fine – Peepal Media

ಅಮಾಯಕನ ಬಂಧನ – ಮಹಿಳಾ ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ರೂ. ದಂಡ
ಮಂಗಳೂರು: ಅಮಾಯಕ ವ್ಯಕ್ತಿಯನ್ನು ಬಂಧಿಸಿ ಒಂದು ವರ್ಷ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಕ್ಕಾಗಿ ಇಬ್ಬರು ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ಐದು ಲಕ್ಷ ರೂ.ಗಳ ದಂಡವನ್ನು ಪಾವತಿಸುವಂತೆ ಎರಡನೇ ಹೆಚ್ಚುವರಿ ಎಫ್ಟಿಎಸ್ಸಿ ಪೋಕ್ಸೊ ನ್ಯಾಯಾಲಯವು ಆದೇಶಿಸಿದೆ.

ನಿರಪರಾಧಿ ನವೀನ್ ಸಿಕ್ವೇರಾ ಅವರಿಗೆ ಐದು ಲಕ್ಷ ರೂ.ಗಳ ಪರಿಹಾರ ನೀಡುವಂತೆ ನಗರದ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರೋಸಮ್ಮ ಪಿ.ಪಿ ಮತ್ತು ಇನ್ಸ್ ಪೆಕ್ಟರ್ ರೇವತಿ ಅವರಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಇದಲ್ಲದೆ, ತಪ್ಪಿತಸ್ಥ ಮಹಿಳಾ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಧೀಶರು ರಾಜ್ಯ ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪೋಕ್ಸೊ ಪ್ರಕರಣದಲ್ಲಿ ನವೀನ್ ಎಂಬ ವ್ಯಕ್ತಿ ಆರೋಪಿಯಾಗಿದ್ದರು. ಎಸ್ ಐ ರೋಸಮ್ಮ ಅವರು ನವೀನ್ ಸಿಕ್ವೇರಾ ಅವರ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿ ವಿಚಾರಣೆಗಾಗಿ ಪೊಲೀಸ್ ಇನ್ಸ್ ಪೆಕ್ಟರ್ ರೇವತಿ ಅವರಿಗೆ ಒಪ್ಪಿಸಿದ್ದಾರೆ. ತನಿಖೆಯ ಸಮಯದಲ್ಲಿ ನವೀನ್ ಸಿಕ್ವೇರಾ ಅವರನ್ನು ಬಂಧಿಸಲಾಯಿತು. ಆದರೆ ಸಂತ್ರಸ್ತೆಯು ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಯಲ್ಲಿ ಮತ್ತು ದೂರಿನಲ್ಲಿ ನವೀನ್ ಮಾತ್ರ ಎಂದು ಹೆಸರನ್ನು ಉಲ್ಲೇಖಿಸಿದ್ದಳು. ಆದಾಗ್ಯೂ, ಪೊಲೀಸರು ನವೀನ್ ಸಿಕ್ವೇರಾ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದರು.

ಆರೋಪಿಗಳ ಪರ ವಕೀಲರಾದ ರಾಜೇಶ್ ಕುಮಾರ್ ಅಮ್ಟಾಡಿ ಮತ್ತು ಗಿರೀಶ್ ಶೆಟ್ಟಿ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಯು.ರಾಧಾಕೃಷ್ಣ ಅವರು ನವೀನ್ ಸಿಕ್ವೇರಾ ಅವರನ್ನು ನಿರಪರಾಧಿ ಎಂದು ಖುಲಾಸೆಗೊಳಿಸಿದರು. ಆದ್ದರಿಂದ, ನ್ಯಾಯಾಧೀಶರು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳಿಗೆ ಐದು ಲಕ್ಷ ರೂ.ಗಳ ದಂಡವನ್ನು ವಿಧಿಸಿದರು.

