forest department – Peepal Media

ಸಕಲೇಶಪುರ : ಅಕ್ರಮ ಮರ ಸಾಗಾಟ ಪತ್ತೆ ಅರಣ್ಯ ಇಲಾಖೆಯ ದಾಳಿ
ಸಕಲೇಶಪುರ: ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ವಿವಿಧ ಜಾತಿಯ ಮರಗಳನ್ನು ವಶಪಡಿಸಿಕೊಂಡಿದ್ದಾರೆ.

ಹಾಸನದ ಕಡೆಯಿಂದ ಮಂಗಳೂರು ಕಡೆಗೆ ಎರಡು ಗೂಡ್ಸ್ ವಾಹನಗಳಲ್ಲಿ ತರಕಾರಿ ಸಾಗಾಟ ಮಾಡುವಂತೆ ಟಾರ್ಪಲ್ ಕಟ್ಟಿಕೊಂಡು ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಸುಮಾರು 7 ಟನ್ ಮರಗಳು, ಎರಡು ವಾಹನಗಳು ಹಾಗೂ ಇಬ್ಬರು ಚಾಲಕರನ್ನು ವಶಕ್ಕೆ ಪಡೆದಿದ್ದಾರೆ.

ಆರ್‌ಎಫ್‌ಓ ಹೇಮಂತ್‌ಕುಮಾರ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಕಳೆದ ಒಂದು ವಾರದಲ್ಲಿ ಒಟ್ಟು ಐದು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ಅಕ್ರಮ ಮರ ಸಾಗಾಟ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗಸ್ತು ಬಿಗಿಗೊಳಿಸಿದೆ.

ಕಾಡಾನೆಗೆ ರೆಡಿಯೋ ಕಾಲ‌ರ್ ಅಳವಡಿಕೆ ಕಾರ್ಯಾಚರಣೆ ಯಶಸ್ವಿ; ಓಲ್ಡ್ ಬೆಲ್ಟ್ ಓಡಾಟಕ್ಕೆ ರೇಡಿಯೋ ಕಾಲರ್
ಬೇಲೂರು :ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯ ಎರಡನೇ ದಿನವಾದ ಶನಿವಾರ ಅರಣ್ಯ ಇಲಾಖೆ ಶ್ರಮಕ್ಕೆ ಫಲ ದೊರಕಿದೆ.ಬೇಲೂರು ತಾಲ್ಲೂಕಿನ ಬಿಕ್ಕೋಡು ಗ್ರಾಮದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಓಲ್ಡ್ ಬೆಲ್ಟ್ ಗುಂಪಿನ ಹೆಣ್ಣಾನೆಗೆ ರೆಡಿಯೋ ಕಾಲ‌ರ್ ಅಳವಡಿಸಲಾಯಿತು. ಕಾಫಿ ಎಸ್ಟೇಟ್‌ನಲ್ಲಿದ್ದ ಹೆಣ್ಣಾನೆಗೆ ತಜ್ಞರು ಅರವಳಿಕೆ ಚುಚ್ಚುಮದ್ದು ನೀಡಿದರು. ಇದರಿಂದಾಗಿ ಬೆದರಿದ ಆನೆ ಸ್ವಲ್ಪ ದೂರ ಓಡಿ ಹೋಗಿ ನಿಂತಿತು. ಆ ಹೆಣ್ಣಾನೆ ಪಕ್ಕ ಸಾಕಾನೆಗಳನ್ನು ನಿಲ್ಲಿಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿದರು. ರೆಡಿಯೋ ಕಾಲರ್ ಅಳವಡಿಸಿದ ಆನೆಯ ಆರೋಗ್ಯದ ಮೇಲೆ ಕೆಲಹೊತ್ತು ನಿಗಾವಹಿಸಿದ ನಂತರ ಕಾಫಿ ಎಸ್ಟೇಟ್‌ನಲ್ಲೇ ಬಿಡಲಾಯಿತು.ಸಾಕಾನೆ ಭೀಮನ ನೇತೃತ್ವದಲ್ಲಿ ನಡೆದ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್, ಈಶ್ವರ ಸಾಕಾನೆಗಳು ಭಾಗಿಯಾಗಿದ್ದವು.

ಇಬ್ಬರನ್ನು ಬಲಿ ತೆಗೆದುಕೊಂಡ ಆನೆಯನ್ನು ಸೆರೆ ಹಿಡಿಯಲು ʼಆಪರೇಷನ್‌ ಭುವನೇಶ್ವರಿʼ ಆರಂಭಿಸಿದ ಅರಣ್ಯ ಇಲಾಖೆ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಯೊಂದು ಮಹಿಳೆಯನ್ನು ತುಳಿದು ಕೊಂದು ಹಾಕಿದ ಘಟನೆ ನಡೆದ ಒಂದು ದಿನದ ನಂತರ ಅರಣ್ಯಾಧಿಕಾರಿಗಳು ಕೊಲೆಗಾರ ಆನೆಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಕ್ರೆಬೈಲು ಶಿಬಿರದಿಂದ ಮೂರು ಹಾಗೂ ದುಬಾರೆ ಶಿಬಿರದಿಂದ ನಾಲ್ಕು ತರಬೇತಿ ಪಡೆದ ಆನೆಗಳನ್ನು ಈ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತದೆ.

ನಿನ್ನೆ, ಬುಧವಾರದಂದು, 32 ವರ್ಷದ ಮೀನಾ ಎಂಬ ಮಹಿಳೆ ಇತರ ಕಾರ್ಮಿಕರೊಂದಿಗೆ ಗಾಳಿದುಂಡಿ ಗ್ರಾಮದ ತನ್ನ ಜಮೀನಿನಲ್ಲಿ ಮಾಡುತ್ತಿದ್ದ ಸಮಯದಲ್ಲಿ ಆನೆಯೊಂದು ಆಕೆಯನ್ನು ತುಳಿದು ಕೊಂದಿದೆ. ಗ್ರಾಮಸ್ಥರ ಪ್ರಕಾರ ಆನೆ ಹಠಾತ್ತಾಗಿ ಕಾಣಿಸಿಕೊಂಡು ಪ್ರತಿರೋಧಿಸಲು ಸಮಯವೇ ಸಿಗದಂತೆ ದಾಳಿ ಮಾಡಿದ್ದು, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳೀಯರು ಶಾಸಕಿ ನಯನಾ ಮೋಟಮ್ಮ ಅವರನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು. ಮೃತ ಮಹಿಳೆಯ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ 15 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಈ ಆನೆಗೆ ಇಬ್ಬರು ಬಲಿಯಾಗಿದ್ದಾರೆ. ಸೆಪ್ಟೆಂಬರ್‌ನಲ್ಲಿ ದುರ್ಗ ಗ್ರಾಮದಲ್ಲಿ ಆನೆ ದಾಳಿಯಿಂದ ಮತ್ತೊಬ್ಬ ರೈತ ಸಾವನ್ನಪ್ಪಿದ್ದರು.

ಮೂರು ತಿಂಗಳ ಹಿಂದೆ ಸಕಲೇಶಪುರದಿಂದ ಐದು ಆನೆಗಳ ಹಿಂಡು ಚಿಕ್ಕಮಗಳೂರಿನ ಹೊಲಗಳ ಬಳಿ ಕಾಣಿಸಿಕೊಂಡಿತ್ತು. ಐದು ಆನೆಗಳಲ್ಲಿ ಮೂರು ಮರಿಯಾನೆಗಳಾಗಿದ್ದವು ಮತ್ತು ಅವುಗಳಲ್ಲಿ ಭುವನೇಶ್ವರಿ ಎಂಬ ಆನೆ ರೇಡಿಯೋ ಕಾಲರ್ ಹೊಂದಿದೆ.

ನಂತರ ಈ ಹಿಂಡಿಗೆ ಮತ್ತೆರಡು ಆನೆಗಳು ಸೇರಿಕೊಂಡು ಒಟ್ಟು ಏಳು ಆನೆಗಳ ಗುಂಪಾಗಿದ್ದವು. ಅವುಗಳಲ್ಲಿ ಗುಂಪಿನಿಂದ ಬೇರ್ಪಟ್ಟ ಆನೆಗಳ ಪೈಕಿ ಒಂದು ಆನೆ ಬೆಳೆಗಳನ್ನು ನಾಶಪಡಿಸುತ್ತಿದ್ದು, ಇಬ್ಬರನ್ನು ಕೊಂದು ಹಾಕಿದೆ ಎನ್ನಲಾಗಿದೆ.

ಎರಡು ಸಾವು ಹಾಗೂ ಸ್ಥಳೀಯರ ಪ್ರತಿಭಟನೆ ಬಳಿಕ ಸಿಎಂ ಆದೇಶದ ಮೇರೆಗೆ ಅರಣ್ಯ ಇಲಾಖೆ ಆನೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸಕ್ರೆಬೈಲು ಶಿಬಿರದಿಂದ ಮೂರು ಆನೆಗಳನ್ನು ಕರೆತಂದಿದ್ದು, ಮಡಿಕೇರಿಯ ದುಬಾರೆ ಶಿಬಿರದಿಂದ ನಾಲ್ಕು ಆನೆಗಳನ್ನು ಜಂಬೂ ಹಿಡಿಯಲು ಬಳಸಿಕೊಳ್ಳುವ ನಿರೀಕ್ಷೆಯಿದೆ. ಪಶುವೈದ್ಯಕೀಯ ವೈದ್ಯರು ಮತ್ತು ಟ್ರ್ಯಾಂಕ್ವಿಲೈಸರ್ ತಜ್ಞರನ್ನು ಸಹ ಈ ಕಾರ್ಯಾಚರಣೆಗೆಂದು ನಿಯೋಜಿಸಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಅರಣ್ಯ ಇಲಾಖೆ ಕೊಟ್ಟ ಮಾಹಿತಿಯಲ್ಲಿ ಏನೇನಿದೆ? ಈ ಸ್ಟೋರಿ ಓದಿ
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿಯುಗುರಿನ ಪ್ರಕರಣದ ನಂತರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಎಲ್ಲೆಡೆ ಜೀವ ಪಡೆದುಕೊಂಡಿದೆ. ಸಧ್ಯ ಇದನ್ನೇ ಆಧಾರವಾಗಿಟ್ಟುಕೊಂಡು ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.

