dk suresh – Peepal Media

ಪ್ರಕರಣದ ಅಷ್ಟೂ ಹೊಣೆ ಜೆಡಿಎಸ್ ಹೊರಬೇಕು : ಡಿಕೆ ಸುರೇಶ್ ಪ್ರತಿಕ್ರಿಯೆ
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈಗೇನು ಹೆಚ್.ಡಿ.ಕುಮಾರಸ್ವಾಮಿಯವರು ರೇವಣ್ಣ ಕುಟುಂಬಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ, ಇದು ತಪ್ಪು. ಈಗಾಗಲೇ ಪ್ರಕರಣದ ಹಿನ್ನೆಲೆ ನೋಡಿದರೆ ಜೆಡಿಎಸ್ ನ ಬಹುತೇಕರಿಗೆ ಈ ಕೃತ್ಯದ ಬಗ್ಗೆ ಗೊತ್ತಿತ್ತು. ಈಗ “ಸಂಬಂಧವಿಲ್ಲ” ಎಂದು ಕೈ ತೊಳೆದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್, ಈ ಮುಂಚೆಯೇ ಪೆನ್ ಡ್ರೈವ್ ನಮ್ಮ ಕೈಗೆ ಸಿಕ್ಕಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಇದು ಶುದ್ಧ ಸುಳ್ಳು. ಬಿಜೆಪಿ ಮಂದಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ಮಂದಿಗೆ ಈ ಹಿಂದೆಯೇ ಇದರ ಬಗ್ಗೆ ಗೊತ್ತಿತ್ತು. ಕಳೆದ ವರ್ಷವೇ ಹಾಸನ ಬಿಜೆಪಿ ನಾಯಕ ದೇವರಾಜೇ ಗೌಡ ಪ್ರೆಸ್ ಮೀಟ್ ಮಾಡಿ ಪ್ರಜ್ವಲ್ ರೇವಣ್ಣನ ಅಶ್ಲೀಲ ಪೆನ್ ಡ್ರೈವ್ ಇದೆ ಎಂದಿದ್ದರು, ಎಂದು ಹೇಳಿದ್ದಾರೆ.

ಹಾಗೆಯೇ ಈ ಪ್ರಕರಣದ ಬಗ್ಗೆ ಈಗಾಗಲೇ ಬಿಜೆಪಿ ಹಲವು ಮಂದಿ ನಮಗೆ ಮುಂಚೆಯೇ ಗೊತ್ತಿತ್ತು ಎಂಬ ಮಾತನ್ನಾಡಿದ್ದಾರೆ. ದೇವರಾಜೇ ಗೌಡ ಈಗಾಗಲೇ ಇದನ್ನು ಬಿಜೆಪಿ ರಾಷ್ಟ್ರೀಯ ನಾಯಕರ ಗಮನಕ್ಕೂ ತಂದಿದ್ದೇನೆ, ಆದರೆ ಈ ಬಗ್ಗೆ ಯಾರೂ ತಲೆ ಕೆಡಿಸಿ ಕೊಳ್ಳಲಿಲ್ಲ.. ಎಂದು ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರಿಗೆ ಮೊದಲೇ ಗೊತ್ತಿತ್ತು ಎಂಬುದು ಸುಳ್ಳು ಎಂದು ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.

ಇನ್ನು ಹೆಚ್.ಡಿ.ಕುಮಾರಸ್ವಾಮಿ ಈ ಹಿಂದೆ ಹೊಳೆನರಸೀಪುರದಲ್ಲಿ ಈತ ರೇವಣ್ಣನ ಮಗ ಅಲ್ಲ, ನನ್ನ ಮಗ ಎಂದು ತಿಳಿದುಕೊಂಡು ಈತನ ಬೆಳೆಸಿ ಎಂದಿದ್ದಾರೆ. ಈಗ ನೋಡಿದರೆ ಅವರಿಗೂ ನಮಗೂ ಸಂಬಂಧ ಇಲ್ಲ ಎಂದಿದ್ದಾರೆ. ಒಳ್ಳೆಯದು ಮಾಡಿದರೆ ನನ್ನವರು, ತಪ್ಪು ಮಾಡಿದರೆ ಬೇರೆಯವರು ಎಂಬ ಮನಸ್ದಿತಿ ಯಾಕೆ ಎಂದು ಡಿಕೆ ಸುರೇಶ್ ಪ್ರಶ್ನಿಸಿದ್ದಾರೆ.

ಮೇಲಾಗಿ ಪ್ರಜ್ವಲ್ ರೇವಣ್ಣ ಸಂಸದನಾಗಿದ್ದಾಗಲೇ ಈ ಕೃತ್ಯ ನಡೆದದ್ದು. ದೆಹಲಿಯ ಗೆಸ್ಟ್ ಹೌಸ್, ಹಾಸನದ ಫಾರಂ ಹೌಸ್ ಗಳಲ್ಲಿ ಇದು ನಡೆದಿದೆ ಎನ್ನಲಾಗಿದೆ. ಹೀಗಿರುವಾಗ ಪ್ರಜ್ವಲ್ ರೇವಣ್ಣನ ಈ ಕರ್ಮಕಾಂಡವನ್ನು ಜೆಡಿಎಸ್ ಮತ್ತು ದೇವೇಗೌಡರ ಕುಟುಂಬ ಎರಡೂ ಹೊರಬೇಕು. ಈಗ ನನಗೆ ಸಂಬಂಧಿಸಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ ಪರವಾಗಿ ಧ್ವನಿಯೆತ್ತಿದ ಏಕೈಕ ಸಂಸದ ಡಿಕೆ ಸುರೇಶ್ : ಡಾ. ಮುಖ್ಯಮಂತ್ರಿ ಚಂದ್ರು ಶ್ಲಾಘನೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಇಂದು ಚುನಾವಣಾ ಪ್ರಚಾರ ಮಾಡಿದರು.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಡಿ.ಕೆ. ಸುರೇಶ್ ಜೊತೆಗೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಚಂದ್ರು, ಡಿ.ಕೆ. ಸುರೇಶ್ ರಾಜ್ಯದ ಅತ್ಯುತ್ತಮ ಸಂಸದರಾಗಿದ್ದು, ಅವರಿಗೆ ಈ ಬಾರಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ ₹2000 ನೀಡುವ ಬಗ್ಗೆ ಹೆಚ್‌.ಡಿ. ಕುಮಾರಸ್ವಾಮಿ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ ಅವರು ಕೂಡ ಅದೇ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ. ಇಂತಹ ದುಷ್ಟಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ಈ ಬಾರಿ ಡಿ.ಕೆ. ಸುರೇಶ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.

ಸೋಲುವ ಭಯದಿಂದ ಕೇಂದ್ರ ಸರ್ಕಾರ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಅವರು ಬಂಧಿಸಿರುವುದು ಕೇಜ್ರಿವಾಲ್‌ ಅವರನ್ನು ಮಾತ್ರವಲ್ಲ ಪ್ರಜಾಪ್ರಭುತ್ವವನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಬ್ಯಾಂಕ್‌ ಅಕೌಂಟ್‌ಗಳನ್ನು ಸ್ಥಗಿತಗೊಳಿಸಿದ್ದಾರೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಕೇಳಿಕೊಂಡರು.

ಇದು ಪಾಂಡವರು ಮತ್ತು ಕೌರವರು ನಡುವಿನ ಯುದ್ಧವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜನಪರ ಯೋಜನೆಗಳನ್ನು ಮಾಡಿದ್ದರೆ, ಕೇಂದ್ರ ಸರ್ಕಾರ ಜನರ ಹಣವನ್ನು ಕೊಳ್ಳೆ ಹೊಡೆಯುತ್ತಿದೆ. ಕಳೆದ ಚುನಾವಣೆಯಲ್ಲಿ ಅವರು ಮಾಡಿದ ಯಾವ ಘೋಷಣೆಗಳನ್ನು ಕೂಡ ಈಡೇರಿಸಿಲ್ಲ ಎಂದರು.

ರಾಜ್ಯದ 28 ಸಂಸದರಲ್ಲಿ ಯಾರಾದರೂ ಗಂಡಸರು ಅಂತ ಇದ್ದರೆ ಅದು ಡಿ.ಕೆ. ಸುರೇಶ್ ಮಾತ್ರ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಡಿಕೆ ಸುರೇಶ್ ಧೈರ್ಯವಾಗಿ ಪ್ರಶ್ನಿಸಿದ್ದರೆ, ಉಳಿದ 27 ಸಂಸದರು ಗುಲಾಮಗಿರಿಯಲ್ಲಿ ಬಿದ್ದಿದ್ದಾರೆ ಎಂದರು ಹೇಳಿದರು. ರಾಜ್ಯದ ಹಿತಾಸಕ್ತಿ ಕಾಪಾಡಲು ಡಿ.ಕೆ. ಸುರೇಶ್ ಅವರನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ರಾಮನಗರ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬೈರೇಗೌಡ ಸೇರಿದಂತೆ ಎಲ್ಲ ಜಿಲ್ಲಾ ಪದಾಧಿಕಾರಿಗಳು ಮುಖಂಡರುಗಳು ಕಾರ್ಯಕರ್ತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬಿಯರ್ ಬಾಟೆಲ್ ಮೇಲೆ ಡಿಕೆ ಸುರೇಶ್ ಫೋಟೋ ; ವೈರಲ್ ಸುದ್ದಿಯ ಅಸಲೀಯತ್ತೇನು?
ದೇಶದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಸರ್ವೆ ಸಾಮಾನ್ಯವಾಗಿದೆ. ಇದರ ಜೊತೆಗೆ ಫೇಕ್ ನ್ಯೂಸ್ ಗಳ ಹಾವಳಿ ಸಹ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಶಿವಮೊಗ್ಗ ಬಿಜೆಪಿ ಪಕ್ಷದ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಸದ ಡಿಕೆ ಸುರೇಶ್ ಗೆ ಸಂಬಂಧಿಸಿದ ಫೋಟೋ ಹರಿದಾಡುತ್ತಿದ್ದು, ‘ಹೊಸ ಗ್ಯಾರಂಟಿ’ ಎಂಬ ಶೀರ್ಷಿಕೆ ಅಡಿಯಲ್ಲಿ ವೈರಲ್ ಆಗಿದೆ.

https://www.facebook.com/bjp4shivamogga?mibextid=ZbWKwL

ವೈರಲ್ ಆಗುತ್ತಿರುವ ಫೋಟೋದಲ್ಲಿ ಬಿಯರ್ ಬಾಟಲಿಯ ಮೇಲೆ ಡಿಕೆ ಸುರೇಶ್ ಅವರ ಚಿತ್ರ ಅಂಟಿಸಿದಂತಿದ್ದು, ಮೇಲೆ ಚಿಕ್ಕದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋಟೋ ಕೂಡಾ ಫೋಟೋದ ಒಳಗೆ ಇದೆ.

https://www.facebook.com/bjp4shivamogga?mibextid=ZbWKwL

ಸಧ್ಯ ಶಿವಮೊಗ್ಗ ಬಿಜೆಪಿ ಅಧಿಕೃತ ಫೇಸ್ಬುಕ್ ಪೇಜ್ ಹಾಗೂ ಇತರೆ ಫೇಸ್ಬುಕ್ ಖಾತೆಗಳ ಮೂಲಕ ವೈರಲ್ ಆಗುತ್ತಿರುವ ಫೋಟೋ ಅಸಲಿಯದ್ದು ಅಲ್ಲ ಎಂದು ತಿಳಿದು ಬಂದಿದೆ. ಈ ಫೋಟೋ 2023 ರ ವರ್ಷದ್ದಾಗಿದ್ದು, ಬೇರೆ ಯಾವುದೋ ಫೋಟೋಗೆ ಡಿಕೆ ಸುರೇಶ್ ಫೋಟೋ ಹಾಕಿ ಎಡಿಟ್ ಮಾಡಲಾಗಿದೆ.

2023 ರ ನವೆಂಬರ್ ತಿಂಗಳಲ್ಲಿ ತೆಲಂಗಾಣದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಡೆಸಿದ ಪ್ರಚಾರದ ಸಂದರ್ಭದಲ್ಲಿ ತಗೆದ ಫೋಟೋ ಬಳಸಿಕೊಂಡು ಅದಕ್ಕೆ ಡಿಕೆ ಸುರೇಶ್ ಅವರಿರುವ ಭಾವಚಿತ್ರ ಅಂಟಿಸಿದ ಎಡಿಟ್ ಮಾಡಿದ ಫೋಟೋ ಇದಾಗಿದೆ. ಈ ಒಂದು ಸುಳ್ಳು ಸುದ್ದಿಯನ್ನು ಬಿಜೆಪಿ ಪಕ್ಷ ಎಲ್ಲಾ ಕಡೆಗೂ ವೈರಲ್ ಮಾಡುತ್ತಿದ್ದು ಈಗಾಗಲೇ 150 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿರುವುದು ಈಗ ಬೆಳಕಿಗೆ ಬಂದಿದೆ.

