elon musk – Peepal Media

ಪ್ರತಿಯೊಬ್ಬ ಸಾಮಾನ್ಯ ಅಧಿಕಾರಿಗೆ ಕಂಟೆಂಟ್ ತೆಗೆದುಹಾಕುವ ಆದೇಶಗಳನ್ನು ನೀಡುವ ಅಧಿಕಾರವಿದೆ: ಕರ್ನಾಟಕ ಹೈಕೋರ್ಟ್‌ಗೆ ಎಕ್ಸ್
ಎಲೋನ್ ಮಸ್ಕ್ ಒಡೆತನದ X ನ ವಕೀಲರು , ಪ್ರತಿಯೊಬ್ಬ “ಟಾಮ್, ಡಿಕ್ ಮತ್ತು ಹ್ಯಾರಿ” ಸರ್ಕಾರಿ ಅಧಿಕಾರಿಯೂ X ನಲ್ಲಿರುವ ಕಂಟೆಂಟ್‌ಗಳನ್ನು ತೆಗೆದುಹಾಕುವ ಆದೇಶಗಳನ್ನು ಹೊರಡಿಸಲು ಅಧಿಕಾರ ಹೊಂದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಮಂಗಳವಾರ (ಜುಲೈ 1) ಕರ್ನಾಟಕ ಹೈಕೋರ್ಟ್ ಮುಂದೆ ಎಕ್ಸ್ ಅವರ ವಕೀಲ ಕೆ.ಜಿ. ರಾಘವನ್ ನೀಡಿದ ಈ ಹೇಳಿಕೆಗೆ ಕೇಂದ್ರ ಸರ್ಕಾರದ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ರೈಲ್ವೆ ಹಳಿಯಲ್ಲಿ ಕಾರು ಓಡಿಸುತ್ತಿರುವ ವೀಡಿಯೊವನ್ನು ತೆಗೆದುಹಾಕಲು ಎಕ್ಸ್ ಗೆ ಇತ್ತೀಚೆಗೆ ರೈಲ್ವೆ ಇಲಾಖೆಯಿಂದ ನೋಟಿಸ್ ಬಂದಿದೆ ಎಂದು ರಾಘವನ್ ಹೇಳಿದರು. ಇದು ಸುದ್ದಿಯಾಗಿದ್ದರೂ ಸರ್ಕಾರವು ಅದನ್ನು ಕಾನೂನುಬಾಹಿರವೆಂದು ಪರಿಗಣಿಸಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

“ಮೈ ಲಾರ್ಡ್, ಪ್ರತಿಯೊಬ್ಬ ಟಾಮ್, ಡಿಕ್ ಮತ್ತು ಹ್ಯಾರಿ ಅಧಿಕಾರಿಗೆ ಅಧಿಕಾರವಿದ್ದರೆ ಆಗುವ ಅಪಾಯ ಇದು” ಎಂದು ರಾಘವನ್ ಹೈಕೋರ್ಟ್‌ಗೆ ತಿಳಿಸಿದರು ಎಂದು ರಾಯಿಟರ್ಸ್ ವರದಿ ಮಾಡಿದೆ.

ರಾಘವನ್ ಅವರ ಹೇಳಿಕೆಯು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಂದ ತಕ್ಷಣದ ಖಂಡನೆಗೆ ವ್ಯಕ್ತವಾಯ್ತು.

“ಅಧಿಕಾರಿಗಳು ಟಾಮ್, ಡಿಕ್ ಅಥವಾ ಹ್ಯಾರಿ ಅಲ್ಲ … ಅವರು ಶಾಸನಬದ್ಧ ಸಾರ್ವಜನಿಕ ಸೇವಕರು. ಯಾವುದೇ ಸಾಮಾಜಿಕ ಮಾಧ್ಯಮ ಮಧ್ಯವರ್ತಿಯಿಂದ ಸಂಪೂರ್ಣವಾಗಿ ಅನಿಯಂತ್ರಿತ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ,” ಎಂದು ಮೆಹ್ತಾ ಹೇಳಿದರು.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಮುಂದೆ ನಡೆದ ವಿಚಾರಣೆಯ ಸಂದರ್ಭದಲ್ಲಿ, ಮಧ್ಯಸ್ಥಿಕೆ ಅರ್ಜಿಯನ್ನು ಸಲ್ಲಿಸಿರುವ ಡಿಜಿಟಲ್ ಮಾಧ್ಯಮ ಸಂಸ್ಥೆಗಳ ಸಂಘದ ಪರವಾಗಿ ಹಾಜರಾದ ಹಿರಿಯ ವಕೀಲ ಆದಿತ್ಯ ಸೋಂಧಿ, “ನಾವು ಕಂಟೆಂಟ್‌ ಕ್ರಿಯೇಟರ್, ಯಾವುದೇ ಟೇಕ್-ಡೌನ್ ಆದೇಶಗಳಿಂದ ಅಂತಿಮವಾಗಿ ಪರಿಣಾಮ ಬೀರುತ್ತೇವೆ” ಎಂದು ಲೈವ್‌ಲಾ ವರದಿ ಮಾಡಿದೆ .

