Food – Peepal Media

ದೀಪಾವಳಿ ಸಿಹಿತಿಂಡಿಗಳು ವಿಷಕಾರಿಯಾಗಲು FSSAI ಕಾರಣವೇ?
ಬೆಂಗಳೂರು: ತಿರುಪತಿ ದೇವಸ್ಥಾನದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಿರುವ ತುಪ್ಪ ಬಳಸಿರುವುದು ದೇಶದಾದ್ಯಂತ ಸುದ್ದಿಯಾಗಿತ್ತು. ಅದೊಂದು ಮತೀಯ ಚರ್ಚೆಯಾಯಿತೇ ವಿನಃ ಕಲಬೆರಕೆಯ ಬಗೆಗಿನ ಚರ್ಚೆಯಾಗಲಿಲ್ಲ. ಯಾರು ಕೂಡ ತುಪ್ಪದಲ್ಲಿ ಈ ಪ್ರಮಾಣದ ಕಲಬೆರಕೆಯಾದಾಗ ರಾಷ್ಟ್ರೀಯ ಆಹಾರ ಸುರಕ್ಷತೆ ನಿಯಂತ್ರಕ, FSSAI ಏನು ಮಾಡುತ್ತಿತ್ತು ಎಂದು ಕೇಳಲಿಲ್ಲ.

ಆಹಾರ ಕಲಬೆರಕೆಯನ್ನು ತಡೆಗಟ್ಟುವುದು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜವಬ್ದಾರಿಯಾಗಿದೆ. ಆದರೆ ತನ್ನ ಈ ಕೆಲಸದಲ್ಲಿ FSSAI ಪದೇ ಪದೇ ವಿಫಲವಾಗಿದೆ.

ಇದು ರಾಜ್ಯ ಸರ್ಕಾರಗಳ ಗಮನದಲ್ಲೂ ಇದೆ. ಉತ್ತರ ಪ್ರದೇಶವು  ಮಾನವ ತ್ಯಾಜ್ಯ ಆಹಾರದಲ್ಲಿ ಬೆರೆಯುವುದನ್ನು ತಪ್ಪಿಸಲು ವಿಶೇಷ ಕಾನೂನನ್ನು ಜಾರಿಗೆ ತಂದಿತು. ಇಂದು ರಾಜ್ಯ 2024 ರಲ್ಲಿ ಆಹಾರ ನೈರ್ಮಲ್ಯ 101 ಅನ್ನು ಜಾರಿಗೊಳಿಸಲು ವಿಶೇಷ ಕಾನೂನನ್ನು ತಂದಿದೆ ಎಂದರೆ ಅದೇ ಕೆಲಸ ಮಾಡಬೇಕಾಗಿದ್ದ FSSAI ಏನು ಮಾಡುತ್ತಿದೆ?

ಯುಪಿಯ ಅಲಿಘರ್‌ನಲ್ಲಿ ಆಹಾರ ತಪಾಸಣೆ ತಂಡವು  ಹಿಟ್ಟಿನಲ್ಲಿ 400 ಕೆಜಿ ಕಲ್ಲಿನ ಪುಡಿಯನ್ನು ಬೆರೆಸಿರುವುದನ್ನು ಪತ್ತೆಹಚ್ಚಿದ ಸುದ್ದಿ  ವರದಿಯಾಗಿತ್ತು. ಗಣಿ ಮತ್ತು ಕಲ್ಲು ಸಂಸ್ಕರಣಾ ಕಾರ್ಖಾನೆಗಳ ತ್ಯಾಜ್ಯವಾದ ಕಲ್ಲಿನ ಪುಡಿಯಲ್ಲಿ ವಿಷಕಾರಿ ಅಂಶಗಳೂ ಇರುತ್ತವೆ. ಇದು ಹೊಟ್ಟೆನೋವು, ಕ್ಯಾನ್ಸರ್‌ಗೆ ಕಾರಣವಾಗಬಹುದು.

ಆದರೆ ಇದು ಕೇವಲ ಕಲ್ಲಿನ ಪುಡಿಯ ಕಥೆ ಮಾತ್ರವಲ್ಲ, ನಮ್ಮ ಆಹಾರದಲ್ಲಿ  ಯೂರಿಯಾ  ಮತ್ತು ರಾಸಾಯನಿಕ ಬಣ್ಣಗಳನ್ನೂ ಹಲವು ವರ್ಷಗಳಿಂದ ಕಲಬೆರಕೆ ಮಾಡಲಾಗುತ್ತಿದೆ. ಸರ್ಕಾರಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಕಲಬೆರಕೆಯ ಪ್ರಮಾಣ ದೇಶದಲ್ಲಿ ಹೆಚ್ಚುತ್ತಲೇ ಇದೆ.

