donaldtrump – Peepal Media

ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ
ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಎಸಗಿದ ವಂಚನೆ ಆರೋಪದ ಮೇಲೆ ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧಿಸಲಾಗಿದೆ. 2020ರ ಅಧ್ಯಕ್ಷೀಯ ಚುನಾವಣೆ ವೇಳೆ ಅಧಿಕಾರ ದುರ್ಬಳಕೆ ಆರೋಪ ಕೇಳಿಬಂದಿತ್ತು. ಪಿತೂರಿ, ವಂಚನೆ ಯತ್ನ ಸೇರಿದಂತೆ 13 ಪ್ರಕರಣಗಳು ದಾಖಲಾಗಿದ್ದವು.

13 ಪ್ರಕರಣಗಳ ಅಡಿಯಲ್ಲಿ ಕೇಳಿ ಬಂದ ಆರೋಪದ ಹಿನ್ನೆಲೆಯಲ್ಲಿ ಜಾರ್ಜಿಯಾ ಪೊಲೀಸರು ಔಪಚಾರಿಕವಾಗಿ ಟ್ರಂಪ್ ಅವ​ರನ್ನು​​​​​​ ಬಂಧಿಸಿ ಬಿಡುಗಡೆ ಮಾಡಲಾಗಿದೆ. ಬಂಧನದ ನಂತರ 200,000 ಡಾಲರ್ ಮೌಲ್ಯದ​​ ಬಾಂಡ್​​​ ಶ್ಯೂರಿಟಿ ನೀಡಿದ ಬಳಿಕ ಜಾಮೀನಿನ ಬಿಡುಗಡೆ ಮಾಡಲಾಗಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಅವರನ್ನು ಸುಮಾರು 20 ನಿಮಿಷಗಳ ಕಾಲ ಜೈಲಿನೊಳಗೆ ಇಡಲಾಗಿತ್ತು. ಅಮೆರಿಕ ಇತಿಹಾಸದಲ್ಲೇ ಅಧ್ಯಕ್ಷ ಸ್ಥಾನಕ್ಕೇರಿದ ವ್ಯಕ್ತಿಯೋರ್ವ ಮೊದಲ ಬಾರಿ ಜೈಲು ಸೇರಿ ಬಿಡುಗಡೆಯಾದಂತಾಗಿದೆ.

ಕಳೆದ ಏಪ್ರಿಲ್ ಇಂದ ಇಲ್ಲಿಯತನಕ ಅವರು ನಾಲ್ಕು ಬಾರಿ ಹಲವು ಕ್ರಿಮಿನಲ್ ದೋಷಾರೋಪನೆಗೆ ಒಳಗಾಗಿದ್ದಾರೆ. ಅಮೇರಿಕಾದ ನ್ಯೂಯಾರ್ಕ್ ನಲ್ಲಿ ನೀಲಿ ಚಿತ್ರದ ನಟಿಗೆ ಹಣ ಪಾವತಿಸಿದ ಆರೋಪ ಕೂಡ ಟ್ರಂಪ್ ಮೇಲಿತ್ತು. ಫ್ಲೋರಿಡಾದಲ್ಲಿ ಸರ್ಕಾರದ ರಹಸ್ಯ ದಾಖಲೆಗಳನ್ನು ಬೇರೆಡೆ ಸಾಗಿಸಿದ ಆರೋಪ ಕೂಡ ಟ್ರಂಪ್ ರವರು ಎದುರಿಸುತ್ತಿದ್ದಾರೆ.

