Elephant attack – Peepal Media

ಕಾಡಾನೆಗೆ ರೆಡಿಯೋ ಕಾಲ‌ರ್ ಅಳವಡಿಕೆ ಕಾರ್ಯಾಚರಣೆ ಯಶಸ್ವಿ; ಓಲ್ಡ್ ಬೆಲ್ಟ್ ಓಡಾಟಕ್ಕೆ ರೇಡಿಯೋ ಕಾಲರ್
ಬೇಲೂರು :ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯ ಎರಡನೇ ದಿನವಾದ ಶನಿವಾರ ಅರಣ್ಯ ಇಲಾಖೆ ಶ್ರಮಕ್ಕೆ ಫಲ ದೊರಕಿದೆ.ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಓಲ್ಡ್ ಬೆಲ್ಟ್ ಗುಂಪಿನ ಹೆಣ್ಣಾನೆಗೆ ರೆಡಿಯೋ ಕಾಲ‌ರ್ ಅಳವಡಿಸಲಾಯಿತು. ಕಾಫಿ ಎಸ್ಟೇಟ್‌ನಲ್ಲಿದ್ದ ಹೆಣ್ಣಾನೆಗೆ ತಜ್ಞರು ಅರವಳಿಕೆ ಚುಚ್ಚುಮದ್ದು ನೀಡಿದರು. ಇದರಿಂದಾಗಿ ಬೆದರಿದ ಆನೆ ಸ್ವಲ್ಪ ದೂರ ಓಡಿ ಹೋಗಿ ನಿಂತಿತು. ಆ ಹೆಣ್ಣಾನೆ ಪಕ್ಕ ಸಾಕಾನೆಗಳನ್ನು ನಿಲ್ಲಿಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿದರು. ರೆಡಿಯೋ ಕಾಲರ್ ಅಳವಡಿಸಿದ ಆನೆಯ ಆರೋಗ್ಯದ ಮೇಲೆ ಕೆಲಹೊತ್ತು ನಿಗಾವಹಿಸಿದ ನಂತರ ಕಾಫಿ ಎಸ್ಟೇಟ್‌ನಲ್ಲೇ ಬಿಡಲಾಯಿತು.ಸಾಕಾನೆ ಭೀಮನ ನೇತೃತ್ವದಲ್ಲಿ ನಡೆದ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್, ಈಶ್ವರ ಸಾಕಾನೆಗಳು ಭಾಗಿಯಾಗಿದ್ದವು.

ವಾರದ ಆಸುಪಾಸಿನಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿ
ಕೊಡಗು : ಕಾಡಾನೆ ದಾಳಿಗೆ ಸಕಲೇಶಪುರದ ‘ಆನೆ ವೆಂಕಟೇಶ್’ ಮೃತಪಟ್ಟ ಸುದ್ದಿಯ ಬೆನ್ನಲ್ಲೇ ಮಡಿಕೇರಿಯಲ್ಲಿ ಮತ್ತೊಂದು ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಜಿಲ್ಲೆಯ ಶುಂಠಿಕೊಪ್ಪದಲ್ಲಿ ನಡೆದ ಆನೆ ದಾಳಿಗೆ ಸಂಬಂಧಿಸಿದಂತೆ ನಡೆದ ಕಾರ್ಯಾಚರಣೆಯಲ್ಲಿ ಈ ದಾಳಿ ನಡೆದಿದೆ.

