Ekanath Shinde – Peepal Media

ಕುನಾಲ್ ಕಾಮ್ರಾ ಪ್ರದರ್ಶನದ ವೇದಿಕೆಯನ್ನು ಧ್ವಂಸ ಮಾಡಿದ ಆರೋಪದ ಮೇಲೆ 12 ಶಿಂಧೆ ಸೇನಾ ಕಾರ್ಯಕರ್ತರ ಬಂಧನ
ಮುಂಬೈ ಪೊಲೀಸರು ಸೋಮವಾರ ನಗರದ ಖಾರ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವನ್ನು ಧ್ವಂಸ ಮಾಡಿದ್ದಕ್ಕಾಗಿ ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಣದ 12 ಸದಸ್ಯರನ್ನು ಬಂಧಿಸಿದ್ದಾರೆ. ಕಾಮಿಡಿಯನ್ ಕುನಾಲ್ ಕಾಮ್ರಾ ಉಪಮುಖ್ಯಮಂತ್ರಿಯನ್ನು ಟೀಕಿಸುವ ಹಾಸ್ಯ ಪ್ರದರ್ಶನ ನೀಡಿದ್ದರು.

ಕಾಮ್ರಾ ತನ್ನ ಪ್ರದರ್ಶನದಲ್ಲಿ ಶಿಂಧೆಯನ್ನು “ದೇಶದ್ರೋಹಿ ” ಎಂದು ಉಲ್ಲೇಖಿಸಿರುವ ವೀಡಿಯೊಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಡಿದ ನಂತರ ಕಾರ್ಯಕರ್ತರು ಭಾನುವಾರ ದಿ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸಿದರು .

ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ 2022 ರಲ್ಲಿ ಶಿಂಧೆ ನಡೆಸಿದ ದಂಗೆ ಮತ್ತು ನಂತರದ ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯನ್ನು ಕಾಮ್ರಾ ಉಲ್ಲೇಖಿಸುತ್ತಿದ್ದರು. ಆದರೆ ಅವರು ಶಿಂಧೆ ಹೆಸರನ್ನು ಉಲ್ಲೇಖಿಸಲಿಲ್ಲ.

‌ಹೆಸರು ತಿಳಿಸಲು ಇಚ್ಚಿಸದ ಮುಂಬೈ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ, ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದ್ದು, ಶಿಂಧೆ ಸೇನಾ ಯುವ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಹುಲ್ ಕನಾಲ್ ಸೇರಿದಂತೆ 12 ಜನರನ್ನು ಬಂಧಿಸಲಾಗಿದೆ.

ಏಕನಾಥ್ ಶಿಂಧೆ ಬಗ್ಗೆ ತಮಾಷೆ ಮಾಡಿದ ಕಾಮಿಡಿಯನ್ ಕುನಾಲ್ ಕಾಮ್ರಾ: ಶಿವಸೇನಾ ಕಾರ್ಯಕರ್ತರಿಂದ ಸ್ಥಳ ಧ್ವಂಸ

ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಕನಾಲ್, ಕುನಾಲ್ ಸರ್ಮಾಲ್ಕರ್, ಅಕ್ಷಯ್ ಪನ್ವೇಲ್ಕರ್, ಗೋವಿಂದ್ ಪಾಡಿ, ರಾಹುಲ್ ತುರ್ಬಡ್ಕರ್, ವಿಲಾಸ್ ಚವರಿ, ಅಮೀನ್ ಶೇಖ್, ಸಮೀರ್ ಮಹಾಪಾಡಿ, ಹಿಮಾಂಶು, ಶಶಾಂಕ್ ಕೊಡೆ, ಸಂದೀಪ್ ಮಲಾಪ್, ಗಣೇಶ್ ಹುಲ್ಪೆ, ಶೋಭಾ ಪಾಲ್ವೆ, ಕೃಷ್ಣಾ ಟಾಕುರ್‌, ಪವನ್‌ ಜ್ಯೋತಿ ಸೇಥಿ, ಖುರೇಷಿ ಹುನೆಫ್‌ ಮತ್ತು ಚಾಂದ್ ಶೇಖ್ ಅವರನ್ನು ಬಂಧಿಸಲಾಗಿದೆ.

ಪೊಲೀಸರು ಸುಮಾರು 20 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ .

ಸಾರ್ವಜನಿಕ ಸೇವಕರು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಕ್ರಿಮಿನಲ್ ಬಲಪ್ರಯೋಗ (ಸೆಕ್ಷನ್ 132), ಕಾನೂನುಬಾಹಿರ ಸಭೆ ಮತ್ತು ಅದರ ಶಿಕ್ಷೆ (ಸೆಕ್ಷನ್ 189(2), 189(3) ಮತ್ತು 190), ಗಲಭೆಗೆ ಶಿಕ್ಷೆ (ಸೆಕ್ಷನ್ 191(2)), ನಷ್ಟ ಅಥವಾ ಹಾನಿಗೆ ಶಿಕ್ಷೆ (ಸೆಕ್ಷನ್ 324(5) ಮತ್ತು 324(6)), ಸಾರ್ವಜನಿಕ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆ (ಸೆಕ್ಷನ್ 223), ಕ್ರಿಮಿನಲ್ ಬೆದರಿಕೆ (ಸೆಕ್ಷನ್ 351(2)), ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ (ಸೆಕ್ಷನ್ 352), ಗಾಯವನ್ನುಂಟುಮಾಡುವ ಸಿದ್ಧತೆಗಳೊಂದಿಗೆ ಮನೆ ಅತಿಕ್ರಮಣ (ಸೆಕ್ಷನ್ 333), ಖಾಸಗಿ ರಕ್ಷಣೆಯ ಹಕ್ಕಿಲ್ಲದ ಕೃತ್ಯಗಳು (ಸೆಕ್ಷನ್ 37(1)), ಮತ್ತು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ (ಸೆಕ್ಷನ್ 135) ಅಡಿಯಲ್ಲಿ ಅವರ ಮೇಲೆ ಆರೋಪ ಹೊರಿಸಲಾಗಿದೆ.

ಶಿಂಧೆ ಸೇನಾ ಶಾಸಕ ಮುರ್ಜಿ ಪಟೇಲ್ ಅವರ ದೂರಿನ ಆಧಾರದ ಮೇಲೆ ಕಾಮ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ . ಪಕ್ಷದ ನಾಯಕರು ಕಾಮಿಡಿಯನ್ ವಿರುದ್ಧ ” ತ್ವರಿತ ಕ್ರಮ ” ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ದಿ ಹ್ಯಾಬಿಟೇಟ್ ಸ್ಟುಡಿಯೋಗೆ ಬಿಎಂಸಿ ಕಾರ್ಯಕರ್ತರ ಮುತ್ತಿಗೆ

ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಸೋಮವಾರ ದಿ ಹ್ಯಾಬಿಟಾಟ್ ಸ್ಟುಡಿಯೋ ಇರುವ ಖಾರ್‌ನಲ್ಲಿರುವ ಯುನಿಕಾಂಟಿನೆಂಟಲ್ ಹೋಟೆಲ್‌ಗೆ ಸುತ್ತಿಗೆಗಳೊಂದಿಗೆ ಬಂದರ ಎಂದು ಪಿಟಿಐ ವರದಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಅಧಿಕಾರಿಗಳು ಹೋಟೆಲ್‌ನಲ್ಲಿರುವ “ಅನಧಿಕೃತ ಕಟ್ಟಡಗಳನ್ನು” ಕೆಡವಲು ಯೋಜಿಸಿದ್ದರು.

