film – Peepal Media

ಹಸಿವು ಕಲಿಸಿಕೊಡುವಷ್ಟು ಯಾವ ಯೂನಿವರ್ಸಿಟಿಯೂ ಕಲಿಸಲ್ಲ (ʼವಾಳೈʼ ಸಿನಿಮಾ ಕುರಿತು ಸುರಭಿಯವರ ಅನಿಸಿಕೆ)
ಹಸಿವು ಕಲಿಸಿಕೊಡುವ ಪಾಠ, ಜಗತ್ತಿನ ಯಾವ ಯೂನಿವರ್ಸಿಟಿಯೂ ಕಟ್ಟಿಕೊಡಲಾರದು. ನಮ್ಮಂತೋರಿಗೆ,
ವಾಳೈ ಸಿನಿಮಾ ನೋಡಿ, ಬಾಲ್ಯ ನೆನಪಾಯ್ತು ಅಂತ ಹೇಳೋದಿಕ್ಕಾಗಲ್ಲ. ನಾನಿನ್ನೂ ಬಾಲ್ಯದ ಟ್ರೋಮಾಗಳಲ್ಲೇ ಬದುಕನ್ನ ಬದುಕುತ್ತಿರೋದು. ಹತ್ತಾರು ಸಲ ಈ ಬಗ್ಗೆ ಬರೆದುಕೊಂಡದ್ದಿದೆ.

ನನ್ನ ಕಾರ್ಮೀಕ ಬದುಕು ಶುರುವಾದಾಗ ಒಂದನೇ ಕ್ಲಾಸ್ ಓದುತ್ತಿದ್ದೆ. ನನಗಾಗ ಆರು ವರ್ಷ…,ಅಂದು ಶುರುವಾದ ದುಡಿಮೆ, ಬಹುಶಃ ನನ್ನ ಎರಡು ಮಕ್ಕಳ ಡೆಲಿವರಿ ಸಮಯದಲ್ಲಿ ಮಾತ್ರ ಬ್ರೇಕ್ ತೆಗೆದುಕೊಂಡಿದ್ದು, ಅದೂ ಕೂಡ ಹದಿನೈದು ದಿನಗಳಿಂದ ತಿಂಗಳವರೆಗೆ ಮಾತ್ರ.
ಬೆಂಗಳೂರಿನ ಸ್ಲಮ್ ಒಂದರಲ್ಲಿ ಹುಟ್ಟಿ, ಅನುಭವಿಸಿದ ಬಡತನದ ಯಾತನೆ, ಹಸಿವಿನ ಸಂಕಟ ನಾನಿಂದಿಗೂ ಮರೆತಿಲ್ಲ. ಯಾವುದನ್ನೂ ಮರೆಯುವುದೂ ಇಲ್ಲ…
ಆ ದಿನಗಳಲ್ಲಿ ನನ್ನಂತೇ ಸಣ್ಣ ವಯಸ್ಸಿನಲ್ಲಿ ದುಡಿಮೆಗೆ ಬಿದ್ದವರು ನಮ್ಮ ಬೀದಿಯಲ್ಲೇ ಹತ್ತದಿನೈದು ಮಕ್ಕಳಿದ್ದವು. ಊದುಬತ್ತಿ ತೀಡುತ್ತಿದ್ದ ಅಂಬಿಕಾ, ಶಾಂತಿ, ಅಗಸರ ನಾಣಿ ಅಣ್ಣ, ಸೀಮೆಣ್ಣೆ ಕೃಷ್ಣಾ, ಅಶ್ವತ್ಥ, ಬಾಲ್ಯದ ಗೆಳತಿ ಟೀನಾ, ತರಕಾರಿ ಅಂಗ್ಡಿ ಆನಂದ, ಭಾರತಿ, ನಮ್ಮೆಲ್ಲರದ್ದೂ ಆಲ್ಮೋಸ್ಟ್ ಪ್ಯಾರಲಲ್ ಟ್ರ್ಯಾಕಿನಲ್ಲಿ ಸಾಗುತ್ತಿರುವ ಬದುಕೇ ಆಗಿತ್ತು. ಪ್ರೈಮರಿ ಶಾಲೆಯ ಶ್ರೀಕಂಠಯ್ಯ ಮೇಷ್ಟ್ರು, ಶಾಲೆಯ ಅರಳಿಕಟ್ಟೆ, ಮರಿಯಮ್ಮ ಟೀಚರ್‌, ಏಳನೇ ತರಗತಿಯಲ್ಲಿದ್ದಾಗ, ಕಣ್ಣೆದುರೇ ರೈಲ್ವೆ ಹಳಿಗೆ ಬಿದ್ದು ಸಾವಿಗೆ ಶರಣಾದ ಆತ್ಮೀಯ ಗೆಳತಿ ಪದ್ಮಜಾ…ಎಲ್ಲವೂ ನೆನಪಾಗಿ ಎದೆಭಾರವಾಯಿತು.

ನಮ್ಮ ಮನೆಯಲ್ಲಿ ವಾರದಲ್ಲಿ, ಮೂರ್ನಾಲ್ಕು ದಿನಗಳು ಮನೆಯಲ್ಲಿ ಅನ್ನ ಮಾಡುತ್ತಿರಲಿಲ್ಲ. ಎದ್ರೆ ಕುಂತ್ರೆ ಅಂಗನವಾಡಿಯ ಹಾಲು ಬ್ರೆಡ್ಡು…ಅನ್ನ ಸಾರು ತಿನ್ನಬೇಕಾದ್ರೆ, ಅಜ್ಜಿಯ ಮನೆಗೆ ಎರಡು ಕಿಲೋಮೀಟರ್ ನೆಡೆದು ಹೋಗಬೇಕಿತ್ತು. ಗುಡ್ಡದಹಳ್ಳಿಯ ಫ್ಲೋರ್ ಮಿಲ್ ನಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾತ, ಮಿಲ್ಲಿಗೆ ಬರುತ್ತಿದ್ದ ಗಿರಾಕಿಗಳ ಬಳಿ, ರಾಗಿ ಹಿಟ್ಟು, ಅಕ್ಕಿ ಹಿಟ್ಟು ಸಂಗ್ರಹಿಸಿ, ಕೂಡಿಟ್ಟು, ಒಂದು ಚೀಲ ತುಂಬಿದ ಮೇಲೆ, ಅದನ್ನು ನಮ್ಮ ಮನೆಗೆ ತಲುಪಿಸುತ್ತಿತ್ತು. ಆ ಏರಿಯಾ ಮಾರ್ವಾಡಿ ಜನರ ಮನೆಯಲ್ಲಿ ಬರ್ತಡೇಯೋ, ಪೂಜೆಗಳೋ, ಮದುವೆ ಕಾರ್ಯಗಳೋ ಜರುಗಿದಾಗ, ಅವರ ಮನೆಯಲ್ಲಿ ಮಾಡುತ್ತಿದ್ದ ಸಿಹಿ ತಿಂಡಿಗಳನ್ನು ಕವರ್ ನಲ್ಲಿ ಹಾಕಿ ತಂದು ಕೊಡುತ್ತಿತ್ತು. ಒಂದು ಸಣ್ಣ ಮಿಠಾಯಿ ತಿನ್ನಲು ಅಮ್ಮನ ಬಳಿ ನಾಲ್ಕಾಣೆಗಾಗಿ ಹೇಳಿದ ಸುಳ್ಳಿಗೆ, ಬೀದಿಯುದ್ದಕ್ಕೂ ಮನೆ ಬಾಗಿಲಿನವರೆಗೂ ಇಟ್ಟಿನ ದೊಣ್ಣೆ ಮುರಿಯುವವರೆಗೂ ಅಮ್ಮಾ ಹೊಡೆದಿದ್ದಳು.

ವೈರ್ ಚೇರುಗಳ ಫ್ರೇಮುಗಳನ್ನ, ಎಳೆಯ ಕೈಯಲ್ಲಿ ಹೊತ್ತು, ಸ್ಕೂಲಿನ ಬ್ಯಾಗು ತಗಲಾಕಿಕೊಂಡು ಎರಡು ಕಿಲೋ ಮೀಟರ್ ನಡೆದುಕೊಂಡು ಮನೆಗೆ ಬರಬೇಕಾಗಿತ್ತು. ಕಾಲಿನಲ್ಲಿ ಮೆಟ್ಟಿರುತ್ತಿದ್ದ ಹವಾಯ್ ಚಪ್ಪಲಿ ಒಂದು ಸಲ ಕಿತ್ತು ಹೋದರೆ, ಮತ್ತೆ ಅದನ್ನು ಕೊಂಡಕೊಳ್ಳಲು ತಿಂಗಳುಗಳೇ ಆಗುತ್ತಿತ್ತು. ಹರಿದ ಬಟ್ಟೆಗಳು, ನೆಂಟರು ಕೊಡುತ್ತಿದ್ದ ಅವರ ಮಕ್ಕಳ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ವರ್ಷಾನುಗಟ್ಟಲೆ ಬದುಕನ್ನ ದೂಡಿದ್ದಿದೆ.
ಹಗಲು – ರಾತ್ರಿಗಳ ವ್ಯತ್ಯಾಸವೇ ಗೊತ್ತಿರದೇ ದುಡಿಯುವುದು ನಮ್ಮ ಧರ್ಮ…ಅದಿಲ್ಲದಿದ್ದರೆ, ಕುಟುಂಬದ ನೌಕೆ ಸಾಗುತ್ತಿರಲಿಲ್ಲ…ಚೇರುಗಳಿಗೆ ವೈರ್ ಪೋಣಿಸುತ್ತಾ, ರಬ್ಬರ್ ಫ್ಯಾಕ್ಟರಿಯ ಮಿಡ್ನೈಟ್ ಹನ್ನೆರಡರ ಸೈರನ್, ನಮಗೆ ಆ ದಿನದ ಕೂಲಿಯಿಂದ ಸಿಗುತ್ತಿದ್ದ ಬಿಡುಗಡೆ. ಕೈ ಕಾಲು ಮರಗಟ್ಟಿ, ಸಿಮೆಂಟ್ ಮೆತ್ತದ ಇಟ್ಟಿಗೆಯ ಗೋಡೆಗಳಿಗೆ ಒರಗಿ ಕುಂತಿದ್ದರೆ, ಸುತ್ತಮುತ್ತಲ ಗಲೀಜಿಗೆ ಅದೆಷ್ಟೊ ಸಲ ಮೈ ಮೇಲೆ ಹತ್ತುತ್ತಿದ್ದ ಚೇಳು, ಜರಿಗಳು…ಮೂಗಿನಲ್ಲಿ ಸುರಿದು ಬರುತ್ತಿದ್ದ ರಕ್ತ ಮಾಮೂಲಾಗೋಗಿತ್ತು. ಮೈ ಮೇಲಿರುತ್ತಿದ್ದ ಶರ್ಟಿನಿಂದ ಒರೆಸಿಕೊಂಡು, ಆ ದಿನದ ಟಾರ್ಗೆಟ್ ರೀಚ್ ಮಾಡುವುದಷ್ಟೇ ನಮ್ಮ ಕೆಲಸ. On time ಚೇರುಗಳನ್ನು ಎಣೆದು ಕೊಡದಿದ್ದರೆ, ಮತ್ತೆ ನಮಗೆ ಕೆಲಸ ಸಿಗುತ್ತಿರಲಿಲ್ಲ. ಆ ಭಯ ಬೇರೆ.
ನನ್ನ ಅಮ್ಮಾ , ನಮ್ಮ ಮನೆಯ ಬಡತನದ ಸಿಟ್ಟನ್ನೆಲ್ಲಾ ಎತ್ತಿಹಾಕಲು ಸಿಗುತ್ತಿದ್ದ ಏಕೈಕ ಪ್ರಾಣಿ ನಾನೊಬ್ಬಳೇ. ಗಂಡನ ಎದುರು ಕೆಮ್ಮುತ್ತಿರಲಿಲ್ಲ. ಅಣ್ಣಂದಿರ ಮೇಲಿನ ಮುದ್ದು…ಸಿಕ್ಕ ನನ್ನೊಬ್ಬಳ ಮೇಲೆ ಸದಾ ಬ್ರಹ್ಮಾಸ್ತ್ರ ಪ್ರಯೋಗ. ಆಕೆಯ ಬೈಗುಳ, ಸಿಟ್ಟು, ಆ ಕೆಂಗಣ್ಣು ಇಂದಿಗೂ ನನಗೆ night mares…ತಪ್ಪಿಸಿಕೊಳ್ಳಲು ಬದಲಿ ಆಯ್ಕೆಗಳಿರಲಿಲ್ಲ. ಅಪ್ಪನ ಕುಡಿತ, ಮನೆಯ ಬಡತನ, ಸಂಬಂಧಿಕರ ನಡುವೆ ಕಟ್ಟಿಕೊಟ್ಟ ಅವಮಾನಗಳನ್ನು ಮಾತುಗಳಲ್ಲಿ ಪೋಣಿಸಿ, ಭದ್ರವಾಗಿ ಯಾವುದೋ ಪೆಟ್ಟಿಗೆಯಲ್ಲಿಟ್ಟು, ಅಟ್ಟದ ಮೇಲಿಟ್ಟು, ಓ ಇದು ನನ್ನದಲ್ಲ ಎಂದು ಮರೆತುಬಿಡಲು ಸಾಧ್ಯವೇ ಇಲ್ಲ…!

ಕಳೆದ ಹತ್ತು ವರ್ಷಗಳಲ್ಲಿ ಎಷ್ಟೋ ಸಲ ನನ್ನ ಬಾಲ್ಯದ ನೆನಪುಗಳನ್ನು, ದುರ್ಘಟನೆಗಳನ್ನು ಫೇಸ್ಬುಕ್ಕಿನಲ್ಲಿ ಎತ್ತಿ ಹಾಕುವಾಗ, ನನ್ನಂತವೇ ಒಂದಷ್ಟು ಜೀವಗಳು, ಆ ಬರಹಗಳಲ್ಲಿ ತಮ್ಮನ್ನು ಹಗುರಾಗಿಸಿಕೊಂಡು ನನ್ನೊಂದಿಗೆ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡದ್ದಿದೆ. ಅದೇ ತರ, ವೈಯಕ್ತಕ ಬದುಕಿನ ಬಗ್ಗೆ ಹೀಗೆ ಮುಕ್ತವಾಗಿ ಬರೆದುಕೊಳ್ಳುವುದು ಕ್ಷಮಿಸಲಾರದ ಅಪರಾಧ ಎಂದು judge ಮಾಡಿದವರೂ ಇದ್ದಾರೆ.
ಕನಿಷ್ಠ ಊಟ ಬಟ್ಟೆಗೆ ಬಾಲ್ಯದಲ್ಲಿ ಹೋರಾಡಿಯೇ, ದುಡಿದೇ ಪಡೆದವರಿಗೆ ಮಾತ್ರ, ಆ ಅವಮಾನ, ಕುದಿವ ರಕ್ತದ ಅರ್ಥ ಗೊತ್ತಿರುತ್ತದೆ. ಮತ್ತು, ನನ್ನ ಪ್ರಕಾರ ಯಾವುದೇ ವ್ಯಕ್ತಿ ತನ್ನ ಬದುಕನ್ನು ಯಥಾವತ್ತಾಗಿ ಕಟ್ಟಿಕೊಡಲು ಸಾಧ್ಯವಾಗುವ ಸಂವೇದನೆಗಳಿರುವುದಿಲ್ಲವೋ, ಆತನಿಗೆ/ಆಕೆಗೆ ಸಮಾಜದ ಯಾವುದೇ ಇನ್ನೊಬ್ಬ ವ್ಯಕ್ತಿಯ/ಇನ್ನೊಬ್ಬರ ಬದುಕಿನ ಬಗ್ಗೆ ಬರೆಯುವ ಅರ್ಹತೆ ಇರುವುದಿಲ್ಲ.

ಸಿನ್ಮಾದಲ್ಲಿ ಮಾರಿ ಸೆಲ್ವರಾಜ್ ಬಾಲ್ಯದ ಬದುಕು ಜರುಗಿದ ಊರು, ಸಮಯ, ಬೇರೆ…ಆದ್ರೆ ಹಸಿವು ಕೊಟ್ಟ ನೆನಪು, ನೋವು ಸಂಕಟ, ಹಸಿವು ಕಲಿಸಿಕೊಟ್ಟ ಪಾಠ ಒಂದೇ…! ಸಿನಿಮಾ ನೋಡ ನೋಡುತ್ತಾ, ನಮ್ಮದೇ ಬದುಕಿಗೆ ಕನ್ನಡಿ ಹಿಡಿದಷ್ಟು ಸಾಮ್ಯತೆಗಳು ತಾಗುತ್ತಾ ಹೋಗುತ್ತದೆ. ಅದರಲ್ಲೂ ಬುಡುಬಡುಕೆಯವನ ಕಿರುಡಮರುಗದ ಸದ್ದಿಗೆ ಎರಡ್ಮೂರ ಸಲ ಬೆಚ್ಚು ಬಿದ್ದೆ. ಸತ್ತ ಕರುವೊಂದರ ಮೈಯೊಳಗೆ ಒಣಹುಲ್ಲು ತುಂಬಿ, ಅದರ ನೆನಪನ್ನು ಜೀವಂತವಾಗಿಡುವ ಶಿವಾನೆಂಜಮ್, ಪೂಂಗುಡಿ ಟೀಚರ್‌ ಮೇಲಿನ ಅವನ ಅಗಾಧವಾದ ಪ್ರೇಮ, ರೇಡಿಯೋದಲ್ಲಿ ಕೇಳಿಬರುವ ಹಾಡು, ಬಾಳೆ ತೋಟದಲ್ಲಿ ಹಸಿವಿನಿಂದ ಕದ್ದು ತಿಂದ ಒಂದು ಬಾಳೆಹಣ್ಣಿಗಾಗಿ, ತೋಟದ ಮಾಲೀಕನಿಂದ ಬಿದ್ದ ಏಟುಗಳು, ವೆಂಬು ಮತ್ತವಳ ಪ್ರೇಮಿಯ ಮೌನ ಸಂಭಾಷಣೆಗೆ ಸಿಗದ ಒಂದು ಲಾಜಿಕಲ್‌ ಕನ್‌ಕ್ಲೂಷನ್‌, ಕಳೆದು ಹೋದ ಹಸುವಿನ ಹುಡುಕಾಟದಲ್ಲಿ ಶಿವಾನೆಂಜಮ್‌ ನ ಆಕ್ರಂದನದ ಕೂಗಿನ ಶಬ್ಧ, ಅನ್ನದ ತುತ್ತು ತಿನ್ನುವ ಹೊತ್ತಿಗೆ, ತಾಯ ಬೈಗುಳಕ್ಕೆ ಹೆದರಿ, ಶಿವಾನೆಂಜಮ್‌ ಎದ್ದು ಬಿದ್ದು ಓಡುವಾಗಿನ ಆ ಏದುಸಿರು, ಅವನೆದೆಯ ಬಡಿತ, ಮೈಯಿಂದ ಕಿತ್ತುಕೊಂಡು ಹೊರಬರುವ ಬೆವರು, ಹೊಟ್ಟೆಯ ಸಂಕಟ, ಅವನ ತಾಯಿಯ ಮಡುಗಟ್ಟಿದ ನೋವು, ನರಕಸದೃಶ ಸಾವಿನ ಲೋಕವನ್ನು ಕಟ್ಟಿಕೊಟ್ಟ, ಕ್ಲೈಮ್ಯಾಕ್ಸ್‌ ಕಡೆಗಿನ ಆ ಇಪ್ಪತ್ತು ನಿಮಿಷದ ಪಯಣ….,

ಅಂದಿಗೂ, ಇಂದಿಗೂ ನನಗ್ಯಾವುದೇ ಬರಹಗಳು, ಅಥವ ಸಿನ್ಮಾಗಳು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯೋದು, ಅಲ್ಲಿ ಬದುಕಿನ ನೈಜ ಚಿತ್ರಣ ಇದ್ದಾಗ ಮಾತ್ರ.