ನ್ಯಾಯಮೂರ್ತಿ ನಾಗಪ್ರಸನ್ನ ಅವರು ‘ಟಾಮ್ ಡಿಕ್ ಮತ್ತು ಹ್ಯಾರಿ’ ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.

“ಇವರು ಭಾರತ ಒಕ್ಕೂಟದ ಅಧಿಕಾರಿಗಳು. ನಾನು ಇದಕ್ಕೆ ಆಕ್ಷೇಪಣೆ ಸಲ್ಲಿಸುತ್ತೇನೆ. ಅವರು ಅಧಿಕಾರಿಗಳೇ ಹೊರತು ಟಾಮ್, ಡಿಕ್ ಮತ್ತು ಹ್ಯಾರಿ ಅಲ್ಲ” ಎಂದು ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು.

ಐಟಿ ಕಾಯ್ದೆಯ ಸೆಕ್ಷನ್ 79(3)(ಬಿ) ಮಾಹಿತಿ ನಿರ್ಬಂಧಿಸುವ ಆದೇಶಗಳನ್ನು ನೀಡುವ ಅಧಿಕಾರವನ್ನು ನೀಡುವುದಿಲ್ಲ ಮತ್ತು ಅಂತಹ ಆದೇಶಗಳನ್ನು ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಹೊರಡಿಸಬಹುದು ಎಂದು ಘೋಷಿಸುವಂತೆ ಕೋರಿ ಎಕ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಐಟಿ ಕಾಯ್ದೆಯ ಸೆಕ್ಷನ್ 69A ರ ಪ್ರಕಾರ ಹೊರಡಿಸಲಾದ ಆದೇಶಗಳನ್ನು ಹೊರತುಪಡಿಸಿ, ನಿರ್ಬಂಧಿಸುವ ನಿಯಮಗಳೊಂದಿಗೆ ಓದಲಾದ ಯಾವುದೇ ‘ಮಾಹಿತಿ ನಿರ್ಬಂಧಿಸುವ ಆದೇಶ’ಗಳಿಗೆ ಸಂಬಂಧಿಸಿದಂತೆ X ವಿರುದ್ಧ ಬಲವಂತದ ಅಥವಾ ಪೂರ್ವಾಗ್ರಹ ಪೀಡಿತ ಕ್ರಮ ಕೈಗೊಳ್ಳದಂತೆ ಭಾರತ ಕೇಂದ್ರದ ವಿವಿಧ ಸಚಿವಾಲಯಗಳಿಗೆ ನಿರ್ದೇಶನವನ್ನು ಸಹ ಅದು ಕೋರಿದೆ.

ನ್ಯಾಯಾಲಯವು ಈ ವಿಷಯವನ್ನು ಜುಲೈ 8ಕ್ಕೆ ಅಂತಿಮ ವಿಚಾರಣೆಗೆ ನಿಗದಿಪಡಿಸಿತು ಮತ್ತು ಅರ್ಜಿದಾರರಿಗೆ ಅರ್ಜಿಯನ್ನು ತಿದ್ದುಪಡಿ ಮಾಡಲು ಮತ್ತು ಭಾರತ ಸರ್ಕಾರದ ವಿವಿಧ ಸಚಿವಾಲಯಗಳನ್ನು ಜಾರಿಗೊಳಿಸಲು ಅನುಮತಿ ನೀಡಿತು.

