fishing – Peepal Media

ತಮಿಳುನಾಡಿನ ಸಮುದ್ರ ತೀರದಲ್ಲಿ 500 ಕ್ಕೂ ಹೆಚ್ಚು ಸತ್ತ ಆಲಿವ್ ರಿಡ್ಲಿ ಆಮೆಗಳು
ಇತ್ತೀಚಿನ ವಾರಗಳಲ್ಲಿ ತಮಿಳುನಾಡಿನ ಚೆನ್ನೈ ಮತ್ತು ಕಾಂಚೀಪುರಂ ಕರಾವಳಿಯಲ್ಲಿ 500 ಕ್ಕೂ ಹೆಚ್ಚು ಸತ್ತ ಆಲಿವ್ ರಿಡ್ಲಿ ಆಮೆಗಳು ದಡಕ್ಕೆ ಕೊಚ್ಚಿಕೊಂಡು ಹೋಗಿದ್ದು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಮೀನುಗಾರಿಕೆ ಮತ್ತು ಅರಣ್ಯ ಇಲಾಖೆಗಳು ಮತ್ತು ರಾಜ್ಯದ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಸೂಚನೆಗಳನ್ನು ನೀಡುವಂತೆ ಸೂಚಿಸಿದೆ.

ಆಲಿವ್ ರಿಡ್ಲಿ ಆಮೆಗಳು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸಂತಾನೋತ್ಪತ್ತಿ ಮಾಡಲು ತಮಿಳುನಾಡು ಕರಾವಳಿಗೆ ಬರುತ್ತವೆ, ಅವುಗಳ ಗೂಡುಕಟ್ಟುವ ಅವಧಿಯು ನವೆಂಬರ್ ಅಂತ್ಯದಿಂದ ಮಾರ್ಚ್‌ವರೆಗೆ ಇರುತ್ತದೆ. ಗೂಡುಕಟ್ಟುವ ಅವಧಿಯಲ್ಲಿ ಸಾವುಗಳು ಅಪರೂಪವಲ್ಲವಾದರೂ, ಈ ವರ್ಷ ಅಸಾಧಾರಣವಾಗಿ ಹೆಚ್ಚಿನ ಸಂಖ್ಯೆಯ ಆಮೆಗಳು ಸತ್ತಿರುವುದು ಕಳವಳವನ್ನು ಹುಟ್ಟುಹಾಕಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಆಮೆಗಳ ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಸಾಧ್ಯವಾಗದಷ್ಟು ಮಟ್ಟದಲ್ಲಿ ಅವುಗಳ ಶವಗಳು ಕೊಳೆತುಹೋಗಿವೆ ಎಂದು ದಿ ಹಿಂದೂ ವರದಿ ಮಾಡಿದೆ. ಹಾಗಿದ್ದೂ ಅರಣ್ಯ ಇಲಾಖೆ ಮತ್ತು ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾನಿಲಯವು ಆಮೆಗಳ ದೇಹಗಳು ಊದಿರುವುದು ಮತ್ತು ಕಣ್ಣುಗಳು ಉಬ್ಬಿರುವುದು ಸಂಭವನೀಯ ಉಸಿರುಗಟ್ಟುವಿಕೆಯನ್ನು ಸೂಚಿಸುತ್ತದೆ ಎಂದು ಹೇಳಿವೆ.

ಆಮೆಗಳು ಅಕ್ರಮ ವಾಣಿಜ್ಯ ಮೀನುಗಾರಿಕೆ ನಡೆಸುತ್ತಿದ್ದ ಟ್ರಾಲರ್‌ಗಳ ಬಲೆಯಲ್ಲಿ ಸಿಲುಕಿ ಚೆನ್ನೈನ ಕಾಸಿಮೇಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿ ತೀರದ ಸಮೀಪದಲ್ಲಿ ಸಾವನ್ನಪ್ಪಿವೆ ಎಂದು ಶಂಕಿಸಲಾಗಿದೆ.

