Dolly Dhananjay – Peepal Media

ಡಿಸೆಂಬರ್ ನಲ್ಲಿ ಸೆಟ್ಟೇರಲಿದೆ ನಾಗಭೂಷಣ್ ನಟನೆಯ ‘ಟಗರು ಪಲ್ಯ’- ಉಮೇಶ್ ಕೆ ಕೃಪ ನಿರ್ದೇಶನದ ಮೊದಲ ಸಿನಿಮಾ
ಬೆಂಗಳೂರು: ಟಗರು ಸಿನಿಮಾ ಮೂಲಕ ಖ್ಯಾತಿ ಗಳಿಸಿದ ನಟ ಡಾಲಿ ಧನಂಜಯ್ ಸ್ಯಾಂಡಲ್ ವುಡ್ ಅಂಗಳದ ಬಹು ಬೇಡಿಕೆಯ ನಟ. ಆದ್ರೆ ಕೇವಲ ನಟನಾಗಿ ಮಾತ್ರ ಉಳಿಯದೇ ನಿರ್ಮಾಪಕನಾಗಿಯೂ ಡಾಲಿ ಗಮನ ಸೆಳೆಯುತ್ತಿದ್ದಾರೆ. ಡಾಲಿ ಪಿಕ್ಚರ್ಸ್ ಮೂಲಕ ಸಿನಿಮಾ ನಿರ್ಮಾಣವನ್ನು ಮಾಡುತ್ತಿದ್ದು ಮೊದಲೆರಡು ಸಿನಿಮಾವಾಗಿ ‘ಬಡವ ರಾಸ್ಕಲ್’ ಹಾಗೂ ‘ಹೆಡ್ ಬುಶ್’ ನಿರ್ಮಾಣ ಮಾಡಲಾಗಿತ್ತು. ಇತ್ತೀಚೆಗೆ ಡಾಲಿ ಪಿಕ್ಚರ್ಸ್ ಮೂರನೇ ಸಿನಿಮಾ ‘ಟಗರು ಪಲ್ಯ’ ಅನೌನ್ಸ್ ಆಗಿತ್ತು. ಮೋಷನ್ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ ‘ಟಗರು ಪಲ್ಯ’ ಇದೀಗ ಸೆಟ್ಟೇರೋಕೆ ರೆಡಿಯಾಗಿದೆ.

ಈ ಕುರಿತು ಮಾಹಿತಿ ನೀಡಿದ ನಿರ್ದೇಶಕ ಉಮೇಶ್ ಕೆ ಕೃಪರವರು, ‘ಟಗರು ಪಲ್ಯ’ ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆ ಮಾಡಿಕೊಟ್ಟಿದೆ. ಚಿತ್ರದಲ್ಲಿ ನಾಗಭೂಷಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾ ಮೂಲಕ ಉಮೇಶ್ ಕೆ ಕೃಪ ನಿರ್ದೇಶಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಯೋಗರಾಜ್ ಭಟ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ‘ಟಗರು ಪಲ್ಯ’ ಕಟೆಂಟ್ ಆಧಾರಿತ ಸಿನಿಮಾವಾಗಿದ್ದು, ಒಂದೊಳ್ಳೆ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡಲಿದೆ. ಸಿನಿಮಾ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಸೆಟ್ಟೇರಲಿದೆ ಎಂದು ತಿಳಿಸಿದ್ದಾರೆ.

ವಾಸುಕಿ ವೈಭವ್ ಸಂಗೀತ ನಿರ್ದೇಶನ, ಎಸ್. ಕೆ. ರಾವ್ ಕ್ಯಾಮೆರಾ ವರ್ಕ್, ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರಕ್ಕೆ ನಾಯಕಿ ಯಾರೆಂಬುದು ಸದ್ಯದಲೇ ರಿವೀಲ್ ಆಗಲಿದ್ದು, ರಂಗಾಯಣ ರಘು,ನಾಗಭೂಷಣ್, ತಾರಾ, ಶರತ್ ಲೋಹಿತಾಶ್ವ ಒಳಗೊಂಡ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

