distric news – Peepal Media

347 ಆಲ್ಕೋಹಾಲ್‌ ಬ್ರೀತ್‌ ಅನಲೈಸರ್‌ಗಳ ಖರೀದಿಗೆ ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು: ಸರ್ಕಾರಿ ಸಾರಿಗೆಯಲ್ಲಿ  ಕುಡಿದು ವಾಹನ ಚಲಾಯಿಸುವ ಚಾಲಕರಿಗೆ ಎಚ್ಚರವಹಿಸಲು ರಾಜ್ಯಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಒಟ್ಟು 347 ಆಲ್ಕೋಹಾಲ್‌ ಬ್ರೀತ್‌ ಅಲಲೈಸರ್‌ಗಳನ್ನು ಖರೀದಿಸಲು ಮುಂದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸುರಕ್ಷಾತಾ ಪ್ರಾಧಿಕಾರದ ಕ್ರಿಯಾ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಕೆಆರ್‌ಟಿಸಿ, ಬಿಎಂಟಿಸಿ, ಸೇರಿದಂತೆ ಸಾರಿಗೆ ಇಲಾಖೆಗೆ 347 ಆಲ್ಕೋಹಾಲ್‌ ಬ್ರೀತ್‌ ಅನಲೈಸರ್‌ಗಳ ಖರೀದಿಗೆ ಒಟ್ಟು 2.9 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಮಾಡಿದೆ.

ಇದರ ಉದ್ದೇಶವು ಕುಡಿದು ವಾಹನ ಓಡಿಸುವುದರಿಂದ ಅಪಘಾತಕ್ಕೆ ಕಾರಣವಗುತ್ತದೆ ಮತ್ತು ಇದರಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಎಂದು ಪರಿಗಣಿಸಿ, 2022-23 ನೇ ಸಾಲಿನ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಈ ಕ್ರಿಯಾ ಯೋಜನೆಯನ್ನು ರೂಪಿಸಲು ಅನುಮೋದನೆಯನ್ನು ನೀಡಿದೆ.

ಪ್ರೇಮಿಗಳನ್ನು ಪೊಲೀಸರಿಗೊಪ್ಪಿಸಿದ ಹಿಂದುತ್ವ ಕಾರ್ಯಕರ್ತರು
ಧರ್ಮಸ್ಥಳ: ಅನ್ಯಕೋಮಿನ ಜೋಡಿಯನ್ನು ಹಿಂದೂತ್ವ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಓಪ್ಪಿಸಿದ ಘಟನೆ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಗದಗಿನ ರಫೀಕ್ ಹಾಗೂ ಗದಗಿನ ಹಿಂದೂ ಯುವತಿ ಧರ್ಮಸ್ಥಳಕ್ಕೆ ಬಂದಿದ್ದು ಖಾಸಗಿ ಲಾಡ್ಜ್‌ ಒಂದಕ್ಕೆ ರೂಮ್‌ ಬುಕ್‌ ಮಾಡಲು ಹೋದ ಸಂದರ್ಭದಲ್ಲಿ ಅವರಿಗೆ ರೂಮ್‌ ನೀಡಲು ವಸತಿ ಗೃಹದ ಸಿಬ್ಬಂದಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಜೋಡಿ ತಕ್ಷಣವೇ ಬೆಂಗಳೂರಿಗೆ ತೆರಳಲು ಬಸ್‌ ಹತ್ತಿದ್ದು ಈ ವಿಷಯ ತಿಳಿದ ಹಿಂದೂತ್ವದ ಕಾರ್ಯಕರ್ತರು ಅವರನ್ನು ಕೊಕ್ಕಡ ಎಂಬಲ್ಲಿ ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.
ಬಳಿಕ ಅವರನ್ನು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದು ಪೊಲೀಸರುವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

An incident of #moralpolicing has been reported in Nelladi #DakshinKannada. A #Muslim boy Riyaz & a #Hindu girl both 4m #Gadag had travelled to #Dharmasthala. #bajrangdal workers stopped the bus they were travelling& handed them to cops.Girl was handed over to her parents by cops pic.twitter.com/G0D1J9KVIG
— Imran Khan (@KeypadGuerilla) August 12, 2022

