drugs – Peepal Media

ಸೆಪ್ಟೆಂಬರ್‌ನಲ್ಲಿ 67 ಕಳಪೆ ಔಷಧಗಳು ಪತ್ತೆ!
ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ಔಷಧ ನಿಯಂತ್ರಣ ಅಧಿಕಾರಿಗಳು ನಡೆಸಿದ ಮಾದರಿ ಪರೀಕ್ಷೆಯಲ್ಲಿ 67 ಔಷಧಿಗಳು ‘ಉತ್ತಮ ಗುಣಮಟ್ಟದಲ್ಲಿಲ್ಲ’ ಎಂಬುದು ಕಂಡುಬಂದಿವೆ. ಕೇಂದ್ರ ಸರ್ಕಾರದ ಔಷಧ ನಿಯಂತ್ರಕ ಸಂಸ್ಥೆ, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ಸ್ ಕಂಟ್ರೋಲ್ ಆರ್ಗನೈಸೇಶನ್ (CDSCO) ನ ಪ್ರಯೋಗಾಲಯಗಳು 49 ಔಷಧಗಳನ್ನು ಕಳಪೆ ಎಂದು ಹೇಳಿದೆ. ರಾಜ್ಯಗಳ ಪ್ರಯೋಗ ಶಾಲೆಗಳು ಇಂತಹ 18 ಔಷಧಿಗಳನ್ನು ಪಟ್ಟಿ ಮಾಡಿವೆ.

ಎಎನ್‌ಐ, ದೂರದರ್ಶನ ಮತ್ತು ಎನ್‌ಡಿಟಿವಿ ಜೊತೆಗಿನ ವಿಶೇಷ ಪತ್ರಿಕಾ ಸಂವಾದದಲ್ಲಿ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ರಾಜೀವ್ ರಘುವಂಶಿ ಅವರು ಸೆಪ್ಟೆಂಬರ್‌ನಲ್ಲಿ ಪರೀಕ್ಷೆಗಾಗಿ 3,000 ಮಾದರಿಗಳನ್ನು ಸಿಡಿಎಸ್‌ಸಿಒ ಸಂಗ್ರಹಿಸಿದೆ ಎಂದು ಹೇಳಿದ್ದರು. ಈ ಮಾದರಿಗಳ ಮೇಲೆ ನಡೆಸಿದ ಪ್ರಯೋಗಗಳ ಫಲಿತಾಂಶಗಳನ್ನು ಅಕ್ಟೋಬರ್ 25,  ಶುಕ್ರವಾರ ಬಿಡುಗಡೆ ಮಾಡಲಾಗಿದೆ.

NSQ – Not of Standard Quality ಔಷಧಿಗಳ ಎರಡು ಪಟ್ಟಿಗಳಲ್ಲಿ ಒಂದನ್ನು CDSCO ತಯಾರಿಸುತ್ತದೆ ಮತ್ತು CDSCO ನಿಂದ ರಾಜ್ಯ ಔಷಧ ನಿಯಂತ್ರಣ ಪ್ರಾಧಿಕಾರಗಳ ಪಟ್ಟಿಗಳಿಂದ ಇನ್ನೊಂದನ್ನು ತಯಾರಿಸಲಾಗುತ್ತದೆ. ಪ್ರತಿ ತಿಂಗಳು ಇದು ಬಿಡುಗಡೆಯಾಗುತ್ತದೆ.

ಆಗಸ್ಟ್ ಮತ್ತು ಸೆಪ್ಟೆಂಬರ್‌ನ ಪಟ್ಟಿಗಳ ವಿಶ್ಲೇಷಣೆಯು ಎರಡೂ ತಿಂಗಳುಗಳಲ್ಲಿ ಆರು ಕಂಪನಿಗಳ ಹೆಸರುಗಳು ಕಾಣಿಸಿಕೊಂಡಿರುವುದನ್ನು ತೋರಿಸಿದೆ.