ಪ್ರಕಟಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಕಾಯ್ದೆಯಂತೆ ವನ್ಯಜೀವಿಗಳನ್ನು ಬೇಟೆ ಆಡುವುದು, ಸ್ವಾಧೀನ ಪಡಿಸಿಕೊಳ್ಳುವುದು, ವನ್ಯಜೀವಿಗಳ ಅಂಗಾಂಗಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳೋದು, ಅವುಗಳ ಖರೀದಿಸುವುದು, ಸಾಗಾಣೆ ಮಾಡುವುದು ಅಲ್ಲದೇ ಮಾಂಸ ಮಾರಾಟ, ಭಕ್ಷಣೆ ಕೂಡ ಅಪರಾಧವೆಂದು ತಿಳಿಸಿದೆ.

ಇದಷ್ಟೇ ಅಲ್ಲದೇ ವನ್ಯಜೀವಿಗಳ ವಸ್ತುಗಳಾದಂತ ಕೊಂಬು, ಚರ್ಮ, ಟ್ರೋಫಿಗಳು, ಹಲ್ಲು, ಗೊರಸು ಅಥವಾ ಇವುಗಳಿಂದ ತಯಾರಾದಂತ ಆಲಂಕಾರಿಕ ವಸ್ತುಗಳ ವ್ಯಾಪಾರ, ಉಡುಗೋರೆ ನೀಡೋದು, ಪಡೆಯೋದು, ಖರೀದಿಸೋದು, ಸಾಗಾಟ ಮಾಡೋದು, ಇನ್ನೊಬ್ಬರಿಗೆ ವರ್ಗಾಯಿಸೋದು ಕೂಡ ಅಪರಾಧ. ಹೀಗೆ ಮಾಡದಂತೆ ಎಚ್ಚರಿಕೆಯನ್ನು ರಾಜ್ಯ ಅರಣ್ಯ ಇಲಾಖೆ ನೀಡಿದೆ.

ಕಾಯ್ದೆಯ ನಿಯಮದಂತೆ ಕಾಯ್ದೆ ಜಾರಿಗೂ ಹಿಂದಿನಿಂದ ವನ್ಯಜೀವಿಗಳಿಗೆ ಸಂಬಂಧಿಸಿದ ಮೇಲೆ ಸೂಚಿಸಿದ ವಸ್ತುಗಳು ಕಂಡುಬಂದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾದೀತು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಈ ಎಲ್ಲಾ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡಿದ್ದರೂ, ಮುಂದಿನ ಸಚಿವ ಸಂಪುಟ ಸಭೆಯ ವೇಳೆಯಲ್ಲಿ 2-3 ತಿಂಗಳ ಒಳಗಾಗಿ ಸರ್ಕಾರಕ್ಕೆ ಹಿಂದಿರುಗಿಸುವುದಕ್ಕೆ ಅವಕಾಶವನ್ನು ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಅಂತ ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಹಿಂದೆ ತಿಳಿಸಿದ್ದರು.

ಇದಷ್ಟೇ ಅಲ್ಲದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ವನ್ಯಜೀವಿ ವಸ್ತುಗಳನ್ನು ಇಟ್ಟುಕೊಂಡರೆ ಅಂತವರಿಗೆ ಸುಮಾರು 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಶಿಕ್ಷೆಯ ಜೊತೆಗೆ 1 ಲಕ್ಷದವರೆಗೂ ದಂಡವನ್ನು ಕೂಡ ವಿಧಿಸಬಹುದಾಗಿದೆ. ಜನರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ.

120 ದಿನಗಳಲ್ಲಿ 5,000 ಎಕರೆ ಭೂಪ್ರದೇಶ ಮೀಸಲು ಅರಣ್ಯಕ್ಕೆ ; ಮಲೆನಾಡಿಗರಿಗೆ ಶಾಪವಾದ ಒತ್ತುವರಿ ತೆರವು ಕಾರ್ಯಾಚರಣೆ
ಅರಣ್ಯ ಪ್ರದೇಶವನ್ನೇ ಕಾಣದ ಶಾಸಕರನ್ನು ಅರಣ್ಯ ಸಚಿವರನ್ನಾಗಿ ಮಾಡಿದರೆ ಏನೆಲ್ಲಾ ಯಡವಟ್ಟುಗಳನ್ನು ರಾಜ್ಯದ ಜನ ಕಾಣಬಹುದೋ ಅದೆಲ್ಲವನ್ನೂ ಈಗ ರಾಜ್ಯದ ಜನ ಕಾಣುವಂತಾಗಿದೆ. ಯಾವುದು ಇಲ್ಲಿನ ಜನರ ಹಿತವನ್ನು ಬಲಿ ಕೊಡುವಂತಹ ವಿಚಾರವೋ, ಅದನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೆಮ್ಮೆಯ ಸಂಗತಿ ಎಂಬಂತೆ ಹೇಳಿಕೊಂಡಿದ್ದಾರೆ‌.

ಸಧ್ಯ ಹೊಸ ಸರ್ಕಾರ ರಚನೆ ಆದ ದಿನದಿಂದ ಬೇರೆಲ್ಲಾ ಇಲಾಖೆಗಳಿಗಿಂತ ಅರಣ್ಯ ಇಲಾಖೆ ಮಾತ್ರ ಸ್ಪಷ್ಟವಾಗಿ ರಾಜ್ಯದ ಜನರ ಹಿತವನ್ನು ಬಲಿ ಕೊಡಲು ಸಕಲ ಸಿದ್ಧತೆ ನಡೆಸಿದೆ ಎಂದು ವಿಶೇಷವಾಗಿ ಮಲೆನಾಡಿನ ರೈತರು ಆಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಮಲೆನಾಡು, ಮಲೆನಾಡು ಭಾಗದ ರೈತರು, ಇಲ್ಲಿನ ಜನ ಜೀವನದ ಬಗ್ಗೆ ಅರಿವೇ ಇರದ ವ್ಯಕ್ತಿ ಅರಣ್ಯ ಸಚಿವರಾದರೆ ಏನೆಲ್ಲಾ ಯಡವಟ್ಟುಗಳನ್ನು ಎದುರಿಸಬಹುದೋ ಅದನ್ನೇ ಮಲೆನಾಡು ಭಾಗದ ಜನ ಎದುರಿಸುತ್ತಿದ್ದಾರೆ ಎಂದು ಮಲೆನಾಡಿನ ಮಂದಿ ಹಿಡಿಶಾಪ ಹಾಕುತ್ತಿದ್ದಾರೆ.

ಕರ್ನಾಟಕದಲ್ಲಿ ರಾಜ್ಯದಲ್ಲಿ ಸದ್ಯ ಇರುವ ಅರಣ್ಯ ಪ್ರದೇಶಕ್ಕೆ ಹೊಸ ಪ್ರದೇಶಗಳ ಸೇರ್ಪಡೆ ಮಾಡಲಾಗಿದೆ. ರಾಜ್ಯಾದ್ಯಂತ ಬರೋಬ್ಬರಿ 5,729 ಎಕರೆ ಭೂ ಪ್ರದೇಶವನ್ನು ಮೀಸಲು ಅರಣ್ಯವನ್ನಾಗಿ ಪರಿವರ್ತನೆ ಮಾಡಲಾಗಿದೆ. ಅದೂ ಕೂಡಾ ಕೇವಲ 120 ದಿನಗಳ ಅವಧಿಯಲ್ಲಿ ಈ ತೀರ್ಮಾನ ಮಾಡಲಾಗಿದೆ.

ಯಾವುದೇ ಹೊಸ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಸಚಿವಾಲಯ ಮಟ್ಟದಲ್ಲಿ ಕೈಗೊಂಡ ಹೊಸ ಬಗೆಯ ತೀರ್ಮಾನ ಇದು ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ತಮ್ಮ ಅನುಭವದ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ನಿರ್ಧಾರಗಳನ್ನು ನೋಡುತ್ತಿದ್ದೇವೆ ಎಂದು ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮೇಲ್ನೋಟಕ್ಕೆ ಇದೊಂದು ದಿಟ್ಟ ನಿರ್ಧಾರ ಎಂದು ಕಂಡುಬಂದರೆ, ಮಲೆನಾಡು ಭಾಗದ ರೈತರ ಹಿತದೃಷ್ಟಿಯಿಂದ ಯೋಚಿಸಿದರೆ, ಇದೊಂದು ಈ ಭಾಗದ ರೈತರ ಬದುಕಿಗೆ ಕೊಳ್ಳಿ ಇಡುವ ನಿರ್ಧಾರ ಎಂದೇ ಹೇಳಬಹುದು. ಅಷ್ಟರ ಮಟ್ಟಿಗೆ ಮಲೆನಾಡಿಗರು ಅರಣ್ಯ ಪ್ರದೇಶಕ್ಕೆ ಅವಲಂಬಿತರಾಗಿದ್ದಾರೆ. ಅಷ್ಟೆ ಅಲ್ಲದೆ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಬಗರ್ ಹುಕುಂ ಸಾಗುವಳಿ ಕೂಡಾ ಅರಣ್ಯ ಪ್ರದೇಶದಲ್ಲೇ ಮಲೆನಾಡಿನ ರೈತರು ಕೃಷಿ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ.