VIDEO | Kunal Kamra show controversy: BMC officials arrive at The Habitat Studio in Mumbai.

(Full video available on PTI Videos- https://t.co/dv5TRAShcC) pic.twitter.com/ItN7D1U22b
— Press Trust of India (@PTI_News) March 24, 2025

ಏಕನಾಥ್ ಶಿಂಧೆ ಬಗ್ಗೆ ತಮಾಷೆ ಮಾಡಿದ ಕಾಮಿಡಿಯನ್ ಕುನಾಲ್ ಕಾಮ್ರಾ: ಶಿವಸೇನಾ ಕಾರ್ಯಕರ್ತರಿಂದ ಸ್ಥಳ ಧ್ವಂಸ
ಮುಂಬೈನ ಖಾರ್‌ನಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಬಗ್ಗೆ ಕಾಮಿಡಿಯನ್ ಕುನಾಲ್ ಕಾಮ್ರಾ ಹಾಸ್ಯ ಮಾಡಿದ್ದ ಕಾರ್ಯಕ್ರಮ ಸ್ಥಳವನ್ನು ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಣದ ಕಾರ್ಯಕರ್ತರು ಭಾನುವಾರ ಧ್ವಂಸ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಭಾನುವಾರ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಜೋಕ್‌ನ ವೀಡಿಯೊಗಳಲ್ಲಿ, ಹಿಂದಿ ಚಲನಚಿತ್ರ ಹಾಡಿನ ಮಾರ್ಪಡಿಸಿದ ಆವೃತ್ತಿಯನ್ನು ಹಾಡುವಾಗ ಕಾಮ್ರಾ ಶಿಂಧೆ ಅವರನ್ನು ” ದೇಶದ್ರೋಹಿ ” ಎಂದು ಉಲ್ಲೇಖಿಸಿದ್ದಾರೆ ಎಂಬುದು ಆರೋಪವಾಗಿದೆ. 2022 ರಲ್ಲಿ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ನಡೆಸಿದ ದಂಗೆ ಮತ್ತು ಮಹಾರಾಷ್ಟ್ರದ ಸಾಮಾನ್ಯ ರಾಜಕೀಯ ಪರಿಸ್ಥಿತಿಯನ್ನು ಕಾಮ್ರಾ ಉಲ್ಲೇಖಿಸುತ್ತಿದ್ದರು.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಪ್ರದರ್ಶನದ ಸಮಯದಲ್ಲಿ ಕಾಮ್ರಾ ಶಿಂಧೆಯವರ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ.

ಶಿಂಧೆ ಸೇನಾ ಶಾಸಕ ಮುರ್ಜಿ ಪಟೇಲ್ ನೀಡಿದ ದೂರಿನ ಆಧಾರದ ಮೇಲೆ ಕಾಮ್ರಾ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಕಾಮಿಡಿಯನ್ ವಿರುದ್ಧ “ತ್ವರಿತ ಕ್ರಮ” ಕೈಗೊಳ್ಳಬೇಕೆಂದು ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.

“ಎರಡು ದಿನಗಳಲ್ಲಿ ಏಕನಾಥ್ ಶಿಂಧೆ ಅವರ ಬಳಿ ಬಂದು ಕ್ಷಮೆಯಾಚಿಸಬೇಕೆಂದು ನಾನು ಅವರಿಗೆ ಹೇಳಲು ಬಯಸುತ್ತೇನೆ, ಇಲ್ಲದಿದ್ದರೆ ಶಿವಸೈನಿಕರು ಅವರನ್ನು ಮುಂಬೈನಲ್ಲಿ ಮುಕ್ತವಾಗಿ ತಿರುಗಾಡಲು ಬಿಡುವುದಿಲ್ಲ. ಅವರು ಸಾರ್ವಜನಿಕವಾಗಿ ಎಲ್ಲಿಯಾದರೂ ಕಾಣಿಸಿಕೊಂಡರೆ, ನಾವು ಅವರ ಮುಖಕ್ಕೆ ಕಪ್ಪು ಬಣ್ಣ ಬಳಿಯುತ್ತೇವೆ… ನಾವು ಈ ವಿಷಯವನ್ನು ವಿಧಾನಸಭೆಯಲ್ಲಿ ಎತ್ತುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ರಾಜ್ಯದ ಗೃಹ ಸಚಿವರನ್ನು ವಿನಂತಿಸುತ್ತೇವೆ…” ಎಂದು ಪಟೇಲ್ ANI ಗೆ ತಿಳಿಸಿದರು.

#WATCH | Mumbai: Shiv Sena (Eknath Shinde faction) workers vandalised Habitat Comedy Club in Khar after comedian Kunal Kamra's remarks on Maharashtra DCM Eknath Shinde here sparked backlash. (23.03)

Source: Shiv Sena (Eknath Shinde faction) pic.twitter.com/L8pkt0TLM6
— ANI (@ANI) March 24, 2025

ಶಿಂಧೆ ಸೇನಾದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ಇತರ 19 ಜನರ ವಿರುದ್ಧವೂ ವಿಧ್ವಂಸಕ ಕೃತ್ಯಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.

ಭಾನುವಾರ ಧ್ವಂಸಗೊಂಡ ದಿ ಹ್ಯಾಬಿಟ್ಯಾಟ್ ಸ್ಥಳದ ನಿರ್ವಾಹಕರು, ದಾಳಿಯಿಂದ “ತೀವ್ರವಾಗಿ ಧ್ವಂಸವಾಗಿದೆ, ಕಲಾವಿದರು ತಮ್ಮ ಅಭಿಪ್ರಾಯಗಳು ಮತ್ತು ಸೃಜನಶೀಲ ಆಯ್ಕೆಗಳಿಗೆ ಮಾತ್ರ ಜವಾಬ್ದಾರರು” ಎಂದು ಸೋಮವಾರ ತಿಳಿಸಿದ್ದಾರೆ.

“ಯಾವುದೇ ಕಲಾವಿದರು ಪ್ರದರ್ಶಿಸಿದ ಕಾರ್ಯಕ್ರಮದಲ್ಲಿ ನಾವು ಎಂದಿಗೂ ಭಾಗಿಯಾಗಿಲ್ಲ, ಆದರೆ ಇತ್ತೀಚಿನ ಘಟನೆಗಳು ಪ್ರತಿ ಬಾರಿಯೂ ನಾವು ಪ್ರದರ್ಶಕರ ಪ್ರತಿನಿಧಿಯಂತೆ ಹೇಗೆ ದೂಷಿಸಲ್ಪಡುತ್ತೇವೆ ಮತ್ತು ಗುರಿಯಾಗಿಸಿಕೊಳ್ಳುತ್ತೇವೆ ಎಂಬುದರ ಕುರಿತು ಪುನರ್ವಿಮರ್ಶೆ ಮಾಡುವಂತೆ ಮಾಡಿದೆ” ಎಂದು ದಿ ಹ್ಯಾಬಿಟ್ಯಾಟ್ ಹೇಳಿಕೆಯಲ್ಲಿ ತಿಳಿಸಿದೆ.

