dictatorship – Peepal Media

ಬೊಗಸೆಗೆ ದಕ್ಕಿದ್ದು- 44: ಸರ್ವಾಧಿಕಾರಿಗಳ ಕುರಿತು ಬಂಡವಾಳಶಾಹಿ ಕುರುಡುಗಣ್ಣು
ಸರ್ವಾಧಿಕಾರಗಳು ಎಲ್ಲಾ ರೀತಿಯ ನಾಟಕಗಳನ್ನು ನಡೆಸಿಕೊಂಡು ತಮ್ಮನ್ನು ತಾವು ಪ್ರತಿಷ್ಟಾಪಿಸಿವೆ. ಎಲ್ಲವುಗಳ ಹಿಂದೆ ಇರುವ ಶಕ್ತಿಗಳು ಯಾವುವು ಎಂಬುದನ್ನು ನಾವು ಗಮನಿಸಬೇಕು. ಇಷ್ಟೆಲ್ಲಾ ಒಂದು ಪೀಠಿಕೆ ಮಾತ್ರ. ಪ್ರಜಾಪ್ರಭುತ್ವದ ವೇಷದಲ್ಲೂ ಸರ್ವಾಧಿಕಾರ ಬರಬಹುದು. ಹಿಟ್ಲರ್ ಕೂಡಾ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದವನೆಂಬುದು ನಮಗೆ ನೆನಪಿರಲಿ. ಪ್ರತಿಯೊಬ್ಬ ಸರ್ವಾಧಿಕಾರಿ ಜಾತಿ, ಧರ್ಮ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿ, ಬೆಳೆಸಿ, ಬೆಳೆದರೆಂಬುದನ್ನು ನಾವು ಗಮನಿಸಬೇಕು

ನಿಖಿಲ್ ಕೋಲ್ಪೆ

ಹಲವಾರು ದೇಶಗಳಲ್ಲಿ ಸರ್ವಾಧಿಕಾರಿ ಆಡಳಿತಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿರುವುದನ್ನು ಇತಿಹಾಸದ ಉದ್ದಕ್ಕೂ ನಾವು ನೋಡಿದ್ದೇವೆ. ಆದರೆ, ಈ ಸರ್ವಾಧಿಕಾರಗಳ ಕುರಿತು ಪ್ರಜಾಪ್ರಭುತ್ವದ ವಕ್ತಾರರಂತೆ ವರ್ತಿಸುವ ಯುಎಸ್ಎ ಸಹಿತ ಬಂಡವಾಳಶಾಹಿ ಸಿರಿವಂತ ರಾಷ್ಟ್ರಗಳ ನಿಲುವು ಏನು? ಅವು ಕೆಲವು ಕಡೆ ಕುರುಡುಗಣ್ಣು ಬೀರಿದರೆ, ಕೆಲವು ದೇಶಗಳಲ್ಲಿ ಮಿಲಿಟರಿ ಮಧ್ಯಪ್ರವೇಶ ಮಾಡಿ ಕೈಗೊಂಬೆ ಸರಕಾರಗಳನ್ನು ಸ್ಥಾಪಿಸಿವೆ. ಇಲ್ಲವೇ ಅವುಗಳಲ್ಲಿ ಅರಾಜಕತೆಯನ್ನು ಪೋಷಿಸಿವೆ. ಇದಕ್ಕೆ ಇರುವ ಮಾನದಂಡವೇನು? ಮಾನದಂಡ ಮಾವೀಯತೆಯೂ ಅಲ್ಲ, ಪ್ರಜಾಪ್ರಭುತ್ವವೂ ಅಲ್ಲ. ಕೇವಲ ಬಂಡವಾಳಶಾಹಿಗಳ ಲಾಭದ ಚಿಂತನೆ. ಅವುಗಳ ಹಿತಾಸಕ್ತಿಗಳನ್ನು ಕಾಯುವುದು. ಇದೇ ಬಂಡವಾಳವಾದವು ಹಿಂದೆ ಭಾರತವೂ ಸೇರಿದಂತೆ ಬಹುತೇಕ ಇಡೀ ಪ್ರಪಂಚವನ್ನೇ ಹಿಂಡಿ ಹಿಪ್ಪೆಮಾಡಿ ಶ್ರೀಮಂತವಾಗಿ ಬೆಳೆದಿರುವುದು.

ಸೋವಿಯತ್ ಒಕ್ಕೂಟವು ಪ್ರಬಲವಾಗಿದ್ದ ಕಾಲವನ್ನು ನೋಡೋಣ. ಆಗ ಇದ್ದ ಮಾನದಂಡ ಒಂದೇ! ಅದೆಂದರೆ, ಕಮ್ಯೂನಿಸ್ಟ್ ಸರಕಾರಗಳು, ಎಡ ಚಿಂತನೆಯ ಸರಕಾರಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು. ಇದ್ದಲ್ಲಿ ಅವುಗಳನ್ನು ಉರುಳಿಸಲು ಪ್ರಚೋದನೆ ಮತ್ತು ಬೆಂಬಲ ನೀಡುವುದು. ಅಂತವರಿಗೆ ಶಸ್ತ್ರಾಸ್ತ್ರ, ತರಬೇತಿ ಮತ್ತು ಹಣಕಾಸು ಒದಗಿಸುವುದು. ಎರಡನೇ ಮಹಾಯುದ್ಧದ ಕಾಲದಲ್ಲೂ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ಬೆಳೆಯುತ್ತಿದ್ದಾಗ, ಯಹೂದಿಗಳೇ ಮುಂತಾದ ಆರ್ಯೇತರ ಎಂದು ಪರಿಗಣಿತರಾದ ಜನಾಂಗಗಳ ದಮನ ಆರಂಭವಾದಾಗ, ಪ್ರಜಾಪ್ರಭುತ್ವದ ಸ್ವಯಂಘೋಷಿತ ವಕ್ತಾರರಾದ ಬ್ರಿಟನ್ ಆಗಲೀ, ಯುಎಸ್ಎ ಆಗಲೀ ಮೊದಲಿಗೆ ಚಕಾರವೆತ್ತಿರಲಿಲ್ಲ. ಆತ ತಮ್ಮ ವಿರೋಧಿಯಾದ ಸೋವಿಯತ್ ಒಕ್ಕೂಟದ ವಿರುದ್ಧ ಒಂದು ಮಗ್ಗುಲ ಮುಳ್ಳಾಗಿರಲಿ ಎಂದು ಕುಶಿಯಿಂದಲೇ ಇದ್ದರು. ಆದರೆ, ಸೋವಿಯತ್ ಒಕ್ಕೂಟದ ಮುಖ್ಯಸ್ಥ ಜೋಸೆಫ್ ಸ್ಟಾಲಿನ್‌- ಹಿಟ್ಲರ್ ಜೊತೆ ಅನಾಕ್ರಮಣ ಒಪ್ಪಂದ ಮಾಡಿಕೊಂಡಾಗ ಮಾತ್ರವೇ ಅವರು ಎಚ್ಚೆತ್ತುಕೊಂಡದ್ದು. ನಂತರ ಹಿಟ್ಲರ್ ಸೋವಿಯತ್ ಒಕ್ಕೂಟದ ಮೇಲೆಯೇ ದಂಡೆತ್ತಿ ಹೋದದ್ದು ಬೇರೆಯೇ ಮಾತು. ನಂತರ ಮೊದಲಿಗೆ ಪೋಲೆಂಡಿನ ಮೇಲೆ ದಾಳಿ ಮಾಡಿದ ಆತ ಫ್ರಾನ್ಸನ್ನು ವಶಪಡಿಸಿಕೊಂಡಾಗ, ಬ್ರಿಟನ್‌ಗೆ ಬೆದರಿಕೆ ಒಡ್ಡಿದಾಗ, ತಮ್ಮ ಹಿತ್ತಲಿಗೆ ಶತ್ರು ಬಂದು ಕುಳಿತಿರುವುದನ್ನು ನೋಡಿ ಬ್ರಿಟನ್, ನಂತರ ಯುಎಸ್ಎ ಕಣಕ್ಕೆ ನುಗ್ಗಿದ್ದು.

ಸಂಪತ್ತಿನ ನಿಯಂತ್ರಣಕ್ಕಾಗಿ ಮತ್ತು ಸ್ವಹಿತಾಸಕ್ತಿಯ ರಕ್ಷಣೆಗಾಗಿ ನೇರ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಂಡವಾಳಶಾಹಿಯು, ತನಗೆ ಲಾಭವಿಲ್ಲದ ಕಡೆಗಳಲ್ಲಿ, ಬಡ ದೇಶಗಳಲ್ಲಿ ಎಂತಹ ದಮನಕಾರಿ ಸರಕಾರಗಳಿದ್ದರೂ ಕಣ್ಣುಮುಚ್ಚಿ ಕುಳಿತಿದೆ. ಆದರೆ, ತೈಲ ಮತ್ತು ಖನಿಜಗಳಿರುವ ನೈಸರ್ಗಿಕವಾಗಿ ಶ್ರೀಮಂತವಾಗಿರುವ ದೇಶಗಳ ಮೇಲೆ ಮಾತ್ರವೇ ಬಂಡವಾಳಶಾಹಿಗಳ ಕಣ್ಣು. ಯುಎಸ್‌ಎಯಂತಹ ದೇಶ ಮತ್ತು ದೊಡ್ಡಣ್ಣನ ತಮ್ಮಂದಿರಂತೆ ವರ್ತಿಸುವ ನ್ಯಾಟೋ ದೇಶಗಳು ಈ ಕಾರಣಕ್ಕಾಗಿ ಮಧ್ಯಪ್ರವೇಶ ಮಾಡದ ದೇಶಗಳೇ ಬಹುತೇಕ ಇಲ್ಲ ಎನ್ನಬಹುದು. ಇಂದು ಅಶಾಂತಿ ಇರುವ ಪ್ರಪಂಚದ ಯಾವುದೇ ದೇಶವನ್ನು ನೋಡಿದರೂ, ಅದರ ಮೂಲದಲ್ಲಿ ಅವುಗಳ ನೇರ ಮತ್ತು ತೆರೆಮರೆಯ ಕೈವಾಡ ಕಂಡೇ ಕಾಣುತ್ತದೆ. ಸೋವಿಯತ್ ಒಕ್ಕೂಟದ ಪತನದ ಬಳಿಕ ಇದು ಭಯೋತ್ಪಾದನೆಯ ವಿರುದ್ಧ ಯುದ್ಧದ ಹೆಸರಿನಲ್ಲಿ ನಡೆಯಿತು.