ಆಂಡ್ರಾಯ್ಡ್‌ ಮೊಬೈಲ್‌ ಸ್ಥಾನ ಮಾರುಕಟ್ಟೆಗಳಲ್ಲಿ ದುರ್ಬಳಕೆ : ಗೂಗಲ್‌ಗೆ 1337.76 ಕೋಟಿ ರೂ. ದಂಡ
ಸಾಧನ ವ್ಯವಸ್ಥೆಯ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್‌ಗೆ ಬರೋಬ್ಬರಿ 1337.76 ಕೋಟಿ ರೂ. ದಂಡ ವಿಧಿಸಿದೆ.

ದಂಡದ ಜೊತೆಗೆ ಸ್ಪರ್ಧಾ ವಿರೋಧಿ ಚಟುವಟಿಕೆಗಳಿಂದ ದೂರು ಉಳಿಯುವಂತೆ ಸಿಸಿಐ ಗೂಗಲ್‌ಗೆ ಹೇಳಿದ್ದು, ತನ್ನ ನಡೆಯನ್ನು ಬದಲಾಯಿಸಿಕೊಳ್ಳುವಂತೆ ನಿರ್ದೇಶಿಸಿದೆ.

ಯೂಟ್ಯೂಬ್‌ ಮೂಲಕ ಆನ್‌ಲೈನ್ ವಿಡಿಯೋ ಹೋಸ್ಟಿಂಗ್ ಪ್ಲಾಟ್‌ಫಾರ್ಮ್ (ಓವಿಎಚ್‌ಪಿ) ಮಾರುಕಟ್ಟೆಯಲ್ಲಿ ಪ್ರವೇಶ ಮಾಡಲು ಮತ್ತು ಅಲ್ಲಿ ಗಳಿಸಿಕೊಂಡಿರುವ ಸ್ಥಾನವನ್ನು ರಕ್ಷಿಸಲು ಆಂಡ್ರಾಯ್ಡ್‌ ಓಎಸ್‌ ಆಧರಿತ ಅಪ್ಲಿಕೇಷನ್‌ ಸ್ಟೋರ್‌ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಗೂಗಲ್‌ ಬಳಸಿಕೊಂಡಿದೆ ಎನ್ನಲಾಗಿದೆ.

ಆಂಡ್ರಾಯ್ಡ್‌ ಓಎಸ್‌ ಆಧರಿತ ಅಪ್ಲಿಕೇಶನ್‌ ಸ್ಟೋರ್‌ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಬಳಸಿಕೊಂಡು ಆನ್‌ಲೈನ್‌ ಸಾಮಾನ್ಯ ಹುಡುಕಾಟದಲ್ಲಿ ತಾನು ಹೊಂದಿರುವ ಸ್ಥಾನವನ್ನು ಗೂಗಲ್‌ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ 1337.76 ಕೋಟಿ ರೂ. ದಂಡ ಹಾಕಲಾಗಿದೆ.

ಫೇಸ್‌ ಮಾಸ್ಕ್‌ ಕಡ್ಡಾಯ-ಉಲ್ಲಂಘಿಸಿದವರಿಗೆ ದಂಡ
ನವದೆಹಲಿ: ದೇಶದಲ್ಲಿ ಕೋವಿಡ್‌ ದೃಢ ಪಡುತ್ತಿರುವವರ ಸಂಖ್ಯೆ ಹಚ್ಚಾಗುತ್ತಿರುವ ಹಿನ್ನಲೆಯಲ್ಲಿ, ದೆಹಲಿ ಸರ್ಕಾರವು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ, ಹಾಗೂ ನಿಯಮ ಉಲ್ಲಂಘಿಸುವವರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಈ ಅಧಿಸೂಚನೆಯ ನಿಬಂಧನೆಯ ಅಡಿಯಲ್ಲಿ ದಂಡವು ಖಾಸಗಿ ನಾಲ್ಕು ಚಕ್ರದ ವಾಹನಗಳಲ್ಲಿ ಒಟ್ಟಿಗೆ ಪ್ರಯಾಣಿಸುವ ವ್ಯಕ್ತಿಗಳಿಗೆ ಅನ್ವಯಿಸುವುದಿಲ್ಲ ಎಂದು ಮಾಹಿತಿ ನೀಡಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.