ಸೋಮವಾರ ಬೆಳಗ್ಗೆ ಕಾಡಾನೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಬೈಕ್ ನಿಂದು ಬಿದ್ದು ವ್ಯಕ್ತಿಗೆ ಗಾಯವಾಗಿತ್ತು. ಈ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಅದೇ ಕಾಡಾನೆ ಮತ್ತೊಮ್ಮೆ ದಾಳಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಆನೆಯನ್ನು ಓಡಿಸುವ ಸಲುವಾಗಿ ಬೆಳಗ್ಗಿನಿಂದಲೇ ಅರಣ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಈ ತಂಡದಲ್ಲಿಆರ್ ಆರ್ ಟಿ ಸಿಬ್ಬಂದಿ ಗಿರೀಶ್(35) ಕೂಡ ಇದ್ದರು. ಆನೆಯನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಕಾಡಾನೆ ಗಿರೀಶ್ ಅವರ ಮೇಲೆ ಎರಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಕಳೆದ ಹಲವು ವರ್ಷಗಳಿಂದ ಆನೆಕಾಡು ಆರ್ ಆರ್ ಟಿ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ವೆಂಕಟೇಶ್ ಮೇಲೆ ಆನೆ ದಾಳಿ ; ಪ್ರೋಟೋಕಾಲ್ ಉಲ್ಲಂಘಿಸಿತೇ ಅರಣ್ಯ ಇಲಾಖೆ?
ಅರಣ್ಯ ಇಲಾಖೆಯ ಬೇಜಾವಬ್ದಾರಿಯಿಂದ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರಿನಲ್ಲಿ ಶಾರ್ಪ್‌ ಶೂಟರ್‌ ವೆಂಕಟೇಶ್ವರ್‌ ಅವರು ಅಗಸ್ಟ್‌ 31 ರಂದು ಆನೆ ದಾಳಿಗೆ ಒಳಗಾಗಿ ಮೃತರಾಗಿದ್ದಾರೆ. ಅರೆವಳಿಕೆ ಚುಚ್ಚುಮದ್ದು ನೀಡುವ ಶಾರ್ಪ್‌ ಶೂಟರ್ ಆಗಿ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ್‌ ಅವರಿಗೆ ತಮ್ಮ ವೃತ್ತಿಯೇ ಮುಳುವಾಯಿತು.

ಆಗಿದ್ದೇನು?
ಸಕಲೇಶಪುರ ವ್ಯಾಪ್ತಿಯಲ್ಲಿ ನಡೆದ ಕಾಡಾನೆಗಳ ಕಾಳಗದಲ್ಲಿ ಸುಮಾರು ನಲ್ವತ್ತು ವರ್ಷ ಪ್ರಾಯದ ಆನೆ ಭೀಮನಿಗೆ ಗಾಯವಾಗಿತ್ತು. ಚಿಕಿತ್ಸೆ ನೀಡಿದರೂ ಗಾಯ ಹೆಚ್ಚುತ್ತಲೇ ಇದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳ ಕೋರಿಕೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಅನುಮತಿ ನೀಡಿದ್ದರು.

ಅಗಸ್ಟ್‌ 31, ಗುರುವಾರ ಬೆಳಿಗ್ಗೆ ಆಲೂರು ತಾಲ್ಲೂಕಿನ ಹಳ್ಳಿಯೂರಿನಲ್ಲಿ ಕಂಡು ಬಂದ ಕಾಡಾನೆ ಭೀಮನಿಗೆ ಚಿಕಿತ್ಸೆ ನೀಡಲು  ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಇತರ ನಾಲ್ಕು ಸಾಕು ಆನೆಗಳ ಜೊತೆಗೆ ಭೀಮನಿಗೆ ಅರೆವಳಿಕೆ ನೀಡಲು ಖ್ಯಾತ ಶಾರ್ಪ್‌ ಶೂಟರ್‌ ವೆಂಕಟೇಶ್‌ ಆವರನ್ನೂ ಕೆರಸಿಕೊಳ್ಳಲಾಗಿತ್ತು.

ಮಧ್ಯಾಹ್ನ ಸುಮಾರು 12 ಗಂಟೆಗೆ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಬೇಟಿ ನೀಡಿದ ವೆಂಕಟೇಶ್ ಭೀಮನಿಗೆ ಎರಡು ಬಾರಿ ಅರವಳಿಕೆ ಚುಚ್ಚುಮದ್ದನ್ನು ಶೂಟ್ ಮಾಡಿದ್ದಾರೆ. ಅರೆವಳಿಕೆ ನೀಡಿದ ತಕ್ಷಣ ಹಿಂದೆ ತಿರುಗಿ ವೆಂಕಟೇಶ್‌ ಆವರ ಮೇಲೆ ದಾಳೊ ಮಾಡಿದೆ. ಈ ಸಂದರ್ಭದಲ್ಲಿ ಹೊಟ್ಟೆ, ತಲೆ, ಕಾಲಿಗೆ ಗಾಯಗಳಾಗಿ, ತಕ್ಷಣ ವೆಂಕಟೇಶ್‌ ಅವನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ವೆಂಕಟೇಶ್‌ ನಿಧನ ಹೊಂದಿದರು.

