flim – Peepal Media

ನವೆಂಬರ್ 11ಕ್ಕೆ ಯೆಲ್ಲೋ ಪೇಜಸ್ ಓಪನ್
ವಿಭಿನ್ನ ಸ್ಟುಡಿಯೋಸ್‌ ಅವರು ಕೀಲೈಟ್ಸ್‌ ಮತ್ತು ವಾಟ್‌ ನೆಕ್ಸ್ಟ್‌ ಮೂವೀಸ್‌ ಅವರ ಸಹಯೋಗದಲ್ಲಿ ನಿರ್ಮಿಸುತ್ತಿರುವ ಕ್ರೈಂ-ಥ್ರಿಲ್ಲರ್‌ ಕತೆಯ ʼಯೆಲ್ಲೋ ಗ್ಯಾಂಗ್ಸ್‌ʼ ಸಿನಿಮಾ ಇದೇ ನವೆಂಬರ್ 11 ಕ್ಕೆ ಬಿಡುಗಡೆಯಾಗಲಿದೆ.

ಚಿತ್ರಕ್ಕೆ ರವೀಂದ್ರ ಪರಮೇಶ್ವರಪ್ಪ ಅವರ ರಚನೆ ಮತ್ತು ನಿರ್ದೇಶನವಿದ್ದು, ಸುಜ್ಞಾನ್‌ ಅವರ ಛಾಯಾಗ್ರಹಣ, ರೋಹಿತ್‌ ಸೋವರ್‌ ಅವರ ಸಂಗೀತ, ಸುರೇಶ್‌ ಆರ್ಮುಗಂ ಅವರ ಸಂಕಲನವಿದೆ. ರವೀಂದ್ರ ಪರಮೇಶ್ವರಪ್ಪ ಮತ್ತು ಪ್ರವೀಣ್‌ ಕುಮಾರ್‌ ಜಿ ಅವರುಗಳು ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ.

ಮನೋಜ್‌ ಪಿ, ಜಿ.ಎಂ.ಆರ್‌ ಕುಮಾರ್(ಕೆವಿಜಿ), ಜೆ.ಎನ್.ವಿ ಎಂಟರ್ಟೇನರ್ಸ್‌ ಮತ್ತು ಡಿ.ಎಸ್ ಪ್ರವೀಣ್‌ ಅವರುಗಳು ಸಿನಿಮಾದ ಸಹ ನಿರ್ಮಾಪಕರಾಗಿದ್ದಾರೆ. ಲೋಕೇಶ್‌ ಹಿತ್ತಲಕೊಪ್ಪ ಅವರ ಕಾರ್ಯಕಾರಿ ನಿರ್ಮಾಣ ಮತ್ತು ನಿರಂಜನ್‌ ಹಾವಣಗಿ ಅವರ ಹಣಕಾಸು ನಿರ್ವಹಣೆ ಸಿನಿಮಾಕ್ಕಿದೆ.

ದೇವ್‌ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ, ಪ್ರದೀಪ್‌ ಪೂಜಾರಿ, ಅರುಣ್‌, ಸತ್ಯ, ನಾಟ್ಯ ರಂಗ, ವಿಠಲ್‌ ಪರೀಟ, ಉಮ್ಮತ್ತಾಲ್‌ ಸತ್ಯ,‌ ವಿನೀತ್ ಕಟ್ಟಿ, ನಂದ ಗೋಪಾಲ್‌, ದಯಾ ನೀನಾಸಂ, ಹರ್ಷ, ಪ್ರವೀಣ್‌ ಕೆಬಿ, ರವಿ ಜಿಗಣಿ, ಮಲ್ಲಿಕಾರ್ಜುನ್‌, ಮಧುಸೂದನ್‌, ಪವನ್ ಮುಂತಾದವರು ನಟಿಸಿದ್ದಾರೆ.

ರಾಂಚಿ ಟೀಸರ್ ಬಿಡುಗಡೆ, ನೈಜಘಟನೆ ಆಧಾರಿತ ಚಿತ್ರ
ರುದ್ರಾನಂದ ಆರ್ ಎನ್ ಹಾಗೂ ಅರುಣ್ ಕುಮಾರ್ ಎನ್ ನಿರ್ಮಾಣ‌ದ, ಶಶಿಕಾಂತ್ ಗಟ್ಟಿ ನಿರ್ದೇಶನದ, ನೈಜಘಟನೆ ಆಧಾರಿತ  “ರಾಂಚಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ನವೆಂಬರ್ 11 ರಂದು ಬಿಡುಗಡೆಯಾಗುತ್ತಿದೆ.

ನಾನು ಐ ಪಿ ಸಿ ಸೆಕ್ಷನ್ 300 ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. ಆಗ ನನಗೆ “ರಾಂಚಿ” ಯಿಂದ ಒಂದು ಕರೆ ಬರುತ್ತದೆ. ನೀವು ರೈಲ್ವೆ ಇಲಾಖೆ ಕುರಿತು ಒಂದು ಡಾಕ್ಯುಮೆಂಟರಿ ಮಾಡಿಕೊಡಬೇಕು. ರಾಂಚಿಗೆ ಬನ್ನಿ. ಅವರ ಪರಿಶುದ್ಧ ಹಿಂದಿ ಭಾಷೆ ಕೇಳಿ,   ಇದು ಸರ್ಕಾರದಿಂದ ಬಂದಿರುವ ಕರೆ ಎಂದು ತಿಳಿದು ಸಂತೋಷವಾಯಿತು. ಆಮೇಲೆ ಯೋಚನೆ ಮಾಡಿದೆ. ಸರ್ಕಾರ ಇಂತಹ ವಿಷಯವನ್ನು ಟೆಂಡರ್ ಮೂಲಕ ಕರೆಯುತ್ತಾರೆ. ಇದು ಸುಳ್ಳು ಇರಬಹುದು ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಅವರಿಗೆ ಫೋನ್ ಮಾಡಿ ಈ ಬಗ್ಗೆ ಕೇಳಿದೆ. ಅವರು ಇದೆಲ್ಲಾ ಸುಳ್ಳು. ನೀವು ಇಲ್ಲಿಗೆ ಬರಬೇಡಿ ಎಂದರು. ಈ ರೀತಿ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು ಈ ರೀತಿಯ ಕರೆಯಿಂದ ಮೋಸ ಹೋಗಿದ್ದಾರೆ. ಈ ವಿಷಯವನ್ನಿಟ್ಟುಕೊಂಡೆ “ರಾಂಚಿ” ಸಿನಿಮಾ ಮಾಡಿದ್ದೇವೆ.

ನಾಯಕ ಪ್ರಭು ಮುಂಡ್ಕರ್ ಕಥೆ ಕೇಳಿ ನಟಿಸಲು ಒಪ್ಪಿದರು. ರುದ್ರಾನಂದ ಹಾಗೂ ಅರುಣ್‌ ಕುಮಾರ್ ನಿರ್ಮಾಣಕ್ಕೆ ಮುಂದಾದರು. ನೈಜಘಟನೆ ಆಧಾರಿತ ಸಿನಿಮಾ‌ವಿದು. “ರಾಂಚಿ”ಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆದಿದೆ‌. 2020 ರಲ್ಲೇ ಸೆನ್ಸಾರ್ ಆಗಿತ್ತು. ಕೊರೋನ ಕಾರಣದಿಂದ ಬಿಡುಗಡೆ ವಿಳಂಬವಾಯಿತು.  ಒಂದೊಳ್ಳೆ ಸಿನಿಮಾ ಮಾಡಿರುವ ಖುಷಿಯಿದೆ. ದಿವ್ಯ ಉರುಡಗ, ಟೋಟ ರಾಯ್ ಚೌಧರಿ, ಆರತಿ ನಾಯರ್, ಲಕ್ಷ್ಮಣ್ ಗೌಡ, ಸುರೇಶ್ ಹೆಬ್ಳೀಕರ್, ಉಷಾ ಭಂಡಾರಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರದ ಕುರಿತು ನಿರ್ದೇಶಕ ಶಶಿಕಾಂತ್ ಗಟ್ಟಿ ಮಾಹಿತಿ ನೀಡಿದ್ದಾರೆ.

ಕೋವಿಡ್ ನಂತರ ಜನ ಸಿನಿಮಾ ನೋಡುವ ರೀತಿ ಬದಲಾಗಿದೆ. ಜನರ  ನಿರೀಕ್ಷೆ ಬೇರೆ ತರಹ ಇದೆ. “ಕೆ.ಜಿ.ಎಫ್”, “ಚಾರ್ಲಿ”, “ಕಾಂತಾರ” ದಂತಹ ಚಿತ್ರಗಳ ಗೆಲುವು ಇದಕ್ಕೆ ಸಾಕ್ಷಿ. ನಾನು ಸೈಂಟಿಸ್ಟ್ ಆಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಆನಂತರ ಚಿತ್ರರಂಗಕ್ಕೆ ಬಂದೆ. ನಾನು “ಡಬಲ್ ಇಂಜಿನ್” ಚಿತ್ರದಲ್ಲಿ ನಟಿಸಬೇಕಾದರೆ ಶಶಿಕಾಂತ್ ಈ ಚಿತ್ರದ ಕಥೆ ಹೇಳಿದರು. ನನಗೂ ನೈಜಘಟನೆ ಆಧಾರಿತ ಚಿತ್ರದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಆ ಸಮಯದಲ್ಲಿ ಈ ಕಥೆ ಕೇಳಿ, ನಟಿಸಲು ಒಪ್ಪಿದೆ ಎನ್ನುತ್ತಾರೆ ನಟ ಪ್ರಭು ಮುಂಡ್ಕರ್.

ಪ್ರಭು ಅವರ ಮೂಲಕ ನಿರ್ದೇಶಕ ಶಶಿಕಾಂತ್ ಗಟ್ಟಿ ಅವರ ಪರಿಚಯವಾಯಿತು. ಅವರು ಹೇಳಿದ ಕಥೆ ಮನಸ್ಸಿಗೆ ಹತ್ತಿರವಾಯಿತು. ನಿರ್ಮಾಣಕ್ಕೆ ಮುಂದಾದೆ ಎಂದು ನಿರ್ಮಾಪಕ ಅರುಣ್ ಕುಮಾರ್ ತಿಳಿಸಿದರು. ಚಿತ್ರದಲ್ಲಿ ಆರತಿ ನಾಯರ್, ಲಕ್ಷ್ಮಣ್ ಗೌಡ ಮುಂತಾದವರು ನಟಿಸಿದ್ದಾರೆ.