ಮೋರ್​ ಸ್ಟ್ರಾಂಗ್​ ಮೋರ್ ಎನಿಮಿಸ್​​, ಮೋರ್ ಸ್ಟ್ರಾಂಗ್​ ಮೋರ್ ಪವರ್ : ಡಿಕೆ ಶಿವಕುಮಾರ್
ಬಿಜೆಪಿ ಹೈಕಮಾಂಡ್ ನಾಯಕರು ಬೆಂಗಳೂರು ಗ್ರಾಮಾಂತರದಿಂದಲೇ ಚುನಾವಣಾ ಪ್ರಚಾರ ಆರಂಭಿಸುವ ಸುದ್ದಿಯ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮೋರ್​ ಸ್ಟ್ರಾಂಗ್​ ಮೋರ್ ಎನಿಮಿಸ್​​, ಮೋರ್ ಸ್ಟ್ರಾಂಗ್​ ಮೋರ್ ಪವರ್ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ಹೆಚ್ಚಿನ ಅಭ್ಯರ್ಥಿಗಳು ರಾಜ್ಯಾದ್ಯಂತ ಬಿರುಸಿನ ಪ್ರಚಾರಕ್ಕೆ ಇಳಿದಿರುವಾಗ, ಮೈತ್ರಿ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಓಟಕ್ಕೆ ಯಾವ ಬ್ರೇಕ್ ಕೂಡಾ ಹಾಕಲಾರರು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಸೋಲಿಸಲೇಬೇಕು ಎಂಬ ಪಣ ತೊಟ್ಟು, ಅಮಿತ್ ಷಾ ಅವರನ್ನು ಗ್ರಾಮಾಂತರದಿಂದ ಪ್ರಚಾರ ಶುರು ಮಾಡುವ ತಂತ್ರಗಾರಿಕೆ ಹಿಂದೆ ಈಗ ಡಿ.ಕೆ.ಶಿವಕುಮಾರ್ ಮತ್ತಷ್ಟು ಪ್ರತಿತಂತ್ರಕ್ಕೆ ಮುಂದಾಗಿದ್ದಾರೆ.

ಹೆಚ್​ಡಿ ದೇವೇಗೌಡ ಅವರನ್ನು ಎದುರಿಸಿದ್ದೇವೆ, ಗೌಡರ ಮಗ ಹೆಚ್​ಡಿ ಕುಮಾರಸ್ವಾಮಿ ಅವರನ್ನ ಎದರಿಸಿದ್ದೇವೆ. ಗೌಡರ ಮೊಮ್ಮಗನನ್ನು ಎದುರಿಸಿದ್ದೇವೆ, ಸೊಸೆಯನ್ನೂ ಎದುರಿಸಿದ್ದೇವೆ. ಈಗ ಗೌಡರ ಅಳಿಯನನ್ನ ಎದುರಿಸುತ್ತೇವೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಕೋವಿಡ್ ಸಂದರ್ಭದಲ್ಲಿ ಹೆಣ ಹೊತ್ತವರು, ಮಣ್ಣು ಮಾಡಿದವರು ಯಾರು ಇರಲಿಲ್ಲ. ಈಗ ಮಾತಾಡುವವರು ಕೋವಿಡ್​ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು? ಆಹಾರದ ಕಿಟ್, ಔಷದಿ ಕೊಡುವಾಗ ಯಾರು ಇರಲಿಲ್ಲ. ಆಗ ಕ್ಷೇತ್ರದಲ್ಲಿ ಇದ್ದದ್ದು ಕಾಂಗ್ರೆಸ್ ಮತ್ತು ಡಿಕೆ ಸುರೇಶ್ ಮಾತ್ರ ಎಂದಿದ್ದಾರೆ.

ಸಂಸದ ಡಿ.ಕೆ ಸುರೇಶ್ ಕಾರ್ಯವೈಖರಿಗೆ ಸಿದ್ದಲಿಂಗ ಸ್ವಾಮೀಜಿಗಳ ಪ್ರಶಂಸೆ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾಗಿ ಕೋವಿಡ್ ಸಂದರ್ಭದಲ್ಲಿ ಮಾಡಿದ ಜನಸೇವೆ, ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ ಡಿ.ಕೆ. ಸುರೇಶ್ ಅವರ ಕಾರ್ಯವೈಖರಿಯನ್ನು ಸಿದ್ದಗಂಗಾ ಮಠದ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರು ಮುಕ್ತ ಕಂಠದಿಂದ ಪ್ರಶಂಸಿಸಿದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಶುಕ್ರವಾರ ಭೇಟಿ ನೀಡಿದ ಸುರೇಶ್ ಅವರು ಶ್ರೀಗಳ ಆಶೀರ್ವಾದ ಪಡೆದರು. ಲಿಂಗೈಕ್ಯ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆಗೆ ನಮಸ್ಕರಿಸಿದರು.

ಈ ಸಂದರ್ಭದಲ್ಲಿ ಸುರೇಶ್ ಅವರ ಜತೆ ಚರ್ಚೆ ಮಾಡಿದ ಸಿದ್ದಲಿಂಗ ಸ್ವಾಮೀಜಿಯವರು, ಕೋವಿಡ್ ಸಮಯದಲ್ಲಿ ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ, ರೋಗಿಗಳಿಗೆ ಔಷಧ ಪೂರೈಕೆ, ರೈತರಿಂದ ಹಣ್ಣು-ತರಕಾರಿ ಖರೀದಿಸಿ ಬಡವರಿಗೆ ಉಚಿತ ವಿತರಣೆ, ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಸರಿಪಡಿಸಿ, ಸೋಂಕಿತರಿಗೆ ಧೈರ್ಯ ತುಂಬಿದ ಸುರೇಶ್ ಅವರ ಕಾರ್ಯವೈಖರಿಯನ್ನು ಶ್ರೀಗಳು ಶ್ಲಾಘಿಸಿದರು.

ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತುತ್ತಿರುವುದಕ್ಕೂ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಮೇಕೆದಾಟು ಯೋಜನೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಶ್ರೀಗಳು, ಕುಡಿಯುವ ನೀರು ಸಮಸ್ಯೆಗೆ ಉತ್ತಮ ಪರಿಹಾರ ಆಗಿರುವ ಈ ಯೋಜನೆ ಜಾರಿ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಡಿ.ಕೆ. ಸುರೇಶ್ ಅವರ ಜತೆಗೆ ಶಾಸಕರಾದ ಮಾಗಡಿ ಬಾಲಕೃಷ್ಣ, ಕುಣಿಗಲ್ ನ ಡಾ.ರಂಗನಾಥ್, ವಿಧಾನ ಪರಿಷತ್ ಸದಸ್ಯ ಎಸ್ ರವಿ, ಮತ್ತಿತರರು ಉಪಸ್ಥಿತರಿದ್ದರು.

ಡಿ ಕೆ ಸುರೇಶ್ ದಿಢೀರ್ ಹಾರ್ಟ್ ಸರ್ಜನ್ ಆದಾಗ..!
ಹೀಗೊಮ್ಮೆ ಕಲ್ಪಿಸಿಕೊಂಡು ನೋಡಿ… ಡಿ ಕೆ ಶಿವಕುಮಾರ್ ಅವರ ತಮ್ಮ ಡಿ ಕೆ ಸುರೇಶ್ ದಿಢೀರ್ ಹಾರ್ಟ್ ಸರ್ಜನ್ ಆಗಿ ಜಯದೇವ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಬಿಡುತ್ತಾರೆ ಎಂದಿಟ್ಟುಕೊಳ್ಳಿ. ಆಗ ನಾವದನ್ನು ಹೇಗೆ ಸ್ವೀಕರಿಸುತ್ತೇವೆ?

