freedom fighters – Peepal Media

ಉತ್ತರ ಕನ್ನಡ ಜಿಲ್ಲೆಯ ಅಪ್ರತಿಮ ಹೋರಾಟಗಾರ ʼಚೌಡಾ ನಾಯ್ಕ ಬೇಡ್ಕಣಿʼ
ಉತ್ತರ ಕನ್ನಡ ಜಿಲ್ಲೆಯ ಹೋರಾಟಗಾರರಲ್ಲಿ ಮುಖ್ಯವಾಗಿ ಗುರುತಿಸಲ್ಪಡುವ ಹೆಸರು ಚೌಡಾ ನಾಯ್ಕ ಬೇಡ್ಕಣಿ. ಕರ್ನಾಟಕದ ಮೈಲಾರ ಮಹದೇವಪ್ಪನಂಥ ಕ್ರಾಂತಿಕಾರಿಯನ್ನು ನೆನಪಿಸುವಂತಹ ಹೋರಾಟವನ್ನು ಮಾಡಿದ್ದ ಇವರು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ಸಾಹಸಮಯ ಮತ್ತು ತ್ಯಾಗಮಯ ಬದುಕನ್ನು ದಾಖಲಿಸಿದವರು. ತಂದೆ ಕನ್ನಾ ನಾಯ್ಕ ಬೇಡ್ಕಣಿ ಇವರು ಆ ಕಾಲದಲ್ಲಿಯೆ ವರ್ಷಕ್ಕೆ ೮೦೦ ರೂಪಾಯಿ ತೀರ್ವೆ ತುಂಬುವ ಶ್ರೀಮಂತ ಜಮೀನ್ದಾರರಾಗಿದ್ದರು ಮತ್ತು ಬ್ರಿಟೀಷರಿಗೆ ನಿಷ್ಠರಾಗಿದ್ದ ಕಾರಣದಿಂದ ರಾವಬಹುದ್ದೂರ ಪದವಿ ಕೂಡ ಪಡೆದವರಾಗಿದ್ದರು. ವಿಶೇಷವೆಂದರೆ ಬ್ರಿಟೀಷರಿಗೆ ನಿಷ್ಠರಾಗಿದ್ದ ತಂದೆಗೆ ಕ್ರಾಂತಿಕಾರಿ ಮಗನಾಗಿ ಚೌಡಾ ನಾಯ್ಕ ೧೮೯೮ ರಲ್ಲಿ ಜನಿಸುತ್ತಾರೆ. ಹಳೆಪೈಕ ಸಮಾಜದ ಪ್ರಪ್ರಥಮ ಮೆಟ್ರಿಕ್ಯುಲೇಶನ್ ಪಾಸಾದ ವ್ಯಕ್ತಿಯಾಗಿ ಗುರುತಿಸಲ್ಪಟ್ಟವರಾದರೂ ಕಾಲೇಜು ಶಿಕ್ಷಣ ಮುಗಿಸುವ ಮನಸ್ಸು ಮಾಡದೆ ದೇಶ ಸೇವೆಗೆ ತೊಡಗಿಸಿಕೊಳ್ಳುವ ಗಟ್ಟಿ ನಿರ್ಧಾರಕ್ಕೆ ಬರುತ್ತಾರೆ.

೧೯೨೦ ರಲ್ಲಿ ಗಾಂಧಿಜಿಯವರು ಭಾರತಕ್ಕೆ ಮರಳಿ, ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡ ನಂತರದ ಬೆಳವಣಿಗೆಯಲ್ಲಿ, ಅವರ ಅಸಹಕಾರ ಚಳುವಳಿಯ ಕರೆಗೆ ಓಗೊಟ್ಟು ಚೌಡಾ ನಾಯ್ಕ ಕಾಲೇಜು ಶಿಕ್ಷಣಕ್ಕೆ ಪೂರ್ಣವಿರಾಮ ಇಡುತ್ತಾರೆ. ತಂದೆಯ ಪ್ರಭಾವದಿಂದ ದೊರಕಿದ ಮಾಮಲೇದಾರ ಹುದ್ದೆಯನ್ನೂ ತಿರಸ್ಕರಿಸುತ್ತಾರೆ. ಮುಂದೆ ಜಲಿಯನ್ ವಾಲಾಬಾಗ ಹತ್ಯಾಕಾಂಡದಿAದ ರೋಶಗೊಂಡು ತಂದೆಯ ಬ್ರಿಟೀಷ ಪರ ನಿಷ್ಠೆಯನ್ನು ವಿರೋಧಿಸಿ ನೇರವಾಗಿ ಮತ್ತು ಚಳುವಳಿಯನ್ನು ಇನ್ನಷ್ಟು ಗಂಭೀರವಾಗಿಯೂ, ಬಿರುಸಾಗಿಯೂ ಸ್ವೀಕರಿಸುತ್ತಾರೆ. ಇದರ ಪರಿಣಾಮ ತಂದೆ ಕೋಪಗೊಂಡು ಮಗನನ್ನು ಮನೆಯಿಂದ ಹೊರದಬ್ಬುತ್ತಾರೆ. ಆ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ರಾಜದ್ರೋಹದ ಅಪರಾಧಕ್ಕೆ ಒಳಗಾದ ಪ್ರಪ್ರಥಮ ವ್ಯೆಕ್ತಿಯಾಗಿ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.