ಕಿಚ್ಚ ಸುದೀಪ್ ಮೆಚ್ಚಿದ ಕಾಂತಾರದ ಕಿಚ್ಚು
ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’, ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಜನ ಸಾಮಾನ್ಯರ ಜೊತೆಗೆ ಪ್ಯಾನ್ ಇಂಡಿಯಾ ನಟ ಪ್ರಭಾಸ್, ರಕ್ಷಿತ್ ಶೆಟ್ಟಿ, ರಮ್ಯಾ ಮುಂತಾದ ಸೆಲೆಬ್ರಿಟಿಗಳು ಸಹ ಚಿತ್ರವನ್ನು ನೋಡಿ ಕೊಂಡಾಡಿದ್ದಾರೆ. ಈಗ ನಟ ಸುದೀಪ್ ಚಿತ್ರವನ್ನು ನೋಡಿರುವುದಷ್ಟೇ ಅಲ್ಲ, ಅದನ್ನು ಇಷ್ಟಪಟ್ಟು ಸೋಷಿಯಲ್ ಮೀಡಿಯಾದಲ್ಲಿ ಒಂದು ಪತ್ರವನ್ನೇ ಬರೆದಿದ್ದಾರೆ.

ಕೆಲವು ಸಿನಿಮಾಗಳು ಚೆನ್ನಾಗಿರುತ್ತವೆ, ಕೆಲವು ಅದ್ಭುತವಾಗಿರುತ್ತವೆ. ಬಹಳ ಅಪರೂಪಕ್ಕೆ ಕೆಲವು ಚಿತ್ರಗಳನ್ನು ನೋಡಿ ನಮ್ಮ ಬಾಯಿಂದ ಮಾತೇ ಹೊರಡದಂತೆ ಆಗುತ್ತವೆ. ನಮ್ಮನ್ನು ಆ ಚಿತ್ರಗಳು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಕಾಂತಾರ ಅಂಥದ್ದೊಂದು ಚಿತ್ರ. ಒಂದು ಸರಳವಾದ ಕಥೆ, ಒಳ್ಳೆಯ ಚಿತ್ರಕಥೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತವಾದ ನಿರೂಪಣೆ ಈ ಚಿತ್ರದ ಜೀವಾಳ. ಇನ್ನು, ರಿಷಭ್ ಶೆಟ್ಟಿ ತಮ್ಮ ಅದ್ಭುತ ಅಭಿನಯದಿಂದ ನಮ್ಮ ಮನಸ್ಸನ್ನು ತಟ್ಟುತ್ತಾರೆ. ಚಿತ್ರ ನೋಡಿ ನನಗನಿಸಿದ್ದೆಂದರೆ, ಇಂಥದ್ದೊಂದು ಚಿತ್ರ ಹೇಗೆ ಸಾಧ್ಯವಾಯಿತು ಎಂದು. ಕಾಗದದ ಮೇಲೆ ನೋಡಿದಾಗ, ಇದನ್ನು ಓದಿದಾಗ, ಏನೂ ವಿಶೇಷ ಅನಿಸದಿರಬಹುದು. ಆದರೆ, ಅಂತಿಮವಾಗಿ ತೆರೆಯ ಮೇಲೆ ಮೂಡಿಬಂದಿರುವ ರೀತಿ ಇದೆಯಲ್ಲ, ಅದು ಒಬ್ಬ ನಿರ್ದೇಶಕನ ವಿಷನ್ ಎಂದರೆ ತಪ್ಪಿಲ್ಲ. ಇಂಥದ್ದೊಂದು ಅಸಾಧಾರಣ ಚಿತ್ರವನ್ನು ಕಟ್ಟಿಕೊಟ್ಟಿದ್ದಕ್ಕೆ ರಿಷಭ್ ಶೆಟ್ಟಿಗೆ ನನ್ನ ಮೊದಲ ಮೆಚ್ಚುಗೆ. ಅವರ ಮೇಲೆ ನಂಬಿಕೆ ಇಟ್ಟು, ಇಂಥದ್ದೊಂದು ಚಿತ್ರವನ್ನು ರೂಪಿಸುವುದಕ್ಕೆ ಕಾರಣರಾದ ಚಿತ್ರತಂಡದವರೆಲ್ಲರಿಗೂ ನನ್ನ ನಮನ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ನಿಜಕ್ಕೂ ಒಬ್ಬ ಅಪ್ರತಿಮ ಪ್ರತಿಭೆ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಈ ಚಿತ್ರದ ಮೇಲೆ ನಂಬಿಕೆ ಇಟ್ಟು, ಇದನ್ನು ನಿರ್ಮಿಸಿದ ಹೊಂಬಾಳೆ ಫಿಲಂಸ್ ಸಂಸ್ಥೆಗೂ ನನ್ನ ಕೃತಜ್ಞತೆಗಳು.  ಚಿತ್ರ ನೋಡಿದವರು ನೀಡಿದ ಪ್ರತಿಕ್ರಿಯೆಗಳಿಗೆ ತಕ್ಕ ಹಾಗೆ ಚಿತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆಯಾ ಎಂಬ ಕುತೂಹಲದಿಂದ ಚಿತ್ರ ನೋಡಿದೆ. ಚಿತ್ರ ಚೆನ್ನಾಗಿ ಮೂಡಿಬಂದಿರುವುದಷ್ಟೇ ಅಲ್ಲ, ನಮ್ಮ ನಿರೀಕ್ಷೆಗಳನ್ನೂ ಮೀರಿ ಅದ್ಭುತವಾಗಿದೆ ಎಂದು ಸುದೀಪ್ ಬರೆದುಕೊಂಡಿದ್ದಾರೆ.

‘ಕಾಂತಾರ’ ಚಿತ್ರವು ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಚಿತ್ರವು ಹಿಂದಿಗೆ ಡಬ್ ಆಗುತ್ತಿದ್ದು, ಭಾನುವಾರ ಬೆಳಗ್ಗೆ ಯೂಟ್ಯೂಬ್ನಲ್ಲಿ ಹಿಂದಿ ಅವತರಣಿಕೆಯ ಟ್ರೇಲರ್ ಬಿಡುಗಡೆಯಾಗುತ್ತಿದೆ.

ಡಿ ಬೀಟ್ಸ್ ಗೆ ಬನಾರಸ್ ಸೋಲ್ಡ್
ಬನಾರಸ್ ಚಿತ್ರದ ಕಡೆಯಿಂದ ಒಂದರ ಹಿಂದೊಂದರಂತೆ ಹೊಸ ಸಂಗತಿಗಳು ಹೊರ ಬೀಳುತ್ತಿವೆ. ಹೊಸತನಗಳಿಂದಲೇ ತುಂಬಿಕೊಂಡಿರುವ ಚಿತ್ರವೊಂದು ಹೆಜ್ಜೆ ಹೆಜ್ಜೆಗೂ ದಾಖಲೆ ಬರೆಯುತ್ತಾ ಮುಂದುವರೆಯುತ್ತಿದೆ. ಒಂದು ಕಡೆಯಿಂದ ಎಲ್ಲರನ್ನೂ ಮುದಗೊಳಿಸಿರುವ ಮಾಯಗಂಗೆ ಹಾಡು, ಮತ್ತೊಂದೆಡೆ ವಾರದ ಹಿಂದಷ್ಟೇ ಬಿಡುಗಡೆಗೊಂಡು ಮಿಲಿಯನ್ನುಗಟ್ಟಲೆ ವ್ಯೂಸ್ ಪಡೆದು ಪ್ರಸಿದ್ಧಿ ಪಡೆದುಕೊಂಡಿರುವ ಟ್ರೈಲರ್ ಗಳ ನಡುವೆ  ಬನಾರಸ್ ಕಡೆಯಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಖ್ಯಾತ ವಿತರಣಾ ಸಂಸ್ಥೆ ಡಿ ಬೀಟ್ಸ್ ಪಡೆದುಕೊಂಡಿದೆ.

ಶೈಲಜಾ ನಾಗ್ ಮತ್ತು ಬಿ ಸುರೇಶ್ ಸಾರಥ್ಯದ ಡಿ ಬೀಟ್ಸ್ ಎಂಥಾ ಗುಣಮಟ್ಟವನ್ನು ಕಾಯ್ದುಕೊಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಸಂಸ್ಥೆಯಿಂದ ಬಿಡುಗಡೆಗೊಳ್ಳುವುದೇ ಪ್ರತಿಷ್ಠೆಯ ಸಂಗತಿ ಎಂಬಂಥಾ ವಾತಾವರಣವೂ ಇದೆ. ಎಲ್ಲ ವಿಷಯಗಳಲ್ಲೂ ಹಿಡಿಸಿದರೆ ಮಾತ್ರವೇ ಅಂಥಾ ಚಿತ್ರಕ್ಕೆ ಡಿ ಬೀಟ್ಸ್ ಕಡೆಯಿಂದ ಬಿಡುಗಡೆಯ ಭಾಗ್ಯ ಸಿಗುತ್ತದೆ. ಹಾಗಾಗಿ ಬನಾರಸ್ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಚಿತ್ರದ ಬಗೆಗಿನ ಬೆರಗನ್ನು ಇಮ್ಮಡಿಯಾಗುವಂತೆ ಮಾಡಿದೆ.

ಬನಾರಸ್ ಅನ್ನು ವಿಶಾಲ ಕರ್ನಾಟಕಕ್ಕೆ ಯಾವ ಸಂಸ್ಥೆಯ ಮೂಲಕ ವಿತರಣೆ ಮಾಡುತ್ತಾರೆಂಬ ಕುತೂಹಲಕ್ಕೆ ಈ ಮೂಲಕ ತೆರೆಬಿದ್ದಿದೆ. ನಿರೀಕ್ಷೆಯಂತೆಯೇ ಡಿ ಬೀಟ್ಸ್ ವಿತರಣಾ ಹಕ್ಕನ್ನು ಖರೀದಿಸಿದೆ. ಅತ್ಯಂತ ವ್ಯವಸ್ಥಿತವಾಗಿ ಚಿತ್ರವನ್ನು ಕರ್ನಾಟಕದ ತುಂಬೆಲ್ಲ ಬಿಡುಗಡೆ ಮಾಡೋದು ಡಿ ಬೀಟ್ಸ್ ಯೋಜನೆ. ಅದಕ್ಕೆ ತಕ್ಕಂತೆ ಬನಾರಸ್ ಬಿಡುಗಡೆಗೆ ಪ್ಲಾನು ಮಾಡಿಕೊಳ್ಳಲಾಗಿದೆ. ಈ ವಿದ್ಯಮಾನದಿಂದಾಗಿ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಸಂತೃಪ್ತರಾಗಿದ್ದಾರೆ. ನಾಯಕ ನಟ ಝೈದ್ ಖಾನ್ ಮುಖದಲ್ಲಿಯೂ ಸಂತಸ ಮಿನುಗುತ್ತಿದೆ.