ಕರ್ನಾಟಕದ ಸುಂದರವಾದ ಮನಸ್ಸುಗಳಲ್ಲಿ ʼಡಾಲಿʼ ಧನಂಜಯ್ ಒಬ್ಬರು: ರಹಮತ್ ತರೀಕೆರೆ
ಬೆಂಗಳೂರು: ಹೆಡ್‌ ಬುಷ್‌ ಸಿನಿಮಾ ಕೆಲವರ ಷಡ್ಯಂತ್ರದಿಂದ ವಿವಾದಕ್ಕೆ ಸಿಲುಕಿ ನಾಯಕ ನಟ ಡಾಲಿ ಧನಂಜಯ ಅವರ ಪರವಾಗಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನಾಡಿನ ಹಿರಿಯ ಸಂಸ್ಕೃತಿ ಚಿಂತಕ ಡಾ.ರಹಮತ್‌ ತರೀಕೆರೆ ನಟನ ಕುರಿತು ಮೆಚ್ಚುಗೆಯ ಮಾತನಾಡಿದ್ದಾರೆ.

ತಮ್ಮ ಫೇಸ್ಬುಕ್‌ ಗೋಡೆಯ ಮೇಲೆ ಈ ಕುರಿತು ಬರೆದಿರುವ ರಹಮತ್‌ ತರೀಕೆರೆ, ʼಹೆಡ್‌ ಬುಷ್‌ ಸಿನಿಮಾದ ವಾದ ವಿವಾದಗಳಿಗೆ ಉತ್ತರ ನೀಡುವ ಸಂಧರ್ಭದಲ್ಲಿ ನಟ ಡಾಲಿ ಧನಂಜಯ ಅವರು ಪ್ರಾಸಂಗಿಕವಾಗಿ‌ ಆಡಿರುವ ಮಾತು, ಕೊಟ್ಟಿರುವ ಹೇಳಿಕೆಗಳನ್ನು ನೋಡಿದರೆ, ಕರ್ನಾಟಕದ ಸುಂದರವಾದ ಮನಸ್ಸುಗಳಲ್ಲಿ ʼಡಾಲಿʼ ಕೂಡ ಒಬ್ಬರುʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಡಾ.ರಹಮತ್‌ ತರೀಕೆರೆ

ಡಾಲಿ ಧನಂಜಯ್‌ ನಾಯಕ ನಟನಾಗಿ ಅಭಿನಯಿಸಿರುವ ಹೆಡ್‌ ಬುಷ್‌ ಸಿನಿಮಾದಲ್ಲಿನ ದೃಶ್ಯವೊಂದರಲ್ಲಿ ಕನ್ನಡದ ಸಂಸ್ಕೃತಿಯ ಭಾಗವಾಗಿರುವ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಕೆಲವರು ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಮಾಧ್ಯಮದಲ್ಲಿ ನಡೆದ ಸಂದರ್ಶನವೊಂದರಲ್ಲಿ ನಟ ಧನಂಜಯರವರು, ಈ ವಾದ-ವಿವಾದಗಳಿಗೆ ಉತ್ತರ ನೀಡಿದ್ದರು.

ಡಾಲಿ ಧನಂಜಯ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲದ ಮಹಾಪೂರವೇ ಹರಿದು ಬಂದಿದ್ದು ʼಬಡವ್ರ ಮಕ್ಕಳು ಬೆಳೀಬೇಕು ಕಣ್ರಯ್ಯʼ ಎಂಬ ಹ್ಯಾಶ್‌ಟ್ಯಾಗ್‌ ವೈರಲ್‌ ಆಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆಯವರು ತಮ್ಮ ಪೇಸ್ಬುಕ್‌ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ʼನನಗೆ ನಟ ಡಾಲಿ ಧನಂಜಯ್ ಅವರ ಬಗ್ಗೆ ಏನೂ ಗೊತ್ತಿರಲಿಲ್ಲ. ಮೊನ್ನೆಯಿಂದ ಅವರು ಪ್ರಾಸಂಗಿಕವಾಗಿ‌ ಆಡಿರುವ ಮಾತು, ಕೊಟ್ಟಿರುವ ಹೇಳಿಕೆಗಳನ್ನು ನೋಡಿದೆ. ‘ಇದು ಕರ್ನಾಟಕದ ಸುಂದರವಾದ ಮನಸ್ಸುಗಳಲ್ಲಿ ಒಂದು. ನನಗೆ ನಟ ಡಾಲಿ ಧನಂಜಯ್, ಬಸವಣ್ಣ ಕುವೆಂಪು ಅಂಬೇಡ್ಕರ್ ಚಿಂತನೆಗಳ ಬಿಸಿಲು-ಬೆಳಕು ಗಾಳಿ-ಮಳೆಯನುಂಡು ಚಿಗುರಿದ ಗಿಡ’ ಅನಿಸಿತುʼ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕನ್ನಡದ ವಿದ್ವತ್‌ ವಲಯವು ಸಹ ಸಿನಿಮಾ ನಟ ಡಾಲಿಯವರ ಕುರಿತು ಸದಭಿಪ್ರಾಯ ತಳೆಯುವ ಸೂಚನೆ ದೊರೆತಿದೆ.