ರಾಷ್ಟ್ರ ಲಾಂಛನದ ಶಿಷ್ಟಾಚಾರ ಉಲ್ಲಂಘನೆ ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ಬೆಳಗಾವಿ:  ರಾಜ್ಯಾಡಳಿತದಿಂದ ರಾಷ್ಟ್ರೀಯ ಲಾಂಛನದ ಶಿಷ್ಟಾಚಾರಕ್ಕೆ ಉಲ್ಲಂಘನೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಬೆಳಗಾವಿ ಅಖಿಲ ಭಾರತ ಸ್ವತಂತ್ರ್ಯ ಹೋರಾಟಗಾರರ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಇಲಾಖೆಗಳ ಮುಖಾಂತರ ಚೈನಾ ಸೀಲ್ಕ್ ಬಟ್ಟೆಯಲ್ಲಿ ಸ್ಟೀನ್ ಪ್ರಿಂಟ್ ಮುಖಾಂತರ ಅಕ್ರಮವಾಗಿ ರಾಷ್ಟ್ರಧ್ವಜ ತಯಾರಿಸಿ ಅವುಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದ್ದು, ಈ ಕ್ರಮದಿಂದ ರಾಷ್ಟ್ರೀಯ ಲಾಂಛನದ ಶಿಷ್ಟಾಚಾರ ಪಾಲನೆಯ ಉಲ್ಲಂಘನೆಯಾಗಿ ರಾಷ್ಟ್ರ ಧ್ವಜಕ್ಕೆ ಅಪಮಾನವಾಗುವ ಸಾಧ್ಯತೆ ಇರುತ್ತದೆ.  ರಾಷ್ಟ್ರ ಧ್ವಜಕ್ಕೆ ಹಾಗೂ ಧ್ವಜಾರೋಹಣಕ್ಕೆ ಗೌರವ ವಂದನೆಗೆ ಅದರದೇ ಆದ ಶಿಷ್ಟಾಚಾರಗಳಿದ್ದು, ಅವುಗಳ ಉಲ್ಲಂಘನೆಯಾದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿ ಅಗೌರವ ಸಲ್ಲಿಸಿದಂತಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸಮಿತಿ ಕಿಡಿಕಾರಿದೆ.

ರಾಷ್ಟ್ರ ಧ್ವಜವನ್ನು ಖಾದಿ ನೂಲಿನ ಮೂಲಕ ಸ್ವದೇಶಿ ಸಾಮಗ್ರಿಗಳನ್ನು ಬಳಸಿ ರಾಷ್ಟ್ರೀಯ ಲಾಂಛನದ ನಿಯಮಾವಳಿಗಳ ಅಡಿಯಲ್ಲಿ ವ್ಯವಸ್ಥಿತವಾಗಿ ತಯಾರಿಸುವ ಕ್ರಮವು ಭಾರತ 47ರ ಸ್ವಾತಂತ್ರೋತ್ಸವದ ದಿನದಿಂದ ಇಲ್ಲಿಯವರೆಗೆ ನಡೆದು ಬಂದಿರುತ್ತದೆ. ಈಗ ಸರಕಾರವು ಶೀಘ್ರವಾಗಿ ಬೇಡಿಕೆಗಣುಗುಣವಾಗಿ ಪೂರೈಸಲು ಸಾಧ್ಯವಿಲ್ಲದ ಕಾರಣ ವಿದೇಶದಿಂದ ಆಮದು ಮಾಡಿಕೊಂಡ ಚೈನಾ ಸೀಲ್ಕ್ ಬಟ್ಟೆಗೆ ಸ್ಟೀನ್ ಪ್ರಿಂಟ್ ಮೂಲಕ ಅಕ್ರಮ ರೀತಿಯಲ್ಲಿ ತಯಾರಿಸಿ ದರ ನಿಗದಿ ಪಡಿಸಿ,  ಅದನ್ನು ಸರಕಾರದ ಕಾರ್ಯಾಲಯಗಳ ಇಲಾಖೆ ಮೂಲಕ ಪ್ರತಿ ಮನೆಗೆ ಪೂರೈಸಲು ಕ್ರಮ ಜರುಗಿಸುತ್ತಿದೆ ಎಂದರು.