ಈ ಸಂಸ್ಥೆಗಳೆಂದರೆ ಹಿಂದೂಸ್ತಾನ್ ಆಂಟಿಬಯೋಟಿಕ್ಸ್, ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬೋರೇಟರೀಸ್, ಅಲ್ಕೆಮ್ ಹೆಲ್ತ್ ಸೈನ್ಸಸ್, ಡಿಜಿಟಲ್ ವಿಷನ್ , ನೆಸ್ಟರ್ ಫಾರ್ಮಾಸ್ಯುಟಿಕಲ್ಸ್ ಮತ್ತು ಕೇರಳ ಮೆಡಿಕಲ್ ಸರ್ವಿಸಸ್ ಕಾರ್ಪೊರೇಷನ್.

Zee ಲ್ಯಾಬೊರೇಟರೀಸ್, ANG ಲೈಫ್‌ಸೈನ್ಸ್ ಇಂಡಿಯಾ, ಹಿಮಾಲಯ ಮೆಡಿಟೆಕ್ ಮತ್ತು ಪ್ರೊಟೆಕ್ ಟೆಲಿಲಿಂಕ್ಸ್ – I ನಾಲ್ಕು ಕಂಪನಿಗಳು ಸೆಪ್ಟೆಂಬರ್‌ನಲ್ಲಿ ಮಾತ್ರ NSQ  ಪಟ್ಟಿಯಲ್ಲಿ ಕಾಣಿಸಿಕೊಂಡಿವೆ, ಆದರೆ ಆ ತಿಂಗಳು ಅವರ ಒಂದಕ್ಕಿಂತ ಹೆಚ್ಚು ಉತ್ಪನ್ನಗಳು ಕಳಪೆಯೆಂದು ಪರಿಗಣಿಸಲ್ಪಟ್ಟಿವೆ.

ಕಳಪೆ ಔಷಧಗಳು ಯಾವುವು ?

ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್, 1940 ರ ಪ್ರಕಾರ, ಬಳಕೆಗೆ ಯೋಗ್ಯವಲ್ಲದ ಔಷಧಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ:

1. ಕಲುಷಿತ ಅಥವಾ ಕಲಬೆರಕೆ ಔಷಧಗಳು. ವಿಷಕಾರಿ ಕಲಬೆರಕೆಯಿಂದಾಗಿ ಇದರಿಂದ ಸಾವು ಸೇರಿದಂತೆ ಗಂಭೀರವಾದ ಹಾನಿಯಾಗಬಹುದು.

2. ನಕಲಿ ಔಷಧಗಳು. ಆ ಔಷಧಿಗಳನ್ನು ತಯಾರಿಸದ ನಿರ್ದಿಷ್ಟ ಔಷಧೀಯ ಕಂಪನಿಯ ಲೇಬಲ್ ಅನ್ನು ಅಂಟಿಸಿ ಮಾರುವ ನಕಲಿ ಔಷಧಗಳಿವು.

3. ಕಳಪೆ ದರ್ಜೆಯ ಅಥವಾ NSQ ಔಷಧಿಗಳು. ಅದರಲ್ಲಿ ಒಂದು ನಿರ್ದಿಷ್ಟ ಘಟಕಾಂಶವು ಇರಬೇಕಾದ ಪ್ರಮಾಣದಲ್ಲಿ ಇರುವುದಿಲ್ಲ. ಇದರಿಂದ ನಿರ್ದಿಷ್ಟ ರೋಗಕ್ಕೆ ನೀಡುವ ಈ ಔಷಧ ಪರಿಣಾಮಕಾರಿಯಾಗಿರುವುದಿಲ್ಲ. ಇದರಿಂದ ರೋಗ ಉಲ್ಬಣವಾಗಬಹುದು. ಆದರೆ ಕಲಬೆರಕೆ ಔಷಧಿಗಿಂತ ಭಿನ್ನವಾಗಿ, ಕಳಪೆ ಔಷಧಗಳಿಂದ ಸಾವು ಸಂಭವಿಸುವುದಿಲ್ಲ .

