Dr.S. Jaishankar – Peepal Media

‘ಯಾರ ಮಧ್ಯಸ್ಥಿಕೆಯೂ ನಮಗೆ ಬೇಕಿಲ್ಲ’: ಫೋನ್‌ ಕರೆಯಲ್ಲಿ ಟ್ರಂಪ್‌ಗೆ ಮೋದಿ ತಿರುಗೇಟು
ಐದು ವರ್ಷಗಳ ನಂತರ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷ  ಡೊನಾಲ್ಡ್‌ ಟ್ರಂಪ್ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಶ್ವೇತಭವನಕ್ಕೆ ಕರೆದು ಆತಿಥಿ ಸತ್ಕಾರ ನೀಡಿದ್ದಾರೆ. ಇದಕ್ಕಿಂತ ಹಿಂದಿನ ದಿನ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರಿಗೆ, ಪಾಕಿಸ್ತಾನದೊಂದಿಗಿನ ಇತ್ತೀಚಿನ ಮಿಲಿಟರಿ ಸಂಘರ್ಷದ ಸಂದರ್ಭದಲ್ಲಿ ಭಾರತವು ಯಾವುದೇ ಮಟ್ಟದಲ್ಲಿ ವ್ಯಾಪಾರ ಒಪ್ಪಂದ ಅಥವಾ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ಎಂದಿಗೂ ಚರ್ಚಿಸಿಲ್ಲ ಎಂದು ಪೋನ್‌ ಮಾತುಕತೆಯಲ್ಲಿ ಹೇಳಿದ್ದಾರೆ.

ಆಲ್ಬರ್ಟಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ನಡೆಯಬೇಕಿದ್ದ ದ್ವಿಪಕ್ಷೀಯ ಸಭೆಯನ್ನು ರದ್ದುಗೊಳಿಸಿದ ಟ್ರಂಪ್ ವಾಷಿಂಗ್ಟನ್‌ಗೆ ಬೇಗನೆ ಹಿಂದಿರುಗಿದ ಕಾರಣ, ಅವರ ಜೊತೆಗಿಮ 35 ನಿಮಿಷಗಳ ದೂರವಾಣಿ ಸಂಭಾಷಣೆಯ ಸಂದರ್ಭದಲ್ಲಿ ಮೋದಿ ಈ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರನ್ನು ಟ್ರಂಪ್ ಇಂದು ಬುಧವಾರ (ಜೂನ್ 18) ಮಧ್ಯಾಹ್ನ ಶ್ವೇತಭವನದಲ್ಲಿ ಊಟಕ್ಕೆ ಕರೆದಿದ್ದಾರೆ. ಇದಕ್ಕೆ ಮುನ್ನಾದಿನದಂದು ಟ್ರಂಪ್‌ ಅವರಿಂದ ಮೋದಿಯವರಿಗೆ ಈ ಕರೆ ಬಂದಿತು.

ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಜುಲೈ 2019 ರಲ್ಲಿ ಶ್ವೇತಭವನಕ್ಕೆ ಅತಿಥಿಯಾಗಿ ಹೋಗಿದ್ದರು. ಇವರು ಆಗಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಅಧ್ಯಕ್ಷ ಟ್ರಂಪ್ ಬೇಟಿ ಮಾಡಿದ್ದರು.

ಜನತೆಯ ಟೀಕೆ ಮತ್ತು ವಿರೋಧ ಪಕ್ಷಗಳ ಪ್ರಶ್ನೆಗಳ ನಡುವೆಯೇ ಮೋದಿ-ಟ್ರಂಪ್ ಫೋನ್ ಮಾತುಕತೆ

ಭಾರತದಲ್ಲಿ ಮೋದಿಯವರಿಗೆ ಟೀಕೆಗಳು ಹೆಚ್ಚುತ್ತಿದ್ದ ನಡುವೆಯೇ ಈ ಫೋನ್ ಕರೆ ಕೂಡ ಬಂದಿದೆ. ಕೆಲವು ದಿನಗಳ ಹಿಂದೆ, ಟ್ರಂಪ್ ಸಾರ್ವಜನಿಕ ವೇದಿಕೆಗಳಲ್ಲಿ ಕನಿಷ್ಠ 13 ಬಾರಿ “ತಾನೇ ಭಾರತ – ಪಾಕ್‌ ಯುದ್ಧ ನಿಲ್ಲಿಸಿದ್ದು, ವ್ಯಾಪಾರ ಮಾಡಬೇಕೆಂದರೆ ಯುದ್ಧ ನಿಲ್ಲಿಸಿ,” ಎಂಬಂತ ಹೇಳಿಕೆಗಳನ್ನು ನೀಡುವಾಗ ಮೋದಿಯವರು ವಹಿಸಿದ್ದ “ಮೌನ”ವನ್ನು ಕಾಂಗ್ರೆಸ್ ಪಕ್ಷ ಪ್ರಶ್ನಿಸಿತ್ತು.

