fraud – Peepal Media

ಮಾಜಿ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಎಂಬ ಸೋಗಿನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ, ದೂರು ದಾಖಲು
ಗೃಹ ಸಚಿವರ ಆಪ್ತ ಕಾರ್ಯದರ್ಶಿ ಎಂದು ನಂಬಿಸಿ, ವ್ಯಕ್ತಿಯೊಬ್ಬರಿಗೆ ಎಸ್’ಡಿಎ ಕೆಲಸ ಕೊಡಿಸುವುದಾಗಿ ವಂಚಿಸಿದ ಪ್ರಕರಣದ ಅಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದ ಶ್ರೀನಿವಾಸ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ. ಕೆಲಸ ಕೊಡಿಸಲು 10.50 ಲಕ್ಷ ತಗೆದುಕೊಂಡು ಮೋಸ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರುದಾರ ರಾಮಚಂದ್ರ ಎಂಬುವವರು ‘ತಾನು ಗೃಹಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಸರ್ಕಾರಿ ಉದ್ಯೋಗ, ವರ್ಗಾವಣೆ ಏನೇ ಇದ್ದರೂ ಮಾಡಿ ಕೊಡುವುದಾಗಿ, ಅದಕ್ಕೆ ಸ್ವಲ್ಪ ಖರ್ಚು ವೆಚ್ಚವಿದೆ. ಅಧಿಕಾರಿಗಳು ಹಾಗೂ ಸಚಿವರಿಗೆ ಕೊಡಬೇಕು. ಕೆಲಸ ಮಾಡಿಸಿಕೊಡುವ ನನಗೆ 50 ಸಾವಿರ ಕೊಡಬೇಕು’ ಎಂದು ಶ್ರೀನಿವಾಸ್ ನಂಬಿಸಿ ಮೋಸ ಮಾಡಲಾಗಿದೆ ಎಂದು ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಪ್ರಕರಣ ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದು, ಈಗಾಗಲೇ 10.50 ಲಕ್ಷದಲ್ಲಿ 5 ಲಕ್ಷ ಮಾತ್ರ ಮರಳಿ ಕೊಡಲಾಗಿದೆ, ಇನ್ನು 5.5 ಲಕ್ಷ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲವಷ್ಟು ಮಾಧ್ಯಮಗಳು ಈ ಬಗ್ಗೆ ವರದಿ ಬಿತ್ತರಿಸಿ, ಹಾಲಿ ಗೃಹ ಸಚಿವರಿಗೆ ಈ ಪ್ರಕರಣ ತಳುಕು ಹಾಕಲು ಮುಂದಾದಾಗ ಅಸಲಿ ವಿಚಾರ ಹೊರಬಿದ್ದಿದೆ.

ಅಸಲಿ ವಿಚಾರ ಏನೆಂದರೆ ವಂಚನೆ ಆರೋಪಿ ಶ್ರೀನಿವಾಸ್ ಮಾಜಿ ಗೃಹ ಸಚಿವರ ನಿಕಟ ಸಂಪರ್ಕದಲ್ಲಿ ಇದ್ದ ಎಂದು ತಿಳಿದು ಬಂದಿದೆ. 2018 ರ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಗೃಹ ಸಚಿವರ ಪರವಾಗಿ ಆರೋಪಿ ಶ್ರೀನಿವಾಸ್ ತೀರ್ಥಹಳ್ಳಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಎಂಬ ಮಾಹಿತಿ ಹೊರಬಿದ್ದಿದೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೆಸರನ್ನು ಬಳಸಿ ಹಲವಷ್ಟು ಮಂದಿಗೆ ಈ ರೀತಿಯ ವಂಚನೆ ಮಾಡಿದ್ದ, ಇನ್ನೂ ಕೆಲವರಿಗೆ ಹಣ ತಗೆದುಕೊಂಡು ಕೆಲಸ ಕೂಡಾ ಮಾಡಿಸಿಕೊಟ್ಟಿದ್ದ ಎಂಬ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ವಿಶೇಷವಾಗಿ ಗೃಹ ಸಚಿವರ ಇಲಾಖೆಯಲ್ಲಿನ ಬಹುತೇಕ ವ್ಯವಹಾರಗಳಲ್ಲಿ ಶ್ರೀನಿವಾಸ್ ಹೆಸರು ಓಡಾಡುತ್ತಿತ್ತು ಎಂಬ ಬಗ್ಗೆಯೂ ಮಾತುಗಳು ಕೇಳಿ ಬಂದಿವೆ.

ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡರೆ ಮಾಜಿ ಗೃಹ ಸಚಿವರ ಅತ್ಯಾಪ್ತರೂ ಶ್ರೀನಿವಾಸ್ ಜೊತೆಗಿನ ಈ ರೀತಿಯ ವ್ಯವಹಾರದಲ್ಲಿ ತೊಡಗಿರುವ ಬಗ್ಗೆಯೂ ಮಾಹಿತಿ ಸಿಗಬಹುದು ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಆದರ್ಶ್ ಹುಂಚದಕಟ್ಟೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿ ಬರೆದಿದ್ದಾರೆ.

ಅಂದಹಾಗೆ ಬೆಳಕಿಗೆ ಬಂದ ಈ ಒಂದು ವಂಚನೆ 2021 ರಲ್ಲೇ ನಡೆದಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದ ಪ್ರಕರಣ ಇದಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ತೀವ್ರಗತಿಯಲ್ಲಿ ನಡೆದರೆ ಮಾಜಿ ಗೃಹ ಮಂತ್ರಿಗಳ ಹಲವು ಆಪ್ತರು ಈ ಪ್ರಕರಣದಲ್ಲಿ ಭಾಗಿ ಆಗಿರಬಹುದು.. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ವಕ್ತಾರರು ಒತ್ತಾಯಿಸಿದ್ದಾರೆ.

“ಮನೆಯಿಂದಲೇ ದಿನಕ್ಕೆ 20,000 ಸಂಪಾದಿಸಿ!”: ವಂಚನೆಯ ಆಳ-ಅಗಲ
ಮನೆಯಿಂದಲೇ ನೀವು 20,000 ರುಪಾಯಿ ಗಳಿಸಬಹುದು. ಇದು ವರ್ಕ್‌ ಫ್ರೊಂ ಹೋಮ್‌ ಉದ್ಯೋಗ..ಈ ರೀತಿಯ ಮೆಸೆಜ್‌ಗಳು ನಿಮ್ಮ ವಾಟ್ಸಾಪ್‌, ಟೆಲಿಗ್ರಾಮಿಗೆ ಬಂದಿರಬಹುದು. ಆರಂಭದಲ್ಲಿ ಚೆನ್ನಾಗಿ ಸಂವಹನ ನಡೆಸಿ ವಿಶ್ವಾಸವನ್ನು ಗಳಿಸುತ್ತಾರೆ. ಅವರು ಹೇಳಿದಂತೆ ನಡೆದುಕೊಂಡರೆ ಮೋಸ ಖಚಿತ. ಈ ವಂಚನೆಯ ಆಳ-ಅಗಲ ಇಲ್ಲಿದೆ

ಬೆಂಗಳೂರು,ಅಕ್ಟೋಬರ್.‌20: “ಮನೆಯಲ್ಲಿಯೇ ಕೆಲಸ ಮಾಡಿ ದಿನಕ್ಕೆ 10,000 ರುಪಾಯಿ ಗಳಿಸಿ” ಎಂಬ ಮೆಸೆಜ್‌ಗಳನ್ನು ನಿಮ್ಮ ಫೋನ್‌ನಲ್ಲಿ  ನೋಡಿರುತ್ತೀರಿ. ರಿಪ್ಲೈ ಮಾಡಿದ್ದೀರಾ? ಹಾಗಾದರೆ ಎಚ್ಚರವಾಗಿರಿ! ಈಗ ಸೆಂಟ್ರಲ್‌ ಬ್ಯೂರೋ ಆಫ್‌ ಇನ್ವಿಸ್ಟಿಗೇಷನ್‌ (ಸಿಬಿಐ) ಇಂತಹ ಮೋಸದ ಪ್ರಕರಣಗಳ ಬೆನ್ನ ಹಿಂದೆ ಬಿದ್ದಿದೆ. ವಂಚನೆಗಳ ಜಾಡನ್ನು ಬೇಧಿಸಲು ಹೊರಡಿದೆ. ಈ ಆಪರೇಷನ್‌ಗೆ ಸಿಬಿಐ ಇಟ್ಟ ಹೆಸರು “ಆಪರೇಷನ್ ಚಕ್ರ 2”.

