DK – Peepal Media

ಬಂಟ್ವಾಳ: ಶರಣ್‌ ಪಂಪ್‌ವೆಲ್‌ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್
ಬಂಟ್ವಾಳ: ಹಿಂದುತ್ವವಾದಿ ಸಂಘಟನೆಗಳು ʼಬಿಸಿ ರೋಡ್‌ ಚಲೋʼ ನಡೆಸಿರುವ ಹಿನ್ನಲೆಯಲ್ಲಿ ಶರಣ್‌ ಪಂಪ್‌ವೆಲ್‌, ಭರತ್‌ ಕುಂಡೇಲು, ಯಶೋಧರ ಕರ್ಬೆಟ್ಟು ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ಬಂಟ್ವಾಳ ನಗರ ಪಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಇಸ್ಲಾಮನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಯಶೋಧರ ಕರ್ಬೆಟ್ಟು ವಿರುದ್ಧ ಬಂಟ್ವಳದ ಮಹಮ್ಮದ್‌ ನವಾಜ್‌ ಎಂಬವರು ದೂರು ನೀಡಿದ್ದಾರೆ, ಬಂಟ್ವಾಳ ನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದಲ್ಲದೇ, ಸೆ.16 ರಂದು ಬಿಸಿ ರೋಡ್‌ ಚಲೋ ನಡೆಸಿ ಇಸ್ಲಾಮ್‌ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿ ಪ್ರಚೋದನೆಗೆ ಪ್ರಯತ್ನಿಸಿದ್ದಾರೆ ಎಂದು ಮಹಮ್ಮದ್‌ ರಫೀಕ್‌ ಎಂಬವರು ಪ್ರತ್ಯೇಕವಾಗಿ ಶರಣ್‌ ಪಂಪ್‌ವೆಲ್‌ ಹಾಗೂ ಭರತ್‌ ಕುಂಡೇಲು ಮೇಲೆ ದೂರು ನೀಡಿದ್ದಾರೆ.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಮಧ್ಯ ನಿಷೇಧ ಮತ್ತು ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ಇದಕ್ಕಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮಹಿಳೆಗೆ ಲೈಂಗಿಕ ಕಿರುಕುಳ: ಸುಬ್ರಹ್ಮಣ್ಯದ ಮಾಜಿ ಪಂಚಾಯತ್‌ ಸದಸ್ಯ ಪ್ರಶಾಂತ್‌ ಭಟ್ ಅರೆಸ್ಟ್‌
ಸುಬ್ರಮಣ್ಯ: ವಿವಾಹಿತ ಮಹಿಳೆಯೊಬ್ಬರಿಗೆ ಸಂಗೀತ ಕ್ಷೇತ್ರದಲ್ಲಿ ಅವಕಾಶ ನೀಡುವ ನೆಪದಲ್ಲಿ ಸ್ನೇಹ ಬೆಳೆಸಿ, ನಂತರ ಆಕೆಯನ್ನು ಬಲವಂತದಿಂದ ಲೈಂಗಿಕವಾಗಿ ಬಳಸಿಕೊಂಡು, ಹಣಕ್ಕಾಗಿ ಮಹಿಳೆ ಮತ್ತು ಆಕೆಯ ಕುಟುಂಬವನ್ನು ಪೀಡಿಸಿದ ಆರೋಪದ ಮೇಲೆ ಪುತ್ತೂರು ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂದು ಗುರುತಿಸಲಾಗಿದೆ. ಪೊಲೀಸ್‌ ವಶದಲ್ಲಿರುವ ಆರೋಪಿಯು ಮಹಿಳೆ ನಗ್ನ ಚಿತ್ರ ತೆಗೆದಿಟ್ಟುಕೊಂಡಿದ್ದ ಎನ್ನಲಾಗಿದೆ. ಪುತ್ತೂರು ಮೂಲದ ಈತ ಸುಬ್ರಹ್ಮಣ್ಯವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದ.

ಕ್ಲಬ್‌ ಹೌಸ್‌ ಅಪ್ಲಿಕೇಷನನ್ನಿನಲ್ಲಿ ಪರಸ್ಪರ ಪರಿಚಯವಾಗಿದ್ದ ಸಂತ್ರಸ್ಥೆ ಹಾಗೂ ಆರೋಪಿಯು ನಂತರ ಪರಿಚಯ ಬೆಳೆಸಿಕೊಂಡು ಫೇಸ್‌ಬುಕ್‌ ಗೆಳೆತನ ಮಾಡಿ ಅಲ್ಲಿಯೂ ಮಾತನಾಡಿಕೊಂಡಿದ್ದರು. ನಂತರ ಅವರ ನಡುವೆ ಪ್ರೇಮವೂ ಚಿಗುರಿತ್ತು.

