Dr BR Ambedkar – Peepal Media

ಡಾ.ಅಂಬೇಡ್ಕರ್ ಎಂಬ ಡಿಮ್ಯಾಂಡು!
ಎಂಭತ್ತರ ದಶಕದ ನಂತರದಲ್ಲಿ ಯಾವಾಗ ಬಾಬಾಸಾಹೇಬರ ಪುಸ್ತಕಗಳು ಹೆಚ್ಚು ಜನರಿಗೆ ತಲುಪುತ್ತಾ ಬಂದವೋ ಆಗ ಮೊದಲಿಗೆ ಬೆತ್ತಲಾದದ್ದು ಕಮ್ಯೂನಿಸ್ಟರು! ಡಾ.ಅಂಬೇಡ್ಕರ್ ಅವರನ್ನು ಮೊದಲಿಗೆ ಲೆಕ್ಕಕ್ಕೆ ತೆಗೆದುಕೊಳ್ಳದಿದ್ದ ಇವರು ವಿದೇಶಿ ಚಿಂತಕರ ಚಿತ್ರಪಟಗಳನ್ನು ದಲಿತರ ಕೈಗಿಟ್ಟು ಮಾರ್ಕ್ಸ್, ಲೆನಿನ್ ಮುಂತಾದವರ ಫೋಟೋಗಳನ್ನು ದಲಿತರ ಎದೆಗಳಿಗೆ ನೇತುಹಾಕಿಬಿಟ್ಟರು! ಕರ್ನಾಟಕದ ದಲಿತ ಚಳುವಳಿ ದಿಕ್ಕು ತಪ್ಪಿದ್ದು ಸಹ ಇಲ್ಲೇ! ಕೇವಲ‌ ಪ್ರತಿಕ್ರಿಯಾತ್ಮಕ ಹೋರಾಟವೊಂದೆ ದಲಿತರ ಸಮಸ್ಯೆಗಳಿಗೆ ಪರಿಹಾರ ಅಂತ ಈಗಲೂ ಸಹ ಅದೇ ಎಡಪಂಥೀಯ ಚಳುವಳಿಗಳ ನೆರಳಿನ ಬಹಳಷ್ಟು ದಲಿತ ಪ್ರಾಧ್ಯಾಪಕರು, ಚಿಂತಕರು ಎನಿಸಿಕೊಂಡವರು ಭಾವಿಸಿರುವುದುಂಟು. ಬಹುಶಃ ಭಾರತದಲ್ಲಿ ಮಾನ್ಯವಾರ್ ಕಾನ್ಷಿರಾಮ್ ಅವರ ಬಹುಜನ ಚಳುವಳಿಯ ಪ್ರಭಾವದಿಂದ ಫುಲೆ-ಅಂಬೇಡ್ಕರ್ ಚಳುವಳಿಯೊಂದು ದೇಶಾದ್ಯಂತ ಸಂಚರಿಸಿತು.‌ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಹೆಚ್ಚು ಹೆಚ್ಚು ಚರ್ಚೆಗೊಳಗಾದಂತೆಲ್ಲಾ ದಲಿತಪರ ಎಂಬ ಮುಖವಾಡ ಹೊತ್ತಿದ್ದ ಕಮ್ಯುನಿಸ್ಟರು ಸೋತು ಸುಣ್ಣವಾದರು. ಬಾಬಾಸಾಹೇಬರು ವಿಚಾರಗಳಿಂದಾಗಿ ಕಾಂಗ್ರೆಸ್ ಕ್ರಮೇಣ ತನ್ನ ಬಲ ಕಳೆದುಕೊಳ್ಳುತ್ತಾ ಬಂದಿತು.‌ ಆದರೆ ದಲಿತರು ಮಾತ್ರ ಸೈದ್ಧಾಂತಿಕವಾಗಿ, ರಾಜಕೀಯವಾಗಿ ತನ್ನ ಏಕನೆಲೆಯೊಂದನ್ನು ಗುರುತಿಸಿಕೊಳ್ಳುವಲ್ಲಿ ವಿಫಲರಾದರು.

ಕಳೆದ ದಶಕದಿಂದೀಚೆಗೆ ಬಹುಜ‌ನ ಚಳುವಳಿಯ ನಾಯಕರುಗಳ ನಡೆ, ವಿಫಲತೆ, ಅದರ ಪರಿಣಾಮದಿಂದಾಗಿ ದೇಶಾದ್ಯಂತ ಚಳುವಳಿಯ ಫಲಿತಾಂಶಗಳು ಸೊನ್ನೆ ಸುತ್ತಿಕೊಂಡಿದ್ದಾಗಿದೆ.‌ ಈಗ ಬಹುಜನ ಚಳುವಳಿಯ ಯಾವುದೇ ನಾಯಕರಿಗೂ ಚಳುವಳಿಯೇ ಬೇಕಿಲ್ಲ, ತಮ್ಮ ಸಮುದಾಯದ ಹಿತಚಿಂತನೆಗೂ ಸಮಯವಿಲ್ಲ. ಇದರ ನಡುವೆ ಅಸಂಖ್ಯಾತ ದಲಿತ ಜನಸಮೂಹ ತಮ್ಮ ಪಾಡಿಗೆ ತಾವು ಬದುಕಿನ ನೊಗ ಹೊತ್ತು ದಿನಗಳನ್ನು ದೂಡುತ್ತಾ ಸಾಗಿವೆ. ಸರ್ಕಾರಗಳು ಯಾವುದೇ‌ ಇರಲಿ, ದಲಿತರ ಮೇಲಿನ ದೌರ್ಜನ್ಯ ಗಳು ಮಾತ್ರ ಇನ್ನೂ ನಿಂತಿಲ್ಲ ಎಂಬುದನ್ನು ಎನ್‌ಸಿಆರ್‌ಬಿ ವರದಿಗಳು ಹೇಳುತ್ತಲೇ ಇವೆ.‌ ಈಗ ಬದಲಾದ ಕಾಲಘಟ್ಟಕ್ಕೆ ಒಂದು ವಿಚಾರವಾಗಿ, ಎಚ್ಚರವಾಗಿ, ವಿಮೋಚನೆಯ ದಿಕ್ಕಾಗಿ ಉಳಿಯಬೇಕಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೋಟ್ಯಾಂತರ ಜನರ ಭಾವನೆಯಾಗಿ ಮಾತ್ರ ಉಳಿದಿದ್ದಾರೆ ಅಷ್ಟೇ. ಈ ಭಾವನೆಗೆ ಸಮಾಜದಲ್ಲಿ ತುಂಬಾ ಡಿಮ್ಯಾಂಡಿದೆ. ಈ ಡಿಮ್ಯಾಂಡನ್ನು ಆಧರಿಸಿ ಕೆಲವು ದಲಿತ ನಾಯಕರೆನಿಸಿಕೊಂಡವರು ಒಂದಷ್ಟು ಜನ ಬಿಜೆಪಿ ಪಕ್ಷಕ್ಕೆ, ಮತ್ತೊಂದಿಷ್ಟು ಜನ ಕಾಂಗ್ರೆಸ್ ಪಕ್ಷಕ್ಕೆ, ಇಲ್ಲೆಲ್ಲೂ ಅವಕಾಶವಿಲ್ಲದ ಮತ್ತಷ್ಟು ಜನ ಇತರ ಸಣ್ಣ ಪುಟ್ಟ ಪಕ್ಷಗಳ ಬುಟ್ಟಿಗೆ ದಲಿತರ ಮತಗಳನ್ನು ತುಂಬಿಸುವ ಕೆಲಸವನ್ನು ನಿಷ್ಠೆಯಿಂದ ಮಾಡುತ್ತ ತಮ್ಮ ಡಿಮ್ಯಾಂಡನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿಯೇ ತಮಗೆ ಬೇಕಾದಂತೆ ಸೈದ್ಧಾಂತಿಕ ನಿರೂಪಣೆಗಳು ಬದಲಾಗುತ್ತವೆ, ದಲಿತರ ರಾಜಕೀಯ ಅವಕಾಶಗಳ ವ್ಯಾಖ್ಯಾನವೂ ಬದಲಾಗುತ್ತದೆ.‌ ಅದಕ್ಕೆಲ್ಲಾ ಡಾ.ಅಂಬೇಡ್ಕರ್ ಅವರ ಬರಹಗಳ ಪುಟಗಳೇ ಸಾಕ್ಷಿಯೂ ಆಗುತ್ತವೆ, ಇಲ್ಲಿ ತಮಗೆ ಬೇಕಾದಂತೆ ಎಲ್ಲವೂ ಬದಲಾಗುತ್ತವೆ!

ಡಾ. ಅಂಬೇಡ್ಕರ್ ಎಂಬ ಭಾವನೆಗೆ ಇರುವ ಈ ಡಿಮ್ಯಾಂಡನ್ನು ಅರಿತಿರುವ ಎಲ್ಲಾ ಪಕ್ಷದ ರಾಜಕಾರಣಿಗಳು ಮತಕ್ಕಾಗಿ ಅಥವಾ ಇತರ ಜಾತಿಗಳನ್ನು ತಮ್ಮ ಪಕ್ಷದ ಅಡಿಯಲ್ಲಿ ಒಗ್ಗೂಡಿಸುವ ಸಲುವಾಗಿಯೂ ಇದನ್ನು ಒಂದು ಭಾವನಾತ್ಮಕ ವಿಷಯವನ್ನಾಗಿ ಬಳಸುತ್ತಲೇ ಇದ್ದಾರೆ. ನೆನ್ನೆ ಅಮಿತ್ ಶಾ ಮಾಡಿದ್ದು ಅದೇನೆ. ದಲಿತರ ಮತಗಳಿಗಾಗಿ ಅಂಬೇಡ್ಕರ್ ಪಂಚತೀರ್ಥ ಮಾಡೋದೆ ಇವರೆ, ಈಗ ಅಂಬೇಡ್ಕರ್ ಅವರ ಹೆಸರನ್ನು ಲೇವಡಿ ಮಾಡೋದು ಇವರೆ! ಯಾವಾಗ ಬೇಕೋ ಆಗ ಅಂಬೇಡ್ಕರ್ ಅವರನ್ನು ನಾವು ಮೆರೆಸುವುದು ಗೊತ್ತು, ಮರೆಸುವುದೂ ಗೊತ್ತು ಎಂಬ ಜಿದ್ದಿಗೆ ಬಿದ್ದಂತಿರುವ ಈ ರಾಜಕೀಯ ಪಕ್ಷಗಳ ಲಾಭ ನಷ್ಟದ ಆಟಗಳಿಗೆ ದಲಿತರ ಭಾವನೆಗಳನ್ನು ಕೆರಳಿಸುವ, ಅರಳಿಸುವ ತಾಕತ್ತು ಇದೆ ಅನ್ನೋದಾದರೆ, ಅದೇ ಸರಿ ಅನ್ನೋದಾದರೆ ಪ್ರತಿಯೊಬ್ಬ ದಲಿತನೂ ಸುಮ್ಮನೇ ಸತ್ತುಬಿಡಬೇಕು ಅಷ್ಟೇ, ‌ಇಲ್ಲವೆ ಇದೇ ಡಾ.ಅಂಬೇಡ್ಕರ್ ಎಂಬ ಡಿಮ್ಯಾಂಡನ್ನು ಬಳಸಿಕೊಂಡು ಸಮಾಜದಲ್ಲಿ ಗಟ್ಟಿಯಾಗಿ ಎದ್ದು ನಿಲ್ಲುವ ಹೊಸ ಚಳುವಳಿಯೊಂದನ್ನು ಕಟ್ಟಬೇಕು. ಯಾರಿದ್ದಾರೆ ಎಲ್ಲಾ ಆಸೆಗಳ ತೊರೆದು ತ್ಯಾಗ ಮಾಡಿ ಹೊಸ ಚಳುವಳಿಯೊಂದನ್ನು ಈಗ ಕಟ್ಟುವವರು???