ಯಾವುದೇ ವ್ಯಕ್ತಿ, ಯಾವುದೇ ವಯಸ್ಸಿನಲ್ಲಿ, ಈ ನೆಲದ ಕಾನೂನು ಸಮ್ಮತವಾದ ಯಾವುದೇ ವೃತ್ತಿಪರ ಉದ್ಯೋಗ ಆಯ್ಕೆ ಮಾಡಿಕೊಳ್ಳುವುದು ನಮ್ಮ ದೇಶದಲ್ಲಿ ನಿಷಿದ್ಧವಲ್ಲ. ಅಂತಹ ನಿರ್ಬಂಧವನ್ನು ನಮ್ಮ ಸಂವಿಧಾನವೂ ಹೇರಿಲ್ಲ. ಹೆಚ್ಚೆಂದರೆ, ಆ ಉದ್ಯೋಗಕ್ಕೆ ಬೇಕಾದ ಶಿಕ್ಷಣ, ತರಬೇತಿ, ಮಾನ್ಯತೆ ಪತ್ರವನ್ನಷ್ಟೇ ಪರಿಗಣಿಸಲಾಗುತ್ತದೆ. ವ್ಯಕ್ತಿಯ ವಯಸ್ಸನ್ನಲ್ಲ. ಹಿಂದಿಯ ಹೆಸರಾಂತ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ನಿಮಗೆ ಈ ಸಂದರ್ಭದಲ್ಲಿ ನೆನಪಾಗಬಹುದು.

ಇವತ್ತು ನಮ್ಮ ದೇಶದಲ್ಲಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿ ಮಾಡಲಾಗಿದೆ. ದುಡ್ಡು ಸುರಿದು ಸರ್ಟಿಫಿಕೇಟುಗಳನ್ನು ಕೊಳ್ಳುವ ಕಾಲ. ಈ ಆಯಾಮದಿಂದ ನೋಡಿದಾಗ, ಡಿಕೆ ಸೋದರರ ಬಳಿ ಒಂದು ಯಕಶ್ಚಿತ್ ಎಂಬಿಬಿಎಸ್ ಪದವಿಯನ್ನೂ, ಕಾರ್ಡಿಯಾಲಜಿ ಸ್ಪೆಷಲಿಸಂನ ಮಾಸ್ಟರ್ ಡಿಗ್ರಿಯನ್ನೂ ಖರೀದಿಸಲು ಸಾಧ್ಯವಿಲ್ಲವೇ? ಖಂಡಿತ ಸಾಧ್ಯವಿದೆ ಮತ್ತು ಇವತ್ತಿನ ಸಂದರ್ಭದಲ್ಲಿ ಅದು ಆಲ್ಮೋಸ್ಟ್ ಕಾನೂನುಬದ್ಧ ವಹಿವಾಟೂ ಹೌದು.

ಈಗ ಅಸಲೀ ವಿಚಾರಕ್ಕೆ ಬರೋಣ. ಹಾಗೊಮ್ಮೆ ಡಿ ಕೆ ಸುರೇಶ್ ಈ ವಯಸ್ಸಲ್ಲಿ ದಿಢಿರ್ ಹಾರ್ಟ್ ಸರ್ಜನ್ ಆಗಿ ಅವತರಿಸಿಬಿಟ್ಟರೆ, ನಾವು ಆ ವಿದ್ಯಮಾನವನ್ನ ಹೇಗೆ ಸ್ವೀಕರಿಸುತ್ತೇವೆ. ಎಲ್ಲವೂ ನ್ಯಾಯಸಮ್ಮತವಾಗಿಯೇ ನಡೆದಿರಬಹುದು, ಆದರೆ ನಾವದನ್ನು ಖಂಡಿತ ಒಪ್ಪುವುದಿಲ್ಲ. ಯಾಕೆಂದರೆ ವೈದ್ಯಕೀಯ ಅಂತಲ್ಲ, ಯಾವುದೇ ಕ್ಷೇತ್ರಕ್ಕಾಗಲಿ ಒಬ್ಬ ವ್ಯಕ್ತಿ ಪಾದಾರ್ಪಣೆ ಮಾಡಬೇಕೆಂದರೆ ಕೇವಲ ಕಾಗದಪತ್ರಗಳು ಸರಿ ಇದ್ದರೆ ಮಾತ್ರ ಸಾಲದು; ಆ ಕ್ಷೇತ್ರದಲ್ಲಿ ಆ ವ್ಯಕ್ತಿಗೆ ನಿಪುಣತೆ ಇರಬೇಕು, ಪ್ರಾಮಾಣಿಕ ಅಧ್ಯಯನವಿರಬೇಕು, ತನ್ನ ಕೆಲಸದ ಬಗ್ಗೆ ಕಾಳಜಿ ಇರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಆ ಕ್ಷೇತ್ರದ ಕುರಿತು ಆತನಿಗೆ ಆಸಕ್ತಿಯಿರಬೇಕು. ಅದ್ಯಾವುದೂ ಇಲ್ಲದ ಡಿ.ಕೆ. ಸುರೇಶ್ ಅವರು ದಿಢೀರ್ ಹಾರ್ಟ್ ಸರ್ಜನ್ ಆಗುವುದನ್ನು ನಾವು ಒಪ್ಪುವುದಿಲ್ಲ ಎನ್ನುವುದಾದರೆ, ರಾಜಕೀಯ ಕ್ಷೇತ್ರದೆಡೆಗೆ ಇದ್ಯಾವುದೂ ಇಲ್ಲದ ಡಾ.ಸಿ.ಎನ್. ಮಂಜುನಾಥ್ ಅವರನ್ನು ರಾಜಕಾರಣಿಯಾಗಿ ಸ್ವೀಕರಿಸಲು ಸಾಧ್ಯವೇ? ಬೇರೆಬೇರೆ ಕಾರಣಗಳಿಗೆ ಹಾಗೆ ಸ್ವೀಕರಿಸುವುದು ಸಾಧುವೇ?

