engineering student – Peepal Media

PES ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಕಾಲೇಜು ಆಡಳಿತದ ವಿರುದ್ಧ ದೂರು
ಬೆಂಗಳೂರು: ನಗರದ ಪ್ರಸಿದ್ಧ PES ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಇಂಜಿನಿಯರಿಂಗ್‌ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯ ತಂದೆ ಬೆಂಗಳೂರಿನ ಗಿರಿನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ವಿದ್ಯಾರ್ಥಿಯ ತಂದೆ 50 ವರ್ಷದ ಗಿರೀಶ್‌ ಪ್ರಭು ಅವರು IPC ಸೆಕ್ಷನ್‌ 306ರ ಅಡಿಯಲ್ಲಿ ಮೇಲ್ವಿಚಾರಕ ಮತ್ತು ಆಡಳಿತ ಮಂಡಳಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ದೂರು ನೀಡಿದ್ದಾರೆ.

ವರದಿಗಳ ಪ್ರಕಾರ ಜುಲೈ 17ರ ಸೋಮವಾರ ಮಧ್ಯಾಹ್ನ 12:45ರಿಂದ1 ಗಂಟೆಯ ನಡುವೆ ಆದಿತ್ಯ ಪ್ರಭು ಕಾಲೇಜು ಕಟ್ಟಡದ ಎಂಟನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಕುರಿತು ತಂದೆ ಸೋಮವಾರ ತಡ ಮಧ್ಯಾಹ್ನ 3:30ರ ವೇಳೆಗೆ ಸಲ್ಲಿಸಿರುವ ದೂರಿನ ಪ್ರಕಾರ, ಅವರ ಮಗ ತಿಳಿಯದೆ ಫೋನನ್ನು ತನ್ನ ಬ್ಯಾಗಿನೊಳಗೆ ಇರಿಸಿಕೊಂಡು ಹೋಗಿದ್ದಾನೆ. ಹಾಗೂ ಪರೀಕ್ಷಾ ನಿಯಮದಂತೆ ಅವನು ಫೋನನ್ನು ಏರ್‌ಪ್ಲೇನ್‌ ಮೋಡ್‌ನಲ್ಲಿ ಇರಿಸಿದ್ದ.

“ಪರೀಕ್ಷಾ ಕೋಣೆಯಲ್ಲಿದ್ದ ಮೇಲ್ವಿಚಾರಕರು ಈ ವಿಷಯಕ್ಕಾಗಿ ಆದಿತ್ಯ ಪ್ರಭುವಿನ ಮೇಲೆ ನಕಲು ಮಾಡಿದ ಆರೋಪವನ್ನು ಹೊರಿಸಿದು. ಮತ್ತು ಆತನಿಗೆ ತಾನು ನಿರಪರಾಧಿ ಎಂದು ಸಮರ್ಥಿಸಿಕೊಳ್ಳುವ ಅವಕಾಶವನ್ನೂ ನೀಡಿರಲಿಲ್ಲ. ಅವನನ್ನು ತರಗತಿಯ ಹೊರಗೆ ಕರೆದುಕೊಂಡು ಹೋಗಿ ಆತನ ವಸ್ತುಗಳು ಮತ್ತು ಫೋನನ್ನು ವಶಪಡಿಸಿಕೊಂಡಿದ್ದಾರೆ. ನನ್ನ ಮಗನಿಗೆ ಮಾನಸಕಿ ಕಿರುಕುಳ ನೀಡಿದ ನಂತರ ಯಾರ ಮೇಲ್ವಿಚಾರಣೆಯೂ ಇಲ್ಲದೆ ಒಬ್ಬನನ್ನೇ ಬಿಟ್ಟಿದ್ದಾರೆ. ನನ್ನ ಪತ್ನಿ ಕಾಲೇಜಿಗೆ ಹೋದಾಗ ಮಗ ಸ್ಥಳದಲ್ಲಿರಲಿಲ್ಲ. ಅವನೆಲ್ಲಿದ್ದಾನೆನ್ನುವ ಕುರಿತು ಆಕೆಗೆ ಯಾವುದೇ ಮಾಹಿತಿಯಿರಲಿಲ್ಲ. ನನ್ನ ಹೆಂಡತಿ ಮಗನನ್ನು ಹುಡುಕುವಂತೆ ಬಲವಂತ ಮಾಡಿದ ನಂತರವೂ, ಆಡಳಿತ ಮಂಡಳಿ ಕೆಲವು ಹೊತ್ತು ಆಕೆಯನ್ನು ಕಾಯಿಸಿ ನಂತರ ನಮ್ಮ ಮಗ ಸಿಕ್ಕಿರುವುದಾಗಿ ಹೇಳಿದ್ದಾರೆ” ಎಂದು ಗಿರೀಶ್‌ ಪ್ರಭು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಹುಡುಗನ ತಾಯಿ ಮಗನನ್ನು ನೋಡಬೇಕೆಂದು ಒತ್ತಾಯಿಸುತ್ತಲೇ ಇದ್ದರು. ಆಕೆ ನೋಡಿದಾಗ ಸ್ಥಳದಲ್ಲಿ ಆಂಬುಲೆನ್ಸ್‌ ಬಂದಿತ್ತು ಮತ್ತು ಮಗ ತೀರಿಕೊಂಡಿದ್ದ.

ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ವಿಜಿಲೇಟರ್ ಹಾಗೂ ಕಾಲೇಜು ಆಡಳಿತ ಮಂಡಳಿಯನ್ನು ವಿಚಾರಣೆಗೆ ಕರೆಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಆತ್ಮಹತ್ಯೆ ಸಹಾಯವಾಣಿ:

ಕಾರಣ ಯಾವುದೇ ಇರಲಿ, ಆತ್ಮಹತ್ಯೆಯ ನಿರ್ಧಾರ ಬೇಡ. ಆತ್ಮಹತ್ಯೆಯ ಭಾವನೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದರೆ ನಿಮ್ಮ ಆಪ್ತರೊಂದಿಗೆ ಮಾತನಾಡಿ. ಸಾಧ್ಯವಾಗದಿದ್ದರೆ ಆತ್ಮಹತ್ಯೆ ಸಹಾಯವಾಣಿಗೆ ಕರೆ ಮಾಡಿ. ಸಹಾಯವಾಣಿ ಸಂಖ್ಯೆ – 9152987821 ಅಥವಾ ರಾಷ್ಟ್ರೀಯ ಸಹಾಯವಾಣಿ ಕಿರಣ್, 1800-599-0019 (24/7 ಟೋಲ್ ಫ್ರೀ) ಗೆ ಕರೆ ಮಾಡಿ