ಈ ನಡುವೆ ಆರೋಪಿಯು ಸಂತ್ರಸ್ಥೆಯ ಬಳಿ ಸಲುಗೆ ಬೆಳೆಸಿಕೊಂಡು ಆಕೆಗೆ ಸಂಗೀತ ಕ್ಷೇತ್ರದಲ್ಲಿ ಇರುವ ಆಸಕ್ತಿಯನ್ನು ಗಮನಿಸಿ ಆಕೆಗೆ ಅರ್ಕೆಸ್ಟ್ರಾದಲ್ಲಿ ಹಾಡಲು ಚಾನ್ಸ್‌ ಕೊಡಿಸುವುದಾಗಿ ಹೇಳಿ ಶಿರಸಿಗೆ ಕರೆಸಿಕೊಂಡಿದ್ದಾನೆ. ಇದನ್ನು ನಂಬಿದ ಆಕೆ ಶಿರಸಿಗೆ ತೆರಳಿದ್ದಾರೆ. ಆಕೆಯೊಡನೆ ಪ್ರಶಾಂತ್‌ ಅಲ್ಲಿ ಬಲಂವತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಂತರ ಸಂತ್ರಸ್ಥೆಯೊಡನೆ ಆ ಸಂದರ್ಭದ ಫೋಟೊ ತೆಗೆದಿಟ್ಟುಕೊಂಡು ಆಕೆಯನ್ನು ಬ್ಲಾಕ್‌ ಮೇಲ್‌ ಮಾಡುತ್ತಿದ್ದ.

ಒಂದು ಹೆಣ್ಣು ಮಗುವಿನ ತಂದೆಯಾಗಿರುವ 35 ವರ್ಷದ ಪ್ರಶಾಂತ್‌ ಭಟ್‌ ದಾಂಪತ್ಯದಲ್ಲಿ ಮನಸ್ಥಾಪವಿತ್ತು ಎನ್ನಲಾಗಿದೆ. ದಂಪತಿಗಳ ನಡುವೆ ವಿಚ್ಛೇದನವೂ ಆಗಿದೆ.

ನಂತರ ದಿನಗಳಲ್ಲಿ ಪ್ರಶಾಂತ್‌ ತಮ್ಮಿಬ್ಬರ ಫೋಟೊ ಇಟ್ಟುಕೊಂಡು ಪ್ರಶಾಂತ್‌ ಮಹಿಳೆಯನ್ನು ಹಣಕ್ಕಾಗಿ ಬ್ಲಾಕ್‌ ಮೇಲ್‌ ಮಾಡಲು ಆರಂಭಿಸಿದ್ದಾನೆ. ಆಕೆ ಹೇಗೋ ಧೈರ್ಯ ಮಾಡಿ ಗಂಡನಿಗೆ ವಿಷಯ ತಿಳಿಸಿ ಗಂಡನಿಂದ ಅವನಿಗೆ 25,000 ರೂಪಾಯಿ ಹಣವನ್ನು ಗೂಗಲ್‌ ಪೇ ಮಾಡಿಸಿದ್ದಾಳೆ. ಆ ಮಹಿಳೆ ಇದು ಇಲ್ಲಿಗೆ ಮುಗಿಯಿತು ಎಂದುಕೊಂಡಿದ್ದಳು.

ಆದರೆ ಪ್ರಶಾಂತ ಮತ್ತೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಈ ಬಾರಿ ಅವನು ಆಕೆಯ ಪತಿಯ ಬಳಿ ಏಳು ಲಕ್ಷ ರೂಪಾಯಿಗಳಿಗೆ ಡಿಮ್ಯಾಂಡ್‌ ಇಟ್ಟಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಮಹಿಳೆ ತನ್ನ ಕುಟುಂಬದೊಡನೆ ಚರ್ಚಿಸಿ ಇದಕ್ಕೊಂದು ಅಂತ್ಯ ಹಾಡಬೇಕೆಂದು ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟಿದ್ದಾರೆ.

