earth quake – Peepal Media

Earthquake : ನೇಪಾಳ, ದೆಹಲಿ ಹಾಗೂ ಲಕ್ನೋ ಪ್ರದೇಶದಲ್ಲಿ ಮತ್ತೆ ಕಂಪಿಸಿದ ಭೂಮಿ, ಹೆಚ್ಚಿದ ಆತಂಕ
ಕೆಲವೇ ದಿನಗಳ ಹಿಂದಷ್ಟೇ ನೇಪಾಳದಲ್ಲಿ ತೀವ್ರ ಭೂಕಂಪವಾದ ಸಂದರ್ಭದಲ್ಲಿ ದೆಹಲಿ ಹಾಗೂ ಸುತ್ತಲಿನ ನಗರಗಳಲ್ಲೂ ಭೂಮಿ ಕಂಪಿಸಿ, ಅಲ್ಲಿನ ಜನರನ್ನು ಆತಂಕಕ್ಕೆ ದೂಡಿತ್ತು. ಆ ಘಟನೆ ನಂತರ ಮತ್ತೆ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ.

ಸೋಮವಾರ ಮಧ್ಯಾಹ್ನ 4.22 ರ ವೇಳೆಗೆ ತೀವ್ರವಾಗಿ ಕಂಪಿಸಿದ ಭೂಮಿ, ದೆಹಲಿ-ಎನ್ಸಿಆರ್ ಮತ್ತು ಲಕ್ನೋ ಪ್ರದೇಶದಲ್ಲಿ ಭೂಕಂಪನವಾಗಿದೆ. ನೇಪಾಳದಲ್ಲೂ ಇದೇ ಸಂದರ್ಭದಲ್ಲಿ ಭೂಮಿ ತೀವ್ರವಾಗಿ ಕಂಪಿಸಿದ ಬಗ್ಗೆ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ 5.6 ರ ತೀವ್ರತೆಯಲ್ಲಿ ಭೂಕಂಪನ ಸಂಭವಿಸಿದೆ.

ಕಳೆದ ಕೆಲವೇ ದಿನಗಳ ಹಿಂದೆಯೂ ನೇಪಾಳದಲ್ಲಿ ಭೂಮಿ ಕಂಪಿಸಿತ್ತು. ಅದೇ ಸಮಯದಲ್ಲಿ ದೆಹಲಿ ಸುತ್ತಲಿನ ಪ್ರದೇಶದಲ್ಲಿ ಭೂಮಿ ಕಂಪನದ ಅನುಭವ ಆಗಿದೆ. ಇಂದೂ ಸಹ ಇದು ಮರುಕಳಿಸಿದ್ದು ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.

Earthquake of Magnitude:5.6, Occurred on 06-11-2023, 16:16:40 IST, Lat: 28.89 & Long: 82.36, Depth: 10 Km ,Region: Nepal for more information Download the BhooKamp App https://t.co/TXMwjzCLks @KirenRijiju @Ravi_MoES @Dr_Mishra1966 @ndmaindia @Indiametdept pic.twitter.com/HM8ZaYMlZH
— National Center for Seismology (@NCS_Earthquake) November 6, 2023

ನೇಪಾಳದಲ್ಲಿ ಭೂಕಂಪ, ದೆಹಲಿ ಹಾಗೂ ಸುತ್ತಮುತ್ತಲೂ ಕಂಪಿಸಿದ ಭೂಮಿ
ನೇಪಾಳದಲ್ಲಿ ಬಾರಿ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯನ್ನು ಹೊಂದಿದೆ ಎಂದು ವರದಿಯಾಗಿದೆ. ಪರಿಣಾಮ ಸುಮಾರು ಕೆಲವು ಕಟ್ಟಡಗಳು ನೆಲಕ್ಕುರುಳಿದ್ದು ಅಂದಾಜು 50 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ನೇಪಾಳದಲ್ಲಿನ ಭೂಕಂಪದ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭೂಕಂಪದ ಅನುಭವ ಆಗಿದೆ. ಶುಕ್ರವಾರ ತಡರಾತ್ರಿ ಭೂಕಂಪದ ತೀವ್ರತೆ ಹೆಚ್ಚಿದ್ದು, ದೆಹಲಿ ಹಾಗೂ ದೆಹಲಿಗೆ ಹೊಂದಿಕೊಂಡಂತಿರುವ ಇನ್ನಿತರ ನಗರಗಳಲ್ಲೂ ಭೂಮಿ ಕಂಪಿಸಿದೆ.

ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿ 10 ಕಿ.ಮೀ ಆಳದಲ್ಲಿದೆ ಎಂದು ಎನ್ಸಿಎಸ್ ತಿಳಿಸಿದೆ. ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್ಸಿಆರ್) ಜನರು ಬಲವಾದ ಕಂಪನವನ್ನು ಅನುಭವಿಸಿದ ಪರಿಣಾಮ ತಮ್ಮ ಮನೆಗಳಿಂದ ಹೊರಗೆ ಧಾವಿಸಿದ್ದಾರೆ. ಹಲವರು ನಿದ್ರೆಯೇ ಇಲ್ಲದೆ ರಾತ್ರಿ ಕಳೆದಿದ್ದಾರೆ.

ನೇಪಾಳದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಒಂದು ತಿಂಗಳಲ್ಲಿ ಇದು ಮೂರನೇ ಬಾರಿ ಸಂಭವಿಸಿರುವ ಭೂಕಂಪವಾಗಿದೆ. ಭೂಮಿ ಕಂಪಿಸಿದ ಅನುಭವವಾಗುತ್ತಲೇ ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳ ಜನ ಮನೆಯಿಂದ ಹೊರಗೆ ಬಂದರು. ಮನೆಯಲ್ಲಿರುವ ಫ್ಯಾನ್‌ ಸೇರಿ ಹಲವು ವಸ್ತುಗಳು ಅಲುಗಾಡುತ್ತಲೇ ಜನ ಆತಂಕ್ಕೀಡಾದರು. ಹಲವೆಡೆ ಇನ್ನೂ ಒಂದಷ್ಟು ಜನ ಮನೆಯೊಳಗೆ ಹೋಗಲು ಭಯಪಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದ ಉತ್ತರ ಭಾಗದ ದೇಶಗಳಾದ ನೇಪಾಳ, ಅಫ್ಘಾನಿಸ್ತಾನದಲ್ಲಿ ಭೂಕಂಪನ ತೀವ್ರತೆ ಹೊಂದಿದ್ದರ ಬಗ್ಗೆ ಗಮನಿಸಬಹುದು. 2 ತಿಂಗಳ ಹಿಂದಷ್ಟೇ ಆಫ್ಘಾನಿಸ್ತಾನದಲ್ಲಿ ಸಂಭವಿಸಿದ ಭಾರೀ ಭೂಕಂಪದಲ್ಲಿ ಸುಮಾರು 2,000 ಮಂದಿ ಮೃತಪಟ್ಟ ಬಗ್ಗೆಯೂ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭೂಕಂಪದ ಅನುಭವವಾದ ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ಜನ ಆತಂಕದಿಂದ ರಾತ್ರಿ ಕಳೆದಿದ್ದಾರೆ.

ಅಫ್ಘಾನಿಸ್ಥಾನ್‌ ಭೂಕಂಪ ದುರಂತ: ಹೆಣದ ರಾಶಿಯಡಿ ಹೆರಾತ್ ಪ್ರಾಂತ್ಯ
ಕುರುಹುಗಳಿಲ್ಲದ ಹಳ್ಳಿಗಳು.. ಅವಶೇಷಗಳನ್ನು ತೆಗೆಯುವಾಗ ಹೊರಬರುತ್ತಿರುವ ಶವಗಳು.. ಮೃತ ಬಂಧುಗಳ ರೋದನ.. ಅವರ ಮೃತದೇಹಗಳೆದುರು ರಾತ್ರಿ ಜಾಗರಣೆ… ಉಟ್ಟ ಬಟ್ಟೆ ಬಿಟ್ಟು ಬೇರೇನೂ ಇಲ್ಲದ ದಿನನಿತ್ಯದ ಜೀವನ.. ಇನ್ನೂ ತಮ್ಮವರ ಕುರುಹು ಕಾಣದ ಎಷ್ಟೋ ಕುಟುಂಬಗಳು.. ಇವು ಭಾರೀ ಭೂಕಂಪಗಳ ಸರಣಿಯಿಂದ ಧ್ವಂಸಗೊಂಡಿರುವ ಅಫ್ಘಾನಿಸ್ತಾನದಲ್ಲಿ ಕಂಡು ಬಂದ ಹೃದಯವಿದ್ರಾವಕ ದೃಶ್ಯಗಳು.