ಅರಣ್ಯ ಇಲಾಖೆಯ ಬೇಜಾವಬ್ದಾರಿಗೆ ವೆಂಕಟೇಶ್‌ ಜೀವ ಬಲಿ!
ಆದರೆ ಅಗಸ್ಟ್‌ 31 ರಂದು ನಡೆದೆ ಕಾರ್ಯಾಚರಣೆಯಲ್ಲಿ ಒಂದು ಹಿಂದೆ ಅಪಾಯಕಾರಿಯಲ್ಲ ಎಂದು ಊಹಿಸಿಕೊಂಡು, ಭೀಮಾ ಆನೆಯನ್ನು ಹಿಡಿಯಲು ಯೋಜನೆ ಹಾಕಲಾಗಿತ್ತು. ಈ ನಿರ್ಲಕ್ಷ್ಯದಿಂದಲೇ ಆನೆ ಯಾರೂ ಭಾವಿಸಿರದಂತೆ ವೆಂಕಟೇಶ್‌ ಆವರ ಮೇಲೆ ಧಾಳಿ ಮಾಡಿದೆ. ಈ ಸಂದರ್ಭದಲ್ಲಿ ವೆಂಕಟೇಶ್‌ ಅವರಿಗೆ ಓಡಲಾಗದೆ ಆನೆ ಧಾಳಿಗೆ ಒಳಗಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಆನೆಗೆ ಯಾವ ಅರೆವಳಿಕೆ ನೀಡಲಾಗಿತ್ತು ಎಂಬುದು ತಿಳಿದಿಲ್ಲ. ಅಲ್ಲದೇ ನಿವೃತ್ತರಾಗಿರುವ ವೆಂಕಟೇಶ್‌ ಅವರ ವಯಸ್ಸು ಹಾಗೂ ದೈಹಿಕ ಬಲವನ್ನು ಗಣನೆಗೆ ತೆಗೆದುಕೊಳ್ಳದೆ ಅರಣ್ಯ ಇಲಾಖೆ ಅವರನ್ನು ಈ ಕೆಲಸಕ್ಕೆ ಇಳಿಸಿದೆ. ಅಲ್ಲದೇ, ಆನೆ ಕಾರ್ಯಾಚರಣೆಯ ಸಂದರ್ಭದಲ್ಲಿ ಆ ಪ್ರದೇಶ ಸೂಕ್ತವೇ ಎಂಬುನ್ನು ಗಮನಿಸಿದಂತೆ ತೋರುತ್ತಿಲ್ಲ. ಅರಣ್ಯ ಇಲಾಖೆ ಆನೆಗಳನ್ನು ಹಿಡಿಯಲು ಇರುವ ಕಾರ್ಯಸೂಚಿಯನ್ನೂ ಸಹ ಉಲ್ಲಂಘಿಸಿದ್ದು ಸ್ಪಷ್ಟವಾಗಿದೆ.

ಆನೆಗಳಿಗೆ ಅರೆವಳಿಕೆ ನೀಡಿ ಅವುಗಳನ್ನು ಹಿಡಿಯಲು ಕ್ರಮಗಳಿವೆ. ಇಲ್ಲಿ ಆನೆಯನ್ನು ಆಯ್ಕೆ ಮಾಡಿ ಗುರುತಿಸಬೇಕು. ನಂತರ ಅದರ ಆರೋಗ್ಯ ಮತ್ತು ಶಾರೀರಿಕ ಲಕ್ಷಣಗಳನ್ನು ನೋಡಬೇಕು. ಅದರ ಆವಾಸಸ್ಥಾನದ ಪರಿಸರ ಮತ್ತು ಭೌತಿಕ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಬೇಕು. ನಂತರ ಸೂಕ್ತವಾದ ಔಷಧದ ಆಯ್ಕೆ ಮತ್ತು ಎಷ್ಟು ಡೋಸ್‌ ನೀಡಬೇಕು ಎಂಬುದನ್ನು ನಿರ್ಧರಿಸಬೇಕು.  ಸೂಕ್ತವಾದ ರಿಮೋಟ್ ಇಂಜೆಕ್ಷನ್ ಡಿವೈಸ್‌ ಆರಿಸಿ ರಿಮೋಟ್ ಡ್ರಗ್ ಡೆಲಿವರಿ ಸಿಸ್ಟಂ ಮೂಲಕ ವ್ಯವಸ್ಥೆಯ ಮೂಲಕ ಗುರಿ ಇಡಬೇಕು. ಆನೆಯನ್ನು ಟ್ರ್ಯಾಕ್‌ ಮಾಡಿ ಅರಿವಳಿಕೆ ಮಟ್ಟವನ್ನು ಪರೀಕ್ಷಿಸಬೇಕು. ನಿಶ್ಚಲವಾದ ಆನೆ ಸುರಕ್ಷಿತವಾಗಿ ಸ್ಥಾನದಲ್ಲಿದೆಯೇ ಎಂದು ಪರಿಶೀಲಿಸಬೇಕು. ನಂತರವೇ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.