ನಾವು ನಿತ್ಯ ಹಾಲನ್ನು ಬಳಸುತ್ತೇವೆ. ಸುಲಭವಾಗಿ ಕಲಬೆರಕೆಯಾಗುವ ಉತ್ಪನ್ನ ಹಾಲು. ಈ ಹಾಲಿನಿಂದ ತಯಾರಿಸಿದ ತುಪ್ಪ, ಸಿಹಿತಿಂಡಿಗಳಂತ ಉತ್ಪನ್ನಗಳು ಎಷ್ಟು ಸುರಕ್ಷಿತವಾಗಿರಬಹುದು? ದುರಾಸೆ ಮತ್ತು ಆರ್ಥಿಕ ಕಾರಣಗಳಿಗೆ ವ್ಯಾಪಾರಿಗಳು, ಹೈನುಗಾರಿಕೆ ಮಾಡುವವರು ಹಾಲಿನಲ್ಲಿ ಯೂರಿಯಾ ಬೆರೆಸುತ್ತಿದ್ದಾರೆ. ಪಂಜಾಬ್ ,  ಗುಜರಾತ್ ,  ಒಡಿಶಾ ,  ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಹಾಲು ಹೆಚ್ಚು ಕಲಬೆರಕೆಯಾಗಿದೆ. ಅಲ್ಲಿನ ಸರ್ಕಾರಗಳು ಇದನ್ನು ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ. ಹಾಲಿನ ಉತ್ಪನ್ನಗಳಲ್ಲಿ ಆಗುತ್ತಿರುವ ಹಾರ್ಮೋನ್ ಓವರ್-ಲೋಡ್ ಭಾರತದ ಪ್ರಮುಖ ಸಮಸ್ಯೆಗಳಲ್ಲಿ ಒಂದು.

ದೀಪಾವಳಿಯ ಸಮಯದಲ್ಲಿ ಜನರು ಹೆಚ್ಚೆಚ್ಚು ಸಿಹಿತಿಂಡಿಗಳನ್ನು ಖರೀದಿಸುತ್ತಾರೆ. ಇವುಗಳಿಗಿರುವ ಬೇಡಿಕೆ ಹೆಚ್ಚಿದಂತೆ ಕಲಬೆರಕೆಯೂ ಹೆಚ್ಚಾಗಿದೆ. ಮೋದಿಯವರ ಗುಜರಾತ್‌ನಲ್ಲೇ  ಕಳೆದ 15 ದಿನಗಳಲ್ಲಿ ಬರೋಬ್ಬರಿ 6.3 ಕೋಟಿ ಮೌಲ್ಯದ ಕಲುಷಿತ ಆಹಾರ ವಶಪಡಿಸಿಕೊಳ್ಳಲಾಗಿದೆ. ಇನ್ನು ಉಳಿದ ರಾಜ್ಯಗಳಲ್ಲಿ ಆಗುತ್ತಿರುವ ದೀಪಾವಳಿ ಸಿಹಿತಿಂಡಿಗಳ ಕಲಬೆರಕೆಯ ಪ್ರಮಾಣ ಎಷ್ಟಿರಬಹುದು, ಊಹಿಸಿ.

ರಸ್ತೆ ಬದಿಯ  ಅಸಂಘಟಿತ ವಲಯ ಆಹಾರ ಉತ್ಪಾದನೆಯಲ್ಲಿ ನಡೆಯುತ್ತಿರುವ ಕಲಬೆರಕೆ ದೊಡ್ಡ ಕಾರ್ಪೊರೇಟ್‌ಗಳಲ್ಲೂ ನಡೆಯುತ್ತಿದೆ. ನೆಸ್ಲೆಯು ಮಿತಿಮೀರಿ ಸೀಸ ಬೆರೆಸಿದ ಮ್ಯಾಗಿಯನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ವರದಿಯಾಗಿತ್ತು. 2019 ರಲ್ಲಿ ನಡೆದ ಈ ಪ್ರಕರಣದಲ್ಲಿ ಮ್ಯಾಗಿ ಸೇವಿಸಿದ ಲಕ್ಷಾಂತರ ಭಾರತೀಯರಿಗೆ ಪರಿಹಾರ ನೀಡಲಾಗಿದೆಯೇ? ಮಕ್ಕಳ ನರ ಸಂಬಂಧಿ ಆರೋಗ್ಯದ ಮೇಲೆ ಈ ಸೀಸ ದುಷ್ಪರಿಣಾಮ ಬೀರಿದೆ. ಇವರಿಗೆ ಯಾರು ಪರಿಹಾರ ನೀಡಿದ್ದಾರೆ?

