Emergency – Peepal Media

ಬಿಜೆಪಿ ಹೇಳುವುದು ಸರಿಯಿದೆ, ಇನ್ನೊಂದು ಎಮರ್ಜೆನ್ಸಿ ಹೇರಿದರೆ ಭಾರತದ ಸ್ಥಿತಿ ಇನ್ನೂ ಕೆಟ್ಟದಾಗಬಹುದು
ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಸಂದರ್ಭದಲ್ಲಿ, ಸಾಂವಿಧಾನಿಕ ಆಡಳಿತಕ್ಕೆ ತಮ್ಮನ್ನು ತಾವು ಮತ್ತೆ ಸಮರ್ಪಿಸಿಕೊಳ್ಳುವ ಬದಲು, ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ರಾಕ್ಷಸೀಕರಿಸುವ ಒಂದು ಘೋರ ನಡೆಯನ್ನು ಇಡುತ್ತಿದೆ.

ತುರ್ತು ಪರಿಸ್ಥಿತಿಯನ್ನು ಔಪಚಾರಿಕವಾಗಿ ಹೇರುವ ಮೂಲಕ ಎಂದಿಗೂ ಸಂವಿಧಾನವನ್ನು ಉಲ್ಲಂಘಿಸದ ಕಾರಣ ಅವರು ತಮ್ಮನ್ನು ತಾವು ಸಂವಿಧಾನಕ್ಕೆ ಅರ್ಪಿಸಿಕೊಳ್ಳಬೇಕಾಗಿಲ್ಲ. ನರೇಂದ್ರ ಮೋದಿ ಸರ್ಕಾರವು ಈ ಸಂದರ್ಭವನ್ನು ಸಂವಿಧಾನ್ ಹತ್ಯಾ ದಿವಸ್ – ಸಂವಿಧಾನದ ಹತ್ಯೆಯ ದಿನ ಎಂದು ಬಿಂಬಿಸಲು ತನ್ನ ಸೃಜನಶೀಲ ಪ್ರತಿಭೆಯನ್ನೆಲ್ಲಾ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್‌ನ ಕಾಳಜಿ ಒಂದು ನಾಟಕ ಮತ್ತು ಇಂದಿರಾ ಗಾಂಧಿಯವರ ಪಕ್ಷ ಅಧಿಕಾರಕ್ಕೆ ಬಂದರೆ ದೇಶ ಮತ್ತೆ ತುರ್ತು ಪರಿಸ್ಥಿತಿಯ ಭಯಾನಕ ಪರಿಸ್ಥಿತಿಗೆ ಬೀಳುತ್ತದೆ ಎಂಬ ಭಯಾನಕ ಸಂದೇಶವನ್ನು ರವಾನಿಸುವುದು ಬಿಜೆಪಿಯ ಉದ್ದೇಶವಾಗಿತ್ತು ಎಂಬುದು ಸ್ಪಷ್ಟ.

ಇಂದು ಮೋದಿ ಸರ್ಕಾರ ಪತನಗೊಂಡು ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಚುನಾವಣೆಗಳು ನಡೆಯುತ್ತವೆ ಎಂದು ಊಹಿಸೋಣ. ವಿರೋಧ ಪಕ್ಷಗಳು ಗೆದ್ದು ಕಾಂಗ್ರೆಸ್‌ನಲ್ಲಿ ಯಾರಾದರೂ ಪ್ರಧಾನಿಯಾಗುತ್ತಾರೆ ಎಂದು ಅಂದುಕೊಳ್ಳೋಣ. ಆಗ ಅವರು ಏನು ಮಾಡಬಹುದು?

(ಅನುವಾದಕರ ಸ್ಪಷ್ಟೀಕರಣ: ಇಲ್ಲಿಂದ ಮುಂದೆ ಸದ್ಯ ನಡೆಯುತ್ತಿರುವ ಪ್ರತಿಕೂಲ ಸಂಗತಿಗಳನ್ನು ವಿಡಂಬನಾತ್ಮಕವಾಗಿ ಬಳಸಲಾಗಿದೆ. ಮೋದಿ ಹೋಗಿ ಇನ್ನೊಂದು ಸರ್ವಾಧಿಕಾರಿ ಬಂದರೆ ಮೋದಿ ಮಾಡುತ್ತಿರುವುದನ್ನೇ ಮಾಡಬಹುದು)

ಅವರು ನವೆಂಬರ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಆಡಳಿತ ಪ್ರಾರಂಭಿಸಬಹುದು, ಬಹುಶಃ ಮಧ್ಯರಾತ್ರಿಯಿಂದ ಭಾರತೀಯ ಕರೆನ್ಸಿಯನ್ನು ಅಮಾನ್ಯ ಮಾಡುತ್ತೇವೆ ಎಂದು ಘೋಷಿಸಬಹುದು. ಅವರು ಊಹೆಯನ್ನೂ ಮಾಡದಂತೆ ರಾಷ್ಟ್ರದ ಮೇಲೆ ನೋಟು ರದ್ದತಿ ರಾಕ್ಷಸನನ್ನು ಬಿಡಬಹುದು, ಎಲ್ಲೆಡೆ ಭಯಭೀತಿಯನ್ನು ಉಂಟುಮಾಡಬಹುದು, ಸಾಮಾನ್ಯ ಜನರು ಮುಂದಿನ ಜೀವನಕ್ಕೆ ಯಾವುದೇ ತಯಾರಿ ಮಾಡುವ ಮೊದಲೇ ಈ ನಿರ್ಧಾರ ತೆಗೆದುಕೊಳ್ಳಬಹುದು. ಆಗ ಏನಾಗುತ್ತದೆ? ವ್ಯವಹಾರಗಳು ನಾಶವಾಗಬಹುದು; ಆರ್ಥಿಕತೆ ಕುಸಿಯಬಹುದು ಮತ್ತು ಜನರು ನೂರಾರು ರುಪಾಯಿ ಹಣಕ್ಕಾಗಿಯೂ ದಿಕ್ಕುಗೆಡಬಹುದು. ಸಂವೇದನೆಯೇ ಇಲ್ಲದ ಮನಸ್ಥಿತಿಯನ್ನು ಹೊಂದಿರುವ ಸರ್ವಾಧಿಕಾರಿಯಂತೆ, ಕಾಂಗ್ರೆಸ್ ಪ್ರಧಾನಿ ಲಕ್ಷಾಂತರ ಬಡ ಜನರನ್ನು “ಘರ್ ಮೇ ಶಾದಿ ಹೈ, ಪೈಸೆ ನಹೀಂ ಹೈ (ಮನೆಯಲ್ಲಿ ಮದುವೆ ಇದೆ, ಆದ್ರೆ ಹಣವಿಲ್ಲ)” ಎಂದು ಅಣಕಿಸಿ ನಗುತ್ತಾರೆ. ಲೀಡರ್ ಪ್ರಜಾಪ್ರಭುತ್ವವನ್ನು ನಿರ್ದಯವಾಗಿ ಕತ್ತು ಹಿಸುಕಲು ಹೋಗುತ್ತಾನೆ. ತನ್ನ ಹುಚ್ಚುತನವನ್ನು ವಿರೋಧಿಸುವ ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಅರ್ಥಶಾಸ್ತ್ರಜ್ಞ ಮತ್ತು ಪ್ರತಿಯೊಬ್ಬ ಟೀಕಾಕಾರನನ್ನೂ “ಭ್ರಷ್ಟ” ಎಂದು ಖಂಡಿಸುತ್ತಾನೆ. ತುರ್ತು ಪರಿಸ್ಥಿತಿಯನ್ನು ಜಾರಿಗೆ ತರುವ ಪಕ್ಷದ ಆ ದುಷ್ಟ ಪ್ರಧಾನಿ ನಿಜಕ್ಕೂ ಹಾಗೆ ಮಾಡುತ್ತಾನೆ.

ಹಾಗಲ್ಲದೇ ಇಲ್ಲದಿದ್ದರೆ, ಆ ಪ್ರಧಾನಿಯು ಇಂದಿರಾ ಗಾಂಧಿಯವರು ಮಾಡಿದಂತೆ ತುರ್ತು ಪರಿಸ್ಥಿತಿಯನ್ನು ಹೇರಿ, ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಅದನ್ನು ತೆಗೆದುಹಾಕುವ ಮೂರ್ಖ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ, ತುರ್ತು ಪರಿಸ್ಥಿತಿಯಂತೆ ಅರಾಜಕ ಪರಿಸ್ಥಿತಿಗಳ ಕುಂಟ ನೆಪ ಹಾಕುವ ಅಗತ್ಯವಿಲ್ಲ. ಭಾರತವನ್ನು ಅಸ್ಥಿರಗೊಳಿಸಲು ಅಂತರರಾಷ್ಟ್ರೀಯ ಪಿತೂರಿಯ ಅನುಮಾನಗಳನ್ನು ಹರಡುವ ಅಗತ್ಯವಿಲ್ಲ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ‘ಭಾರತವನ್ನು ಮತ್ತೊಮ್ಮೆ ಶ್ರೇಷ್ಠ ಮಾಡುತ್ತೇವೆ’ ಎಂಬ ಬೊಗಳೆ ಪ್ರಚಾರ ಮಾಡುತ್ತಾರೆ.

1975 ರಂತಲ್ಲದೆ, ಮಾಧ್ಯಮಗಳ ಮೇಲೆ ಯಾವುದೇ ತಾತ್ಕಾಲಿಕ ನಿರ್ಬಂಧಗಳಿರುವುದಿಲ್ಲ. ಪ್ರಧಾನಿಯವರು ಮಾಧ್ಯಮ ಸಂಸ್ಥೆಗಳನ್ನು ವಶಪಡಿಸಿಕೊಂಡು ಪತ್ರಿಕಾ ಸ್ವಾತಂತ್ರವನ್ನು ದುರ್ಬಲಗೊಳಿಸಬಹುದು, ಇದರಿಂದಾಗಿ ದೂರದರ್ಶನ ಚಾನೆಲ್‌ಗಳು ಸರ್ಕಾರಕ್ಕೆ ಗುರಾಣಿಯಂತೆ ಮತ್ತು ವಿರೋಧಿಗಳನ್ನು ಬೇಟೆಯಾಡುವ ಬೇಟೆ ನಾಯಿಗಳಂತೆ ನೋಡಿಕೊಳ್ಳಬಹುದು. ಸ್ವತಂತ್ರ ಪತ್ರಕರ್ತರನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಗುತ್ತದೆ, ಪ್ರಶ್ನಿಸುವ ಸುದ್ದಿ ಪೋರ್ಟಲ್‌ಗಳ ಮೇಲೆ ದಾಳಿ ಮಾಡಲಾಗುತ್ತದೆ ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳನ್ನು ಕ್ರೋನಿ ಬಂಡವಾಳಶಾಹಿಗಳು ಖರೀದಿಸುತ್ತಾರೆ. ಪ್ರಧಾನಿಯರು ನ್ಯಾಯಾಂಗವು ಚೆಂಡಾಟ ಆಡುವಂತೆ ನೋಡಿಕೊಳ್ಳುತ್ತಾರೆ; ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅವರ ಸ್ನೇಹಿತರು ಮತ್ತು ಅನುಯಾಯಿಗಳಂತೆ ವರ್ತಿಸುತ್ತಾರೆ. ಹೈಕೋರ್ಟ್‌ಗಳು ಸಾಂವಿಧಾನಿಕ ತತ್ವಗಳ ವಿರುದ್ಧ ಸಂಭ್ರಮದಿಂದ ಹಾಡುತ್ತವೆ.

ಕಾಂಗ್ರೆಸ್ ನ ಹೊಸ ಪ್ರಧಾನಿ ಇಲ್ಲಿಗೇ ನಿಲ್ಲುವುದಿಲ್ಲ. ಭಾರತದ ಚುನಾವಣಾ ಆಯೋಗದ ಪ್ರಮುಖ ಸಂಸ್ಥೆಯನ್ನು ನಿಯಂತ್ರಿಸುವುದು ರಾಜಕೀಯದಲ್ಲಿ ಅವರಿಗೆ ಅನಿವಾರ್ಯ. ಅವರು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ತಮಗೆ ವಿಧೇಯರಾಗಿರುವ ಅಧಿಕಾರಿಗಳನ್ನು ನೇಮಿಸುತ್ತಾರೆ, ನೇಮಕಾತಿ ಪ್ರಕ್ರಿಯೆಯನ್ನು ತರ್ಕಬದ್ಧಗೊಳಿಸುವ ಸುಪ್ರೀಂ ಕೋರ್ಟ್‌ನ ಪ್ರಯತ್ನವನ್ನು ರದ್ದುಗೊಳಿಸುತ್ತಾರೆ ಮತ್ತು ಪಾರದರ್ಶಕತೆಯನ್ನು ಹತ್ತಿಕ್ಕಲು ನಿಯಮಗಳನ್ನು ತಿದ್ದುಪಡಿ ಮಾಡುತ್ತಾರೆ. ಸಾಂಪ್ರದಾಯಿಕ ಅರ್ಥದಲ್ಲಿ ಇಲ್ಲಿ ಪ್ಲೈಬಲ್ ಎಂದರೆ ವಿಧೇಯರು ಎಂದರ್ಥವಲ್ಲ. ಪ್ಲೈಬಲ್ ಎಂದರೆ ಅಪರಾಧದಲ್ಲಿ ಪಾಲುದಾರರು; ದುಷ್ಟ ಪಿತೂರಿಗಳನ್ನು ಕುರುಡಾಗಿ ಕಾರ್ಯಗತಗೊಳಿಸುವವರು. ಕನಿಷ್ಠ ತಮ್ಮನ್ನು, ತಮ್ಮ ಹತ್ತಿರದ ಸಚಿವರು ಮತ್ತು ಕೆಲವು ಪ್ರಮುಖ ಮುಖ್ಯಮಂತ್ರಿಗಳನ್ನು ಮಾದರಿ ನೀತಿ ಸಂಹಿತೆಯ ಹಿಡಿತದಿಂದ ಹೊರಗಿಡಲು ಅವರು ಅಧಿಕಾರಿಗಳನ್ನು ಬಳಸುತ್ತಾರೆ. ಇವಿಎಂಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಾರೆ, ಮತದಾರರ ಪಟ್ಟಿಗಳನ್ನು ಕುಶಲತೆಯಿಂದ ನಿರ್ವಹಿಸುತ್ತಾರೆ ಮತ್ತು ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಾರೆ.

ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲು ಕಾಂಗ್ರೆಸ್ ಪ್ರಧಾನಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ಕೇಂದ್ರೀಯ ತನಿಖಾ ದಳಗಳ ಕೈಯಲ್ಲಿ ವಿರೋಧ ಪಕ್ಷದ ನಾಯಕರ ವಿಳಾಸಗಳನ್ನು ಮಾತ್ರ ಇರುವಂತೆ ಮಾಡಬಹುದು. ಆದರೆ ಕಾನೂನು ಬಾಹಿರ ಜಾರಿ ನಿರ್ದೇಶನಾಲಯವು ಮಾಟಗಾರರಂತೆ ದೈತ್ಯವಾಗಿ ಬದಲಾಗುತ್ತದೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಯಾರನ್ನೂ ಬಿಡಲಾಗುವುದಿಲ್ಲ; ವಿದ್ಯಾರ್ಥಿ ನಾಯಕರನ್ನು ಭಯೋತ್ಪಾದಕರ ಪರ ಎಂದು ದೂಷಿಸಿ ಜೈಲಿಗೆ ಹಾಕಲಾಗುತ್ತದೆ, ಘೋರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ವರದಿ ಮಾಡಲು ಹೋಗುವ ವರದಿಗಾರರನ್ನು ಕಠಿಣ ಕಾನೂನುಗಳ ಅಡಿಯಲ್ಲಿ ಬಂಧಿಸಲಾಗುತ್ತದೆ , ಜಾಮೀನು ಅರ್ಜಿಗಳನ್ನು ವರ್ಷಗಳ ಕಾಲ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ, ಭ್ರಷ್ಟ ವಿರೋಧ ಪಕ್ಷದ ನಾಯಕರನ್ನು ಬಲವಂತದ ಒತ್ತಡದಲ್ಲಿ ಬಂಧಿಸಲಾಗುತ್ತದೆ ಮತ್ತು ರಾಜ್ಯ ಸರ್ಕಾರಗಳನ್ನು ಉರುಳಿಸಲಾಗುತ್ತದೆ ಮತ್ತು ಅಧಿಕಾರ ಕಸಿದುಕೊಳ್ಳಲಾಗುತ್ತದೆ.