ಭಾರತದ ನಿರುದ್ಯೋಗಿಗಳನ್ನೇ ಬಂಡವಾಳವಾಗಿ ಮಾಡಿಕೊಂಡಿರುವ ಈ ಸ್ಕ್ಯಾಮರ್‌ಗಳು ಹಲವಾರು ವಾಟ್ಸಾಪ್ ನಂಬರ್‌ಗಳನ್ನು ಬಳಸಿಕೊಂಡು ದೇಶ-ವಿದೇಶಗಳಲ್ಲಿ ಕುಳಿತುಕೊಂಡು ಕೆಲಸದ ಆಮಿಷ ಒಡ್ಡಿ ಜನರಿಗೆ ಹಣದ ವಂಚನೆ ಮಾಡುತ್ತಿದ್ದಾರೆ.  ಈ ಹಣವನ್ನು ನಂತರ ಶೆಲ್ ಕಂಪನಿಗಳ ಮೂಲಕ ಕಳುಹಿಸಿ, ಲಾಂಡರಿಂಗ್ ಮಾಡಲಾಗುತ್ತಿದೆ. ಸಿಬಿಐ ಪ್ರಕಾರ, ಇದೊಂದು ದೇಶದ ಅತ್ಯಂತ ದೊಡ್ಡ ಸೈಬರ್-ಮನಿ ಲಾಂಡರಿಂಗ್‌ ವಂಚನೆಯ ಜಾಲ.

ಈ ವಾರ ಸಿಬಿಐ “ಆಪರೇಷನ್ ಚಕ್ರ 2” ಎಂಬ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ, ಕೇರಳ, ತಮಿಳುನಾಡು, ಪಂಜಾಬ್, ಬಿಹಾರ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳ 76 ಸ್ಥಳಗಳಲ್ಲಿ ಐದು ಪ್ರತ್ಯೇಕ ಪ್ರಕರಣಗಳಲ್ಲಿ ದಾಳಿಯನ್ನು ನಡೆಸಿದೆ. ಈ ಬಗ್ಗೆ ಅಕ್ಟೋಬರ್‌  19 ಮತ್ತು ಅಕ್ಟೋಬರ್‌ 20 ರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತನಿಖೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ.

ಈ ಸಂದರ್ಭದಲ್ಲಿ 32 ಮೊಬೈಲ್ ಫೋನ್‌ಗಳು, 48 ಲ್ಯಾಪ್‌ಟಾಪ್‌ಗಳು-ಹಾರ್ಡ್ ಡಿಸ್ಕ್‌ಗಳು, ಎರಡು ಸರ್ವರ್‌ಗಳ ಫೋಟೋಗಳು, 33 ಸಿಮ್ ಕಾರ್ಡ್‌ಗಳು ಮತ್ತು ಪೆನ್ ಡ್ರೈವ್‌ಗಳನ್ನು ಜಪ್ತಿ ಮಾಡಲಾಗಿದೆ. ಹಲವಾರು ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ಸಿಬಿಐ 15 ಇಮೇಲ್ ಖಾತೆಗಳ ಡಂಪ್‌ ಅನ್ನು ವಶಪಡಿಸಿಕೊಂಡಿದ್ದು, ಆರೋಪಿಗಳು ಹೆಣೆದಿರುವ ವಂಚನೆಯ ಸಂಕೀರ್ಣ ಜಾಲವನ್ನು ಬೆಳಕಿಗೆ ತಂದಿದೆ.

ಹೂಡಿಕೆ ಮತ್ತು ಉದ್ಯೋಗದ ಆಸೆ ತೋರಿಸಿ ಅಮಾಯಕರನ್ನು ವಂಚಿಸುತ್ತಿರುವ ಈ ಹಗರಣದ ವಿರುದ್ಧ ಸಿಬಿಐನಲ್ಲಿ ಕಳೆದ ವರ್ಷ ಎಫ್‌ಐಆರ್ ದಾಖಲಿಸಲಾಗಿತ್ತು. ಸತತ ಅಧ್ಯಯನಗಳ ನಂತರ ಸಿಬಿಐ ಈ ಜಾಲದ ಒಳಸುಳಿವು, ತಂತ್ರಜ್ಞಾನಗಳ ಬಳಕೆಯನ್ನು ಬೇಧಿಸಿ ದಂಧೆಯನ್ನು ಬಹಿರಂಗಪಡಿಸಿದೆ.

ಈ ದಂಧೆಯಲ್ಲಿ ಹಲವು ವಂಚಕರು ಬೇರೆ ಬೇರೆ ಮೊಬೈಲ್‌ ಸಂಖ್ಯೆಗಳ ಮೂಲಕ ಜನರನ್ನು ಸಂಪರ್ಕಿಸಿ ಹೂಡಿಕೆ , ಇಲ್ಲವೇ ಅರೆಕಾಲಿಕ ಉದ್ಯೋಗ ನೀಡುವುದಾಗಿ ನಂಬಿಸಿ ಹಣವನ್ನು ಸಂಗ್ರಹಿಸುತ್ತಾರೆ. ಇದಕ್ಕಾಗಿ ಬೇರೆ ಬೇರೆ ಬ್ಯಾಂಕ್ ಖಾತೆಗಳು ಮತ್ತು ಯುಪಿಐಗಳನ್ನು ಬಳಸಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ವಿವಿಧ ಬ್ಯಾಂಕ್ ಖಾತೆಗಳು ಮತ್ತು ವಿದೇಶಿ ಮೂಲದ ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿನ ಹಣವನ್ನು ಡ್ರಾ ಮಾಡಲು ವಿವಿಧ ಶೆಲ್ ಕಂಪನಿಗಳನ್ನು ಬಳಸಲಾಗಿದೆ ಎಂಬುದು ಸಿಬಿಐ ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ, ಈ ಹೆಚ್ಚಿನ ಶೆಲ್‌ ಕಂಪನಿಗಳು ಚೀನಾದ ಜೊತೆಗೆ ಸಂಬಂಧವನ್ನು ಹೊಂದಿದ್ದು, ತನಿಖೆ ಪ್ರಗತಿಯಲ್ಲಿದೆ.

ಸೈಬರ್ ವಂಚನಕರು “ಗೂಗಲ್ ಜಾಹೀರಾತುಗಳು, ಎಸ್‌ಎಂಎಸ್, ಸಿಮ್ ಬಾಕ್ಸ್ ಆಧಾರಿತ ಎಸ್‌ಎಂಎಸ್, ಕ್ಲೌಡ್ ಸೇವೆಗಳು, ಫಿನ್‌ಟೆಕ್ ಕಂಪನಿಗಳು, ಪಾಪ್‌ಅಪ್‌ ಮೆಸೆಜ್‌ಗಳು ಮತ್ತು ಎಪಿಐ” ಗಳನ್ನು ಬಳಸುತ್ತಾರೆ ಎಂಬುದು ತಿಳಿದುಬಂದಿದೆ. ಸಿಬಿಐ ಪ್ರಕಾರ “ಸಾಮಾಜಿಕ ಮಾಧ್ಯಮಗಳು ಮತ್ತು ಜಾಹೀರಾತು ಪೋರ್ಟಲ್‌ಗಳು, ಎನ್‌ಕ್ರಿಪ್ಟ್ ಮಾಡಿದ ಚಾಟ್ ಅಪ್ಲಿಕೇಶನ್‌ಗಳು, ಪೊಂಜಿ ಸ್ಕೀಮ್‌ಗಳು ಮತ್ತು ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ಬಳಸಿ ಜನರ ಗಮನ ಸೆಳೆಯುತ್ತಾರೆ.” ಅಲ್ಲದೇ, ವಂಚಕರ ಸರ್ಚ್ ಇಂಜಿನ್‌ನ ಜಾಹೀರಾತು ಟೂಲ್‌ಗಳನ್ನು ಬಳಸುತ್ತಿದ್ದಾರೆ, ಜೊತೆಗೆ ಬೃಹತ್ ಗಾತ್ರದಲ್ಲಿ ಬಲ್ಕ್‌ SMS ಕಳುಹಿಸಲು ರೆಂಟೆಡ್ ಹೆಡರ್‌ಗಳನ್ನು ಬಳಸುತ್ತಿದ್ದಾರೆ.