ಇತ್ತೀಚೆಗಷ್ಟೇ ಸುಮಾರು 800 ಕೆಜಿ ನಕಲಿ ಟೊಮೆಟೊ ಸಾಸ್  ವಶಪಡಿಸಿಕೊಳ್ಳಲಾಗಿತ್ತು. ಈ ನಕಲಿ ಸಾಸ್‌ನಲ್ಲಿ ಫಾರ್ಮಾಲಿನ್, ಸಿಂಥೆಟಿಕ್ ಬಣ್ಣ ಏಜೆಂಟ್‌ಗಳು, ಆರೊರೂಟ್ ಪೌಡರ್ ಇತ್ಯಾದಿಗಳು ಪತ್ತೆಯಾಗಿದ್ದವು. ಹೆಚ್ಚಿನ ಟೊಮೆಟೊ ಸಾಸ್ ಅನ್ನು ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ. ಇವೆಲ್ಲವೂ ಎಫ್‌ಎಸ್‌ಎಸ್‌ಎಐ ಅಡಿಯಲ್ಲಿ ನಿಯಂತ್ರಿಸಲ್ಪಡುತ್ತವೆ. ಆದರೂ ಇವು ಕಲಬೆರಕೆ ಮಾಡಿ ಸಾಸ್‌ ಮಾಡುತ್ತಿರುವಾಗ FSSAI ಏನು ಮಾಡುತ್ತಿತ್ತು?

ಮಸಾಲೆ ಪದಾರ್ಥದಲ್ಲಿ ನಡೆಯುತ್ತಿರುವ ಕಲಬೆರಕೆಯ ಪ್ರಮಾಣವನ್ನು ನೋಡುವಾ FSSAI ನಡೆಸಿದ ಎಲ್ಲಾ ಪರೀಕ್ಷೆಗಳೂ ವಿಫಲವಾಗಿವೆ ಎಂಬುದು ಸ್ಪಷ್ಟವಾಗಿ ಕಾಣುತ್ತಿವೆ. ಮನೆ ಬಳಕೆಯ  ಮೆಣಸಿನ ಪುಡಿ ,  ಅರಿಶಿನ ,  ಕೊತ್ತಂಬರಿ  ಪುಡಿ ಇತ್ಯಾದಿಗಳು ಎಥಿಲೀನ್ ಆಕ್ಸೈಡ್‌ನಂತಹ ಕ್ಯಾನ್ಸರ್ ಕಾರಕ ವಸ್ತುಗಳನ್ನು ಹೊಂದಿವೆ. ಯುರೋಪಿಯನ್‌ ಯೂನಿಯನ್ ಭಾರತದ ಮೆಣಸಿನ ಪುಡಿ ಮತ್ತು ಕಾಳುಮೆಣಸಿನ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. MDH  ಮತ್ತು  ಎವರೆಸ್ಟ್‌ನಂತಹ ದೊಡ್ಡ ಬ್ರ್ಯಾಂಡ್‌ಗಳು ಕೂಡ ಕ್ಯಾನ್ಸರ್ ಕಾರಕ ಪದಾರ್ಥಗಳನ್ನು ಮಿಶ್ರಣ ಮಾಡಿವೆ. ಅಮೇರಿಕಾ, ಯುರೋಪಿಯನ್‌ ಯೂನಿಯನ್ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳು ಪ್ರತಿ ವರ್ಷ ಭಾರತೀಯ ಮಸಾಲೆಗಳನ್ನು ವಿಷಕಾರಿ ಎಂದು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುತ್ತಿವೆ.

ಆದರೆ ಕೇಂದ್ರ ಸರ್ಕಾರವಾಗಲೀ,FSSAIಯಾಗಲೀ ತಪ್ಪಿತಸ್ಥರನ್ನು ಶಿಕ್ಷಿಸಿ, ಭಾರತೀಯರ ಆರೋಗ್ಯ ಕಾಪಾಡಲು ಹಿಂಜರಿದಿವೆ. ದಿನನಿತ್ಯ ಬಳಸುವ ಮಸಾಲೆಗಳಲ್ಲಿ ಕಲಬೆರಕೆಯಾಗುತ್ತಿದೆ ಎಂದರೆ ದಿನನಿತ್ಯ ಭಾರತೀಯರು ವಿಷ ಸೇವನೆ ಮಾಡುತ್ತಿದ್ದಾರೆ ಎಂದೇ ಅರ್ಥ.