ಅಂಕಣ: ಅಪ್ಪಗೆರೆ ಡಿ ಟಿ ಲಂಕೇಶ್

ರಾಜ್ಯಸಭೆ: ಅಂಬೇಡ್ಕರ್ ಕುರಿತು ಶಾ ಹೇಳಿಕೆಯನ್ನು ಪ್ರತಿಭಟಿಸಿ ಕಲಾಪ ಸ್ಥಗಿತಗೊಳಿಸಿದ ಪ್ರತಿಪಕ್ಷಗಳು
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ನಡೆಸಿದ ಪ್ರತಿಭಟನೆಯಿಂದ ಬುಧವಾರ ರಾಜ್ಯಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಒಂದು ದಿನದ ಹಿಂದೆ ಸದನದಲ್ಲಿ ಅವರು ನೀಡಿದ ಹೇಳಿಕೆಗಳು ಭಾರತದ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ “ಅವಮಾನ” ಎಂದು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು “ರಾಜ್ಯಸಭೆಯಲ್ಲಿ ಮಾಡಿದ ಷಾ ಹೇಳಿಕೆಗಳ ಒಂದು ಭಾಗವನ್ನು ಬಳಸಿಕೊಂಡು ಕಾಂಗ್ರೆಸ್ ದೇಶವನ್ನು ದಾರಿ ತಪ್ಪಿಸುತ್ತಿದೆ,” ಎಂದು ಆರೋಪಿಸಿದರು ಮತ್ತು ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಹೇಗೆ ಅವಮಾನಿಸಿದೆ ಎಂಬುದನ್ನು ಗೃಹ ಸಚಿವರು ಸ್ಪಷ್ಟವಾದ ಮಾತುಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಪ್ರತಿಪಾದಿಸಿದರು.

“ನೀವು (ಕಾಂಗ್ರೆಸ್) ಷಾ ಅವರ ಸಂಪೂರ್ಣ ಭಾಷಣದ 11-12 ಸೆಕೆಂಡುಗಳ ಕ್ಲಿಪ್ ಅನ್ನು ಬಳಸಿ ರಾಷ್ಟ್ರದ ಹಾದಿ ತಪ್ಪಿಸಲು ಸಾಧ್ಯವಿಲ್ಲ,” ಎಂದು ಹೇಳಿದ ರಿಜಿಜು, ಬಿಜೆಪಿಗೆ ಅಂಬೇಡ್ಕರ್ ದೇವರಿಗೆ ಸಮಾನ ಎಂದು ಪ್ರತಿಪಾದಿಸಿದರು.

ಅಂಬೇಡ್ಕರ್‌ ಹೆಸರು ಹೇಳುವುದೊಂದು ಶೋಕಿ: ಅಮಿತ್‌ ಷಾ ಹೇಳಿಕೆಗೆ ಹೆಚ್‌ ಸಿ ಮಹದೇವಪ್ಪ ಖಂಡನೆ
“ಅಂಬೇಡ್ಕರ್ ಅವರ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಶೋಕಿಯಾಗಿಬಿಟ್ಟಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿದಷ್ಟು ಏನಾದರೂ ದೇವರ ಹೆಸರನ್ನು ಬಳಸಿದ್ದರೆ ಇಷ್ಟು ಹೊತ್ತಿಗೆ ಏಳು ಜನ್ಮದ ಪುಣ್ಯ ಬರುತ್ತಿತ್ತು,” ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯ ಸಭೆಯಲ್ಲಿ ಹೇಳಿದ್ದು ಅವರ ಈ ಅಸೂಕ್ಷ್ಮವಾದ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ಭಾರತದ ಇತಿಹಾಸದಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಇದ್ದ ಪರಿಸ್ಥಿತಿಯನ್ನು ನೆನಪಿಸಿಕೊಂಡರೆ ವಿಪರೀತ ಅವಮಾನ ದೌರ್ಜನ್ಯಕ್ಕೆ ಒಳಗಾಗಿದ್ದ ಅವರನ್ನು ಯಾವ ದೇವರೂ ಕೂಡಾ ರಕ್ಷಣೆ ಮಾಡಿದ ಉದಾಹರಣೆ ಇಲ್ಲ.

ಆದರೆ ಅಸ್ಪೃಶ್ಯರು, ಮಹಿಳೆಯರು ಮತ್ತು ಶೋಷಿತರ ಬದುಕನ್ನು ತನ್ನ ತ್ಯಾಗ, ಅಧ್ಯಯನ, ಬದ್ಧತೆ ಮತ್ತು ಮಹಾಲೋಕದೃಷ್ಟಿಯ ಮೂಲಕ ಪ್ರತಿದಿನವೂ ರಕ್ಷಣೆ ಮಾಡುತ್ತಿರುವ ನಿಜವಾದ ಶಕ್ತಿ ಯಾವುದಾದರೂ ಇದ್ದರೆ ಅದು ಬಾಬಾ ಸಾಹೇಬರು ಮತ್ತವರ ಸಂವಿಧಾನ ಎಂಬುದನ್ನು ನಾನು ಎದೆ ಕಟ್ಟಿಕೊಂಡು ಹೇಳುತ್ತೇನೆ.

ಭಾರತದ ಸಂದರ್ಭದಲ್ಲಿ ಅಸ್ಪೃಶ್ಯತೆ ಅನುಭವಿಸಿದ ನಮ್ಮ ಜನರು, ಇಲ್ಲಿನ ಮಹಿಳೆಯರು ಮತ್ತು ಶೋಷಿತ ವರ್ಗಗಳು ಅಂಬೇಡ್ಕರ್ ಅವರನ್ನು ಬಿಟ್ಟು ಅಮಿತ್ ಶಾ ಅವರ ದೇವರ ಹೆಸರನ್ನು ಹೇಳುತ್ತಾ ಕೂತಿದ್ದರೆ ಇಷ್ಟೊತ್ತಿಗೆ ಅವರೆಲ್ಲರೂ ದೇವರ ಪಾದ ಸೇರಬೇಕಾಗಿತ್ತು.

ಹೀಗಾಗಿ ಪುಣ್ಯ ಗಿಣ್ಯ ಎಂದು ಹೇಳುತ್ತಾ ಸಮಾಜಕ್ಕೆ ಕಂಟಕಪ್ರಾಯವಾದ ಮೌಢ್ಯತೆಯನ್ನು ಆಚರಿಸುವುದಕ್ಕಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹ ಹೀನ ಧೈರ್ಯ ತೋರುತ್ತಿರುವ ಅಮಿತ್ ಷಾ ಅವರು ದೇಶದ ಮುಂದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಈ ಮೂಲಕ ನಾನು ಆಗ್ರಹಿಸುತ್ತೇನೆ.!

ಜೊತೆಗೆ ” ಯಾವ ಧರ್ಮ ಅಥವಾ ದೇವರು ನಮ್ಮನ್ನು ರಕ್ಷಣೆ ಮಾಡುವುದಿಲ್ಲ, ಬದಲಿಗೆ ಶಿಕ್ಷಣ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವೇ ನಮ್ಮ ಬದುಕನ್ನು ಬದಲಿಸುವ ಕೀಲಿಕೈ” ಎಂಬ ಬಾಬಾ ಸಾಹೇಬರ ಮಾತನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇನೆ

ಹೆಚ್‌ ಸಿ ಮಹದೇವಪ್ಪ

ಒಳಮೀಸಲಾತಿ ಹೋರಾಟದ ಸೈದ್ಧಾಂತಿಕ ಬೆನ್ನೆಲುಬು ಡಾ.ಕೆ.ಬಾಲಗೋಪಾಲ್
-ವಿ.ಎಲ್.ನರಸಿಂಹಮೂರ್ತಿ

ಒಳಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮೇಲೆ MRPS ನೇತಾರ ಮಂದಾಕೃಷ್ಣ ಮಾದಿಗ ಹಲವರನ್ನು ಬೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಂದಾಕೃಷ್ಣ ಮಾದಿಗ ಭೇಟಿ ಮಾಡಿದ ಹಲವರಲ್ಲಿ ಒಳಮೀಸಲಾತಿ ಹೋರಾಟಕ್ಕೆ ನಿಜವಾಗಿಯೂ ಬೆಂಬಲ ಕೊಟ್ಟವರ ಜೊತೆಗೆ ಬಿಜೆಪಿ-ಸಂಘಪರಿವಾರದ ಹಲವರೂ ಇದ್ದಾರೆ. ಇವೆಲ್ಲವೂ ಅವರ ರಾಜಕೀಯ ಲೆಕ್ಕಾಚಾರ.

ಆದರೆ ಇಂದು ಮಂದಾಕೃಷ್ಣ ಅವರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲದ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ. ಕೆ. ಬಾಲಗೋಪಾಲ್ ಅವರ ಮನೆಗೆ ಭೇಟಿ ಕೊಟ್ಟು ಕೃತಜ್ಞತೆ ಸಲ್ಲಿಸಿ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ನನಗೆ ಮಂದಾಕೃಷ್ಣ ಅವರ ಈ ನಡೆ ತುಂಬಾ ಖುಷಿ ಕೊಟ್ಟಿದೆ.

ಒಳಮೀಸಲಾತಿ ಹೋರಾಟ ಶುರುವಾಗಿ ಅದು ಆಂಧ್ರಪ್ರದೇಶದಲ್ಲಿ ತಾರಕಕ್ಕೆ ಹೋದಾಗ ಅದನ್ನು ಬೌದ್ಧಿಕ ವಲಯ ಅಸಂವಿಧಾನಿಕ, ದಲಿತ ಚಳುವಳಿಗೆ ಮಾರಕ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರಿಕಲ್ಪನೆಗೆ ವಿರುದ್ಧ ಅಂತ ಬಿಂಬಿಸುವುದಕ್ಕೆ ಪ್ರಯತ್ನಿಸಿತು. ಒಳಮೀಸಲಾತಿ ಹೋರಾಟವೇ ಅಪ್ರಸ್ತುತ ಎಂದು ವಾದಿಸಿದ ಚಿಂತಕರಲ್ಲಿ ದಲಿತೇತರರು, ದಲಿತ ಚಿಂತಕರು ಎಲ್ಲರೂ ಇದ್ದರು.