( ಅನುವಾದಕರ ಸ್ಪಷ್ಟೀಕರಣ: ಇವೆಲ್ಲವೂ ಕಾಂಗ್ರೇಸ್‌ ಒಂದು ವೇಳೆ ಸರ್ವಾಧಿಕಾರಿಯನ್ನು ಸೃಷ್ಟಿಸಿದರೆ ಮಾಡಬಹುದು ಎಂಬ ವಿಡಂಬನಾತ್ಮಕ ಊಹೆ. ಈ ಊಹೆಯೇ ಸದ್ಯ ಬಿಜೆಪಿ ಸರ್ಕಾರದ ಅಡಿಯಲ್ಲಿ ನೈಜವಾಗಿ ನಡೆಯುತ್ತಿದೆ)

50 ವರ್ಷಗಳ ಹಿಂದೆ ಹೇರಿದ್ದ ತುರ್ತು ಪರಿಸ್ಥಿತಿಗಿಂತ ಈ ಹೊಸ ರೂಪವು ಹೆಚ್ಚು ಭಯಾನಕ ಮತ್ತು ನೋವಿನಿಂದ ಕೂಡಿದೆ. 1975 ರ ಕಾನೂನು ತುರ್ತು ಪರಿಸ್ಥಿತಿಯು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಸರ್ಕಾರಿ ಉಪಕರಣವನ್ನು ಬಳಸಿತು.ಆದರೆ ಹೊಸ ಪ್ರಧಾನಿಯ ತುರ್ತು ಪರಿಸ್ಥಿತಿಯು ಸರ್ಕಾರೇತರ ವ್ಯಕ್ತಿಗಳಿಗೆ ಕಾನೂನಿನ ನಿಯಮವನ್ನು ದುರ್ಬಲಗೊಳಿಸಲು ಅಧಿಕಾರ ನೀಡಬಹುದು. ಉದ್ರಿಕ್ತ ಗುಂಪುಗಳು ಬೀದಿಗಳಲ್ಲಿ ಜನರನ್ನು ಹಿಂಸಿಸಿ ಹತ್ಯೆ ಮಾಡಬಹುದು, ಕೋಮುವಾದಿ ಗುಂಪುಗಳು  ನರಮೇಧದ ಕರೆಗಳನ್ನು ನೀಡಬಹುದು ಮತ್ತು ಆಡಳಿತ ಪಕ್ಷದ ಸದಸ್ಯರ ಕಾನೂನುಬಾಹಿರ ದೂರುಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬಹುದು. ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿಯನ್ನು ಶ್ಲಾಘಿಸಲು ನಿರಾಕರಿಸುವವರ ಮೇಲೆ ಸಂಘಟಿತ ಟ್ರೋಲ್‌ ದಾಳಿ ನಡೆಸಬಹುದು, ಅವರ ಬಗ್ಗೆ ಅಪಪ್ರಚಾರ ಮಾಡಬಹುದು. ಸುಳ್ಳು ಪ್ರಚಾರ ಮತ್ತು ಸುಳ್ಳು ಭರವಸೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಬಲ್ಯ ಸಾಧಿಸುತ್ತವೆ ಮತ್ತು ವಿರೋಧ ಪಕ್ಷದ ಧ್ವನಿಗಳು ಸಾರ್ವಜನಿಕ ಚರ್ಚೆಯಿಂದ ಮರೆಮಾಚಲ್ಪಡಬಹುದು.

ಸಾಮಾನ್ಯ ನಾಗರಿಕರು ಮಾತ್ರವಲ್ಲದೆ, ಸಂಸತ್ ಸದಸ್ಯರೂ ಸಹ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುವುದಿಲ್ಲ.

ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸುವುದನ್ನು ಮರೆತುಬಿಡಬಹುದು, ಗಾಜಾದಲ್ಲಿನ ನರಮೇಧದಂತಹ ದೂರದೇಶದ ವಿಚಾರಗಳ ಕುರಿತು ಶಾಂತಿಯುತ ಮೆರವಣಿಗೆ ಮಾಡಲು ಸಹ ಅನುಮತಿಸಲಾಗುವುದಿಲ್ಲ. ವಿಶ್ವವಿದ್ಯಾಲಯಗಳು ಅಸಮರ್ಥ ಸೈದ್ಧಾಂತಿಕ ಧರ್ಮಾಂಧರಿಂದ ತುಂಬಿರುತ್ತವೆ. ಮಾಹಿತಿ ಹಕ್ಕು ಮುಂತಾದ ಜನಪರ ಸಾಧನಗಳು ದುರ್ಬಲಗೊಳ್ಳಬಹುದು. ಇಷ್ಟು ಸಾಕಾಗುವುದಿಲ್ಲವೇ? ಈ ಪಕ್ಷದ ಭ್ರಷ್ಟ ನಾಯಕರು ರಾಷ್ಟ್ರೀಯ ಆಸ್ತಿಗಳನ್ನು ಒಬ್ಬ ಆಪ್ತ ಬಂಡವಾಳಶಾಹಿಗೆ ಹಸ್ತಾಂತರಿಸುತ್ತಾರೆ; ಕಾನೂನುಗಳನ್ನು ಉಲ್ಲಂಘಿಸಲು ಮತ್ತು ಪ್ರಪಂಚದಾದ್ಯಂತ ಒಪ್ಪಂದಗಳನ್ನು ಪಡೆದುಕೊಳ್ಳಲು ಸರ್ಕಾರಿ ಪ್ರಭಾವವನ್ನು ಬಳಸಲು ಅವನಿಗೆ ಅವಕಾಶ ಮಾಡಿಕೊಡುತ್ತಾರೆ. ಭ್ರಷ್ಟ ಒಪ್ಪಂದಗಳ ತನಿಖೆಯನ್ನು ತಡೆಯಲು ಅವರು ಯಾವುದೇ ಹಂತಕ್ಕೆ ಕೂಡ ಹೋಗಬಹುದು ; ಮುಚ್ಚಿದ ಲಕೋಟೆಗಳಲ್ಲಿ ರಹಸ್ಯ ಪತ್ರಗಳ ಮೂಲಕ ನ್ಯಾಯಾಂಗವನ್ನು ದಾರಿ ತಪ್ಪಿಸುವವರೆಗೆ.

(ಸದ್ಯ ಬಿಜೆಪಿ ಮಾಡುತ್ತಿರುವ ಈ ರೀತಿಯ ಸರ್ವಾಧಿಕಾರವನ್ನು) ಕಾಂಗ್ರೆಸ್ ಮಾಡಿದರೆ ಆ ಬಗ್ಗೆ ಎಚ್ಚರದಿಂದಿರಿ! ಇದು non-state actors ನಾಗರಿಕರ ಮೇಲೆ ನಿಗಾ ಇಡಲು ಮತ್ತು ಸಾರ್ವಜನಿಕ ಜೀವನವನ್ನು ಕಲುಷಿತಗೊಳಿಸಲು ಅವಕಾಶ ನೀಡುವುದಲ್ಲದೆ, non-state actors ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸಂವಿಧಾನದಲ್ಲಿ ವಿರೂಪಗಳನ್ನು ಸೂಚಿಸಲು ಪ್ರೋತ್ಸಾಹಿಸಬಹುದು. ಸಾಂವಿಧಾನಿಕ ಸಂಸ್ಕೃತಿಯ ಅವಶೇಷಗಳ ಮೇಲೆ ನೃತ್ಯ ಮಾಡಲು ಡೋಂಗಿ ಬಾಬಾಗಳು ಹುಟ್ಟಿಕೊಳ್ಳುತ್ತಾರೆ. ಗೂಂಡಾಗಳು ಕಾನೂನಿನ ಪಾಲನೆ ಮಾಡುವ ಅಧಿಕಾರಿಗಳಿಗೆ ಆದೇಶ ನೀಡಬಹುದು, ಸಾರ್ವಜನಿಕ ನಡವಳಿಕೆಯನ್ನು ನಿಯಂತ್ರಿಸುತ್ತಾರೆ; ನಾಗರಿಕರಿಗೆ ಏನು ಹೇಳಬೇಕು, ಏನು ತಿನ್ನಬೇಕು, ಏನು ಧರಿಸಬೇಕು, ಯಾರನ್ನು ಪ್ರೀತಿಸಬೇಕು ಮತ್ತು ಮದುವೆಯಾಗಬೇಕು ಎಂದು ಹೇಳಬಹುದು. ಐತಿಹಾಸಿಕ ಸಂಗತಿಗಳನ್ನು ಅಳಿಸಿಹಾಕಲಾಗುತ್ತದೆ ಮತ್ತು ಹೊಸ ಇತಿಹಾಸವನ್ನು ಬರೆಯಲಾಗುತ್ತದೆ. ಸಮಾಜದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ, ಸೃಜನಶೀಲ ಸ್ವಾತಂತ್ರ್ಯಗಳನ್ನು ನಿಗ್ರಹಿಸಲಾಗುತ್ತದೆ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಬೇಷರತ್ತಾದ ನಿಷ್ಠೆಯನ್ನು ಡಿಮ್ಯಾಂಡ್‌ ಮಾಡಬಹುದು. ಸಂಸತ್ತನ್ನು ಸಹ ಸಣ್ಣ ಸರ್ಕಾರಿ ಇಲಾಖೆಗಳಂತೆ ನಿಯಂತ್ರಿಸಲಾಗುತ್ತದೆ; ಬೆಲೆಗಳು ಮತ್ತು ನಿರುದ್ಯೋಗದಂತಹ ಮೂಲಭೂತ ವಿಷಯಗಳನ್ನು ಚರ್ಚಿಸಲು, ಬಾಹ್ಯ ಆಕ್ರಮಣಗಳು ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯ ಬಗ್ಗೆ ಏನು ಮಾತನಾಡಬೇಕು ಎಂಬುದನ್ನು ಚರ್ಚಿಸಲು ವಿರೋಧ ಪಕ್ಷಗಳು ಹೆಣಗಾಡುತ್ತವೆ. ಕೆಲವು ನಾಯಕರು ಮತ್ತು ಅವರ ಕಾರ್ಪೊರೇಟ್ ಸ್ನೇಹಿತರ ಬಗ್ಗೆ ಯಾವುದೇ ಪ್ರತಿಕೂಲ ಹೇಳಿಕೆಗಳು ಬಂದರೂ ಅದನ್ನು ವಿಧೇಯ ರಾಷ್ಟ್ರಪತಿ ತೆಗೆದುಹಾಕುತ್ತಾರೆ.

ಇಲ್ಲ, ಈ ಪರಿಸ್ಥಿತಿ ಇಷ್ಟು ಭಯಾನಕವಾಗಿದೆ. ನಾವು ಮತ್ತೆ ಇಂದಿರಾ ಗಾಂಧಿಯಂತೆ ತುರ್ತು ಪರಿಸ್ಥಿತಿ ಹೇರಲು ಅಗತ್ಯವಿಲ್ಲ. ನಾವು ಇಂದು ಹೆಚ್ಚು ಸಂತೋಷವಾಗಿದ್ದೇವೆ. ಮತ್ತೊಂದು ತುರ್ತು ಪರಿಸ್ಥಿತಿಯ ದುಃಸ್ವಪ್ನಕ್ಕಾಗಿ ನಾವು ಈ ಅಮೃತ ಕಾಲವನ್ನು ಏಕೆ ಬಲಿಕೊಡಬೇಕು? ಮೋದಿ ಭಜನೆಯನ್ನು ಗಟ್ಟಿಯಾಗಿ ಮಾಡೋಣ.

ಲೇಖನ: ಸಂಜಯ್ ಕೆ. ಝಾ, ರಾಜಕೀಯ ವಿಶ್ಲೇಷಕರು.

ತುರ್ತು ಪರಿಸ್ಥಿತಿಗೆ ಐವತ್ತು ವರ್ಷ: ‘ಸ್ವಂತ ರಿಸ್ಕ್‌ʼನಲ್ಲಿ ದೆಹಲಿಯಲ್ಲಿ ಪ್ರದರ್ಶನ ನೀಡಬಹುದು ಎಂದು ಕುನಾಲ್ ಕಮ್ರಾಗೆ ಹೇಳಿದ ದೆಹಲಿ ಮುಖ್ಯಮಂತ್ರಿ
ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳಾಗಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಅನ್ನು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಕ್ಷವೆಂದು ಬಿಂಬಿಸಲು ಪ್ರತೀ ವರ್ಷ ಇದನ್ನು ಬಳಸಿಕೊಳ್ಳುತ್ತಿದೆ.

ಬಿಜೆಪಿಯ ಅಧಿಕೃತ ಖಾತೆಯಲ್ಲಿ ʼಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರುತ್ತದೆಯೇʼ ಎಂಬ ಪ್ರಶ್ನೆಯನ್ನು ಕೇಳಿ ಟ್ವಿಟರ್ ಸಮೀಕ್ಷೆಯೊಂದನ್ನು ನಡೆಸಿದ್ದು, ಇದು ಬೂಮರಾಂಗ್ ಆದ ನಂತರ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಮೂರನೇ ಎರಡರಷ್ಟು ಜನರು ಬಿಜೆಪಿಯ ಈ ಪ್ರಶ್ನೆಗೆ ನಕಾರಾತ್ಮಕ ಉತ್ತರ ನೀಡಿ ವಿರೋಧಿಸಿದ್ದಾರೆ. ಹೀಗಾಗಿ, ದೆಹಲಿಯ ಮುಖ್ಯಮಂತ್ರಿ, ಬಿಜೆಪಿ ನಾಯಕಿ ರೇಖಾ ಗುಪ್ತಾ ಅವರ ಹೇಳಿಕೆಗಳು ಪಕ್ಷಕ್ಕೆ ಮುಜುಗರವನ್ನುಂಟುಮಾಡಿವೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಹಿಂದಿ ದಿನಪತ್ರಿಕೆ ಜನಸತ್ತ ಆಯೋಜಿಸಿದ್ದ ಮಾಧ್ಯಮ ಕಾರ್ಯಕ್ರಮದಲ್ಲಿ ಮಾತನಾಡಿದ ರೇಖಾ ಗುಪ್ತಾ, ಐಟಿ ನಿಯಮಗಳ ವಿರುದ್ಧದ ವಿಷಯದಲ್ಲಿ ಅರ್ಜಿದಾರ ಮತ್ತು ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ದೆಹಲಿಗೆ ಬಂದು ಪ್ರದರ್ಶನ ನೀಡಬಹುದು, ಆದರೆ “ತನ್ನ ಸ್ವಂತ ರಿಸ್ಕ್‌ನಲ್ಲಿ” ಬರಬಹುದು ಎಂದು ಹೇಳಿದರು. ಆಗ ಮಾಧ್ಯಮ ಸಂಸ್ಥೆಯ ಪ್ರತಿನಿಧಿಯೊಬ್ಬರು ಮುಖ್ಯಮಂತ್ರಿಯೊಬ್ಬರು ‘ತನ್ನ ಸ್ವಂತ ರಿಸ್ಕ್‌ನಲ್ಲಿ ಬರಬಹುದು’ ಎಂದು  ಹೇಗೆ ಹೇಳಬಹುದು ಎಂದು ಕೇಳಿದಾಗ ರೇಖಾ ಗುಪ್ತಾ ಉತ್ತರಿಸಲು ನಿರಾಕರಿಸಿದರು.

ಆಡಳಿತಾರೂಢ ಶಿವಸೇನೆ (ಏಕನಾಥ್ ಶಿಂಧೆ) ಜೊತೆ ಸಂಪರ್ಕ ಹೊಂದಿರುವ ದುಷ್ಕರ್ಮಿಗಳು ಮುಂಬೈನಲ್ಲಿ ಕುನಾಲ್‌ ಕಾಮ್ರಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿ, ಯೂಟ್ಯೂಬ್‌ನಲ್ಲಿ ರಾಜಕೀಯ ವಿಡಂಬನೆಯನ್ನು ಪೋಸ್ಟ್ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ನಂತರ, ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ತೀವ್ರ ವಿವಾದಕ್ಕೆ ಗುರಿಯಾಗಿದ್ದರು.