ನಾ.ಸು ಹರ್ಡೀಕರರು ಸಿದ್ಧಾಪುರದಲ್ಲಿ ಸೇವಾದಲ ಆರಂಭಿಸಿದಾಗ ಆ ಶಿಭಿರಕ್ಕೆ ಸೇರಿದ ಇವರು ೧೯೨೪ ರಲ್ಲಿ ಬೆಳಗಾವಿಯಲ್ಲಿ ಸೇರಿದ ಅಖಿಲ ಭಾರತ ಕಾಂಗ್ರೆಸ್ಸ ಅಧಿವೇಶನದಲ್ಲಿ ಭಾಗಿಯಾಗಿದ್ದರು ಮತ್ತು ಮಹಾತ್ಮಾ ಗಾಂಧಿಜಿಯವರು ಸಿದ್ದಾಪುರದ ಇವರ ನೇತ್ರತ್ವದ ಸ್ವಯಂ ಸೇವಕರ ಕಾರ್ಯವನ್ನು ಹೊಗಳಿದ್ದರು ಕೂಡ. ಸತತ ಹೋರಾಟವನ್ನೆ ಉಸಿರಾಗಿಸಿಕೊಂಡಿದ್ದ ಇವರು ಅಂಕೋಲೆಯಲ್ಲಿ ನಡೆದ ೧೯೩೦ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸುತ್ತಾರೆ. ಇದರ ಪರಿಣಾಮ ಅಲ್ಲಿ ಬಂಧಿತರಾಗಿ ಎರಡನೇ ಬಾರಿ ಜೈಲು ಸೇರಬೇಕಾಗುತ್ತದೆ. ಮುಂದೆ ಜೈಲಿನಿಂದ ಹೊರಬಂದ ನಂತರವೂ ಜಂಗಲ್ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿಗಳಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಚೌಡಾ ನಾಯ್ಕ ಜೀವದ ಹಂಗು ತೊರೆದು ನಡೆಸಿದ ಹೋರಾಟಗಳಿಗೆ ಲೆಕ್ಕವಿಲ್ಲ. ಕ್ರಾಂತಿಕಾರಿ ಹೋರಾಟಗಾರನಾಗಿ ಬ್ರಿಟೀಷರ ಕಣ್ಗಾವಲಿಂದ ತಪ್ಪಿಸಿಕೊಂಡು ಬ್ರಿಟೀಷ ಸರಕಾರವನ್ನು ಬೆಂಬಿಡದೆ ಕಾಡುವುದರ ಮೂಲಕ ಸಿದ್ದಾಪುರದ ಸ್ವಾತಂತ್ರ್ಯ ಹೋರಾಟದ ಸುದ್ದಿ ಪ್ರಖ್ಯಾತವಾಗುತ್ತದೆ. ೧೯೩೨ರ ಒಂದು ಘಟನೆ ಹೀಗಿದೆ: ಆಗ ಸಿದ್ಧಾಪುರದಲ್ಲಿ ಕರ ನಿರಾಕರಣೆ ಚಳುವಳಿ ತೀವೃ ಸ್ವರೂಪ ಪಡೆದಿತ್ತು. ಅಧಿಕಾರಿಗಳಿಂದ ಜಪ್ತಿ ಮತ್ತು ಬಲತ್ಕಾರಯುತ ಹರಾಜು ಪ್ರಕ್ರಿಯೆಗಳು ನಡೆದಿದ್ದವು. ಅದೇ ಸಂದರ್ಭದಲ್ಲಿ ಗುಂಜಗೋಡಿನ ಸೂರ್ಯ ನಾರಾಯಣ ಭಟ್ಟರು ಕರ ನಿರಾಕರಣೆ ಮಾಡಿದ್ದರಿಂದ ಅವರ ಮನೆ ಮತ್ತು ಅಡಿಕೆ ತೋಟದ ಫಸಲನ್ನು ಹರಾಜಿಗಿಟ್ಟಿದ್ದರು. ಅದನ್ನು ಹರಾಜಿನಲ್ಲಿ ಶಿರಶಿಯ ಶುಂಠಿ ಸಾಹೇಬರು ಪಡೆದಾಗಿತ್ತು. ಅಡಿಕೆ ತುಂಬಿದ ಎತ್ತಿನ ಗಾಡಿಗಳು ಬೇಡ್ಕಣಿಯ ಪೋಲಿಸ್‌ಪಾಟೀಲ್ ಚೆನ್ನಬಸವ ಗೌಡರ ಮನೆ ಅಂಗಳದಲ್ಲಿ ಪೋಲಿಸ್ ಕಾವಲಿನಲ್ಲಿ ಇಡಲಾಗಿತ್ತು. ಆದರೆ ಆಕಸ್ಮಿಕವಾಗಿ ಜೈಲಿನಿಂದ ಹೊರಬಂದಿದ್ದ ಚೌಡಾ ನಾಯ್ಕರು ಮನೆಗೆ ಬರುತ್ತಲೇ ಎಲ್ಲ ವಿಷಯ ತಿಳಿದುಕೊಳ್ಳುತ್ತಾರೆ. ಊಟಮಾಡಿ ಮಲಗಿದವರು ಮಧ್ಯರಾತ್ರಿ ಎದ್ದು ಒಂದು ಬಾಟಲಿ ಚಿಮಣೆ ಹಿಡಿದು ಇಲ್ಲೇ ಹೊರಗೆ ಹೋಗಿ ಬರುವೆ; ಬಾಗಿಲು ಹಾಕಿಕೊಂಡು ಮಲಗು ಎಂದು ಮಡದಿಗೆ ಹೇಳಿ ಹೊರಡುತ್ತಾರೆ. ಕಂಬಳಿ ಮುಸುಕು ಹಾಕಿಕೊಂಡು ತೆರಳಿದ ಚೌಡಾ ನಾಯ್ಕ ಅಡಿಕೆ ತುಂಬಿದ ಗಾಡಿಗೆ ಬೆಂಕಿ ಪರಾರಿಯಾಗುತ್ತಾರೆ. ಪೋಲೀಸರು ಬೆಂಕಿ ಹಚ್ಚಿದವರ ಶೋಧನೆಗೆ ಇಳಿಯುತ್ತಾರೆ. ಆದರೆ ಸುಳಿವು ಸಿಗದಂತೆ ನಾಪತ್ತೆಯಾಗಿ, ಕೆಲದಿನ ನೆಂಟರ ಮನೆಯಲ್ಲಿ ಅಡಗಿಕೊಂಡುಳಿದು ಮತ್ತೆ ಮನೆಗೆ ಮರಳುತ್ತಾರೆ. ಇದು ಮುಂದೆ ೧೯೩೫ ರಲ್ಲಿ ನಡೆದ ಅಹಮದಾಬಾದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರ ಮುಂದೆ ಸಿದ್ದಾಪುರದ ಈ ಮಹತ್ವದ, ಸಾಹಸಮಯ ಹೋರಾಟದ ವರದಿಯು ಅಲ್ಲಿ ಉಪಸ್ಥಿತರಿದ್ದ ಪ್ರಮುಖ ನಾಯಕರುಗಳಿಂದ ಪ್ರಸ್ತಾಪಿಸಲ್ಪಡುತ್ತದೆ.

ಸುಖದ ಸುಪ್ಪತ್ತಿಗೆಯಲ್ಲಿದ್ದು ಬದುಕನ್ನು ಅನುಭವಿಸುವ ಎಲ್ಲ ಅವಕಾಶವಿದ್ದಾಗಿಯೂ ಚೌಡಾ ನಾಯ್ಕ ದೇಶಸೇವೆಗೆ ಅರ್ಪಿಸಿಕೊಂಡ ರೀತಿ ಅಪರೂಪದ್ದಾಗಿದೆ. ಒಬ್ಬ ರಾವಬಹದ್ದೂರರ ಮಗನಾಗಿಯೂ ತಂದೆಯಿಂದ ತಿರಸ್ಕೃತಗೊಂಡು ಕೂಲಿಯಾಳಿನ ಬದುಕು ನಡೆಸುವಂತಾಗುತ್ತದೆ. ಆದರೂ ನಂಬಿದ ತತ್ವ ಸಿದ್ಧಾಂತಗಳಿಗೆ ಬದ್ಧನಾಗಿ ಬದುಕಿದ ಇವರನ್ನು ೧೯೩೭ ರಲ್ಲಿ ಜವಾಹರಲಾಲ ನೆಹರುರವರು ಸಿದ್ಧಾಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸನ್ಮಾನಿಸುತ್ತಾರೆ. ಆಗ ಅದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ಮಡದಿ ಮಲ್ಲಮ್ಮ ಸ್ವಯಂ ಸ್ಪೂರ್ತಿಯಿಂದ ತನ್ನ ಕೊರಳಲ್ಲಿದ್ದ ಪವನ ಸರವನ್ನು ನೆಹರೂರವರಿಗೆ ನೀಡಿ ಇದು ದೇಶಕ್ಕೆ ನೀಡಿದ ಕಾಣಿಕೆ ಎನ್ನುತ್ತ ಅಭಿಮಾನದಿಂದ ಗದ್ಗದಿತಳಾಗುತ್ತಾಳೆ. ನೆಹರೂರವರು ಭಾವತುಂಬಿ ಅದಕ್ಕೆ ಪ್ರತಿಯಾಗಿ ವಂದಿಸುತ್ತಾರೆ. ಇದೆಲ್ಲಕ್ಕೂ ಸಾಕ್ಷಿಯಾದ ಜನರಿಗೆ ಮತ್ತಷ್ಟು ಶಕ್ತಿಯಿಂದ ಹೋರಾಟದಲ್ಲಿ ತೊಡಗಿಕೊಳ್ಳುವುದಕ್ಕೆ ಸ್ಫೂರ್ತಿಯಾಗುತ್ತದೆ.

ಕರ್ನಾಟಕದ ಪ್ರಮುಖ ಧುರೀಣರಲ್ಲದೆ ದೇಶದ ಆ ದಿನದ ಪ್ರಮುಖ ನಾಯಕರಾಗಿದ್ದ ಗಾಂಧೀಜಿ, ನೆಹರುರವರನ್ನೂ ಒಳಗೊಂಡಂತೆ ಎಲ್ಲರ ಗೌರವ ಮತ್ತು ಪ್ರಶಂಸೆಗೆ ಪಾತ್ರರಾಗಿದ್ದ ಚೌಡಾ ನಾಯ ಮನೆಯವರ ಪಾಲಿಗೆ ಕೇಡಾಗಿ ಕಂಡದ್ದು ವಿಚಿತ್ರ. ಮನೆಯವರ ಪ್ರೀತಿ- ಗೌರವ ಸಿಗದೆಹೋದ ನೋವು ಕೊನೆತನಕವೂ ಅವರನ್ನು ಕಾಡಿತ್ತು. ತನ್ನ ತಂದೆಯೇ ತನ್ನನ್ನು ಮನೆಯಿಂದ ದೂರಮಾಡಿದ ಸಂಗತಿ ಅವರನ್ನು ಘಾಸಿಗೊಳಿಸಿತ್ತು. ಈ ಎಲ್ಲದರ ಪರಿಣಾಮವಾಗಿ ಅವರು ದೈಹಿಕವಾಗಿ, ಮಾನಸಿಕವಾಗಿ ಸೊರಗಿಹೋಗಿದ್ದರು. ಅಂತೂ ದೇಶಕ್ಕೆ ಸ್ವಾತಂತ್ರö್ಯ ದೊರಕಿ ನಮ್ಮದೇ ಸರಕಾರ, ನಮ್ಮದೇ ಸಂವಿಧಾನ ಎಲ್ಲವೂ ಸಿಕ್ಕ ಖುಷಿಯ ಗಳಿಗೆಯಲ್ಲಿ ತೇಲುತ್ತಿರುವಾಗ ತನ್ನ ಬದುಕನ್ನೆ ದೇಶಸೇವೆಗೆ ಅರ್ಪಿಸಿಕೊಂಡಿದ್ದ ಚೌಡಾ ನಾಯ್ಕ ೧೯೫೨ ರ ಹೊತ್ತಿಗೆ ಮನೋರೋಗಿಯಾಗುತ್ತಾರೆ. ಧಾರವಾಡದ ಆಸ್ಪತ್ರೆಯಲ್ಲಿ ತಮ್ಮವರೆನ್ನುವವರು ಯಾರೂ ಇಲ್ಲದ ಅನಾಥ ಸ್ಥಿತಿಯಲ್ಲಿ ದಿನಾಂಕ ೨/೭/೧೯೫೨ ರಂದು ಪ್ರಾಣಬಿಡುತ್ತಾರೆ.