ಸುಮ್ಮನೇ ಪ್ರಪಂಚದ ಕೆಲವು ದೇಶಗಳನ್ನು ಹೆಸರಿಸಿದರೂ ಸಾಕು- ಅಲ್ಲಿ ದೊಡ್ಡಣ್ಣನ ಮಧ್ಯಪ್ರವೇಶ ನಡೆದಿದೆ; ಹಲವಾರು ಸರ್ವಾಧಿಕಾರಗಳಿಗೆ ಪ್ರಜಾಪ್ರಭುತ್ವದ ರಕ್ಷಕರೆನ್ನುವ ರಾಷ್ಟ್ರಗಳು ಬೆಂಬಲ ನೀಡಿವೆ. ಉದಾಹರಣೆಗೆ ಮಧ್ಯ ಅಮೇರಿಕಾದ ನಿಕರಾಗುವ, ಹೊಂಡುರಾಸ್, ಪನಾಮಾ, ಗ್ವಾಟೆಮಾಲಾ, ಮೆಕ್ಸಿಕೋ, ಎಲ್ ಸಾಲ್ವದೋರ್, ಲ್ಯಾಟಿನ್ ಅಮೇರಿಕಾದ ಚಿಲಿ, ಅರ್ಜೆಂಟೀನಾ, ಕ್ಯೂಬಾ, ಗ್ರೆನೆಡಾ, ಪೆರು, ಬೊಲಿವಿಯಾ, ವೆನಿಜ್ಯುವೆಲಾ… ಆಫ್ರಿಕಾ ಅಂಗೋಲ, ಕಾಂಗೋ, ನಮೀಬಿಯಾ, ಮೊಜಾಂಬಿಕ್, ಈಜಿಪ್ಟ್, ಲಿಬಿಯಾ… ಏಷ್ಯಾದ ವಿಯೆಟ್ನಾಂ, ಕಾಂಬೋಡಿಯ, ಫಿಲಿಪೈನ್ಸ್, ಫಿಜಿ, ಮ್ಯಾನ್ಮಾರ್, ಸಿರಿಯಾ, ಯೆಮೆನ್, ಇರಾನ್, ಇರಾಕ್, ಅಫ್ಘಾನಿಸ್ತಾನ… ಯುರೋಪಿನ ಯುಗೋಸ್ಲಾವಿಯಾ, ಜೆಕೋಸ್ಲಾವಾಕಿಯಾ…. ಹೀಗೆ ಯಾವುದೇ ದೇಶದ ಮಟ್ಟಿಗೆ ನೋಡಿದರೂ ಈ ಮಾತು ಸತ್ಯ.

ತನಗೆ ಲಾಭವಿಲ್ಲದ ದೇಶಗಳಲ್ಲಿ ನಡೆದ ರಕ್ತಪಾತಗಳಿಗೆ ಕುರುಡು, ಕಿವುಡಾಗಿರುವುದಕ್ಕೆ ಉದಾಹರಣೆಯಾಗಿ ಉಗಾಂಡದ ಇದಿ ಅಮೀನನಂತಹ ನರರಾಕ್ಷಸನನ್ನು ಸಹಿಸಿಕೊಂಡು ಕುಳಿತದ್ದನ್ನು ನೆನಪಿಸಬಹುದು. ನಂತರದ ಉದಾಹರಣೆ ಬೇಕೆಂದರೆ, ರುವಾಂಡದ ಹುಟು-ತುತ್ಸಿ ಬುಡಕಟ್ಟುಗಳ ಸಂಘರ್ಷದಲ್ಲಿ ಯುಎಸ್‌ಎ ಮತ್ತು ನ್ಯಾಟೋ ದೇಶಗಳ ಪಾತ್ರವನ್ನು ನೋಡಬಹುದು. ಹಿಂದೆ ಅಲ್ಲಿ ಅಲ್ಪಸಂಖ್ಯಾತ ತುತ್ಸಿಗಳ ಆಡಳಿತವಿತ್ತು. ನಂತರ ಹಲವಾರು ವರ್ಷಗಳ ಸಂಘರ್ಷದ ಬಳಿಕ ಬಹುಸಂಖ್ಯಾತ ಹುಟುಗಳ ಕೈಮೇಲಾಯಿತು. ನೆಪಮಾತ್ರಕ್ಕೆ ನ್ಯಾಟೋ ಒಂದು ಶಾಂತಿಪಾಲನಾ ಪಡೆ ಕಳಿಸಿತು. ಬಡದೇಶವಾದ ರುವಾಂಡದಲ್ಲಿ ಏನೇ ನಡೆದರೂ ಅದಕ್ಕೇನು ದೊಡ್ಡ ಆಸಕ್ತಿ ಇರಲಿಲ್ಲ. ತೊಂಬತ್ತರ ದಶಕದ ಮಧ್ಯ ಭಾಗದಲ್ಲಿ ಹುಟುಗಳು ಯೋಜಿತ ರೀತಿಯಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ತುತ್ಸಿಗಳ ಹತ್ಯಾಕಾಂಡ ನಡೆಸಿದರು. ಒಂದೇ ವಾರದಲ್ಲಿ ಹೆಂಗಸರು ಮಕ್ಕಳೆನ್ನದೆ ಸುಮಾರು ಹತ್ತು ಲಕ್ಷದಷ್ಟು ತುತ್ಸಿಗಳನ್ನು ಹಾದಿಬೀದಿಗಳಲ್ಲಿ ಮಚ್ಚುಗಳಿಂದ ಕೊಚ್ಚಿ ಕೊಲ್ಲಲಾಯಿತು. ಇಂತಹ ಹತ್ಯಾಕಾಂಡದ ಪೂರ್ವಸೂಚನೆ ಇದ್ದರೂ ನ್ಯಾಟೋ ಆಗಲೀ ವಿಶ್ವಸಂಸ್ಥೆಯಾಗಲೀ ಏನೂ ಮಾಡದೆ ಮೂಕ ಪ್ರೇಕ್ಷಕರಂತೆ ಕುಳಿತವು. ಯಾವ ಪ್ರಜಾಪ್ರಭುತ್ವದ ಆತ್ಮಸಾಕ್ಷಿಯೂ ಕಲಕಲಿಲ್ಲ! ನಾಝಿಗಳ ಬಳಿಕ ಇಷ್ಟು ದೊಡ್ಡ ಹತ್ಯಾಕಾಂಡ ಬೇರೆ ನಡೆದಿಲ್ಲ! ಈ ಘಟನೆ ಹೆಚ್ಚಿನ ಪ್ರಚಾರಕ್ಕೂ ಬರಲಿಲ್ಲ. ‘ಹೊಟೇಲ್ ರುವಾಂಡ’ ಎಂಬ ಚಿತ್ರದಲ್ಲಿ ಇದರ ಕ್ರೂರ ಚಿತ್ರಣ ಸಿಗುತ್ತದೆ. ಅದರಂತೆ ವಜ್ರಗಳಿಗಾಗಿ ಸಿಯರಾ ಲಿಯೋನ್‌ನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ಲಿಯೊನಾರ್ಡೊ ಡಿ ಕ್ಯಾಪ್ರಿಯೋ ನಟಿಸಿರುವ ‘ಬ್ಲಡ್ ಡೈಮಂಡ್’ ಚಿತ್ರದಲ್ಲಿ ನೋಡಬಹುದು. ಇಲ್ಲಿ ಖಾಸಗಿ ಕಾರ್ಪೋರೇಟ್‌ಗಳು ಖಾಸಗಿ ಸೇನೆಗಳನ್ನು ಸಾಕಿ ಜನರನ್ನು ಗುಲಾಮರಂತೆ ದುಡಿಸುತ್ತಿದ್ದರೂ ಯಾರೂ ಸುದ್ದಿಯೇ ಎತ್ತುವುದಿಲ್ಲ. ಆಫ್ರಿಕಾದ ಬಡ ದೇಶಗಳ ಜನರು ಕಾದಾಡಿ ಸತ್ತರೂ, ಹಸಿವಿನಿಂದ ಸತ್ತರೂ ಕೇಳುವವರೇ ಇಲ್ಲ.

ಅದರೆ, ತನಗೆ ಲಾಭ ಇರುವ ಕಡೆ ಬಂಡವಾಳಶಾಹಿಗಳು ಹೇಗೆ ಮಧ್ಯಪ್ರವೇಶ ಮಾಡುತ್ತಾರೆ ಎಂಬುದನ್ನು ತೈಲಸಂಪನ್ನ ರಾಷ್ಟ್ರಗಳಲ್ಲಿ ನೋಡಬಹುದು. ದಶಕಗಳ ಹಿಂದೆ ಇರಾನಿನ ಲೋಲುಪ ಸರ್ವಾಧಿಕಾರಿ ಶಾನನ್ನು ಪಾಶ್ಚಾತ್ಯರು ತೈಲಕ್ಕಾಗಿ ಬೆಂಬಲಿಸಿದ್ದರು. ಆಗ ಪ್ರಜಾಪ್ರಭುತ್ವ ಅವರಿಗೆ ಮುಖ್ಯವೆನಿಸಲಿಲ್ಲ. ನಂತರ ಅಯಾತೊಲ್ಲಾ ಖೊಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದಾಗ ಮಾತ್ರ ಅದು ನೆನಪಿಗೆ ಬಂತು. ಇದು ಮುಂದೆ ಇರಾಕ್, ಲಿಬಿಯಾ, ಈಜಿಪ್ಟ್, ಯೆಮೆನ್, ಆಫಘಾನಿಸ್ತಾನ ಮುಂತಾದ ದೇಶಗಳಲ್ಲಿ ಮರುಕಳಿಸಿತು. ಇರಾನ್- ಇರಾಕ್ ಯುದ್ಧದಲ್ಲಿ ಯುಎಸ್‌ಎಯ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತು. ಕಾರಣ ಅಥವಾ ನೆಪ ಪ್ರಜಾಪ್ರಭುತ್ವವೂ ಅಲ್ಲ ಸರ್ವಾಧಿಕಾರವೂ ಅಲ್ಲ. ಬದಲಾಗಿ ತೈಲ ಸಂಪತ್ತು.