CDSCO ನ ಡ್ರಗ್ಸ್ ಕನ್ಸಲ್ಟೇಟಿವ್ ಕಮಿಟಿ (DCC) ಕೆಳದರ್ಜೆಯ ಔಷಧಗಳಲ್ಲಿ minor ಮತ್ತು grossly substandard ಎಂಬ ಎರಡು ರೀತಿಯ ದೋಷಗಳನ್ನು ನಿರ್ದಿಷ್ಟಪಡಿಸುತ್ತದೆ. ಒಂದು ಕೆಳದರ್ಜೆಯದ್ದಾಗಿದ್ದರೆ, ಇನ್ನೊಂದು ಸಂಪೂರ್ಣವಾಗಿ ಕಳಪೆ ಮಟ್ಟದ್ದಾಗಿದೆ.

ಔಷಧಗಳು ಪ್ರಮಾಣಿತ ಪರೀಕ್ಷೆಯಲ್ಲಿ ವಿಫಲವಾಗಿವೆ

ಸೆಪ್ಟೆಂಬರ್ ಪಟ್ಟಿಗಳಲ್ಲಿ ಉಲ್ಲೇಖಿಸಲಾದ 67 ಔಷಧಿಗಳಲ್ಲಿ ಹೆಚ್ಚಿನವು ಟೆಲ್ಮಿಸಾರ್ಟನ್‌ನಂತಹ ಅಧಿಕ ರಕ್ತದೊತ್ತಡದ ಔಷಧಗಳಾಗಿವೆ; ಮೆಟ್ರೋನಿಡಜೋಲ್, ಜೆಂಟಾಮೈಸಿನ್ ಮತ್ತು ಸೆಫ್ಟ್ರಿಯಾಕ್ಸೋನ್‌ನಂತಹ ಪ್ರತಿಜೀವಕಗಳು; ಕ್ಯಾಲ್ಸಿಯಂ ಮತ್ತು ವಿಟಮಿನ್ ಪೂರಕಗಳು; ಪ್ಯಾಂಟೊಪ್ರಜೋಲ್ನಂತಹ ಆಂಟಾಸಿಡ್ಗಳು; ಗ್ಲಿಮೆಪಿರೈಡ್ ಮತ್ತು ಮೆಟ್‌ಫಾರ್ಮಿನ್‌ನಂತಹ ಮಧುಮೇಹ ವಿರೋಧಿಗಳು; ಕೆಮ್ಮು ಸಿರಪ್ಗಳು; ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಲು ಔಷಧಗಳು; ಮತ್ತು ನೋವು ನಿವಾರಕ ಔಷಧಿಗಳಾದ ಡಿಕ್ಲೋಫೆನಾಕ್ ಮತ್ತು ನಿಮೆಸುಲೈಡ್ ಜೊತೆಗೆ ಪ್ಯಾರಸಿಟಮಾಲ್.

ಸೆಪ್ಟೆಂಬರ್‌ನಲ್ಲಿ CDSCO ಯಿಂದ NSQ ಎಂದು ಪರಿಗಣಿಸಲ್ಪಟ್ಟಿರುವ ಔಷಧಿಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೋಡಿ ಮತ್ತು ರಾಜ್ಯ ಪ್ರಯೋಗಾಲಯಗಳು ಇಲ್ಲಿ ನೋಡಿ .

ಸೆಪ್ಟೆಂಬರ್‌ನ ರಾಜ್ಯ ಪಟ್ಟಿಯಲ್ಲಿ ಏಳು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಫಲಿತಾಂಶಗಳು ಮಾತ್ರ ಇರುವುದನ್ನು ಇಲ್ಲಿ ಗಮನಿಸಬೇಕು.