ಖೇದದ ಸಂಗತಿಯೆಂದರೆ, ಇಂತಹ ಕ್ರಾಂತಿಕಾರಿ ವ್ಯಕ್ತಿಯ ಕೊನೆಯ ದಿನಗಳು ಎಷ್ಟೆಲ್ಲ ಕಠಿಣ ಮತ್ತು ಕರುಣಾಜನಕವಾಗಿತ್ತು ಎನ್ನುವುದು. ಅವರ ಕುಟುಂಬ ಅತ್ಯಂತ ಬಡತನ ಎದುರಿಸಬೇಕಾಗಿ ಬಂದದ್ದು, ಮರಣದ ಸಂದರ್ಭದಲ್ಲಿ ಅವರ ಬಳಿ ಹೆಂಡತಿ, ಮಕ್ಕಳು, ಬಂಧು ಬಳಗ ಯಾರೂ ಇರದೆ ಅನಾಥ ಸ್ಥಿತಿಗೆ ತಲುಪಿದ್ದು, ಇತ್ತ ಮಡದಿ ಮಕ್ಕಳು ಯಾವುದೇ ನೆರವಿಲ್ಲದೆ ಕಡುಬಡತನದ ಬದುಕು ನಡೆಸುವಂತಾಯಿತು. ದುರಾದೃಷ್ಟವೆಂದರೆ ಅವರ ಮರಣದ ವಾರ್ತೆ ಬಂದಾಗ ಸ್ವಾತಂತ್ರ್ಯದ ಸುಖ ಅನುಭವಿಸುತ್ತಿದ್ದ ಅನೇಕ ಸ್ನೇಹಿತರು-ಬಂಧುಗಳು ಮತ್ತು ದೊಡ್ಡ ಸಮಾಜ ಇದ್ದಾಗಿಯೂ ಈ ಕುಟುಂದ ಸಹಾಯಕ್ಕೆ ಯಾರೊಬ್ಬರೂ ನಿಲ್ಲದೇ ಹೋದರಲ್ಲ! ಆ ಸಂದರ್ಭದಲ್ಲಿ ಹಿರಿಯ ಮಗ ರತ್ನ ನಾಯ್ಕ ಮನೆಯ ಪಕಾಶೆಗಳನ್ನು ಮಾರಿ ೫೦ ರೂಪಾಯಿಯನ್ನು ತನ್ನ ತಮ್ಮನಿಗೆ ಕೊಟ್ಟು ತಾಯಿ ಮೈಲಮ್ಮನನ್ನು ಧಾರವಾಡಕ್ಕೆ ಕಳುಹಿಸ ಬೇಕಾಯಿತಲ್ಲ. ಇವೆಲ್ಲ ದೇಶಕ್ಕಾಗಿ ಅವರು ದುಡಿದುದಕ್ಕಾಗಿ ಸಿಕ್ಕ ಪ್ರತಿಫಲಗಳಾದವೆ?

ಕೊನೆಗೂ ಮಹಾನ ಹೋರಾಟಗಾರ ಚೌಡಾ ನಾಯ್ಕ ರವರ ಪಾರ್ಥಿವ ಶರೀರವನ್ನು ಹಣದ ತೊಂದರೆಯ ಕಾರಣ ಊರಿಗೆ ತರಲಾಗದೆ ಆಸ್ಪತ್ರೆಯಲ್ಲಿಯೇ ಅಂತ್ಯಕ್ರಿಯೆ ಮಾಡಲಾಗುತ್ತದೆ. ಅಷ್ಟರ ಮಟ್ಟಿಗೆ ಈ ನಾಗರಿಕ ಸಮಾಜ ಅವರನ್ನು-ಅವರ ಕಟುಂ¨ವನ್ನು ಮರೆತದ್ದು ಖೇದಕರ. ಆದರೆ ಅವರ ಜೊತೆಗೆ ಕೊನೆಯವರೆಗೆ ಇದ್ದವರೆಂದರೆ ಅವರ ಆಪ್ತಮಿತ್ರರಾದ ಶಂಕರರಾವ್ ಗುಲ್ವಾಡಿ ಮತ್ತು ಮುಂಬಯಿ ಶಾಸನ ಸಭೆಯ ಸಭಾಪತಿಗಳಾದ ರಾಮರಾವ್ ಹುಕ್ಕೇರಿಯವರುಗಳು ಮಾತ್ರ.

ಚೌಡಾ ನಾಯ್ಕರ ಕುರಿತಾಗಿ ಮೊದಲ ಸಾಹಿತ್ಯಿಕ ದಾಖಲೆಯಾಗಿದ್ದು ೧೯೯೮ ರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದವರಾದ ವಕೀಲ ಆರ್. ಎಸ್. ಭಟ್ಟ ಶಿರಳಗಿ ಇವರಿಂದ. ಇವರು ಚೌಡಾ ನಾಯ್ಕ ರವರ ಜೀವನ ವಿವರವನ್ನು ಕಲೆಹಾಕಿ ಒಂದು ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸುತ್ತಾರೆ.
(ಉಲ್ಲೇಖ: ಸಾಹಿತಿ ಸುಭ್ರಾಯ ಮತ್ತಿಹಳ್ಳಿಯವರ ಅಧ್ಯಕ್ಷತೆಯ ೨೦೧೪ ರ ಸಿದ್ಧಾಪುರ ತಾಲೂಕಾ ಸಾಹಿತ್ಯ ಸಮ್ಮೇಳನದ ಮುದ್ರಿತ ಭಾಷಣ ಮತ್ತು ಶಾಂತಾರಾಮಾ ನಾಯಕ ಹಿಚ್ಕಡರವರ ‘ಸ್ವಾತಂತ್ರ್ಯ ಹೋರಾಟದ ಹೊರಳು ನೋಟ’)

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಉಮೇಶ ನಾಯ್ಕ
ಶಿರಸಿ ( ಉತ್ತರ ಕನ್ನಡ ಜಿಲ್ಲೆ)