ಇತ್ತೀಚೆಗೆ, ಜೂನ್ 15 ರಂದು, ಟ್ರಂಪ್ ಮತ್ತೊಮ್ಮೆ ಈ ಹಿಂದಿನ ಹೇಳಿಕೆಗಳನ್ನೇ ಉಲ್ಲೇಖಿಸಿ, “ಅಮೆರಿಕದೊಂದಿಗಿನ ಟ್ರೇಡ್ ಅನ್ನು ಬಳಸಿಕೊಂಡು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಗಳಲ್ಲಿ ಒಗ್ಗಟ್ಟು ಮತ್ತು ವಿವೇಕವನ್ನು ತರುವ ಮೂಲಕ ತ್ವರಿತವಾಗಿ ನಿರ್ಧಾರ ತೆಗೆದುಕೊಳ್ಳಲು ಮತ್ತು ನಿಲ್ಲಿಸಲು ಸಾಧ್ಯವಾಯಿತು. ಇಸ್ರೇಲ್ ಮತ್ತು ಇರಾನ್ ನಡುವೆ ಶಾಂತಿಯನ್ನು ಸುಲಭವಾಗಿ ತರಲು ಮಧ್ಯಸ್ಥಿಕೆ ಕೆಲಸ ಮಾಡಬಹುದು,” ಎಂದು ಟ್ರಂಪ್ ಹೇಳಿದರು.

ಟ್ರಂಪ್ ಸರ್ಕಾರವು ಈ ಹೇಳಿಕೆಯನ್ನು ಕಾನೂನು ದಾಖಲೆಯಲ್ಲಿ ಔಪಚಾರಿಕಗೊಳಿಸಿತ್ತು. ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಡಬ್ಲ್ಯೂ. ಲುಟ್ನಿಕ್ ಅವರು ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯಕ್ಕೆ ಸಲ್ಲಿಸಿದ ಲಿಖಿತ ಅರ್ಜಿಯಲ್ಲಿ, ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ “ಪೂರ್ಣ ಪ್ರಮಾಣದ ಯುದ್ಧವನ್ನು ತಪ್ಪಿಸಲು” ಪ್ರೋತ್ಸಾಹಕವಾಗಿ ವ್ಯಾಪಾರವನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.

ಭಾರತದ ವಿದೇಶಾಂಗ ಸಚಿವಾಲಯ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಟ್ರಂಪ್ ಅವರ ನಿರೂಪಣೆಯನ್ನು ಸಾರ್ವಜನಿಕವಾಗಿ ವಿರೋಧಿಸಿದ್ದರು, ಆದರೆ ಟ್ರಂಪ್‌ ಮಾತ್ರ “ಯುದ್ಧ ನಿಲ್ಲಿಸಿದೆ,” ಎಂಬ ಜಪವನ್ನು ನಿಲ್ಲಿಸಲಿಲ್ಲ. ಭಾರತವು ಇದನ್ನು ವಿರೋಧಿಸಿ ಔಪಚಾರಿಕ ಪ್ರತಿಭಟನೆಯನ್ನು ದಾಖಲಿಸಿದೆಯೇ ಎಂಬುದು ಇಂದಿನ ವರೆಗೆ ತಿಳಿದು ಬಂದಿಲ್ಲ.

ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕೊನೆಗೊಂಡ ನಂತರ, ಟ್ರಂಪ್ ಅವರೊಂದಿಗಿನ ಮೋದಿಯವರ ಮೊದಲ ಬಾರಿಗೆ ಫೋನ್ ಮಾತುಕತೆ ನಡೆಸಿದ್ದಾರೆ.

“ಈ ಸಂಪೂರ್ಣ ಘಟನಾವಳಿಗಳ ಸರಣಿಯ ಯಾವುದೇ ಹಂತದಲ್ಲಿ ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ಅಥವಾ ಭಾರತ ಹಾಗೂ ಪಾಕಿಸ್ತಾನದ ನಡುವೆ ಅಮೆರಿಕದ ಮಧ್ಯಸ್ಥಿಕೆಗೆ ಯಾವುದೇ ಪ್ರಸ್ತಾಪದ ಬಗ್ಗೆ ಯಾವುದೇ ಮಟ್ಟದಲ್ಲಿ ಚರ್ಚೆ ನಡೆದಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟವಾಗಿ ತಿಳಿಸಿದರು” ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ವೇತಭವನದಿಂದ ಬಂದ ಕರೆಗೆ ಪ್ರತ್ಯೇಕ ಪ್ರತಿಕ್ರಿಯೆಯನ್ನು ನೀಡಲಾಗಿಲ್ಲ.

ಎರಡೂ ದೇಶಗಳ ಸೇನೆಗಳ ನಡುವಿನ ಮಾತುಕತೆಯ ನಂತರ ಭಾರತದ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಿದೆ ಎಂದು ಮೋದಿ ಪುನರುಚ್ಚರಿಸಿದರು – “ಮತ್ತು ಇದು ಪಾಕಿಸ್ತಾನದ ಕೋರಿಕೆಯ ಮೇರೆಗೆ ಮಾಡಲಾಯಿತು,” ಎಂದು ಮಿಸ್ರಿ ಹೇಳಿದರು.

“ಭಾರತವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಮತ್ತು ಎಂದಿಗೂ ಸ್ವೀಕರಿಸುವುದಿಲ್ಲ ಎಂದು ಪ್ರಧಾನಿ ಮೋದಿ ದೃಢವಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ಭಾರತದಲ್ಲಿ ಸಂಪೂರ್ಣ ರಾಜಕೀಯ ಒಮ್ಮತವಿದೆ,” ಎಂದು ಅವರು ಹೇಳಿದರು.

ಭಯೋತ್ಪಾದಕ ಶಿಬಿರಗಳ ಮೇಲೆ ಮೇ 6-7 ರಂದು ನಡೆದ ವೈಮಾನಿಕ ದಾಳಿಗಳನ್ನು “ಬಹಳ ಲೆಕ್ಕಾಚಾರ ಹಾಕಿ, ನಿಖರವಾದ ಮತ್ತು ಉಲ್ಬಣಗೊಳ್ಳದ” ದಾಳಿ ಎಂದು ಪ್ರಧಾನಿ ಬಣ್ಣಿಸಿದರು.

ಪಾಕಿಸ್ತಾನದಿಂದ ಬರುವ ಯಾವುದೇ ಗುಂಡನ್ನು  ಪ್ರತಿಯಾಗಿ ಗೋಲಾ (ಚಿಪ್ಪು)  ಮೂಲಕ ಎದುರಿಸಲಾಗುವುದು  ಎಂಬ ಭಾರತದ ಹೇಳಿಕೆಯನ್ನು ಅವರು ಪುನರುಚ್ಚರಿಸಿದರು.

ಮೋದಿ ಅವರ ಹೇಳಿಕೆಯ ಪ್ರಕಾರ, ಮೇ 9 ರ ರಾತ್ರಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು “ಪಾಕಿಸ್ತಾನ ಭಾರತದ ಮೇಲೆ ದೊಡ್ಡ ದಾಳಿ ನಡೆಸಬಹುದು” ಎಂದು ಎಚ್ಚರಿಸಿದ್ದರು ಎಂಬುದು ತಿಳಿದುಬಂದಿದೆ.

ಮೇ 9 ರಂದು ಭಾರತವು “ಬಹಳ ಬಲವಾದ ಪ್ರತಿಕ್ರಿಯೆ” ನೀಡಿ ಪಾಕಿಸ್ತಾನದ ವಾಯುನೆಲೆಗಳನ್ನು “ನಿಷ್ಕ್ರಿಯ”ಗೊಳಿಸಿದ ನಂತರವೇ, ಪಾಕ್‌ ಭಾರತದ ಬಳಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ವಿನಂತಿಸಿತು.

“ಪ್ರಧಾನಿಯವರು ತಿಳಿಸಿದ ಅಂಶಗಳನ್ನು ಟ್ರಂಪ್ ಎಚ್ಚರಿಕೆಯಿಂದ ಆಲಿಸಿದರು ಮತ್ತು ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು” ಎಂದು ಮಿಸ್ರಿ ಹೇಳಿದರು. “ಭಾರತವು ಇನ್ನು ಮುಂದೆ ಭಯೋತ್ಪಾದನೆಯನ್ನು ಪ್ರಾಕ್ಸಿ ಯುದ್ಧವೆಂದು ನೋಡುವುದಿಲ್ಲ, ಬದಲಿಗೆ ಯುದ್ಧವೆಂದೇ ಪರಿಗಣಿಸುತ್ತದೆ. ಭಾರತದ ಆಪರೇಷನ್ ಸಿಂಧೂರ್ ಇನ್ನೂ ಮುಂದುವರೆದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ” ಎಂದು ಅವರು ಹೇಳಿದರು.

ಕೆನಡಾದಿಂದ ಹಿಂದಿರುಗಿದ ನಂತರ ಮೋದಿ ಅಮೆರಿಕದಲ್ಲಿ ತಂಗಬಹುದೇ ಎಂದು ಟ್ರಂಪ್ ವಿಚಾರಿಸಿದರು. “ಇತರ ಕಮಿಟ್‌ಮೆಂಟ್‌ಗಳ ಕಾರಣಕ್ಕಾಗಿ, ಪ್ರಧಾನಿ ಮೋದಿ ಹಾಗೆ ಮಾಡಲು ತಮ್ಮ ಅಸಾಮರ್ಥ್ಯವನ್ನು ವ್ಯಕ್ತಪಡಿಸಿದರು” ಎಂದು ಮಿಶ್ರಿ ಹೇಳಿದರು. ಹಾಗಿದ್ದೂ, ಇಬ್ಬರೂ ನಾಯಕರು ಮುಂದಿನ ದಿನಗಳಲ್ಲಿ ಭೇಟಿಯಾಗಲು ಪ್ರಯತ್ನ ಮಾಡುವುದಾಗಿ ಒಪ್ಪಿಕೊಂಡರು.

ಇಬ್ಬರೂ ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಚರ್ಚಿಸಿದರು ಮತ್ತು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಶಾಂತಿಗಾಗಿ ನೇರ ಸಂವಾದ ಅತ್ಯಗತ್ಯ ಎಂದು ಒಪ್ಪಿಕೊಂಡರು.

ಪಾಕಿಸ್ತಾನದ ಮುನೀರ್‌ಗೆ ಟ್ರಂಪ್‌ನಿಂದ ಪಾರ್ಟಿ!

