಕಾಲ ಕಳೆಯುವುದಷ್ಟೆ ಈಗ ನನಗೆ ಉಳಿದಿರುವುದು. ಇದನ್ನು ಕೂಡ ನೀವು ಸಹಾನುಭೂತಿ ಗಿಟ್ಟಿಸಿಕೊಳ್ಳಲು ದೊಡ್ಡಗೌಡರ ಗೋಳಾಟ ಎಂದುಕೊಂಡರೆ ನಾನೇನು ಮಾಡಲಾಗುವುದಿಲ್ಲ.  ನಿಮಗೆ ಮನವರಿಕೆ ಮಾಡಲು ಸಾಧ್ಯವಿಲ್ಲವೆಂದು ನನಗೆ ಗೊತ್ತು. ನಾನು ನನ್ನ ಆತ್ಮಸಾಕ್ಷಿಗೆ ಹೆದರುತ್ತೇನೆ, ದೇವರಲ್ಲಿ ನನಗೆ ನಂಬಿಕೆ

ಇಂತಿ ನಿಮ್ಮ ದೊಡ್ಡಗೌಡ್ರು

ಹನುಮಂತ ಹಾಲಿಗೇರಿ

ಪ್ರಜ್ವಲ್ ಅವರನ್ನು ದೇಶಕ್ಕೆ ಕರೆತರಲು ಕೇಂದ್ರ ಸಿದ್ಧ, ಆದ್ರೆ ರಾಜ್ಯ ಸರ್ಕಾರ ಕತ್ತೆ ಕಾಯ್ತಿತ್ತಾ?: ಜೋಶಿ
ಬೆಂಗಳೂರು: ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣರನ್ನು ದೇಶಕ್ಕೆ ವಾಪಸ್‌ ಕರೆತರುವುದಕ್ಕಾಗಿ ಕೇಂದ್ರ ಸಹಕಾರ ನೀಡಲಿದೆ. ಆದರೆ, ರಾಜ್ಯ ಸರ್ಕಾರದ ಪ್ರತಿನಿಧಿಗಳು ಇಷ್ಟು ದಿನ ಕತ್ತೆ ಕಾಯುತ್ತಿದ್ದರೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಕ್ರೋಶವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್‌ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಆದರೆ, ಕಾಂಗ್ರೆಸ್ ಪಕ್ಷವು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ; ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ” ಎಂದು ಕೇಂದ್ರ ಸಚಿವರು ಆರೋಪಿಸಿದರು.

ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಲು ತ್ವರಿತ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡನೇ ಪತ್ರ ಬರೆದಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, “ರಾಜತಾಂತ್ರಿಕ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಇದೆ. ಇದುವರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಗೃಹ ಸಚಿವ ಪರಮೇಶ್ವರ ನನ್ನ ಪ್ರಶ್ನೆಗೆ ಉತ್ತರಿಸಿಲ್ಲ ಎಂದು ದೂರಿದರು.

ಏಪ್ರಿಲ್ 21 ರಂದು ಪ್ರಜ್ವಲ್ ಇರುವಂಥ ಸ್ಪಷ್ಟ ಕ್ಲಿಪ್ಪಿಂಗ್ ಒಳಗೊಂಡ ಮೊದಲ ಪೆನ್ ಡ್ರೈವ್ ಹೊರಬಂದಿದೆ. ಪ್ರಜ್ವಲ್ ರೇವಣ್ಣ ಏಪ್ರಿಲ್ 27 ರಂದು ವಿದೇಶಕ್ಕೆ ತೆರಳಿದ್ದಾರೆ. ಈ ಏಳು ದಿನಗಳ ಕಾಲ ರಾಜ್ಯ ಸರ್ಕಾರದವರು ಕತ್ತೆಗಳನ್ನು ಕಾಯುತ್ತಿದ್ದರಾ?  ಏಕೆ ಎಫ್‌ಐಆರ್ ದಾಖಲಿಸಿ ಬಂಧಿಸಲಿಲ್ಲ ಎಂದು ಜೋಶಿ ಪ್ರಶ್ನಿಸಿದರು.

