fir – Peepal Media

ಗಡಿ ವಿವಾದ: 12 ಮಂದಿ ಕರವೇ ಕಾರ್ಯಕರ್ತರ ವಿರುದ್ಧ ಎಫ್ಐಆರ್
ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಭುಗಿಲೆದ್ದಿದ್ದು, ಮಂಗಳವಾರ ಬೆಳಗಾವಿ ಬಳಿ ನೂರಾರು ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್ ವಿ) ಬೆಂಬಲಿಗರನ್ನು ಬಂಧಿಸಲಾಗಿದ್ದು, ಮಹಾರಾಷ್ಟ್ರ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಬೆಳಗಾವಿ ಪೊಲೀಸರು 12 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

ಕರ್ನಾಟಕದ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ನಿಯೋಗದ ಉದ್ದೇಶಿತ ಭೇಟಿಯನ್ನು ಮಂಗಳವಾರ ಮುಂದೂಡಿದ ನಂತರ ವಿವಾದ ಇನ್ನೂ ತಾರಕಕ್ಕೇರಿದ್ದು, ಏತನ್ಮಧ್ಯೆ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್ಆರ್‌ಟಿಸಿ) ಪೊಲೀಸ್ ಸಲಹೆಯನ್ನು ಉಲ್ಲೇಖಿಸಿ ದಕ್ಷಿಣ ರಾಜ್ಯಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಬೆಳಗಾವಿ ಸಮೀಪದ ಹಿರೇಬಾಗವಾಡಿಯಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹಾರಾಷ್ಟ್ರದ ಆರು ವಾಹನಗಳ ಮೇಲೆ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮಂಗಳವಾರ ರಾತ್ರಿ ದೂರವಾಣಿಯಲ್ಲಿ ಪರಸ್ಪರ ಮಾತನಾಡಿ, ಎರಡೂ ಕಡೆ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಒಪ್ಪಿಕೊಂಡಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಹಿಂಸಾಚಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಬೊಮ್ಮಾಯಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಬಿಜೆಪಿ ನಾಯಕನಿಗೆ ಜೀವ ಬೆದರಿಕೆ: ಎಫ್ಐಆರ್ ದಾಖಲು
ತುಮಕೂರು: ಬಿಜೆಪಿ ಮುಖಂಡ ಸುರೇಶ್ ಗೌಡ ಅವರ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ತುಮಕೂರು ಗ್ರಾಮಾಂತರದ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಗುರುವಾರ ಪೊಲೀಸರು ಹಲವಾರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಬಿಜೆಪಿ ಮುಖಂಡ ಸುರೇಶ್ ಗೌಡ

ಈ ಕುರಿತು ಸುರೇಶ್ ಗೌಡರವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರು ವ್ಯಕ್ತಿಗಳು ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ದೂರಿನಲ್ಲಿ ʼನನ್ನ ಜೀವಕ್ಕೆ ಅಪಾಯವಿದೆ ಮತ್ತು ತನ್ನ ಜೀವ ಕಾಪಾಡಿಕೊಳ್ಳುವ ಉದ್ದೇಶದಿಂದ ಈಗಾಗಲೇ 5 ಕೋಟಿ ರೂ.ಗಳನ್ನು ನೀಡಲಾಗಿದೆʼ.ʼನಾನು ಕಾರಿನಲ್ಲಿ ಸಂಚಾರಿಸುವಾಗ ಸಂಚಾರಕ್ಕೆ ಅಡ್ಡಿಪಡಿಸುವುದು ಅಥವಾ ಬೇರೆ ವಾಹನದಿಂದ ಅಪಘಾತಗೊಳಿಸಿ. ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆʼ ಎಂದು ಸುರೇಶ್ ಗೌಡರವರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನಲೆಯಲ್ಲಿ ಶಾಸಕ ಗೌರಿಶಂಕರ್ ಮತ್ತು ಅವರ ಬೆಂಬಲಿಗರಾದ ಹಿರೇಹಳ್ಳಿ ಮಹೇಶ್ ಮತ್ತು ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಟ್ಟಿಕಾ ಬಾಬು ಮತ್ತು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿಯ ಶಿಕ್ಷೆ), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), ಹಾಗೂ ಸೆಕ್ಷನ್‌109 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ತುಮಕೂರಿನ ಪ್ರಥಮ ದರ್ಜೆ ನ್ಯಾಯಾಧೀಶರ (ಜೆಎಂಎಫ್ ಸಿ) ನ್ಯಾಯಾಲಯದ ಅನುಮತಿ ಮೇರೆಗೆ ಮಾಜಿ ಶಾಸಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗರ್ಭಿಣಿ ನಾಯಿಯನ್ನು ಥಳಿಸಿ ಕೊಂದ ವಿದ್ಯಾರ್ಥಿಗಳು: ಎಫ್‌ಐಆರ್‌ ದಾಖಲು
ಹೊಸದಿಲ್ಲಿ: ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ಗರ್ಭಿಣಿ ನಾಯಿಯನ್ನು ಹೊಡೆದು ಕೊಂದಿದ್ದಕ್ಕಾಗಿ ಡಾನ್ ಬಾಸ್ಕೋ ಟೆಕ್ನಿಕಲ್ ಇನ್ಸ್ಟಿಟ್ಯೂಟ್ನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ರಸ್ತೆಯಲ್ಲಿ ಹೋಗುವಾಗ ಗರ್ಭಿಣಿ ನಾಯಿಯು ಬೊಗಳಲು ಶುರುಮಾಡಿದೆ. ಈ ಕಾರಣ ಆಕ್ರೋಶಕ್ಕೋಳಗಾದ ಅವರು ನಾಯಿಯನ್ನು ಥಳಿಸಿದ್ದಾರೆ. ಅದು ಸತ್ತ ನಂತರ ಅದರ ಶವವನ್ನು ಎಳೆದೊಯ್ಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.

