electoral bond – Peepal Media

ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸಿಕ್ಕಿರುವ ದೇಣಿಗೆಯಲ್ಲಿ 87% ಹೆಚ್ಚಳ!
ಬೆಂಗಳೂರು: 2022-2023 ರಿಂದ 2023-2024 ರವರೆಗೆ ಬಿಜೆಪಿಗೆ ಸಿಕ್ಕಿರುವ ದೇಣಿಗೆಯು  87% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಚುನಾವಣಾ ಬಾಂಡ್‌ಗಳ ಪಾಲು ಅರ್ಧಕ್ಕಿಂತ ಕಡಿಮೆಯಿದ್ದರೂ ಸಹ  ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿನ ಏರಿಕೆಯನ್ನು ಚುನಾವಣಾ ಆಯೋಗಕ್ಕೆ ತನ್ನ ಆಡಿಟ್ ವರದಿಯಲ್ಲಿ ಬಿಜೆಪಿ ತೋರಿಸಿದೆ.

2023-2024ರ ಬಿಜೆಪಿಯ ವಾರ್ಷಿಕ ಲೆಕ್ಕಪರಿಶೋಧನಾ ವರದಿಯು 2022-2023ರಲ್ಲಿ ಬಿಜೆಪಿಗೆ 2,120.06 ಕೋಟಿ ರುಪಾಯಿಗಳಿಂದ 2023-2024ರಲ್ಲಿ 3,967.14 ಕೋಟಿ ರುಪಾಯಿಗಳಿಗೆ ಏರಿಕೆಯಾಗಿರುವುದನ್ನು ಎಂದು ತೋರಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ 1,685.62 ಕೋಟಿ ರೂಪಾಯಿಗಳನ್ನು (ಒಟ್ಟು ದೇಣಿಗೆಯ 42.4%) ಸ್ವೀಕರಿಸಿದೆ. ಇದಕ್ಕೆ ಹೋಲಿಸಿದರೆ 2022-2023ರಲ್ಲಿ, ಸದ್ಯ ರದ್ದಾಗಿರುವ ಎಲೆಕ್ಟೋರಲ್ ಬಾಂಡ್‌ಗಳ ಮೂಲಕ 1,294.14 ಕೋಟಿ ರುಪಾಯಿ (ಒಟ್ಟು ದೇಣಿಗೆಯ 61%) ಪಡೆದುಕೊಂಡಿತ್ತು.

ಲೋಕಸಭೆ ಚುನಾವಣೆಗೆ ಮುಂಚಿತವಾಗಿ 2022-2023 ರಿಂದ 2023-2024 ರವರೆಗೆ ಕಾಂಗ್ರೆಸ್‌ಗೆ ಸಿಕ್ಕಿರುವ ದೇಣಿಗೆಯಲ್ಲಿ 320% ಹೆಚ್ಚಾಗಿದೆ ಎಂದು ಅದರ ಆಡಿಟ್ ವರದಿ ತೋರಿಸಿದೆ. ಪಕ್ಷವು 2022-2023ರಲ್ಲಿ 268.62 ಕೋಟಿ ರುಪಾಯಿ ಮತ್ತು 2023-2024ರಲ್ಲಿ 1,129.66 ಕೋಟಿ ರುಪಾಯಿ ದೇಣಿಗೆಯನ್ನು ಪಡೆದಿತ್ತು. ಇದರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆ 2022-2023ರಲ್ಲಿ 63.6% ಮತ್ತು 2023-2024ರಲ್ಲಿ 73.3% ರಷ್ಟಿದ್ದವು.

ಸುಪ್ರೀಂ ಕೋರ್ಟ್ 2024 ರ ಫೆಬ್ರವರಿಯಲ್ಲಿ ಚುನಾವಣಾ ಬಾಂಡ್‌ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿತು. ಹೀಗಾಗಿ 2023-2024 ನೇ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸ್ವೀಕರಿಸಿದ ಕೊನೆಯ ವರ್ಷವಾಗಿದೆ.

SBI ದೋರಣೆ ಖಂಡಿಸಿದ ಸು.ಕೋರ್ಟ್; ಮಾ‌.21ರೊಳಗೆ ಪೂರ್ಣ ವಿವರ ಕೊಡಲು ಕೊನೆಯ ಗಡುವು
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ವ್ಯಕ್ತಿಗಳು ಮತ್ತು ಕಂಪನಿಗಳಿಗೆ ಅವಕಾಶ ನೀಡುವ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಬಹಿರಂಗಪಡಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೆ ಸುಪ್ರೀಂ ಕೋರ್ಟ್ ಇಂದು ನಿರ್ದೇಶನ ನೀಡಿದೆ. ಇದು ಪ್ರತಿ ಬಾಂಡ್‌ನ “ಕ್ರಮ ಸಂಖ್ಯೆ”ಯನ್ನೂ ಒಳಗೊಂಡಿರಬೇಕು ಎಂದು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠ ಹೇಳಿದೆ.