ಪ್ರಜ್ವಲ್ ಅವರನ್ನು ವಿದೇಶದಿಂದ ವಾಪಸ್ ಕರೆತರುವ ಪ್ರಕ್ರಿಯೆ ನಡೆಯುತ್ತಿದ್ದು, ಕಾನೂನು ಪ್ರಕಾರ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದರು.

“ಆದರೆ, ನಾವು ಸಿಎಂ ಅಥವಾ ರಾಜ್ಯ ಸರ್ಕಾರ ಪತ್ರ ಬರೆದ ತಕ್ಷಣ ಈ ವಿಷಯ ಇತ್ಯರ್ಥ ಮಾಡಬೇಕೆಂಬುದು ಸರಿಯೇ? ರಾಜ್ಯ ಸರ್ಕಾರ ಮೊದಲ ಹಂತದ ಚುನಾವಣೆ ಮುಗಿಯುವವರೆಗೆ ಅಂದರೆ ಏಪ್ರಿಲ್ 26ರವರೆಗೆ ಸುಮ್ಮನಿತ್ತು. ಒಕ್ಕಲಿಗರ ಮತಗಳಿಗಾಗಿ ಸುಮ್ಮನಿತ್ತು.  ಈಗ ಅವರು ಕೇಂದ್ರದ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದ್ದಾರೆ. ತನಿಖೆಗಿಂತ ಹೆಚ್ಚಾಗಿ ಈ ಪ್ರಕರಣದಲ್ಲಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎಂದು ಜೋಶಿ ಹೇಳಿದರು.

ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ವಿದೇಶಾಂಗ ಮತ್ತು ಗೃಹ ಸಚಿವಾಲಯಗಳನ್ನು ಒತ್ತಾಯಿಸುವಂತೆ ಮುಖ್ಯಮಂತ್ರಿಗಳು ಮೇ 1 ರಂದು ಮೋದಿ ಅವರಿಗೆ ಪತ್ರ ಬರೆದಿದ್ದರು.

ಪಕ್ಷ ವಿರೋಧಿ ಚಟುವಟಿಕೆ: ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ವಜಾ
ಬೆಂಗಳೂರು: ಬಿಜೆಪಿ ಜೊತೆಗಿನ ಜೆಡಿಎಸ್‌ ಮೈತ್ರಿಯ ಬಗ್ಗೆ ಸತತ ಅಸಮಧಾನ ವ್ಯಕ್ತಪಡಿಸುತ್ತಾ ಬಂದಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.

ಬೆಂಗಳೂರಿನಲ್ಲಿ ಚಿಂತನ ಮಂಥನ ಎಂಬ ಸಭೆಯನ್ನು ಅಕ್ಟೋಬರ್‌ 16ರಂದು ಕರೆದು ಜೆಡಿಎಸ್‌ ಹಾಗೂ ಬಿಜೆಪಿ ಹೊಂದಾಣಿಕೆಯ ಬಗ್ಗೆ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷರು, ರಾಜ್ಯ ಶಾಸಕಾಂಗ ಪಕ್ಷದ ನಾಯಕರ ವಿರುದ್ದ ಬೇಜಾವಬ್ದಾರಿಯುತ ಹೇಳಿಕೆಗಳನ್ನು ಸಿಎಂ ಇಬ್ರಾಹಿಂ ಅವರು ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಹಾಗಾಗಿ, ಪಕ್ಷದ ಹಿತದೃಷ್ಟಿಯಿಂದ ಇವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹೆಚ್‌ ಡಿ ದೇವೇಗೌಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಜೆಡಿಎಸ್‌ನ ಹಿಂದಿನ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಶಾಸಕರಾದ ಎಸ್.ಎಲ್. ಬೋಜೇಗೌಡ ಅಕ್ಟೋಬರ್‌ 19 ರಂದು ನೀಡಿದ ವರದಿಯಲ್ಲಿ  ಪಕ್ಷದ ಸಂಘಟನೆ ಮತ್ತು ಬಲವರ್ಧಗೆ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸಿಲ್ಲ, ಸದಸ್ಯತ್ವ ನೊಂದಣಿ ಅಭಿಯಾನ ಕೈಗೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯಾಧ್ಯಕ್ಷರು ಒಳಗೊಂಡಂತೆ ರಾಜ್ಯ ಪರಿಷತ್‌ನ ಕಾರ್ಯಕಾರಿ ಸಮಿತಿ ನಿಷ್ಕ್ರಿಯವಾಗಿರುವುದು ವರದಿಯಲ್ಲಿ ಕಂಡುಬಂದಿದೆ,” ಎಂದು ದೇವೇಗೌಡರು ತಿಳಿಸಿದ್ದಾರೆ.