“ನಮ್ಮನ್ನು ಮತ್ತು ನಮ್ಮ ಸೊತ್ತಿಗೆ ಯಾವುದೇ ಹಾನಿಯಾಗದಂತೆ  ಮುಕ್ತ ಅಭಿವ್ಯಕ್ತಿಗೆ ವೇದಿಕೆಯನ್ನು ಒದಗಿಸುವ ಅತ್ಯುತ್ತಮ ಮಾರ್ಗವನ್ನು ನಾವು ಕಂಡುಕೊಳ್ಳುವವರೆಗೆ ಅದು ಮುಚ್ಚಲ್ಪಡುತ್ತದೆ” ಎಂದು ಸ್ಥಳದ ನಿರ್ವಾಹಕರು ತಿಳಿಸಿದ್ದಾರೆ.

ಶಿವಸೇನಾ ನಾಯಕ ನರೇಶ್ ಮಸ್ಕೆ ಅವರು ಕಾಮ್ರಾ ಒಬ್ಬ “ಬಾಡಿಗೆ ಹಾಸ್ಯನಟ” ಎಂದು ಹೇಳಿದ್ದಾರೆ. ಕಾಮ್ರಾ ಮುಂದೆ ದೇಶದಲ್ಲಿ ಮುಕ್ತವಾಗಿ ಓಡಾಡಲು ಸಾಧ್ಯವಾಗುವುದಿಲ್ಲ ಎಂದು ಥಾಣೆ ಸಂಸದ ಎಚ್ಚರಿಸಿದ್ದಾರೆ ಎಂದು ANI ವರದಿ ಮಾಡಿದೆ.

“ಅವರು [ಕಾಮ್ರಾ] ಹಣಕ್ಕಾಗಿ ನಮ್ಮ ನಾಯಕ [ಶಿಂಧೆ] ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮಹಾರಾಷ್ಟ್ರವನ್ನು ಬಿಟ್ಟು, ಕುನಾಲ್ ಕಾಮ್ರಾ ಭಾರತದಲ್ಲಿ ಎಲ್ಲಿಯೂ ಮುಕ್ತವಾಗಿ ಹೋಗಲು ಸಾಧ್ಯವಿಲ್ಲ, ಶಿವಸೈನಿಕರು ಅವರಿಗೆ ಅವರ ಸ್ಥಾನ ಯಾವುದು ಎಂಬುದನ್ನು ತೋರಿಸುತ್ತಾರೆ,” ಎಂದು ಮ್ಹಾಸ್ಕೆ ಆರೋಪಿಸಿದರು.

Habitat Mumbai Ransacked by goons after @kunalkamra88's latest youtube video. pic.twitter.com/k0ZV242lDp
— Mohammed Zubair (@zoo_bear) March 23, 2025

ಶಿಂಧೆ ಅವರನ್ನು ಟೀಕಿಸಲು ಸಾಕಷ್ಟು ಪಕ್ಷದ ಕಾರ್ಯಕರ್ತರು ಇಲ್ಲದ ಕಾರಣ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣವು ಕಾಮ್ರಾ ಅವರನ್ನು ನೇಮಿಸಿಕೊಂಡಿದೆ ಎಂದು ಮ್ಹಾಸ್ಕೆ ಆರೋಪಿಸಿದ್ದಾರೆ.

“ನಾವು [ಶಿವಸೇನಾ ಸಂಸ್ಥಾಪಕ] ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಅನುಸರಿಸುತ್ತೇವೆ ಮತ್ತು ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರದಲ್ಲಾಗಲಿ ಅಥವಾ ದೇಶದಲ್ಲಾಗಲಿ ಮುಕ್ತವಾಗಿ ಓಡಾಡದಂತೆ ನೋಡಿಕೊಳ್ಳುತ್ತೇವೆ. ಕುನಾಲ್ ಕಾಮ್ರಾಗೆ ಸೂಕ್ತ ಉತ್ತರ ಸಿಗುತ್ತದೆ, ಮತ್ತು ಅವರು ಬಂದು ತಮ್ಮ ತಪ್ಪಿಗೆ ಕ್ಷಮೆಯಾಚಿಸುತ್ತಾರೆ” ಎಂದು ಅವರು ಹೇಳಿದರು.

ಮತ್ತೊಂದೆಡೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಆದಿತ್ಯ ಠಾಕ್ರೆ, ಸ್ಥಳದ ಮೇಲಿನ ದಾಳಿ ಹೇಡಿತನ ಎಂದು ಹೇಳಿದರು.

“ಮಿಂಧೆಯವರ ಹೇಡಿಗಳ ಗ್ಯಾಂಗ್ ಹಾಸ್ಯ ಪ್ರದರ್ಶನ ವೇದಿಕೆಯನ್ನು ಹಾನಿಮಾಡಿದೆ, ಅಲ್ಲಿ ಹಾಸ್ಯನಟ @kunalkamra88 ಏಕನಾಥ್ ಮಿಂಧೆಯ ಹಾಡನ್ನು ಹಾಡಿದರು, ಅವರು ಹೇಳಿದ್ದು 100% ಸತ್ಯ. ಯಾರಾದರೂ ಹಾಡಿದರೆ ಅದಕ್ಕೆ ಅಸುರಕ್ಷಿತ ಭಾವ ಇರುವ ಹೇಡಿ ಮಾತ್ರ ಪ್ರತಿಕ್ರಿಯಿಸುತ್ತಾನೆ” ಎಂದು ಆದಿತ್ಯ ಠಾಕ್ರೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದರು.

“ಮಿಂಧೆ” ಎಂಬುದು ಆದಿತ್ಯ ಠಾಕ್ರೆ ಅವರು ಶಿಂಧೆ ಅವರನ್ನು ಉಲ್ಲೇಖಿಸಲು ಹೆಚ್ಚಾಗಿ ಬಳಸುವ ಪದವಾಗಿದೆ.

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ? ಸಿಎಂ ಮತ್ತು ಗೃಹ ಸಚಿವರನ್ನು ದುರ್ಬಲಗೊಳಿಸಲು ಏಕನಾಥ್ ಮಿಂಧೆ ಮತ್ತೊಂದು ಪ್ರಯತ್ನ ಮಾಡಿದ್ದಾರೆ” ಎಂದು ವರ್ಲಿ ಶಾಸಕರು ಹೇಳಿದರು.