ವಾಳೈ ಸಿನಿಮಾವನ್ನ, ಸಿನಿಮಾ ಅಂತ ಮಾತ್ರ ನೋಡಲು ಸಾಧ್ಯವೇ ಇಲ್ಲ. ಅದೊಂದು ಮಾರಿ ಸೆಲ್ವರಾಜ್‌ ಎಂಬ ಮುಗ್ಧ ಜೀವ, ತನ್ನ ಹಸಿವಿನ ಜರ್ನಿಯನ್ನು, ನಿರ್ಭೀತವಾಗಿ, ಮುಕ್ತವಾಗಿ ಕಟ್ಟಿಕೊಟ್ಟ ಒಂದು painful Biopic.‌
ಇದೇ ಸಿನಿಮಾವನ್ನು ಮಾರಿ ಸೆಲ್ವರಾಜ್‌, ಸಿನಿಮಾ ಇಂಡಸ್ಟ್ರಿಗೆ ಬಂದ ಹೊಸದರಲ್ಲಿ ಮಾಡಿದ್ದರೆ, ಬಹುಶಃ, ಒಂದು sophisticated ವರ್ಗದ ಜನ, ಅದೆಷ್ಟು ಅವಮಾನಗಳನ್ನು ಮಾಡುತ್ತಿದ್ದರೋ? ಮಾರಿ, ಅದೆಷ್ಟು ತಿರಸ್ಕಾರಕ್ಕೆ ಒಳಗಾಗುತ್ತಿದ್ದರೋ ಕಾಣೆ.

ಒಂದು ಹಂತದವರೆಗೆ, ನೋವನ್ನೆಲ್ಲಾ ನುಂಗಿ, ತನ್ನದೇ ಟ್ಯಾಲೆಂಟ್‌, ಬದುಕಿನ ಶ್ರದ್ಧೆಯಿಂದ ಇಂದು ತಮ್ಮದೇ ಬೆಂಚ್‌ಮಾರ್ಕ್‌ ಸೃಷ್ಟಿಸಿರುವ ಮಾರಿ ಸೆಲ್ವರಾಜ್‌, ಬಹುಶಃ, ಇದು ಸರಿಯಾದ ಸಮಯ ಎಂಬುದನ್ನು ಮನಗಾಣಿಕೊಂಡಿರಬೇಕು. ಹಾಗಾಗಿಯೇ, ಇಷ್ಟು ನಿರ್ಭೀತವಾಗಿ, ತಮ್ಮ ಬದುಕಿನ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ, ಸಿನಿಮಾದ ಮೂಲಕ ಹೊರಹಾಕಿದ್ದಾರೆ.

ಹಸಿವಿನ ಬಾಲ್ಯ ಕಟ್ಟಿಕೊಟ್ಟ ಅನುಭವಗಳಿಗೋ, ಅವಮಾನಗಳಿಗೋ ಏನೋ, ನನ್ನ ಸುತ್ತಮುತ್ತ ಸಂಪರ್ಕಕ್ಕೆ ಬಂದ ಅದೆಷ್ಟೋ ಜನರ ನೋವು, ಸಂಕಟ ನನ್ನನ್ನು ಅಲುಗಾಡಿಸಿರುವುದು ಕೂಡ, ಇಂತದ್ದೇ ಕಾರಣಕ್ಕೆ.
ಇಂತದ್ದೇ ಕಾರಣಕ್ಕಾಗಿಯೇ ಬಹುಶಃ ನನ್ನ ಕಣ್ಣುಗಳು ನಗುವಿನಲ್ಲೂ, ಎಂದೂ ಬತ್ತದ ಕಣ್ಣೀರೊಂದನ್ನು ಇಂದಿಗೂ ಜೊತೆಗೇ ಹೊತ್ತು ಸಾಗುತ್ತಿರುವುದು.
ಇದೇ ಕಾರಣಕ್ಕಾಗಿಯೇ ಬಹುಶಃ ನನ್ನ ಕೈಲಾದಷ್ಟು, ನನ್ನ ಮಿತಿಯಲ್ಲಿ ಜೊತೆಗಾರರ ಜೊತೆ ನಿಂತಿದ್ದು.
ಇದೇ ಕಾರಣಕ್ಕಾಗಿಯೇ ನನ್ನೊಂದಿಗೆ ಜರುಗಿದ ಮೋಸಗಳನ್ನೂ, ಬಿದ್ದ ಬಾಸುಂಡೆಗಳನ್ನೂ, ಮಾಫಿ ಮಾಡಿ, ಮುಂದೆ ಸಾಗಿದ್ದು…!
ಇದೇ ಕಾರಣಕ್ಕಾಗಿಯೇ ನಾನಿಷ್ಟು ಗಟ್ಟಿಯಾಗಿದ್ದು, ಸ್ವತಂತ್ರವಾಗಿ ನನ್ನ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದು …!
ಎಷ್ಟೋ ಜನ ” ನೀ ಯಾಕಿಷ್ಟು ಎಮೋಷನಲ್”‌ ಇದ್ದೀಯ ?” ಎಂದು ಕೇಳಿದಾಗ ಎಂದಿನಂತೆ ನನ್ನ ಉತ್ತರ “ಯಾರ ಕಣ್ಣುಗಳಲ್ಲಿ ಇನ್ನೂ ಕಣ್ಣೀರು ಬತ್ತಿಲ್ಲವೋ, ಅಂತವರಷ್ಟೇ ಮನುಷ್ಯರು, And I proud to identify myself, one among them” ಎಂದೇ ಹೇಳುತ್ತೇನೆ.

ಅಂತ ಮನುಷ್ಯರ ಸಾಲಿನಲ್ಲಿ ಮಾರಿ ಸೆಲ್ವರಾಜ್‌ ಎಂಬ ದೈತ್ಯ ಪ್ರತಿಭೆ ನಮ್ಮ ನಡುವಿನ ಹೆಮ್ಮೆ !

Loads of Love to U Mari Selvaraj sir❤

U deserve more and more respect ❤

ಸುರಭಿ ರೇಣುಕಾಂಬಿಕಾ

ಬೆಂಗಳೂರು ಶಾರ್ಟ್ ಫಿಲ್ಮ್ ಫೆಸ್ಟಿವಲ್: ಕಾಣೆಯಾದ ಸಾಮಾಜಿಕ ಕಳಕಳಿ (ಅಂಕಣ ಬರಹ)
–ಎಂ ನಾಗರಾಜ ಶೆಟ್ಟಿ

ʼ ದಿನಕ್ಕೆ ಏಳು ಸರ್ತಿ ನಮಾಜು ಮಾಡ್ತಾರೆ, ಕೇಳಿ ಕೇಳಿ ಸಾಕಾಗಿ ಹೋಗಿದೆ ʼ
ʼ ಏಳಲ್ಲ, ಐದು ಸಲ ʼ
ʼ ಸಾಕು, ಬಾಯ್ಮುಚ್ಚು. ನಂಗೆ ಗೊತ್ತಿಲ್ವಾ, ಏಳು ಸಲ ಮಾಡ್ತಾರೆ ʼ

ಆಯೇಷಾ ಮನೆ ಕೆಲಸ ಮಾಡಿ, ಅಡುಗೆ ಸಿದ್ಧ ಪಡಿಸಿ, ಊಟ ಬಡಿಸಿದಾಗ ವೃದ್ಧೆಯಿಂದ ಕೇಳಿಸಿಕೊಳ್ಳುವ ಮಾತುಗಳಿವು. ಆಯೇಷಾ ತನ್ನ ಹೆಸರನ್ನು ಸರಿಯಾಗಿ ಹೇಳಿದ್ದರೂ ಮನೆಯೊಡತಿ ಕೇಳಿಸಿಕೊಳ್ಳದೆ ಆಕೆಯನ್ನು ಆಶಾ ಎಂದೇ ಕರೆಯುತ್ತಾರೆ. ಆಯೇಷಾ ತನ್ನತನವನ್ನು ಹೇಗೆ ಬಹಿರಂಗ ಪಡಿಸುತ್ತಾಳೆ ? ಕ್ಷಣ ಕ್ಷಣಕ್ಕೂ ನೊಂದುಕೊಳ್ಳುವ ಆಕೆಯ ನೋವಿಗೆ ಪರಿಹಾರ ಎಂತು ? ಇತ್ತೀಚೆಗೆ ಮುಕ್ತಾಯವಾದ ʼಬೆಂಗಳೂರು ಅಂತಾರಾಷ್ಟ್ರೀಯ ಕಿರು ಚಿತ್ರೋತ್ಸವ ʼ ದಲ್ಲಿ ಪ್ರದರ್ಶನಗೊಂಡ ಚಿತ್ರಗಳಲ್ಲಿ ʼ ಆಯೇಷಾ ʼ ಕಿರು ಚಿತ್ರವೂ ಒಂದು.

ಬೆಂಗಳೂರು ಶಾರ್ಟ್‌ ಫಿಲಂ ಫೆಸ್ಟಿವಲ್‌ಗೆ 14 ವರ್ಷಗಳ ಹಿನ್ನೆಲೆ ಇದೆ. 40 ಚಿತ್ರಗಳಿಂದ ಪ್ರಾರಂಭವಾದ ಶಾರ್ಟ್‌ ಫಿಲ್ಮ್ ಫೆಸ್ಟಿವಲ್‌ಗೆ 3000 ಕ್ಕಿಂತಲೂ ಅಧಿಕ‌ ಕಿರು ಚಿತ್ರಗಳು ಆಯ್ಕೆಗಾಗಿ ಬರುತ್ತವೆ. ಪ್ರದರ್ಶಿತವಾಗುವ ಚಿತ್ರಗಳಲ್ಲಿ ಭಾರತೀಯ, ಅಂತರಾಷ್ಟ್ರೀಯ, ಮಹಿಳಾ, ಕ್ವೀರ್‌, ಆನಿಮೇಷನ್‌ ಮುಂತಾದ ವಿಭಾಗಗಳಿದ್ದು ಈ ಬಾರಿ 240 ಕ್ಕಿಂತಲೂ ಹೆಚ್ಚು ಚಿತ್ರಗಳು ಪ್ರದರ್ಶಿತವಾದವು.

ಆಯ್ಕೆಗಾಗಿ ಬರುವ ಚಿತ್ರಗಳನ್ನು ಜರಡಿ ಹಾಕಿ ಉತ್ತಮ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿ ಕೊಡುವುದು ಸುಲಭದ ಕೆಲಸವಲ್ಲ. ಪ್ರದರ್ಶಿತವಾದ ಚಿತ್ರಗಳಲ್ಲಿ ಅತ್ಯುತ್ತಮ ಚಿತ್ರಗಳು ಇರುವಂತೆ ಕಳಪೆ ಚಿತ್ರಗಳೂ ಇರುತ್ತವೆ. ಇದಕ್ಕೆ ಆಯ್ಕೆ ಮಾಡುವವರ ಮನಸ್ಥಿತಿ, ಅಭಿರುಚಿ, ಪೂರ್ವಗ್ರಹ, ವಶೀಲಿಬಾಜಿ, ರಾಜಕೀಯ ಇತ್ಯಾದಿ ಅಂಶಗಳು ಕಾರಣವಾಗಿರುತ್ತವೆ.

ಕಿರು ಚಿತ್ರಗಳ ನಿರ್ಮಾಣದಲ್ಲಿ ಯುವಜನರು ಅತ್ಯುತ್ಸಾಹದಿಂದ ತೊಡಗಿಕೊಂಡಿದ್ದಾರೆ. ಕಿರು ಚಿತ್ರಗಳನ್ನು ಹೇಗಾದರೂ ನಿರ್ಮಿಸಬಹುದೆಂಬ ಭಾವವಿಲ್ಲದೆ ತೀವ್ರ ಆಸಕ್ತಿ, ಶ್ರದ್ಧೆ, ಹುಮ್ಮಸ್ಸುಗಳಿಂದ ಚಿತ್ರ ನಿರ್ಮಿತಿಯಲ್ಲಿ ತೊಡಗಿಕೊಳ್ಳುವುದನ್ನು ಹಲವು ಚಿತ್ರಗಳಲ್ಲಿ ಕಾಣಬಹುದು. ವಿವಿಧ ಕ್ಷೇತ್ರಗಳಲ್ಲಿ, ಮುಖ್ಯವಾಗಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಯುವಕರು ಹುಮ್ಮಸ್ಸಿನಿಂದ, ಸಂತೆಯ ಹೊತ್ತಿಗೆ ಮೂರು ಮೊಳ ನೇಯದೆ, ಸಾಕಷ್ಟು ಸಿದ್ಧತೆ ಮತ್ತು ಪರಿಶ್ರಮಗಳಿಂದ ಕಿರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ಈ ಅಂಶ ಕರ್ನಾಟಕ ಸ್ಪರ್ಧಾ ವಿಭಾಗದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ʼ ಮೇಕೆ ಆನೆಯನ್ನು ನುಂಗಿದಾಗ ʼ ನಾನು ಒಳಗೆ ಬರಬಹುದೇ? ʼ ವಾಟರ್‌ ಮ್ಯಾನ್‌ ʼ ‌ʼಲೌವ್‌ ಎಂಡ್‌ ಲೆಟ್‌ ಲೌವ್ ʼ ʼದಳಗಳು ʼ ʼ ನಿಮ್ಮನ್ನು ಭೇಟಿಯಾಗಲು ಸಂತೋಷವಾಯಿತು ʼ ʼ ಕಾಗೆಬಿಂದು ʼ ʼ ಕದಂಬ ಗೆಳೆಯರ ಬಳಗ ʼ ʼ ನೀನೊಂದು ಶಾಯರಿ ʼ ಮುಂತಾದ ಕಿರು ಚಿತ್ರಗಳಲ್ಲಿ ಚಿತ್ರ ಮಾಧ್ಯಮದ ಹಿಡಿತ, ವಿಷಯ ಗ್ರಹಿಕೆ ಮತ್ತು ಅದನ್ನು ದಾಟಿಸುವ ಕಾಳಜಿಯನ್ನು ಗಮನಿಸಿಬಹುದು. ನಿರ್ದೇಶಕನ ಸ್ವಾತಂತ್ರ್ಯವನ್ನು ಗಮನದಲ್ಲಿರಿಸಿ ನೋಡಿದಾಗ ʼ ಮೇಕೆ ಆನೆಯನ್ನು ನುಂಗಿದಾಗ ʼ ಉತ್ತಮ ಚಿತ್ರ. ಉಪಕಾರಿ ಮನೋಭಾವವನ್ನು ಚಿತ್ರ ಸೊಗಸಾಗಿ ಕಟ್ಟಿಕೊಡುತ್ತದೆ. ʼ ನಾನು ಒಳಗೆ ಬರಬಹುದೇ ʼ ಮನೆಯ ಬಾಗಿಲು ತೆರೆದಂತೆ ಮನದ ಬಾಗಿಲು ತೆರೆಯಲಾರದು ಎನ್ನುವುದನ್ನು ವಿಷಾದದ ಛಾಯೆಯಲ್ಲಿ ಅನಾವರಣಗೊಳಿಸುತ್ತದೆ. ಪಾ. ರಂಜಿತ್‌ ತಯಾರಿಕೆಯ ಮಹಿಳಾ ನಿರ್ದೇಶಕಿಯ ʼಲೌವ್‌ ಎಂಡ್‌ ಲೆಟ್‌ ಲೌವ್‌ ʼ ಚೊಕ್ಕವಾಗಿ ಪ್ರೀತಿಯ ಸ್ವೀಕಾರಾರ್ಹತೆಯನ್ನು ಮನ ಮುಟ್ಟಿಸುತ್ತದೆ. ʼ ದಳಗಳು ʼ ʼ ನಿನ್ನ ಭೇಟಿ ಸಂತೋಷದಾಯಕ ʼ ಕಿರು ಚಿತ್ರಗಳು ನಿರ್ದೇಶಕರಿಗೆ ಕ್ರಾಫ್ಟ್‌ ಗೊತ್ತಿದೆ ಎನ್ನುವುದನ್ನು ರುಜುವಾತು ಪಡಿಸುತ್ತವೆ. ಇದೇ ಮಾತು ಕರ್ನಾಟಕ ಸ್ಫರ್ಧಾ ವಿಭಾಗದ ಎಲ್ಲಾ ಚಿತ್ರಗಳ ಬಗೆಗೂ ಹೇಳುವಂತಿಲ್ಲವಾದರೂ ನಿರ್ದೇಶಕರುಗಳ ಪ್ರಯತ್ನ ಭರವಸೆ ಮೂಡಿಸುವಂತಿದೆ.