ಇಂಡೋ-ಪೆಸಿಫಿಕ್ ಕುರಿತು, ಮೋದಿ ಮತ್ತು ಟ್ರಂಪ್‌ ಪರಸ್ಪರ ದೃಷ್ಟಿಕೋನಗಳನ್ನು ಹಂಚಿಕೊಂಡರು ಮತ್ತು ಈ ಪ್ರದೇಶದಲ್ಲಿ ಕ್ವಾಡ್ ಪಾತ್ರಕ್ಕೆ ಬೆಂಬಲವನ್ನು ಪುನರುಚ್ಚರಿಸಿದರು. ಮುಂದಿನ ಕ್ವಾಡ್ ಶೃಂಗಸಭೆಗೆ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಟ್ರಂಪ್ ಅವರಿಗೆ ಆಹ್ವಾನ ನೀಡಿದರು, ಅದನ್ನು ಟ್ರಂಪ್ ಸ್ವೀಕರಿಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ತನ್ನ ಹೋರಾಟವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಭಾರತ ಹೇಳಿದ್ದರೂ, ಪಾಕಿಸ್ತಾನವನ್ನು “ಭಯೋತ್ಪಾದನೆಯ ಜಾಗತಿಕ ಕೇಂದ್ರ ” ಎಂಬ ಭಾರತದ ನಿಲುವನ್ನು ಟ್ರಂಪ್ ಸರ್ಕಾರ ಬೆಂಬಲಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ .

ಬದಲಾಗಿ, ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡ ನಂತರ, ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆ ಪಾಕಿಸ್ತಾನವನ್ನು ವೇದಿಕೆಯಾಗಿ ರೂಪಿಸಿಕೊಂಡಿದೆ. ಅಮೇರಿಕಾ ಪಾಕಿಸ್ತಾನವನ್ನು ಭಯೋತ್ಪಾದನಾ ನಿಗ್ರಹದ ಪ್ರಮುಖ ಪಾಲುದಾರ ಎಂದು ಪರಿಗಣಿಸಿದೆ.

ಈ ಕಾರಣಕ್ಕಾಗಿ ಮುನೀರ್ ಅವರಿಗೆ ಭೋಜನ ಕೂಟ ಆಯೋಜಿಸುವ ಟ್ರಂಪ್ ನಿರ್ಧಾರವು ಮಹತ್ವದ್ದಾಗಿದೆ. ಭಾರತದೊಂದಿಗಿನ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನದಲ್ಲಿ ಮುನೀರ್ ಅವರ ಖ್ಯಾತಿಯನ್ನು ಹೆಚ್ಚಿತು. ಈ ಹಿಂದೆ ಮಿಲಿಟರಿ ಸ್ಥಾಪನೆಯನ್ನು ಟೀಕಿಸಿದ್ದ ವಿರೋಧ ಪಕ್ಷ ಪಿಟಿಐ ಸೇರಿದಂತೆ ಪಾಕಿಸ್ತಾನದಾದ್ಯಂತ ಅವರಿಗೆ ಬೆಂಬಲವನ್ನು ವ್ಯಕ್ತವಾಗಿತ್ತು.

ಕಾಂಗ್ರೆಸ್ಸನಲ್‌ ಹಿಯರಿಂಗ್‌ನಲ್ಲಿ  ಇಸ್ಲಾಮಿಕ್ ಸ್ಟೇಟ್-ಖೋರಾಸನ್ ವಿರುದ್ಧ ಹೋರಾಡಲು ಪಾಕಿಸ್ತಾನವು “ಅದ್ಭುತ ಪಾಲುದಾರ” ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಕುರಿಲ್ಲಾ ಹೊಗಳಿದ ಬೆನ್ನಲ್ಲೇ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ಊಟಕ್ಕೆ ಕರೆಯಲಾಗಿದೆ. (ಖೋರಾಸನ್ ಎಂದರೆ ಇಂದಿನ ಇರಾನ್, ಅಫ್ಘಾನಿಸ್ತಾನ, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಕೆಲವು ಭಾಗಗಳನ್ನು ಒಳಗೊಂಡ ಐತಿಹಾಸಿಕ ಭೂ ಪ್ರದೇಶ)

ಈ ವರ್ಷದ ಆರಂಭದಲ್ಲಿ, ಅಂದರೆ ಫೆಬ್ರವರಿಯಲ್ಲಿ ಅಮೇರಿಕನ್ ಕಾಂಗ್ರೆಸ್‌ಗೆ ನೀಡಿದ ಮೊದಲ ಭಾಷಣದಲ್ಲಿ ಟ್ರಂಪ್, 13 ಅಮೆರಿಕನ್ ಸೈನಿಕರನ್ನು ಕೊಂದ ಕಾಬೂಲ್‌ನಲ್ಲಿ ನಡೆದ ಅಬ್ಬೆ ಗೇಟ್ ಬಾಂಬ್ ಸ್ಫೋಟದ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬನಾದ ಮೊಹಮ್ಮದ್ ಶರೀಫುಲ್ಲಾನನ್ನು ಬಂಧಿಸಿ ಹಸ್ತಾಂತರಿಸಿದ್ದಕ್ಕಾಗಿ ಪಾಕಿಸ್ತಾನವನ್ನು ಹೊಗಳಿದ್ದರು.