ಈ ರೀತಿಯಾಗಿ ದೊಡ್ಡಣ್ಣನ ಮೂಗು ತೂರಿಸುವ ಕೆಲಸವೇ ಜಾಗತಿಕ ಭಯೋತ್ಪಾದನೆಗೆ ಮೂಲಕಾರಣ ಎಂದು ಎಲ್ಲರಿಗೂ ಗೊತ್ತು. ಈಗ ಶ್ರೀಮಂತ ದೇಶವಾಗಿರುವ ಸೌದಿ ಅರೇಬಿಯಾದಲ್ಲಿ ತೈಲ ಪತ್ತೆಯಾಗುವ ತನಕ ಅದು ಬಡ ರಾಷ್ಟ್ರವೇ ಆಗಿತ್ತು. ಯುಎಇ, ಬಹ್ರೈನ್ ಮುಂತಾದವುಗಳ ಕತೆಯೂ ಅಷ್ಟೇ. ಆಗ ಲಾಭಕ್ಕಾಗಿ ತನ್ನ ತಂತ್ರಜ್ಞಾನದ ಬಲ ಉಪಯೋಗಿಸಿದ ಯುಎಸ್‌ಎ ಅಲ್ಲಿ ಜಂಟಿಯ ಬಹುರಾಷ್ಟ್ರೀಯ ಕಂಪೆನಿ ‘ಅರಾರ್ಮ್ಕೊ’ವನ್ನು (ARab-AM-COmpany) ಸ್ಥಾಪಿಸಿತು. ಇಂತಹ ವ್ಯಾಪಾರಿ ಹಿತಾಸಕ್ತಿಗಳಿಗಾಗಿಯೇ ಪ್ರಜಾಪ್ರಭುತ್ವ ಇರಲಿ, ಸರ್ವಾಧಿಕಾರ ಇರಲಿ, ರಾಜಸತ್ತೆಯೇ ಇರಲಿ ಎಲ್ಲಾ ಪ್ರಭುತ್ವಗಳನ್ನು ಬಂಡವಾಳಶಾಹಿಯೇ ನಿಯಂತ್ರಿಸುತ್ತಾ ಬಂದಿದೆ. ಇದೇ ಸ್ವಯಂಘೋಷಿತ ಪ್ರಜಾಪ್ರಭುತ್ವದ ಕಾವಲುನಾಯಿಗಳು (ವಾಚ್ ಡಾಗ್ ಎಂಬುದು ಅವರದ್ದೇ ಪದ!) ಕೊಲ್ಲಿ ರಾಷ್ಟ್ರಗಳಲ್ಲಿ ರಾಜಸತ್ತೆಗಳನ್ನು ಬೆಂಬಲಿಸುತ್ತಾ ಬಂದಿಲ್ಲವೇ? ಇಂತಹ ಸಂಘರ್ಷಗಳ ಕಾರಣದಿಂದಲೇ ಸೌದಿ ಸಂಜಾತ ಒಸಾಮಾ ಬಿನ್ ಲಾದೆನ್‌ನಂತಹ ಸರ್ವಾಧಿಕಾರಿ ಭಯೋತ್ಪಾದಕನ ಹುಟ್ಟಿಗೆ ಕಾರಣವಾಯಿತು ಎಂಬುದು ಸತ್ಯವಲ್ಲವೇ?

ಲಿಬಿಯಾದ ಸರ್ವಾಧಿಕಾರಿ ಮುಹಮ್ಮದ್ ಗದ್ದಾಫಿ, ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಇವರನ್ನು ಅಷ್ಟೇ ಏಕೆ, ವೆನೆಜುವೆಲಾದಂತಹ ತೈಲ ಸಂಪನ್ನ ರಾಷ್ಟ್ರವನ್ನೇ ಕೊಂದವರು ಯಾರು? ಪ್ತಾಲೆಸ್ತೀನ್ ಸಮಸ್ಯೆಗಳಿಗೆ ಕಾರಣರು ಯಾರು? ಇಸ್ರೇಲಿನಂತಹ ದೇಶಗಳನ್ನು ಬೆಂಬಲಿಸುತ್ತಾ ಬಂದಿರುವವರು ಯಾರು? ಇಸ್ರೇಲಿನಂತೆಯೇ ಕಾಶ್ಮೀರದ ಸಮಸ್ಯೆಯನ್ನು ಸೃಷ್ಟಿಸಿದವರು ಯಾರು? ತಾವೇ ಭಯೋತ್ಪಾದಕ ಎಂದು ಕರೆದ ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಶನ್ ನಾಯಕ ಯಾಸರ್ ಅರಾಫತ್ ಅವರಿಗೆ ಮತ್ತು ಇಸ್ರೇಲ್ ವಿದೇಶ ಮಂತ್ರಿಯಾಗಿದ್ದ ಇಸಾಕ್ ರಬಿನ್ ಅವರಿಗೆ ನೋಬೆಲ್ ‘ಶಾಂತಿ’ ಪ್ರಶಸ್ತಿ ಕೊಟ್ಟವರು ಯಾರು?

ಕರಿಯರ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಅಧಿಕಾರ ಸ್ಥಾಪಿಸಿದ ಬಿಳಿಯ ಡಚ್ಚರ ವಿರುದ್ಧ ಬಿಳಿಯ ಬ್ರಿಟಿಷರೇ ಯುದ್ಧ ನಡೆಸಿದ್ದೇಕೆ? ಸಂಪತ್ತಿನ ಸ್ವಧೀನಕ್ಕಾಗಿ. ಆಂಗ್ಲೋ- ಬೋಯೆರ್ ವಾರ್ ಎಂದು ಕುಖ್ಯಾತವಾದ ಯುದ್ಧ ಏಕೆ ನಡೆಯಿತು? ಅಲ್ಲಿಯ ಮೂಲ ನಿವಾಸಿಗಳನ್ನೇ ಏಕೆ ಗುಲಾಮರನ್ನಾಗಿ, ಎರಡನೇ ದರ್ಜೆ ಪ್ರಜೆಗಳಾಗಿ ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದವರನ್ನು ಬೆಂಬಲಿಸುತ್ತಾ, ಸಹಿಸುತ್ತಾ, ಪೋಷಿಸುತ್ತಾ ಬಂದವರು ಯಾರು? ನೆಲ್ಸನ್ ಮಂಡೇಲಾರನ್ನು ಅಷ್ಟು ವರ್ಷ ಜೈಲಿಗೆ ತಳ್ಳಿದವರು ಯಾರು? ನಂತರ ವರ್ಣಭೇದ ನೀತಿ ತೊಲಗಿದ ಬಳಿಕ ಮಂಡೇಲಾರ ಜೊತೆಗೇ ದಮನಕಾರಿ ಪಿಕ್ ಬೋಥಾ ಅವರಿಗೆ ಜಂಟಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದವರು ಯಾರು?

ಸರ್ವಾಧಿಕಾರಗಳು ಎಲ್ಲಾ ರೀತಿಯ ನಾಟಕಗಳನ್ನು ನಡೆಸಿಕೊಂಡು ತಮ್ಮನ್ನು ತಾವು ಪ್ರತಿಷ್ಟಾಪಿಸಿವೆ. ಎಲ್ಲವುಗಳ ಹಿಂದೆ ಇರುವ ಶಕ್ತಿಗಳು ಯಾವುವು ಎಂಬುದನ್ನು ನಾವು ಗಮನಿಸಬೇಕು. ಇಷ್ಟೆಲ್ಲಾ ಒಂದು ಪೀಠಿಕೆ ಮಾತ್ರ. ಪ್ರಜಾಪ್ರಭುತ್ವದ ವೇಷದಲ್ಲೂ ಸರ್ವಾಧಿಕಾರ ಬರಬಹುದು. ಹಿಟ್ಲರ್ ಕೂಡಾ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದವನೆಂಬುದು ನಮಗೆ ನೆನಪಿರಲಿ. ಪ್ರತಿಯೊಬ್ಬ ಸರ್ವಾಧಿಕಾರಿ ಜಾತಿ, ಧರ್ಮ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿ, ಬೆಳೆಸಿ, ಬೆಳೆದರೆಂಬುದನ್ನು ನಾವು ಗಮನಿಸಬೇಕು. ನಮ್ಮಲ್ಲಿ, ನಮ್ಮ ಭಾರತದಲ್ಲಿ ಇದು ನಡೆಯುತ್ತಿದೆಯೇ? ಏನಾದರೂ ಸಾಮ್ಯವಿದೆಯೇ? ಇಲ್ಲಿ ಬೆರಳೆಣಿಕೆಯ ಬಂಡವಾಳಶಾಹಿಗಳಿಗೆ ಯಾಕೆ ರಾಜಗೌರವ ಮತ್ತು ಕಾನೂನಿನಿಂದ ರಕ್ಷಣೆ ನೀಡಲಾಗುತ್ತಿದೆ? ನಾವೇನಾದರೂ ಎಚ್ಚರಿಕೆ ವಹಿಸಬೇಕೆ? ವ್ಯವಸ್ಥಿತ ಸಂಚಿಗೆ ವ್ಯವಸ್ಥಿತ ಪ್ರತಿಹೋರಾಟ ಅಗತ್ಯವಿದೆಯೇ, ಇದನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.

ಪ್ರಜಾಪ್ರಭುತ್ವದ ಜೀವ ಹಿಂಡುತ್ತಿರುವ ಸರ್ವಾಧಿಕಾರಿಗಳು : ಬೊಗಸೆಗೆ ದಕ್ಕಿದ್ದು – 24
ಭಾರತದ ಎರಡನೇ ಹಂತದ ಮತ್ತು ಕರ್ನಾಟಕದ ಮೊದಲ ಹಂತದ ಚುನಾವಣೆಯಲ್ಲಿ ಉಳಿದವರಂತೆ ನಾನೂ ಮತ ಚಲಾಯಿಸಿದೆ. ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಒಂದು ಮೂಲೆಯಲ್ಲಿ ಇರುವ ನಮ್ಮ ಊರಿಗೆ ಕೆಲವರ್ಷಗಳಿಂದ ಪ್ರತ್ಯೇಕ ಮತಗಟ್ಟೆ ಇದೆ. ನಮ್ಮಲ್ಲಿ ಯಾವಾಗಲೂ ಶಾಂತಿಯುತವಾಗಿ ಮತದಾನ ನಡೆಯುತ್ತದೆ. ಈ ಬಾರಿಯೂ ನಡೆಯಿತು. ಯಾವತ್ತೂ ಯಾವುದೇ ಹಿಂಸಾಚಾರ ನಡೆದಿಲ್ಲ. ಆದರೂ, ಸುಮ್ಮನೇ ಹಿಂದೆ ಇದ್ದ ವಾತಾವರಣಕ್ಕೂ ಈಗಿನ ವಾತಾವರಣಕ್ಕೂ ಉಂಟಾಗಿರುವ ವ್ಯತ್ಯಾಸದ ಕುರಿತು ಸುಮ್ಮನೇ ಕುಳಿತು ಯೋಚಿಸಿದಾಗ ದುಃಖವಾಗುತ್ತದೆ.