ಇತರರು CDSCO ಗೆ ಡೇಟಾವನ್ನು ಸಲ್ಲಿಸಲಿಲ್ಲ. ಇವುಗಳಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಮಣಿಪುರ, ರಾಜಸ್ಥಾನ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಪಂಜಾಬ್, ಸಿಕ್ಕಿಂ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ, ದೆಹಲಿ, ಉತ್ತರಾಖಂಡ ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದರ್ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಮತ್ತು ಲಕ್ಷದ್ವೀಪಗಳು ಸೇರಿವೆ.

67 ಔಷಧಿಗಳ ಪೈಕಿ ಹೆಚ್ಚಿನವು ವಿಶ್ಲೇಷಣೆ ಪರೀಕ್ಷೆಯಲ್ಲಿ  (ಪ್ರಸ್ತುತ ಘಟಕಾಂಶದ ಪ್ರಮಾಣವನ್ನು ಅಳೆಯಲು ಮಾಡಲಾಗುತ್ತದೆ), ವಿಸರ್ಜನೆ ಮತ್ತು ವಿಘಟನೆ ಪರೀಕ್ಷೆಗಳು ಮತ್ತು ಎಂಡೋಟಾಕ್ಸಿನ್ ಪರೀಕ್ಷೆಗಳಲ್ಲಿ ವಿಫಲವಾಗಿವೆ.

ಡಿಜಿಸಿಐ ರಘುವಂಶಿ ಪತ್ರಿಕಾಗೋಷ್ಠಿಯಲ್ಲಿ, ನಿರ್ದಿಷ್ಟ ಔಷಧದ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡರೆ, ಎಲ್ಲಾ ತಯಾರಕರು ತಯಾರಿಸಿದ ಔಷಧವನ್ನು NSQ ಎಂದು ಅರ್ಥೈಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.

ಹಿಂದಿನ ಮಾಸಿಕ ಪಟ್ಟಿಗಳಲ್ಲಿ ಹೆಸರು ಹೊಂದಿರುವ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ, ರಘುವಂಶಿ ಪತ್ರಿಕಾಗೋಷ್ಠಿಯಲ್ಲಿ ನೋಟಿಸ್‌ಗಳನ್ನು ನೀಡಲಾಯಿತು ಮತ್ತು ತಮ್ಮ ಎನ್‌ಎಸ್‌ಕ್ಯೂ ಔಷಧವನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ ಹೇಳಲಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು The Wire ನಲ್ಲಿ ಪ್ರಕಟವಾಗಿರುವ 67 Drugs Found Substandard in September; 6 Manufacturers Also Appeared in List For August ಭಾವಾನುವಾದವಾಗಿದೆ.