ಕಾಮ್ರಾ ಮತ್ತು ಸದ್ಯ ಬಂದ್‌ ಮಾಡಲಾಗಿರುವ ಹಾಸ್ಯ ಕಾರ್ಯಕ್ರಮದ ಸ್ಥಳದ ಮೇಲಿನ ದಾಳಿಗಳು, ಮುಕ್ತ ಅಭಿವ್ಯಕ್ತಿ ಅಥವಾ ವಿಡಂಬನೆಗೆ ಸುರಕ್ಷಿತ ವೇದಿಕೆಯನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಆಗಿರುವ ಅಸಮರ್ಥತೆಗಯನ್ನು ಈಗಾಗಲೇ ಬೆಳಕಿಗೆ ತಂದಿವೆ. ಹಿಂದಿ ಚಲನಚಿತ್ರೋದ್ಯಮವನ್ನು ಹೊಂದಿರುವ ಮತ್ತು ಮೊದಲಿನಂತೆ ಪ್ರತಿಭಟನಾ-ಸಾಹಿತ್ಯ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಮತ್ತು ನಗರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂಬ ವಿಚಾರವನ್ನು ಮುಖ್ಯಮಂತ್ರಿ ಮತ್ತು ಬಿಜೆಪಿ ಹಾಗೂ ಶಿವಸೇನೆಯ ಉನ್ನತ ನಾಯಕರು ಮುಚ್ಚಿಹಾಕಲು ಸಾಧ್ಯವಿಲ್ಲ.

ಈ ಮಧ್ಯೆ, ಗುಪ್ತಾ ಅವರ ಮಾತಿಗೆ ಪ್ರತಿಕ್ರಿಯಿಸಿದ ಕಾಮ್ರಾ , “ಒಬ್ಬ ಘನವೆತ್ತ ಮುಖ್ಯಮಂತ್ರಿಯಾಗಿ ಮಾತನಾಡಬೇಕಾದವರು ಶುದ್ಧ ಎಬಿವಿಪಿ ಕಾರ್ಯಕರ್ತರಂತೆ ಮಾತನಾಡಿದರು” ಎಂದು ಹೇಳಿದರು.

ಗುಪ್ತಾ ಅವರ ಹೇಳಿಕೆಗಳು “ದೆಹಲಿ ಪ್ರವಾಸೋದ್ಯಮದ ಜಾಹೀರಾತಿಗೆ ಒಂದು ಟ್ಯಾಗ್‌ಲೈನ್” ಆಗಿರಬಹುದು ಎಂದು ಅವರು ಹೇಳಿದರು.

ದೆಹಲಿ ಸರ್ಕಾರ ಬಿಜೆಪಿಯ ಕೈಯಲ್ಲಿದ್ದು,  ರಾಜಧಾನಿಯಲ್ಲಿ ‘ತ್ರಿಪಲ್ ಎಂಜಿನ್’ ಸರ್ಕಾರವಿದೆ ಎಂದು ಹೆಮ್ಮೆಪಡುತ್ತಿರುವಾಗ, ರಾಜಕೀಯ ವಿಡಂಬನೆ ಮತ್ತು ಹಾಸ್ಯದ ಅಭಿವ್ಯಕ್ತಿಗೆ ಸುರಕ್ಷಿತ ಸ್ಥಳವನ್ನು ನೀಡಲು ದೆಹಲಿ ಮುಖ್ಯಮಂತ್ರಿಗಿರುವ ಅಸಮರ್ಥತೆಯು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾರ್ಚ್‌ನಲ್ಲಿ, ಕಮ್ರಾ ತಮ್ಮ ಹೊಸ ಕಾರ್ಯಕ್ರಮ ‘ನಯ ಭಾರತ್’ ನ ವೀಡಿಯೊವನ್ನು ಬಿಡುಗಡೆ ಮಾಡಿದರು. ದೇಶದ ಪರಿಸ್ಥಿತಿ ಮತ್ತು ಸರ್ಕಾರದ ಬಗ್ಗೆ ತೀಕ್ಷ್ಣವಾದ ನಿಲುವಿಗೆ ಹೆಸರುವಾಸಿಯಾದ ಕಮ್ರಾ ಅವರು ಆ ಕಾರ್ಯಕ್ರಮದಲ್ಲಿ ಹಲವಾರು ವಿಡಂಬನಾತ್ಮಕ ಹಾಡುಗಳನ್ನು ಹಾಡಿದರು.

ಮುಂಬೈನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾದ ಕಾಮಿಡಿ ಕ್ಲಬ್ ಅನ್ನು ಶಿವಸೇನಾ ಸದಸ್ಯರು ಧ್ವಂಸಗೊಳಿಸಿದರು, ಕಾಮ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಾ, ಕಾಮ್ರಾ “ತನ್ಶಾ‌” ಅಥವಾ ಸರ್ವಾಧಿಕಾರಿ ಎಂಬ ಹಾಡನ್ನು ಹಾಡಿದರು. ಇನ್ನೊಂದರಲ್ಲಿ, ದಿಲ್ ತೋ ಪಾಗಲ್ ಹೈ ಹಾಡಿನಲ್ಲಿ, ಅವರು ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿಸಿ ವಿಡಂಬನೆ ಮಾಡಿದರು.

ಘೋಷಿತ ಮತ್ತು ಅಘೋಷಿತ ತುರ್ತು ಪರಿಸ್ಥಿತಿ
ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಈ ಸಂದರ್ಭದಲ್ಲಿ, ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗುತ್ತಿದೆಯೇ ಎಂಬುದು ನಮ್ಮ ಪ್ರಶ್ನೆಯಲ್ಲ - ಬದಲಾಗಿ ಪ್ರಜಾಪ್ರಭುತ್ವ ಒಳಗಿನಿಂದಲೇ ನಿಧಾನವಾಗಿ ಕೊಳೆತು ನಾಶವಾಗುತ್ತಿದೆಯೇ ಎಂಬುದು - ಎಂ ಡಿ ಜೀಶನ್ ಅಹ್ಮದ್ , ದೆಹಲಿ ಮೂಲದ ವಕೀಲರು

ಇವತ್ತು, ಜೂನ್ 25, 2025, ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಗೆ 50 ವರ್ಷಗಳಾಗಿವೆ – ಭಾರತ ಗಣರಾಜ್ಯದ ಇತಿಹಾಸದಲ್ಲಿ ಪ್ರಜಾಪ್ರಭುತ್ವವನ್ನೇ ಅಲುಗಾಡಿಸಿದ ಕಾಲಘಟ್ಟ ಅದು. 1975 ರಿಂದ 1977 ರವರೆಗೆ ಜಾರಿಯಲ್ಲಿದ್ದ ಘೋಷಿತ ತುರ್ತು ಪರಿಸ್ಥಿತಿಯು ಕೇವಲ ಪ್ರಜಾಪ್ರಭುತ್ವದ ಮಾನದಂಡಗಳಿಗೆ ಮಾತ್ರ ತೊಡಕಾಗಲಿಲ್ಲ, ಸಾಂವಿಧಾನಿಕತೆಯನ್ನು ಮಾತ್ರ ದುರ್ಬಲಗೊಳಿಸಲಿಲ್ಲ; ಅದು ಸಂವಿಧಾನವನ್ನು ಕಾನೂನುಬದ್ಧಗೊಳಿಸುವ ಪ್ರಕ್ರಿಯೆಯ ಆಳದಲ್ಲಿ ಹುದುಗಿದ್ದ ಕ್ರೂರ ಸರ್ವಾಧಿಕಾರಿ ಮನೋಭಾವವನ್ನು ಸ್ಪಷ್ಟವಾಗಿ ಬಹಿರಂಗಪಡಿಸಿತು. ಇಂದಿರಾ ಗಾಂಧಿಯವರ ಚುನಾವಣಾ ಅಕ್ರಮದ ಆರೋಪದ ಮೇಲೆ ಅಲಹಾಬಾದ್ ಹೈಕೋರ್ಟ್ 1971 ರ ಚುನಾವಣೆಯನ್ನು ಅಮಾನ್ಯಗೊಳಿಸಿದ್ದು ಅವರ ಈ ನಡೆಗೆ ತಕ್ಷಣದ ಪ್ರಚೋದನೆಯಾಗಿದ್ದರೂ, ವಿಶಾಲ ರಾಜಕೀಯ ಸಂದರ್ಭದಲ್ಲಿ – 1960 ರ ದಶಕದ ಅಂತ್ಯ ಮತ್ತು 1970 ರ ದಶಕದ ಆರಂಭದಲ್ಲಿ ಹೆಚ್ಚುತ್ತಿದ್ದ ಆರ್ಥಿಕ ಸಂಕಷ್ಟ ಮತ್ತು ಬೆಳೆಯುತ್ತಿದ್ದ ಸಾಮಾಜಿಕ ಅಶಾಂತಿ – ಅಂತಹ ಒಂದು ಪರಿಸ್ಥಿತಿಯನ್ನು ತಂದಿತ್ತು.

ಹೆಚ್ಚುತ್ತಿರುವ ಪ್ರತಿಭಟನೆಗಳು ಮತ್ತು ಜಾಗತಿಕ ಮಟ್ಟದ ಖಂಡನೆಯ ನಡುವೆಯೂ, ಇಂದಿರಾ ಗಾಂಧಿಯವರು ಅಂತಿಮವಾಗಿ 1977 ರಲ್ಲಿ ಚುನಾವಣೆಗಳಿಗೆ ಕರೆ ನೀಡಿದರು. ನಿರ್ಣಾಯಕವಾಗಿ ಸೋತರು, ಮತ್ತು ಭಾರತವು ಔಪಚಾರಿಕವಾಗಿ ಮತ್ತೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಳಿತು. ಆದರೂ, ಇಂದಿರಾರ ಆ ನಡೆಯಿಂದ ರಾಷ್ಟ್ರದ ರಾಜಕೀಯ ಸಂರಚನೆಯು ಎಂದೆಂದಿಗೂ ಬದಲಾಯಿಸಲಾಗದಂತೆ ಬದಲಾಯಿತು.

ಇದೆಲ್ಲಾ ಆಗಿ ಅರ್ಧ ಶತಮಾನ ಕಳೆದಿದೆ, ಭಾರತವು ವಿಭಿನ್ನ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ – ಚಿಂತಕರು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ವಿದ್ವಾಂಸರು ಮತ್ತು  ಸಾಮಾಜಿಕ ವಿಮರ್ಶಕರು ಈಗಿನ ಕಾಲಘಟ್ಟವನ್ನು “ಅಘೋಷಿತ ತುರ್ತುಸ್ಥಿತಿ” ಎಂದು ಕರೆಯುತ್ತಿದ್ದಾರೆ. 1975 ಕ್ಕಿಂತ ಇದು ಭಿನ್ನ, ಇಂದಿರಾ ಕಾಲದಂತೆ ಈಗ ನಾಗರಿಕರ ಹಕ್ಕುಗಳನ್ನು ಔಪಚಾರಿಕ ಅಮಾನತುಗೊಳಿಸುತ್ತಿಲ್ಲ, ಬದಲಿಗೆ ಚುನಾವಣಾ ನ್ಯಾಯಸಮ್ಮತತೆಯ ಸೋಗಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ನಿಧಾನವಾಗಿ, ವ್ಯವಸ್ಥಿತವಾಗಿ ಮಣ್ಣು ಮಾಡಲಾಗುತ್ತಿದೆ.

ಸಮಕಾಲೀನ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಹಿನ್ನಡೆ!

ವಿ-ಡೆಮ್ (V- Dem) ಮತ್ತು ಫ್ರೀಡಂ ಹೌಸ್‌ನ 2025 ರ ವರದಿಗಳ ಪ್ರಕಾರ, ಭಾರತವನ್ನು ಸದ್ಯ ಕ್ರಮವಾಗಿ “ಚುನಾವಣಾ ನಿರಂಕುಶಾಧಿಕಾರ – electoral autocracy” ಮತ್ತು “ಅರ್ಧ ಸ್ವತಂತ್ರದ – partly free” ದೇಶ ಎಂದು ವರ್ಗೀಕರಿಸಲಾಗಿದೆ. ಈ ಗಂಭೀರವಾದ ಪದಗಳು 2014 ರಿಂದ ಆಡಳಿತದಲ್ಲಿ ಇರುವ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಳವಣಿಗೆಯೊಂದಿಗೆ ಹೊಂದಿಕೆಯಾಗುವ ಪ್ರಜಾಪ್ರಭುತ್ವದ ವ್ಯವಸ್ಥಿತ ಹಿನ್ನಡೆಯನ್ನು ತೋರಿಸುತ್ತವೆ.

ಇದಕ್ಕಿರುವ ಪ್ರಮುಖ ಕಾರಣಗಳಲ್ಲಿ ಕೆಲವೆಂದರೆ: ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಸಾಂಸ್ಥಿಕ ಧ್ವಂಸ, ಕಾನೂನನ್ನು ಬಳಸಿಕೊಂಡು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಮತ್ತು ಹಿಂದುತ್ವ ಪ್ರಣೀತ ರಾಷ್ಟ್ರೀಯತೆಯ ಸಿದ್ಧಾಂತದ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಳ್ಳುವುದು. ಈ ಬೆಳವಣಿಗೆಗಳು ಭಾರತವು ದೊಡ್ಡ ಮಟ್ಟದ ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ತೋರಿಸುತ್ತವೆ. ಇವು 1975 ರಲ್ಲಿ ಇದ್ದ ಪರಿಸ್ಥಿತಿಗಿಂತ ಕಡಿಮೆ ಎಂಬಂತೆ ಕಂಡು ಬಂದರೂ, ಈಗಿನದ್ದು ತುಂಬಾ ಅಪಾಯಕಾರಿ ಬೆಳವಣಿಗೆಗಳಾಗಿವೆ.

ಅತ್ಯಂತ ಕಳವಳಕಾರಿ ಅಂಶವೆಂದರೆ, ರಾಜಕೀಯದ ತುಂಬಾ ಕೋಮುವಾದವನ್ನು ತುಂಬುವುದು, ಇದರ ಫಲವನ್ನು ನಾವು ಹೆಚ್ಚಾಗಿ ಮುಸಲ್ಮಾನರನ್ನು ಗುರಿಯಿಟ್ಟುಕೊಂಡು ನಡೆಯುವ ಜನಾಂಗೀಯ ಹತ್ಯೆಯಲ್ಲಿ ನೋಡಬಹುದು. ಜಿನೊಸೈಡ್ ವಾಚ್‌ನ ಸಂಸ್ಥಾಪಕ ಗ್ರೆಗೊರಿ ಸ್ಟಾಂಟನ್, “ಭಾರತದಲ್ಲಿ ನರಮೇಧದ ಆರಂಭಿಕ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ” ಎಂದು ಎಚ್ಚರಿಸಿದ್ದಾರೆ .

1975 ಮತ್ತು 2014 ರ ನಂತರದ ಅವಧಿಯ ತುಲನೆ

ಇಂದಿರಾ ಗಾಂಧಿಯವರು ತಮ್ಮ ರಾಜಕೀಯ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಸಾಂವಿಧಾನಿಕ ಕಾರ್ಯವಿಧಾನಗಳ ಮೂಲಕ ನಾಗರಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸಿದರು, ಮಾಧ್ಯಮಗಳಿಗೆ ಸೆನ್ಸಾರ್ ಹಾಕಿದರು ಮತ್ತು ಸಾಂಸ್ಥಿಕ ಸ್ವಾತಂತ್ರ್ಯವನ್ನು ಬಲಿಕೊಟ್ಟರು. ಇತಿಹಾಸಕಾರ ಜ್ಞಾನ್ ಪ್ರಕಾಶ್ ಇದನ್ನು “ಕಾನೂನುಬದ್ಧ ಕಾನೂನು ಅಮಾನತು – lawful suspension of law” ಎಂದು ಕರೆದರು. ಆದರೂ, ಅದೊಂದು ಬಹಿರಂಗ ಬಿಕ್ಕಟ್ಟಾಗಿತ್ತು – ಅದರೆ ಘೋಷಣೆ ಮಾಡುವಾಗ ಪಾರದರ್ಶಕತೆಯನ್ನು ಕಾಯ್ದುಕೊಂಡಿತು. 1977 ರಲ್ಲಿ, ಭಾರತೀಯ ಮತದಾರರು ಇದಕ್ಕೆ ತಕ್ಕುದಾದ ಉತ್ತರವನ್ನು ನೀಡಿದರು, ಇಂದಿರಾ ಗಾಂಧಿಯವರನ್ನು ಅಧಿಕಾರದಿಂದ ಕಿತ್ತು ಹಾಕಿ, ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸಿದರು.