ಚುನಾವಣಾ ಬಾಂಡ್‌ಗಳ ಮೂಲಕ ನೀಡಿದ ದೇಣಿಗೆಗಳ ಕುರಿತು ಎಸ್‌ಬಿಐ ಒದಗಿಸಿದ “ಅಸ್ಪಷ್ಟ ಡೇಟಾ” ವಿರುದ್ಧದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಚಂದ್ರಚೂಡ್, “ನಿಮ್ಮ ಬಳಿಯಿರುವ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಬೇಕೆಂದು ನಾವು ಬಯಸುತ್ತೇವೆ” ಎಂದು ಹೇಳಿದರು.

ಮಾರ್ಚ 21 ರ ಗುರುವಾರ ಸಂಜೆ 5 ಗಂಟೆಯೊಳಗೆ ಅಫಿಡವಿಟ್ ಸಲ್ಲಿಸುವಂತೆ SBI ಅಧ್ಯಕ್ಷರಿಗೆ ಸೂಚಿಸಿದ ಕೋರ್ಟ್, ಯಾವುದೇ ವಿವರಗಳನ್ನು ಮುಚ್ಚಿಟ್ಟಿಲ್ಲ ಎಂದು ಹೇಳಿದೆ. SBIನಿಂದ ವಿವರಗಳನ್ನು ಪಡೆದ ನಂತರ ಅದನ್ನು ಅಪ್‌ಲೋಡ್ ಮಾಡಲು ಚುನಾವಣಾ ಆಯೋಗವನ್ನು ಕೇಳಿದೆ.

ಸುಪ್ರೀಂಕೋರ್ಟ್ ಕಳೆದ ತಿಂಗಳು ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು ಮತ್ತು ಕಳೆದ ಐದು ವರ್ಷಗಳಲ್ಲಿ ಮಾಡಿದ ದೇಣಿಗೆಗಳ ಎಲ್ಲಾ ವಿವರಗಳನ್ನು ಹಂಚಿಕೊಳ್ಳಲು ಬ್ಯಾಂಕ್‌ ಗಳಿಗೆ ನಿರ್ದೇಶನ ನೀಡಿತು. ಆದರೆ SBI ಒದಗಿಸಿದ ಎಲೆಕ್ಟೋರಲ್ ಬಾಂಡ್‌ಗಳ ದಾಖಲೆಗಳ ಡೇಟಾ ಅಪೂರ್ಣವಾಗಿದೆ ಎಂದು ಅದು SBI ಗೆ ನೋಟಿಸ್ ಕಳುಹಿಸಿದೆ.

“ಎಸ್‌ಬಿಐ ಧೋರಣೆಯು ‘ಏನು ಬಹಿರಂಗಪಡಿಸಬೇಕೆಂದು ನೀವು ನಮಗೆ ತಿಳಿಸಿ, ನಾವು ಬಹಿರಂಗಪಡಿಸುತ್ತೇವೆ’ ಎಂದು ಹೇಳಿದಂತಿದೆ. ಆದರೆ ಅದು ನ್ಯಾಯಯುತವಾಗಿ ತೋರುತ್ತಿಲ್ಲ. ನಾವು “ಎಲ್ಲಾ ವಿವರಗಳು” ಎಂದು ಹೇಳಿದಾಗ, ಅದು ಎಲ್ಲಾ ಸಂಭಾವ್ಯ ಡೇಟಾವನ್ನು ಒಳಗೊಂಡಿರುತ್ತದೆ. ಎಲ್ಲಾ ಎಂದರೆ ಎಲ್ಲಾ ವಿವರಗಳು ಹೊರಬರಬೇಕು. ಯಾವುದನ್ನೂ ಮುಚ್ಚಿಡುವಂತಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ, ”ಎಂದು ಸಿಜೆಐ ಇಂದು ಹೇಳಿದ್ದಾರೆ.