ಬನಾರಸ್ ಬಿಡುಗಡೆಗೆ ಇನ್ನು ಬಾಕಿ ಉಳಿದಿರೋದು ಕೆಲವೇ ದಿನಗಳು ಮಾತ್ರ. ಈ ಸಂಬಂಧವಾಗಿ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ನಾಯಕಿ ಸೋನಲ್ ಮೊಂತೇರೋ ಕೂಡಾ ಅದಕ್ಕೆ ಸಾಥ್ ಕೊಟ್ಟಿದ್ದಾರೆ. ಇಡೀ ಚಿತ್ರತಂಡ ನಾನಾ ಜವಾಬ್ದಾರಿ ಹೊತ್ತು ಉತ್ಸಾಹದಿಂದ ಮುಂದಡಿ ಇಡುತ್ತಿದೆ. ಇದೀಗ ಕರ್ನಾಟಕದಲ್ಲಿ ವಿತರಣಾ ಹಕ್ಕು ಡಿ ಬೀಟ್ಸ್ ಮಡಿಲು ಸೇರುತ್ತಲೇ, ಇನ್ನುಳಿದ ಒಂದಷ್ಟು ಭಾಷೆಗಳಲ್ಲಿಯೂ ಬಿಡುಗಡೆಯ ಮಾತುಕತೆ ನಡೆಯುತ್ತಿವೆ. ದೊಡ್ಡ ಸಂಸ್ಥೆಗಳೇ ವಿತರಣಾ ಹಕ್ಕು ಖರೀದಿಸಲು ಮುಂದೆ ಬಂದಿವೆಯಂತೆ.

ಸ್ವಾತಿ ಮುತ್ತಿನ ಮಳೆ ಹನಿಯಲ್ಲಿ ರಮ್ಯಾ, ಜೊತೆಗಿದ್ದಾರೆ ರಾಜ್ ಬಿ ಶೆಟ್ಟಿ
ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಇನ್ನು ಮುಂದೆ ಚಿತ್ರಗಳನ್ನು ನಿರ್ಮಿಸುವುದಾಗಿ ರಮ್ಯಾ ಯಾವಾಗ ಘೋಷಿಸಿದರೋ, ಆಗಿನಿಂದಲೂ ಆ ಚಿತ್ರ ಯಾವುದಿರಬಹುದು? ಯಾರು ನಟಿಸಬಹುದು? ರಮ್ಯಾ ಬರೀ ನಿರ್ಮಾಪಕಿಯಾಗಿರುತ್ತಾರಾ ಅಥವಾ ಈ ಚಿತ್ರದ ಮೂಲಕ ನಟನೆಗೆ ವಾಪಸ್ಸಾಗುತ್ತಾರಾ? ಎಂಬಂತಹ ಹಲವು ಪ್ರಶ್ನೆಗಳು ಇದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ.

ವಿಜಯದಶಮಿಯ ದಿನದಂದು ರಮ್ಯಾ ತಮ್ಮ ನಿರ್ಮಾಣದ ಮೊದಲ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರಿನ ಈ ಚಿತ್ರವನ್ನು ರಾಜ್ ಬಿ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಮ್ಯಾ ಮತ್ತು ರಾಜ್ ಬಿ ಶೆಟ್ಟಿ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಜ್ ಹೇಳಿದ ಕಥೆಯಿಂದ ಖುಷಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿರುವುದಾಗಿ ರಮ್ಯಾ ಹೇಳಿಕೊಂಡಿದ್ದಾರೆ. ಪ್ರೀ-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದೆ. ರಾಜ್ ಶೆಟ್ಟಿ ನಿರ್ದೇಶನದ ‘ಗರುಡ ಗಮನ ಋಷಭ ವಾಹನ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರವೀಣ್ ಶ್ರೀಯಾನ್ ಮತ್ತು ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಇಲ್ಲೂ ಮುಂದುವರೆಯಲಿದ್ದಾರೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ರಮ್ಯಾ ಅವರ ಆಪಲ್ಬಾಕ್ಸ್ ಸ್ಟುಡಿಯೋಸ್ ಮತ್ತು ಲೈಟರ್ ಬುದ್ಧ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಶೋಭಕ್ಕ, ಸಿ.ಟಿ.ರವಿಯವರೇ ಈಗೇನ್ ಹೇಳ್ತೀರಾ? || ಸೂರ್ಯ ಮುಕುಂದರಾಜ್ ಪ್ರಶ್ನೆ

2017 ರಲ್ಲಿ ನಡೆದ ಪರೇಶ್‌ ಮೇಸ್ತ ಸಾವಿನ ಪ್ರಕರಣದ ಕುರಿತು ತನಿಖೆ ನಡೆಸಿದ ಸಿ ಬಿ ಐ ವರದಿ ನೀಡಿದೆ. ಅಂದು ಈ ಸಾವಿನ ಹೆಸರಿನಲ್ಲಿ ಲಾಭ ಮಾಡಿಕೊಂಡಿದ್ದವರು ಗಂಟಲು ಈಗ ಕಟ್ಟಿದಂತೆ ಕುಳಿತಿದ್ದಾರೆ. ನ್ಯಾಯವಾದಿ ಹಾಗೂ ಕೆಪಿಸಿಸಿಯ ವಕ್ತಾರ ಹಾಗೂ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್‌ ಈ ಪ್ರಕರಣದ ಕುರಿತಂತೆ ಗಂಭೀರ ವಿಷಯಗಳನ್ನು ಇಲ್ಲಿ ಚರ್ಚಿಸಿದ್ದಾರೆ.

PEEPAL TV
https://www.facebook.com/peepaltvkannada/videos/636037751517856

ಈ ವಿಡಿಯೋ ಯೂಟ್ಯೂಬಿನಲ್ಲಿ ನೋಡಲು 👇🏼
https://youtu.be/e8-8cyA1TBU

‘ಕಾಂತಾರ’ ಗೆಲುವಿನ ಹಿಂದಿನ ಶೂದ್ರ ಸೊಗಡು, ಕೋಳಿ-ಹೆಂಡದ ಘಮಲು
ಐದೂವರೆ ಅಡಿಯ ಹುಲು ಮಾನವನೊಬ್ಬ ದೈತ್ಯ ಸ್ಕ್ರೀನಿನಲ್ಲಿ ಕಪ್ಪೆ ನೋಡಿದರೂ ಅವಾಕ್ಕಾಗುತ್ತಾನೆ. ಈ Larger than life ಸಿನೆಮಾದ ಬಂಡವಾಳ. ಮಾಧ್ಯಮವಾಗಿ ಅದು ರಂಗಭೂಮಿಗಿಂತ ಭಿನ್ನವಾಗಿರುವುದು ಈ ಅಂಶಕ್ಕಷ್ಟೇ ಅಲ್ಲ, ಸುಲಭವಾಗಿ visuals ಮೂಲಕ ಪ್ರೇಕ್ಷಕರನ್ನು ಯಾಮಾರಿಸುವ ತಂತ್ರದ ಮೂಲಕ.

ಪ್ರೇಕ್ಷಕನೊಬ್ಬ ಹಂಬಲಿಸುವ ಭಾವ ಮತ್ತು ಆಂಗಿಕ ಸಾಧ್ಯತೆಗಳನ್ನು ರಂಗಭೂಮಿ ತಕ್ಷಣದ ವರ್ತಮಾನದಲ್ಲಿ ಮುಂದಿಡುತ್ತಾ ಹೋದರೆ, ಸಿನೆಮಾಕ್ಕೆ ಟೇಕ್ ಗಳ ಮತ್ತು ಎಡಿಟಿಂಗ್ ನ ಲಾಭವಿದೆ ಎಂಬುದನ್ನು ನಾವು ಮರೆಯಬಾರದು. ಸಿಸಿಲ್ ಡಿಮೆಲೋನಿಂದ ಈ ಮಾಧ್ಯಮದ ಶಕ್ತಿ ನಮಗೆ ಅರಿವಿಗೆ ಬಂದಿದೆ. ಇರಲಿ.

ಈಗ ಈ ಕಾಂತಾರ ಸಿನೆಮಾದ ಬಗ್ಗೆ

ಈ ಸಿನೆಮಾದಲ್ಲಿ ಗರುಡ ಗಮನ.. ಪುಷ್ಪಾ, ಪುಲಿ, ಮುರುಗನ್ ಸಿನೆಮಾಗಳ ಅಂಶಗಳೆಲ್ಲಾ ಬೆರೆತಿದೆ. ಅಷ್ಟೇ ಅಲ್ಲ, ನಮ್ಮ ಈ ಹಿಂದಿ ಸಿನೆಮಾಗಳ ಅಷ್ಟಿಷ್ಟು ಅಂಶಗಳೂ ಢಾಳಾಗಿವೆ. A-moral (ನೀತಿ ಅತೀತ) ನಾಯಕನೊಬ್ಬನನ್ನು ವಿಜೃಂಭಿಸುವ ಬಗೆ ಇದು.

ಊರಿನ ಅನಾಮಿಕ ನೈತಿಕ ಲಂಗರು ಇಲ್ಲದ ಒಬ್ಬನನ್ನು ಹೀರೋ ಮಾಡುವ ಸಿನೆಮಾಗಳು ನಮ್ಮಲ್ಲಿ ಯಥೇಚ್ಛವಾಗಿವೆ. ಮದರ್ ಇಂಡಿಯಾದ ಹೀರೋನಿಂದ ದಿಲೀಪ್ ಕುಮಾರ್ ಅಮಿತಾಬ್ ಬಚ್ಚನ್ ವರೆಗೆ ಇದು ಕಾಲಕಾಲಕ್ಕೆ ಪುನರ್ಜನ್ಮ ಎತ್ತಿದೆ. ಹೊಸತೇನೂ ಇಲ್ಲ, ಇರುವುದು ಟ್ರೀಟ್ ಮೆಂಟಲ್ಲಿ ಮಾತ್ರ.

ಅದಕ್ಕೇ ಮಾರ್ಕ್ ಟ್ವೈನ್ ಹೇಳಿದ್ದು. “ ಜಗತ್ತಿನಲ್ಲಿ ಒಟ್ಟು ನೂರಾ ಎಂಟು ಕತೆಗಳಷ್ಟೇ ಇರೋದು. “ ಅಂತ. ಅದನ್ನೇ ಮತ್ತೆ ಮತ್ತೆ ಬರೆಸಿ ಹೊಸೆಯೋದಷ್ಟೇ ಕತೆಗಾರರ ಪ್ರತಿಭೆ.