ದಲಿತ ಸಮುದಾಯದ ನಡುವೆ ಎದ್ದ ಪ್ರಾತಿನಿಧ್ಯದ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಎಲ್ಲರೂ ಒದ್ದಾಡುತ್ತಿದ್ದಾಗ ಡಾ. ಕೆ. ಬಾಲಗೋಪಾಲ್ EPW ಪತ್ರಿಕೆ ಅಂಕಣದಲ್ಲಿ ಒಳಮೀಸಲಾತಿ ಕುರಿತು ಬರೆದರು. ಬಾಲಗೋಪಾಲ್ ಒಳಮೀಸಲಾತಿ ಹೋರಾಟದ ಅಗತ್ಯದ ಕುರಿತು ಬರೆದ A Tangled Web: Subdivision of SC Reservations in AP(2000) ಮತ್ತು ಒಳಮೀಸಲಾತಿಯನ್ನು ಅಸಿಂಧುಗೊಳಿಸಿ ಸುಪ್ರೀಂಕೋರ್ಟ್ ನೀಡಿದ ಇ.ವಿ. ಚಿನ್ನಯ್ಯ ಕೇಸಿನ ಕುರಿತು ಬರೆದ Justice for Dalits among Dalits: All the Ghosts Resurface(2005) ಈ ಎರಡೂ ಲೇಖನಗಳು
ಒಳಮೀಸಲಾತಿ ಹೋರಾಟಕ್ಕೆ ಸ್ಪಷ್ಟ ಮತ್ತು ಬಲಿಷ್ಠವಾದ ಸೈದ್ಧಾಂತಿಕ ಚೌಕಟ್ಟನ್ನು ಒದಗಿಸಿದವು.
ಒಳಮೀಸಲಾತಿ ಹೋರಾಟ ಕೇವಲ ರಾಜಕೀಯ ಸಂಚು, ನಾಯಕತ್ವದ ಪ್ರಶ್ನೆ, ಐಡೆಂಟಿಟಿ ರಾಜಕಾರಣದ ಅಪಾಯಕಾರಿ ಬೆಳವಣಿಗೆ ಎನ್ನುವ ನೆರೇಟಿವ್‌ ಅನ್ನು ಹೊಡೆದು ಉರುಳಿಸಿದ ಬಾಲಗೋಪಾಲ್ ಚಿಂತನೆ ದಲಿತ ಮತ್ತು ದಲಿತೇತರ ಬುದ್ದಿಜೀವಿಗಳನ್ನು ಅಲುಗಾಡಿಸಿತು. ಬಾಲಗೋಪಾಲ್ ತಮ್ಮ ಓರಿಜಿನಲ್ ಅಂಬೇಡ್ಕರ್‌ವಾದಿ ಕಣ್ಣೋಟದ ಮುಖಾಂತರ ಒಳಮೀಸಲಾತಿ ಹೋರಾಟವನ್ನು ವಿಶ್ಲೇಷಿಸಿದ ನಂತರ ಅದಕ್ಕೆ ಉತ್ತರ ಕೊಡಲಾಗದೆ ಬೌದ್ಧಿಕ ವಲಯ ಮೌನಕ್ಕೆ ಶರಣಾಯಿತು.

ಈಗ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೂ ಬೌದ್ಧಿಕ ವಲಯ ಮೀಸಲಾತಿ ಕುರಿತು ಮೇಲ್ಜಾತಿಯ ಚಿಂತಕರು ಕಟ್ಟಿರುವ ಮಿಥ್‌ಗಳನ್ನೇ ಮುಂದುವರೆಸಿಕೊಂಡು ಒಳಮೀಸಲಾತಿ ಜಾರಿಯಾದರೆ ದಲಿತ ಸಮುದಾಯದ ಒಗ್ಗಟ್ಟು ಮುರಿಯುತ್ತದೆ, ಪ್ರತಿಭೆಗೆ ಅವಕಾಶವಿಲ್ಲದಂತಾಗುತ್ತದೆ, ಮೀಸಲಾತಿ ಅಪ್ರಸ್ತುತವಾಗುತ್ತದೆ, ಸರಿಯಾದ ಅಂಕಿಅಂಶಗಳಿಲ್ಲದ ಕಾರಣ ಒಳಮೀಸಲಾತಿ ಜಾರಿ ಅಸಂಭವ ಎನ್ನುವ ಅಡ್ಡಗೋಡೆಯ ಮೇಲೆ ದೀಪ ಇಡುವ ಮಾದರಿಯ ಜಾಣ ನಡೆ ಅನುಸರಿಸುತ್ತಿದೆ. ದಲಿತರೊಳಗಿನ ಬಲಾಢ್ಯ ಜಾತಿಗಳ ನಾಯಕರು ಇದನ್ನು ಮುಂದುಮಾಡಿ ಒಳಮೀಸಲಾತಿ ಜಾರಿಯಾಗದಂತೆ ಪ್ರಯತ್ನಿಸುತ್ತಿರುವಾಗ ಬಾಲಗೋಪಾಲ್ ಬದುಕಿದ್ದರೆ ಇವರೆಲ್ಲರಿಗೂ ಉತ್ತರಿಸುತ್ತಿದ್ದರು.

ತನ್ನ ಕಾಲದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ಬಾಲಗೋಪಾಲ್ ತರದ ಚಿಂತಕರಿಲ್ಲದೆ ಇವತ್ತು Intellectual void ಸೃಷ್ಟಿಯಾಗಿದೆ.

ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಕುರಿತಂತೆ ಡಾ.ಕೆ. ಬಾಲಗೋಪಾಲ್ ಅವರ ಕಾಣ್ಕೆಯನ್ನು ನೆನಪು ಮಾಡಿಕೊಳ್ಳುವುದು ಇವತ್ತಿನ ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚು ಪ್ರಸ್ತುತ.

ಜೈ ಭೀಮ್‌ ಡಾ. ಕೆ. ಬಾಲಗೋಪಾಲ್ ಸರ್…

ಡಾ.ಅಂಬೇಡ್ಕರರನ್ನು ಅವಮಾನಿಸಿತೇ ‘ನಮ್ಮ ಮೆಟ್ರೋ’? : ದಲಿತ ಮುಖಂಡರಿಂದ ಪ್ರತಿಭಟನೆ
ಬೆಂಗಳೂರು: ಗಣರಾಜ್ಯೊತ್ಸವ ಸಮಾರಂಭಗಳಂದು ರಾಜ್ಯದ ಸರ್ಕಾರಿ ಕಚೇರಿಗಳು.ಸರಕಾರಿ ಶಾಲಾ ಕಾಲೇಜು, ಹಾಗೂ ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಕಚೇರಿಗಳಲ್ಲೂ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟು ಗೌರವಿಸುವುದು ಕಡ್ಡಾಯ. ಈ ಕುರಿತು 2020ರಲ್ಲಿ ಸರ್ಕಾರವೇ ಆದೇಶ ಹೊರಡಿಸಿದೆ.

ಆದರೆ, ಬಿಎಂಆರ್ ಸಿಎಲ್ (ನಮ್ಮ ಮೆಟ್ರೋ) ಸರ್ಕಾರದ ಈ ಆದೇಶವನ್ನು ನಿರ್ಲಕ್ಷಿಸಿ ಡಾ.ಅಂಬೇಡ್ಕರ್‌ ಅವರಿಗೆ ಅವಮಾನಿಸಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

ಮೆಟ್ರೋ ಆಡಳಿತದ ಜ.26ರ ಧ್ವಜಾರೋಹನ ಕಾರ್ಯಕ್ರಮದ ವೇದಿಕೆಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡದೇ ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಲಾಗಿದೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಬೈಯಪ್ಪನಹಳ್ಳಿ ಮೆಟ್ರೋ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನೆಕಾರರು ಎಚ್ಚರಿಕೆ ನೀಡಿದರು.

ದೇಶಕ್ಕೆ ಸಂವಿಧಾನದಂಥ ಮಹಾನ್ ಗ್ರಂಥ ನೀಡಿದ ಡಾ.ಬಿ.ಆರ್ ಅಂಬೇಡ್ಕರ್ ಎನ್ನುವುದೇ ಬಿಎಂಆರ್ ಸಿಎಲ್ ಗೆ ಗೊತ್ತಿಲ್ಲ ಎನ್ನಿಸುತ್ತದೆ. ಹಾಗಾಗಿಯೇ ಸರ್ಕಾರ ಈ ಬಗ್ಗೆ ಹೊರಡಿಸಿದ್ದ ಆದೇಶವನ್ನು ಮೆಟ್ರೋ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ.

ಸರ್ಕಾರದ ಆದೇಶವನ್ನು ಎಲ್ಲಾ ಇಲಾಖೆಗಳು ಕೂಡ ಚಾಚೂತಪ್ಪದೇ ಪಾಲಿಸ್ತಿವೆ. ಆದರೆ ಎಲ್ಲರಿಗೂ ಒಂದು ನ್ಯಾಯವಾದ್ರೆ ಬಿಎಂಆರ್ ಸಿಎಲ್ ಗೆ ಇನ್ನೊಂದು ನ್ಯಾಯ ಎನ್ನುವಂತೆ ಮೆಟ್ರೋ ಸಂಸ್ಥೆಯ ಆಡಳಿತ ನಡೆದುಕೊಂಡಿದೆ.ಇದೆಲ್ಲಕ್ಕೂ ಕಾರ್ಯಕ್ರಮದ ಆಯೋಜನೆಯ ಉಸ್ತುವಾರಿ ವಹಿಸಿಕೊಂಡಿದ್ದರೆನ್ನಲಾದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್ ಅವರೇ ಕಾರಣ ಎಂದು ಎಂದು ದಲಿತ ಮುಖಂಡರು ಆರೋಪಿಸಿದರು.

ಇದಕ್ಕೆ ಕಾರಣವಾದ ಕಾರ್ಯನಿರ್ವಾಹಕ ನಿರ್ದೇಶಕರನ್ನು ಅಮಾನತುಗೊಳಿಸಬೇಕು.ಇಲ್ಲವಾದಲ್ಲಿ ಬಿಎಂಆರ್ ಸಿಎಲ್ ಕಚೇರಿ ಆವರಣದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಅಂಬೇಡ್ಕರ್ ಅವರಂಥ ಮಹಾನ್ ಚೇತನ ಇಲ್ಲದೆ ಇದ್ದಲ್ಲಿ ಇವತ್ತು ಭಾರತದ ಪರಿಸ್ತಿತಿ ಏನಾಗುತ್ತಿತ್ತು ಎನ್ನುವ ಅರಿವು ಬಿಎಂಆರ್ ಸಿಎಲ್ ಆಡಳಿತಕ್ಕೆ ಗೊತ್ತಿರಬೇಕಿತ್ತು. ಅಂಬೇಡ್ಕರ್ ಭಾವಚಿತ್ರ ಇಡದ ಅಪಮಾನ ಮಾಡಿರುವ ಬಿಎಂಆರ್ ಸಿಎಲ್ ಸಂಸ್ಥೆ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಬೇಕು. ಎಂಡಿ ಮಹೇಶ್ವರ ರಾವ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.ಇಷ್ಟೆಲ್ಲಕ್ಕೂ ಎಂದು ದಲಿತ ಮುಖಂಡರಾದ ಶಿವಕುಮಾರ ನಾಯ್ಕ ಮತ್ತು ಶಂಕರ್‌ ಅವರು ಒತ್ತಾಯಿಸಿದರು.

ಗಣರಾಜ್ಯೋತ್ಸವ ಆಚರಣೆ : ಡಾ.ಬಿ.ಆರ್.ಅಂಬೇಡ್ಕರ್ ಬಾವಚಿತ್ರ ಕಡ್ಡಾಯ
ಶಾಲೆ ಕಾಲೇಜು ಅಥವಾ ಇನ್ನಾವುದೇ ಸರ್ಕಾರಿ ಕಛೇರಿಗಳಲ್ಲಿ ಗಣರಾಜ್ಯೋತ್ಸವ ಆಚರಣೆ ವೇಳೆ ‘ಡಾ.ಬಿ.ಆರ್.‌ ಅಂಬೇಡ್ಕರ್ ಭಾವಚಿತ್ರ’ ಇಡುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ.