2019 ರ ವಿಧಾನಸಭಾ ಚುನಾವಣಾ ಫಲಿತಾಂಶಗಳ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಲು ನಿರಾಕರಿಸಿತು, ಮುಖ್ಯಮಂತ್ರಿ ಹುದ್ದೆಯನ್ನು ತಲಾ ಎರಡೂವರೆ ವರ್ಷಗಳ ಕಾಲ ತಮ್ಮ ನಡುವೆ ಹಂಚಲು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ಹೇಳಿಕೊಂಡಿತು.

ಠಾಕ್ರೆ ಅವರು ಅವಿಭಜಿತ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿ ಮುಖ್ಯಮಂತ್ರಿಯಾದರು. ಈ ಮೈತ್ರಿಕೂಟವನ್ನು ಮಹಾ ವಿಕಾಸ್ ಅಘಾಡಿ ಎಂದು ಕರೆಯಲಾಗುತ್ತದೆ.

ಜೂನ್ 2022 ರಲ್ಲಿ, ಶಿಂಧೆ ಠಾಕ್ರೆ ವಿರುದ್ಧ ಬಂಡಾಯವೆದ್ದರು ಮತ್ತು ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಸೇರಿದರು. ಶಿಂಧೆ ಮುಖ್ಯಮಂತ್ರಿಯಾದರು ಮತ್ತು ನವೆಂಬರ್ 2024 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟ ಗೆದ್ದ ನಂತರ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಬದಲಾಯಿಸುವವರೆಗೂ ಆ ಸ್ಥಾನದಲ್ಲಿಯೇ ಇದ್ದರು.

‘ಮಹಾ’ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ; ಅಜಿತ್ ಪವಾರ್ ತಗಾದೆ ಏನು?
ಇನ್ನೇನು ಎಲ್ಲಾ ತಿಳಿಯಾಯಿತು ಎನ್ನುವಾಗಲೇ ಮಹಾರಾಷ್ಟ್ರ ಸರ್ಕಾರದ ಬುಡ ಮತ್ತೆ ಅಲುಗಾಡಲು ಶುರುವಾಗಿದೆ. ಏಕನಾಥ್ ಶಿಂಧೆ ಬಣದ ಶಿವಸೇನೆ ಹಾಗೂ ಅಜಿತ್ ಪವಾರ್ ಬಣದ NCP ಸೇರಿ ಇತ್ತೀಚೆಗೆ ಸರ್ಕಾರ ರಚನೆಯ ಭಾಗವಾಗಿದ್ದವು. ಆದರೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಈಗ ಮತ್ತೆ ಈ ಎರಡು ಬಣಗಳ ನಡುವೆ ಶೀತಲ ಸಮರ ಏರ್ಪಟ್ಟಿದೆ.

ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಹೊಸದಾಗಿ ಸೇರಿಕೊಂಡಿರುವ NCPಯ ಅಜಿತ್‌ ಪವಾರ್‌ ಬಣ ಇಡುತ್ತಿರುವ ಬೇಡಿಕೆಗಳು ಈಗ ಏಕನಾಥ್ ಶಿಂಧೆ ಬಣಕ್ಕೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿದೆ. ಸಂಪುಟ ವಿಸ್ತರಣೆಯಿಂದ ಹಿಡಿದು, ರಾಜ್ಯದ ವಿವಿಧ ಭಾಗಗಳಲ್ಲಿ ತನಗೆ ಬೇಕಾದ ಅಧಿಕಾರದ ವಿಚಾರದಲ್ಲಿ NCP ಪದೇಪದೆ ಕಿರಿಕ್ ತಗೆಯುತ್ತಿರುವುದು ಶಿವಸೇನೆಗೆ ನುಂಗಲಾರದ ತುತ್ತಾಗಿದೆ.

ಇತ್ತ ಏಕನಾಥ್ ಶಿಂಧೆ ಬಣದ ಜೊತೆಗೆ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ಪಕ್ಷ, ಸರ್ಕಾರಕ್ಕೆ NCP ಪಕ್ಷದ ಆಗಮನದ ನಂತರ ಹೇಳ ಹೆಸರಿಲ್ಲದಂತೆ ಮೂಲೆಗುಂಪಾಗಿದೆ. ಇದೇ ಕಾರಣಕ್ಕೆ ದೇವೇಂದ್ರ ಫಡ್ನವೀಸ್ ಕೂಡಾ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲಿಗೆ ಬಿಜೆಪಿ ಯಾವ ಉದ್ದೇಶ ಇಟ್ಟು ಅಜಿತ್ ಪವಾರ್ ಬಣವನ್ನು ಆಪರೇಷನ್ ಮಾಡಿತೋ, ಅದರ ಸಂಪೂರ್ಣ ಲೆಕ್ಕಾಚಾರ ಉಲ್ಟಾ ಆದಂತಿದೆ.

ಸಧ್ಯ ಎದ್ದಿರುವ ಹೊಸ ತಲೆನೋವು ಅಂದರೆ, ಉಪ ಮುಖ್ಯಮಂತ್ರಿಯಾಗಿರುವ ಅಜಿತ್‌ ಪವಾರ್‌ ಈಗ ಸಿಎಂ ಸ್ಥಾನಕ್ಕೆ ಹಠ ಹಿಡಿದಿದ್ದಾರೆ ಎನ್ನಲಾಗಿದೆ. ಇದು ಜಿಗರಿ ದೋಸ್ತ್ ನಂತೆ ಇದ್ದ ಶಿವಸೇನೆ ಮತ್ತು ಬಿಜೆಪಿ ಮಧ್ಯೆ ಬಿರುಕು ಮೂಡಿಸಿದೆ. ‘ಅಜಿತ್ ಪವಾರ್ ಹಿರಿಯ ನಾಯಕರಿದ್ದಾರೆ. ನಮ್ಮದೂ ತಕ್ಕ ಮಟ್ಟಿಗೆ ಹೆಚ್ಚು ಶಾಸಕರ ಬಲವಿದೆ. ಅಜಿತ್ ಪವಾರ್ ಮುಖ್ಯಮಂತ್ರಿ ಆಗುವುದರಲ್ಲೂ ನ್ಯಾಯ ಇದೆ’ ಎನ್ನುವಂತೆ NCP ನಾಯಕರು ತೆರೆಮರೆಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.