1951-52ರ ಸ್ವತಂತ್ರ ಭಾರತದ ಮೊದಲ ಚುನಾವಣೆಯ ನಮ್ಮ ಗ್ರಾಮದ ಮತದಾರರ ಪಟ್ಟಿ ನನ್ನ ಬಳಿ ಇದೆ. ಆಗ ಅದು ಬೆಳ್ತಂಗಡಿ ಕ್ಷೇತ್ರಕ್ಕೆ ಸೇರಿತ್ತು. ಇದು ನನ್ನ ಹಿರಿಯರ ಬಳುವಳಿ. ಶಾಲೆಗೆ ಹೋಗುತ್ತಿದ್ದಾಗ ಮಂಗಳೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಿ.ಎಂ. ಪೂಣಚ್ಚ ಅವರ ಪೋಸ್ಟರುಗಳನ್ನು ನೋಡಿದ ನೆನಪಿದೆ. ಜೋಡುಎತ್ತು, ಗುಡಿಸಲು, ಹಸು-ಕರು, ಜನಸಂಘದ ದೀಪ ಇತ್ಯಾದಿ ಚಿಹ್ನೆಗಳ ಪೋಸ್ಟರುಗಳೂ, ಗೋಡೆಬರಹಗಳೂ ಬಹಳ ವರ್ಷಗಳ ಕಾಲ ನಮ್ಮ ಪೇಟೆಗೋಡೆಗಳಲ್ಲಿ ಇತಿಹಾಸವನ್ನು ನೆನಪಿಸುತ್ತಿದ್ದವು. ಆಗೆಲ್ಲಾ ಪೋಸ್ಟರ್‌ಗಳೂ ಅಪರೂಪ- ದೊಡ್ಡ ದೊಡ್ಡ ಫ್ಲೆಕ್ಸ್‌ಗಳ ಮಾತೇ ಬಿಡಿ. ನಂತರ ಸಿಕ್ಕಸಿಕ್ಕಲ್ಲಿ ಪೋಸ್ಟರ್ ಅಂಟಿಸುವುದು, ಸುಂದರ ಮತ್ತು ಕುರೂಪಿ ಗೋಡೆ ಬರಹ, ರಸ್ತೆ ಬರಹಗಳ ನಿಷೇಧವಾದ ನಂತರ ನಗರ ಪೇಟೆಗಳು ಚುನಾವಣೆಯ ಮಟ್ಟಿಗಾದರೂ ಸ್ವಚ್ಛವಾಗಿ ಉಳಿದಿವೆ ಎಂಬು ಒಳ್ಳೆಯ ಮಾತೇ. ಆದರೆ, ಇಂದು ಚುನಾವಣೆಗಳು ಅಥವಾ ರಾಜಕೀಯ ಸ್ವಚ್ಛವಾಗಿ ಉಳಿದಿವೆಯೇ? ಇದರ ಇನ್ನೊಂದು ಮುಖವೆಂದರೆ, ಎಲ್ಲಾ ರೀತಿಯ ಜಾಹೀರಾತುಗಳಿಗೆ ಕೋಟ್ಯಂತರ ರೂ. ಖರ್ಚು ಮಾಡಬಲ್ಲ ಶ್ರೀಮಂತ ಪಕ್ಷಗಳು ಮಾತ್ರವೇ ಪ್ರಚಾರ ಮಾಡಲು ಸಾಧ್ಯ. ಈ ವಿಷಯದಲ್ಲೀಗ ಬಿಜೆಪಿ ಬ್ಲ್ಯಾಕ್‌ಮೈಲ್ ಬಾಂಡುಗಳ ಮೂಲಕ ಸಂಗ್ರಹಿಸಿದ ಕೊಟ್ಯಂತರ ರೂ.ಗಳೇ ಮೈಲುಗಳಷ್ಟು ಮುಂಚೂಣಿಯಲ್ಲಿವೆ. ಆಳುವ ಪಕ್ಷದ ಈ “ಅನುಕೂಲತೆ” ಮತ್ತು ಪಕ್ಷಗಳ ನಡುವಿನ ತೀವ್ರ ಅಸಮಾನತೆಯು- ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಪ್ರಜಾಪ್ರಭುತ್ವವಾದಿ ಚುನಾವಣೆಗಳ ಮೂಲತತ್ವಗಳಿಗೇ ಮಾರಕ.

ಇನ್ನು ಊರೊಳಗಿನ ಸಾಮಾಜಿಕ ವಾತಾವರಣಕ್ಕೆ ಬರೋಣ. ಹಿಂದೆಲ್ಲಾ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಮನೆಮನೆ ಪ್ರಚಾರಕ್ಕೆ ಕೊಡುತ್ತಿದ್ದದು- ಒಂದಿಷ್ಟು ಕರಪತ್ರಗಳು ಮತ್ತು ಮತದಾರರಿಗೆ ನೀಡಲಾಗುತ್ತಿದ್ದ ಚಿಕ್ಕ ಚಿಕ್ಕ ಚೀಟಿಗಳು ಮಾತ್ರ. ಆಯಾ ಪಕ್ಷಗಳವರು ಸ್ಥಳೀಯವಾಗಿ ಸಂಗ್ರಹಿಸಿದ ಹಣದಿಂದಲೇ ಎಲ್ಲವೂ ನಡೆಯುತ್ತಿತ್ತು. ನಂತರ ಮದ್ಯ, ಹಣ, ಉಡುಗೊರೆ ಎಲ್ಲವನ್ನೂ ನೀಡಿ ಮತದಾರರನ್ನು ಕೊಳ್ಳುವ ಪ್ರಕ್ರಿಯೆ ಆರಂಭವಾಗಿ, ಇಂದು ಯಾವ ಮಟ್ಟಕ್ಕೆ ಮುಟ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇಲ್ಲಿಯೂ ಕೋಟ್ಯಂತರ ರೂ. ಹಣವಿರುವ ಬಿಜೆಪಿಗೇ ಅನುಕೂಲ.

ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಚುನಾವಣೆಯ ದಿನವೂ ಎಲ್ಲವೂ ಸೌಹಾರ್ದದಿಂದಲೇ ನಡೆಯುತ್ತಿತ್ತು. ಒಂದೇ ಕುಟುಂಬದ ಸದಸ್ಯರು, ಗೆಳೆಯರು ಬೇರೆಬೇರೆ ಪಾಳಯಗಳಲ್ಲಿ ಇದ್ದರೂ, ಮತಗಟ್ಟೆಗಳ ಮುಂದೆ ಹಾಕುತ್ತಿದ್ದ ಟೆಂಟುಗಳಿಗೆ ಪರಸ್ಪರ ಭೇಟಿ, ಕೈಕುಲುಕುವಿಕೆ ಸಾಮಾನ್ಯವಾಗಿತ್ತು. ಚುನಾವಣೆ ಮುಗಿದ ಮರುದಿನ ಯಾವುದೇ ಚಿಕ್ಕಪುಟ್ಟ ಉದ್ವಿಗ್ನತೆ ಇದ್ದರೂ ಮಾಯವಾಗುತ್ತಿತ್ತು. ಫಲಿತಾಂಶ ಬಂದ ನಂತರ ಎಲ್ಲರೂ ಮತದಾರರ ತೀರ್ಮಾನವನ್ನು ಒಪ್ಪುತ್ತಿದ್ದರು. ಮತ್ತೆ ಎಂದಿನಂತೆ ಎಲ್ಲವೂ ನಡೆಯುತ್ತಿತ್ತು. ಇದೇ ಪ್ರಜಾಪ್ರಭುತ್ವದ ಗೆಲುವು. ನಾನು ಹೇಳುತ್ತಿರುವುದು ಏನೆಂದರೆ, ಸಾಮಾನ್ಯವಾಗಿ ಎಲ್ಲರಿಗೂ ಪ್ರಜಾಪ್ರಭುತ್ವದ ಮುಖ್ಯ ಪ್ರಕ್ರಿಯೆಯಾದ ಚುನಾವಣೆಯ ನ್ಯಾಯಬದ್ಧತೆಯ ಮೇಲೆ ನಂಬಿಕೆಯಿತ್ತು. ಚುನಾವಣಾ ಆಯೋಗದ ಮೇಲೆ ನಂಬಿಕೆಯಿತ್ತು. ಈಗ ಹಾಗಿದೆಯೇ?

ಒಂದು ತಪ್ಪು ತಿಳುವಳಿಕೆ ಬೇಡ. ನಾನು ಮೇಲೆ ಹೇಳಿರುವುದು ನಮ್ಮ ಕ್ಷೇತ್ರದಲ್ಲಿ ನನ್ನ ಸ್ವಂತ ಅನುಭವದ ಪ್ರಕಾರ ಮಾತ್ರ. ಆದರೆ, ಕೆಲವು ರಾಜ್ಯಗಳಲ್ಲಿ, ಅದರಲ್ಲೂ ಉತ್ತರದ ರಾಜ್ಯಗಳಲ್ಲಿ, ಮುಖ್ಯವಾಗಿ ಫ್ಯೂಡಲ್ ಅಥವಾ ಪಾಳೇಗಾರಿ ಶಕ್ತಿಗಳು ಪ್ರಬಲವಾಗಿರುವಲ್ಲಿ ದಲಿತ ಮತ್ತು ದುರ್ಬಲ ವರ್ಗಗಳಿಗೆ ಮತ ಚಲಾಯಿಸದಿರಲು ಬಲವಂತ ಮಾಡುವುದು, ಬೆದರಿಸುವುದು, ನಕಲಿ ಮತದಾನ, ಸಶಸ್ತ್ರ ಗೂಂಡಾಗಳು ಮತಗಟ್ಟೆಗಳನ್ನು ವಶಕ್ಕೆ ತೆಗೆದುಕೊಂಡು ತಮಗೆ ಬೇಕಾದವರಿಗೆ ಮತ ಒತ್ತಿ ಪೆಟ್ಟಿಗೆಗೆ ಹಾಕುವುದು, ವಿರೋಧಿ ಮತಗಳು ಹೆಚ್ಚಾಗಿರುವ ಮತಗಟ್ಟೆಗಳಲ್ಲಿ ದೊಂಬಿ ಎಬ್ಬಿಸುವುದು ಇತ್ಯಾದಿ ಅಲ್ಲಿ ಇಲ್ಲಿ ನಡೆಯುತ್ತಿದ್ದವು ಎಂಬುದು. ಆದರೆ, ಈಗ ಇವು ಬುಲ್ಡೋಜರ್ ಮಾಡೆಲ್ ರಾಜ್ಯಗಳಲ್ಲಿ ಕಡಿಮೆಯಾಗಿವೆಯೆ? ಚುನಾವಣೆಗೆ ಮೊದಲೇ ಫಲಿತಾಂಶದ ಮೇಲೆ ಪ್ರಭಾವ ಬೀರುವ ಹಲವಾರು ತಂತ್ರಗಳನ್ನು ಆಳುವ ಪಕ್ಷವು ಅನುಸರಿಸುತ್ತಿದೆ. ಅದಕ್ಕಾಗಿ ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳನ್ನೇ ಸುತ್ತುಬಳಸಿ ಬೇಳೆಬೇಯಿಸಿಕೊಳ್ಳುವ ತಂತ್ರಗಳಿವು.

