Drone Pratap – Peepal Media

ಬಿಗ್ ಬಾಸ್ ಸ್ಪರ್ಧಿಗಳಿಗೆ ಗಾಯ! ಸರಣಿಯಿಂದ ಹೊರಗುಳಿಯುತ್ತಾರಾ ಸಂಗೀತ ಶೃಂಗೇರಿ, ಪ್ರತಾಪ್?
ಬಿಗ್ ಬಾಸ್ ಸರಣಿಯಲ್ಲಿ ಈ ಬಾರಿಯ ಕನ್ನಡದ ಬಿಗ್ ಬಾಸ್ 10 ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಶುರುವಿನಲ್ಲಿ ಹುಲಿಯುಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತೂರು ಸಂತೋಷ್ ಜೈಲಿಗೆ ಹೋಗಿ ಬಂದರೆ, ಇನ್ನೊಂದು ದಿನ ಜಾತಿ ನಿಂದನೆ ಆರೋಪದ ಅಡಿಯಲ್ಲಿ ನಟಿ ತನಿಶಾ ಕುಪ್ಪಂಡ ಹೆಚ್ಚು ಸುದ್ದಿ ಮಾಡಿದ್ದರು.

ಆ ವಿವಾದಗಳ ನಂತರ ಈಗ ಬಿಗ್ ಬಾಸ್ ನಲ್ಲಿ ನಡೆಯುತ್ತಿರುವ ಟಾಸ್ಕ್ ನಲ್ಲಿ ನಟಿ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಗೆ ಗಂಭೀರ ಗಾಯಗಳಾದ ಕಾರಣ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಟಾಸ್ಕ್ ನಲ್ಲಿ ಇಬ್ಬರಿಗೂ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಗಾಳಿ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಬಿಗ್ ಬಾಸ್ ತಂಡದ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಈ ನಡುವೆ ಬಿಗ್ ಬಾಸ್ ನಲ್ಲಿ ಎರಡು ಗುಂಪುಗಳಾಗಿದ್ದು, ತಂಡದ ಸದಸ್ಯರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ, ಅವಾಚ್ಯ ಶಬ್ದಗಳಿಂದ ನಿಂದಿಸುವ ಮಟ್ಟಕ್ಕೆ ಈಗ ಬಿಗ್ ಬಾಸ್ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಗದರಿಸುವುದು, ತಳ್ಳಾಟ, ನೂಕಾಟ, ಹೆಣ್ಣು ಮಕ್ಕಳ ನಿಂಧನೆ, ವಯಕ್ತಿಕ ವಿಚಾರದ ಬಗ್ಗೆ ವಿವಾದಿತ ಚರ್ಚೆಯ ಕಾರಣಕ್ಕೆ ಈ ಬಾರಿಯ ಬಿಗ್ ಬಾಸ್ ಹೆಚ್ಚು ಸುದ್ದಿಯಲ್ಲಿದೆ.

ಕೆಲವೇ ದಿನಗಳ ಹಿಂದೆ ನಟಿ ಕಾವ್ಯ ಶಾಸ್ತ್ರಿ ಬಿಗ್ ಬಾಸ್ ನೋಡದೇ ಇದ್ದರೆ ಒಳಿತು, ಅಷ್ಟೆ ಅಲ್ಲದೆ ಚಿಕ್ಕ ಮಕ್ಕಳಿಗೆ ಈ ಬಾರಿಯ ಬಿಗ್ ಬಾಸ್ ತೋರಿಸಿದರೆ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ನಿರಾಸೆ ಮೂಡಿಸಿದೆ ಎಂದು ಸ್ವತಃ ಬಿಗ್ ಬಾಸ್ ಹಿಂದಿನ ಸರಣಿಯಲ್ಲಿ ಸ್ಪರ್ಧಿಯೂ ಆಗಿದ್ದ ಕಾವ್ಯ ಶಾಸ್ತ್ರಿ ಹೇಳಿದ್ದರು.