ಮುಖ್ಯಮಂತ್ರಿ ಸ್ಥಾನದ ಬೇಡಿಕೆ ಈಗ ಯಾವ ಮಟ್ಟಕ್ಕೆ ಏರಿದೆ ಎಂದರೆ ತಮಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬೇಕೆಂದು ಅಜಿತ್‌ ಪವಾರ್‌ ಹಠ ಹಿಡಿದಿದ್ದಾರೆ ಎಂಬ ಸುದ್ದಿ ಮಹಾರಾಷ್ಟ್ರ ಕಡೆಯಿಂದ ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್, ಅಜಿತ್ ಪವಾರ್ ಜನಪ್ರಿಯ ನಾಯಕರಾಗಿದ್ದಾರೆ. ಅವರು ಮಹಾರಾಷ್ಟ್ರದ ಸಿಎಂ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಜಿತ್‌ ಪವಾರ್‌ ಅವರ ದೀರ್ಘ ಕಾಲದ ಕನಸಾಗಿದೆ. ಅದನ್ನು ನನಸು ಮಾಡಿಕೊಳ್ಳಲು ಅವರು ಮಹಾರಾಷ್ಟ್ರ ಸರ್ಕಾರದ ಭಾಗವಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಶರದ್ ಪವಾರ್ ನಾಯಕತ್ವದಲ್ಲಿ ಇದ್ದಾಗ ಮುಖ್ಯಮಂತ್ರಿ ಗಾದಿ ಕನಸಿನ ಮಾತಾಗಿತ್ತು. ಮೇಲಾಗಿ ಸೈದ್ಧಾಂತಿಕ ವಿರೋಧಿಗಳ ಜೊತೆಗೆ ಕೈ ಜೋಡಿಸಲು ಶರದ್ ಪವಾರ್ ಅಡ್ಡಗಾಲಾಗಿದ್ದರು. ಹಾಗಾಗಿ ಈಗ ಸಿಕ್ಕ ಅವಕಾಶವನ್ನು ಪಡೆದೇ ತೀರುವ ನಿರ್ಧಾರಕ್ಕೆ ಅಜಿತ್ ಪವಾರ್ ಬಂದಿದ್ದಾರೆ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಪವಾರ್‌ ಅವರು ಶಿಂಧೆ ಅವರ ಸ್ಥಾನಕ್ಕೆ ಬಂದು ಕುಳಿತುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ದೇವೇಂದ್ರ ಫಡ್ನವೀಸ್‌ ಅವರು ಇದೆಲ್ಲವೂ ಊಹಾಪೋಹವೆಂದು ಹೇಳಿದ್ದರು. ಆದರೆ, ಈಗ ಮತ್ತೆ ಅಜಿತ್‌ ಪವಾರ್‌ ಮುಖ್ಯಮಂತ್ರಿಯಾಗುವ ಕುರಿತು ವರದಿಗಳು ಪ್ರಕಟವಾಗಿವೆ.

ಈ ನಡುವೆ ಈ ಬಿಕ್ಕಟ್ಟಿಗೆ ಬಿಜೆಪಿಯೇ ನೇರ ಕಾರಣ ಎನ್ನಲಾಗಿದೆ. NCP ಪಕ್ಷವನ್ನು ಇಬ್ಬಾಗ ಮಾಡುವ ಉದ್ದೇಶ ಹೊಂದಿದ್ದ ಬಿಜೆಪಿ ಅಜಿತ್ ಪವಾರ್ ಗೆ ಮುಖ್ಯಮಂತ್ರಿ ಹುದ್ದೆಯ ಆಸೆ ತೋರಿಸಿಯೇ ಆಪರೇಷನ್ ಮಾಡಲಾಗಿತ್ತು ಎಂಬ ಇನ್ನೊಂದು ಸುದ್ದಿ ಎದುರಾಗಿದೆ. ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿಯಾಗಿ ಮಾಡುತ್ತೇವೆಂದು ಬಿಜೆಪಿ ಕೇಂದ್ರ ನಾಯಕತ್ವ ಭರವಸೆ ನೀಡಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ಬಿಕ್ಕಟ್ಟನ್ನು ಮತ್ತಷ್ಟು ಜಠಿಲಗೊಳಿಸಿದೆ.

‘ಬಿಜೆಪಿಯ ಉನ್ನತ ನಾಯಕತ್ವವು ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದಾಗಿ ಭರವಸೆ ನೀಡಿದೆ. ಕೇಂದ್ರ ಸರ್ಕಾರದಲ್ಲಿ ಎರಡು ಕ್ಯಾಬಿನೆಟ್ ಮಂತ್ರಿಗಳ ಸ್ಥಾನಗಳನ್ನು ಎನ್‌ಸಿಪಿಗೆ ನೀಡಬೇಕೆಂದು ಬೇಡಿಕೆ ಕೂಡಾ NCP ಇಟ್ಟಿತ್ತು. ಅದಕ್ಕೂ ಬಿಜೆಪಿ ನಾಯಕತ್ವ ಒಪ್ಪಿಕೊಂಡಿದೆ’ ಎಂದು ಎನ್‌ಸಿಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಈ ನಡುವೆ ಈ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಬಣ ಅವಕಾಶವನ್ನು ನಿಧಾನಕ್ಕೆ ಉಪಯೋಗಿಸಿಕೊಳ್ಳಲು ಶುರು ಮಾಡಿವೆ. ಕಾಂಗ್ರೆಸ್ ಕೂಡಾ ‘ಆಗಸ್ಟ್‌ 10 ರಂದು ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ನಿರ್ಧರಿಸಿದೆ. ಲೋಕಸಭೆ ಚುನಾವಣೆಯನ್ನು ಎದುರಿಸಲು ಏಕನಾಥ ಶಿಂಧೆ ಅನರ್ಹರು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಂಡಿದೆ’ ಎಂಬ ಹೇಳಿಕೆಯನ್ನು ಹರಿಬಿಟ್ಟಿದೆ. ಇನ್ನೊಂದು ಕಡೆ ಶಿಂಧೆ ಅವರ ಪರಮಾಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಶಿವಸೇನಾ ನಾಯಕರು ಆಕ್ರೋಶಗೊಂಡಿದ್ದಾರೆ.

ಒಟ್ಟಾರೆ ಈ ಎಲ್ಲಾ ಬೆಳವಣಿಗೆ ನೋಡಿದರೆ ಸರ್ಕಾರದ ಭಾಗವಾಗಿರುವ ಶಿವಸೇನೆ ಬಿಜೆಪಿ ಮತ್ತು NCP ಮೂರೂ ಪಕ್ಷಗಳು ಮೂರು ದಿಕ್ಕಿಗೆ ಮುಖ ಮಾಡಿವೆ. ಮೂರೂ ಪಕ್ಷಗಳ ಒಳಗೂ ‘ವಚನ ಭ್ರಷ್ಟತೆ’ ಮಾತುಗಳು ಕೇಳಿ ಬಂದಿವೆ. ಇವೆಲ್ಲಕ್ಕೂ ಸೂತ್ರದಾರನಾಗಿದ್ದ ಬಿಜೆಪಿ ಅಷ್ಟೂ ಲೆಕ್ಕಾಚಾರ ಇನ್ನು ಕೆಲವೇ ದಿನಗಳಲ್ಲಿ ತಲೆಕೆಳಗಾದರೂ ಆಶ್ಚರ್ಯವಿಲ್ಲ.