ಟಿ. ಎನ್. ಶೇಷನ್ ಒಬ್ಬ ಕರ್ಮಠ ಎನಿಸುವ ಬ್ರಾಹ್ಮಣನಾಗಿದ್ದರೂ, ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಚುನಾವಣಾ ಆಯೋಗಕ್ಕೆ ಒಂದು ವಿಶ್ವಾಸಾರ್ಹತೆ ತಂದುಕೊಟ್ಟಿದ್ದರು. ಅಲ್ಲಿಗೇ ಅದು ಕೊನೆಯಾಗಿದೆ. ಈಗ ಚುನಾವಣಾ ಆಯೋಗವು ಒಂದು ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆಯಾಗಿ ಉಳಿದಿದೆಯೇ? ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸ್ವತಂತ್ರರೇ? ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರ ನಿಗೂಢ ರಾಜೀನಾಮೆ, ಸರಕಾರದ ನಿಷ್ಟಾವಂತರಾಗಿದ್ದ ಇಬ್ಬರು ಮಾಜಿ ಅಧಿಕಾರಿಗಳನ್ನು ಚುನಾವಣಾ ಆಯೋಗಕ್ಕೆ ದಿಢೀರ್ ಆಗಿ ತುರುಕಿಸಿದ್ದು ಇದನ್ನು ಸೂಚಿಸುವುದಿಲ್ಲವೆ? ಈಗ ಚುನಾವಣಾ ಆಯೋಗ ಎಂಬುದು ದಕ್ಷವಾಗಿ ಚುನಾವಣೆ ನಡೆಸುವ ಒಂದು ಆಡಳಿತಾತ್ಮಕ ಸಂಸ್ಥೆ ಮಾತ್ರವೇ ಆಗಿದೆ. ಆದರೆ, ಆಡಳಿತ ಪಕ್ಷದ ಚುನಾವಣಾ ಅಕ್ರಮಗಳನ್ನು, ನಿಯಮ ಉಲ್ಲಂಘನೆಗಳನ್ನು ತಡೆಯಬಲ್ಲ ಸಂಸ್ಥೆಯಾಗಿ ಉಳಿದಿದೆಯೆ?

ನೀತಿ ಸಂಹಿತೆಗಳೆಲ್ಲಾ ಕೇವಲ ವಿರೋಧ ಪಕ್ಷಗಳಿಗೆ ಮೀಸಲೇ? ಕೋಮು, ಧರ್ಮ ಆಧಾರದಲ್ಲಿ ಮತ ಯಾಚನೆ ಮಾಡಬಾರದೆಂದು ನೀತಿಸಂಹಿತೆ ಹೇಳುತ್ತದೆ. ಯಾರೇ ಒಬ್ಬ ಜವಾಬ್ದಾರಿಯುತ ಪ್ರಧಾನಿ ಹಿಂದೂ-ಮುಸ್ಲಿಂ ಪಾತಳಿಯ ಮೇಲೆ ಬಹಿರಂಗ ಸಭೆಗಳಲ್ಲಿ ಮತ ಯಾಚನೆ ಮಾಡಿದಾಗ ಚುನಾವಣಾ ಆಯೋಗ ಏನು ಮಾಡಬೇಕಿತ್ತೋ ಅದನ್ನು ಮಾಡಿದೆಯೇ? ದೇಶದಲ್ಲಿ ಕಾನೂನು ಮತ್ತು ಶಿಸ್ತಿನ ಪರಿಸ್ಥಿತಿ ಕಾಯ್ದುಕೊಳ್ಳಬೇಕಾದ ಒಬ್ಬ ಗೃಹಮಂತ್ರಿ “ದೀದಿಯ ಗೂಂಡಾಗಳನ್ನು ತಲೆಕೆಳಗಾಗಿ ನೇತುಹಾಕುತ್ತೇವೆ” ಎಂಬ ಕಾನೂನು ಮೀರಿದ ಹೇಳಿಕೆ ನೀಡಿದಾಗ, ಆತನೇ ಒಬ್ಬ ಗೂಂಡಾ ಎಂದು ಸಾಬೀತಾಗುವುದಿಲ್ಲವೆ? ಎಲ್ಲರ ರಾಷ್ಟ್ರಪತಿ, ಎಲ್ಲರ ಉಪರಾಷ್ಟ್ರಪತಿ ಎನಿಸಿದ ಸಾಂವಿಧಾನಿಕ ಹುದ್ದೆ ಹೊಂದಿರುವವರು ಒಂದು ಪಕ್ಷದ ಪರ ಭಟ್ಟಂಗಿ ಹೇಳಿಕೆಗಳನ್ನು ನೀಡಿಲ್ಲವೆ? ಈ ಕುರಿತು ಚುನಾವಣಾ ಆಯೋಗ ಅಥವಾ ಯಾವುದೇ ನ್ಯಾಯಾಲಯ ಯಾವುದಾದರೂ ನಿರ್ಣಾಯಕ ಕ್ರಮ ಕೈಗೊಂಡಿದೆಯೆ?

ಇದರ ನಡುವೆ ಹಲವಾರು ವಲಯಗಳಲ್ಲಿ ಸಂಶಯಕ್ಕೆ ಈಡಾಗಿರುವ ಇಲೆಕ್ಟ್ರಾನಿಕ್ ಮತಯಂತ್ರಕ್ಕೆ- ಈ ಸಂಶಯ ನಿವಾರಣೆ ಮಾಡುವ ಯಾವುದೇ ಕ್ರಮ ಅಥವಾ ಖಾತರಿ ಇಲ್ಲದೇ ನ್ಯಾಯಾಲಯವು ಮಾನ್ಯತೆ ನೀಡಿದೆ.

ಚುನಾವಣೆಗೆ ಮೊದಲಷ್ಟೇ ಅರವಿಂದ ಕೇಜ್ರಿವಾಲ್ ಸಹಿತ ಹಲವಾರು ಪ್ರತಿಪಕ್ಷ ನಾಯಕರ ಬಂಧನ, ಇ.ಡಿ. ಸಹಿತ ಹಲವು ಸರಕಾರಿ ತನಿಖಾ ಸಂಸ್ಥೆಗಳನ್ನು ಕೇವಲ ಪ್ರತಿಪಕ್ಷಗಳ ವಿರುದ್ಧವೇ ಛೂಬಿಟ್ಟದ್ದು, ಯಾವುದೋ ಹಳೆಯ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆ ಸ್ಥಂಬನಗೊಳಿಸಿ ಚುನಾವಣಾ ವೆಚ್ಚಗಳಿಗೆ ಆಡಚಣೆ ಉಂಟುಮಾಡಿದ್ದು ಇತ್ಯಾದಿ ನೂರಾರು ಪ್ರಕರಣಗಳನ್ನು ನೀವು ನೆನಪಿಸಿಕೊಳ್ಳಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಧಾನಿ ಮುಂದಾಳತ್ವದಲ್ಲಿ ಆಳುವ ಪಕ್ಷ, ಮತ್ತದರ ಪಿತ ಆರೆಸ್ಸೆಸ್ ಈ ದೇಶವನ್ನು ಕೋಮು ನೆಲೆಯಲ್ಲಿ ಒಡೆಯುತ್ತಿರುವುದು, ಸಾಂವಿಧಾನಿಕ ಸಂಸ್ಥೆಗಳು ಮಾತ್ರವಲ್ಲದೇ ಸಂವಿಧಾನವನ್ನೇ ಬದಲಿಸಲು ಹೊರಟಿರುವುದು, ದ್ವೇಷವನ್ನೇ ಪ್ರಚೋದಿಸುತ್ತಿರುವುದು, ಹಲವು ಪಕ್ಷಗಳು, ಸಾಂಸ್ಕೃತಿಕ ವೈವಿಧ್ಯತೆಯೇ ಪ್ರಜಾಪ್ರಭುತ್ವದ ಜೀವಾಳವಾಗಿರುವಾಗ ಏಕಪಕ್ಷ ಏಕ ಸಂಸ್ಕೃತಿಯನ್ನು ತರುತ್ತಿರುವುದು, ವಿರೋಧಿಸಿದ ಬೇರೆಯವರನ್ನೆಲ್ಲಾ ಜಾತಿ, ಧರ್ಮ ಬೇಧವಿಲ್ಲದೆ ದೇಶದ್ರೋಹಿಗಳೆಂದು ಕರೆದು ಕಾರ್ಯಕರ್ತರಿಂದ ಮಾನಸಿಕ, ದೈಹಿಕ ಹಿಂಸಾಚಾರಕ್ಕೆ ಗುರಿಮಾಡುತ್ತಿರುವುದು, ಅಪ್ಪಟ ಸುಳ್ಳುಗಳನ್ನು ಮಾರಿಹೋದ ಮಾಧ್ಯಮಗಳ ಮೂಲಕ ಪ್ರಚಾರ ಮಾಡುತ್ತಿರುವುದು, ದೇಶವನ್ನೇ ತಮ್ಮ ಧಣಿಗಳಾದ ಬಂಡವಾಳಶಾಹಿಗಳಿಗೆ ಮಾರುತ್ತಿರುವುದು ಇವೆಲ್ಲವೂ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಸಂಚನ್ನು ಸೂಚಿಸದಿದ್ದರೆ, ನನಗೇನೂ ಹೇಳಲು ಇಲ್ಲ. ಮೇಲೆ ಹೇಳಿದ ಶಾಂತಿಯುತವಾಗಿ ಚುನಾವಣೆ ನಡೆಯುವ ನನ್ನ ಪುಟ್ಟ ಊರಿನಲ್ಲೂ ಈ ವಿಷ ವೇಗವಾಗಿ ಹರಡುತ್ತಿದೆ. ಇದನ್ನು ತಡೆಯುವುದು ಹೇಗೆ? ಇದು ನಿಮಗೆಲ್ಲರಿಗೂ ಗೊತ್ತಿದೆ.

ಒಂದು ದೇಶ-ಒಂದು ಚುನಾವಣೆ: ಸರ್ವಾಧಿಕಾರದ ಕೈಗೆ ಭಾರತ?
ನರೇಂದ್ರ ಮೋದಿ ನೇತೃತ್ವದ ಸಂಪುಟ ಸಭೆ ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ʼಒಂದು ದೇಶ – ಒಂದು ಚುನಾವಣೆʼ ವರದಿಗೆ ಅನುಮೋದನೆ ನೀಡಿದೆ. ಈ ಹಿನ್ನಲೆಯಲ್ಲಿ ಪೀಪಲ್‌ ಮೀಡಿಯಾದಲ್ಲಿ ಬಂದಿರುವ ಚರಣ್‌ ಐವರ್ನಾಡುರವರ ಹಿಂದಿನ ಲೇಖನವನ್ನು ಓದಿ.