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಮಲೆನಾಡಿನ ಪ್ರಮುಖ ಪ್ರದೇಶಗಳು ಇಂತಹ ಬಗರ್ ಹುಕುಂ ಜಮೀನಿನಲ್ಲಿ ಒಳಪಡುವಂತಿವೆ. ಬಹುತೇಕ ಮಲೆನಾಡಿಗರು ಇದೇ ಜಮೀನುಗಳನ್ನು ನಂಬಿಕೊಂಡು ಬಂದಿದ್ದಾರೆ. ಬಯಲುನಾಡು ಹಾಗೂ ಉತ್ತರ ಕರ್ನಾಟಕ ಪ್ರದೇಶಗಳು ಇಂತಹ ಬಗರ್ ಹುಕುಂ ಜಾಗಗಳನ್ನು ಹೆಚ್ಚಾಗಿ ಒಳಪಟ್ಟಿಲ್ಲ. ಇದೇ ಕಾರಣಕ್ಕೆ ಅರಣ್ಯ ಇಲಾಖೆ ಮಲೆನಾಡಿನ ಜಮೀನನ್ನು ಬಯಲುನಾಡಿಗೆ ಹೋಲಿಸಿ ಜಾಗಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

“ಈಶ್ವರ ಖಂಡ್ರೆ ಎನ್ನುವ ಅರಣ್ಯ ಮಂತ್ರಿ 120 ದಿನದಲ್ಲಿ 5,000 ಕ್ಕೂ ಹೆಚ್ಚು ಎಕರೆ ಕಾಡನ್ನು ಮೀಸಲು ಅರಣ್ಯ ಮಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು, NGO ಪರಿಸರವಾದಿಗಳು ಮತ್ತು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಎಲ್ಲೆಡೆ ಡಂಗೂರ ಬಾರಿಸುತ್ತಿದ್ದಾರೆ. 120 ದಿನದಲ್ಲಿ 5,000 ಸಾವಿರ ಎಕರೆ ಕಾಡು ಬೆಳೆಸಿಲ್ಲ. ಇರುವ ಕಾಡನ್ನೇ ಮೀಸಲು ಎಂದು ಸಹಿ ಹಾಕಿದ್ದಾರೆ. ಈ ಸಹಿ ಹಾಕಲು 120 ದಿನ ಏಕೆ, ಬರೀ 120 ಸೆಕೆಂಡ್ ಸಾಕು. ಇಂತಹ ವಿವೇಚನರಹಿತ ನಿರ್ಧಾರಗಳಿಂದ ಕಾಡಿನಲ್ಲೇ ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ ಮತ್ತು ಬೇಸಾಯ ಮಾಡುತ್ತಿರುವ ಬಡ ಜನ ಬೀದಿ ಪಾಲಾಗುತ್ತಾರೆ. ಬೀದರ್ ನ ಖಂಡ್ರೆಗೆ ಮಲೆನಾಡಿನ ಜನ ಜೀವನ, ಸಮಸ್ಯೆಗಳ ಬಗ್ಗೆ ಏನು ಗೊತ್ತು? ಅವರು ಅಧಿಕಾರಿಗಳು ಕೊಟ್ಟ ಫೈಲ್ ಗೆ ಸಹಿ ಹಾಕಿದ್ದಾರೆ. ಇಂತಹ ನಿರ್ಧಾರಗಳಿಂದ NGO ಪರಿಸರವಾದಿಗಳಿಗೆ ಲಾಭ ಇದೆ. ಅದಕ್ಕೇ ಈ ಸಂಭ್ರಮ. ಮಲೆನಾಡಿನ ಶಾಸಕರನ್ನೇ ಕಾಡಿನ ಮಂತ್ರಿ ಮಾಡಬೇಕು. ಇಲ್ಲದಿದ್ದಲ್ಲಿ ಅವರ ಗತಿ ಶೋಚನೀಯ.” ಎಂದು ಹಿರಿಯ ಪತ್ರಕರ್ತ ಡಿ.ಪಿ.ಸತೀಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4 ರ ಅಡಿ ಯಾವುದೇ ಭೂ ಪ್ರದೇಶವನ್ನು ಮೀಸಲು ಅರಣ್ಯ ಎಂದು ಸರ್ಕಾರ ಘೋಷಿಸಬಹುದಾಗಿದೆ. ಆದರೆ, ಕಾಯ್ದೆಯ ಪ್ರಕಾರ ಈ ಪ್ರಸ್ತಾವನೆ ಹಲವು ಹಂತಗಳನ್ನು ದಾಟಿ ಬರಬೇಕಿದೆ. ಯಾವುದೇ ಭೂ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸುವ ಮುನ್ನ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಆ ಭೂಮಿಯ ಮೇಲೆ ಯಾರಿಗಾದರೂ ಹಕ್ಕು ಇದೆಯೇ ಎಂದು ನೋಡಬೇಕು. ಈ ಸಂಬಂಧ ಅಧಿಸುಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ರವಾನಿಸಬೇಕಿದೆ. ಈ ರೀತಿಯ ಹಲವು ಕಾನೂನು ಪ್ರಕ್ರಿಯೆಗಳನ್ನು ಸರ್ಕಾರ ಅನುಸರಿಸಿದರೆ ಮಾತ್ರ ಅದೊಂದು ಕಾನೂನಾತ್ಮಕ ಪ್ರಕ್ರಿಯೆ ಅನ್ನಿಸಿಕೊಳ್ಳುತ್ತದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

ಆದರೆ ಈ ಬಾರಿ ಯಾವುದೇ ತಕರಾರು ಅರ್ಜಿಗಳನ್ನೂ ಸ್ವೀಕರಿಸದೇ ಅರಣ್ಯ ಇಲಾಖೆ ಏಕಾಏಕಿ ಅರಣ್ಯ ಪ್ರದೇಶಕ್ಕೆ ಕೃಷಿ ಜಮೀನುಗಳನ್ನು ವಶಪಡಿಸಿಕೊಂಡಿದೆ. ಸರ್ಕಾರದ ಅಂಕಿ ಅಂಶಗಳ ಆಧಾರದಲ್ಲಿ ಹೇಳುವುದಾದರೆ, 2023ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಅರಣ್ಯ ಇಲಾಖೆಯು 29 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. 2008 ರಿಂದ 2023ರ ಅವಧಿಯಲ್ಲಿ ಅರಣ್ಯೇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಲಾಗಿದ್ದ ಭೂಮಿಯ ಪೈಕಿ ಶೇ. 40ರಷ್ಟು ಭೂ ಪ್ರದೇಶವನ್ನು ಮತ್ತೆ ಮೀಸಲು ಅರಣ್ಯ ಪ್ರದೇಶವನ್ನಾಗಿ ಹೆಸರಿಸಲು ಸರ್ಕಾರ ಸಮ್ಮತಿಸಿದೆ. ಈ ಮೂಲದ ರಾಜ್ಯದ ಒಟ್ಟು ಅರಣ್ಯ ಪ್ರದೇಶದ ವ್ಯಾಪ್ತಿಗೆ 5 ಸಾವಿರ ಎಕರೆಗೂ ಹೆಚ್ಚು ಹೊಸ ಪ್ರದೇಶ ಸೇರ್ಪಡೆ ಆಗುವಂತಾಗಿದೆ.

ಸರ್ಕಾರದ ಯಾವುದೇ ಇಲಾಖೆ ಕೆಲವೊಂದು ಕ್ರಾಂತಿಕಾರಿ ನಿಲುವು ತಗೆದುಕೊಳ್ಳುವುದಕ್ಕಿಂತ ಮುನ್ನ, ಸ್ಥಳೀಯ ಜನರ ಜೀವನ ವಿಧಾನ, ಅವರ ಅವಲಂಬನೆಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಹಲವಷ್ಟು ಬಾರಿ ಸರ್ಕಾರ ತಗೆದುಕೊಳ್ಳುವ ನಿರ್ಧಾರಗಳು ಸ್ಥಳೀಯ ಮಟ್ಟದಲ್ಲಿ ಜನರ ಜೀವನ ಬೀದಿಗೆ ಬರುವಂತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ರೀತಿ ಮುಂದುವರಿದರೆ, ಸಧ್ಯ ಅರಣ್ಯ ಇಲಾಖೆ ಮತ್ತು ಅರಣ್ಯ ಸಚಿವರು ತಗೆದುಕೊಂಡಿರುವ ನಿರ್ಧಾರ ಸಹ ಇಂತದ್ದೇ ಹಲವು ಯಡವಟ್ಟುಗಳನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.