ಆದಾಗ್ಯೂ, ಎಸ್‌ಬಿಐ ಅನ್ನು ಪ್ರತಿನಿಧಿಸುವ ವಕೀಲ ಹರೀಶ್ ಸಾಳ್ವೆ, ಪ್ರತಿ ಚುನಾವಣಾ ಬಾಂಡ್‌ನಲ್ಲಿ ಉಲ್ಲೇಖಿಸಲಾದ ವಿಶಿಷ್ಟವಾದ ಅಂಕಿಅಂಶವು ಕೇವಲ ಭದ್ರತಾ ವೈಶಿಷ್ಟ್ಯವಾಗಿದೆ ಮತ್ತು ಆಡಿಟ್ ಟ್ರಯಲ್‌ನಿಂದ ಪ್ರತ್ಯೇಕವಾಗಿದೆ. ಹೀಗಾಗಿ ಸಂಪೂರ್ಣ ಮಾಹಿತಿಗೆ ತೊಡಕಾಗಲಿದೆ ಎಂದು ಹೇಳಿದ್ದಾರೆ.

ಎಸ್‌ಬಿಐ ಒದಗಿಸಿದ ಡೇಟಾವು ದಾನಿಗಳನ್ನು ಅವರ ಸ್ವೀಕರಿಸುವವರೊಂದಿಗೆ ಏಕೆ ಲಿಂಕ್ ಮಾಡಿಲ್ಲ ಎಂಬುದನ್ನು ಸಮರ್ಥಿಸಿದ ಅವರು, ಬ್ಯಾಂಕ್ ಅನಾಮಧೇಯತೆಯ ಆದೇಶದ ಅಡಿಯಲ್ಲಿರುವುದರಿಂದ ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ವಿಮೋಚನೆ ಡೇಟಾವನ್ನು ಎರಡು ಪ್ರತ್ಯೇಕ ಫೈಲ್‌ಗಳಲ್ಲಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ರಾಜಕೀಯ ಪಕ್ಷಗಳಿಗೆ ನೀಡುವ ಎಲೆಕ್ಟೋರಲ್ ಬಾಂಡ್ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅನಾಮಧೇಯ ಕಾರ್ಪೊರೇಟ್ ದೇಣಿಗೆಗಳು ಸಂವಿಧಾನದ “ಆರ್ಟಿಕಲ್ 19 (1) (ಎ) ಅಡಿಯಲ್ಲಿ ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ಹೇಳುವ ಮೂಲಕ ಸರ್ವಾನುಮತದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಗುರುವಾರ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ನೀಡಲು ಜಾರಿಗೆ ತಂದ ಐಟಿ ಕಾಯ್ದೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿಗಳನ್ನು “ಅಸಂವಿಧಾನಿಕ” ಎಂದು ಕರೆದಿದೆ.

ಚುನಾವಣಾ ಬಾಂಡ್‌ಗಳ ಮೂಲಕ ಕಾರ್ಪೊರೇಟ್ ಕೊಡುಗೆದಾರರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಪೀಠವು ತೀರ್ಪು ನೀಡಿದೆ.

ರಾಜಕೀಯ ಪಕ್ಷಗಳಿಗೆ ಹಣಕಾಸಿನ ನೆರವು ನೀಡುವುದು ಕ್ವಿಡ್ ಪ್ರೊಕೊ ವ್ಯವಸ್ಥೆಗೆ ಕಾರಣವಾಗಬಹುದು. ಕಪ್ಪುಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮಾಹಿತಿ ಹಕ್ಕು ಉಲ್ಲಂಘನೆಯನ್ನು ನ್ಯಾಯಾಲಯ ಸಮರ್ಥಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಈ ಹಿನ್ನೆಲೆಯಲ್ಲಿ ಖಾಸಗಿತನದ ಮೂಲಭೂತ ಹಕ್ಕು ನಾಗರಿಕರ ರಾಜಕೀಯ ಗೌಪ್ಯತೆ ಮತ್ತು ಸಂಬಂಧದ ಹಕ್ಕನ್ನು ಸಹ ಒಳಗೊಂಡಿದೆ ಎಂದು ಪೀಠ ಹೇಳಿದೆ.

ಅಷ್ಟೆ ಅಲ್ಲದೆ ‘ಬ್ಯಾಂಕ್‌ಗಳು ಎಲೆಕ್ಟೋರಲ್ ಬಾಂಡ್ ಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್, ಮಾರ್ಚ್ 6 ರೊಳಗೆ ಈ ಯೋಜನೆಯ ಮೂಲಕ ಇಲ್ಲಿಯವರೆಗೆ ನೀಡಿದ ಎಲ್ಲಾ ದೇಣಿಗೆಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸುವಂತೆ ಎಸ್‌ಬಿಐಗೆ ಸೂಚಿಸಿದೆ.

