DR H.C. mahadevappa – Peepal Media

ಸಾತ್ವಿಕ ಆಹಾರ ತಿನ್ನುವವರು ದೌರ್ಜನ್ಯ ಮಾಡುತ್ತಿಲ್ಲವೇ: ಹೆಚ್‌ ಸಿ ಮಹದೇವಪ್ಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿನ ಕೊಡ್ಲಿ ಪೇಟೆ ಬಸವೇಶ್ವರ ದೇವಸ್ಥಾನಕ್ಕೆ  ಭೇಟಿ ನೀಡುವ ಮುನ್ನ ಮಾಂಸ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದಾರೆಂದು ರಾಜ್ಯಾದಾದ್ಯಂತ ಬಿಜೆಪಿ ನಾಯಕರು ವಾಗ್ದಾಳಿ ಶುರುಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಮಾಜಿ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಅವರು ಸಾತ್ವಿಕ ಆಹಾರ ತಿನ್ನುವವರು ಮಾಡುತ್ತಿರುವ ದೌರ್ಜನ್ಯ ನಮಗೇನು ಗೋತ್ತಿಲ್ಲವೇ ಎಂದು ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಸಿದ್ದರಾಮಯ್ಯನವರು ಏನು ಊಟ ಮಾಡಿದರು ಎಂಬುದು ನನಗೆ ತಿಳಿದಿಲ್ಲ ಅದು ತಿಳಿದುಕೊಳ್ಳಲೇ ಬೇಕಾದ ವಿಚಾರವೂ ಅಲ್ಲ. ʼಸಾತ್ವಿಕ ಆಹಾರ ತಿನ್ನುವವರು ಈ ಸಮಾಜದಲ್ಲಿ ಮಾಡುತ್ತಿರುವ ದೌರ್ಜನ್ಯ ಎಷ್ಟು ಎಂಬುದು ನಮಗೇನು ತಿಳಿದಿಲ್ಲವೇ?ʼ. ಸಾತ್ವಿಕ ಆಹಾರ ಸೇವನೆ ಮಾಡುತ್ತೇವೆ ಅಂತಾ ಹೇಳಿ ಅಮಾನವೀಯ ನಡವಳಿಕೆ ಪ್ರದರ್ಶನ ಮಾಡುತ್ತಿರುವುದೇ ನನ್ನ ಪ್ರಕಾರ ದೇವರ ಮೇಲಿನ ಗೌರವವನ್ನು ಸಂಪೂರ್ಣವಾಗಿ ಹಾಳು ಮಾಡುವಂತಹ ಕೃತ್ಯವಾಗಿದೆ. ಎಂದರು

ಸಾತ್ವಿಕ ಆಹಾರ ಸೇವಿಸುವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಿಸುವೆ ಎನ್ನುತ್ತಾರೆ. ಸಾತ್ವಿಕ ಆಹಾರ ಸೇವಿಸುವ ತೇಜಸ್ವಿ ಸೂರ್ಯ ಜನ ಪ್ರತಿನಿಧಿಯಾಗಿದ್ದುಕೊಂಡೇ ಮುಸಲ್ಮಾನರ ಮೇಲೆ ನೇರವಾಗಿ ದ್ವೇಷ ಕಾರುತ್ತಾರೆ. ಸಾತ್ವಿಕ ಆಹಾರ ಸೇವಿಸುವವರು ಹೀಗೆಲ್ಲಾ ಕೆಟ್ಟದಾಗಿ ನಡೆದುಕೊಳ್ಳಬಹುದೇ? ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ನನ್ನ ಪ್ರಕಾರ ಕೆಟ್ಟ ಮನಸ್ಸು ನಮ್ಮ ಆಹಾರ ಕ್ರಮವನ್ನು ಅವಲಂಬಿಸಿಲ್ಲ ಅದು ನಮ್ಮ ಮನಸ್ಥಿತಿಯನ್ನು ಅವಲಂಬಿಸಿದೆ ರಾಜಕಾರಣದಲ್ಲಿ ಊಟ ಎಂಬುದು ಚರ್ಚೆಯ ವಿಚಾರವೇ ಅಲ್ಲ. ಬಿಜೆಪಿಯು ಕೆಲಸಕ್ಕೆ ಬಾರದ ವಿಚಾರ ಇಟ್ಟುಕೊಂಡು ಅನಗತ್ಯ ಚರ್ಚೆ ಮಾಡುತ್ತಿದ್ದು ತನ್ನ ದುರಾಡಳಿತದ ಮೂಲಕ ಹಿಂದೂಗಳ ಬದುಕನ್ನು ಮುಳುಗಿಸಿದೆ ಎಂದು ಬಿಜೆಪಿಯ ವಿರುದ್ಧ ಗುಡುಗಿದರು.