ಜನವರಿ 26 ನೇ ದಿನಾಂಕದಂದು ರಾಜ್ಯದ ಸರಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸರ್ಕಾರಿ ಶಾಲಾ ಕಾಲೇಜು ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಗಣರಾಜ್ಯೋತ್ಸವ ಸಮಾರಂಭಗಳಲ್ಲಿ ಸಂವಿಧಾನ ಪಿತಾಮಹ, ಭಾರತ ರತ್ನ ಡಾ.ಬಿ.ಆರ್.‌ ಅಂಬೇಡ್ಕರ್‌ ಭಾವಚಿತ್ರ ಕಡ್ಡಾಯವಾಗಿ ಇಡುವಂತೆ ಆದೇಶ ಹೊರಡಿಸಲಾಗಿದೆ.

ಅಂಬೇಡ್ಕರ ಜೀವನದ ಕೊನೆಯ ಹತ್ತು ವರ್ಷಗಳು
ರಘೋತ್ತಮ ಹೊ ಬ

1946 ರಿಂದ 1956 ರ ವರೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕಿನ 10 ವರ್ಷಗಳು ಅದು ಅವರ ಜೀವನದ ಬದುಕಿನ ಸಾಕ್ಷಾತ್ಕಾರದ ಕ್ಷಣಗಳು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಅದು ಹೋರಾಟದ ಬದುಕು. ಯಾವ ಸಾಮಾಜಿಕ ವ್ಯವಸ್ಥೆ ಶತಶತಮಾನಗಳಿಂದ ಜಡ್ಡುಗಟ್ಟಿತ್ತೊ, ಏಣಿ ಮಾದರಿಯ ಜಾತಿ ವ್ಯವಸ್ಥೆ ಎಂಬ ವಿಚಿತ್ರ ಸಾಮಾಜಿಕ ವ್ಯವಸ್ಥೆ ಹೊಂದಿತ್ತೊ, ಅಂತಹ ರಚನೆಯ ವಿರುದ್ಧ ಬರಹಗಳ ಮೂಲಕ ವೈಚಾರಿಕವಾಗಿ, ಮಾತಿನ ಮೂಲಕ ಸಂಸದೀಯವಾಗಿ, ವಿಮೋಚನೆಯ ಹಾದಿ ಹಿಡಿದು ಧಾರ್ಮಿಕವಾಗಿ, ವ್ಯವಸ್ಥೆಯ ಗಮನ ಸೆಳೆಯಲು ಬೀದಿ ಹೋರಾಟದ ಮಾದರಿಯಲ್ಲೂ ಹೋರಾಡಿದ ಅಪ್ರತಿಮ ಬದುಕು ಅದು. ಬಹುಶಃ ಪದಗಳು ಕೂಡ ಅಂಬೇಡ್ಕರರ ಆ ಹೋರಾಟದ ಬದುಕನ್ನು ಹಿಡಿದಿಡಲು ಸೋಲುತ್ತವೆ. ಅಂತಹ ಅನನ್ಯ ಮಾದರಿಯ ಜೀವನ ಅದು.

1946 ಅದು ದೇಶದ ಸ್ವಾತಂತ್ರ್ಯದ ಹೊಸ್ತಿಲ ಘಟ್ಟ. ಆಗ ಬಾಬಾಸಾಹೇಬ್ ಅಂಬೇಡ್ಕರ್ ಆತಂಕಗೊಂಡದ್ದು ಸ್ವತಂತ್ರ ಭಾರತದಲ್ಲಿ ತನ್ನ ಜನರ ಭವಿಷ್ಯ ಏನು ಎಂಬುದರ ಬಗ್ಗೆ. ಯಾಕೆಂದರೆ ಡಾ.ಅಂಬೇಡ್ಕರರು ಆಗಿನ ಕಾಲಕ್ಕೆ ಇಡೀ ಭಾರತದ ಜನಸಂಖ್ಯೆಯನ್ನು ಮೂರು ಗುಂಪಾಗಿ ಪರಿಗಣಿಸಿದ್ದರು. 1.ಹಿಂದುಗಳು 2.ಮುಸ್ಲಿಮರು 3.ಅಸ್ಪೃಶ್ಯ ಸಮುದಾಯಗಳು. ಹಿಂದುಗಳಿಗೆ ಭಾರತ ಸಿಗುತ್ತಿತ್ತು. ಮುಸ್ಲಿಮರಿಗೆ ಅವರ ಬೇಡಿಕೆಯ ಪಾಕಿಸ್ತಾನ ಸಿಗುತ್ತಿತ್ತು. ಆದರೆ ಅಸ್ಪೃಶ್ಯ ಸಮುದಾಯಗಳಿಗೆ ಏನು ಸಿಗುತ್ತಿತ್ತು? ಇದು ಬಾಬಾಸಾಹೇಬ್ ಅಂಬೇಡ್ಕರರ ಪ್ರಶ್ನೆಯಾಗಿತ್ತು. ಆ ಕಾರಣಕ್ಕಾಗಿ ಆಗ ಅಂಬೇಡ್ಕರ್ ರವರು ಬ್ರಿಟಿಷರಿಗೆ ಸರಣಿ ಪತ್ರಗಳನ್ನು ಬರೆದರು. ಸ್ವತಂತ್ರ ಭಾರತದಲ್ಲಿ ತನ್ನ ಜನರ ಭವಿಷ್ಯ ಏನು ಎಂದು ಕೇಳಿದರು. ಹಾಗೆ ಕೇಳುತ್ತ ಅವರು ಸುಮ್ಮನೆ ಕೂರಲಿಲ್ಲ. ಆಗಷ್ಟೇ ರಚನೆಯಾಗಿದ್ದ ಸ್ವತಂತ್ರ ಭಾರತದ ಸಂವಿಧಾನ ರಚಿಸುವ ಸಂವಿಧಾನ ಸಭೆಗೆ ದೂರದ ಬಂಗಾಳದಿಂದ ಆಯ್ಕೆಯಾಗಿದ್ದರು, ಸಂವಿಧಾನ ರಚನೆಯಲ್ಲಿ ತಮಗೆ ತಾವೇ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಂಡಿದ್ದರು. ಈ ನಡುವೆ 1947 ಆಗಸ್ಟ್ 15 ರಂದು ಭಾರತಕ್ಕೆ ಸ್ವತಂತ್ರ ಬಂದಾಗ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಪ್ರಪ್ರಥಮ ಕಾನೂನು ಸಚಿವರಾಗಿಯೂ ನೇಮಕಗೊಂಡಿದ್ದರು. ತತ್ಪರಿಣಾಮವೆಂಬಂತೆ ಕಾನೂನು ರಚನೆಯ ಬಹು ಮಹತ್ವದ ಕೆಲಸವಾದ ಸಂವಿಧಾನದ ಕರಡು ರಚಿಸುವ ಸಮಿತಿಯ ಅಧ್ಯಕ್ಷರಾಗಿ ಸ್ವತಂತ್ರ ಬಂದ ಅದೇ ತಿಂಗಳು ಅಂದರೆ ಆಗಸ್ಟ್ 29ರಂದು ಅವರು ನೇಮಕಗೊಂಡಿದ್ದರು. ಮುಂದೆ ನಡೆದದ್ದು ಇತಿಹಾಸ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ವತಂತ್ರ ಭಾರತಕ್ಕೆ ಸಮಸ್ತ ಭಾರತೀಯರ ಹಿತ ಕಾಯುವ ಅಭೂತಪೂರ್ವ ಸಂವಿಧಾನ ರಚಿಸಿದ್ದರು. ಸಂವಿಧಾನ ಶಿಲ್ಪಿ ಎನಿಸಿಕೊಂಡಿದ್ದರು. ಅಂದಹಾಗೆ ಬಾಡಿಗೆ ಮನೆ ಸಿಗದೆ ಸವರ್ಣಿಯರ ಮನೆಯಿಂದ ಆಚೆ ತಳ್ಳಲ್ಪಟ್ಟ, ಶಾಲೆಯಲ್ಲಿ ಪ್ರತ್ಯೇಕ ಕೂರಿಸಲ್ಪಟ್ಟ, ಕುಡಿಯುವ ನೀರನ್ನೂ ನಿರಾಕರಿಸಲ್ಪಟ್ಟ ಅಂಬೇಡ್ಕರ್ ರವರು ತಮ್ಮ ಬದುಕಿನ ಅಂತಿಮ ವರ್ಷಗಳಲ್ಲಿ ಅದೆಲ್ಲವನ್ನು ಸರಿಪಡಿಸುವ ಜವಾಬ್ದಾರಿ ಪಡೆಯುತ್ತಾರೆಂದರೆ… ಯಶಸ್ವಿಯಾಗುತ್ತಾರೆಂದರೆ…!

ಸಂವಿಧಾನ ರಚಿಸುತ್ತಲೇ ಅಂಬೇಡ್ಕರ್ ರವರ ಜ್ಞಾನ ಬೌದ್ಧ ಧರ್ಮದತ್ತ ಹೊರಳಿತ್ತು. ಅಂಬೇಡ್ಕರ್ ಅವರಿಗೆ ಬೇಕಾಗಿದ್ದು ಜಾತಿ ವ್ಯವಸ್ಥೆಯಿಂದ ಅಸ್ಪೃಶ್ಯತೆಯಿಂದ ವಿಮೋಚನೆ. ಈ ನಿಟ್ಟಿನಲ್ಲಿ ತಮ್ಮ ಹೋರಾಟನ ಬದುಕಿನ ಆರಂಭದಲ್ಲಿಯೇ ಅಂದರೆ 1935 ಅಕ್ಟೋಬರ್ 13ರಂದು ಡಾ.ಅಂಬೇಡ್ಕರ್ ಅವರು “ನಾನು ದುರದೃಷ್ಟವಶಾತ್ ಹಿಂದೂವಾಗಿ ಹುಟ್ಟಿದ್ದೇನೆ. ಅದು ನನ್ನ ಕೈಲಿರಲಿಲ್ಲ. ಆದರೆ ಹಿಂದೂವಾಗಿ ಸಾಯುವುದಿಲ್ಲ” ಎಂದು ಘೋಷಿಸಿದ್ದರು. ಅದರಂತೆ ಧರ್ಮ ಬದಲಿಸುವ ಚಿಂತನೆಯಲ್ಲಿಯೇ ತೊಡಗಿದ್ದ ಅವರು ಸಂವಿಧಾನ ಜಾರಿಯಾದ ಅದೇ ವರ್ಷ 1950 ಸೆಪ್ಟೆಂಬರ್ 29 ಮುಂಬೈನ ವೊರ್ಲಿ ಎಂಬ ಪ್ರದೇಶದ ಬೌದ್ಧ ವಿಹಾರವೊಂದಕ್ಕೆ ಭೇಟಿ ಕೊಟ್ಟಾಗ ಹೇಳಿದ್ದು “ನನ್ನ ಬದುಕಿನ ಮುಂದಿನ ದಿನಗಳನ್ನು ಇಡೀ ಭಾರತದಲ್ಲಿ ಬೌದ್ಧ ಧರ್ಮವನ್ನು ಪುನರುತ್ಥಾನಗೊಳಿಸಲು ವಿನಿಯೋಗಿಸುತ್ತೇನೆ” ಎಂದು.