ಈ ಲಾಂಛನವನ್ನು ಪಡೆಯುವ ಜನಸಾಮಾನ್ಯರಿಗೆ ಅದರ ಮಹತ್ವ ಹಾಗೂ ಧ್ವಜಾರೋಹಣದ ನಂತರ ಅದನ್ನು ಕಾಪಾಡುವ ರೀತಿ ಅದರ ಬಳಕೆಯ ಬಗ್ಗೆ ಪರಿಜ್ಞಾನವಿಲ್ಲದೇ ದುರ್ಬಳಕೆಯಾದಲ್ಲಿ ರಾಷ್ಟ್ರ ಧ್ವಜಕ್ಕೆ ಅಪಮಾನವಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಸರಕಾರವೇ ರಾಷ್ಟ್ರ ಧ್ವಜದ ದುರ್ಬಳಕೆಗಾಗಿ ಜನಸಾಮಾನ್ಯರಿಗೆ ನೀಡುತ್ತಿರುವುದು ದೇಶಾಭಿಮಾನಕ್ಕೆ ಹಿನ್ನೆಡೆಯಾಗುತ್ತಿದೆ, ತಕ್ಷಣ ಮನೆ ಮನೆಗೆ ಚೈನಾ ಸೀಲ್ಕ ಬಟ್ಟೆಯ ರಾಷ್ಟ್ರ ಧ್ವಜಗಳ ಪೂರೈಕೆಯನ್ನು ನಿಲ್ಲಿಸಿ ಪ್ರತಿ ವರ್ಷ ಸ್ವಾತಂತ್ರೋತ್ಸವನ್ನು ಆಚರಿಸುವ ಮಾದರಿಯಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಬೇಕು. ಆಚರಣೆಗೆ ಗೌರವ ವಂದನೆ ಸಲ್ಲಿಸಲು ಸಮಾಜದ ಎಲ್ಲಾ ಜನತೆಗೆ ಜ್ಞಾಪಿಸಿ ಅದ್ದೂರಿಯಾಗಿ ಆಚರಣೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ದೇಶೀಯ ಸಾಮಾಗ್ರಿಗಳನ್ನು ಬಳಸಿ ಖಾದಿ ಭಂಡಾರಗಳ ಮುಖಾಂತರ ಖರೀದಿಸಿದ ರಾಷ್ಟ್ರಧ್ವಜವು ಮರು ಉಪಯೋಗಕ್ಕೆ ಬಾರದಿದ್ದಲ್ಲಿ ಅದನ್ನು ದುರ್ಬಳಕೆ ಮಾಡುವಂತಿಲ್ಲ. ಅದು ನಿಷ್ಕ್ರಿಯಗೊಂಡಲ್ಲಿ ಅದನ್ನು ಭೂಮಿಯ ಆಳದಲ್ಲಿ ಗೌರವದಿಂದ ಮುಚ್ಚಬೇಕಾಗುತ್ತದೆ. ಚೈನಾ ಸೀಲ್ಕ್‌ ನಿಂದ ಮಾಡಿದ ರಾಷ್ಟ್ರಧ್ವಜವು ಮಣ್ಣಿನಲ್ಲಿ ಹುಳುವುದರಿಂದ ಅದು ತನ್ನ ಗುಣಮಟ್ಟವನ್ನು ಹಾಗೆ ಉಳಿದುಕೊಳ್ಳುವುದರಿಂದ ಈ ಲಾಂಛನಕ್ಕೆ ಅಪಮಾನ ಮಾಡಿದಂತಾಗುವುದು. ಯಾವುದೇ ಪರಿಸ್ಥಿತಿಯಲ್ಲಿ ಚೈನಾ ಸೀಲ್ಕ್ ಬಟ್ಟೆಯಲ್ಲಿ ತಯಾರಿಸಿದ ರಾಷ್ಟ್ರ ಧ್ವಜಕ್ಕೆ ನಮ್ಮ ಸಂಪೂರ್ಣ ವಿರೋಧವಿದ್ದು ಅದನ್ನು ನಿಲ್ಲಿಸಬೇಕೆಂದು  ಅಖಿಲ ಭಾರತ ಸ್ವತಂತ್ರ್ಯ ಹೋರಾಟಗಾರರ ಸಮಿತಿಯ ರಾಜ್ಯಾಧ್ಯಕ್ಷ ಬಿ. ಎಮ್.‌ ಚಿಕ್ಕನಗೌಡರ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದಾರೆ.