‘ನನ್ನ ಸಲಹೆಗಾರರಾಗಿ ಎಲಾನ್ ಮಸ್ಕ್ ಇರಲೆಂದು ಅಪೇಕ್ಷಿಸುತ್ತೇನೆ’ : ಅಮೇರಿಕಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿವೇಕ್ ರಂಗಸ್ವಾಮಿ
ಅಮೆರಿಕದ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರಿಗೆ ಎಲಾನ್ ಮಸ್ಕ್ ಮಾದರಿಯಂತೆ‌. ಹಾಗಾಗಿ ತನಗೆ ಸಲಹೆಗಾರರಾಗಿ ಎಲಾನ್ ಮಸ್ಕ್ ಅವರು ಇರಲಿ ಎಂದು ಅಪೇಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಟ್ವಿಟ್ಟರ್ ಸಂಸ್ಥೆಯನ್ನು ತನ್ನದಾಗಿಸಿಕೊಂಡ ಎಲಾನ್ ಮಸ್ಕ್, ಟ್ವಿಟ್ಟರ್ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆಗೂ ಕತ್ತರಿ ಹಾಕಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡಿದ ವಿವೇಕ್ ರಂಗಸ್ವಾಮಿ ಟ್ವಿಟ್ಟರ್​ನಲ್ಲಿ ಎಲಾನ್ ಮಸ್ಕ್ ಕತ್ತರಿ ಹಾಕಿ ಚೊಕ್ಕಟ ಮಾಡಿದಂತೆ ಅಮೆರಿಕ ಆಡಳಿತದಲ್ಲೂ ಸುಧಾರಣೆ ತರುವೆ ಎಂದು ಹೇಳಿದ್ದಾರೆ.

ಸರ್ಕಾರದ ಒಳಗೆ ಇರದ ಮತ್ತು ಹೊಚ್ಚ ಹೊಸ ಮುಖಗಳು ನನಗೆ ಬೇಕು. ಇತ್ತೀಚೆಗೆ ಇಲಾನ್ ಮಸ್ಕ್ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಅಚ್ಚರಿಪಟ್ಟಿದ್ದೇನೆ. ನನಗೆ ಸಲಹೆಗಾರರಾಗಿ ಅವರು ಇರಬೇಕೆಂದು ಅಪೇಕ್ಷಿಸುತ್ತೇನೆ. ಟ್ವಿಟ್ಟರ್​ನಲ್ಲಿ ಶೇ. 75ರಷ್ಟು ಉದ್ಯೋಗಿಗಳನ್ನು ಅವರು ಲೇ ಆಫ್ ಮಾಡಿದರು ಎಂದು 38 ವರ್ಷದ ವಿವೇಕ್ ರಂಗಸ್ವಾಮಿ ಹೇಳಿದ್ದಾರೆ.

ಇದೇ ಮಾದರಿಯಲ್ಲಿ ನಾನು ಆಡಳಿತ ಸುಧಾರಣೆ ತರಲು ಪ್ರಯತ್ನಿಸುತ್ತೇನೆ. ಟ್ವಿಟ್ಟರ್​ನಲ್ಲಿ ಶೇ. 75ರಷ್ಟು ಉದ್ಯೋಗಿಗಳನ್ನು ಅವರು ಲೇ ಆಫ್ ಮಾಡಿದ ನಂತರ ಟ್ವಿಟ್ಟರ್ ಸಂಸ್ಥೆಯ ಕಾರ್ಯಕ್ಷಮತೆ ಹೆಚ್ಚಿದೆ ಎಂದು ವಿವೇಕ್ ರಂಗಸ್ವಾಮಿ ಹೇಳಿದ್ದಾರೆ.

ಟ್ವಿಟ್ಟರ್ ಅನ್ನು ಇಲಾನ್ ಮಸ್ಕ್ ಹೇಗೆ ನಿರ್ವಹಿಸುತ್ತಿದ್ದಾರೋ ಅದೇ ರೀತಿ ಸರ್ಕಾರದ ಆಡಳಿತವನ್ನು ನಡೆಸುತ್ತೇನೆ. ಶೇ. 75ರಷ್ಟು ಅನಗತ್ಯ ವೆಚ್ಚವನ್ನು ತೆಗೆದುಹಾಕುವುದು ಮತ್ತು ಆಡಳಿತದ ಕಾರ್ಯಕ್ಷಮತೆ ಹೆಚ್ಚಿಸುವುದು ಹೇಗೆಂಬುದಕ್ಕೆ ಟ್ಟಿಟ್ಟರ್ ಒಂದು ಉತ್ತಮ ನಿದರ್ಶನ ಎಂದು ಫಾಕ್ಸ್ ನ್ಯೂಸ್ ವಾಹಿನಿಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಟ್ವಿಟರ್‌ನ ಮಾಹಿತಿ ಸೋರಿಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ : ಎಲೋನ್‌ ಮಸ್ಕ್
ಹೊಸದಿಲ್ಲಿ: ಟ್ವಿಟರ್‌ ಕಂಪನಿಗೆ ಸಂಬಂಧಪಟ್ಟ ಆಂತರಿಕ ಇಮೇಲ್‌ ಸಂವಹನ, ಸೂಕ್ಷ್ಮ ಮಾಹಿತಿ ಮತ್ತು ಇತರ ಯಾವುದೇ ದಾಖಲೆಗಳನ್ನು ಸೋರಿಕೆ ಮಾಡಿದಲ್ಲಿ ಸಂಬಂಧಿಸಿದ ಉದ್ಯೋಗಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಲೋನ್‌ ಮಸ್ಕ್‌ ಹೇಳಿದ್ದಾರೆ.