ಈಗಿನ ಕಾಲ ಇಂದಿರೆಯ ಕಾಲಕ್ಕಿಂತ ಭಿನ್ನವಾಗಿದೆ, ಮೋದಿ ಯುಗವು ಹೆಚ್ಚು ಹೆಚ್ಚು ಕಪಟತೆಯಿಂದ ಕೂಡಿದೆ. ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಬದಲಾಗಿ, ಕಾನೂನುಬದ್ಧವಾಗಿ ನಿರಂಕುಶವಾಗಿ ವರ್ತಿಸುವುದು ಮತ್ತು ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ ಸಾರ್ವಜನಿಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ನ್ಯಾಯಾಂಗ ಸ್ವಾತಂತ್ರ್ಯ ದುರ್ಬಲಗೊಂಡಿದೆ, ಭಿನ್ನಾಭಿಪ್ರಾಯವನ್ನು ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಮತ್ತು ಕಾನೂನುಗಳನ್ನು ಸರ್ವಾಧಿಕಾರದ ಆಯುಧಗಳೆಂಬಂತೆ ಬಳಸಲಾಗುತ್ತಿದೆ. ಇನ್ನೊಂದು ಕಡೆ ಇದಕ್ಕೆ ಸಮಾನಾಂತರವಾಗಿ ಸಾಂವಿಧಾನಿಕ ಕ್ರಮಗಳನ್ನು ಕಾನೂನುಬದ್ಧವಾಗಿ ಜಾರಿಗೆ ತಂದರೂ ನೈತಿಕವಾಗಿ ಶೂನ್ಯವಾಗಿರುತ್ತದೆ.

“ಸಾರ್ವಭೌಮ ಯಾರು ಎಂದರೆ ಕಾನೂನು ಯಾವಾಗ ಅನ್ವಯ ಆಗುತ್ತದೆ, ಯಾವಾಗ ಅಗುವುದಿಲ್ಲ ಎಂದು ನಿರ್ಧರಿಸುವವನು – sovereign is he who decides on the exception” ಎಂಬ ಕಾರ್ಲ್ ಸ್ಮಿತ್ ಹಿಂದೆಯೇ ಹೇಳಿದ್ದು ಇಂದಿಗೆ ಪ್ರಸ್ತುತವೆನಿಸುತ್ತದೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಲ್ಲಿ ಕಾನೂನನ್ನು ತನಗೆ ಬೇಕಾದಂತೆ ವೈಯಕ್ತಿಕವಾಗಿ ಅನ್ವಯಿಸಿದರೆ ಇದಕ್ಕೆ, ಮೋದಿಯವರ ಆಡಳಿತದಲ್ಲಿ ಅಂತಹ ಒಂದು ಪ್ರವೃತ್ತಿಯನ್ನು ಸಾಮಾನ್ಯಗೊಳಿಸುತ್ತಿದೆ – ಕಾನೂನನ್ನು ಯಾವಾಗಲೂ ಬೇಕಾದಾಗ ಬಳಸಬಹುದಾದಂತ ಆಯುಧವಾಗಿ ಬದಲಾಯಿಸಲಾಗುತ್ತಿದೆ. ತತ್ವಜ್ಞಾನಿ ಜಾರ್ಜಿಯೊ ಅಗಾಂಬೆನ್ ಹೇಳಿದಂತೆ, “state of exception ನಲ್ಲಿ (ತುರ್ತು ಪರಿಸ್ಥಿತಿಯಂತೆ) ಕಾನೂನು ಮತ್ತು ಅಕ್ರಮದ ನಡುವಿನ ಗೋಡೆ ಕುಸಿಯುತ್ತದೆ – state of exception collapses the boundary between legality and illegality. ಸದ್ಯದ ಭಾರತದಲ್ಲಿ, ಆ ಕುಸಿತ ಬಹುತೇಕ ಪೂರ್ಣಗೊಂಡಂತೆ ಭಾಸವಾಗುತ್ತದೆ.

ಸಾಂವಿಧಾನಿಕ ಭರವಸೆಯನ್ನು ದುರ್ಬಲಗೊಳಿಸುವುದು:

ಕಾನೂನು ವಿದ್ವಾಂಸ ಅರವಿಂದ್ ನರೈನ್ ಅವರು ಮೋದಿಯವರ ಭಾರತವು “ಸರ್ವಾಧಿಕಾರವನ್ನು ಮೀರಿದ ಒಂದು ರೀತಿಯ ಸರ್ಕಾರ – a kind of State going beyond authoritarianism” ಎಂದು ಕರೆಯುತ್ತಾರೆ. ರಾಜಕೀಯ ವಿಜ್ಞಾನಿ ಕ್ರಿಸ್ಟೋಫ್ ಜಾಫ್ರೆಲಾಟ್ ಅವರು ಬೆಳೆಯುತ್ತಿರುವ ಹಿಂದೂ ರಾಷ್ಟ್ರದ ಬಗ್ಗೆ ಎಚ್ಚರಿಸಿದ್ದಾರೆ – ಅಲ್ಲಿ ಧಾರ್ಮಿಕ ಬಹುಸಂಖ್ಯಾತತೆಯು ಸರ್ವಾಧಿಕಾರ ಆಡಳಿತದೊಂದಿಗೆ ಸಂಬಂಧ ಹೊಂದಿರುತ್ತದೆ. ಈ ದೃಷ್ಟಿಕೋನವು ಬಹುತ್ವ, ಜಾತ್ಯತೀತತೆ ಮತ್ತು ಭ್ರಾತೃತ್ವದ ಸಾಂವಿಧಾನಿಕ ಆದರ್ಶಗಳಿಗೆ ನೇರವಾಗಿ ವಿರುದ್ಧವಾಗಿರುತ್ತದೆ.

ಈ ಕುಸಿತದ ಕಡೆಗೆ ಬೊಟ್ಟು ಮಾಡುತ್ತಾ, ರಾಜಕೀಯ ವಿದ್ವಾಂಸ ಪ್ರತಾಪ್ ಭಾನು ಮೆಹ್ತಾ – ಭಾರತವು 1950 ರ ದಶಕದಲ್ಲಿ ಪ್ರಜಾಪ್ರಭುತ್ವಕ್ಕೆ ಬದಲಾಗಿದ್ದು – “ಮಾನವ ಇತಿಹಾಸದಲ್ಲಿ ಯಾವುದೇ ಪೂರ್ವನಿದರ್ಶನವಿಲ್ಲದ ಒಂದು ನಂಬಿಕೆಯನ್ನು ಸ್ವೀಕರಿಸಿದ್ದು – a leap of faith for which there was no precedent in human history” ಎಂದು ಒಮ್ಮೆ ವಿವರಿಸಿದ್ದರು. ಇದು ನಮ್ಮಲ್ಲಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ: ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತೆ ಯಾಕೆ ಕುಸಿತಯುತ್ತಿದೆ? ಅದನ್ನು ಯಾವುದು ಉಳಿಸಿಕೊಳ್ಳುತ್ತದೆ? ಮತ್ತು ಅವು ಯಾವ ಸಾಂವಿಧಾನಿಕ ಭವಿಷ್ಯವನ್ನು ಸೂಚಿಸುತ್ತವೆ?

1950 ರಿಂದ ಇಂದಿನವರೆಗೆ: ಪ್ರಜಾಪ್ರಭುತ್ವದ ಮೇಲಿನ ಪ್ರಯೋಗ

ಭಾರತದ ಪ್ರಜಾಪ್ರಭುತ್ವ ಪ್ರಯೋಗವು ಆರಂಭದಿಂದಲೂ ಆಮೂಲಾಗ್ರವಾಗಿ ಮಹತ್ವಾಕಾಂಕ್ಷೆಯಿಂದ ಕೂಡಿತ್ತು. ಸ್ವಾತಂತ್ರ್ಯದ ಸಮಯದಲ್ಲಿ, ದೇಶದ ಅಗಾಧ ವೈವಿಧ್ಯತೆ, ಸಾಮಾಜಿಕ ಶ್ರೇಣಿಗಳು ಮತ್ತು ವಸಾಹತುಶಾಹಿ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಚಿಂತಕರು ಭಾರತ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವ ಸಾಧ್ಯತೆಯನ್ನು ಅನುಮಾನಿಸಿದ್ದರು. ಆದರೂ, ಸಂವಿಧಾನವು ಸಾರ್ವತ್ರಿಕವಾಗಿ ಎಲ್ಲಾ ವಯಸ್ಕರಿಗೆ ಮತದಾನದ ಹಕ್ಕನ್ನು ನೀಡಿತು ಮತ್ತು ವಸಾಹತುಶಾಹಿ ಪ್ರಜೆಗಳಿಗೂ ಆ ಹಕ್ಕುಗಳನ್ನು ಹೊಂದಿರುವ ನಾಗರಿಕರನ್ನಾಗಿ ಮಾಡಿತು.

ಆದರೂ, ಬಿ.ಆರ್. ಅಂಬೇಡ್ಕರ್ ಎಚ್ಚರಿಸಿದಂತೆ- ಭಾರತೀಯ ಪ್ರಜಾಪ್ರಭುತ್ವವು ಪ್ರಜಾಪ್ರಭುತ್ವ ವಿರೋಧಿ ಅಡಿಪಾಯಗಳ ಮೇಲೆ ನಿರ್ಮಿಸಲ್ಪಟ್ಟಿದೆ – Indian democracy was built on undemocratic foundations. ಅದಕ್ಕಾಗಿ ಅವರು ಸಾಂವಿಧಾನಿಕ ನೈತಿಕತೆಯನ್ನು ಬೆಳೆಸಬೇಕೆಂದು ಕರೆ ನೀಡಿದರು, ಅದು ಇಂದಿಗೂ ಆಗಿಲ್ಲ. ಕಾಲಾನಂತರದಲ್ಲಿ, ಕಾಂಗ್ರೆಸ್‌ನ ಸ್ವಾತಂತ್ರ್ಯಾನಂತರದ ಪ್ರಾಬಲ್ಯವು ಪ್ರಾದೇಶಿಕ ವಿಘಟನೆಗೆ ದಾರಿ ಮಾಡಿಕೊಟ್ಟಿತು, ಪ್ರಜಾಪ್ರಭುತ್ವಕ್ಕೆ ಪ್ರತಿಕೂಲವಾದ ಸ್ವಜನ ಪಕ್ಷಪಾತ ಮತ್ತು ರಾಜಶ್ರಯಕ್ಕೆ ದಾರಿ ಮಾಡಿಕೊಟ್ಟಿತು.

1970 ರ ದಶಕದ ಆರಂಭದ ಸ್ವಜನ ಪಕ್ಷಪಾತ ತುರ್ತು ಪರಿಸ್ಥಿತಿಯಲ್ಲಿ ಪರಾಕಾಷ್ಠೆಗೆ ತಲುಪಿತು. ಇಂದು, ಇದೇ ರೀತಿಯ ಸ್ವಜನ ಪಕ್ಷಪಾತವನ್ನು – ಈಗಿನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸಮೂಹ ಸಂವಹನದಲ್ಲಿ ಉತ್ತೇಜಿಸಲಾಗುತ್ತಿದೆ – ಮೋದಿ ಆಡಳಿತವು ಇದಕ್ಕಾಗಿ ಕೆಲಸ ಮಾಡುತ್ತದೆ. ಆದರೆ ಈ ಬಾರಿ, ಅವು ವಿಶಾಲ ಮತ್ತು ಹೆಚ್ಚು ಶಾಶ್ವತ ಪರಿಣಾಮಗಳನ್ನು ಉಂಟುಮಾಡಬಲ್ಲ ಆಳವಾದ ಸೈದ್ಧಾಂತಿಕ ಯೋಜನೆಯನ್ನು ಹಾಕಿಕೊಂಡಿದೆ.

ಮೋದಿಯ ಭಾರತದಲ್ಲಿ ಸರ್ವಾಧಿಕಾರ ಕಾನೂನುಬದ್ಧ!

ಹಂಗೇರಿಯ ದೇಶಕ್ಕೆ ಸಂಬಂಧಿಸಿ ಕಿಮ್ ಲೇನ್ ಶೆಪ್ಪೆಲೆ ನೀಡಿದ ವ್ಯಾಖ್ಯಾನ “ಸರ್ವಾಧಿಕಾರದ ಕಾನೂನುಬದ್ಧತೆ”ಯ ಪರಿಕಲ್ಪನೆಯು ಇಲ್ಲಿಗೆ ಹೆಚ್ಚು ಪ್ರಸ್ತುತ ಎನಿಸುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ನಾಯಕರು ಸರ್ವಾಧಿಕಾರದ ಗುರಿಗಳನ್ನು ಕಾರ್ಯಗತಗೊಳಿಸಲು ಕಾನೂನು ಸಾಧನಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಇದು ವಿವರಿಸುತ್ತದೆ. ಇದರಲ್ಲಿ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವುದು, ನಿಯಮಗಳನ್ನು ತಿರುಚಿ ಬರೆಯುವುದು ಮತ್ತು ಕಾನೂನಿನ ಹೆಸರಿನಲ್ಲಿ ನಾಗರಿಕರನ್ನು ನಿಯಂತ್ರಿಸುವುದು.

ಮೋದಿ ನೇತೃತ್ವದ ಭಾರತವು ಶೆಪ್ಪೆಲೆ ನೀಡಿದ ವ್ಯಾಖ್ಯಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ, ಇದು ಆತಂಕಕಾರಿ!

* 370 ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದು ರಾಜಕೀಯ ಒಮ್ಮತವಿಲ್ಲದೆಯೇ ಕಾರ್ಯಗತಗೊಳಿಸಲಾಯಿತು – ಇದು ಭಾರತೀಯ ಸಾಂವಿಧಾನಿಕತೆಯ ಕೇಂದ್ರಬಿಂದುವಾಗಿರುವ ಫೆಡರಲ್ ಮಾನದಂಡಗಳನ್ನು ಉಲ್ಲಂಘಿಸಿದಂತೆ.

* ಚುನಾವಣಾ ಹಣಕಾಸು ಸುಧಾರಣೆಯ ನೆಪದಲ್ಲಿ ಪರಿಚಯಿಸಲಾದ ಚುನಾವಣಾ ಬಾಂಡ್ ಯೋಜನೆಯು ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಆಡಳಿತ ಪಕ್ಷಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಿತು – ಈಗ ಅದನ್ನು ರದ್ದುಪಡಿಸಲಾಗಿದ್ದರೂ ಸಹ, ಇದರ ವಿಚಾರಣೆ ನ್ಯಾಯಾಲಯದಲ್ಲಿ ಅರ್ಧದಲ್ಲಿ ಬಾಕಿಯಾಗಿದೆ.

* ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (2019) ಧರ್ಮವನ್ನು ಪೌರತ್ವಕ್ಕೆ ಮಾನದಂಡವಾಗಿ ಪರಿಚಯಿಸಿತು. ರಾಜಕೀಯ ತಜ್ಞ ನೀರಜ ಗೋಪಾಲ್ ಜಯಲ್ ಹೇಳಿದಂತೆ, ಈ ಕ್ರಮವು ಜನಾಂಗೀಯ-ಧಾರ್ಮಿಕ ಮಾರ್ಗಗಳಲ್ಲಿ ಭಾರತೀಯ ಪೌರತ್ವವನ್ನು ಮರು ವ್ಯಾಖ್ಯಾನಿಸುವ ಪ್ರಯತ್ನವನ್ನು ತೋರಿಸುತ್ತದೆ.

