DR JAYAKAR – Peepal Media

ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯ ತಂಗಿಗೆ ಸರ್ಕಾರಿ ಉದ್ಯೋಗದ ಭರವಸೆ
ಬೆಂಗಳೂರು: ಕಳೆದ ತಿಂಗಳು ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನೊಳಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ 23 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿನಿ ಶಿಲ್ಪಶ್ರೀ ಅವರ ತಂಗಿಗೆ ಉಚಿತ ಶಿಕ್ಷಣ ನೀಡಲು ಬೆಂಗಳೂರು ವಿಶ್ವವಿದ್ಯಾಲಯ (ಬಿಯು) ಸೋಮವಾರ ನಿರ್ಧರಿಸಿದ್ದು, ಆದಾಗ್ಯೂ, ವಿಶ್ವವಿದ್ಯಾನಿಲಯವು ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಿದೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸಿಂಡಿಕೇಟ್ ಸಭೆಯ ನಂತರ, ಬಿಯು ಉಪಕುಲಪತಿ ಡಾ.ಜಯಕರ ಎಸ್.ಎಂ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಸ್ತುತ ಪದವಿಪೂರ್ವ ಕೋರ್ಸ್ ಮಾಡುತ್ತಿರುವ ಶಿಲ್ಪಾಶ್ರೀ ಅವರ ತಂಗಿಗೆ ವಿಶ್ವವಿದ್ಯಾಲಯವು ಉಚಿತ ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತದೆ. ವಿಶ್ವವಿದ್ಯಾನಿಲಯದ ಸಿಬ್ಬಂದಿ ಒಂದು ದಿನದ ವೇತನ ಮತ್ತು ಸಭೆಯ ಸಂಭಾವನೆಯನ್ನು ಶಿಲ್ಪಶ್ರೀ ಅವರ ಕುಟುಂಬಕ್ಕೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ, ಆದರೆ ಈ ದೇಣಿಗೆ ಮುಂದುರೆಯುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಶಿಲ್ಪಾಶ್ರೀ ಕುಟುಂಬಕ್ಕೆ 1.5 ಕೋಟಿ ಪರಿಹಾರ ನೀಡುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಆದರೆ ಇಷ್ಟು ದೊಡ್ಡ ಮೊತ್ತದ ಹಣ ಬಿಡುಗಡೆ ಮಾಡಲು ಸಾಧ್ಯವಾಗದ ಕಾರಣ, ವಿಶ್ವವಿದ್ಯಾಲಯವು ಶಿಲ್ಪಾಶ್ರೀ ಅವರ ತಂಗಿಗೆ ಉನ್ನತ ಶಿಕ್ಷಣ ಇಲಾಖೆಯಿಂದ ವಿಶೇಷ ಅನುಮತಿ ನೀಡಲಿದೆ ಎಂದು ಡಾ.ಜಯಕರ ಹೇಳಿದರು.

ಘಟನೆಯ ಹಿನ್ನಲೆ

ಅಕ್ಟೋಬರ್ 10 ರಂದು ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ಶಿಲ್ಪಾಶ್ರೀಯವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ ಹತ್ತಲು ಪ್ರಯತ್ನಿಸುತ್ತಿದ್ದಾಗ ಬಸ್‌ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ನಂತರ ಆಕೆಯನ್ನು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ತೀವ್ರಗಾಯಗೊಂಡಿದ್ದ ಕಾರಣ, ಅಕ್ಟೋಬರ್ 23 ರಂದು ನಿಧನರಾದರು. ಕೋಲಾರ ಜಿಲ್ಲೆಯ ಬಂಗಾರಪೇಟೆಯ ರವಿ-ಪದ್ಮಾ ದಂಪತಿಯ ಮೂವರು ಪುತ್ರಿಯರಲ್ಲಿ ಒಬ್ಬರಾದ ಅವರು ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು.