ಗರ್ಭಿಣಿ ನಾಯಯಿಯನ್ನು ಕೊಂದು ಎಳೆದೊಳ್ಳುತ್ತಿರುವ ದೃಶ್ಯ

ಈ ಕಾರಣ ವಿದ್ಯಾರ್ಥಿಗಳ ಮೇಲೆ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ, ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 429 ಮತ್ತು 34 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ 11 (1) ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಜಿಎಫ್‌ ಹಾಡುಗಳ ಬಳಕೆ: ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್
ಬೆಂಗಳೂರು: ಕೆಜಿಎಫ್‌ ಚಲನಚಿತ್ರದ ಹಿಂದಿ ಅವತರಿಣಿಕೆಯ ಹಾಡುಗಳನ್ನು ಭಾರತ್‌ ಜೋಡೋ ಪ್ರಚಾರದಲ್ಲಿ ಬಳಸಿಕೊಂಡಿರುವುದಕ್ಕಾಗಿ ಎಂ.ಆರ್.ಟಿ. ಮ್ಯೂಸಿಕ್‌ ಸಂಸ್ಥೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹಾಗು ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ವಿರುದ್ಧ ದೂರು ದಾಖಲಿಸಿದೆ.

ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೆಜಿಎಫ್‌ ಚಿತ್ರದ ಹಾಡುಗಳ ಹಕ್ಕುಗಳು ನಮಗೆ ಸೇರಿದ್ದು, ಕಾನೂನು ಬಾಹಿರವಾಗಿ ಅವುಗಳನ್ನು ಭಾರತ್‌ ಜೋಡೋ ಯಾತ್ರೆಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ರಾಷ್ಟ್ರಮಟ್ಟದ ರಾಜಕೀಯ ಪಕ್ಷವು ಹಕ್ಕುಸ್ವಾಮ್ಯದ ಕಾನೂನುಗಳನ್ನು ಉಲ್ಲಂಘಿಸಿದ್ದು, ಇದು ಕಾನೂನು ಮತ್ತು ಸಂಸ್ಥೆಗಳ ಹಕ್ಕುಗಳ ಕುರಿತಾದ ಅದರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ ಎಂದು ಸಂಸ್ಥೆ ದೂರಿದೆ.