ಇವು ಕೇವಲ ಕೆಲವು ಉದಾಹರಣೆಗಳು. ಇದನ್ನು  ಸೂಕ್ಷ್ಮವಾಗಿ ನೋಡಿದರೆ ಇದರ ಹಿಂದಿರುವ ಲೆಕ್ಕಾಚಾರದ ತಂತ್ರ ಕಾಣುತ್ತದೆ: ಪ್ರಜಾಪ್ರಭುತ್ವ ವಿರೋಧಿ ಉದ್ದೇಶಗಳನ್ನು ಪೂರೈಸಲು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ದೇಶವನ್ನು ರೂಪಿಸುವುದು.

ಪ್ರಸ್ತುತ ಸಂದರ್ಭವನ್ನು ಅಪಾಯಕಾರಿಯನ್ನಾಗಿ ಮಾಡುವುದು ಸಂವಿಧಾನವನ್ನು ತಿರುಚುವುದು ಮಾತ್ರವಲ್ಲ, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಹಕ್ಕನ್ನು ನೀಡುವುದು. ನಾಗರಿಕ ಸ್ವಾತಂತ್ರ್ಯಗಳನ್ನು ನಿಯಮಿತವಾಗಿ ಉಲ್ಲಂಘಿಸಲಾಗುತ್ತಿದೆ. ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ದೇಶದ್ರೋಹದಂತಹ ಕಾನೂನುಗಳನ್ನು ಬಳಸಲಾಗುತ್ತದೆ. 2019 ರ ಯುಎಪಿಎ ತಿದ್ದುಪಡಿಯು ಸರ್ಕಾರವು ಯಾರೇ ಒಬ್ಬನನ್ನು ಯಾವುದೇ ವಿಚಾರಣೆಯಿಲ್ಲದೆ “ಭಯೋತ್ಪಾದಕ” ಎಂದು ಹೆಸರಿಸಲು ಅನುಮತಿ ನೀಡುತ್ತದೆ.

ಮೂಲತಃ ಅಸಾಧಾರಣ ಸಂದರ್ಭಗಳ ಬಳಕೆಗಾಗಿ ತರಲಾಗಿರುವ ತುರ್ತು ಕಾನೂನುಗಳನ್ನು ಹೇಗೆ ಈಗಿನ ದೈನಂದಿನ ಆಡಳಿತದ ಆಯುಧಗಳಾಗಿ ಸಾಮಾನ್ಯೀಕರಿಸಲಾಗಿದೆ ಎಂಬುದನ್ನು ಕಾನೂನು ವಿದ್ವಾಂಸ ನಾಸರ್ ಹುಸೇನ್ ತೋರಿಸಿದ್ದಾರೆ. ಮೋದಿ ಆಡಳಿತದ ಅಡಿಯಲ್ಲಿ, ದಮನವೆಂಬುದು ಈ ಕಾನೂನು ವ್ಯವಸ್ಥೆಯ ಒಳಗೆ ನಾಟಕೀಯವಾಗಿ ಹರಡಿಕೊಂಡಿದೆ – ಕಾನೂನಾತ್ನಕ ಆಳ್ವಿಕೆಯ ಅಡಿಪಾಯವನ್ನೇ ಹಾಳುಮಾಡುತ್ತಿದೆ.

ಭಾರತವು ಸರ್ವಾಧಿಕಾರದತ್ತ ಸಾಗುತ್ತಿಲ್ಲ. ಅದನ್ನು ಸಾಂಸ್ಥಿಕಗೊಳಿಸುತ್ತಿದೆ.

ತೊಡಕಿನ ದಾರಿ

1975 ರ ತುರ್ತು ಪರಿಸ್ಥಿತಿ ಮತ್ತು 2014 ರ ನಂತರದ ಕಾಲಘಟ್ಟವನ್ನು ತುಲನೆ ಮಾಡಿ ನೋಡಿದರೆ ತೊಡಕಿನ ದಾರಿಯೊಂದು ನಮಗೆ ಕಾಣಿಸುತ್ತದೆ. ಇಂದಿರಾ ಗಾಂಧಿಯವರ ಸರ್ವಾಧಿಕಾರವು ವೈಯಕ್ತಿಕವಾಗಿತ್ತು, ಎಲ್ಲರ ಕಣ್ಣಿಗೆ ಕಾಣುವಂತಿತ್ತು ಮತ್ತು ಅಂತಿಮವಾಗಿ ಜನರೇ ಅದನ್ನು ಒದ್ದು ತಿರಸ್ಕರಿಸಿದರು. ಮೋದಿಯವರ ವರ್ಷನ್‌ ಇಂದಿರೆಗಿಂತ ಭಿನ್ನ, ಇದಕ್ಕೊಂದು ಉದ್ದೇಶ ಇದೆ, ಸೈದ್ಧಾಂತಿಕವಾಗಿದೆ ಮತ್ತು – ಅತ್ಯಂತ ಅಪಾಯಕಾರಿಯಾಗಿದೆ – ಸಮಾಜವೇ ಇದನ್ನು ಸಾಮಾನ್ಯೀಕರಿಸುತ್ತದೆ.

ಈ ಬದಲಾವಣೆಯು ನಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ: ಪ್ರಜಾಪ್ರಭುತ್ವ ಮೌಲ್ಯಗಳಿಲ್ಲದೆ ಪ್ರಜಾಪ್ರಭುತ್ವದ ಸಂಸ್ಥೆಗಳು ಉಳಿಯಬಹುದೇ? ಸಂವಿಧಾನದ ಚೈತನ್ಯ ನಿರಂತರವಾಗಿ ಖಾಲಿಯಾದಾಗ ಸಂವಿಧಾನ ಉಳಿಯಬಹುದೇ?

ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಈ ಸಂದರ್ಭದಲ್ಲಿ, ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗುತ್ತಿದೆಯೇ ಎಂಬುದು ನಮ್ಮ ಪ್ರಶ್ನೆಯಲ್ಲ – ಬದಲಾಗಿ ಪ್ರಜಾಪ್ರಭುತ್ವ ಒಳಗಿನಿಂದಲೇ ನಿಧಾನವಾಗಿ ಕೊಳೆತು ನಾಶವಾಗುತ್ತಿದೆಯೇ ಎಂಬುದು.

ಬಲವಾದ ಮತ್ತು ಸ್ಥಿತಿಸ್ಥಾಪಕ ಪ್ರಜಾಪ್ರಭುತ್ವವು ಜಾಗರೂಕ ನಾಗರಿಕ ಸಮಾಜದ ಲಕ್ಷಣ. ಭಾರತದಲ್ಲಿ ಘೋಷಿತ ಮತ್ತು ಅಘೋಷಿತ ತುರ್ತು ಪರಿಸ್ಥಿತಿಗಳ ಅವಳಿ ಇತಿಹಾಸಗಳು ನಮಗೆ ಅಗತ್ಯದ ಪಾಠಗಳನ್ನು ಹೇಳುತ್ತವೆ: ಪ್ರಜಾಪ್ರಭುತ್ವವನ್ನು ಹಗುರವಾಗಿ ನೋಡುವಂತಿಲ್ಲ. ಈ ದಿನದಂದು, ನಾವು ಮತ್ತೊಮ್ಮೆ – ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದ ಹಿಡಿತದಿಂದ ರಕ್ಷಿಸಲು ಮತ್ತು ಅದನ್ನು ಅದರ ಸರಿಯಾದ ಹಾದಿಗೆ ಕೊಂಡೊಯ್ಯಲು ಸಂಕಲ್ಪ ಮಾಡಬೇಕು: ಸಾಂವಿಧಾನಿಕ ಮೌಲ್ಯಗಳಲ್ಲಿ ಬೇರೂರಿದ, ಸಾರ್ವಜನಿಕ ಹೊಣೆಗಾರಿಕೆಯಿಂದ ಬೆಳೆದಿರುವ ಮತ್ತು ಬಹುಸಂಖ್ಯಾತವಾದದಿಂದ ಪೋಷಿಸಲ್ಪಟ್ಟಿರುವ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವವನ್ನು ಉಳಿಸಬೇಕು.

ಲೇಖನ: ಎಂ ಡಿ ಜೀಶನ್ ಅಹ್ಮದ್ ,ದೆಹಲಿ ಮೂಲದ ವಕೀಲರು.

(ಇದು ದಿ ವೈರ್ ಪ್ರಕಟಿಸಿದ Democracy in Retreat: Comparing the Emergency with Modi’s India ಲೇಖನದ ಕನ್ನಡ ಭಾವಾನುವಾದ)

ಎಮರ್ಜೆನ್ಸಿ ಘನಘೋರ- ಆದರೆ ಅದನ್ನು ಬೆಂಬಲಿಸಿತ್ತೇಕೆ ಸಂಘಪರಿವಾರ?!
ಇದೇ ಜೂನ್ 25 ಕ್ಕೆ ಇಂದಿರಾಗಾಂಧಿ ದೇಶದ ಮೇಲೆ ತುರ್ತುಸ್ಥಿತಿ ಘೋಷಿಸಿ 48 ವರ್ಶಗಳಾಗುತ್ತವೆ. ಮೋದಿ ಅಧಿಕಾರಕ್ಕೆ ಬರುವ ಮುಂಚೆ ಸ್ವಾತಂತ್ರ್ಯಾನಂತರದ ಭಾರತದ ಅತ್ಯಂತ ಕರಾಳ ಘಟ್ಟವಾಗಿದ್ದದ್ದು ಇಂದಿರಾಗಾಂಧಿಯವರು ಭಾರತದ ಮೇಲೆ ಹೇರಿದ ತುರ್ತುಸ್ಥಿತಿಯ ಆ 20 ತಿಂಗಳುಗಳು.

ಆದರೆ ಅದನ್ನು ಮರೆಸುವಂತೆ ಮತ್ತು ಮೀರಿಸುವಂತೆ ಮೋದಿ ನೇತೃತ್ವದ ಕಳೆದ ಒಂಭತ್ತು ವರ್ಷಗಳ ಅಘೊಷಿತ ಮತ್ತು ಸರ್ವವ್ಯಾಪಿ ತುರ್ತುಸ್ಥಿತಿ ಇಂಡು ದೇಶದಲ್ಲಿ ಜಾರಿಯಲ್ಲಿದೆ. ಇಂದಿರಾ ಎಮರ್ಜೆನ್ಸಿ ರಾಜಕೀಯ ವಲಯಕ್ಕೆ ಸೀಮಿತವಾಗಿದ್ದರೆ ಮೋದಿ ಎಮರ್ಜೆನ್ಸಿ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಮಾತ್ರವಲ್ಲದೆ ಜನರ ದೈನಂದಿನ ಬದುಕಿನ ಎಲ್ಲಾ ಆಯಾಮಗಳನ್ನು ಅತಂತ್ರಗೊಳಿಸಿದೆ.

ಇಂದಿರಾ ಎಮರ್ಜೆನ್ಸಿ ಕೇವಲ 20 ತಿಂಗಳುಗಳು ಇದ್ದರೆ ಮೋದಿ ಸರ್ವಾಧಿಕಾರ ಹತ್ತನೇ ವರ್ಷದೆಡೆ ಧಾವಿಸುತ್ತಿದೆ. ಇಪ್ಪತ್ತು ತಿಂಗಳ ಇಂದಿರಾ ಎಮರ್ಜೆನ್ಸಿಯ ವಿರುದ್ಧ ದೇಶದ ರಾಜಕೀಯದಲ್ಲಿ ಹಾಗೂ ಸಮಾಜದಲ್ಲು ಬಹುಮತದ ಆಕ್ರೋಶ ಹುಟ್ಟಿದ್ದರೆ ಮೋದಿಯ ಫ಼್ಯಾಸಿಸಂ ಗೆ ಆ ರೀತಿಯ ಪ್ರತಿರೋಧ ಇನ್ನೂ ಕಾಣುತ್ತಿಲ್ಲ. ಬದಲಿಗೆ ಇತ್ತಿಚಿನ ಸರ್ವೆಯೊಂದು ಹೇಳುವಂತೆ ಕಳೆದ ಒಂದು ವರ್ಷದಲ್ಲಿ ರಾಹುಲ್ ಗಾಂಧಿಯ ವರ್ಚಸ್ಸು ಏರಿದ್ದರೂ ಮೋದಿಯ ಜನಪ್ರಿಯತೆ ಕುಗ್ಗಿಲ್ಲ. ಇದಕ್ಕೆ ಪ್ರಧಾನ ಕಾರಣ ಬಿಜೆಪಿ ಮತ್ತು ಸಂಘಪರಿವಾರ ಬಹಳ ವ್ಯವಸ್ಥಿತವಾಗಿ ರೂಪಿಸಿಕೊಂಡಿರುವ ಪ್ರಭಾ ವಲಯ. ಸಂಘಪರಿವಾರದ ಸಂಘಟನಾ ಬಲ. ಮತ್ತು ಜನರ ಅಭಿಪ್ರಾಯಗಳನ್ನು ತಮ್ಮ ನೆರೆಟಿವ್ ಗೆ ತಕ್ಕಂತೆ ರೂಪಿಸಲು ಹಾಕಿಕೊಳ್ಳುವ ಕಾರ್ಯಕ್ರಮಗಳು ಮತ್ತು ಅದನ್ನು ಕಿಂಚಿತ್ತೂ ವಿಮರ್ಶಿಸದೆ ಪ್ರಚಾರ ಮಾಡುವ ಮಾಧ್ಯಮಗಳ ಬೇಶರತ್ ಗುಲಾಮಗಿರಿ.

ಇದರ ಭಾಗವಾಗಿಯೇ ಪ್ರತಿವರ್ಷ ಎಮರ್ಜೆನ್ಸಿ ಘೋಷಿಸಿದ ದಿನವಾದ ಜೂನ್ 25 ರಂದು ಮೋದಿ ಸರ್ಕಾರ ಒಂದು ಸಂಪ್ರದಾಯದಂತೆ ಎಮರ್ಜೆನ್ಸಿಯ ಕರಾಳತೆಯನ್ನು ದೇಶಕೆ ನೆನಪಿಸುವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದೆ. ಈ ಸಂದರ್ಭವನ್ನು ಹೇಗೆ ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿಯೆಂದು ಮಾತ್ರವಲ್ಲದೆ ತಮ್ಮ ಪಕ್ಷ ಮಾತ್ರ ಎಮರ್ಜೆನ್ಸಿಯಲ್ಲಿ ಸರ್ವಾಧಿಕಾರಿ ವಿರೋಧಿಯಾಗಿತ್ತೆಂಬ ಸುಳ್ಳನ್ನು ವ್ಯವಸ್ಥಿತವಾಗಿ ಹಂಚಲು ಬಳಸಿಕೊಳ್ಳುತ್ತದೆ.

ಅದರಲ್ಲೂ ಕಳೆದ ಒಂಭತ್ತು ವರ್ಷಗಳಲ್ಲಿ ಭಾರತದ ಮಾಧ್ಯಮ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ , ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿರೋಧ ಸ್ವಾತಂತ್ರ್ಯ ಗಳು ಇಂದಿರಾ ಎಮರ್ಜೆನ್ಸಿ ಕಾಲಕ್ಕಿಂತಲೂ ಭೀಕರವಾಗಿ ಹರಣವಾಗುತ್ತಿರುವುದು ಜಗತ್ತಿನೆದುರು ಬೆತ್ತಲಾಗಿದೆ. ಎಲ್ಲಾ ಸ್ವಾತಂತ್ರ್ಯ ಸೂಚ್ಯಂಕಗಳಲ್ಲೂ ಭಾರತ ಜಗತ್ತಿನ ಸರ್ವಾಧಿಕಾರಿ ದೇಶಗಳಿಗಿಂತ ಕೆಳಗಿಳಿಯುತ್ತಿದೆ. ಅಥವಾ ಅದರ ಜೊತೆಗಿದೆ. ಮೋದಿ ಸರ್ಕಾರದ ಕಾಲದಲ್ಲಿ ಭಾರತವು ಒಂದು ಪ್ರಜಾತಂತ್ರವಾಗಿ ಉಳಿದಿಲ್ಲವೆಂದು, ಬದಲಿಗೆ ಭಾರತವು ಒಂದು ಚುನಾವಣಾ ಸರ್ವಾಧಿಕಾರ ವಾಗಿದೆಯೆಂದು ಜಗತ್ತಿನ ಪ್ರಜಾತಂತ್ರಗಳ ಆರೋಗ್ಯದ ಬಗ್ಗೆ ಗಂಭೀರ ಅಧ್ಯಯನ ನಡೆಸುತ್ತಿರುವ ಸ್ವೀಡನ್ನಿನ ವಿ-ಡೆಮ್ ನಂಥ ಪ್ರತಿಷ್ಠಿತ ಜಾಗತಿಕ ಸಂಸ್ಥೆಗಳು ಘೋಷಿಸುತ್ತಿವೆ.