ಗಡಿ ವಿವಾದ: ಸಮಸ್ಯೆಯನ್ನು ಸಾಂವಿಧಾನಿಕ ರೀತಿಯಲ್ಲಿ ಪರಿಹರಿಸಲು ಇಬ್ಬರು ಸಿಎಂಗಳು ಸಮ್ಮತಿ- ಅಮಿತ್‌ ಶಾ
ಹೊಸದಿಲ್ಲಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಸಮಸ್ಯೆಯನ್ನು ಸಾಂವಿಧಾನಿಕ ರೀತಿಯಲ್ಲಿ ಪರಿಹರಿಸಲು ಎರೆಡು ರಾಜ್ಯಗಳ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭಾಗವಹಿಸಿದ್ದ ಈ ಸಭೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಮಿತ್ ಶಾ ಅವರು, ʼಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ನಡೆಯುತ್ತಿರುವ ಗಡಿ ವಿವಾದಗಳ ಬಗ್ಗೆ ನಾವು ಸಕಾರಾತ್ಮಕ ಚರ್ಚೆ ನಡೆಸಿದ್ದೇವೆ. ಎರಡೂ ಕಡೆಯವರು ಸಕಾರಾತ್ಮಕ ಮನೋಭಾವವನ್ನು ಉಳಿಸಿಕೊಂಡಿದ್ದಾರೆ ಮತ್ತು ಗಡಿ ವಿವಾದಗಳನ್ನು ರಸ್ತೆಗಳಲ್ಲಿ ಪರಿಹರಿಸಲು ಸಾಧ್ಯವಿಲ್ಲ ಮತ್ತು ಸಾಂವಿಧಾನಿಕ ವಿಧಾನಗಳ ಮೂಲಕ ಮಾತ್ರ ಮಾಡಬಹುದು ಎಂದು ಸರ್ವಾನುಮತದಿಂದ ನಿರ್ಧರಿಸಲಾಯಿತು ಎಂದು ಹೇಳಿದ್ದಾರೆ.

ʼಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಎರಡೂ ರಾಜ್ಯಗಳ ತಲಾ ಮೂವರು ಸಚಿವರು ಸೇರಿದಂತೆ ಒಟ್ಟು 6 ಸಚಿವರ ಸಮಿತಿಯು ವಿವರವಾದ ಮಾತುಕತೆ ನಡೆಸಲಿದೆ. ಇದಲ್ಲದೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು, ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದುʼ ಎಂದು ಹೇಳಿದ್ದಾರೆ.

ಉದ್ವಿಗ್ನತೆಯನ್ನು ಸೃಷ್ಟಿಸಲು ಟ್ವಿಟರ್ ಮೂಲಕ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಉಲ್ಲೇಖಿಸಿದ ಶಾ, ʼಹಿರಿಯ ನಾಯಕರ ಹೆಸರಿನ ನಕಲಿ ಟ್ವಿಟರ್ ಖಾತೆಗಳು ಈ ವಿಷಯವನ್ನು ಪ್ರಚೋದಿಸುವಲ್ಲಿ ಬಹಳ ದೊಡ್ಡ ಪಾತ್ರ ವಹಿಸಿವೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಇದರ ಹಿಂದಿರುವ ಜನರ ವಿರುದ್ಧ ಎಫ್ಐಆರ್‌ಗಳನ್ನು ದಾಖಲಿಸಲು ನಿರ್ಧರಿಸಲಾಗಿದೆ ಮತ್ತು ಅವುಗಳನ್ನು ಆದಷ್ಟು ಬೇಗ ಬಹಿರಂಗಪಡಿಸಲಾಗುವುದುʼ ಎಂದರು.

ವಿರೋಧ ಪಕ್ಷಗಳು ಸಹಕರಿಸುವಂತೆ ಮನವಿ ಮಾಡಿದ ಅಮಿತ್ ಶಾ ಅವರು, ʼಈ ವಿಷಯವನ್ನು ರಾಜಕೀಯಗೊಳಿಸದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕದ ವಿರೋಧ ಪಕ್ಷಗಳನ್ನು ನಾನು ಒತ್ತಾಯಿಸುತ್ತೇನೆ. ಈ ಸಮಸ್ಯೆಯನ್ನು ಪರಿಹರಿಸಲು ರಚಿಸಲಾದ ಸಮಿತಿಯ ಚರ್ಚೆಗಳ ಫಲಿತಾಂಶಕ್ಕಾಗಿ ಮತ್ತು ಸರ್ವೋಚ್ಚ ನ್ಯಾಯಾಲಯದ ನಿರ್ಧಾರಕ್ಕಾಗಿ ನಾವು ಕಾಯಬೇಕು. ಎನ್ಸಿಪಿ, ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಗುಂಪು ಸಹಕರಿಸುತ್ತವೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಕರವೇ ಆಕ್ರೋಶ
ಬೆಳಗಾವಿ : ಕರ್ನಾಟಕ – ಮಹಾರಾಷ್ಟ್ರ ಗಡಿವಿವಾದವು ತಾರಕಕ್ಕೇರಿದ್ದು, ಕರ್ನಾಟಕದ ಸರ್ಕಾರಿ ಬಸ್ಸುಗಳಿಗೆ ಮಸಿ, ಮತ್ತು ಕಲ್ಲು ತೂರಾಟ ಮಾಡಿರುವ ಹಿನ್ನಲೆಯಲ್ಲಿ, ಪ್ರತಿರೋಧವಾಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹರಾಷ್ಟ್ರದ ವಾಹನಗಳಿಗೆ ಮಸಿ ಬಳಿಯುವುದರ ಜೊತೆಗೆ ಮಹರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ವಿವಿಧ ನಗರಗಳಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯ ಹಲವು ಬಸ್‌ಗಳಿಗೆ ಅಖಿಲ ಮಹಾರಾಷ್ಟ್ರ ಮರಾಠಿಗರ ಸಂಘದ ಕಾರ್ಯಕರ್ತರು ಶುಕ್ರವಾರ ಕಪ್ಪು ಮಸಿ ಬಳಿದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅಷ್ಟಲ್ಲದೆ, ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಪ್ರತಿಭಟನೆ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಕರವೇ ಕಾರ್ಯಕರ್ತರು ಭಾನುವಾರದಂದು ಬೆಳಗಾವಿ ಗಡಿ ಭಾಗದಲ್ಲಿನ ಮಹಾರಾಷ್ಟ್ರ ವಾಹನಗಳಿಗೆ ಕಪ್ಪು ಮಸಿ ಬಳಿದಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿಯವರ ಪ್ರತಿಕೃತಿಯನ್ನು ದಹನಗೊಳಿಸುವುದರ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ದೀಪಕ್‌ ಗುಡಗನಟ್ಟಿ,ʼಮಹಾರಾಷ್ಟ್ರಿಗರ ಪುಂಡಾಟದಿಂದ ನಮಗೆಲ್ಲ ಬೇಸರವಾಗಿದ್ದು, ಈ ಹಿನ್ನೆಲೆಯಲ್ಲಿ ಕರವೇ ವತಿಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಯವರ ಪ್ರತಿಕೃತಿಯನ್ನು ದಹನ ಮಾಡುವುದರ ಮುಖಾಂತರ ನಮ್ಮ ಹೋರಾಟವನ್ನು ಮುಂದುವರೆಸಿ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆʼ ಎಂದರು.