We thank US President Donald Trump for acknowledging and appreciating Pakistan's role and support in counter terrorism efforts across the region, in the context of Pakistan Security Forces’ recent apprehension of ISKP’s top tier operational commander Shareefullah, who is an…
— Shehbaz Sharif (@CMShehbaz) March 5, 2025

ಟ್ರಂಪ್ ಭಾರತದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದರೂ, ಪಾಕಿಸ್ತಾನವನ್ನು ಸ್ಪಷ್ಟ ಮತ್ತು ನಿಷ್ಠುರವಾಗಿ ಖಂಡಿಸಲಿಲ್ಲ. ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಸಮಾನಾಗಿ ನೋಡಿ ಹೇಳಿಕೆಗಳನ್ನು ನೀಡುತ್ತಾ ಬಂದರು, ಮತ್ತು ಪಾಕಿಸ್ತಾನ “ಬಹಳ ಬಲವಾದ ನಾಯಕತ್ವ ” ಹೊಂದಿದೆ ಎಂದು ಹೊಗಳಿದ್ದರು.

ತಾಲಿಬಾನ್ ಸಚಿವನೊಂದಿಗೆ ಜೈಶಂಕರ್ ಮಾತುಕತೆ: ಪಾಕ್‌ ಹೇಳಿಕೆಯನ್ನು ತಿರಸ್ಕರಿಸಿದ ತಾಲಿಬಾನ್‌ಗೆ ಜೈಶಂಕರ್‌ ಅಭಿನಂದನೆ
ಭಾರತ ಮತ್ತು ತಾಲಿಬಾನ್ ಸರ್ಕಾರದ ನಡುವಿನ ಮೊದಲ ಸಚಿವ ಮಟ್ಟದ ಮಾತುಕತೆಯಲ್ಲಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಮಾತನಾಡಿದರು ಮತ್ತು ಭಾರತವು ಅಫ್ಘಾನ್ ಭೂಪ್ರದೇಶದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಕಾಬೂಲ್ ತಳ್ಳಿಹಾಕಿದ್ದಕ್ಕಾಗಿ ಶ್ಲಾಘಿಸಿದರು.

ಆಗಸ್ಟ್ 2021 ರಲ್ಲಿ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡಾಗ ಮಿಲಿಟರಿ ವಿಜಯದ ಮೂಲಕ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಇದು ಮೊದಲ ಸಚಿವ ಮಟ್ಟದ ಫೋನ್ ಕರೆಯಾಗಿದೆ.

ಮೇ 10 ರಂದು ಎರಡೂ ಕಡೆಯವರು ಗುಂಡಿನ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಕೊನೆಗೊಂಡ ಭಾರತ-ಪಾಕಿಸ್ತಾನ ಯುದ್ಧದ ಹಿನ್ನೆಲೆಯಲ್ಲಿ ಈ ಮಾತುಕತೆ ನಡೆದಿದೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೈಶಂಕರ್, ಗುರುವಾರ (ಮೇ 15) ಸಂಜೆ ಮುತ್ತಕಿ ಅವರೊಂದಿಗೆ “ಉತ್ತಮ ಸಂಭಾಷಣೆ” ನಡೆಸಿದರು ಎಂದು ಹೇಳಿದ್ದಾರೆ ಮತ್ತು “ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಅವರು ಖಂಡಿಸಿದ್ದಕ್ಕೆ ತುಂಬಾ ಧನ್ಯವಾದಗಳು” ಎಂದು ಹೇಳಿದ್ದಾರೆ.

Good conversation with Acting Afghan Foreign Minister Mawlawi Amir Khan Muttaqi this evening.

Deeply appreciate his condemnation of the Pahalgam terrorist attack.

Welcomed his firm rejection of recent attempts to create distrust between India and Afghanistan through false and…
— Dr. S. Jaishankar (@DrSJaishankar) May 15, 2025

“ಸುಳ್ಳು ಮತ್ತು ಆಧಾರರಹಿತ ವರದಿಗಳ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಅಪನಂಬಿಕೆಯನ್ನು ಸೃಷ್ಟಿಸುವ ಇತ್ತೀಚಿನ ಪ್ರಯತ್ನಗಳನ್ನು ದೃಢವಾಗಿ ತಿರಸ್ಕರಿಸಿದ್ದನ್ನು ಭಾರತ ಸ್ವಾಗತಿಸುತ್ತದೆ” ಎಂದು ಅವರು ಹೇಳಿದರು.

ಪಾಕಿಸ್ತಾನದ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಶನಿವಾರ ಮುಂಜಾನೆ ಪತ್ರಿಕಾಗೋಷ್ಠಿಯಲ್ಲಿ ಭಾರತವು “ಅಫ್ಘಾನ್ ಮಣ್ಣಿನಲ್ಲಿ ಕ್ಷಿಪಣಿಗಳನ್ನು ಹಾರಿಸಿದೆ ಮತ್ತು ಅಫ್ಘಾನಿಸ್ತಾನದೊಳಗೆ ಡ್ರೋನ್ ದಾಳಿಗಳನ್ನು ನಡೆಸಿದೆ” ಎಂದು ಆರೋಪಿಸಿದ್ದರು.