ಮರೆಯಲಾಗದ ಮಹಾನ್ ಸತ್ಯಾಗ್ರಹಿ‌ ಅಂಕೋಲೆಯ ದೇವು ಹೊನ್ನಪ್ಪ ನಾಯ್ಕ
ರಾಷ್ರ್ಟದ ಸ್ವಾತಂತ್ರ್ಯ ಹೋರಾಟದಲ್ಲಿ ಉತ್ತರ ಕನ್ನಡ ಜಲ್ಲೆಯ ಅಂಕೋಲೆಗೆ ವಿಶಿಷ್ಟ ಸ್ಥಾನ. ಕರ್ನಾಟಕದ ಬಾರ್ಡೋಲಿ ಎಂಬ ಬಿರುದು. ಅಂದು ಜೀವದ ಹಂಗು ತೊರೆದು ಬ್ರಿಟಿಷ್ ಸತ್ತೆಯ ವಿರುದ್ಧ ಹೋರಾಡಿ ಕಷ್ಟ-ನಷ್ಟಗಳನ್ನು ಅನುಭವಿಸಿದ ಬಹಳಷ್ಟು ಜನ ಈ ಭಾಗದಲ್ಲಿ ಇನ್ನೂ ನೋಡಲು ಸಿಗುತ್ತಾರೆ. ಸರಕಾರ ಅವರಿಗೆ ಗೌರವ ಮಾಶಾಸನ ನೀಡುತ್ತಿದೆ. ಆದರೆ ಅಂಕೋಲೆಯ ದೇವು ಹೊನ್ನಪ್ಪ ನಾಯ್ಕ ಇವರ ಹೋರಾಟದ ಕಥೆ, ಪಟ್ಟ ಪಾಡಿನ ರೀತಿಯೇ ಬೇರೆ. ಪ್ರಾಯಶಃ ಅವರಷ್ಟು ದೀರ್ಘಕಾಲ ಸಶ್ರಮ ಶಿಕ್ಷೆಗೆ ಒಳಗಾದವರು, ತ್ಯಾಗ ಮಾಡಿದವರು ಹಾಗೂ ಅವರಂತೆ ಸರಕಾರದಿಂದ ಒಂದು ಪೈಸೆಯನ್ನೂ ರಾಜಕೀಯ ಸಂತ್ರಸ್ತರಿಗೆ ಸಿಗುತ್ತಿರುವ ನೆರವು ಪಡೆಯದೇ ತತ್ವನಿಷ್ಠರಾಗಿಯೇ ಬಾಳಿದವರು ‘ಬಾರ್ಡೋಲಿ’ಯಲ್ಲಿ ಇನ್ನೊಬ್ಬರು ಸಿಗಲಾರರೇನೊ!

ದೇವು ನಾಯ್ಕ ಅವರ ಮನೆ

ಉಪ್ಪಿನ ಸತ್ಯಾಗ್ರಹ, ಕರಬಂಧಿ ಚಳುವಳಿ, ವಿದೇಶಿ ವಸ್ತುಗಳ ಬಹಿಷ್ಕಾರ, ಚಲೆಜಾವ್ ಸಂಗ್ರಾಮಗಳಲೆಲ್ಲ ಆಗ ಅಂಕೋಲಾ ತಾಲೂಕಿನಲ್ಲಿ ನಾಡವರದೇ ಪ್ರಮುಖ ಪಾತ್ರ. ನಾಮಧಾರಿ ಸಮಾಜಕ್ಕೆ ಸೇರಿದ ದೇವು ಹೊನ್ನಪ್ಪ ನಾಯ್ಕರು ವೃತ್ತಿಯಲ್ಲಿ ಹೆಂಡದ ಗುತ್ತಿಗೆ ದಾರರಾಗಿದ್ದರು.1920 ರಲ್ಲಿ ಕಾಂಗ್ರೆಸ್ ತತ್ವಗಳಿಗೆ ಬದ್ಧರಾಗಿ ಆ ಪಕ್ಷ ಸೇರಿದ ಮೇಲೆ ಸರಾಯಿ-ಸೇಂದಿಗಳನ್ನು ಬಹಿಷ್ಕರಿಸುವ ಅಂದಿನ ಕಾಂಗ್ರೆಸ್ ಧ್ಯೇಯಕ್ಕೆ ಬದ್ಧರಾಗಿ ಲಾಭಗಳಿಕೆಯ ಆ ಕೆಲಸಕ್ಕೆ ತೀಲಾಂಜಲಿ ನೀಡಿ ಬಡತನವನ್ನು ಸ್ವಸಂತೋಷದಿಂದ ಹೆಗಲಿಗೆ ಕಟ್ಟಿಕೊಡವರು ಮಾತ್ರವಲ್ಲ, ಹೆಂಡದ ವಿರುದ್ಧ ಊರೂರು ಅಲೆದು ಪ್ರಚಾರ ಕೈಗೊಂಡರು.

ಡಾ. ಹರ್ಡಿಕರ, ರಂಗನಾಥ ದಿವಾಕರ, ದ. ಪ. ಕಮರಕರ ಮುಂತಾದವರ ಒಡನಾಟದ ಮೇಲಂತೂ ದೇವು ನಾಯ್ಕರು ಅಪ್ಪಟ ದೇಶ ಪ್ರೇಮಿಯಾಗಿ ಕರಬಂಧಿ ಚಳುವಳಿಯೇ ಮುಂತಾದ ಹೋರಾಟದಲ್ಲಿ ಪಾಲ್ಗೊಂಡು ಅಪಾರ ಕಷ್ಟವನ್ನು ಅನುಭವಿಸಿದರು. ಇವರಿಗೆ 1932 ರಲ್ಲಿ ಆರು ತಿಂಗಳು ಸಶ್ರಮ ಸಜೆಯಾದುದಲ್ಲದೆ ಪುಂಡುಗಂದಾಯವನ್ನು ವಿಧಿಸಲಾಯಿತು. ಆ ನಿಮಿತ್ತ ಊಟದ ತಾಟನ್ನೂ ಬಿಡದೆ ಮನೆಯಲ್ಲಿದ್ದ ಎಲ್ಲ ದವಸ-ಧಾನ್ಯಗಳನ್ನು ಸರಕಾರ ವಶಪಡಿಸಿಕೊಂಡಿತು. ಇದನ್ನು ಕಂಡು ಮರುಗಿದ ಕರಮರಕರರು ಇವರಿಗೊಂದು ಪತ್ರ ಬರೆದು, ತಾಲೂಕಿನಲ್ಲಿ ಜಪ್ತಾದ ಮೊದಲ ಮನೆ ನಿನ್ನದಾದ್ದರಿಂದ ಅದನ್ನು ಸರಕಾರದಿಂದ ಮರಳಿ ಪಡೆಯುವ ಯತ್ನ ಮಾಡುವುದು ಬೇಡವೆಂದು ತಿಳಿಸಿ, ಒಂದು ತಂಬಿಗೆ ಮತ್ತು ಎರಡು ಪಿಂಗಣಿ ಬಟ್ಟಲುಗಳನ್ನು ಕಳಿಸಿಕೊಟ್ಟರು. ತತ್ವಕ್ಕೆ ಕಟಿಬದ್ದರಾಗಿದ್ದ ದೇವು ನಾಯ್ಕರ ಪತ್ನಿ ಕರಮರಕರರು ಕಳಿಸಿದ ಪಾತ್ರೆಗಳನ್ನು ವಾಪಸ್ ಕೊಟ್ಟು ಕಳುಹಿಸಿದರು. ಆರು ತಿಂಗಳು ಸಶ್ರಮ ಶಿಕ್ಷೆ ಮುಗಿದು ಬಿಡುಗಡೆ ಹೊಂದಿದ ಕೆಲವೇ ದಿನಗಳಲ್ಲಿ, ಸೇಂದಿ ಗಿಡಗಳಿಗೆ ಔಷಧಿ ಹಾಕಿದರೆಂಬ ಕಾರಣ ಮುಂದೊಡ್ಡಿ ಪುನಃ ಇವರನ್ನು ಬಂದಿಸಿ ಒಂದು ವರ್ಷದ ಸಶ್ರಮ ಕಾರಾಗೃಹವಾಸ ಶಿಕ್ಷೆ ವಿಧಿಸಲಾಯಿತು. 1941 ರಲ್ಲಿ ಪುನಃ ಮಹಾತ್ಮಾ ಗಾಂಧೀಜಿಯವರ ಅಪ್ಪಣೆ ಪಡೆದು ಸತ್ಯಾಗ್ರಹ ಮಾಡಿ ಯರವಾಡ ಹಾಗೂ ಹಿಂಡಲಗಿ ಜೇಲಿನಲ್ಲಿ ನಾಲ್ಕು ತಿಂಗಳ ಸಶ್ರಮ ಶಿಕ್ಷೆ ಅನುಭವಿಸಿದರು.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಉಮೇಶ ನಾಯ್ಕ
ಶಿರಸಿ ( ಉತ್ತರ ಕನ್ನಡ ಜಿಲ್ಲೆ)