ಮುಂದುವರೆದು ಮಾತನಾಡಿದ ಅವರು, ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಇಲ್ಲಿನ ಜನರು ಯಾರು ತುಟಿ ಬಿಚ್ಚುತ್ತಿಲ್ಲ. ನೀವು ಕನ್ನಡಿಗರ ಮತವನ್ನು ಪಡೆದುಕೊಂಡು ಕರ್ನಾಟಕ ಸರ್ಕಾರದ ಅಧಿಕಾರವನ್ನು ಅನುಭವಿಸುತ್ತಿದ್ದೀರಿ. ಹಾಗಾಗಿ ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ ನೀವೆಲ್ಲ ನಾಡಿನ ಪರವಾಗಿ ಮಾತನಾಡಬೇಕು. ಅದನ್ನು ಬಿಟ್ಟು, ನಾಡಿನ ಪರವಾಗಿ ಮಾತನಾಡಿದಾಗ ಬೇರೆ ಭಾಷಿಗರು ಮತವನ್ನು ಹಾಕುವುದಿಲ್ಲ ಎಂದು ತಿಳಿದುಕೊಂಡಿದ್ದರೆ, ನಾವು ಸಹ ಜಾಗೃತಿ ವಹಿಸಬೇಕಾಗುತ್ತದೆ. ಯಾವ ಪ್ರತಿನಿಧಿಗಳು ಕನ್ನಡ, ಕರ್ನಾಟಕ ಪರವಾಗಿ ಕಾರ್ಯ ನಿರ್ವಹಿಸುತ್ತಾರೋ ಅಂತಹವರಿಗೆ ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಕನ್ನಡಿಗರು ಹಾಗೂ ಕರವೇಯವರು ಮನೆಮನೆಗೂ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಕಾರಣ ತಕ್ಷಣವೇ ಸರ್ವ ಪಕ್ಷಗಳ ಸಭೆ ಕರೆದು, ದೆಹಲಿಗೆ ವಿಶೇಷ ನಿಯೋಗವನ್ನು ತೆಗೆದುಕೊಂಡು ಹೋಗಿ ಪ್ರಧಾನಿ ಮೋದಿಯವರಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಕಿವಿ ಹಿಂಡುವಂತಹ ಕೆಲಸ ಮಾಡಬೇಕು.ಮಹಾರಾಷ್ಟ್ರ ಸರ್ಕಾರ ಇಂತಹ ಗೂಂಡಾಗಳನ್ನು ಮುಂದಿಟ್ಟುಕೊಂಡು ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುತ್ತಿರುವ ಕೆಲಸವನ್ನು ತಡೆಗಟ್ಟಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ದೀಪಕ್‌ ಗುಡಗನಟ್ಟಿ ಒತ್ತಾಯಿಸಿದ್ದಾರೆ.

https://www.facebook.com/PeepalMediaKannada/videos/664519368672565

ಬೆಳಗಾವಿ ಗಡಿ ವಿವಾದ ವಿಚಾರಣೆ ; ಕರ್ನಾಟಕ ಸರ್ಕಾರದ ನಿಲುವೇನು?
1956 ರ ರಾಜ್ಯ ಪುನರ್ ವಿಂಗಡನಾ ಕಾಯ್ದೆಯನ್ನು ಪ್ರಶ್ನಿಸಿ 2004 ರಲ್ಲಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಉನ್ನತ ಮಟ್ಟದ ಸಮಿತಿ ಸೇರಿದಂತೆ ಸರ್ವ ಪಕ್ಷಗಳನ್ನು ಒಳಗೊಂಡಂತೆ ಮೇಲಿಂದ ಮೇಲೆ ಸಭೆಗಳನ್ನೂ ಸಹ ಮಾಡಿದೆ. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಾತ್ರ ಅದರ ಬಗೆಗಿನ ಸಿದ್ಧತೆ ಬಗ್ಗೆ ಇಲ್ಲಿಯವರೆಗೆ ತುಟಿ ಬಿಚ್ಚಿಲ್ಲ.

2004 ರಲ್ಲಿ ಸಲ್ಲಿಕೆಯಾದ ಅರ್ಜಿಯ ಬಗ್ಗೆ ಬರೋಬ್ಬರಿ 18 ವರ್ಷಗಳ ನಂತರ ಸುಪ್ರೀಂಕೋರ್ಟ್ ವಿಚಾರಣೆಗೆ ಸಿದ್ದವಾಗಿದ್ದು, ಗಡಿ ವಿವಾದವನ್ನು ಸುಪ್ರೀಂಕೋರ್ಟ್ ತಗೆದುಕೊಳ್ಳಬೇಕೇ, ಬೇಡವೇ ಎಂಬ ನಿರ್ಧಾರವನ್ನು ಪ್ರಕಟಿಸಲಿದೆ. ಸರ್ಕಾರ ಈ ವರೆಗೂ ತಜ್ಞರ ಅಭಿಪ್ರಾಯವನ್ನು ಒಳಗೊಂಡ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಜೊತೆಗೆ 2018 ರ ನಂತರ ಸರ್ಕಾರದ ಕಡೆಯಿಂದ ಇಲ್ಲಿಯವರೆಗೆ ಗಡಿ ಉಸ್ತುವಾರಿ ಸಚಿವರನ್ನೂ ನೇಮಿಸದಿರುವುದು ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿಯಂತಿದೆ.

ಇನ್ನು ಗಡಿ ವಿವಾದದಲ್ಲಿ ಸುಪ್ರೀಂಕೋರ್ಟ್ ಅಷ್ಟು ಸುಲಭವಾಗಿ ಕೇವಲ ಒಂದು ರಾಜ್ಯದ ಪರ ನಿಲ್ಲುವಂತಿಲ್ಲ. ಗಡಿ ವಿವಾದ ಎಂದರೆ ಅದು ಸಂಪೂರ್ಣ ಒಕ್ಕೂಟ ವ್ಯವಸ್ಥೆಯ ಅಸ್ತಿತ್ವಕ್ಕೇ ಕೈ ಇಟ್ಟಂತೆ. ಈ ಸಂದರ್ಭಕ್ಕೆ ಭಾಷಾವಾರು ಪ್ರಾಂತ್ಯದ ವಿಂಗಡಣೆ ಎಂದರೆ ಕೇವಲ ಮಹಾರಾಷ್ಟ್ರಕ್ಕೆ ಹೋಗುವ ಭೂಪ್ರದೇಶ ಮಾತ್ರವಲ್ಲ ಕರ್ನಾಟಕಕ್ಕೆ ಸೇರಬೇಕಾದ ಭೂ ಪ್ರದೇಶಕ್ಕೂ ದಾರಿ ಮಾಡಿಕೊಟ್ಟಂತಾಗಲಿದೆ. ಕನ್ನಡವನ್ನೇ ಹೆಚ್ಚಾಗಿ ಮಾತನಾಡುವ ನೆರೆ ರಾಜ್ಯಗಳ ಗಡಿರೇಖೆಯ ಒಳಗಿರುವ ಕಾಸರಗೋಡು, ಸೊಲ್ಲಾಪುರ, ದಕ್ಷಿಣ ಕೊಲ್ಲಾಪುರ, ಅಕ್ಕಲಕೋಟೆ, ಮಂತ್ರಾಲಯ ಸೇರಿದಂತೆ ಸುತ್ತಲಿನ ಐದು ರಾಜ್ಯಗಳಿಂದ ಬರುವ ಮತ್ತು ಆ ರಾಜ್ಯಗಳಿಗೆ ಸೇರುವ ಅಸಂಖ್ಯಾತ ಊರುಗಳ ವಿವಾದವನ್ನು ಹೊಸದಾಗಿ ಸುಪ್ರೀಂಕೋರ್ಟೇ ಹುಟ್ಟು ಹಾಕಿದಂತಾಗಲಿದೆ. ಹಾಗೊಂದು ವೇಳೆ ಸುಪ್ರೀಂಕೋರ್ಟ್ ವಿಚಾರಣೆಗೆ ತೀರ್ಪು ಕೊಟ್ಟಂತೆ ಜೇನುಗೂಡಿಗೆ ಕಲ್ಲು ಹೊಡೆದಂತಾಗಲಿದೆ.