ರಹಮತ್ ತರೀಕೆರೆ ಅವರ ಫೇಸ್‌ಬುಕ್‌  ಗೋಡೆಯ ಮೇಲಿನ ಬರಹ

ಹೆಡ್‌ ಬುಷ್: ಗೆಳೆಯನ ಬೆನ್ನಿಗೆ ನಿಂತ “ಕ್ವಾಟ್ಲೆ ಸತೀಶ”
ನಿನ್ನೆಯಿಂದ ಕಾವು ಪಡೆದುಕೊಂಡಿದ್ದ ಹೆಡ್‌ ಬುಷ್‌ ಸಿನೆಮಾದ ವಿವಾದವು ಸಿನೆಮಾ ಇಂದು ತುಂಬಿದ ಗೃಹಗಳಿಗೆ ಪ್ರದರ್ಶಗೊಳ್ಳುವುದರ ಜೊತೆ ಜೊತೆಗೆ ವಿವಾದವೆಬ್ಬಿಸಿದ್ದ ಕಿಡಿಗೇಡಿ ದನಿಗಳೂ ಉಡುಗಿ ಹೋಗಿವೆ. ಆದರೆ “ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ” ಎಂದು ತನ್ನ ಮುಗ್ಧ ನಗುವಿನೊಡನೆ ಜನರ ಮನಸ್ಸು ಗೆದ್ದಿದ್ದ ಧನಂಜಯ ಅವರಿಗೆ ಹರಿದು ಬರುತ್ತಿರುವ ಬೆಂಬಲದ ಮಹಾಪೂರ ಇನ್ನೂ ನಿಂತಿಲ್ಲ.

ಬೆಂಬಲದ ಪ್ರವಾಹದಲ್ಲಿ ಮುಳುಗೇಳುತ್ತಿರುವ ಧನಂಜಯ ಅವರಿಗೆ ಈಗ ಅವರ ಗೆಳೆಯ ನೀನಾಸಂ ಸತೀಶ್‌ ಅವರು ಸಾಥ್‌ ನೀಡಿದ್ದು, ಗೆಳೆಯನ ಜೊತೆ ನಾನಿದ್ದೇನೆ ಎಂದು ಸಾರಿದ್ದಾರೆ. ಈ ಕುರಿತು ತನ್ನ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿರುವ ಸತೀಶ್‌, “ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ,” ಎಂದಿದ್ದಾರೆ.

ಧನು ನನ್ನ ಗೆಳೆಯ,ಅವನ ಎಲ್ಲ ವಿಚಾರಗಳ ಜೊತೆ ಮತ್ತು ಮಾನವಿಯತೆ ಜೊತೆ ನಾನಿದ್ಡೇನೆ. ನನ್ನಂತೆ ಊರು ಬಿಟ್ಟು ಬ್ಯಾಗು ಹಿಡಿದು ಬಂದವನು,ಸುಮ್ಮನೆ ಸಣ್ಣ ಕಾರಣ ಹಿಡಿದು ಅವನ ತೇಜೊ ವಧೆ ಮಾಡುವ ಗೆಳೆಯರೆ, ನೀವು ನಮ್ಮ ಏಳಿಗೆಯನ್ನು ಬಯಸಿದವರೇ. ವೈಷಮ್ಯ ಬಿಡಿ. @Dhananjayaka #WeStandWithDhananjaya pic.twitter.com/tuR9mko5tF
— Sathish Ninasam (@SathishNinasam) October 27, 2022