ವಿದೇಶಿ ಪ್ರಜೆಗಳನ್ನು ವಂಚಿಸಲು ಮೈಕ್ರೋಸಾಫ್ಟ್ ಮತ್ತು ಅಮೆಜಾನ್‌ಗೆ ತಾಂತ್ರಿಕ ಬೆಂಬಲ ನೀಡುವವರಂತೆ‌ ತಮ್ಮನ್ನು ಬಿಂಬಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ 72 ಸ್ಥಳಗಳಲ್ಲಿ ರಾಷ್ಟ್ರವ್ಯಾಪಿ ದಾಳಿ ನಡೆಸಿದೆ. ಚೀನೀ ಲಿಂಕ್‌ಗಳನ್ನು ಹೊಂದಿರುವ ಕಂಪನಿಗಳ “ಕ್ರಿಪ್ಟೋಕರೆನ್ಸಿ ವಂಚನೆ” ಗೆ ಸಂಬಂಧಿಸಿದ ಇತರ ಮೂರು ಪ್ರಕರಣಗಳಲ್ಲಿ ಹುಡುಕಾಟಗಳನ್ನು ನಡೆಸಲಾಗಿದೆ.

ಫೈನಾನ್ಶಿಯಲ್ ಇಂಟೆಲಿಜೆನ್ಸ್ ಯುನಿಟ್-ಇಂಡಿಯಾ (ಎಫ್‌ಐಯು-ಇಂಡಿಯಾ)ದ ಮಾಹಿತಿಯಂತೆ ಆಪರೇಷನ್ ಚಕ್ರ-II ಕ್ರಿಪ್ಟೋ-ಕರೆನ್ಸಿ ವಂಚನೆಯನ್ನು ಭೇದಿಸಿತು. ಈ ವಂಚನೆಯನ್ನು ಭಾರತೀಯರನ್ನು ಗುರಿಯಾಗಿಸಿ ನಡೆಸಲಾಗುತ್ತಿದ್ದು, ಸುಮಾರು 100 ಕೋಟಿ ರುಪಾಯಿಗೂ ಅಧಿಕ ಹಣ ವಂಚಕರ ಪಾಲಾಗಿದೆ.

ವಂಚಕ ಇದಕ್ಕಾಗಿ ಫೇಕ್ ಕ್ರಿಪ್ಟೋಕರೆನ್ಸಿ ಟೋಕನ್ ಅನ್ನು ಅಭಿವೃದ್ಧಿಪಡಿಸಿದ್ದಾನೆ ಎಂದು ಸಿಬಿಐ ತಿಳಿಸಿದೆ.  ಈ ಪ್ರಕರಣದಲ್ಲಿ ಆರೋಪಿಯು ಭಾರತ ಮೂಲದ ಹೆಸರಾಂತ ಅಮೇರಿಕನ್ ಕ್ರಿಪ್ಟೋ ಟೆಕ್ನಾಲಜಿಸ್ಟ್‌ ಒಬ್ಬರ ಫೋಟೋವನ್ನು ಬಳಸಿಕೊಂಡು ವೆಬ್‌ಸೈಟ್ ಮಾಡಿದ್ದಾನೆ. ಗಣಿಗಾರಿಕೆ ಯಂತ್ರಗಳನ್ನು ಖರೀದಿಸಲು ಹೂಡಿಕೆದಾರರ ಹಣವನ್ನು ಬಳಸುತ್ತಾರೆ ಎಂಬಂತೆ ನಂಬಿಸಿ,  ಬಂದ ಲಾಭವನ್ನು ಮುದ್ರಿಸಲಾದ ಕ್ರಿಪ್ಟೋಕರೆನ್ಸಿಗಳ ಮೂಲಕ ವಿತರಿಸಲಾಗಿದೆ.

ಈ ಅಪ್ಲಿಕೇಷನ್‌ ಆಗಸ್ಟ್ 2021 ರವರೆಗೆ ಕಾರ್ಯನಿರ್ವಹಿಸಿತ್ತು. ಈ ಸಮಯದಲ್ಲಿ ಅನೇಕ ಭಾರತೀಯರು ವಿವಿಧ ಗೇಟ್‌ವೇಗಳ ಮೂಲಕ ಹೂಡಿಕೆ ಮಾಡಿದ್ದರು. ಆರಂಭದಲ್ಲಿ, ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ರಿಟರ್ನ್ಸ್ ಕೂಡ ನೀಡಲಾಯಿತು, ಆದರೆ ಆಗಸ್ಟ್ 2021ರ ನಂತರ ಎಲ್ಲಾ ಪಾವತಿಗಳು ಸ್ಥಗಿತಗೊಂಡವು.

Payment aggregator ಸರ್ವಿಸ್‌ಗಳನ್ನು ಬಳಸಿ ಆರೋಪಿಯು ಅಂದಾಜು 168.75 ಕೋಟಿ ರುಪಾಯಿಯ ವಂಚನೆ ನಡೆಸಿದ್ದ. ತನಿಖೆಯ ಸಮಯದಲ್ಲಿ 150 ಖಾತೆಗಳನ್ನು ಪತ್ತೆಮಾಡಲಾಗಿದ್ದು, ಇದರಲ್ಲಿ 46 ಶೆಲ್ ಕಂಪನಿಗಳು, 42 ಮಾಲೀಕತ್ವ ಸಂಸ್ಥೆಗಳು ಮತ್ತು 50 ವೈಯಕ್ತಿಕ ಖಾತೆಗಳು, ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲು, ಸ್ವೀಕರಿಸಿದ ಹಣವನ್ನು ಲಾಂಡರಿಂಗ್ ಮಾಡಲು ಮತ್ತು ಅಂತಿಮ ಫಲಾನುಭವಿಗಳಿಗೆ ವರ್ಗಾಯಿಸಲು ಮಾರ್ಗಗಳಾಗಿ ಕಾರ್ಯನಿರ್ವಹಿಸಿರುವುದು ಕಂಡು ಬಂದಿದೆ. ಎರಡು ಖಾಸಗಿ ಕಂಪನಿಗಳು, ಅದರ ನಿರ್ದೇಶಕರು ಸೇರಿದಂತೆ ಅನೇಕರ ವಿರುದ್ಧ ಈ ಪ್ರಕರಣವನ್ನು ದಾಖಲಿಸಲಾಗಿದೆ.

ಯುಎಸ್ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಏಜೆನ್ಸಿಗಳ ಸಹಯೋಗದೊಂದಿಗೆ ಆಪರೇಷನ್ ಚಕ್ರ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಸಿಬಿಐ ತಿಳಿಸಿವೆ.

ಬೆಂಗಳೂರಿನಲ್ಲಿ ಕೂತು ಸಿಂಗಾಪುರದವರಿಗೆ ವಂಚನೆ!

ಈ ವಂಚಕರ 137 ಶೆಲ್ ಕಂಪನಿಗಳನ್ನು ಸಿಬಿಐ ಗುರುತಿಸಿದ್ದು, ಹೆಚ್ಚಿನ ಸಂಖ್ಯೆಯ ಘಟಕಗಳು ಬೆಂಗಳೂರಿನ ಕಂಪನಿಗಳ ರಿಜಿಸ್ಟ್ರಾರ್‌ನಲ್ಲಿ ನೋಂದಾಯಿಸಲ್ಪಟ್ಟಿವೆ. ಸಿಬಿಐಯ ತನಿಖೆಯ ನಂತರ ಈ ಕಂಪನಿಗಳ ನಿರ್ದೇಶಕರನ್ನು ಗುರುತಿಸಲಾಗಿದ್ದು, ಹೆಚ್ಚಿನವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ಕೆಲವು ನಿರ್ದೇಶಕರು ಬೆಂಗಳೂರು ಮೂಲದ ಪಾವತಿ ವ್ಯಾಪಾರಿಯೊಂದಿಗೆ (ಪೇಮೆಂಟ್‌ ಮರ್ಚೆಂಟ್‌) ಸಂಬಂಧ ಹೊಂದಿದ್ದರು. ವಂಚನೆಯ ಕೇಂದ್ರವಾಗಿರುವ ಈ ವ್ಯಾಪಾರಿ ಸುಮಾರು 16 ವಿಭಿನ್ನ ಬ್ಯಾಂಕ್ ಖಾತೆಗಳನ್ನು ನಿಯಂತ್ರಿಸುತ್ತಿದ್ದಾನೆ, ಅಲ್ಲಿ ಬೃಹತ್ ಮೊತ್ತ ಅಂದಾಜು 357 ಕೋಟಿ ರುಪಾಯಿಯ ಹಣ ಹರಿದು ಬಂದಿದೆ.