ತಮ್ಮನ್ನು ಬಂಧಿಸಿದ ನಂತರ ಸುದ್ದಿಗಾರರೊಂದಿಗೆ ಟ್ರಂಪ್ ಮಾತನಾಡಿದ್ದರು. ಇದು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಹಳ ದುಃಖದ ದಿನ ಇವತ್ತು ಇಲ್ಲಿ ನಡೆದಿರುವುದು ನ್ಯಾಯದ ಅಣಕವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಮೋದಿ ಗೆಳೆಯನಿಂದ ಭಾರತಕ್ಕೆ ಶಾಕ್! ಅಧ್ಯಕ್ಷರಾದರೆ ಹಾಕುತ್ತಾರಂತೆ ಭಾರತೀಯ ಉತ್ಪನ್ನಗಳ ಮೇಲೆ ಭಾರೀ ತೆರಿಗೆ
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಕೆಲವು ಉತ್ಪನ್ನಗಳ ಮೇಲೆ ವಿಶೇಷವಾಗಿ ಹಾರ್ಲೆ-ಡೇವಿಡ್ಸನ್ ಬೈಕ್‌ಗಳ ಮೇಲೆ ಭಾರತದಲ್ಲಿ ಹೆಚ್ಚಿನ ತೆರಿಗೆಯ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.

ಇದರೊಂದಿಗೆ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಮೇಲೆ ಅದೇ ಮಾದರಿಯ ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅಮೆರಿಕ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಟ್ರಂಪ್ ಭಾರತವನ್ನು ‘ಟ್ಯಾಕ್ಸ್ ಕಿಂಗ್’ ಎಂದು ಬಣ್ಣಿಸಿದ್ದರು.

ಮೇ 2019ರಲ್ಲಿ, ಯುಎಸ್ ಮಾರುಕಟ್ಟೆಯಲ್ಲಿ ಭಾರತಕ್ಕೆ ಆದ್ಯತೆ ನೀಡುವ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫರೆನ್ಸ್ (GSP) ಅನ್ನು ರದ್ದುಗೊಳಿಸಲಾಯಿತು. ಭಾರತವು ತನ್ನ ಮಾರುಕಟ್ಟೆಗೆ ನ್ಯಾಯಯುತವಾದ ರೀತಿಯಲ್ಲಿ ನ್ಯಾಯಯುತ ಪ್ರವೇಶವನ್ನು ನೀಡುತ್ತಿಲ್ಲ ಎಂದು ಟ್ರಂಪ್ ಆರೋಪಿಸಿದರು. ಫಾಕ್ಸ್ ಬ್ಯುಸಿನೆಸ್ ನ್ಯೂಸ್‌ನ ಲ್ಯಾರಿ ಕುಡ್ಲೋಗೆ ನೀಡಿದ ಸಂದರ್ಶನದಲ್ಲಿ, ಭಾರತದಲ್ಲಿ ತೆರಿಗೆ ದರಗಳು ತುಂಬಾ ಹೆಚ್ಚಿವೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ನನಗೆ ಬೇಕಾಗಿರುವ ಎರಡನೆಯ ವಿಷಯವೆಂದರೆ ಏಕರೂಪದ ತೆರಿಗೆ, ಭಾರತವು ಹೆಚ್ಚು ತೆರಿಗೆಯನ್ನು ತೆಗೆದುಕೊಳ್ಳುತ್ತದೆ. ನಾನು ಇದನ್ನು ಹಾರ್ಲೆ-ಡೇವಿಡ್ಸನ್ (ಬೈಕ್) ವಿಷಯದಲ್ಲಿ ನೋಡಿದ್ದೇನೆ. ಭಾರತದಲ್ಲಿ ಶೇಕಡಾ 100, 150 ಮತ್ತು 200ರಷ್ಟು ತೆರಿಗೆಗಳನ್ನು ವಿಧಿಸಲಾಗುತ್ತದೆ. “ಭಾರತ ನಮಗೆ ತೆರಿಗೆ ವಿಧಿಸುತ್ತಿದೆಯಾದರೆ, ನಾವು ಅವರಿಗೂ ತೆರಿಗೆ ವಿಧಿಸಬೇಕು” ಎಂದು ಟ್ರಂಪ್ ಹೇಳಿದರು.