“ಆಲಿವ್ ರಿಡ್ಲಿ ಆಮೆಗಳು ಉಸಿರಾಡಲು ಸಮುದ್ರದ ಮೇಲ್ಮೈಗೆ ಈಜಿ ಬರಬೇಕು. ಅವು ಬಲೆಗಳಲ್ಲಿ ಸಿಕ್ಕಿಹಾಕಿಕೊಂಡರೆ, ಉಸಿರುಗಟ್ಟಿ ಸಾಯುತ್ತವೆ,” ಎಂದು ಪಾಂಡಿಚೇರಿ ವಿಶ್ವವಿದ್ಯಾಲಯದ ಪರಿಸರ ಮತ್ತು ಪರಿಸರ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಕೆ ಶಿವಕುಮಾರ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಆಮೆಗಳು ಹೆಚ್ಚು ಇರುವ ಪ್ರದೇಶಗಳ ಬಳಿ ಹೆಚ್ಚಿನ ಸಂಖ್ಯೆಯ ಮೀನುಗಳಿರುವುದರಿಂದ ಟ್ರಾಲರ್‌ಗಳನ್ನು ಬಳಸಿ ಇಲ್ಲಿ ಮೀನುಗಾರಿಕೆ ನಡೆಸಿರುವುದು ಈ ವರ್ಷ ಅಸಾಧಾರಣವಾಗಿ ಹೆಚ್ಚಿನ ಸಂಖ್ಯೆಯ ಆಮೆಗಳ ಸಾವಿಗೆ ಕಾರಣ ಎಂದು ಅವರು ಹೇಳಿದ್ದಾರೆ.

ಜನವರಿ ಮತ್ತು ಏಪ್ರಿಲ್ ನಡುವೆ ಸಂಭಾವ್ಯ ಆಮೆ ಗೂಡುಕಟ್ಟುವ ಮತ್ತು ಸಂತಾನೋತ್ಪತ್ತಿ ಸ್ಥಳಗಳಲ್ಲಿ ಕರಾವಳಿಯ ಐದು ನಾಟಿಕಲ್ ಮೈಲುಗಳ ಒಳಗೆ ಯಾಂತ್ರೀಕೃತ ಹಡಗುಗಳ ಮೂಲಕ ಮೀನುಗಾರಿಕೆಗೆ ನಿಷೇಧವಿದೆ. ಹಾಗಿದ್ದೂ ಕೂಡ, ವರ್ಷದ ಈ ಸಮಯದಲ್ಲಿ ಆಳ ಸಮುದ್ರದಲ್ಲಿನ ಒರಟು ಪರಿಸ್ಥಿತಿಗಳಿಂದಾಗಿ ಅವರು ಕರಾವಳಿಯ ಮೂರರಿಂದ ಐದು ನಾಟಿಕಲ್ ಮೈಲಿಗಳೊಳಗೆ ಮೀನುಗಾರಿಕೆಗೆ ಆದ್ಯತೆ ನೀಡುತ್ತಾರೆ ಎಂದು ಅಪರಿಚಿತ ಮೀನುಗಾರರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

“ನಾವು ಪುಲಿಕಾಟ್ ಮತ್ತು ದಕ್ಷಿಣ ಆಂಧ್ರದ ಬಳಿ ಮೀನುಗಾರಿಕೆಗೆ ಆದ್ಯತೆ ನೀಡುತ್ತೇವೆ, ಏಕೆಂದರೆ ಕೊಳಚೆ ಇಲ್ಲದ ನೀರು ಇಲ್ಲಿದ್ದು, ಹೆಚ್ಚು ಮೀನು ಸಿಗುತ್ತದೆ,” ಎಂದು ಆ ಮೀನುಗಾರ ಹೇಳಿದ್ದಾರೆ.

ಕೇಬಲ್ ನೆಟ್ ಮೂಲಕ ಮೀನುಗಾರಿಕೆಗೆ ಸಹಾಯಧನ: ಸಾವಿರ ಮೀನುಗಾರರಿಗೆ ಹೆಚ್ಚಳ: ಸಿಎಂ ಬೊಮ್ಮಾಯಿ
ಬೆಂಗಳೂರು: ಕೇಬಲ್ ನೆಟ್ ಮೂಲಕ ಮೀನುಗಾರಿಕೆ ಮಾಡಲು 3 ಲಕ್ಷ  ರೂ.ಗಳ ಸಹಾಯಧನವನ್ನು ಪ್ರಸ್ತುತ 300 ಜನರಿಗೆ ನೀಡುತ್ತಿದ್ದು,  ಇದನ್ನು 1000 ಮೀನುಗಾರರಿಗೆ ಸಹಾಯಧನ ಹೆಚ್ಚಿಸಲಾಗುವುದೆಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ  ಘೋಷಿಸಿದರು.