ಆ ದಿನದ ನಂತರ, ಅಫ್ಘಾನ್ ರಕ್ಷಣಾ ಸಚಿವಾಲಯದ ವಕ್ತಾರ ಎನಾಯತುಲ್ಲಾ ಖ್ವಾರಾಜ್ಮಿ ಈ ಆರೋಪವನ್ನು ತಿರಸ್ಕರಿಸಿದರು , ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದರು.

د افغانستان دفاع وزارت ویاند عنایت الله خوارزمي حریت راډیو سره خبرو کې د افغانستان په خاوره د هند توغندیز برید په اړه د پاکستان ادعا په کلکه رد کړه.

ښاغلي خوارزمي ویلي، داسې کوم څه حقیقت نه لري.

تر دې وړاندې د پاکستان پوځي چارواکو ادعا وکړه، چې پر پاکستان د هند توغندیز بریدونو… pic.twitter.com/rNOq5LF6aY
— Hurriyat Radio Pashto (@HurriyatPa) May 10, 2025

ಏಪ್ರಿಲ್ 22 ರಂದು 26 ನಾಗರಿಕರನ್ನು ಕೊಂದ ಭಯೋತ್ಪಾದಕ ದಾಳಿಯ ನಂತರ, ತಾಲಿಬಾನ್ ಸರ್ಕಾರವು ಘಟನೆಯನ್ನು ಖಂಡಿಸಿತು, “ಇಂತಹ ದಾಳಿಗಳು ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳನ್ನು ಹಾಳುಮಾಡುತ್ತವೆ ” ಎಂದು ಹೇಳಿದೆ.

Remarks regarding recent attack on tourists in Pahalgam, Jammu and Kashmir pic.twitter.com/aXAvl8Re4f
— Abdul Qahar Balkhi (@QaharBalkhi) April 23, 2025

ಭಾರತವು ಮೇ 7 ರಂದು ಪಾಕಿಸ್ತಾನದ ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಯ ಮೂಲಕ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿದ ನಂತರ, ಅಫ್ಘಾನಿಸ್ತಾನವು ಎರಡೂ ದೇಶಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಕರೆ ನೀಡಿತ್ತು .

Remarks regarding recent attack on tourists in Pahalgam, Jammu and Kashmir pic.twitter.com/aXAvl8Re4f
— Abdul Qahar Balkhi (@QaharBalkhi) April 23, 2025

ಭಾರತದ ಸಚಿವರು ಅಫಘಾನ್ ಜನರೊಂದಿಗಿನ ಭಾರತದ “ಸಾಂಪ್ರದಾಯಿಕ ಸ್ನೇಹ” ಮತ್ತು “ಅವರ ಅಭಿವೃದ್ಧಿ ಅಗತ್ಯಗಳಿಗೆ ಅದರ ನಿರಂತರ ಬೆಂಬಲ”ದ ಬಗ್ಗೆಯೂ ಮಾತನಾಡಿದರು.

“ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆಯೂ ಅವರು ಚರ್ಚಿಸಿದರು” ಎಂದು ಜೈಶಂಕರ್ ಬರೆದಿದ್ದಾರೆ.

ಅಫ್ಘಾನ್ ವಿದೇಶಾಂಗ ಸಚಿವಾಲಯದ ವರದಿಯು ಪಹಲ್ಗಾಮ್ ಭಯೋತ್ಪಾದಕ ದಾಳಿ ಅಥವಾ ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷದ ಬಗ್ಗೆ ಉಲ್ಲೇಖಿಸಲಿಲ್ಲ.

ಅಫ್ಘಾನಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರರ ಪ್ರಕಾರ, ಮುತಾಕಿ ಭಾರತವನ್ನು “ಪ್ರಮುಖ ಪ್ರಾದೇಶಿಕ ದೇಶ” ಎಂದು ಬಣ್ಣಿಸಿದರು ಮತ್ತು ಅಫ್ಘಾನಿಸ್ತಾನ-ಭಾರತ ಸಂಬಂಧಗಳ ಐತಿಹಾಸಿಕ ಸ್ವರೂಪವನ್ನು ಒತ್ತಿ ಹೇಳಿದರು, ಸಂಬಂಧವು ಬಲಗೊಳ್ಳುವುದನ್ನು ಮುಂದುವರಿಸುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

د ا.ا.ا. د بهرنیو چارو وزیر محترم مولوي امیر خان متقي او د هند جمهوریت د بهرنیو چارو وزیر ښاغلي جې شنکر ټيلیفوني خبرې وکړې.
په دې مکالمه کې د دوو اړخیزو اړیکو پر پیاوړتیا، تجارت او د دیپلوماتیکو اړیکو د کچې پر لوړولو خبرې وشوې. pic.twitter.com/weErRrvARu
— Hafiz Zia Ahmad (@HafizZiaAhmad) May 15, 2025

ಅವರು “ಸಮತೋಲಿತ ವಿದೇಶಾಂಗ ನೀತಿ ಮತ್ತು ಎಲ್ಲಾ ರಾಷ್ಟ್ರಗಳೊಂದಿಗೆ ರಚನಾತ್ಮಕ ಸಂಬಂಧಗಳನ್ನು ಅನುಸರಿಸುವುದಕ್ಕೆ ಅಫ್ಘಾನಿಸ್ತಾನದ ಬದ್ಧತೆಯನ್ನು ಪುನರುಚ್ಚರಿಸಿದರು.”