ಗೋವಾದಲ್ಲಿ ಜೋರಾದ ವಿದೇಶಿಗರ ಡ್ರಗ್ಸ್‌ ವ್ಯವಹಾರ : ಇಬ್ಬರ ಬಂಧನ
ಗೋವಾ : ಗೋವಾದಲ್ಲಿದ್ದು, ಮಾಧಕ ವಸ್ತುಗಳ ದಂಧೆ ಮಾಡುತ್ತಿದ್ದ ಇಬ್ಬರು ವಿದೇಶಿಗರನ್ನು ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋ(NCB) ಬಂಧಿಸಿದ್ದು, 107 ಎಂಡಿಎಂಎ(MDMA) ಮಾತ್ರೆಗಳು, 40 ಗ್ರಾಂ ಹೈಗ್ರೇಡ್‌ ಮೆಫೆಡ್ರೋನ್‌( high grade Mephedrone) ಮತ್ತು 55 ಗ್ರಾಂ ಗುಣಮಟ್ಟದ ಹಶೀಶ್‌(quality hashish) ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾದಲ್ಲಿ ಸಿಕ್ಕಿಬಿದ್ದಿರುವ ಇಬ್ಬರು ಆರೋಪಿಗಳ ಬಳಿಯಿದ್ದ 4.5 ಲಕ್ಷ ರೂಗಳನ್ನು NCB ಅಧಿಕಾರಿಗಳೂ ವಶಪಡಿಸಿಕೊಂಡಿದ್ದು, ವಿಚಾರಣೆ ವೇಳೆ ಆರೋಪಿಗಳು ಮಾಧಕ ವಸ್ತುಗಳ ವ್ಯವಹಾರದಿಂದಲೇ ಆ ಹಣವನ್ನು ಪಡೆದಿರುವುದು ಎಂದು ತಪ್ಪೊಪ್ಪಿಕೊಂಡಿದ್ದಾರೆ. ಅದಲ್ಲದೇ ಉತ್ತರ ಗೋವಾ ಪ್ರದೇಶದಲ್ಲಿ ವಿದೇಶಿಗರು ನಿರ್ವಹಿಸಲ್ಪಡುತ್ತಿರುವ ಡ್ರಗ್ಸ್‌ ಸಿಂಡಿಕೇಟ್‌ ಇದೆ, ಅದಲ್ಲದೇ ಈ ದಂದೆಯಲ್ಲಿ ಅಂಬಿಕಾ ಎಂಬ ಮಹಿಳೆಯೂ ಭಾಗಿಯಾಗಿದ್ದು, ಅವರು ರಷ್ಯಾ ಮೂಲದವರು ಎಂಬ ಮಾಹಿತಿಯನ್ನೂ ಆರೋಪಿಗಳು ಹೊರಹಾಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ, ಆರೋಪಿಗಳಿಂದ ಪಡೆದ ಮಾಹಿತಿಯ ಮೇರೆಗೆ, NCB ಅಧಿಕಾರಿಗಳು ಉತ್ತರ ಗೋವಾದ ಸಿಯೋಲಿಂನ ಉಡ್ಡೋ ಬೀಚ್ ಬಳಿ ಬಲೆ ಬೀಸಿ, ಅಂಬಿಕಾ ಮತ್ತು ಆಕೆಯ ಬಳಿಯಿದ್ದ ಮಾಧಕ ವಸ್ತುಗಳೊಂದಿಗೆ ಅವಳನ್ನು ಬಂಧಿಸಿದ್ದಾರೆ.

ಅಂಬಿಕಾ ಬಳಿ ಇದ್ದ, ಸುಮಾರು 50 ಮಾಧಕ ಮಾತ್ರೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆಕೆಯನ್ನು ವಿಚಾರಣೆ ನಡೆಸಿದಾಗ ಮತ್ತೊಂದು ಸತ್ಯ ಹೊರಬಂದಿದೆ. ಈ ಮಾಧಕ ದಂದೆಯಲ್ಲಿ ಬ್ರಿಟಿಷ್‌ ಪ್ರಜೆಯಾದ ಜೆ.ಲೀ ಎಂಬುವವರ ಪಾತ್ರವೂ ಇದ್ದು, ಅವರು ಗೋವಾದ ಮಾಪುಸಾದಲ್ಲಿ ನೆಲೆಸಿದ್ದಾರೆ ಎಂದು ಮತ್ತೊಂದು ತನಿಖೆಗೆ ಪೂರಕವಾಗಿರುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾಳೆ.

ಅಂಬಿಕಾಳ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ NCB ತಂಡವು, ಜೆ.ಲೀ ಅವರನ್ನು ಬಂಧಿಸಿದ್ದು, ಅವರು ಆಕೆಯ ತಂದೆಯೇ ಆಗಿದ್ದಾರೆ ಎನ್ನುವ ಮತ್ತೊಂದು ಸತ್ಯ ತಿಳಿದುಬಂದಿದ್ದು, ಅವರ ಬಳಿ ಇದ್ದ 57 ಎಕ್ಸ್ಟಸಿ, 40 ಗ್ರಾಂ ಮೆಫೆಡ್ರೋನ್‌( high grade Mephedrone) ಮತ್ತು 55 ಗ್ರಾಂ ಗುಣಮಟ್ಟದ ಹಶೀಶ್‌(quality hashish) ಮತ್ತು 4,50,420 ರೂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು NCB ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ, ʼಪ್ರಮಾಣ, ಗುಣಮಟ್ಟ, ಭೂಗತ ನಂಟು ಮತ್ತು ಮಾಧಕ ವಸ್ತುಗಳ ವ್ಯವಹಾರಗಳಲ್ಲಿ ವಿದೇಶಿಗರ ಪಾತ್ರ ಮತ್ತು ಅವರು ಬಿಳಿ ಪ್ರವಾಸಿಗರಿಗೆ ಮಾತ್ರ ಡ್ರಗ್ಸ್‌ ಸರಬರಾಜು ಮಾಡಿರುವ ಬಗ್ಗೆ ಮತ್ತು ಗೋವಾದಲ್ಲಿಯೇ ದೀರ್ಘಕಾಲ ನೆಲೆಸಿ ಕಾರ್ಯನಿರ್ವಹಿಸುತ್ತಿದ್ದʼ ಬಗ್ಗೆ ತಿಳಿಸಲಾಗಿದೆ.