FSSAI ಯ ವಿಜ್ಞಾನಿಗಳು ಕುಲಾಂತರಿ (GM) ಕೃಷಿ ಉತ್ಪನ್ನಗಳಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು. FSSAI   ನಮ್ಮ ಎಲ್ಲಾ ಆಹಾರ ಮತ್ತು ಸಸ್ಯಜನ್ಯ ಎಣ್ಣೆಗಳಲ್ಲಿ GM ಹತ್ತಿಬೀಜದ ಎಣ್ಣೆಯನ್ನು ಮಿಶ್ರಣ ಮಾಡಲು ಅನುಮತಿ ನೀಡಿದೆ. ಇವರು GM ಹತ್ತಿಬೀಜದ ಎಣ್ಣೆಯನ್ನು ನೈಸರ್ಗಿಕ ಹತ್ತಿಬೀಜದ ಎಣ್ಣೆಯಂತೆಯೇ ಪರಿಗಣಿಸುತ್ತಾರೆ.

ಭಾರತವು GM ಆಹಾರ ಬೆಳೆಗಳಿಗೆ ಅನುಮತಿ ನೀಡಿದ್ದರೂ GMO – genetically modified organism ಗಳಿಗೆ ಎಣ್ಣೆಯ ಮೂಲಕ ನಮ್ಮ ದೇಹವನ್ನು ಸುಲಭವಾಗಿ ಪ್ರವೇಶಿಸವಂತಾಗುತ್ತದೆ. ಇದಲ್ಲದೇ, FSSAI ಈ ಬಗ್ಗೆ ಉತ್ಪನ್ನದ ಮೇಲೆ ನಿಜವಾದ ಲೇಬಲ್‌ ಹಾಕಲು ಒತ್ತಾಯಿಸುವ ಬದಲು ಜನರಿಗೆ ವಂಚನೆ ಮಾಡುತ್ತಿದೆ. ಜನರಿಗೆ ತಮ್ಮ ಆಹಾರದಲ್ಲಿ GM ಅಂಶಗಳು ಇವೆಯೇ ಎಂಬ ಬಗ್ಗೆ ಮಾಹಿತಿಯೇ ಇಲ್ಲ. ಅವರಿಗೆ ಅದನ್ನು ತಿಳಿದುಕೊಳ್ಳುವ ಹಕ್ಕಿದೆ, ಆದರೆ  FSSAI ಅವರ ಕಣ್ಣಿಗೆ ಮಣ್ಣೆರಚುತ್ತಿದೆ.

ಯುರೋಪಿನಂತಹ ಅಭಿವೃದ್ಧಿ ಹೊಂದಿದ ದೇಶಗಳು GM ಹತ್ತಿಬೀಜದ ಎಣ್ಣೆ ತಮ್ಮ ಆಹಾರದಲ್ಲಿ ಸೇರುವುದನ್ನು ನಿಷೇಧಿಸಿವೆ. ಯುರೋಪಿಯನ್‌ ಯೂನಿಯನ್‌ GM ಉತ್ಪನ್ನಗಳ ವಿರುದ್ಧ ಕಾನೂನುಗಳನ್ನು ತಂದಿದೆ. ಒಂದು ವೇಳೆ GM ಹತ್ತಿಬೀಜದ ಎಣ್ಣೆ ಬಳಸಿದರೆ ಅದನ್ನು ಉತ್ಪನ್ನದ ಕವರ್‌ನಲ್ಲಿ ಕಡ್ಡಾಯವಾಗಿ ಉಲ್ಲೇಖಿಸಬೇಕು.