ನೀನಾಸಂ ಸತೀಶ ಅವರ ಟ್ವೀಟ್

ನಿನ್ನೆ ವಿವಾದ ಆರಂಭಗೊಂಡಾಗಿನಿಂದ ಧನಂಜಯ ಅವರ ಚಿತ್ರಕ್ಕೆ ವಿದೇಶದಲ್ಲಿರುವವರು ಕೂಡಾ ಟಿಕೆಟ್‌ ಬುಕ್ ಮಾಡಿ ಬೆಂಬಲ ತೋರಿದ್ದರು. ಇಂದು ಬಹಳಷ್ಟು ಜನರು ಟಾಕೀಸಿಗೆ ಹೋಗಿ ಸಿನೆಮಾ ನೋಡಿ ತಮ್ಮ ಫೇಸ್ಬುಕ್‌ ಟ್ವಿಟರ್‌ ಖಾತೆಗಳಲ್ಲಿ ಫೋಟೊ ಹಾಕುತ್ತಿದ್ದಾರೆ. ಎಲ್ಲದಕ್ಕೂ ಧಾರ್ಮಿಕ ತಿರುವು ನೀಡುತ್ತಿದ್ದ ಕಿಡಿಗೇಡಿಗಳಿಗೆ ಜನರೇ ಸರಿಯಾಗಿ ಉತ್ತರಿಸುತ್ತಿದ್ದಾರೆನ್ನುವುದು ಜನರ ಅಂಬೋಣ.

ʼಹೆಡ್‌ ಬುಷ್‌ʼ| ಆತ್ಮ ಕಥೆಯಲ್ಲ- ಜೀವನ ಕಥೆ: ಅಗ್ನಿ ಶ್ರೀಧರ್‌
ಬೆಂಗಳೂರು: ಗುರುವಾರ ರಾಜ್ಯಾದಾದ್ಯಂತ ʼಹೆಡ್‌ ಬುಷ್‌ʼ ಸಿನಿಮಾದ ಪ್ರೀಮಿಯರ್‌ ಶೋ ಬಿಡುಗಡೆಯಾಗಿದ್ದು, ಸಿನಿಮಾ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿಬರುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲಾಕಡೆ ಬೆಂಗಳೂರಿನ ಭೂಗತ ದೊರೆ ಎಂ.ಪಿ. ಜಯರಾಜ್‌ ಎನ್ನುವ ಕೂಗು ಕೇಳಿಬರುತ್ತಿದೆ.

ʼನಟ ರಾಕ್ಷಸʼ ಡಾಲಿ ಧನಂಜಯ ನಾಯಕನಾಗಿ ಅಭಿನಯಿಸಿರುವ ʼಹೆಡ್‌ ಬುಷ್‌ʼ ಸಿನಿಮಾದ ಪ್ರೀಮಿಯರ್‌ ಶೋ ಗುರುವಾರ ಬಿಡುಗಡೆಯಾಗಿದ್ದು, ಈಗಾಗಲೇ ಸಿನಿಮಾ ಸಂದರ್ಶಕರಿಂದ ಮತ್ತು ಅಭಿಮಾನಿಗಳಿಂದ ಮೆಚ್ಚುಗೆ ಪಡದುಕೊಂಡಿದೆ.

1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಪರಿಚಯಿಸಲಿರುವ ಈ ಚಿತ್ರ, ಅಗ್ನಿ ಶ್ರೀಧರ್ ಅವರ ‘ದಾದಾಗಿರಿಯ ದಿನಗಳು’ ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಸಿನಿಮಾದ ಪ್ರೀಮಿಯರ್‌ ಶೂ ಬಿಡುಗಡೆ ನಂತರ ಭೂಗತ ಲೋಕದ ಕಥೆಯನ್ನು ಸಿನಿಮಾ ಮಾಡಬೇಕು ಎಂದೆನಿಸಿದ್ದು ಏಕೆ? ಎಂದು ಪೀಪಲ್‌ ಟಿವಿ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಗ್ನಿ ಶ್ರೀಧರ್ ಅವರು, ಇದು ಆತ್ಮ ಕಥೆಯಲ್ಲಾ, ಇದು ಬದುಕಿನ ಕಥೆ. ನಾನು ಜೀವನದಲ್ಲಿ ಸಂಚಾರಿಸಿದ ರೀತಿಯ ಕಥೆ. ಹಾಗಾಗಿ ಸಿನಿಮಾ ಮಾಡಬೇಕು ಎಂದೆನಿಸಿದ್ದು ಎಂದರು.

ಇದನ್ನು ನೋಡಿ: ಇದು ಸಿನಿಮಾ ಅಲ್ಲ, ಬದುಕಿನ ಕಥೆ ಎಂದು ಅಗ್ನಿ ಶ್ರೀಧರ್‌ ಹೇಳಿದ್ಯಾಕೆ?