ಪಶ್ಚಿಮ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೂಕಂಪಗಳ ಸರಣಿಯಲ್ಲಿ ಸತ್ತವರ ಸಂಖ್ಯೆ 2 ಸಾವಿರ ಮೀರಿದೆ. 2,060 ಜನರು ಸಾವನ್ನಪ್ಪಿದ್ದಾರೆ, 9,240 ಜನರು ಗಾಯಗೊಂಡಿದ್ದಾರೆ ಮತ್ತು ಹಲವಾರು ಹಳ್ಳಿಗಳು ಮತ್ತು ನೂರಾರು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ತಾಲಿಬಾನ್ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಮೊದಲು 6.3 ತೀವ್ರತೆಯೊಂದಿಗೆ ಭಾರಿ ಭೂಕಂಪ ಸಂಭವಿಸಿದೆ, ನಂತರ 8 ಹೆಚ್ಚು ಶಕ್ತಿಶಾಲಿ ಉತ್ತರಾಘಾತಗಳು ಸಂಭವಿಸಿದವು. ಶನಿವಾರ ರಾತ್ರಿಯವರೆಗೆ 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೆಲವರು ಇಡೀ ರಾತ್ರಿ ಮೃತರ ಶವದ ಬಳಿ ಅಳುತ್ತಾ ಕಳೆದರೆ.. ಇನ್ನು ಕೆಲವರು ಕುಟುಂಬಸ್ಥರ ಕುರುಹು ತಿಳಿಯದೆ ಕತ್ತಲಲ್ಲಿ ಅವಶೇಷಗಳ ನಡುವೆ ರಾತ್ರಿ ಕಳೆದರು.

ಬೆಳಗಾಗಿ ಸೂರ್ಯ ಹೊರ ಬಂದಾಗ ಬಹಳ ಕಷ್ಟಪಟ್ಟು ಅವಶೇಷಗಳನ್ನು ತೆಗೆದು ಉಳಿದವರ ಶವಗಳನ್ನು ಹೊರತೆಗೆಯಲಾಯಿತು. ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಸಿದ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ ಬಾಲಕಿಯನ್ನು ಸ್ಥಳೀಯರು ರಕ್ಷಿಸಿದ ವಿಡಿಯೋವೊಂದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕಳೆದ ವರ್ಷ ಜೂನ್‌ನಲ್ಲಿ ಪೂರ್ವ ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ 5.9 ತೀವ್ರತೆಯ ಭೂಕಂಪದಲ್ಲಿ 1,000 ಜನರು ಸಾವನ್ನಪ್ಪಿದ್ದರು. ಈಗ ದುಪ್ಪಟ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ನಡೆಯುತ್ತಿರುವ ಪರಿಹಾರ ಕಾರ್ಯಗಳು