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುತ್ತಿರುವ 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಉದ್ಘಾಟಿಸಿ, ಮಾತನಾಡಿದರು.

ಸ್ತ್ರೀ ಸಾಮರ್ಥ್ಯ ಯೋಜನೆಯಡಿ 3 ರಿಂದ 5 ಲಕ್ಷ ನೀಡಲಾಗುತ್ತಿದ್ದು ಒಳನಾಡು ಮೀನುಗಾರಿಕೆ ಕೈಗೊಳ್ಳಲು ಮುಂದೆ ಬರುವ ಸ್ತ್ರೀ ಶಕ್ತಿ ಸಂಘಗಳಿಗೆ ಹಾಗೂ ಸ್ವಾಮಿ ವಿವೇಕಾನಂದರ ಯೋಜನೆಯಡಿ ನೀಡುವ ಸಹಾಯ ಧನವನ್ನು ಬಳಸಿ ಸುಮಾರು 1000 ಸಂಘಗಳಿಗೆ ಮೀನುಗಾರಿಕೆ ಕೈಗೊಳ್ಳಲು ಮುಂದಾಗಬೇಕು ಎಂದರು.

ಈಗಾಗಲೇ ಆದೇಶ ನೀಡಿ ಅನುದಾನ ಬಿಡುಗಡೆ ಮಾಡಲಾಗಿದೆ.  ಮೀನುಗಾರಿಕೆಯಲ್ಲಿ ರಾಜ್ಯ ಇನ್ನೂ ಸಾಧನೆ ಮಾಡಬೇಕಿದೆ. ರಫ್ತು ಮಾಡುವಲ್ಲಿ ಆಂಧ್ರಪ್ರದೇಶ ಮುಂದುವರೆದಿದೆ. ಹೀಗಾಗಿ ಒಂದು ತಂಡವನ್ನು ಆಂಧ್ರಪ್ರದೇಶಕ್ಕೆ ಕರೆದೊಯ್ಯಲು ಸೂಚಿಸಿರುವುದಾಗಿ ತಿಳಿಸಿದರು.

ಈಗಿರುವ ಮೀನುಗಾರಿಕೆ ಚಟುವಟಿಕೆಗಳನ್ನು ವಿಸ್ತರಿಸಿ, ಈಗಿನ ರಫ್ತು ಪ್ರಮಾಣಕ್ಕಿಂತ ಮೂರುಪಟ್ಟು ಹೆಚ್ಚು ಮಾಡಬೇಕೆಂದು ಸೂಚಿಸಿದ್ದೇನೆ. ಇದಕ್ಕೆ ಮುಂದಿನ ಆಯವ್ಯಯದಲ್ಲಿ ಅನುದಾನ ಮೀಸಲಿರಿಸಲಾಗುವುದು ಎಂದರು.

ಕಾಲಮಿತಿಯಲ್ಲಿ ಮೀನುಗಾರರಿಗೆ ಮನೆ ನಿರ್ಮಾಣ

ಮೀನುಗಾರರು ಆರ್ಥಿಕವಾಗಿ ಸಬಲರಾಗಲು 5000 ಮೀನುಗಾರರ ಮನೆಗಳಿಗೆ ಮಂಜೂರಾತಿ ನೀಡಿದೆ. ಕಾಲಮಿತಿಯಲ್ಲೇ ಈ ಮನೆಗಳನ್ನು ಪೂರ್ಣಗೊಳಿಸಬೇಕು. ಜನವರಿಯೊಳಗೆ ಪೂರ್ಣಗೊಳಿಸಿದರೆ ಖುದ್ದಾಗಿ ಬಂದು ಮೀನುಗಾರರಿಗೆ ಹಂಚಲಾಗುವುದು ಎಂದರು.