ಟ್ವಿಟರ್‌ ಕಂಪನಿಗೆ ಹಾನಿ ಮಾಡುವಂತಹ ಯಾವುದೇ ರೀತಿಯ ಮಾಹಿತಿಗಳನ್ನು ಬೇರೆಡೆ ಸೋರಿಕೆ ಮಾಡಿದರೆ ಅಂತಹ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್‌ ಕಂಪನಿಯ ಮುಖ್ಯಸ್ಥ ಎಲೋನ್‌ ಮಸ್ಕ್‌ ಉದ್ಯೋಗಿಗಳಿಗೆ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್‌ ಮಾಡಿರುವ ಝೋ ಶಿಫರ್‌ ಅವರು, ʼಈ ಬಗ್ಗೆ ಉದ್ಯೋಗಿಗಳಿಗೆ ಎಲೋನ್‌ ಮಸ್ಕ್‌ ಕಳುಹಿಸಿರುವ ಇಮೇಲ್‌ ದಾಖಲೆ ದೊರಕಿದೆʼ ಎಂದು ಹೇಳಿದ್ದಾರೆ.

NEW: Elon Musk is threatening to sue Twitter employees who leak confidential information to the press. He's asking staffers to sign a pledge indicating they've understood. Here's the email:
— Zoë Schiffer (@ZoeSchiffer) December 10, 2022

ಟ್ವಿಟರ್‌ ಕುರಿತು ಎಲಾನ್‌ ಮಸ್ಕ್‌ಗೆ ಆಪಲ್‌ ಬೆದರಿಕೆ
ಆಪ್‌ ಸ್ಟೋರ್‌ನಿಂದ ಟ್ವಿಟರ್‌ಅನ್ನು ನಿರ್ಬಂಧ ಮಾಡುತ್ತೇವೆ ಎಂದು ಆಪಲ್‌ ಬೆದರಿಕೆ ಹಾಕಿದ್ದು, ಈ ರೀತಿ ಮಾಡುವುದಕ್ಕೆ ಕಾರಣವಾದರೂ ಏನು ಎಂದು ಟ್ವಿಟರ್‌ನ ಸಿಇಒ ಎಲಾನ್‌ ಮಸ್ಕ್‌ ಟ್ವಿಟರ್‌ ಮುಖಾಂತರವೇ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಎಲಾನ್‌ ಮಸ್ಕ್‌  ಅವರು, ʼಆಪಲ್‌ ತನ್ನ ಆಪ್‌ಸ್ಟೋರ್‌ನಿಂದ ಟ್ವಿಟರ್‌(Twitter) ಅನ್ನು ತಡೆ ಹಿಡಿಯುವುದಾಗಿ ಬೆದರಿಕೆ ಹೊಡ್ಡಿದೆ, ಆದರೆ ಯಾಕೆ ಎಂದು ನಮಗೆ ಹೇಳುತ್ತಿಲ್ಲ ಎಂದು ತಿಳಿಸಿದ್ದಾರೆ.

ʼಅದಲ್ಲದೇ, ಇತ್ತೀಚೆಗೆ ಆಪಲ್‌ ಹೆಚ್ಚಾಗಿ ಟ್ವಿಟರ್‌ನಲ್ಲಿ ತನ್ನ ಜಾಹೀರಾತನ್ನು ಕೂಡ ಕಡಿಮೆ ಮಾಡುತ್ತಿದೆ. ಆಪಲ್‌ನವರು ಅಮೇರಿಕಾದಲ್ಲಿನ ವಾಕ್‌ ಸ್ವಾತಂತ್ರ್ಯವನ್ನು ದ್ವೇಷಿಸುತ್ತಾರೆಯೇ?ʼ ಎಂದು ಎಲಾನ್ ಮಸ್ಕ್‌ ಪ್ರಶ್ನೆ ಮಾಡಿದ್ದಾರೆ.