ಅವರು ಭಾರತ ಮತ್ತು ಬ್ರೆಜಿಲ್‌ನ ತೆರಿಗೆ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. 2024ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಆದಾಗ್ಯೂ, ಅವರು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿಗಳಿಗಾಗಿ ಬುಧವಾರ ನಡೆಸಿದ ಮೊದಲ ಪ್ರಾಥಮಿಕ ಚರ್ಚೆಯಲ್ಲಿ ಭಾಗವಹಿಸಲು ನಿರಾಕರಿಸಿದರು.

ಟ್ರಂಪ್‌ ಅಧಿಕಾರದಲ್ಲಿದ್ದ ಸಮಯದಲ್ಲಿ ಮೋದಿಯವರು ಮತ್ತು ಟ್ರಂಪ್‌ ಜೊತೆ ಬಹಳ ಆಪ್ತವಾದ ಸಂಬಂಧವಿತ್ತು. ಮೋದಿ ಟ್ರಂಪ್‌ ಸಲುವಾಗಿ ನಮಸ್ತೇ ಟ್ರಂಪ್‌ ಎನ್ನುವ ಕಾರ್ಯಕ್ರಮವನ್ನೂ ಭಾರತದಲ್ಲಿ ಆಯೋಜಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಟ್ವಿಟರಿಗೆ ಮರಳಿದ ಟ್ರಂಪ್!
ಇಲಾನ್‌ ಮಸ್ಕ್‌ ಕೈಸೇರಿದ ನಂತರ ಅಕ್ಷರಶಃ ಮನರಂಜನಾ ತಾಣವಾಗಿರುವ ಟ್ವಿಟರ್‌ಗೆ ಈಗ ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮರಳುವುದರೊಂದಿಗೆ ಇನ್ನಷ್ಟು ರಂಗು ಬಂದಂತಾಗಿದೆ. ಮೊನ್ನೆಯಷ್ಟೇ ಟ್ರಂಪ್‌ ಅವರನ್ನು ಟ್ವಿಟರಿಗೆ ಮರಳಿ ಕರೆತರುವ ಕುರಿತು ಜನಾಭಿಪ್ರಾಯ ಕೋರಿ ಪೋಲ್‌ ನಡೆಸಿದ್ದ ಇಲಾನ್‌ ಮಸ್ಕ್‌ ಇಂದು ಅವರ ಅಕೌಂಟನ್ನು ಮರುಸ್ಥಾಪಿಸಿದ್ದಾರೆ.

2021ರಲ್ಲಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿ ಟ್ರಂಪ್‌ ಆ ದೇಶದ ಎಲ್ಲೆಡೆ ಗದ್ದಲ ಎಬ್ಬಿಸಿ, ಆತನ ಬೆಂಬಲಿಗರು ವೈಟ್‌ ಹೌಸಿಗೆ ದಾಳಿ ಮಾಡಿದ್ದರಿಂದಾಗಿ ನಡೆದ ಗುಂಡಿನ ಚಕಮಕಿ ಹಲವು ಸಾವುಗಳಿಗೂ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಈ ಟ್ರಂಪ್‌ ಸಾಮಾಜಿಕ ಜಾಲತಾಣಗಳನ್ನು ಬಳಸಿ ತನ್ನ ಬೆಂಬಲಿಗರ ಜೊತೆ ಸಂವಾದ ನಡೆಸುತ್ತಿದ್ದ ಕಾರಣ ಟ್ರಂಪ್‌ಗೆ ಸಂಬಂಧಿಸಿದ ಎಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಅತ್ತ ಟ್ರಂಪ್‌ ಮರಳಿಬರುತ್ತಿದ್ದಂತೆ ಇತ್ತ ಸದಾ ದ್ವೇಷ ಕಾರುತ್ತಾ ತಲೆಬುಡವಿಲ್ಲದ ಟ್ವೀಟ್‌ ಮಾಡುವುದರಲ್ಲಿ ಖ್ಯಾತರಾಗಿದ್ದ ಕಂಗನಾ ರಾಣವತ್‌ ಅವರ ಖಾತೆಯೂ ಮರುಸ್ಥಾಪನೆಯಾಗುವ ಆಸೆ ಆಕೆಯ ಅಭಿಮಾನಿಗಳಲ್ಲಿ ಗರಿಗೆದರಿದೆ.

