dinesh gundurav – Peepal Media

ಗುಂಡೂರಾವ್‌ ಮನೆಯಲ್ಲೇ ಅರ್ಧ ಪಾಕಿಸ್ಥಾನವಿದೆ! – ಯತ್ನಾಳ್
ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್‌‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕೈವಾಡವಿದೆ ಎಂಬ ರೀತಿ ಟ್ವೀಟ್ ಮಾಡಿದ್ದ ದಿನೇಶ್ ಗುಂಡೂರಾವ್‌ (Dinesh gundurao) ಅವರಿಗೆ ಶಾಸಕ ಯತ್ನಾಳ್‌ ಎಂದಿನಂತೆ ತಮ್ಮದೇ ಲಂಗು ಲಗಾಮಿಲ್ಲದ ಭಾಷೆಯಲ್ಲಿ ತಿರುಗೇಟು ನೀಡಿದ್ದಾರೆ.

ಎನ್‌ಐಎ ತಂಡ ತೀರ್ಥಹಳ್ಲಿಯ ಬಿಜೆಪಿ ಕಾರ್ಯಕರ್ತನನ್ನು ವಿಚಾರಣೆಗೆ ಒಳಪಡಿಸಿತ್ತು ಈ ವಿಚಾರ ಸಂಬಂಧ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಟ್ವೀಟ್ ಮಾಡಿದ್ದು ಎನ್‌ಐಎ ವಿಚಾರಣೆಗೆ ಒಳಪಡಿಸಿದೆ ಎಂದರೆ ಬಿಜೆಪಿ ಕೈವಾಡವಿದೆ ಎಂದೇ ಅರ್ಥ ಅಲ್ಲವೇ? ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ಪ್ರತಿಕ್ರಯಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ಗುಂಡೂರಾವ್ ಅರ್ಧ ಮನೆಯೇ ಪಾಕಿಸ್ತಾನ , ಅವರ ಮನೆಯಲ್ಲಿ ಪಾಕಿಸ್ತಾನವೇ ಇದೆ… ದೇಶದ ವಿರುದ್ಧ ಹೇಳಿಕೆ ನೀಡೊದು ಅವರಿಗೆ ಚಟವಾಗಿದೆ’ ಎಂದು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತನ ವಿಚಾರಣೆ ಕುರಿತು ಮಾತನಾಡಿದ ಯತ್ನಾಳ್, “ಮೊಬೈಲ್‌ ವ್ಯಾಪಾರಿಗಳು ಅವರು, ಅವರ ಬಳಿ ಯಾವ ಗಿರಾಕಿ ಬರುತ್ತಾರೊ ಗೊತ್ತಾಗಲ್ಲ, ಅದು ಬಿಜೆಪಿ ಕಾಂಗ್ರೆಸ್‌ ಅಂತ ಏನಿಲ್ಲ, ತನಿಖೆಗೆ ಎಲ್ಲಾ ಸಹಕಾರ ನೀಡುತ್ತೇನೆ ಎಂದಿದ್ದಾರೆ ಮುಗಿತು ಅಷ್ಟೇ…” ಎಂದು ಯತ್ನಾಳ್ ಹೇಳಿದ್ದಾರೆ.

ದೇಶದಲ್ಲಿ ಮೋದಿ ಬಂದರೆ ಮಾತ್ರ ನಮಗೆ ಉಳಿಗಾಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ, ಎಷ್ಟು ಸೀಟು ಗೆಲ್ಲುತ್ತೋ ಗೊತ್ತಿಲ್ಲ 500 ಸೀಟು ಕೂಡ ಗೆಲ್ಲಬಹುದು ಎಂದರು.

ಈ ಬಾರಿ ಇಪ್ಪತ್ತೆಂಟು ಕ್ಷೇತ್ರ ಗೆಲ್ಲುತ್ತೇವೆ

ಕರಾವಳಿ ಭಾಗದಲ್ಲಿ ಮೂರಕ್ಕೆ ಮೂರು ಲೋಕಸಭಾ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ – ಚಿಕ್ಕಮಗಳೂರು ಕ್ಷೇತ್ರಗಳನ್ನು ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಇಡೀ ದೇಶದಲ್ಲಿ ಪ್ರಧಾನಿ ನರೇಂದ್ರ ಅನಿವಾರ್ಯ ಮತ್ತು ಅವಶ್ಯ ಎಂಬುದು ಸಾಮಾನ್ಯ ಮತದಾರರಿಗೂ ಅನಿಸಿದೆ. ಕೆಲ ಕಾರ್ಯಕರ್ತರಲ್ಲಿ ಕೆಲವು ವಿಷಯಗಳ ಕುರಿತು ಅಸಮಾಧಾನ ಇದ್ದರೂ ಸಹ ದೇಶದ ಹಿತ ದೃಷ್ಟಿಯಿಂದ ಎಲ್ಲರೂ ಒಟ್ಟಿಗೆ ನಿಂತು ಬಿಜೆಪಿ ಗೆಲ್ಲಿಸುತ್ತಾರೆ. ರಾಜ್ಯದ 28 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲುವ ವಿಶ್ವಾಸ ಇದೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ಸಿದ್ದರಾಮಯ್ಯ ಮೇಲಿನ ಪ್ರತಿಭಟನೆ ಸರ್ಕಾರಿ ಪ್ರಾಯೋಜಿತ ಗಲಭೆ : ದಿನೇಶ್‌ ಗುಂಡುರಾವ್‌
ಬೆಂಗಳೂರು: ಮಡಿಕೇರಿಯಲ್ಲಿ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆಯು ಸರ್ಕಾರಿ ಪ್ರಾಯೋಜಿತ ಗಲಭೆ ಎಂದು ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ವಾಗ್ದಾಳಿ ನಡೆಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ಯುವ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಮೊಟ್ಟೆ ಎಸೆದಿರುವುದು ಹೇಡಿಗಳ ಲಕ್ಷಣ. ಈ‌ ಕೃತ್ಯ ಅವರ ಹತಾಶೆ ತೋರಿಸುತ್ತಿದೆ. ಸಿದ್ದರಾಮಯ್ಯರವರನ್ನು ಸೈದಾಂತಿಕವಾಗಿ ಎದುರಿಸಲಾಗದ ಬಿಜೆಪಿ ಇಂತಹ ಹೀನ ನಡೆ ಪ್ರದರ್ಶಿಸುತ್ತಿದೆ. ಇದೊಂದು ಸರ್ಕಾರಿ ಪ್ರಾಯೋಜಿತ ಗಲಭೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿಸಿದ್ದಾರೆ. ವಿಪಕ್ಷ ನಾಯಕರಿಗೇ ಈ ರಾಜ್ಯದಲ್ಲಿ ಭದ್ರತೆ ಇಲ್ಲ. ಇನ್ನು ಜನಸಾಮಾನ್ಯರಿಗೆ ರಕ್ಷಣೆ ಎಲ್ಲಿ? ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ.

ಇದು ಗಂಭೀರ ಸ್ವರೂಪದ ಭದ್ರತಾ ಲೋಪ. ಇಂತಹ ಕಿಡಿಗೇಡಿ‌ ಕೃತ್ಯ ನಡೆಸುವ ಮೂಲಕ ವಿಪಕ್ಷದ ಬಾಯಿ ಮುಚ್ಚಿಸಬಹುದು ಎಂದು ಸರ್ಕಾರ ಭಾವಿಸಿರಬಹುದು. ಆದರೆ ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.