ಮೀನುಗಾರಿಕೆ ಬೃಹತ್ ಉದ್ಯಮ

ಮೀನು ಶತಮಾನಗಳಿಂದ ಮನುಷ್ಯನ ಆಹಾರವಾಗಿದೆ.  ಮೀನು ಸಸ್ಯಾಹಾರಿ. ಮೀನನ್ನು ತಿನ್ನುವವರು ಮಾಂಸಾಹಾರಿಗಳು. ವಿದೇಶಗಳಲ್ಲಿ ಮೀನನ್ನು ಸಸ್ಯಾಹಾರ ಎಂದು ವ್ಯಾಖ್ಯಾನ ಮಾಡುತ್ತಾರೆ. ಮೀನಿಗೆ ಬಹಳಷ್ಟು ಬೆಲೆ ಬಂದಿದೆ. ಮೀನುಗಾರಿಕೆ ಬೃಹತ್ ಉದ್ಯಮವಾಗಿ ಬೆಳೆದಿದೆ. ಮೀನು ಸಾಕುವುದು, ಆಹಾರ ಉತ್ಪಾದನೆಗೆ ಮಾಡಿ, ಮೀನಿನ ಸಂಗ್ರಹ ಹಾಗೂ ಸಾಗಾಣಿಕೆ ಮಾಡಿ ಬಹಳ ದೊಡ್ಡ ಚಟುವಟಿಕೆಗಳು ಮೀನುಗಾರಿಕೆ ಒಳಗೊಂಡಿದೆ. ಇದರಿಂದ ಸಾವಿರಾರು ಜನ ಉದ್ಯೋಗದಲ್ಲಿ ತೊಡಗಲು ಸಾಧ್ಯವಿದೆ. ಮೀನುಗಾರಿಕೆಯಲ್ಲಿ ಸಮುದ್ರ ಮೀನುಗಾರಿಕೆ ಇದೆ. ನಮ್ಮ ಮೀನುಗಾರರು ಸಾಕಷ್ಟು ಸಾಹಸವನ್ನು ಮಾಡಬೇಕಾಗಿದೆ. ಒಳನಾಡು ಮೀನುಗಾರಿಕೆಯೂ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೀನಿನ ಆಹಾರದ ಮಾರಾಟದ ಬೆಲೆ ಬಹಳ ಕಡಿಮೆ ಇದೆ. ಮೀನು ಹಿಡಿದು ಎಷ್ಟು ಅವಧಿಯೊಳಗೆ ಜನರಿಗೆ ಮುಟ್ಟಿಸುತ್ತೇವೆ ಎನ್ನುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಸ್ಥಳೀಯವಾಗಿ ಮೀನುಗಾರಿಕೆ ಮಾಡಿ ಉತ್ಪಾದನೆ ಮಾಡಿದರೆ, ಅಲ್ಲಿ ತಾಜಾ ಮೀನುಗಳನ್ನು ನೀಡಬಹುದು. ಸಮುದ್ರದ ಮೀನುಗಳಿಗೂ, ಉತ್ಪಾದಿಸುವ ಮೀನುಗಳಿಗೂ ವ್ಯತ್ಯಾಸವಿದೆ. ನೀರು ಮತ್ತು ಅದರ ಒಟ್ಟು ಪ್ರದೇಶ, ಮಣ್ಣಿನ ಸಾರ ಮುಂತಾದ ವಿಚಾರಗಳಿವೆ. ಸಂಶೋಧಕರು ಒಳನಾಡು ಮೀನುಗಾರಿಕೆಯಲ್ಲಿ ದೊಡ್ಡ ಪ್ರಮಾಣದ ಸಂಶೋಧನೆ ಮಾಡುತ್ತಿದ್ದಾರೆ ಎಂದರು.