ಭಾರತದ ತ್ರಿವರ್ಣ ಧ್ವಜವೆಂದರೆ…..
ಒಂದು ರಾಷ್ಟ್ರವಾಗಿ ಭಾರತದ ಮಟ್ಟಿಗೆ, ರಾಷ್ಟ್ರ ಧ್ವಜವು ಮೂಲಭೂತವಾದ ಕೆಲವು ಮೌಲ್ಯಗಳನ್ನು ಬಿಂಬಿಸುತ್ತದೆ. ಧ್ವಜವು ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ಮತಧರ್ಮವನ್ನು ಮೀರಿದ ಸೆಕ್ಯುಲರ್ ಪೌರತ್ವದ ದೇಶಪ್ರೇಮವನ್ನು ಆಧರಿಸಿತ್ತು. ಈ ಮೌಲ್ಯಗಳು ಇದೀಗ ಅಧಿಕಾರದಲ್ಲಿರುವವರಿಂದ ಮತ್ತು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಬಲಪಡಿಸಿದ ಮಂದಿಯಿಂದ ಪ್ರಬಲ ಸವಾಲು ಎದುರಿಸುತ್ತಿದ್ದು, ಭಾರತ ಎಂಬ ಪರಿಕಲ್ಪನೆಯ ಮೂಲಾಧಾರವಾಗಿರುವ ಆ ಮೌಲ್ಯಗಳನ್ನು ನಾವು ರಕ್ಷಿಸಲು ಕಂಕಣ ಬದ್ಧರಾಗಬೇಕಿದೆ

75 ನೇ ಸ್ವಾತಂತ್ರ್ಯೋತ್ಸವವನ್ನು ದೇಶ ಸಂಭ್ರಮ, ಸಡಗರದಿಂದ ಆಚರಿಸುತ್ತಿದೆ. ಈ ಬಾರಿ ವಿಶೇಷವೆಂಬಂತೆ, ದೇಶದ ಉದ್ದಗಲಕ್ಕೂ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕರೆಕೊಡಲಾಗಿದೆ. ಇಂತಹ ಹೊತ್ತಿನಲ್ಲಿ, ಈ ತ್ರಿವರ್ಣ ಧ್ವಜ ಹೇಗೆ ಅಸ್ತಿತ್ವಕ್ಕೆ ಬಂತು, ಅದರ ಹಿಂದಿನ ಚರಿತ್ರೆ ಏನು, ಎಂಬುದನ್ನು ಸ್ಥೂಲವಾಗಿಯಾದರೂ ತಿಳಿದುಕೊಳ್ಳುವುದು ಉಚಿತವಲ್ಲವೇ? ಬನ್ನಿ…

ಧ್ವಜ ಸಮಿತಿ

ತ್ರಿವರ್ಣ ಧ್ವಜಕ್ಕೂ ಭಾರತದ ಸಂವಿಧಾನಕ್ಕೂ ನಿಕಟ ಸಂಬಂಧವಿದೆ. ಭಾರತದ ರಾಷ್ಟ್ರೀಯ ಧ್ವಜ ಯಾವುದಾಗಬೇಕು ಎಂಬುದನ್ನು ನಿರ್ಧರಿಸಲು ಸಂವಿಧಾನ ಸಭೆಯು 12 ಮಂದಿಯ ಒಂದು ಹಂಗಾಮಿ ಸಮಿತಿಯನ್ನು ಜೂನ್ 1947 ರಲ್ಲಿ ರಚಿಸಿತ್ತು. ಧ್ವಜ ಸಮಿತಿ (ಫ್ಲಾಗ್ ಕಮಿಟಿ) ಎನ್ನುವುದು ಆ ಸಮಿತಿಯ ಹೆಸರು. ಅದರ ಅಧ್ಯಕ್ಷರು ರಾಜೇಂದ್ರ ಪ್ರಸಾದ್. ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಮೌಲಾನಾ ಅಬುಲ್ ಕಲಾಂ ಅಜಾದ್, ಫ್ರಾಂಕ್ ಆಂಟನಿ, ಸರೋಜಿನಿ ನಾಯ್ಡು, ಸಿ ರಾಜಗೋಪಾಲಾಚಾರಿ, ಕೆ ಎಂ ಮುನ್ಶಿ, ಕೆ ಎಂ ಪಣಿಕ್ಕರ್, ಪಟ್ಟಾಭಿ ಸೀತಾರಾಮಯ್ಯ, ಹೀರಾಲಾಲ್ ಶಾಸ್ತ್ರಿ, ಬಲದೇವ್ ಸಿಂಗ್, ಸತ್ಯನಾರಾಯಣ ಸಿನ್ಹಾ ಮತ್ತು ಎಸ್ ಎನ್ ಗುಪ್ತಾ ಇದರ ಸದಸ್ಯರು. ಚರಕಾದ ಜಾಗದಲ್ಲಿ ಅಶೋಕ ಚಕ್ರವನ್ನು ಇರಿಸಿ ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಧ್ವಜವನ್ನಾಗಿ ಅಳವಡಿಸಿಕೊಳ್ಳುವ ಪ್ರಸ್ತಾವ ಮಾಡುವುದು ಎಂದು ಆ ಸಮಿತಿಯಲ್ಲಿ ನಿರ್ಧಾರವಾಯಿತು.

ತ್ರಿವರ್ಣ ಬಾವುಟವನ್ನು 1931 ರಲ್ಲಿ ಮೊದಲು ಕಾಂಗ್ರೆಸ್ ಪಕ್ಷ ಅಳವಡಿಸಿಕೊಂಡಿತ್ತಾದರೂ, ಬಳಕೆಯಲ್ಲಿ ಮುಂದೆ ಇದು ಕಾಂಗ್ರೆಸ್ ಪಕ್ಷದಾಚೆ ಸರಿದು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯರ ಕೈಯ ಬಾವುಟವಾಯಿತು. ಸಂವಿಧಾನ ಸಭೆಯ ಚರ್ಚೆಯಲ್ಲಿ ‘ಸ್ವತಂತ್ರ ಭಾರತಕ್ಕಾಗಿ ಮಾಡಿದ ತ್ಯಾಗದ ಸಂಕೇತ ಈ ಬಾವುಟ’ ಎಂದು ಸಮಿತಿಯ ಸದಸ್ಯರು ಮತ್ತೆ ಮತ್ತೆ ಹೇಳಿದರು. “ಭಾರತದ ಸ್ವಾತಂತ್ರ್ಯಕ್ಕಾಗಿ ಎಷ್ಟೊಂದು ಮಂದಿ ಬಲಿದಾನ ಗೈದರು! ಈ ಬಾವುಟವನ್ನು ನಾಶಪಡಿಸಲು ಬ್ರಿಟಿಷ್ ಚಕ್ರಾಧಿಪತ್ಯ ತನ್ನೆಲ್ಲ ಶಕ್ತಿಯನ್ನು ಬಳಸಿತು. ಆದರೂ ನಾವು ಈ ದೇಶದ ಜನರು ಅದನ್ನು ಹೃದಯದಲ್ಲಿರಿಸಿಕೊಂಡೆವು ಮತ್ತು ಸಂರಕ್ಷಿಸಿದೆವು” ಎಂದರು ಎಚ್ ಕೆ ಖಾಂಡೇಕರ್.

ಹಾಗೆ ನೋಡಿದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಬಳಕೆಯಲ್ಲಿದ್ದುದು ಈ ತ್ರಿವರ್ಣ ಬಾವುಟ ಮಾತ್ರವಲ್ಲ. ಇತರ ಬಾವುಟಗಳೂ ಇದ್ದವು. ಕಮ್ಯುನಿಸ್ಟರು, ಕಾರ್ಮಿಕರು ಮತ್ತು ರೈತರು ತಮ್ಮ ಹೋರಾಟದ ಉದ್ದಕ್ಕೂ ಕೆಂಪು ಬಾವುಟ ಬಳಸಿದ್ದರು. ಅದು ಅವರ ಪ್ರಕಾರ ಸಂಘರ್ಷ ಮತ್ತು ತ್ಯಾಗದ ಸಂಕೇತವಾಗಿತ್ತು. ಇನ್ನು ಆದಿವಾಸಿಗಳು ಕೂಡಾ ಬ್ರಿಟಿಷ್ ರ ವಿರುದ್ಧದ ತಮ್ಮ ದಂಗೆಗಳಲ್ಲಿ ತಮ್ಮದೇ ಪ್ರತ್ಯೇಕ ಬಾವುಟ ಬಳಸಿದ್ದರು. ಆದರೆ, ಅಂತಿಮವಾಗಿ ತ್ರಿವರ್ಣ ಧ್ವಜವನ್ನು ಎಲ್ಲರೂ ರಾಷ್ಟ್ರಧ್ವಜ ಎಂದು ಒಪ್ಪಿ, ಸ್ವೀಕರಿಸಿದ್ದರು.