ಎಸ್.ಪಿ. ಬಾಲಸುಬ್ರಹ್ಮಣ್ಯಂ ಒಳ್ಳೆಯ ಹಾಡುಗಾರ ಅಂತ ಹೇಳಿ, ಅವರನ್ನು ನೃತ್ಯದ ವೇದಿಕೆ ಹತ್ತಿಸಿ, ನಾಟ್ಯ ಮಾಡಲು ಹೇಳುವುದು ಸರಿಯೇ? ನಮ್ಮ ಸ್ವಾರ್ಥಕ್ಕಾಗಿ ಹಾಗೊಮ್ಮೆ ನಾವು ಮಾಡಿದ್ದರೆ, ಅದು ಆ ವ್ಯಕ್ತಿಯ ಗಾಯನ ಪಾಂಡಿತ್ಯಕ್ಕೆ ನಾವು ಮಾಡುವ ಅವಮಾನವೇ ಸರಿ. ಈಗ ಡಾ. ಸಿ. ಎನ್ ಮಂಜುನಾಥ್ ಅವರ ಜೊತೆ ದೇವೇಗೌಡರ ಕುಟುಂಬ ವರ್ತಿಸುತ್ತಿರುವ ರೀತಿ ಕೂಡಾ ಇದೇ ರೀತಿಯದ್ದು. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ರಾಜಕೀಯದ ಬಗ್ಗೆ ಎಳ್ಳಷ್ಟೂ ಆಸಕ್ತಿಯಿರದ ಮಂಜುನಾಥ್ ಅವರನ್ನು, ತಮ್ಮ ಪಕ್ಷವಿದ್ದೂ ಬೇರೊಂದು ಪಕ್ಷದ ಮೂಲಕ ಅವರು ಕಣಕ್ಕಿಳಿಸಿದ್ದಾರೆ. ಸ್ವತಃ ಮಂಜುನಾಥ್ ಅವರೇ, ಬಿಜೆಪಿಯಿಂದ ಟಿಕೆಟ್ ಘೋಷಣೆಯಾದ ನಂತರವೂ, ತಮಗೆ ರಾಜಕಾರಣದಲ್ಲಿ ಯಾವತ್ತೂ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ. ಇನ್ನು ಕುಮಾರಸ್ವಾಮಿಯವರು ಕೂಡಾ ಸಭೆಯೊಂದರಲ್ಲಿ, ಮಂಜುನಾಥ್ ಅವರ ಮಡದಿ ಮಕ್ಕಳ ಇಷ್ಟಕ್ಕೆ ವಿರುದ್ಧವಾಗಿ ನಾವು ರಾಜಕಾರಣಕ್ಕೆ ಕರೆತಂದಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

ಈಗ ಜನರ ಮುಂದೆ ಇರುವ ಪ್ರಶ್ನೆ ಸರಳವಾದದ್ದು. ವೈದ್ಯಕೀಯ ಕ್ಷೇತ್ರದಲ್ಲಿ ಎಳ್ಳಷ್ಟೂ ಆಸಕ್ತಿ, ಅಭಿರುಚಿ, ತಜ್ಞತೆ ಇಲ್ಲದ ಡಿ ಕೆ ಸುರೇಶ್ ಅವರನ್ನು ಹಾರ್ಟ್ ಸರ್ಜನ್ ಆಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದಾದರೆ; ರಾಜಕೀಯ ಕ್ಷೇತ್ರದತ್ತಲೂ ಅಷ್ಟೇ ನಿರಾಸಕ್ತಿ ಹೊಂದಿರುವ ಸಿ ಎನ್ ಮಂಜುನಾಥ್ ಅವರನ್ನು ಒಳ್ಳೆಯ ಡಾಕ್ಟರ್ ಎಂಬ ಕಾರಣಕ್ಕೆ ರಾಜಕಾರಣಿಯಾಗಿ ಸ್ವೀಕರಿಸಬೇಕೆ? ಡಿ ಕೆ ಸುರೇಶ್ ಮುನ್ನಾಭಾಯ್ ಅವತಾರವೆತ್ತಿ ಹಾರ್ಟ್ ಆಪರೇಷನ್ ಮಾಡಿದರೆ, ಆ ನಿರ್ದಿಷ್ಟ ರೋಗಿ ಮಾತ್ರ ಸಂತ್ರಸ್ತನಾಗಬಹದು; ಆದರೆ ಮಂಜುನಾಥ್ ಅವರು ಅನಾಸಕ್ತ ರಾಜಕಾರಣಿಯಾಗಿ ವಿಫಲವಾದರೆ ಇಡೀ ಕ್ಷೇತ್ರದ ಜನತೆ ಸಂತ್ರಸ್ತರಾಗಬೇಕಾಗುತ್ತದೆ.

ಹಾಗಂತ ಸುರೇಶ್ ಮತ್ತು ಮಂಜುನಾಥ್ ಅವರ ವೈಯಕ್ತಿಕ ವ್ಯಕ್ತಿತ್ವಗಳನ್ನು ನಾನಿಲ್ಲಿ ತೂಗಿ ಮಾತಾಡುತ್ತಿಲ್ಲ. ಆಯಾ ಕ್ಷೇತ್ರದ ಅನುಭವ ಮತ್ತು ನಿಪುಣತೆಯ ಬಗ್ಗೆ ವಿವರಿಸುತ್ತಿದ್ದೇನಷ್ಟೆ. ಒಂದು ಕ್ಷೇತ್ರದ ನಿಪುಣತೆಯು, ಸಂಬಂಧವೇ ಇಲ್ಲದ ಮತ್ತೊಂದು ಕ್ಷೇತ್ರದಲ್ಲಿ ನಗಣ್ಯ! ಈ ಸರಳ ಸತ್ಯ ಅರ್ಥ ಮಾಡಿಕೊಳ್ಳುವುದು ಕಾಲದ ತುರ್ತು.

ಮಾಚಯ್ಯ ಎಂ ಹಿಪ್ಪರಗಿ

ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಗೆಲುವು ನಿಚ್ಚಳ : ಸಿ.ಎಂ ಭರವಸೆ
ರಾಮನಗರ : ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರು ನೂರಕ್ಕೆ ನೂರರಷ್ಟು ಗೆಲ್ತಾರೆ. ಪ್ರತಿನಿತ್ಯ ನನಗೆ ಮಾಹಿತಿ ಬರುತ್ತಿದೆ. ಈ ಆಧಾರದಲ್ಲಿ ಹೇಳುತ್ತೇನೆ. ಸುರೇಶ್ ಅವರು ಗೆಲುವು ಶತಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ಸಭೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಡಿ.ಕೆ.ಸುರೇಶ್ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಜಿಲ್ಲೆಯ ಪ್ರಗತಿಗೆ ನಿರಂತರವಾಗಿ ದುಡಿಯುತ್ತಾರೆ.‌ ಈ ಕಾರಣಕ್ಕೆ ಕಾಂಗ್ರೆಸ್ ಮತ್ತೆ ಇವರನ್ನು ಅಭ್ಯರ್ಥಿಯನ್ನಾಗಿಸಿದೆ. ಇವರನ್ನು ನಿಮ್ಮ ಪ್ರತಿನಿಧಿಯಾಗಿ ಗೆಲ್ಲಿಸಿ ದೆಹಲಿಗೆ ಕಳುಹಿಸಿದರೆ ಇವರು ನಮ್ಮ ದ್ವನಿಯಾಗಿ ಕೆಲಸ ಮಾಡುತ್ತಾರೆ ಎಂದರು.

ಸರ್ಕಾರ ಬಂದ ದಿನದಿಂದಲೇ ನಾವು ಕೊಟ್ಟ ಮಾತನ್ನು ಈಡೇರಿಸುವ ಕೆಲಸ ಶುರು ಮಾಡಿದೆವು. ಎಂಟೇ ತಿಂಗಳಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಬಿಜೆಪಿ ಇವತ್ತಿನವರೆಗೂ ಕೊಟ್ಟ ಮಾತಿನಲ್ಲಿ ಒಂದನ್ನೂ ಈಡೇರಿಸಿಲ್ಲ. ಹೀಗಾಗಿ ಬಿಜೆಪಿಗೆ ಮತ ಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿಕೊಳ್ಳಿ ಎಂದರು.