ಒಟ್ಟಾರೆ ಸದಾ ಹಲವು ಸಕಾರತ್ಮಕ ಸಾಮಾಜಿಕ ಬದಲಾವಣೆಗೆ ಕಾರಣವಾಗಿದ್ದ ಟ್ವಿಟರ್‌ ಇಲಾನ್‌ ಮಸ್ಕ್‌ ನಿಯಂತ್ರಣಕ್ಕೆ ಬಂದ ನಂತರ ಥೇ ಹುಚ್ಚಾಸ್ಪತ್ರೆಯ ವಾರ್ಡಿನಂತಾಗಿ, ತಮಾಷೆಯ ತಾಣವಾಗಿ ಬದಲಾಗಿದೆ. ಯಾವ ಸಮಯದಲ್ಲಿ ಟ್ವಿಟರ್‌ ಮುಚ್ಚಿಹೋಗಬಹುದೋ ಎನ್ನುವ ಭಯದಿಂದ ಅಲ್ಲಿರುವ ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ತಮ್ಮ ಇನ್ಸ್ಟಾ ಅಕೌಂಟ್‌ ಲಿಂಕ್‌ ಕೊಟ್ಟು ಅಲ್ಲಿ ಫಾಲೋ ಮಾಡುವಂತೆ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಉತ್ತಮ ಸಾಮಾಜಿಕ ಜಾಲತಾಣ ಯೋಗ್ಯನಲ್ಲದ ವ್ಯಕ್ತಿಯೊಬ್ಬನ ಕೈಗೆ ಸಿಕ್ಕರೆ ಏನಾಗಬಹುದೆನ್ನುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ.

ಡೊನಾಲ್ಡ್ ಟ್ರಂಪ್ ಮನೆ ಮೇಲೆ ಎಫ್‌ಬಿಐ ದಾಳಿ
ವಾಷಿಂಗ್ಟನ್: ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್(ಎಫ್‌ಬಿಐ) ಎಜೆಂಟ್‌ಗಳು ಅಮೇರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಪ್ಲಾರಿಡದ ಮಾರ್-ಎ-ಲಾಗೊ ಮನೆ ಮೇಲೆ ಅಘೊಷಿತ ದಾಳಿ ನಡೆಸಿದೆ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದಾಳಿಯ ಕುರಿತು ಎಫ್‌ಬಿಐ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಈ ಹಿಂದೆ ಅಮೇರಿಕದ ಯಾವ ಅಧ್ಯಕ್ಷರ ಮನೆ ಮೇಲೆಯೂ ಈ ರೀತಿಯ ಅಘೋಷಿತ ದಾಳಿ ನಡೆಸಿರಲಿಲ್ಲ ಎಂದು ಟ್ರಂಪ್ ಬೇಸರ ವ್ಯಕ್ತಪಡಿಸಿದರು.

‘ದೊಡ್ಡ ಸಂಖ್ಯೆಯ ಎಫ್‌ಬಿಐ ಎಂಜೆಟರುಗಳು, ನನ್ನ ಸುಂದರ ಮನೆಯ ಮೇಲೆ ದಾಳಿ ಮಾಡಿ ಸ್ವಾಧಿನಪಡಿಸಿಕೊಂಡಿದ್ದಾರೆ’ ಎಂದು ಹೇಳಿದರು. 2024 ರ ಅಮೇರಿಕ ಅಧ್ಯಕ್ಷ ಚುನಾವಣೆಗೆ ತಯಾರಿ ನಡೆಸುತ್ತಿರುವಾಗಲೆ ಎಫ್‌ಬಿಐ ನಡೆಸಿರುವ ಈ ದಾಳಿ ಟ್ರಂಪ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.