ಸಿನೆಮಾಗಳು ಸಾಮಾಜಿಕ ವಾಸ್ತವ ಕಟ್ಟಿಕೊಡುತ್ತದೆಂಬ ಭ್ರಮೆ ನಮಗಿದೆ. ಅಲ್ಲಿ ನಿಜಕ್ಕೂ ಇರುವುದು visual realism ವಿವರಗಳು.

ಈ ಕಾಂತಾರ ನೋಡಿ

ನಮ್ಮ ಯಾವ ಹಳ್ಳಿಯಲ್ಲೂ ನಯವಂಚಕ ವಿಲನ್ ಒಬ್ಬ ಸರಕಾರಿ ಅಧಿಕಾರಿ ಇರುವಾಗ ಬೆಟಾಲಿಯನ್ ನ ಕಟ್ಟಿಕೊಂಡು ಹಿಂಸೆಗಿಳಿಯುವುದಿಲ್ಲ. ಅಷ್ಟೇಕೆ, ನಮ್ಮ ಮರಗಳ್ಳರು ಸರಕಾರಿ ಅಧಿಕಾರಿ ಎದುರು ಸವಾಲಿನ ಮಾತೇ ಆಡುವುದಿಲ್ಲ.

ಇನ್ನೂ ವಾಸ್ತವ ಬೇಕೇ,

ಯಾವ ಮರಗಳ್ಳನೂ ಮರ ಇದ್ದಂತೆ ಅದಕ್ಕೆ ಕೊಡಲಿ ಗರಗಸ ಹಾಕುವುದಿಲ್ಲ. ಮೊದಲು ಅದರ ರೆಂಬೆ –ಕೊಂಬೆ ಕಡಿದು ಅದನ್ನು ನಗ್ನವಾಗಿಸಿ ಆಮೇಲೆ ಅದನ್ನು ಉರುಳಿಸುತ್ತಾರೆ. ನಮ್ಮೂರಿನ ಫಟಿಂಗರು ಹತ್ತಡಿ ಉದ್ದದ ಮೋಪು ಕತ್ತರಿಸಿ ಹಗ್ಗದಲ್ಲಿ ಅದನ್ನು ಬೀಳಿಸುತ್ತಿದ್ದರು!

ಅರ್ಥಾತ್ ಈ ಸಿನೆಮಾ ಮಾಮೂಲಿ ಸಿನೆಮಾಗಳ ವ್ಯಾಕರಣವನ್ನೇ ಢಾಳಾಗಿ ಉಪಯೋಗಿಸಿದೆ. ನಮ್ಮನ್ನು ಕೂರಿಸುವುದು script ನ ಸೂಕ್ಷ್ಮಗಳಲ್ಲ! Visual detailಗಳ ಸೂಕ್ಷ್ಮ. ಅದರಲ್ಲೂ ಸನ್ನಿವೇಶವನ್ನು ವ್ಯಂಗ್ಯದ ಮಾತಿನ ಕಮೆಂಟುಗಳ ಮೂಲಕ ನಿಭಾಯಿಸುವುದರಲ್ಲಿ.

ಚಿತ್ರಕಥೆಯಲ್ಲಿ ಈ ವಾಸ್ತವದ ಸೂಕ್ಷ್ಮತೆ ಇದ್ದಿದ್ದರೆ ನಿರ್ದೇಶಕನಿಗೆ ಇದನ್ನು ನಿಭಾಯಿಸುವುದೇ ಕಷ್ಟವಾಗುತ್ತಿತ್ತು. ಧಣಿಯ ತಲೆ ಹಾರಿಸುವುದೂ ಕಷ್ಟವಾಗುತ್ತಿತ್ತು.

ಅಂದರೆ, ಸಿನೆಮಾ ನಿಜ ವಾಸ್ತವವನ್ನು ನೆಚ್ಚಿಕೊಂಡು ಕೂತರೆ ಅದಕ್ಕೆ larger than life ಆಯಾಮ ಪ್ರಾಪ್ತವಾಗುವುದಿಲ್ಲ. ಸಿನೆಮಾ ಕೊನೆಗೂ ಮುಟ್ಟಿದರೆ ಸಿಗದ ಭ್ರಮಾ projection!!

ಆದ್ದರಿಂದಲೇ ಚಿತ್ರಕಥೆ ಕ್ರೂಡ್ ಆಗಿ ತನ್ನ ಗುರಿಯತ್ತ ಸಾಗುತ್ತದೆ. ಅದಕ್ಕೆ ಒಬ್ಬ ಅಸಡ್ಡಾಳ ಒರಟ ಹೀರೋ ಬೇಕು. ವಿಲನ್ ಎಂದು ಭ್ರಮೆ ಹುಟ್ಟಿಸುವ ಕೊನೆಗೆ ಸಜ್ಜನನೆಂದು ಅರಿವಾಗುವ ಒಂದು ಪಾತ್ರ ಬೇಕು. ಜಂಜೀರ್ ಸಿನೆಮಾದಲ್ಲಿ ಪ್ರಾಣ್ ಈ ಪಾತ್ರಕ್ಕೆ ಹೊಸ ಆಯಾಮ ನೀಡಿದ್ದು. ದ್ವಂದ್ವದಲ್ಲಿರುವ ನಾಯಕಿ ಇರಬೇಕು. ನಾಜೂಕಿನ ವಿಲನ್ ಒಬ್ಬ ಇರಬೇಕು. (ಅಶ್ವಥ್ ಇಂಥಾ ಒಂದೆರಡು ಪಾತ್ರ ಮಾಡಿದ್ದರು!)

ಇದೇ ಕಾಂತಾರದ ಶಕ್ತಿ ಮತ್ತು ಆಳ ವಿಶ್ಲೇಷಣೆಯಲ್ಲಿ ಅದರ ವೀಕ್ ನೆಸ್.

ಸಿನೆಮಾ ಎಂದರೆ ಇಷ್ಟೇ

ನಮ್ಮ ಪ್ರೇಕ್ಷಕರ aesthetic ಅನುಭವದ ಪ್ರೌಢಿಮೆ ಹೇಗಿದೆಯೆಂದರೆ ಅವರು ಇದನ್ನು ಸಿನೆಮಾ ಎಂದಷ್ಟೇ ನೋಡಬಲ್ಲರು. ಪದ್ಮಾವತ್ ಸಿನೆಮಾ ಬಂದಾಗ , ಅಲ್ಲಾವುದ್ದೀನ್ ಪಾತ್ರಧಾರಿ ಮಾತಾಡಿದಾಗಲೆಲ್ಲಾ ಶಿಳ್ಳು, ಚಿಲ್ಲರೆ ನಾಣ್ಯಗಳ ಸುರಿಮಳೆ ಆಗಿದ್ದನ್ನು ನಾನು ಕಂಡಿದ್ದೇನೆ.

ನಿತ್ಯದಲ್ಲಿ ಅಲ್ಲಾವುದ್ದೀನ್ ಒಬ್ಬ ಕೇಡಿ.!! ಅದು ಜನರಿಗೂ ಗೊತ್ತು. ಆದರೆ ಸಿನೆಮಾದಲ್ಲಿ ಅದೇಕೆ ಈ ಅಲ್ಲಾವುದ್ದೀನನನ್ನು ಮೆಚ್ಚುತ್ತಾರೆ? ಈ ಅರಿವು ಸಿನೆಮಾದವರಿಗೆ ಇರುವ ಕಾರಣವೇ ರಾಜ್ ಕುಮಾರ್ ರಾವಣನ ಪಾತ್ರ ಮಾಡಬಲ್ಲರು. ದರ್ಶನ್ ದುರ್ಯೋಧನನ ಪಾತ್ರ ಮಾಡಬಲ್ಲರು.

ಈ ವಿಚಿತ್ರ , ವಿರೋಧಾಭಾಸವೇ ಅಲ್ಲ. ಇದು ನಾವು ಪಾತ್ರವೊಂದನ್ನು ನೋಡುವ ರೀತಿ. ಈ aesthetic reception ಪ್ರೇಕ್ಷಕನ ಪ್ರೌಢಿಮೆಯೂ ಹೌದು. ನಿರ್ದೇಶಕ ಮತ್ತು ಪ್ರೇಕ್ಷಕನ ನಡುವಿನ ಒಪ್ಪಂದವೂ ಹೌದು.

ಕಾಂತಾರದಲ್ಲಿ ಹೀರೋ ತನ್ನ ಬೇಜವಾಬ್ದಾರಿ ಬದುಕಿನಿಂದ ಬದಲಾಗುವ purposeful transformation ಕೂಡಾ ಹೊಸದೇನಲ್ಲ. ಅದಕ್ಕೊಂದು ಬಲವಾದ ಕಾರಣ ನೀಡುವುದೇ script ನ ಸವಾಲು. ಇಲ್ಲಿ ಹೀರೋನ ಸಜ್ಜನ ತಮ್ಮನೊಬ್ಬನಿದ್ದಾನೆ. ಅವನನ್ನು ವಂಚನೆಯಲ್ಲಿ ಸಾಯಿಸಿದರೆ ಕತೆ ಮುಂದೆ ಓಡುತ್ತದೆ.

ಈ ಕ್ರೂಡ್ script ಕಾರಣಕ್ಕೇ ಈ ಸಿನೆಮಾ ಪೇಲವವಾಗಿ ಮುಗಿಯುವುದು. ಇಲ್ಲೂ ಆಧುನಿಕ ಸಿನೆಮಾದ ಬಲಹೀನತೆ ಇದೆ. State̲ = ಸರಕಾರವನ್ನು ಆದರ್ಶೀಕರಿಸುವುದು ಸುಲಭ. ಭೂಮಾಲೀಕನೊಬ್ಬನನ್ನು ಕೇಡಿಯಾಗಿಸುವುದು ಇನ್ನೂ ಸುಲಭ. ಸರಕಾರವನ್ನು ಕೇಡಿಯಾಗಿ ಚಿತ್ರಿಸಿ ನಿರ್ಮಾಪಕ/ ನಿರ್ದೇಶಕ ರಗಳೆ ಮಾಡಿಕೊಳ್ಳುವುದು ಕಷ್ಟದ ಕೆಲಸ. ನಮ್ಮ ಮಹಾ ಮಹತ್ವಾಕಾಂಕ್ಷಿ ನಿರ್ದೇಶಕರೂ ಕೂಡಾ ಈ end game ನಲ್ಲಿ ಶರಣಾಗಿದ್ದಾರೆ.