ಒಳನಾಡು ಮೀನುಗಾರಿಕೆಗೆ ಮಹತ್ವ

ಹೊಸ ತಳಿಗಳನ್ನು ಒಳನಾಡು ಮೀನುಗಾರಿಕೆಯಲ್ಲಿ ಪ್ರಯೋಗ ಮಾಡಿ ಯಶಸ್ವಿಯಾಗಿಸಬೇಕು. ಹೊಸ ತಳಿಗಳನ್ನು ತಯಾರು ಮಾಡಿದರೆ ದೊಡ್ಡ ಮಾರುಕಟ್ಟೆ ಲಭ್ಯವಿದೆ. ಮಾರುಕಟ್ಟೆ ಹಾಗೂ ಉತ್ಪಾದನೆಯ ನಡುವೆ ದೊಡ್ಡ ಅಂತರವಿದೆ. ಈ ಅಂತರ ತುಂಬಲು ಒಳನಾಡು ಮೀನುಗಾರಿಕೆಗೆ ಮಹತ್ವ ನೀಡಿ ಹೊಸ ತಳಿಗಳನ್ನು ಪ್ರಯೋಗ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಳಸಬೇಕು. ಸಮುದ್ರದ ಮೀನುಗಾರಿಕೆಗೆ ಹಲವಾರು ಕಾರ್ಯಕ್ರಮಗಳನ್ನು ನಾವು ರೂಪಿಸಿದ್ದೇವೆ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಪ್ರತಿ ಹೆಕ್ಟೇರ್ ಹೊಸದಾಗಿ ಪ್ರಾರಂಭಿಸಿದರೆ 1 ಲಕ್ಷ ರೂ.ಗಳವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಕರಾವಳಿಯಲ್ಲಿ ಉತ್ಪಾದನೆಯಾಗುವ ಮೀನಿಗೆ ತನ್ನದೇ ಮಾರುಕಟ್ಟೆ ವ್ಯವಸ್ಥೆ ಇದೆ. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾಗಿ ಮೀನು ಉತ್ಪಾದನೆಯಲ್ಲಿ ಬಹಳಷ್ಟು ಏರುಪೇರುಗಳಾಗಿವೆ. ಕರಾವಳಿ ಮೀನುಗಾರರು 8 ಅಥವಾ 10 ನಾಟಿಕಲ್ ಮೈಲುಗಳಲ್ಲಿ ಮೀನುಗಾರಿಕೆ ಮಾಡುತ್ತಾರೆ. ಆದರೆ ಬಹಳ ದೊಡ್ಡ ಉತ್ಕೃಷ್ಟ ಮೀನುಗಳು ಆಳ ಸಮುದ್ರದಲ್ಲಿ ದೊರೆಯುತ್ತವೆ. ನಮ್ಮ ಮೀನುಗಾರರು ದೊಡ್ಡ ಟ್ರಾಲರ್ ಬಳಸಿ ಆಳ ಸಮುದ್ರ ಮೀನುಗಾರಿಕೆ ಮಾಡಬೇಕೆಂದು ಈ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರೋತ್ಸಾಹದಿಂದ ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆಯಡಿ ನಾವು 100 ಹೊಸ ಆಳ ಸಮುದ್ರ ಬೋಟುಗಳನ್ನು ಒದಗಿಸುತ್ತಿದ್ದು, 40 % ಸಹಾಯಧನವಿದ್ದು ಅತಿ ಸುಲಭ ದರದಲ್ಲಿ ಸಾಲದ ವ್ಯವಸ್ಥೆ ಮಾಡಲಾಗಿದೆ. 100 ಬೋಟುಗಳನ್ನು ನೀಡಿದರೆ, ಮುಂದಿನ ವರ್ಷ 300 ಬೋಟುಗಳಿಗೆ ವಿಸ್ತರಣೆ ಮಾಡುವ ಉದ್ದೇಶವಿದೆ. ಮೀನುಗಾರರ ಸಂಘಗಳು ಕೂಡ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿ ಹೆಚ್ಚಿನ ಉತ್ಪಾದನೆ ಮಾಡಬೇಕೆಂಬ ಉದ್ದೇಶ ನಮ್ಮದು ಎಂದರು.

5600 ಗ್ರಾಮ ಪಂಚಾಯಿತಿಯಲ್ಲಿ 5600 ಕೆರೆಗಳಲ್ಲಿ ಮೀನು ಅಭಿವೃದ್ಧಿಗೆ ಅನುದಾನ

ಕರಾವಳಿ ಪಕ್ಕದಲ್ಲಿ ಕಡಲ ಕೊರೆತವಾಗಿ ಹೂಳು ತುಂಬಿ ತೊಂದರೆಯಾಗುತ್ತಿರುವುದರಿಂದ ಎಂಟು ಮೀನುಗಾರಿಕೆ ಬಂದರುಗಳಿಗೆ ವಿಶೇಷ ಅನುದಾನ ನೀಡಿ ಹೂಳು ತೆಗೆಯಲು ಈ ವರ್ಷ ಅನುಮೋದನೆ ನೀಡಲಾಗಿದೆ.