ಈ ಬಗ್ಗೆ ಮಾರ್ಚ್ 13 ರೊಳಗೆ ತನ್ನ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲು ಚುನಾವಣಾ ಸಮಿತಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. 2018 ರ ಜನವರಿಯಲ್ಲಿ ಸರ್ಕಾರವು ಪರಿಚಯಿಸಿದ ಚುನಾವಣಾ ಬಾಂಡ್‌ಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಒಂದು ಬ್ಯಾಚ್ ವಿಚಾರಣೆಯಲ್ಲಿದೆ. ಕಳೆದ ವರ್ಷ ನವೆಂಬರ್ 2 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.

ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನೀಡಿದ ನಗದು ದೇಣಿಗೆಗೆ ಪರ್ಯಾಯವಾಗಿ ಈ ತಿರ್ಪು ಪ್ರಕಟಿಸಲಾಗಿದೆ ಎಂದು ಪೀಠವು ಅಭಿಪ್ರಾಯ ಪಟ್ಟಿದೆ.

ಯೋಜನೆಯ ನಿಬಂಧನೆಗಳ ಪ್ರಕಾರ, ಚುನಾವಣಾ ಬಾಂಡ್‌ಗಳನ್ನು ಭಾರತದ ಯಾವುದೇ ನಾಗರಿಕ ಅಥವಾ ದೇಶದಲ್ಲಿ ಸಂಘಟಿತ ಅಥವಾ ಸ್ಥಾಪಿಸಿದ ಘಟಕದಿಂದ ಖರೀದಿಸಬಹುದು. ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳೊಂದಿಗೆ ಜಂಟಿಯಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಬಹುದು.

ಪ್ರಜಾಪ್ರತಿನಿಧಿ ಕಾಯಿದೆ, 1951 ರ ಸೆಕ್ಷನ್ 29A ಅಡಿಯಲ್ಲಿ ನೋಂದಾಯಿಸಲಾದ ಮತ್ತು ಲೋಕಸಭೆ ಅಥವಾ ರಾಜ್ಯ ವಿಧಾನಸಭೆಗೆ ಕಳೆದ ಚುನಾವಣೆಯಲ್ಲಿ ಪಡೆದ ಮತಗಳಲ್ಲಿ ಶೇಕಡಾ 1 ಕ್ಕಿಂತ ಕಡಿಮೆಯಿಲ್ಲದ ಮತಗಳನ್ನು ಪಡೆದ ರಾಜಕೀಯ ಪಕ್ಷಗಳು ಮಾತ್ರ ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಲು ಅರ್ಹವಾಗಿವೆ ಎಂದು ಪೀಠವು ಅಭಿಪ್ರಾಯ ಪಟ್ಟಿದೆ.

ಜನವರಿಯಲ್ಲಿ 570 ಕೋಟಿಯ ಎಲೆಕ್ಟೋರಲ್ ಬಾಂಡ್‌ಗಳ ಮಾರಾಟಹಣ ಮಾಡ್ತಾ ಇದ್ಯಾ ಬಿಜೆಪಿ?
2024 ರ ಜನವರಿ 2 ರಿಂದ ಜನವರಿ 11 ರವರೆಗೆ ನಡೆದ ಚುನಾವಣಾ ಬಾಂಡ್ ಮಾರಾಟದ ಇತ್ತೀಚಿನ ಹಂತದಲ್ಲಿ 570 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳು ಮಾರಾಟವಾಗಿವೆ ಎಂಬ ಮಾಹಿತಿ ಸಾಮಾಜಿಕ ಕಾರ್ಯಕರ್ತ ಕಮೋಡೋರ್ ಲೋಕೇಶ್ ಬಾತ್ರಾ ಅವರು  ಮಾಹಿತಿ ಹಕ್ಕು (ಆರ್‌ಟಿಐ) ಅಡಿಯಲ್ಲಿ ಸಲ್ಲಿಸಿದ ಪ್ರಶ್ನೆಗೆ ಉತ್ತರವಾಗಿ ಬಹಿರಂಗವಾಗಿದೆ.