ಆದ್ದರಿಂದಲೇ ಈ ಸಿನೆಮಾ ಇಡೀ ಸಿನೆಮಾ ಸಿನೆಮಾದ ಸಿದ್ಧ ಸೂತ್ರವಾದ larger than Life+visual social ವಿವರಗಳ ತಂತ್ರದ ಮೂಲಕ ಪ್ರೇಕ್ಷಕನನ್ನು ಯಾಮಾರಿಸಿ ಗೆದ್ದಿದೆ.

ಕಾಂತಾರ ಇಷ್ಟವಾಗುವುದು ಈ ಸ್ಥಳೀಯ( ನೇಟಿವಿಟಿ ಅಂತಾರಲ್ಲ?) ಕ್ಯಾನ್ವಾಸನ್ನು ಢಾಳಾಗಿ ಬಳಸಿದ್ದರಲ್ಲಿ. ಕೊನೆಯ ಐದಾರು ನಿಮಿಷಗಳ ಇಂಟೆನ್ಸ್‌ ಪ್ರಸ್ತುತಿಯೂ ಚೆನ್ನಾಗಿದೆ.

ಇನ್ನು ಆರು ತಿಂಗಳ ಬಳಿಕ ಇನ್ನೊಂದು ಸಿನೆಮಾ ಬಂದರೆ ಅದಕ್ಕೂ ರೋಮಾಂಚನಗೊಳ್ಳಲು ಪ್ರೇಕ್ಷಕ ಸಿದ್ಧನಿದ್ದಾನೆ. Treatment ನ ಹೊಸತನ ಅಷ್ಟೇ ಅದರ ಮಾನದಂಡ.

ಇಷ್ಟು ದಿನ ದ.ಕದ ಭಾಷೆ , ಸಂಸ್ಕೃತಿ ಕನ್ನಡ ಸಿನೆಮಾ ಜಗತ್ತಿನಲ್ಲಿ ಹಾಸ್ಯದ ಸರಕಾಗಿತ್ತು. ದ.ಕ.ದ ಬಹಳಷ್ಟು ಕಲಾವಿದರು ಕನ್ನಡ ಸಿನೆಮಾದಲ್ಲಿದ್ದರೂ ಅವರೂ ಈ ಗಾಂಧಿನಗರಕ್ಕೆ ನಜರೊಪ್ಪಿಸಿದವರು.

ಒಂದು ಮೊಟ್ಟೆಯ ಕತೆ, ಗರುಡ ಗಮನ.. ಗಳ ಬಳಿಕ ಈಗ ಕಾಂತಾರ ಸ್ಥಳೀಯ ಭಾಷೆ, ಸಂಸ್ಕೃತಿಯ ಸೊಗಡನ್ನು ಒಂದು ಜಗತ್ತಾಗಿ ಬಿಂಬಿಸಿದೆ. ಈ ಸೊಗಡು ಪೂರಾ ಶೂದ್ರ ಸೊಗಡು ಕೂಡಾ.! ಕೋಳಿ, ಹೆಂಡದ ಘಮಲು ಗಮನಿಸಬೇಕು.! ದ.ಕ.ದ ಜನಿವಾರದ ಭಟ್ಟರ ಪಾತ್ರಗಳನ್ನು ಅಳಿಸಿ ಶೂದ್ರ ನೇಟಿವಿಟಿ ಕೇಂದ್ರಕ್ಕೆ ಬಂದಿದೆ. ದೈವ ಗಗ್ಗರ ಕುಣಿಸುತ್ತಿದೆ.

ಕೆ.ಪಿ. ಸುರೇಶ

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ʼಪಪ್ಪುʼ ಎಂದು ಟ್ರೋಲ್ ಮಾಡಿದವರೂ ದಂಗಾಗಿದ್ದಾರೆ‌ ಈ ನಿಷ್ಕಲ್ಮಷ ನಗುವಿಗೆ!

ಇದುವರೆಗೆ ಪಪ್ಪು ಎಂದು ಟ್ರೋಲ್ ಮಾಡಿದ ಜನರೂ ಒಳಗೊಳಗೇ ದಂಗಾಗಿ ಈ ಮನುಷ್ಯನ ಸಂಯಮ ನಿಷ್ಕಲ್ಮಷ ನಗು, ಮಗುವಿನ ಮುಗ್ಧತೆ, ಪ್ರೀತಿ,, ಗೌರವ ಘನತೆ ಎಂದೆಲ್ಲಾ ಮಾತಾಡುತ್ತಿದ್ದಾರೆಂದರೆ, ಇದು ಸ್ವತಃ ರಾಹುಲ್ ಗಾಂಧಿ ಗಳಿಸಿದ್ದು ಎನ್ನುತ್ತಾರೆ ಲೇಖಕಿ ಶಾಂತಾ ಕುಮಾರಿ

https://peepalmedia.com/pappu-endu-trol-madidavaru-dangagiddare-i-nishkalmasha-naguvige/

ʼಪಪ್ಪುʼ ಎಂದು ಟ್ರೋಲ್ ಮಾಡಿದವರೂ ದಂಗಾಗಿದ್ದಾರೆ‌ ಈ ನಿಷ್ಕಲ್ಮಷ ನಗುವಿಗೆ!

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಕಾಂತಾರ: ಸಂಘರ್ಷಗಳ ಕುಲುಮೆಯಲ್ಲಿ ದೈವದ ಹೆಜ್ಜೆಗಳ ಘಲ್‌ ಘಲ್‌ ಸದ್ದು!
ಕಾಡಿನ ಒಳಗೆ ಹೋಗಲು ನೀವು ನಮ್ಮ ಪರ್ಮಿಷನ್‌ ತಗೊಂಡು ಹೋಗಬೇಕು ಎನ್ನುತ್ತಾನೆ ಅರಣ್ಯಾಧಿಕಾರಿ. ನಿಮ್ಮ ಪರ್ಮಿಷನ್‌ ನಮಗೇಕೆ ಬೇಕು? ನಾವು ನಿಮ್ಮ ಸರ್ಕಾರ ಬರುವುದಕ್ಕೆ ಮುಂಚಿನಿಂದಲೂ ಇಲ್ಲಿದ್ದೇವೆ. ಪರ್ಮಿಷನ್‌ ತಗೊಳ್ಳಬೇಕಾದವರು ನಾವಲ್ಲ, ನೀವು ಎನ್ನುತ್ತಾನೆ ಕಥಾನಾಯಕ ದಲಿತ ಯುವಕ.

ʻಕಾಂತಾರʼ ಸಂಘರ್ಷಗಳ ಕಥನ. ಮನುಷ್ಯ ಮತ್ತು ಪ್ರಕೃತಿ, ಮೇಲ್ಜಾತಿ ಮತ್ತು ಕೆಳಜಾತಿ, ಆದಿವಾಸಿಗಳು-ಸರ್ಕಾರ ನಡುವಿನ ಸಂಘರ್ಷಗಳು ಬಿಡಿಬಿಡಿಯಾಗಿ ಒಮ್ಮೊಮ್ಮೆ ಒತ್ತೊತ್ತಾಗಿ ಕಾಣಸಿಗುತ್ತವೆ. ಈ ಸಂಘರ್ಷಗಳ ನಡುವೆ ಪಂಜುರ್ಲಿ ದೈವ ಎದ್ದುನಿಲ್ಲುತ್ತವೆ, ಭೂಮಿ-ಆಕಾಶಗಳನ್ನು ವ್ಯಾಪಿಸುತ್ತ ಆವರಿಸಿಕೊಳ್ಳುತ್ತ ಹೋಗುತ್ತದೆ.

ಕನ್ನಡ ಸಿನಿಮಾ ಲೋಕ ಪ್ರಯೋಗಶೀಲತೆಗಳಿಗೆ ಒಡ್ಡಿಕೊಂಡಿದೆ ಎಂಬುದಕ್ಕೆ ಕಾಂತಾರ ಇನ್ನೊಂದು ಸಾಕ್ಷಿ. ಸಿನಿಮಾದ ನಾಯಕಪಾತ್ರಧಾರಿಯೂ ಆಗಿರುವ ರಿಷಬ್‌ ಶೆಟ್ಟಿ ಹಳೆಯ ಕಟ್ಟುಪಾಡುಗಳನ್ನು ಒಡೆದು ಮುನ್ನುಗ್ಗುವ ಧಾವಂತ ತೋರಿದ್ದಾರೆ. ತಳಸಮುದಾಯದ ಯುವಕನೊಬ್ಬ ನಾಯಕನಾಗುವುದು, ಮೇಲ್ಜಾತಿಯ ಧನಿಕ ಖಳನಾಯಕನಾಗುವುದನ್ನು ಸಿನಿಮಾಗಳಲ್ಲಿ ನೋಡುವುದು ಕಷ್ಟ. ರಿಷಬ್‌ ಈ ಸವಾಲನ್ನು ಮೇಲೆ ಎಳೆದುಕೊಂಡಿದ್ದಾರೆ ಮತ್ತು ಅದೇ ಮೇಲ್ಜಾತಿಯ ಪ್ರೇಕ್ಷಕರಿಂದ ಚಪ್ಪಾಳೆಯನ್ನೂ ಗಿಟ್ಟಿಸಲು ಯಶಸ್ವಿಯಾಗಿದ್ದಾರೆ. ದಲಿತನೊಬ್ಬ ಮನೆ ಪ್ರವೇಶಿಸಿದ ಕಾರಣಕ್ಕೆ ʻಪಂಚಗವ್ಯ ಹಾಕಿದ್ರೇನೋ?ʼ ಎಂದು ತನ್ನ ಕೆಲಸಗಾರರಿಗೆ ಅರಚುವ ಖಳನಾಯಕ ಬ್ರಾಹ್ಮಣ್ಯವನ್ನೇ ಹೊದ್ದವನು. ಅವನ ಕುಟಿಲತೆ, ಲಂಪಟತನ, ಕ್ರೌರ್ಯಗಳೆದುರು ಸೆಣೆಸಲು ಕಥಾನಾಯಕನಿಗೆ ದೈವದ ರಕ್ಷಣೆಯೇ ಸಿಗಬೇಕು. ಅದೇ ಕಥಾವಸ್ತು.