ಹೀಗಾಗಿ ಜಗತ್ತಿನೆದುರು ಮತ್ತು ಭಾರತದಲ್ಲೂ ತಮ್ಮ ಸರ್ಕಾರ ಪ್ರಜಾಪ್ರಭುತ್ವವಾದಿ ಎಂದು ತೋರಿಸಿಕೊಳ್ಳುವ ತುರ್ತಿನಲ್ಲಿರುವ ಮೋದಿ ಸರ್ಕಾರ ಈ ವರ್ಶವೂ ಜೂನ್ 25 ರಂದು ಇಂದಿರಾ ಎಮರ್ಜೆನ್ಸಿಯ ನೆನಪು ಮಾಡುತ್ತಾ ಮೋದಿ ಫ಼್ಯಾಶಿಸಂ ಅನ್ನು ಮರೆಸುವ ಮಹಾ ಯೋಜನೆಯನ್ನು ಹಮ್ಮಿಕೊಂಡಿದೆ.

ಮಣಿಪುರ ಇತ್ಯಾದಿ ಕಡೆಗಳಲ್ಲಿ ಕೇಂದ್ರದ ಮೌನ ಬೆಂಬಲ-ಸಹಕಾರದೊಂದಿಗೆ ನಡೆಯುತ್ತಿರುವ ಅಂತರ್ಯುದ್ಧ ಮತ್ತು ನರಮೇಧಗಳ ಬಗ್ಗೆ ತುಟಿ ಬಿಚ್ಚದ ಬೇಜವಾಬ್ದಾರಿ ಪ್ರಧಾನಿ ಅಮೆರಿಕ ಪ್ರವಾಸಕ್ಕೆ ಹೊರಟು ನಿಂತ ಕ್ಷಣದಲ್ಲೂ ಮಾಡಿದ “ಮನ್ ಕಿ ಬಾತ್ ” ಭಾಷಣದಲ್ಲಿ ತುರ್ತುಸ್ಥಿತಿಯ ಕರಾಳತೆಯನ್ನು ದೇಶಕೆ ನೆನಪು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಮಣಿಪುರದಲ್ಲಿ ಕುಕಿಗಳ ಪ್ರಭುತ್ವ ಬೆಂಬಲಿತ ನರಮೇಧ ಮತ್ತು ಅಂತರ್ಯುದ್ಧಗಳು ಪ್ರಾರಂಭವಾಗಿ 50 ದಿನಗಳಾದರೂ ಕ್ರಮತೆಗೆದುಕೊಳ್ಳದ ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ಸರ್ವಶಕ್ತ ಪ್ರಧಾನಿ ಮೋದಿ “ಮನ್ ಕಿ ಬಾತ್” ನಲ್ಲಾದರೂ ಅದರ ಬಗ್ಗೆ ಮಾತನಾಡಬಹುದೆಂದು ನಿರೀಕ್ಷಿಸಿದ್ದ ಮಣಿಪುರ ಹಾಗೂ ಈಶಾನ್ಯ ಭಾರತದ ಜನತೆ ಆಕ್ರೋಶದಿಂದ “ಮನ್ ಕಿ ಬಾತ್” ಬಿತ್ತರಿಸುತ್ತಿದ್ದ ರೇಡಿಯೋಗಳನ್ನು ಒಡೆದುಹಾಕಿದ್ದಾರೆ.

ಅದೇನೇ ಇರಲಿ. ನೈಜ ಪ್ರಜಾತಂತ್ರವಾದಿಗಳು ಎಮರ್ಜೆನ್ಸಿಯ ಪ್ರಮಾದಗಳನ್ನು ಹಾಗೂ ಅದನ್ನು ಸಾಧ್ಯಗೊಳಿಸಿದ ರಾಜಕೀಯ-ಆರ್ಥಿಕ ಸಂದರ್ಭವನ್ನೂ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟ ಸಾಂವಿಧಾನಿಕ ಸಾಧ್ಯತೆಗಳನ್ನೂ ಮರೆಯುವಂತಿಲ್ಲ.

ಆದರೆ ತುರ್ತುಸ್ಥಿತಿಯ ವಿರುದ್ಧ ನಡೆದ ಪ್ರಜಾತಾಂತ್ರಿಕ ಸಮರ ಜನಸಂಘ-ಬಿಜೆಪಿ ಮತ್ತು ಸಂಘಪರಿವಾರದಂಥ ಪ್ರಜಾತಂತ್ರ ವಿರೋಧಿ ಮನುವಾದಿ ಫ಼್ಯಾಶಿಸ್ಟ್ ಶಕ್ತಿಗಳಿಗೆ ಹೊಸಜೀವ ಕೊಟ್ಟಿದ್ದು ಮತ್ತು ಅವರನ್ನು ಮಾನ್ಯಗೊಳಿಸಿ ಅಧಿಕಾರಕ್ಕೆ ತಂದದ್ದು ಮಾತ್ರ ಒಂದು ಐತಿಹಾಸಿಕ ವಿಪರ್ಯಾಸ.

ಇದು ಎಮರ್ಜೆನ್ಸಿ ಗಿಂತ ದೊಡ್ಡ ಪ್ರಜಾತಾಂತ್ರಿಕ ವೈಫ಼ಲ್ಯ

ದೊಡ್ದ ಶತ್ರುವಿನ ವಿರುದ್ಧ ಸಣ್ಣ ಶತ್ರುವಿನ ಜೊತೆ ಬೇಶರತ್ ಐಕ್ಯತೆ ಮತ್ತು ಅವಲಂಬನೆಗಳೇ ಇಂಥಾ ದುರಂತಕ್ಕೆ ಕಾರಣವಾಯಿತು

ಇಂದು ಫ಼ಾಶಿಸ್ಟ್ ಶಕ್ತಿಗಳ ವಿರುದ್ಧ ನಡೆದಿರುವ ಸಮ್ಘರ್ಷದಲ್ಲಿ ಮತ್ತೆ ಅದೇ ತಪ್ಪು ಮಾಡುತ್ತಿದೇವೆ ಎಂಬುದು ಮತ್ತೊಂದು ಐತಿಹಾಸಿಕ ವಿಪರ್ಯಾಸ.

ಅದೇನೇ ಇರಲಿ ಇತಿಹಾಸವನ್ನು ನೋಡಿದರೆ , ಸಂಘಪರಿವಾರ ಮತ್ತು ಅಂದಿನ ಜನಸಂಘ ತುರ್ತುಸ್ಥಿತಿಯ ವಿರುದ್ಧ ಇತರ ಜನತಾಂತ್ರಿಕ ಶಕ್ತಿಗಳಷ್ಟು ಕಟಿಬದ್ಧತೆಯಿಂದ ಮತ್ತು ತ್ಯಾಗಶೀಲತೆಯಿಂದ ತುರ್ತುಸ್ಥಿತಿಯ ವಿರುದ್ಧ ಹೋರಾಡದೆ, ಇಂದಿರಾಗಾಂಧಿಯವರೊಂದಿಗೆ ರಾಜಿ-ಕಾಬೂಲಿಯಲ್ಲಿ ತೊಡಗಿದ್ದರೆಂಬ ಸಂಗತಿಯನ್ನು ಮುಚ್ಚಿಟ್ಟಿರುವುದು ಸ್ಪಷ್ಟವಾಗುತ್ತದೆ. . ಅಷ್ಟು ಮಾತ್ರವಲ್ಲ ಅವರ ಪಿತಾಮಹ ಸಾವರ್ಕರ್ ರೀತಿಯಲ್ಲಿ ಅವರ ನಾಯಕರು ಜೈಲಿನಿಂದಲೇ ತುರ್ತುಸ್ಥಿತಿಯನ್ನು ಬೆಂಬಲಿಸುತ್ತಾ ಶರಣಾಗತಿ ಪತ್ರಗಳನ್ನು ಬರೆದಿದ್ದರು.

ತುರ್ತುಸ್ಥಿತಿಯನ್ನು ಘೋಷಿಸಲು ಕಾರಣವಾದ ರಾಜಕೀಯ ಹೋರಾಟಗಳಲ್ಲಿ ಆರೆಸ್ಸೆಸ್ ಮತ್ತು ಅದರ ಜನಸಂಘ ಹಾಗೂ ಇತರ ಅಂಗಸಂಸ್ಥೆಗಳ ಪಾತ್ರ ಒಂದಿಷ್ಟಿದ್ದದ್ದು ನಿಜ. ಆದರೆ, ತುರ್ತುಸ್ಥಿತಿಯನ್ನು ಘೋಷಿಸಿದ ನಂತರ ಆರೆಸ್ಸೆಸ್ ಮತ್ತು ಭಾರತೀಯ ಜನಸಂಘದ ನಾಯಕರು ತಾವು ಸರ್ವಾಧಿಕಾರಿ ಎಂದು ಕರೆಯುತ್ತಿದ್ದ ಇಂದಿರಾಗಾಂಧಿಯವರ ಜೊತೆ ಗುಪ್ತ ಒಪ್ಪಂದವನ್ನು ಮಾಡಿಕೊಂಡು ಎಮರ್ಜೆನ್ಸಿಯನ್ನು ಬೆಂಬಲಿಸಿದ್ದೂ ಕೂಡಾ ಅಷ್ಟೇ ನಿಜ.

ಇತಿಹಾಸದ ಈ ಅತ್ಯಂತ ಅಪಮಾನಕಾರಿ ಪುಟಗಳನ್ನು ಹಾಗೂ ತಮ್ಮ ಈ ಅವಕಾಶವಾದಿ ಜನದ್ರೋಹಿ ಧೋರಣೆಗಳನ್ನು ಬಿಜೆಪಿ-ಸಂಘಪರಿವಾರ ಮುಚ್ಚಿಹಾಕಲು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ಆದರೆ ಆ ಕಾಲದ ಅವರ ಬರಹಗಳು ಮತ್ತು ಅವರ ನಾಯಕರುಗಳೆ ದಾಖಲಿಸಿರುವ ಇತಿಹಾಸಗಳು ಹೇಗೆ ಸಂಘಪರಿವಾರದ ನಾಯಕರು ಎಮರ್ಜೆನ್ಸಿಯನ್ನು ಗುಪ್ತವಾಗಿ ಬೆಂಬಲಿಸಿದ್ದರು ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ.

ಅಟಲ ಬಿಹಾರಿಯವರು ಅರೆಕ್ಷಣವೂ ಜೈಲಿನಲ್ಲಿರಲಿಲ್ಲ!

ಪ್ರತಿವರ್ಷ ಜೂನ್ 25 ರಂದು ಬಿಜೆಪಿ ಮತ್ತು ಆರೆಸ್ಸೆಸ್ ನವರು ಯಥಾಪ್ರಕಾರ ತಾವು ಹೇಗೆ ಭಾರತವನ್ನು ತುರ್ತುಸ್ಥಿತಿಯಿಂದ ಕಾಪಾಡಿದೆವು ಎಂದು ಕೊಚ್ಚಿಕೊಳ್ಳುತ್ತಾ ವಾಜಪೇಯಿ, ಮೊರಾರ್ಜಿ ಹಾಗೂ ಇನ್ನಿತರ ನಾಯಕರ ಬಂಧನದ ಬಗ್ಗೆ ವರದಿ ಮಾಡಿದ್ದ 1977ರ ಜೂನ್ 26 ರ ಪತ್ರಿಕೆಗಳ ಮುಖಪುಟವನ್ನು ಪೇಸ್ಬುಕ್ನಲ್ಲಿ ಹಾಕಿಕೊಳ್ಳುತ್ತಾರೆ.

ಆದರೆ ಬಿಜೆಪಿ ನಾಯಕರುಗಳಿಗಿಂತ ಹೆಚ್ಚಿನ ಸಾವು ನೋವುಗಳನ್ನು ಎಮರ್ಜೆನ್ಸಿಯಲ್ಲಿ ಅನುಭವಿಸಿದವರು ಸಮಾಜವಾದಿಗಳು, ಲೋಹಿಯಾವಾದಿಗಳು, ಸಿಪಿಎಂ ಮತ್ತು ನಕ್ಸಲೈಟ್ ಪಕ್ಷಗಳ ಸಾವಿರಾರು ನಾಯಕರು ಮತ್ತು ಕಾರ್ಯಕರ್ತರು. ಅದು ಅಂದಿನ ಗೃಹ ಇಲಾಖೆಯ ಕಡತಗಳನ್ನು ಹಾಗೂ ಗುಪ್ತ ವರದಿಗಳನ್ನೂ ಗಮನಿಸಿದರೆ ಗೊತ್ತಾಗುತ್ತದೆ.

ಅದಿರಲಿ. ಮುಖಪುಟದಲ್ಲಿ ಹೆಸರು ಹಾಕಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿಯವರು ನಿಜಕ್ಕೂ ತುರ್ತುಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದರೇ?

ಖಂಡಿತಾ ಇಲ್ಲ.

ತುರ್ತುಸ್ಥಿತಿಯ 20 ತಿಂಗಳುಗಳಲ್ಲಿ ಅತಿ ಹೆಚ್ಚು ಭಾಗ ಅಟಲ್ ಬಿಹಾರಿ ವಾಜಪೇಯಿಯವರು ಪೆರೋಲ್ ಮೇಲೆ ಮನೆಯಲ್ಲಿ ಕಳೆದಿದ್ದರು.

ಹಾಗೂ ಪೆರೋಲ್ ಪಡೆದುಕೊಳ್ಳಲು ತುರ್ತುಸ್ಥಿತಿಯನ್ನು ತಾವು ವಿರೋಧಿಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದರು!

ಇದನ್ನು ದಾಖಲೆ ಸಮೇತ ಜನರ ಗಮನಕ್ಕೆ ತಂದಿದ್ದು ಕಮ್ಯುನಿಷ್ಟರೂ ಅಲ್ಲ, ಸಮಾಜವಾದಿಗಳೂ ಅಲ್ಲ. ಬದಲಿಗೆ ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾದ ಸುಬ್ರಹ್ಮಣ್ಯ ಸ್ವಾಮಿಯವರು.

2000 ನೇ ಇಸವಿಯ ಜೂನ್ 13 ರಂದು The Hindu ಪತ್ರಿಕೆಗೆ ಬರೆದ “The Unlearnt Lessons Of Emergency” ಎಂಬ ಸುದೀರ್ಘ ಲೇಖನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯವರು ಹೇಗೆ ಆರೆಸ್ಸೆಸ್ ಮತ್ತು ಜನಸಂಘದ ಹಲವಾರು ನಾಯಕರು ಇಂದಿರಾಗಾಂಧಿಯವರ ಜೊತೆಗೆ ಗುಪ್ತ ಮಾತುಕತೆಗಳಲ್ಲಿ ತೊಡಗಿದ್ದರು ಎಂಬುದನ್ನು ಬಯಲಿಗೆಳೆಯುತ್ತಾರೆ.

ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿಯವರು ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ ಇಂದಿರಾಗಾಂಧಿಯವರ ಜೊತೆ ಒಂದು ಒಪ್ಪಂದಕ್ಕೆ ಬರುತ್ತಾರೆ. ತಮಗೆ ಪೆರೋಲ್ ನೀಡಿ ಹೊರಬರಲು ಅವಕಾಶ ನೀಡಿದರೆ ತಾವು ಸರ್ಕಾರಿ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟು ಹೊರಬರುತ್ತಾರೆ. ಹಾಗೆಯೇ ಹೊರಗಿದ್ದ ಅಷ್ಟೂ ಅವಧಿಯಲ್ಲಿ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಅವರು ದಾಖಲಿಸಿದ್ದಾರೆ.