ಸೋಲಾರ್‌ ಬೇಲಿ ಮುರಿದು ಕಾಫಿ ತೋಟಕ್ಕೆ ನುಗ್ಗಿದ ಕಾಡಾನೆ ತಣ್ಣೀರ್!‌
ಹಾಸನ,ಸಪ್ಟೆಂಬರ್.‌15 : ಹಾಸನ ಸೇರಿದಂತೆ ಮಲೆನಾಡಿನ ಪ್ರದೇಶಗಳಲ್ಲಿ ಕಾಡನೆಗಳ ಹಾವಳಿ ಹೆಚ್ಚಾಗಿದ್ದು ಅನೇಕ ಪ್ರಮಾಣದ ಬೆಳೆ ಹಾನಿ ಮಾತ್ರವಲ್ಲ ಸಾವು ನೋವು ಸಂಭವಿಸಿದೆ.

ಸಕಲೇಶಪುರ ತಾಲ್ಲೂಕಿನ ಹಳೇಬಾಗೆಯ ದಿವಾನ್‌ ಎಸ್ಟೇಟ್‌ನಲ್ಲಿ ಕಾಡಾನೆಯೊಂದು ಸೋಲಾರ್‌ ಬೇಲಿಯನ್ನು ಮುರಿದು ಕಾಫಿ ತೋಟಕ್ಕೆ ನುಗ್ಗಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಆರು ತಿಂಗಳಿಂದ ನಾಪತ್ತೆಯಾಗಿದ್ದ ತಣ್ಣೀರ್‌ ಎಂಬ ಕಾಡಾನೆ ಕೊಡಗು ಭಾಗದಿಂದ ಸಕಲೇಶಪುರ ಬಂದಿದೆ. ಅಲ್ಲದೇ, ದಿವಾನ್‌ ಎಸ್ಟೇಟ್‌ನ ಕಾಫಿ ತೋಟದ ಬೇಲಿಗಳನ್ನು ಚಾಣಾಕ್ಷತನದಿಂದ ಮುರಿದು ತೋಟಕ್ಕೆ ನುಗ್ಗಿದೆ.

ವಿಡಿಯೋ ನೋಡಿ: https://www.instagram.com/reel/CxNiicwPPHk/?utm_source=ig_web_copy_link&igshid=MzRlODBiNWFlZA==

ವಿದೇಶಗಳಲ್ಲಿ ನಿಷೇಧಕ್ಕೊಳಗಾದ ಕಳೆನಾಶಕ ನಮ್ಮಲ್ಲಿ ಯಾಕೆ? DRFO ಸಾವಿನ ನಂತರವಾದರೂ ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?
ಕಳೆದ ವಾರ ದಾಂಡೇಲಿ ತಾಲ್ಲೂಕಿನ ಕುಳಗಿ ವಲಯ ಅರಣ್ಯ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಯೋಗೇಶ್ ನಾಯ್ಕ ಅವರ ಅನಿರೀಕ್ಷಿತ ಮತ್ತು ಆಘಾತಕಾರಿ ಸಾವು ಎಲ್ಲರನ್ನೂ ಕಂಗೆಡಿಸಿತ್ತು. ಅರಣ್ಯ ಇಲಾಖೆ ಮಾತ್ರವಲ್ಲದೆ, ಸ್ಥಳೀಯ ಸಾರ್ವಜನಿಕ ಮಟ್ಟದಲ್ಲೂ ಒಳ್ಳೆಯ ಹೆಸರು ಉಳಿಸಿಕೊಂಡಿದ್ದ ಯೋಗೇಶ್ ನಾಯ್ಕ ಸ್ನೇಹಪರ ವ್ಯಕ್ತಿ ಎಂದೇ ಎಲ್ಲರ ಕಡೆಯಲ್ಲೂ ಹೆಸರು ಪಡೆದವರಾಗಿದ್ದರು. ಸಧ್ಯ ಇವರ ಅಗಲಿಕೆ ಯೋಗೇಶ್ ಅವರ ಕುಟುಂಬ ಮಾತ್ರವಲ್ಲದೆ ಅರಣ್ಯ ಇಲಾಖೆ, ಸುತ್ತಮುತ್ತಲಿನ ಜನರಲ್ಲೂ ಗಾಢ ಮೌನ ಎದುರಾಗಿದೆ.

ಎರಡು ವಾರಗಳ ಹಿಂದೆ ಕುಳಗಿ ಶಾಖೆಯಲ್ಲಿ ಅತ್ಯಂತ ವಿಷಕಾರಿ ಕಳೆನಾಶಕ ಸಿಂಪಡನೆ ಮಾಡಲು ಹೋಗಿ ಆನಂತರ ಸರಿಯಾಗಿ ಕೈ ತೊಳೆಯದೇ, ನೀರು ಆಹಾರ ಸೇವಿಸಿದ ಪರಿಣಾಮ ಯೋಗೇಶ್ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ದಾಂಡೇಲಿಯ ಖಾಸಗಿ ಕ್ಲಿನಿಕ್ ಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದರೆ ಆರೋಗ್ಯ ಮತ್ತೆ ಹದಗೆಡಲು ಶುರುವಾಗಿದೆ.

ಆ ನಂತರ ತಾನೇ ತನ್ನ ಕಾರನ್ನು ಚಲಾಯಿ‌ಸಿಕೊಂಡು ತನ್ನ ಪತ್ನಿ ಮತ್ತು ಮಗುವಿನ ಜೊತೆಯಲ್ಲಿ ಧಾರವಾಡದ ಎಸ್.ಜಿ.ಎಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ಎರಡ್ಮೂರು ದಿನಗಳ ಕಾಲ ಚಿಕಿತ್ಸೆ ಪಡೆದರೂ ಅನಾರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ. ನಂತರ ಹುಬ್ಬಳ್ಳಿಯ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿಯೂ ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ದಿನ ಕಳೆದರೂ ಅನಾರೋಗ್ಯ ಉಲ್ಬಣಿಸಿದೆಯೇ ಹೊರತು, ಯಾವುದೇ ಚೇತರಿಕೆ ಕಂಡುಬಂದಿಲ್ಲ.

ಈ ನಡುವೆ ಯೋಗೇಶ್ ನಾಯ್ಕರ ಸಹೋದ್ಯೋಗಿಗಳು ಮತ್ತು ಅರಣ್ಯಾಧಿಕಾರಿಗಳ ತಂಡ ಆಸ್ಪತ್ರೆ ವೈದ್ಯಾಧಿಕಾರಿಗಳನ್ನು ಭೇಟಿ ಮಾಡಿ ಯೋಗೇಶ್ ಅವರ ಚಿಕಿತ್ಸೆಗೆ ಎಷ್ಟು ಖರ್ಚಾದರೂ ಸರಿಯೇ… ನಾವು ಭರಿಸುತ್ತೇವೆ. ಏನಾದರೂ ಮಾಡಿ ಅವರನ್ನು ಉಳಿಸಿಕೊಡಿ ಎಂದು ಕೇಳಿಕೊಂಡಿದ್ದಾರೆ. ಜೊತೆಗೆ ಯೋಗೇಶ್ ಬದುಕಿಸಲು ಸಾಧ್ಯ ಎನ್ನುವುದಾದರೆ ಹೆಲಿಕಾಪ್ಟರ್ ಮೂಲಕವಾದರೂ ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಿ ಅವರಿಗೆ ಚಿಕಿತ್ಸೆ ಕೊಡಿಸುತ್ತೇವೆ ಎಂದು, ಆಸ್ಪತ್ರೆ ಮೇಲೆ ಹೆಲಿಪ್ಯಾಡ್ ಇರುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಆದರೆ ಯೋಗೇಶ್ ನಾಯ್ಕ ಬದುಕುವ ಸಾಧ್ಯತೆ ತೀರಾ ಎಂದರೆ ತೀರಾ ಕಡಿಮೆ ಇದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಯಾಕೆಂದರೆ ಯೋಗೇಶ್ ದೇಹದ ಒಳಗೆ ಹೋದ ಕಳೆನಾಶಕದ ವಿಷ ಅತ್ಯಂತ ಅಪಾಯಕಾರಿಯಾದದ್ದು. ಈಗಾಗಲೇ ಅದು ದೇಹದ ನರನಾಡಿಗೇ ವಿಸ್ತರಿಸಿಯಾಗಿದೆ. ಅದೂ ಅಲ್ಲದೆ ಅವರ ದೇಹದ ಒಳಕ್ಕೆ ಹೋದ Paraquat Dichloride ಗೆ ಇಲ್ಲಿಯವರೆಗೆ Antidote ಔಷಧಿ ಈ ವರೆಗೂ ಬಂದಿಲ್ಲ. ಆ ಕಾರಣಕ್ಕಾಗಿ ಅವರನ್ನು ಉಳಿಸುವ ಸಾಧ್ಯತೆ ಬಗ್ಗೆ ಯಾವುದೇ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅರಣ್ಯ ಇಲಾಖೆ, ಸರ್ಕಾರ, ಅಪಾರ ಪ್ರಮಾಣದ ಹಿತೈಷಿಗಳು ಎಷ್ಟೇ ಜನರು ಎಲ್ಲಾ ರೀತಿಯ ಸಹಕಾರ ನೀಡಿದರೂ ಬದುಕಿಸಲು ಸಾಧ್ಯವೇ ಇಲ್ಲ ಎನ್ನುವುದಾದರೆ ಎಂತಹ ಸಹಾಯವೂ ವ್ಯರ್ಥ ಎನ್ನಿಸಿದೆ. ಪ್ರೀತಿಸಿ ಮದುವೆಯಾದ ಪತ್ನಿ, ಎರಡು ವರ್ಷದ ಮಗು ಎಲ್ಲರನ್ನೂ ಯೋಗೇಶ್ ನಾಯ್ಕ ತೊರೆದಿದ್ದಾರೆ. ಒಂದು ಸಣ್ಣ ಅಜಾಗರೂಕತೆ ಒಂದು ಅಮೂಲ್ಯ ಜೀವವನ್ನು ಬಲಿ ಪಡೆದುಕೊಂಡಿದೆ ಎಂಬುದಷ್ಟೇ ಈಗ ಉಳಿದಿರುವ ಸತ್ಯ.