ಮೀನುಗಾರರಿಗೆ ಡೀಸಲ್ ಹಾಗೂ ಸೀಮೆ ಎಣ್ಣೆ ಸಹಾಯಧನವನ್ನು ಹೆಚ್ಚಿಸಲಾಗಿದೆ. ಪ್ರವಾಹ ಬಂದ ಸಂದರ್ಭದಲ್ಲಿ ಮೀನುಗಾರರ ಹಡುಗುಗಳು ಹಾಳಾಗುತ್ತವೆ. ಅದಕ್ಕೆ ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ಅನುದಾನ  ನೀಡಲು ಅವಕಾಶವಿಲ್ಲ. ರಾಜ್ಯ ಸರ್ಕಾರ ದಿಂದಲೇ ಮೀನುಗಾರರ ದೋಣಿಗಳಿಗೆ ಸಹಾಯಧನ ನೀಡಲು ತೀರ್ಮಾನಿಸಲಾಗಿದೆ. ಒಳನಾಡು ಮೀನುಗಾರಿಕೆಗೂ ಪ್ರೋತ್ಸಾಹ ನೀಡಲು 5600 ಗ್ರಾಮ ಪಂಚಾಯಿತಿಯಲ್ಲಿ 5600 ಕೆರೆಗಳಲ್ಲಿ ಮೀನು ಅಭಿವೃದ್ಧಿಗೆ ಅನುದಾನ ನೀಡಿದೆ. ಆಲಮಟ್ಟಿ, ಕೆ.ಆರ್.ಎಸ್ ಹಿನ್ನೀರಿನಲ್ಲಿ ವ್ಯವಸ್ಥಿತ ರೀತಿಯಲ್ಲಿ ಮೀನುಗಾರಿಕೆ ಆಗುತ್ತಿಲ್ಲ.  ಕೆಲವರೇ ಸ್ವಾಮ್ಯತೆ ಮಾಡಿಕೊಂಡಿದ್ದು, ಇದನ್ನು ತಪ್ಪಿಸಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.

ಎಲ್ಲ ಬಿಬಿಎಂಪಿ ವಾರ್ಡ್ ಗಳಲ್ಲಿ ಮೀನು ಆಹಾರ ಮಳಿಗೆ ಪ್ರಾರಂಭ

ಬಿಬಿಎಂಪಿ ವಲಯಗಳಲ್ಲಿ ಮೀನಿನ ಆಹಾರಕ್ಕೆ ಬಹಳ ಬೇಡಿಕೆಯಿದೆ. ಪ್ರತಿಯೊಂದು ವಾರ್ಡಿನಲ್ಲಿ 1500-2000   ಚ.ಮೀ.   ವಿಸ್ತೀರ್ಣದಲ್ಲಿ ಮೀನಿನ ಆಹಾರವನ್ನು ಒದಗಿಸುವ ಮಳಿಗೆಯನ್ನು ಪ್ರಾರಂಭಿಸುವ ಯೋಜನೆ ಇದೆ. ಬೆಂಗಳೂರಿನ 243 ವಾರ್ಡ್ ಗಳಲ್ಲಿಯೂ ಇದಕ್ಕೆ ಸ್ಥಳಾವಕಾಶ ಮಾಡಿಕೊಡಲಾಗುವುದು. ಖಾಸಗಿ ವಲಯದವರು ಇಲ್ಲಿ ಮಳಿಗೆಯನ್ನು ತೆರೆಯಬಹುದು.  ಬೆಂಗಳೂರು ನಗರದಲ್ಲಿ ಈ ಯೋಜನೆ ಸಫಲವಾದರೆ, ರಾಜ್ಯದ ಎಲ್ಲ ಮಹಾನಗರಪಾಲಿಕೆ ವ್ಯಾಪ್ತಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.

ಈ ವರ್ಷ 1 ಲಕ್ಷ ಮೀನುಗಾರರ ಮಕ್ಕಳಿಗೆ ರೈತವಿದ್ಯಾನಿಧಿ ನೀಡುವ ಗುರಿ

ರೈತಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು 14 ಲಕ್ಷ ಜನ ರೈತಮಕ್ಕಳಿಗೆ ವಿದ್ಯಾನಿಧಿ ಕೊಡುತ್ತಿದ್ದೇವೆ. ರೈತಕೂಲಿಕಾರರು, ಮೀನುಗಾರರು, ನೇಕಾರರು, ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿದ್ಯಾನಿದಿ ಯೋಜನೆ ವಿಸ್ತರಿಸಲಾಗಿದೆ. ಈಗಾಗಲೇ 1 ಲಕ್ಷ ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯನ್ನು ಇದೇ ವರ್ಷ ವಿತರಿಸುವ ಗುರಿಯನ್ನು ಹೊಂದಿದ್ದು, ಇದಕ್ಕಾಗಿ 50 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗುವುದು ಎಂದರು.

ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಸರ್ಕಾರದ ಸಹಕಾರ

ಮೀನುಗಾರಿಕೆ, ಮೀನು ಆಹಾರ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ, ರಫ್ತು, ಸ್ಥಳೀಯ ಮಾರುಕಟ್ಟೆ, ಹೀಗೆ ಮೀನುಗಾರಿಕೆಯ ವಿವಿಧ ವಲಯಗಳಿಗೆ ಈಗ ಬಹಳ ಅವಕಾಶಗಳಿವೆ. ಖಾಸಗಿ ವಲಯದವರು ಆಸಕ್ತಿವಹಿಸಿ ಬಂದರೆ, ಮಾರುಕಟ್ಟೆ ವ್ಯವಸ್ಥೆ, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ಸಹಕಾರವನ್ನು ನೀಡಲು ಸರ್ಕಾರ ಸಿದ್ಧವಿದೆ. ಮೀನಿನ ಸಂಸ್ಕರಣೆ, ಮೀನು ಆಹಾರ ಉತ್ಪಾದನೆಗೆ ಸರ್ಕಾರ ಸಹಕಾರ ನೀಡುತ್ತದೆ. ಮೀನುಗಾರಿಕೆ ವಲಯದಲ್ಲಿ ಖಾಸಗಿ ವಲಯದ ಆಸಕ್ತಿ, ಹೆಚ್ಚಿನ ಹೂಡಿಕೆ,ಉತ್ಪಾದನೆ, ಮಾರುಕಟ್ಟೆ ಅವಕಾಶಗಳು ಬರಬೇಕೆಂಬ ಉದ್ದೇಶದಿಂದ ಇಂದಿನ ಸಮಾವೇಶ ಆಯೋಜಿಸಲಾಗಿದೆ ಎಂದರು.

ಜನರ ದುಡಿಮೆಯೇ ರಾಜ್ಯದ ಆರ್ಥಿಕತೆ

ಮೀನುಗಾರಿಕೆಯ ವಹಿವಾಟನ್ನು ಎಂಟು ಲಕ್ಷ ಕೋಟಿರೂ.ಗಳಿಗೆ ಹೆಚ್ಚಿಸುವ ಗುರಿಇದ್ದು, ಇದು ರಾಜ್ಯದ ಆಂತರಿಕ ಜಿಡಿಪಿಯನ್ನು ಹೆಚ್ಚಿಸುತ್ತದೆ. ಪ್ರಧಾನಿ ಮೋದಿಯವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸಿಗೆ ರಾಜ್ಯದಲ್ಲಿನ ಕೃಷಿ,ಮೀನುಗಾರಿಕೆ, ಕುರಿ ಸಾಕಾಣಿಕೆ ಇವೆಲ್ಲವೂ ಕೊಡುಗೆ ನೀಡಲಿವೆ. ಕೃಷಿಯಲ್ಲಿ ಶೇ. 1 ರ ಅಭಿವೃದ್ಧಯಾದರೆ, ಶೇ.4 ರಷ್ಟು ಉತ್ಪಾದನಾ ಹಾಗೂ ಶೇ.10 ರಷ್ಟು ಅಭಿವೃದ್ಧಿ ಸೇವಾ ವಲಯದಲ್ಲಿ ಆಗುತ್ತದೆ. ಜನರ ದುಡಿಮೆಯೇ ರಾಜ್ಯದ ಆರ್ಥಿಕತೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಹಾಗೂ ಬಂದರು ಸಚಿವರಾದ   ಎಸ್. ಅಂಗಾರ, ಸಚಿವರಾದ ಡಾ. ಸಿ‌. ಎನ್. ಅಶ್ವತ್ಥ್ ನಾರಾಯಣ್, ಬೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಬಿ.ಸಿ. ನಾಗೇಶ, ಶಾಸಕ ಸಂಜೀವ ಮಟಂದೂರು, ಫ್ರೀಡಂ ಆ್ಯಪ್ ಸಂಸ್ಥಾಪಕ ಸಿ.ಎಸ್. ಸುಧೀರ್, ಮೀನುಗಾರಿಕೆ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ. ಫಹೀಮ್ ಸೇರಿದಂತೆ ಮತ್ತಿತರರು ಹಾಜರಿದ್ದರು.