ಭಾರತೀಯ ವಿಭಾಗದಲ್ಲೂ ಅತ್ಯುತ್ತಮವಾದ ಕಿರು ಚಿತ್ರಗಳಿದ್ದವು. ʼ ಸನ್‌ ಫ್ಲವರ್ಸ್‌ ವೆರ್‌ ದಿ ಫಸ್ಟ್‌ ಟು ನೋ ʼ ʼ ದಿ ಫೀಸ್ಟ್‌ ʼ ʼ ತರ್ಸ್‌ಡೇ ಸ್ಪಷಲ್‌ ʼ ʼ ಆಯೇಷಾ ʼ ʼ ಧ್ವನಿ ʼ ʼ ಮೈ ಫಾದರ್‌ ಈಸ್‌ ಅಫ್ರೈಡ್‌ ಆಫ್‌ ವಾಟರ್‌ ʼ ʼ ಲಾಸ್ಟ್‌ ಇನ್‌ ಟ್ರಾನ್ಸ್‌ಪೋರ್ಟೇಶನ್‌ ʼ ಇವು ನಾನು ನೋಡಿದ್ದರಲ್ಲಿ ಹೆಸರಿಸಬಹುದಾದ ಚಿತ್ರಗಳು. ʼ ಸನ್‌ ಫ್ಲವರ್ಸ್‌ ವೆರ್‌ ದಿ ಫಸ್ಟ್‌ ಟು ನೋ ʼ ಕನ್ನಡಿಗ ನಿರ್ದೇಶಕನ ದೃಶ್ಯ ಕಾವ್ಯ. ಕೋಳಿ ಕೂಗದಿದ್ದರೆ ಬೆಳಗಾಗುವುದಿಲ್ಲ ಎನ್ನುವುದನ್ನು ತಾಯಿ- ಮಗನ ಸಂಬಂಧದಲ್ಲಿ ಮನೋಜ್ಞವಾಗಿ ದೃಶ್ಯೀಕರಿಸಿದ್ದಾರೆ. ʼ ದಿ ಫೀಸ್ಟ್‌ ʼ ಅನನ್ಯ ರೀತಿಯಲ್ಲಿ ಪರಿಸರದ ಬಗ್ಗೆ ಎಚ್ಚರ ಮೂಡಿಸುವ ಕಿರು ಚಿತ್ರ . ʼ ಆಯೇಷಾ ʼ ದಲ್ಲಿ ಮುಸ್ಲಿಂ ಯುವತಿಯ ತೊಳಲಾಟ ಮನ ಮುಟ್ಟುತ್ತದೆ. ಹಿರಿಯ ಮರಾಠಿ ನಟ ಮೋಹನ್‌ ಅಗಾಸೆ ನಟಿಸಿದ ʼ ಮೈ ಫಾದರ್‌ ಈಸ್‌ ಅಫ್ರೈಡ್‌ ಆಫ್‌ ವಾಟರ್‌ ʼ ಆಲ್ಜಮೀರ್ಸ್‌ ರೋಗಿಗಳ ಬವಣೆ ಮತ್ತು ಶುಶ್ರೂಷೆ ಮಾಡುವವರ ತಾಳ್ಮೆಯನ್ನು ಹೃದಯಂಗಮವಾಗಿ ಸೆರೆ ಹಿಡಿಯುತ್ತದೆ.

ʼ ಅಯ್ಯಮ್ ನಾಟ್‌ ಎ ರೊಬೋಟ್‌ ʼ ಅಂತಾರಾಷ್ಟ್ರೀಯ ವಿಭಾಗದಲ್ಲಿ ಪ್ರದರ್ಶಿತವಾದ ಕಿರು ಚಿತ್ರ. ಮನುಷ್ಯ ಹೌದೋ ಎನ್ನುವುದನ್ನು ನಿರ್ಧರಿಸುವ ಕ್ಯಾಪ್ಚಾ (CAPTCHA ) ಗೆ ಸರಿಯಾದ ಮಾಹಿತಿ ಕೊಡಲಾರದೆ, ಅಸ್ತಿತ್ವವನ್ನೇ ಗೊಂದಲಕ್ಕೆ ದೂಡುವ ಈ ಕಿರು ಚಿತ್ರ ತಾಂತ್ರಿಕ ಮೇಲ್ಮೆಯ ಕಾಲದಲ್ಲಿ ಮಾನವನ ಅಸ್ತಿತ್ವದ ಪ್ರಶ್ನೆಯಂತೆಯೇ ತೋರುತ್ತದೆ. ವೈಜ್ಞಾನಿಕ ಸಿನಿಮಾವಾದರೂ ರಚನೆ ಮತ್ತು ಕಲಾವಂತಿಕೆಯಲ್ಲಿ ಚಿತ್ರ ಮೇಲ್ಗೈ ಸಾಧಿಸುತ್ತದೆ. ʼ ದಿ ಫೋರ್ತ್ ಮ್ಯಾನ್‌ ʼ ಸಂಕಷ್ಟಗಳ ನಡುವೆಯೂ ಬದುಕು ನಡೆಸುವ ಛಲ; ಕಪ್ಪುಜನರನ್ನು ಒಳಗೊಳ್ಳದ ಬಿಳಿಯರ ಮನಸ್ಥಿತಿ ಮತ್ತು ಅವರ ಬವಣೆಯನ್ನು ಹೇಳುವ ʼ ದಿ ಹ್ಯಾಪಿ ಎಂಡಿಂಗ್‌ ʼ ಮತ್ತು ʼ ಮಾಸ್ಟರ್‌ ಪೀಸ್‌ ʼ , ಭಾರತದ ಹಳ್ಳಿಗಾಡಿನ ಹೆಣ್ಣುಮಗಳ ಹೃದಯವಂತಿಕೆಯನ್ನು ಹೇಳುವ ʼ ಮೆಡಿಸಿನ್‌ ʼ 1962 ರ ದಕ್ಷಿಣ ಕೊರಿಯಾದ ಬಾಲಕರ ದೌರ್ಜನ್ಯದ ಕತೆ ಹೇಳುವ ʼ ಚಿಲ್ಡ್ರನ್‌ ಆಫ್‌ ಲೈಟ್ ʼ ʼ ಆಟಮ್ ʼ, ʼ ಸಂಡೇ ಇನ್‌ ರೀಗಲ್‌ ಕೆಂಟ್‌ʼ ʼ ಹ್ಯಾಪಿ ಇಂಡಿಪೆಂಡೆಂಟ್‌ ಡೇ ʼ ʼ ಬುರುಲ್‌ ʼ ʼ ಗುಗುಟೋ, ಮೆಮೆಟೋ ʼ ʼ ಎಮರ್ಜೆನ್ಸಿ ಕಾಲ್‌ ʼ ವ್ಯಾಲೆಟ್‌ ʼ ಮುಂತಾದ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದ ಕಿರು ಚಿತ್ರಗಳು ಗಮನ ಸೆಳೆದವು.

ಕಿರು ಚಿತ್ರಗಳ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮತ್ತು ಭಾರತೀಯ , ಮಹಿಳಾ‌ ಸಿನಿಮಾ ಕಲೆಕ್ಟಿವ್ , ಕ್ವೀರ್‌ ಕಾರ್ನರ್ ,‌ ಅನಿಮೇಷನ್‌ (ಭಾರತೀಯ ಮತ್ತು ಅಂತರಾಷ್ಟ್ರೀಯ)‌ , ಸೇರಿಸೋಣ ವಿಭಾಗಗಳು ಇದ್ದುವಲ್ಲದೆ ಸ್ಪರ್ಧೆಗೆ ಹೊರತಾಗಿ 85 ಕಿರು ಚಿತ್ರಗಳು ಪ್ರದರ್ಶಿತಗೊಂಡವು. ಇವುಗಳಲ್ಲಿ ಎರಡು ನಿಮಿಷಗಳ ಕಿರು ಚಿತ್ರಗಳಿಂದ ಸುಮಾರು ಮೂವತ್ತು ನಿಮಿಷಗಳ ವರೆಗೆ ವಿವಿಧ ಅವಧಿಯ ಚಿತ್ರಗಳಿದ್ದವು.

ಕಿರು ಚಿತ್ರಗಳು ಸಂಗ್ರಹವಾಗಿ ಕಟ್ಟಿಕೊಡುವ ಅನುಭವ ಪೂರ್ಣಾವಧಿಯ ಚಿತ್ರಗಳಿಂದ ಭಿನ್ನವಾದುದು. ಇವು ಮಿತ ಅವಧಿಯಲ್ಲಿ, ನಟನೆ, ಸಂಗೀತ, ಫೋಟೋಗ್ರಫಿ ಮುಂತಾದ ಚಿತ್ರ ನಿರ್ಮಿತಿಯ ಸಲಕರಣೆಗಳನ್ನು ಬಳಸಿ ಪುನಾರವರ್ತನೆಗೆ ಅವಕಾಶ ನೀಡದೆ ಪ್ರೇಕ್ಷಕನಿಗೆ ರಸಾನುಭವ ನೀಡುತ್ತವೆ. ಯುವ ಚಿತ್ರಾಸಕ್ತರ ಕ್ರಿಯಾಶೀಲತೆಗೆ ಸವಾಲಾಗುವ ಇಂತಹ ರಚನೆಗಳು ಪೂರ್ಣಾವಧಿಯ ಚಿತ್ರ ತಯಾರಿಗೆ ಚಿಮ್ಮು ಹಲಗೆಯೂ ಆಗಬಹುದು. ಗಿರೀಶ್‌ ಕಾಸರವಳ್ಳಿಯವರೂ ಸೇರಿದಂತೆ ಹಲವು ಪ್ರಸಿದ್ಧ ನಿರ್ದೇಶಕರು ತಮ್ಮ ಸಿನಿ ಪಯಣವನ್ನು ಕಿರು ಚಿತ್ರಗಳಿಂದ ಆರಂಭಿಸಿದ್ದನ್ನು ನೆನೆಯಬಹುದು.

ಬೆಂಗಳೂರು ಅಂತರಾಷ್ಟ್ರೀಯ ಕಿರು ಚಿತ್ರೋತ್ಸವ ರಾಜ್ಯದ, ದೇಶ ವಿದೇಶದ ಉತ್ಸಾಹಿಗಳಿಗೆ ತಮ್ಮ ಪ್ರತಿಭೆಯನ್ನು ಸಾದರ ಪಡಿಸಲು ಅವಕಾಶ ದೊರಕಿಸುವಂತೆ, ಕಿರು ಚಿತ್ರಗಳನ್ನು ಆಸ್ವಾದಿಸುವ ಚಿತ್ರ ಪ್ರೇಮಿಗಳಿಗೆ ರಸದೌತಣ ನೀಡುತ್ತದೆ. ಸುಲಭದಲ್ಲಿ ನೋಡಲು ಸಿಗದ ಕಿರು ಚಿತ್ರಗಳನ್ನು ಈ ಸಂದರ್ಭದಲ್ಲಿ ನೋಡಿ ಆನಂದಿಸಬಹುದು. ಪ್ರಶಸ್ತಿ ವಿಜೇತ ಚಿತ್ರಗಳಾದ ʼ ಸನ್‌ ಫ್ಲವರ್ಸ್‌ ವೆರ್‌ ದಿ ಫಸ್ಟ್‌ ಟು ನೋ ʼ ʼ ದಿ ಫೀಸ್ಟ್‌ ʼ ನಂತಹ ಸಿನಿಮಾಗಳು ಸಾಮಾಜಿಕ ಮಾಧ್ಯಮಗಳಲ್ಲು ನೋಡಲು ಸಿಗುವುದು ಕಷ್ಟ. ಕಿರು ಚಿತ್ರೋತ್ಸವದ ಚಿತ್ರಗಳನ್ನು ಆಯೋಜಿತ ಪ್ರದರ್ಶನ ಮಂದಿರಗಳಲ್ಲದೆ ಬಾಹ್ಯ ಮಾಧ್ಯಮಗಳಲ್ಲೂ ಒದಗಿಸುವುದರಿಂದ ವೀಕ್ಷಣೆಗೂ ಅನುಕೂಲ.

ಈ ಎಲ್ಲಾ ಅನುಕೂಲಗಳ ನಡುವೆಯೂ ಬೆಂಗಳೂರು ಕಿರು ಚಿತ್ರೋತ್ಸವದಲ್ಲಿ ಸಾಕಷ್ಟು ಕೊರತೆಗಳೂ ಇವೆ. ಇಲ್ಲಿ ಪ್ರದರ್ಶನಗೊಂಡ ಕಿರು ಚಿತ್ರಗಳನ್ನು ವೀಕ್ಷಿಸಿದಾಗ ಈ ದೇಶದಲ್ಲಿ ಎಲ್ಲವೂ ಚೆನ್ನಾಗಿದೆ, ಜನರು ಬಹಳ ಸುಖಿಗಳಾಗಿದ್ದಾರೆ ಎನ್ನುವ ಭಾವನೆ ಉಂಟಾಗುವಂತಿದೆ. ದಿನನಿತ್ಯದ ತರಲೆ ತಾಪತ್ರಯಗಳು, ಅಸಹನೆ, ಜಾತಿ-ಧರ್ಮಗಳ ಜಟಾಪಟಿ, ಅಧಿಕಾರಸ್ಥರ ಅಹಂಕಾರ, ಪ್ರಭುತ್ವದ ನಿರಂಕುಶ ಧೋರಣೆ ಇವು ಯಾವುವೂ ಈ ಕಿರು ಚಿತ್ರಗಳಲ್ಲಿ ಇಲ್ಲ. ಹೆಚ್ಚಿನ ಕಿರು ಚಿತ್ರಗಳು ಸಮಸ್ಯೆಗಳ ಆಳಕ್ಕಿಳಿಯದೆ, ಮೇಲ್ಪದರದಲ್ಲೇ ಜನಪ್ರಿಯ ಸಿನಿಮಾಗಳ ಮಾದರಿಯಲ್ಲಿವೆ. ʼ ದಿ ಫೀಸ್ಟ್‌ ʼ ಒಂದು ಅಪವಾದವಾದರೆ, ಹಿಂದಿಯ ʼಆಯೇಷಾ ʼ ದಲ್ಲಿ ಸಣ್ಣ ಮಟ್ಟಿನ ಸ್ಪಂದನೆ ಇದೆ. ಉಳಿದ ದೇಶೀಯ ಕಿರು ಚಿತ್ರಗಳಲ್ಲಿ ಆ ಮಟ್ಟಿನ ಸಾಮಾಜಿಕ ಕಾಳಜಿ, ಕಳಕಳಿ ಕಾಣಿಸುವುದಿಲ್ಲ. ʼ ಸಂಡೆ ಇನ್‌ ರೀಗಲ್‌ ಕೌಂಟ್‌ ʼ ಎನ್ನುವ ವಿದೇಶಿ ಸಿನಿಮಾ ವ್ಯಕ್ತ ಪಡಿಸುವ ನಿರಂಕುಶ ಪ್ರಭುತ್ವದ ಅಣಕ ಭಾರತೀಯ, ಕರ್ನಾಟಕ ವಿಭಾಗದ ಯಾವ ಸಿನಿಮಾದಲ್ಲೂ ಇಲ್ಲ.

ಕಿರು ಚಿತ್ರಗಳನ್ನು ಬಗ್ಗೆ ಆಯ್ಕೆ ಮಾಡಿವರಿಗೆ, ತೀರ್ಪುಗಾರರಿಗೆ ದಲಿತ, ತಳ ಸಮುದಾಯದ ಚಿತ್ರಗಳ ಬಗ್ಗೆ ಅಲರ್ಜಿ ಇರುವಂತಿದೆ. ನನಗೆ ತಿಳಿದಂತೆ ತಳ ಸುಮದಾಯದ ಸಮಸ್ಯೆಗಳ ಕೆಲವು ಚಿತ್ರಗಳು ಆಯ್ಕೆಗೆ ಬಂದಿದ್ದವು. ಅವನ್ನೆಲ್ಲಾ ನಿರಾಕರಿಸಿ ಕಾಟಾಚಾರಕ್ಕೆ ʼ ನಾನು ಒಳಗೆ ಬರಬಹುದೇ ʼ ಎನ್ನುವ ಒಂದೇ ಒಂದು ಕಿರು ಚಿತ್ರಕ್ಕೆ ಅವಕಾಶ ಕೊಡಲಾಗಿದೆ. ಈ ಚಿತ್ರಕ್ಕೆ ಪ್ರಶಸ್ತಿ ಪಡೆಯುವ ಎಲ್ಲಾ ಅರ್ಹತೆಗಳಿದ್ದವು. ಅದನ್ನು ನಿರಾಕರಿಸಿ ಅದಕ್ಕಿಂತ ಉತ್ತಮವಲ್ಲದ ಕಿರು ಚಿತ್ರವನ್ನು ಆರಿಸಲಾಗಿದೆ. ಇದು ಆಯೋಜಕರ ಪೂರ್ವಗ್ರಹವೇ, ಉದ್ದೇಶಪೂರ್ವಕ ಅವಗಣನೆಯೇ ತಿಳಿಯದು!

2010 ರಿಂದ ಬೆಂಗಳೂರು ಕಿರು ಚಿತ್ರೋತ್ಸವವನ್ನು ನಡೆಸುತ್ತಾ ಬರುತ್ತಿರುವ ಆಯೋಜಕರ ಪ್ರಯತ್ನ ಅಭಿನಂದನೆಗೆ ಅರ್ಹವಾದುದು. ಆದರೆ ಕಿರು ಚಿತ್ರೋತ್ಸವ ಕೆಲವೇ ಜನರ ಸ್ವತ್ತಾಗಬಾರದು. ಅವರವರೇ ನೋಡುವುದು, ಅವರವರೇ ಮೆಚ್ಚುವುದು, ಅವರಿಗಿಷ್ಟವಿಲ್ಲದವರನ್ನು ಪಕ್ಕಕ್ಕೆ ಸರಿಸುವುದು ಸರಿಯಲ್ಲ. ಒಳಗೊಳ್ಳುವಿಕೆ, ವಿಶಾಲ ಮನಸ್ಸುಗಳಿದ್ದರೆ ಕಿರು ಚಿತ್ರೋತ್ಸವಗಳು ಇನ್ನಷ್ಟು ಅರ್ಥಪೂರ್ಣವಾಗುತ್ತವೆ.