ಈ ಹಣದ ಜಾಡನ್ನು ಯಾರಿಗೂ ಪತ್ತೆ ಮಾಡಲು ಸಾಧ್ಯವಾಗದಂತೆ ಉದ್ದೇಶಪೂರ್ವಕವಾಗಿ ಹಣ ಜಮೆಯಾದ ನಂತರ ನಂತರ ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಬೆಂಗಳೂರು, ಕೊಚ್ಚಿನ್ ಮತ್ತು ಗುರ್‌ಗಾಂವ್‌ನಲ್ಲಿ ನಡೆಸಲಾದ ಹುಡುಕಾಟಗಳಿಂದ ಸಿಬಿಐಗೆ ಗಣನೀಯ ಸಂಖ್ಯೆಯ ಪುರಾವೆಗಳನ್ನು ಸಿಕ್ಕಿದ್ದು, ಶೆಲ್ ಕಂಪನಿಗಳ ನಿರ್ದೇಶಕರ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದೆ.

ಈ ಆರೋಪಿಗೆ ವಿದೇಶಿ ಪ್ರಜೆಯ ಜತೆಗಿನ ಒಡನಾಟವೂ ಇದ್ದು, ಈ ವಂಚಕ ಘಟಕಗಳ ನಿರ್ದೇಶಕರು ಮತ್ತು ಸಂಪರ್ಕ ಮಾಹಿತಿಯನ್ನು ಬದಲಾಯಿಸುವಲ್ಲಿ ಬೆಂಗಳೂರಿನ ಇಬ್ಬರು ಚಾರ್ಟರ್ಡ್ ಅಕೌಂಟೆಂಟ್‌ಗಳ ಪಾತ್ರವೂ ಕಂಡುಬಂದಿದೆ.

ಸಿಂಗಾಪುರದ ನಾಗರಿಕರನ್ನು ಗುರಿಯಾಗಿಸಿಕೊಂಡು ಮಾಡಿರುವ ಸೈಬರ್ ಆರ್ಥಿಕ ಅಪರಾಧಗಳ ಆರೋಪದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎರಡನೇ ಪ್ರಕರಣವನ್ನು ಸಿಬಿಐ ದಾಖಲಿಸಲಾಗಿದೆ. ಹತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 100 ಭಾರತೀಯ ಬ್ಯಾಂಕ್ ಖಾತೆಗಳನ್ನು ಒಳಗೊಂಡಿರುವ ಸಿಂಗಾಪುರ ನಾಗರಿಕರ ಮೇಲೆ ನಡೆಸಲಾದ 300 ಕ್ಕೂ ಹೆಚ್ಚು ಸೈಬರ್ ವಂಚನೆಗಳು ನಡೆದಿವೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು INTERPOL ಚಾನೆಲ್‌ಗಳ ಮೂಲಕ ಸಿಂಗಾಪುರ್ ಪೋಲೀಸ್ ಫೋರ್ಸ್‌ ನೀಡಿದೆ.

ಫಿಶಿಂಗ್, ವಿಶಿಂಗ್, ಸ್ಮಿಶಿಂಗ್ ಮತ್ತು ಮೋಸದ ತಂತ್ರಜ್ಞಾನ (phishing, vishing, smishing, & fraudulent tech support) ದಂತಹ ಸೋಷಿಯಲ್ ಎಂಜಿನಿಯರಿಂಗ್ ವಿಧಾನಗಳನ್ನು ಬಳಸಿ ಅಪರಾಧಿಗಳು 400 ಸಿಂಗಾಪುರ್ ನಾಗರಿಕರಿಗೆ ವಂಚನೆ ಮಾಡಿದ್ದಾರೆ. ಈ ತಂತ್ರಗಾರಿಕೆಯನ್ನು ಬಳಸಿಕೊಂಡು ವಂಚಕರು ಸಿಂಗಪುರದ ಬ್ಯಾಂಕ್‌ ಖಾತೆಗಳಿಂದ ಭಾರತೀಯ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ 150 ಕ್ಕೂ ಅಧಿಕ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಪಾಟ್ನಾ, ಕೋಲ್ಕತ್ತಾ, ಲಕ್ನೋ, ವಾರಣಾಸಿ, ಚಂಡೀಗಢ, ಜಲಂಧರ್, ಭೋಪಾಲ್, ಚೆನ್ನೈ, ಕೊಚ್ಚಿ ಮತ್ತು ಮಧುರೈ ಸೇರಿದಂತೆ 35 ಸ್ಥಳಗಳಲ್ಲಿ ಆರೋಪಿಗಳ ಸಮ್ಮುಖದಲ್ಲೇ ಶೋಧ ನಡೆಸಿದಾಗ ಗುರುತಿನ ಪುರಾವೆಗಳಿಗೆ ಸಂಬಂಧಿಸಿದ ದೋಷಾರೋಪಣೆ ದಾಖಲೆಗಳು, ಮೋಸದ ಬ್ಯಾಂಕಿಂಗ್ ವ್ಯವಹಾರಗಳು ಮತ್ತು ಇತರ ಸಾಕ್ಷ್ಯಗಳು ಲಭ್ಯವಾಗಿವೆ.

ಹೇಗೆ ಮೋಸ ಮಾಡುತ್ತಾರೆ?

ಸಿಬಿಐ ಮೂಲಗಳ ಪ್ರಕಾರ, ಸಂತ್ರಸ್ತರನ್ನು ಮೊದಲು ಗೂಗಲ್, ಫೇಸ್‌ಬುಕ್ ಜಾಹೀರಾತುಗಳು, ಟೆಲಿಗ್ರಾಮ್ ಅಪ್ಲಿಕೇಶನ್ ಮತ್ತು ಎಸ್‌ಎಂಎಸ್‌ಗಳ ಮೂಲಕ ಸಂಪರ್ಕಿಸಲಾಗುತ್ತದೆ. ಬೇಗ ಹಣ ಗಳಿಸಲು ಅವರಿಗೆ ಉದ್ಯೋಗಗಳನ್ನು ನೀಡುವ ಬರವಸೆ ನೀಡುತ್ತವೆ.

ಸಾಮಾನ್ಯವಾಗಿ ಈ ಮೆಸೆಜ್‌ಗಳು,

“ಸರ್, ಅಮೆಜಾನ್  ಅರೆಕಾಲಿಕ ಉದ್ಯೋಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ, ನೀವು ದಿನನಿತ್ಯ 3000-10000 ರುಪಾಯಿ ಗಳಿಸಬಹುದು”

“ಆತ್ಮೀಯ ನಾನು ಎಚ್‌ಆರ್‌. ನೀವು ಪಾರ್ಟ್‌ಟೈಮ್‌ ಹಾಗೂ ಫುಲ್‌ ಟೈಮ್ ಉದ್ಯೋಗಕ್ಕೆ ಆಯ್ಕೆಯಾಗಿದ್ದೀರಿ, ಈಗ ನೀವು ದಿನಕ್ಕೆ 20000 ರುಪಾಯಿ ಗಳಿಸಬಹುದು. ಅದಕ್ಕಾಗಿ, ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿ…”.