ಇದು ಕಳೆದ ವರ್ಷ ನವೆಂಬರ್‌ನಲ್ಲಿ ಈ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಾಲ್ಕು ಅರ್ಜಿಗಳನ್ನು ವಿಚಾರಣೆ ಮಾಡಲು ಪ್ರಾರಂಭಿಸಿದ ನಂತರ ಮಾರಾಟವಾದ ಎರಡನೇ ಬ್ಯಾಚ್‌ನ ಎಲೆಕ್ಟೋರಲ್ ಬಾಂಡ್‌ಗಳಾಗಿದ್ದು, 2018 ರಲ್ಲಿ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಮಾರಾಟವಾದ 30 ನೇ ಬ್ಯಾಚ್ ಆಗಿದೆ.

ಬಾತ್ರಾ ಅವರ ಪ್ರಶ್ನೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೀಡಿದ ಉತ್ತರದ ಪ್ರಕಾರ, ಬೆಂಗಳೂರು, ಜೈಪುರ, ಚೆನ್ನೈ, ಗಾಂಧಿನಗರ, ಕೋಲ್ಕತ್ತಾ, ಹೈದರಾಬಾದ್, ನವದೆಹಲಿ, ವಿಶಾಖಪಟ್ಟಣಂ, ಮುಂಬೈ ಮತ್ತು ಎಸ್‌ಬಿಐ ಶಾಖೆಗಳಲ್ಲಿ 5,71,80,03,000 ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ.

897 ಬಾಂಡ್‌ಗಳಲ್ಲಿ 1,000, 10,000, 1 ಲಕ್ಷ ಮತ್ತು ರೂ 1 ಕೋಟಿ ರುಪಾಯಿ ಮುಖಬೆಲೆಯಲ್ಲಿ ಮಾರಾಟವಾದ 415, ಅಂದರೆ ಸುಮಾರು ಅರ್ಧದಷ್ಟು ಕೋಲ್ಕತ್ತಾದಲ್ಲಿ ಮಾರಾಟವಾಗಿದೆ.

ಗರಿಷ್ಠ ಸಂಖ್ಯೆಯ ಬಾಂಡ್‌ಗಳಲ್ಲಿ (540) ಒಂದು ಕೋಟಿ ರುಪಾಯಿ ಮುಖಬೆಲೆಯ 161 ಬಾಂಡ್‌ಗಳು ಕೋಲ್ಕತ್ತಾದಲ್ಲಿ ಮಾರಾಟವಾಗಿದೆ. ಇದರ ನಂತರ ಹೈದರಾಬಾದ್ (131) ಮತ್ತು ಚೆನ್ನೈಯಲ್ಲಿ (73) ಮಾರಾಟವಾಗಿವೆ. ಈ ಹಂತದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಚಲಾವಣೆಯಲ್ಲಿರುವ ಒಟ್ಟು ಹಣದ 94.4% ರಷ್ಟು 1 ಕೋಟಿ ರುಪಾಯಿ ಮುಖಬೆಲೆಯದ್ದು.

ಈ ಅವಧಿಯಲ್ಲಿ ಮಾರಾಟವಾದ ಸುಮಾರು 92% ಬಾಂಡ್‌ಗಳು ಕೇವಲ 10 ಲಕ್ಷ ರೂಪಾಯಿಗಳ 25 ಬಾಂಡ್‌ಗಳೊಂದಿಗೆ ನಗದೀಕರಿಸಲ್ಪಟ್ಟಿವೆ ಮತ್ತು 1 ಲಕ್ಷ ರುಪಾಯಿ ಮುಖಬೆಲೆಯವು ಬಳಕೆಯಾಗದೆ ಉಳಿದಿವೆ.  ಬಾಂಡ್ ಮಾರಾಟದ ಮುಂದಿನ ಹಂತವು ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆಯಿದೆ.

ಚುನಾವಣಾ ಬಾಂಡ್‌ ವಿವಾದ

ಚುನಾವಣಾ ಬಾಂಡ್ ಯೋಜನೆಯನ್ನು ಅಪಾರದರ್ಶಕ ಮತ್ತು ಲೆಕ್ಕಕ್ಕೆ ಸಿಗದ ಹಣವನ್ನು ರಾಜಕೀಯ ಪಕ್ಷಗಳಿಗೆ ರವಾನೆ ಮಾಡಲು ತರಲಾಯಿತು.

ನವೆಂಬರ್ 2, 2023 ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದ ಎರಡು ದಿನಗಳ ನಂತರ ಕೊನೆಯ ಸುತ್ತಿನ ಎಲೆಕ್ಟೋರಲ್ ಬಾಂಡ್ ಮಾರಾಟವನ್ನು ಘೋಷಿಸಲಾಯಿತು.