ಇದು ಆಶ್ಚರ್ಯವೂ ಅಲ್ಲ. ಹೊಸತೂ ಅಲ್ಲ. ಏಕೆಂದರೆ, ವಾಜಪೇಯಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಸಹ ಹೀಗೆ ಮಾಡಿದ್ದರು. 1942 ರ ಕ್ವಿಟ್ ಇಂಡಿಯಾ ಚಳವಳಿಯ ಪ್ರದರ್ಶನವೊಂದನ್ನು ನೋಡುತ್ತಿದ್ದಾಗ ಬ್ರಿಟಿಷ್ ಸರ್ಕಾರದಿಂದ ಬಂಧಿಸಲ್ಪಟ್ಟ ವಾಜಪೇಯಿಯವರು, ಆಗಲೂ ಬಂಧನದಿಂದ ಹೊರಬಂದದ್ದು ತಮ್ಮ ಪರಿಚಿತ ಚಳವಳಿಗಾರರ ಹೆಸರನ್ನು ಬಿಟ್ಟುಕೊಟ್ಟು ಮತ್ತು ಇನ್ನೆಂದಿಗೂ ಬ್ರಿಟಿಷ್ ಸರ್ಕಾರದ ವಿರೋಧಿ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದುಕೊಟ್ಟೇ ಅಲ್ಲವೇ?

ಇಂದಿರಾ ಗಾಂಧಿಗೆ ಶರಣಾದ ಆರೆಸ್ಸೆಸ್ಸಿನ Surrender Document

ಅದೇ ಲೇಖನದಲ್ಲಿ ಸುಬ್ರಹ್ಮಣ್ಯ ಸ್ವಾಮಿಯವರು ಹೇಗೆ ಆರೆಸ್ಸೆಸ್ಸಿನ ನಾಯಕರು 1976 ರ ಡಿಸೆಂಬರ್ ಹೊತ್ತಿಗೆ ಇಂದಿರಾಗಾಂಧಿಯವರ ಎಮರ್ಜೆನ್ಸಿಗೆ ಸಂಪೂರ್ಣ ಹಾಗೂ ಬಹಿರಂಗ ಬೆಂಬಲ ಘೋಷಿಸುವ ಸರೆಂಡರ್ ಡಾಕ್ಯುಮೆಂಟ್ ಗೆ ಸಹಿಹಾಕಲು ತೀರ್ಮಾನ ತೆಗೆದುಕೊಂಡಿದ್ದರೂ ಎಂಬುದನ್ನು ವಿವರಿಸುತ್ತಾರೆ.

ವಾಸ್ತವವಾಗಿ ತುರ್ತುಸ್ಥಿತಿಯ ಘೋಷಣೆಯಾದ ನಂತರ ಸರ್ಕಾರಕ್ಕೆ ವಿರೋಧ ಮಾಡದಂತೆ ಸಂಘಟನಾತ್ಮಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಆರೆಸ್ಸೆಸ್ಸಿನ ಹಿರಿಯ ನಾಯಕರಾದ ಮಧುಕರ್ ಮೂಳೆಯವರಿಗೆ ವಹಿಸಲಾಗಿತ್ತು. ಸರ್ಕಾರದೊಡನೆ ಸಂಧಾನ ಮಾತುಕತೆಯ ಜವಾಬ್ದಾರಿಯನ್ನು ರಾನಡೆಯವರಿಗೆ ವಹಿಸಲಾಗಿತ್ತು. ಸುಬ್ರಹ್ಮಣ್ಯಸ್ವಾಮಿಯವರಿಗೆ ಅಮೆರಿಕವನ್ನೂ ಒಳಗೊಂಡಂತೆ ವಿದೇಶಗಳಲ್ಲಿ ಎಮರ್ಜೆನ್ಸಿ ವಿರೋಧಿ ಹೋರಾಟದ ಬಗ್ಗೆ ಸರ್ಕಾರಗಳ ಬೆಂಬಲ ಪಡೆದುಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು.

ಆದರೆ 1976 ರ ನವಂಬರ್‌ನಲ್ಲಿ ಮಧುಕರ್ ಮೂಳೆಯವರು ಸುಬ್ರಹ್ಮಣ್ಯ ಸ್ವಾಮಿಯವರಿಗೆ ತಮ್ಮ ಪ್ರಯತ್ನಗಳನ್ನು ನಿಲ್ಲಿಸಲು ಅತ್ಯಂತ ವಿಷಾದದಿಂದ ಸಲಹೆ ಮಾಡುತ್ತಾರೆ. ಏಕೆಂದರೆ:
“the RSS had finalised the document of surrender to be signed at the end of January 1977”

-ಆರೆಸ್ಸೆಸ್ಸು 1977 ರ ಜನವರಿಯ ಕೊನೆಯ ವೇಳೆಗೆ ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕಲು ತೀರ್ಮಾನಿಸಿದೆ- ಎಂದು ಮಧುಕರ್ ಮೂಳೆಯವರು ವಿಷಾದದಿಂದ ನನಗೆ ತಿಳಿಸಿದರು ಎಂದು ಸುಬ್ರಹ್ಮಣ್ಯಸ್ವಾಮಿಯವರು ಆ ಲೇಖನದಲ್ಲಿ ದಾಖಲಿಸುತ್ತಾರೆ.

ಹೆಚ್ಚಿನ ವಿವರಗಳಿಗೆ ಆಸಕ್ತರು ಸುಬ್ರಹ್ಮಣ್ಯಸ್ವಾಮಿಯವರ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು.
https://www.thehindu.com/todays-paper/tp-miscellaneous/tp-others/unlearnt-lessons-of-the-emergency/article28026968.ece

ಆರೆಸ್ಸೆಸ್ ನಾಯಕರ ಈ ಸರೆಂಡರ್ ತೀರ್ಮಾನದ ಬಗ್ಗೆ ಆ ದಿನಗಳಲ್ಲಿ ಐಬಿಯ ಮುಖ್ಯಸ್ಥರಾಗಿದ್ದ ಟಿ.ವಿ. ರಾಜೇಶ್ವರ್ ಅವರು ತಮ್ಮ “India- Crucial Years” ಪುಸ್ತಕದಲ್ಲೂ ದಾಖಲಿಸಿದ್ದಾರೆ. ಹಾಗೆಯೇ ಈ ವಿದ್ಯಮಾನವನ್ನು ಆ ದಿನಗಳಲ್ಲಿ ಇಂದಿರಾಗಾಂಧಿಯವರ ವಾರ್ತಾಧಿಕಾರಿಯಾಗಿದ್ದ ಹಿರಿಯ ಪತ್ರಕರ್ತ ಎಚ್.ವೈ. ಶಾರದಾಪ್ರಸಾದರ್ ಅವರೂ ದಾಖಲಿಸಿರುವುದನ್ನು ಅವರ ಮಗ ರವಿ ವಿಶ್ವೇಶ್ವರ ಶಾರದಾ ಪ್ರಸಾದ್ ಅವರು ದಿ ಪ್ರಿಂಟ್ ವೆಬ್ ಪತ್ರಿಕೆಗೆ ಬರೆದ ಲೇಖದಲ್ಲಿ ನೆನಪಿಸಿದ್ದಾರೆ. (https://theprint.in/opinion/rss-leaders-deserted-jayaprakash-resistance-during-indira-emergency/448294/)

ಸರಸಂಘಚಾಲಕರ ಸರೆಂಡರ್ ಪತ್ರಗಳು

ಇವೆಲ್ಲಕ್ಕಿಂತ ಮುಖ್ಯವಾಗಿ ತುರ್ತುಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೆಸ್ಸೆಸ್ನ ಪರಮೋಚ್ಚ ನಾಯಕರಾದ ಸರಸಂಘಚಾಲಕ ಮಧುಕರ್ ದೇವರಸ್ ಅಲಿಯಾಸ್ ಬಾಳಾಸಾಹೆಭ್ ದೇವರಸ್ ಅವರು ಯರವಾಡ ಜೈಲಿನಿಂದ ಇಂದಿರಾಗಾಂಧಿಯವರಿಗೆ ಬರೆದ ಸರೆಂಡರ್ ಪತ್ರಗಳು ಹಾಗೂ ಅದನ್ನು ಪರಿಗಣಿಸಲು ಇಂದಿರಾ ಅವರ ಮೇಲೆ ಪ್ರಭಾವ ಬೀರಬೇಕೆಂದು ವಿನೋಭಾ ಭಾವೆಯವರಿಗೆ ಬರೆದ ಗೋಗೆರೆವ ಪತ್ರಗಳು ತುರ್ತುಸ್ಥಿತಿಯಲ್ಲಿ ಆರೆಸ್ಸೆಸ್ ಮತ್ತು ಜನಸಂಘದ ನಿಜವಾದ ಪಾತ್ರವೇನಿತ್ತು ಎಂದು ತಿಳಿಯಲೂ ಹಾಗು ಅವರ ಸೋಗಲಾಡಿತನವನ್ನೂ ಅರಿಯಲು ಸಹಾಯ ಮಾಡುತ್ತವೆ.

ಬಾಳಾಸಾಹೇಬ್ ದೇವರಸ್ ಅವರು ಹಿಂದಿಯಲ್ಲಿ ಬರೆದ ” ಹಿಂದೂ ಸಂಘಟನ್ ಔರ್ ಸತ್ತಾವದಿ ರಾಜನೀತಿ” ಎಂಬ ಪುಸ್ತಕದ ಕೊನೆಯಲ್ಲಿ ಅಪೆಂಡಿಕ್ಸ್ ನ ರೂಪದಲ್ಲಿ ಈ ಎಲ್ಲಾ ಪತ್ರಗಳನ್ನೂ ಸೇರಿಸಲಾಗಿದೆ. ವಿದ್ವಾಂಸ ಹಾಗೂ ರಾಜಕೀಯ ಕಾರ್ಯಕರ್ತರೂ ಆದ ಯೋಗೇಂದ್ರ ಯಾದವ್ ಅವರು ಹಿಂದಿಯಲ್ಲಿರುವ ಆ ಇಡೀ ಪುಸ್ತಕವನ್ನು ತಮ್ಮ ಟ್ವಿಟರಿನಲ್ಲಿಯೂ ಪ್ರಕಟಿಸಿದ್ದಾರೆ. ಆಸಕ್ತರು ಅದನ್ನು ನೇರವಾಗಿ ಈ ವೆಬ್ ವಿಳಾಸದಲ್ಲಿ ಓದಬಹುದು:

https://images.app.goo.gl/MXPKDDSwtniZFp1n9

ಈ ಎಲ್ಲಾ ಪತ್ರಗಳ ಇಂಗ್ಲೀಷ್ ಆವೃತ್ತಿಯನ್ನು ಆಗ ಭಾರತೀಯ ಲೋಕದಳದ ನಾಯಕರಾಗಿದ್ದ ಬ್ರಹ್ಮದತ್ ಅವರು ಬರೆದಿರುವ ” Five headed monster: A factual narrative of the genesis of Janata Party” ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಅದೇ ರೀತಿ ಕಳೆದ ಮೂರು ನಾಲ್ಕು ದಶಕಗಳಿಂದ ಭಾರತದ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ತಳಮಟ್ಟದ ಅಧ್ಯಯನ ಮಾಡಿ ಹಲವಾರು ಮೌಲಿಕ ಗ್ರಂಥಗಳನ್ನು ಬರೆದಿರುವ ಕ್ರಿಸ್ಟೋಫೋ ಜಾಫರ್ಲೆ ಯವರು ಮತ್ತೊಬ ವಿದ್ವಾಂಸ ಪ್ರತಿನಾವ್ ಅನಿಲ್ ಅವರ ಜೊತೆಗೂಡಿ ತುರ್ತುಪರಿಸ್ಥಿತಿಯ ಬಗ್ಗೆ ನಡೆಸಿದ ಹಲವಾರು ವರ್ಷಗಳ ಸಂಶೋಧನೆಯ ನಂತರ 2021 ರಲ್ಲಿ ಪ್ರಕಟಿಸಿರುವ “ Indias First Dictatorship- The Emergency-1975-77” ಎಂಬ ಪುಸ್ತಕದಲ್ಲೂ ಈ ಪತ್ರಗಳ ಇಂಗ್ಲಿಶ್ ಅನುವಾದವಿದೆ. ಆಸಕ್ತರು ಪುಸ್ತಕದ ಆ ಭಾಗವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:
https://www.rediff.com/news/special/christophe-jaffrelot-pratinav-anil-emergency-was-a-windfall-for-the-rss/20210625.htms

ಮೊದಲ ಸರೆಂಡರ್ ಪತ್ರ- 22 ಆಗಸ್ತ್ 1975

1975 ರ ಜೂನ್ 25 ರಂದು ತುರ್ತುಸ್ಥಿತಿಯನ್ನು ಘೋಷಿಸಿದ ನಂತರ 1975 ರ ಆಗಸ್ಟ್ 15 ರಂದು ಇಂದಿರಾಗಂಧಿಯವರು ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದರು. ಅದರಲ್ಲಿ ಎಲ್ಲಾ ಸರ್ವಾಧಿಕಾರಿಗಳಂತೆ ತಾವು ಕೈಗೊಂಡ ತುರ್ತುಸ್ಥಿತಿ ನಿರ್ಣಯ ಹೇಗೆ ದೇಶದ ಭದ್ರತೆಗೆ ಅತ್ಯಗತ್ಯವಾಗಿದೆಯೆಂದೂ, ಅದನ್ನು ವಿರೋಧಿಸುವವರೂ ದೇಶದ್ರೋಹಿಗಳೆಂದೂ ಭಾಷಣ ಮಾಡಿದರು. ದೇಶಾದ್ಯಂತ ಸಕಲ ಪ್ರಜಾತಂತ್ರವಾದಿಗಳೂ ಈ ಭಾಷಣವನ್ನೂ ಹಾಗೂ ಇಂದಿರಾಗಂಧಿಯವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು.

ಆದರೆ ಆರೆಸ್ಸೆಸ್ನ ಸರಸಂಘ ಚಾಲಕರಾದ ದೇವರಸ್ ಅವರು ಮಾತ್ರ ಇಂದಿರಾಗಾಂಧಿಯವರಿಗೆ ಬರೆದ 1975 ರ ಆಗಸ್ಟ್ 22 ರಂದು ಬರೆದ ಪ್ರಥಮ ಪತ್ರದಲ್ಲಿ ಆ ಭಾಷಣವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ!!

ಅಷ್ಟು ಮಾತ್ರವಲ್ಲ ಅವರ ಭಾಷಣವು ಸಮಯೋಚಿತವೂ ಆಗಿತ್ತು ಹಾಗೂ ಸಮತೋಲದಿಂದಲೂ ಕೂಡಿತ್ತು ಎಂದು ಕೊಂಡಾಡುತ್ತಾರೆ. ಆ ನಂತರ ಇಂದಿರಾ ಸರ್ಕಾರಕ್ಕೆ ಆರೆಸ್ಸೆಸ್ ಬಗ್ಗೆ ಇರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಲು ಈ ಪತ್ರ ಬರೆಯುತ್ತಿದ್ದೇನೆಂದು ಹೇಳುತ್ತಾ ಹೇಗೆ ಆರೆಸ್ಸೆಸ್ ಹಿಂದೂಗಳ ಸಂಘಟನೆಯನ್ನು ಮಾಡುತ್ತಿದ್ದರೂ ಯಾವತ್ತಿಗೂ ಇಂದಿರಾ ಸರ್ಕಾರದ ವಿರೋಧಿಯಾಗಿರಲಿಲ್ಲವೆಂಬ ಭರವಸೆಯನ್ನು ಕೊಡುತ್ತಾರೆ. ಹಾಗೂ ಅಂತಿಮವಾಗಿ :

” ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ತೆಗೆಯಬೇಕೆಂದು ಪ್ರಾರ್ಥಿಸುತ್ತೇನೆ. ನಿಮಗೆ ಸೂಕ್ತವೆಂದು ಕಂಡುಬಂದಲ್ಲಿ ತಮ್ಮನ್ನು ಖುದ್ದು ಭೇಟಿಯಾಗುವುದು ನನಗೆ ಅತ್ಯಂತ ಸಂತೋಷದ ವಿಷಯವಾಗಿರುತ್ತದೆ..

