exam – Peepal Media

SSC ಪರೀಕ್ಷೆ ಕನ್ನಡದಲ್ಲಿ ನಡೆಸುವಂತೆ ಆಗ್ರಹಿಸಿ ನಾಳೆ ಕರವೇ ಪ್ರತಿಭಟನೆ
ಸ್ಟಾಫ್ ಸೆಲೆಕ್ಷನ್ ಕಮಿಟಿ (SSC) ಡಿಸೆಂಬರ್ ನಲ್ಲಿ ನಡೆಸಲಿರುವ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶ ನೀಡದೆ ಕನ್ನಡಿಗರಿಗೆ ದ್ರೋಹ ಎಸಗಲಾಗಿದ್ದು, ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ನಾಳೆ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದೆ.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಾಗಿರುವ ಸುಮಾರು 20 ಸಾವಿರ ಹುದ್ದೆಗಳಿಗೆ ಕೇಂದ್ರ ಸಿಬ್ಬಂದಿ ಆಯೋಗ (SSC) ನಡೆಸುವ ಪರೀಕ್ಷೆಗಳಲ್ಲಿ ‘ಹಿಂದಿ ಮತ್ತು ಇಂಗ್ಲೀಷ್’ನಲ್ಲಿ ಮಾತ್ರ ಉತ್ತರ ಬರೆಯಲು ಅವಕಾಶ ನೀಡಿರುವುದರಿಂದ ಕನ್ನಡ ಮಾಧ್ಯಮದಲ್ಲಿ ‘ಪದವಿ ಶಿಕ್ಷಣ’ ಪಡೆದಿರುವ ಕರ್ನಾಟಕದ ಲಕ್ಷಾಂತರ ನಿರುದ್ಯೋಗಿ ಯುವಕ-ಯುವತಿಯರು ಕೇಂದ್ರ ಸರ್ಕಾರದ ಉದ್ಯೋಗದ ಅವಕಾಶದಿಂದ ವಂಚಿತರಾಗಲಿದ್ದಾರೆ. ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಬೇಕು ಈ ಕುರಿತು ಸರ್ಕಾರ ಕೂಡಲೇ ಪರೀಕ್ಷೆ ಸ್ಥಗಿತಗೊಳಿಸಿ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಕರವೇ ಪ್ರತಿಭಟನೆಗೆ ಮುಂದಾಗಿದೆ.

ದಿನಾಂಕ: 13-10-2022 ಗುರುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಯಲಿದ್ದು, ಕನ್ನಡಿಗರ ಉದ್ಯೋಗದ ಪರವಾಗಿ ನಮ್ಮ ಹೋರಾಟಕ್ಕೆ ಕೈಜೋಡಿಸಿ ಎಂದು ಕರವೇ ಕರೆ ನೀಡಿದೆ.

SSLC ವಿದ್ಯಾರ್ಥಿಗಳ ಗಮನಕ್ಕೆ: ಈ ಬಾರಿ ಸುಲಭ ಪ್ರಶ್ನೆಗಳು ಇರಲ್ಲ, 75% ಹಾಜರಾತಿ ಕಡ್ಡಾಯ!
ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ 2022 -23ನೇ ಸಾಲಿನ SSLC ಪರೀಕ್ಷೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಕೊರೋನಾ ಪೂರ್ವ ರೀತಿಯಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಲಾಗುವುದು. ಸುಲಭದ ಪ್ರಶ್ನೆ ಇರುವುದಿಲ್ಲ. ವಿಸ್ತೃತ ಉತ್ತರ ಮಾದರಿ ಇರುತ್ತದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಹೆಚ್.ಎನ್. ಗೋಪಾಲಕೃಷ್ಣ, ಕರೋನಾದಿಂದ ಮತ್ತೆ ಸಹಜ ಸ್ಥಿತಿಗೆ ಮರಳಿರುವುದರಿಂದ ಪರೀಕ್ಷೆ ನಿಗದಿಯಂತೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿಯೇ ನಡೆಯಲಿದೆ. ಈ ಬಾರಿ ಪರೀಕ್ಷೆಯಲ್ಲಿ ವಿಸ್ತೃತ ಉತ್ತರ ಬರೆಯುವ ಪ್ರಶ್ನೆ ಪತ್ರಿಕೆ ಇರುತ್ತದೆ. ಶೇಕಡ 75 ರಷ್ಟು ತರಗತಿ ಹಾಜರಾತಿ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಶ್ನೆ ಪತ್ರಿಕೆ ಮಾದರಿ ಮತ್ತು ಕಠಿಣತೆ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥಾವತ್ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವರದಿ: ಚಂದನ್