“Paraquat Dichloride ಕಳೆನಾಶಕ ಅದೆಷ್ಟು ಘೋರ ವಿಷ ಗೊತ್ತ?”
ದಾಂಡೇಲಿ ತಾಲ್ಲೂಕಿನ ಕುಳಗಿ ವಲಯ ಅರಣ್ಯ ಶಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಯೋಗೇಶ್ ನಾಯ್ಕ ಅವರನ್ನು ಬಲಿ ಪಡೆದ Paraquat Dichloride ಕಳೆನಾಶಕದ ಬಗ್ಗೆ ಈಗ ಹೆಚ್ಚು ಚರ್ಚೆ ಶುರುವಾಗಿದೆ. ಯಾಕೆಂದರೆ ಯೋಗೇಶ್ ನಾಯ್ಕ ಅವರ ದೇಹದ ಒಳಗೆ ಸೇರಿದ್ದ ವಿಷಕ್ಕೆ Antidote ಔಷಧಿ ಯಾವುದೂ ಇಲ್ಲವೇ ಇಲ್ಲ ಎಂದರೆ ಆ ಕಳೆನಾಶಕ ಅದೆಷ್ಟು ದುಷ್ಪರಿಣಾಮಕಾರಿ ವಿಷ ಎಂಬುದು ಯೋಚಿಸುವಂತದ್ದು. ಮಾಹಿತಿಯ ಪ್ರಕಾರ ಇದುವರೆಗೂ ಈ ವಿಷಕ್ಕೆ  ಔಷಧಿಯನ್ನೆ ಕಂಡು ಹಿಡಿಯಲಾಗಿಲ್ಲ!!!  Paraquat Dichloride ಎಂಬ ರಸಾಯನಿಕ ಸಂಯೋಜನೆಯಿಂದ ಕೂಡಿದ ಈ ಕಳೆನಾಶಕವನ್ನು ಈಗಾಗಲೇ ಅನೇಕ ದೇಶಗಳು ನಿಷೇಧಿಸಿವೆ ಎಂಬುದು ಇನ್ನೊಂದು ಆಘಾತಕಾರಿ ವಿಚಾರ.

Gramoxone, Firestorm, Helmquat,  Parazone Uniquat  All clear Milquat Sabaa Kapiq  ಇತ್ಯಾದಿ ಬ್ರಾಂಡ್ ಹೆಸರಿನಿಂದ ಹತ್ತಾರು ಕಂಪನಿಗಳು ಈ ಉಗ್ರವಿಷವನ್ನು ನಮ್ಮ ದೇಶದಲ್ಲಿ ಉತ್ಪಾದಿಸುತ್ತಿವೆ. ಇದೊಂದು ಸಂಪರ್ಕ ಕಳೆನಾಶಕ (Contact Herbicide) ಅಂದರೆ, ಕಳೆನಾಶಕ ಸಿಂಪಡಿಸಿದ ಸಸ್ಯದ ಭಾಗಗಳಿಗೆ ಮಾತ್ರ ಪರಿಣಾಮ ಬೀರುತ್ತದೆ, ಬೇರೆ ಭಾಗಗಳಿಗೆ ಪರಿಣಾಮ ಬೀರುವುದಿಲ್ಲ. ಆದರೆ ಮನುಷ್ಯನ ದೇಹ ಹೊಕ್ಕರೆ ಎಲ್ಲಾ ಅಂಗಗಳಿಗೂ ವ್ಯಾಪಿಸಿ ಸಾವು ತರುತ್ತದೆ.

ಬಹಳ ಆತಂಕದ ಸಂಗತಿ ಎಂದರೆ ಈ ಘನಘೋರ ವಿಷಕ್ಕೆ ಇದುವರೆಗೂ  ಪ್ರತ್ಯೌಷಧ(Antidote) ಲಭ್ಯವಿಲ್ಲ! ಕೇವಲ ಒಂದೆರಡು ಮಿಲಿ ಕಳೆನಾಶಕ ದೇಹ ಸೇರಿದರೂ ಸಾವು ಖಚಿತ. ಅಂದರೆ ಅದೆಷ್ಟು ಕಾರ್ಕೋಟಕ ವಿಷ ಈ ಕಳೆನಾಶಕದಲ್ಲಿ ಇರಬೇಕು. ಇಂತಹ ಕಳೆನಾಶಕ ವಿಷವನ್ನು ಶುಂಠಿ ಬೆಳೆಯಿಂದ ಹಿಡಿದು ಅನೇಕ ಬೆಳೆಗಳಲ್ಲಿ ಕಳೆಗಳನ್ನು ಕೊಲ್ಲಲು ವ್ಯಾಪಕವಾಗಿ ಇದನ್ನು ಬಳಸುತ್ತಾರೆ, ಒಂದೆರಡು ಹನಿ ವಿಷ ದೇಹ ಸೇರಿದರೂ ಬಹು ಅಂಗಾಂಗಗಳು ವೈಫಲ್ಯ ಉಂಟಾಗಿ ಸಾವು ಸಂಭವಿಸಬಹುದು, ಪಾರ್ಕಿನ್ಸನ್ ನಂತಹ ಅಪಾಯಕಾರಿ ಕಾಯಿಲೆಗಳಿಗೂ ಆಹ್ವಾನ ನೀಡಬಹುದು.

ರೈತರು ಇದನ್ನು ಉಪಯೋಗಿಸುವಾಗ  ಸುರಕ್ಷಿತ ವಿಧಾನ ಅನುಸರಿಸಿ ಬಳಸಬೇಕು. ಸಿಂಪಡಿಸುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಆಹಾರ ನೀರನ್ನು ಸೇವಿಸಬಾರದು. ದೇಹಗಳಲ್ಲಿ ಗಾಯಗಳಿದ್ದರೆ ಕಳೆನಾಶಕದ ಸಂಪರ್ಕಕ್ಕೆ ಬರಲೇಬಾರದು. ಔಷಧಿಯೇ ಇಲ್ಲದ ಈ ವಿಷ ನಮ್ಮ ಜೀವಜಾಲದಲ್ಲಿ ಕಬಂಧ ಬಾಹುಗಳನ್ನು ಚಾಚುತ್ತಲೇ ಇದೆ.  (Paraquat Dichloride ಬಗೆಗಿನ ವಿವರ ನಾಗರಾಜ್ ಬೆಳ್ಳೂರು ಅವರ ಬರಹದ ಮೂಲ)

ಯೋಗೇಶ್ ನಾಯ್ಕ ಸಾವಿನ ಹಿಂದೆ ಉದ್ಭವಿಸುವ ಪ್ರಶ್ನೆಗಳು :