Ministry of Environment, Forest and Climate Change ನೀಡಿರುವ ಸೂಚನೆಗಳ ಪ್ರಕಾರ ಆನೆ ಕಾರ್ಯಾಚರಣೆ ಆನೆಗೆ ಅರೆವಳಿಕೆಯನ್ನು ನೀಡುವ ಮೊದಲು ಸ್ಥಳವನ್ನು ಪರಿಶೀಲಿಸಬೇಕು. ಪ್ರಜ್ಞೆ ಕಳೆದುಕೊಳ್ಳದ ಆನೆಯಿಂದ ತಪ್ಪಿಸಿಕೊಳ್ಳಲು ಇದು ಅಗತ್ಯವಾಗಿ ಮಾಡಲೇ ಬೇಕಾದ ಕೆಲಸ. ಹಾಗಾಗಿ ಆನೆಗಳನ್ನು ಸಮತಟ್ಟಾದ ಜಾಗದಲ್ಲಿಯೇ ಕಡೆತಂದು ಹಿಡಿಯಬೇಕು.  ಸಾಮಾನ್ಯವಾಗಿ ಆನೆಗಳಿಗೆ ಎಟಾರ್ಫಿನ್‌ ಎಂಬ ಮಾರ್ಫಿನ್‌ ಡಿರೈವೇಟಿವ್‌ ಡ್ರಗ್‌ ನೀಡಲಾಗುತ್ತದೆ. ಇದನ್ನು ನೀಡಿ ಒಂದೆರಡು ನಿಮಿಷಗಳಲ್ಲೇ ಆನೆ ಪ್ರಜ್ಞೆ ಕಳೆದುಕೊಳ್ಳುತ್ತದೆ. ಆದರೆ ಕೆಟಾಮೈನ್‌ ಎಂಬ ಅರೆವಳಿಕೆಯನ್ನು ನೀಡಿದರೆ ಪ್ರಜ್ಞೆ ಕಳೆದುಕೊಳ್ಳಲು ಏಳರಿಂದ ಹದಿನೈದು ನಿಮಿಷ ತೆಗೆದುಕೊಳ್ಳುತ್ತದೆ.

ಅಲ್ಲದೇ ಅರೆವಳಿಕೆ ನೀಡಲು ಡಾರ್ಟ್‌ ಮಾಡಬೇಕು. ಇದು ವೈದ್ಯರ ಕೆಲಸ. ದೈಹಿಕವಾಗಿ ದುರ್ಬಲರಾಗಿರುವ ಇಲ್ಲವೇ ವಯಸ್ಸಾದ ವೈದ್ಯ ಬದಲಿಗೆ ಸಾರ್ಪ್‌ ಶೂಟರೊಬ್ಬರಿಂದ ಈ ಕೆಲಸ ಮಾಡಿಸಬಹುದು. ನಂತರ ಆನೆಯ ಬಳಿ ನಡೆದು ಬಾರದೇ ಅದಕ್ಕಿಂತ ಬಲಶಾಲಿಯಾದ ಇನ್ನೊಂದು ಆನೆಯ ಜೊತೆಗೆ ಬರಬೇಕು. ಆದರೆ ಇಲ್ಲಿ ಅದಾಗಿಲ್ಲ. ಬಹುಶಃ ಬಲಶಾಲಿ ಆನೆಗಳು ದಸರಾ ಉತ್ಸವದ ತಯಾರಿಗೆ ತೆರಳಿರಬಹುದಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನೇರವಾಗಿ ತಾನೇ ಕಾರ್ಯಚರಣೆಗೆ ಇಳಿದಿದೆ. ಇಲ್ಲೂ ಸಹ ಅರಣ್ಯ ಇಲಾಖೆ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದು ಸ್ಪಷ್ಟವಾಗಿ ಘೋಚರಿಸುತ್ತಿದೆ.