ಆದರೆ ಭಾರತದಲ್ಲಿ FSSAI ಕುಲಾಂತರಿ ಉತ್ಪನ್ನಗಳ ಕಂಪನಿಗಳ ತಾಳಕ್ಕೆ ಕುಣಿಯುತ್ತಿದೆ. ಕಲಾಂತರಿ ಉತ್ಪನ್ನಗಳಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಘಂಟಾಘೋಷವಾಗಿ ಹೇಳುತ್ತಿದೆ. ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಬಿಟಿ ಹತ್ತಿಯ ಜೈವಿಕ ಸುರಕ್ಷತೆ ದಾಖಲೆಗಳನ್ನು ವಿಶ್ಲೇಷಿಸಿದರೆ, ಅವು ಅಮೇರಿಕಾದ ಕೃಷಿ ರಾಸಾಯನಿಕ ಮತ್ತು ಕೃಷಿ ಜೈವಿಕ ತಂತ್ರಜ್ಞಾನ ನಿಗಮವಾದ ಮೊನ್ಸಾಂಟೊದ ಡೇಟಾವನ್ನು ಆಧರಿಸಿವೆ ಮತ್ತು ಈ ಸುರಕ್ಷತೆಯ ಡೇಟಾವನ್ನು ಮೊನ್ಸಾಂಟೊ ಒದಗಿಸಿದೆ. ಆದರೆ FSSAI ಸ್ವತಂತ್ರವಾಗಿ ಬಿಟಿ ಉತ್ಪನ್ನಗಳ ಜೈವಿಕ ಸುರಕ್ಷತೆಯನ್ನು ಪರಿಶೀಲಿಸಲು ಯಾವುದೇ ಪರೀಕ್ಷೆಗಳನ್ನು ನಡೆಸಿಲ್ಲ.

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ಪ್ರಾಣಿಜನ್ಯ ಕೊಬ್ಬು ಬಳಸಿದ್ದಾರೆ ಎಂಬುದು ಈ ದೇಶದಲ್ಲಿ ಮತೀಯ ರಾಜಕಾರಣದ ಸಮಸ್ಯೆಯಾಗಿ ಚರ್ಚೆಯಾಗಿದೆಯೇ ವಿನಃ ಇದನ್ನು ದೇಶವಾಸಿಗಳಾಗಲೀ, ಕೇಂದ್ರ-ರಾಜ್ಯ ಸರ್ಕಾರಗಳಾಗಲೀ, FSSAI ಯಾಗಲೀ ಆರೋಗ್ಯ ಬಿಕ್ಕಟ್ಟು ಎಂದು ಪರಿಗಣಿಸದೇ ಇರುವುದು ದುರಂತ.

ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ
ದೇಶವನ್ನು ಹಸಿವು ಮುಕ್ತ ಮಾಡಲು ಪ್ರತಿಯೊಬ್ಬರೂ ತಮ್ಮ ತಮ್ಮ ನೆಲೆಯಲ್ಲಿ ಆಹಾರವನ್ನು ವ್ಯರ್ಥ ಮಾಡದಂತೆ ಒಂದಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಬೆಂಗಳೂರಿನಲ್ಲಿ ಈ ಮೂರು ದಿನಗಳಿಂದ ನಡೆಯುತ್ತಿರುವ ಆಹಾರ ಸಂರಕ್ಷಣಾ ಜಾಗೃತಿಯ ಸಂಘಟಕ ವಿವೇಕಾನಂದ ಎಚ್‌ ಕೆ.

ಅಕ್ಟೋಬರ್ 16 “ವಿಶ್ವ ಆಹಾರ ದಿನ”. 1945 ರಲ್ಲಿ ವಿಶ್ವಸಂಸ್ಥೆಯು ʼಆಹಾರ ಮತ್ತು ಕೃಷಿ ಸಂಸ್ಥೆʼ ಯನ್ನು (Food and agriculture organization -FAO) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ.

ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19,700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಸುಮಾರು 80 ಲಕ್ಷ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಭಾರತದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟದ ಎಲೆಗಳಲ್ಲಿ ವ್ಯರ್ಥವಾಗುವ‌ ಆಹಾರ ಪ್ರಮಾಣ ಶೇಕಡಾ 25%. ಈಗ ಬಹುಶಃ ನಿಜವಾದ ಸಮಸ್ಯೆ ಅರ್ಥವಾಗಿರಬಹುದು.

ಇದಕ್ಕೆ ವಿವಿಧ ಆಯಾಮಗಳು ಇವೆ….

ವಿಶ್ವದ ಜನಸಂಖ್ಯೆ ಹೆಚ್ಚಾಗುತ್ತಲೇ ಇರುವುದು, ಅಥವಾ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವುದು, ಅಥವಾ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿರುವುದು, ಅಥವಾ ಭೂ ಪ್ರದೇಶಗಳ ಅಸಮಾನತೆ, ಅಥವಾ ಉಳಿತಾಯ ಮತ್ತು ಹಂಚಿಕೆಯ ಲೋಪದೋಷಗಳು, ಅಥವಾ ಆಹಾರದ ದುರುಪಯೋಗ…ಇವುಗಳಲ್ಲಿ ಯಾವುದು ಹೆಚ್ಚು ಕಾರಣ ಎಂಬುದನ್ನು ಗುರುತಿಸಿ ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ.

ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದ ಜನಸಂಖ್ಯೆ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ, ಕೃಷಿ ಚಟುವಟಿಕೆಗಳನ್ನು ಹೆಚ್ಚಿಸುವುದು, ಫಲವತ್ತತೆ ಕಾಪಾಡುವುದು, ಉಳಿತಾಯ ಮತ್ತು ಹಂಚಿಕೆ ಎಲ್ಲವೂ ಆಯಾ ದೇಶದ ಸರ್ಕಾರ ಮತ್ತು ಆಡಳಿತದ ಜವಾಬ್ದಾರಿ. ಆದರೆ ಆಹಾರ ವ್ಯರ್ಥವಾಗುವುದನ್ನು ತಡೆಯುವ ಕರ್ತವ್ಯ, ಜವಾಬ್ದಾರಿ ಮತ್ತು ಮಾನವೀಯತೆ ನಮ್ಮಂತ ಪ್ರತಿ ನಾಗರೀಕರಿಗೂ ಸಾಧ್ಯವಿದೆ.

ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ…

ಆ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತ ದೇಶದ ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ-ಉತ್ತರ ಕರ್ನಾಟಕದ ಭಾಗದಲ್ಲಿ ಆಹಾರ ವ್ಯರ್ಥವಾಗುವುದು ಸ್ವಲ್ಪ ಕಡಿಮೆ. ಕಾರಣ ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವರು ಆಹಾರವನ್ನು ಸಾಧ್ಯವಾದಷ್ಟು ದುರುಪಯೋಗ ಪಡಿಸಿಕೊಳ್ಳದೆ ಬಡಿಸಿದ ಸಂಪೂರ್ಣ ಆಹಾರ ತಿನ್ನುವ ಪ್ರಯತ್ನ ಮಾಡುವುದನ್ನು ಪಾದಯಾತ್ರೆಯ ಸಂದರ್ಭದಲ್ಲಿ ಗಮನಿಸಿದ್ದೇನೆ. ಅದಕ್ಕೆ ಕಾರಣ ಏನೇ ಇರಲಿ ಆ ಮನೋಭಾವ ಮಾತ್ರ ಸ್ವಾಗತಾರ್ಹ.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉತ್ತರ ಕರ್ನಾಟಕದಷ್ಟು ಅಲ್ಲದಿದ್ದರೂ ಆಹಾರವನ್ನು ಸ್ವಲ್ಪ ಮಟ್ಟಿಗೆ ಗೌರವಿಸಿ ಹೆಚ್ಚು ವ್ಯರ್ಥ ಮಾಡುವುದಿಲ್ಲ. ಮುಖ್ಯವಾಗಿ ಮದುವೆ ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಯಥೇಚ್ಛವಾಗಿ ವ್ಯರ್ಥವಾಗುವುದು ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ. ಅದರಲ್ಲೂ ಬೆಂಗಳೂರಿನಲ್ಲಿ ಅತಿಹೆಚ್ಚು ಆಹಾರವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಸ್ವತಃ ಅನುಭವದಿಂದ ಗಮನಿಸಿದ್ದೇನೆ. ಒಂದು ಕಾಲಕ್ಕೆ ಆಹಾರ ಅತ್ಯಮೂಲ್ಯವಾಗಿತ್ತು. ಆದರೆ ಜನರ ಹಣದ ಶಕ್ತಿ ಹೆಚ್ಚಾದಂತೆ ಆಹಾರದ ಪೋಲಾಗುವುದು ಹೆಚ್ಚಾಯಿತು. ಕೆಲವೊಮ್ಮೆ ನಿರ್ಲಕ್ಷ್ಯ ಮತ್ತೆ ಹಲವು ಕಡೆ ದುರಹಂಕಾರ ಇದಕ್ಕೆ ಕಾರಣ ಇರಬಹುದು.

ಆಹಾರ ಬೆಳೆಗಳ ದುರುಪಯೋಗ!