ಟ್ವಿಟರಿಗೆ ಮರಳಿದ ಟ್ರಂಪ್!
ಇಲಾನ್‌ ಮಸ್ಕ್‌ ಕೈಸೇರಿದ ನಂತರ ಅಕ್ಷರಶಃ ಮನರಂಜನಾ ತಾಣವಾಗಿರುವ ಟ್ವಿಟರ್‌ಗೆ ಈಗ ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮರಳುವುದರೊಂದಿಗೆ ಇನ್ನಷ್ಟು ರಂಗು ಬಂದಂತಾಗಿದೆ. ಮೊನ್ನೆಯಷ್ಟೇ ಟ್ರಂಪ್‌ ಅವರನ್ನು ಟ್ವಿಟರಿಗೆ ಮರಳಿ ಕರೆತರುವ ಕುರಿತು ಜನಾಭಿಪ್ರಾಯ ಕೋರಿ ಪೋಲ್‌ ನಡೆಸಿದ್ದ ಇಲಾನ್‌ ಮಸ್ಕ್‌ ಇಂದು ಅವರ ಅಕೌಂಟನ್ನು ಮರುಸ್ಥಾಪಿಸಿದ್ದಾರೆ.

2021ರಲ್ಲಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಗಳನ್ನು ಒಪ್ಪಿಕೊಳ್ಳಲು ನಿರಾಕರಿಸಿ ಟ್ರಂಪ್‌ ಆ ದೇಶದ ಎಲ್ಲೆಡೆ ಗದ್ದಲ ಎಬ್ಬಿಸಿ, ಆತನ ಬೆಂಬಲಿಗರು ವೈಟ್‌ ಹೌಸಿಗೆ ದಾಳಿ ಮಾಡಿದ್ದರಿಂದಾಗಿ ನಡೆದ ಗುಂಡಿನ ಚಕಮಕಿ ಹಲವು ಸಾವುಗಳಿಗೂ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಈ ಟ್ರಂಪ್‌ ಸಾಮಾಜಿಕ ಜಾಲತಾಣಗಳನ್ನು ಬಳಸಿ ತನ್ನ ಬೆಂಬಲಿಗರ ಜೊತೆ ಸಂವಾದ ನಡೆಸುತ್ತಿದ್ದ ಕಾರಣ ಟ್ರಂಪ್‌ಗೆ ಸಂಬಂಧಿಸಿದ ಎಲ್ಲಾ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಅತ್ತ ಟ್ರಂಪ್‌ ಮರಳಿಬರುತ್ತಿದ್ದಂತೆ ಇತ್ತ ಸದಾ ದ್ವೇಷ ಕಾರುತ್ತಾ ತಲೆಬುಡವಿಲ್ಲದ ಟ್ವೀಟ್‌ ಮಾಡುವುದರಲ್ಲಿ ಖ್ಯಾತರಾಗಿದ್ದ ಕಂಗನಾ ರಾಣವತ್‌ ಅವರ ಖಾತೆಯೂ ಮರುಸ್ಥಾಪನೆಯಾಗುವ ಆಸೆ ಆಕೆಯ ಅಭಿಮಾನಿಗಳಲ್ಲಿ ಗರಿಗೆದರಿದೆ.

ಒಟ್ಟಾರೆ ಸದಾ ಹಲವು ಸಕಾರತ್ಮಕ ಸಾಮಾಜಿಕ ಬದಲಾವಣೆಗೆ ಕಾರಣವಾಗಿದ್ದ ಟ್ವಿಟರ್‌ ಇಲಾನ್‌ ಮಸ್ಕ್‌ ನಿಯಂತ್ರಣಕ್ಕೆ ಬಂದ ನಂತರ ಥೇ ಹುಚ್ಚಾಸ್ಪತ್ರೆಯ ವಾರ್ಡಿನಂತಾಗಿ, ತಮಾಷೆಯ ತಾಣವಾಗಿ ಬದಲಾಗಿದೆ. ಯಾವ ಸಮಯದಲ್ಲಿ ಟ್ವಿಟರ್‌ ಮುಚ್ಚಿಹೋಗಬಹುದೋ ಎನ್ನುವ ಭಯದಿಂದ ಅಲ್ಲಿರುವ ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ತಮ್ಮ ಇನ್ಸ್ಟಾ ಅಕೌಂಟ್‌ ಲಿಂಕ್‌ ಕೊಟ್ಟು ಅಲ್ಲಿ ಫಾಲೋ ಮಾಡುವಂತೆ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಉತ್ತಮ ಸಾಮಾಜಿಕ ಜಾಲತಾಣ ಯೋಗ್ಯನಲ್ಲದ ವ್ಯಕ್ತಿಯೊಬ್ಬನ ಕೈಗೆ ಸಿಕ್ಕರೆ ಏನಾಗಬಹುದೆನ್ನುವುದಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ.