2023ರ ಮೇನಲ್ಲಿ ಟರ್ಕಿ ದೇಶದ ಅಧ್ಯಕ್ಷರಾಗಿ ರೆಸೆಪ್ ತಯ್ಯಿಪ್ ಎರ್ಡೊಗನ್ ಮತ್ತೆ ಆಯ್ಕೆಯಾದಾಗ, ಅವರನ್ನು ಅಭಿನಂದಿಸಿವರಲ್ಲಿ ಮೊದಲಿಗರು ನಮ್ಮ ದೇಶದ ಘನವೆತ್ತ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಹೇಳಿಕೇಳಿ ಪಾಶ್ಚಿಮಾತ್ಯ ಚಿಂತಕರು  ಎರ್ಡೊಗನ್ ಅವರನ್ನು ಚುನಾಯಿತ ಸರ್ವಾಧಿಕಾರಿ ಎಂದು ಕರೆಯುತ್ತಾರೆ. ಮೊದಲು ಪ್ರಧಾನಿಯಾಗಿ, ನಂತರ ಟರ್ಕಿಯ ಅಧ್ಯಕ್ಷರಾದ ಇವರು 20 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ.

ನೀವು ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೋದಿಜಿ ಈ ಚುನಾಯಿತ ಸರ್ವಾಧಿಕಾರಿಯಿಂದ ಸ್ಪೂರ್ತಿಯನ್ನು ಪಡೆದಂತೆ ಕಾಣುತ್ತದೆ. ಇದೇನು ಬಿಜೆಪಿ ಹಾಗೂ ಅದರ ಅಡುಗೆ ಮನೆ ಆರ್‌ಎಸ್‌ಎಸ್‌ಗೆ ಹೊಸದೇನಲ್ಲ.

ಪ್ರಾದೇಶಿಕ ರಾಷ್ಟ್ರೀಯತೆಯನ್ನು ಸದಾ ವಿರೋಧಿಸುತ್ತಿದ್ದ ಆರ್‌ಎಸ್‌ಎಸ್‌ನ ಎರಡನೇ ಸರಸಂಚಾಲಕ ಮಾಧವ ಸದಾಶಿವ ಗೋಲ್ವಾಲ್ಕರ್‌ ತಮ್ಮ We, or Our Nationhood Defined ಎಂಬ ಪುಸ್ತಕದಲ್ಲಿ ಈ ಪ್ರಪಂಚ ಕಂಡ ಅತ್ಯಂತ ಕ್ರೂರ ಸರ್ವಾಧಿಕಾರಿ ಜರ್ಮನಿಯ ಹಿಟ್ಲರ್‌ನನ್ನು ಹಾಡಿ ಹೊಗಳುತ್ತಾರೆ. ಪ್ರಾದೇಶಿಕ ರಾಷ್ಟ್ರೀಯತೆಯನ್ನು ಬಿಟ್ಟು ಭಾರತ, ಜನಾಂಗೀಯ ರಾಷ್ಟ್ರೀಯತೆಯನ್ನು ಒಪ್ಪಲು ಹಿಟ್ಲರ್‌ನಿಂದ ಸ್ಪೂರ್ತಿ ಪಡೆಯುವಂತೆ ಹೇಳುತ್ತಾರೆ. ಜರ್ಮನಿಯನ್ನು ಧ್ವಂಸ ಮಾಡಿದ ಹಿಟ್ಲರ್‌ ಸರ್ವಾಧಿಕಾರದ ಜನಾಂಗೀಯ ಶುದ್ಧೀಕರಣವನ್ನು ಅವರು ಭಾರತದ ಅಗತ್ಯ ಎಂದು ಹೇಳುತ್ತಾರೆ.

ಇದನ್ನು ಓದಿ: ‘ಒಂದು ದೇಶ ಒಂದು ಚುನಾವಣೆ’ ವರದಿಗೆ ಕೇಂದ್ರದ ಅನುಮೋದನೆ

ಹಾಗಾಗಿ, ಸರ್ವಾಧಿಕಾರಿಗಳು ಇನ್ನೊಂದು ದೇಶದ ಸರ್ವಾಧಿಕಾರಿಯನ್ನು ಹೊಗಳುವುದು, ಮತ್ತು ಅವನಿಗಿಂತ ಒಂದು ಹೆಜ್ಜೆ ಮುಂದೆ ಹೋಗುವುದು ಚರಿತ್ರೆಯಲ್ಲಿ ಆಗಾಗ ಕಂಡುಬಂದಿದೆ.

2017 ರಲ್ಲಿ ಎರ್ಡೋಗನ್ ದೇಶದ ಸರ್ವಶಕ್ತ ಅಧ್ಯಕ್ಷರಾಗಿ ಹೊರಹೊಮ್ಮಲು ಅವರು ಅಲ್ಪಸಂಖ್ಯಾತ ಕುರ್ದಿಗಳ ಮೇಲೆ ಸಾಂಪ್ರದಾಯಿಕ ಇಸ್ಲಾಮಿಸ್ಟ್‌ಗಳನ್ನು ಎತ್ತಿಕಟ್ಟಿದ್ದರು. ಇದರಿಂದ ಮೋದಿಯವರು ಸ್ಪೂರ್ತಿ ಪಡೆದಿದ್ದಾರಾ? ಇದನ್ನು ನೀವೇ ಯೋಚಿಸಬೇಕು.

Congratulations @RTErdogan on re-election as the President of Türkiye! I am confident that our bilateral ties and cooperation on global issues will continue to grow in the coming times.
— Narendra Modi (@narendramodi) May 29, 2023

ಎರ್ಡೋಗನ್ ನಂತೆ ಮೋದಿಯವರಲ್ಲಿ ಕಂಡು ಬರುವ ಮಹತ್ವದ ಸಾಮ್ಯತೆ ಎಂದರೆ ತನಗೆ ಬೇಕಾದವರನ್ನು ಶಾಸನಬದ್ಧ ಸ್ಥಾನಗಳಿಗೆ ನೇಮಿಸುವುದು. ಸರ್ವಾಧಿಕಾರಿಯ ಪ್ಲೈಬುಕ್‌ನಲ್ಲಿ ಇರುವ ರಹಸ್ಯ, ಕುತಂತ್ರ ಮತ್ತು ಆಶ್ಚರ್ಯ ಈ ಮೂರನ್ನೂ ನೀಡಬಹುದು.

ಇಡೀ ದೇಶವನ್ನು ರಹಸ್ಯವಾಗಿ ಇಡಲಾಗಿದೆ. ಮುಕ್ತವಾಗಿ ನಡೆಯಬೇಕಾದ ಸಂಸದೀಯ ಚರ್ಚೆಗಳನ್ನು ನಿಲ್ಲಿಸಲಾಗುತ್ತಿದೆ. ಇತ್ತೀಚೆಗೆ ಸಂಸತ್‌ ಅಧಿವೇಶನ ಹೇಗೆ ನಡೆಯಿತು ಎಂಬುದನ್ನೇ ಗಮನಿಸಿ, ಇದ್ದಕ್ಕಿದ್ದಂತೆ 2023ರ ಆಗಸ್ಟ್ 31 ರಂದು, ಸಂಸದೀಯ ವ್ಯವಹಾರಗಳ ಸಚಿವ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ವಿಚಿತ್ರದ ಸಂದೇಶವೊಂದನ್ನು ನೀಡಿದರು. ಸೆಪ್ಟೆಂಬರ್ 18 ರಿಂದ 22 ರವರೆಗೆ ಪ್ರಶ್ನೋತ್ತರ ಅವಧಿಯಿಲ್ಲದೆ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ ಎಂದು ಅವರು ಘೋಷಿಸಿದರು

ಅಧಿವೇಶನದ ಅಜೆಂಡಾವನ್ನು 2023ರ ಸೆಪ್ಟೆಂಬರ್ 13 ರ ಬುಧವಾರದವರೆಗೆ ರಹಸ್ಯವಾಗಿಡಲಾಗಿತ್ತು. ಇದು ಕಾರ್ಯಸೂಚಿಯ ಬಗ್ಗೆ ಹೆಚ್ಚಿನ ಊಹಾಪೋಹಗಳಿಗೆ ಕಾರಣವಾಯಿತು. ಅಜೆಂಡಾವನ್ನು ರಹಸ್ಯವಾಗಿ ಇಟ್ಟ ಮೇಲೆ ಪ್ರಹ್ಲಾದ್‌ ಜೋಶಿ ಒಂದು ರಾಷ್ಟ್ರ- ಒಂದು ಚುನಾವಣೆಯ ಸಾಧ್ಯತೆಯನ್ನು ಅಧ್ಯಯನ ಮಾಡಲು ರಾಮ್ ನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ರಚಿಸುವುದಾಗಿ ಘೋಷಿಸಿದರು. ಮರುದಿನ, ಅಮಿತ್ ಶಾ ಅವರನ್ನೊಳಗೊಂಡ ಎಂಟು ಸದಸ್ಯರ ಸಮಿತಿಗೆ ಔಪಚಾರಿಕವಾಗಿ ಸೂಚಿಸಲಾಯಿತು.

ಇದು ಸರ್ವಾಧಿಕಾರದ ಎಲ್ಲಾ ಲಕ್ಷಣಗಳನ್ನೂ ತೋರಿಸುತ್ತದೆ. ಆದರೆ ಅಮಿತ್‌ ಶಾ ಅವರು ಕೋವಿಂದ್ ಅವರನ್ನು ಜೂನ್ 2 ಕ್ಕೂ ಮೊದಲೇ ಇದಕ್ಕೆ ನಿಯೋಜಿಸಿದ್ದರು. ಕೋವಿಂದ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಹನ್ನೆರಡು ರಾಜ್ಯಗಳ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.

ಸಮಿತಿಯಲ್ಲಿನ ಎಲ್ಲಾ ಎಂಟು ಸದಸ್ಯರು ಕೇಂದ್ರ ಸರ್ಕಾರದ ಬೆಂಬಲಿಗರು. ಇದರ ಓರ್ವ ಸದಸ್ಯ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಈ ಸಮಿತಿಗೆ ರಾಜೀನಾಮೆ ನೀಡಿ ಹೊರಬಂದರು.

ಅಂದರೆ, ಪ್ರಹ್ಲಾದ್‌ ಜೋಶಿ ಅಧಿಕೃತವಾಗಿ ಒಂದು ದೇಶ-ಒಂದು ಚುನಾವಣೆಯ ಪರಿಶೀಲನೆಗೆ ಸಮಿತಿ ರಚಿಸುವ ಅಧಿಕೃತ ಘೋಷಣೆ ಮಾಡುವ ಮೊದಲೇ ಅಮೀತ್‌ ಶಾ ಈ ಸಮಿತಿಯನ್ನು ಮಾಡಿದ್ದರು. ಅಂದರೆ, ಈ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗದಂತೆ ರಹಸ್ಯವಾಗಿ ಇಡಲಾಗಿತ್ತು.