ಈ ಪ್ರಕರಣದ ಅಡಿಯಲ್ಲಿ ಗಂಭೀರವಾಗಿ ಒಂದಷ್ಟು ಪ್ರಶ್ನೆಗಳು ಉದ್ಭವಿಸಿವೆ. ಅರಣ್ಯ ಇಲಾಖೆ ಉಪಯೋಗಿಸುವ Herbicides ಗಳು ಇಷ್ಟು ವಿಷಕಾರಿ ಎಂಬುದರ ಅರಿವು ಇಲಾಖಾ ಅಧಿಕಾರಿಗಳಿಗೆ ಇರಲಿಲ್ಲವೆ? Herbicides ಗಳಾಗಲಿ, ಔಷಧಿಗಳಾಗಲಿ ಅಥವಾ ಇನ್ನಾವುದೇ ಪದಾರ್ಥಗಳನ್ನು ಬಳಸುವುದಾದರೆ, ಅವುಗಳ ಹಿನ್ನೆಲೆ ಅರಿತು ಬಳಸುವುದು ಸಾಮಾನ್ಯ. ವಿಶೇಷವಾಗಿ ಅವುಗಳ ದುಷ್ಪರಿಣಾಮಗಳು ಅಲ್ಲಿ ಗಣನೆಗೆ ಬರಬೇಕು. ಆದರೆ ಈ Herbicides ಗಳ ಉಪಯೋಗದ ಹಿಂದೆ ಅರಣ್ಯ ಇಲಾಖೆ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಒಬ್ಬ ಅಮಾಯಕ ಅಧಿಕಾರಿಯ ಸಾವಿಗೆ ಕಾರಣವಾಗಿದೆ. ಹಾಗಾಗಿ ಯೋಗೇಶ್ ನಾಯ್ಕ ಅವರ ಸಾವಿನ ಸಂಪೂರ್ಣ ಹೊಣೆಯನ್ನು ಅರಣ್ಯ ಇಲಾಖೆಯೇ ಹೊರಬೇಕು. ಅಷ್ಟೆ ಅಲ್ಲದೆ ಇಡೀ ವಲಯ ವ್ಯಾಪ್ತಿಯಲ್ಲೇ ಈ Herbicides ಬಳಸುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಟೆಂಡರ್ ಲಾಭಿ ಕೂಡಾ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಕರೆದ ಟೆಂಡರ್ ಗಳಲ್ಲಿ ನಾ ಮುಂದು ತಾ ಮುಂದು ಎಂದು ಬರುವ ಇಂತಹ ವಿಷ ಹಂಚುವ ಕಂಪನಿಗಳು ಉನ್ನತ ಅಧಿಕಾರಿಗಳ ಕಡೆಯಿಂದ ಲಾಭಿ ನಡೆಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿ ಯೋಗೇಶ್ ನಾಯ್ಕ ಅವರ ಸಾವಿನ ಪ್ರಕರಣವನ್ನು ಅಪಘಾತ ಅಥವಾ ಅಜಾಗರೂಕತೆ ಅಡಿಯಲ್ಲಿ ಆದ ಸಾವು ಎಂದಷ್ಟೇ ಪರಿಗಣಿಸದೆ ಇದರ ಹಿಂದೆ ಎಂತಹ ಲಾಭಿ ನಡೆದಿರಬಹುದು ಎಂಬ ನಿಷ್ಪಕ್ಷಪಾತ ತನಿಖೆ ಅಗತ್ಯವಿದೆ. ಪ್ರತ್ಯೌಷಧವೇ ಇಲ್ಲದ ಇಂತಹ Herbicides ಗಳು ಈ ನೆಲಕ್ಕೆ ಅಷ್ಟು ಅಗತ್ಯವಾದರೂ ಏನಿತ್ತು.? ಒಬ್ಬ ಮನುಷ್ಯನ ಸಾವಿಗೇ ಈ ಕಳೆನಾಶಕಗಳು ಇಷ್ಟು ಪರಿಣಾಮಕಾರಿಯಾಗಿ ದುಷ್ಪರಿಣಾಮ ಬೀರಬೇಕಾದರೆ, ನೆಲದ ಮೇಲೆ ಇನ್ನೆಂತಹ ದುಷ್ಪರಿಣಾಮ ಬೀರಬಹುದು. ಒಟ್ಟಾರೆ ಕಳೆನಾಶಕಗಳ ಬಗ್ಗೆ ಪರಿಸರ ಪ್ರೇಮಿಗಳ ದೊಡ್ಡ ವಿರೋಧ ಇದ್ದರೂ, ಕಾಡು, ಪರಿಸರ ಉಳಿಸುವ ಅರಣ್ಯ ಇಲಾಖೆಯೇ ಬಳಸುವುದು ಸ್ಪಷ್ಟವಾಗಿ ಪರಿಸರ ನಾಶಕ್ಕೆ ದಾರಿ ಮಾಡಿದಂತೆ ಅಲ್ಲವೆ? ಜೊತೆಗೆ ಇಂತಹ ವಿಷಕಾರಿ ಕಳೆನಾಶಕ ಭಾರತದಲ್ಲಿ ಉತ್ಪಾದನೆ ಆಗುತ್ತಿರುವುದು ಯಾಕೆ.? ಪ್ರತ್ಯೌಷಧ (Antidote) ಇಲ್ಲದ ಇಂತಹ ಕಳೆನಾಶಕಗಳು ಇಂತಹ ಅದೆಷ್ಟು ಜೀವಗಳ ಬಲಿ ಪಡೆಯಬಹುದು ಎಂಬುದು ನಿಜಕ್ಕೂ ಆತಂಕಕಾರಿಯೇ ಸರಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಪ್ರಕರಣವನ್ನಾದರೂ ಗಂಭೀರವಾಗಿ ಪರಿಗಣಿಸಿ ಸ್ವಯಂ ದೂರು ದಾಖಲಿಸಿ ತನಿಖೆಗೆ ಮುಂದಾಗಬೇಕು. ಇಂತಹ ಕಳೆನಾಶಕಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದರ ಜೊತೆಗೆ ಯೋಗೇಶ್ ನಾಯ್ಕ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಅವರ ಸಾವಿನ ಪ್ರಕರಣ ಕೂಡಾ ನಿಷ್ಪಕ್ಷಪಾತವಾಗಿ ತನಿಖೆ ಆಗಬೇಕು ಎಂಬುದು ಸಾರ್ವಜನಿಕ ವಲಯದ ಕಳಕಳಿಯ ಬೇಡಿಕೆಯಾಗಿದೆ.

ಮನುಷ್ಯ, ಆನೆ ಮತ್ತು ಇತರ ಜೀವಿಗಳು: ಸಹಬಾಳ್ವೆಯ ಪ್ರಶ್ನೆ
ಪ್ರಕೃತಿಯ ನಿರಂತರ ಶೋಷಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದರಿಂದ ಉಂಟಾದ ಮತ್ತು ಆಗುತ್ತಿರುವ ಪ್ರಾಕೃತಿಕ ಅಸಮತೋಲನ ಹಾಗೂ ವಿನಾಶಗಳಿಗೂ ಮತ್ತು ಇಂದಿನ ಮಾನವ ಪ್ರಾಣಿ ಸಂಘರ್ಷಕ್ಕೂ ನೇರವಾದ ಸಂಬಂಧವಿದೆ ಎನ್ನುತ್ತಾರೆ ರಂಗಕರ್ಮಿ ಪ್ರಸಾದ್‌ ರಕ್ಷಿದಿ. ಈ ಹಿನ್ನೆಲೆಯಲ್ಲಿ ಅವರು ಮಾನವ ಮತ್ತು ಪ್ರಾಣಿ ಸಂಘರ್ಷವನ್ನು ವಿಶ್ಲೇ಼ಷಿಸುವ ಪ್ರಯತ್ನ ಮಾಡಿದ್ದಾರೆ. ಪ್ರತಿ ಶುಕ್ರವಾರ ಅವರ ಅಂಕಣ ʼಕಾಡು ಹೆಜ್ಜೆಯ ಜಾಡು ಹಿಡಿದುʼ ಓದಿ ನಿಮ್ಮ ಅಭಿಪ್ರಾಯ ಬರೆಯಿರಿ.

ಮಾನವ ಮತ್ತು ಪ್ರಾಣಿ ಸಂಘರ್ಷ

ಎಲ್ಲಾ ಕಡೆಗಳಲ್ಲಿ ಕಾಡಾನೆಗಳಿಂದ, ಇತರ ಪ್ರಾಣಿಗಳಿಂದ ಧಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೆ ಆನೆಗಳಿಂದ ಹತರಾದವರ ಸಂಖ್ಯೆ ಎಪ್ಪತ್ತೈದನ್ನು ದಾಟಿದೆ. ಪ್ರತಿ ಸಲ ಯಾರಾದರೂ ಸತ್ತಾಗ ಜನರು ಪ್ರತಿಭಟನೆ ಮಾಡುತ್ತಾರೆ. ಆಗ ಸ್ಥಳಕ್ಕೆ ಓಡಿಬರುವ ರಾಜಕಾರಣಿಗಳು, ಅಧಿಕಾರಿಗಳು ಮಾಮೂಲಾಗಿ ಒಂದಷ್ಟು ಹೇಳಿಕೆ, ಆಶ್ವಾಸನೆಗಳನ್ನು ನೀಡುತ್ತಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮೃತರ ಕುಟುಂಬದವರಿಗೆ ಸ್ಥಳದಲ್ಲೇ ಒಂದಷ್ಟು ಪರಿಹಾರ ನೀಡಿ ಧಾರಾಳವಾಗಿ ಅನುಕಂಪ ತೋರಲಾಗುತ್ತದೆ ಮತ್ತು ಭರವಸೆಗಳನ್ನು ನೀಡಲಾಗುತ್ತದೆ. ಯಥಾಪ್ರಕಾರ ರಾಜಕಾರಣಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಆದೇಶ ನೀಡುತ್ತಾರೆ. ಮತ್ತು ಸ್ಥಳದಿಂದ ಹೊರಡುವ ವೇಳೆಗೇ ಆ ಆದೇಶಗಳು ಏನೆಂಬುದು ಅವರಿಗೇ ಮರೆತು ಹೋಗಿರುತ್ತದೆ !