ಇಂದು ಡಿಜಿಟಲ್ ಜಗತ್ತಿನಲ್ಲಿ ಹಕ್ಕುಸ್ವಾಮ್ಯ ಕಾಯಿದೆಯಿಂದ ರಕ್ಷಿಸಲ್ಪಟ್ಟ ನಮ್ಮ ಬೌದ್ಧಿಕ ಆಸ್ತಿಯನ್ನು ಕಾಂಗ್ರೆಸ್‌ ಪಕ್ಷವು ದುರುಪಯೋಗಪಡಿಸಿಕೊಂಡಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷವು ಪೋಸ್ಟ್ ಮಾಡಿದ ವೀಡಿಯೊಗಳನ್ನು ನೋಡಿದ್ದೇವೆ, ಅವುಗಳಲ್ಲಿ ನಮ್ಮ ಅನುಮತಿ/ಪರವಾನಗಿಯನ್ನು ಪಡೆಯದೆ ತಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸಲು ಮತ್ತು ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕಾಗಿ ನಮ್ಮ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಈ ವೀಡಿಯೊಗಳನ್ನು ತಮ್ಮ ಅಧಿಕೃತ ಸಾಮಾಜಿಕ ಹ್ಯಾಂಡಲ್‌ಗಳಲ್ಲಿ INC ಯಿಂದ ಪ್ರಸಾರ / ಪೋಸ್ಟ್ ಮಾಡಲಾಗಿದೆ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಸಹ ಕಾಣಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಭಾರತ ರಾಷ್ಟ್ರೀಯ ಕಾಂಗ್ರೆಸ್‌ನಂಥ ದೊಡ್ಡ ರಾಜಕೀಯ ಪಕ್ಷವು ಬೌದ್ಧಿಕ ಹಕ್ಕುಸ್ವಾಮ್ಯ ಕಾಯ್ದೆಯನ್ನು ಉಲ್ಲಂಘಿಸಿ, ಕೆಟ್ಟ ಮಾದರಿಯನ್ನು ಪ್ರದರ್ಶಿಸಿದೆ. ನಾವು ದೊಡ್ಡಮಟ್ಟದ ಹಣ ಹೂಡಿ ಕೆಜಿಎಫ್‌ ಚಿತ್ರಗಳ ಹಾಡುಗಳ ಹಕ್ಕನ್ನು ಪಡೆದಿದ್ದೇವೆ. ಹೀಗಿರುವಾಗ ನಮ್ಮ ಹಾಡುಗಳನ್ನು ಬಳಸಿಕೊಳ್ಳುವುದು ಕಾನೂನುಬಾಹಿರ ಎಂದು ಸಂಸ್ಥೆ ದೂರಿನಲ್ಲಿ ತಿಳಿಸಿದೆ.

ಕಾಂಗ್ರೆಸ್‌ ಪಕ್ಷದ ಈ ಕಾರ್ಯವು ಭಾರತೀಯ ನಾಗರಿಕರಿಗೆ ಸಂಪೂರ್ಣವಾಗಿ ತಪ್ಪು ಸಂಕೇತವನ್ನು ಕಳುಹಿಸುತ್ತದೆ ಮತ್ತು ನಮ್ಮ ಹಕ್ಕುಸ್ವಾಮ್ಯಗಳನ್ನು ರಕ್ಷಿಸುವ ಪ್ರಯತ್ನಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಹೇಳಿದೆ.

ಮಕ್ಕಳ ಕಳ್ಳ ಎಂದು ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಥಳಿತ: ಎಫ್‌ಐಆರ್‌ ದಾಖಲು
ಛತ್ತೀಸ್‌ಗಢ: ಮಕ್ಕಳ ಅಪಹರಣಕಾರನೆಂದು ತಪ್ಪಾಗಿ ಭಾವಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಥಳಿಸಿದ ಘಟನೆ ಉತೈ ಪಿಎಸ್ ಪ್ರದೇಶದಲ್ಲಿ ನಡೆದಿದೆ.

ಈ ಕುರಿತು ನಗರದ ಎಎಸ್ಪಿ ದುರ್ಗ ಅಭಿಷೇಕ್ ಪಲ್ಲವ ಅವರು ಮಾಹಿತಿ ನೀಡಿದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ನಗರದ ಬೀದಿ ಬೀದಿಗಳಲ್ಲಿ ತಿರುಗಾಡುತ್ತಿದ್ದು, ಇತ್ತೀಚಿನ ಗಾಳಿ ಸುದ್ದಿಯಂತೆ ಆತ ಮಕ್ಕಳ ಕಳ್ಳ ಎಂದು ಭಾವಿಸಿ ಅಪರಿಚತ ವ್ಯಕ್ತಿಗಳು ಆತನನ್ನು ಥಳಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸರು ಆತನನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದರು.