ಪ್ರಸ್ತುತ ಪೊಲೀಸರು ಪ್ರಶಾಂತ್‌ ಭಟ್‌ ಮಾಣಿಲ ವಿರುದ್ಧ ಕಾರವಾರದ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯ ವಿರುದ್ಧ ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಐಪಿಸಿ 376,376(N), 504,506,503,384 ಮತ್ತು IT Act 2008ರ 67(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣವೇ ಸಂತ್ರಸ್ತೆಯ ದೂರಿಗೆ ಸ್ಪಂದಿಸಿದ ಕಾರವಾರ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಶಾಂತ್ ಭಟ್ ಮಾಣಿಲನನ್ನು ಬಂಧಿಸಿದ್ದಾರೆ.

ಸೆಂಚುರಿ ಸಂಭ್ರಮದಲ್ಲಿ ಸಿದ್ದು ಎಂಡ್‌ ಟೀಮ್:‌ ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿಗೆ ಸ್ವಾಗತ
ಮೈಸೂರು: ಗ್ಯಾರಂಟಿಗಳಲ್ಲೇ ಬಹಳ ಪ್ರಮುಖ ಗ್ಯಾರಂಟಿಯಾಗಿದ್ದ ಮನೆಯ ಮುಖ್ಯ ಮಹಿಳೆಗೆ‌ ರೂಪಾಯಿಗೆ 2,000 ನೇರ ವರ್ಗಾವಣೆ ಮಾಡುವ ಕಾಂಗ್ರೆಸ್‌ ಪಕ್ಷದ ಕನಸಿನ ಯೋಜನೆ ಇಂದು ಮೈಸೂರಿನಲ್ಲಿ ಕಾರ್ಯರೂಪಕ್ಕೆ ಬರಲಿದೆ.

ಈ ಬೆಲೆಯೇರಿಕೆಯ ಕಾಲದಲ್ಲಿ ಈ ಯೋಜನೆಯು ಕೇವಲ ಬಡವರಿಗಷ್ಟೇ ಅಲ್ಲದೆ ಮಧ್ಯಮ ವರ್ಗಕ್ಕೂ ಆಶಾಕಿರಣದಂತೆ ಗೋಚರಿಸತೊಡಗಿದೆ. ದುಡಿಯಲು ಪಟ್ಟಣಗಳಿಗೆ ಹೋಗುವ ಮಹಿಳೆಯರಿಗಾಗಿ ಉಚಿತ ಬಸ್‌ ಪ್ರಯಾಣವನ್ನು ನೀಡಿದ್ದ ಸಿದ್ಧರಾಮಯ್ಯನವರ ಸರ್ಕಾರ ಈಗ ಹಣವನ್ನೂ ನೀಡುವುದರೊಂದಿಗೆ ಮಹಿಳೆಯರ ಕಣ್ಮಣಿ ಸರ್ಕಾರವಾಗುವತ್ತ ದಾಪುಗಾಲಿಡುತ್ತಿದೆ.

ಸಿಎಂ ತವರು ಜಿಲ್ಲೆ ಮೈಸೂರಿನಿಂದಲೇ ಈ ಬಹು ನಿರೀಕ್ಷಿತ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, ಬೆಳಗ್ಗೆ 11 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೃಹಲಕ್ಷ್ಮಿಗೆ ಚಾಲನೆ ನೀಡಿಲಿದ್ದಾರೆ.

ಕುಟುಂಬ ನಿರ್ವಹಣೆಯ ಹೊಣೆಹೊತ್ತ ನಾಡಿನ ಕೋಟಿಗೂ ಅಧಿಕ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ಬೆಲೆಯೇರಿಕೆಯ ಸಂಕಷ್ಟಗಳ ನಡುವೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಅವರ ಕನಸನ್ನು ನನಸಾಗಿಸುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ಕ್ಷಣಗಣನೆ ಆರಂಭಗೊಂಡಿದೆ. ಮಹಿಳಾ ಸಬಲೀಕರಣದ ನಮ್ಮ ಪ್ರಯತ್ನಕ್ಕೆ ಕೈಜೋಡಿಸುವಂತೆ ಸಿಎಂ ಮನವಿ ಮಾಡಿದ್ದಾರೆ.

“ಗೃಹಲಕ್ಷ್ಮಿ” ಯೋಜನೆಗೆ ಈ ವರೆಗೆ 1.08 ಕೋಟಿ ಮಹಿಳೆಯರು ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿದ್ದು, ಇಂದೇ ಎಲ್ಲಾ ನೋಂದಾಯಿತ ಮಹಿಳೆಯರ ಬ್ಯಾಂಕ್ ಖಾತೆಗೆ ಮಾಸಿಕ ರೂ. 2,000 ನೇರ ವರ್ಗಾವಣೆ ಆಗಲಿದೆ.