“ಸಪ್ಟೆಂಬರ್‌ 6 ಮತ್ತು 10 ಹಾಗೂ ಅಕ್ಟೋಬರ್‌ 1ರಂದು ನಡೆದ ಪಕ್ಷದ ಸಭೆಯಲ್ಲಿ  ಬಿಜೆಪಿ-ಜೆಡಿಎಸ್‌ ಮೈತ್ರಿಯ ಬಗ್ಗೆ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಲು ಪಕ್ಷ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಅಧಿಕಾರ ನೀಡಲು ತೀರ್ಮಾನಿಸಲಾಗಿತ್ತು. ಈ ಸಭೆಗಳಲ್ಲಿ ಸಿಎಂ ಇಬ್ರಾಹಿಂ ರವರು ಉಪಸ್ಥಿತರಿದ್ದರು. ನಂತರ ಸಭೆಯ ತೀರ್ಮಾನಗಳ ವಿರುದ್ಧ ವಿರೋಧಭಾಸ ಹೇಳಿಕೆ ನೀಡುತ್ತಿರುವುದಾಗಿ ವರದಿಯಾಗಿದೆ.”

ಸಿಎಂ ಇಬ್ರಾಹಿಂ ಅವರ ಪಕ್ಷವಿರೋಧಿ ನಡವಳಿಕೆಗಳ ಹಿನ್ನಲೆಯಲ್ಲಿ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯಾಧ್ಯಕ್ಷರನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಜನತಾದಳ (ಜಾತ್ಯತೀತ) ಪಕ್ಷದ ಸಂವಿಧಾನದ(Article XX -10) ಅನ್ವಯ ಅಮಾನತ್ತು ಮಾಡಲಾಗಿದೆ ಎಂದು ಹೆಚ್‌ಡಿ ದೇವೇಗೌಡರು ತಿಳಿಸಿದ್ದಾರೆ.

ನವೆಂಬರ್‌ 7ರಂದು ನೀಡಿದ ಹೇಳಿಕೆಯಲ್ಲಿ ಸಿಎಂ ಇಬ್ರಾಹಿಂ, ನಾನಿನ್ನೂ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಮುಂದುವರಿದಿದ್ದೇನೆ ಎಂದು ತಿಳಿಸಿ, ಬಿಜೆಪಿ ಜತೆ ಮೈತ್ರಿಗೆ ಒಲವು ಇರುವವರೆಲ್ಲರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಪಕ್ಷ ವಿರೋಧಿ ಹೇಳಿಕೆಯನ್ನೂ ನೀಡಿರುತ್ತಾರೆ.

ನವೆಂಬರ್‌ 15ರಂದು ಕೇರಳದ ತಿರುವನಂತಪುರದಲ್ಲಿ ಸಿ.ಕೆ.ನಾನು ಅವರ ನೇತೃತ್ವದಲ್ಲಿ ಪಕ್ಷ ವಿರೋಧಿ ಸಭೆಯನ್ನು ನಡೆಸಿ, ಪಕ್ಷದ ಶಿಸ್ತನ್ನು ಉಲ್ಲಂಘನೆ ಮಾಡಿರುತ್ತಾರೆ. ಇವೆಲ್ಲಾ ನಡವಳಿಕೆ, ಹೇಳಿಕೆಗಳ ಹಿನ್ನೆಲೆಯಲ್ಲಿ ಸಿಎಂ ಇಬ್ರಾಹಿಂ ಅವರು ಪಕ್ಷದ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷರು ತಿಳಿಸಿದ್ದಾರೆ.