ಯಾಕೆ ಅಂಬೇಡ್ಕರ್ ಅವರಿಗೆ ಮತಾಂತರದ ಬಗ್ಗೆ ಆ ಪರಿ ಒಲವಿತ್ತು? 1956 ಅಕ್ಟೋಬರ್ 13ರ ಅವರ ಭಾಷಣದ ಇತರ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸುವುದಾದರೆ “ನಿಮ್ಮನ್ನು ಮನುಷ್ಯರನ್ನಾಗಿ ಪರಿಗಣಿಸದ ಆ ಧರ್ಮದಲ್ಲಿ ನೀವೇಕೆ ಇರುವಿರಿ? ನಿಮ್ಮನ್ನು ದೇವಸ್ಥಾನಗಳಿಗೆ ಪ್ರವೇಶ ಕೊಡದ ಆ ಧರ್ಮದಲ್ಲಿ ನೀವೇಕೆ ಇರುವಿರಿ? ನಿಮ್ಮನ್ನು ಶಿಕ್ಷಣ ಪಡೆಯಲು ಅವಕಾಶ ಕೊಡದ ಆ ಧರ್ಮದಲ್ಲಿ ನೀವೇಕೆ ಇರುವಿರಿ? ಜೀವನದ ಪ್ರತಿಯೊಂದು ಕ್ಷಣದಲ್ಲು ನಿಮ್ಮನ್ನು ಅಪಮಾನಿಸುವ ಆ ಧರ್ಮದಲ್ಲಿ ನೀವೇಕೆ ಇರುವಿರಿ? ಅಂಬೇಡ್ಕರರ ಈ ನುಡಿಗಳನ್ನು ಮತ್ತೆ ಮತ್ತೆ ಮೆಲುಕಿಸಿಕೊಂಡರಾದರೆ ಯಾರು ಕೂಡ ಬೌದ್ಧ ಧರ್ಮದ ಅವರ ಹಾದಿಯನ್ನು ಎಂದಿಗೂ ಪ್ರಶ್ನಿಸಲಾರರು.

ರಾಜಕೀಯ ಅಧಿಕಾರದ ಮಹತ್ವ ಅರಿತಿದ್ದ ಅಂಬೇಡ್ಕರ್ ಅವರು ಸ್ವಾತಂತ್ರ್ಯ ನಂತರ ನಡೆದ ಪ್ರಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದರು. 1952 ಜನವರಿಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅವರು ತಮ್ಮ ರಾಜಕೀಯ ಹೋರಾಟದ ಬದುಕಿನ ದುರಂತ ಎಂಬಂತೆ ಸೋಲನ್ನು ಅನುಭವಿಸಿದ್ದರು. ಆದರೆ ಹೇಗಾದರೂ ಮಾಡಿ ಸಂಸತ್ತನ್ನು ಪ್ರವೇಶಿಸಲೇಬೇಕು ಎಂಬ ತುಡಿತ ಹೊಂದಿದ್ದ ಅವರು ಅದೇ ವರ್ಷ ಅಂದರೆ 1952 ಮಾರ್ಚ್ ತಿಂಗಳಲ್ಲೇ ಮುಂಬೈ ಪ್ರಾಂತ್ಯದಿಂದ ರಾಜ್ಯಸಭೆಗೆ ಆಯ್ಕೆಯಾದರು. ಆಶ್ಚರ್ಯವೆಂಬಂತೆ ಲೋಕಸಭೆಗೆ ಆಯ್ಕೆಯಾಗಲೇಬೇಕು ಎಂಬ ಹಠ ಹೊಂದಿದ್ದ ಅವರು 1954ರಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲು ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ(8000 ಮತಗಳು) ಪರಾಭವಗೊಂಡಿದ್ದರು, ರಾಜ್ಯಸಭಾ ಸದಸ್ಯರಾಗಿಯೇ ಮುಂದುವರಿದಿದ್ದರು.

ಚುನಾವಣೆಗಳಲ್ಲಿ ಸೋಲು ಎಂಬುದು ಅಂಬೇಡ್ಕರರ ಬದುಕಿನ ಲಿಖಿತ ದಾಖಲೆ. ಆದರೆ ಹೋರಾಟದ ಬದುಕಿನಲ್ಲಿ ಗೆಲುವು ಅವರ ಅದೇ ಲಿಖಿತ ಬದುಕಿನ ವಾಸ್ತವದ ದಾಖಲೆ. ಸ್ವಾತಂತ್ರ್ಯಾನಂತರ ಸ್ವತಂತ್ರ ಭಾರತದ ಪ್ರಪ್ರಥಮ ಕಾನೂನು ಸಚಿವರಾಗಿ ನೇಮಕಗೊಂಡ ಅವರು ಸಂವಿಧಾನ ರಚನೆಯ ಕಾರ್ಯ ಪೂರ್ಣಗೊಂಡ ನಂತರ ಈ ದೇಶದ ಅರ್ಧದಷ್ಟು ಜನಸಂಖ್ಯೆ ಹೊಂದಿರುವ ಮಹಿಳೆಯರ ವಿಮೋಚನೆಗೆ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ನಿಟ್ಟಿನಲ್ಲಿ ಮಹಿಳೆಯರ ಹಕ್ಕುಗಳನ್ನು ಕುರಿತು “ಹಿಂದೂ ಸಮಿತಿ ಮಸೂದೆ” ಎಂಬ ಟೈಟಲ್ ನಲ್ಲಿ ಮಸೂದೆಯೊಂದನ್ನು ತಯಾರಿಸಿ ಸಂಸತ್ ನಲ್ಲಿ ಅದರ ಅನುಮೋದನೆಗೆ ಮಂಡಿಸಿದ್ದರು. ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು, ಆಸ್ತಿಯ ವಾರಸುಧಾರಿಕೆಯಲ್ಲಿ ಹೆಸರು ದಾಖಲಿಸುವಿಕೆ, ಪತಿಯಿಂದ ಜೀವನಾಂಶ, ಮದುವೆ ಮತ್ತು ವಿಚ್ಛೇದನದ ಹಕ್ಕು, ಹೆಣ್ಣು ಮಕ್ಕಳನ್ನು ದತ್ತು ಸ್ವೀಕರಿಸುವ ಹಕ್ಕು, ಅಪ್ರಾಪ್ತ ವಯಸ್ಸಿನ ಬಾಲಕಿಯರ ವಿವಾಹ ತಡೆ ವಿಚಾರ… ಈ ಎಲ್ಲವುಗಳನ್ನು ಆ ಮಸೂದೆ ಒಳಗೊಂಡಿತ್ತು. ದುರಂತ ಆ ಮಸೂದೆ ಅಂಗೀಕಾರಗೊಳ್ಳಲೇ ಇಲ್ಲ..! ಬೇಸತ್ತ ಅಂಬೇಡ್ಕರರು ತಮ್ಮ ಕಾನೂನು ಮಂತ್ರಿ ಪದವಿಗೂ ರಾಜೀನಾಮೆ ಕೊಡುತ್ತಾರೆ. ವಿಷಾದವೆಂದರೆ ಈಗ ತಮ್ಮ ಈ ಎಲ್ಲಾ ಹಕ್ಕುಗಳನ್ನು ಎಂಜಾಯ್ ಮಾಡುತ್ತಿರುವ ಭಾರತದ ಸಮಸ್ತ ಮಹಿಳೆಯರು ತಮಗೋಸ್ಕರ ಈ ಹಕ್ಕುಗಳನ್ನು ತಯಾರಿಸಿದವರು ಡಾ. ಅಂಬೇಡ್ಕರ್ ಎಂಬುದನ್ನು ಅರಿತುಕೊಳ್ಳಲೋಗುವುದೇ ಇಲ್ಲ, ಸ್ಮರಿಸುವುದೇ ಇಲ್ಲ.

ಬಾಬಾಸಾಹೇಬರ ಬದುಕಿನ ಕೊನೆಯ ಅರ್ಥಪೂರ್ಣ ಘಟ್ಟ ಆಗಲೇ ಹೇಳಿದ ಹಾಗೆ ಬೌದ್ಧ ಧರ್ಮ ಸ್ವೀಕಾರ. 1956 ಅಕ್ಟೋಬರ್ 14ರಂದು ಕೋಟ್ಯಂತರ ಶೋಷಿತರ ಬಿಡುಗಡೆಯ ಹಾದಿ ಎಂಬಂತೆ ಐದು ಲಕ್ಷ ಅನುಯಾಯಿಗಳ ಜೊತೆ ನಾಗಪುರದ ಹಾಲಿ ದೀಕ್ಷಾ ಭೂಮಿಯಲ್ಲಿ ಡಾ.ಅಂಬೇಡ್ಕರರು ಬೌದ್ಧ ಧರ್ಮ ಸ್ವೀಕರಿಸಿದರು. ಭಾರತದ ಇತಿಹಾಸದಲ್ಲಿ ಹೂತು ಹೋಗಿದ್ದ ಬೌದ್ಧ ಧರ್ಮದ ಚಕ್ರವನ್ನು ಮತ್ತೆ ಚಲಿಸುವಂತೆ ಮಾಡಿದ್ದರು. ಈ ನಿಟ್ಟಿನಲ್ಲಿ ಅವರು ಬೌದ್ಧ ಧರ್ಮವನ್ನು ಬರೇ ಸ್ವೀಕರಿಸಿದ್ದಷ್ಟೇ ಅಲ್ಲ ಅದಕ್ಕೊಂದು ಪುನರ್ರೂಪಿತ ರೂಪವನ್ನು ಕೂಡ ಕೊಡಲು ಯತ್ನಿಸಿದ್ದರು. ಬೈಬಲ್ ಮಾದರಿಯಲ್ಲಿ ಅದಕ್ಕೋಸ್ಕರ “ಬುದ್ಧ ಮತ್ತು ಆತನ ಧಮ್ಮ” ಎಂಬ ಧರ್ಮ ಬೋಧನೆಯ ಗ್ರಂಥವನ್ನು ಕೂಡ ರಚಿಸಿದ್ದರು. ಅಂದಹಾಗೆ ಬೌದ್ಧ ಧರ್ಮ ಸ್ವೀಕರಿಸಿದ ಆ ದಿನ ಡಾ.ಅಂಬೇಡ್ಕರರು ಹೇಳುವುದು “ನನಗಿಂದು ನರಕದಿಂದ ಬಿಡುಗಡೆಗೊಂಡ ಅನುಭವವಾಗುತ್ತಿದೆ” ಎಂದು!

ಕೊನೆಯ ಮಾತು:
ಭಾರತದಲ್ಲಿ ಬೌದ್ಧಧರ್ಮವನ್ನು ವ್ಯಾಪಕವಾಗಿ ಪಸರಿಸುವುದು, ತನ್ನ ಅನುಯಾಯಿಗಳನ್ನು ಅತ್ತ ಹೆಚ್ಚು ಹೆಚ್ಚು ಕರೆತರುವುದು ಬಾಬಾಸಾಹೇಬರ ಗುರಿಯಾಗಿತ್ತು. ಆದರೆ ಸಮಯ ಅದಕ್ಕೆ ಅವಕಾಶ ಕೊಡಲಿಲ್ಲ. 1956 ಡಿಸೆಂಬರ್ 5 ರ ರಾತ್ರಿ ಮಲಗಿದವರು ಬೆಳಿಗ್ಗೆ ಏಳಲೇ ಇಲ್ಲ. ಡಿಸೆಂಬರ್ 6 ಬಾಬಾಸಾಹೇಬ್ ಅಂಬೇಡ್ಕರ್ ನಿಧನರಾಗಿದ್ದರು. ಬೌದ್ಧ ಭಾಷೆಯಲ್ಲಿ ಹೇಳುವುದಾದರೆ ಪರಿನಿರ್ವಾಣ ಹೊಂದಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊನೆಯ ಹತ್ತು ವರ್ಷಗಳು ಅಭೂತಪೂರ್ವ ಸಾಧನೆಯ ವರ್ಷಗಳು. ಹೋರಾಟದ ಬದುಕಿನಲ್ಲಿ ತಾವು ಏನೇನು ಅಂದುಕೊಂಡಿದ್ದರೊ ಅದೆಲ್ಲವನ್ನು ಕಾರ್ಯರೂಪಕ್ಕೆ ತಂದ ವರ್ಷಗಳು ಅವು. ಕಾನೂನು ಮಂತ್ರಿಯಾಗಿ, ಸಂವಿಧಾನ ಶಿಲ್ಪಿಯಾಗಿ, ಮಹಿಳೆಯರ ವಿಮೋಚಕನಾಗಿ, ಬೌದ್ಧ ಧರ್ಮದ ಪುನರುತ್ಥಾರಕನಾಗಿ, ಶೋಷಿತ ಸಮುದಾಯಗಳನ್ನು ಜಾತಿ ವ್ಯವಸ್ಥೆಯಿಂದ ವಿಮೋಚನೆಗೊಳಿಸುವ ಮಾರ್ಗದಾತನಾಗಿ ಆ ಹತ್ತು ವರ್ಷಗಳು ಅವರ ಸಾಧನೆಯ ಮುಕುಟವಾಗಿ ಉಳಿಯುತ್ತವೆ, ಕೀರ್ತಿ ಕಳಸವನ್ನು ಮುಗಿಲೆತ್ತರಕ್ಕೆ ಏರಿಸುತ್ತವೆ.