ಸಾಮೂಹಿಕ ವಜಾ: ಎಲಾನ್‌ ಮಸ್ಕ್‌ ವಿರುದ್ಧ ಕೋರ್ಟಿಗೆ ಹೋದ ಟ್ವಿಟರ್‌ ನೌಕರರು
ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ ಸಂಸ್ಥೆಯೊಳಗಿನ ಗೊಂದಲಗಳು ಬೀದಿಗೆ ಬಂದಿದ್ದು ಸಂಸ್ಥೆಯ ಮಾಲಿಕ ಇಲಾನ್‌ ಮಸ್ಕ್‌ ವಿರುದ್ಧ ಅದರ ಉದ್ಯೋಗಿಗಳು ಕೋರ್ಟಿನ ಮೆಟ್ಟಿಲೇರಿದ್ದಾರೆ. ಇಲಾನ್‌ ಮಸ್ಕ್‌ ಸಂಸ್ಥೆಯನ್ನು ಕೊಂಡಾಗಿನಿಂದ ವಿವಿಧ ಬದಲಾವಣೆಗಳನ್ನು ಮಾಡುತ್ತಿದ್ದರು, ಅದರಲ್ಲಿ ಇತ್ತೀಚಿನದ್ದೆಂದರೆ 3,700 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದು. ಹೀಗೆ ಸರಿಯಾದ ನೋಟೀಸ್‌ ನೀಡದೆ ಕೆಲಸದಿಂದ ವಜಾ ಮಾಡುವುದು ಕ್ಯಾಲಿಫೋರ್ನಿಯಾ ಮತ್ತು ಫೆಡರಲ್‌ ಕಾನೂನಿನ ವಿರುದ್ಧವಾದುದು ಎನ್ನುವುದು ಉದ್ಯೋಗಿಗಳ ವಾದ.

ಈ ಕುರಿತು ಈಗ ಸ್ಯಾನ್ ಫ್ರಾನ್ಸಿಸ್ಕೋ ಕೋರ್ಟಿನಲ್ಲಿ ಗುಂಪು ದಾವೆಯನ್ನು ಉದ್ಯೋಗಿಗಳು ಹೂಡಿದ್ದಾರೆ.

ಟ್ವಿಟರ್‌ ಸಂಸ್ಥೆಯು ತಾನು ಶುಕ್ರವಾರದಿಂದ ಸಿಬ್ಬಂದಿ ಕಡಿತ ಪ್ರಕ್ರಿಯೆ ಆರಂಭಿಸುವುದಾಗಿ ಉದ್ಯೋಗಿಗಳಿಗೆ ಇ-ಮೇಲ್‌ ಮೂಲಕ ತಿಳಿಸಿತ್ತು. ಕಳೆದ ತಿಂಗಳು 44 ಬಿಲಿಯನ್‌ ಡಾಲರ್‌ ಮೊತ್ತಕ್ಕೆ ಟ್ವಿಟರ್‌ ಸಂಸ್ಥೆಯನ್ನು ಖರೀದಿಸಿದ್ದ ಮಸ್ಕ್‌, ಸಂಸ್ಥೆಯಲ್ಲಿನ ಖರ್ಚು-ವೆಚ್ಚಗಳನ್ನು ಕಡಿಮೆಗೊಳಿಸುವ ಸಲುವಾಗಿ ಈ ಕ್ರಮ ಕೈಗೊಳ್ಳುತ್ತಿದ್ದಾರೆನ್ನುವುದು ಸಂಸ್ಥೆಯ ಒಳಗಿರುವವರ ಅಭಿಪ್ರಾಯ.

ಫೆಡರಲ್ ವರ್ಕರ್ ಅಡ್ಜಸ್ಟ್‌ಮೆಂಟ್ ಅಂಡ್ ರೀಟ್ರೀನಿಂಗ್ ನೋಟಿಫಿಕೇಶನ್ ಆಕ್ಟ್ ದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳನ್ನು ಕನಿಷ್ಠ 60 ದಿನಗಳ ಮುಂಚಿತ ಸೂಚನೆಯಿಲ್ಲದೆ ಸಾಮೂಹಿಕವಾಗಿ ಕೆಲಸದಿಂದ ತೆಗೆದುಹಾಕುವುದನ್ನು ನಿರ್ಬಂಧಿಸುತ್ತದೆ.