ಆಟಿಡೊಂಜಿ ದಿನ ( ಶ್ರಾವಣದಲ್ಲೊಂದು ದಿನ) ಮತ್ತು RSS ಆಳ ಮತ್ತು ಅಗಲ
ಮಂಗಳೂರು: ಮಂಗಳೂರಿನ ಸ್ವ ಸಹಾಯ ಸಂಘದ ಮಹಿಳೆಯರು, ದಕ್ಷಿಣ ಕನ್ನಡ ಸಂಚಲನದ ತರಬೇತುದಾರರು ಮತ್ತು ಗೃಹಿಣಿಯರು ನಗರದ ಆನಂದ ಅಪಾರ್ಟ್‌ಮೆಂಟ್ಸ್‌ನಲ್ಲಿ ಆಟಿಡೊಂಜಿ ದಿನ ( ಶ್ರಾವಣದಲ್ಲೊಂದು ದಿನ) ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದರು.

ಆಟಿಡೊಂಜಿ ದಿನ ( ಶ್ರಾವಣದಲ್ಲೊಂದು ದಿನ), ತುಳುನಾಡಿನ ಸಂಪ್ರದಾಯಗಳು ಮತ್ತು ಆಟಿ ಮಾಸದ ಮಹತ್ವವನ್ನು ತಿಳಿಸುವ  ಕಾರ್ಯಕ್ರಮ. ಇದನ್ನು ಮುಖ್ಯವಾಗಿ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ  ನಡೆಸುವುದು ಈಚೆಗಿನ ವಿದ್ಯಮಾನವಾಗಿದೆ. ಆಟಿ ತಿಂಗಳ ವೈಶಿಷ್ಟ್ಯವನ್ನು ಪ್ರಾದೇಶಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶದಿಂದ ಈ ಪರಿಕಲ್ಪನೆ  ಮೂಡಿ ಬಂದಿರುವುದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಚಾವಡಿಯಲ್ಲಿ. ಅದರ ಮೊದಲ ಅಧ್ಯಕ್ಷರಾಗಿದ್ದ ಡಾ. ವಿವೇಕ ರೈಗಳವರ ಅವಧಿಯಲ್ಲಿ. ಈ ನೆಪದಲ್ಲಿ ಆಟಿ ತಿಂಗಳಲ್ಲಿ ದೊರೆಯುವ ನಿಸರ್ಗದ  ಸಸ್ಯ, ಚಿಗುರು, ಎಲೆ, ನಾರು, ಹೂ, ಕಾಯಿ, ಹಣ್ಣು ಕಾಳು, ಪತ್ರೊಡೆ ಮೊದಲಾದ ಸಸ್ಯಜನ್ಯ ತಿನಿಸುಗಳನ್ನು ತಯಾರಿಸುವ, ಪರಿಚಯಿಸುವ ಕಾರ್ಯಕ್ರಮಗಳು ಇಂದು ತುಂಬ ಜನಪ್ರಿಯತೆಯನ್ನು ಪಡೆದಿವೆ.