ಇತ್ತೀಚೆಗೆ ಸಕಲೇಶಪುರ ತಾಲ್ಲೂಕಿನಲ್ಲಿ ಹಾನಿಗೊಳಗಾದ ರೈತರು ಪ್ರತಿಭಟನೆ ಮಾಡಿದರು. ಅಲ್ಲಿಗೆ ಬಂದ ಮಾಜಿ ಮತ್ತು ಹಾಲಿ ಶಾಸಕರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅವೆಲ್ಲ ಪರಸ್ಪರ ಟೀಕೆ ಟಿಪ್ಪಣಿಗಳಲ್ಲಿ, ಮತ್ತು ವಿಷಯಕ್ಕೆ ಸಂಬಂಧಿಸದ ಶಾಸಕರ ಸಂಬಳ ಸಾರಿಗೆಗಳ ವಿಚಾರದಲ್ಲಿ ವಾಗ್ವಾದಗಳಿಗೆ ಸೀಮಿತವಾಯಿತೇ ವಿನಃ, ಪ್ರಸ್ತುತ ಸಮಸ್ಯೆಯ ವಿಚಾರಕ್ಕೆ ಅವರು ಬರಲೇ ಇಲ್ಲ. ತಮ್ಮ ತಮ್ಮ ಅಧಿಕಾರದ ಅವಧಿಯಿಂದ ಹಿಡಿದು ಸ್ಥಳಾಂತರಿಸಿದ ಆನೆಗಳ ಸಂಖ್ಯೆ, ಸತ್ತವರ ಕುಟುಂಬಕ್ಕೆ ಕೊಡಿಸಿದ ಪರಿಹಾರದ ಹಣ, ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸಾಧನೆಗಳೆಂಬಂತೆ ಬಿಂಬಿಸಿದರೇ ಹೊರತು, ಹಾಗೆ ಸ್ಥಳಾಂತರಿಸಿದ ಆನೆಗಳು ಏನಾಗಿವೆ? ಎಲ್ಲಿವೆ? ಎನ್ನುವ ಸಂಗತಿಯನ್ನು ವಿವರಿಸಲಿಲ್ಲ. ಈ ಮಾನವ ಪ್ರಾಣಿ ಸಂಘರ್ಷಕ್ಕೆ ತಾವೂ ಅಷ್ಟೇ ಹೊಣೆಗಾರರು ಎನ್ನುವ ವಿಚಾರವನ್ನೇ ಬಹಳ ನಾಜೂಕಾಗಿ ಪಕ್ಕಕ್ಕೆ ಸರಿಸಿ ಮಾತನಾಡಿದರು.

ನಗರ ಪ್ರದೇಶಕ್ಕೆ ಆನೆಗಳು ಅಥವಾ ಇನ್ನಾವುದೇ ಪ್ರಾಣಿಗಳು ಬಂದು ತೊಂದರೆ ಮಾಡಿದಾಗ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ಪ್ರಚಾರ, ಹಳ್ಳಿಗಳಲ್ಲಿ ರೈತರು, ಕೂಲಿ ಕಾರ್ಮಿಕರು ಸತ್ತಾಗಲಾಗಲೀ, ರೈತರ ಬೆಳೆ ನಾಶವಾದಾಗಲಾಗಲೀ ಸಿಕ್ಕುವುದಿಲ್ಲ. ಬದಲಿಗೆ ಇದೊಂದು ಮಾಮೂಲಿ ಸಂಗತಿಯಾಗಿ ಸುದ್ದಿಯಾಗುತ್ತದೆ ಅಷ್ಟೆ.  ಇಂತಹ ವಿದ್ಯಮಾನ ನಮ್ಮ ಬದುಕಿನ ಎಲ್ಲಾ ಸಂಗತಿಗಳ ವಿಚಾರಕ್ಕೂ ಅನ್ವಯಿಸುತ್ತದೆ.

ಇದನ್ನು ಬರಿಯ ಮಾಧ್ಯಮಗಳ ಸಮಸ್ಯೆಯೆಂದು ನೋಡಬಾರದು. ಇದು ನಮ್ಮ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದ ಎಲ್ಲಾ ಚಟುವಟಿಕೆಗಳು ನಗರ ಕೇಂದ್ರಿತವಾಗಿರುವುದರ ಭಾಗವಾಗಿಯೇ ನೋಡಬೇಕು. ನಮ್ಮ ಎಲ್ಲಾ ಚಟುವಟಿಕೆಗಳು ನಗರ ಕೇಂದ್ರಿತವಾಗಿ ಇರುವುದರಿಂದಲೇ, ಪ್ರಕೃತಿಯಲ್ಲಿರುವ ಎಲ್ಲಾ ಸಂಪತ್ತಿನ ಸಿಂಹಪಾಲನ್ನು ನಗರಗಳೇ ಕಬಳಿಸುತ್ತವೆ.  ಅದರಿಂದಾಗಿಯೇ ಪ್ರಕೃತಿಯ ನಿರಂತರ ಶೋಷಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದರಿಂದ ಉಂಟಾದ ಮತ್ತು ಆಗುತ್ತಿರುವ ಪ್ರಾಕೃತಿಕ ಅಸಮತೋಲನ ಹಾಗೂ ವಿನಾಶಗಳಿಗೂ ಮತ್ತು ಇಂದಿನ ಮಾನವ ಪ್ರಾಣಿ ಸಂಘರ್ಷಕ್ಕೂ ನೇರವಾದ ಸಂಬಂಧವಿದೆ.

ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಮಾನವ ಪ್ರಾಣಿ ಸಂಘರ್ಷವನ್ನು ನೋಡಬೇಕು.

ಈ ಬರಹಗಳಲ್ಲಿ ಆನೆ  ಮತ್ತು ಮನುಷ್ಯನ ನಡುವಿನ ಸಮಸ್ಯೆಗಳನ್ನು ಪ್ರಮುಖವಾಗಿ ಇಟ್ಟುಕೊಂಡಿದ್ದರೂ ಬೇರೆ ಎಲ್ಲಾ ಪ್ರಾಣಿಗಳಿಗೂ ಬಂದಿರುವ ಆಪತ್ತಿಗೂ  ಮನುಷ್ಯನೇ ಕಾರಣ ಎನ್ನುವುದನ್ನು ಇದರೊಂದಿಗೆ ನಾವು ಗಮನಿಸಬೇಕು.

ದಶಕಗಳ ಹಿಂದೆ

ಸುಮಾರು ಐದು ದಶಕಗಳ ಹಿಂದೆ, ನಮ್ಮಂತವರು ಶಾಲಾ ಬಾಲಕರಾಗಿದ್ದಾಗ ವರ್ಷಕ್ಕೋ ಎರಡು ವರ್ಷಗಳಿಗೋ ಒಮ್ಮೆ ತೋಟಕ್ಕೆ ಆನೆ ಬಂದ ಸುದ್ದಿಯಾಗುತ್ತಿತ್ತು.  ಸಾಮಾನ್ಯವಾಗಿ ಆನೆಯನ್ನು ಯಾರೂ ನೋಡಿರುತ್ತಿರಲಿಲ್ಲ. ತೋಟದಲ್ಲಿ ಮುರಿದಿರುವ ಒಂದೆರಡು ಬೈನೆ ಅಥವಾ ಬಾಳೆ, ಗದ್ದೆಯಲ್ಲಿ ಆನೆಯ ಹೆಜ್ಜೆಗುರುತುಗಳು ಮಾತ್ರ ಕಾಣಸಿಗುತ್ತಿದ್ದವು. ರಾತ್ರಿ ಬೇಕಾದ್ದನ್ನು ತಿಂದು ಹಗಲು ಹೊತ್ತಿನಲ್ಲಿ ಆನೆ ತನ್ನ ವಿಶ್ರಾಂತಿ ಸ್ಥಳವನ್ನು ತಲಪಿರುತ್ತಿತ್ತು. ಇಲ್ಲವೇ ಮುಂದೆ ಎಲ್ಲಿಗೋ ಹೋಗಿರುತ್ತಿತ್ತು.

ಮಾರನೆಯ ದಿನ  ಊರಲ್ಲೆಲ್ಲ  ತೋಟಗಳಿಗೆ ಆನೆ ಬಂದಿರುವ ಸುದ್ದಿಯಾಗುವುದು. ಯಾರ ಯಾರ ತೋಟಕ್ಕೆ ಬಂದಿದೆ? ಏನೇನು ತಿಂದಿದೆ? ಎಷ್ಟು ಆನೆಗಳಿವೆ ? ಅವುಗಳ ಹೆಜ್ಜೆಯ ಗಾತ್ರವೇನು? ಅದು ಎಷ್ಟು ಎತ್ತರ ಇರಬಹುದು ಇತ್ಯಾದಿ ತರ್ಕ, ಪುರಾವೆಗಳಿಂದ ಹಿಡಿದು ಆನೆಯನ್ನು ನೋಡದಿದ್ದರೂ ಕಣ್ಣಾರೆ ನೋಡಿದಂತೆ ವರ್ಣಿಸುವ ಸುದ್ದಿ ವೀರರು ಹುಟ್ಟಿಕೊಳ್ಳುತ್ತಿದ್ದರು. ನಾನೇ ನೋಡಿದೆ ಆನೆ ಎರಡಾಳು ಎತ್ತರವಿತ್ತು ಎನ್ನುವವರೂ ಇದ್ದರು. ಆನೆಯ ಬಗ್ಗೆ, ಆನೆಯ ಶಕ್ತಿಯ ಬಗ್ಗೆ ಉತ್ಪ್ರೇಕ್ಷಿತ ಕತೆಗಳು ಹುಟ್ಟಿಕೊಳ್ಳುತ್ತಿದ್ದವು.

ತಮ್ಮ ತೋಟಗಳಿಗೆ ಆನೆ ಬಂದಿದೆ ಎನ್ನುವುದೇ ರೈತರಿಗೆ ಒಂದು ವಿಶೇಷವಾದ ಖುಷಿಯ ಸಂಗತಿಯಾಗುತ್ತಿತ್ತು. ಇದಕ್ಕೆ ಕಾರಣಗಳಿವೆ.