ʼನಾನು ದಡ್ ನನ್ ಮಗʼ: ಪ್ರಜಾಕೀಯದ ಬಗ್ಗೆ ಬೇಸರಗೊಂಡು ಪೋಸ್ಟ್‌ ಹಾಕಿದ ಉಪೇಂದ್ರ
ಬೆಂಗಳೂರು: ನೆರೆರಾಜ್ಯದಲ್ಲಿ ನಟ ಪವನ್ ಕಲ್ಯಾಣ್‌ ಗೆದ್ದ ಬೆನ್ನಲ್ಲೆ ತಮ್ಮ ಪ್ರಜಾಕೀಯ ಪಕ್ಷದ ಬಗ್ಗೆ ಬೇಸರಪಟ್ಟುಕೊಂಡು ನಟ ಉಪೇಂದ್ರ ಇನಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಪವನ್‌ ಅವರನ್ನು ಗೆಲ್ಲಿಸಲು ತೆಲುಗಿನ ಜನ 14 ವರ್ಷ ತೆಗೆದುಕೊಂಡರು, ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ’ ಎಂದಿರುವ ಉಪೇಂದ್ರ ತಮ್ಮ ಪಕ್ಷ ‘ಪ್ರಜಾಕೀಯ’ದ ಸಿದ್ದಾಂತ ಬಗ್ಗೆ ಜನರಿಗೆ ಅರ್ಥವಾಗದೇ ಇರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

‘ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್… ನಾನು ಗೆಲ್ಲಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವು ಹೇಳಿದ ಹಾಗೆ ಮಾಡುತ್ತೇನೆ. ಗೆದ್ದೆ ಗೆಲ್ಲುತ್ತೇನೆ. ನೀವು ಗೆಲ್ಲೋದು ಯಾವಾಗ ಅಂತ ನೀವು ಯೋಚನೆ ಮಾಡಿ. ಮುಂದಿನ ಚುನಾವಣೆಯಲ್ಲಿ ನನಗೆ ಕೆಲಸ ಕೊಡುತ್ತಿರಾ ಅಂದ್ರೆ ನಿಲ್ಲುತ್ತೇನೆ. ಆಗಲೂ ನೀವು ಎಮೋಷನಲ್‌ ಪ್ರಚಾರ ಮಾಡಬೇಕು. ಸಭೆ ಸಮಾರಂಭ ಎಲ್ಲವನ್ನು ಮಾಡಿ. ಕಷ್ಟಪಡಿ.. ಆಮೇಲೆ ಐದು ವರ್ಷ ನೀವೇನು ಬೇಕಾದರೂ ಮಾಡಿಕೊಳ್ಳಿ ನಾನು ಕೇಳುವುದಕ್ಕೆ ಬರಲ್ಲ ಅಂದರೆ… ಉಸ್‌..ಏನು ಬರೀಬೇಕೋ ಗೊತ್ತಾಗುತ್ತಿಲ್ಲ. ಈ ದಡ್ಡ ನನ್ನ ಮಗಂಗೆ ಯಾವನಾದ್ರೂ ಇನ್ನು ಮೇಲೆ ಬುದ್ದಿವಂತಾ ಅಂದರೆ ಅಷ್ಟೇ… ಸೆಂದಾಗಿರಕ್ಕಿಲ್ಲಾ’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಪವನ್ ಕಲ್ಯಾಣ್‌ ಅವರ ಜನಸೇನಾ ಪಕ್ಷಕ್ಕೆ ಅಭೂತ ಪೂರ್ವ ಫಲಿತಾಂಶ ಬಂದಿದ್ದು, ಇದಾದ ಬೆನ್ನಲ್ಲೇ ಉಪೇಂದ್ರ ಅವರ ಪ್ರಜಾಕೀಯ ಪಕ್ಷವನ್ನು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಹೋಲಿಸಿ ಅನೇಕ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಪಕ್ಷ ಬೆಳೆಸುವುದರಲ್ಲಿ ಪವನ್‌ ಕಲ್ಯಾಣ್ ಅವರಿಗಿದ್ದ ಆಸಕ್ತಿಯನ್ನು ಉಪೇಂದ್ರ ಅವರು ತೋರಿಸುತ್ತಿಲ್ಲ ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

2018ರಲ್ಲಿ ‘ಉತ್ತಮ ಪ್ರಜಾಕೀಯ ಪಕ್ಷ’ವನ್ನು ಕಟ್ಟಿ ಬೆಳೆಸಿದ್ದ ಉಪೇಂದ್ರ ಅವರು, 2019 ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇಲ್ಲಿಯವರೆಗೆ ನಡೆದ ಯಾವುದೇ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಗೆಲುವು ದಕ್ಕಿಲ್ಲ. ಹೀಗಾಗಿ ಅವರಿಗೆ ತಮ್ಮ ಪ್ರಜಾಕೀಯ ರಾಜಕೀಯ ಸಿದ್ಧಾಂತದ ಬಗ್ಗೆಯೇ ಬೇಸರ ಬಂದಂತಿದೆ.  ಅವರ ಪೋಸ್ಟ್‌  ಓದಲು ಇಲ್ಲಿ ಕ್ಲಿಕ್ಕಿಸಿ.

‘ಹಮಾರೆ ಬಾರಹ್’ ಸಿನಿಮಾ ರಾಜ್ಯದಲ್ಲಿ ಎರಡು ವಾರ ನಿಷೇಧ: ಮುಸ್ಲಿಮರ ಬಗ್ಗೆ ತುಷ್ಟೀಕರಣದ ಆರೋಪ
ಬೆಂಗಳೂರು: ಮುಸ್ಲಿಮರ ಬಗ್ಗೆ ಅವಹೇಳನಕಾರಿ ಸಂಗತಿಗಳಿವೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದು ಶುಕ್ರವಾರ ಬಿಡುಗಡೆಯಾಗಬೇಕಿದ್ದ ‘ಹಮಾರೆ ಬಾರಹ್’ ಹಿಂದಿ ಸಿನಿಮಾ ಹಾಗೂ ಅದರ ಟ್ರೇಲರ್ ಅನ್ನು ರಾಜ್ಯ ಸರ್ಕಾರ ನಿಷೇಧಿಸಿದೆ.

ಈ ಸಿನಿಮಾವನ್ನು ಎರಡು ವಾರಗಳ ಅವಧಿ ಅಥವಾ ಮುಂದಿನ ಆದೇಶದವರೆಗೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಬಿಡುಗಡೆಗೆ ಅನುಮತಿ ಕೊಟ್ಟಲ್ಲಿ ರಾಜ್ಯದಲ್ಲಿ ಶಾಂತಿಗೆ ಭಂಗವುಂಟು ಮಾಡುವ  ಧರ್ಮ ಧರ್ಮಗಳ ನಡುವೆ ಹಾಗೂ ಜಾತಿ ಜಾತಿಗಳ ಮಧ್ಯೆ ದ್ವೇಷವುಂಟು ಮಾಡುವ ಸಂಗತಿಗಳಿವೆ ಎನ್ನಲಾಗಿದೆ.  ಒಂದು ಧರ್ಮದ ಪದ್ಧತಿಗಳನ್ನು ಉದ್ದೇಶಪೂರ್ವಕವಾಗಿ ಅವಹೇಳನ ಮಾಡುವ ದೃಶ್ಯಗಳಿವೆ. ಅವು ಮುಸ್ಲಿಮರ ಹಾಗೂ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತೆ ಕಂಡು ಬಂದಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಇತ್ತೀಚಿಗೆ ‘ಜೀ ಸಿನಿಮಾ’ ವಾಹಿನಿಯು ‘ಹಮಾರೆ ಬಾರಹ್’ ಎಂಬ ಚಲನಚಿತ್ರದ ಟ್ರೇಲರ್ ಬಿಡುಗಡೆ ಮಾಡಿತ್ತು.  ಇದರಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಪ್ರಚೋದನಾತ್ಮಕ ಮತ್ತು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಚಿತ್ರ ಪ್ರದರ್ಶನಕ್ಕೆ ರಾಜ್ಯದ ವಿವಿಧ ಮುಸ್ಲಿಂ ಸಂಘಗಳಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ಚಾನಲ್‌ಗಳು ಹಾಗೂ ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.

ಆದೇಶದ ವಿವರ: ಇಂತಹ ಚಿತ್ರಗಳಿಗೆ ಅನುಮತಿ ನೀಡಿದರೆ ಧರ್ಮ ಮತ್ತು ಜಾತಿಗಳ ಮಧ್ಯೆ ದ್ವೇಷ ಹುಟ್ಟಿಸುತ್ತದೆ. ದೇಶದಲ್ಲಿ ಒಂದು ಧರ್ಮವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ, ಕೋಮು ಸೌಹಾರ್ದತೆಗೆ ಧಕ್ಕೆಯುಂಟು ಮಾಡಿ, ದೇಶದಲ್ಲಿ ಅಶಾಂತಿ ಉಂಟು ಮಾಡುವುದು, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಒಂದು ಷಡ್ಯಂತ್ರವಾಗಿದೆ. ಚಲನಚಿತ್ರಗಳು ಸಮಾಜದಲ್ಲಿ ಮಾರ್ಗದರ್ಶನವಾಗಬೇಕು, ಅದನ್ನು ಬಿಟ್ಟು ಧರ್ಮಗಳ ಮಧ್ಯೆ ದ್ವೇಷ ಭಾವನೆ ಹುಟ್ಟಿಸುವುದಲ್ಲ. ಅದರಂತೆ, ಇಂದು (ಜೂನ್ 07, 2024) ದೇಶಾದ್ಯಂತ ಬಿಡುಗಡೆಯಾಗಲಿರುವ ‘ಹಮಾರೆ ಬಾರಹ್’ ಎಂಬ ವಿವಾದಾತ್ಮಕ ಸಿನಿಮಾ ಬಿಡುಗಡೆಯನ್ನು ನಿಷೇಧಿಸಲಾಗಿದೆ.

‘ಈ ಚಲನಚಿತ್ರದ ಟ್ರೈಲರ್ ಅನ್ನು ಪರಿಶೀಲಿಸಲಾಗಿದ್ದು, ‘ಹಮಾರೆ ಬಾರಹ್’ ಚಿತ್ರದಲ್ಲಿ ಪವಿತ್ರ ಗ್ರಂಥ ‘ಖುರಾನ್’ ಶರೀಫರಲ್ಲಿ ಇರುವ ‘ಸೂರೆ ಎ ಬಕರ’ದ ಸಾಲಿನಲ್ಲಿನ ಉಪದೇಶಗಳು ಹಾಗೂ ಸಂದೇಶಗಳ ಕುರಿತಂತೆ ನಿರ್ಮಾಪಕ ಹಾಗೂ ನಿರ್ದೇಶಕರು ತಪ್ಪು ಅಪಾರ್ಥ ಬರುವಂತೆ ಸೃಷ್ಟಿಸಿದ್ದಾರೆ. ಒಂದು ಸಮಾಜವನ್ನು ಧರ್ಮದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದು ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಸಂಭವವಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವೇದಿಕೆ ಮೇಲೆಯೇ ಹಿರೋಯಿನ್ ತಳ್ಳಿದ ಬಾಲಯ್ಯ: ನೆಟ್ಟಿಗರಿಂದ ಆಕ್ರೋಶ
ಹಿರಿಯ ನಟ ನಂದಮೂರಿ ಬಾಲಕೃಷ್ಣ (ಬಾಲಯ್ಯ) ಅವರು ‘ಗ್ಯಾಂಗ್ ಆಫ್ ಗೋದಾವರಿ’ ಚಿತ್ರದ ಈವೆಂಟ್​ ಸಮಯದಲ್ಲಿ ವೇದಿಕೆಯ ಮೇಲೆಯೇ ಆ ಚಿತ್ರದ ಮುಖ್ಯನಟಿ ಅಂಜಲಿಯವರನ್ನು ಜೋರಾಗಿ ತಳ್ಳಿದ ವಿಡಿಯೋ ಸಾಕಷ್ಟು ವೈರಲ್‌ ಆಗುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬಾಲಯ್ಯ ನಟನೆಯ ಅಂಜಲಿ ನಟನೆಯ ‘ಗ್ಯಾಂಗ್ ಆಫ್ ಗೋದಾವರಿ’ ಚಿತ್ರದ ಈವೆಂಟ್​ ನಡೆಯುತ್ತಿತ್ತು. ಈ ಕಾರ್ಯಕ್ರಮ ಚಿತ್ರದ ಮತ್ತೋರ್ವ ನಟಿ ನೇಹಾಶೆಟ್ಟಿ ಸಹ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಿನಿಮಾದ ಕಾರ್ಯಕ್ರಮದ ವೇದಿಕೆ ಮೇಲೆ ನಡೆದ ಘಟನೆ ಅನೇಕರನ್ನು ದಂಗಾಗಿಸಿದೆ.

ಹಿರಿಯ ನಟ ಬಾಲಯ್ಯ ಅವರ ಮುಂಗೋಪ ಮತ್ತು ಅವರ ಅಹಂಕಾರದ ಕುರಿತು ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತವೆ.  ಅವರಿಗೆ ಕೋಪ ಜಾಸ್ತಿ. ಅವರು ಸಹ ನಟರ ಮೇಲೆ, ಫ್ಯಾನ್ಸ್ ಮೇಲೆ ರೇಗಾಡಿದ ಸಾಕಷ್ಟು ಉದಾಹರಣೆಗಳಿವೆ. ಈಗ ಅವರು ನಟಿ ಅಂಜಲಿ ಅವರನ್ನು ತಳ್ಳಿದ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋ ಲಿಂಕ್‌ ಇಲ್ಲಿದೆ.

ಅಂಜಲಿ, ನೇಹಾ ಶೆಟ್ಟಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ. ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯವರ ಭುಜ ಹಿಡಿದು ತಳ್ಳಿದ್ದಾರೆ.  ಅಂಜಲಿ ಇನ್ನೇನು ಬೀಳಲಿದ್ದವರು ಸಾವರಿಸಿಕೊಂಡು ಗಟ್ಟಿಯಾಗಿ ನಿಂತರು. ಅಲ್ಲೇ ಇದ್ದ ನೇಹಾ ಶೆಟ್ಟಿ ಈ ಘಟನೆಯಿಂದ ಶಾಕ್ ಆದರು. ಆದರೆ, ಅಂಜಲಿ ಅವರು ಏನನ್ನೂ ತೋರಿಸಿಕೊಳ್ಳದೆ ಜೋರಾಗಿ ನಗುವ ಮೂಲಕ ಆಗಲಿರುವ ಅನಾಹುತವನ್ನು ಶಾಂತಗೊಳಿಸಿದ್ದಾರೆ. . ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ.

‘ಬಾಲಯ್ಯ ಅವರು ಈ ರೀತಿ ಮಾಡಿದ್ದು ಸರಿ ಅಲ್ಲ ಎಂದು ಕೆಲವರು ಹರಿಹಾಯ್ದಿದ್ದರೆ, ಇನ್ನು ಹಲವರು ‘ಬಾಲಯ್ಯ ಅವರು ಈ ರೀತಿ ನಡೆದುಕೊಳ್ಳುತ್ತಿರುವುದು ಹೊಸದಲ್ಲ’ ಎಂದಿದ್ದಾರೆ. ‘ಹಿರಿಯ ನಟನಾಗಿ ಹೇಗೆ ನಡೆದುಕೊಳ್ಳಬೇಕು ಅನ್ನೋದು ಗೊತ್ತಿಲ್ಲ’ ಎಂದು ಅನೇಕರು ಬಾಲಯ್ಯ ಅವರನ್ನು ಬೈದಿದ್ದಾರೆ.

ಬಾಲಯ್ಯ ಅವರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ. ‘ಅಖಂಡ’, ‘ವೀರಸಿಂಹ ರೆಡ್ಡಿ, ‘ಭಗವಾನ್ ಕೇಸರಿ’ ಮೊದಲಾದ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿವೆ. 2023ರಲ್ಲಿ ರಿಲೀಸ್ ಆದ ‘ವೀರಸಿಂಹ ರೆಡ್ಡಿ’ ಅವರ ನಟನೆಯ ಕೊನೆಯ ಸಿನಿಮಾ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 132 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ‘ಅಖಂಡ 2’ ಚಿತ್ರದಲ್ಲಿ ಬಾಲಯ್ಯ ನಟಿಸಲಿದ್ದಾರೆ. ಇತ್ತೀಚೆಗೆ ಬೇರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಅವರು, ‘ಹೊಸ ಚಿತ್ರದ ಕೆಲಸ ಆರಂಭ ಆಗಿಲ್ಲ. ಚುನಾವಣಾ ಫಲಿತಾಂಶ ಬಂದ ಬಳಿಕವೇ ಕೆಲಸ ಶುರು ಮಾಡುತ್ತೇನೆ’ ಎಂದಿದ್ದರು.

ಕೇರಳ ಸ್ಟೋರಿ: ʼಇಸ್ಲಾಮೊಫೋಬಿಯಾʼ ದುರುದ್ದೇಶದ ಸುಳ್ಳಿನ ಕಂತೆ
1925ರಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬರೆದ, ಮೈನ್ ಕಾಂಫ್ (ನನ್ನ ಹೊರಾಟ) ಎನ್ನುವ ಪುಸ್ತಕದಲ್ಲಿ ಆತ ದ ಬಿಗ್ ಲೈ ಎನ್ನುವ ಒಂದು ಪ್ರೊಪಗ್ಯಾಂಡಾ ತಂತ್ರದ ಬಗ್ಗೆ ವಿವರಣೆ ಇದೆ.  ‘ಪ್ರೊಪಗ್ಯಾಂಡಾ’ ಎಂದರೆ, ಒಬ್ಬ ರಾಜಕೀಯ ನಾಯಕ, ಪಕ್ಷ, ಸಿದ್ಧಾಂತ ಇತ್ಯಾದಿಗಳಿಗೆ ಬೆಂಬಲವನ್ನು ಗಳಿಸಲು ಬಳಸಲಾಗುವ ಸುಳ್ಳು ಅಥವಾ ಉತ್ಪ್ರೇಕ್ಷಿತ ಮಾಹಿತಿ ಮತ್ತು ವಿಚಾರಗಳನ್ನು ಪ್ರಚಾರ ಮಾಡುವ ಒಂದು ವ್ಯವಸ್ಥಿತ ಯೋಜನೆ.