ಹೀಗೆ ಮೊದಲನೆ ಪತ್ರದಲ್ಲಿ ತುರ್ತುಸ್ಥಿತಿಯ ಬಗ್ಗೆ ಸಮ್ಮತಿಯನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಅಂತಿಮವಾಗಿ ಅವರು ವಿನಂತಿಸಿದ್ದು ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ಕಿತ್ತುಹಾಕಬೇಕೆಂದೇ ವಿನಾ ತುರ್ತುಸ್ಥಿತಿಯನ್ನು ತೆಗೆಯಬೇಕೆಂದಲ್ಲ! ಇದು ಆರೆಸ್ಸೆಸ್ಸ್!

ಎರಡನೇ ಸರೆಂಡರ್ ಪತ್ರ- 1975 ರ ನವಂಬರ್ 10

ಆರೆಸ್ಸೆಸ್ಸಿನ ಸರಸಂಘಚಾಲಕರ ಪತ್ರಕ್ಕೆ ಇಂದಿರಾಗಂಧಿಯವರು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಈ ಮಧ್ಯೆ ತುರ್ತುಸ್ಥಿತಿಯಲ್ಲಿ ಇಂದಿರಾಗಾಂಧಿಯವರು ಬಗ್ಗಿರಿ ಎಂದರೆ ತೆವಳಲೂ ಸಿದ್ಧವಾಗಿದ್ದ ಮಾಧ್ಯಮಗಳು ಹಾಗೂ ಸುಪ್ರೀಂಕೋರ್ಟುಗಳು ಇಂದಿರಾಗಾಂಧಿ ಹೇಳಿದಂತೆ ಕೇಳುತ್ತಿದ್ದವು. ಆದ್ದರಿಂದಲೇ ಇಂದಿರಾಗಾಂಧಿಯವರ ಚುನಾವಣಾ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಅಲಹಾಬಾದಿನ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನ ಐದುನ್ಯಾಯಾಧೀಶರ ಪೀಠ ಅನೂರ್ಜಿತಗೊಳಿಸಿ ಇಂದಿರಾಗಾಂಧಿಯವರ ಆಯ್ಕೆಯನ್ನು ಎತ್ತಿಹಿಡಿಯಿತು. ಸ್ವತಂತ್ರ ನ್ಯಾಯಾಂಗದ ಈ ದುಸ್ಥಿತಿಯು ಸರ್ವಾಧಿಕಾರದ ಮುಂದುವರೆಕೆಯೆಂದು ಜೈಲಿನಲ್ಲಿ ಹಾಗೂ ಬಯಲಿನಲ್ಲಿ ಇದ್ದ ಎಲ್ಲಾ ಪ್ರಜಾತಂತ್ರವಾದಿಗಳು ಒಕ್ಕೊರಲಿನಿಂದ ಖಂಡಿಸಿದರು.

ಆದರೆ ಸರಸಂಘಚಾಲಕರು ಮಾಡಿದ್ದೇನು?

1975 ರ ನವಂಬರ್ 10 ರಂದು ಇಂದಿರಾಗಾಂಧಿಯವರನ್ನುದ್ದೇಶಿಸಿ ಎರಡನೇ ಪತ್ರವನ್ನು ಬರೆಯುವ ದೇವರಸ್ ಅವರು ಪತ್ರವನ್ನು ಪ್ರಾರಂಭಿಸುವುದೇ ಸುಪ್ರೀಂಕೋರ್ಟು ಅವರ ಪರವಾಗಿ ಕೊಟ್ಟ ಆದೇಶಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ!

” Let me congratulate you as five judges of the Supreme Court have declared the validity of your election.”

(ನಿಮ್ಮ ಚುನಾವಣೆಯನ್ನು ಸಿಂಧು ಎಂದು ಘೋಷಿಸಿದ ಸುಪ್ರೀಂಕೋರ್ಟಿನ ಐದು ಸದಸ್ಯರ ಪೀಠದ ಆದೇಶಕ್ಕೆ ಮೊದಲಿಗೆ ಅಭಿನಂದನೆಗಳು)

ಆ ನಂತರ ಮತ್ತೊಮ್ಮೆ ಆ ಪತ್ರದುದ್ದಕ್ಕೂ ಹೇಗೆ ಆರೆಸ್ಸೆಸ್ ಸರ್ಕಾರದ ಹಾಗೂ ತುರ್ತುಸ್ಥಿತಿಯ ವಿರೋಧಿಯಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುವ ದೇವರಸ್ ಅವರು ಕೊನೆಗೆ ಹೇಳುವುದೇನೆಂದರೆ:

ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ಹಿತೆಗೆದುಕೊಂಡಲ್ಲಿ:
” ಲಕ್ಷಾಂತರ ಆರೆಸ್ಸೆಸ್ ಸ್ವಯಂಸೇವಕರ ನಿಸ್ವಾರ್ಥ ಕಾರ್ಯಶಕ್ತಿಯನ್ನು ಸರ್ಕಾರದ ದೇಶಾಭಿವೃದ್ಧಿ ಕೆಲಸಕ್ಕೆ ಬಳಸಬಹುದು”

ಆರ್ಥಾತ್ ಆರೆಸ್ಸೆಸ್ಸಿನ ಮೇಲೆ ನಿಷೇಧವನ್ನು ತೆಗೆದುಹಾಕಿದರೆ ಆರೆಸ್ಸೆಸ್ಸಿನ ಕಾರ್ಯಕರ್ತರು ಇಂದಿರಾಗಾಂಧಿಯವರ ಸರ್ವಾಧಿಕಾರಿ ಸರ್ಕಾರದ ಜೊತೆಗೂಡಿ ಕೆಲಸ ಮಾಡುವುದಾಗಿ ಖುಲ್ಲಂಖುಲ್ಲಾ ಆಶ್ವಾಸನೆಯನ್ನು ಸರಸಂಘಚಾಲಕರು ನೀಡುತ್ತಾರೆ.

ಮೂರನೇ ಸರೆಂಡರ್ ಪತ್ರ- 1976 ರ ಫೆಬ್ರವರಿ 24

ಆದರೆ ಇಂದಿರಾ ಸರ್ಕಾರ ಅದನ್ನೂ ಪರಿಗಣಿಸುವುದಿಲ್ಲ. ಆಗ ಇಂದಿರಾಗಾಂಧಿಯವರ ಮೇಲೆ ಪ್ರಭಾವವಿದ್ದ ಹಾಗೂ ಆರೆಸ್ಸೆಸ್ಸಿನ ಸೈದ್ಧಾಂತಿಕ ಮಿತ್ರರೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಸ್ಥಿಕೆಯನ್ನು ಗೋಗೆರೆಯುತ್ತಾ ಸರಸಂಘಚಾಲಕರು ಮತ್ತೊಂದು ಪತ್ರ ಬರೆಯುತ್ತಾರೆ. ಏಕೆಂದರೆ ಫೆಬ್ರವರಿಯ ಕೊನೆಯ ವೇಳೆಗೆ ಇಂದಿರಾಗಾಂಧಿಯವರು ಭಾವೆಯವರ ಆಶ್ರಮಕ್ಕೆ ಭೇಟಿ ನೀಡುವ ಕಾರ್ಯಕ್ರಮವಿರುತ್ತದೆ. ಹೀಗಾಗಿ ದೇವರಸ್ ಅವರು ಆ ಭೇಟಿಯಲ್ಲಿ ಆರೆಸ್ಸೆಸ್ ನ ಪರವಾಗಿ ಆರೆಸ್ಸೆಸ್ ಮೇಲಿನ ನಿಷೇಧವನ್ನಿ ತೆಗೆದುಹಾಕಲು ಪ್ರಭಾವ ಬೆರಬೇಕೆಂದು ಗೋಗೆರೆಯುತ್ತಾರೆ. ಹಾಗೂ ಆರೆಸ್ಸೆಸ್ಸಿನ ಮೇಲಿನ ನಿಷೇಧವನ್ನು ತೆಗೆದುಹಾಕಿದಲ್ಲಿ

a condition will prevail as to enable the volunteers of the Sangh to participate in the planned programme of action relating to country’s progress and prosperity under the leadership of the prime minister.”

ಅಂದರೆ -ಪ್ರಧಾನಿ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ಯೋಜಿತವಾದ ದೇಶದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧಿಸುವ ಕಾರ್ಯಕ್ರಮಗಳಲ್ಲಿ ಸಂಘದ ಕಾರ್ಯಕರ್ತರೂ ಭಾಗವಹಿಸಬಹುದು ಎಂದು ಮುಕ್ತವಾಗಿ ಇಂದಿರಾಗಾಂಧಿಯವರ ಸರ್ವಾಧಿಕಾರೇ ಸರ್ಕಾರದ ಜೊತೆ ಕೈಗೂಡಿಸುವ ಇರಾದೆಯನ್ನು ಮತ್ತೊಮ್ಮೆ ಪ್ರಕಟಿಸುತ್ತಾರೆ.

ಇದು ತುರ್ತುಪರಿಸ್ಥಿತಿಯಲ್ಲಿ ಆರೆಸ್ಸೆಸ್ಸಿನ ನಾಯಕರ ನಿಜವಾದ ರೂಪ. ಇಡೀ ದೇಶದಲ್ಲಿ ಇಂದಿರಾಗಾಂಧಿಯವರು ಯೋಜಿತವಾಗಿ ಹಕ್ಕುಗಳ ದಮನವನ್ನು ನಡೆಸುತ್ತಿದ್ದಾಗ, ಪ್ರಜಾತಂತ್ರದ ಕಗ್ಗೊಲೆ ನಡೆಯುತ್ತಿದ್ದಾಗ ಆರೆಸ್ಸೆಸ್ ಮತ್ತು ಜನಸಂಘ ಹಿಂಬಾಗಿಲ ಮೂಲಕ ಆ ದಮನಕಾಂಡಕ್ಕೆ ಜೊತೆಯಾಗುವ ಆಶ್ವಾಸನೆ ಕೊಟ್ಟು ಹೊರಬರುವ ಯತ್ನದಲ್ಲಿತ್ತು.

ಇದರ ಮುಂದುವರೆಕೆಯಾಗಿಯೇ ಉತ್ತರಪ್ರದೇಶದ ಜನಸಂಘವು ತುರ್ತುಸ್ಥಿತಿಯ ಮೊದಲನೇ ವಾರ್ಷಿಕೋತ್ಸವದ ದಿನವಾದ 1976 ರ ಜೂನ್ 25 ರಂದು ಇಂದಿರಾ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೆ ಯಾವುದೇ ಸರ್ಕಾರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಪ್ರತಿಜ್ನೆ ತೊಟ್ಟರು. ಅಷ್ಟು ಮಾತ್ರವಲ್ಲ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ 34 ಜನಸಂಘದ ನಾಯಕರು ಇಂದಿರಾಗಾಂಧಿ ಕಾಂಗ್ರೆಸ್ಸನ್ನು ಸೇರಿಕೊಂಡರು.

ಇದೆಲ್ಲದರ ಕ್ಲೈಮಾಕ್ಸೇ 1977 ರ ಜವರಿ ಕೊನೆಯ ವೇಳೆಗೆ ಇಂದಿರಾ ಸರ್ಕಾರದ ಜೊತೆ ಒಪ್ಪಂದಕ್ಕೆ ಬಂದು ಆರೆಸ್ಸೆಸ್ ಸಹಿ ಹಾಕಲು ಸಿದ್ಧವಾಗಿದ್ದ ಸರೆಂಡರ್ ಡಾಕ್ಯುಮೆಂಟ್.

ಅದಕ್ಕೆ ಮುಂಚೆಯೇ ಇಂದಿರಾಗಾಂಧಿಯವರು ತುರ್ತುಸ್ಥಿತಿಯನ್ನು ಹಿಂತೆಗೆದುಕೊಂಡಿದ್ದರಿಂದ ಆ ಸರೆಂಡರ್ ದಸ್ತಾವೇಜಿಗೆ ಸಹಿಹಾಕುವ ಅಗತ್ಯ ಆರೆಸ್ಸೆಸ್ಸಿಗೆ ಬೀಳಲಿಲ್ಲ. ಅಷ್ಟೆ.

ಅ ನಂತರವೂ ಬಾಳಾಸಾಹೇಬ್ ದೇವರಸ್ ಅವರಿಗೆ ಇಂದಿರಾಗಾಂಧಿಯವರು ಅಚ್ಚುಮೆಚ್ಚಿನ ನಾಯಕರಾಗಿದ್ದರು.

1980 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿಯವರು ತಮ್ಮ್ ಹಿಂದಿನ “ಸಮಾಜವಾದಿ-ಸೆಕ್ಯುಲಾರ್” ನೀತಿಗಳಿಗೆಲ್ಲಾ ತೊರೆದಿದ್ದರು. ಕಾಶ್ಮೀರ ಮತ್ತು ಪಂಜಾಬಿನಲ್ಲಿ ” ಹಿಂದು ಅಪಾಯದಲ್ಲಿದ್ದಾನೆ, ಹಿಂದೂ ಅಪಾಯದಲ್ಲಿದ್ದಾನೆ ಎಂದರೆ ದೇಶ ಅಪಾಯದಲ್ಲಿದೆ ಹೀಗಾಗಿ ದೇಶವನ್ನು ರಕ್ಷಿಸಲು ಬಲಿಷ್ಟ ನಾಯಕತ್ವದ ಅಗತ್ಯವಿದೆ” ಎಂಬ ಅಪಾಯಕಾರಿ ಹಿಂದೂತ್ವ ರಾಜಕೀಯವನ್ನು ಪ್ರರಂಭಿಸಿದ ಇಂದಿರಾ ಗಾಂಧಿಯವರನ್ನು ಸರಸಂಘಚಾಲಕ ಬಹಿರಂಗವಾಗಿ ಕೊಂಡಾಡಲು ಪ್ರಾರಂಭಿಸಿದರು.

ಆರೆಸ್ಸೆಸ್ಸಿನ ಅಜೆಂಡಾಗಳನ್ನು ಇಂದಿರಾ ಅವರೇ ಜಾರಿ ಮಾಡುತ್ತಿರುವಾಗ ತಮಗೆ ಬಿಜೆಪಿ ಅನಿವಾರ್ಯವಲ್ಲ ಎಂಬ ಘೋಷಣೆಯನ್ನು ಮಾಡಿದರು. ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ನಡೆದ ಸಿಖ್ ಹತ್ಯಾಕಾಂಡದಲ್ಲಿ ತಾನೂ ಭಾಗವಹಿಸಿ ಆರೆಸ್ಸೆಸ್ ಋಣ ಸಂದಾಯ ಮಾಡಿತು.

ಇದು ಆರೆಸ್ಸೆಸ್. ಇದು ಬಿಜೆಪಿ. ಇದು ಇವರ ಪ್ರಜಾತಂತ್ರ ಪ್ರೇಮ!

ಈ ಬಾರಿ ತುರ್ತುಸ್ಥಿತಿಯನ್ನು ನೆನೆಯುವಾಗ ಈ ಐತಿಹಾಸಿಕ ದ್ರೋಹ, ನಯವಂಚನೆ, ಬಿಜೆಪಿ-ಕಾಂಗ್ರೆಸ್ ಕವಲುಗಳ ಸೀಮಿತ ಭಿನ್ನತೆ..ಇತ್ಯಾದಿಗಳನ್ನು ಮರೆಯದೆ ನೆನೆಪಿಸಿಕೊಳ್ಳೋಣ. ಮತ್ತು ಅದರಿಂದ ಪಾಠ ಕಲಿತು ಇಂದಿನ ಮೋದಿ ಎಮರ್ಜೆನ್ಸಿಯ ವಿರುದ್ಧ ನೈಜ ಹೋರಾಟ ಪ್ರಾರಂಭಿಸೋಣ

ಶಿವಸುಂದರ್

ಕೃಪೆ : ವಾರ್ತಾಭಾರತಿ

shivasundar
9448659774