ಈಗ 2029ಕ್ಕೆ ಲೋಕಸಭಾ, ರಾಜ್ಯ ವಿಧಾನ ಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ “ಒಂದು ದೇಶ- ಒಂದು ಚುನಾವಣೆ”ಯನ್ನು ಜಾರಿಗೊಳಿಸಲು ಭಾರತದ ಸಂವಿಧಾನದಲ್ಲಿ ಹೊಸ ಅಧ್ಯಾಯವನ್ನು ಸೇರಿಸಲು ಕಾನೂನು ಆಯೋಗ ಶಿಫಾರಸ್ಸುಗಳನ್ನು ನೀಡಲಿದೆ.

ನಿವೃತ್ತ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಈ ಆಯೋಗವು ಐದು ವರ್ಷಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಚುನಾವಣೆಗಳನ್ನು ಸಿಂಕ್ರೊನೈಸೇಶನ್ ಮಾಡಲು ಶಿಫಾರಸು ಮಾಡುವ ಸಾಧ್ಯತೆಯಿದೆ.

ಈ ಒಂದು ದೇಶ-ಒಂದು ಚುನಾವಣೆ ಯಾಕೆ ಬೇಕು ಎಂಬುದಕ್ಕೆ ಮೋದಿ ಕೊಡುವ ಕಾರಣಗಳು ತುಂಬಾ ವಿಚಿತ್ರವಾಗಿದೆ. ದೇಶದ ಬೇರೆ ಬೇರೆ ಕಡೆ ಆಗಾಗ ಚುನಾವಣೆಗಳಿ ನಡೆಯುತ್ತಿದ್ದರೆ ಖರ್ಚು ಜಾಸ್ತಿ, ಚುನಾವಣೆಯ ಸಂದರ್ಭದಲ್ಲಿ ಪದೇ ಪದೇ Model Code of Conduct (MCC) ಜಾರಿಗೆ ತಂದರೆ ಅಗತ್ಯ ಸೇವೆಗಳನ್ನು ಪೂರೈಸುವಂತ ಸರ್ಕಾರದ ಕೆಲಸಗಳಿಗೆ ತೊಡಕಾಗುತ್ತದೆ, ಚುನಾವಣೆಗಳನ್ನು ನಡೆಸಲು ನಿಯೋಜಿಸಲಾದ ಸರ್ಕಾರಿ ಸಿಬ್ಬಂದಿಯ ಮೇಲೆ ಅನಗತ್ಯ ಹೊರೆ ಬೀಳುತ್ತದೆ.

ಎಂಸಿಸಿ ಮೂಲಭೂತ ಸೇವೆಗಳನ್ನು ನೀಡಲು ಸರ್ಕಾರಕ್ಕೆ ತೊಡಕನ್ನು ಉಂಟು ಮಾಡುತ್ತದೆ ಎಂದರೆ ಇದು ಬೇರೆ ಬೇರೆ ಪಕ್ಷಳು ಚುನಾವಣಾ ಆಯೋಗದ ಜೊತೆಗೆ ಕುಳಿತು ಮಾತನಾಡಿ ಪರಿಹರಿಸಬಹುದಾದ ಸಮಸ್ಯೆ. ಆದರೆ ಮಾರ್ಚ್ 2016 ರ ನಂತರ ಯೋಜನೆಗೆ ಬೇಕಾದ ಉಭಯಪಕ್ಷೀಯ ಬೆಂಬಲವನ್ನು ಪಡೆಯಲು ಸರ್ಕಾರವು ಯಾವುದೇ ರೀತಿಯ ಪ್ರಯತ್ನವನ್ನು ಮಾಡಲಿಲ್ಲ.

ಸೆಪ್ಟೆಂಬರ್ 2023 ರಲ್ಲಿ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕೋವಿಂದ್ ನೇತೃತ್ವದ ಸಮಿತಿಯನ್ನು ನೇಮಿಸಿತು ಮತ್ತು ಒಪ್ಪಿಗೆಯಿಲ್ಲದೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರನ್ನು ಸಮಿತಿಗೆ ಸೇರಿಸಿತು. ಅವರು ತಮ್ಮ ಸ್ಥಾನಕ್ಕೆ ಒಪ್ಪಿಗೆ ಇಲ್ಲದೆ ನೇಮಕ ಮಾಡಿದ ಕಾರಣ ರಾಜೀನಾಮೆಯನ್ನು ನೀಡಿದರು.

ನಿಮಗೆ ಅಚ್ಚರಿ ಆಗಬಹುದು, ಇವರ ತಂತ್ರ ಎಷ್ಟು ಗುಪ್ತವಾಗಿ, ಪರಿಣಾಮಕಾರಿಯಾಗಿ ಮಾಡಲಾಗಿದೆ ಎಂಬುದು. 1984 ರಿಂದ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವನ್‌ ನೇಷನ್‌ – ವನ್‌ ಇಲೆಕ್ಷನ್‌ ಭರವಸೆಯನ್ನು ನೀಡುತ್ತಾ ಬಂದಿದೆ. 2017 ರ ಜುಲೈಯಲ್ಲಿ ರಾಮ್‌ ನಾಥ್‌ ಕೋವಿಂದ್‌ ರಾಷ್ಟ್ರಪತಿಯಾಗಿ ಆಯ್ಕೆಯಾದ ಮೇಲೆ 2018 ರ ಜನವರಿಯಲ್ಲಿ ಸಂಸತ್ತಿನ ಉಭಯ ಸದನಗಳಿಗೆ ತಮ್ಮ ಮೊದಲ ರಾಷ್ಟ್ರಪತಿ ಭಾಷಣ ನೀಡುತ್ತಾರೆ. ಅದರಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪ ಮಾಡುತ್ತಾರೆ. ಅಲ್ಲಿಂದಲೇ ಪ್ರಧಾನಿ ಮೋದಿಯವರ ಈ ಒಂದು ದೇಶ-ಒಂದು ಚುನಾವಣೆಗೆ ರಾಷ್ಟ್ರಪತಿ ಮುದ್ರೆ ಬೀಳಲು ಶುರುವಾಯ್ತು.

ನರೇಂದ್ರ ಮೋದಿಯವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಗೊಳ್ಳುವುದು ನಿಶ್ಚಿತ. ಆದರೆ ಇದು ಪ್ರಪಂಚದ ಆತ್ಯಂತ ದೊಡ್ಡ ಪ್ರಜಾಪ್ರಭುತ್ವ ಭಾರತದ ಮೇಲೆ ಹೊಡೆಯುವ ಪೆಟ್ಟು ಅಂತಿಂಥ ಹೊಡೆತ ಅಲ್ಲ. ಇದು ಪ್ರಜಾಪ್ರಭುತ್ವದಿಂದ ಚುನಾಯಿತ ಸರ್ವಾಧಿಕಾರಕ್ಕೆ ಭಾರತ ಮಗ್ಗಲು ಬದಲಿಸುವ ಸಾಧ್ಯತೆ ಇದೆ.

ಭಾರತದಂತಹ ರಾಜಕೀಯವಾಗಿ ವೈವಿಧ್ಯಮಯವಾಗಿರುವ ರಾಷ್ಟ್ರದಲ್ಲಿ, ಆವರ್ತಕ ಚುನಾವಣೆಗಳು ಒಂದೇ ಪಕ್ಷಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುವುದಿಲ್ಲ. ಜನರು ಬೇರೆ ಬೇರೆ ಚುನಾವಣೆಗಳಿಗೆ ಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಸ್ಥಳೀಯ ಮಟ್ಟದಲ್ಲಿ ಅವರು ತಮ್ಮ ಮತವನ್ನು ಯಾರಿಗೆ, ಯಾಕೆ ಹಾಕಬೇಕು ಎಂಬುದನ್ನು ಸ್ಥಳೀಯ ಆದ್ಯತೆಗಳು, ಸಮಸ್ಯೆಗಳ ಮೇಲೆ ನಿರ್ಧರಿಸುತ್ತಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಬಂದಾಗ ಜನರ ಉದ್ದೇಶ, ಆಭಿಪ್ರಾಯಗಳು ಬದಲಾಗುತ್ತದೆ. ಬದಲಾಗಲೇ ಬೇಕು. ಆಗ ಮಾತ್ರ ಅಧಿಕಾರದ ವಿಕೇಂದ್ರೀಕರಣ ಸಮರ್ಪಕವಾಗಿ ಜಾರಿಯಾಗುವುದು.

ನೀವೇ ಈ ಉದಾಹರಣೆಗಳನ್ನು ನೋಡಿ, ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಂಸತ್ತಿನ ಚುನಾವಣೆಯ ಜೊತೆ ಜೊತೆಗೆ ಪ್ರತಿಯೊಂದು ರಾಜ್ಯ ಚುನಾವಣೆಗಳು ನಡೆದಿದ್ದರೆ, ಭಾರತದ ರಾಜಕೀಯ ಇತಿಹಾಸವು ಬೇರೆ ಆಗಿರುತ್ತಿತ್ತು. 1989 ರ ಚುನಾವಣೆಯಲ್ಲಿ ರಾಜೀವ್ ಗಾಂಧಿ ಸೋತ ನಂತರೂ ಅವರು ಅಧಿಕಾರದಲ್ಲಿ ಮುಂದುವರಿಯುತ್ತಿದ್ದರು. ಹಾಗೆಯೇ, 2019 ರಲ್ಲಿ ಪುಲ್ವಾಮಾ-ಬಾಲಾಕೋಟ್ ಅವಳಿ ಘಟನೆಗಳು ನಡೆದಾಗಲೂ ಬಿಜೆಪಿ ಅಧಿಕಾರಕ್ಕೆ ಬಂತು.

ಅಮೆರಿಕದ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಮತ್ತು ಇಂಟರ್ನ್ಯಾಷನಲ್ ಸ್ಟಡೀಸ್ ಹೇಳುವಂತೆ 2014ರಲ್ಲಿ ಸಂಸತ್‌ ಚುನಾವಣೆಯ ಜೊತೆಗೆ ಎಲ್ಲಾ ರಾಜ್ಯಗಳ ಚುನಾವಣೆಗಳು ನಡೆದಿದ್ದರೆ, ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತು.

2020 ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ದಿ ಅಡ್ವಾನ್ಸ್ಡ್ ಸ್ಟಡಿ ಆಫ್ ಇಂಡಿಯಾ ಪ್ರಕಟಿಸಿದ ವರದಿಯಲ್ಲಿ ಏಕಕಾಲಕ್ಕೆ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ನಡೆದರೆ ಮತದಾರರು ಅಭ್ಯರ್ಥಿಗಿಂತ ಪಕ್ಷದ ಕಡೆಗೆ ನೋಡಿ ಮತ ಹಾಕುತ್ತಾರೆ ಎಂದು ಹೇಳಲಾಗಿದೆ. ಒಂದೇ ಪಕ್ಷದ ಅಭ್ಯರ್ಥಿ ಎಷ್ಟೇ ಬರಗೆಟ್ಟ ನಾಯಕನಾಗಿದ್ದರೂ, ಭ್ರಷ್ಟನಾಗಿದ್ದರೂ ಅವನು ಗೆಲ್ಲುವ ಸಾಧ್ಯತೆ 20% ಹೆಚ್ಚಾಗುತ್ತದೆ ಎಂದು ಈ ವರದಿ ಹೇಳುತ್ತದೆ.