ಆನೆ ಗಣಪತಿಯ ಪ್ರತಿರೂಪ ಎನ್ನುವ ಧಾರ್ಮಿಕ ಕಾರಣ ಒಂದೆಡೆಯಾದರೆ, ಆನೆ ಮೆಟ್ಟಿದ ನೆಲ ಬಹಳ ಫಲವತ್ತಾದುದು ಎನ್ನುವ ನಂಬಿಕೆ ರೈತರಲ್ಲಿ ವ್ಯಾಪಕವಾಗಿತ್ತು. ತಮ್ಮ ತೋಟಕ್ಕೇ ಆನೆ ಬಾರದಿದ್ದರೂ “ನಮ್ ತೋಟದಲ್ಲೂ ಒಂದು ಬೈನೆ ಮುರಿದಿತ್ತು” ಎಂದು ಹೇಳಿಕೊಳ್ಳುವವರೂ ಇರುತ್ತಿದ್ದರು. ಆನೆ ಬೈನೆ ಮುರಿದ ಜಾಗದಲ್ಲಿ ಕೆಲವು ಸಲ ಆನೆಯ ಬಾಲದ ತುದಿಯ ರೋಮ ಮುರಿದ ಬೈನೆಯ ಸಿಬರಿಗೆ ಸಿಕ್ಕಿಕೊಂಡಿದ್ದು ಅದು ರೈತರಿಗೋ ಕಾರ್ಮಿಕರಿಗೋ ಸಿಗುವುದು. ಅದು ಬಹಳ ಅದೃಷ್ಟದ ಸಂಗತಿ, ಅದನ್ನು ಕೆಲವರು ಉಂಗುರ ಮಾಡಿ ಬೆರಳಲ್ಲಿ ಧರಿಸುವರು, ಆನೆಯ ರೋಮ ಧರಿಸಿದರೆ ಸಂಪತ್ತು ಹೆಚ್ಚುತ್ತದೆ, ಗಂಡಸರಲ್ಲಿ  ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಮುಂತಾದ ನಾನಾ ವೈದ್ಯಕೀಯ ಮತ್ತು ಮಾಂತ್ರಿಕ ಗುಣಗಳು ಆರೋಪಿಸಲ್ಪಟ್ಟಿವೆ. ಅವು ಯಾವುವೂ ನಿಜವಲ್ಲ.

ಆನೆಗಳು ಯಾವಾಗಲೂ ಸಂಚರಿಸುವ ಆನೆದಾರಿಗಳು ಅದಕ್ಕೆ ಮಾತ್ರವಲ್ಲ ಆನೆಗಳೊಂದಿಗೆ ಅದರ ಹಿಂದಿನಿಂದ ಬರುವ ಅನೇಕ ಪ್ರಾಣಿಗಳಿಗೆ ಆಹಾರ ನೀಡುವ ಸ್ಥಳಗಳಾಗಿದ್ದು ಸಹಜವಾಗಿಯೇ ಫಲವತ್ತತೆಯನ್ನು ಹೊಂದಿರುವ ತಾಣಗಳಾಗಿರುತ್ತವೆ. ಆನೆ ತೋಟಕ್ಕೆ ಬಂದು ಹೋದ ಮರುದಿನ ಸಾಮಾನ್ಯವಾಗಿ ಆ ತೋಟದ ಮಾಲೀಕರ ಮನೆಯ ಹಿರಿಯರಿಂದ ಆನೆಯ ಹೆಜ್ಜೆಗೆ ಹಣ್ಣುಕಾಯಿ ಅರ್ಪಿಸಿ, ಊದುಕಡ್ಡಿ ಹಚ್ಚಿ, ಆರತಿ ಬೆಳಗುವ ಕಾರ್ಯಕ್ರಮ ನಡೆಯುವುದು. ಮಕ್ಕಳಿಗೆ ಚರುಪು ಸಿಗುವುದು. ಎಪ್ಪತ್ತರ ದಶಕದಲ್ಲೂ ಈ ವಿದ್ಯಮಾನವನ್ನು ನಾವು ಮಲೆನಾಡಿನಲ್ಲಿ ಕಾಣಬಹುದಿತ್ತು.

ಇಂದಿಗೂ ಆನೆಗಳಿಂದ ಇಷ್ಟೊಂದು ಜನರು ಸಾವಿಗೀಡಾದ ನಂತರವೂ ರೈತರಿಗೆ ಆನೆಗಳ ಬಗ್ಗೆ ಭಯವಿದ್ದರೂ ವಿಶೇಷವಾದ ಪ್ರೀತಿಯೂ ಇದೆ. ಟಿಂಬರ್ ಎಳೆಯುವ ಆನೆಗಳು ಬಂದಾಗಲೂ, ಆನೆ ಮನೆ ಬಾಗಿಲಿಗೆ ಬಂದರೆ ಒಂದು ತೆಂಗಿನ ಕಾಯಿ, ಎರಡಚ್ಚು  ಬೆಲ್ಲ, ಇದ್ದರೆ ಬಾಳೆಗೊನೆಯನ್ನು ತಿನ್ನಲು ಕೊಡುವರು. ಇತ್ತೀಚಿನ ವರ್ಷಗಳಲ್ಲಿ ಟಿಂಬರ್ ಎಳೆಯಲು ಮತ್ತು ಲಾರಿಗೆ ತುಂಬಿಸುವ ಕೆಲಸವನ್ನು ಯಂತ್ರಗಳು ಮಾಡುತ್ತಿವೆ. ಕೆಲಸಗಳಿಗಾಗಿ ಆನೆ ಸಾಕಿದ ಹಲವರು ಆ ಆನೆಗಳನ್ನೂ ಕಾಡಿಗೆ ಬಿಟ್ಟಿದ್ದಾರೆ. ಕೆಲವು ಸಲ ಕಾಡಾನೆಗಳ ಜೊತೆ ಅವೂ ನಾಡಿಗೆ ಬರುತ್ತವೆ.

ರೈತರಿಗೆ ಆನೆಗಳ ಬಗ್ಗೆ ಇರುವಂತಹ ಈ  ಭಾವನಾತ್ಮಕ ಸಂಬಂಧವನ್ನು ಇತರ ಕಾಡು ಪ್ರಾಣಿಗಳ ಜೊತೆ ನಾವು ಅಷ್ಟಾಗಿ ಕಾಣಲಾರೆವು.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

ವನ್ಯಜೀವಿಗಳ ಭಾಗಗಳನ್ನು ಬಳಸಿ ಆಭರಣ ತಯಾರಿಕೆ ಆರೋಪ: ʼಟಿಜೆಎʼಗೆ ಅರಣ್ಯ ಇಲಾಖೆಯಿಂದ ಪತ್ರ
ಬೆಂಗಳೂರು: ರಾಜ್ಯದಲ್ಲಿನ ಆಭರಣ ತಯಾರಕರಲ್ಲಿ ವನ್ಯಜೀವಿ ಅಪರಾಧಗಳು ಹೆಚ್ಚಾಗುತ್ತಿವೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ.

ಭಾನುವಾರ, ಇಲಾಖೆಯು ಕರ್ನಾಟಕದ ದಿ ಜ್ಯುವೆಲರ್ಸ್ ಅಸೋಸಿಯೇಷನ್‌ಗೆ (ಟಿಜೆಎ) ಪತ್ರ ಬರೆದಿದ್ದು, ಆಭರಣ ತಯಾರಿಕೆಗೆ ಪ್ರಾಣಿಗಳ ಭಾಗಗಳನ್ನು ಬಳಸುವ ಸದಸ್ಯರ ಮೇಲೆ ನಿಗಾ ಇಡುವಂತೆ ತಿಳಿಸಿದೆ.

ಅರಣ್ಯ ಇಲಾಖೆಯು ಟಿಜೆಎ ಕಾರ್ಯದರ್ಶಿ ಕೇತನ್. ಎಸ್ ಧ್ರುವ ಅವರಿಗೆ ಬರೆದ ಪತ್ರದಲ್ಲಿ, “ವನ್ಯಜೀವಿ ಅಪರಾಧಗಳಲ್ಲಿ ಚಿನ್ನಾಭರಣ ಮಾಡುವವರು, ಅಕ್ರಮವಾಗಿ ಕೊಲ್ಲಲ್ಪಟ್ಟ ವನ್ಯಜೀವಿಗಳ ದೇಹದ ಭಾಗಗಳನ್ನು ತಮ್ಮ ಸಿದ್ಧಪಡಿಸಿದ ಸರಕುಗಳಲ್ಲಿ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ರಾಜ್ಯದ ಆಭರಣ ವ್ಯಾಪಾರಿಗಳು ಇಂತಹ ಚಟುವಟಿಕೆಗಳಿಂದ ದೂರವಿರುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ವನ್ಯಜೀವಿ (ರಕ್ಷಣೆ) ಕಾಯಿದೆ 1972 ರ ದಂಡದ ನಿಬಂಧನೆಗಳ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಆಭರಣ ತಯಾರಿಕೆಯಲ್ಲಿ ಆನೆಯ ದಂತ, ಹುಲಿಯ ಉಗುರುಗಳು ಮತ್ತು ಹಲವು ಪ್ರಾಣಿಯ ಕೆಲವು ಭಾಗಗಳನ್ನು ಅಕ್ರಮವಾಗಿ ಬಳಸಲಾಗುತ್ತಿರುವುದರ ಬಗ್ಗೆ ಅರಣ್ಯ ಇಲಾಖೆಯು ಬರೆದ ಪತ್ರಕ್ಕೆ, ಜ್ಯುವೆಲ್ಲರಿ ಅಸೋಸಿಯೇಷನ್ ​​ತನ್ನ ಪ್ರತಿಕ್ರಿಯೆಯನ್ನು ಇನ್ನೂ ನೀಡಿಲ್ಲ ಎಂದು ಅರಣ್ಯ ಇಲಾಖೆ ದೂರಿದೆ.