ಲೇಖಕರ ವೈಯಕ್ತಿಕ ಸಂಭಾಷಣೆ

ಸಾಮಾನ್ಯವಾಗಿ ಇಂತಹ ಮೆಸೆಜ್‌ಗಳ ಜೊತೆಗೆ ವಾಟ್ಸಾಪ್‌ ಅಥವಾ ಟೆಲಿಗ್ರಾಮ್‌ಗಳ ಲಿಂಕ್‌ಗಳು ಇರುತ್ತವೆ. ಇದರ ಮೇಲೆ ಕ್ಲಿಕ್‌ ಮಾಡಿದರೆ, ಅದು ನೇರವಾಗಿ ಚ್ಯಾಟಿಂಗ್‌ಗೆ ಹೋಗುತ್ತದೆ. ಈ ಸಂದರ್ಭದಲ್ಲಿ ವಂಚಕ ಸಂಭಾಷಣೆಯನ್ನು ನಡೆಸಿ, ಹೂಡಿಕೆಯ ವೆಬ್‌ಸೈಟ್‌ ಲಿಂಕ್‌ ಕಳಿಸುತ್ತಾನೆ.

ಇಷ್ಟು ಮಾತ್ರವಲ್ಲದೇ, ಕೆಲವೊಮ್ಮೆ ಚ್ಯಾಟಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ, ತಕ್ಷಣವೇ ಲಾಭವನ್ನು ಪಡೆಯುವ ಬಗ್ಗೆ ಜನರಿಗೆ ಹೇಳಲಾಗುತ್ತದೆ. ಜೊತೆಗೆ, ಡಾಕ್ಯುಮೆಂಟ್‌ ಟೈಪ್‌ ಮಾಡುವ, ಯೂಟ್ಯೂಬ್‌ ಚಾನೆಲ್‌ ಲೈಕ್‌ ಮಾಡುವ, ಇ-ಮೇಲ್‌ ಟೈಪ್‌ ಮಾಡುವ ಸಣ್ಣ ಸಣ್ಣ ಕೆಲಸಗಳನ್ನು ನೀಡಲಾಗುತ್ತದೆ. ಇದರಲ್ಲಿ ಕಡ್ಡಾಯದ ಷರತ್ತು ಏನೆಂದರೆ, ವ್ಯಕ್ತಿ ತನ್ನ ಕ್ರೆಡೆನ್ಷಿಯಲ್ಸ್‌ ಪ್ರೂವ್‌ (ವಿಶ್ವಾಸಾರ್ಹತೆ) ಮಾಡಲು ತನ್ನ UPI ವ್ಯಾಲೆಟ್‌ನಲ್ಲಿ ಹಣ ಹಾಕಬೇಕು. ಇದಕ್ಕಾಗಿ ವಂಚಕರ ಸೈಟ್‌ಗಳು ಅನಧಿಕೃತ ಪೇಮೆಂಟ್‌ ಗೇಟ್‌ವೇಗಳನ್ನು ನೀಡುತ್ತಾರೆ.

ಲೇಖಕರ ವೈಯಕ್ತಿಕ ಸಂಭಾಷಣೆ

ಇಂತಹ  ಗೇಟ್‌ವೇಗಳು ಭಾರತದಲ್ಲಿ ಕೆಲಸ ಮಾಡಲು ಯಾವುದೇ ಅಧಿಕಾರ ಹೊಂದಿಲ್ಲ. ಈ ಎಲ್ಲಾ ಪಾವತಿಗಳನ್ನು ಇಂಟರ್ನೆಟ್ ಲಿಂಕ್‌ಗಳನ್ನು ಬಳಸಿಕೊಂಡು UPI ಮೂಲಕ ಮಾಡಲಾಗುತ್ತದೆ.

ಕೆಲವು ಬಾರಿ, ಟೆಲಿಗ್ರಾಮ್‌ಗಳಲ್ಲಿ ಸಂಪರ್ಕಿಸಿ, ಉದ್ಯೋಗದ ಆಮಿಷವನ್ನು ತೋರಿಸಿ ಯೂಟ್ಯೂಬ್‌ ಚಾನೆಲ್‌ಗಳಿಗೆ ಸಬ್‌ಸ್ಕ್ರೈಬ್‌ ಮಾಡುವ ಸಣ್ಣ ಸಣ್ಣ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಇದರ ಸ್ಕ್ರೀನ್‌ಶಾಟ್‌ಗಳನ್ನು ಕಳಿಸಬೇಕು. ಇದಾದ ನಂತರ, ಬೋನಸ್‌ ಹಣಕ್ಕಾಗಿ ಇನ್ನೊಂದು ಟೆಲಿಗ್ರಾಮ್‌ ಲಿಂಕ್‌ ಕಳಿಸುತ್ತಾರೆ. ಆ ಲಿಂಕ್‌ ತೆರೆದು ಮೊದಲಿನ ವ್ಯಕ್ತಿ ನೀಡಿದ ಕೋಡ್‌ ಒಂದನ್ನು ನೀಡಬೇಕು… ಹೀಗೆ ವಂಚಕರು ಇ-ಮೇಲ್, UPI ಮೊದಲಾದ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ.

ಈ ರೀತಿಯ ಮೆಸೆಜ್‌ಗಳನ್ನುವಾಟ್ಸಾಪ್‌, ಟೆಲಿಗ್ರಾಮ್‌ ಮೊದಲಾದ ಕಡೆ ಲಿಂಕ್‌ಗಳನ್ನು ಕಳುಹಿಸಲು ಬಳಸುವ‌ ಮೊಬೈಲ್ ಸಂಖ್ಯೆಗಳು ಬೇರೆ ಬೇರೆ ಸ್ಥಳಗಳನ್ನು ಆಧರಿಸಿರುತ್ತವೆ.‌ ಟೆಲಿಗ್ರಾಮಿನಲ್ಲಿ ಯಾವುದೇ ಮೊಬೈಲ್‌ ಸಂಖ್ಯೆ ಇರುವುದಿಲ್ಲ. ವಾಟ್ಸಾಪ್‌ನಲ್ಲಿ ಬಳಸುವ ಸಂಖ್ಯೆಗಳು ಅವುಗಳ ಮೂಲ ಬಳಕೆದಾರರಿಗೆ ತಿಳಿಯದಂತೆ ವಂಚಕರು ಬಳಸುತ್ತಿರುತ್ತಾರೆ.

ಈ ಜಾಲದಲ್ಲಿ ವಂಚಕರು ಕಾಲ್‌ ಸೆಂಟರ್‌ಗಳನ್ನು ಮಾಡಿಕೊಂಡು ಕೆಲಸ ಮಾಡುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಜನರೊಂದಿಗೆ ಸಂಭಾಷನೆ ನಡೆಸುವ ಇವರು, ಉಳಿದ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಿಂದ ವಾಟ್ಸಾಪ್‌, ಟೆಲಿಗ್ರಾಮ್ ಮೂಲಕ ಚಾಟಿಂಗ್‌ ನಡೆಸುತ್ತಾರೆ. ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ ಚಾಟಿಂಗ್‌ ನಡೆಸುವ ಇವರು, ಗೂಗಲ್‌ ಟ್ರಾನ್ಸ್‌ಲೇಷನ್‌ ಕೂಡಾ ಬಳಸುತ್ತಾರೆ.

ಹಣದ ವ್ಯವಹಾರಕ್ಕೆ ವಿದೇಶಿಗರು ಉಪಯೋಗಿಸುವ ಗೇಟ್‌ವೇಗಳನ್ನು ಬಳಸುತ್ತಾರೆ. ಈ ಪೇಮೆಂಟ್‌ ಗೇಟ್‌ವೇಗಳು UPI ಮೂಲಕ ಹಣವನ್ನು ಸ್ವೀಕರಿಸುತ್ತವೆ. ಯುಪಿಐಗಳನ್ನು RazorPay, BharatPe, ಇತ್ಯಾದಿಗಳ ಹಿಂದೆ ಲೇಯರಿಂಗ್ ರಚಿಸಲು ಬಳಸಿ, ದಿನದ ಕೊನೆಯಲ್ಲಿ ವ್ಯವಹಾರವನ್ನು ಮುಗಿಸುತ್ತಾರೆ. ರೇಜರ್ ಪೇ, ಈಸ್ ಬಝ್, ಪೇಟಿಎಂ, ಸ್ಪೀಡಿ ಪೇ, ಇನ್‌ಸ್ಟಂಟ್ ಪೇ, ಕ್ಯಾಶ್ ಫ್ರೀ ಮುಂತಾದ ಫಿನ್‌ಟೆಕ್ ಕಂಪನಿಗಳನ್ನು ಪಾವತಿಗಳಿಗೆ ಬಳಸಲಾಗುತ್ತದೆ.

ಆದರೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಶೆಲ್ ಕಂಪನಿಗಳು ಮತ್ತು ಬಾಡಿಗೆ ಕಂಪನಿಗಳು ಹೇಗೆ ವ್ಯವಹರಿಸಲು ಸಾಧ್ಯ? ಪಾವತಿಗಳಿಗೆ ಸೇವೆಗಳನ್ನು ಪಡೆಯಲು ನೋಂದಣಿ ಪ್ರಮಾಣಪತ್ರಗಳನ್ನು ಬಳಸಲಾಗುತ್ತದೆ. ಈ ಫಿನ್‌ಟೆಕ್ ಕಂಪನಿಗಳಲ್ಲಿ ಹೆಚ್ಚಿನವು ಮಾನ್ಯತೆ ಪಡೆದಿಲ್ಲ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನೇರವಾಗಿ ನಿಯಂತ್ರಿಸಲ್ಪಡುವುದಿಲ್ಲ.

ನಿಮ್ಮ ಫೋನ್‌ಗೆ ಇಂತಹ ಮೆಸೆಜ್‌ಗಳು ಬಂದರೆ ಅವುಗಳನ್ನು ಬ್ಲಾಕ್‌ ಮಾಡುವುದೇ ಒಳಿತು. ಅವರ ನಿರ್ದೇಶನದಂತೆ ನಾವು ಮುಂದುವರಿಸಿ, ನಮ್ಮೆಲ್ಲಾ ಮಾಹಿತಿಗಳನ್ನು ಅವರಿಗೆ ನೀಡಿದರೆ ಅಥವಾ ಹಣದ ವ್ಯವಹಾರ ನಡೆಸಿದರೆ ಮೋಸ ಖಚಿತ. ಹಣದ ವ್ಯವಹಾರ ಮುಗಿದ ತಕ್ಷಣ ನಾವು ಹಣ ಕಳುಹಿಸಿದ ವ್ಯಕ್ತಿ ಪತ್ತಯೇ ಇರುವುದಿಲ್ಲ!

ಎಚ್ಚರ….

ಲೇಖನ: ಚರಣ್‌ ಐವರ್ನಾಡು, ಬೆಂಗಳೂರು

“ವಿಶ್ವವಾಣಿ ಪತ್ರಿಕೆ”ಯ ವಂಚನೆ! ; ಅಕ್ರಮವಾಗಿ ಸರ್ಕಾರಿ ಜಾಹೀರಾತು ಬಳಕೆ!
ABC ಸಂಸ್ಥೆಯ (Audit Bureau of Circulation) ಲೆಟರ್‌ ಹೆಡ್‌ ಹೊಂದಿರುವ ಪತ್ರವೊಂದು ಅದರ ಒಳಗಿನ ವಿಷಯದ ಹಿನ್ನೆಲೆಯಲ್ಲಿ ಕುತೂಹಲ ಹುಟ್ಟಿಸಿದೆ. ಕನ್ನಡದ ದೈನಿಕ ಪತ್ರಿಕೆ ವಿಶ್ವವಾಣಿ ಹೆಸರು ಉಲ್ಲೇಖವಾಗಿರುವ ಈ ಪತ್ರ ಈಗ ಫೇಸ್‌ ಬುಕ್‌ ಮತ್ತು ಟ್ವಿಟರ್‌ಗಳನ್ನು ಕೂಡಾ ತಲುಪಿ ಪತ್ರಕರ್ತರ ಗುಂಪು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.

ಆ ಲೆಟರ್‌ ಹೆಡ್‌ ಹೇಳುವಂತೆ, ವಿಶ್ವೇಶ್ವರ ಭಟ್‌ ಸಂಪಾದಕತ್ವದ ವಿಶ್ವವಾಣಿ ಪತ್ರಿಕೆಯು ತನ್ನ ಸರ್ಕ್ಯುಲೇಷನ್‌ ವಿಷಯದಲ್ಲಿ ಸುಳ್ಳು ಹೇಳಿ ಸರ್ಕಾರಿ ಜಾಹೀರಾತುಗಳನ್ನು ಪಡೆದುಕೊಂಡಿದೆ.” ಇಲ್ಲಿ ಸರ್ಕಾರಿ ಜಾಹೀರಾತು ಎಂದ ಮೇಲೆ ಲಕ್ಷಾಂತರ ಮೊತ್ತದ(ನಿರಂತರ 5 ವರ್ಷಗಳ ವಂಚನೆ ಎಂದರೆ ಕೋಟಿ ಮೊತ್ತ ಕೂಡಾ ತಲುಪಬಹುದು) ಹಣವೂ ಇದೆ. ಇದೇ ಕಾರಣಕ್ಕೆ ಈ ಲೆಟರ್‌ ಹೆಡ್‌ ಇರುವ ಪತ್ರವು ಚರ್ಚೆಗೆ ಒಳಗಾಗುತ್ತಿದೆ.

ಏನಿದು ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್?
ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್ ಆಫ್ ಇಂಡಿಯಾ ಎನ್ನುವುದು ಪತ್ರಿಕೆಗಳ ಪ್ರಸರಣಕ್ಕೆ ಸಂಬಂಧಿಸಿದಂತೆ ಆಡಿಟಿಂಗ್‌ ನಡೆಸುವ ಒಂದು ಸರ್ಕಾರೇತರ ಸಂಸ್ಥೆ. ಇದು ಭಾರತದಲ್ಲಿನ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಸೇರಿದಂತೆ ಪ್ರಮುಖ ಪ್ರಕಟಣೆಗಳ ಪ್ರಸರಣವನ್ನು ಪ್ರಮಾಣೀಕರಿಸುತ್ತದೆ ಮತ್ತು ಅದರ ಲೆಕ್ಕಪರಿಶೋಧಿಸುತ್ತದೆ. ಎಬಿಸಿ 1948ರಲ್ಲಿ ಪ್ರಾರಂಭವಾದ ಸ್ವಯಂಸೇವಾ ಸಂಸ್ಥೆಯಾಗಿದ್ದು ಅದು ಪ್ರಪಂಚದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಸಂಸ್ಥೆಯು ತನ್ನ ಲೆಟರ್‌ ಹೆಡ್‌ ಮೂಲಕ “ಬೆಂಗಳೂರಿನಿಂದ ಪ್ರಕಟವಾಗುವ ವಿಶ್ವವಾಣಿ, (915, ಮಾಹಿತಿ ಫನುಷ್ ಪ್ಲಾಜಾ 2ನೇ ಮತ್ತು 3ನೇ ಮಹಡಿ, ಐಡಿಯಲ್ ಹೋಮ್ ಟೌನ್‌ಶಿಪ್, ರಾಜರಾಜೇಶ್ವರಿ ನಗರ ಬೆಂಗಳೂರು) ಕನ್ನಡ ದಿನಪತ್ರಿಕೆಯು ತನ್ನ ಪ್ರಸರಣಕ್ಕೆ ಸಂಬಂಧಿಸಿದಂತೆ ಎಬಿಸಿ ಸದಸ್ಯತ್ವ ಮತ್ತು ಎಬಿಸಿ ಪ್ರಮಾಣಪತ್ರವನ್ನು ಹೊಂದಿರುವುದಾಗಿ ಹೇಳಿಕೊಂಡಿರುವುದು ಎಬಿಸಿಯ ಗಮನಕ್ಕೆ ಬಂದಿದೆ. ನಮ್ಮ ಕೆಲವು ಸದಸ್ಯರು ಅನೌಪಚಾರಿಕವಾಗಿ ವಿಶ್ವವಾಣಿ ಎಬಿಸಿ ಸದಸ್ಯರಾಗದೆ ಸರ್ಕಾರಿ ಜಾಹೀರಾತು ಪಡೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುತ್ತಾರೆ.