1988 ರಿಂದ ಫಾರೆಸ್ಟ್ ವಾಚರ್ ಹುದ್ದೆಯಲ್ಲಿ ಗುತ್ತಿಗೆ ನೌಕರನಾಗಿ ಅರಣ್ಯ ಇಲಾಖೆಗೆ ಸೇರಿಕೊಂಡ ವೆಂಕಟೇಶ್‌ ಅವರಿಗೆ ಆನೆಗಳ ವರ್ತನೆ ಹಾಗೂ ಅವುಗಳನ್ನು ನಿಯಂತ್ರಿಸುವ, ಜೊತೆಗೆ ಕೋವಿ ಬಳಸುವ ಅನುಭವ ಕೂಡ ಹೊಂದಿದ್ದರು. ಹಾಗಾಗಿ ಅವರನ್ನು ಅರೆವಳಿಕೆ ನೀಡುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ರಾಜ್ಯದ ಮೂಲೆ ಮೂಲೆಗಳಲ್ಲಿ ಎಲ್ಲೇ ಆನೆ ಹಿಡಿಯುವುದಿದ್ದರೂ ವೆಂಕಟೇಶ್ ಹಾಜರು. ಸುಮಾರು ಅರವತ್ತಕ್ಕೂ ಅಧಿಕ ಆನೆಗಳಿಗೆ ಡಾಟ್‌ ಮಾಡಿ ಅರೆವಳಿಕೆ ನೀಡಿರುವ ಇವರು ಅರುಣಾಚಲ ಪ್ರದೇಶ ಸೇರಿದಂತೆ ಅನೇಕ ಕಡೆ ಈ ಕೆಲಸ ನಿರ್ವಹಿಸಿದ್ದಾರೆ. ಇವರ ಈ ಸೇವಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೂಡ ನೀಡಲಾಗಿತ್ತು. ಕ್ಷೇಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್‌ ಅವರನ್ನು ಕರ್ನಾಟಕ ಸರ್ಕಾರ (2013) ಖಾಯಂಗೊಳಿಸಿತ್ತು.  ಆದರೆ ಇದರ ನಂತರ ಐದೇ ವರ್ಷದಲ್ಲಿ ನಿವೃತ್ತರಾದರು.  ಹೊರಗುತ್ತಿಗೆ ಆದಾರದಲ್ಲಿ ಇವರು ಆನೆ ಕಾರ್ಯಾಚರಣೆಯ ತಂಡಕ್ಕೆ ತರಬೇತಿಯನ್ನು ನೀಡುತ್ತಿದ್ದರು.

2013 ರಲ್ಲಿ ವೆಂಕಟೇಶ್ ಅವರ ಸೇವೆಯನ್ನು ಸರ್ಕಾರ ಕಾಯಂಗೊಳಿಸಿತು. 2018 ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಅವ ಕಾರ್ಯಾಚರಣೆಯ ತಂಡಕ್ಕೆ ತರಬೇತಿಗಾರನಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಗಾಗಿ ಅವರನ್ನು ಗುತ್ತಿಗೆ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ನಿಯೋಜನೆ ಮಾಡಲಾಗಿತ್ತು.

ಇಷ್ಟೆಲ್ಲಾ ಅಸುರಕ್ಷಿತ ವ್ಯವಸ್ಥೆಯಲ್ಲಿ ಕಾರ್ಯಾಚರಣೆಗೆ ಇಳಿದದ್ದು ಅರಣ್ಯ ಇಲಾಖೆಯ ಮೊದಲ ತಪ್ಪು. ಆನೆ ಹಿಡಿಯುವುದರಲ್ಲಿ ವೆಂಕಟೇಶ್ ಎಷ್ಟೇ ಪರಿಣತರಾದರೂ ನಿವೃತ್ತಿ ವಯಸ್ಸನ್ನಾದರೂ ಇಲಾಖೆ ಪರಿಗಣಿಸಬಹುದಿತ್ತು. ಅದೂ ಸಹ ಇಲಾಖೆ ಮಾಡದೇ ಉಳಿದಿದೆ. ಕೊನೆಗೆ ಆನೆಗಗ ಕೊಡುವ ಅರೆವಳಿಕೆ ಬಗ್ಗೆಯೂ ಬಲವಾದ ಅನುಮಾನ ಮೂಡುತ್ತಿದೆ.