ನಾವು ನಮ್ಮ ಗ್ಯಾರಂಟಿ ಯೋಜನೆಗಳ ಮೂಲಕ ನೇರವಾಗಿ ಕನ್ನಡ ನಾಡಿನ‌ ಜನತೆಯ ಖಾತೆಗೆ ಹಣ ಜಮೆ ಮಾಡುತ್ತಿದ್ದೇವೆ. ಶೂದ್ರರು, ದಲಿತರು, ಮಹಿಳೆಯರು, ಶ್ರಮಿಕರು, ದುಡಿಯುವ ವರ್ಗಗಳ ಎಲ್ಲರ ಮನೆ ಮನೆಯನ್ನೂ ನಮ್ಮ ಗ್ಯಾರಂಟಿಗಳು ತಲುಪಿವೆ. ಇದು ನಮ್ಮ ಬದ್ಧತೆ. ನೀವು ಕೊಟ್ಟ ಒಂದೊಂದು ಓಟಿಗೂ ಘನತೆ ತಂದಿದ್ದೇವೆ ಎಂದರು.

ಬಿಜೆಪಿ-ಜೆಡಿಎಸ್ ಕಾರ್ಯಕರ್ತರು, ಕುಟುಂಬಗಳಿಗೂ ನಮ್ಮ ಸರ್ಕಾರ ಹಣ ಜಮೆ ಮಾಡುತ್ತಿದೆ. ಪಕ್ಷ, ಜಾತಿ, ಧರ್ಮ ಯಾವುದನ್ನೂ ನೋಡದೆ ಇಡೀ ನಾಡಿನ ಜನತೆಗೆ ಅವರ ಕುಟುಂಬಗಳಿಗೆ ಉಚಿತ ಅಕ್ಕಿ, ಉಚಿತ ವಿದ್ಯುತ್ ಜತೆಗೆ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ, ನಿರುದ್ಯೋಗಿಗಳ ಖಾತೆಗೆ ಭತ್ಯೆಯನ್ನು ಜಮೆ ಮಾಡುತ್ತಿದೆ. ಹೀಗೆ ಕಾಂಗ್ರೆಸ್ ಪಕ್ಷ ಪ್ರತಿಯೊಬ್ಬ ಮತದಾರರ ನಂಬಿಕೆ ಉಳಿಸಿಕೊಂಡಿದೆ ಎಂದು ವಿವರಿಸಿದರು.

ಬಿಜೆಪಿ ಸರ್ಕಾರ ಇದ್ದಾಗಲೂ ನೀವು ತೆರಿಗೆ ಕಟ್ಟಿದ್ದೀರಿ. ಆದರೆ ಬಿಜೆಪಿ ನಿಮ್ಮ ತೆರಿಗೆ ಹಣವನ್ನು ನಿಮಗಾಗಿ ಖರ್ಚು ಮಾಡಲಿಲ್ಲ. ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ ಬೆಲೆಯನ್ನು ವಿಪರೀತ ಹೆಚ್ಚಿಸಿ ನಿಮ್ಮ ತೆರಿಗೆ ಹಣವನ್ನೂ ನಿಮಗಾಗಿ ಖರ್ಚು ಮಾಡಲಿಲ್ಲ. ಆದರೆ ನಾವು ಪ್ರತೀ ತಿಂಗಳು 4 ರಿಂದ 5 ಸಾವಿರ ರೂಪಾಯಿಯನ್ನು ಪ್ರತಿ ಅರ್ಹ ಕುಟುಂಬಗಳಿಗೆ ನಮ್ಮ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಕಾಂಗ್ರೆಸ್ ಅಂದರೆ ಬಡವರ, ಮಧ್ಯಮ ವರ್ಗದವರ ಪರವಾಗಿ ಕೆಲಸ ಮಾಡುವ ಪಕ್ಷ ಎಂದರು.

ಹೀಗಾಗಿ ಜನರ ನಡುವೆ ನಿಂತು ಜನರ ದಿನನಿತ್ಯದ ಕಷ್ಟ ಸುಖಗಳಿಗೆ ಸ್ಪಂದಿಸುವ ಡಿ.ಕೆ.ಸುರೇಶ್  ಬೇಕೊ ಅಥವಾ ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ ಎನ್ನುವುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ. ಡಿ.ಕೆ.ಸುರೇಶ್ ಅವರನ್ನು ಜನ ಗೆಲ್ಲಿಸಲು ತೀರ್ಮಾನಿಸಿ ಆಗಿದೆ ಎಂದರು.

ಕುಮಾರಸ್ವಾಮಿ ಅವರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾಗ, ಮುಖ್ಯಮಂತ್ರಿ ಆಗಿದ್ದಾಗ ರಾಮನಗರ ಜಿಲ್ಲೆಯನ್ನು ಏಕೆ ಕಡೆಸಿದ್ದರು ಎನ್ನುವುದಕ್ಕೆ ಜನರಿಗೆ ಉತ್ತರಿಸಲಿ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್,  ಸಚಿವರಾದ ಎಂ.ಸಿ.ಸುಧಾಕರ್, ಮಂಕಾಳ ವೈದ್ಯ , ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್, ವಿಧಾನ‌ ಪರಿಷತ್ ಸದಸ್ಯ ಸುದಾಮ ದಾಸ್ ಸೇರಿ ರಾಮನಗರ ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳು ಮತ್ತು ಜಿಲ್ಲಾ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆಗಳಿಗೆ ಐದು ವರ್ಷಗಳ ವಾರಂಟಿ ಇದೆ : ಡಿಸಿಎಂ ಡಿ.ಕೆ. ಶಿವಕುಮಾರ್
ನಮ್ಮ ಗ್ಯಾರಂಟಿ ಯೋಜನೆಗಳಿಗೆ ಐದು ವರ್ಷಗಳ ವಾರಂಟಿ ಇದೆ. ಇದಕ್ಕೆ ಅಗತ್ಯವಾದ ಅನುದಾನವನ್ನು ಬಜೆಟ್ ನಲ್ಲಿ ಇಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

“ಫ್ಯಾನ್, ಕುಕ್ಕರ್ ಗಳಿಗೆ ಒಂದು ವರ್ಷದ ವಾರಂಟಿ ಇದ್ದರೆ, ನಮಗೆ ಜನ ಐದು ವರ್ಷಗಳ ವಾರಂಟಿ ನೀಡಿದ್ದಾರೆ. ಈ ವಾರಂಟಿಯನ್ನು 10 ವರ್ಷಗಳಿಗೆ ನೀಡುವಂತೆ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥಿಸುತ್ತಿದ್ದೇನೆ” ಎಂದು ಹೇಳಿದರು.

ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲ ಆಗುವುದಿಲ್ಲ. ಪ್ರಾರ್ಥನೆಗೆ ಫಲ ಖಂಡಿತವಾಗಿ ಸಿಗುತ್ತದೆ. ಹೀಗಾಗಿ ನಾನು ಧರ್ಮ ಯುದ್ಧ ಆರಂಭವಾಗುವ ಮುನ್ನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ, ನಮ್ಮ ಪಕ್ಷ ಹಾಗೂ ರಾಜ್ಯದ ಜನರ ಪರವಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ. ಈ ನಾಡು ಸುಭಿಕ್ಷವಾಗಲಿ, ಒಳ್ಳೆಯ ಆಡಳಿತ ನೀಡುವ ಶಕ್ತಿ ನೀಡಲಿ ಎಂದು ಕೇಳಿಕೊಂಡಿದ್ದೇನೆ. ನಾವು ನುಡಿದಂತೆ ನಡೆದಿರುವುದು ಕೂಡ ನಮ್ಮ ಪ್ರಾರ್ಥನೆಯ ಫಲ.” ಎಂದು ಹೇಳಿದ್ದಾರೆ.

ತಂಗಡಗಿ ಅವರನ್ನು ಲೀಡರ್ ಮಾಡುತ್ತಿದ್ದಾರೆ:
ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಆಡುಭಾಷೆಯಲ್ಲಿ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿರಬಹುದು. ಇದೇನು ದೊಡ್ಡ ವಿಚಾರವಲ್ಲ. ಇದನ್ನೇ ಇಟ್ಟುಕೊಂಡು ತಂಗಡಗಿ ಅವರನ್ನ ಮಾಧ್ಯಮಗಳಲ್ಲಿ ಹೈಲೈಟ್ ಮಾಡಿದರೆ, ತಂಗಡಗಿ ಅವರನ್ನು ದೊಡ್ಡ ಲೀಡರ್ ಆಗಿ ಮಾಡುತ್ತಿದ್ದಾರೆ, ಮಾಡಲಿ” ಎಂದರು.

ಸುರೇಶ್ ಪ್ರತಿ ಮನೆಗೂ ಗೊತ್ತು
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಗ್ಗೆ ಕೇಳಿದಾಗ, “2013ರಲ್ಲೂ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮೂಲಕ ದೇವೇಗೌಡರ ಸೊಸೆಯನ್ನು ಕಣಕ್ಕಿಳಿಸಿದ್ದವು. ಆಗಲೂ ಇದೇ ಪರಿಸ್ಥಿತಿ ಇತ್ತು. ಆದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನ ಸುರೇಶ್ ಅವರನ್ನು ಗೆಲ್ಲಿಸಿದ್ದರು. ಆಗಲೂ ಸಿದ್ದರಾಮಯ್ಯ ಅವರ ಸರ್ಕಾರ ಇತ್ತು. ಈಗ ಸುರೇಶ್ ಅವರು ಮಾಡಿರುವ ಜನಸೇವೆ ಕೂಡ ಅವರ ಬೆನ್ನಿಗೆ ಇದೆ. ಸುರೇಶ್ ಪ್ರತಿ ಪಂಚಾಯ್ತಿ ಸದಸ್ಯನಂತೆ ಕ್ಷೇತ್ರದ ಜನರ ಸೇವೆ ಮಾಡಿದ್ದಾರೆ. ಸುರೇಶ್ ಪ್ರತಿ ಮನೆಗೂ ಗೊತ್ತು. ಹೀಗಾಗಿ ಜನ ತೀರ್ಮಾನ ಮಾಡುತ್ತಾರೆ” ಎಂದು ತಿಳಿಸಿದರು.

ಜೆಡಿಎಸ್ ನವರನ್ನು ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮಾಡಿದ್ದೇ ನಾವು : ಡಿ.ಕೆ. ಸುರೇಶ್
“ನಾವು ಜೆಡಿಎಸ್ ನಾಯಕರನ್ನು ಪ್ರಧಾನಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದ್ದೇವೆ. ಆ ಮೂಲಕ ದೇಶ ಹಾಗೂ ರಾಜ್ಯದ ಜನರ ನೆನಪಿನಲ್ಲಿ ಅವರು ಉಳಿಯುವಂತೆ ಮಾಡಿದ್ದೇವೆ” ಎಂದು ಸಂಸದ ಡಿ.ಕೆ. ಸುರೇಶ್ ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಬುಧವಾರ ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ಸಿನಂತೆ ಬಿಜೆಪಿಯವರು ಕುತ್ತಿಗೆ ಕೊಯ್ಯುವ ಕೆಲಸ ಮಾಡಿಲ್ಲ ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ ಸುರೇಶ್ ಅವರು ಉತ್ತರಿಸಿದ್ದು ಹೀಗೆ:

“ಜೆಡಿಎಸ್ ನವರನ್ನು ಈ ದೇಶದ ಪ್ರಧಾನಿ, ರಾಜ್ಯದ ಸಿಎಂ ಮಾಡಿದ್ದೇವೆ. ಈ ದೇಶ ಗುರುತಿಸುವಂತಹ ಕೆಲಸಗಳನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಕಾಂಗ್ರೆಸ್ ಪ್ರಧಾನಿ ಮಾಡದೇ ಹೋಗಿದ್ದರೆ ಅವರನ್ನು ಈ ದೇಶ ನೆನಪಿಸಿಕೊಳ್ಳುತ್ತಿರಲಿಲ್ಲ. ರಾಜ್ಯದ ಮೂವತ್ತು ಸಿಎಂಗಳಲ್ಲಿ ಕುಮಾರಸ್ವಾಮಿ ಅವರು ಒಬ್ಬರಾಗುತ್ತಿರಲಿಲ್ಲ” ಎಂದು ತಿರುಗೇಟು ನೀಡಿದರು.

ಆಸ್ಪತ್ರೆಯಿಂದ ಬಂದ ನಂತರ ಬಲಿಷ್ಠವಾಗಿ ಪ್ರಚಾರ ಮಾಡುತ್ತೇನೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆ ನಾನು ಉತ್ತರ ನೀಡಲು ಹೋಗುವುದಿಲ್ಲ. ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆ ಸೇರಿರುವ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ರಾಜಕಾರಣದಲ್ಲಿ ಎದುರಾಳಿಗಳು ಬಲಿಷ್ಟವಾಗಿದ್ದಷ್ಟು ಚೆನ್ನಾಗಿ ಕೆಲಸ ಮಾಡಲು ಸಾಧ್ಯ. ಅದಕ್ಕೆ ಅವರು ಮೊದಲು ಗುಣಮುಖರಾಗಲಿ” ಎಂದು ಹೇಳಿದರು.