ʻಸಮಯವೂ ಕೂಡ ಈಗ ನಮ್ಮ ಕಡೆಯೇ ಇದೆʼ ಎನ್ನುವ ದಲಿತ ಹುಡುಗನ ಮಾತು ಇವತ್ತಿನ ಸಿನಿಮಾ ಜಗತ್ತಿಗೊಂದು ರೂಪಕ. ಅಸ್ಪೃಶ್ಯನನ್ನು ಮುಟ್ಟಿಸಿಕೊಳ್ಳದ, ಮುಟ್ಟಿಸಿಕೊಂಡರೂ ಕೈತೊಳೆದು ಶುದ್ಧ ಮಾಡಿಕೊಳ್ಳುವ ಧಣಿಯ ಮನೆಯ ಒಳಗೆ ಬಂದು, ಅವನೆದುರೇ, ಅವನ ಸಮಾನವಾಗಿ ಊಟ ಮಾಡಿ ಎದ್ದುಹೋಗುವ ನಾಯಕನ ಸೀಮೋಲ್ಲಂಘನ ಹೊಸಕಾಲದ ತವಕಗಳನ್ನು ಧ್ವನಿಸುತ್ತದೆ. ಮೇಲ್ಜಾತಿಗಳ, ಉಳ್ಳವರ ಕಥೆಗಳನ್ನು ಕೇಳಿಕೇಳಿ ಜನರೂ ಬೇಸತ್ತಿದ್ದಾರೆ. ಹೀಗಾಗಿ ತಳಸಮುದಾಯಗಳ ಕಥನಗಳು ಸಿನಿಮಾಗಳಾಗುತ್ತಿವೆ, ಗೆಲ್ಲುತ್ತಿವೆ. ಕಾಂತಾರ ಅಂಥದ್ದೇ ಒಂದು ಪ್ರಯತ್ನ.

ರಿಷಬ್‌ ಶೆಟ್ಟಿ ಸಿನಿಮಾದ ಆತ್ಮದಂತಿದ್ದಾರೆ. ನಿರ್ದೇಶನದಲ್ಲೂ, ನಾಯಕ ಪಾತ್ರಧಾರಿಯಾಗಿಯೂ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ರಿಷಬ್‌ ತಾವೊಬ್ಬ ಒಳ್ಳೆಯ ನಟ ಎಂಬುದನ್ನು ಬೆಲ್‌ ಬಾಟಮ್‌ ಸಿನಿಮಾದಲ್ಲೇ ಸಾಬೀತುಪಡಿಸಿದ್ದರು. ಈಗ ಅವರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಂಪೂರ್ಣ ಭಿನ್ನವಾದ ಜಾನರ್‌ ನಲ್ಲೂ ಅವರು ಸೈ ಎನಿಸಿಕೊಳ್ಳುವಂತೆ ನಟಿಸಿದ್ದಾರೆ. ಪಂಜುರ್ಲಿಯಾಗಿ ಅವರದು ಪರಕಾಯ ಪ್ರವೇಶ. ಅವರು ʻಓʼ ಎಂದು ಕೂಗಿದಾಗಲೆಲ್ಲ ಎದೆ ನಡುಗುತ್ತದೆ.

ಕರಾವಳಿಯವರಿಗೆ ಕಾಂತಾರ ತಮ್ಮದೇ ಕಥೆ ಎನಿಸಬಹುದು, ಸಿನಿಮಾದ ಲೋಪದೋಷಗಳೂ ಢಾಳಾಗಿ ಕಾಣಬಹುದು. ಆದರೆ ಹೊರಗಿನವರಿಗೆ ಕಾಂತಾರ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಕರಾವಳಿಯ ದೈವಗಳ ಬಗ್ಗೆ ಗೊತ್ತಿಲ್ಲದವರು, ನೋಡಿಲ್ಲದವರಿಗೆ ಇದೊಂದು ಅದ್ಭುತ ಲೋಕ.

ಹಾಗೆ ನೋಡಿದರೆ ಕಾಂತಾರದಲ್ಲಿ ಲೋಪಗಳು ಇಲ್ಲವೆಂದೇನಿಲ್ಲ. ಸಿನಿಮಾದ ಎಲ್ಲ ಪಾತ್ರಗಳು ಕೂಗಾಡುತ್ತಲೇ ಮಾತಾಡುವುದು ಒಮ್ಮೊಮ್ಮೆ ಕಿರಿಕಿರಿ ಎನಿಸುತ್ತದೆ. ಕಥಾನಾಯಕನ ತಮ್ಮ ಗುರುವನೊಬ್ಬನನ್ನು ಬಿಟ್ಟರೆ ಮಿಕ್ಕವರೆಲ್ಲ ಅಬ್ಬರಿಸಿ ಬೊಬ್ಬಿರಿಯುವವರೇ. ಸಿನಿಮಾದ ಮೊದಲ ಅರ್ಧದಲ್ಲಿ ಕಥೆ ವೇಗವಾಗಿ ಸಾಗುವುದಿಲ್ಲ. ಕಂಬಳದ ಓಟದ ನಂತರದ ಒಂದು ಫೈಟ್‌ ಅನಗತ್ಯವಾಗಿತ್ತು. ಸಿನಿಮಾದ ಪಾತ್ರಗಳು, ಅದರಲ್ಲೂ ವಿಶೇಷವಾಗಿ ಆದಿವಾಸಿಗಳು ಹೊಟ್ಟೆಪಾಡಿಗಾಗಿ ಏನು ಮಾಡುತ್ತಾರೆ ಎಂಬುದನ್ನು ಇನ್ನಷ್ಟು ವಿವರವಾಗಿ ಹೇಳಬೇಕಿತ್ತು. ಬದಲಾಗಿ ನಾಯಕ ಮತ್ತವನ ತಂಡದ ಮರಗಳ್ಳತನ, ಹಂದಿಬೇಟೆಗಳನ್ನೇ ವಿಜೃಂಭಿಸಿರುವುದು ಗಂಭೀರ ಲೋಪ.

ಕಾಂತಾರದ ದ್ವಿತೀಯಾರ್ಧದಲ್ಲಿ ಕಥೆಯ ಒಳಸುಳಿಗಳೆಲ್ಲ ಒಂದೊಂದಾಗಿ ಬಿಚ್ಚಿಕೊಳ್ಳುತ್ತ ಸಾಗುತ್ತವೆ. ಒಂದಷ್ಟನ್ನು ನೀವೇ ಊಹಿಸುವಷ್ಟು ಸಲೀಸಾಗಿ ಕಥೆ ಮುಂದುವರೆಯುತ್ತದೆ. ಕೊನೆಯ ಹದಿನೈದು ನಿಮಿಷಗಳ ಕ್ಲೈಮ್ಯಾಕ್ಸ್‌ ನಿಮ್ಮನ್ನು ನಿಸ್ಸಂದೇಹವಾಗಿ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಒಂದು ದೃಶ್ಯರೂಪಕಕ್ಕೆ ಬೇಕಾದ ಎಲ್ಲ ಸಾಧ್ಯತೆಗಳನ್ನು ದುಡಿಸಿಕೊಂಡು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಷ್ಟು ಸಶಕ್ತವಾಗಿದೆ ಕ್ಲೈಮ್ಯಾಕ್ಸ್.

ಚಿತ್ರದ ಕ್ಲೈಮಾಕ್ಸ್’ನಲ್ಲೊಂದು ಸಣ್ಣ ಆದರೆ ಎಫೆಕ್ಟಿವ್ ಆದ ಪುಟ್ಟ ಸೀನ್ ಒಂದು ಇದೆ‌‌. ಪಂಚಗವ್ಯ ಕುಲದ ಭೂಮಾಲೀಕ ನಾಯಕ ಶಿವನಿದ್ದ ಹಾಡಿಯ ಮೇಲೆ ಭೀಕರ ಧಾಳಿಯೊಂದನ್ನು ಎಸಗುತ್ತಾನೆ. ಆ ಸಂದರ್ಭದಲ್ಲಿ ದೈವಾರಾಧನೆ ಉತ್ಸವಗಳಿಗೆ ಗರ್ನಲ್ ಮದ್ದು ಸಿಡಿಸಿ ಆ ಆರಾಧನೆಯನ್ನು ಕಲರ್’ಫುಲ್ ಮಾಡುವ ‘ಮುಸ್ಲಿಮ್’ ಸಾಬರ ಮೇಲೂ ದಾಳಿಯಾಗುತ್ರದೆ. ಆ ಸಂದರ್ಭದಲ್ಲಿ ಆತ ಗರ್ನಲ್ ಸಿಡಿಸಲೆಂದು ಮದ್ದು ಸಂಗ್ರಹ ಮಾಡಿದ್ದ ಮನೆಯೊಂದರೊಳಗೆ ಓಡುತ್ತಾನೆ. ಅಟ್ಟಿಸಿಕೊಂಡು ಬರುವ ಭೂಮಾಲೀಕನ ಪಡೆಯಲ್ಲೊಬ್ಬ ಸಾಬನಿದ್ದಾನೆ.. ಆತ ಗರ್ನಲ್ ಸಾಬನಿಗೆ ನೀನು ನಮ್ಮವನು ಕೋಲ ಕಟ್ಟುವರ ಜೊತೆಗೇಕಿದ್ದಿ ಎಂಬಂತೆ ‘ಸಲಾಂ ಆಲೇಕುಂ’ ಎನ್ನುತ್ತಾನೆ.. ಕೈನಲ್ಲಿ ಗರ್ನಲ್ ಮದ್ದು ಹಿಡಿದಿದ್ದ ಗರ್ನಲ್ ಸಾಬ ‘ವಾಲೇಕುಂ ಅಸ್ಸಲಾಂ’ ಎಂದು ಕೈಯಲ್ಲಿ ಹಿಡಿದಿದ್ದ ಮದ್ದಿಗೆ ಬೆಂಕಿ ತಾಕಿಸಿ ತನ್ನನ್ನೂ ಕೊಂದುಕೊಂಡು ಕೋಲ ಕಟ್ಟುವರ ಮೇಲೆ ಮುಗಿಬಿದ್ದಿದ್ದ ಭೂಮಾಲೀಕರ ಪಡೆಯವರನ್ನೂ ಕೊಲ್ಲುತ್ತಾನೆ..

ಕರಾವಳಿಯ ನೆಲಮೂಲದ ಭೂತಗಳಲ್ಲಿರುವ ಮುಸ್ಲಿಂ ಭೂತಗಳಲ್ಲೊಂದಾದ ಬೊಬ್ಬರಿಯ ದೈವದ ಪ್ರತೀಕದಂತೆ ಈ ಗರ್ನಲ್ ಸಾಬು ಕಾಣುತ್ತಾನೆ. ಈ ಗರ್ನಲ್ ಸಾಬ ಜೊತೆ ನಿಲ್ಲುವುದು ಪಂಚಗವ್ಯದ ಭೂಮಾಲೀಕನೊಡನೆ ಅಲ್ಲ.. ಕೋಲ ಕಟ್ಟುವ ಶ್ರಮಿಕರ ಜೊತೆ. ದೈವ ನರ್ತಕರ ಪರಂಪರೆಗೆ ಜೀವ ಕೊಡುವುದರ ಮೂಲಕ ಕರಾವಳಿಯ ಶ್ರಮಿಕರು ಮತ್ತು ಮುಸ್ಲಿಮರ ಪರಂಪರಾನುಗತ ಸಹಬಾಳ್ವೆಗೆ ಈ ಗರ್ನಲ್ ಸಾಬನ ಪಾತ್ರ ಮತ್ತದರ ಅಂತ್ಯ ಕನ್ನಡಿಯಂತೆ ನಿಲ್ಲುತ್ತದೆ..