ಈ ಹಿನ್ನಲೆ ಅಪರಿಚಿತ ವ್ಯಕ್ತಿಗಳು ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಥಳಿಸಿರುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಹೀಗಾಗಿ ಅಪರಿಚಿತ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಯುತ್ತಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಎಸ್ಪಿ ದುರ್ಗ ಅಭಿಷೇಕ್ ಪಲ್ಲವ ಅವರು ಹೇಳಿದರು.

ಡಿಮಾನ್ಸ್ ನಲ್ಲಿ ಜಾತಿ ನಿಂದನೆ ಆರೋಪ : ಮೇಲಧಿಕಾರಿಗಳ ವಿರುದ್ಧ FIR ದಾಖಲು
ಧಾರವಾಡದ ಡಿಮಾನ್ಸ್ ನಲ್ಲಿ ಕಳೆದ ಎರಡು ವರ್ಷಗಳಿಂದ ಜಾತಿಯ ಕಾರಣಕ್ಕಾಗಿ ಮತ್ತು ಔದ್ಯೋಗಿಕ ಉನ್ನತಿಯನ್ನು ಸಹಿಸದ ಹಿನ್ನೆಲೆಯಲ್ಲಿ ಪ್ರೊಫೆಸರ್ ಬಿ.ರಮೇಶ್ ಬಾಬು ಎಂಬುವವರು ಡಿಮಾನ್ಸ್ ನ ಹಿರಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ಆ ದೂರಿನ ಅನ್ವಯ ಎಲ್ಲಾ ರೀತಿಯ ತನಿಖೆ ನಡೆದು ಹಿರಿಯ ಅಧಿಕಾರಿಗಳಾದ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಎಂಬುವವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಧಾರವಾಡದ ಡಿಮಾನ್ಸ್ ಆಸ್ಪತ್ರೆಯಲ್ಲಿ 2019ರ ಡಿಸೆಂಬರ್ ನಲ್ಲಿ ಸರ್ಕಾರದ ಖಾಲಿ ಇರುವ ಬ್ಯಾಕ್ಲಾಗ್ ಪ್ರಾಧ್ಯಾಪಕರ ಹುದ್ದೆಯಲ್ಲಿ ಪ್ರೊಫೆಸರ್ ಡಾ.ರಮೇಶ್ ಬಾಬು ಕಾರ್ಯ ನಿರ್ವಹಿಸುತ್ತಿದ್ದರು. ನಂತರ 2020 ರ ಜನವರಿಯಲ್ಲಿ ‘ನಿರ್ದೇಶಕರು, ಡಿಮಾನ್ಸ್, ಧಾರವಾಡ’ ಇವರ ಹೆಸರಿನಲ್ಲಿ ಡಾ.ರಮೇಶ್ ಬಾಬು ಅವರಿಗೆ ಪತ್ರವೊಂದು ಬಂದಿತ್ತು. ಆ ಪತ್ರದಲ್ಲಿ ಡಾ.ರಮೇಶ್ ಬಾಬು ಈ ದಿನದಿಂದ ಯಾವುದೇ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವುದು, ಉಪನ್ಯಾಸ ಮಾಡುವುದು, ಕ್ಲಿನಿಕಲ್ ಕಾರ್ಯನಿರ್ವಹಣೆ ಮಾಡುವುದು ಇವುಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬರೆಯಲಾಗಿತ್ತು. ಹಾಜರಾತಿ ಇದ್ದರೂ ಸಹ ಮೇಲಧಿಕಾರಿಗಳು ಸಂಬಳ ತಡೆ ಹಿಡಿಯುವ ಕೆಲಸಕ್ಕೆ ಮುಂದಾಗಿದ್ದರು.