ಸಾಮಾನ್ಯವಾಗಿ ಇಂತಹ ವಿಚಾರಗಳಲ್ಲಿ ಸುಪ್ರೀಂಕೋರ್ಟ್ ಎರಡು ರಾಜ್ಯಗಳ ಗಡಿ ವಿವಾದದ ನಡುವೆ ಮೂಗು ತೂರಿಸುವುದು ಅಷ್ಟು ಸೂಕ್ತವಲ್ಲ, ಹಾಗೂ ಸುಲಭವೂ ಅಲ್ಲ. ಹಾಗೊಂದು ವೇಳೆ ಮಹಾರಾಷ್ಟ್ರದ ಪಟ್ಟಿಗೆ ಕಟ್ಟು ಬಿದ್ದು ವಿಚಾರಣೆಗೆ ತೀರ್ಪು ಪ್ರಕಟಿಸಿದ್ದೇ ಆದರೆ ಅದಕ್ಕೂ ಮುನ್ನ ಸುಪ್ರೀಂಕೋರ್ಟ್ ಅದಕ್ಕೆ ಬೇಕಾದಂತಹ ಆಯೋಗವನ್ನು ರಚಿಸಿ ಆಯೋಗ ಕೊಟ್ಟ ವರದಿ ಆಧಾರದಲ್ಲಿ ನಿರ್ಧಾರ ಪ್ರಕಟಿಸಬೇಕು. ಆದರೆ ಈ ಹಿಂದೆ ಗಡಿ ಭಾಗಕ್ಕೆ ಸಂಬಂಧಿಸಿದ ಮೆಹರ್ ಚಂದ್ ಮಹಾಜನ್ ಆಯೋಗ ಈಗಾಗಲೇ ಕೊಟ್ಟ ವರದಿಯಂತೆ ಖಾನಾಪುರ ನಿಪ್ಪಾಣಿ ಅಷ್ಟೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಆಗಲಿದೆ. ಆದರೆ ಮಹಾರಾಷ್ಟ್ರದ ಮುಖ್ಯವಾದ ವಾದ ಎಂದರೆ ನೇರ ಬೆಳಗಾವಿಯೇ ತಮಗೆ ಸೇರಬೇಕೆಂಬುದು.

ಮಹಾರಾಷ್ಟ್ರದ ವಿಚಾರಕ್ಕೆ ಹೇಳುವುದಾದರೆ ಬೆಳಗಾವಿ ಎಂಬುದು ಅಲ್ಲಿನ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ಮಹಾರಾಷ್ಟ್ರದ ಶಿವಸೇನೆ, NCP ನಾ ಮುಂದು ತಾ ಮುಂದು ಎಂಬಂತೆ ಗಡಿ ವಿವಾದವನ್ನು ಜೀವಂತವಾಗಿ ಇರಿಸಿಕೊಂಡು ಬಂದಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಕೂಡಾ ಅಲ್ಲಿನ ದೊಡ್ಡ ಪಕ್ಷಗಳ ಜೊತೆಗೆ ಹಿನ್ನೆಲೆಯಲ್ಲಿ ನಿಂತು ಪೋಷಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಈಗ ಭಾರತ ಪಾಕಿಸ್ತಾನ ಹೇಗೆ ಶತ್ರುರಾಷ್ಟ್ರಗಳು ಎಂಬುದನ್ನು ಜೀವಂತವಾಗಿ ಇಟ್ಟಿವೆಯೋ ಹಾಗೆ. ಇದು ಆ ಭಾಗದಲ್ಲಿ ಮತ ಗಿಟ್ಟಿಸುವ ಒಂದು ಮಾರ್ಗ ಎಂಬುದು ತೆರೆದಿಟ್ಟ ಗುಟ್ಟು. ಇಂದಿನ ವಿಚಾರಣೆ ಕೂಡಾ ಮಹಾರಾಷ್ಟ್ರ ಸರ್ಕಾರದ ತಂತ್ರಗಾರಿಕೆಯ ಮುಂದುವರಿದ ಭಾಗ.

ಇನ್ನು ರಚನೆಯಾಗಿ ವರದಿ ಬಂದಿದ್ದ ಮಹಾಜನ್ ವರದಿ ಜಾರಿಯಾದರೆ ಕರ್ನಾಟಕಕ್ಕೆ ಒಂದು ರೀತಿಯಲ್ಲಿ ಲಾಭವೇ ಆಗಲಿದೆ. ಕರ್ನಾಟಕದಿಂದ ಹೋಗುವ ಕೆಲವು ಸಣ್ಣಪುಟ್ಟ ಊರುಗಳಿದ್ದರೂ ದೊಡ್ಡ ಊರುಗಳೇ ರಾಜ್ಯಕ್ಕೆ ಸೇರ್ಪಡೆ ಆಗಲಿವೆ. ಆದರೆ ಇದಕ್ಕೆ ಮಹಾರಾಷ್ಟ್ರದ ವಿರೋಧವಿದೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಈಗಾಗಲೇ ಸರ್ವ ಪಕ್ಷಗಳನ್ನು ಒಳಗೊಂಡಂತೆ ವಾರದಿಂದಲೂ ಸಭೆ ನಡೆಸಿ ತಜ್ಞರ ಸಮಿತಿಯನ್ನು ನೇಮಿಸಿದೆ. ಆದರೆ ಕರ್ನಾಟಕದ ಪರ ವಾದ ಮಂಡಿಸುವ ವಕೀಲರ ಪರ ನಿಲ್ಲಲು ಈ ವರೆಗೂ ಯಾವುದೇ ತಜ್ಞರು, ಸರ್ಕಾರದ ಪ್ರತಿನಿಧಿಯಾಗಿ ಯಾವುದೇ ಸಚಿವರು ಈ ವರೆಗೂ ನಿಂತಿಲ್ಲದಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾದಂತಾಗಿದೆ.