festival – Peepal Media

ಸಂಕ್ರಾಂತಿ ಹಬ್ಬ ಮತ್ತು ಸಜ್ಜೆ ರೊಟ್ಟಿ
ಜನಸಾಮಾನ್ಯರಿಗೆ ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ರೈತರು ತಾವು ಬೆಳೆದ ಫಸಲನ್ನು ಮನೆಗೆ ತರುವ ದಿನಗಳಿವು. ಸುಗ್ಗಿ ಹಬ್ಬದ ಸಂಭ್ರಮದ ನಡುವೆ ಕಲಬುರಗಿಯಲ್ಲಿ ಸಂಕ್ರಾಂತಿಯಂದು ಊಟದ ತಟ್ಟೆಯಲ್ಲಿ ಇರಲೇಬೇಕಾಗಿದ್ದ ಸಜ್ಜೆ ರೊಟ್ಟಿಯನ್ನು ನೆನೆಯುತ್ತಾ ಸಜ್ಜೆ ಬೆಳೆಯ ಕಷ್ಟ ಸುಖಗಳ ಬಗ್ಗೆ ಬರೆದಿದ್ದಾರೆ ಪತ್ರಿಕೋದ್ಯಮ ವಿದ್ಯಾರ್ಥಿ ಕುಮಸಿಯ ಮಹೇಶ ಕೇವಂಟಗಿ.

ಸಂಕ್ರಾಂತಿ ಹಬ್ಬದಂದು ಸಂಭ್ರಮದಿಂದ ಎಳ್ಳು ಬೆಲ್ಲ ಸೇವಿಸಿ ಜನರೆಲ್ಲ ಸಂತೋಷದಿಂದ ಸಂಭ್ರಮ ಪಡುತ್ತಿದ್ದರೆ ಇತ್ತ ನಮ್ಮ ಕಲಬುರಗಿಯ ಪ್ರತಿಯೊಬ್ಬರ ಮನೆಯಲ್ಲಿ ಸಂಕ್ರಾತಿ ಹಬ್ಬಕ್ಕೆ ಸಜ್ಜೆ ರೊಟ್ಟಿ ಸಿದ್ಧವಾಗುತ್ತಿತ್ತು. ಈ  ಹಬ್ಬಕ್ಕೆ  ಸಜ್ಜೆ ಸಿಗಲಿಲ್ಲ ಅಂದರೆ  ಯಾರು ಬೆಳೆದಿರುತ್ತಾರೋ ಅವರನ್ನು ಹುಡುಕಿಕೊಂಡು ಹೋಗಿ ಕಾಡಿ ಬೇಡಿಯಾದರು ತಂದು ರೊಟ್ಟಿ  ಮಾಡುವ  ಪದ್ಧತಿ ಇತ್ತು.  ಸಂಕ್ರಾಂತಿ ಹಬ್ಬಕ್ಕೆ ಸಜ್ಜೆ ರೊಟ್ಟಿ ಮಾಡಿಲ್ಲ ಅಂದರೆ ಆ ಹಬ್ಬ ಅಪೂರ್ಣ ಆಗುತ್ತದೆ ಎಂದು ನಮ್ಮ ಕಡೆಯ ಕೆಲವರ ಅಭಿಪ್ರಾಯ. ಈ ಸಜ್ಜೆ ಬೆಳೆಯ ಹಿಂದೆ ಅಡಗಿದ ಸಾರ ಏನಿದೆ ಎಂಬುದನ್ನು  ಕಿಂಚಿತ್ತಾದರೂ ತಿಳಿಸಲು ಈ ಲೇಖನವನ್ನು ಬರೆಯುತ್ತಿದ್ದೇನೆ.

ನನಗೆ  ಸುಮಾರು ಹತ್ತು ವರ್ಷ ಆದಾಗಿನಿಂದ ಸಜ್ಜಿ ರೊಟ್ಟಿ, ಸಜ್ಜಿ ಕಡುಬು ತಿಂದಿರುವುದು ನನಗೆ ನೆನಪಿದೆ. ನಮ್ಮ ಅವ್ವ ಆಗ ದಿನಾಲೂ ಸಜ್ಜೆ ರೊಟ್ಟಿನೇ ಮಾಡುತಿದ್ದಳು. ಮನೆಯಲ್ಲಿ ಆಗ ಬಡತನದ ಮಳೆ ಒಂದೇ ಸಮನೆ ಜಿನುಗುತ್ತಿತ್ತು. ನಮ್ಮ ಉತ್ತರ ಕರ್ನಾಟಕದ ಬಡವರ ಮನೆಗೆ ಥಟ್ಟನೆ ಹೊಂದಿಕೊಳ್ಳೋದು ಈ ಸಜ್ಜೆ  ಒಂದೇ ಆಗಿತ್ತು. ಹಾಗಾಗಿ ಇದೇ ನಮಗೆಲ್ಲಾ ಮೃಷ್ಟಾನ್ನವಾಗಿತ್ತು. ನಮ್ಮ ತೋಟದಲ್ಲಿ ನವಣೆ, ಸಜ್ಜೆ, ಕಳವಿ, ಜವಿಗೋಧಿ ಬೆಳೆಯುತ್ತಿದ್ದರು. ಆದರೆ ಈ ಸಜ್ಜೆ ಬೆಳೆಯನ್ನು ಮಾತ್ರ ಯಥೇಚ್ಛವಾಗಿ ಎಲ್ಲರೂ ಬೆಳೀತಿದ್ರು. ಮೂರು ವರ್ಷಗಳ ಹಿಂದೆ ಒಂದು ಸೇರಿಗೆ ಕೇವಲ 8ರಿಂದ 10 ರೂ.ಮಾತ್ರ ಇತ್ತು.

ಕುಮಸಿವಾಡಿಯ ವೈಶಿಷ್ಟ್ಯ

ಸುಮಾರು ನಾಲ್ಕು ದಶಕಗಳ ಹಿಂದೆ ನಡೆದ ಘಟನೆ ಇದು. ಕುಮಸಿ ಗ್ರಾಮ ತಗ್ಗಿನ ಪ್ರದೇಶದಲ್ಲಿ ಇರುವ ಕಾರಣ ಕೆರೆ ಒಡೆಯುತ್ತೆ ಎಂದು ಊರಿನ ಜನರು ಭಯದಿಂದ ಜೀವನ ನಡೆಸುತ್ತಿದ್ದರು.  ಊರಿನ ಕುರುಬ ಸಮುದಾಯದ ಒಂದಿಷ್ಟು ಜನರು ಕೆರೆಯ ಉತ್ತರ ಭಾಗದ ಎತ್ತರ ಪ್ರದೇಶದಲ್ಲಿ  ವಾಸಿಸ ತೊಡಗಿದರು. ಆ ಪ್ರದೇಶಕ್ಕೆ ಮೊದಲು ‘ಕುರಬನವಾಡಿ’ ಎಂದು ಕರೆಯುತ್ತಿದ್ದರು. ತದನಂತರ ಕುಮಸಿ ಊರಿನಿಂದ ಬೇರ್ಪಟ್ಟಿದ್ದರಿಂದ ಇದನ್ನು ‘ಕುಮಸಿವಾಡಿ’ ಎಂದು ಕರೆಯಲು ಆರಂಭಿಸಿದರು. ಈಗ ಕುಮಸಿ ಮತ್ತು ಕುಮಸಿವಾಡಿ ನಡುವೆ ಇರುವ ಅಂತರ 3 ಕಿ.ಮೀ.

ಈ ಕುಮಸಿವಾಡಿ ಊರಿನಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಸಜ್ಜೆ ಇಲ್ಲದ ಮನೆ ಇಲ್ಲ ಎಂಬಂತೆ ತಮ್ಮ ಹೊಲಗಳಲ್ಲಿ ಅಷ್ಟೊಂದು ಸಜ್ಜೆ ಬೆಳೆಯುತ್ತಿದ್ದರು. ಈ ಸಜ್ಜೆಯನ್ನು ಸಂಗ್ಟಿ, ನುಚ್ಚು, ರೊಟ್ಟಿ, ಕಡುಬು, ಸಂಡಿಗೆ, ಹಪ್ಪಳ, ಕುರುಡಿಗೆ ಹೀಗೆ ಬಹು ವಿಧವಾಗಿ ಉಪಯೋಗಿಸುತ್ತಿದ್ದರು. ಪಶುಗಳಿಗೆ ಚುನ್ನಿ, ಸಜ್ಜೆ ಹಿಂಡಿ, ಕಳಿಕೆ ತಿನ್ನಲು ಕೊಡುತ್ತಿದ್ದರು. ಪ್ರತಿ ಮನೆಯಲ್ಲಿ 5ರಿಂದ 6 ಚೀಲಗಳು ಯಾವಾಗಲೂ ಇರುತ್ತಿದ್ದವಾದರೂ ಕೆಲವರು 150ಕ್ಕೂ ಹೆಚ್ಚು  ಚೀಲಗಳು ಬೆಳೆದ ಉದಾಹರಣೆ ಇದೆ. ನಾನು ಕೇಳಿದ ಹಾಗೆ 2018 ರಿಂದ ಸಜ್ಜೆ ಬೆಳೆಯುದನ್ನೇ ನಿಲ್ಲಿಸಿದ್ದಾರೆ. ಈಗ ಕುಮಸಿವಾಡಿಯ ಪ್ರಮುಖ ಬೆಳೆ ಎಂದರೆ ಎಲೆಕೂಸು, ಹೂ ಕೂಸು ಹಾಗೂ ಬದನೆಕಾಯಿ.  ಯಾಕೆ? ಎಂದು ಅಲ್ಲಿಯ ನಿವಾಸಿಗಳನ್ನು ಕೇಳಿದರೆ ಹಕ್ಕಿ, ಹಂದಿಗಳು ಬೆಳೆ ಹಾನಿ ಮಾಡತ್ತಿದ್ದಾವೆ ಎಂದು ಹೇಳುತ್ತಾರೆ ಇದು ನಿಜವಿರಬಹುದೇ ? ಅಲ್ಲ..ಅಲ್ಲಿಯ ಜನರ ಮನಸ್ಥಿತಿ ಬದಲಾಗಿದೆಯೇ?

ಈ ವರ್ಷ ನಮ್ಮ ಕುಮಸಿ ಊರಿನಲ್ಲಿಯೇ ನನ್ನ ಅಪ್ಪ- ಅವ್ವ ಸೇರಿಕೊಂಡು ಅರ್ಧ ಎಕರೆಯಲ್ಲಿ ಸಜ್ಜೆ  ಬೆಳೆದಿದ್ದಾರೆ. ಆದರೆ, ಪಕ್ಷಿಗಳು ಎಲ್ಲಾ ಸಜ್ಜೆಯನ್ನು ತಿಂದು ಖಾಲಿ ತೆನೆ ಮಾಡಿ ಬಿಟ್ಟಿದ್ದವು. 9 ರಿಂದ10 ಚೀಲಗಳು ಆಗೋದು ಕೇವಲ 1 ಚೀಲ ಆಯಿತು.  ರಾಶಿ ತಂದು ಮನೆಗೆ ಹಾಕುತ್ತಿದ್ದಂತೆ ಊರಿನ ಜನ ಮನೆಗೆ ಬಂದು ನನಗೆ ಎರಡು ಸೇರು ಕೊಡಿ ಎಂದು  ಒಂದೇ ಸಮನೆ ಕೇಳುತ್ತಿದ್ದರು. ಮೂರು ವರ್ಷಗಳ ಹಿಂದೆ ಒಂದು ಸೇರಿಗೆ 12 ರೂ. ಇದ್ದ ಸಜ್ಜೆಯನ್ನು ಅಪ್ಪ ಊರಿನ ಸಂತೆಯಲ್ಲಿ ಸೇರಿಗೆ 80 ರೂ.ಗೆ ಮಾರಾಟ ಮಾಡಿದ್ದಾರೆ! ನಂಬಲಾಗುತ್ತಿಲ್ಲ!

ಸಜ್ಜೆ ಬೆಳೆ ಯಾಕೆ ನಶಿಸುತ್ತಿದೆಯೆಂದರೆ…

ಆಗಲೇ ಹೇಳಿದ ಕುಮಸಿವಾಡಿಯಲ್ಲಿ  ಈ ಸಜ್ಜೆ ಬೆಳೆ ಕಣ್ಮರೆಯಾಗಲು  ಸಾಮಾಜಿಕ, ವರ್ಗ, ಬಣ್ಣ , ಶ್ರೇಷ್ಠ- ಕನಿಷ್ಠ, ಬೇರೆ ಆಹಾರ ಪದ್ಧತಿಯ ಹೇರಿಕೆ, ಹಕ್ಕಿ- ಪಕ್ಷಿಗಳು ನಡುವೆ ಹಂದಿಗಳ ಕಾಟ ಹೀಗೆ ನಾನಾ ಕಾರಣಗಳಿವೆ. ಜನರೂ ಕಾರಣರಾಗಿದ್ದಾರೆ!  ಸಜ್ಜೆ ಬೆಳೆಯುತ್ತಿದ್ದರೆ ಅವರ ಬಗ್ಗೆ ಕೊಂಕು ಮಾತನಾಡೋದು “ಓ..ಅವರು ಬಡವರು ಅದು ಬಡವರ ಬೆಳೆ” ಎಂದು ಹೇಳೋದು. ಸಜ್ಜೆ ರೊಟ್ಟಿ, ಕಡುಬು, ನುಚ್ಚು ಮಾಡಿ ತಿನ್ನುತ್ತಿದ್ದರೆ, ಜನರು “ಅದೇನದು ಕರಿ ರೊಟ್ಟಿ, ನುಚ್ಚು, ಕಡುಬು ತಿನ್ನೋದು ಅಂತ ಮೂದಲಿಸೋದು. ಕರಿಮಣ್ಣಾ ಅಥವಾ ಸಜ್ಜೆ ಯಾರ ಉಣ್ಣುತ್ತಾರೆ ತಗಿರಿ ಅಕಡಿ ” ಎಂದು ವ್ಯಂಗ್ಯ ಮಾಡೋದು.. ಜನರ ಇಂತಹ ಪ್ರತಿಕ್ರಿಯೆಗಳು ಈ ಬೆಳೆ ಬೆಳೆಯಲು ರೈತರಲ್ಲಿ ಉತ್ಸಾಹ ಕುಂದಿಸಿವೆ ಅಂದರೆ ತಪ್ಪಾಗಲಾರದು.

ಸಜ್ಜೆಗೆ ಧಾರ್ಮಿಕ ಸ್ಪರ್ಶ

ಈ ಸಜ್ಜೆಯ ಬಗ್ಗೆ ಹೇಳಬೇಕು ಅಂದರೆ, ಇದು ಪ್ರಮುಖವಾಗಿ ಧಾರ್ಮಿಕ ಆಚರಣೆಯಲ್ಲಿ ಬಳಕೆಯಾಗುತ್ತಿದೆ. ಉತ್ತರ ಕರ್ನಾಟಕದ ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ ಭಾಗದ ಜನರ ಆರಾಧ್ಯದೈವ ಎಂದು ಮಹಾರಾಷ್ಟ್ರ ರಾಜ್ಯದ ತುಳುಜಾಪೂರದ ‘ಜಗದಂಬ’ಳನ್ನು ಕರೆಯಲಾಗುತ್ತದೆ. ದಸರ ಹಬ್ಬದ ಪ್ರಯುಕ್ತ ಮೊದಲ ಖಾರಿಫ್ (ಮುಂಗಾರು) ಬೆಳೆಗಳಾದ ನವಣೆಯ ಬಾನ(ಅನ್ನ), ಸಜ್ಜೆಯ ಕಡುಬು, ನೈವೇದ್ಯ ಕೊಡುತ್ತಾರೆ. ದೀಪಾವಳಿ, ಸಂಕ್ರಾಂತಿ, ಎಳ್ಳಮವಾಸ್ಯೆ ಹಬ್ಬದಂದು ಸಜ್ಜೆ ರೊಟ್ಟಿ ಪ್ರತಿಯೊಬ್ಬರ ಮನೆಯಲ್ಲಿ ಮಾಡುತ್ತಾರೆ. ಇದು ಹಿಂದಿನ ಕಾಲದಿಂದಲೂ ಬಂದ ಪದ್ಧತಿಯಾಗಿದೆ.

ಹಾಗೆ ಕಲಬುರಗಿಯ ಜಿಲ್ಲೆಯ ಮುಸ್ಲಿಂ ಸಮುದಾಯದ ಹಜರತ್ ರುಕ್ಕಮೋದ್ದೀನ ತೋಲಾ ದರ್ಗ, ಹಜರತ್ ಖಾಜೆ ಬಂದೇನವಾಜ ದರ್ಗಾಗಳಲ್ಲಿ ಅದೇ ವರ್ಷ ಬೆಳೆದ ಸಜ್ಜೆಯ ‘ಮಾಲ್ದಿ’ಯನ್ನು ನೈವೇದ್ಯವಾಗಿ ಮುಸ್ಲಿಮೇತರರು ‘ಫಕೀರರಿ’ಗೆ ಉಣಿಸುತ್ತಾರೆ. ಇದು ರೂಢಿಗತವಾಗಿ ನಡೆದು ಬಂದ ಸಂಪ್ರದಾಯವಾಗಿದೆ. ಇಲ್ಲಿ ಸಜ್ಜೆ ಬೆಳೆಯ ಹಿಂದೆ ಅಡಗಿ ಕುಳಿತ ಸೌಹಾರ್ದತೆಯನ್ನು ಕಾಣಬಹುದು. ಆದರೆ ಈಗ ನಮ್ಮ ಬಹುತ್ವದ ನಗರಿಯಲ್ಲಿ ಜನರು ಸಜ್ಜೆ ಬೆಳೆಯುವುದೇ ನಿಲ್ಲಿಸಿದ್ದಾರೆ.

ಸಜ್ಜೆ ಮತ್ತು ಆರೋಗ್ಯ..

ಆರೋಗ್ಯದ ದೃಷ್ಟಿಯಿಂದ ನೋಡಿದರೆ ಸಜ್ಜೆ ಪ್ರತಿಯೊಬ್ಬ ಮನುಷ್ಯರಿಗೆ ಬೇಕಾದ ಪದಾರ್ಥ. ಸಜ್ಜೆಯನ್ನು ಚಳಿಗಾಲದಲ್ಲಿ ಅತಿಯಾಗಿ ಉಪಯೋಗಿಸುತ್ತಾರೆ. ಇದು ದೇಹದ ತೂಕ  ಕಡಿಮೆ ಮಾಡಿಕೊಳ್ಳಲು, ಮುಖದ ಮೇಲಿನ ಚುಕ್ಕೆಗಳು ಹೋಗಲು, ಮಧುಮೇಹದ ತೊಂದರೆ, ಜೀರ್ಣ ಶಕ್ತಿಯನ್ನು ಹೆಚ್ಚಿಸಲು, ಹೃದಯವನ್ನು ಆರೋಗ್ಯವಾಗಿಡಲು, ದೇಹವನ್ನು ಬಿಸಿಯಾಗಿಡಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.  ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆ ಇದೊಂದು ಪ್ರಮುಖವಾದ ಮದ್ದು ಎಂದೂ ವೈದ್ಯರು ಹೇಳುತ್ತಾರೆ.

ಕೆಳದರ್ಜೆಯ ಪದಾರ್ಥ ಎಂದು ಕರೆಸಿಕೊಳ್ಳುತ್ತಿದ್ದ ಸಜ್ಜೆ, ಈಗ ‘ಸಿರಿ ಧಾನ್ಯ’ ದ ಪಟ್ಟಿಗೆ ಸೇರಿದೆ. ಸರ್ಕಾರ ಸಿರಿಧಾನ್ಯ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ‘ರೈತ ಸಿರಿ ಯೋಜನೆ 2022’ ಜಾರಿ ಮಾಡಿದೆ. ಸಿರಿಧಾನ್ಯ ಬೆಳೆಗಳ ವಿಸ್ತೀರ್ಣ ಹೆಚ್ಚಿಸಲು ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಅನುದಾನವನ್ನು ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ ಎಂದು ಈ ಯೋಜನೆ ತಿಳಿಸಿದೆ.

ಸಜ್ಜೆ ಸಿರಿಧಾನ್ಯವಲ್ಲವೇ?

ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟಿನ್‌, ನಾರು (ಫೈಬರ್‌) ಕ್ಯಾಲ್ಶಿಯಂ ಮತ್ತು ಖನಿಜಾಂಶಗಳು ಇದ್ದು ಆಹಾರದಲ್ಲಿ ಪೌಷ್ಟಿಕಾಂಶದ ಭದ್ರತೆಯನ್ನು ಖಾತರಿಪಡಿಸುತ್ತದೆ. ವಿಶೇಷವಾಗಿ ಈ ಬೆಳೆಗಳನ್ನು ಶುಷ್ಕ ಒಣ ಪರಿಸ್ಥಿತಿಗಳಲ್ಲಿ, ಕಡಿಮೆ ಫಲವತ್ತತೆ ಇರುವ ಭೂಮಿಗಳಲ್ಲೂ ಬೆಳೆಯಬಹುದು ಎಂದು ತಿಳಿದು ಬಂದಿದೆ. ಊದಲು ನವಣೆ, ಹಾರಕ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಮಾತ್ರ ಒತ್ತು ನೀಡಲಾಗುವುದು ಎಂದು ತನ್ನ ಯೋಜನೆಯಲ್ಲಿ ಸರ್ಕಾರ ತಿಳಿಸಿದೆ ಎಂದು ಪತ್ರಿಕೆಯೊಂದರಲ್ಲಿ ವರದಿಯಾಗಿದೆ.  ಸಜ್ಜೆಯನ್ನು ಸಿರಿಧಾನ್ಯ ಎಂದು ಕರೆದರೂ ಸರ್ಕಾರವು ಈ ಬೆಳೆಯನ್ನು ತನ್ನ ಯೋಜನೆಯಲ್ಲಿ ಸೇರಿಸದಿರುವುದು ವಿಷಾದನೀಯ.

ಸರ್ಕಾರ ತನ್ನ ‘ರೈತ ಸಿರಿ’ ಯೋಜನೆಯಲ್ಲಿ ಸಜ್ಜೆ ಬೆಳೆಯನ್ನು ಸೇರಿಸಿಕೊಳ್ಳಬೇಕು. ಹಾಗೆ ಮಾಡದಿದ್ದಲ್ಲಿ ಹಿಂದಿನ ಅನೇಕ ಬೆಳೆಗಳ ಕಣ್ಮರೆಗೆ ಕಾರಣರಾಗುತ್ತೇವೆ. ಈಗಾಗಲೇ ವರ್ತಮಾನದ  ಪೀಳಿಗೆಯ ನಿರ್ಲಕ್ಷ್ಯವು ಈ ಸಜ್ಜೆ ಬೆಳೆಯನ್ನು ಅಳಿವಿನ ಅಂಚಿಗೆ ತಂದು ನಿಲ್ಲಿಸಿದೆ. ಮುಂದಿನ ಪೀಳಿಗೆಗಳು ಸಜ್ಜೆ  ಮತ್ತು ಸಜ್ಜೆ ಬೆಳೆಯುವುದನ್ನು ವಿಡಿಯೋ, ಫೋಟೋಗಳಲ್ಲಿ ನೋಡ ಬೇಕಾಗಬಹುದು. ಇದನ್ನು ನಾವೆಲ್ಲರೂ ಅರಿತುಕೊಂಡು ಮುಂದೆ ಸಾಗಬೇಕು. ಎಲ್ಲಾ ಬೆಳೆಗಳಿಗೆ ಅಂಟಿದ  ಶ್ರೇಷ್ಠ-ಕನಿಷ್ಠ ಎಂಬ ಅಮಲಿನ ರೋಗ ಹೋಗಲಾಡಿಸ ಬೇಕು. ನಮ್ಮ ರೈತ ಬಂಧುಗಳಿಗೆ ಸರ್ಕಾರಗಳು  ಅರಿವಿನ ಕಾರ್ಯಕ್ರಮಗಳನ್ನು ಹಾಕಿಕೊಂಡು ಪ್ರತಿ ಹಳ್ಳಿಗಳಿಗೂ ಅದನ್ನು ತಲುಪಿಸಿ ಸಜ್ಜೆ  ಬೆಳೆ ಕಣ್ಮರೆಯಾಗದ ಹಾಗೆ ರೈತರನ್ನು ಹುರಿದುಂಬಿಸುವ ಕೆಲಸ ಮಾಡಬೇಕು.

ಮಹೇಶ ಕೇವಂಟಗಿ, ಕುಮಸಿ,

ʼಸಂವಾದʼ ದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ

ತುಳಸಿ ವೃಂದಾ – ಪುರಾಣ ಕಥೆಯ ಗೊಂದಲ !?
ಇಂದು ತುಳಸೀ ಹಬ್ಬ. ದೀಪಾವಳಿ ಹಬ್ಬದ ಬೆನ್ನಲೇ ಬರುವ ಹಬ್ಬ ಇದು. ಈ ಹಬ್ಬದ ಕುರಿತು ಪುರಾಣ ಕತೆಗಳಲ್ಲಿ ಇರುವ ಗೊಂದಲಗಳ ಕುರಿತು ಚಿಂತಕ ಪ್ರವೀಣ್ ಎಸ್ ಶೆಟ್ಟಿ ಅವರು ಬರೆದ ಈ ವೈಚಾರಿಕ ಲೇಖನ ಓದಿ…

ಈಗ ತುಳಸಿ ಹಬ್ಬ ಬಂದಾಗ ಪತ್ರಿಕೆಗಳಲ್ಲಿ ತುಳಸಿಯ ಕುರಿತ ಹಲವಾರು ಪುರಾಣ ಕಥೆಗಳು ಹೊರಬರುತ್ತವೆ. ಎಲ್ಲಾ ಬ್ರಾಹ್ಮಣರ ಮನೆಯ ಎದುರು ತುಲಸಿ ಕಟ್ಟೆ ಇದ್ದೇ ಇರುತ್ತದೆ. ಆದರೆ ಬ್ರಾಹ್ಮಣರು ತುಲಸಿ ಕಟ್ಟೆಯ ಸುತ್ತ ಬಲಿ ಬರುತ್ತಾರೆಯೇ ವಿನ: ಅದಕ್ಕೆ ಕೈ ಮುಗಿಯುವುದಿಲ್ಲ! ಅವರು ಆಕಾಶ ನೋಡಿ ಸೂರ್ಯನಿಗೆ ಕೈಮುಗಿಯುತ್ತಾರೆ. ಯಾಕೆಂದರೆ ತುಲಸಿ ಕಟ್ಟೆಯು ವೃಂದಾಳ ಸಮಾಧಿ. ಹಾಗಾಗಿ ಅದಕ್ಕೆ ವೃಂದಾವನ ಎಂದು ಕರೆಯುವುದು. ತುಲಸಿ-ವೃಂದಾ ಇವರು ಅಸುರ-ರಾಕ್ಷಸ ಕುಲದವರು. ಅಸುರ-ರಾಕ್ಷಸ ಕುಲದವರಿಗೆ ಬ್ರಾಹ್ಮಣರು ಎಂದೂ ಕೈಮುಗಿಯುವುದಿಲ್ಲ. ಅಸುರ ಕುಲದ ಬಲಿಚಕ್ರವರ್ತಿಯನ್ನು ದೀಪಾವಳಿಯ ಮರುದಿನ ಎಲ್ಲ ಶೂದ್ರರೂ ಪೂಜಿಸುತ್ತಾರೆ ಆದರೆ ಬ್ರಾಹ್ಮಣರು ಪೂಜಿಸುವುದಿಲ್ಲ. ಅಸುರ ತುಲಸಿ-ವೃಂದಾ ಸತ್ತಾಗ ಅವಳ ದೇಹವನ್ನು ಸಮಾಧಿ ಮಾಡಿ ಅದರ ಸುತ್ತ ಕಟ್ಟೆ ಕಟ್ಟಿ ಅದರ ಮೇಲೆ ತುಳಸಿ ಎಂಬ ಔಷಧ ಗಿಡ ನೆಡಲಾಯಿತು. ಅದಕ್ಕೆ ವೃಂದಾವನ ಅರ್ಥಾತ್ ತುಳಸಿಕಟ್ಟೆ ಎಂಬ ಹೆಸರು ಬಿತ್ತು. ಮಂತ್ರಾಲಯ ಮತ್ತು ಉಡುಪಿ ಮಠದಲ್ಲಿ ದಿವಂಗತ ಸ್ವಾಮಿಗಳ ಸಮಾಧಿಗೆ ವೃಂದಾವನ ಎಂದೇ ಕರೆಯುವುದು. ಅದೇ ರೀತಿ ತುಲಸಿ ಕಟ್ಟೆಯೂ ಸಮಾಧಿಯ ಪ್ರತೀಕ. ಹಾಗಾಗಿ ಬ್ರಾಹ್ಮಣರು ಅದಕ್ಕೆ ಕೈಮುಗಿಯುವುದಿಲ್ಲ!

ತುಳಸಿಗೆ ಪೌರಾಣಿಕ ಕಥೆಯ ಲೇಪನ ಬೇಕಿಲ್ಲ…

ತುಳಸಿ ಗಿಡದಲ್ಲಿ ಅದ್ಭುತ ಔಷಧ ಗುಣಗಳು ಇರುವುದು ನಿಜ. ಅದು ಅನೇಕ ರೋಗಗಳಿಗೆ ದಿವ್ಯ ಔಷಧವೆಂಬುದೂ ನಿಜ. ಈ ಗಿಡದ ಗಾಳಿಯಲ್ಲಿ ಕೀಟನಾಶಕ ಗುಣವೂ ಇರುವುದು ನಿಜ. ಇದು ಸಂಶೋಧನೆಯಲ್ಲೂ ಧೃಡಪಟ್ಟಿದೆ. ಹಾಗಾಗಿ ತುಳಸಿ ಎಲೆಗಳ ಮತ್ತು ಕಡ್ಡಿಯ ಸೇವನೆಯಿಂದ ಮತ್ತು ಗಿಡದ ಹತ್ತಿರದ ಗಾಳಿಯ ಸೇವನೆಯಿಂದ ನಿಜವಾಗಿ ನಮ್ಮ ಆರೋಗ್ಯಕ್ಕೆ ಆಗುವ ಲಾಭದ ಬಗ್ಗೆ ಜನರಿಗೆ ತಿಳಿ ಹೇಳುವ ಬದಲು ಮೌಢ್ಯ ಭರಿತ ಪುರಾಣಗಳನ್ನು ಜೋಡಿಸುವ ಅಗತ್ಯವಿದೆಯೇ? ನೇರವಾಗಿ ಗಿಡದ ಔಷಧೀಯ ಗುಣದ ಬಗ್ಗೆ ಹೇಳಿದರೆ ಅದು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವುದಿಲ್ಲ ಎಂಬ ಕಾರಣಕ್ಕೆ ಹಿಂದಿನ ಕಾಲದಲ್ಲಿ ಪೌರಾಣಿಕ ಕಥೆಯ ಲೇಪನ ಕೊಟ್ಟಿರಬಹುದು. ಆದರೆ ಈ ಆಧುನಿಕ ಕಾಲದಲ್ಲಿ ಅದರ ಅವಶ್ಯಕತೆ ಇಲ್ಲ. ಋತುಮತಿಯಾದ ಮಹಿಳೆಗೆ ನಿಜವಾಗಿ ಆ ಸಮಯದಲ್ಲಿ ತುಳಸಿಯ ಗಾಳಿ ಮತ್ತು ಅದರ ಎಲೆಗಳ ಸೇವನೆ ಅತಿ ಅಗತ್ಯ. ಆ ಸಮಯದಲ್ಲಿ ಅವಳ ರಕ್ತಹೀನತೆ ನಿವಾರಿಸಲು ಬೇಕಾಗುವ ಅನೇಕ ವಿಟಮಿನ್ ಮತ್ತು ಖನಿಜ ತುಳಸಿಯಿಂದ ಸಿಗುತ್ತದೆ. ವಿಪರ್ಯಾಸವೆಂದರೆ ಋತುಮತಿಯಾದ ಮಹಿಳೆ ತುಳಸಿಯ ಎಲೆಯನ್ನು ಮುಟ್ಟಬಾರದು ಗಿಡದ ಹತ್ತಿರವೂ ಹೋಗಬಾರದು ಎಂಬ ಮೂಢ ನಂಬಿಕೆಯನ್ನು ವೈದಿಕರು ಹುಟ್ಟು ಹಾಕಿದ್ದಾರೆ. ಮನೆಯಲ್ಲಿ ಜನನ-ಮರಣದ ಸೂತಕವಿದ್ದರೂ ಆ ಮನೆಯವರು ತುಳಸಿ ಗಿಡವನ್ನು ಮುಟ್ಟಬಾರದು ನೀರು ಹಾಕಬಾರದು ಎಂಬ ಮೌಢ್ಯವನ್ನೂ ಯಾರೋ ಶತಮೂರ್ಖರು ಹುಟ್ಟು ಹಾಕಿದ್ದಾರೆ. ಬೇಸಿಗೆಯಲ್ಲಿ ಸೂತಕದ ಹದಿಮೂರು ದಿನ ನೀರಿಲ್ಲದಿದ್ದರೆ ಗಿಡ ಬದುಕುವುದೇ?

ತುಳಸಿಗೆ ಮಾಂಸಾಹಾರದ ಗೊಬ್ಬರ ಹಾಕಬಾರದೇ?

ತುಳಸಿಯೂ ಸಹಾ ಒಂದು ಸಸ್ಯ. ಹಾಗಾಗಿ ಇತರ ಸಸ್ಯಗಳಂತೆ ಅದಕ್ಕೂ ಗೊಬ್ಬರ ಮತ್ತು ಸೂರ್ಯ ರಶ್ಮಿ ಬೇಕು.  ಆದರೆ ನಗರ ಪ್ರದೇಶದ ಫ್ಲಾಟುಗಳಲ್ಲಿ ವಾಸಿಸುವವರು ಬಾಲ್ಕನಿಯಲ್ಲಿ ತುಳಸಿ ಗಿಡ ನೆಡುತ್ತಾರೆ. ಆದರೆ ಅದಕ್ಕೆ ನೀರು ಬಿಟ್ಟು ಬೇರೆ ಏನೂ ಹಾಕುವುದಿಲ್ಲ. ಹಾಗಾಗಿ ನಗರದ ಫ್ಲಾಟುಗಳ ತುಳಸಿ ಗಿಡ ಯಾವಾಗಲೂ ಸೊರಗಿಕೊಂಡೇ ಇರುತ್ತದೆ. ಯಾವುದೇ ಸಸ್ಯಕ್ಕೆ ದೈವತ್ವ ಆರೋಪಿಸಿದರೂ ಅದಕ್ಕೆ ಗೊಬ್ಬರ ಹಾಗೂ ಸೂರ್ಯನ ಬೆಳಕು ಬೇಕೆಂಬ ಸಾಮಾನ್ಯ ಜ್ಞಾನ ಅನೇಕರಿಗಿಲ್ಲ. ಗೊಬ್ಬರ ಹಾಕಿದರೂ ತರಕಾರಿ ತ್ಯಾಜ್ಯದ ಗೊಬ್ಬರ ಮಾತ್ರ ಹಾಕಬೇಕು ಮೀನು-ಕೋಳಿಯ ತ್ಯಾಜ್ಯದ ಗೊಬ್ಬರ ಹಾಕಬಾರದು ಎಂಬ ಮಡಿವಂತ ಮೂಢನಂಬಿಕೆ ಕೆಲವರು ಹೊತ್ತಿದ್ದಾರೆ. ಪುರಾಣ ಕಥೆಯಂತೆ ತುಳಸಿ ಮತ್ತು ವೃಂದಾ ಇಬ್ಬರೂ ರಾಕ್ಷಸ ಪುತ್ರಿಯರು ಹಾಗೂ ರಾಕ್ಷಸರದೇ ಪತಿವ್ರತಾ ಪತ್ನಿಯರು. ಹಾಗಾಗಿ ಅವರು ಮಾಂಸಾಹಾರ ಸೇವಿಸಿರಲೇ ಬೇಕು. ಹಾಗಿರುವಾಗ ತುಲಸಿ- ವೃಂದಾ ಇಬ್ಬರೂ ಗಿಡವಾಗಿ ಹುಟ್ಟಿರುವಾಗ ಅವರಿಗೆ ಮಾಂಸಾಹಾರದ ಗೊಬ್ಬರ ಹಾಕಬಾರದು ಎಂಬ ನಿಯಮವೇ ತರ್ಕವಿಹೀನ.

ತುಳಸಿಯ ವಿಷಯದಲ್ಲಿ ಅನೇಕ ಗೊಂದಲಗಳಿವೆ

ತುಳಸಿ ಮತ್ತು ವೃಂದ ಇಬ್ಬರೂ ಒಂದೆಯೇ ಅಥವಾ ಬೇರೆ ಬೇರೆ ವ್ಯಕ್ತಿಗಳೇ ಎಂಬ ಗೊಂದಲವಿದೆ. ಶಿವ ಪುರಾಣದ ಪ್ರಕಾರ ಶಿವನ ಕೋಪಾಗ್ನಿ ಸಮುದ್ರದಲ್ಲಿ ಬಿದ್ದು ಜಲಂಧರ ರಾಕ್ಷಸ ಹುಟ್ಟುತ್ತಾನೆ. ಅವನೇ ಮುಂದೆ ಪತಿವ್ರತೆ ವೃಂದಾಳನ್ನು ಮದುವೆಯಾಗಿ ಅವಳ ಪಾತಿವ್ರತ್ಯದ ಕವಚದಿಂದ ಬಲಿಷ್ಟನಾಗುತ್ತಾನೆ. ಆದರೆ ವಿಷ್ಣು ಭಾಗವತದ ಪ್ರಕಾರ ಕೃಷ್ಣನ ಗೆಳೆಯ ಸುದಾಮನೇ ರಾಧೆಯ ಶಾಪದಿಂದ ಇನ್ನೊಂದು ಜನ್ಮದಲ್ಲಿ ಶಂಕಚೂಡ ಎಂಬ ರಾಕ್ಷಸನಾಗಿ ಹುಟ್ಟಿ ಪತಿವ್ರತೆ ತುಳಸಿಯನ್ನು ಮದುವೆಯಾಗಿ ಬಲಿಷ್ಟನಾಗುತ್ತಾನೆ. ಆದರೆ ಎರಡೂ ಕಥೆಯಲ್ಲಿ ವಿಷ್ಣುವೇ ಅಸುರಿ ವೃಂದಾ ಹಾಗೂ ತುಳಸಿಯ ಶೀಲವನ್ನು ಮೋಸದಿಂದ ಕೆಡಿಸುತ್ತಾನೆ ಮತ್ತು ಶಿವನು ಅವರಿಬ್ಬರ ರಾಕ್ಷಸ ಗಂಡಂದಿರನ್ನೂ ಕೊಲ್ಲುತ್ತಾನೆ. ಹಾಗಾದರೆ ಸರಿಯಾದ ಕಥೆ ಯಾವುದು? ಎರಡೂ ಕಥೆಯಲ್ಲಿ ವೃಂದಾ ಮತ್ತು ತುಳಸಿ ಇಬ್ಬರೂ ಲಕ್ಷ್ಮೀದೇವಿಯ ಅಂಶದಿಂದ ಹುಟ್ಟಿದವರು.  ಹಾಗಾಗಿ ವಿಷ್ಣುವಿನಿಂದ ಕೆಡಿಸಲ್ಪಟ್ಟಿದ್ದರಲ್ಲಿ ತಪ್ಪಿಲ್ಲ ಎಂಬ ಕುತರ್ಕವಿದೆ. ಹಾಗಾದರೆ ವಿಷ್ಣುವಿನ ಪತ್ನಿ ಲಕ್ಷ್ಮೀದೇವಿಯೇ ತುಲಸಿ-ವೃಂದಾ ಎಂಬ ಅಸುರ ರೂಪದಲ್ಲಿ ಬಂದು ಎರಡೆರಡು ರಾಕ್ಷಸರೊಂದಿಗೆ ಸಂಸಾರ ನಡೆಸಿದ್ದರಿಂದ ಲಕ್ಷ್ಮೀದೇವಿಯ ಶೀಲದ ಪಾವಿತ್ರ್ಯ ನಷ್ಟವಾದಂತೆ ಆಯಿತಲ್ಲವೇ?

ಗಣಪತಿಯ ಶಾಪ-ಕಮ್-ವರ

ಇನ್ನೊಂದು ಪುರಾಣ ಕಥೆಯ ಪ್ರಕಾರ ಗಣಪತಿ ದೇವರಿಗೆ ತುಳಸಿ ದಳ ಈಗಲೂ ಅರ್ಪಿಸದೇ ಇರುವುದಕ್ಕೆ ಕಾರಣ ರಾಕ್ಷಸಿಯಾಗಿದ್ದ ತುಳಸಿಯು ಗಣಪತಿಯನ್ನು ಮೋಹಿಸಿ ಮದುವೆಯಾಗುವಂತೆ ಪೀಡಿಸಿ ಅವನ ತಪಸ್ಸು ಭಂಗ ಮಾಡುತ್ತಾಳೆ. ಅದರಿಂದ ಕುಪಿತನಾದ ಗಣಪತಿ ಅವಳು ಸಸ್ಯವಾಗಿ ಹೋಗಲಿ ಎಂದು ಶಪಿಸುತ್ತಾನೆ. ಅವಳು ಕ್ಷಮೆ ಕೇಳಿದ ನಂತರ ನನ್ನ ಹೊರತು ಎಲ್ಲಾ ದೇವರ ಪೂಜೆಗೆ ತುಳಸಿ ಅರ್ಹವಾಗಲಿ ಎಂದು ಗಣಪತಿ ಶಾಪ-ಕಮ್-ವರ ಕೊಡುತ್ತಾನೆ. ಹಾಗಾಗಿ ಗಣಪತಿ ಪೂಜೆಗೆ ತುಳಸಿ ದಳ ನಿಷಿದ್ಧವಂತೆ.

ಶಿವಪುರಾಣದ ಪ್ರಕಾರ…

ಅಸುರ ಜಲಂಧರ ಸತ್ತ ಮೇಲೆ ಅವನ ಹೆಂಡತಿ ವೃಂದಾ ಸತಿಸಹಗಮನ ಮಾಡಿ ಸಾಯುತ್ತಾಳೆ ಹಾಗೂ ಅವಳ ಚಿತೆಯ ಬೂದಿಯಲ್ಲಿ ಪಾರ್ವತಿ, ಸರಸ್ವತಿ, ಲಕ್ಷ್ಮಿಯರು ತುಳಸಿ, ನೆಲ್ಲಿಕಾಯಿ ಮತ್ತು ಮಧುಮಾಲತಿ ಗಿಡಗಳ ಬೀಜ ನೆಡುತ್ತಾರೆ. ಅದಕ್ಕಾಗಿ ಈ ಮೂರು ಗಿಡಗಳನ್ನು ಈಗಲೂ ಒಟ್ಟಾಗಿ ಪೂಜಿಸಲಾಗುತ್ತದೆ ಮತ್ತು ಇವು ಮೂರೂ ಅಪಾರ ಔಷಧಿ ಗುಣ ಹೊಂದಿವೆಯಂತೆ. ಇದರ ಅರ್ಥ ವೃಂದಾ ಸಾಯುವುದಕ್ಕೆ ಮೊದಲೇ ತುಳಸಿ ಬೀಜ ಇತ್ತು ವೃಂದಾಳೇ ತುಳಸಿ ಗಿಡವಾಗಿ ಜನಿಸಿದ್ದಲ್ಲ ಎಂದಂತಾಯಿತು.

ಭಾಗವತ ಪುರಾಣದ ಪ್ರಕಾರ…

ಶಂಕಚೂಡನ ಚರಿತ್ರೆಯಲ್ಲಿ- ತುಳಸಿ ಸತ್ತ ನಂತರ ಗಂಡಕಿ ನದಿಯ ರೂಪದಲ್ಲಿ ಹುಟ್ಟುತ್ತಾಳೆ ಮತ್ತು ಕೇವಲ ಅವಳ ತಲೆಕೂದಲು ಗಂಡಕಿ ದಡದಲ್ಲಿ ತುಳಸಿ ಗಿಡವಾಗಿ ಹುಟ್ಟುತ್ತದೆ. ಹಾಗಾದರೆ ನಾವು ಈಗ ಪೂಜಿಸುವ ತುಳಸಿ ಗಿಡ ಕೇವಲ ತುಳಸಿದೇವಿಯ ಕೂದಲೇ ಅಥವಾ ಇಡಿ ಶರೀರವೇ ಎಂಬ ಗೊಂದಲವಿದೆ.

ಸಾಲಿಗ್ರಾಮ ನಿಜವಾಗಿ ಕಲ್ಲು ಅಲ್ಲ!

ಪತಿವ್ರತೆ ತುಳಸಿಯ ಶಾಪದಿಂದ ವಿಷ್ಣು ಗಂಡಕಿ ನದಿಯಲ್ಲಿ ಸಾಲಿಗ್ರಾಮ ಕಲ್ಲಾಗಿ ಹುಟ್ಟುತ್ತಾನೆ. ಅದಕ್ಕಾಗಿ ಈಗಲೂ ವೈಷ್ಣವರು ಸಾಲಿಗ್ರಾಮವನ್ನು ತಮ್ಮ ಮನೆಯಲ್ಲಿ ಪೂಜಿಸುತ್ತಾರೆ, (ಕರಾವಳಿಯ ದೇವಸ್ಥಾನದಲ್ಲಿಯ ಮಾಧ್ವ ಅರ್ಚಕರು ಯಾವಾಗಲೂ ತಮ್ಮ ಸೊಂಟದಲ್ಲಿ ಕಟ್ಟಿಕೊಂಡಿರುವ ಸಾಲಿಗ್ರಾಮವನ್ನು ಶಿವ ದುರ್ಗಾ ದೇವಸ್ಥಾನದಲ್ಲೂ ಗುಟ್ಟಾಗಿ ಪೂಜಿಸಿ ದಿನಾಲೂ ಶಿವ-ದುರ್ಗೆಯರನ್ನು ಅವಮಾನಿಸುತ್ತಾರೆ). ಆದರೆ ಈ ಸಾಲಿಗ್ರಾಮ ನಿಜವಾಗಿ ಕಲ್ಲು ಅಲ್ಲ!  ಅದು ಬಸವನ ಹುಳದ ಜಾತಿಯ ಒಂದು ಹುಳದ ದೇಹದ ಪಳೆಯುಳಿಕೆ!  ಲಕ್ಷಾಂತರ  ವರ್ಷಗಳ ಹಿಂದೆ ಈ ಹುಳುಗಳು ಗಂಡಕಿ ನದಿಯ ಭಾಗದಲ್ಲಿ ಮಾತ್ರ ವಾಸಿಸುತ್ತಿದ್ದು ಆಗ ಸತ್ತ ಈ ಹುಳುಗಳ ದೇಹ ನದಿಯ ತಳ ಸೇರಿ ಭೂಮಿಯ ಒತ್ತಡ ಹಾಗೂ ಶಾಖದಿಂದ ಕಲ್ಲಿನಂತಾದವು. ಹಾಗಾಗಿ ಈಗ ವೈಷ್ಣವರು  ಪೂಜಿಸುತ್ತಿರುವ ಸಾಲಿಗ್ರಾಮ ಒಂದು ಹುಳದ ಶವ ಅನ್ನಬಹುದು. ಶಿವಪುರಾಣ ಮತ್ತು ಭಾಗವತ ಬರೆದು ಹೆಚ್ಚೆಂದರೆ ಮೂರು ಸಾವಿರ ವರ್ಷಗಳಾಗಿವೆ.

ಇದರ ಅರ್ಥ ವೃಂದಾ-ತುಳಸಿಯ ಕಥೆ ಅಥವಾ ಗಂಡಕಿ ನದಿ-ಸಾಲಿಗ್ರಾಮ ಕಲ್ಲಿನ ಕತೆಯೂ ಕೇವಲ ಮೂರು ಸಾವಿರ ವರ್ಷ ಹಳೆಯದು ಮಾತ್ರ. ಆದರೆ ನಿಜದಲ್ಲಿ ಗಂಡಕಿ ನದಿ ಮತ್ತು ಸಾಲಿಗ್ರಾಮ ಹುಳುಗಳು ಕೋಟ್ಯಾಂತರ ವರ್ಷಗಳ ಹಿಂದೆಯೇ ಡೈನೋಸಾರ್ ಯುಗದಲ್ಲಿಯೇ ಇದ್ದವು. ತುಳಸಿ-ನೆಲ್ಲಿಕಾಯಿ-ಮಧುಮಾಲತಿ ಗಿಡಗಳು ಲಕ್ಷಾಂತರ ವರ್ಷ ಹಿಂದೆಯೇ ಇದ್ದವು. ಆಗ ಮನುಷ್ಯ ಜಾತಿಯೇ ಭೂಮಿ ಮೇಲೆ ಇರಲಿಲ್ಲ. ಅಂದರೆ ಈ ಗೊಂದಲಮಯ ತುಳಸಿ ಪುರಾಣಕ್ಕೆ ವೈಜ್ಞಾನಿಕ ಆಧಾರವೇ ಇಲ್ಲ ಅನ್ನಬಹುದು. ಹಾಗಾಗಿ ಕಹಿಬೇವು, ಅಶ್ವಥ ನೆಲ್ಲಿಕಾಯಿ, ಮಧುಮಾಲತಿ ಗಿಡದಂತೆ ತುಳಸಿಯೂ ಒಂದು ಅದ್ಭುತ ಔಷದಿ ಸಸ್ಯ ಹಾಗೂ ಪ್ರಾಕೃತಿಕ ಕೀಟನಾಶಕ ಎಂದು ಪರಿಗಣಿಸಬೇಕು. ಅದಕ್ಕಾಗಿ ತುಳಸಿಯನ್ನು ಕುರುಡಾಗಿ ಪೂಜಿಸುವ ಬದಲು ಅದರ ಗಾಳಿ ಮತ್ತು ಎಲೆ ಸೇವಿಸಬೇಕು. ದೇವಸ್ಥಾನದಲ್ಲಿ ಅರ್ಚಕರು ಕೊಡುವ ತುಳಸಿ ದಳವನ್ನು ಕಿವಿಗೆ ಇಟ್ಟುಕೊಂಡು ಹಾಳು ಮಾಡುವ ಬದಲು ಅದನ್ನು ತೊಳೆದು ತಿಂದರೆ ಆರೋಗ್ಯಕ್ಕೆ ಉತ್ತಮ.

ವೈದಿಕರಿದ್ದಲ್ಲಿ ಲೈಂಗಿಕ ರಸಿಕತೆ ಇರಲೇಬೇಕು ತಾನೇ. ಅದರಂತೆ ಶೂದ್ರರೆಲ್ಲ ಇದಕ್ಕೆ ‘ತುಳಸಿ ಪೂಜೆ’ ಎಂದು ಕರೆದರೆ ವೈದಿಕರೆಲ್ಲಾ ಅದಕ್ಕೆ ‘ತುಳಸಿ-ವಿವಾಹ’ ಎಂದು ಕರೆದು ತುಳಸಿ ಗಿಡ ಮತ್ತು ಸಾಲಿಗ್ರಾಮ ಕಲ್ಲಿಗೆ ಪ್ರತಿವರ್ಷ ಮದುವೆ ಶಾಸ್ತ್ರ ಮಾಡಿ ತಮ್ಮ ರಸಿಕತನ ತೋರುತ್ತಾರೆ. ಎಷ್ಟಾದರೂ ವೈದಿಕ ಪುರಾಣಗಳ ಕೇಂದ್ರ ಬಿಂದುವೇ ರಸಿಕ ಲೀಲೆ ತಾನೇ !

ಪ್ರವೀಣ್ ಎಸ್ ಶೆಟ್ಟಿ

ಚಿಂತಕರು

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲಾ ಅಭಿಪ್ರಾಯಗಳು ಲೇಖಕರದ್ದೇ ಆಗಿರುತ್ತದೆ)

ತುಳುನಾಡಿನ ‘ಪರ್ಬ’ ‘ದೊಡ್ಡಬ್ಬ’ ಎಂಬ ಜನ ಮೂಲ ಹಬ್ಬ.
ತುಳು ಹಾಗೂ ಅರೆಬಾಸೆಯವರ ‘ಪರ್ಬ’  ಅಥವಾ  ‘ದೊಡ್ಡಬ್ಬ’ ವೇ ಇಂದು ಬಲೀಂದ್ರ ಪೂಜೆಯಾಯಿತೇ? ವ್ಯಾಪಕ ಆಚರಣೆಯಲ್ಲಿದ್ದ ಜನಪದೀಯ ಹಬ್ಬವೊಂದು ಪುರಾಣ ಕತೆಗೆ ಪ್ರೇರಣೆಯಾಯಿತೇ? ಓದಿ.. ಕೃಷಿಕ ಗೋಪಾಲ್‌ ಪೆರಾಜೆಯವರ ಲೇಖನ

ಈ ಮೇಲಿನ ಎರಡು ಪದಗಳಲ್ಲಿ ಮೊದಲಿನದು ‘ತುಳು’ ಭಾಷೆಗೆ ಸಂಬಂಧಿಸಿದರೆ ಎರಡನೆಯದು ಅರೆಬಾಸೆಗೆ ಸಂಬಂಧಿಸಿದೆ.  ‘ಪರ್ಬ’ ಅಥವಾ ‘ದೊಡ್ಡಬ್ಬ’ ಇಂದು ‘ಬಲಿಂದ್ರ’ ಅಥವಾ ‘ದೀಪಾವಳಿ’ ಎಂದು ಕರೆಯಲ್ಪಡುತ್ತಿದೆ. ಬಹುಷ: ಪುರಾಣ ಕಥೆಯೊಂದರ ರಚನೆಯ ನಂತರ ಈ ಹೆಸರುಗಳು ಬಂದಿರಬೇಕು. ಅದರ ಬಗ್ಗೆ ಸ್ವಲ್ಪ ವಿವರಣೆಗಳನ್ನು ಮತ್ತೆ ನೋಡೋಣ.

ಹಬ್ಬದ ಆಚರಣೆಯ ಸಂದರ್ಭ…

ಮೊದಲಿಗೆ ಈ ಹಬ್ಬದ ಆಚರಣೆಯ ಸಂದರ್ಭ ಮತ್ತು ಅದು ಜನಸಾಮಾನ್ಯರಲ್ಲಿ ಏಕೆ ‘ದೊಡ್ಡಬ್ಬ’ವಾಗಿ ಗುರುತಿಸಿಕೊಂಡಿತು ಎಂಬುದನ್ನು ನೋಡಬೇಕಾಗುತ್ತದೆ. ಒಂದು ಕಾಲದಲ್ಲಿ ಬತ್ತದ ಬೇಸಾಯವೇ ಪ್ರಧಾನವಾಗಿದ್ದ ತುಳುನಾಡಿಗೆ ‘ಕೆಡ್ಡಾಸ’ ‘ಬಿಸು’ ‘ಹೊಸ್ತು’  ‘ಪರ್ಬʼ ಆಚರಣೆಗಳು ನಿಜಕ್ಕೂ ಪರ್ವ ದಿನಗಳೇ ಆಗಿದ್ದವು. ಫೆಬ್ರವರಿ ‘ಕೆಡ್ಡಾಸ’ ದಲ್ಲಿ ಭೂಮಿತಾಯಿ ಮುಟ್ಟು ಆಗಿರುತ್ತಾಳೆ ನಂತರ ಬರುವ ಏಪ್ರಿಲ್ ನ  ‘ಬಿಸು’ ಹಬ್ಬಕ್ಕೆ ಭೂಮಿಗೆ ನೇಗಿಲು ಮುಖಾಂತರ ಉಳುಮೆ ಆರಂಭವಾಗುತ್ತದೆ. ಸೆಪ್ಟೆಂಬರ್ ಹೊತ್ತಿಗೆ ಬಸಿರಾದ ಭೂಮಿಯಿಂದ ಭತ್ತದ ತೆನೆಗಳು ಎದ್ದು ನಿಂತಿರುತ್ತವೆ. ಆಗ ಬರುವುದೇ ‘ಹೊಸ್ತು’ ಮನೆ ತುಂಬಿಸುವ ಹಬ್ಬ. ಈಗ ಭತ್ತದ ಕಣಜ ಮನೆ ತುಂಬಿದೆ. ಒಕ್ಕಲಿನವರ ಸಂತೋಷ, ಖುಷಿಗಳು ಕಳೆಕಟ್ಟಿವೆ. ದೊಡ್ಡಬ್ಬ ಅಥವಾ ಪರ್ಬಕ್ಕೆ ರಂಗ ಸಜ್ಜುಗೊಳ್ಳುವ ಮೂಲಕ ತುಳುನಾಡಿನ ಬಹುದೊಡ್ಡ ಹಬ್ಬದ ಆಚರಣೆ ನಡೆಯುತ್ತದೆ.

ಹಲವು ಸಾಂಪ್ರದಾಯಿಕ ಕಟ್ಟಳೆಗಳೊಂದಿಗೆ ಮೂರು ದಿನಗಳ ನಿರಂತರ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ ಹಬ್ಬ. ತುಳುನಾಡಿನ ಬೇರೆ ಬೇರೆ ಭಾಗಗಳು ಮತ್ತು ಜನಾಂಗಗಳು ಹೇಗೆ ಇದನ್ನು ಕಂಡವು ಎನ್ನುವ ವಿವರಕ್ಕೆ ಹೋಗದೆ ಮುಖ್ಯವಾಗಿ ಅರೆಬಾಸೆ ಗೌಡರ ಹಿನ್ನೆಲೆಯಲ್ಲಿ ಇದನ್ನು ನೋಡಲೆತ್ನಿಸುವೆ.

ಅರೆಬಾಸೆ ಗೌಡರ ಹಬ್ಬದ ತಯಾರಿ

ಕನಿಷ್ಠ  ಒಂದು ವಾರದ ಮೊದಲೇ ಹಬ್ಬಕ್ಕೆ ತಯಾರಿಯನ್ನು ಜನ ಶುರು ಮಾಡುತ್ತಾರೆ. ಅಂಗಳದ ಮಧ್ಯೆ ಪ್ರತಿಷ್ಠಾಪಿಸಲಿರುವ ಹಾಲು ಸುರಿಸುವ ಹಾಲೆಮರದ, ಅಂದರೆ  ಕಾಂಡದಲ್ಲಿ ಮೂರು ಗೆಲ್ಲುಗಳು ಟಿಸಿಲೊಡೆದ ಒಂದು ಗಿಡವನ್ನು ಆಯ್ಕೆ ಮಾಡುತ್ತಾರೆ. ಅಂತಹ ಮರದ ಕೊಂಬೆಯನ್ನು ಕತ್ತರಿಸಿ ತಂದು ಅಮಾವಾಸ್ಯೆಯ ದಿನ ಅಂಗಳದಲ್ಲಿ ನೆಡುತ್ತಾರೆ. ಕಾಡು ಬೆಟ್ಟಗಳಲ್ಲಿ ಸಿಗುವ  ಕೇಪ್ಳ ಹೂ, ಕೇನೆ ಕಾಯಿ, ಹಂದಿ ಬಳ್ಳಿ ಕಾಯಿ, ನರಿಕೊಂಬು, ನೆಲಗುಬ್ಬಿ, ಮಾರಾಟಿ ಮಲ್ಲಿಗೆ, ಚೆಂಡು ಹೂವು, ಇತ್ಯಾದಿ ಮಾಲೆಗಳಿಂದ ಮರವನ್ನು ಶೃಂಗರಿಸುವರು. ಈ ಶೃಂಗಾರಕ್ಕಾಗಿ ಮರದ ಕಂಠ ಭಾಗಕ್ಕೆ ಬಿದಿರ ಸಲಾಕೆಯೊಂದನ್ನು ಅಡ್ಡ ಕಟ್ಟಿ ಅದರ ಎರಡು ತುದಿಗಳಿಗೆ ವೀಳ್ಯದ ಎಲೆ ಮತ್ತು ಅಡಿಕೆ ಸುರಿದು ನೇತು ಹಾಕುತ್ತಾರೆ. ಮರಕ್ಕೆ ಅರ್ಧ ಚಂದ್ರಾಕೃತಿ ಅಥವಾ ತ್ರಿಕೋನ ಆಕಾರದಲ್ಲಿ ಮಾಡಿದ ಚೆಂಡು ಹೂಗಳನ್ನು ಸುರಿದ ಮುಡಿಯೊಂದನ್ನು ಕಿರೀಟ ರೀತಿಯಲ್ಲಿ ಕಟ್ಟುವರು. ಮರದ ಕೊರಳಿಗೆ ಅಂದರೆ ಕಂಠ ಭಾಗಕ್ಕೆ ಒಂದು ಹಿಡಿಯಷ್ಟು ದಪ್ಪದ ಭತ್ತದ ಕದಿರನ್ನು ಕಟ್ಟಬೇಕು. ಆ ಪವಿತ್ರ ಮರದ ಪೂಜ್ಯ ಭಾಗವೇ ಭತ್ತದ ಕದಿರು. ಇದಾದ ನಂತರ ಮೂರು ದಿನ ರಾತ್ರಿಗಳಲ್ಲಿ ಮರದ ಅಡಿ ಭಾಗದ ಅಂಗಳಕ್ಕೆ ಸೆಗಣಿ ಸಾರಿಸಿ,  ಮಣೆ ಇಟ್ಟು ಅದರ ಮೇಲೆ ಜೋಡು ಬಾಳೆಗಳ ಎಲೆ ಹಾಸಿ,  ಎಡೆ ಇರಿಸುವರು. ಮರದ ಟಿಸಿಲೊಡೆದ ಭಾಗದಲ್ಲಿ  ಹಣತೆ ಇಟ್ಟು,  ಕೈ ಮುಗಿಯುತ್ತ ‘ಪೊಲಿ ಪೊಲಿಯೇ ಬಾ’ ಎಂದು ಮನೆ ಮಂದಿ ಕೂಗುವರು. ಅಂದರೆ ‘ಸಮೃದ್ಧಿಯೇ ಮನೆಯೊಳಗೆ ತುಂಬಿ ತುಂಬಿ ಬಾ’ ಎಂಬ ಅರ್ಥ.  ಈ ಮರ ಹಾಕುವುದರಲ್ಲಿ ಕೆಲವೆಡೆ ಏಕಮರ, ಕೆಲವೆಡೆ ಜೋಡು ಮರ, ಮೂರು ಮರಗಳನ್ನು ನೆಡುವವರು ಇರುತ್ತಾರೆ. ಮನೆಯೊಳಗೆ ಬುಟ್ಟಿಗಳಲ್ಲಿ ಹುಳಿದೋಸೆ ( ಉದ್ದಿನ ದೋಸೆ) ಅಪ್ಪ ಮತ್ತು ಬಾಳೆಹಣ್ಣು  ತುಂಬಿರುತ್ತವೆ. ಹಬ್ಬದ ಊಟದಲ್ಲಿ ಮಾಂಸಾಹಾರ ಬಹು ಮುಖ್ಯ ಭಾಗ. ಇಲ್ಲಿ ಮರ ಹಾಕುವುದರಲ್ಲಿ ಮಾತ್ರವಲ್ಲ ಆಚರಣೆಯ ವಿಚಾರದಲ್ಲಿ ಕೂಡ ಮನೆಮನೆಗಳಲ್ಲಿ ಊರೂರುಗಳಲ್ಲಿ ವೈವಿಧ್ಯತೆ ತುಂಬಿರುತ್ತದೆ.

ಇದೊಂದು ಆದಿಮ ಆಚರಣೆ…

ಇದೊಂದು ಆದಿಮಕಾಲದ ಪ್ರಕೃತಿ ಪೂಜೆಯ ಭಾಗವೇ ಸರಿ. ಮರ, ಮಾಲೆ, ಫಲವಸ್ತುಗಳು ಎಲ್ಲವೂ  ನೆಲದ ಪೂಜೆಯ ಭಾಗಗಳಾಗಿವೆ.  ಮೂರು ದಿನಗಳಲ್ಲಿ ಫಲ ಕೊಡುವ ಹೊಲಗದ್ದೆಗಳು, ಉಳುಮೆಗೆ ಹೆಗಲುಕೊಟ್ಟ ಹಟ್ಟಿಯ ದನಗಳು, ಭೂತಗುಡಿಗಳು ಸೇರಿದಂತೆ ಗತಿಸಿದ ಹಿರಿಯರಿಗೆ ಎಡೆ ಇಡುವುದು ಎಲ್ಲ ಆರಾಧನೆಗಳು ರೂಢಿಯ ಕಟ್ಟಳೆಗಳಿಂದಲೇ ನೆರವೇರುತ್ತವೆ. ಒಂದು ಕಾಲದಲ್ಲಿ ಬೇಸಾಯದ ಪ್ರತಿ ಮನೆಗಳ ಮುಂದೆ ನಡೆಯುತ್ತಿದ್ದ ಈ ಪೂಜಾ ಪದ್ಧತಿಯಲ್ಲಿ ಪೂಜಾರಿ, ಪುರೋಹಿತ, ದೈವ ನರ್ತಕ, ಜೋಯಿಸ ಯಾರಿಗೂ ಪ್ರವೇಶವೇ ಇರಲಿಲ್ಲ. ಹಾಗಾಗಿಯೇ ಇದೊಂದು ಆದಿಮ ಆಚರಣೆ.  ಅಗೋಚರ, ಆಧ್ಯಾತ್ಮ, ಧರ್ಮಶಾಸ್ತ್ರಗಳ ಸೋಂಕು ಇಲ್ಲಿಲ್ಲ.

ದೀಪಾವಳಿ ಅಲ್ಲ.. ದೊಡ್ಡಬ್ಬ…

ಈ ಹೊತ್ತು ದೀಪಾವಳಿ ಎಂದು ಕರೆಯಲ್ಪಡುವ ಈ ಹಬ್ಬಕ್ಕೆ ಒಂದೆರಡು ತಲೆಮಾರುಗಳ ಹಿಂದೆ ಈ ಹೆಸರು  ಇರಲಿಲ್ಲ. ಈ ವಿಷಯ ಕುರಿತಂತೆ  ಅಧ್ಯಯನ ನಡೆಸಿದ ಸಂದರ್ಭದಲ್ಲಿ ಅರೆಬಾಸೆಯ 80 ವರ್ಷ ದಾಟಿದ ಹಿರಿಯರು ಅದನ್ನು ‘ದೊಡ್ಡಬ್ಬ’ ಎಂದು ಕರೆಯುತ್ತಿದ್ದ ಬಗ್ಗೆ ಪ್ರತಿಕ್ರಿಯಿಸಿದ್ದರು. ಅವರು ಬಲಿ ಚಕ್ರವರ್ತಿ, ವಾಮನ ಅವತಾರ ಕಥೆಯನ್ನು ಕೇಳಿರಲಿಲ್ಲ. ಅಂದರೆ ವ್ಯಾಪಕ ಆಚರಣೆಯಲ್ಲಿದ್ದ ಜನಪದೀಯ ಹಬ್ಬವೊಂದು ಪುರಾಣ ಕತೆಗೆ ಪ್ರೇರಣೆಯಾಗಿದೆ ಅಷ್ಟೆ. ಜನಪದ ಅಧ್ಯಯನಕಾರರು, ಇತಿಹಾಸಕಾರರು ಈಗಾಗಲೇ ನಡೆಸಿರುವ ಸಂಶೋಧನೆಗಳ ಆಧಾರದಲ್ಲಿ ಅನೇಕ ಜನಪದ ಆಚರಣೆಗಳು ಪುರಾಣಗಳ ಭಾಗವಾಗಿ ಕಥೆಗಳ ರೂಪವನ್ನು ಪಡೆದಿವೆ, ಮತ್ತು ಈಗ ಅವುಗಳನ್ನೇ ನಿಜವೆಂದು ಬಿಂಬಿಸಲಾಗುತ್ತಿದೆ.  ಹೀಗಾದಾಗ ಜನಪದ ಆಚರಣೆಗಳಲ್ಲಿ ವೈದಿಕ ಕ್ರಮಗಳ ಅಳವಡಿಕೆ ಸುಸೂತ್ರವಾಗುತ್ತದೆ, ಸಲೀಸಾಗುತ್ತದೆ. ಬತ್ತದ ಕೃಷಿಯ ಕಣ್ಮರೆಯೊಂದಿಗೆ ಬಿಸು, ಹೊಸ್ತು, ದೊಡ್ಡಬ್ಬಗಳು ಜನರ ಮಧ್ಯೆ ಇಲ್ಲವಾಗುತ್ತಿದ್ದು ಅಥವಾ ನೆಪ ಮಾತ್ರಕ್ಕೆ ಎಂಬಂತೆ ಆಚರಣೆಯಲ್ಲಿದ್ದು ಅವುಗಳೆಲ್ಲ ದೇವಾಲಯಗಳಿಗೆ ಸೇರ್ಪಡೆಗೊಳ್ಳುತ್ತಿರುವುದು ನಮ್ಮ ಕಣ್ಣೆದುರಿಗೆ ನಡೆಯುತ್ತಿವೆ. ಅದರ ಪರಿಣಾಮಗಳು ಏನು ಎಂತು ಎಲ್ಲರಿಗೂ ತಿಳಿದ ಸಂಗತಿ.

ಗೋಪಾಲ್‌ ಪೆರಾಜೆ
ಕೃಷಿಕರು, ಸಾಮಾಜಿಕ ಕಾರ್ಯಕರ್ತರು. ಸುಳ್ಯದ ನಿವಾಸಿ.

ನಾಡಿನ ಜನತೆಗೆ ಬೆಳಕಿನ ಹಬ್ಬದ ಶುಭಾಶಯಗಳು: ಸಿಎಂ ಬೊಮ್ಮಾಯಿ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಇಂದು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ 90 ಮೀಟರ್ ಏರಿಯಲ್ ಪ್ಲಾಟ್ಫಾರ್ಮ್ ಲ್ಯಾಡರ್ ಅನ್ನು ಲೋಕಾರ್ಪಣೆ ಮಾಡಿ “ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ʼದೀಪಾವಳಿ ಎಲ್ಲರ ಬದುಕಿನ ಕತ್ತಲನ್ನು ಹೋಗಲಾಡಿಸಿ, ಹೊಸ ಬೆಳಕನ್ನು ನೀಡಲಿ ಎಂದು ಹಾರೈಸಿದರು.

ಇದರ ಜೊತೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಹೆಚ್ಚು ಪರಿಸರ ಮಾಲಿನ್ಯವಾಗದ ರೀತಿ ಹಬ್ಬವನ್ನು ಆಚರಿಸಲು ಸಂಕಲ್ಪ ಮಾಡೋಣ.” ಎಂದು ಹೇಳಿದರು.

ತುಳುವರ ನವರಾತ್ರಿಯ ಪಿಲಿ ನಲಿಕೆ
ಹುಲಿವೇಷ ಎಂಬ ಕಲೆ ಕರಾವಳಿಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದೆ. ವರ್ಷದಲ್ಲಿ ಕೆಲವೇ ದಿನಗಳ ಕಾಲ ಕಾಣ ಸಿಗುವ ಹುಲಿವೇಷಗಳು ಕರಾವಳಿ ಭಾಗದ ಜನರಲ್ಲಿ ವಿಶೇಷ ಗೌರವವನ್ನು ಉಳಿಸಿಕೊಂಡಿವೆ. ತುಳುವರ ಈ ಕಲಾ ಪರಂಪರೆಯ ಬಗ್ಗೆ ಲೇಖಕಿ ಡಾ. ಜ್ಯೋತಿ ಚೇಳೈರು ವಿಶೇಷವಾಗಿ ಬೆಳಕು ಚೆಲ್ಲಿದ್ದಾರೆ.

ಕರಾವಳಿಯಲ್ಲಿ ಪಿಲಿ ನಲಿಕೆ (ಹುಲಿ ಕುಣಿತ) ಯಾವಾಗ ಆರಂಭವಾಗಿರಬಹುದು? ಎಂದು ಪ್ರಶ್ನಿಸಿದಾಗ, ಹುಡುಕಾಡಿದಾಗ ಸಿಗುವ ಮಾಹಿತಿ ಬಹಳ ಕಡಿಮೆಯೇ. ಅದರೆ, ಹುಲಿ ಕುಣಿಯುವ ತಂಡಗಳ ಮೂವತ್ತರ ಸಂಭ್ರಮ, 40ರ ಸಂಭ್ರಮದ  ಪಿಲಿನಲಿಕೆಗೆ ಶುಭ ಕೋರುವ ಫ್ಲೆಕ್ಸ್ ಗಳು ಬೇಕಾದಷ್ಟು ಕಾಣುತ್ತವೆ. ಪಿಲಿ ನಲಿಕೆಯ ಮೂಲ ಎಲ್ಲಿ ಎಂದರೆ ಮಹತ್ವದ ಮಾಹಿತಿಗಳು ಎಲ್ಲೂ  ಲಭ್ಯವಾಗಲಿಲ್ಲ. ಒಂದು ಉಲ್ಲೇಖದ ಪ್ರಕಾರ “ಮಂಗಳಾಪುರ” ಎಂಬ ಹೆಸರಿಗೆ ಕಾರಣವಾದ ಮಂಗಳಾದೇವಿಯ ವಾಹನ ಹುಲಿಯಾಗಿರುವುದರಿಂದ ಹುಲಿವೇಷ ಹಾಕಿ ಕುಣಿಯುವ ಪರಂಪರೆ ಬಂದಿರಬೇಕು ಎಂದು ತಿಳಿದು ಬರುತ್ತದೆ. ನಾಥ ಪಂಥದ ನಂತರದಲ್ಲಿ ಬಂದ ವೈದಿಕ ಪರಂಪರೆಯ ಪ್ರಭಾವ ಈ ಪುರಾಣದ ಕತೆಗಳಲ್ಲಿ ಇದೆ. ಪ್ರಾಚೀನತೆಯ ದೃಷ್ಟಿಯಿಂದ ಗಮನಿಸುವುದಾದರೆ ತುಳು ಜಾನಪದದಲ್ಲಿ ಇರುವ ಆರಾಧನಾ ಪರಂಪರೆಯಲ್ಲಿ ಬರುವ ಪಿಲಿಭೂತ( ಹುಲಿ ಭೂತ), ಪಿಲ್ಚಂಡಿ (ಹುಲಿ ಚಂಡಿ)ಯ ಕಲ್ಪನೆ ಪ್ರಾಚೀನವಾದುದು. ಪಿಲಿಪಂಜಿ (ಹುಲಿ ಹಂದಿ) ಕುಣಿತವು ತುಳುನಾಡಿನ ಬೇಟೆ ಸಂಬಂಧಿ ಕುಣಿತಗಳಲ್ಲಿ ಒಂದು. ಹಂದಿ ಮತ್ತು ಹುಲಿ ಪ್ರಧಾನ ವೇಷಧಾರಿಗಳಾಗಿ ಎರಡು ಜಿಂಕೆ ಮತ್ತು ಕೋವಿ ಹಿಡಿದ ಒಬ್ಬ ದೊರೆಯ ವೇಷವೂ ಇರುತ್ತದೆ. ಇಲ್ಲಿ ಹಾಡುವ ಹಾಡು ಪಿಲಿಪಂಜಿ ಕುಣಿತದ ಈಶ್ವರ ದೇವರ ಸೃಷ್ಟಿ ಮತ್ತು ಹುಲಿ ಬೇಟೆಯ ವಿವರಗಳಿರುವಂತಹುದು. ಪಿಲಿಭೂತ ಮತ್ತು ಪಿಲಿಕೋಲವನ್ನು ಗಮನಿಸುವಾಗ ಭೂತದ ಹುಟ್ಟಿನ ಕತೆಗಿಂತಲೂ  ಮಹಿಮೆಯನ್ನು ಸಾರುವ ಸಂಗತಿಗಳು ಮುಖ್ಯ ನೆಲೆಗೆ ಬರುತ್ತವೆ.

ದುರ್ಗೆಯನ್ನು ಗ್ರಹಿಸಿದ್ದು ಪಿಲ್ಚಂಡಿಯಾಗಿ..

ದುರ್ಗೆಯನ್ನು ನಮ್ಮ ಜನಪದರು ಗ್ರಹಿಸಿದ್ದು ʼಪಿಲ್ಚಂಡಿʼಯಾಗಿ. ಕಾರಣಿಕದ ಈ ದೈವವು ಶಕ್ತಿದಾಯಕವಾದುದು. ಹುಲಿಯ ಮೇಲೆ ಕುಳಿತ ದುರ್ಗೆ ಎನ್ನುವುದಕ್ಕಿಂತಲೂ ಬಾಯಿತೆರೆದು ನಿಂತ ಹುಲಿಯ ಉರುಗಳು ಆಲಡೆಗಳಲ್ಲಿಯೂ ಇವೆ. ಸಿರಿ ಮತ್ತು ಚಿಕ್ಕುವಿನ ಆರಾಧನಾ ಸ್ಥಳಗಳಲ್ಲೂ ಬಾಯಿ ತೆರೆದು ಉಗ್ರವಾಗಿ ನಿಂತಿವೆ‌. ನಮ್ಮ ಆರಾಧನೆಯ ಪರಂಪರೆಯು ಹಲವಾರು  ಸತ್ಯಗಳನ್ನು ತನ್ನ ಮಡಿಲಲ್ಲಿ ಹುದುಗಿರಿಸಿಕೊಂಡಿರುತ್ತದೆ. ಅದರಲ್ಲಿ ಹಲವಾರು ಸೂಕ್ಷ್ಮ ಎಳೆಗಳನ್ನು ಹೆಣೆದು ಭಯ ಮತ್ತು ಭಕ್ತಿಯನ್ನು ಸಾಕಾರ ಗೊಳಿಸುವುದರೊಂದಿಗೆ ಪ್ರೀತಿ ಮತ್ತು ನೀತಿಯ, ಸಮನ್ವಯತೆಯ ಹಂಬಲವೂ ಇರುತ್ತದೆ. ಕಾಪುವಿನಲ್ಲಿ ನಡೆಯುವ ಪಿಲಿ ಕೋಲವು ಇದಕ್ಕಿಂತಲೂ ಭಿನ್ನವಾಗಿ ಪಿಲಿ ಕೋಲ ಕಟ್ಟಿದವರು ಯಾರನ್ನು ಮುಟ್ಟುತ್ತಾರೋ ಅವರು ಬರುವ ವರುಷದ ಕೋಲಕ್ಕಿಂತ ಮೊದಲೇ ಸಾಯುತ್ತಾರೆ. ಇಲ್ಲದೇ ಹೋದರೆ ಕೋಲ ಕಟ್ಟಿದವರೇ ಸಾಯುತ್ತಾರೆ ಎಂಬ ನಂಬಿಕೆ ಇದೆ. ಈ ಎಲ್ಲಾ ಆರಾಧನೆಗಳಿಗಿಂತಲೂ ಭಿನ್ನವಾದುದು ನವರಾತ್ರಿಯ ದುರ್ಗಾಪೂಜೆ ಮತ್ತು ಪಿಲಿನಲಿಕೆ.

೧೯೨೮ ರಲ್ಲಿ ಪಿಲಿ ನಲಿಕೆ!

ಪಿಲಿನಲಿಕೆ ಯಾವಾಗ ಆರಂಭವಾಯಿತು ಎಂದು ಹುಡುಕಾಡಿದಾಗ ಸ್ನೇಹಿತರಿಂದ ಲಭಿಸಿದ್ದು 1928ರಲ್ಲಿ ಹಾಕಿದ್ದ ಹುಲಿವೇಷದ ಕಪ್ಪು ಬಿಳಿಪಿನ ಭಾವಚಿತ್ರ. ವೇಷ ಹಾಕುವವರು ಸಾಮಾನ್ಯವಾಗಿ ತಳ  ಸಮುದಾಯಗಳು. ಕುಣಿಸುವವರು ಮಾತ್ರ ಮೇಲ್ವರ್ಗದವರು ಆಗಿರುತ್ತಾರೆ. ಇಂದಿಗೂ ಕಟೀಲು ದೇವಸ್ಥಾನದ ಸುತ್ತಲಿನ ಊರುಗಳನ್ನು ಪ್ರತಿನಿಧಿಸಿ ನಡೆಯುವ ದಸರಾ ಮೆರವಣಿಗೆಯಲ್ಲಿ ಎಕ್ಕಾರಿನ ಹುಲಿ, ಕೊಡೆತೂರಿನ ಹುಲಿ, ಕಟೀಲಿನ ಹುಲಿ ಎಂದು ಊರವರು ವೇಷ ಹಾಕಿ ಮೆರವಣಿಗೆಯ ವಿಜೃಂಭಣೆಯನ್ನು ಹೆಚ್ಚಿಸುತ್ತಾರೆ. ದೇವಿಗೆ ಹರಕೆ ಹೊತ್ತವರು ಗಂಡು ಹೆಣ್ಣು ಮಕ್ಕಳಿಗೆ ಒಂದು ದಿನದ ವೇಷ ಹಾಕುವುದು ಸಾಮಾನ್ಯ ಮತ್ತು ಸಂಭ್ರಮವೂ ಕೂಡಾ. ಇಲ್ಲಿ ಹಾಕುವ ವೇಷವು ಸಾಂಪ್ರದಾಯಿಕವಾಗಿದ್ದು, ಮೈಗೆ ಬಣ್ಣ ಬಳಿಯಲು ಒಂದು ಇಡೀ ದಿನ ಕೈಯ್ಯಗಲಿಸಿ ಊಟ,  ಶೌಚ ಎಲ್ಲವನ್ನೂ ಮರೆತು ನಿಲ್ಲಬೇಕಿತ್ತು. ಅದಕ್ಕಾಗಿ ಉಪವಾಸ ವ್ರತ ನಡೆಸಿ ವೇಷ ಹಾಕುತ್ತಿದ್ದರು. ಬೇರೆ ಊರುಗಳಿಂದ ಬಂದು ವೇಷ ಹಾಕುವವರು ಒಮ್ಮೆ ಹುಲಿವೇಷದ ಬಣ್ಣ ಬಳಿದರೆ ಅದನ್ನು ತೆಗೆಯುವುದು ಒಂಬತ್ತು ದಿನಗಳ ನಂತರ. ವೇಷ ಕಳಚುವಾಗ ಸಂಗ್ರಹವಾದ ಹಣದ ಒಂದು ಪಾಲನ್ನು ದೇವಿಗೆ ಹರಕೆಯಾಗಿ ಒಪ್ಪಿಸಬೇಕು. ಇಲ್ಲಿ ಲಾಭ ನಷ್ಟದ ಪ್ರಶ್ನೆ ಇಲ್ಲ.

ಪಿಲಿನಲಿಕೆಯ  ಸ್ವರೂಪ ಬದಲಾಗಿದೆ

ಕಾಲಚಕ್ರದಲ್ಲಿ ಪಿಲಿನಲಿಕೆಯ  ಭಾವ,  ಲಯ, ಸ್ವರೂಪಗಳೂ ಬದಲಾಗಿವೆ. ಹುಲಿನೃತ್ಯ ಕೇವಲ ನೃತ್ಯವಲ್ಲ.  ಅದು ಬಲಾಢ್ಯತೆಯ ಪ್ರದರ್ಶನ. ಇಲ್ಲಿ ಕುಣಿತಗಾರರಿಗೆ ದೈಹಿಕ ಶ್ರಮವೇ ಪ್ರಧಾನ. ಹಾಗಾಗಿ ನೃತ್ಯದಲ್ಲಿ ಮೈನವಿರೇಳಿಸುವಂತಹ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ. ಒಂದು, ಮೂರು, ಐದು ಪೌಲದಲ್ಲಿ ಗಿರಕಿ ಹೊಡೆಯುವುದು, ತೇಲ್ ಬಗ್ಗುವುದು, ಚಕ್ರದಂಡದ ಮೂಲಕ ಜನರ ಮನರಂಜಿಸುವುದು, ನೆಲದ ಮೇಲೆ ಹಣದ ನೋಟು ಇಟ್ಟು ಹಿಂಬದಿಯಿಂದ ಬಾಗಿಸಿ ಬಾಯಲ್ಲಿ ಕಚ್ಚಿ ತೆಗೆಯುವುದು ಮುಂತಾದ ಕಸರತ್ತುಗಳೂ ಪ್ರದರ್ಶನಗೊಳ್ಳುತ್ತವೆ. ವಿಶಿಷ್ಟ ಪ್ರಯೋಗಗಳಲ್ಲಿ ಕುರಿ ಹೊಡೆಯುವುದು, ಎಂದರೆ ಕುರಿಯನ್ನು ಬಾಯಿಯಲ್ಲಿ ಕಚ್ಚಿ  ತನ್ನ ಹಿಂದಕ್ಕೆ ಎಸೆಯುವುದೂ ಇತ್ತು. ಅ ಕುರಿ  ಕುಣಿದವರಿಗೆ ಸಲ್ಲುತ್ತದೆ. ಪ್ರಾಣಿ ಹಿಂಸೆಯನ್ನು ನಿಷೇಧಿಸುವ ಹೆಸರಿನಲ್ಲಿ ಈಗ ಅಕ್ಕಿಮುಡಿಯನ್ನು ಬಾಯಲ್ಲಿ ಕಚ್ಚಿ ತಮ್ಮ ಬೆನ್ನ ಹಿಂದೆ ಎಸೆಯುತ್ತಾರೆ. ಬೆನ್ನು, ಸೊಂಟ, ಕತ್ತು ಹೆಚ್ಚು ಶ್ರಮ ಬಯಸುತ್ತ ಕುಣಿತವು ನೈಪುಣ್ಯ ಮತ್ತು ಜಾಣ್ಮೆಯನ್ನೂ ನಿರೀಕ್ಷಿಸುತ್ತದೆ. ಒಟ್ಟಾರೆ ಪಿಲಿನಲಿಕೆಯಲ್ಲಿ ಅಬ್ಬರ ಸಂಭ್ರಮಗಳಿಂದ ಬಣ್ಣ ಬಣ್ಣದ ಹುಲಿವೇಷದ ನೃತ್ಯ ಪ್ರದರ್ಶನ ಗೊಳ್ಳುತ್ತದೆ. ಆರ್ಥಿಕವಾಗಿ ಒಂದಿಷ್ಟು ಬಂಡವಾಳವನ್ನು ಇದು ಬಯಸುತ್ತದೆ. ತಾಸೆಯ ಪೆಟ್ಟಿಗೆ ಮೈಮರೆಯುವ, ಕಿವಿಯಿಂದ ಆಲಿಸಿ ಕಣ್ಣ ನೋಟದ ಕುತೂಹಲದಿಂದ ಗಮನಿಸುವ ತುಳುವರು ಹುಲಿಕುಣಿತವನ್ನು ಪೋಷಿಸುವವರೂ ಹೌದು.

ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿ

ಇಲ್ಲಿ ಹೊಸ ಹೊಸ ಪ್ರಯೋಗಗಳು ಜಾರಿಗೊಳ್ಳುತ್ತಿವೆ. ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿಯಲ್ಲಿ ಪಿಲಿನಲಿಕೆ ಸಾಗುತ್ತದೆ. ಇಂದು ಸಾಂಪ್ರದಾಯಿಕ ತಾಸೆಯ ಪೆಟ್ಟಿಗಿಂತ ಹಿಂದಿ ಸಿನಿಮಾದ ಹಾಡುಗಳಿಗೂ ಹುಲಿಗಳು ಕುಣಿಯುತ್ತವೆ. ಹಾಕುವ ಬಣ್ಣಗಾರಿಕೆಯಲ್ಲೂ ಹೊಸ ಪ್ರಯೋಗಗಳಾಗಿವೆ. ಹಿಂದೆ ತಾಯಿ ಹುಲಿ ಆಕರ್ಷಣೆಯ ಕೇಂದ್ರವಾದರೆ ಇಂದು ಮರಿ ಹುಲಿಗಳಿಗೆ ವಿಶೇಷ ಆಕರ್ಷಣೆ ಇದೆ, ಸ್ಪರ್ಧೆ ಇದೆ. ಸ್ಪರ್ಧೆಯಲ್ಲಿ ಮರಿ ಹುಲಿಯ ಹೆಜ್ಜೆಯೂ ಮುಖ್ಯವಾಗಿದೆ.

ಹುಲಿವೇಷದ ಬಣ್ಣಗಾರಿಕೆ

ಇಲ್ಲಿ ಕುಣಿತದಷ್ಟೇ ಬಣ್ಣಗಾರಿಕೆ ವಿಶಿಷ್ಟವಾದುದು. ವೆಲ್ವೆಟ್‌ ನಿಂದ ಮಾಡಿದ ಕಡುಬಣ್ಣದ ಚಲ್ಲಣವೊಂದು ಬಿಟ್ಟು ಉಳಿದಂತೆ ಮೈಗೆಲ್ಲಾ ಹಳದಿ, ಕಪ್ಪು, ಬಿಳಿ, ಬಣ್ಣ ಬಳಿದು ಬಾಲ ಕಟ್ಟಿ, ಹುಲಿಯ ಮುಖವಾಡ ಧರಿಸಿಕೊಂಡು ತಂಡವಾಗಿ ಬಂದು ಊರ ಮನೆಗಳ ಮುಂದೆ ಕುಣಿಯುತ್ತಾರೆ. ಕುಣಿತ ಮುಗಿಯೋ ಹೊತ್ತಿಗೆ ಇಂತಿಷ್ಟು ಹಣ ನೀಡುವುದು ವಾಡಿಕೆ. ಹುಲಿ ವೇಷದಲ್ಲೂ ಪಟ್ಟೆಪಿಲಿ, ಚಿಟ್ಟೆಪಿಲಿ, ಬಂಗಾಲಿ ಪಿಲಿ, ಕರಿಪಿಲಿಗಳೆಂಬ ಭಿನ್ನ ರೀತಿಯ ಬಣ್ಣಗಾರಿಕೆಯಿದೆ. ಕೆಲವೊಮ್ಮೆ ಹಸಿರು ಬಣ್ಣದ ಹುಲಿಗಳೂ ಇರುತ್ತವೆ. ಇಲ್ಲಿ ವೇಷಧಾರಿಯಲ್ಲಿ ನೈಜತೆ ತುಂಬುವವರು ಕಲಾವಿದರು. ತಮ್ಮ ಕುಂಚಗಳಿಂದ ಹುಲಿವೇಷ ಹಾಕುವವರಿಗೆ ವೈವಿಧ್ಯಮಯ ಬಣ್ಣ ಬಳಿದು ಕಾಡಿನ ಹುಲಿಯನ್ನು ಊರಿಗೆ ತಂದು ಬಿಡುವ ಪ್ರತಿಭಾವಂತರಿವರು.

ವೇಷಕ್ಕೆ ನಿಲ್ಲುವುದೆಂದರೆ..

ಹುಲಿವೇಷದ ವೇಷಕ್ಕೆ ನಿಲ್ಲುವುದೆಂದರೆ ನಿಲ್ಲುವುದೇ. ಮೈಯ ಕೈಕಾಲಿನ ರೋಮಗಳನ್ನು ತೆಗೆದು ಪೈಂಟ್ ಹಚ್ಚಲು ಆರಂಭಿಸಿದಾಗ ಮೈಯ್ಯೆಲ್ಲಾ ಉರಿಯ ಅನುಭವ. ಹಿಂದೆಲ್ಲಾ ಅವರು  ರಚ್ಚೇವಿನ (ಕೆಸುವಿನ ಎಲೆ) ಅಗಲ ಎಲೆಯಲ್ಲಿ ಅಥವಾ ಬಾಳೆ ಎಲೆಯ ಮೇಲೆ ಮಲಗುತ್ತಿದ್ದರು. ಈಗ ಹಾಕುವ ಬಣ್ಣದ ಗುಣಮಟ್ಟದಲ್ಲಿ ವ್ಯತ್ಯಾಸ ಬಂದಿದೆ. ಒಂದು ದಿನಕ್ಕೆ ಬಣ್ಣ ಹಚ್ಚಿದವರೂ ಬಣ್ಣ ತೆಗೆಯುವುದು ಕಷ್ಟವೇ. ಬಣ್ಣ ತೆಗೆಯಲು ‘ನೆಗರಗುಂಡಿ’ ಯಲ್ಲಿ ಇಳಿದು ಚಿಮಿಣಿ ಎಣ್ಣೆ ಹಚ್ಚಿ ಮರಳನ್ನು ಹಾಕಿ ತೆಂಗಿನ ನಾರುವಿನಿಂದ ತಿಕ್ಕಿ ತೆಗೆಯುವುದು ಒಂದು ದೊಡ್ಡ ಕಾಯಕವೇ ಆಗಿತ್ತು ಎನ್ನುವುದು ಕಟೀಲಿನಲ್ಲಿ ವೇಷ ಹಾಕುತ್ತಿದ್ದ ಸಂಜೀವಣ್ಣನ ಅನುಭವದ ಮಾತು.  ಆಗ ಹುಲಿ ವೇಷ ಹಾಕುತ್ತಿದ್ದವರಲ್ಲಿ ಊರಿನ ಗುತ್ತಿನ ಮನೆಯವರೂ ಪಾಲು ಪಡೆಯುತ್ತಿದ್ದರು. ದಿವಂಗತ ರಘುರಾಮ ಶೆಟ್ಟರು ಅಂತಹ ಗುತ್ತಿನ ಮನೆಯ ದೊಡ್ಡ ಹುಲಿಯೇ ಆಗಿದ್ದರು.  ದೇಹದ ಗಾತ್ರ, ಶಕ್ತಿ ಸಾಮರ್ಥ್ಯಗಳಿಂದ ಹುಲಿಯು ಪಟ್ಟೆ ಪಿಲಿಯೋ ಮರಿ ಪಿಲಿಯೋ ಎಂದು ತಿಳಿಯುತ್ತಿತ್ತು. ಹಿಂದೆ ಮನೆ ಮನೆಗೆ ತೆರಳುತ್ತಿರುವ ಹುಲಿವೇಷಗಳ ಸಂಖ್ಯೆ ನಿಯಮಿತವಾಗಿ ಇತ್ತು. ತಾಯಿ ಮಕ್ಕಳ ಕುಟುಂಬವೆಂಬಂತೆ ತಾಯಿ ಹುಲಿ ಮರಿ ಹುಲಿಗಳನ್ನು ತನ್ನ ಮಡಿಲೊಳಗೆ ಇರಿಸಿ ಹಾಲೂಡಿಸುವ, ಪೋಷಿಸುವ ನೃತ್ಯವನ್ನು ಹುಲಿಯ ಹೆಜ್ಜೆಯ ಹಿನ್ನೆಲೆಯಲ್ಲಿ ವಿವರಿಸಲಾಗುತ್ತಿತ್ತು. ಬಡಿಯುವ ತಾಸೆಯ ಪೆಟ್ಟಿನ ಲಯಕ್ಕೆ ಅನುಗುಣವಾಗಿ ನಿಧಾನ ಮತ್ತು ವೇಗವಾಗಿ ಹೆಜ್ಜೆ ಹಾಕಲಾಗುತ್ತದೆ. ಅಂದು ಒಂದು ತಂಡದಲ್ಲಿ ಹತ್ತಿಪ್ಪತ್ತು ಹುಲಿಗಳು ಕಾಲ್ನಡಿಗೆಯಲ್ಲಿ ಊರೂರು ಸುತ್ತುತ್ತಿದ್ದ ಹುಲಿಗಳು ಇಂದಿಲ್ಲ. ಕುಣಿಯತ್ತಲೇ ಸಾಗುವಾಗ ಇಳಿಸಂಜೆಗೆ ಬಳಲಿ ಬಸವಳಿದು ಊರಿನ ದೇವಸ್ಥಾನದ, ದೈವಸ್ಥಾನದ ಅಂಗಣಗಳಲ್ಲಿ  ರಾತ್ರಿ ಕಳೆಯುತ್ತಿದ್ದರು. ವೃತ ನಿಷ್ಠರಾಗಿ ಬಾಳುತ್ತಿದ್ದ  ಹಿರಿಯರು ತಾವು ಹಾಕುವ ವೇಷ ದೇವಿಯ ಸೇವೆ ಎಂದೇ ಭಾವಿಸುತ್ತಿದ್ದರು.

ಕೊರೋನೋತ್ತರ ಕಾಲದಲ್ಲಿ ಪಿಲಿ ನಲಿಕೆ

ಪಿಲಿ ನಲಿಕೆಯು ಕೊರೋನೋತ್ತರ ಕಾಲದಲ್ಲಿ ಬಹಳ ವಿಜೃಂಭಣೆಯಿಂದ ಸಾಗುತ್ತಿದೆ. ಪಿಲಿಪರ್ಬ (ಹುಲಿ ಹಬ್ಬ), ಪಿಲಿನಲಿಕೆ( ಹುಲಿ ಕುಣಿತ)ದ ಗೊಬ್ಬು (ಆಟ) ಸ್ಪರ್ಧೆಗಳು ಹೆಚ್ಚುತ್ತಿವೆ. ಉಳ್ಳವರ ಮನೆಯಂಗಳದಲ್ಲಿ ಬಲಾಢ್ಯತೆಯಿಂದ ಕುಣಿಯುವ ಹುಲಿಗಳೊಂದಿಗೆ ಕೆಲವರ ಹೆಸರಿನಲ್ಲೂ ಹುಲಿಗಳು ಬೀದಿಗಿಳಿಯುತ್ತವೆ. ʼಇಂತವರ ಹುಲಿʼ ಎನ್ನುವ ಮೂಲಕ ಒಂದು ಪ್ರತಿಷ್ಠೆಯನ್ನು ಅವುಗಳು ಹೊಂದಿವೆ. ಅದರೊಂದಿಗೆ ಅದು ವಸೂಲಿಯ ಒತ್ತಾಯವಾಗಿಯೂ ಹೊರ ಹೊಮ್ಮಿದೆ. ಪಿಲಿನಲಿಕೆಯ ಸಂಗ್ರಹದಿಂದ ಅಶಕ್ತರಿಗೆ ಸಹಾಯ ಹಸ್ತ ನೀಡುತ್ತೇವೆ ಎನ್ನುವವರ ಸಂಖ್ಯೆಯೂ ಹೆಚ್ಚಿದೆ.

ಹೆಣ್ಣು ಹುಲಿಗಳು!

ಹುಲಿ ವೇಷ ಹಾಕಿ ಕುಣಿಯುವ ಹೆಣ್ಣು ಮಕ್ಕಳ ಸಂಖ್ಯೆಯೂ ಹೆಚ್ಚಿದೆ. ಹುಲಿಯಂತೆ ಕುಣಿಯಲು ಕೈ ಮತ್ತು ಕಾಲಿನ ಚಲನೆ ವೇಗವಾಗಿ ಸಾಗಬೇಕಾದುದು ಮತ್ತು ಕಾಲನ್ನು ಎತ್ತಿ ಇಡುವ ಹೆಜ್ಜೆಯ ಕುಣಿತಗಳನ್ನು ಹೆಣ್ಣು ಮಕ್ಕಳು ಕುಣಿಯುವ ಮೂಲಕ ತಮ್ಮ ಅನನ್ಯತೆಯನ್ನು ಮೆರೆದಿದ್ದಾರೆ. ಗಂಡುಮಕ್ಕಳು ಬರಿಮೈಗೆ ಬಣ್ಣ ಬಳಿದರೆ ಹೆಣ್ಣು ಮಕ್ಕಳು ಮೈತುಂಬಾ ಬಟ್ಟೆ ತೊಟ್ಟು ತೊಡುವ ಮುಖವಾಡಗಳಿಂದಲೇ ಹುಲಿಯ ವ್ಯಗ್ರತೆಯನ್ನು ಆವಿರ್ಭವಿಸುತ್ತಾರೆ.

ಪೂರ್ವ ತಯಾರಿ

ಮಾರ್ನೆಮಿ(ನವರಾತ್ರಿ) ಬರುವ ಪೂರ್ವದಲ್ಲಿ ಪೂರ್ವತಯಾರಿ ಮತ್ತು ಸಿದ್ಧತೆಯ ತಾಸೆಯ ಪೆಟ್ಟುಗಳು ಹುಲಿವೇಷದ ಮುನ್ನುಡಿಗಳು. ಗುಡ್ಡದ ತುದಿಯಲ್ಲೋ, ಊರಾಚೆಗಿನ ಸ್ಥಳಗಳಲ್ಲೋ ಹಿರಿಯರು ಕಿರಿಯರಿಗೆ ಪಿಲಿನಲಿಕೆಯ ಹೆಜ್ಜೆಗಳನ್ನು ಕಲಿಸುತ್ತಾರೆ. ವಾದ್ಯ ಸಂಗೀತ, ಕುಣಿತದ ಹೆಜ್ಜೆ, ಬಣ್ಣದ ವಿನ್ಯಾಸ, ದೈಹಿಕ ಸಾಮರ್ಥ್ಯ ಮತ್ತು ಶ್ರಮದೊಂದಿಗೆ ಪರಸ್ಪರ ನಂಬಿಕೆ ವ್ಯವಹಾರ ಸಾಮಾಜೀಕರಣದಲ್ಲಿ ಪ್ರಮುಖ ಅಂಶಗಳಾಗಿವೆ. ಪಿಲಿ ನಲಿಕೆಯೂ ಒಂದು ಕಲಾ ಪ್ರಕಾರವಾಗಿದ್ದು ಇದಕ್ಕೆ ಮನ್ನಣೆ ಗೌರವಗಳು ಸಲ್ಲಬೇಕು. ಸಂಗೀತ, ಬಣ್ಣಗಾರಿಕೆ, ಕುಣಿತ ಮೂರೂ ಮೇಳೈಸಿದ ಪಿಲಿ ನಲಿಕೆ ಸಾಂಸ್ಕೃತಿಕ ಚಲನೆಯಲ್ಲಿ ಬದಲಾವಣೆಗಳನ್ನು ಪಡೆದುಕೊಂಡರೂ ದೇಶ ವಿದೇಶಗಳ ವೇದಿಕೆಗಳಲ್ಲಿ ಪ್ರದರ್ಶನಗೊಂಡು ತುಳುವರ ಕಲಾಪರಂಪರೆಯ ಒಂದು ಭಾಗವಾಗಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಡಾ. ಜ್ಯೋತಿ ಚೇಳೈರು
ಉಪನ್ಯಾಸಕಿ, ಕವಯಿತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಗಿರುವ ಇವರು ಕನ್ನಡ ಮತ್ತು ತುಳು ಎರಡೂ ಭಾಷೆಯ ಸಾಹಿತ್ಯ ಕೃಷಿಯಲ್ಲಿ  ತೊಡಗಿ ಕೊಂಡವರು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ನವರಸಗಳಲ್ಲಿ ನವದುರ್ಗೆಯರು- ಶೈಲಪುತ್ರಿ
ನವರಾತ್ರಿ ಪ್ರಯುಕ್ತ ಇದೊಂದು ವಿಶೇಷ ಸರಣಿಯನ್ನು Peepal / ಪೀಪಲ್ ಹೊರತಂದಿದೆ. ನವರಾತ್ರಿಯ ನವದುರ್ಗೆಯರನ್ನು ನವರಸಗಳಲ್ಲಿ ವರ್ಣಿಸುವ ಕೆಲಸವನ್ನು ಕವಯತ್ರಿ ಶೋಭಾ ಗಂಗಾಧರ್‌ ಮೃಗ ನಯನಿ ಅವರು ಮಾಡಿದ್ದಾರೆ. ಇದೊಂದು ವಿನೂತನ ಪ್ರಯತ್ನ. ಈ ವಿಡಿಯೋದಲ್ಲಿ ನವದುರ್ಗೆಯರಲ್ಲಿ ಮೊದನೆಯವಳಾದ ಶೈಲಪುತ್ರಿಯ ವಿವರಣೆಯಿದೆ. https://youtu.be/1T3a6WmL34w

ಇದೇ ವಿಡಿಯೋವನ್ನು ಪೀಪಲ್‌ ಫೆಸ್ಬುಕ್‌ ಪೇಜಿನಲ್ಲಿ ನೋಡಲು- https://www.facebook.com/peepaltvkannada/videos/778665506774796

ನಾಡಹಬ್ಬದ ಸಂಭ್ರಮದಲ್ಲಿ ಮೈಸೂರು
ಮೈಸೂರು: ಸಾಂಸ್ಕೃತಿಕ ನಗರ ಮೈಸೂರು ಅಲ್ಲದೆ, ನಾಡಿನಾದ್ಯಾಂತ ದಸರಾ ಹಬ್ಬದ ಸಂಭ್ರಮವನ್ನು ಕಳೆಗಟ್ಟಿದೆ. ವಿವಿಧ ಜಾನಪದ ಕಲಾತಂಡಗಳು ಉತ್ಸವದ ಮೆರುಗು ಹೆಚ್ಚಿಸಲಿವೆ.

ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ದಸರಾ ಉತ್ಸವದ ಪ್ರಮುಖ ಆಕರ್ಷಣೆ ಎಂದರೆ ಅದು ವಿಶ್ವವಿಕ್ಯಾತ ಜಂಬೂಸವಾರಿ ಮೆರವಣಿಗೆ.

ಅ.5ರಂದು ನಡೆಯಲಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯ ಸವಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ವಿಗ್ರಹಕ್ಕೆ ನಮಿಸಲು, ಮೆರವಣಿಗೆ ವೈಭವ ಕಣ್ಣುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ.

ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.36ರಿಂದ 2.50ರೊಳಗೆ ನಂದಿಧ್ವಜ ಪೂಜೆ ನಡೆಯಲಿದೆ. ಸಂಜೆ 5.07ರಿಂದ 5.18ರೊಳಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಂಬೂಸವಾರಿಯನ್ನು ಉದ್ಘಾಟಿಸಲಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ಬಾಬಾಬುಡನ್ ಗಿರಿಯಲ್ಲಿ ಅರಳಿ ನಿಂತ ಗಿರಿಕನ್ಯೆ

ಮಲೆನಾಡಿನ ಬೆಟ್ಟ ಸಾಲಿನಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಅರಳುವ ನೀಲಿ ಕುರಿಂಜೆ ಅರಳಿದೆ. ತಂಡೋಪತಂಡವಾಗಿ ಪ್ರವಾಸಿಗರು ಇದನ್ನು ನೋಡಲು ಹೋಗಿ ಬರುತ್ತಿದ್ದಾರೆ. ನೀಲಿ ಕುರಿಂಜೆ ನೋಡಿದಾಗ ಆಗುವ ಅನುಭವವಾದರೂ ಎಂತಹುದು? ಹೂವುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ದಾಕ್ಷಾಯಿಣಿ ದಾಚಿ ಅವರು ತಮ್ಮ ಹೂವನುಭವವನ್ನು ಪೀಪಲ್‌ ಮೀಡಿಯಾ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

ಪೀಪಲ್ ಮೀಡಿಯಾ ವಿಶೇಷ
ದಾಕ್ಷಾಯಿಣಿ ದಾಚಿ

https://peepalmedia.com/neelikurinje-flower-in-bababudangiri/

ಬಾಬಾಬುಡನ್‌ ಗಿರಿಯಲ್ಲಿ ಅರಳಿ ನಿಂತ ಗಿರಿಕನ್ಯೆ

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಮೈಸೂರು ಮಹಿಷಾಸುರನಿಗೆ ಬಂಗಾಳದಲ್ಲಿ ದೈವಪೂಜೆ
ಪಶ್ಚಿಮ ಬಂಗಾಳ, ದಸರೆಯನ್ನು ವಿಶೇಷವಾಗಿ ಆಚರಿಸಲ್ಪಡುವ ಒಂದು ರಾಜ್ಯ. ಪ್ರತಿ ವರ್ಷ ಇಡೀ ಪಶ್ಚಿಮ ಬಂಗಾಳ ರಾಜ್ಯವು, ವಿಶೇಷವಾಗಿ ಕಲ್ಕತ್ತಾ, ಮಹಿಷಾಸುರ ಸಂಹಾರಿಣಿ ದುರ್ಗೆಯ ಆರಾಧನೆಗೆ ಹೆಸರುವಾಸಿ. ಇಡೀ ರಾಜ್ಯಕ್ಕೆ ರಾಜ್ಯವೇ ದಸರಾ ಆಚರಣೆ ಮೂಲಕ ದುರ್ಗೆಯ ಮೂರ್ತಿಗಳನ್ನು ಅಲಂಕರಿಸಿ, ಬೀದಿ ಬೀದಿಗಳನ್ನು ದೀಪಗಳನ್ನು ಬೆಳಗಿಸಿ ಆಚರಿಸುತ್ತಿರುವಾಗ, ಪೂರ್ವ ಭಾರತದಲ್ಲಿನ ಬುಡಕಟ್ಟು ಸಮುದಾಯವು ತಮ್ಮ ಮೂಲಪುರುಷ ರಾಜನ ಮರಣವನ್ನು ನೆನೆದು ಶೋಕಿಸುತ್ತಿರುತ್ತದೆ ಹಾಗೂ ಈ ಆಚರಣೆ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ.

ಪಶ್ಚಿಮ ಬಂಗಾಳದಲ್ಲಿ ನಗರ ಮತ್ತು ಗ್ರಾಮೀಣ ಭಾಗದ ಎಲ್ಲರೂ ದುರ್ಗೆಯನ್ನು ಆರಾಧಿಸಿ, ದುರ್ಗೆ ಮತ್ತು ಅವಳ ಮಕ್ಕಳನ್ನು ಮನೆಗೆ ಸ್ವಾಗತಿಸುವ ಮೂಲಕ ವೈಭವದಿಂದ ಆಚರಿಸುತ್ತಾರೆ. ಬಂಗಾಳದಲ್ಲಿ ಹತ್ತು ದಿನಗಳ ವಾರ್ಷಿಕ ಹಬ್ಬವಾದ ದುರ್ಗಾ ಪೂಜೆಯ ಸಮಯದಲ್ಲಿ ಅಲ್ಲಿನ ಜನ ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಆನಂದಿಸಿ, ನಗರವು ದೈವಿಕ ಸ್ತ್ರೀತ್ವವನ್ನು ಆಚರಿಸಲು ಒಟ್ಟಿಗೆ ಸೇರುತ್ತಾರೆ.

ಆದರೆ ಅದೇ ಸಮಯದಲ್ಲಿ, ತಮ್ಮನ್ನು ಅಸುರರು ಮತ್ತು ಈ ನೆಲದ ಮೂಲನಿವಾಸಿಗಳು ಎಂದು ಗುರುತಿಸಿಕೊಳ್ಳುವ ಬುಡಕಟ್ಟು ಸಮುದಾಯವು, ‘ಆರ್ಯ ದೇವರುಗಳಿಂದ ನಿರ್ದಯವಾಗಿ ಕೊಲ್ಲಲ್ಪಟ್ಟ’ ತಮ್ಮ ಬುಡಕಟ್ಟು ರಾಜನ ಹುತಾತ್ಮ ಆತ್ಮಕ್ಕೆ ಶೋಕಿಸಲು ಸ್ವತಃ ತಮ್ಮನ್ನು ತಾವು ಗೃಹಬಂಧನಕ್ಕೆ ಒಳಪಡುತ್ತಾರೆ. ಮಹಾಲಯ ಅಮಾವಾಸ್ಯೆ ಕೂಡ ಈ ನೆಲದ ಮೂಲಪುರುಷರನ್ನು ನೆನೆಯುವ ಸಾಂಕೇತಿಕ ವಿಶೇಷತೆಯನ್ನು ಪಡೆದ ಹಿನ್ನೆಲೆಯಲ್ಲಿ ಆ ನಂತರದ ದಸರೆಯ 10 ದಿನವನ್ನೂ ಈ ಜನರು ಶೋಕದಿಂದಲೇ ಕಳೆಯುತ್ತಾರೆ ಎಂಬುದನ್ನು ಎಲ್ಲರೂ ನಂಬಲೇಬೇಕು.

ಭಾರತೀಯ ಪೌರಾಣಿಕ ಹಿನ್ನೆಲೆಲ್ಲಿ ಸುರ ಮತ್ತು ಅಸುರರ ಕಾಳಗ ಅಥವಾ ಸೈದ್ಧಾಂತಿಕ ಸಂಘರ್ಷವನ್ನು ನೋಡಿದರೆ ಸುರರೆಂದು ಕರೆಸಿಕೊಳ್ಳುವ ದೇವತೆಗಳು ಇಲ್ಲಿಯವರೆಗೆ ಯಾವ ಅಸುರ ಅಥವಾ ರಾಕ್ಷಸರನ್ನು ನೇರವಾಗಿ ಮಣಿಸಿದ ಉದಾಹರಣೆ ಸಿಗಲಾರದು. ಹಾಗಾಗಿ ಪುರಾಣದ ಆವೃತ್ತಿಯ ಪ್ರಕಾರ ಬುಡಕಟ್ಟು ರಾಜ ಮಹಿಷಾಸುರನು ದುರ್ಗೆಯಿಂದ ವಂಚನೆಗೊಳಗಾಗುತ್ತಾನೆ. ಆನಂತರ ದೇವತೆಗಳ ಗುಂಪು ಮಹಿಷಾಸುರನನ್ನು ವಂಚನೆಯಿಂದ ಸಾಯಿಸಲ್ಪಡುತ್ತದೆ. ಹಾಗಾಗಿ ಈ ಭಾಗದಲ್ಲಿ ಅಸುರರೆಂದು ಗುರುತಿಸಿಕೊಂಡಿರುವ ಸಮುದಾಯವು ಮಹಿಷಾಸುರನ ಮರಣದ ಶೋಕಕ್ಕಾಗಿ ಹಿಂದೂ ಕ್ಯಾಲೆಂಡರಿನ ಅಶ್ವಿನಿ ನಕ್ಷತ್ರದ ಹುಣ್ಣಿಮೆಯ ರಾತ್ರಿಯಲ್ಲಿ ಒಟ್ಟುಗೂಡುತ್ತದೆ.

ಇಲ್ಲಿ ಅಸುರ ಪೂಜೆಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಅದರಲ್ಲಿ ಫಾಗುನ್ ಅಂದರೆ ಮಾರ್ಚ್ ತಿಂಗಳಲ್ಲಿ ಒಂದು ಬಾರಿ ಮತ್ತು ಮತ್ತೊಮ್ಮೆ ಅಶ್ವಿನಿ ತಿಂಗಳಲ್ಲಿ. ಇದು ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಬರುತ್ತದೆ. ಇದು ದುರ್ಗಾ ಪೂಜೆಯ ಹತ್ತನೇ ದಿನ ಅಂದರೆ ದಸರಾ ಆಚರಣೆಯ ಕೊನೆಯ ದಿನ ವಿಜಯದಶಮಿಯಂದು ಆಚರಿಸಲ್ಪಡುತ್ತದೆ. ಇಲ್ಲಿ ಅಸುರ ಪೂಜೆಯ ಸಂಪ್ರದಾಯವು ಬಂಗಾಳದ ಹಲವಾರು ಇತರ ಬುಡಕಟ್ಟು ಸಮುದಾಯ ಇರುವ ಹಳ್ಳಿಗಳಿಗೆ ಹರಡಿದೆ. ಅವರು ದಸರೆಯನ್ನು ‘ಹುದುರ್ ದುರ್ಗ’ ಎಂಬ ಹೆಸರಿನಿಂದಲೂ ಆಚರಿಸುತ್ತಾರೆ.

ಬುಡಕಟ್ಟು ಮತ್ತು ದಲಿತ ಸಮುದಾಯಗಳಾದ ಬಗ್ದಿ, ಸಂತಾಲಿಗಳು, ಮುಂಡಾಗಳು ಮತ್ತು ನಾಮಸೂದ್ರರು ಸಹ ಮಹಿಷಾಸುರನ ಬಲಿದಾನದ ಶೋಕವನ್ನು ಆಚರಿಸಲು ಭಾಗವಹಿಸುತ್ತಾರೆ. “ಒಂಬತ್ತು ದಿನಗಳ ದುರ್ಗಾ ಪೂಜೆಯ ಸಮಯದಲ್ಲಿ, ನಾವು ಹಗಲಿನಲ್ಲಿ ಹೆಚ್ಚು ಕೆಲಸ ಮಾಡೋದಿಲ್ಲ. ನಾವು ಪ್ರಾರ್ಥನೆ ಸಲ್ಲಿಸಲು ರಾತ್ರಿಯಲ್ಲಿ ಮಾತ್ರ ಹೊರಬರುತ್ತೇವೆ ಮತ್ತು ಒಂಬತ್ತನೇ ದಿನದ ಕೊನೆಯಲ್ಲಿ, ನಮ್ಮ ಉಳಿವಿಗಾಗಿ ನಮ್ಮ ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸುತ್ತೇವೆ. ಪುರುಷರು ಪೂಜೆಗಳನ್ನು ಸಲ್ಲಿಸುತ್ತಾರೆ. ಅದರ ನಂತರ ಮಹಿಳೆಯರು ಈ ದಿನದ ಆಚರಣೆ ವೀಕ್ಷಿಸಲು ಸೇರುತ್ತಾರೆ” ಎಂದು ಪುರುಲಿಯಾದಲ್ಲಿನ ವಿದ್ಯಾರ್ಥಿ ಶ್ಯಾಮ ಅಸುರ್ ಹೇಳುತ್ತಾರೆ.

ಸ್ಮಾರಕ ಕಾರ್ಯಕ್ರಮಗಳಲ್ಲಿ ಹುದುರ್ ದುರ್ಗದ ಪ್ರತಿಮೆಗಳನ್ನು ಸ್ಥಾಪಿಸಿ, ಈ ಸಮುದಾಯಗಳಿಗೆ ಮಾಡಿದ ಐತಿಹಾಸಿಕ ಅನ್ಯಾಯವನ್ನು ಖಂಡಿಸುವ ಹಾಡುಗಳು, ಸಾಂಪ್ರದಾಯಿಕ ನೃತ್ಯಗಳು ಮತ್ತು ಕರಕುಶಲಗಳನ್ನು ಸಾಮಾನ್ಯವಾಗಿ ಸ್ಥಳದಲ್ಲಿ ಪ್ರದರ್ಶಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮೂಲನಿವಾಸಿ ರಾಜನಿಗೆ ಗೌರವ ಸಲ್ಲಿಸಲು ಬಹಳ ದೂರ ಪ್ರಯಾಣಿಸುತ್ತಾರೆ ಮತ್ತು ಮುಖ್ಯವಾಹಿನಿಯಿಂದ ಅಂತರ್ಗತವಾದ ತಮ್ಮ ಇತಿಹಾಸವನ್ನು ಎಲ್ಲೆಡೆ ಪಸರಿಸಲು ಶ್ರಮಿಸುತ್ತಾರೆ.

ಕಳೆದ ಕೆಲವು ವರ್ಷಗಳಿಂದ, ಅಸುರ ಪೂಜೆಯು ದಲಿತ-ಬಹುಜನ ಪ್ರವಚನದ ಅವಿಭಾಜ್ಯ ಅಂಗವಾಗಿದೆ. ಅಲ್ಲಿ ದಲಿತ ಮತ್ತು ಬುಡಕಟ್ಟು ಆದಿವಾಸಿ ಸಮುದಾಯದ ಜನರು ದುರ್ಗಾ ಪೂಜೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಮತ್ತು ಅವರ ನಿರ್ಲಕ್ಷಿಸಲ್ಪಟ್ಟ ಗುರುತುಗಳನ್ನು ಮರಳಿ ಪಡೆಯಲು ಇದು ಒಂದು ಮಾರ್ಗವಾಗಿದೆ ಎಂದು ಹೇಳುತ್ತಾರೆ. 2016 ರಲ್ಲಿ, ಸಾಮಾಜಿಕ ಕಾರ್ಯಕರ್ತೆ ಸುಷ್ಮಾ ಅಸುರ್ ಎಂಬ ಹೆಣ್ಣು ಮಗಳು ಜಾರ್ಖಂಡ್‌ನ ಇತರ 10 ಜನರೊಂದಿಗೆ ತಮ್ಮ ಸಮುದಾಯಗಳ ಮೂಲದ ಬಗ್ಗೆ, ಇತಿಹಾಸದ ಹಿನ್ನೆಲೆ ಬಗ್ಗೆ ಜಾಗೃತಿ ಮೂಡಿಸಲು ಕೋಲ್ಕತ್ತಾದ ಬೀದಿಗಳಿಗೆ ಇಳಿದರು. “ನಾನು ಪಂಡಲ್‌ಗಳ (ದುರ್ಗೆ ಆರಾಧನೆಯ ಸ್ಥಳ) ಒಳಗೆ ಹೋಗುವುದಿಲ್ಲ. ಇದು ನಮಗೆ ಶೋಕದ ಸಮಯ. ಹಿಂದಿನ ದಿನಗಳಲ್ಲಿ, ನಾವು ಜಮೀನ್ದಾರರಿಗೆ ಅವರ ಪೂಜೆ ಸಿದ್ಧತೆಗಳಿಗೆ ಸಹಾಯ ಮಾಡುತ್ತಿದ್ದೆವು. ಆದರೆ ಆಚರಣೆಗಳ ಬಗ್ಗೆ ಅರಿವಿಗೆ ಬಂದ ನಂತರ ಅದರಿಂದ ಹೊರ ಬಂದಿದ್ದೇವೆ” ಎಂದು ಹೇಳುತ್ತಾರೆ.

2016 ರಲ್ಲಿ ದೆಹಲಿಯ JNU ನಲ್ಲಿ ನಡೆದ ವಿವಾದದ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸಂಸತ್ತಿನಲ್ಲಿ ನಡೆದ ಚರ್ಚೆಯಲ್ಲಿ ಈ ಆಚರಣೆ ಬಗ್ಗೆ ಪ್ರಸ್ತಾಪಿಸುತ್ತಾರೆ. ಆ ನಂತರದ ದಿನಗಳಿಂದ ಮಹಿಷಾಸುರರ ಹುತಾತ್ಮ ಆಚರಣೆಯ ದಿನವು ವ್ಯಾಪಕವಾಗಿ ಬೆಳಕಿಗೆ ಬಂದಿತು. ಸಾಂಪ್ರದಾಯಿಕವಾಗಿ, ದುರ್ಗಾ ಪೂಜೆ ಆಚರಣೆಗಳು ಸವರ್ಣೀಯರಿಗೆ ಸಂಬಂಧಿಸಿದ್ದಾಗಿದೆ. ಸ್ವಾತಂತ್ರ್ಯ ಪೂರ್ವ ಬಂಗಾಳದಲ್ಲಿ ದಸರಾ ಆಚರಣೆ ಜಮೀನ್ದಾರ ಕುಟುಂಬಗಳಿಗೆ ಹೆಚ್ಚಾಗಿ ಸೀಮಿತವಾಗಿತ್ತು.

18 ನೇ ಶತಮಾನದಲ್ಲಿ, 12 ಜನರು ಹೂಗ್ಲಿಯಲ್ಲಿ ಮೊದಲ ಬಾರಿಗೆ ಸಮುದಾಯ ಪೂಜೆಯನ್ನು (ಬರೋಯಾರಿ ಪೂಜೆ ಎಂದು ಕರೆಯಲಾಗುತ್ತದೆ) ಆಯೋಜಿಸುವ ಮೂಲಕ ಹಬ್ಬವನ್ನು ಸಾರ್ವಜನಿಕ ಆಚರಣೆಗೆ ತಂದರು. ಈ ಮೂಲಕ ದುರ್ಗಾ ಪೂಜೆಗೆ ತಿರುಗಿ ಇದಕ್ಕೊಂದು ಸಾಂಸ್ಕೃತಿಕ ಸಂಭ್ರಮ ಹುಟ್ಟಿಕೊಂಡಿತು. ಕೊಲ್ಕತ್ತಾದಲ್ಲಿ 2500-3000 ಸಮುದಾಯಗಳು ಈ ಪೂಜೆಯನ್ನು ಬಂಗಾಳಿಗರು ನಡೆಸಲಾಗುತ್ತಾರೆ. ಈಗಂತೂ ಈ ಆಚರಣೆ ಪ್ರತಿಷ್ಠೆಯ ಭಾಗವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಸಾಂಸ್ಕೃತಿಕ ವಿಜೃಂಭಣೆಯ ಆಯವ್ಯಯವು ಸ್ಪರ್ಧೆಯ ಮಟ್ಟಕ್ಕೆ ತಿರುಗಿ ಎಷ್ಟು ತೀವ್ರವಾಗಿದೆಯೆಂದರೆ, ಈ ವರ್ಷ ಬಂಗಾಳದ ಒಂದು ಪೂಜಾ ಸಮಿತಿಯು ಸುಮಾರು 1 ಕೋಟಿ ರೂಪಾಯಿ ಮೌಲ್ಯದ 50 ಕೆಜಿ ಚಿನ್ನದಿಂದ ಮಾಡಿದ ದುರ್ಗಾ ಮೂರ್ತಿಗೆ ಪೂಜೆ ಸಲ್ಲಿಸುತ್ತಿದೆ.

ಇನ್ನು ಕೋಲ್ಕತ್ತಾದಲ್ಲಿ ಮಹಿಷಾಸುರನ ಹುತಾತ್ಮತೆಯನ್ನು ಚರ್ಚಿಸಲು ಇದು ಸೂಕ್ತ ಸಮಯವಲ್ಲ ಎಂದು ಸಾಂಪ್ರದಾಯಿಕ ಬುದ್ಧಿವಂತಿಕೆಗಳು ಹೇಳಬಹುದು. ಆದರೆ ಅಸುರ ಸಮುದಾಯದ ಕಾರ್ಯಕರ್ತರು, ಮಹಿಷಾಸುರನ ಮೂಲನಿವಾಸಿ ಸಮುದಾಯದವರು ಎಂದು ಕರೆಯಲ್ಪಡುವ ಮಂದಿ ಇದನ್ನು ಬೇರೆ ರೀತಿಯಲ್ಲೇ ನಂಬಿದ್ದಾರೆ. “ನಾವು ನಮ್ಮ ಇತಿಹಾಸದ ಬಗ್ಗೆ ಜನರಿಗೆ ಹೇಳಬೇಕು. ನಾವು ಅವರಿಗೆ ಕಥೆಯ ಇನ್ನೊಂದು ಬದಿಯನ್ನು ಪರಿಚಯಿಸಬೇಕು. ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ನಮ್ಮ ಸಮುದಾಯ ಮತ್ತು ನಮ್ಮ ಮೂಲ ಪುರುಷರಿಗೆ ಆದ ಅನ್ಯಾಯವನ್ನು ಹೇಳಬೇಕು” ಎಂದು ಜಲ್ಪೈಗುರಿಯ ಅಸೂರ್ ಸಮುದಾಯದ ನಾಯಕ ಬರ್ಗಿ ಅಸುರ್ ಹೇಳುತ್ತಾರೆ.

ಕರ್ನಾಟಕದಲ್ಲೂ ಸಹ ಕಳೆದ ಎರಡು ವರ್ಷಗಳ ಹಿಂದೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ‘ಮಹಿಷ ದಸರಾ’ ವನ್ನು ಆಚರಿಸಿದ್ದನ್ನು ನೆನೆಯಬಹುದು. ದಲಿತ ಸಂಘಟನೆಗಳ ಒಕ್ಕೂಟಗಳು ಸೇರಿ ಮಹಿಷಾಸುರನನ್ನು ನೆನೆದು ದಸರಾ ಆಚರಣೆ ಮಾಡಿದ್ದರು. ಆದರೆ ಈ ಬಾರಿ ಸರ್ಕಾರದ ಕಡೆಯಿಂದಲೇ ‘ಮಹಿಷ ದಸರಾ’ ನಿಶೇಧಿಸಲ್ಪಟ್ಟಿದೆ.

ಮೈಸೂರು ದಸರಾ ಫಲ ಪುಷ್ಪ ಪ್ರದರ್ಶನ: ಪುನಿತ್‌ ರಾಜ್‌ ಕುಮಾರ್ ಪುತ್ಥಳಿ ವಿಶೇಷ
ಮೈಸೂರು: ಈ ಬಾರಿಯ ಮೈಸೂರು ದಸರಾದಲ್ಲಿ ಹೂವಿನಿಂದ ಅಲಂಕರಿಸಿದ ಪುನಿತ್‌ ರಾಜ್‌ ಕುಮಾರ್‌ ಅವರ ಪುತ್ಥಳಿಗಳೇ ಕೇಂದ್ರ ಬಿಂದು ವಾಗಿರಲಿದೆ.  ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮವನ್ನು ಏರ್ಪಡಿಸರಿರಲಿಲ್ಲದ ಕಾರಣದಿಂದ ಈ ವರ್ಷ ಅದ್ಧೂರಿಯಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಲು ಮೈಸೂರು ಜಿಲ್ಲಾಡಳಿತ ನಿರ್ಧರಿಸಿದೆ.

ಈ ಫಲ ಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ಅಲಂಕರಿಸಲಿರುವ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯೇ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇನ್ನು ವಿಶೇಷವಾಗಿ ಈ ಬಾರಿ ಗಾಜಿನ ಮನೆಯಲ್ಲಿ ರಾಷ್ಟ್ರಪತಿ ಭವನ, ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು ದಸರಾ ಕಾರ್ಯಕ್ರಮ ಉದ್ಘಾಟಿಸುತ್ತಿರುವ ಹಿನ್ನೆಲೆಯಲ್ಲಿ ಕುಪ್ಪಣ್ಣ ಉದ್ಯಾನದ ಒಳಭಾಗದ ಗಾಜಿನ ಮನೆ ಆವರಣದಲ್ಲಿ 20 ಅಡಿ ಎತ್ತರದ ರಾಷ್ಟ್ರಪತಿ ಭವನದ ಪ್ರಕೃತಿ ನಿರ್ಮಿಸಿ, ಕೆಂಪು, ಬಿಳಿ ಗುಲಾಬಿ, ಸೇವಂತಿಕೆ ಹೂವುಗಳಿಂದ ಅಲಂಕರಿಸಲಾಗುತ್ತಿರುವುದು ವಿಶೇಷ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅವರ ವಿವಿಧ ಭಂಗಿಯ ಸುಮಾರು ಐದು ಪುತ್ತಳಿಗಳನ್ನು ಸ್ಥಾಪಿಸಿ, ಅವುಗಳನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ. ತಮ್ಮ ನೆಚ್ಚಿನ ನಟನ ಪುತ್ಥಳಿ ಜೊತೆಗೆ ಚಿತ್ರ ತೆಗೆಸಿಕೊಳ್ಳಲು ಅನುಕೊಲವಾಗುವಂತೆ ಸೆಲ್ಸಿ ಪಾಯಿಂಟ್ ಕೂಡ ಸ್ಥಾಪಿಸಲಾಗುತ್ತದೆ. ಇದಲ್ಲದೇ, ವರನಟ ಡಾ. ರಾಜ್ ಕುಮಾರ್ ಅವರ ಗಾಜನೂರಿನ ಮನೆ ಚಾಮುಂಡಿ ಬೆಟ್ಟ, ನಂದಿವಿಗ್ರಹ ಕೂಡ ಇರಲಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಅವರು ಮಾಹಿತಿ ನೀಡಿದರು.

ರಾಷ್ಟ್ರಪತಿ ಜೊತೆ ಸೋಮಶೇಖರ್ ವೇದಿಕೆ ಹಂಚಿಕೊಳ್ಳುವುದಕ್ಕೆ ತಡೆ ಕೋರಿ ರಾಜ್ಯಪಾಲರಿಗೆ ಎಎಪಿ ಮನವಿ
ಕೋನದಾಸಪುರದ ವಸತಿ ಯೋಜನೆಯಲ್ಲಿ ಅಕ್ರಮ ಎಸಗಿದ ಕಳಂಕ ಹೊತ್ತಿರುವ ಸಚಿವ ಎಸ್.ಟಿ.ಸೋಮಶೇಖರ್‌ ರವರಿಗೆ ಮೈಸೂರಿನ ದಸರಾ ಉತ್ಸವದಲ್ಲಿ ರಾಷ್ಟ್ರಪತಿಯವರ ಜೊತೆ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಬಾರದು ಎಂದು ಕೋರಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್‌ ಅಧಿಕಾರಿ ಕೆ.ಮಥಾಯಿ ನೇತೃತ್ವದ ನಿಯೋಗವು ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.

ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಮಥಾಯಿ, “ಮೈಸೂರಿನ ದಸರಾ ಉತ್ಸವಕ್ಕೆ ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಬಹಳ ಮಹತ್ವವಿದೆ. ನಾಡಿಗೆ ಅಪಾರ ಕೊಡುಗೆ ನೀಡಿ ರಾಜರುಗಳು, ನಾಯಕರು ಹಾಗೂ ಗಣ್ಯ ವ್ಯಕ್ತಿಗಳು ದಸರಾದಲ್ಲಿ ಭಾಗವಹಿಸಿದ್ದಾರೆ. ಈ ವರ್ಷ ಕೂಡ ರಾಷ್ಟ್ರಪತಿ ಸೇರಿದಂತೆ ಅನೇಕ ಗಣ್ಯರು ದಸರಾ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಕೋನದಾಸಪುರದಲ್ಲಿ ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣ ಅಕ್ರಮಕ್ಕೆ ಸಂಬಂಧಿಸಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಅವರು ದಸರಾ ಉತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳಂಕ ತರಬಾರದು” ಎಂದು ಹೇಳಿದರು.

“ಕಳಂಕಿತ ಸಚಿವ ಎಸ್.ಟಿ.ಸೋಮಶೇಖರ್‌ ರವರು ದಸರಾ ಉತ್ಸವದಲ್ಲಿ ರಾಷ್ಟ್ರಪತಿಯವರ ಜೊತೆ ವೇದಿಕೆ ಹಂಚಿಕೊಳ್ಳುವುದನ್ನು ತಡೆಹಿಡಿಯಬೇಕೆಂದು ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ನಾಡಹಬ್ಬದ ಘನತೆ ಉಳಿಸಲು ಅವರು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂಬ ವಿಶ್ವಾಸವಿದೆ. ಭ್ರಷ್ಟ ಸಚಿವರು ಸರ್ಕಾರದ ಉನ್ನತ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ರಾಜ್ಯಪಾಲರು ಅವಕಾಶ ನೀಡದಿದ್ದರೆ, ಎಲ್ಲ ಭ್ರಷ್ಟ ಜನಪ್ರತಿನಿಧಿಗಳಿಗೂ ಇದೊಂದು ಎಚ್ಚರಿಕೆಯ ಗಂಟೆಯಾಗುತ್ತದೆ” ಎಂದು ಕೆ.ಮಥಾಯಿ ಹೇಳಿದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಸಂಘಟನ ಕಾರ್ಯದರ್ಶಿ ಸುರೇಶ್ ರಾಥೋಡ್ ಮಾತನಾಡುತ್ತಾ “ಕೋನದಾಸಪುರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ₹567 ಕೋಟಿ ವೆಚ್ಚದಲ್ಲಿ ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಕಚೇರಿಯಲ್ಲಿ ಸಾಕ್ಷಿ ಸಹಿತ ದೂರು ದಾಖಲಾಗಿದೆ. 29.5 ಕೋಟಿ ರೂಪಾಯಿ ಲಂಚ ಪಡೆದಿರುವ ಆರೋಪದಲ್ಲಿ ಎಸ್‌.ಟಿ. ಸೋಮಶೇಖರ್‌, ಬಿ.ಎಸ್‌.ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಸೇರಿದಂತೆ ಒಟ್ಟು ಒಂಬತ್ತು ಮಂದಿಯು ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇಂತಹ ಗಂಭೀರ ಆರೋಪ ಹೊತ್ತಿರುವ ಸಚಿವ ಸೋಮಶೇಖರ್‌ ರವರು ಸಚಿವ ಸ್ಥಾನದಲ್ಲಿ ಮುಂದುವರಿದಿರುವುದೇ ತಪ್ಪು. ಅದರಲ್ಲೂ ಅವರು ರಾಷ್ಟ್ರಪತಿಯವರ ಜೊತೆ ವೇದಿಕೆ ಹಂಚುಕೊಳ್ಳುವುದು ಇನ್ನೂ ದೊಡ್ಡ ತಪ್ಪು” ಎಂದು ಹೇಳಿದರು.

ವರದಿ: ಚಂದನ್

ಗಣಪತಿಗೆ ಆನೆಯ ಮುಖ ಬಂದಿದ್ದು ಹೇಗೆ?
ಟೋಟೆಮ್‌ ವ್ಯವಸ್ತೆಯ ಒಂದು ಮುಖ್ಯ ಸ್ವರೂಪವೆಂದರೆ ಒಂದು ಬುಡಕಟ್ಟು ಗಣದ ಕುಲಚಿನ್ಹೆ. ಪ್ರತಿಯೊಂದು ಬುಡಕಟ್ಟು ಗಣಕ್ಕೂ ಒಂದೊಂದು ಕುಲಚಿನ್ಹೆ ಇರುತ್ತಿತ್ತು. ಅಕಸ್ಮಾತ್‌ ಈ ಬುಡಕಟ್ಟುಗಳ ನಡುವೆ ಕಾದಾಟ ನಡೆದಾಗ ಈ ಕುಲಚಿನ್ಹೆಗಳು ಬೇರಾಗುತ್ತಿದ್ದವು. ಯಾವ ಪಂಗಡ ಸೋಲುತ್ತದೆಯೋ ಆ ಪಂಗಡದ ಕುಲಚಿನ್ಹೆ ಗೆದ್ದ ಪಂಗಡದ ಪಾಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗಜಮುಕದ ಗಣಪತಿಯನ್ನು ಬಿಡಿಸಿ ನೋಡಿದರೆ ಒಂದು ತೀರ್ಮಾನಕ್ಕೆ ಬರಬಹುದು… ಎನ್ನುತ್ತಾರೆ ಲೇಖಕ ಪತ್ರಕರ್ತ ಹರ್ಷಕುಮಾರ್‌ ಕುಗ್ವೆ.

ಗಣಪತಿಗೆ ಆನೆ ಮುಖವಿರುವ ಕುರಿತು ಪೆರಿಯಾರ್‌ ಅವರು ಹೇಳಿದ್ದರೆನ್ನಲಾದ ಮಾತೊಂದು ನೆನ್ನೆ ವೈರಲ್‌ ಆಗಿದೆ. ಪೆರಿಯಾರ್‌ ಇರಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರಿರಲಿ ವೈದಿಕ ಪುರಾಣಗಳನ್ನು ಬಂಜಿಸುವ ಕ್ರಮದಲ್ಲಿ ಪುರಾಣಗಳಲ್ಲಿರುವ ಅನೇಕ ಸಂಗತಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. ಅಂಬೇಡ್ಕರ್‌ ಅವರ ರಾಮ ಕೃಷ್ಣರ ಒಗಟುಗಳು ಎಂಬ ಪ್ರಬಂದದಲ್ಲಿ ಸಹ ಪುರಾಣದ ರಾಮ ಕೃಷ್ಣರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ವೈದಿಕ ಪುರಾಣಗಳೇ ಇತಿಹಾಸ ಎಂದು ಕುರುಡಾಗಿ ನಂಬುವ ಅವಿವೇಕಿ ಜನರಿಗೆ ಅಂಬೇಡ್ಕರ್‌ ಮತ್ತು ಪೆರಿಯಾರ್‌ ನೀಡಿರುವ ಈ ಶಾಕ್‌ ಟ್ರೀಟ್ಮೆಂಟ್‌ ಅಗತ್ಯವಿದೆ. ಅಂತವರು ಯಾಕೆ ಬಾಬಾಸಾಹೇಬರು ಹಿಂದೂ ಪುರಾಣಗಳ ಬಗ್ಗೆಯಾಗಲೀ ಭಗವದ್ಗೀತೆಯ ಬಗ್ಗೆಯಾಗಲೀ ಈ ಪರಿ ಟೀಕಿಸಿದ್ದಿದ್ದಾರೆ ಎಂದು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಇದು ಒತ್ತಟ್ಟಿಗಿರಲಿ.

ಇತಿಹಾಸ ಮತ್ತು ಮಾನವಶಾಸ್ತ್ರದ ನೆಲೆಯಿಂದ ನಾವು ಒಂದಷ್ಟು ಸಂಗತಿಗಳನ್ನು ನೋಡಬೇಕಿದೆ. ಈಗ ಗಣಪತಿಗೆ ಆನೆಯ ಮುಖವಿರುವ ಸಂಗತಿಯನ್ನೇ ತೆಗೆದುಕೊಳ್ಳೋಣ. ಹನುಮಂತ ದೇವರಿಗೆ ಮಂಗನ ಮುಖವಿರುವುದಾಗಲೀ, ಗಣಪತಿಗೆ ಇಲಿ ವಾಹನ ಅಗಿರುವುದಾಗಲೀ, ಶಣ್ಮುಖನಿಗೆ ನವಿಲಿನ ವಾಹನ ಇರುವುದಾಗಲೀ ಇವೆಲ್ಲಾ ವೈದಿಕ ಸೃಷ್ಟಿಗಳಲ್ಲ. ಯಾಕೆಂದರೆ ನಾಲ್ಕೂ ವೇದಗಳನ್ನು ಹುಡುಕಿದರೂ  ಅವುಗಳಲ್ಲಿ ನಿಮಗೆ  ಈ ಭಾರತದ ದೇವರುಗಳ ಕುರಿತಾಗಲೀ ಅವರ ಈ ವಿಶಿಷ್ಟ ಸ್ವರೂಪಗಳ ಕುರಿತಾಗಲೀ ಉಲ್ಲೇಖವಾಗಲೀ ವಿವರಣೆಯಾಗಲೀ ನಮಗೆ ಕಂಡು ಬರುವುದಿಲ್ಲ. ವೇದಗಳಲ್ಲಿ ಗಣಗಳ ಪ್ರಸ್ತಾಪ ಬಂದರೂ ಗಣಪತಿ ಅದರಲ್ಲೂ ಆನೆಯ ಮುಖದ ಗಣಪತಿ ಎಲ್ಲೂ ಕಾಣಿಸುವುದಿಲ್ಲ. ಮುಂದೆ ಸ್ಮೃತಿಗಳ ಕಾಲದಲ್ಲಿ ಗಣಪತಿಯನ್ನು ನಿಂದಿಸುವ ಹಲವಾರು ಶ್ಲೋಕಗಳಿವೆ. ಗಣಪತಿ ಒಬ್ಬ ಶೂದ್ರರ ದೇವರು, ಅವನು ಪೂಜೆಗೆ ಯಾವ ರೀತಿಯಲ್ಲೂ ಅರ್ಹನಲ್ಲ ಎಂದು ಯಾಜ್ನವಲ್ಕ ಸ್ಮೃತಿ ಮತ್ತು ಮನುಸ್ಮೃತಿಗಳು ನಿಂದಿಸುತ್ತವೆ. ಗಣಪತಿ ಎಂದರೆ ವಿಗ್ನವನ್ನು ಉಂಟು ಮಾಡುವವನು ಎಂದು ಜರಿಯುತ್ತವೆ. ಆದರೆ ಕಾಲಕ್ರಮೇಣ ಅದೇ ವೈದಿಕ ಪಠ್ಯಗಳು ಗಣಪತಿಯನ್ನು ಆರಾದಿಸಲು ತೊಡಗುತ್ತವೆ. ಇದು ಸಾಮಾಜಿಕ ಪಲ್ಲಟವನ್ನು ಅನುಸರಿಸಿದ ಪೌರಾಣಿಕ ಪಲ್ಲಟವೆನ್ನಬಹುದು.

ಈಗ ಮೂಲ ಪ್ರಶ್ನೆಗೆ ಬರೋಣ. ಗಣಪತಿಗೆ ಆನೆಯ ಮುಖ ಹೇಗೆ ಬಂತು? ಈ ಪ್ರಶ್ನೆಗೆ ಅತ್ಯಂತ ವೈಜ್ಞಾನಿಕ ಮತ್ತು ತಾರ್ಕಿಕವಾದ ಉತ್ತರ ನೀಡಿರುವುದು ಇತಿಹಾಸಕಾರರೂ, ಸಮಾಜ ಶಾಶ್ತ್ರಜ್ಞರೂ ಆದ ದೇವಿಪ್ರಸಾದ್‌ ಚಟ್ಟೋಪಾದ್ಯಾಯ ಹಾಗೂ ದಾಮೋದರ ಧರ್ಮಾನಂದ ಕೋಸಾಂಬಿಯವರು. ಚಟ್ಟೋಪಾದ್ಯಾಯರ ʼಲೋಕಾಯತʼ ಪುಸ್ತಕ ಮತ್ತು ಕೋಸಾಂಬಿಯವರ “ಪುರಾಣ ಮತ್ತು ವಾಸ್ತವ” (Myth and Reality) ಹಾಗೂ An Introduction to the study of Indian History ಪುಸ್ತಕಗಳ ಅದ್ಯಯನ ಅತ್ಯಗತ್ಯ.

ಭಾರತೀಯ ಸಮಾಜದಲ್ಲಿನ ಇಂತಹ ಸಂಗತಿಗಳನ್ನು ಪ್ರಾಚೀನ ಭಾರತದ ಅಂದರೆ ವೈದಿಕ ಆರ್ಯ ಸಮುದಾಯಗಳು ಬರುವುದಕ್ಕೂ ಮೊದಲಿನ ದ್ರಾವಿಡ ಬುಡಕಟ್ಟು ವ್ಯವಸ್ಥೆಯ ಅಧ್ಯಯನದ ಮೂಲಕ ಮಾತ್ರ ಅರ್ಥ ಮಾಡಿಕೊಳ್ಳಲು ಸಾದ್ಯ. ಈ ನಿಟ್ಟಿನಲ್ಲಿ ಮೇಲೆ ಹೇಳಿಕ ಪುಸ್ತಕಗಳು ಅತ್ಯುತ್ತಮ ಹೊಳಹುಗಳನ್ನು ನೀಡುತ್ತವೆ.