ರಘೋತ್ತಮ ಹೊ ಬ, ಚಿಂತಕರು

ಸುಪ್ರೀಂ ಕೋರ್ಟ್‌ನ ಮೊದಲ ಅಂಬೇಡ್ಕರ್‌ ಪ್ರತಿಮೆ ಅನಾವರಣ
ನವದೆಹಲಿ: ಸುಪ್ರೀಂ ಕೋರ್ಟಿನಲ್ಲಿ ಸಂವಿಧಾನ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್‌ ಅವರ ಪ್ರತಿಮೆ ಅನಾವರಣಗೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಮತ್ತು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಅಂಬೇಡ್ಕರ್ ಅವರ 7 ಅಡಿ ಎತ್ತರದ ಪ್ರತಿಮೆಯನ್ನು ನವೆಂಬರ್ 26, ಭಾನುವಾರದಂದು ಸುಪ್ರೀಂ ಕೋರ್ಟ್‌ನಲ್ಲಿ ಉದ್ಘಾಟಿಸಿದರು.

ಅಧ್ಯಕ್ಷ ಮುರ್ಮು ಅವರು ಸಂವಿಧಾನ ದಿನದ ಅಂಗವಾಗಿ ಮೊದಲ ಕಾನೂನು ಸಚಿವ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವಕೀಲಿ ಉಡುಗೆ ತೊಟ್ಟಿರುವ, ಎಡಗೈಯಲ್ಲಿ ಎಡಗೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದಿರುವ ಪ್ರತಿಮೆಯನ್ನು ಸುಪ್ರೀಂ ಕೋರ್ಟ್ ಆವರಣದ ಮುಂಭಾಗದ ಉದ್ಯಾನದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಪ್ರತಿಮೆ ಅನಾವರಣಗೊಳಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸಿಜೆಐ ಡಿವೈ ಚಂದ್ರಚೂಡ್

ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿ ಮೊಟ್ಟಮೊದಲ ಅಂಬೇಡ್ಕರ್ ಪ್ರತಿಮೆ

ಡಾ ಬಿಆರ್ ಅಂಬೇಡ್ಕರ್‌ ಅವರ ಈ ಪ್ರತಿಮೆಯನ್ನು ಶಿಲ್ಪಿ ನರೇಶ್ ಕುಮಾವತ್ ನಿರ್ಮಿಸಿದ್ದಾರೆ. ಸುಪ್ರೀಂ ಕೋರ್ಟ್ ಸಂಕೀರ್ಣದಲ್ಲಿ ಇಲ್ಲಿಯವರೆಗೆ ಎರಡು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಒಂದು ಭಾರತೀಯ ಮೂಲದ ಬ್ರಿಟಿಷ್ ಕಲಾವಿದ ಚಿಂತಾಮೋನಿ ಕರ್ ರಚಿಸಿದ ಮದರ್ ಇಂಡಿಯಾದ ಭಿತ್ತಿಚಿತ್ರ. ಇನ್ನೊಂದು ಬ್ರಿಟಿಷ್ ಶಿಲ್ಪಿ ವಿನ್ಯಾಸಗೊಳಿಸಿದ ಮಹಾತ್ಮಾ ಗಾಂಧಿಯವರ ಪ್ರತಿಮೆ.

ಸಂವಿಧಾನ ರಚನಾ ಸಮಿತಿಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಮತ್ತು ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಂಬೇಡ್ಕರ್ ಅವರ 132 ನೇ ಜನ್ಮದಿನವನ್ನು ಈ ವರ್ಷವೂ ಆಚರಿಸಲಾಗುತ್ತಿದೆ. ಡಾ ಅಂಬೇಡ್ಕರ್ ಅವರ ಜನ್ಮದಿನದ (ಏಪ್ರಿಲ್ 14 ) ಮುನ್ನಾದಿನದಂದು (ಏಪ್ರಿಲ್ 15), ವಕೀಲರಾದ ಪ್ರತೀಕ್ ಬೊಂಬಾರ್ಡ್ ಅವರು ಅಂಬೇಡ್ಕರ್ ಅವರ ಪ್ರತಿಮೆಯ ಬೇಡಿಕೆಯನ್ನು ಪ್ರಸ್ತಾಪಿಸಿ ಸಿಜೆಐ ಚಂದ್ರಚೂಡ್ ಅವರಿಗೆ ಜ್ಞಾಪಕ ಪತ್ರವನ್ನು ಸಲ್ಲಸಿದ್ದರು.

ಸುಪ್ರೀಂ ಕೋರ್ಟ್‌ನೊಳಗೆ ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಮಹಾತ್ಮ ಗಾಂಧಿಯವರ ಪ್ರತಿಮೆಗಳಿವೆ. ಆದರೆ ಕೋಟ್ಯಂತರ ದೀನದಲಿತರ, ಅಂಚಿಗೆ ತಳ್ಳಲ್ಪಟ್ಟ ಜನರ ವಿಮೋಚಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಇಲ್ಲ. 70 ರ ದಶಕದಲ್ಲಿ ದಾದಾಸಾಹೇಬ್ ಗಾಯಕ್ವಾಡ್ ಅವರ ನೇತೃತ್ವದಲ್ಲಿ, ಅಂಬೇಡ್ಕರ್ವಾದಿಗಳು ಸಂಸತ್ತಿನ ಒಳಗೆ ಅವರ ಪ್ರತಿಮೆಯನ್ನು ಸ್ಥಾಪಿಸಲು ಹೋರಾಟ ನಡೆಸಿದ್ದರು.

ಮನುಷ್ಯತ್ವದೊಡನೆ ಮುಖಾಮುಖಿಯಾಗುವ “ಮಾಮನ್ನನ್” – -ಡಾ.ಚಮರಂ ಅವರ ಬರಹದಲ್ಲಿ..
“ಭಾರತದ ಇತಿಹಾಸವು ಬ್ರಾಹ್ಮಣತ್ವಕ್ಕೂ ಬೌದ್ಧತ್ವಕ್ಕೂ ನಡೆದ ಮಾರಣಾಂತಿಕ ಸಂಘರ್ಷದ ಕತೆಯಾಗಿದೆ” ಎನ್ನುತ್ತಾರೆ ಬಾಬಾಸಾಹೇಬ್ ಅಂಬೇಡ್ಕರ್.
(The history of India was mortal conflict between Buddhism and Brahminism)
ಮುಂದುವರೆದು ಬ್ರಾಹ್ಮಣತ್ವವನ್ನು ಬಿಡಿಸಿ ಹೇಳುವ ಬಾಬಾಸಾಹೇಬರು “Brahminism means the nagation of equality, fraternity and freedom
(ಸಮತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯಗಳನ್ನು ನಿರಾಕರಿಸುವುದೇ ಬ್ರಾಹ್ಮಣ್ಯ)
ಎಂದು ಹೇಳುತ್ತಾ: ಬ್ರಾಹ್ಮಣತ್ವದ ಜನಕರು ಬ್ರಾಹ್ಮಣರೇ ಆದರೂ ಅದು ಇಂದು ಎಲ್ಲರೊಳಗೂ ಹಾಸುಹೊಕ್ಕಾಗಿದೆ. ಜನರೊಳಗೆ ಬ್ರಾಹ್ಮಣತ್ವವನ್ನು ಒಂದು ದೈವನಿಯಮವೆಂಬಂತೆ ಬಿತ್ತಿದ ಕೀರ್ತಿ ಬ್ರಾಹ್ಮಣರಿಗೇ ಸಲ್ಲುತ್ತದೆ. ಎಂಬ ಬಹಳ ಸೂಕ್ಷ್ಮ ಎಳೆಯಿಂದ ಈ ದೇಶದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸಂರಚನೆಯನ್ನು ಬಾಬಾಸಾಹೇಬರು ಗ್ರಹಿಸಿ ಈ ದೇಶದ ಮೂಲನಿವಾಸಿಗಳು ಸಾಗಬೇಕಾದ ಸೌಹಾರ್ಧಯುತ ಮಾರ್ಗವನ್ನು ತೋರಿದ್ದಾರೆ.

ಈ ಹಿನ್ನೆಲೆಯಲ್ಲಿ ಇತ್ತೀಚಗೆ ಬಿಡುಗಡೆಗೊಂಡಿರುವ ತಮಿಳು ಚಿತ್ರ ” ಮಾಮನ್ನನ್” ತೆರೆದುಕೊಳ್ಳುತ್ತದೆ. ತರುಣ ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಮಹತ್ವಾಕಾಂಕ್ಷೆಯ ಚಿತ್ರವಿದು. ಮನುಷ್ಯತ್ವಕ್ಕಿಂತ ತಮ್ಮ ಜಾತಿಪ್ರತಿಷ್ಟೆಯೇ ಮುಖ್ಯವೆನ್ನುವ ಜಾತಿರೋಗಗ್ರಸ್ತರಿಗೆ ಇದೊಂದು ಪಾಠವೆಂದೇ ಭಾವಿಸಿದರೆ ಅದು ತಪ್ಪೇನಲ್ಲ.
ಜಾತಿಯ ದರ್ಪ, ಜಾತಿಯತೆಯ ಹೆಗ್ಗಳಿಕೆ ತಲೆಮಾರುಗಳಿಂದ ಹರಿದು ಬರುವ ಅನುವಂಶಿಕ ರೋಗವಾಗಿದೆ ಎಂಬುದನ್ನು ಮಾಮನ್ನನ್ ಚಿತ್ರವು ದರ್ಶಿಸುತ್ತದೆ.
ಒಂದೇ ಕತೆಯೊಳಗಡೆ ಹಲವು ಪದರಗಳಿರುವ ವಿಶೇಷವೂ ವಿಶಿಷ್ಟವೂ ಆಗಿರುವ ಸಿನಿಮಾ ಮಾಮನ್ನನ್.