ಇಷ್ಟೆಲ್ಲಾ ನಿರ್ಲಕ್ಷ್ಯಕ್ಕೆ ಈಗ ವೆಂಕಟೇಶ್ ಜೀವ ಬಲಿಯಾಗಿದೆ. ಇಲಾಖೆ ಏನೋ ಅಷ್ಟೋ ಇಷ್ಟೋ ಪರಿಹಾರ ಕೊಟ್ಟು ಕೈತೊಳೆದುಕೊಳ್ಳಬಹುದು. ಆದರೆ ಪ್ರೊಟೋಕಾಲ್ ಉಲ್ಲಂಘನೆಗೆ ಯಾರು ಹೊಣೆ ಹೊರಬೇಕು?

ಕಾಡಾನೆ ‘ಭೀಮ’ನ ಭೀಕರ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಶಾರ್ಪ್ ಶೂಟರ್ ವೆಂಕಟೇಶ್ ಸಾವು
ಸಕಲೇಶಪುರ /ಆಲೂರು : ಆಲೂರು ತಾಲ್ಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಶಾರ್ಪ್ ಶೂಟರ್ ವೆಂಕಟೇಶ್ ಸಾವನ್ನಪ್ಪಿದ್ದಾರೆ. ಕಾಡಾನೆ ‘ಭೀಮ’ ವೆಂಕಟೇಶ್ ಮೇಲೆ ಏಕಾಏಕಿ ದಾಳಿ ಮಾಡಿದ ಪರಿಣಾಮ ವೆಂಕಟೇಶ್ ಹಾಸನ ಆಸ್ಪತ್ರೆಯಲ್ಲಿ ಜೀವ ತೆತ್ತಿದ್ದಾರೆ.

ಹಲವು ದಿನಗಳಿಂದ ಗಾಯಗೊಂಡು ಓಡಾಡುತ್ತಿದ್ದ ‘ಭೀಮ’ ಕಾಡಾನೆಗೆ ಹೆಚ್ಚಿನ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಮುಂದಾಗಿತ್ತು. ಇದೇ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಶಾರ್ಪ್ ಶೂಟರ್ ಗಳನ್ನು ಬಳಸಿಕೊಂಡು ಭೀಮನ ಸೆರೆ ಹಿಡಿಯಲು ಮುಂದಾಗಿದ್ದರು.

ಈ ಸಂದರ್ಭದಲ್ಲಿ ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಕಾಡಾನೆಗೆ ಅರೆವಳಿಕೆ ಮದ್ಧು ನೀಡಲು ಶಾರ್ಪ್ ಶೂಟರ್ ವೆಂಕಟೇಶ್ ಮುಂದಾದಾಗ ಏಕಾಏಕಿ ಬಂದ ಕಾಡಾನೆ ವೆಂಕಟೇಶ್ ರವರನ್ನು ತುಳಿದು ಹಾಕಿದೆ. ಇದರಿಂದ ವೆಂಕಟೇಶ್ ಗಂಭೀರ ಗಾಯಗೊಂಡಿದ್ದಾರೆ.

ಇದನ್ನೂ ಓದಿ : ಶಾರ್ಪ್ ಶೂಟರ್ ವೆಂಕಟೇಶ್ ಮೇಲೆ ಕಾಡಾನೆ ‘ಭೀಮ’ನ ಗಂಭೀರ ದಾಳಿ

ತಕ್ಷಣವೇ ವೆಂಕಟೇಶ್ ಅವರನ್ನು ಹಾಸನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಕೆಲವು ಗಂಟೆಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಅಸುನೀಗಿದ್ದಾರೆ.