ವಾರ್ತಾ ಸಂಸ್ಥೆಯೊಂದು ಈ ಕುರಿತು ಪ್ರತಿಕ್ರಿಯೆಗಾಗಿ ಕಂಪನಿಯನ್ನು ಸಂಪರ್ಕಿಸಿತಾದರೂ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿಕೊಂಡಿದೆ.

ಈ ದೂರು ತನ್ನ ಮನವಿಯಲ್ಲಿ ಮುಖ್ಯವಾಗಿ ಟ್ವಿಟರ್‌ ಸಂಸ್ಥೆಯು WARN ಕಾಯ್ದೆಯನ್ನು ಪಾಲಿಸಲು ಹೇಳಬೇಕು ಎನ್ನುತ್ತದೆ. ಮತ್ತು ಮುಂದುವರೆದು ದಾವೆಯಲ್ಲಿ ಅದರ ಉದ್ಯೋಗಿಗಳು ಪಾತ್ರವಹಿಸಿದಂತೆ ತಡೆಯಬಲ್ಲ ದಾಖಲೆಗಳಿಗೆ ಸಂಸ್ಥೆಯು ಸಹಿ ಹಾಕಿಸಿಕೊಳ್ಳದಂತೆ ತಡೆಯಬೇಕೆಂದು ವಿನಂತಿಸುತ್ತದೆ.

“ನಾವು ಈ ಕೇಸನ್ನು ದಾಖಲಿಸಿರುವುದರ ಉದ್ದೇಶವೆಂದರೆ, ನೌಕರರು ಪತ್ರಗಳಿಗೆ ಸಹಿ ಹಾಕಿ ತಮ್ಮ ಹಕ್ಕುಗಳನ್ನು ಬಿಟ್ಟುಕೊಡದಂತೆ ಅವರನ್ನು ಎಚ್ಚರಿಸುವುದು ಮತ್ತು ಅವರಿಗೆ ಈ ವಿಷಯದಲ್ಲಿ ಇರುವ ಹಕ್ಕಿನ ಕುರಿತು ಅರಿವು ಮೂಡಿಸುವುದಾಗಿದೆ,” ಎಂದು ಗುರುವಾರದಂದು ದೂರನ್ನು ಸಲ್ಲಿಸಿದ ನಂತರ ವಕೀಲ ಶಾನನ್ ಲಿಸ್-ರಿಯೋರ್ಡಾನ್ ಸಂದರ್ಶನವೊಂದರಲ್ಲಿ ಹೇಳಿದರು.

ಲಿಸ್-ರಿಯೋರ್ಡಾನ್ ಜೂನ್‌ ತಿಂಗಳಿನಲ್ಲಿ ಮಸ್ಕ್ ನೇತೃತ್ವದ ಎಲೆಕ್ಟ್ರಿಕ್-ಕಾರು ತಯಾರಕ ಕಂಪನಿ ಸುಮಾರು 10% ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ ಸಂದರ್ಭದಲ್ಲಿಯೂ ಇದೇ ರೀತಿಯ ಹಕ್ಕುಗಳಿಗಾಗಿ ಟೆಸ್ಲಾ ಇಂಕ್ ವಿರುದ್ಧ ಮೊಕದ್ದಮೆ ಹೂಡಿದ್ದರು.

ಈ ಕೇಸಿನಲ್ಲಿ ಟೆಸ್ಲಾ ಈ ಪ್ರಕರಣವನ್ನು ಮಧ್ಯಸ್ಥಿಕೆಯ ಮೂಲಕ ಮುಚ್ಚಿದ ಬಾಗಿಲಿನ ಹಿಂದೆ ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿ ಕೇಸನ್ನು ತನ್ನತ್ತ ತಿರುಗಿಸಿಕೊಂಡಿದ್ದರು. ಮತ್ತು ಇನ್ನೊಂದು ಸಂದರ್ಶನದಲ್ಲಿ ಕಾರ್ಮಿಕ ಹಕ್ಕುಗಳ ಕುರಿತಾದ ಈ ಕೇಸಿನ ಕುರಿತು ಮಾತನಾಡುತ್ತಾ ಅದೊಂದು “ಕ್ಷುಲ್ಲಕ” ಪ್ರಕರಣವಾಗಿತ್ತು ಎಂದಿದ್ದರು.