ಬಿಜೆಪಿ ಸರ್ಕಾರ 2019ರಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಅವ್ಯವಸ್ಥೆ ಮತ್ತು ಸಾಂವಿಧಾನಿಕ ಅಸ್ತವ್ಯಸ್ತತೆಗೆ ಕಾರಣ Fixed-term Parliaments Act, 2011ನಿಂದ ಪಾಠ ಕಲಿತಿಲ್ಲ. ಈ ಕರಾಳ ಕಾಯ್ದೆಯನ್ನು ಮಾರ್ಚ್ 2022ರಲ್ಲಿ ಎಲ್ಲಾ ಪಕ್ಷಗಳೂ ಆ ದೇಶದಲ್ಲಿ ತೀರ್ಮಾನಿಸಿ ರದ್ದು ಮಾಡಲಾಯಿತು.

ಆದರೆ, ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಮೇ 12, 2021 ರಂದು The Dissolution and Calling of Parliament Bill ಜಾರಿಗೆ ತಂದು, ಅದಕ್ಕೆ ಮಾರ್ಚ್ 24, 2022 ರಂದು ರಾಜ ಸಮ್ಮತಿಯೂ ಸಿಕ್ಕಿತು. ಇದು ಸ್ಥಿರ ಅವಧಿಯ ಸಂಸತ್ತಿನ ಕಾಯ್ದೆ 2011ಯನ್ನು ತೆಗೆದು ಹಾಕಿತು. ರಾಜ ಪರಿವಾರದ ಒಪ್ಪಿಗೆಯಂತೆ ಈ ದೇಶದಲ್ಲಿ ತನಗೆ ಬೇಕಾದಾಗ ಸಂಸತ್ತನ್ನು ವಿಸರ್ಜಿಸಿ ಚುನಾವಣೆ ನಡೆಸುವ ಅಧಿಕಾರವನ್ನು ಅಲ್ಲಿನ ಪ್ರಧಾನಿಗೆ ನೀಡಲಾಯ್ತು. ಇದು ಪ್ರಜಾಸತಾತ್ಮಕತೆಗೆ ವಿರುದ್ಧವಾಗಿದೆ.

Fixed-term Parliaments Act, 2011 ಹೇಗೆ ಬ್ರಟೀಷ್‌ ಸಂವಿಧಾನದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಿತೋ, ಮೋದಿಯವರ ಏಕಕಾಲಕ್ಕೆ ಚುನಾವಣೆ ಎಂಬ ಯೋಜನೆಯೂ ಇದೇ, ಇದಕ್ಕೂ ಹೆಚ್ಚಿನ ದುಷ್ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಸಂವಿಧಾನದಲ್ಲಿ ತಿದ್ದುಪಡಿ ಜೊತೆಗೆ, ಏಕಕಾಲದ ಚುನಾವಣೆಗೆ ಬೇಕಾದ ಒಂದು ಸ್ಥಿರ ಕ್ಯಾಲೆಂಡರನ್ನು ಸಂವಿಧಾನಕ್ಕೆ ಸೇರಿಸಬೇಕಾಗುತ್ತದೆ.

ಮುಖ್ಯವಾಗಿ,  ಮುಂದಿನ ಸಂಸದೀಯ ಚುನಾವಣೆ ನಡೆದಾಗ, ಎಲ್ಲಾ ರಾಜ್ಯಗಳ ಅಸೆಂಬ್ಲಿಗಳನ್ನು ವಿಸರ್ಜಿಸಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಹಲವಾರು ರಾಜ್ಯಗಳ ಅಸೆಂಬ್ಲಿಗಳ ಅಧಿಕಾರಾವಧಿಯನ್ನು 2024 ಮತ್ತು 2029 ರ ನಡುವೆ ಮೊಟಕುಗೊಳಿಸಬೇಕಾಗುತ್ತದೆ, ಇಲ್ಲವೇ ವಿಸ್ತರಿಸಬೇಕಾಗುತ್ತದೆ.

ಒಂದು ವೇಳೆ ಹೀಗಾದರೆ, ಈ ದೇಶ ಪ್ರಜಾಪ್ರಭುತ್ವವಾಗಿ ಉಳಿಯುವುದಿಲ್ಲ. ಜನಾದೇಶವನ್ನು ಏಕಾಏಕಿಯಾಗಿ ಮೊಟುಕುಗೊಳಿಸುವುದು, ಅಸೆಂಬ್ಲಿಗಳನ್ನು ವಿಸರ್ಜಿಸುವುದು ಎಂದರೆ ದೇಶದ ನಾಗರಿಕನ ಅಧಿಕಾರ, ಹಕ್ಕುಗಳನ್ನು ಕಸಿದುಕೊಂಡ ಹಾಗೆಯೇ.

ಮೋದಿಯವರ ಈ ಯಾವುದೇ ಯೋಜನೆ, ಯೋಚನೆಗಳು ಭಾರತದ ಒಳಿತಿಗಲ್ಲ. ಇದು ಭಾರತದ ಕೇಡುಗಾಲ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟ ಹಾಗೇ, ಮೋದಿಯವರು ಒಂದು ದೇಶ-ಒಂದು ಚುನಾವಣೆಯ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅತಂತ್ರಗೊಳಿಸಲು ಮುಂದಾಗಿದ್ದಾರೆ.

ಅವರ ಉದ್ದೇಶ ತುಂಬಾ ಸ್ಪಷ್ಟ. ಈ ದೇಶವನ್ನು ಒಂದು ಕಾರ್ಪೋರೇಟ್‌ ಕಂಪನಿಯ ರೀತಿಯಲ್ಲಿ ನಡೆಸುವುದು. ಆಗ ಭಾರತ  ಜನಾದೇಶವೇ ಸರ್ವೋಚ್ಚವಾಗಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯುವುದಿಲ್ಲ.

ಭಿನ್ನ ರಾಜಕೀಯ ಪಕ್ಷಗಳು ರಾಜ್ಯಗಳಲ್ಲಿ ಆಡಳಿತ ನಡೆಸುವ ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ನಾಶ ಮಾಡಿ, ಇಡೀ ದೇಶದ ರಾಜಕೀಯ ವ್ಯವಸ್ಥೆಯನ್ನು ಏಕಪಕ್ಷೀಯಗೊಳಿಸುವುದು. ಇದನ್ನು ಜನರಿಗೆ ಅರ್ಥಮಾಡಿಸಿ, ಈ ಸರ್ವಾಧಿಕಾರಕ್ಕೆ ಜನರು ಒಗ್ಗುವಂತೆ ಮಾಡಲು ಬಿಜೆಪಿ ಅನೇಕ ಪ್ರಯತ್ನಗಳನ್ನು ಮಾಡಿದೆ. ಇದರಲ್ಲಿ ತುಂಬಾ ಅಪಾಯಕಾರಿ ನಡೆ ಎಂದರೆ, ವಿರೋಧ ಪಕ್ಷದ ನಾಯಕರು ಇಲ್ಲದೆ ಸಂಸತ್‌ ಕಲಾಪಗಳು ನಡೆದದ್ದು, ಮೂರು ಕ್ರಿಮಿನಲ್‌ ಕಾನೂನು ಕಾಯಿದೆಗಳನ್ನು, ಟೆಲಿಕಾಮ್‌ ಬಿಲ್‌ಗಳನ್ನು ಅವರ ಉಪಸ್ಥಿತಿ ಇಲ್ಲದೇ ಜಾರಿಗೆ ತಂದದ್ದು.

ಇದನ್ನು ಜನ ಸಂಭ್ರಮಿಸಿದರೆ, ಈ ಜನರನ್ನು ಸರ್ವಾಧಿಕಾರಕ್ಕೆ ಮತ್ತು ಗುಲಾಮಗಿರಿಗೆ ಒಗ್ಗಿಸುವುದು ತುಂಬಾ ಸುಲಭ ಎಂಬುದು ಬಿಜೆಪಿಗೆ ಅರ್ಥವಾಗಿದೆ.

ವನ್‌ ನೇಷನ್‌ – ವನ್‌ ಇಲೆಕ್ಷನ್‌ ಕಾಂಗ್ರೇಸಿಗೆ ಮಾತ್ರ ದೊಡ್ಡ ಪೆಟ್ಟು ಎಂದು ಇತರ ರಾಜಕೀಯ ಪಕ್ಷಗಳು ಭಾವಿಸಿದರೆ ಅದು ಮೂರ್ಖತನ. ಈಗ ಬಿಜೆಪಿ ಜೊತೆಗೆ ದೋಸ್ತಿ ಮಾಡಿ ಹಸಿರು ಶಾಲಿನಿಂದ ಕೇಸರಿ ಶಾಲಿಗೆ ಬದಲಾಗಿರುವ ಕುಮಾರ ಸ್ವಾಮಿಯವರ ಮೂರ್ಖತನವೂ ಕೂಡ. ಇದು ಕೇವಲ ವಿರೋಧ ಪಕ್ಷಗಳಿಗೆ ಸಂಕಷ್ಟ ಮಾತ್ರವಲ್ಲ, ಬಿಜೆಪಿಯ ರಾಜಕೀಯ ಮಿತ್ರಪಕ್ಷಗಳ ಅಸ್ತಿತ್ವಕ್ಕೂ ಅಪಾಯ ತಂದಿಡಲಿದೆ ಎಂಬುದನ್ನು ಮರೆಯಬಾರದು. ಏಕಕಾಲದ ಚುನಾವಣೆ ಎಂಬ ಬಿಜೆಪಿಯ ಕಪಟ, ಕ್ರೂರ ತಂತ್ರ ಭಾರತದ ಪ್ರಾದೇಶಿಕ ಪಕ್ಷಗಳನ್ನು ಕೊಂದು ಹಾಕಲಿದೆ.

ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಒಂದು ದೇಶ-ಒಂದು ಚುನಾವಣೆ ಎಂಬ ಬಿಜೆಪಿಯ ನಡೆ ದೇಶಕ್ಕೆ ಮುಂದೆ ಒದಗಬಹುದಾದ ಕರಾಳ ದಿನಗಳ ಮುನ್ಸೂಚನೆ, ಇದನ್ನು ದೇಶದ ಪ್ರತಿಯೊಬ್ಬ ನಾಗರಿಕ ಅರ್ಥಮಾಡಿಕೊಂಡು, ಈ ದೇಶ ವಿರೋಧಿ ನಡೆಯನ್ನು ವಿರೋಧಿಸಬೇಕು.

– ಚರಣ್‌ ಐವರ್ನಾಡು, ಬೆಂಗಳೂರು