ಪ್ರಾಚೀನ ದ್ರಾವಿಡ ಬುಡಕಟ್ಟು ವ್ಯವಸ್ಥೆ ಟೊಟೆಮಿಕ್‌ ವ್ಯವಸ್ಥೆಯಾಗಿತ್ತು. ಅಂದರೆ ಬುಡಕಟ್ಟುಗಳು ಟೊಟೆಮ್‌ ಅಂದರೆ ಕುಲಚಿನ್ಹೆ ಅಥವಾ ಬಳಿಗಳನ್ನು ಹೊಂದಿರುತ್ತಿದ್ದವು. ಇಂದಿಗೂ ದ್ರಾವಿಡ ಬುಡಕಟ್ಟು ಜಾತಿಗಳಲ್ಲಿ ಈ ಬಳಿ ವ್ಯವಸ್ಥೆ ಚಾಲ್ತಿಯಲ್ಲಿದೆ. ಈ ಬಳಿ ಅತವಾ ಟೊಟೆಮ್‌ ಗಳು ಬಹುಪಾಲು ಯಾವುದಾದರೂ ಮರ ಗಿಡ ಇಲ್ಲವೇ ಪ್ರಾಣಿಯ ಸಂಕೇತಗಳೇ ಅಗಿರುತ್ತಿದ್ದವು. ಈ ಬುಡಕಟ್ಟು ವ್ಯವಸ್ಥೆಗಳು ಗಣಗಳ ವ್ಯವಸ್ಥೆಗಳೂ ಆಗಿದ್ದವು. ಒಂದೊಂದು ಗಣಕ್ಕೆ ಒಬ್ಬೊಬ್ಬ ನಾಯಕ ಅತವಾ ನಾಯಕಿ ಇರುತ್ತಿದ್ದಳು. ಈ ಬುಡಕಟ್ಟು ಗಣ ವ್ಯವಸ್ಥೆಗಿಂತಲೂ ಮುಂಚಿನ ವ್ಯವಸ್ಥೆ ಮಾತೃಪ್ರದಾನ ವ್ಯವಸ್ಥೆ. ಅಲ್ಲಿ ಬುಡಕಟ್ಟಿನ ತಾಯಿಯೇ ಅದಿನಾಯಕಿ. ಸಿಂಧೂ ಅತವಾ ಹರಪ್ಪಾ ಮೊಹೆಂಜೋದಾರೋ ಕೃಶಿ ನಾಗರಿಕತೆ ಇಂತಹ ಒಂದು ಮಾತೃಪ್ರಧಾನ ನಾಗರಿಕತೆಯಾಗಿದ್ದರೆ ಅಲ್ಲಿನ ಪಶುಪಾಲನಾ ಬುಡಕಟ್ಟು ವ್ಯವಸ್ಥೆ  ಗಂಡುಪ್ರಧಾನ ವ್ಯವಸ್ತೆಯಾಗಿದ್ದನ್ನು ಕಾಣುತ್ತೇವೆ. ಹೀಗಾಗೇ ನಮಗೆ ಹರಪ್ಪಾ ನಾಗರಿಕತೆಯಲ್ಲಿ ಬಲೂಚಿಸ್ತಾನದ ಮೆಹರಗಡದಿಂದಿಡಿದು ಗುಜರಾತಿನ ದೋಲವೀರದವರೆಗೂ ಇಂತಹ ʼಸ್ತ್ರೀʼ ಪ್ರತಿಮೆಗಳು ದಂಡಿಯಾಗಿ ಕಾಣಸಿಗುತ್ತವೆ. ಇಂತಹ ಯಾವುದರ ಒಂದೇ ಒಂದು ಕುರುಹು ಸಹ ವೇದಗಳಲ್ಲಿ ಕಾಣುವುದಿಲ್ಲ. ಮೇಲೆ ಹೇಳಿದ ಗಣ ವ್ಯವಸ್ಥೆಯಲ್ಲಿ ಅದರ ನಾಯಕರಾದವರು ಗಣನಾಯಕ ಅತವಾ ಗಣಪತಿಯರಾಗಿದ್ದರು. ಈ ಗಣಪತಿಗಳಿಗೆ ಎಲ್ಲರಿಗೂ ಆನೆಯ ಮುಖವೇ ಇರಲಿಲ್ಲ ಎಂಬುದು ಮುಖ್ಯ. ಆನೆಯ ಮುಖದ ಗಣಪತಿಯಂತೆಯೇ ಎತ್ತಿನ ಮುಖದ ಗಣಪತಿ, ಆಡಿನ ಮುಖದ ಗಣಪತಿಗಳು ಇದ್ದರು ಎಂಬುದಕ್ಕೂ ದಾಖಲೆಗಳಿವೆ. ಹಾಗಾದರೆ ಇದಕ್ಕೆ ಕಾರಣವೇನು? ಇಲ್ಲಿ ಹೇಳಿದ ಟೋಟೆಮ್‌ ವ್ಯವಸ್ಥೆಯ ಒಂದು ಮುಖ್ಯ ಸ್ವರೂಪವೆಂದರೆ ಒಂದು ಬುಡಕಟ್ಟು ಗಣದ ಕುಲಚಿನ್ಹೆ. ಪ್ರತಿಯೊಂದು ಬುಡಕಟ್ಟು ಗಣಕ್ಕೂ ಒಂದೊಂದು ಕುಲಚಿನ್ಹೆ ಇರುತ್ತಿತ್ತು. ಅಕಸ್ಮಾತ್‌ ಈ ಬುಡಕಟ್ಟುಗಳ ನಡುವೆ ಕಾದಾಟ ನಡೆದಾಗ ಈ ಕುಲಚಿನ್ಹೆಗಳು ಬೇರಾಗುತ್ತಿದ್ದವು. ಯಾವ ಪಂಗಡ ಸೋಲುತ್ತದೆಯೋ ಆ ಪಂಗಡದ ಕುಲಚಿನ್ಹೆ ಗೆದ್ದ ಪಂಗಡದ ಪಾಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಗಜಮುಖದ ಗಣಪತಿಯನ್ನು ಬಿಡಿಸಿ ನೋಡಿದರೆ ಒಂದು ತೀರ್ಮಾನಕ್ಕೆ ಬರಬಹುದು. ಇಲ್ಲಿ ಒಂದು ಬುಡಕಟ್ಟು ಗಣವು ಇಲಿಯ ಕುಲಚಿನ್ಹೆ ಹೊಂದಿರುವ ಮತ್ತು ಆನೆಯ ಕುಲಚಿನ್ಹೆ ಹೊಂದಿರುವ ಎರಡು ಬುಡಕಟ್ಟುಗಳನ್ನು ಸೋಲಿಸಿದಾಗ ಆ ಎರಡೂ ಕುಲಚಿನ್ಹೆಗಳು ಗೆದ್ದ ಬುಡಕಟ್ಟು ಗಣದ ಕುಲಚೆನ್ಹೆಗೆ ಸೇರಿಕೊಂಡವು. ಇದರ ಪರಿಣಾಮವಾಗಿಯೇ ಒಂದು ಗಣದ ನಾಯಕ ಅತವಾ ಗಣಪತಿಗೆ ಆನೆಯ ಮುಖ ಸೇರಿಕೊಂಡು ಇಲಿಯು ವಾಹನವಾದದ್ದು.

ಮಹಾಭಾರತದಲ್ಲಿ ಶ್ರೀಕೃಶ್ಣನಿಗೆ 16,000 ಹೆಂಡತಿಯರು ಇದ್ದರೆಂಬ ಪುರಾಣದ ಸಂಗತಿ ಕೆಲವೊಮ್ಮೆ ತಮಾಶೆಯಾಗುತ್ತಿರುತ್ತದೆ. ಆದರೆ ಭಾರತದ ಪ್ರಾಚೀನ ಸಮಾಜದ ಬುಡಕಟ್ಟು ವ್ಯವಸ್ಥೆಯ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡಾಗ ಇದು ಬೇರೆಯ ರೀತಿಯಲ್ಲೇ ಕಾಣಿಸುತ್ತದೆ. ಕೃಶ್ಣ ಇಲ್ಲಿ ಪಶುಪಾಲಕ ಸಮಾಜದ ನಾಯಕ.  ಅವನು ತನ್ನ ಬುಡಕಟ್ಟು ಸಾಮ್ರಾಜ್ಯವನ್ನು ವಿಸ್ತರಿಸುವ ಸಂದರ್ಭದಲ್ಲಿ ಸಾವಿರಾರು ಮಾತೃಪ್ರದಾನ ಬುಡಕಟ್ಟುಗಳನ್ನು ತನ್ನ ಸಾಮ್ರಾಜ್ಯದೊಳಕ್ಕೆ ಗೆದ್ದುಕೊಳ್ಳವುದನ್ನು ಹದಿನಾರು ಸಾವಿರ ಹೆಂಡತಿಯನ್ನು ಹೊಂದುವಂತೆ ಸಾಂಕೇತಿಸಲಾಗಿದೆ. ಅಷ್ಟೆ.

ಪಶುಪಾಲಕ ದ್ರಾವಿಡರ ಆದಿನಾಯಕ ಅಥವಾ ಮಹಾಪೂರ್ವಿಕ ಎನ್ನಬಹುದಾದ ಶಿವನ ತಲೆಯಿಂದ ಗಂಗೆ ಉದಿಸುವುದಿರಲಿ, ಫಲವಂತಿಕೆ (Fertility)  ಪಂಥದ ಮಾತೃದೇವತೆ ಗೌರಿ ಮತ್ತು ಶಿವ ಇಬ್ಬರೂ ಗಂಡ- ಹೆಂಡತಿಯಾಗುವುದು, ಇವೆಲ್ಲಾ ಆದಿಮ ದ್ರಾವಿಡ ಬೇಸಾಯಗಾರ ಮತ್ತು ದ್ರಾವಿಡ ಪಶುಪಾಲಕ ಸಮುದಾಯಗಳ ನಡುವಿನ ಹೊಂದಾಣಿಕೆ ಎಂದು ನೋಡಿದಾಗ ಯಾವುದೇ ಗೊಂದಲಕ್ಕೆ ಅವಕಾಶವಿರುವುದಿಲ್ಲ. ಇವತ್ತಿಗೂ ನಮ್ಮ ಮಲೆನಾಡಿನಲ್ಲಿ ಗೌರಿ ಎಂದರೆ ದ್ರಾವಿಡ ಮೂಲದ ಪ್ರಕೃತಿ ಆರಾದನೆ ಮತ್ತು ಜಲ ಸಂಸ್ಕೃತಿಗಳು ಮೇಳೈವಿಸಿದ ಆಚರಣೆಯೇ ಆಗಿದೆ.  ಗೌರಿಯನ್ನು ತರುವುದು ಹೇಗೆ ಗೊತ್ತೆ?  ಬಾವಿಯಿಂದ ಎತ್ತಿಕೊಂಡು, ಆ ನೀರನ್ನು ತಾಮ್ರದ ತಂಬಿಗೆಯಲ್ಲಿ ತುಂಬಿ, ಅದಕ್ಕೆ ಹೆಣ್ಣುಮಕ್ಕಳು, ಸೀರೆ ಉಡಿಸಿ ತಮ್ಮ ತಾಳಿ, ಓಲೆ ಆಭರಣ  ತೊಡಿಸಿ ಬಣ್ಣ ಬಣ್ಣದ ಬೀಸಣಿಕೆ ಇಟ್ಟು, ʼಜೀವಕಳೆʼ ತುಂಬಿ ಮನೆಯೊಳಗೆ ಚಪ್ಪರದಲ್ಲಿ ಕೂರಿಸುತ್ತಾರೆ. ಈ ಚಪ್ಪರವಾದರೂ ಎಂತಹುದು? ಅಪ್ಪಟ ಪ್ರಕೃತಿಯ ಪಲವಂತಿಕೆಯನ್ನೇ ಬಿಂಬಿಸುವ ಚಪ್ಪರ. ಈ ಚಪ್ಪರಕ್ಕೆ ಪಳವಳಿಕೆ ಎಂದು ಹಾಕುವ ಸಸ್ಯಗಳು ಎಂದರೆ- ಕಂಗನಹಳ್ಳು, ಮದ್ದಾರೆ ಕಾಯಿ, ಮತ್ತಿ ಕಾಯಿ, ಹುಣಾಲು ತೆನೆ, ಪಡಂಗ, ಮುತ್ತು ಬಳ್ಳಿ, ಸೂರನ ಕುಂಡಿಗೆ, ಬೆನಪ್ಪನ ಗೆಜ್ಜೆ ಅತವಾ ಹಾಡೇಗಡ್ಡೆ ಎಂಬ ಔಶದಿ ಸಸ್ಯ, ಕೊಡಚಿನ ಕೋಡು,ಸೀರಣಿಗೆ ಕಾಯಿ, ಗೌರಿ ತಲೆಕೂದಲು ಎನ್ನುವ ಒಂದು ಜಾತಿಯ ಸಸ್ಯದ ಎಲೆಗಳು, ವಾಟೆಕಾಯಿ, ಕಂಚಿಕಾಯಿ, ಜುಮ್ಮನ ಕಾಯಿ, ಚಪ್ಪಚೌಳಿ, ಶಿವನೀರುಳ್ಳಿ ಗಡ್ಡೆ, ನೆಲವಾಟೆ, ಬಳ್ಳಿವಾಟೆ, ಪಾತಾಳ ಗರುಡ, ತಟಮಟ್ಟೆ ಕಾಯಿ, ಹೆಗ್ಗಾಣೆ ಕಾಯಿ, ಕಾಗದಂಡೆ ಕಾಯಿ..ಹೀಗೆ. ಇದೆಲ್ಲಾ ಏನನ್ನು ತೋರಿಸುತ್ತದೆ ಎಂದರೆ ಗೌರಿ ಹಬ್ಬ ಎನ್ನುವುದು ಯಾವುದೇ ವೈದಿಕ ಆಚರಣೆಯಾಗಿರದೇ ಅಪ್ಪಟ ಪ್ರಕೃತಿಯ ಫಲವಂತಿಕೆ ಮತ್ತು ಸ್ತ್ರೀ ಪಲವಂತಿಕೆಯನ್ನು ಬಿಂಬಿಸುವ ಹಾಗೂ ದ್ರಾವಿಡ ಸಂಸ್ಕೃತಿಯ ಪ್ರಮುಕ ಲಕ್ಷಣವಾದ ಜಲ ಅತವಾ ಗಂಗೆ ಪೂಜೆಯ ಆಚರಣೆಯಾಗಿದೆ.

ಚಪ್ಪರದಲ್ಲಿ ಪವಡಿಸಿದ ಗೌರಮ್ಮ

ಪುರಾಣಗಳನ್ನು ಆರ್ಯ ವೈದಿಕರು ಬರೆಯಲು ಕುಳಿತಾಗ ಮಾಡಿದ ಎಡವಟ್ಟುಗಳು ಹುನ್ನಾರಗಳು ಒಂದೆರಡಲ್ಲ. ಮೊದಲು ಅವರು ವೇದಗಳಲ್ಲೆಲ್ಲೂ ಇಲ್ಲದ ಶಿವನನ್ನು ಆಪೋಶನಕ್ಕೆ ತೆಗೆದುಕೊಂಡರು. ಹಾಗೆಯೇ ದ್ರಾವಿಡ ಬುಡಕಟ್ಟುಗಳ ಒಂದೊಂದೇ ದೇವತೆಗಳನ್ನು ತಮ್ಮ ಸಂಸ್ಕೃತಿಗಳ ಒಳಕ್ಕೆ ತೆಗೆದುಕೊಂಡು ಸಮಾಜದ ದೊಡ್ಡ ಸಂಖ್ಯೆಯ ಜನರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು.  ಪುರಾಣ ಬರೆಯುವಾಗ ಜನ ಸಂಸ್ಕೃತಿ ಒಳಗಿನ ಸಂಗತಿಗಳನ್ನು ಕಾಲ್ಪನಿಕ ದೇವರುಗಳೊಂದಿಗೆ ಸಮೀಕರಿಸಿ ಎಲ್ಲವನ್ನೂ ವೈದಿಕಮಯಗೊಳಿಸಿದರು. ಪಾರ್ವತಿ ಸ್ನಾನಕ್ಕೆ ಹೋಗುವಾಗ ಬೆವರಿನಿಂದ ಮಾಡಿದ ಗಣಪತಿಯನ್ನು ಕೂರಿಸುವುದು, ನಂತರ ಶಿವ ಬಂದು ಅವನ ತಲೆ ಕಡೆಯುವುದು, ನಂತರ ವಿಷಯ ತಿಳಿದು ಉತ್ತರ ದಿಕ್ಕಿಗೆ ಮುಕ ಮಾಡಿದ್ದ ಆನೆಯ ತಲೆ ಕಡಿದು ತರುವುದು ಇದೆಲ್ಲಾ ಅವಿವೇಕಿ ವೈದಿಕ ಪುರಾಣಕರ್ತರ ತಗಡು ಕತೆಯಷ್ಟೆ. ಯಾಕೆ ಆನೆ ಉತ್ತರ ದಿಕ್ಕಿಗೇ ಮುಕ ಮಾಡಿಕೊಳ್ಳಬೇಕು? ಯಾಕೆಂದರೆ ದಕ್ಷಣ ದಿಕ್ಕಿನ ಬಗ್ಗೆ ತಪ್ಪು ಸಂದೇಶ ಕೊಡುವುದು. ಯಾಕೆಂದರೆ ಇಡೀ ಬಾರತದ ತುಂಬೆಲ್ಲಾ ಇದ್ದ ದ್ರಾವಿಡ ಬಾಷಿಕ ಸಮುದಾಯಗಳನ್ನು ದಕ್ಷಿಣಕ್ಕೆ ತಳ್ಳಿದ್ದ ಆರ್ಯ ವೈದಿಕರು ಉತ್ತರ ದಿಕ್ಕಿನ ಬಗ್ಗೆಯೇ ತಮ್ಮ ಪುರಾಣಗಳಲ್ಲೆಲ್ಲಾ ಹೆಚ್ಚು ಹೊಗಳುವುದು. ವೈದಿಕರು ಹೀಗೆ ಮಾಡಿದಾಗ ಅವರಿಗೆ ಎರಡು ಲಾಭಗಳಾದವು. ಹೀಗೆ ಪುರಾಣಗಳನ್ನು ಬರೆದುಕೊಂಡು ಅವುಗಳನ್ನು ಜನರು ನಂಬುವಂತೆ ಮಾಡಿದಾಗ ಜನರು ವೈದಿಕರೆಲ್ಲಾ ದೇವಾಂಶ ಸಂಬೂತರೆಂದು ನಂಬಿದ್ದು ಒಂದಾದರೆ, ತಮ್ಮ ದೇವರ ಪೂಜೆಗೆ ಸೂಕ್ತರಾದವರೂ ವೈದಿಕರೇ ಎಂಬ ತೀರ್ಮಾನಕ್ಕೂ ಬಂದು ತಮ್ಮ ದೇವರನ್ನು ಪೂಜಿಸಲು ವೈದಿಕರಿಗೇ ಬಿಟ್ಟುಕೊಡಲು ಆರಂಭಿಸಿದರು. ಇದಕ್ಕೆ ಸರಿಯಾಗಿ ವೈದಿಕರು ದ್ರಾವಿಡ ಬಾಶೆಗಳ ಮೇಲೆ ಸಂಸ್ಕೃತ ಬಾಶೆಯ ಹೆಜೆಮನಿ ಸ್ಥಾಪಿಸಿದ್ದರು. ದೇವರಿಗೆ ಅರ್ಥ ಆಗುವ ಭಾಷೆ ಎಂದರೆ ಸಂಸ್ಕೃತವೇ ಎಂದೂ ಜನರನ್ನು ನಂಬಿಸಿದ್ದರು. ಹೀಗಾಗಿ ವೈದಿಕರಿಗೆ ಮುಂದೆ ರಾಜರ ಕಾಲದಲ್ಲಿ ದೇವಸ್ಥಾನಗಳು ರಚನೆಯಾದಾಗ ಯಥೇಚ್ಚ ಉಂಬಳಿಗಳು, ದಾನಗಳು ಬಂದವು.

ನಾವೀಗ ಇಂತಹ ಪುರಾಣಗಳನ್ನು ಓದಿಕೊಳ್ಳುವಾಗ ಅವುಗಳನ್ನು ಯಥಾವತ್ತಾಗಿ ನಂಬಿದರೆ ನಮ್ಮ ತಲೆ ಮೇಲೆ ನಾವೇ ಚಪ್ಪಡಿ ಹಾಕಿಕೊಂಡಂತೆ. ಪುರಾಣಗಳನ್ನು ಭಾರತೀಯ ವಾಸ್ತವಿಕ ಸಾಮಾಜಿಕ ಸಂಗತಿಗಳ ಜೊತೆ ಸೇರಿಸಿ ನೋಡಿ ಯಾವುದು ಹೇಗೆ ಉಂಟಾಯಿತು ಎಂದು ಅರ್ಥ ಮಾಡಿಕೊಳ್ಳುವ ಪ್ರಬುದ್ದತೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ನಮ್ಮ ವಚನ ಚಳವಳಿಯ ಶರಣರಾದ ಅಲ್ಲಮ ಪ್ರಭುಗಳು “ಪುರಾಣ ಎಂಬುದು ಪುಂಡರ ಗೋಷ್ಟಿ” ಎಂದಿದ್ದಾಗಲೀ ಪೆರಿಯಾರ್‌ ಮತ್ತು  ಅಂಬೇಡ್ಕರ್‌ ಅವರು ವೈದಿಕ ಪುರಾಣಗಳನ್ನು ಭಂಜಿಸಿದ್ದರಲಿ, ಇವುಗಳ ಹಿಂದಿನ ಸದುದ್ದೇಶವನ್ನೂ ನಾವು ಅರಿಯಬೇಕು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಹರ್ಷಕುಮಾರ್‌ ಕುಗ್ವೆ
ಲೇಖಕ, ಪತ್ರಕರ್ತ