ಸೇನೆಯೊಂದಿಗೆ ಸ್ವಯಂ ಸೇವಾ ಸಂಸ್ಥೆಗಳ ತಂಡಗಳು ಪರಿಹಾರ ಕಾರ್ಯಗಳನ್ನು ನಡೆಸುತ್ತಿವೆ. 7 ತಂಡಗಳನ್ನು ಕಳುಹಿಸಲಾಗಿದೆ ಮತ್ತು ಇನ್ನೂ ಕೆಲವು ತಂಡಗಳು ಇತರ ಪ್ರಾಂತ್ಯಗಳಿಂದ ಬರಲಿವೆ ಎಂದು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಯ ಪ್ರತಿನಿಧಿ ಇರ್ಫಾನುಲ್ಲಾ ತಿಳಿಸಿದ್ದಾರೆ. ಹೆರಾತ್ ಪ್ರಾದೇಶಿಕ ಆಸ್ಪತ್ರೆಯಲ್ಲಿ ವೈದ್ಯರು 5 ಶಿಬಿರಗಳನ್ನು ಸ್ಥಾಪಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವಿಶ್ವಸಂಸ್ಥೆ ವಲಸೆ ಸಂಸ್ಥೆಯು ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಿತು. ಭೂಕಂಪ ಪೀಡಿತ ಪ್ರದೇಶಗಳಿಗೆ ಅಗತ್ಯ ನೆರವು ನೀಡುವುದಾಗಿ ಪಾಕಿಸ್ತಾನ ಹೇಳಿದೆ. ಅಫ್ಘಾನ್ ಕ್ರಿಕೆಟಿಗ ರಶೀದ್ ಖಾನ್ ಅವರು ತಮ್ಮ ಎಲ್ಲಾ ಕ್ರಿಕೆಟ್ ವಿಶ್ವಕಪ್ ಸಂಭಾವನೆಯನ್ನು ಭೂಕಂಪ ಸಂತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ, ದೆಹಲಿ-ಎನ್‌ಸಿಆರ್‌ ಪ್ರದೇಶದಲ್ಲಿ ಕಂಪನದ ಅನುಭವ
ದೆಹಲಿ: ಭೂಕಂಪನದ ಕೇಂದ್ರವನ್ನು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರವು ನೇಪಾಳದ ಗಡಿಯಲ್ಲಿರುವ ಉತ್ತರಾಖಂಡದ ಪಿಥೋರಗಢ್‌ನ ಆಗ್ನೇಯಕ್ಕೆ 90 ಕಿ.ಮೀ ದೂರದಲ್ಲಿದೆ ಎಂದು ಗುರುತಿಸಿದೆ.

ನೇಪಾಳದ ಗಡಿಯ ಗುಂಟ ಉತ್ತರಾಖಂಡದ ಪಿಥೋರಗಢ್ ಬಳಿಯ ಹಿಮಾಲಯ ಪ್ರದೇಶದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಬುಧವಾರದ ಬೆಳಗಿನ ಜಾವ ಉತ್ತರ ಭಾರತದಾದ್ಯಂತ ಬಲವಾದ ಕಂಪನಗಳು ಜನರ ಅನುಭವಕ್ಕೆ ಬಂದವು.

ಭೂಕಂಪನದ ಕೇಂದ್ರಬಿಂದುವು ನೇಪಾಳದಲ್ಲಿದ್ದು, ಉತ್ತರಾಖಂಡದ ಪಿಥೋರಗಢ್‌ನ ಪೂರ್ವ-ಆಗ್ನೇಯಕ್ಕೆ ಸುಮಾರು 90 ಕಿಮೀ ದೂರದಲ್ಲಿ ಬುಧವಾರ ಮುಂಜಾನೆ 1.57 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ದೆಹಲಿ ಮತ್ತು ಗಾಜಿಯಾಬಾದ್ ಮತ್ತು ಗುರುಗ್ರಾಮ್‌ನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಲಕ್ನೋದಲ್ಲಿ ಸಹ ಕಂಪನದ ಅನುಭವವಾಗಿದ್ದು, ಜನರು ತಮ್ಮ ನಿದ್ದೆಯಿಂದೆದ್ದು ಗಾಬರಿಗೊಳಗಾಗಿದ್ದಾರೆಂದು ವರದಿಗಳು ಹೇಳಿವೆ.

ಉತ್ತರಾಖಂಡದ ಹಿಮಾಲಯ ಪ್ರದೇಶ ಮತ್ತು ನೇಪಾಳದ ಸುತ್ತಮುತ್ತ ಕಳೆದೆರಡು ದಿನಗಳಿಂದ ಕಡಿಮೆ ಪ್ರಮಾಣದ ಭೂಕಂಪಗಳು ಸಂಭವಿಸುತ್ತಿವೆ. ಈ ಪ್ರದೇಶವು ಮಂಗಳವಾರ ಸಂಜೆ 4.9 ಮತ್ತು 3.5 ತೀವ್ರತೆಯ ಕನಿಷ್ಠ ಎರಡು ಭೂಕಂಪನಗಳಿಗೆ ಸಾಕ್ಷಿಯಾಗಿವೆಯೆಂದು ಎಂದು NCS ಡೇಟಾ ಹೇಳುತ್ತದೆ.