ಹಿಂದೆ ಇದೇ ತಮಿಳು ತೆರೆಯಲ್ಲಿ ಬಂದ ಚಿನ್ನಗೌಂಡರ್, ನಾಟ್ಟಾಮೈ, ತೇವರ್ ಮಗನ್ ಸಿನಿಮಾಗಳು ನಮಗೆ ದಾಟಿಸಿದ ಧೋರಣೆಗಳೇನು? ಈಗ ಹೊಸತಲೆಮಾರಿನ ಪಾ.ರಂಜಿತ್, ವೆಟ್ರಿಮಾರನ್, ಮಾರಿ ಸೆಲ್ವರಾಜ್ ತರದವರು ಕಟ್ಟುತ್ತಿರುವ ಕಾಲಾ, ಕಬಾಲಿ, ಸಾರ್ಪಟ್ಟ ಪರಂಬರೈ, ವಿಸಾರಣೈ, ವಿಡುತಲೈ, ವಡಚೆನೈ, ಮದ್ರಾಸ್, ಅಸುರನ್, ಪರಿಯೇರಂ ಪೆರುಮಾಳ್, ಕರ್ಣನ್ ಮತ್ತು ಮಾಮನ್ನನ್ ಚಿತ್ರಗಳು ಧ್ವನಿಸುವ ನೀತಿಯೇನು? ಎಂದು ನೋಡಿದರೆ ಇದು ಅಂದು ಬಾಬಾಸಾಹೇಬರು ಹೇಳಿದ ಕ್ರಾಂತಿ ಮತ್ತು ಪ್ರತಿಕ್ರಾಂತಿಯಾಗಿಯೇ ಕಾಣುತ್ತಿದೆ.

ಮಾರಿ ಸೆಲ್ವರಾಜ್ ತನ್ನ ಹಿಂದಿನ ಪರಿಯೇರಂ ಪೆರುಮಾಳ್ ಮತ್ತು ಕರ್ಣನ್ ಚಿತ್ರಗಳಲ್ಲಿ ಜಾತಿಯ ಸಾಮಾಜಿಕ ಪದರಗಳನ್ನು ಒಡೆದು ಜಾತಿವಾದಿಗಳ ಎದೆಗೆ ಇರಿದಿದ್ದರು.
ಈಗಿನ ಮಾಮನ್ನನ್ ಚಿತ್ರದಲ್ಲಿ ಸಾಮಾಜಿಕ, ಶೈಕ್ಷಣಿಕ ವಿಷಯಗಳೊಡನೆಯೇ ಸುತ್ತಿಕೊಂಡಿರುವ ರಾಜಕೀಯ ಪದರವನ್ನೂ ಬಿಡಿಸಿ ಮೇಲುಧೋರಣೆಗೆ ಮೆಟ್ಟಿನಲ್ಲಿ ಬಾರಿಸಿದ್ದಾರೆ! ಅದೇ ಸಮಯಕ್ಕೆ ಮೇಲುಧೋರಣೆಯ ಗುಲಾಮರಂತೆ ವರ್ತಿಸುವ ಮೀಸಲು ಕ್ಷೇತ್ರದ ರಾಜಕೀಯ ನಾಯಕರ ದುರ್ಬಲ ಮನಸ್ಥಿತಿಗೂ, ಮೇಲು ಜನರ ದಾಳವಾಗುವ ದಲಿತ ಸಂಘಟನೆಗಳ ದಡ್ಡತನಕ್ಕೂ ಚಾಟಿ ಬೀಸಿದ್ದಾರೆ!

ಯಾವ ಶಿಕ್ಷಣವನ್ನು ಬ್ರಾಹ್ಮಣರು ಶೂದ್ರಾತಿಶೂದ್ರರಿಂದ ದೂರವಿರಿಸಿದ್ದರೋ ಅದು ಬಸವಾದಿ ಶರಣರು ಮತ್ತು ಫುಲೆಯವರ ಅಕ್ಷರಕ್ರಾಂತಿಯ ಫಲವಾಗಿ ಶೂದ್ರಾತಿಶೂದ್ರರಿಗೆ ತಲುಪಿತು.
ಅದನ್ನು ದಕ್ಕಿಸಿಕೊಂಡ ಅಂಬೇಡ್ಜರರು “ಶಿಕ್ಷಣವೆಂದರೆ ಹುಲಿಯ ಹಾಲು” ಅದನ್ನು ನಮ್ಮ ಜನ ಕಲಿತು ಗರ್ಜಿಸಬೇಕೆಂದು ಬಯಸಿದ್ದರು. ಸಂವಿಧಾನದ ನಂತರ ನಮಗೆ ಹಕ್ಕಾಗಿ ದೊರೆತ ಶಿಕ್ಷಣದಿಂದ ಭಯಭೀತರಾದ ಬ್ರಾಹ್ಮಣಶಾಹಿ ಜನ ಶಿಕ್ಷಣವನ್ನು ಉದ್ಯಮವಾಗಿಸಿ ಶೂದ್ರಾತಿಶೂದ್ರರಿಗೆ ಎಟುಕದಂತೆ ಮಾಡುತ್ತಿದ್ದಾರೆ. ಅದರ ವಿರುದ್ದ ನಡೆಸುವ ಉಚಿತ ಶಿಕ್ಷಣ/ಉಚಿತ ತರಬೇತಿ ಎಂಬುದು ಹೇಗೆ ಅಕ್ಷರದ ಮೇಲೆ ದಬ್ಬಾಳಿಕೆ ಮಾಡುತ್ತದೆ. ಅದನ್ನು ದಮನಿತರು ದಕ್ಕಿಸಿಕೊಳ್ಳುವಾಗ ತೆರೆದುಕೊಳ್ಳುವ ಸಾಮಾಜಿಕ ಮತ್ತು ರಾಜಕೀಯ ಅಸಮಾನತೆಯ ಕ್ರೌರ್ಯಗಳ ವಿವಿಧ ಪದರುಗಳೇ ಮಾಮನ್ನನ್ ಚಿತ್ರದ ತಿರುಳು.
“ಎಲ್ಲರೂ ಸಮಾನರೆಂಬ ಜೀವನಕ್ರಮ ನಮ್ಮದಾಗಬೇಕು” ಎಂಬ ಸಂವಿಧಾನದ ಆಶಯವನ್ನು ಹೇಳಲು ಮಾರಿ ಸೆಲ್ವರಾಜ್ ಕಟ್ಟಿರುವ ಈ ಪರಿಣಾಮಕಾರಿ ಕತೆಯಲ್ಲಿ ಯಾವುದೋ ಒಂದು ಘಟನೆಯಿಲ್ಲ…
ಯಾರದೋ ಒಬ್ಬ ವ್ಯಕ್ತಿಯ ಕತೆಯಿಲ್ಲ.
ಒಟ್ಟಾರೆಯಾಗಿ ಅಲ್ಲಲ್ಲಿ ಆಗಾಗ ನಡೆದಿರುವ ನಡೆಯುತ್ತಿರುವ ಜಾತಿಕ್ರೌರ್ಯದ ಅಮಾನುಷ ಘಟನೆಗಳನ್ನು ಮಾಮನ್ನನ್ ಕತೆಯೊಳಗೆ ಸೊಗಸಾಗಿ ಮಿಳಿತಗೊಳಿಸಿ ಪಾತ್ರಗಳನ್ನು ಸೃಷ್ಟಿಸಿ ಜೀವಂತ ಎನಿಸುವಂತೆ ಕಟ್ಟಿಕೊಟ್ಟಿದ್ದಾರೆ. ಹಾಗೆಂದು ಇದೊಂದು ಕಾಲ್ಪನಿಕವಾದ ಕತೆಯಲ್ಲ. ಎಲ್ಲವೂ ನೈಜಘಟನೆಗಳೇ.

ಮೀಸಲು ಕ್ಷೇತ್ರಗಳಲ್ಲಿ ಜನನಾಯಕ ಹುಟ್ಟುವುದಿಲ್ಲ ಎಂಬ ಅಂಬೇಡ್ಕರ್ ವಾಣಿ. ಈ ಚಿತ್ರವನ್ನು ನೋಡಿದಾಗ ನಮಗೆ ಅರ್ಥವಾಗುತ್ತದೆ. ಅಂಬೇಡ್ಕರ್ ವಿಚಾರಧಾರೆಯನ್ನು ಅರಿಯದ ಜಾತಿ ಸಂಘಟನೆಗಳು ಹೇಗೆ ದುಷ್ಟರ ದಾಳವಾಗುತ್ತವೆ ಎಂಬುದನ್ನು ಚಿತ್ರದಲ್ಲಿ ಬಹಳ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ.

ಇಂತಹ ಐತಿಹಾಸಿಕ ಜಾತಿಯಾಧಾರಿತ ಸಾಮಾಜಿಕ ವಿಷಯಗಳನ್ನು ನೇರವಾಗಿ ಸಿನಿಮಾ ಪ್ರತಿಪಾದಿಸುತ್ತಿದ್ದರೂ ಅನೇಕ ನಾಜೂಕುದಾರರು ಇದೊಂದು ಅಪ್ಪಮಗನ ಬಾಂಧವ್ಯದ ಚಿತ್ರ. ಕಾಮಿಡಿ ನಟನೊಬ್ಬನ ಗಂಭೀರ ಚಿತ್ರ ಎಂಬಂತೆ ಬಿಂಬಿಸುತ್ತಾ ಅದರ ಆಶಯವನ್ನು ದಿಕ್ಕುತಪ್ಪಿಸುವ ಯತ್ನವನ್ನು ಜಾತಿವಾದಿಗಳು ಮಾಡುತ್ತಿದ್ದಾರೆ. ಇದರಲ್ಲಿನ ತಾಂತ್ರಿಕ ನ್ಯೂನತೆಗಳೇನೇ ಇರಲಿ ಇದು ಅಪ್ಪಟ ದೇಸಿಕತೆ ಮತ್ತು ದಮನಿತರ ಸ್ವಾಭೀಮಾನವನ್ನು ಬಡಿದೆಬ್ಬಿಸುವ ಚಿತ್ರ. ಇದರಿಂದಾಚೆ ಕೂದಲು ಸೀಳಿ ವಿಶ್ಲೇಷಿಸುವ ಹಂತಕ್ಕೆ ನಾನು ಹೋಗಲಾರೆ.

ಇಂತಹ ಚಿತ್ರ ಯೋಚಿಸಲು ಮತ್ತು ನಿರ್ಮಿಸಲು ಎಂಟೆದೆಯ ಧೈರ್ಯ ಮತ್ತು ಸಾಮಾಜಿಕ ಬದ್ದತೆ ಬೇಕು. ಅದನ್ನು ಬಹಳ ಸಮರ್ಥವಾಗಿ ಮಾರಿ ಸೆಲ್ವರಾಜ್ ಮತ್ತು ಉದಯನಿಧಿ ಸ್ಟಾಲಿನ್ ನಿರ್ವಹಿಸಿದ್ದಾರೆ.

ವಡಿವೇಲ್ ಎಂಬ ಸುಪ್ರಸಿದ್ದ ಹಾಸ್ಯನಟನೊಬ್ಬನಿಗೆ ಜೀವಮಾನದ ಅಪೂರ್ವ ಅವಕಾಶ ಎಂಬಂತಹ ಗಂಭೀರ ಪಾತ್ರ. ಅದರಲ್ಲೂ ಕತಾನಾಯಕನ ಪಾತ್ರವನ್ನೇ ನೀಡಿ ವಡಿವೇಲ್ ಒಳಗಿನ ಅಪ್ರತಿಮ ಕಲಾವಿದನನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ.
ಫಹಾದ ಫಾಜಿಲ್ ಭಾರತ ಚಿತ್ರರಂಗದ ನಿಜವಾದ ನಟರಾಕ್ಷಸ!
ಇಂತಹ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ! ಯಶಸ್ಸಿನ ತುತ್ತತುದಿಯಲ್ಲಿರುವ ಕೀರ್ತಿ ಸುರೇಶ್. ಡಿಎಂಕೆ ಸರ್ಕಾರದ ಯುವಜನ ಖಾತೆಯ ಮಂತ್ರಿಯಾಗಿರುವ ಉದಯನಿಧಿ ಇಂತಹ ಚಿತ್ರದ ನಾಯಕ ಮತ್ತು ನಿರ್ಮಾಪಕ! ಈತ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ. ಇದು ಈ ಚಿತ್ರದ ವಿಚಿತ್ರವೆನಿಸುವ ಕಾಂಬಿನೇಷನ್.