ಕಾಂತಾರದಲ್ಲಿ ರಿಷಬ್‌ ಶೆಟ್ಟಿಯವರಲ್ಲದೆ ರಾಜ್‌ ಬಿ.ಶೆಟ್ಟಿಯವರ ಕೈಚಳಕವೂ ಅಲ್ಲಲ್ಲಿ ಇದೆ. ದೈವಕ್ಕೆ ಸಂಬಂಧಿಸಿದ ಸಂಭಾಷಣೆಯನ್ನು ರಾಜ್‌ ಬರೆದಿದ್ದಾರೆ. ಕೆಲವೊಂದು ಸಂಭಾಷಣೆಗಳನ್ನು ತುಳುವಿನಲ್ಲೇ ಉಳಿಸಿ, ಕನ್ನಡದಲ್ಲಿ ಸಬ್‌ ಟೈಟಲ್‌ ಹಾಕಲಾಗಿದೆ. ಸಿನಿಮ್ಯಾಟೋಗ್ರಾಫರ್‌ ಅರವಿಂದ ಕಶ್ಯಪ್‌ ಮತ್ತು ಸಂಗೀತ ನಿರ್ದೇಶಕ ಅಜನೀಷ್‌ ಲೋಕನಾಥ್‌ ಅವರಿಗೆ ಪೂರ್ಣ ಅಂಕಗಳು ಸಲ್ಲಬೇಕು. ವಿಕ್ರಮ್‌ ಮೋರೆಯ ಸಾಹಸ ನಿರ್ದೇಶನವೂ ಶಿಳ್ಳೆ ಗಿಟ್ಟಿಸುತ್ತದೆ. ನಟನೆಯಲ್ಲಿ ಅಚ್ಯುತ್‌ ಮತ್ತು ಕಿಶೋರ್‌ ಮನಗೆಲ್ಲುತ್ತಾರೆ.

ಕಾಂತಾರದ ಮತ್ತೊಂದು ಮಹತ್ವದ ಅಂಶವೆಂದರೆ ಇಲ್ಲಿನ ಸ್ತ್ರೀ ಪಾತ್ರಗಳು. ಅವು ಗಂಡಸಿನಷ್ಟೇ ಶಕ್ತಿಶಾಲಿಗಳು. ನಾಯಕನ ತಾಯಿ ಮತ್ತು ನಾಯಕಿ ಇಬ್ಬರ ಪಾತ್ರಪೋಷಣೆಯೂ ಸಹಜವಾಗಿದೆ ಮತ್ತು ಗಮನ ಸೆಳೆಯುತ್ತದೆ.

ಕೆಜಿಎಫ್‌ಎರಡು ಅವತರಣಿಕೆಗಳ ನಂತರ ಹೊಂಬಾಳೆ ಸಂಸ್ಥೆಯ ವಿಜಯ ಕಿರಗಂದೂರು ಮತ್ತೊಂದು ಸಿಕ್ಸರ್‌ ಬಾರಿಸಿದ್ದಾರೆ. ಕಾಂತಾರ ಈ ವರ್ಷದ ಅತಿದೊಡ್ಡ ಹಿಟ್ ಸಿನಿಮಾ ಆಗುವ ಎಲ್ಲ ಲಕ್ಷಣಗಳೂ ಇವೆ.

ಕಾಂತಾರದ ಅತಿದೊಡ್ಡ ಯಶಸ್ಸು ಏನೆಂದರೆ, ಇಂಥ ಜನಸಂಸ್ಕೃತಿಯನ್ನು ತೆರೆದಿಡುವ, ಮುಖ್ಯವಾಹಿನಿ ಮಾಧ್ಯಮಗಳು ಮುಚ್ಚಿಟ್ಟ ನಿರ್ಲಕ್ಷಿತರ ಕಥೆಗಳನ್ನು ಸಿನಿಮಾ ಮಾಡಿ ಗೆಲ್ಲುವ ಧೈರ್ಯವನ್ನು ಕನ್ನಡದ ನಿರ್ದೇಶಕರೂ, ನಿರ್ಮಾಪಕರೂ ಮಾಡಬಹುದು. ಬರುವ ದಿನಗಳಲ್ಲಿ ಕಾಂತಾರದಂಥ ಹಲವು ಧೈರ್ಯಶಾಲಿ ಯತ್ನಗಳನ್ನು ನಾವು ನೋಡಬಹುದು.

ಕಾಂತಾರದ ಕೊನೆಯಲ್ಲಿ ಪಂಜುರ್ಲಿ ದೈವ ಎಲ್ಲರ ಒಳಗೊಳ್ಳುವಿಕೆ, ಪರಸ್ಪರ ಪ್ರೀತಿ ಸೋದರತ್ವವನ್ನು ಸಾರುತ್ತದೆ. ಈ ಆಶಯ ಕರ್ನಾಟಕದಲ್ಲಿ ಇತರೆಲ್ಲ ಭಾಗಗಳಿಗಿಂತಲೂ ಮೊದಲು ಕರಾವಳಿಯಲ್ಲೇ ಈಡೇರಬೇಕು. ಹಾಗೇ ಆಗಲಿ ಎಂದು ಆಶಿಸೋಣ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ದಿನೇಶ್‌ ಕುಮಾರ್‌ ಎಸ್.ಸಿ
ಪತ್ರಕರ್ತರು

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಕೆಲವು ದೇವಸ್ಥಾನಗಳಿಗೆ ಹೋಗುವಾಗ ಅಂಗಿ – ಬನಿಯನ್‌ ತೆಗೆದು ಅರೆ ಬೆತ್ತಲಾಗಿ ಹೋಗಬೇಕು ಎಂಬ ನಿಯಮ ಯಾಕೆ ಬಂತು? ಇದರ ಹಿಂದೆ ಏನಾದರೂ ವೈಜ್ಞಾನಿಕ ಕಾರಣಗಳಿವೆಯೇ? ಈ ಕುರಿತು ಪತ್ರಕರ್ತ, ಲೇಖಕ ದಿನೇಶ್‌ ಕುಮಾರ್‌ ಎಸ್‌ ಸಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

https://www.youtube.com/watch?v=1QoI-Wt6d6o&t=7s

ಕೊನೆಗೂ ಟಿವಿಗೆ ಬಂದ ರಾಮಾ ರಾಮಾ ರೇ, ಜೀ5 ಪಿಕ್ಚರ್ಸ್ ನಲ್ಲಿ ಸೂಪರ್ ಹಿಟ್ ಸಿನಿಮಾ
ರಾಮಾ ರಾಮಾ ರೇ ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ಥಿಯೇಟರ್ ನಲ್ಲಿ ಬರೋಬ್ಬರಿ‌ 100 ದಿನ ಪೂರೈಸಿದ್ದ ಈ ಚಿತ್ರವನ್ನು ಸಿದ್ಧಸೂತ್ರಗಳನ್ನು ಪಕ್ಕಕ್ಕಿಟ್ಟು ತಯಾರಿಸಲಾಗಿತ್ತು. ಹೊಸ ತಾರಾಗಣ, ಹೊಸ ಕಥೆಯನ್ನು ಸತ್ಯಪ್ರಕಾಶ್ ಸಿನಿಮಾಪ್ರೇಮಿಗಳಿಗೆ ಉಣಬಡಿಸಿದ್ದರು.

ಪೊಲೀಸರನ್ನು ಕೊಂದು ನೇಣು ಶಿಕ್ಷೆಗೆ ಒಳಗಾಗಿರುವ ಖೈದಿಯೊಬ್ಬ ಜೈಲಿನಿಂದ ತಪ್ಪಿಸಿಕೊಳ್ಳುವುದರಿಂದ ಆರಂಭವಾಗುವ ಸಿನಿಮಾ, ಅವನು ತಾನಾಗಿಯೇ ಜೈಲಿಗೆ ಬಂದು ಶರಣಾಗುವ ದೃಶ್ಯದೊಂದಿಗೆ ಮುಗಿಯುತ್ತದೆ. ಇದರ ಮಧ್ಯೆ ಬದುಕಲು ಅವನು ನಡೆಸುವ ಹೋರಾಟ, ಪ್ರೇಮಿಗಳ ಕಷ್ಟ, ಸೈನಿಕನ ಪತ್ನಿಯ ಪ್ರಸವ ವೇದನೆ ಎಲ್ಲವನ್ನೂ ನಿರ್ದೇಶಕ ಸತ್ಯ ಪ್ರಕಾಶ್‌ ಚೆಂದವಾಗಿ ಕಟ್ಟಿಕೊಟ್ಟಿದ್ದರು. ಅಕ್ಟೋಬರ್ 21, 2016ರಂದು ರಿಲೀಸ್ ಆದ ಈ ಚಿತ್ರ ಆರು ವರ್ಷದ ಬಳಿಕ ಟಿವಿಯಲ್ಲಿ ಪ್ರದರ್ಶನವಾಗುತ್ತಿದೆ.

ದಸರಾ ಹಬ್ಬದ ಪ್ರಯುಕ್ತ ರಾಮಾ ರಾಮಾ ರೇ ಚಿತ್ರ ಜೀ ಪಿಕ್ಚರ್ಸ್ ನಲ್ಲಿ ಸಂಜೆ 6ಕ್ಕೆ ಪ್ರಸಾರವಾಗಲಿದೆ. ಸತ್ಯಪ್ರಕಾಶ್ ಚಿತ್ರಕಥೆ ಬರೆದು ನಿರ್ದೇಶನದಲ್ಲಿ ನಟರಾಜ್, ಧರ್ಮಣ್ಣ ಕಡೂರ್, ಎಂ.ಕೆ.ಮಠ, ಶ್ರೀಧರ್, ರಾಧಾ ರಾಮಚಂದ್ರ, ಪ್ರಿಯಾ ಷಟಮರ್ಶನ್‌, ಶ್ರೀಧರ್‌ ಸೇರಿದಂತೆ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದರು. ತಾಂತ್ರಿಕತೆಯಿಂದಲೂ ಗಮನ ಸೆಳೆದಿದ್ದ ರಾಮಾ ರಾಮಾ ರೇ ಕನ್ನಡದ ಪ್ರಯೋಗಾತ್ಮಕ ಸಿನಿಮಾವಾಗಿದ್ದು, ಇಂತಹ ಚಿತ್ರವನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಈಗ ಮನೆಯಲ್ಲಿ ನೋಡಬಹುದು.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಸಂತ ಸೇವಾಲಾಲ್‌ ಅವರ ಜನ್ಮ ಸ್ಥಳ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಆರ್‌ ಎಸ್‌ ಎಸ್‌ ಶಿಬಿರವೊಂದನ್ನು ಆಯೋಜಿಸಲಾಗಿದ್ದು, ಇದಕ್ಕೆ ಬಂಜಾರ ಸಮುದಾಯ ತೀವ್ರ ಸ್ವರೂಪದಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ PEEPAL TV ಲೇಖಕ, ಚಿಂತಕ ರುದ್ರು ಪುನೀತ್‌ ಅವರನ್ನು ಸಂದರ್ಶಿಸಿದೆ.