ವಿಶ್ವವಾಣಿ ಪತ್ರಿಕೆ 2018ರಿಂದ ಎಬಿಸಿ ಸದಸ್ಯನಾಗಿಲ್ಲ ಮತ್ತು ಆ ಪತ್ರಿಕೆಗೆ ಜನವರಿ 2017ರಿಂದ ಯಾವುದೇ ಎಬಿಸಿ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಅದರ ಕೊನೆಯ ABC ಪ್ರಮಾಣಪತ್ರವು ಜುಲೈ-ಡಿಸೆಂಬರ್ 2016ರ ಅವಧಿಗೆ ಮತ್ತು ಅದರ ಸದಸ್ಯತ್ವದ ಕೊನೆಯ ಅವಧಿಯು ಜುಲೈನಿಂದ ಡಿಸೆಂಬರ್ 2017ರವರೆಗೆ ಚಾಲ್ತಿಯಲ್ಲಿತ್ತು. ಅದು ತನ್ನ ಪತ್ರಿಕೆಯ ಪ್ರಸರಣದ ಕುರಿತು ಸುಳ್ಳು ಮಾಹಿತಿ ಒದಗಿಸಿದ ಕಾರಣ ಅದರ ABC ಸದಸ್ಯತ್ವವನ್ನು ಕೊನೆಗೊಳಿಸಲಾಗಿತ್ತು.” ಎಂದು ಹೇಳಿದೆ.

ಹೇಗೇ ನೋಡಿದರೂ ಇದೊಂದು ನಿರಂತರ ವಂಚನೆಯಾಗಿದ್ದು, ಸದರಿ ಪತ್ರಿಕೆ ಐದು ವರ್ಷಗಳ ಕಾಲ ಸರ್ಕಾರಗಳನ್ನು ವಂಚಿಸುತ್ತಾ ಬಂದಿರುವುದು ನಿಜಕ್ಕೂ ತನಿಖಾರ್ಹ ಸಂಗತಿಯಾಗಿದೆ. ಜನರ ದುಡ್ಡನ್ನು ಅನರ್ಹ ಪತ್ರಿಕೆಗಳಿಗೆ ಖರ್ಚು ಮಾಡಿದ ಸರ್ಕಾರಿ ಯಂತ್ರ ಇನ್ನಾದರೂ ಈ ಕುರಿತು ಎಚ್ಚೆತ್ತುಕೊಳ್ಳಬೇಕಿದೆ.

ಇನ್ನೂ ವಿಶೇಷ ಎಂದರೆ ABC ಸಂಸ್ಥೆ 2022 ರ ನವೆಂಬರ್ 30 ಕ್ಕೇ ಈ  ಪತ್ರವನ್ನು ಹೊರಡಿಸಿತ್ತು. 2023 ರ ಮೇ 3 ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಂದಿತಾ ಶರ್ಮಾ ಅವರ ಕಚೇರಿ ಈ ಪತ್ರವನ್ನು ಸ್ವೀಕರಿಸಿದ ಸೀಲು ಮತ್ತು ಸಹಿ ಕೂಡಾ ಪತ್ರದ ಮೇಲೆ ಇರುವುದನ್ನು ಇಲ್ಲಿ ಗಮನಿಸಬಹುದು. ಇಷ್ಟಾದರೂ ವಿಶ್ವವಾಣಿ ಪತ್ರಿಕೆಯ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಂಡ ಬಗ್ಗೆ ಎಲ್ಲೂ ಸಹ ಮಾಹಿತಿ ಲಭ್ಯವಾಗಿಲ್ಲ.

ಈಗ ಇಲ್ಲಿ ಎದ್ದಿರುವ ಪ್ರಶ್ನೆಯೆಂದರೆ ವಿಶ್ವವಾಣಿ ಕಳೆದ ಐದು ವರ್ಷಗಳಿಂದ ತನ್ನ ಪತ್ರಿಕೆಯ ಪ್ರಸರಣದ ಕುರಿತು ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ಒದಗಿಸಿತ್ತೇ ಎನ್ನುವುದು. ಒಂದು ವೇಳೆ ಅದು ತಪ್ಪು ಮಾಹಿತಿ ಒದಗಿಸಿದ್ದೇ ಹೌದಾದಲ್ಲಿ, ಸರ್ಕಾರ ಅದರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಿದೆ? ಸರಕಾರಿ ನಷ್ಟಕ್ಕೆ ಆದ ನಷ್ಟವನ್ನು ಸರ್ಕಾರ ಅವರಿಂದ ಭರಿಸಲಿದೆಯೇ ಎನ್ನುವ ಪ್ರಶ್ನೆಗಳು ಪತ್ರಕರ್ತರ ವಲಯದಲ್ಲಿ ಓಡಾಡತೊಡಗಿದೆ

ಕೇಂದ್ರ ಸರಕಾರದಿಂದ ಮೊಬೈಲ್‌ ಬಳಕೆದಾರರಿಗೆ ಕೆಲವು ಸುರಕ್ಷತಾ ಸೂಚನೆಗಳು
ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಫೋನ್ ಮೂಲಕ ವಂಚನೆಯೆನ್ನುವುದು ತೀರಾ ಸಾಧಾರಣವೆನ್ನಿಸಿದೆ. ದೇಶದಲ್ಲಿ ಮೊಬೈಲ್‌ ಬಳಕೆ ಹೆಚ್ಚುತ್ತಿರುವಂತೆ ಮೊಬೈಲ್‌ ಮೂಲಕ ಜನರನ್ನು ಮಂಗ ಮಾಡುವಂತಹ ಜಾಣರೂ ಹೆಚ್ಚುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (The Indian Computer Emergency Response Team)(CERT-In) ನಾಗರಿಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ ಅಥವಾ ಆನ್‌ಲೈನ್‌ನಲ್ಲಿ ಬ್ರೌಸ್ ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತು ಮಾಡಬೇಕಿರುವ ಮತ್ತು ಮಾಡಬಾರದ ಸಂಗತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅವುಗಳೆಂದರೆ:

ನಿಮ್ಮ ಮೊಬೈಲಿಗೆ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೊದಲು ಯಾವಾಗಲೂ ಅಪ್ಲಿಕೇಶನ್ ವಿವರಗಳು, ಒಟ್ಟು ಡೌನ್‌ಲೋಡ್‌ಗಳ ಸಂಖ್ಯೆ, ಬಳಕೆದಾರರ ವಿಮರ್ಶೆಗಳು, ಕಾಮೆಂಟುಳು ಮತ್ತು “ಹೆಚ್ಚುವರಿ ಮಾಹಿತಿ” ವಿಭಾಗವನ್ನು ಪರಿಶೀಲಿಸಿ.

ನೀವು ಇನ್ಸ್ಟಾಲ್‌ ಮಾಡುತ್ತಿರುವ ಅಪ್ಲಿಕೇಷನ್ ಅದರ ಬಳಕೆಗೆ ಸಂಬಂಧಿಸಿಲ್ಲದ ಅನುಮತಿಗಳನ್ನು ಬೇಡಿದಲ್ಲಿ ಅಂತಹ ಅನುಮತಿಗಳನ್ನು ನೀಡಬೇಡಿ.

ಜಾಹೀರಾತುಗಳಲ್ಲಿ ಸೈಡ್‌ ಲೋಡ್‌ ಮಾಡಲಾದ ಅಪ್ಲಿಕೇಷನ್ನುಗಳ ಜಾಹೀರಾತುಗಳನ್ನು ಕ್ಲಿಕ್‌ ಮಾಡಬೇಡಿ.

ನಿರಂತರವಾಗಿ ಆಂಡ್ರಾಯ್ಡ್‌ ಸೆಕ್ಯುರಿಟಿ ಮತ್ತು ಪ್ಯಾಚಸ್‌ಗಳನ್ನು ಡಿವೈಸ್‌ ಆಂಡ್ರಾಯ್ಡ್‌ ಪ್ರೊವೈಡರ್‌ ಒದಗಿಸಿದಾಗಲೆಲ್ಲ ಅಪ್ಡೇಟ್‌ ಮಾಡಲು ಮರೆಯದಿರಿ.

ನಂಬಿಕೆಗೆ ಅರ್ಹವಲ್ಲದ ವೆಬ್‌ ಸೈಟುಗಳಿಗೆ ಭೇಟಿ ನೀಡದಿರಿ. ನಂಬಿಕರ್ಹವಲ್ಲದ ಮೂಲಗಳಿಂದ SMS/e-mail ಗಳಲ್ಲಿ ಬರುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ.