ಈ ಚಿತ್ರದ ಕಲಾವಿದರ ಈ ವಿಚಿತ್ರ ಸಂಯೋಜನೆಯೇ ಈ ಪರಿಯಾದ ಯಶಸ್ಸಿಗೆ ಕಾರಣವಾಗಿದೆ. ಮಾರಿ ಸೆಲ್ವರಾಜ್ ಹೇಳಬೇಕಾದ್ದನ್ನು ಢಾಳಾಗಿ, ಅದ್ದೂರಿಯಾಗಿ ಹೇಳುವ ಮೂಲಕ ಜನಸಾಮಾನ್ಯರೆಲ್ಲರನ್ನೂ ತಲುಪಿದ್ದಾರೆ.

ತಮಿಳುನಾಡಿನಲ್ಲಿ ಈ ಚಿತ್ರವೀಗ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಈ ಚಿತ್ರ ಬಿಡುಗಡೆ ಮಾಡದಂತೆ ಒಂದು ವರ್ಗದ ಜನ ತಡೆಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಡಿಎಂಕೆ ಅಧಿಕಾರದಲ್ಲಿದ್ದ ಕಾರಣಕ್ಕೂ ಸ್ಟಾಲಿನ್ ಚಿತ್ರವಾದ ಕಾರಣಕ್ಕೂ ಸಿನಿಮಾ ತೆರೆಕಂಡಿದೆ. ತಪ್ಪದೇ ಎಲ್ಲರೂ ನೋಡಲೇಬೇಕಾದ ಸಿನಿಮಾ ಇದು.

ಸಾವಿರಾರು ವರ್ಷಗಳ ಭಾರತೀಯ ಸಾಮಾಜೋ-ಸಾಂಸ್ಕೃತಿಕ ಸಂರಚನೆಯು ಬಹಳ ಅಸಹ್ಯಕರವಾದುದು. ಈ ಅಸಹ್ಯಗಳನ್ನು ಸರ್ವರೀತಿಯಲ್ಲೂ ಮುಚ್ವಿಟ್ಟು ಆ ಎಲ್ಲಾ ವಿಕೃತಿಗಳಿಗೂ ಪರಂಪರೆ, ವೇದ ಉಪನಿಷತ್ತು, ಸ್ಮೃತಿ, ಧರ್ಮ ಮತ್ತು ದೇವರುಗಳ ಬಣ್ಣಬಳಿದು ಅಸಮಾನತೆ, ಅಗೌರವ, ಅವಮಾನ ಗುಲಾಮಗಿರಿಗಳನ್ನೇ ಜೀವನಕ್ರಮವೆಂದು ಪರಿಭಾವಿಸುವ ಮಟ್ಟಕ್ಕೆ ಜನಸಮುದಾಯಗಳ ಮೆದುಳನ್ನು ಕಂಡಿಷನ್ ಮಾಡಿರುವ ಬ್ರಾಹ್ಮಣ್ಯದ ಹುನ್ನಾರವನ್ನು, ಮಹಾತ್ಮಫುಲೆ, ಪೆರಿಯಾರ್ ಮತ್ತು ಬಾಬಾಸಾಹೇಬರು ಬಹಳ ಕರಾರುವಕ್ಕಾಗಿ ಬಯಲಿಗೆಳೆದರು.
ಫುಲೆಯವರ “ದ ಸ್ಲೇವರಿ” ಪೆರಿಯಾರರ ಬ್ರಾಹ್ಮಣ್ಯ ಕುರಿತ ಸರಣಿ ಬರಹಗಳು, ಬಾಬಾಸಾಹೇಬರ “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ” “ಬ್ರಾಹ್ಮಣ್ಯದ ದಿಗ್ವಿಜಯ” ಕೃತಿಗಳು ನಿಜವಾದ ಗತ ಭಾರತದ ಇತಿಹಾಸದ ಚಿತ್ರಣಗಳನ್ನು ಕಟ್ಟಿಕೊಡುತ್ತವೆ.

ಇದೆಲ್ಲವನ್ನೂ ಜಾಗೃತ ಹೊಸತಲೆಮಾರಿನ ಕೆಲವು ಪ್ರಜ್ಞಾವಂತ ಬರಹಗಾರರು, ಕಲಾವಿದರು, ಚಿಂತಕರು, ಹೋರಾಟಗಾರರು ಖಡಕ್ಕಾಗಿ ಗುರ್ತಿಸುತ್ತಾ ವಿವಿಧ ಆಯಾಮಗಳಲ್ಲಿ ಈ ತಾರತಮ್ಯ ನೀತಿಯನ್ನು ಭಿತ್ತರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮಾರಿ ಸೆಲ್ವರಾಜ್ ಬೆಳ್ಳಿಪರದೆಯ ಮೇಲೆ ತನ್ನ ಇತಿಹಾಸದ ಅನ್ಯಾಯವನ್ನು ಪ್ರತಿಭಟಿಸುತ್ತಾ ಪಾಪತ್ಮರ ಘೋರ ಅಪರಾಧಗಳನ್ನು ಅವರ ಮುಖಕ್ಕೆ ರಾಚುವಂತೆ ಹಿಡಿಯುವ ಪ್ರಯತ್ನವನ್ನು ಬಹಳ ಸಂಯಮದಿಂದ ಮಾಡುತ್ತಿದ್ದಾರೆ.

ಮೊದಲ ಚಿತ್ರ “ಪರಿಯೇರಂ ಪೆರುಮಾಳ್” ನಂತರದ “ಕರ್ಣನ್” ಮತ್ತೀಗಿನ “ಮಾಮನ್ನನ್” ಇವೆಲ್ಲದರಲ್ಲೂ ಬ್ರಾಹ್ಮಿನಿಸಂ ಸೃಷ್ಟಿಸಿರುವ ಇಂತಹ ಸಾಮಾಜಿಕ ಸಂರಚನೆಯನ್ನು ಒಡೆಯುತ್ತಲೇ ಬಂದಿದ್ದಾರೆ.
“ಯಾಕೆ ಎಲ್ಲಾ ಸಿನಿಮಾದಲ್ಲೂ ನೀವು ಜಾತಿಯನ್ನೇ ತರುತ್ತೀರಲ್ಲ?’ ಎಂಬ ಪತ್ರಕರ್ತರ ಮಾತಿಗೆ ಮಾರಿ ಸೆಲ್ವರಾಜ್ ಹೇಳುವ ಉತ್ತರ. “ಇಡೀ ನಾಡಿನಲ್ಲಿ ಜನ ಸಾಮಾಜಿಕ ಜೀವನದಲ್ಲಿ ಮತ್ತು ರಾಜಕಾರಣದಲ್ಲಿ ಇರುವ ಜಾತಿ ಕುರಿತು ಮಾತಾಡುತ್ತಲೇ ಇದ್ದಾರೆ. ಜಾತಿ ಬಳಸಿ ಅಧಿಕಾರ ಕಬಳಿಸುತ್ತಿದ್ದಾರೆ. ಜಾತಿ ಹೆಸರಲ್ಲಿ ಸಂಘರ್ಷ ಮರ್ಯಾದೆ ಹತ್ಯೆಗಳು ನಡೆಯುತ್ತಿದ್ದಾವೆ. ನಾನು ಇಂತಹ ಸೂಕ್ಷ್ಮಗಳನ್ನು ಚಿತ್ರಮಾಧ್ಯಮದಲ್ಲಿ ಹೇಳಿದಾಗ ಮಾತ್ರ ಯಾಕೆ ಅದನ್ನೇ ಪಾಯಿಂಟ್ ಮಾಡ್ತೀರಿ!? ಹೌದು ಇದೆಲ್ಲವೂ ನಾನು ಅನುಭವಿಸಿದ ನೋವುಗಳೇ ಅದನ್ನೇ ಬೇರೆ ಬೇರೆ ರೂಪದಲ್ಲಿ ಹೇಳುತ್ತೇನೆ. ಒಂದಷ್ಟು ಯಶಸ್ವಿ ಚಿತ್ರಕೊಟ್ಟು ಆ ನಂತರ ಹೇಳಬಹುದಾಗಿತ್ತು ಎಂದು ಕೆಲವರು ಹೇಳುತ್ತಾರೆ. ಆದರೆ ನಾನು ಈಗಲೇ ಹೇಳಬೇಕು. ನಾಳೆ ನಾನಿರುತ್ತೇನಾ ಗೊತ್ತಿಲ್ಲ. ಆದರೆ ಅದಕ್ಕಾಗಿ ನಾನು ಕಾಯಲಾರೆ. ಅವಕಾಶ ಸಿಕ್ಕಾಗೆಲ್ಲವೂ ನಾನು ಸಾಧ್ಯವಾದಷ್ಟು ಇದೆಲ್ಲವನ್ನೂ ಹಲವು ರೂಪದಲ್ಲಿ, ಹಲವು ರೂಪಕಗಳಲ್ಲಿ ಹೇಳಿಯೇ ತೀರುತ್ತೇನೆ. ಹೇಳಬೇಕಾದ್ದು ಇನ್ನೂ ಬಹಳವಿದೆ.

ಎಲ್ಲರೂ ಜಾತಿಯನ್ನು ತಮ್ಮ ಅನುಕೂಲಕ್ಕಾಗಿ ಅಸ್ತ್ರವಾಗಿ ಬಳಸುವಾಗ ನಾನು ಮಾತ್ರ ನನ್ನ ಸಮಾನ ಅವಕಾಶಕ್ಕಾಗಿ ಯಾಕೆ ಜಾತಿಯನ್ನು ಚಿತ್ರದ ಮೂಲಕ ಹೇಳಬಾರದು? ಇದೆಲ್ಲವೂ ನಾನು ಅನುಭವಿಸಿದ ನೋವು ಕೆಳಸ್ತರದಿಂದ ನೋವನ್ನು ಅನುಭವಿಸಿರುವ ನಾನು ಅದನ್ನು ಹೇಳಲೇಬೇಕಲ್ಲವೇ!?” ಎಂದು ಬಹಳ ಪ್ರಬುದ್ದವಾಗಿ ಹೇಳುತ್ತಾರೆ.

ಹೌದು ನಾವು ಹೇಳಬೇಕಾದ್ದು ಇನ್ನೂ ಬಹಳವಿದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಇಂದಲ್ಲದಿದ್ದರೆ ಇನ್ಯಾವಾಗ? ಇನ್ನೆಷ್ಟು ದಿನ ಇದ್ದಂತಿರು ಇದೇ ನಮ್ಮ ಸಂಸ್ಕೃತಿ ಎಂದು ಒತ್ತಡ ಹೇರುವ ಬ್ರಾಹ್ಮನಿಕಲ್ ಸೋಷಿಯಲ್ ಆರ್ಡರ್ ಕತೆಗಳನ್ನೇ ನೋಡಬೇಕು ನಾವು? ಬದಲಾವಣೆಗೆ ತೆತ್ತುಕೊಳ್ಳೋಣ ಬನ್ನಿ.

-ಡಾ.ಚಮರಂ, ಸಿನಿಮಾ ನಿರ್ದೇಶಕರು