ದೇವೇಗೌಡರು ಈ ಹಿಂದೆ ಆಡಿದ್ದ ಮಾತುಗಳನ್ನು ಜನರಿಗೆ ತೋರಿಸಿ
ಬಿಜೆಪಿ- ಜೆಡಿಎಸ್ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಂತೆ ಇದೆಯಲ್ಲ ಎಂದು ಕೇಳಿದಾಗ, “ಜಾತ್ಯಾತೀತ ತತ್ವಗಳ ಬಗ್ಗೆ ನಾನು ಮಾತನಾಡಿದರೆ ಪ್ರಚಾರ ಆಗುವುದಿಲ್ಲ. ನಿಮಗೆ ಬೇಕಾದ ಹೇಳಿಕೆಗಳನ್ನು ನಾನು ಕೊಡಲು ಆಗುವುದಿಲ್ಲ. ಮಾಜಿ ಪ್ರಧಾನಿಗಳು ಹಿಂದೆ ಹೇಳಿದ್ದ, ʼಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆʼ, ʼಮೋದಿ ಗೆದ್ದರೆ ದೇಶ ಬಿಟ್ಟು ಹೋಗುತ್ತೇನೆʼ, ʼರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳ ಅವಶ್ಯಕತೆಯಿಲ್ಲ, ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆʼ – ಎಂಬೆಲ್ಲ ಹೇಳಿಕೆಗಳನ್ನು ಜನರಿಗೆ  ತೋರಿಸಿ. ನಾನು ಮಾಡಿರುವ ಕೆಲಸಗಳಿಗೆ ನನ್ನ ಕ್ಷೇತ್ರದ ಜನತೆಯ ಬಳಿ ಕೂಲಿ ಕೇಳುತ್ತಿದ್ದೇನೆ. ಮಾಧ್ಯಮದವರು ನನಗೆ ಕೂಲಿ ಕೊಡಿಸುತ್ತೀರಾ ಎನ್ನುವ ಭಾವನೆ ಇದೆ” ಎಂದು ಹೇಳಿದರು.

ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆಗೆ ಇಳಿಯುತ್ತಾರೆ ಎಂದಾಗ “ನಮ್ಮ ಅಭ್ಯರ್ಥಿ ಬಲಿಷ್ಠವಾಗಿದ್ದಾರೆ, ಗೆಲ್ಲುತ್ತಾರೆ. ನಾವು ಕೊಟ್ಟಿರುವ ಐದು ಗ್ಯಾರಂಟಿಗಳು, ಮುಂದಿನ ಐದು ವರ್ಷದಲ್ಲಿ ಈ ರಾಜ್ಯದ ಅಭಿವೃದ್ದಿಗೆ ನಾವು ಕೈಗೊಂಡಿರುವ ಕೆಲಸಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ” ಎಂದರು.

ಹನುಮಾನ್ ಚಾಲೀಸಾ ವಿವಾದದ ಬಗ್ಗೆ ಕೇಳಿದಾಗ “ಮಾಧ್ಯಮದವರು ಪ್ರಚಾರ ನೀಡುತ್ತಾರೆ ಎಂದು ಭಾವಿಸಿ ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ. ಸಣ್ಣ ವಿಚಾರಗಳನ್ನು ಅನವಶ್ಯಕವಾಗಿ ದೊಡ್ಡದು ಮಾಡುವ ಪ್ರವೃತ್ತಿಯನ್ನು ಬಿಜೆಪಿಗೆ ಯಾರೂ ಹೇಳಿಕೊಡಬೇಕಾಗಿಲ್ಲ” ಎಂದು ವ್ಯಂಗ್ಯವಾಡಿದರು.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್- ಬಿಜೆಪಿ ನಾಯಕರು ಕಾಂಗ್ರೆಸ್ ಸೇರುವ ಸಾಧ್ಯತೆ ಬಗ್ಗೆ ಪ್ರಶ್ನಿಸಿದಾಗ “ನಾನು ಕ್ಷೇತ್ರದ ಕೆಲಸದಲ್ಲಿ ನಿರತನಾಗಿದ್ದು, ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರನ್ನು ಕೇಳಬೇಕು. ಈಗ ನಾನು ಏನನ್ನೂ ಹೇಳುವುದಿಲ್ಲ. ನಾನು ಗ್ರೌಂಡಿನಲ್ಲಿ ಇದ್ದೇನೆ, ನೀವು ಮೇಲೆ ಇದ್ದೀರಿ. ಈ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್ ನಿರ್ಧಾರ” ಎಂದರು.

ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ:
ತಮಿಳುನಾಡಿನ ಕೃಷ್ಣಗಿರಿ ಸೇರಿದಂತೆ ಇತರೆಡೆಯಿಂದ ಬಂದು ಬಾಂಬ್ ಇಡುತ್ತಾರೆ ಎನ್ನುವ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಉನ್ನತ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಬಳಿ ಇವೆ. ಭಯೋತ್ಪಾದಕರು ಎಲ್ಲೆಲ್ಲಿ ಇದ್ದಾರೆ ಎನ್ನುವುದು ಅವರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುವುದು ಬಿಟ್ಟು ಕೇಂದ್ರ ಸರ್ಕಾರದ ಬಳಿ ಪ್ರಶ್ನೆ ಮಾಡಲಿ. ಕೃಷ್ಣಗಿರಿಯಿಂದ ಬರುತ್ತಾರೆ ಎನ್ನುವುದು ಅವರಿಗೆ ತಿಳಿದಿದೆ ಎಂದರೆ ಬೇಕಂತಲೇ ಎಲ್ಲವನ್ನು ಮುಚ್ಚಿಡುತ್ತಿದ್ದಾರೆ ಎಂದರ್ಥವಲ್ಲವೇ? ಈ ವಿಚಾರದಲ್ಲೂ ರಾಜಕಾರಣಕ್ಕೆ ಮುಂದಾಗಿದ್ದಾರೆ” ಎಂದು ಹೇಳಿದರು.

Breaking News : ಸಂಸತ್ ಕಲಾಪದಿಂದ ಸಂಸದ ಡಿಕೆ ಸುರೇಶ್ ಅಮಾನತು
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ “ಅಶಿಸ್ತಿನ ವರ್ತನೆ”ಯ ನೆಪವೊಡ್ಡಿ ಕರ್ನಾಟಕದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಸೇರಿದಂತೆ ದೀಪಕ್ ಬೈಜ್ ಹಾಗೂ ನಕುಲ್ ನಾಥ್ ಅವರುಗಳನ್ನೂ ಸದನ ಕಲಾಪದಿಂದ ಅಮಾನತುಗೊಳಿಸಲಾಗಿದೆ. ಈ ಮೂಲಕ ಸಂಸತ್ತಿನಿಂದ ಅಮಾನತಾದ ಸಂಸದರ ಸಂಖ್ಯೆ 146 ಕ್ಕೆ ಏರಿದೆ.

ಇದಕ್ಕೂ ಮುನ್ನ ಅಮಾನತು ಪ್ರಕ್ರಿಯೆಯನ್ನು ವಿರೋಧಿಸಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಸಂಸದರ ಅಮಾನತು ವಿರೋಧಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯಲ್ಲಿ ಸರ್ಕಾರದ ಅನೈತಿಕ ಮತ್ತು ಕಾನೂನು ಬಾಹಿರ ವರ್ತನೆ ವಿರುದ್ಧ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.