ಈ ಕುರಿತು ಬರೆಯುತ್ತಾ ಅಡಾಲ್ಫ್ ಹಿಟ್ಲರ್ ಹೇಳುತ್ತಾನೆ, ‘ಜನರನ್ನು ಮರಳು ಮಾಡಲು ಎಷ್ಟು ದೊಡ್ಡ ಸುಳ್ಳು ಹೇಳಬೇಕು ಎಂದರೆ, ‘ಆಯ್, ಇಷ್ಟು ದೊಡ್ಡ ಸುಳ್ಳು ಯಾರ‍್ರೀ ಹೇಳ್ತಾರೆ, ಇವರು ಹೇಳ್ತಾರೆ ಅಂದಮೆಲೆ ಇದು ನಿಜಾನೇ ಇರಬೇಕು’ ಅಂತ ಜನ ನಂಬುವುದಕ್ಕೆ ಶುರು ಮಾಡಬೇಕು. ಸುಳ್ಳು ದೊಡ್ಡದಾಗಿರಬೇಕು, ಅಷ್ಟೇ ಅಲ್ಲ, ಅದನ್ನು ಯಾವುದೇ ಎಗ್ಗಿಲ್ಲದೇ, ಆತ್ಮವಿಶ್ವಾಸದಿಂದ ಹೇಳಬೇಕು. ಆಗ ಜನ ಅದನ್ನು ನಿಜ ಅಂತ ನಂಬ್ತಾರೆ! ತಾವೂ ಅದನ್ನು ಇನ್ನಷ್ಟು ಜನರಿಗೆ ಹೇಳ್ತಾರೆ. ಸುಳ್ಳು ಹರಡುತ್ತಾ ಕ್ರಮೇಣ ಸತ್ಯ ಆಗಿಬಿಡುತ್ತೆ. ಇದನ್ನೇ ಅನುಸರಿಸಿ ಹಿಟ್ಲರನ ಪ್ರಚಾರ ಖಾತೆ ಮಂತ್ರಿ ಗೊಬೆಲ್ಸ್ ಹೇಳುವ ಇನ್ನೊಂದು ಪ್ರೊಪಗಾಂಡಾ ತಂತ್ರವೆಂದರೆ, ‘ಹೇಳಿದ್ದನ್ನು ಮತ್ತೆ ಮತ್ತೆ ಹೇಳುವುದೂ ಬಹಳ ಮುಖ್ಯ. ಮತ್ತೆ ಮತ್ತೆ ಅದನ್ನು ಕೇಳುವುದರಿಂದ ಜನ ಅದನ್ನು ಕೊನೆಗೂ ನಂಬುತ್ತಾರೆ. ಇನ್ನು ನಾಲ್ಕೈದು ಬೇರೆ ಬೇರೆ ಮೂಲಗಳಿಂದ ಕೇಳಿಸಿಕೊಂಡರಂತೂ ಜನ ಅದನ್ನು ಅಧಿಕೃತ ಸತ್ಯ ಎಂದು ನಂಬಿಬಿಡುತ್ತಾರೆ”

ಅವರ ಪ್ರಕಾರ ಇದಕ್ಕೆ ಪೂರಕವಾದ ಇನ್ನೊಂದು ತಂತ್ರವಿದೆ; ಬರೀ ದೊಡ್ಡದೊಡ್ಡ ಸುಳ್ಳುಗಳನ್ನಷ್ಟೇ ಹೇಳುತ್ತಿದ್ದರೆ ಯಾವತ್ತಾದರೂ ಜನರಿಗೆ ಅನುಮಾನ ಬರಬಹುದು. ಅದ್ದರಿಂದ, ನಡನಡುವೆ ಕೆಲವು ಅರ್ಧ ಸತ್ಯಗಳನ್ನೂ ಸೇರಿಸಿ ಹೇಳಬೇಕು. ಆಗ ಅವುಗಳನ್ನೂ ಸೇರಿಸಿ ಜನ ಎಲ್ಲವನ್ನು ನಂಬಿಬಿಡುತ್ತಾರೆ.

ಇದನ್ನು ಯಾರಿಗೇ ಹೇಳಿನೋಡಿ ಅವರ ಮನಸ್ಸಿನಲ್ಲಿ ಈಗಾಗಲೇ ಒಬ್ಬ ವ್ಯಕ್ತಿಯ ಚಿತ್ರ ಮೂಡುತ್ತಿರುತ್ತದೆ; ಒಂದು ಪಕ್ಷದ ಕಾರ್ಯತಂತ್ರದ ಸುಳಿವು ಸಿಗುತ್ತಿರುತ್ತದೆ. ಭಾರತದ ಮುಸ್ಲಿಮರ ವಿರುದ್ಧ ದ್ವೇಷವನ್ನು ಕಾರುವಂತೆ ಮಾಡಲು ಒಂದು ರಾಜಕೀಯ ಪಕ್ಷ ಮತ್ತು ಅದಕ್ಕೆ ಸೇರಿದ ಸಾಧಾರಣ ಕಾರ್ಯಕರ್ತರಿಂದ ಹಿಡಿದು ಪ್ರಧಾನ ನಾಯಕರವರೆಗೆ ದೇಶದಲ್ಲಿ ಕೋಮು ಧ್ರುವೀಕರಣ ಮಾಡಲು ಸಂವಹನದ ಈ “ದೊಡ್ಡ ಸುಳ್ಳು” ತಂತ್ರವನ್ನು ವ್ಯವಸ್ಥಿತವಾಗಿ ಬಳಸುತ್ತಿರುವುದನ್ನು ನಾವು ಕಾಣುತ್ತೇವೆ. ನಾವೀನ ಮಾತಾಡಲು ಹೊರಟಿರುವ “ಕೇರಳ ಸ್ಟೋರಿ” ಸಿನಿಮಾ ಕೂಡ ಇದೇ ಸೂತ್ರವನ್ನು ಬಳಸುತ್ತದೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಹೌ ಟ್ರೂ ಇಸ್ ದ ಕೇರಳ ಸ್ಟೋರಿ.

ಹರಿಯಾಣದಲ್ಲಿ ಹುಟ್ಟಿ ಈಗ ಜರ್ಮನಿಯಲ್ಲಿಯಲ್ಲಿ ನೆಲೆಸಿರುವ ಧೃವ್ ರಾಠಿ ಒಬ್ಬ ನಾಸ್ತಿಕವಾದಿ. ಇವರು ಸೂಕ್ಷ್ಮ ವಿಷಯಗಳ ಬಗ್ಗೆ ಆಳವಾದ ಅಧ್ಯಯನ ಹಾಗೂ ಅಧಿಕೃತ ಅಂಕಿ ಅಂಶಗಳ ಸಹಿತ ವಿಶ್ಲೇಷಣೆ ಮಾಡುವ ಮೂಲಕ ಖ್ಯಾತ ಯುಟ್ಯೂಬರ್ ಆಗಿದ್ದಾರೆ.  ತಮ್ಮ ‘ಹೌ ಟ್ರೂ ಇಸ್ ದ ಕೇರಳ ಸ್ಟೋರಿ’ ಎಂಬ ಕಾರ್ಯಕ್ರಮದಲ್ಲಿ, ಕೇರಳ ಸ್ಟೋರಿ ಎಂಬ ಸಿನಿಮಾದಲ್ಲಿ ಜನರನ್ನು ಹಾದಿತಪ್ಪಿಸಲು ಈ ಮೂರೂ ತಂತ್ರಗಳನ್ನು ಬಳಸಲಾಗಿದೆ ಎನ್ನುತ್ತಾರೆ.

ನಾನು ಇಲ್ಲಿ ಸುದೀಪ್ತೋ ಸೇನ್ ನಿರ್ದೇಶನದ, ಸನ್‌ಶೈನ್ ಪಿಕ್ಚರ್ಸ್ ನಿರ್ಮಾಣದ ಹಿಂದಿ ಸಿನಿಮಾ, “ಕೇರಳ ಸ್ಟೋರಿ”ಯ ಕಲಾತ್ಮಕತೆ, ತಾಂತ್ರಿಕತೆ, ಅಭಿನಯ ಇತ್ಯಾದಿಗಳ ಕುರಿತು ಮಾತಾಡಲು ಹೋಗುತ್ತಿಲ್ಲ. ಬದಲಿಗೆ ಇದೊಂದು ಹಸಿಹಸಿ ರಾಜಕೀಯ ಅಜೆಂಡಾವನ್ನು ಪೂರೈಸಿಕೊಳ್ಳಲೆಂದೇ ಸೃಜನಶೀಲ ಸ್ವಾತಂತ್ರ್ಯ ಎಂಬ ಸೋಗಿನಲ್ಲಿ, ‘ಇಸ್ಲಾಮಾಫೋಬಿಯಾ’ವನ್ನು ಬಿತ್ತುವ ಉದ್ದೇಶದಿಂದ ತಯಾರಿಸಿರುವ ಒಂದು ಚಿತ್ರ ಎಂಬುದನ್ನು ಕೆಲವು ಅಧ್ಯಯನಗಳ ಹಿನ್ನೆಲೆಯಲ್ಲಿ ನಿಮ್ಮ ಮುಂದೆ ಇಡಲು ಪ್ರಯತ್ನಿಸುತ್ತಿದ್ದೇನೆ.

ಇಡೀ ಚಿತ್ರ ನಿಂತಿರುವುದೇ ಅದರ ನಾಯಕಿ ಪಾತ್ರ, ಪಾತಿಮಾಳ, “ನನ್ನಂಥ ೩೨,೦೦೦ ಯುವತಿಯರು ಸಿರಿಯಾ ಮತ್ತು ಯಮನ್ ಮರುಳುಗಾಡಿನಲ್ಲಿ ಸಮಾಧಿಯಾಗಿದ್ದಾರೆ.” ಎನ್ನುವ ಹೇಳಿಕೆಯ ಮೇಲೆ. ಬಲವಂತವಾಗಿ ಮತಾಂತರಕ್ಕೆ ಒಳಗಾಗಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಅಂಡ್ ಸಿರಿಯಾ (ಐಸಿಸ್) ಸೇರಿ, ಕೊನೆಯಲ್ಲಿ ವಿಶ್ವಸಂಸ್ಥೆಯ ಸೆರೆಮನೆಯೊಂದರಲ್ಲಿ ತನ್ನ ಹೇಳಿಕೆಯನ್ನು ದಾಖಲಿಸುವಾಗ, ‘ಕೇರಳ ಇಸ್ಲಾಮಿಕ್ ಸ್ಟೇಟ್ ಆಗಿಬಿಡುತ್ತದೆ, ದಯವಿಟ್ಟು ತಡೆಯಿರಿ’ ಎಂದು ಆಕೆ ಬೇಡಿಕೊಳ್ಳುವುದರ ಮೇಲೆ.

ಈ ಚಿತ್ರದ ನಿರ್ದೇಶಕ ಈ ದೇಶದಲ್ಲಿ ಬಿಜೆಪಿ ಮತ್ತು ಅದರ ಸಂಘಪರಿವಾರವು ಹುಟ್ಟುಹಾಕಿರುವ ‘ಲವ್ ಜಿಹಾದ್’ ಎಂಬ ಹುಸಿ ಸಿದ್ಧಾಂತ ಮತ್ತು ಅದಕ್ಕೆ ಪೂರಕವಾಗಿ ಕಟ್ಟಿಕೊಡುವ ರೋಚಕ ಕಥನಗಳನ್ನೇ ಪ್ರತಿಪಾದಿಸುವ ರೀತಿಯಲ್ಲಿ ಕೇರಳ ಸ್ಟೋರಿ ಮಾಡಿದ್ದಾನೆ. ದೇಶದಲ್ಲಿ, ಮುಖ್ಯವಾಗಿ ಕೇರಳದಲ್ಲಿ, ಮುಸ್ಲಿಮ್ ಯುವಕರು ಅಮಾಯಕ ಹಿಂದು ಹುಡುಗಿಯರನ್ನು ಪ್ರೀತಿಪ್ರೇಮದ ಬಲೆಯಲ್ಲಿ ಕೆಡವಿಕೊಂಡು, ಮತಾಂತರಗೊಳಿಸಿ, ಮದುವೆಯಾಗಿ ಕೊನೆಗೆ ಅವರನ್ನು ಐಸಿಸ್ ಅಂತರರಾಷ್ಟ್ರೀಯ ಭಯೋತ್ಪಾದಕ ಗುಂಪಿಗೆ ಒಪ್ಪಿಸಿಬಿಡುತ್ತಾರೆ ಎನ್ನುವುದು ಇವರ ಪ್ರತಿಪಾದನೆ. ದೇಶದಲ್ಲಿ ಪ್ರೇಮ ವಿವಾಹಗಳು, ಅಂತರಜಾತಿ, ಅಂತರಧರ್ಮೀಯ ವಿವಾಹಗಳು ಅಪರೂಪವೇನಲ್ಲ, ಮದುವೆಯಾಗುತ್ತೇನೆ ಎಂದು ಹೇಳಿ ಮಾಡುವ ವಂಚನೆಗಳಿಗೂ ಕಡಿಮೆ ಏನಿಲ್ಲ. ಆದರೆ, ಹುಡುಗಿ ಹಿಂದೂ ಆಗಿದ್ದು, ಹುಡುಗ ಮುಸ್ಲಿಮ್ ಆಗಿದ್ದರೆ ಅದನ್ನು ‘ಲವ್ ಜಿಹಾದ್’ ಪಿತೂರಿಯ ಅಂಗವ ಎಂದು ಬಿಂಬಿಸಲಾಗುತ್ತದೆ. ಇದು ಹಿಂದುತ್ವವಾದಿಗಳು ಮುಸಲ್ಮಾನರ ಮೇಲೆ ಕಾರುತ್ತಿರುವ ದ್ವೇಷದ ಒಂದು ವಿಕೃತರೂಪವಾಗಿದೆ.

ನಾವು ಕೇರಳ ಸ್ಟೋರಿ ತನ್ನ ಸಂದೇಶಕ್ಕೆ ಬಲ ನೀಡಲು ಉಲ್ಲೇಖಿಸಿರುವ ಅಂಕಿ ಅಂಶಗಳು: ಚಿತ್ರದ ಟೀಸರಿನಲ್ಲಿಯೇ ಎದ್ದುಕಾಣುವ ಹಾಗೆ ಹೇಳಿದ್ದು, ಕೇರಳವೊಂದರಿಂದಲೇ ಒಟ್ಟು ೩೨,೦೦೦ ಹಿಂದೂ ಯುವತಿಯರು ವಂಚನೆಗೆ ಒಳಗಾಗಿ ಐಸಿಸ್ ಸೇರಿದ್ದಾರೆ ಎಂದು. ವಾಸ್ತವವಾಗಿ ಇಡೀ ಐಸಿಸ್‌ನ ಸಂಖ್ಯಾಬಲವೂ ಅಷ್ಟಿಲ್ಲ ಎಂದು ಬಲ್ಲವರು ಹೇಳುತ್ತಾರೆ, ಆ ಮಾತು ಬೇರೆ. ನಿರ್ದೇಶಕ ಸುದೀಪ್ತೋ ಸೇನ್ ೨೦೧೮ರಲ್ಲಿಯೇ ಈ ಕುರಿತು ಒಂದು ಸಾಕ್ಷಚಿತ್ರವನ್ನು ಮಾಡಿ ೩೨,೦೦೦ ಯುವತಿಯರು ಕೇರಳದಿಂದ ಕಣ್ಮರೆಯಾಗಿರುವ ಕುರಿತು ಹೇಳಿ ಇದನ್ನು ಕೇರಳವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ‘ಅಂತರರಾಷ್ಟ್ರೀಯ ಪಿತೂರಿ’ ಎಂದು ಬಣ್ಣಿಸಿದ್ದರು.

ರಾಜಕೀಯ ಪರ-ವಿರೋಧ: ಚಿತ್ರವು ಇಡೀ ದೇಶದಲ್ಲಿ ಪರ-ವಿರೋಧಿ ಅಲೆಗೆ ಪ್ರೇರಕವಾಯಿತು. ನಿರೀಕ್ಷೆಯಂತೆ, ಆಡಳಿತಾರೂಢ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಇತರ ಹಿಂದೂವಾದಿ ಸಂಘಟನೆಗಳು ಕೇರಳ ಸ್ಟೋರಿಯನ್ನು ಹಾಡಿಹೊಗಳಿದರು. ಎಷ್ಟರ ಮಟ್ಟಿಗೆ ಎಂದರೆ, ಅದನ್ನಿನ್ನೂ ನೋಡಿರದ ಮೋದಿಯವರು ಕರ್ನಾಟಕದ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ನಡೆದ ಪ್ರಚಾರ ಭಾಷಣದಲ್ಲಿ ಈ ಚಿತ್ರವನ್ನು ಉಲ್ಲೇಖಿಸಿ, ‘ದಕ್ಷಿಣ ರಾಜ್ಯಗಳಲ್ಲಿ ಭಯೋತ್ಪಾದನೆ ಪಿತೂರಿಗಳು ಇರುವುದನ್ನು ಕೇರಳ ಸ್ಟೋರಿ ಬಹಿರಂಗಪಡಿಸಿದೆ. ಭಯೋತ್ಪಾದಕ ಮನಸ್ಥಿತಿ ಹೊಂದಿರುವ ಜನರೊಂದಿಗೆ ಕಾಂಗ್ರೆಸ್ ರಹಸ್ಯವಾಗಿ ರಾಜಕೀಯ ಮಾಡುತ್ತಿದೆ,’ ಎಂದು ಆಪಾದಿಸಿದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚಿತ್ರದ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿ ವಿಶೇಷವಾಗಿ ಹಿಂದೂ ಹುಡುಗಿಯರನ್ನು ತಮ್ಮೊಂದಿಗೆ ಕರೆದೊಯ್ದು ಸಿನಿಮಾ ತೋರಿಸಿದರು. ಬಿಜೆಪಿ ಆಡಳಿತದ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ನೀಡಲಾಯಿತು. ಆರ್‌ಎಸ್‌ಎಸ್ ಮುಖವಾಣಿಯಾದ ಆರ್ಗನೈಜರ್ ಈ ಸಿನಿಮಾವನ್ನು “ಅಪಾಯಕಾರಿ ಸತ್ಯ” ಎಂದು ವರ್ಣಿಸಿತು.

ಕೇರಳದಲ್ಲಿ ಸಿಪಿಐ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಈ ಚಿತ್ರವು ಸಂಘಪರಿವಾರದ ಅಜೆಂಡಾಕ್ಕೆ ಅನುಗುಣವಾಗಿ ‘ಕೋಮುವಾದಿ ತಪ್ಪು ಮಾಹಿತಿಯನ್ನು ಹಬ್ಬಿಸಲು ನೋಡುತ್ತಿದೆ’ ಎಂದು ಆಕ್ಷೇಪಿಸಿವೆ. ಆದರೆ ಕೇರಳ ಸರಕಾರ ಇದನ್ನು ನಿಷೇದಿಸಲಿಲ್ಲ. ತಮಿಳುನಾಡಿನಲ್ಲಿ, ನಾಮ್ ತಮಿಳರ್ ಕಚ್ಚಿ ಮತ್ತು ಹಲವಾರು ಮುಸ್ಲಿಮ್ ಸಂಘಟನೆಗಳು ಚಿತ್ರದ ವಿರುದ್ಧ ಪ್ರತಿಭಟನೆಯನ್ನು ಮಾಡಿದವು. ಕಾನೂನು ಸುವ್ಯವಸ್ಥೆಯ ಸಮಸ್ಯೆ ಉಂಟಾದೀತೆಂಬ ಭೀತಿಯಿಂದ ತಮಿಳುನಾಡು ಮಲ್ಟಿಪ್ಲೆಕ್ಸ್ ಸಂಘವು ತಮ್ಮ ಚಿತ್ರಮಂದಿರಗಳಿಂದ ಪ್ರದರ್ಶನವನ್ನು ಹಿಂದಕ್ಕೆ ಪಡೆಯಿತು. ಪಶ್ಚಿಮ ಬಂಗಾಲದಲ್ಲಿ ಪ್ರದರ್ಶನವನ್ನು ಬ್ಯಾನ್ ಮಾಡಲಾಯಿತು.