“ನೌಕರರನ್ನು ರಕ್ಷಿಸುವ ಈ ದೇಶದ ಕಾನೂನುಗಳಲ್ಲಿ ಮೂಗು ತೂರಿಸುವುದನ್ನು ಮುಂದುವರಿಸುತ್ತಾರೆಯೇ ಎಂದು ನಾವು ಈಗ ನೋಡುತ್ತೇವೆ,” ಎಂದು ಮಸ್ಕ್ ಕುರಿತಾಗಿ ಲಿಸ್-ರಿಯೋರ್ಡನ್ ಹೇಳಿದರು. “ಬಹುಶಃ ಅವರು ಟೆಸ್ಲಾದಲ್ಲಿ ಪ್ರಯೋಗಿಸಿದ ತಂತ್ರವನ್ನೇ ಇಲ್ಲಿಯೂ ಪ್ರಯೋಗಿಸಬಹುದೆನ್ನಿಸುತ್ತದೆ.” ಎಂದು ಅವರು ಹೇಳಿದರು.

ಇಲಾನ್‌ ಮಸ್ಕ್‌ ವಿರುದ್ದ ಅರ್ಜಿ : ಮಹಿಳೆಗೆ ರೂ.25,000 ದಂಡ ವಿಧಿಸಿದ ದೆಹಲಿ ಹೈಕೋರ್ಟ್‌
ಹೊಸದಿಲ್ಲಿ : ಟ್ವಿಟರ್‌ ಖಾತೆ ನಿಷೇಧ ಮಾಡಿರುವ  ಪ್ರಕರಣದಲ್ಲಿ ಟ್ವಿಟರ್‌ ಮಾಲೀಕ ಹಾಗೂ ಉದ್ಯಮಿ ಇಲಾನ್‌ ಮಸ್ಕ್‌ ಅವರನ್ನು ಪ್ರತಿವಾದಿಯಾಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ಡಿಂಪಲ್‌ ಕೌಲ್‌ ಅವರಿಗೆ ದೆಹಲಿ ಹೈಕೋರ್ಟ್‌ ಇಂದು ರೂ.25,000 ದಂಡ ವಿಧಿಸಿದೆ.

ಇಲಾನ್‌ ಮಸ್ಕ್‌ ಅವರು ಟ್ವಿಟರ್‌ ಅನ್ನು ಖರೀದಿಸಿದ್ದು, ಅದರ ಷೇರುಗಳನ್ನು ಸಹ ನ್ಯೂಯಾರ್ಕ್‌ ಷೇರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿಲ್ಲ ಎಂದು ಡಿಂಪಲ್‌ ಕೌಲ್‌ ಅವರು  ವಕೀಲ ಮುಕೇಶ್‌ ಶರ್ಮಾ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿʼವಾಕ್‌ ಸ್ವಾತಂತ್ರ್ಯದ ಕುರಿತು ಮಸ್ಕ್‌ ಭಿನ್ನ ನಿಲುವು ಹೊಂದಿದ್ದು, ಸಂಬಂಧಪಟ್ಟ ದೇಶದ ಕಾನೂನಿನಡಿ ವಾಕ್‌ ಸ್ವಾತಂತ್ರ್ಯದ ಉಲ್ಲಂಘನೆಯಾಗದಿದ್ದ ಸಂದರ್ಭದಲ್ಲಿ ಟ್ವಿಟರ್‌ ತನ್ನ ಬಳಕೆದಾರರ ಖಾತೆಯನ್ನು ಸ್ಥಗಿತಗೊಳಿಸಬಾರದು, ಅವರ ವಾಕ್‌ ಸ್ವಾತಂತ್ರ್ಯವನ್ನು ನಿರ್ಬಂಧಿಸಬಾರದು ಎಂದು ಮಸ್ಕ್‌ ಹೇಳಿದ್ದಾರೆʼ ಎಂದು ವಿವರಿಸಿದ್ದರು.

ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯಶವಂತ್‌ ವರ್ಮಾ ನೇತೃತ್ವದ ಏಕಸದಸ್ಯ ಪೀಠವು “ಈ ಅರ್ಜಿಯನ್ನು ತಪ್ಪಾಗಿ ಪರಿಭಾವಿಸಿ ಸಲ್ಲಿಸಲಾಗಿದೆ. ಟ್ವಿಟರ್‌ ಸಂಸ್ಥೆಯನ್ನು ಈಗಾಗಲೇ  ಪ್ರತಿನಿಧಿಸಿರುವಾಗ ಈ ಅರ್ಜಿಯನ್ನು ಸಲ್ಲಿಸುವ ಅಗತ್ಯವಿರಲಿಲ್ಲ. ಮತ್ತು ಈ ಅರ್ಜಿಯನ್ನು ವಜಾಗೊಳಿಸಿ ರೂ.25000 ದಂಡ ವಿಧಿಸಲಾಗಿದೆ.” ಎಂದು ಆದೇಶ ನೀಡಿದೆ.