ಪರಿಸ್ಥಿತಿ ಕುರಿತು ತಂದೆಯ ಅಳಲು

ಸದ್ಯದ ಪರಿಸ್ಥಿತಿ ಕುರಿತು ಅಳಲನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿರುವ ಶಿಲ್ಪಶ್ರೀ ತಂದೆಯವರು, ನಾನು ಪ್ರತಿ ತಿಂಗಳು ಕೂಲಿ ಮಾಡಿ 10 ರಿಂದ 15 ಸಾವಿರ ರೂ.ಗಳಿಸುತ್ತೇನೆ. ಈ ಹಣದಿಂದ ನಾನು ನನ್ನ ಕುಟುಂಬವನ್ನು ನಿಭಾಯಿಸುತ್ತಾ, ನನ್ನ ಮೂರು ಮಕ್ಕಳನ್ನು ಓದಿಸಿಕೊಂಡು ಬಂದಿದ್ದೇನೆ. ನಾನು 10 ನೇ ತರಗತಿಯವರೆಗೆ ಓದಿದ್ದೇನೆ ಆದರೂ ಕೂಡ ನಾನು ಅನಕ್ಷರಸ್ಥ, ಹಾಗಾಗಿ ನನ್ನ ರೀತಿ ನನ್ನ ಮಕ್ಕಳು ಆಗಬಾರದೆಂಬ ಉದ್ದೇಶದಿಂದ ಸಾಲ ಮಾಡಿ ಓದಿಸುತ್ತಿದ್ದೆ. ನಾನು ಸಾಲ ಮಾಡಿದರು ಅವರ ವಿದ್ಯಾಭ್ಯಾಸಕ್ಕೆ ಹಣ ಸರಿಹೋಗದಿರುವ ಕಾರಣ, ನನ್ನ ಹೆಂಡತಿಯ ಸಹೋದರಿಯರು ನನಗೆ ಸಹಾಯ ಮಾಡುತ್ತಿದ್ದರು. ಇದರಿಂದ ಚನ್ನಾಗಿ ಓದುತ್ತಿದ್ದ ನನ್ನ ಮಗಳು, ಓದು ಮುಗಿದ ನಂತರ ಬ್ಯಾಂಕಿಂಗ್ ಅಥವಾ ಸರ್ಕಾರಿ ಉದ್ಯೋಗ ಪಡೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದಳು, ಆದರೆ ಇಂದು ಅವಳ ಕನಸನ್ನು ನನಸು ಮಾಡಿಕೊಳ್ಳದೆ ನಮ್ಮನ್ನ ಬಿಟ್ಟು ಹೋಗಿದ್ದಾಳೆ ಎಂದು ದುಃಖ್ಖ ವ್ಯಕ್ತಪಡಿಸಿದರು.

ಶಿಲ್ಪಾಶ್ರೀ ಸಾವಿನ ಬಳಿಕ ಕುಟುಂಬದ ಪರಿಸ್ಥಿತಿ ಗಂಭೀರ

ಶಿಲ್ಪಾಶ್ರೀ ಅವರ ಅಕ್ಕ ನಿವೇದಿತಾ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವೀಧರರಾಗಿದ್ದು, ಕಳೆದ ಮೂರು ತಿಂಗಳಿಂದ ಟ್ರಾನ್ ಅಸೋಸಿಯೇಟ್ ಆಗಿ ಇ-ಕಾಮರ್ಸ್ ಮೇಜರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ ಕಟುಂಬಕ್ಕೆ ಸ್ವಲ್ಪ ಮಟ್ಟಿಗೆ ನೆರವಾಗುತ್ತಿದ್ದರು. ಆದರೆ ಶಿಲ್ಪಶ್ರೀ ಅಪಘಾತಕ್ಕೆ ಒಳಗಾದ ನಂತರ, ನಿವೇದಿತಾ ತನ್ನ ಕಚೇರಿಯಲ್ಲಿ ಹೆಚ್ಚು ರಜೆ ತೆಗೆದುಕೊಳ್ಳಲು ಅವಕಾಶ ನೀಡದ ಕಾರಣ ಕೆಲಸ ಬಿಡಬೇಕಾಯಿತು. ಇದರಿಂದಾಗಿ ಕುಟುಂಬಕ್ಕೆ ಸಿಗುತ್ತಿದ್ದ ಸ್ವಲ ಪ್ರಮಾಣದ ನೆರವು ಕೂಡ ಇಲ್ಲದಂತಾಗಿದೆ ಎಂದು ನಿವೇದಿತಾ ತನ್ನ ಅಳನನ್ನು ತೋಡಿಕೊಂಡಿದ್ದಾರೆ.