ನಿಜವಾದ ಫೋನ್‌ ಸಂಖ್ಯೆಗಳಂತೆ ಕಾಣದ ನಂಬರುಗಳ ಕುರಿತು ಎಚ್ಚರವಾಗಿರಿ. ವಂಚಕರು ತಮ್ಮ ಗುರುತನ್ನು ಮರೆಮಾಚುವ ಸಲುವಾಗಿ ತಮ್ಮ ನಿಜವಾದ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸುವುದನ್ನು ತಪ್ಪಿಸಲು ಇಮೇಲ್-ಟು-ಟೆಕ್ಸ್ಟ್ ಸೇವೆಗಳನ್ನು ಬಳಸುವ ಮೂಲಕ ನಿಮ್ಮನ್ನು ಸಂಪರ್ಕಿಸುತ್ತಾರೆ. ಬ್ಯಾಂಕುಗಳಿಂದ ಬರುವ ಅಸಲಿ SMS ಸಂದೇಶಗಳು ಸಾಮಾನ್ಯವಾಗಿ ಕಳುಹಿಸುವವರ ಮಾಹಿತಿಯ ಸ್ಥಳದಲ್ಲಿ ಫೋನ್ ಸಂಖ್ಯೆಯ ಬದಲಿಗೆ ಕಳುಹಿಸುವವರ ಐಡಿಯನ್ನು (ಬ್ಯಾಂಕಿನ ಸಣ್ಣ ಹೆಸರನ್ನು ಒಳಗೊಂಡಿರುತ್ತದೆ) ಹೊಂದಿರುತ್ತವೆ.

ಸಂದೇಶದಲ್ಲಿ ಒದಗಿಸಲಾದ ಲಿಂಕ್ ಕ್ಲಿಕ್ ಮಾಡುವ ಮೊದಲು ವ್ಯಾಪಕವಾದ ರಿಸರ್ಚ್ ಮಾಡಿ. ಫೋನ್ ಸಂಖ್ಯೆಯ ಆಧಾರದ ಮೇಲೆ ಸರ್ಚ್‌ ಮಾಡಲು ಮತ್ತು ಸಂಖ್ಯೆಯು ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸಂಬಂಧಿತ ಮಾಹಿತಿಯನ್ನು ನೋಡಲು ಸಾರ್ವಜನಿಕರಿಗೆ ಅನುಮತಿಸುವ ಅನೇಕ ಜಾಲತಾಣಗಳಿವೆ.

ವೆಬ್‌ಸೈಟ್ ವಿಳಾಸವನ್ನು ಸ್ಪಷ್ಟವಾಗಿ ಸೂಚಿಸುವ URLಗಳ ಮೇಲೆ ಮಾತ್ರವೇ ಕ್ಲಿಕ್ ಮಾಡಿ. ಸಂದೇಹವಿದ್ದಾಗ, ಬಳಕೆದಾರರು ತಾವು ಭೇಟಿ ನೀಡಿದ ವೆಬ್ ಸೈಟುಗಳು ನ್ಯಾಯಸಮ್ಮತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಲು ಸರ್ಚ್ ಇಂಜಿನ್‌ಗಳನ್ನು ಬಳಸಿಕೊಂಡು ನೇರವಾಗಿ ಸಂಸ್ಥೆಯ ವೆಬ್ ಸೈಟ್ ಹುಡುಕಬಹುದು.

ಯಾವಾಗಲೂ ಅಪ್ಡೇಟೆಡ್ ಆಂಟಿವೈರಸ್ ಮತ್ತು ಆಂಟಿಸ್ಪೈವೇರ್ ಸಾಫ್ಟ್ ವೇರ್ ಇನ್ಸ್ಟಾಲ್‌ ಮಾಡಿಕೊಂಡಿರಿ ಮತ್ತು ಅದನ್ನು ನಿರ್ವಹಿಸುತ್ತಿರಿ.

ನಿಮ್ಮ ಆಂಟಿವೈರಸ್, ಫೈರ್ ವಾಲ್, ಮತ್ತು ಫಿಲ್ಟರಿಂಗ್ ಸೇವೆಗಳಲ್ಲಿ ಸುರಕ್ಷಿತ ಬ್ರೌಸಿಂಗ್ ಪರಿಕರಗಳು, ಫಿಲ್ಟರಿಂಗ್ ಟೂಲ್‌ಗಳನ್ನು (ಆಂಟಿವೈರಸ್ ಮತ್ತು ವಿಷಯ-ಆಧಾರಿತ ಫಿಲ್ಟರಿಂಗ್) ಬಳಸುವುದನ್ನು ಪರಿಗಣಿಸಿ.

bit.ly ಮತ್ತು tinyurl ಒಳಗೊಂಡಿರುವಂತಹ ಸಂಕ್ಷಿಪ್ತ URLಗಳ ಬಗ್ಗೆ ಜಾಗರೂಕರಾಗಿರಿ. ಬಳಕೆದಾರರು ತಾವು ಭೇಟಿ ನೀಡುತ್ತಿರುವ ಪೂರ್ಣ ವೆಬ್ ಸೈಟ್ ಡೊಮೇನ್ ನೋಡಲು ತಮ್ಮ ಕರ್ಸರ್‌ಗಳನ್ನು ಸಂಕ್ಷಿಪ್ತ URLಗಳ ಮೇಲೆ (ಸಾಧ್ಯವಾದರೆ) ಹೋವರ್ ಮಾಡಲು ಅಥವಾ ಬಳಕೆದಾರರು ಸಣ್ಣ URL ನಮೂದಿಸಲು ಮತ್ತು ಪೂರ್ಣ URL ವೀಕ್ಷಿಸಲು ಅನುವು ಮಾಡಿಕೊಡುವ URL ಪರೀಕ್ಷಕವನ್ನು ಬಳಸುವುದು ಒಳ್ಳೆಯದು.

ವೈಯಕ್ತಿಕ ವಿವರಗಳು ಅಥವಾ ಖಾತೆ ಲಾಗಿನ್ ವಿವರಗಳಂತಹ ಯಾವುದೇ ಸೂಕ್ಷ್ಮ ಮಾಹಿತಿಯನ್ನು ಒದಗಿಸುವ ಮೊದಲು, ಬ್ರೌಸರಿನ ಅಡ್ರೆಸ್‌ ಬಾರ್‌ನಲ್ಲಿ ಗ್ರೀನ್ ಲಾಕ್ ಪರಿಶೀಲಿಸುವ ಮೂಲಕ ಮಾನ್ಯ ಎನ್‌ಕ್ರಿಪ್ಷನ್ ಪ್ರಮಾಣಪತ್ರಗಳನ್ನು ಗಮನಿಸಿ.

ಗ್ರಾಹಕರು ತಮ್ಮ ಖಾತೆಯಲ್ಲಿನ ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದಲ್ಲಿ ಮುಂದಿನ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಿತ ವಿವರಗಳೊಂದಿಗೆ ತಕ್ಷಣವೇ ಆಯಾ ಬ್ಯಾಂಕಿಗೆ ವರದಿ ಮಾಡಬೇಕು.

ಇಂಟರ್ನೆಟ ಸುರಕ್ಷತೆಯ ವಿಷಯದಲ್ಲಿ ನಾವು ಎಷ್ಟೇ ಅಪ್ಡೇಟ್‌ ಆಗಿದ್ದರೂ ಕಳ್ಳರು ನಮಗಿಂತಲೂ ಹೆಚ್ಚು ಅಲರ್ಟ್‌ ಆಗಿರುತ್ತಾರೆನ್ನುವುದನ್ನು ಗಮನದಲ್ಲಿಟ್ಟುಕೊಂಡು ಸದಾ ಎಚ್ಚರಿಕೆಯಿಂದ ಅಂತರ್ಜಾಲ ಸೇವೆಯನ್ನು ಬಳಸುವುದು ಬಹಳ ಮುಖ್ಯ. ಇಂತಹ ಇನ್ನಷ್ಟು ಲೇಖನಗಳಿಗಾಗಿ ಆಗಾಗ ನಮ್ಮ ಪೀಪಲ್‌ಮೀಡಿಯಾ.ಕಾಮ್‌ಗೆ ಆಗಾಗ ಭೇಟಿ ನೀಡುತ್ತಿರಿ.

(ಆಧಾರ: ಮಿಂಟ್‌ ವೆಬ್‌ಸೈಟ್)