ರೈತರು ಬಿತ್ತನೆ ಮಾಡಿ, ಅದು ಬೆಳೆದು ಫಸಲಾಗಿ, ಕಟಾವು ಮಾಡಿ, ಸಂಗ್ರಹಿಸಿ, ಸಾಗಾಣಿಕೆ ಮಾಡಿ, ಮಾರಾಟ ಮಾಡಿ, ಅದು ಮನೆ ಮನೆಗೆ ಸೇರಿ, ಆಹಾರವಾಗಿ ನಮ್ಮ ಎಲೆ ಅಥವಾ ತಟ್ಟೆಗೆ ಸೇರುವ ವೇಳೆಗೆ ಸಾಕಷ್ಟು ಸಹಜವಾಗಿ ಮತ್ತು ಅನಿವಾರ್ಯವಾಗಿ ನಷ್ಟವಾಗಿರುತ್ತದೆ. ಮತ್ತೆ ಆಹಾರವನ್ನು ನಾವು ಬಡಿಸಿಕೊಂಡು ತಟ್ಟೆಯಲ್ಲಿ 25% ವ್ಯರ್ಥ ಮಾಡಿದರೆ ಒಟ್ಟು ಆಹಾರ ಬೆಳೆಗಳ ದುರುಪಯೋಗ ಎಷ್ಟಾಗಬಹುದು ಊಹಿಸಿ. ಭಾರತದಲ್ಲಿ 25% ವ್ಯರ್ಥ ಎಂದರೆ ಸುಮಾರು 35 ಕೋಟಿ ಜನಸಂಖ್ಯೆಯ ಆಹಾರವನ್ನು ನಾವು ಕಬಳಿಸಿದಂತೆ ಆಗುತ್ತದೆ ಮತ್ತು ಆಹಾರ ಬೆಳೆಯಲು ಉಪಯೋಗಿಸಿದ ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಂಡು ವ್ಯವಸಾಯದ ಮೇಲೆ ಅವಶ್ಯಕವಾಗಿ ಒತ್ತಡ ಹೇರಿದಂತೆ ಆಗುತ್ತದೆ ಹಾಗು ನಮ್ಮ ರೈತರ ಶ್ರಮಕ್ಕೆ ಅಗೌರವ ತೋರಿಸಿದಂತೆ ಆಗುತ್ತದೆ. ಹಿಂದೆ ಆಗಿದ್ದು ಆಗಿ ಹೋಯಿತು. ಕನಿಷ್ಠ ಈಗಲಾದರೂ ನಾವೆಲ್ಲರೂ ಜಾಗೃತರಾಗಿ ಈ ನಿಟ್ಟಿನಲ್ಲಿ ನಮ್ಮ ನಮ್ಮ ನೆಲೆಯಲ್ಲಿ – ವೈಯಕ್ತಿಕ ಆಸಕ್ತಿಯಿಂದ ಸಾಧ್ಯವಾದಷ್ಟು ಆಹಾರ ವ್ಯರ್ಥವಾಗುವುದನ್ನು ತಡೆಯಲು ಪ್ರಯತ್ನಿಸಬೇಕು. ಇದು ಅತ್ಯಂತ ಸರಳ ಮತ್ತು ಆತ್ಮ ತೃಪ್ತಿಯ ಕೆಲಸ.

ಸಮಾಜದ ದಿವ್ಯ ನಿರ್ಲಕ್ಷ್ಯ…

ಭತ್ತ ಬೆಳೆಯುವ ರೈತರಿಗಿಂತ ಅಕ್ಕಿ ಮಾರುವ, ಅನ್ನ ಮಾರುವ ವ್ಯಾಪಾರಿಗಳು ಹೆಚ್ಚು ಹಣಕಾಸಿನ ಲಾಭ ಮತ್ತು ಸಾಮಾಜಿಕ ಗೌರವ ಪಡೆಯುವ ಕಾಲಘಟ್ಟದಲ್ಲಿ, ಅತಿಯಾದ ಮಳೆ, ಬಹಳಷ್ಟು ಬೆಳೆಗಳ ನಾಶ ಒಂದು ಕಡೆ, ಮೀಸಲಾತಿ ಹೋರಾಟಗಳು, ಟಿಪ್ಪು ಸುಲ್ತಾನ್ – ಒಡೆಯರ್ ಹೆಸರುಗಳ ಕೆಸರೆರಚಾಟ, ಜನಸಂಖ್ಯೆಯ ನಿಯಂತ್ರಣ ಚರ್ಚೆ, ಭಾರತ್ ಜೋಡೋ ಪಾದಯಾತ್ರೆ ಹೀಗೆ ನಿರಂತರ ಸಂಘರ್ಷಮಯ ರಾಜಕೀಯ ವಾತಾವರಣದಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಬಹುಮುಖ್ಯವಾದ ಆಹಾರದ ಸದುಪಯೋಗದ ಬಗ್ಗೆ ಸಮಾಜ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ!