ಜೊತೆಗೆ ಸರ್ಕಾರ ಆದೇಶ ಮಾಡಿದ್ದರೂ ಅನಧಿಕೃತವಾಗಿ ಡಿಮಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಎಲ್ಲರ ಎದುರು ಬಹಿರಂಗವಾಗಿ ಅವಮಾನ ಮಾಡಿದ್ದಾರೆ. ಹಾಗೂ ಕೋವಿಡ್ 19 ಸಂದರ್ಭದಲ್ಲೂ ಸಹ ಯಾವುದೇ ರೀತಿಯಲ್ಲೂ ಕರ್ತವ್ಯ ನಿರ್ವಹಿಸಲು ಬಿಡದೇ ಈ ದಿನದ ವರೆಗೂ ರಮೇಶ್ ಬಾಬು ಅವರಿಗೆ ಬರುವ ಸಂಬಳ ತಡೆ ಹಿಡಿದಿದ್ದಾರೆ. ಇದನ್ನು ಪ್ರಶ್ನಿಸಲು ಮುಂದಾದಾಗ ಹಿರಿಯ ಅಧಿಕಾರಿಗಳಾದ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಎಂಬುವವರು  ಪರಿಶಿಷ್ಟ ಜಾತಿಗೆ ಸೇರಿದ ಡಾ.ರಮೇಶ್ ಬಾಬು ಅವರು ಭಾರತದ ಯಾವುದೇ ವಿಧ್ಯಾಸಂಸ್ಥೆಗೆ ಕರ್ತವ್ಯ ನಿರ್ವಹಿಸಲು ಅನರ್ಹ, ಎಂದು ಸುಳ್ಳು ದಾಖಲೆ ಸೃಷ್ಟಿಸಿ ಅನಗತ್ಯವಾಗಿ ಸತ್ಯ ಶೋಧನೆಗೆ ಒಳಪಡದ ರೀತಿಯಲ್ಲಿ ವರದಿ ಸಿದ್ದಪಡಿಸಿದ್ದಾರೆ. ಇದೆಲ್ಲವನ್ನೂ ಸಹಿಸಿಕೊಂಡು ಕರ್ತವ್ಯ ನಿರ್ವಹಣೆ ಅಡಿಯಲ್ಲಿ ಕೆಲಸ ಮಾಡಿದ್ದರೂ ಮೇಲಧಿಕಾರಿಗಳು ಇವರನ್ನು ಸರಿಯಾಗಿ ನಡೆಸಿಕೊಳ್ಳದೇ, ಮಾತನಾಡದೇ ಅವಮಾನಕರವಾಗಿ ನಡೆದುಕೊಂಡಿದ್ದಾರೆ.

ಹಾಗೇ ಡಾ.ರಮೇಶ್ ಬಾಬುರವರು ಇವೆಲ್ಲವನ್ನೂ ಮರೆತು 2020 ರ ಸ್ವಾತಂತ್ರ್ಯ ದಿನಾಚರಣೆ ದಿನ ಕೈ ಕುಲುಕಿ ಶುಭಾಶಯ ಹೇಳಿದಾಗಲೂ ಅವರ ಸ್ಪರ್ಶದಿಂದ ಕಿರಿಕಿರಿ ಎಂದು ಕೆಲವರೊಂದಿಗೆ ಡಾ.ಮಹೇಶ್ ದೇಸಾಯಿ ಹೇಳಿಕೊಂಡದ್ದೂ ಸಹ ಸಾಕ್ಷ್ಯ ಸಮೇತ ರುಜುವಾತಾಗಿದೆ. ಇದರ ಜೊತೆಗೆ ಡಾ.ರಮೇಶ್ ಬಾಬುರವರ ಮೇಲಾದ ಮಾನಹಾನಿ ಪರವಾಗಿ ನಿಂತ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ ಡಾ.ಅಂಜು ಬಾಲಾ ಅವರ ಮೇಲೂ ಸಹ ಡಾ.ರಾಘವೇಂದ್ರ ನಾಯಕ್ ಅವರು ದೂರು ದಾಖಲಿಸಿ ಪರಿಶಿಷ್ಟ ಜಾತಿಯವರ ಮೇಲಿನ ಅಸಹನೆಯನ್ನು ಹೊರಹಾಕಿದ್ದು, ಇವೆಲ್ಲವೂ ಸಾಕ್ಷ್ಯ ಸಮೇತ ದಾಖಲಾಗಿದೆ.