ಅರಣ್ಯ ಇಲಾಖೆಯಲ್ಲಿ ಶಾರ್ಪ್ ಶೂಟರ್ ಆಗಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ರಾಜ್ಯದ ಎಲ್ಲೇ ಆನೆ ದಾಳಿ ಆದಾಗಲೂ ಅರೆವಳಿಕೆ ಚುಚ್ಚಲು ತೆರಳುತ್ತಿದ್ದರು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಸಕಲೇಶಪುರ ಆನೆ ದಾಳಿ : ಸಾವಿಗೆ ನ್ಯಾಯ ಕೇಳಿದವರನ್ನೇ ಬಂಧಿಸಿದ ಪೊಲೀಸರು, ಪ್ರಕರಣ ದಾಖಲು
ಸಕಲೇಶಪುರ : ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದಲ್ಲಿ ಆನೆ ದಾಳಿಗೆ ಮೃತಪಟ್ಟ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಕೇಳಲು ಮುಂದಾದವರ ಮೇಲೆಯೇ ಸ್ಥಳೀಯ ಪೊಲೀಸರು ದೂರು ದಾಖಲಿಸಿ, ಬಂಧಿಸಿದ ಘಟನೆ ನಡೆದಿದೆ.

ನಿನ್ನೆ ಮುಂಜಾನೆ ಕಾಫಿ ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿ ಮೃತಪಟ್ಟ ಘಟನೆ, ಸಕಲೇಶಪುರ ತಾಲ್ಲೂಕಿನ, ವಡೂರು ಗ್ರಾಮದಲ್ಲಿ ನಡೆದಿತ್ತು. ತವರು ಮನೆಗೆಂದು ಬಂದಿದ್ದ ನಾರ್ವೆ ಗ್ರಾಮದ ಕವಿತಾ (37) ಮೃತ ಮಹಿಳೆ. ಸಕಲೇಶಪುರ ಭಾಗದಲ್ಲಿ ನಿರಂತರ ನಡೆಯುತ್ತಿರುವ ಈ ಕಾಡಾನೆ ದಾಳಿಗೆ ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಮೃತಪಟ್ಟ ಕವಿತಾ ಸೇರಿದಂತೆ ಈವರೆಗೆ ಬರೋಬ್ಬರಿ 78 ಮಂದಿ ಕಾಡಾನೆ ದಾಳಿಗೆ ಮೃತಪಟ್ಟರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರ ಈ ಬಗ್ಗೆ ಏನೊಂದೂ ಜವಾಬ್ದಾರಿಯುತವಾಗಿ ನಡೆದುಕೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹಾಸನದ ವೈದ್ಯಕೀಯ ಬೋಧಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮಹಿಳೆ ಶವ ಇಟ್ಟು ಪ್ರತಿಭಟನೆ ಮಾಡಲು ಮುಂದಾದ ಕೆಲ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ 11 ಜನರನ್ನು ಬಂಧಿಸಲಾಗಿದೆ.

ಕವಿತಾ ಸಾವಿಗೆ ನ್ಯಾಯ ದೊರಕಿಸಿಕೊಡಲು ಹಾಗೂ ಮರಣೋತ್ತರ ಪರೀಕ್ಷೆ ತಡವಾಗಿದೆ ಎಂದು ಆರೋಪಿಸಿ ಶವಾಗಾರದ ಎದುರು ಧರಣಿ ಮಾಡಲು ಸ್ಥಳೀಯ ಕನ್ನಡಪರ ಸಂಘಟನೆ ಕಾರ್ಯಕರ್ತರು ಮುಂದಾಗಿದ್ದರು. ಈ ನಡುವೆ ಪೊಲೀಸರು ಮಧ್ಯ ಪ್ರವೇಶಿಸಿ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದ್ದರು.

ನಂತರ ಮರಣೋತ್ತರ ಪರೀಕ್ಷೆ ಬಳಿಕವೂ ಸಹ ಸ್ಥಳೀಯರು ಹಾಗೂ ಸಂಘಟನೆ ಮುಖಂಡರು ಶವವನ್ನು ಹಸ್ತಾಂತರ ಮಾಡಲು ಕೇಳಿದಾಗಲೂ ಪೊಲೀಸರು ದರ್ಪ ಮೆರೆದಿದ್ದಾರೆ. ಈ ವೇಳೆ ಅಂಬುಲೆನ್ಸ್ ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಮೃತರ ಕುಟುಂಬಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸ್ಥಳೀಯರ ಮೇಲೆ ಪ್ರಕರಣ ದಾಖಲಿಸಿ 11 ಜನರ ಬಂಧಿಸಿದ್ದಾರೆ.