ಬಾವುಟದ ಬಣ್ಣಕ್ಕೆ ಮತೀಯವಾದಿ ಮಹತ್ವವಿಲ್ಲ

ಸಂವಿಧಾನ ಸಭೆಯ ಚರ್ಚೆಯಲ್ಲಿ ಕಾಣಿಸಿಕೊಂಡ ಇನ್ನೊಂದು ಅಂಶವೆಂದರೆ, ಈ ಬಾವುಟದಲ್ಲಿರುವ ಬಣ್ಣವು ಯಾವುದೇ ಒಂದು ಧಾರ್ಮಿಕ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂಬ ವಿಚಾರ. ಇದೊಂದು ಧರ್ಮ ನಿರಪೇಕ್ಷ ಬಾವುಟ. ರಾಷ್ಟ್ರ ಧ್ವಜವನ್ನು ಕುರಿತ ಪ್ರಸ್ತಾವನೆ ಮಂಡಿಸುತ್ತಾ ಜವಾಹರಲಾಲ್ ನೆಹರೂ ಅವರು, “ಕೆಲವರು ಇದರ ಮಹತ್ವದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಅದನ್ನು ಮತೀಯವಾದಿ (ಕಮ್ಯುನಲ್) ಕೋನದಲ್ಲಿ ಆಲೋಚಿಸಿದ್ದಾರೆ. ಅದರ ಕೆಲ ಭಾಗ ಈ ಸಮುದಾಯವನ್ನು, ಇನ್ನು ಕೆಲ ಭಾಗ ಆ ಸಮುದಾಯವನ್ನು ಬಿಂಬಿಸುತ್ತದೆ ಎಂದೆಲ್ಲ ಭಾವಿಸಿದ್ದಾರೆ. ಆದರೆ ಈ ಬಾವುಟವನ್ನು ರಚಿಸುವಾಗ ಯಾವುದೇ ತೆರನ ಮತೀಯವಾದಿ ಆಲೋಚನೆ ನಮ್ಮಲ್ಲಿ ಇರಲಿಲ್ಲ ಎಂದರು. ಇನ್ನೊಬ್ಬ ಸದಸ್ಯ ಶಿಬನ್ ಲಾಲ್ ಸಕ್ಸೇನಾ, “ಮೂರು ಬಣ್ಣಗಳಿಗೆ ಯಾವುದೇ ಮತೀಯವಾದಿ ಮಹತ್ವ ಇಲ್ಲ ಎಂಬುದನ್ನು ಸ್ಪಷ್ಟ ಪದಗಳಲ್ಲಿ ಘೋಷಿಸುತ್ತೇವೆ. ಮತೀಯವಾದದ ಹುಚ್ಚುಹಿಡಿಸಿಕೊಂಡವರು ಈ ಬಾವುಟವನ್ನು ಮತೀಯವಾದಿ ಬಾವುಟ ಎಂದು ಪರಿಗಣಿಸಬಾರದು” ಎಂದರು. ಇದರ ಮುಂದುವರಿದ ಚರ್ಚೆಯಲ್ಲಿ ಬಾವುಟದ ಬಣ್ಣದ ಬಗ್ಗೆ ಅನೇಕ ಸೃಜನಶೀಲ ವ್ಯಾಖ್ಯಾನಗಳು ಕೂಡಾ ಕಾಣಿಸಿಕೊಂಡವು. ಕೇಸರಿ ಎಂದರೆ ತ್ಯಾಗ, ಶಾಂತಿ, ಹಸಿರು ಎಂದರೆ ಪ್ರಕೃತಿಗೆ ಹತ್ತಿರವಿರುವುದು, ಬಿಳಿಯೆಂದರೆ ಶಾಂತಿ ಮತ್ತು ಅಹಿಂಸೆ ಹೀಗೆ. ಸದರಿ ಬಾವುಟಕ್ಕೆ ಮತೀಯವಾದಿ ಬಣ್ಣ ಇಲ್ಲ ಎಂಬುದು ಮಾತ್ರ ಎಲ್ಲರ ಸಹಮತದ ಅಭಿಪ್ರಾಯವಾಗಿತ್ತು. ಬಾವುಟದ ಬಗ್ಗೆ ಸರ್ವಪಲ್ಲಿ ರಾಧಾಕೃಷ್ಣನ್ ಅವರು, “ ಸದಾ ಎಚ್ಚರಿರು, ಚಲಿಸುತ್ತಲೇ ಇರು, ಕ್ರಿಶ್ಚಿಯನ್ನರು, ಸಿಖ್ಖರು, ಮುಸ್ಲಿಮರು, ಹಿಂದೂಗಳೂ, ಬೌದ್ಧರು ಎಲ್ಲರಿಗೂ ಸುರಕ್ಷಿತ ಆಶ್ರಯ ಇರುವ ಮುಕ್ತ, ಸಹಾನುಭೂತಿಯಿಂದ ಕೂಡಿರುವ, ಸಭ್ಯ, ಪ್ರಜಾತಾಂತ್ರಿಕ ಸಮಾಜ ನಿರ್ಮಿಸಲು ಮುಂದಡಿ ಇಡು, ಶ್ರಮಿಸು” ಎಂದು ವ್ಯಾಖ್ಯಾನಿಸಿದರು.

ಬಾವುಟವು ಸಾಮಾಜಿಕ ನ್ಯಾಯ , ತುಳಿತ ಹಾಗೂ ಹಸಿವಿನಿಂದ ಮುಕ್ತಿಯ ಪ್ರತೀಕ

ಈ ಚರ್ಚೆಯಲ್ಲಿನ ಮೂರನೇ ಅಂಶವೆಂದರೆ, ಸಾಮಾಜಿಕ ನ್ಯಾಯ ಮತ್ತು ತುಳಿತ ಮತ್ತು ಹಸಿವಿನಿಂದ ಮುಕ್ತಿ. ಈ ಬಾವುಟವು ಸ್ವಾತಂತ್ರ್ಯದ ಪ್ರತೀಕ ಎಂಬುದನ್ನು ವಿವರಿಸುತ್ತ ನೆಹರೂ ಅವರು, “ ದೇಶದಲ್ಲಿ ಉಪವಾಸ, ಹಸಿವು, ಉಡುಪಿನ ಕೊರತೆ, ಬದುಕಿನ ಅಗತ್ಯಗಳ ಕೊರತೆ ಮತ್ತು ಪ್ರತಿಯೋರ್ವನಿಗೂ ಬೆಳವಣಿಗೆ ಹೊಂದುವ ಅವಕಾಶದ ಕೊರತೆ ಇರುವವರೆಗೂ ಸಂಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ” ಎಂದರು. ಇತರ ಅನೇಕರ ಭಾಷಣಗಳಲ್ಲಿಯೂ ಈ ಅಂಶ ಪ್ರತಿಧ್ವನಿಸಿತು.

ಜುಲೈ 22, 1947 ರಂದು ತ್ರಿವರ್ಣ ಧ್ವಜವನ್ನು ಸಂವಿಧಾನ ಸಭೆಯು ಅಂಗೀಕರಿಸಿದಾಗ ದೇಶದ ಸ್ವಾತಂತ್ರ್ಯ, ಅದನ್ನು ಸಾಧಿಸಲು ಒಗ್ಗಟ್ಟು ಮತ್ತು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಈ ವಿಷಯಗಳನ್ನು ಸಾಮಾನ್ಯವಾಗಿ ಮತ್ತೆ ಮತ್ತೆ ಉಲ್ಲೇಖಸಿಲಾಗಿತ್ತು. ದುರದೃಷ್ಟವಶಾತ್ ಸ್ವಾತಂತ್ರ್ಯದ 75 ವರ್ಷಗಳ ಬಳಿಕವೂ ದೇಶದ ಎಲ್ಲ ಪ್ರಜೆಗಳೂ ತ್ರಿವರ್ಣ ಬಾವುಟ ಹಾರಿಸಲಾರದಂತಹ ಪರಿಸ್ಥಿತಿ ಇದೆ. ಯಾಕೆಂದರೆ ಅವರಲ್ಲಿ ಅನೇಕರು ಮನೆಯೇ ಇಲ್ಲದವರು, ಭೂರಹಿತರು, ಕನಿಷ್ಠ ಆದಾಯವಿರುವವರು. ಆಳುವವರ ತಪ್ಪು ಆರ್ಥಿಕ ನೀತಿಯಿಂದಾಗಿ ಮತ್ತು ಬಂಡವಾಳಶಾಹಿ ಶಕ್ತಿಗಳ ಅಬ್ಬರದಿಂದಾಗಿ ದೇಶದಲ್ಲಿ ಆರ್ಥಿಕ ಅಸಮಾನತೆ ವಿಪರೀತವಿದೆ. ಬಡವರು ಮತ್ತು ಧನಿಕರ ನಡುವಿನ ಕಂದಕ ಇನ್ನಷ್ಟು ಹಿಗ್ಗಿದೆ.

ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳದ ಆರ್ ಎಸ್ ಎಸ್

RSS flag

ಈ ನಡುವೆ, ಭಾರತ ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳದ ಒಂದು ಸಂಘಟನೆಯೆಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಸಂಘದ ಮುಖವಾಣಿ ‘ಆರ್ಗನೈಸರ್’ 1947 ರಲ್ಲಿ ಹೀಗೆ ಬರೆಯಿತು, “ಅದೃಷ್ಟವಶಾತ್ ಅಧಿಕಾರಕ್ಕೆ ಬಂದವರು ನಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ಹಿಂದೂಗಳು ಅದನ್ನು ಎಂದಿಗೂ ಗೌರವಿಸುವುದಿಲ್ಲ,ಅದನ್ನು ತಮ್ಮದು ಎಂದು ಪರಿಗಣಿಸುವುದೂ ಇಲ್ಲ. ಮೂರು ಎಂಬ ಸಂಖ್ಯೆಯೇ ಅಪಶಕುನದ್ದು. ಮೂರು ಬಣ್ಣಗಳನ್ನು ಹೊಂದಿರುವ ಬಾವುಟ ಖಂಡಿತವಾಗಿಯೂ ಕೆಟ್ಟ ಮಾನಸಿಕ ಪರಿಣಾಮ ಬೀರುತ್ತದೆ ಮತ್ತು ಅದು ದೇಶಕ್ಕೆ ಹಾನಿಕರ”.

ಮಹಾತ್ಮಾ ಗಾಂಧಿಯವರ ಹತ್ಯೆ ನಡೆದ ಬೆನ್ನಿಗೇ ಆರ್ ಎಸ್ ಎಸ್ ಮೇಲೆ ನಿಷೇಧ ಹೇರಲಾಯಿತು. ಒಂದು ವರ್ಷದ ಬಳಿಕ ಅನೇಕ ಷರತ್ತುಗಳನ್ನು ವಿಧಿಸಿ ಆ ನಿಷೇಧವನ್ನು ಹಿಂದೆಗೆಯಲಾಯಿತು. ಆ ಷರತ್ತುಗಳಲ್ಲಿ ಒಂದು ಷರತ್ತೆಂದರೆ ‘ರಾಷ್ಟ್ರ ಧ್ವಜವನ್ನು ಒಪ್ಪಿಕೊಳ್ಳುವುದು’. 1949 ರ ಮೇ ತಿಂಗಳಲ್ಲಿ ಆಗಿನ ಗೃಹ ಕಾರ್ಯದರ್ಶಿ ಎಚ್ ವಿ ಆರ್ ಐಯ್ಯಂಗಾರ್ ಅವರು ಆಗಿನ ಆರ್ ಎಸ್ಎಸ್ ಮುಖ್ಯಸ್ಥ ಎಂ ಎಸ್ ಗೋಲ್ವಾಲ್ಕರ್ ಅವರಿಗೆ ಹೀಗೆ ಬರೆದರು, “ಪ್ರಭುತ್ವಕ್ಕೆ ವಿಧೇಯವಾಗಿರಲು ಯಾವುದೇ ಅಭ್ಯಂತರ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದಕ್ಕಾಗಿ, ರಾಷ್ಟ್ರ ಧ್ವಜವನ್ನು ನಿಶ್ಶರ್ತವಾಗಿ ಒಪ್ಪಿಕೊಳ್ಳುವುದು ಅತ್ಯಗತ್ಯ”. ಇದನ್ನು ಒಪ್ಪಿಕೊಳ್ಳದೆ ಆರ್ ಎಸ್ ಎಸ್ ಗೆ ಬೇರೆ ಆಯ್ಕೆಯೇ ಇರಲಿಲ್ಲ.

ರಾಷ್ಟ್ರ ಧ್ವಜದ ಮೌಲ್ಯಗಳನ್ನು ರಕ್ಷಿಸಿಕೊಳ್ಳಬೇಕಿದೆ.

ಒಂದು ರಾಷ್ಟ್ರವಾಗಿ ಭಾರತದ ಮಟ್ಟಿಗೆ, ರಾಷ್ಟ್ರ ಧ್ವಜವು ಮೂಲಭೂತವಾದ ಕೆಲವು ಮೌಲ್ಯಗಳನ್ನು ಬಿಂಬಿಸುತ್ತದೆ. ಧ್ವಜವು ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ಮತಧರ್ಮವನ್ನು ಮೀರಿದ ಸೆಕ್ಯುಲರ್ ಪೌರತ್ವದ ದೇಶಪ್ರೇಮವನ್ನು ಆಧರಿಸಿತ್ತು. ಬಾವುಟ ಹಾರಾಟ ಅಭಿಯಾನವು ಸಂವಿಧಾನದ ಪೀಠಿಕಾ ಭಾಗದ ಜತೆ ಜತೆಯಲ್ಲಿಯೇ ಸಾಗಬೇಕು. ಪೀಠಿಕಾ ಭಾಗದ ಮಹತ್ವದ ಸಾಲು ‘ವಿ ದ ಪೀಪಲ್ ಆಫ್ ಇಂಡಿಯಾ’ ಅಂದರೆ, ‘ನಾವು ಭಾರತದ ಜನತೆ’ ಎನ್ನುತ್ತದೆಯೇ ಹೊರತು, ‘ಹಿಂದೂಗಳಾದ ನಾವು, ಮುಸ್ಲಿಮರಾದ ನಾವು’ ಎಂದು ಹೇಳುವುದಿಲ್ಲ. ಈ ಮೌಲ್ಯಗಳು ಇದೀಗ ಅಧಿಕಾರದಲ್ಲಿರುವವರಿಂದ ಮತ್ತು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಬಲಪಡಿಸಿದ ಮಂದಿಯಿಂದ ಪ್ರಬಲ ಸವಾಲು ಎದುರಿಸುತ್ತಿದ್ದು, ಭಾರತ ಎಂಬ ಪರಿಕಲ್ಪನೆಯ ಮೂಲಾಧಾರವಾಗಿರುವ ಆ ಮೌಲ್ಯಗಳನ್ನು ನಾವು ರಕ್ಷಿಸಲು ಕಂಕಣ ಬದ್ಧರಾಗಬೇಕಿದೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಗುಲಾಬಿ ಬಿಳಿಮಲೆ
ಮಂಗಳೂರು ಮೂಲದವರಾದ ಇವರು,
ವೃತ್ತಿಯಿಂದ ಪತ್ರಕರ್ತೆ ಹಾಗು ಪ್ರವೃತ್ತಿಯಿಂದ ಬರಹಗಾರ್ತಿಯಾಗಿದ್ದಾರೆ.

ಅಸ್ಸಾಮಿನಲ್ಲೊಬ್ಬರು ಮಂಗಳೂರಿನ ಗಾಂಧೀವಾದಿ
ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ.

ಅಸ್ಸಾಮಿನ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕ ಮತ್ತು ಗಾಂಧಿ ಚಿಂತನೆಯ ಪ್ರಬಲ ಪ್ರತಿಪಾದಕರಲ್ಲಿ ‘ಬಿ.ಕೆ ಭಂಡಾರಿ’ಯವರ ಓರ್ವರು. ನಾನು ಈಶಾನ್ಯ ಭಾರತದ ಪ್ರವಾಸದಲ್ಲಿದ್ದಾಗ ಗುವಾಹಟಿಯ ಕಸ್ತೂರ್ಬಾ ಗಾಂಧಿ ಆಶ್ರಮದಲ್ಲಿ ಉಳಿದುಕೊಂಡಿದ್ದೆ. ಆ ಆಶ್ರಮದ ಗೋಡೆಯ ಮೇಲೆ ಅಸ್ಸಾಮಿನ ಮಹನೀಯರ ಭಾವಚಿತ್ರಗಳ ಮಧ್ಯೆ ಬಿ ಕೆ ಭಂಡಾರಿಯವರ ಚಿತ್ರವೂ ಇತ್ತು. ಕುತೂಹಲದಿಂದ ಅವರೆಲ್ಲರ ಬಗ್ಗೆ ಆಶ್ರಮವಾಸಿಗಳಲ್ಲಿ ಕೇಳುವಾಗ ಬಿ ಕೋಚಣ್ಣ ಭಂಡಾರಿಯವರ ಹೆಸರು ನನ್ನ ಕುತೂಹಲವನ್ನು ಕೆರಳಿಸಿತು. ಇದಂತು ಅಪ್ಪಟ ಕರಾವಳಿಯ ಬಂಟ ಸಮುದಾಯದ ಹೆಸರು !