ಬದುಕಿನಲ್ಲಿ, ಒಳ್ಳೆಯವರು, ಕೆಟ್ಟವರು, ಪೊಲೀಸ್‌ ಅಧಿಕಾರಿಗಳು, ರಾಜಕಾರಣಿಗಳು, ಸಮಾನ್ಯ ಜನರು ಎಲ್ಲಾರು ಇದ್ದಾರೆ, ಹಾಗೆ ಒಂದು ಸಾಹಿತ್ಯ ಹೇಗೂ ಸಿನಿಮಾನು ಅದೇ ರೀತಿಯಾದಂತದ್ದು, ಆ ಸಿನಿಮಾ ಒಂದು ಬದುಕನ್ನು ಹಿಡಿದಿಟ್ಟಾಗ ತುಂಬಾ ಸಂತೋಷವಾಗುತ್ತೆ. ಆ ದೃಷ್ಟಿಕೋನದಿಂದ ಈ ಸಿನಿಮಾ ನಿರ್ಮಾಣವಾಗಿರೋದು, ಹೀಗಾಗಿ ಹೆಡ್‌ ಬುಷ್‌ ಒಂದು ಮ್ಯಾಜಿಕಲ್‌ ನಿನಿಮಾ, ಜನರು ಈ ಸಿನಿಮಾವನ್ನು ಇಷ್ಟಪಡುತ್ತಾರೆ ಮತ್ತು ಇದು ಕಂಡಿತವಾಗಿ ಯಶಸ್ವಿಯಾಗುತ್ತೆ ಎಂದರು.

ಅಗ್ನಿ ಶ್ರೀಧರ್‌ ಅವರ ಕಥೆ-ಚಿತ್ರ ಕಥೆ- ಸಂಭಾಷಣೆ ಮತ್ತು ಶೂನ್ಯ ಅವರ ನಿರ್ದೇಶನದ ಈ ಸಿನಿಮಾವನ್ನು, ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಈ ಚಿತ್ರಕ್ಕೆ ಚರಣರಾಜ್ ಸಂಗೀತ ನೀಡಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ಡೈನಾಮಿಕ್ ಸ್ಟಾರ್ ದೇವರಾಜ್, ಪಾಯಲ್ ರಜಪೂತ್, ಶ್ರುತಿ ಹರಿಹರನ್, ರಘು ಮುಖರ್ಜಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಇಂದು ಹೆಡ್‌ ಬುಷ್‌ ನಿನಿಮಾ ರಾಜ್ಯಾದಾದ್ಯಂತ ತೆರೆಕಾಣಲಿದ್ದು, ಯಶಸ್ವಿ ಪ್ರದರ್ಶನ ಕಾಣಲಿ ಎಂದು ಪೀಪಲ್‌ ಟಿವಿ ಶುಭ ಹಾರೈಸುತ್ತದೆ.

ಹೆಡ್‌ ಬುಷ್‌ ಟ್ರೈಲರ್‌ ನಲ್ಲಿ ತಾಂತ್ರಿಕ ದೋಷ: ತಡವಾಗಿ ಟ್ರೈಲರ್‌ ಬಿಡುಗಡೆ
ಬೆಂಗಳೂರು: ನಟ ರಾಕ್ಷಸ ಡಾಲಿ ಧನಂಜಯ್‌ ಅಭಿನಯನದ ʼಹೆಡ್‌ ಬುಷ್‌ʼ ನಿನಿಮಾದ ಟ್ರೈಲರ್‌ ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಟ್ರೈಲರ್‌ ಅನ್ನು ಭಾನುವಾರ ಸಂಜೆ ಪ್ರಸ್ತುತಪಡಿಸುತ್ತೆವೆ ಎಂದು ʼಹೆಡ್‌ ಬುಷ್‌ʼ ಚಿತ್ರತಂಡ ತಿಳಿಸಿದೆ.

ಈ ಕುರಿತು ನಟ ಡಾಲಿ ಧನಂಜಯ್‌ ಅವರು ಸಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಮ್ಮ ʼಹೆಡ್‌ ಬುಷ್‌ʼ ಸಿನಿಮಾದ ಟ್ರೈಲರ್‌ ಅನ್ನು ಇಂದು ಬೆಳಗ್ಗೆ 11.05 ಕ್ಕೆ ನಿಮ್ಮ ಮುಂದೆ ಪ್ರಸ್ತುತಪಡಿಸಬೇಕಿತ್ತು. ಆದರೆ ಕೆಲವು ತಾಂತ್ರಿಕ ಅಡೆತಡೆಗಳಿಂದ ಇಂದು ಸಂಜೆ  5.55 ಕ್ಕೆ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿ ತಿಳಿಸಿದ್ದು, ತಡವಾಗಿದ್ದಕ್ಕೆ ಕ್ಷಮೆಯಾಚಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿರುವ ನಟ ಧನಂಜಯ್‌ ಮತ್ತು ಯೋಗೇಶ್‌