ಅಫಘಾನ್ ವ್ಯಾಪಾರಿಗಳು ಮತ್ತು ರೋಗಿಗಳಿಗೆ ವೀಸಾ ಪ್ರವೇಶವನ್ನು ವಿಸ್ತರಿಸುವ ವಿಷಯವನ್ನು ಮುಟ್ಟಾಕಿ ಎತ್ತಿದರು ಮತ್ತು ಪ್ರಸ್ತುತ ಭಾರತದಲ್ಲಿ ಜೈಲಿನಲ್ಲಿರುವ ಅಫಘಾನ್ ಪ್ರಜೆಗಳನ್ನು ಬಿಡುಗಡೆ ಮಾಡಿ ತಾಯ್ನಾಡಿಗೆ ಕಳುಹಿಸಬೇಕೆಂದು ಕರೆ ನೀಡಿದರು.

ಇದಕ್ಕೆ ಪ್ರತಿಕ್ರಿಯೆಯಾಗಿ, ಜೈಶಂಕರ್ ಅವರು ಅಫಘಾನ್ ಕೈದಿಗಳ ವಿಷಯಕ್ಕೆ ತಕ್ಷಣ ಗಮನ ನೀಡಲಾಗುವುದು ಎಂದು ಮುತ್ತಕಿ ಅವರಿಗೆ “ಭರವಸೆ” ನೀಡಿದರು ಮತ್ತು ವೀಸಾ ಪ್ರಕ್ರಿಯೆಯನ್ನು ಸರಾಗಗೊಳಿಸುವ ಭರವಸೆ ನೀಡಿದರು ಎಂದು ಅಫಘಾನ್ ಹೇಳಿಕೆ ತಿಳಿಸಿದೆ.

ಇರಾನ್‌ನ ಚಾಬಹಾರ್ ಬಂದರನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು .

ಕಾಕತಾಳೀಯವಾಗಿ, ಭಾರತದ ಕ್ಷಿಪಣಿ ದಾಳಿಯ ಬಗ್ಗೆ ಪಾಕಿಸ್ತಾನದ ಹೇಳಿಕೆಯನ್ನು ಅಫ್ಘಾನಿಸ್ತಾನ ದೃಢವಾಗಿ ತಿರಸ್ಕರಿಸಿದ ಅದೇ ದಿನ, ಮುತಾಕಿ ಅವರು ಅಫ್ಘಾನಿಸ್ತಾನದ ಪಾಕಿಸ್ತಾನದ ವಿಶೇಷ ರಾಯಭಾರಿ ಮೊಹಮ್ಮದ್ ಸಾದಿಕ್ ಖಾನ್ ಮತ್ತು ಚೀನಾದ ವಿಶೇಷ ಪ್ರತಿನಿಧಿ ಯುಯೆ ಕ್ಸಿಯಾಯೋಂಗ್ ಅವರೊಂದಿಗೆ ತ್ರಿಪಕ್ಷೀಯ ಸಭೆ ನಡೆಸಿದರು .

د ا.ا.ا. د بهرنیو چارو وزیر محترم مولوي امیر خان متقي سره په کابل کې د چین ځانگړي استازي ښاغلي یوی شیایونگ او د پاکستان ځانگړي استازي ښاغلي محمد صادق او ورسره پلاویو وکتل.
په دې ناسته کې د افغانستان – چین – پاکستان د بهرنيو چارو وزيرانو د ډيالوگ د پنځمې ناستې د موضوعاتو… pic.twitter.com/b8IDt3l8z3
— Hafiz Zia Ahmad (@HafizZiaAhmad) May 10, 2025

ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಭಾರತ, ತಾಲಿಬಾನ್ ಸರ್ಕಾರವನ್ನು ಔಪಚಾರಿಕವಾಗಿ ಗುರುತಿಸದಿದ್ದರೂ, ಅದರೊಂದಿಗಿನ ಅದರ ಸಂಬಂಧವು ಸ್ಥಿರವಾಗಿ ಬೆಳೆದಿದೆ, ವಿಶೇಷವಾಗಿ ಇಸ್ಲಾಮಾಬಾದ್‌ನೊಂದಿಗಿನ ಕಾಬೂಲ್‌ನ ಸಂಬಂಧಗಳು ಹದಗೆಟ್ಟಿರುವುದರಿಂದ.

ಭಾರತೀಯ ಅಧಿಕಾರಿಗಳು ಕಾಬೂಲ್‌ಗೆ ಭೇಟಿ ನೀಡಿ ಪ್ರಾದೇಶಿಕ ಶೃಂಗಸಭೆಯ ಹೊರತಾಗಿ ಸಭೆಗಳನ್ನು ನಡೆಸಿದ್ದರು, ಆದರೆ ಅಫ್ಘಾನ್ ರಾಜತಾಂತ್ರಿಕ ಕಾರ್ಯಾಚರಣೆಗಳನ್ನು ತಾಲಿಬಾನ್-ಒಪ್ಪಂದಿತ ರಾಜತಾಂತ್ರಿಕರು ನಿರ್ವಹಿಸಲು ಅನುಮತಿಸಲಾಗಿತ್ತು.

ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಉನ್ನತ ಮಟ್ಟದ ಸಭೆ 2025 ರ ಜನವರಿಯಲ್ಲಿ ದೋಹಾದಲ್ಲಿ ತಾಲಿಬಾನ್ ಹಂಗಾಮಿ ವಿದೇಶಾಂಗ ಸಚಿವರನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಭೇಟಿಯಾದಾಗ ನಡೆಯಿತು.

ಪಾಕಿಸ್ತಾನವು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿದ ಎರಡು ವಾರಗಳ ನಂತರ ಇದು ನಡೆದಿದೆ.

ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯ: ಡಾ.ಎಸ್. ಜೈಶಂಕರ್
ಹೊಸದಿಲ್ಲಿ: ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಿತಿಯ ವಿಶೇಷ ಸಭೆ ಇಂದಿನಿಂದ ಎರಡು ದಿನಗಳ ಕಾಲ ಮುಂಬೈ ಮತ್ತು ದೆಹಲಿಯಲ್ಲಿ ನಡೆಯಲಿದೆ.

ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಇಂದು ನಡೆದ ಮೊದಲ ದಿನದ ಸಭೆಯಲ್ಲಿ 26/11ರ ಭಯೋತ್ಪಾದನೆ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಚಿವ ಡಾ. ಎಸ್. ಜೈಶಂಕರ್‌ರವರು, ಮುಂಬೈ ದುರ್ಘಟನೆಗೆ 14 ವರ್ಷಗಳಾಗುತ್ತಿವೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಸಾಮರಸ್ಯಕ್ಕೆ ಭಯೋತ್ಪಾದನೆ ಬಹುದೊಡ್ಡ ಅಪಾಯವಾಗಿದೆ. ಭಯೋತ್ಪಾದನಾ ಘಟನೆಗಳ ಸಂತ್ರಸ್ತರ ನೋವನ್ನು ಕೇಳಬೇಕಾಗಿದೆ. ಆದರೆ ಅವರಿಗಾದ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮುಂಬೈ ಘಟನೆಯಲ್ಲಿ ಒಬ್ಬ ಭಯೋತ್ಪಾದಕನನ್ನು ಸೆರೆ ಹಿಡಿದು ಶಿಕ್ಷೆಗೆ ಒಳಪಡಿಸಲಾಗಿದೆ. ಆದರೆ, ರೂವಾರಿಯನ್ನು ಕರೆತರಲು ಇನ್ನೂ ಸಾಧ್ಯವಾಗಿಲ್ಲ, ಮತ್ತು ಸಂಪೂರ್ಣ ನ್ಯಾಯ ಇನ್ನೂ ದೊರೆತಿಲ್ಲ ಎಂದು ತಿಳಿಸಿದರು.

ಭಯೋತ್ಪಾದನಾ ಸಂಘಟನೆಗಳಿಗೆ ಹಣ ಹಾಗೂ ಸಂಪನ್ಮೂಲ ಅಗತ್ಯವಾಗಿದ್ದು, ಅದಕ್ಕಾಗಿ ಅವು ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿವೆ. ಅಗತ್ಯ ಹಣಸಂಗ್ರಹಕ್ಕಾಗಿ ವಿಭಿನ್ನ ಧೋರಣೆಗಳೊಂದಿಗೆ ಕೆಲಸ ಮಾಡುತ್ತಿವೆ. ಅಂತಾರಾಷ್ಟ್ರೀಯ ಸಮುದಾಯ ಈ ಸಂಗತಿಗಳ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ. ಭಯೋತ್ಪಾದನೆಗೆ ಸಂಪನ್ಮೂಲ ಸಂಗ್ರಹ ಸ್ಥಗಿತಗೊಳಿಸಲು ಪರಿಣಾಮಕಾರಿ ಸಹಯೋಗ ಅಗತ್ಯವಾಗಿದೆ ಎಂದು ಹೇಳಿದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಭಯೋತ್ಪಾದಕ ಸಂಘಟನೆ, ವ್ಯಕ್ತಿಗಳನ್ನು ಗುರುತಿಸುವುದು ಅಗತ್ಯ. ಭಯೋತ್ಪಾದಕ ನೆಲೆಗಳನ್ನು ಗುರುತಿಸುವುದು, ತರಬೇತಿ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಬೇಕು. ಇದಕ್ಕೆ ಸಹಕಾರ ನೀಡುವ ರಾಜಕೀಯ ಶಕ್ತಿಗಳನ್ನು ಸಹ ಗುರುತಿಸಬೇಕಾಗಿದೆ. ಭಯೋತ್ಪಾದಕ ಕೃತ್ಯಗಳು ಇಂದು ಬಹುಆಯಾಮ ಪಡೆದುಕೊಂಡಿವೆ. ಹೀಗಾಗಿ ಅವುಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.