ಕೋಮುಸೌಹಾರ್ದವನ್ನು ಕದಡಬಹುದಾದ ಆಧಾರದ ಮೇಲೆ ಮದ್ರಾಸ್, ಕೇರಳ ಹೈಕೋರ್ಟು ಮತ್ತು ಭಾರತದ ಸುಪ್ರೀಂ ಕೋರ್ಟುಗಳಲ್ಲಿ ಇದರ ನಿಷೇಧವನ್ನು ಕೋರಿ ಹಲವಾರು ಅರ್ಜಿಗಳು ಸಲ್ಲಿಕೆಯಾದವು. ನಿರ್ಮಾಪಕರೂ ಇದರ ವಿರುದ್ಧ ದಾವೆಯನ್ನು ಹೂಡಿದರು.ಆದರೆ ಕೋರ್ಟುಗಳು ಇದನ್ನು ಬ್ಯಾನ್ ಮಾಡಲಿಲ್ಲ. ಕೆಲವು ಷರತ್ತುಗಳನ್ನು ಹಾಕಿದವು. ‘ಇದು ಕೆಲವು ಘಟನೆಗಳ ಕಾಲ್ಪನಿಕ ಆವೃತ್ತಿ’ ಮತ್ತು ‘ಮತಾಂತರಗೊಂಡ ಯುವತಿಯರ ಸಂಖ್ಯೆ 32000 ಎನ್ನುವುದಕ್ಕೆ ಯಾವುದೇ ವಾಸ್ತವ ಅಂಕಿಅಂಶಗಳ ಆಧಾರವಿಲ್ಲ’ ಎಂಬ ಸೂಚನೆಗಳನ್ನು ಸಿನಿಮಾದ ಆರಂಭದಲ್ಲಿ ಹಾಕಬೇಕು. ಸೆನ್ಸಾರ್ ಬೋರ್ಡ್ ಈ ಚಿತ್ರವನ್ನು ವೀಕ್ಷಿಸಿ ಇದಕ್ಕೆ ‘ವಯಸ್ಕರಿಗೆ ಮಾತ್ರ’ ಎನ್ನುವ ‘ಎ’ ಪ್ರಮಾಣಪತ್ರವನ್ನು ನೀಡಿದೆ.

ತಿರುಚಲಾದ ಸತ್ಯ

ಚಿತ್ರದಲ್ಲಿ ನಿರ್ದೇಶಕ ಸುದೀಪ್ತೋ ಸೇನ್ ಚಿತ್ರಕ್ಕಾಗಿ ತಾನು ಮಾಡಿದ ಸಂಶೋಧನೆಯ ಅಂಗವಾಗಿ ಕೇರಳದ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಹೇಳಿಕೆಗಳನ್ನು ಉಲ್ಲೇಖಿಸಿದ್ದಾರೆ.

ಕೇರಳದ ಮಾಜಿ ಮುಖ್ಯ ಮಂತ್ರಿ ಓಮನ್ ಚಾಂಡಿಯವರು ೨೦೧೨ರಲ್ಲಿ ರಾಜ್ಯದ ವಿಧಾನ ಸಭೆಯಲ್ಲಿ ಹೇಳಿದ ಪ್ರಕಾರ, 2006 ಮತ್ತು 201ರ ನಡುವೆ, 2667 ಮಹಿಳೆಯರು ಇಸ್ಲಾಮಿಗೆ ಪರಿವರ್ತನೆಯಾಗಿದ್ದರು. ಆದರೆ, ಈ ಹೇಳಿಕೆಯಲ್ಲಿ ಅವರು ಎಲ್ಲಿಯೂ ‘ಬಲವಂತದ ಮತಾಂತರ’ ಎಂದು ಹೇಳಿರಲಿಲ್ಲ. ತಮ್ಮ ರಾಜ್ಯದಲ್ಲಿ ಬಲವಂತದ ಮತಾಂತರಕ್ಕಾಗಲೀ, ‘ಲವ್ ಜಿಹಾದ್’ ಎಂಬ ಆಪಾದನೆಯನ್ನು ಮಾಡಿ ಮುಸ್ಲಿಮರ ವಿರುದ್ಧ ದ್ವೇಷದ ಪ್ರಚಾರಗಳನ್ನುಮಾಡುವುದಕ್ಕಾಗಲೀ ಅವಕಾಶವಿಲ್ಲ ಎಂದು ಅವರು ಹೇಳಿದ್ದರು. ಇನ್ನು, ಈ ಹೆಣ್ಣು ಮಕ್ಕಳು ಐಸಿಸ್‌ನ್ನು ಸೇರುತ್ತಿದ್ದಾರೆ ಎಂದಂತೂ ಅವರು ಹೇಳಿಯೇ ಇರಲಿಲ್ಲ.

ಎರಡನೆಯ ಉಲ್ಲೇಖವನ್ನು ನೋಡೋಣ. ಮಾಜಿ ಮುಖ್ಯ ಮಂತ್ರಿ ವಿ.ಎಸ್.ಅಚ್ಯುತಾನಂದನ್. ಅವರು   2006 ರಿಂದ 2011

ವರೆಗೆ ಕೇರಳದ ಮುಖ್ಯ ಮಂತ್ರಿಯಾಗಿದ್ದರು. ಆಗ ನೀಡಿದ್ದ ಸಂದರ್ಶನದ ವಿಡಿಯೋವನ್ನು ಕೇರಳ ಸ್ಟೋರಿ ಸಿನಿಮಾದ ನಿರ್ಮಾಪಕರು ಇದನ್ನು ತಮ್ಮ ಪ್ರಚಾರಕ್ಕೆ ಪೂರಕವಾಗಿ ಮತ್ತೊಮ್ಮೆ ಅಪಲೋಡ್ ಮಾಡಿದ್ದಾರೆ. ಇದರಲ್ಲಿ ಅಳವಡಿಸಲಾಗಿರುವ ಸಬ್-ಟೈಟಲುಗಳು ತಪ್ಪು ಅರ್ಥ ಕೊಡುವಂತೆ ಇವೆ. ಅಲ್ಲದೇ, ಇಲ್ಲಿ ವಿ.ಎಸ್.ಅಚ್ಯುತಾನಂದನ್‌ ಅವರು ಇದು ಇತರ ಧರ್ಮಗಳ ಯುವಜನರ ದುಷ್ಪರಿಣಾಮ ಬೀರಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ. ಮುಸ್ಲಿಮ್ ಯುವತಿಯರನ್ನು ಮದುವೆಯಾಗುವಂತೆ ಪ್ರೇರೇಪಿಸಲು ಅವರಿಗೆ ಹಣ ಕೊಡುತ್ತಿದ್ದಾರೆ ಎಂದಿದ್ದಾರೆ. ಇಲ್ಲಿ ಐಸಿಸ್‌ನ ಉಲ್ಲೇಖವೇ ಇಲ್ಲ.

ಸಮಸ್ಯೆ ಇದ್ದರೂ ಎಷ್ಟು ದೊಡ್ಡದು?

ಕೇರಳ ಸ್ಟೋರಿಯ ಪ್ರಕಾರ, ಕೇರಳದಲ್ಲಿ ಈ ಲವ್‌ಜಿಹಾದ್ ವಂಚನೆಗೆ ಗುರಿಯಾಗಿರುವ ಅಮಾಯಕ ಯುವತಿಯರ ಸಂಖ್ಯೆ 32000. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಲಭ್ಯವಿರುವ ಕೆಲವು ಅಧಿಕೃತ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ಇದನ್ನು ಪರಿಶೀಲಿಸೋಣ.

ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ಕೌಂಟರ್ ಟೆರಿರಿಸಂ, ಅಂಡರ್‌ ಸೆಕ್ರಟರಿ ಜನರಲ್, ಲಾದಿಮಿರ್ ವೊರೊನ್‌ಕೋವ್ ಹೇಳುವ ಪ್ರಕಾರ, ಜಗತ್ತಿನ ಸುಮಾರು 110 ದೇಶಗಳಿಂದ ಸುಮಾರು 40000 ವಿದೇಶೀ ಭಯೋತ್ಪಾಕ ಹೋರಾಟಗಾರು ಸಂಘರ್ಷದಲ್ಲಿ ಸೇರಿಕೊಳ್ಳಲು ಸಿರಿಯಾ ಮತ್ತು ಇರಾಕಿಗೆ ಹೋಗಿದ್ದಾರೆ. ಇನ್ನೊಂದು ಲಂಡನ್ನಿನ ಕಿಂಗ್ಸ್ ಕಾಲೇಜಿನ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಸ್ಟಡಿ ಆಫ್ ರ‍್ಯಾಡಿಕಲೈಜೇಷನ್ ನಡೆಸಿದ ಅಧ್ಯಯನದ ಪ್ರಕಾರ, ಐಸಿಸ್ ಜೊತೆಗೆ ನಂಟನ್ನು ಹೊಂದಿರುವವರ ಸಂಖ್ಯೆ 80 ವಿಭಿನ್ನ ದೇಶಗಳ 41490 ಜನ. ಅವರಲ್ಲಿ 79% ಜನ ಪುರುಷರು.

ಈ ಎರಡು ವರದಿಗಳನ್ನು ಆಧರಿಸಿ ನಾನು, ಇಡೀ ಜಗತ್ತಿನಿಂದ ಐಸಿಸ್ ಸೇರಿರುವ ಭಯೋತ್ಪಾದಕರ ಸಂಖ್ಯೆಯು 40000-42000 ಎಂದು ಅಂದಾಜಿಸಬಹುದು.ಇವರಲ್ಲಿ ಭಾರತೀಯರು ಎಷ್ಟು?

ಯುಎಸ್‌ನ ಬ್ಯುರೋ ಆಫ್ ಕೌಂಟರ್ ಟೆರರಿಸಮ್ ಪ್ರಕಟಿಸಿದ ವರದಿಗಳ ಪ್ರಕಾರ. ಸೆಪ್ಟೆಂಬರ್ 2020ರವರೆಗೆ, ಎನ್‌ಐಎ ಭಾರತದಲ್ಲಿ ಐಸಿಸ್‌ಗೆ ಸಂಬಂಧಿಸಿದ ಭಯೋತ್ಪಾದನೆಯ 34 ಪ್ರಕರಣಗಳ ತನಿಖೆಯನ್ನು ನಡೆಸಿತು, 160 ಜನರನ್ನು ಬಂಧಿಸಿತು.

ಮುಂದಿನ ಪ್ರಶ್ನೆ ಇವುಗಳಲ್ಲಿ ಕೇರಳಕ್ಕೆ ಸಂಬಂಧಿಸಿದ ಪ್ರಕರಣಗಳು ಎಷ್ಟು ಎಂಬುದು. ಭಾರತಕ್ಕೆ ಸಂಬಂಧಿಸಿದ ಒಟ್ಟು 180-200 ಪ್ರಕರಣಗಳಲ್ಲಿ 40 ಪ್ರಕರಣಗಳು ಕೇರಳಕ್ಕೆ ಸಂಬಂಧಿಸಿದವು ಎಂದು ಹೇಳಲಾಗುತ್ತದೆ. ಈ ಸಂಖ್ಯೆ ಐಸಿಸ್ ಜೊತೆ ವಿವಿಧ ರೀತಿಯಲ್ಲಿ ಸಂಪರ್ಕವನ್ನು ಹೊಂದಿರುವ ಜನರು ಆಗಿರುವುದರಿಂದ ಇವುಗಳಲ್ಲಿ ಎಷ್ಟು ಜನ ಐಸಿಸ್ ಸೇರಲು ಹೋದರು ಎಂಬುದು ಗೊತ್ತಾಗುವುದಿಲ್ಲ.

ಯುಎಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ವರದಿ ಪ್ರಕಾರ ನವೆಂಬರ್ 2020ರ ಹೊತ್ತಿಗೆ ಐಸಿಸ್ ಜೊತೆ ನಂಟನ್ನು ಹೊಂದಿರುವ ಭಾರತೀಯ ಮೂಲದ ಹೋರಾಟಗಾರರು ಸುಮಾರು 66 ಜನ. ಇವರಲ್ಲಿ ಮಹಿಳೆಯರು ಸುಮಾರು 13 ಜನ ಮಾತ್ರ. ಇವರಲ್ಲಿ ಕೇರಳದವರು ಕೇವಲ 6 ಜನ. ಈ ಆರರಲ್ಲಿ ಇತರ ಧರ್ಮಗಳಿಂದ ಇಸ್ಲಾಮಿಗೆ ಮತಾಂತರಗೊಂಡವರ ಸಂಖ್ಯೆ 3. ಈ ಮೂರವರಲ್ಲಿ ಇಬ್ಬರು ಕ್ರಿಶ್ಚಿಯನ್ ಮತ್ತು ಒಬ್ಬರು ಮಾತ್ರ ಹಿಂದು.

ಕೇರಳ ಸ್ಟೋರಿಯಲ್ಲಿ ತೋರಿಸಲಾದ ಘಟನೆಗಳು ನಿಜಜೀವನದಲ್ಲಿ ನಡೆದಿದ್ದು ಕೇವಲ 3 ಮಹಿಳೆಯರ ಜೊತೆ, ಅದೂ ಇಲ್ಲಿ ತೋರಿಸಿದ ರೀತಿಯಲ್ಲಿ ಅಲ್ಲ. ಆದರೂ ಸಿನಿಮಾ ಇಂಥ ವಂಚನೆ ನಡೆದಿದ್ದು 32000 ಮಹಿಳೆಯರ ಜೊತೆ ಎಂದು ತೋರಿಸುತ್ತದೆ. ಇದು ದೊಡ್ಡ ಸುಳ್ಳು. ಇದನ್ನು ಕೇಳಿದ ಜನಸಾಮಾನ್ಯರು 32000 ಅಲ್ಲದಿದ್ದರೂ ಕೆಲವು ಸಾವಿರವಾದರೂ ಇರಬಹುದು ಎಂದು ತಾವೇ ಲೆಕ್ಕ ಹಾಕಿಕೊಳ್ಳುತ್ತಾರೆ. ಈ ಸುಳ್ಳನ್ನು ಹಲವರು ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ಭಾರತದಲ್ಲಿ ಸಂಘ ಪರಿವಾರದವರು ಎಬ್ಬಿಸಿದ ಈ ಹುಯಿಲಿನಲ್ಲಿ ಅನೇಕ ಮುಗ್ಧ ಯುವಕ ಯುವತಿಯರು, ಚಿಂತಿತ ಪೋಷಕರು ಭಾಗವಹಿಸಿ ಮನಸ್ಸನ್ನು ಕಹಿಗೊಳಿಸಿಕೊಂಡರು. ಆದರೂ, ಈಗಾಗಲೇ ಇವರ ಮುಸ್ಲಿಮ್ ವಿರೋಧೀ ಧೋರಣೆಯ ಪರಿಚಯವಿದ್ದ ಪ್ರಜ್ಞಾವಂತರು ಬೆಳವಣಿಗೆಯನ್ನು ಎಚ್ಚರಿಕೆಯಿಂದ ಗಮನಿಸಿದರು.

ಆ್ಯಂಟಿ ಕ್ಲೈಮ್ಯಾಕ್ಸ್‌

ಭೂಪಾಲ್‌ನ 19 ವರ್ಷದ ಒಬ್ಬ ಹಿಂದೂ ಹುಡುಗಿ ಒಬ್ಬ ಮುಸ್ಲಿಮ್ ಹುಡುಗನನ್ನು ಪ್ರೀತಿಸುತ್ತಿದ್ದಳು. ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಠಾಕುರ್ ಆ ಮುಸ್ಲಿಮ್ ಹುಡುಗನಿಂದ ದೂರವಿರುವಂತೆ ಆಕೆಗೆ ಬುದ್ಧಿ ಹೇಳಿದಳು. ಈ ಹುಡುಗಿಗೆ ಗೊತ್ತಾಗಲೀ ಎಂದು ಆಕೆಯನ್ನು ಕರೆದುಕೊಂಡು ಹೋಗಿ ಕೇರಳ ಸ್ಟೋರಿ ಸಿನಿಮಾ ತೋರಿಸಿದರು. ಅದಾದ ಒಂದು ವಾರದಲ್ಲಿ ಆ ಹುಡುಗಿ ತನ್ನ ಮುಸ್ಲಿಮ್ ಪ್ರೇಮಿಯೊಂದಿಗೆ ಓಡಿಹೋದಳು. ಅದು ಲವ್ ಜಿಹಾದೂ ಆಗಿರಲಿಲ್ಲ, ಆಕೆಯನ್ನು ಐಸಿಸ್‌ಗೆ ಸೇರಿಸಿಯೂ ಇಲ್ಲ.

– ಅಬ್ದುಲ್‌ ರೆಹಮಾನ್‌ ಪಾಷ, ಹಿರಿಯ ಲೇಖಕರು

(ಈ ಲೇಖನ “ಹೊಸತು” ಮಾಸಿಕದಲ್ಲಿ ಪ್ರಕಟವಾಗಿದೆ.)

ರವಿಕೆಯ ಒಂದು ಸಣ್ಣ ವಿಚಾರ, ನಿಜವಾಗ್ಲೂ ನ್ಯಾಷನಲ್ ಇಶ್ಯೂ ಆಗುತ್ತಾ ?
“ಕರ್ನಾಟಕದ ಬೆಸ್ಟ್ ಟ್ರೈಲರ್” ಅನ್ನು ಗುರುತಿಸುವ ಕಂಟೆಸ್ಟ್ ಲಾಂಚ್ ಮಾಡುವ ಮೂಲಕ, ಹೀಗೊಂದು ವಿಶೇಷ ಕಾರ್ಯಕ್ರಮದ ಮೂಲಕ ಸಿನಿಮಾ ಒಂದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಆ ಸಿನಿಮಾದ ಹೆಸರೇ “ರವಿಕೆ ಪ್ರಸಂಗ”.