ಇಡೀ ಹೆಡ್‌ ಬುಷ್‌ ಚಿತ್ರ ತಂಡವು ಚಿತ್ರದ ಟ್ರೈಲರ್‌ ಅರ್ಪಿಸುವ ಮೊದಲು, ಬಂಡಿ ಮಾಕಾಳಮ್ಮನ ಆಶೀರ್ವಾದದೊಂದಿಗೆ ಪ್ರಯಾಣವನ್ನು ಶುರು ಮಾಡಿ, ಸಂಜೆ ದಾವಣಗೆರೆಗೆ ಭೇಟಿ ನೀಡಲಿದೆ.

ಡಾಲಿ ಧನಂಜಯ್, ಸತ್ಯದೇವ್ ಚಿತ್ರಕ್ಕೆ ನಾಯಕಿಯಾದ ತಮಿಳು ನಟಿ ಪ್ರಿಯಾ ಭವಾನಿ ಶಂಕರ್
ಬೆಂಗಳೂರು: ಡಾಲಿ ಧನಂಜಯ್, ಸತ್ಯ ದೇವ್ ನಟನೆಯ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಸಿನಿ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರ ಧನಂಜಯ್ ಹಾಗೂ ತೆಲುಗು ನಟ ಸತ್ಯದೇವ್ ಇಬ್ಬರ ಸಿನಿ ಕೆರಿಯರ್ ನ 26ನೇ ಸಿನಿಮಾವಾಗಿದ್ದು, ಸದ್ಯದಲ್ಲೇ ಸಿನಿಮಾ ಟೈಟಲ್ ರಿವೀಲ್ ಆಗಲಿದೆ. ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದ್ದು, ಚಿತ್ರತಂಡವನ್ನು ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಸೇರಿಕೊಂಡಿದ್ದಾರೆ.

ಧನಂಜಯ್, ಸತ್ಯದೇವ್ ಸಿನಿಮಾಗೆ ನಾಯಕಿಯರ ಹುಡುಕಾಟದಲ್ಲಿ ಚಿತ್ರತಂಡವಿತ್ತು ಇದೀಗ ಪ್ರಿಯಾ ಭವಾನಿ ಶಂಕರ್ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ಓಹ್ ಮನಪೆಣ್ಣೆ’, ‘ಬ್ಲಡ್ ಮನಿ’, ‘ತಿರುಚಿತ್ರಬಾಲಂ’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ಪ್ರಿಯಾ ಭವಾನಿ ಶಂಕರ್ ಗಿದು ತೆಲುಗಿನಲ್ಲಿ ಮೊದಲ ಸಿನಿಮಾವಾಗಿದೆ. ಚಿತ್ರದಲ್ಲಿ ಫ್ಯಾಶನ್ ಡಿಸೈನರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಪ್ರಿಯಾ. ಹೀಗಾಗಿ ಚಿತ್ರತಂಡ ಚಿತ್ರದ ಇನೊಬ್ಬ ನಟಿಯನ್ನು ಸದ್ಯದಲ್ಲೇ ಪರಿಚಯಿಸಲಿದೆ.

ತೆಲುಗಿನಲ್ಲಿ ಪೆಂಗ್ವಿನ್ ಸಿನಿಮಾ ನಿರ್ದೇಶಿಸಿದ್ದ ಈಶ್ವರ್ ಕಾರ್ತಿಕ್ ಡಾಲಿ-ಸತ್ಯದೇವ್ ಬಣ್ಣ ಹಚ್ಚಿರುವ 26ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.  ಕ್ರೈಮ್ ಆಕ್ಷನ್ ಎಂಟಟೈನರ್ ಕಥಾಹಂದರ ಒಳಗೊಂಡಿದ್ದು, ಓಲ್ಡ್ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಟಗರು ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ, ಸುಬ್ಬು ಸಾಹಸ ಚಿತ್ರಕ್ಕಿದೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಸದ್ಯದಲ್ಲೇ ಸಿನಿಮಾ ಟೈಟಲ್ ರಿವೀಲ್ ಮಾಡಲಿದೆ.