ಸಾಮಾನ್ಯಾತಿ ಮಹಿಳೆಯರು ತರಹೇವಾರಿ ತಿಂಡಿ ತಿನಿಸುಗಳನ್ನು ಹೊಟ್ಟೆಗೆ ಆಹಾರವಾಗಿ ಜತೆಗೆ ತಂದಿದ್ದರೆ ಮೆದುಳಿಗೆ ಆಹಾರವಾಗಿ ತುಂಬಿಸಿಕೊಂಡದ್ದು ಆರ್‌ ಎಸ್‌ ಎಸ್ ಆಳ ಮತ್ತು ಆಗಲ ಪುಸ್ತದ ಹೂರಣವನ್ನು. ಹರಿಣಿ ಮತ್ತು ಸುರೇಖಾ  ಪುಸ್ತಕವನ್ನು ಕ್ರಮವಾಗಿ ಓದಿದ ಬಳಿಕ ಚರ್ಚೆ ನಡೆಸಲಾಯಿತು. ಪುಸ್ತಕದಲ್ಲಿ ಬರೆದ ಕೆಲ ಅಂಶಗಳನ್ನು ದಕ್ಷಿಣ ಕನ್ನಡದ ಕೋಮು ಗಲಭೆಯ ಉದಾಹರಣೆಗಳೊಂದಿಗೆ  ಮತ್ತಷ್ಟೂ ಸ್ಪಷ್ಟಪಡಿಸಿಕೊಳ್ಳಲಾಯಿತು.

ನಾನಾ ಆಸಕ್ತಿಯ ಸುಮಾರು 30 ಮಂದಿ ಮಹಿಳೆಯರು ಭಾಗವಹಿಸಿದ್ದರು. ಇಪ್ಪತ್ತಕ್ಕೂ ಹೆಚ್ಚು ಸ್ಥಳೀಯ ಖಾದ್ಯಗಳಿದ್ದವು.

ಮಂಗಳೂರಿನಲ್ಲಿ ಮುಂದುವರೆದ ಸರಣಿ ಕೊಲೆ
ಸುರತ್ಕಲ್‌ :  ಮಂಗಳೂರು ಹೊರವಲಯದ ಸುರತ್ಕಲ್‌ ಭಾಗದಲ್ಲಿ ಮಹಮ್ಮದ್ ಫಾಝಿಲ್ ಎಂಬ ಯುವಕ ಕೊಲೆಯಾಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ರಾತ್ರಿ ಮಂಗಳೂರು ಬಳಿಯ ಸುರತ್ಕಲ್‌ನಲ್ಲಿ ಕಾರ್‌ನಲ್ಲಿ ಬಂದಿದ್ದ ನಾಲ್ವರು ಮುಸುಕುದಾರಿ ದುಷ್ಕರ್ಮಿಗಳು ಬಟ್ಟೆ ಅಂಗಡಿಗೆ ನುಗ್ಗಿ ಮಹಮ್ಮದ್ ಫಾಸಿಲ್ (23) ಅವರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಮಹಮ್ಮದ್ ಫಾಝಿಲ್ ಅವರು, ರಾತ್ರಿ 8 ಗಂಟೆಯ ಸುಮಾರಿಗೆ ಎಂಆರ್‌ಪಿಎಲ್‌ ರಸ್ತೆಯ ಸುರತ್ಕಲ್ ಮಾರುಕಟ್ಟೆ ಸಮೀಪದ ಬಟ್ಟೆ ಅಂಗಡಿಗೆ ಹೋಗುತ್ತಿರುವ ಸಂದರ್ಭದಲ್ಲಿ, ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದು. ಕೊಲೆಯಾದ  ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕಾರಣ ಸುರತ್ಕಲ್‌ ಭಾಗದಲ್ಲಿ ಪರಿಸ್ಥಿತಿ ಗಂಭೀರವಾಗಿರುವುದರಿಂದ  ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ನಗರ ಪೊಲೀಸ್ ಕಮಿಷನರ್ ಮನವಿಯ ಮೇರೆಗೆ‌ ಜಿಲ್ಲಾಧಿಕಾರಿ ಶುಕ್ರವಾರ (ಜು.29) ಪಣಂಬೂರು, ಮೂಲ್ಕಿ, ಬಜಪೆ, ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ ರಜೆ‌ ಘೋಷಿಸಿದ್ದು, ಸೆಕ್ಷೆನ್‌ 144 ಜಾರಿ ಮಾಡಲಾಗಿದೆ.