ಭಾರೀ ಮೊತ್ತಕ್ಕೆ “F0R REGN” ಚಿತ್ರದ ಆಡಿಯೋ ಹಕ್ಕು ಝಂಕಾರ್ ಸಂಸ್ಥೆಗೆ ಮಾರಾಟ
ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ನಾಯಕ-ನಾಯಕಿಯಾಗಿ ನಟಿಸಿರುವ  “F0R REGN”. (ಫಾರ್ ರಿಜಿಸ್ಟರೇಷನ್) ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಟಿತ ಜಂಕಾರ್ ಮ್ಯೂಸಿಕ್ ಸಂಸ್ಥೆ ಭಾರೀ ಮೊತ್ತ‌ ನೀಡಿ ಖರೀದಿಸಿದೆ.

ಈ ಚಿತ್ರದಲ್ಲಿ ಆರು ಹಾಡುಗಳಿದ್ದು, ಬಹದ್ದೂರ್ ಚೇತನ್ ಕುಮಾರ್, ಕವಿರಾಜ್ ಹಾಗೂ ನಾಗಾರ್ಜುನ ಶರ್ಮ ಬರೆದಿದ್ದಾರೆ. ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ ಹಾಗೂ ವಾಸುಕಿ ವೈಭವ್ ಹಾಡಿದ್ದಾರೆ. ಆರ್.ಕೆ.ಹರೀಶ್ ಈ ಚಿತ್ರದ ಸಂಗೀತ ನಿರ್ದೇಶಕರು.

ಒಂದೇ ಒಂದು ಹಾಡಿನ ಚಿತ್ರೀಕರಣ ಮಾತ್ರಬಾಕಿಯಿದ್ದು, ಉಳಿದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯ ಮಾತಿನ ಜೋಡಣೆ ನಡೆಯುತ್ತಿದೆ. ಬೆಂಗಳೂರು, ಉಡುಪಿ, ಮಂಗಳೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ನಡೆದಿದೆ.

” ದಿಯಾ” ಹಾಗೂ “ಲವ್ ಮಾಕ್ಟೇಲ್” ಚಿತ್ರಗಳ ಮೂಲಕ ಸಿನಿರಸಿಕರ ಮನಗೆದ್ದಿರುವ ಪೃಥ್ವಿ ಅಂಬರ್ ಹಾಗೂ ಮಿಲನ ನಾಗರಾಜ್ ಜೋಡಿಯ ಈ ಚಿತ್ರದ  ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯಿದೆ.  ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ನಿಶ್ಚಲ್ ಫಿಲಂಸ್ ಮೂಲಕ  ಎನ್. ನವೀನ್ ರಾವ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ನವೀನ್ ದ್ವಾರಕನಾಥ್ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ.  ಅಭಿಷೇಕ್ ಕಲ್ಲತ್ತಿ- ಅಭಿಷೇಕ್ ಕಾಸರಗೋಡು  ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ.

ಕಿರೀಟಿ ಮೊದಲ ಚಿತ್ರದ ಟೈಟಲ್ ಘೋಷಣೆ, ‘ಜೂನಿಯರ್’ ಜನಾರ್ಧನ್ ರೆಡ್ಡಿ
ಸ್ಯಾಂಡಲ್ ವುಡ್ ಅಂಗಳಕ್ಕೆ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಟೀಸರ್  ಝಲಕ್ ನಲ್ಲೇ ಎಲ್ಲರ ಗಮನ ಸೆಳೆದಿರೋ ಕಿರೀಟಿ ಮೊದಲ ಚಿತ್ರದ ಮೂಲಕ ಏಕಕಾಲದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿ ಬರ್ತಿರುವ ಈ ಚಿತ್ರ ಬಿರುಸಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಇಷ್ಟು ದಿನ ಟೈಟಲ್ ರಿವೀಲ್ ಮಾಡದೇ ಚಿತ್ರೀಕರಣದಲ್ಲಿ ತೊಡಗಿದ್ದ ಚಿತ್ರತಂಡ ಫೈನಲಿ ಸಿನಿಮಾ ಟೈಟಲ್ ರಿವೀಲ್ ಮಾಡಿದೆ. ಆ ಮೂಲಕ ಇಷ್ಟು ದಿನದ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ.

ಇತ್ತೀಚೆಗೆ ನಟ ಕಿರೀಟಿ ಹುಟ್ಟುಹಬ್ಬ ಇತ್ತು. ಆದ್ರಿಂದ ಚಿತ್ರತಂಡ ಕಿರೀಟಿ ಹುಟ್ಟುಹಬ್ಬಕ್ಕೆ ಟೈಟಲ್ ರಿವೀಲ್ ಮಾಡಲು ಮೊದಲೇ ತಯಾರಿ ಮಾಡಿಕೊಂಡಿತ್ತು. ಅದರಂತೆ ವಾರಾಹಿ ಯೂಟ್ಯೂಬ್ ಚಾನೆಲ್ ನಲ್ಲಿ   ಟೈಟಲ್ ವೀಡಿಯೋ ಬಿಡುಗಡೆ ಮಾಡಲಾಗುತ್ತಿದೆ. ಈ ಮೂಲಕ ಕಿರೀಟಿಗೆ ಶುಭಕೋರಿ ಟೈಟಲ್ ಉಡುಗೊರೆಯಾಗಿ ನೀಡಿದೆ ಚಿತ್ರತಂಡ. ಚಿತ್ರಕ್ಕೆ ‘ಜೂನಿಯರ್’ ಎಂದು ಚಿತ್ರತಂಡ ಟೈಟಲ್ ಫಿಕ್ಸ್ ಮಾಡಿದೆ. ಈ ಮೂಲಕ ಇಷ್ಟು ದಿನ ಸಿನಿರಸಿಕರಲ್ಲಿ ಟೈಟಲ್ ಬಗ್ಗೆ ಇದ್ದ ಕುತೂಹಲಕ್ಕೆ ಉತ್ತರ ನೀಡಿದೆ ಚಿತ್ರತಂಡ. ‘ಜೂನಿಯರ್’ ಮೂಲಕ ಕಿರೀಟಿ ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಚಿತ್ರರಂಗಕ್ಕೂ ನಾಯಕ ನಟನಾಗಿ ಪರಿಚಿತನಾಗುತ್ತಿದ್ದಾರೆ.

ಮಾಯಾಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರವಿದು. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ವಾರಾಹಿ ಫಿಲ್ಮಂ ಪ್ರೊಡಕ್ಷನ್ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡಿದ್ದು  ಬಿಗ್ ಬಜೆಟ್ ನಲ್ಲಿ  ಸಿನಿಮಾ ನಿರ್ಮಾಣ ಮಾಡುತ್ತಿದೆ. ಬಹುದೊಡ್ಡ ಹಾಗೂ ಸ್ಟಾರ್ ತಾರಾಗಣ ಈ ಸಿನಿಮಾದ ಮತ್ತೊಂದು ಹೈಲೈಟ್. ಕ್ರೇಜಿ ಸ್ಟಾರ್ ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ಇನ್ನೂ ಹಲವು ತಾರೆಯರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಹಾಗೆಯೇ ಚಿತ್ರದ ತಾಂತ್ರಿಕ ಬಳಗ ಕೂಡ ಅಷ್ಟೇ ಶ್ರೀಮಂತವಾಗಿದ್ದು ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಾಕ್ ಸ್ಟಾರ್ ಖ್ಯಾತಿಯ ದೇವಿಶ್ರೀ ಪ್ರಸಾದ್ ಸಂಗೀತ, ಬಾಹುಬಲಿ ಸಿನಿಮಾ ಖ್ಯಾತಿಯ ಕಣ್ಣು ಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ನಿರ್ದೇಶನ, ಭಾರತೀಯ ಚಿತ್ರರಂಗದ ಖ್ಯಾತ ಸಾಹಸ ನಿರ್ದೇಶಕ ಪೀಟರ್ ಹೆನ್ ಸಾಹಸ ಚಿತ್ರಕ್ಕಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ವಸಾಹತುಶಾಹಿಗೆ ಚಳ್ಳೆಹಣ್ಣು ತಿನ್ನಿಸಿದ ಶೂದ್ರ ರಾಣಿ ರಾಶ್ಮೋನಿಕುಟಿಲ

ವಸಾಹತುಶಾಹಿ ಕಂಪನಿಗೆ ಚಳ್ಳೆಹಣ್ಣು ತಿನ್ನಿಸಿ ಕೋಲ್ಕತಾದ ಹೂಗ್ಲಿ ನದಿ ತಟದಲ್ಲಿ ಕಾಳಿಕಾ ದೇವಿಗೆ ದಕ್ಷಿಣೇಶ್ವರ ದೇವಾಲಯ ನಿರ್ಮಿಸಿದ ಶೂದ್ರ ರಾಣಿ ರಾಶ್ಮೋನಿ ಭಾರತದ ಇತಿಹಾಸದ ಒಂದು ದಂತಕತೆ. ಸಹಾಯಕ ಪ್ರಾಧ್ಯಾಪಕರಾದ ಪುನೀತ್‌ ಕುಮಾರ್‌ ರಾಶ್ಮೋನಿಯ ಕತೆಯನ್ನು ಇಲ್ಲಿ ಹೇಳಿದ್ದಾರೆ.

PEEPAL TV https://youtu.be/ruwGKmIDNuU

ಇದೇ ವಿಡಿಯೋ ಫೇಸ್ಬುಕ್ ಪೇಜಿನಲ್ಲಿ ನೋಡಲು 👇🏼 https://www.facebook.com/peepaltvkannada/videos/998658938199059