ಸಧ್ಯ ಈ ಬಗ್ಗೆ ಸಂಪೂರ್ಣ ತನಿಖೆ ನಡೆದು ಧಾರವಾಡ ಡಿಮಾನ್ಸ್ ನಲ್ಲಿ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಅವರ ಮೇಲೆ ರಾಯಚೂರಿನಲ್ಲಿ FIR ದಾಖಲಾಗಿದೆ. ಸಧ್ಯ ಧಾರವಾಡ ಡಿಮಾನ್ಸ್ ಆಸ್ಪತ್ರೆ ಅಸ್ಪೃಶ್ಯತಾ ಆಚರಣೆಯ ಹಿನ್ನೆಲೆಯಲ್ಲಿ ಸುದ್ದಿಯಾಗುತ್ತಿದೆ. ಡಾ.ರಮೇಶ್ ಬಾಬು ಅವರ ಪ್ರಕಾರ ಮೇಲಧಿಕಾರಿಗಳ ಈ ರೀತಿಯ ವರ್ತನೆಗೆ ಸಮಾಜದ ದೊಡ್ಡ ದೊಡ್ಡ ವ್ಯಕ್ತಿಗಳು, ರಾಜಕಾರಣಿಗಳು ಇವರ ಬೆಂಬಲಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ, ಇದು ಸ್ಪಷ್ಟವಾಗಿ ಔದ್ಯೋಗಿಕ ಉನ್ನತಿಗೆ ಅಸೂಯೆ ಪಡುವ ಕೆಟ್ಟ ಪ್ರವೃತ್ತಿಯಾಗಿದೆ. ಸಮಾಜದಲ್ಲಿ ಕೆಳ ವರ್ಗ ಎಂದು ಗುರುತಿಸಲ್ಪಡುವ ಸಮುದಾಯಗಳನ್ನು ಇಂತಹ ಅಧಿಕಾರಿಗಳೇ ಕೆಟ್ಟ ದೃಷ್ಟಿಯಿಂದ ನೋಡಿದರೆ ಇನ್ನು ಸಾಮಾನ್ಯ ಜನರ ಪಾಡೇನು?

ಸಿ.ಪಿ ಯೋಗೇಶ್ವರ್‌ ಕಾರಿನ ಮೇಲೆ ಮೊಟ್ಟೆ ತೂರಾಟ : 14 ಜೆಡಿಎಸ್‌ ಕಾರ್ಯಕರ್ತರ ಮೇಲೆ FIR ದಾಖಲು
ರಾಮನಗರ : ರಾಮನಗರಕ್ಕೆ ಬಂದಿದ್ದ ಬಿಜೆಪಿ ಶಾಸಕ ಸಿ.ಪಿ ಯೋಗೇಶ್ವರ್‌ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಪೋಲಿಸರ್‌ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಶನಿವಾರದಂದು ಸರ್ಕಾರದ 50 ಕೋಟಿ ವಿಶೇಷ ಅನುದಾನದ ಅಡಿ ಕಾಮಗಾರಿ ಚಾಲನೆಗೆಂದು ಬಿಜೆಪಿ ಶಾಸಕ ಸಿ ಪಿ ಯೋಗೇಶ್ವರ್‌ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣಕ್ಕೆ ಬಂದಿದ್ದಾರೆ.ಈ ವೇಳೆ ಜೆಡಿಎಸ್‌ ಕಾರ್ಯಕರ್ತರು ಅವರ ಕಾರಿನ ಮೇಲೆ ಕಲ್ಲು ಮತ್ತು ಮೊಟ್ಟೆಗಳನ್ನು ಹೊಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಈ ಹಿನ್ನಲೆ ಕಾರಿನ ಚಾಲಕನಾದ ವೆಂಕಟೇಶ್‌ ಎಂಬುವವರು ಜೆಡಿಎಸ್‌ ಕಾರ್ಯಕರ್ತರ ವಿರುದ್ದ ಚನ್ನಪಟ್ಟಣ ಗ್ರಾಮೀಣ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡ ಅಲ್ಲಿನ ಪೋಲೀಸರು ಇಂದು 14 ಜನ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ.

ಇದರ ಬೆನ್ನಲ್ಲೇ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್‌ ಕುಮಾರಸ್ವಾಮಿಯವರು ಭಾನುವಾರದಂದು ರಾಮನಗರಕ್ಕೆ ಭೇಟಿ ನೀಡಿದ್ದು, ಪ್ರಕರಣದ ಕುರಿತು ಡಿವೈಎಸ್‌ಪಿ ಓಂ ಪ್ರಕಾಶ್‌ ಜೊತೆ ಚರ್ಚೆ ನಡೆಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ:  🟨 ಗಾಂಧಿ ಜನಯಂತಿ ಪ್ರಯುಕ್ತ ಸಾರ್ವಜನಿಕರಲ್ಲಿ ಪೌರಕಾರ್ಮಿಕರು ಹಾಗೂ ಮಾರ್ಷಲ್ಸ್ ಮನವಿ