2017 ರಲ್ಲಿ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಮೊದಲ ಅರ್ಜಿ ಮತ್ತು 2023 ರಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸುತ್ತಿರುವ ಪ್ರಕರಣದ ನಡುವೆ ಇರುವ ಆರು ವರ್ಷಗಳ ಅಂತರದ ಬಗ್ಗೆ ಲೋಕೇಶ್ ಬಾತ್ರಾ ಗಮನ ಸೆಳೆದಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ದೊಡ್ಡ ದೊಡ್ಡ ಉದ್ಯಮಿಗಳು, ಕಾರ್ಪೊರೇಟ್ ದಾನಿಗಳ ಗೌಪ್ಯತೆಯ ಹಕ್ಕನ್ನು ರಕ್ಷಿಸಲು ಸರ್ಕಾರವು ಮನವಿ ಮಾಡಿತು. ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಚುನಾವಣಾ ಬಾಂಡ್ ಫಂಡ್‌ಗಳ ಮೂಲಗಳನ್ನು ತಿಳಿದುಕೊಳ್ಳಲು ನಾಗರಿಕರಿಗೆ ಯಾವುದೇ ಮೂಲಭೂತ ಹಕ್ಕಿಲ್ಲ ಎಂದು ಹೇಳಿದರು.

ಚುನಾವಣಾ ಬಾಂಡ್ ದಾನಿಗಳ ಮಾಹಿತಿ ಆರ್‌ಟಿಐನಿಂದ ಪಡೆಯಲು ಸಾಧ್ಯವಿಲ್ಲದಂತೆ ಮಾಡಿದ್ದರೂ,  ಎಸ್‌ಬಿಐನಂತಹ ಸಾರ್ವಜನಿಕ ಬ್ಯಾಂಕ್‌ನಿಂದ ಡೇಟಾವನ್ನು ಪಡೆಯಲು ಮತ್ತು ದಾನಿಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಬಹುದಾದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಳವಳವಿದೆ.

ಹಣ ಯಾರಿಗೆ ಹೋಗುತ್ತಿದೆ?

ಮಾರ್ಚ್ 2022 ಮತ್ತು ಮಾರ್ಚ್ 2023 ರ ನಡುವೆ ರೂ 2,800 ಕೋಟಿ ರುಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳು ಮಾರಾಟವಾಗಿವೆ.  ಇವುಗಳಲ್ಲಿ ಸುಮಾರು 46% ಅಥವಾ ರೂ 1,294 ಕೋಟಿ ರುಪಾಯಿ ಬಿಜೆಪಿಗೆ ಹೋಗಿವೆ ಎಂದು ಪತ್ರಕರ್ತ ಅರವಿಂದ್ ಗುಣಶೇಖರ್ ಎಕ್ಸ್‌ನಲ್ಲಿನ ತಿಳಿಸಿದ್ದಾರೆ.

Principal Opposition Party, Congress has received ₹ 171 crore worth electoral bonds in the FY 2023, which is just 6% of the electoral bonds sold in the said period.

In total, as of March 2023, Congress has received ₹ 1,135 crore via electoral bonds, 9.5% of total electoral… pic.twitter.com/3iWReUofYd
— Arvind Gunasekar (@arvindgunasekar) February 8, 2024

2018 ರಲ್ಲಿ ಯೋಜನೆಯನ್ನು ಪರಿಚಯಿಸಿದಾಗಿನಿಂದ  ಚುನಾವಣಾ ಬಾಂಡ್‌ಗಳ ಲಾಭವನ್ನು ಬಿಜೆಪಿ ಪಡೆಯುತ್ತಲೇ ಬಂದಿದೆ. 2018-2023ರ ನಡುವೆ ಮಾರಾಟವಾದ 12,008 ಕೋಟಿ ಮೌಲ್ಯದ ಬಾಂಡ್‌ಗಳಲ್ಲಿ ಸುಮಾರು 55% ಅಥವಾ 6,564 ಕೋಟಿ ರುಪಾಯಿ ಬಿಜೆಪಿಗೆ ಹೋಗಿದೆ. ಐದು ವರ್ಷಗಳ ಅವಧಿಯಲ್ಲಿ 1,135 ಕೋಟಿ ರುಪಾಯಿಗಳಲ್ಲಿ ಮಾರಾಟವಾದ ಎಲ್ಲಾ ಬಾಂಡ್‌ಗಳಲ್ಲಿ ಕಾಂಗ್ರೆಸ್ ಕೇವಲ 9.5% ಅನ್ನು ಪಡೆದುಕೊಂಡಿದೆ.