ಡ್ರಗ್ಸ್‌ ಮಾರಾಟ : ಮಲಯಾಳಂ ಕಿರುತೆರೆ ಸಹನಟ ಸೇರಿದಂತೆ ಮೂವರ ಬಂಧನ
ಬೆಂಗಳೂರು : ಬೆಂಗಳೂರಿನಲ್ಲಿ ಮಾದಕ ವಸ್ತುಗಳ ದಂಧೆ ಹೆಚ್ಚಾಗಿದ್ದು ಡ್ರಗ್ಸ್‌ ಮಾರಾಟ ನಡೆಸುತ್ತಿದ್ದು ಅದರ ಜಾಲ ಹಿಡಿದು ಹೊರಟ ಎಚ್‌ಎಸ್‌ಆರ್ ಲೇಔಟ್‌ ಪೋಲೀಸರು, ಮಲಯಾಳಂನ ಕಿರುತೆರೆ ಸಹನಟ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಇತ್ತೀಚೆಗೆ ಸುಮಾರು ಯುವಕರು ಕೆಟ್ಟ ಚಟಗಳಿಗೆ ತುತ್ತಾಗುತ್ತಿದ್ದು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಿಕಾಂ ಪದವಿ  ಮುಗಿಸಿ ಕೆಲಸಕ್ಕೆ ಬಂದ ಯುವಕರಾದ ಶಾಹಿದ್‌ ಮತ್ತು ಜಿತಿನ್‌ ಎಂಬುವವರಲ್ಲಿ ಒಬ್ಬ ಮೊಬೈಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರಿಗೆ  ಮಲಯಾಳಂ ನಟ ಶಿಯಾಜ್‌ನ ಪರಿಚಯವಾಗಿ ಮೂವರು ಡ್ರಗ್ಸ್‌ ಮಾರಾಟ ದಂಧೆಗೆ ಇಳಿದಿದ್ದರು. ಕೇರಳ ಮತ್ತು ಇತರೆ ರಾಜ್ಯಗಳ ಮೂಲದಿಂದ ಡ್ರಗ್ಸ್‌ ತರಿಸಿ ಕೆಲ ಶಾಲಾ ವಿದ್ಯಾರ್ಥಿಗಳಿಗೆ, ಖಾಸಗಿ ಕಂಪನಿ ಉದ್ಯೋಗಿಗಳಿಗೆ, ಕಾರ್ಮಿಕರಿಗೆ ಅದನ್ನು ಮಾರಾಟ ಮಾಡಿ ಬರುವ ಹಣದಲ್ಲಿ ಮೂವರು ಐಷಾರಾಮಿ ಜೀವನ ನಡೆಸುತ್ತಿದ್ದರು. ಹಾಗೇಯೇ ನಗರದಲ್ಲಿ ನಡೆಯುವ ರಾತ್ರಿ ಪಾರ್ಟಿಗಳಿಗೂ ಡಗ್ಸ್‌ ಪೂರೈಕೆ ಮಾಡುತ್ತಿದ್ದರು ಎಂದು ಮಾಹಿತಿ ಕೇಳಿಬಂದಿದ್ದು ಮೂವರನ್ನು ಪೋಲೀಸರು ಬಂಧಿಸಿದ್ದಾರೆ.

ಕೇರಳದ ಸಹನಟ ಶಿಯಾಜ್‌, ಮೊಹಮ್ಮದ್ ಶಾಹಿದ್‌ ಮತ್ತು ಮಂಗಲ್‌ ತೋಡಿ ಜಿತಿನ್‌ ಬಂಧಿತ ಆರೋಪಿಗಳಾಗಿದ್ದು ಇವರಿಂದ 12.50 ಲಕ್ಷ ರೂ ಮೌಲ್ಯದ ಎಂಡಿಎಂಎ ಹಾಗೂ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಮತ್ತು ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗಿತ್ತಿದೆ ಎಂದು ಎಚ್‌ಎಸ್‌ಆರ್ ಲೇಔಟ್‌ ಪೋಲೀಸರು ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ಡ್ರಗ್ಸ್ ಪೂರೈಕೆ : ಇಬ್ಬರು ಆರೋಪಿಗಳ ಬಂಧನ
ದೆಹಲಿ : ದೇಶಾದ್ಯಂತ ಡ್ರಗ್ಸ್‌ ಪೂರೈಕೆ  ಮಾಡುತ್ತಿದ್ದ ಕಾರ್ಟೆಲ್‌ನ ಇಬ್ಬರು ಪ್ರಮುಖ ಸದಸ್ಯರನ್ನು ಬಿಹಾರ ಪೋಲೀಸರು ಬಂಧಿಸಿದ್ದಾರೆ.

ಅಂತಾರಾಷ್ಟ್ರೀಯ ಮಾದಕ ವಸ್ತುಗಳನ್ನು ಭೇದಿಸಿದ್ದು, ಕಾರ್ಟೆಲ್‌ನ ಅಭಿಷೇಕ್ ರಾಜ ಮತ್ತು ನಿಜಾಮುದ್ದೀನ್ ಎಂಬ ಇಬ್ಬರು ಪ್ರಮುಖ ಸದಸ್ಯರನ್ನು ಬಿಹಾರದಿಂದ ಬಂಧಿಸಲಾಗಿದೆ. ಹೆರಾಯಿನ್‌ ಮತ್ತು ಆಫೀಮನ್ನು ಮ್ಯಾನ್ಮಾರ್‌ನಿಂದ ಮಣಿಪುರದ ಮೂಲಕ ಭಾರತಕ್ಕೆ ಸಾಗಣೆ ಮಾಡಿದ್ದ 20 ಕೆಜಿ( 10 ಕೆಜಿ ಹೆರಾಯಿನ್ ಮತ್ತು 10 ಕೆಜಿ ಅಫೀಮು) ಮಾದಕ ವಸ್ತುಗಳು,   ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂತಾರಾಷ್ಟ್ರೀಯ ಮೌಲ್ಯ 60 ಕೋಟಿ ರೂ ಆಗಿದೆ. ಬಂಧಿತ ಆರೋಪಿಗಳು ತಮ್ಮ ಸಹಚರರೊಂದಿಗೆ ಕಳೆದ ಮೂರು ವರ್ಷಗಳಿಂದ ದೆಹಲಿ ಎನ್‌ಸಿಆರ್ ಮತ್ತು ಇತರ ರಾಜ್ಯಗಳಲ್ಲಿ ಡ್ರಗ್ಸ್ ಪೂರೈಕೆಯಲ್ಲಿ ತೊಡಗಿದ್ದಾರೆ ಎಂದು ದೆಹಲಿ ವಿಶೇಷ ಸೆಲ್‌ ಮಾಧ್ಯಮಗಳಿಗೆ ತಿಳಿಸಿದೆ.

ಮುಂದಿನ ದಿನಗಳಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಪಂಜಾಬ್‌ ಮುಕ್ತ : ಎಡಿಜಿಪಿ ನರೇಶ್‌ ಅರೋರ
ಪಂಜಾಬ್ : ಅಮೃತಸರದಲ್ಲಿ ಇಂದು ಡ್ರಗ್ಸ್ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಪಂಜಾಬ್‌ಅನ್ನು ಮಾದಕ ವಸ್ತುಗಳ ಬಳಕೆಯಿಂದ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಅಲ್ಲಿನ ಎಡಿಜಿಪಿ ನರೇಶ್‌ ಅರೋರ ಹೇಳಿದ್ದಾರೆ.

ಇತ್ತೀಚೆಗೆ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದ್ದು ಜನರು ಕೆಟ್ಟ ಚಟಗಳಿಗೆ ತುತ್ತಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದಿನೇ ದಿನೇ ಡ್ರಗ್ಸ್‌ ದಂದೆ ಹೆಚ್ಚುತ್ತಿದ್ದು ತನಿಖೆ ಶುರು ಮಾಡಿರುವ ಅಲ್ಲಿನ ಪೋಲಿಸರು ಇಂದು ಅಮೃತಸರದಲ್ಲಿ ಡ್ರಗ್ಸ್ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಕುರಿತು ಮಾತನಾಡಿದ ಅಲ್ಲಿನ ಎಡಿಜಿಪಿ ಅಪರಾಧಿಗಳನ್ನು ʼಹಿಡಿಯುವುದು ಮತ್ತು ಅದರ ಬಳಕೆಯನ್ನು ತಡೆಯುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲೂ ಡಿ-ಅಡಿಕ್ಷನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿನ ಜನರ ಸಹಕಾರದಿಂದ ಪಂಜಾಬ್ಅನ್ನು ಮಾದಕ ವಸ್ತುಗಳ ಬಳಕೆಯಿಂದ ಮುಕ್ತಗೊಳಿಸುತ್ತೇವೆʼ ಎಂದು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ದೋಣಿ ವಶ: ಐಸಿಜಿ
ಗುಜರಾತ್:‌ ಬುಧವಾರ ಬೆಳಗ್ಗೆ  ಭಾರತೀಯ ಕೋಸ್ಟ್‌ ಗಾರ್ಡ್‌ ಮತ್ತು ಗುಜರಾತ್‌ ಭಯೊತ್ಪಾದನಾ ನಿಗ್ರಹ ದಳ (ಎಟಿಎಸ್)‌ ಜಂಟಿ ಕಾರ್ಯಚರಣೆ ನಡಿಸಿ 200 ಕೋಟಿ ರೂಪಾಯಿ ಮೌಲ್ಯದ 40 ಕೆಜಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ದೋಣಿಯನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಭಾರತೀಯ ಕೋಸ್ಟ್‌ ಗಾರ್ಡ್‌(ಐಸಿಜಿ) ಅಧಿಕಾರಿಗಳು ಮಾಹಿತಿ ನೀಡಿದ್ದು, ಇಂದು ಮುಂಜಾನೆ ಎರಡು ಇಂಡಿಯನ್‌ ಕೋಸ್ಟ್‌ ಗಾರ್ಡ್‌ನ ದೋಣಿಗಳು ಗುಜರಾತ್‌ನ ಜಖೌ ಕಾರವಳಿಯಿಂದ 33 ಮೈಲಿ ದೂರದಲ್ಲಿದ್ದ ದೋಣಿಯನ್ನು ಹಿಡಿದು, ಕೋಟಿ-ಕೋಟಿ ಬೆಲೆಬಾಳುವ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನಲೆ ಹೆಚ್ಚಿನ ತನಿಖೆಗೆ ದೋಣಿಯೊಂದಿಗೆ ಅದರಲ್ಲಿದ್ದ ಸಿಬ್ಬಂದಿಯನ್ನು ಜಕೌಗೆ ಕರೆತರಲಾಗಿದೆ ಎಂದು ಐಸಿಜಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.