FDA ನೌಕರಿ ಕೊಡಿಸುವ ಆಮೀಷ: ಮೈಸೂರು ಪಿಎಸ್‌ಐ ಅಶ್ವಿನಿ ಅನಂತಪುರ ಅಮಾನತು
ಮೈಸೂರು:  ಕೆಪಿಎಸ್‌ಸಿಯಿಂದ FDA ನೌಕರಿ ಕೊಡಿಸುವ ಆಮೀಷದ ಆರೋಪದಡಿ ಮೈಸೂರು ಪಿಎಸ್‌ಐ ಅಶ್ವಿನಿ ಅನಂತಪುರ ಅವರನ್ನು  ಅಮಾನತು ಮಾಡಲಾಗಿದೆ.

ಪ್ರಥಮ ದರ್ಜೆ ಸಹಾಯಕ ನೇಮಕಾತಿಯಲ್ಲಿ ಹುದ್ದೆ  ಕೊಡಿಸುವುದಾಗಿ ಬಸವರಾಜು ಎಂಬುವರಿಗೆ ಬಾಗಲಕೋಟೆ ಜಿಲ್ಲೆಯ ಸಂಗಮೇಶ್‌ ಜಳಕಿ ಜೊತೆಗೆ ಆರೋಪಿಯಾದ ಪಿಎಸ್‌ಐ ಅಶ್ವಿನಿ ಅವರೊಂದಿಗೆ ಮಾತನಾಡ ಮೊಬೈಲ್‌ ಹಾಗೂ ವ್ಯಾಟ್ಸಪ್‌ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ಜೊತೆಗೆ ಬ್ಯಾಂಕ್‌ ಖಾತೆಯಲ್ಲಿ ಹಣ ವರ್ಗಾವಣೆ ಆಗಿರುವ ಕುರಿತು  ಬ್ಯಾಂಕ್‌ ಸ್ಟೇಟ್‌ ಮೆಂಟ್‌ಗಳು ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು.

ಈ ಕುರಿತು ಪ್ರಜಾವಾಣಿಯು ವರದಿ ಮಾಡಿತ್ತು.

ಕೆಪಿಎಸ್‌ಸಿಯಿಂದ FDA ನೌಕರಿ ಕೊಡಿಸುವ ಆಮೀಷ: ಮೈಸೂರು ಪಿಎಸ್‌ಐ ಅಶ್ವಿನಿ ಅನಂತಪುರ ಅಮಾನತು#mysuru #kpschttps://t.co/YaHLnMjOsD
— Prajavani (@prajavani) September 19, 2022

ಕೇರಳ ನಾಗರಿಕ ಸೇವಾ ಪರೀಕ್ಷೆ: ತಾಯಿ-ಮಗ ಒಟ್ಟಿಗೆ ಪಾಸ್
ಕೇರಳದ ಮಲ್ಲಪುರಂನ 42 ವರ್ಷದ ಬಿಂದು ಮತ್ತು ಆಕೆಯ 24 ವರ್ಷದ ಮಗ ವಿವೇಕ್ ಕೇರಳ ನಾಗರಿಕ ಸೇವಾ ಪರೀಕ್ಷೆ ‘ಪಿಎಸ್‌ಸಿ’ ಅನ್ನು ಒಟ್ಟಿಗೆ ಪಾಸ್ ಆಗಿದ್ದು, ಇದನ್ನು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ವಿಚಾರವಾಗಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ವಿವೇಕ್ ‘ನಾನು ಮತ್ತು ಅಮ್ಮ ಒಟ್ಟಿಗೆ ಕೋಚಿಂಗ್ ಕ್ಲಾಸಿಗೆ ಹೋಗುತ್ತಿದ್ದೆವು, ತಂದೆಯು ನಮಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದರು. ಶಿಕ್ಷಕರ ಸಹಕಾರ ಪ್ರೇರಣೆ ಕೊಟ್ಟಿತು. ನಾವಿಬ್ಬರೂ ಒಟ್ಟಿಗೆ ಓದಿದ್ದೆವು, ಆದರೆ ಪರೀಕ್ಷೆಯನ್ನು ಒಟ್ಟಿಗೆ ಪಾಸ್ ಮಾಡುತ್ತೇವೆ ಅಂದುಕೊAಡಿರಲಿಲ್ಲ’ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.