🟨 ದಯವಿಟ್ಟು ಪೀಪಲ್ ಮೀಡಿಯಾ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ

https://fb.watch/fV5MIzhgVh/

ತಿಂಗಳುಗಟ್ಡಲೆ ಬಾಲಕಿಯ ಮೇಲೆ ಅತ್ಯಾಚಾರ: ಚೀನಿ ಪ್ರಜೆ ಬಂಧನ
ಇಸ್ಲಾಮಾಬಾದ್: ಕೆಲವು ತಿಂಗಳುಗಳಿಂದ ಹದಿಹರೆಯದ ಬಾಲಕಿ ಮೇಲೆ ಲೈಂಗಿಕ ಕಿರುಕಳ ನೀಡುತ್ತಿದ್ದ ಆರೋಪದಡಿ ಚೀನಿ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಇಸ್ಲಾಮಾಬಾದ್‌ ಪೊಲೀಸರು ತಿಳಿಸಿದ್ದಾರೆ.

ಚೀನಾದ ಪ್ರಜೆಯೊಂದಿಗೆ ಭಾಷಾಂತರಕಾರರಾಗಿ ಕೆಲಸ ಮಾಡುತ್ತಿದ್ದ 16 ವರ್ಷದ ಬಾಲಕಿ ನೀಡಿದ ದೂರಿನ ಮೇಲೆ ಶಂಕಿತನ ವಿರುದ್ಧ ಪ್ರಕರಣ ದಾಖಲಾಗಿಸಲಾಗಿದೆ ಎಂದು ಡಾನ್‌ (DAWN) ಪತ್ರಿಕೆ ಇಂದು(ಶುಕ್ರವಾರ) ವರದಿ ಮಾಡಿದೆ.

ಮಾಹಿತಿ ಪ್ರಕಾರ, ಬಾಲಕಿಯು ಕೆಲಸ ಆರಂಭಿಸದ ಕೂಡಲೇ ಶಂಕಿತ ವ್ಯಕ್ತಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಕೆಯ ಮೇಲೆ ಜನವರಿ ತಿಂಗಳುಗಳಿಂದ ಲೈಂಗಿಕ ದೌರ್ಜನ್ಯ ನಡೆಯುತ್ತಿದ್ದು, ಕಿರುಕುಳ ನೀಡುತ್ತಿರುವುದರ ಬಗ್ಗೆ ಯಾರಿಗಾದರು ಮಾಹಿತಿ ನೀಡಿದ್ದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಲೈಂಗಿಕ ಕಿರುಕುಳವನ್ನು ಮುಂದುವರೆಸುತ್ತಾ ಬಂದಿದ್ದಾನೆ ಎಂದು ವರದಿ ತಿಳಿಸಿದೆ.

ಈ ಹಿನ್ನಲೆ ಆಕೆಯು ಗರ್ಭಿಣಿಯಾಗಿದ್ದರೂ ಮನೆಯವರಿಗೆ ವಿಷಯ ತಿಳಿಸಿಲ್ಲ. ಆದರೆ ಆಕೆಯ ಅಕ್ಕ ಬಾಲಕಿಯ ಸ್ಥಿತಿಯನ್ನು ಗಮನಿಸಿದ್ದು, ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ವೈದ್ಯರು ಹೇಳಿದ ಮಾಹಿತಿ ಪ್ರಕಾರ ಅವಳು 31 ವಾರಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ನಂತರ ಈ ಕುರಿತು ಬಾಲಕಿಯನ್ನು ಪ್ರಶ್ನಿಸಿದಾಗ ತನ್ನ ಮೇಲೆ ನಡೆಯುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ವಿಷಯ ಬಿಚ್ಚಿಟ್ಟಿದ್ದಾಳೆ. ವಿಷಯ ತಿಳಿದ ಕೂಡಲೆ ಪೊಲೀಸರಿಗೆ ಘಟನೆ ಬಗ್ಗೆ ತಿಳಿಸಿದ್ದು ಎಫ್‌ಐಆರ್ ದಾಖಲು ಮಾಡಿದ್ದಾರೆ.

ದೂರಿನ ಮೇಲೆ ಆರೋಪಿಯನ್ನು ಬಂಧಿಸಿದ್ದು, ಆತನ ಪಾಸ್‌ಪೊರ್ಟ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.