“ರವಿಕೆ‌ಪ್ರಸಂಗ” ಚಿತ್ರವೂ ಇದೇ ಫೆಬ್ರವರಿ 16ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು, ಇಂದು ಅಂದರೇ ಫೆಬ್ರವರಿ 4ರಂದು ಚಿತ್ರದ ಪ್ರೀ ರಿಲೀಸ್ ಇವೆಂಟನ್ನು ಫೋರಮ್ ಮಾಲ್ ಕನಕಪುರದಲ್ಲಿ ಆಯೋಜಿಸಿತ್ತು
ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಅವರು, ಕಥೆಗಾರ್ತಿ ಮತ್ತು ಸಂಭಾಷಣಾಗಾರ್ತಿ ಪಾವನ ಸಂತೋಷ್, ಚಿತ್ರದ ನಾಯಕಿಯಾದ ಗೀತಾಭಾರತಿ ಭಟ್, ಪದ್ಮಜಾರಾವ್, ಜೊತೆಗೆ ಪೋಷಕ ಕಲಾವಿದರು, ಚಿತ್ರದ ಸಂಕಲನಾಕಾರರಾದ ರಘು ಉಪಸ್ಥಿತರಿದ್ದರು.
ಬಹಳ ವಿಶೇಷವಾಗಿ ಸ್ಟೇಜ್ ಮೇಲೆ “ಕರ್ನಾಟಕದ ಬೆಸ್ಟ್ ಟೈಲರ್” ಅನ್ನು ಗುರುತಿಸುವ ಕಂಟೆಸ್ಟ್ ಲಾಂಚ್ ಮಾಡಲಾಯಿತು.‌

ಬೆಸ್ಟ್ ಟೈಲರನ್ನು ಗುರುತಿಸಿ ಭರ್ಜರಿ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ವಿಜೇತರಾದವರಿಗೆ, ಹೊಲಿಗೆ ಯಂತ್ರ, ಮೊಬೈಲ್ ಫೋನ್ ಹಾಗೂ ಸಿನೇಮಾ ಟಿಕೆಟ್ ನೀಡಲಾಗುವುದು‌ ಎಂದು ಚಿತ್ರತಂಡ ಸ್ಟೇಜಿನ ಮೇಲೆ ಹೇಳಿಕೊಂಡಿದೆ.
ಬಹಳ ಮುಖ್ಯವಾಗಿ ರಾಜ್ಯದ್ಯಾಂತ 7ಸಾವಿರಕ್ಕೂ ಹೆಚ್ಚಿನ ಆಟೋ ಪಬ್ಲಿಸಿಟಿ ಮಾಡುತ್ತಿರುವ ರವಿಕೆಪ್ರಸಂಗ ಚಿತ್ರತಂಡ ಆಟೋ ಡ್ರೈವರ್ ಗಳೊಂದಿಗೆ ಒಂದಷ್ಟು ಸಿನಿಮಾದ ಬಗ್ಗೆ ಚರ್ಚಿಸಿ ಗೀತಾಭಾರತಿಭಟ್ ಅವರು ಅನೇಕ ಆಟೋಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೇ ನೀಡಿದರು.
ಸಿನೇಮಾ ಕುರಿತು ಹಲವು ಗಣ್ಯರು ಈ ಸಂದರ್ಭದಲ್ಲಿ ಮಾತನಾಡಿದರು. ಜೊತೆಗೆ ಎಲ್ಲರನ್ನೂ ಗೌರವಿಸಲಾಯಿತು. ನಿರ್ದೇಶಕ ಸಂತೋಷ್‌ ಕೊಂಡಕೇರಿಯವರು , ಚಿತ್ರದ ಬಗ್ಗೆ ಮಾತನಾಡುತ್ತಾ “ಒಂದು ರವಿಕೆಗೆ ಹುಕ್ ಹೇಗೆ ಮುಖ್ಯವೋ ಹಾಗೇ ಜೀವನದ ಕೆಲವು ಸಂಘರ್ಷಗಳು, ಸಂಬಂಧಗಳು ಅತೀ ಮುಖ್ಯವಾಗುತ್ತವೆ” ಎಂಬುದೇ ಈ “ರವಿಕೆ ಪ್ರಸಂಗ” ಸಿನಿಮಾದ ಕಥಾಹಂದರ ಎಂದು ಹೇಳಿಕೊಂಡಿದ್ದಾರೆ.

ಬಿರಿಯಾನಿ Is an Emotion
ನಯನತಾರ ಅಭಿನಯದ ಅನ್ನಪೂರ್ಣಿ ಚಿತ್ರವು ಹೆಣ್ಣು ಮಕ್ಕಳ ವೃತ್ತಿ ಶಿಕ್ಷಣ ಆಯ್ಕೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಜೀವತುಂಬಿರುವ ಚಿತ್ರ.ಚಿತ್ರದಲ್ಲಿ ನಾಯಕಿಯ ತಂದೆ, ಎಂಜಿನಿಯರಿಂಗ್ ಪದವಿ ಪಡೆದ ದೇವಾಸ್ಥಾನದ ವೃತ್ತಿ ಆಯ್ಕೆ, ಹಾಡುಗಾರ್ತಿಯಾಗಬೇಕಿದ್ದ ನಾಯಕಿಯ ಅಜ್ಜಿಯ ಕನಸು,ಮತ್ತು ಪ್ರಸಿದ್ದ ಬಾಣಸಿಗನ ಮಗ ಉತ್ತಮ ಬಾಣಸಿನಾಗಲು ಸೋಲುವುದು,ಸಣ್ಣ ವಯಸ್ಸಿನಿಂದಲೇ ಅಡುಗೆಯನ್ನು ಧ್ಯಾನದಂತೆ ಕಲಿಯುವ ತಂದೆ ಮತ್ತು ಮಗಳು, ಚಲನಚಿತ್ರದ ಕಡೆಯಲ್ಲಿ ನಾಯಕಿಯಿಂದ ಪ್ರೇರಣೆಗೊಂಡು,ಅನೇಕ ಯುವತಿಯರು ಹೋಟೆಲ್ ಮ್ಯಾನೇಜ್ ಮೆಂಟ್ ಕಾಲೇಜಿಗೆ ಸೇರಿ ಆಹಾರ ತಯಾರಿಕೆಯಲ್ಲಿ ಆವಿಷ್ಕಾರ ಮಾಡುವದು ಚನಲಚಿತ್ರದ ಕಥಾಹಂದರವಾಗಿದೆ.

ಚಿತ್ರಕಥೆಗೆ ತಿರುವು ಸಿಗುವುದು, ನಾಯಕಿಯ ಮುಸ್ಲಿಂ ಸ್ನೇಹಿತನ ಮಾತುಗಳಿಂದ, ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ,ಬೆಸ್ಟ್ ಶೆಫ್ ಆಗುವ ಸಲುವಾಗಿ ಮಾಂಸಾಹರವನ್ನು ಬೇಯಿಸುವುದು ಸಾದ್ಯವಿಲ್ಲ ಎಂದ ನಾಯಕಿಗೆ,ಸ್ಪೂರ್ತಿ ತುಂಬಲು ಶ್ರೀ ರಾಮನೇ ವನವಾಸದಲ್ಲಿ ಅನಿವಾರ್ಯವಾಗಿ ಮಾಂಸಾಹಾರ ಸೇವಿಸಬೇಕಾಗಿ ಬಂದಿತು,ಒಮ್ಮೆ ಯೋಚಿಸು ಎಂದಿರುವುದು, ಕೆಲವು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿಪರ್ಯಾಸವೆಂದರೆ ಬೆಸ್ಟ್ ಶೆಫ್ ವೃತ್ತಿ ಆರಿಸಿಕೊಂಡ ಬ್ರಾಹ್ಮಣ ಕುಟುಂಬದ ನಾಯಕಿ ತಾನು ಮಾಡುವ ಖಾಧ್ಯವು ಪರ್ಫೆಕ್ಟ್ ರುಚಿ ಹೊಂದಿರಬೇಕು ಎಂದು ತಿಳಿದುಕೊಳ್ಳಲು ಮಾಂಸಾಹಾರ ಸೇವಿಸಿರುವುದು, ಕೆಲವು ಹಿಂದೂ ಸಂಘಟನೆಗಳ ಕೋಪಕ್ಕೆ ಕಾರಣವಾಗಿ ನಾಯಕಿಯ ಮೇಲೆ FIR ದಾಖಲಾಗಿದೆ. ಅನ್ನಪೂರ್ಣಿ ಚಿತ್ರವು ಹಿಂದೂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಬಲಪಂಥೀಯ ಗುಂಪುಗಳ ಪ್ರತಿಭಟನೆ ನಂತರ ಡಿಸೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರವು ಡಿಸೆಂಬರ್ 29 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಬಹುಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಿದ್ದನ್ನು ಈಗ ಹಿಂತೆಗೆದುಕೊಳ್ಳಲಾಗಿದೆ.

ಈ ಶತಮಾನದಲ್ಲೂ ಕೂಡ ದೇವಸ್ಥಾನದಲ್ಲಿ ಅಡುಗೆಯನ್ನು ಮಾಡುವ ಬ್ರಾಹ್ಮಣ ಧರ್ಮದ ಮಗಳು ದೇಶದ ಅತ್ಯುತ್ತಮ ಬಾಣಸಿಗಳಾಗಬೇಕೆಂದು ಕನಸು ಕಾಣುತ್ತಾಳೆ ಮತ್ತು ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮಾಂಸಾಹಾರಿ ಆಹಾರವನ್ನು ಮಾಡಲು ಕಲಿಯುತ್ತಾಳೆ ಎಂಬುದನ್ನು ಅಪರಾಧವೆನ್ನುವಂತೆ ಭಾವಿಸಿರುವುದು,ಭಾರತದಲ್ಲಿ ಹೆಣ್ಣು ಮಕ್ಕಳ ವೃತ್ತಿಯ ಆಯ್ಕೆಯು ನಿರ್ಬಂಧಕ್ಕೊಳಪಡುವುದು ಆತಂಕಕಾರಿ ವಿಷಯ.

ಉತ್ತಮ ಬಾಣಸಿಗರ ಆಯ್ಕೆ ಪಂದ್ಯದಲ್ಲಿ ನಾಯಕಿಯು Food is an art ಎನ್ನುವಂತೆ ಸಸ್ಯಾಹಾರಿ ಖಾದ್ಯವನ್ನು ತನ್ನ ತಂದೆ ಹೇಳಿಕೊಟ್ಟ ಕ್ರಮವನ್ನು ಧ್ಯಾನದಂತೆ ಧ್ಯಾನಿಸಿ ಮಾಡುತ್ತಾಳೆ,ಅದೇ ಮಾಂಸಾಹಾರ ಖಾದ್ಯ ತಯಾರಿಸುವಾಗ ತನ್ನ ಮುಸ್ಲಿಂ ಗೆಳೆಯನ ತಾಯಿ ಶ್ರಧ್ದೆಯಿಂದ ನಮಾಜ್ ಮಾಡುವುದನ್ನು ಧ್ಯಾನಿಸಿಕೊಂಡು ಅತ್ಯುತ್ತಮ ರುಚಿಕರ ಬಿರಿಯಾನಿ ತಯಾರಿಸಿ ಪ್ರಶಂಸೆ ಪಡೆಯುತ್ತಾಳೆ. ಇಲ್ಲಿ “Biriyaani is an emotion” ಅಷ್ಟೇ..

ಆದರೆ ಸಿನೆಮಾವನ್ನು ಸಿನೆಮಾವನ್ನಾಗಿ ನೋಡದೇ ನಾಯಕಿಗೆ ಬುರ್ಕಾ ತೊಡಿಸಿ ನಮಾಜ್ ಮಾಡಿಸಲಾಗಿದೆ ಬಲವಂತವಾಗಿ ಮಾಂಸಾಹಾರ ತಯಾರಿಸಲಾಗಿದೆ, ಇದು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಎಂದು ಚಲನಚಿತ್ರ ಬರಹಗಾರರು ಮತ್ತು ನಿರ್ಮಾಪಕರ ಮೇಲೆ ಭಾರತೀಯ ದಂಡ ಸಂಹಿತೆಯ 3A ಅಡಿಯಲ್ಲಿ ಕೇಸು ದಾಖಲಿಸಿ ವಿಶ್ವ ಹಿಂದು ಪರಿಷತ್ ವಕ್ತಾರರು ಇದು “ಹಿಂದುಗಳ ವಿಜಯ” ಎಂದಿರುವುದು,ಚಲನಚಿತ್ರ ತಂಡವೂ ಆಯಾ ಸಮುದಾಯಗಳ ಭಾವನೆಗಳಿಗೆ ಉಂಟಾದ ಅನಾನುಕೂಲತೆಗಾಗಿ ನೋವುಂಟುಮಾಡಿದ್ದಕ್ಕಾಗಿ ಕ್ಷಮೆಯಾಚಿಸಿ,ಹಿಂದೂಗಳು ಮತ್ತು ಬ್ರಾಹ್ಮಣರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟುಮಾಡುವ ಸಂಭಾಷಣೆಗಳು ಎಡಿಟ್ ಆಗುವವರೆಗೂ ನೆಟ್ ಫ್ಲಿಕ್ಸ್ ವೇದಿಕೆಯಿಂದ ಹೊರಬಿದ್ದಿರುವುದು ವಿಷಾದನೀಯ.

ನಮ್ಮ ಸಮಾಜ ಎತ್ತ ಸಾಗುತ್ತಿದೆ ಚಲನಚಿತ್ರಗಳಿಗೆ ನಿಷೇಧ ಹೇರುವ ಕಾಲಘಟ್ಟದಲ್ಲಿ ನಾವಿದ್ದೇವೆ ಎನ್ನುವುದು ಕಳವಳಕಾರಿಯಾಗಿದೆ.
ಇಂತಹ ಒಳ್ಳೆಯ ಚಿತ್ರಗಳು ಜನರಿಗೆ ತಲುಪಬೇಕಿದೆ ಈ ಎಲ್ಲಾ ಸಮಸ್ಯೆಗಳು ಬಗೆಹರಿದು ವಿ ಹೆಚ್ ಪಿ ಮತ್ತು ಚಿತ್ರತಂಡದ ನಡುವೆ ಮಾತುಕತೆಗಳ ಸಮನ್ವಯತೆ ಪ್ರಕ್ರಿಯೆಗಳು ಮುಗಿದು ಅನ್ನಪೂರ್ಣಿ ಮತ್ತೆ ನೆಟ್ ಫ್ಲಿಕ್ಸ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳುವಂತಾಗಲಿ ಎಂದು ‌ ಆಶಿಸೋಣ.

ಮಮತಾ. ಆರ್

‘ಬಾಯ್’ಗಿದೆ ಅಪ್ಪು ಆಶೀರ್ವಾದ: 17ಕ್ಕೆ ತೆರೆ ಮೇಲೆ ಅಬ್ಬರ
ಬೆಂಗಳೂರು:ಭಾರತ ಭಿನ್ನ ಸಂಸ್ಕೃತಿಗಳ ದೇಶ. ಈ ನೆಲದ ಸಂಸ್ಕೃತಿ, ಸಮುದಾಯದ ಸಂಸ್ಕೃತಿಯನ್ನು ತೆರೆ ಮೇಲೆ ತಂದು ಸೋತವರಿಲ್ಲ. ಇದೀಗ ಬಂಜಾರ ಸಮುದಾಯದ ಸಂಸ್ಕೃತಿಯನ್ನು ತೆರೆ ಮೇಲೆ ತರಲು ಯುವಪಡೆ ರೆಡಿಯಾಗಿದೆ. ಅದೇ ʼಬಾಯ್ʼ.

ಬಾಯ್ ಎಂದರೆ ಸೋದರತ್ವ. ಈ ಸೋದರತ್ವದ ಕಥನವನ್ನು ಇಟ್ಟುಕೊಂಡು ಚಿತ್ರದ ಮೂಲಕ ಬಂಜಾರ ಸಂಸ್ಕೃತಿ ತಿಳಿಸಲು ಹೊರಟಿದ್ದಾರೆ. ಚಿತ್ರದ ಟ್ರೇಲರ್ ಹಾಗೂ ಹಾಡು ರಿಲೀಸ್ ಆಗಿದೆ. ಖಳ ನಟ ಚಲುವರಾಜ್ ಟ್ರೇಲರ್ ಲಾಂಚ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ‌.

ನಟ, ನಿರ್ದೇಶಕ ಯುವ ಮಾತನಾಡಿ, “ಇದು ಮಾಸ್ ಓರಿಯೆಂಟ್ ಸಿನಿಮಾ. ಇದರಲ್ಲಿ ಬಂಜಾರ ಸಮುದಾಯದ ಸಂಪ್ರದಾಯ ತೋರಿಸಿದ್ದೇವೆ. ಸಿನಿಮಾ ಅಂತು ಅದ್ಭುತವಾಗಿ ಮೂಡಿ ಬಂದಿದೆ. ಇದು ಫ್ಯಾಮಿಯೆಲ್ಲಾ ಕೂತು ನೋಡುವಂತ, ಫ್ಯಾಮಿಲಿ ಒರಿಯೆಂಟೆಡ್ ಸಿನಿಮಾ ಆಗಿದೆ. ಇದಕ್ಕೆ ನೀವೆಲ್ಲಾ‌ ಸಪೋರ್ಟ್ ಮಾಡಿ, ಬೆಂಬಲ ನೀಡಿ. ಇಡೀ ಟೀಂ ಬೆಂಬಲ ಅಂತು ತುಂಬಾ ಚೆನ್ನಾಗಿ ಇತ್ತು. ಬೆಳಗಾವಿಯ ಹುಡುಗ ನಾನು. ಕನಸು ಹೊತ್ತು ಬೆಂಗಳೂರಿಗೆ ಬಂದೆ. ಗ್ಯಾಂಗ್‌ಸ್ಟರ್, ಜೂನಿಯರ್ ಆರ್ಟಿಸ್ಟ್ ಆಗಿ ಕೂಡ ಮಾಡಿದ್ದೀನಿ. ಥ್ರಿಲ್ಲರ್ ಮಂಜು ಸರ್ ಕೂಡ ಒಮ್ಮೆ‌ ನಾನು ಒಳ್ಳೆ ಕಲಾವಿದ ಆಗಬಹುದು ಎಂದಿದ್ದರು. ಅಲ್ಲಿಂದ ಪ್ರಯತ್ನ ಶುರು ಮಾಡಿದೆ. ಬಂಜಾರ ಸಮುದಾಯ ಸಂಸ್ಕೃತಿಯನ್ನು ತೆರೆ ಮೇಲೆ ತರಬೇಕೆಂದು ನಿರ್ದೇಶನಕ್ಕೆ ಇಳಿದೆ. ಸಿನಿಮಾ ರೆಡಿ ಇದೆ. ಇದೇ ತಿಂಗಳ 17ಕ್ಕೆ ತೆರೆಗೆ ಬರಲಿದೆ,” ಎಂದಿದ್ದಾರೆ.

ಈ ಸಿನಿಮಾಗೆ ಕಥೆ ಬರೆದ ಸುರೇಶ್ ಮಾತನಾಡಿ, “ಈ ಸಿನಿಮಾಗೆ ಕಥೆ ಬರೆಯಲು ಅಪ್ಪು ಸರ್ ಸ್ಪೂರ್ತಿ. ನಾನು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರಬೇಕಾದರೆ, ಅಲ್ಲಿ ಶಾಲೆಗೆ ಮಕ್ಕಳನ್ನು ಬಿಡಲು ಬರುತ್ತಿದ್ದರು. ಅಲ್ಲಿ ಸಿಕ್ಕಾಗ ಮಾತನಾಡಿಸುತ್ತಿದ್ದೆ. ಅವರು ಕೂಡ ಏನ್ರಿ ಪೊಲೀಸಪ್ಪ ಚೆನ್ನಾಗಿದ್ದೀರಾ ಅಂತ ಮಾತನಾಡಿಸೋರು. ಇವತ್ತು ಅವರನ್ನ ಮಿಸ್ ಮಾಡಿಕೊಳ್ಳುತ್ತಾ ಇದ್ದೇವೆ. ಆಗ ನಾನು ಅವರಿಗೋಸ್ಕರ ಕಥೆ ಬರಿಬೇಕು ಎಂದು ಹೇಳಿದ್ದೆ. ಅದು ಬಂಜಾರ ಹಾಗೂ ಕನ್ನಡ ಭಾಷೆಯಲ್ಲಿರಬೇಕು ಸರ್ ಎಂದಿದ್ದ. ಆಗ ಅವರು ಬರಿಯಪ್ಪ, ನೀನು ಪೋಲಿಸ್ ಆಗಿದ್ದು ಸ್ಟೋರಿ ಬರೆಯೋಕೆ ಬರುತ್ತಾ ಎಂದಿದ್ದರು. ಇದು ಅವರಿಗೋಸ್ಕರ ಬರೆದ ಕಥೆ. ಅವರು ಇದ್ದಿದ್ದರು ಇವತ್ತು, ಇಲ್ಲಿಗೆ ಬರ್ತಾ ಇದ್ದರು,” ಎಂದು ನೋವು ವ್ಯಕ್ತಪಡಿಸಿದ್ದಾರೆ.