ಧರ್ಮಗಳ ಆಧ್ಯಾತ್ಮಿಕ ಗುರುಗಳು ವಕ್ಫ್ ಆಸ್ತಿ ಬೆಳೆಸುವಲ್ಲಿ, ಚರ್ಚ್‌ಗಳನ್ನು ನಿರ್ಮಿಸುವ, ಶಿವ – ನಾಗ ಪ್ರತಿಮೆಗಳನ್ನು ಸ್ಥಾಪಿಸುವಲ್ಲಿ ನಿರತರಾಗಿದ್ದಾರೆ. ಆಹಾರವನ್ನು ಮರೆತಿದ್ದಾರೆ. ಕೃಷಿಯನ್ನು, ರೈತರನ್ನು ನಿರ್ಲಕ್ಷಿಸಿದ್ದಾರೆ. ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಗಳಲ್ಲಿ ಮೈ ಮರೆತಿದ್ದಾರೆ…..

ಯುವ ಪೀಳಿಗೆಗೆ ಆಹಾರದ ಮಹತ್ವವೇ ಅರ್ಥವಾಗುತ್ತಿಲ್ಲ. ಸ್ವಿಗ್ಗಿ, ಜೊಮೇಟೋಗಳೆಂಬ ಮೊಬೈಲ್ ಕಂಪ್ಯೂಟರ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಪೇಟಿಎಮ್, ಫೋನ್‌ ಪೇ, ಗೂಗಲ್ ಪೇ ಮುಂತಾದ ಬ್ಯಾಂಕಿಂಗ್ ತಂತ್ರಜ್ಞಾನದ ಮುಖಾಂತರ ಹಣ ವರ್ಗಾಯಿಸಿ ಮನೆಯ ಬಾಗಿಲಿಗೆ ಇಷ್ಟಪಟ್ಟ ಊಟ ತಿಂಡಿಗಳನ್ನು ಸುಲಭವಾಗಿ ತರಿಸಿಕೊಂಡು ತಿಂದು ಆಹಾರದ ಪಾವಿತ್ರ್ಯವನ್ನೇ ಅವರು ಮರೆತಿದ್ದಾರೆ. ಅದರ ಉತ್ಪಾದನೆ, ಹಂಚಿಕೆ, ಸಂಗ್ರಹ, ಭವಿಷ್ಯದ ಬಗ್ಗೆ ಅವರಿಗೆ ಕನಿಷ್ಠ ತಿಳಿವಳಿಕೆಯೇ ಇಲ್ಲ. ಆಡಳಿತ ವ್ಯವಸ್ಥೆ, ಮಾಧ್ಯಮಗಳು, ಅದಕ್ಕೆ ಸಂಬಂಧಿಸಿದ ಇತರರು ತುಂಬಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.

ಬಹಳ ಮುಖ್ಯ ವಿಷಯವೊಂದನ್ನು ಇಲ್ಲಿ ಗಮನಿಸಬೇಕು. ಆಹಾರ ಒಂದು ರಾಷ್ಟ್ರೀಯ ಸಂಪನ್ಮೂಲ. ಒಮ್ಮೆ ಅ ಸಂಪನ್ಮೂಲದ (ಆಹಾರದ) ಕೊರತೆ ಉಂಟಾದರೆ ಇಡೀ ದೇಶದಲ್ಲೇ ಹಾಹಾಕಾರ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ ನಾವುಗಳು ಒಂದು ಎಚ್ಚರಿಕೆಯನ್ನಾದರೂ ವಹಿಸಬೇಕು. ಅದಕ್ಕಾಗಿ ವಿಶ್ವ ಆಹಾರ ದಿನಾಚರಣೆ.

ವಿವೇಕಾನಂದ ಎಚ್.ಕೆ
(ಲೋಕ ಹಿತದ ಪರ ಸದಾಶಯಗಳಿಂದ ಕೂಡಿದ ಸರಣಿ ಬರೆಹಗಳ ಮೂಲಕ ಮತ್ತು ಪಾದಯಾತ್ರೆಯ ಮೂಲಕ ನಾಡಿನಾದ್ಯಂತ ಪರಿಚಿತರು.)