ಕವಿತಾ ಅವರ ಹಾಗೂ ಈ ವರೆಗೆ ಆನೆ ದಾಳಿಗೆ ಮೃತಪಟ್ಟವರ ಸಾವಿಗೆ ನ್ಯಾಯ ಕೇಳಿ ಸಕಲೇಶಪುರದ ಅಂಬೇಡ್ಕರ್ ಪ್ರತಿಮೆ ಎದುರು ಧರಣಿ ಮಾಡುವ ಬಗ್ಗೆ ಹೋರಾಟ ನಿರತರು ಸ್ಥಳೀಯ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದರು. ಇದರ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಹೋರಾಟ ಮಾಡಲು ಮುಂದಾದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಬಂಧನದ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಂಧಿತರ ಮೇಲಿನ ಪ್ರಕರಣ ಹಿಂತೆಗೆದುಕೊಳ್ಳಬೇಕು ಮತ್ತು ಮೃತ ಮಹಿಳೆ ಕವಿತಾ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಕಲೇಶಪುರ : ಕಾಡಾನೆ ದಾಳಿಗೆ ಮತ್ತೊಂದು ಬಲಿ ; ಈವರೆಗೆ ಸತ್ತವರ ಸಂಖ್ಯೆ ಎಷ್ಟು ಗೊತ್ತಾ?
ಸಕಲೇಶಪುರದಲ್ಲಿ ಮತ್ತೆ ಕಾಡಾನೆ ದಾಳಿ ಮುಂದುವರಿದಿದೆ. ಕಾಫಿ ತೋಟಕ್ಕೆಂದು ಹೋಗಿದ್ದ ಮಹಿಳೆ ಮೇಲೆ ಕಾಡಾನೆ ತೀವ್ರವಾಗಿ ದಾಳಿ ನಡೆಸಿದ್ದು, ಗಾಯಗೊಂಡ ಮಹಿಳೆಗೆ ಚಿಕಿತ್ಸೆ ಫಲಿಸದೇ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆ ಮೂಲಕ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಇದು 78 ನೇ ಬಲಿಯಾಗಿದೆ.

ಶುಕ್ರವಾರ ಬೆಳಿಗ್ಗೆ ಮುಂಚೆಯೇ ಕಾಫಿ ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದೆ. ಸಕಲೇಶಪುರ ತಾಲ್ಲೂಕಿನ, ವಡೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ತಕ್ಷಣವೇ ಸ್ಥಳೀಯರ ಸಹಕಾರದಿಂದ ಜಿಲ್ಲಾಸ್ಪತ್ರೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಸಾವನ್ನಪ್ಪಿದ್ದಾರೆ.

ಕವಿತಾ ಅವರನ್ನು ಹತ್ತಿರದ ನಾರ್ವೆ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಪತಿಯನ್ನು ಕಳೆದುಕೊಂಡಿದ್ದ ಕವಿತಾ ತವರು ಮನೆಗೆ ಬಂದಿದ್ದರು. ಇಂದು ಬೆಳಿಗ್ಗೆ ಮನೆಯ ಹಿಂಭಾಗದ ಕಾಫಿ ತೋಟಕ್ಕೆ ಕವಿತಾ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿ ಸೊಂಡಲಿನಿದ್ದ ಎತ್ತಿ ಬಿಸಾಡಿ ತುಳಿದು ಗಾಯಗೊಳಿಸಿದೆ. ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನವಾಗಿ ಬಿದ್ದಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಕಲೇಶಪುರ ಭಾಗದಲ್ಲಿ ನಿರಂತರ ನಡೆಯುತ್ತಿರುವ ಈ ಕಾಡಾನೆ ದಾಳಿಗೆ ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಮೃತಪಟ್ಟ ಕವಿತಾ ಸೇರಿದಂತೆ ಈವರೆಗೆ ಬರೋಬ್ಬರಿ 78 ಮಂದಿ ಕಾಡಾನೆ ದಾಳಿಗೆ ಮೃತಪಟ್ಟರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸ್ಥಳೀಯ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.