ಪ್ರಸಕ್ತ ಸಾಲಿನಲ್ಲಿ ಈ ಕಾರ್ಯಕ್ರಮಕ್ಕಾಗಿ ರೂ. 17,500 ಕೋಟಿ ಮೀಸಲಿಡಲಾಗಿದೆ. ರಾಜ್ಯದ 10,400 ಸ್ಥಳಗಳಲ್ಲಿ ಏಕಕಾಲಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದೆ. ಇದರ ಜೊತೆಗೆ ಈ ಕಾರ್ಯಕ್ರಮದ ನೇರಪ್ರಸಾರ ಕೂಡ ಇರಲಿದೆ.

ಗ್ರಾಪಂ, ನಗರಪಾಲಿಕೆ, ನಗರಸಭೆ ಮಟ್ಟದಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರುವ ನಿರೀಕ್ಷೆ ಇದೆ. ಪ್ರತಿ ಜಿಲ್ಲೆಯ ಒಂದೆರಡು ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳೊಂದಿಗೆ ಸಂವಾದ ಕೂಡ ನಡೆಸಲಾಗುತ್ತಿದ್ದು, ಪ್ರತಿ ಪಂಚಾಯಿತಿಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಮುಖ್ಯ ವೇದಿಕೆಗೆ 140 ಅಡಿ ಸ್ಕ್ರೀನ್ ಅಳವಡಿಸಲಾಗಿದೆ.

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಶೇ 80ರಷ್ಟು ನೋಂದಣಿಯಾಗಿವೆ. ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ತವರು ಜಿಲ್ಲೆ ಬೆಳಗಾವಿಯಲ್ಲಿ ಸುಮಾರು 10 ಲಕ್ಷ ಫಲಾನುಭವಿಗಳು ಅಂದರೆ ಶೇ. 95ರಷ್ಟು ಜನರು ನೋಂದಣಿ ಮಾಡಿ ಮಾಡಿಕೊಂಡಿದ್ದಾರೆ.

ನಿವೇಶನರಹಿತರಿಗೆ ಕೂಡಲೇ ಮನೆ ನಿವೇಶನ ಒದಗಿಸಲು ಸಿಪಿಐಎಂ ಒತ್ತಾಯ
ಮಂಗಳೂರು ಮಹಾನಗರ ಪಾಲಿಕೆ ವಸತಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವ ಸಾವಿರಾರು ಫಲಾನುಭವಿ ನಿವೇಶನರಹಿತರಿಗೆ ಕೂಡಲೇ ಮನೆ ನಿವೇಶನ ಒದಗಿಸಿಕೊಡಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಆಡಳಿತವನ್ನು ಹಾಗೂ ಶಾಸಕ ವೇದವ್ಯಾಸ ಕಾಮತ್ ರನ್ನು CPIM ಮಂಗಳೂರು ನಗರ ದಕ್ಷಿಣ ಸಮಿತಿ ಒತ್ತಾಯಿಸಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಎಲ್ಲಾ ನಗರಗಳಲ್ಲಿ ಭೂಮಿಯ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಸಹ ಅಂತಹ ನಗರಗಳಲ್ಲಿ ಒಂದಾಗಿದೆ. ಭೂಮಿಗೆ ವಿಪರೀತ ಬೆಲೆ ಏರಿಸುವ ಮೂಲಕ ಭೂದಂಧೆಯಾಗಿ ಮಾರ್ಪಡಿಸಿರುವ ಮಂಗಳೂರು ನಗರದಲ್ಲಿ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನತೆ ಭೂಮಿ ಖರೀದಿಸಿ ಮನೆ ನಿರ್ಮಿಸುವುದು ಕನಸಿನ ಮಾತಾಗಿದೆ ಎಂದು ಸಿಪಿಐಎಂ ಅಭಿಪ್ರಾಯ ಪಟ್ಟಿದೆ.

ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಕಳೆದ 40 ವರ್ಷಗಳಲ್ಲಿ ಒಂದೇ ಒಂದು ತುಂಡು ಭೂಮಿಯನ್ನು ನಿವೇಶನ ರಹಿತರಿಗೆ ನೀಡದೆ ಸತಾಯಿಸಿದೆ. ಮಾತ್ರವಲ್ಲ ಪ್ರತೀ ವರುಷ ವಸತಿ ಯೋಜನೆಯ ಹೆಸರಲ್ಲಿ ಅರ್ಜಿಗಳನ್ನು ಪಡೆದು ನಿವೇಶನವನ್ನು ನೀಡದೆ ವಂಚಿಸಿದೆ. ಹೀಗೆ ಪಾಲಿಕೆ ಆಡಳಿತ ನಿವೇಶನ ನೀಡದೆ ವಂಚಿಸಿದ ಬಡ ಹಿಂದುಳಿದ ವರ್ಗದ ಕುಟುಂಬಗಳನ್ನು ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಹೋರಾಟ ಸಮಿತಿಗಳನ್ನು ರೂಪಿಸಿ ಕಳೆದ 10 ವರ್ಷಗಳ ಹಿಂದೆ ಸಂಘಟಿಸಿದ ಪ್ರಬಲ ಚಳುವಳಿಯ ಹಿನ್ನೆಲೆಯ ಭಾಗವಾಗಿ ಜಿಲ್ಲಾಡಳಿತ ಹಾಗು ಮನಪಾ ಹಲವಾರು ಕಡೆಗಳಲ್ಲಿ ಕನಿಷ್ಟ ನಿವೇಶಗಳನ್ನು ಗುರುತಿಸಿ G+3 ಮಾದರಿಯಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಆಶ್ವಾಸನೆ ನೀಡಿತ್ತು. ಮಾತ್ರವಲ್ಲದೆ ಶಕ್ತಿನಗರದಲ್ಲಿ ನಿವೇಶನ ಕಾದಿರಿಸಿ ಗುದ್ದಲಿ ಪೂಜೆಯನ್ನೂ ಕೈಗೊಂಡ ಪಾಲಿಕೆ ಆಡಳಿತ ಈವರೆಗೆ ವಸತಿ ಕಾಮಗಾರಿಗಳನ್ನು ಕೈಗೊಳ್ಳದೆ ಬಡವರನ್ನು ವಸತಿ ಯೋಜನೆ ಹೆಸರಲ್ಲಿ ವಂಚಿಸಿದೆ ಎಂದು ಪಾಲಿಕೆಯನ್ನು ಆರೋಪಿಸಿದೆ.

ಇನ್ನು ಚುನಾವಣೆಯಲ್ಲಿ ಗೆದ್ದ ಬಿಜೆಪಿಯ ಶಾಸಕ ವೇದವ್ಯಾಸ ಕಾಮತ್ ರವರು ಅದೇ ಶಕ್ತಿನಗರದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಅಂತ ತಕರಾರು ಎಬ್ಬಿಸಿ ಅದನ್ನೂ ಇಲ್ಲದ ಹಾಗೆ ಮಾಡಿ ನಿವೇಶನರಹಿತರ ಆಶಾಗೋಪುರವನ್ನೇ ನಾಶ ಮಾಡಿರುತ್ತಾರೆ. ಬಿಜೆಪಿ ಸರಕಾರದ ಅವಧಿಯ ಕಳೆದ 5 ವರ್ಷಗಳಲ್ಲಿ ನಿವೇಶನರಹಿತರಿಗಾಗಿ ಎಳ್ಳಷ್ಟೂ ಕಾಳಜಿಯಾಗಲಿ ಕನಿಷ್ಟ ನ್ಯಾಯ ಒದಗಿಸಲಾಗದ ಬಿಜೆಪಿ ಸರಕಾರ, ಹಾಗು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಮತ್ತು ಪಾಲಿಕೆ ಆಡಳಿತ ಬಡಜನ ವಿರೋಧಿಯಾಗಿ ವರ್ತಿಸಿದೆ ಎಂದು ಸಿಪಿಐಎಂ ಗಂಭೀರವಾಗಿ ಆರೋಪಿಸಿದೆ.

ಸಧ್ಯ ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರಕಾರ, ಪಾಲಿಕೆ ಆಡಳಿತ ಹಾಗೂ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಈ ಬಗ್ಗೆ ಕೂಡಲೇ ಎಚ್ಚೆತ್ತು ನಿವೇಶನ ರಹಿತರಿಗೆ ಮನೆ ನಿವೇಶನ ಒದಗಿಸಿ ಕೊಡುವಲ್ಲಿ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು, ಇಲ್ಲದಿದ್ದಲ್ಲಿ ನಿವೇಶನ ರಹಿತರ ಪರವಾಗಿ ಪ್ರಬಲ ಚಳುವಳಿಯನ್ನು ರೂಪಿಸಲು CPIM ಮಂಗಳೂರು ನಗರ ದಕ್ಷಿಣ ಸಮಿತಿಯು ನಿರ್ಧರಿಸಿದೆ ಎಂದು ಸಿಪಿಐಎಂ ಪಕ್ಷದ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಆಗ್ರಹಿಸಿದ್ದಾರೆ.