ಚಿತ್ರದ ನಾಐಕಿ ಪೂಜಾ ಮಾತನಾಡಿ, “ನನ್ನದು ವಿದೇಶಿ ಹುಡುಗಿಯ ಪಾತ್ರ. ಬಂಜಾರ ಕಲೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕಾಗಿ ಬಂದಿರುತ್ತೇನೆ. ಮುಂದೆ ಏನೆಲ್ಲಾ ಆಗುತ್ತೆ ಎಂಬುದನ್ನು ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಿದ್ದಾರೆ,” ಎಂದಿದ್ದಾರೆ.

ಸಿನಿಮಾ ಈಗಾಗಲೇ ತನ್ನೆಲ್ಲಾ ಕೆಲಸ ಮುಗಿಸಿದ್ದು, ರಿಲೀಸ್ ಗೆ ಸಿದ್ದವಾಗಿದೆ. ಇದೇ ತಿಂಗಳ 17ಕ್ಕೆ ತೆರೆಗೆ ಬರಲಿದ್ದು, ಇಡೀ ತಂಡ ಕುತೂಹಕದಿಂದ ಕಾಯುತ್ತಿದೆ. ಈ ಸಿನಿಮಾಗೆ ಮಾಲಾಶ್ರೀ ಸುರೇಶ್ ಬಂಡವಾಳ ಹೂಡಿದ್ದಾರೆ.

ಬಯಲು ಸೀಮೆ To ಪಶ್ಚಿಮ ಘಟ್ಟದ ಕಥೆ ; ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಇನಾಮ್ದಾರ
ಕನ್ನಡ, ಕನ್ನಡತನ ಎಂಬುದು ಸ್ವಾಭಿಮಾನಿ ಕನ್ನಡಿಗರ ಉಸಿರು. ಬಹುಶಃ ಕಾವೇರಿ, ಮಹದಾಯಿ ಹೀಗೆ ಈ ನಾಡಿನ ನೆಲ, ಜಲದ ವಿಚಾರ ಬಂದಾಗೆಲ್ಲ, ಸ್ವಾಭಿಮಾನಿ ಕನ್ನಡಿಗರು ಪ್ರದರ್ಶಿಸುವ ಒಗ್ಗಟ್ಟು ಬಹುಶಃ ದೇಶವೇ ಕಂಡು ಅರಿತ ವಿಚಾರ. ಬಹುಭಾಷಿಗರಿಗೆ ಅನ್ನ ಮತ್ತು ಆಶ್ರಯ ನೀಡಿದ ತಾಣ ಈ ನಾಡು. ಈ ನಿಟ್ಟಿನಲ್ಲಿ ಚಿತ್ರರಂಗದಲ್ಲೂ ಕೂಡ ಕನ್ನಡಿಗರನ್ನೇ ಕಟ್ಟಿಕೊಂಡು ಸಮಾಜಕ್ಕೊಂದು ಸಂದೇಶ ನೀಡಬಲ್ಲ ಚಿತ್ರ ಕಥೆಯನ್ನು ಹೆಣೆದು ಅದನ್ನು ಪರದೆ ಮೇಲೆ ತರಲು ಸಿದ್ಧರಾಗಿದ್ದಾರೆ ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ.

ಹೌದು, ಬಹುಶಃ ಈ ಪ್ರಯತ್ನ ಚಿತ್ರರಂಗದಲ್ಲಿ ಈಗಾಗಲೇ ಆಗಿದೆ. ಆದರೆ ಆ ಪ್ರಯತ್ನದಲ್ಲಿ ಸಾಗಿದ ಕೆಲವೊಬ್ಬರಲ್ಲಿ ಸಂದೇಶ್ ಕೂಡ ಒಬ್ಬರು ಅಂತ ಹೇಳಿದರೆ ಅತಿಶಯೋಕ್ತಿಯಾಗಲಾರದು.

ಒಬ್ಬ ನಿರ್ದೇಶಕನಾಗಿ ಕೇವಲ ಆ‌್ಯಕ್ಷನ್ ಕಟ್ ಮಾತ್ರ ಹೇಳದೇ ತಾನೇ ಕಥೆ ಬರೆದು, ಆ ಕಥೆಗೊಂದು ಕಳೆಕಟ್ಟಿ ಅದನ್ನು ಪರದೆ ಮೇಲೆ ತರುವ ಪ್ರಯತ್ನದ ಜೊತೆಗೆ ತನ್ನದೆಯಾದ ತಂಡ ಕಟ್ಟಿಕೊಂಡು ಚಿತ್ರದ ಪ್ರಮೋಷನ್ ಗಾಗಿ ಹಗಲಿರುಳು ಶ್ರಮಿಸುತ್ತಿರುವ ಕನಸು ಕಂಗಳ ಕುವರ ಸಂದೇಶ್ ಶೆಟ್ಟಿ.

ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಸಂದೇಶ, ನಿರ್ದೇಶನದ ಎರಡನೇ ಚಿತ್ರ ಇನಾಮ್ದಾರ. ಬಿಡುಗಡೆಗೂ ಮುನ್ನವೇ ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದ ಸಿಲ್ಕು ಮಿಲ್ಕು ಸಾಂಗ್ ಮೀಲಿಯನ್ ಗಟ್ಟಲೆ ವಿವ್ ಆಗಿದ್ದು ಪಡ್ಡೆ ಹುಡುಗರ ನಿದ್ದೆಗೆಡೆಸಿದೆ. ಸಿಲ್ಕು ಯಾವಾಗ ತೆರೆಮೇಲೆ ಬರ್ತಾಳೋ ಅಂತ ಕುತೂಹಲ ಮೂಡಿಸಿದೆ.

ಕನ್ನಡದ ಕನ್ನಡಿಗರೇ ನಿರ್ಮಿಸಿರುವ ಇನಾಮ್ದಾರ್ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಬರಲಿದೆ. ಅಕ್ಟೋಬರ್ 5ರಂದು ಬೆಂಗಳೂರಿನಲ್ಲಿ ಬಹುಭಾಷೆಯಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಅಭಿಪ್ರಾಯ ಪಡೆದಿದೆ. ಟೀಸರ್ ಮೊದಲ ನೋಟಕ್ಕೆ ಅನುಭವೀ ತಂಡ ಕಟ್ಟಿ ಕೊಡುವಂತೆ ಭಾಸವಾದರೆ ಅತಿಶಯೋಕ್ತಿಯಲ್ಲ.

ಇದರ ಜೊತೆಗೆ ಅಕ್ಟೋಬರ್ 15ಬೆಳಗಾವಿಯಲ್ಲಿ ಚಿತ್ರದ ಧ್ವನಿ ಸುರಳಿ ಬಿಡುಗಡೆಯಾಗಲಿದೆ. ಅಷ್ಟಕ್ಕೂ ಸಿಲ್ಕು ಮಿಲ್ಕು ನೋಡಿದವರಿಗೆ ಚಿತ್ರದ ಸ್ಟೋರಿ ಏನು ಅಂದ್ರೆ? ಅದನ್ನು ಮಾತ್ರ ಸಸ್ಪೆನ್ಸ್ ಇಟ್ಟಿದೆ ಚಿತ್ರ ತಂಡ. ಇದು ಕಪ್ಪು ಬಿಳುಪಿನ ಬಣ್ಣ ಆಧರಿಸಿದ ಎರಡು ಜನಾಂಗೀಯ ಕಥೆ ಅನ್ನೋದು ಮಾತ್ರ ತಿಳಿದು ಬಂದಿದೆ.

ವಿಭಿನ್ನ ಕಥಾ ಹಂದರವಿದೆ ಎನ್ನಲಾದ ಇನಾಮ್ದಾರ್ ಚಿತ್ರ, ನಟ, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರ ಕನಸಿನ ಕೂಸು ಎಂದರೆ ತಪ್ಪಾಗಲಾರದು. ಕತ್ತಲೆ ಕೋಣೆ ಎನ್ನುವ ವಿಭಿನ್ನ ಹಾರರ್ ಬೇಸ್ ಇರುವ ಸೈಂಟಿಫಿಕ್ ಥ್ರಿಲ್ಲರ್ ಚಿತ್ರವನ್ನು ತೆರೆಯ ಮೇಲೆ ತಂದಿದ್ದ ಸಂದೇಶ ಶೆಟ್ಟಿ ಆಜ್ರಿ, ಮೂರು ವರ್ಷಗಳ ಬ್ರೇಕ್ ನಂತರ ಭಾರೀ ತಯಾರಿಯೊಂದಿಗೆ ಇನಾಮ್ದಾರಿನಿಗೆ ಆ‌್ಯಕ್ಷನ್ ಕಟ್ ಹೇಳಿದ್ದಾರೆ.

ಇನಾಮ್ದರ್ ಚಿತ್ರದ ಮೂಲಕ ಚಿತ್ರ ರಸಿಕರಿಗೆ ವಿಭಿನ್ನವಾಗಿರುವ ಕಥೆಯನ್ನು ಮುಂದಿಡಲು ಬರುತ್ತಿದ್ದಾರೆ. ಬಹಳಷ್ಟು ಇಷ್ಟ ಪಟ್ಟು ಸಿದ್ದಪಡಿಸಿದ ಕಥೆಯನ್ನು ತೆರೆಯ ಮೇಲೆ ತರುವ ನಿಟ್ಟಿನಲ್ಲಿ ಬಯಲು ಸೀಮೆ ಯಿಂದ ಹಿಡಿದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಿರ್ದೇಶಕರ ಮಾರ್ಗದರ್ಶನದಲ್ಲಿ ಚಿತ್ರ ತಂಡ ಸಾಕಷ್ಟು ಶ್ರಮವಹಿಸಿದೆ. ನಿರ್ದೇಶಕರ ಆಸೆಗೆ ಮತ್ತು ಶ್ರಮಕ್ಕೆ ಪೂರಕವಾಗಿ ನಿರ್ಮಾಪಕ ನಿರಂಜನ್ ತಲ್ಲೂರ್ ಸಾಥ್ ನೀಡುವುದರ ಜೊತೆಗೆ ದಣಿವರಿಯದೇ ಕಾರ್ಯನಿರ್ವಹಿಸಿದ್ದಾರೆ.

ನಿರ್ದೇಶಕನ ಹಂಬಲಕ್ಕೆ ನಿರ್ಮಾಪಕನ ಬೆಂಬಲವಿದ್ದಾಗಲೇ ಅಲ್ಲವೆ ನಿರ್ದೇಶಕನಲ್ಲಿರುವ ಕ್ರೀಯಾಶೀಲತೆ ಇನ್ನಷ್ಟು ಜಾಗೃತವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸಂದೇಶಗೆ ಸಿಕ್ಕ, ನಿರ್ಪಾಕರು ಹಾಗೂ ನಟರ ತಂಡ ಸಮಾನ ಮನಸ್ಕರು ಮತ್ತು ಆಸಕ್ತರಿದ್ದ ಕಾರಣದಿಂದಲೇ ಒಂದು ಉತ್ತಮ ಚಿತ್ರ ನಿರ್ಮಿಸಲು ಸಾಧ್ಯವಾಗಿದೆ ಅಂತಾರೆ ತಂಡದ ಕೆಲವು ಸದಸ್ಯರು.

ಇನಾಮ್ದಾರ್ ಕಥೆಗೆ ಪೂರಕವಾದ ಫ್ರೇಮ್ ಮೂಲಕ ಕಣ್ಣಿಗೆ ಕಟ್ಟಿಕೊಡುವ ರೀತಿಯ ಚಿತ್ರಣ ಸೆರೆ ಹಿಡಿದಿರುವ ಕ್ಯಾಮೆರಾ ಮ್ಯಾನ್ ಮುರುಳಿ ಅವರು ಚಿತ್ರದ ಇನ್ನೊಂದು ಭಾಗವಾಗಿದ್ದಾರೆ. ಬಯಲುಸೀಮೆಯಿಂದ ಹಿಡಿದು ಪಶ್ವಿಮ ಘಟ್ಟದ ತಪ್ಪಲಿನ‌ ಕಾಡಿನಲ್ಲಿಯೂ ವಯಸ್ಸಿಗೆ ಮೀರಿದ ಉತ್ಸಾಹ ತೋರುತ್ತಾ, ಚಿತ್ರತಂಡವನ್ನು ಹುರಿದುಂಬಿಸಿ ಚಿತ್ರೀಕರಣ ಮಾಡಿ ಮುಗಿಸಿ ಈಗ ಒಂದು ಸಣ್ಣ ರಿಲೀಫ್ ಮೂಡಿನಲ್ಲಿದೆ ಚಿತ್ರತಂಡ. ಪ್ರೇಕ್ಷಕ ಮಹಾಪ್ರಭುಗಳು ಚಿತ್ರವನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದರೆ ಸಾಕು ಅನ್ನೋ ಕುತೂಹಲವನ್ನು ಕಣ್ಣಿನಲ್ಲಿ ಹೊತ್ತು ಸಣ್ಣ ಯಶಸ್ಸಿನ ಕನಸ್ಸು ಸಂದೇಶದು. ಸಂದೇಶ ಅವರ ಈ ಜರ್ನಿಯಲ್ಲಿ ಶ್ರೇಯ ಮುರುಳಿ ಅವರ ಕಾರ್ಯ ಕೂಡ ಮೆಚ್ಚುವಂಥದ್ದು. ಗಂಡುಮೆಟ್ಟಿದ ನಾಡು ಬೆಳಗಾವಿಯ ಖಡಕ್ ಸ್ಟಾರ್ ರಂಜನ್ ಛತ್ರಪತಿ ಇನಾಮ್ದಾರ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಕಥೆಗೆ ಬೇಕಾದಂತೆ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚಿದ್ದಾರೆ.‌ ಕುಡ್ಲದ ಬೆಡಗಿ ನಗುಮುಖದ ಸುಂದರಿ ಚಿರಶ್ರೀ ಅಂಚನ್ ಈಗಾಗಲೇ ಕನ್ನಡ, ತುಳು, ತಮಿಳು ಸಿನೆಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದು, ಸದ್ಯ ಇನಾಮ್ದಾರ್ ಸಿನೆಮಾದ ಹಿರೋಯಿನ್. ಈ ಮೂಲಕ ಚಿತ್ರದ ನಾಯಕಿಯಾಗಿ ಅಂಚನ್, ಕುಡ್ಲದ ಕಂಪು ಹರಿಸಿದ್ದಾರೆ.

ಚಿತ್ರದ ಮುಖ್ಯ‌ಭೂಮಿಕೆಯಲ್ಲಿ ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಅವಿನಾಶ್, ಎಂ.ಕೆ. ಮಠ ಅವರಂತ ಹಿರಿಯ ನಟರಿದ್ದು, ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಪ್ರಶಾಂತ್ ಸಿದ್ಧಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಹಾಲಂಬಿ ಅವರಂತ ಕರಾವಳಿಯ ಪ್ರತಿಭೆಗಳ ಸಮಾಗಮ ಚಿತ್ರದಲ್ಲಿ ನೋಡಬಹುದಾಗಿದೆ. ಚಿತ್ರಕ್ಕೆ ಆರ್.ಕೆ. ಮಂಗಳೂರು ಸಹಕಾರ ನೀಡಿದ್ದು, ಸಹ ನಿರ್ದೇಶನದಲ್ಲಿ ರಾಜ್ ಕೃಷ್ಣ ಮತ್ತು ಮಿಥುನ್ ತೀರ್ಥಹಳ್ಳಿ ಸಾಥ್ ನೀಡಿದ್ದಾರೆ. ಸನತ್ ಉಪ್ಪುಂದ, ಅನೀಶ್ ಡಿಸೋಜಾ, ನಾಗೇಶ್ ಮತ್ತಿತರರು ಸಹಕಾರ ನೀಡಿದ್ದಾರೆ. ಏನೇ ಆಗಲಿ ಕಲೆ ನಮ್ಮ ತನದ ಸ್ವಾಭಿಮಾನ. ಈ ನಿಟ್ಟಿನಲ್ಲಿ ಅಪ್ಪಟ ಕನ್ನಡಿಗರನ್ನು ಕಟ್ಟಿಕೊಂಡ ಚಿತ್ರತಂಡಕ್ಕೆ ಕನ್ನಡಿಗರಾದ ನೀವುಗಳು ಚಿತ್ರವನ್ನು ಕಣ್ತುಂಬಿಕೊಂಡು ಆಶೀರ್ವದಿಸಿದರೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳಿಗೆ ಪ್ರೋತ್ಸಾಹಿಸಿದಂತಾಗುತ್ತದೆ ಅನ್ನೋದು ನಿರ್ದೇಶಕ ಸಂದೇಶ್ ಅವರ ಮನವಿ.

ಬಯಲುಸೀಮೆಯ ಒಂದು ಜನಾಂಗ ಮತ್ತು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಇನ್ನೊಂದು ಜನಾಂಗ ನಡುವೆ ನಡೆಯುವ ವರ್ಣ ಭೇದದ ಕಥೆಯ ಜೀವಾಳ. ಚಿತ್ರದುದ್ದಕ್ಕೂ ಪಶ್ಚಿಮ ಘಟ್ಟದ ತಪ್ಪಲಿನ ಸೌಂದರ್ಯ ಕಾಣಬಹುದಾಗಿದ್ದು, ಬಯಲು ಸೀಮೆಯ ಸೊಬಗು ಚಿತ್ರ ರಸಿಕರಿಗೆ ಮೆಚ್ಚಿಗೆಯಾಗಲಿದೆ. ಸದ್ಯ ಇನಾಮ್ದಾರ್ ಚಿತ್ರ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಇನ್ನು ಕೆಲವು ದಿನಗಳಲ್ಲಿ ಕರಾವಳಿ ಪ್ರತಿಭೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ ಎರಡನೇಯ ಚಿತ್ರ ತೆರೆಯ ಮೇಲೆ ಮೂಡಿಬರಲಿದೆ.