ಆಶ್ರಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಿ ಕೆ ಭಂಡಾರಿಯವರ ಮಗಳು ನಯನ್ ಭಂಡಾರಿ ಶರ್ಮ ಬಂದಿದ್ದರು. ಇವರು ಅಸ್ಸಾಮಿನ ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಇಂಜಿನೀಯರ್ ಆಗಿ ನಿವೃತ್ತಿ ಹೊಂದಿದವರು. ಕಾರ್ಯಕ್ರಮದಲ್ಲಿ ಮಂಗಳೂರಿನ ನಾನು ಇದ್ದದ್ದನ್ನು ಅರಿತ ಅವರು ತಮ್ಮ ತಂದೆ ಮಂಗಳೂರು ಸಮೀಪದವರು, ಮಹಾತ್ಮ ಗಾಂದಿಯವರು ಮಂಗಳೂರಿಗೆ ಬಂದಿದ್ದಾಗ ಅವರೊಂದಿಗೆ ಅಸ್ಸಾಮಿಗೆ ತಮ್ಮ ಪತ್ನಿಯೊಂದಿಗೆ ಬಂದು ಇಲ್ಲಿಯೇ ನೆಲೆಸಿದರು ಎಂದರು. ಮಂಗಳೂರಿನ ಬಜ್ಪೆಯ ಸಮೀಪದ ಬೈಲು ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಓರ್ವ ರಾಷ್ಟ್ರೀಯ ಚಳುವಳಿಯ ಹೋರಾಟಗಾರ!

ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಮೂರು ಬಾರಿ ಬೇಟಿ ನೀಡಿದ್ದಾರೆ. 1920ರಲ್ಲಿ ಅಸಹಕಾರ ಚಳುವಳಿಯನ್ನು ಆರಂಭಿಸಿ ಅದರೊಂದಿಗೆ ಖಿಲಾಫತ್ ಚಳುವಳಿಗೆ ಭಾರತೀಯರ ಬೆಂಬಲ ಪಡೆಯಲು ಆಲಿ ಸಹೋದರರೊಂದಿಗೆ ರಾಷ್ಟ್ರವ್ಯಾಪಿ ಖಿಲಾಫತ್ ಪ್ರವಾಸ ಕೈಗೊಂಡು 19 ನೇ ಅಗಸ್ಟ್ 1920 ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದರು. ಸ್ವದೇಶಿ ಖಾದಿಯ ಪ್ರಚಾರ ಮಾಡುತ್ತಾ 26ನೇ ಅಕ್ಟೋಬರ್ 1927ರಂದು ಮಂಗಳೂರಿನಲ್ಲಿ ಜನತೆಯನ್ನು ಉದ್ಧೇಶಿಸಿ ಮಾತನಾಡಿದ್ದರು. 1933-34ರಲ್ಲಿ ಗಾಂಧೀಜಿಯವರ ಅಸ್ಪøಶ್ಯತೆಯ ವಿರುದ್ಧ ಅರಿವು ಮೂಡಿಸಲು ದೇಶಪ್ರವಾಸ ಮಾಡಿದಾಗ ಅವರು ಮಂಗಳೂರಿಗೆ ಮೂರನೇಯ ಭೇಟಿ ನೀಡಿದ್ದರು. 24ನೇ ಫೆಬ್ರವರಿ 1934ರಂದು ಮಡಿಕೇರಿಯಿಂದ ಸಂಪಾಜೆ, ಸುಳ್ಯ ಮೂಲಕ ಪುತ್ತೂರನ್ನು ತಲುಪಿ ಸಾರ್ವಜನಿಕ ಭಾಷಣ ಮಾಡಿದ್ದರು. ಅಲ್ಲಿನ ಹರಿಜನಕೇರಿಗೆ ಭೇಟಿ ನೀಡಿದ್ದರು. ಅಲ್ಲಿಂದ ಮಂಗಳೂರಿಗೆ ಬಂದು ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಮೂರು ಭೇಟಿಗಳು ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿದವು. ಅನೇಕ ತರುಣರು ರಾಷ್ಟ್ರೀಯ ಚಳುವಳಿಗೆ ಧುಮುಕಿದರು. ಅಂತ ಮಹನೀಯರಲ್ಲಿ ಬೈಲು ಕೋಚಣ್ಣ ಭಂಡಾರಿ ಓರ್ವರು.

ಬೈಲು ಕೋಚಣ್ಣ ಭಂಡಾರಿಯವರು 1935ರಲ್ಲಿ ಮಂಗಳೂರಿನ ಬಜ್ಪೆಯಲ್ಲಿ ವಾಸಿಸುತ್ತಿದ್ದರೆಂದು ಶಿವರಾಮ ಕಾರಂತರು ಹೇಳುತ್ತಾರೆ. ಇವರ ಪತ್ನಿ ಸಾವಿತ್ರಿಯವರು ಕಾರಂತರ ಪತ್ನಿ ಲೀಲಾರವರ ಸಹೋದರಿ. ಕಾಂಗ್ರೇಸಿನ ಸಕ್ರೀಯ ಕಾರ್ಯಕರ್ತರಾಗಿದ್ದ ಬಿ ಕೆ ಭಂಡಾರಿಯವರು ಪ್ರಸಿದ್ಧ ಸಮಾಜ ಸೇವಕ ‘ಥಕ್ಕರ್ ಬಾಪಾ’ರ ಅನುಯಾಯಿಯಾಗಿದ್ದರು. 1933ರಲ್ಲಿ ಗಾಂಧೀಜಿ ಅಸ್ಪøಶ್ಯತೆಯ ವಿರುದ್ಧ ಅರಿವು ಮೂಡಿಸಲು ‘ಹರಿಜನ ಸೇವಾ ಸಂಘ’ ಸ್ಥಾಪಿಸಿ ಭಾರತದಾದ್ಯಂತ ಪ್ರವಾಸ ಆರಂಭಿಸಿದರು. ಥಕ್ಕರ್ ಬಾಪಾ ಈ ಸಂಘದ ಕಾರ್ಯದರ್ಶಿಯಾಗಿ ಅಸ್ಸಾಂನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸೇವೆ ಮಾಡುತ್ತಿದ್ದರು. ಇದು ಬಿ ಕೆ ಭಂಡಾರಿಯವರನ್ನು ಆಕರ್ಷಿಸಿ 1936ರಲ್ಲಿ ಅಸ್ಸಾಂ ಕಡೆ ಪಯಣ ಬೆಳೆಸುವಂತೆ ಮಾಡಿತು. ಗಾಂಧೀಜಿಯವರ ಪ್ರವಾಸಗಳಲ್ಲಿ ಅವರ ಕಾರನ್ನು ತಾವೇ ಚಲಾಯಿಸುತ್ತಾರೆ. ಕಾಮರೂಪವನ್ನು ಕೇಂದ್ರವಾಗಿಟ್ಟುಕೊಂಡು ಸೇವೆಯನ್ನು ಅರಂಭಿಸಿದ ಭಂಡಾರಿಯವರು ಬಕ್ಸಾ ಎಂಬ ಜಾಗದ ಶೈಕ್ಷಣಿಕವಾಗಿ ಮತ್ತು ಸ್ವಚ್ಛತೆಯಲ್ಲಿ ಹಿಂದುಳಿದಿದ್ದ ಬೋರೊ ಮೊದಲಾದ ಬುಡಕಟ್ಟುಗಳ ಸೇವೆಯನ್ನು ಮಾಡುತ್ತಾರೆ. ಇದು ದಟ್ಟವಾದ ಕಾಡಿನಿಂದ ಆವೃತವಾದ ಸ್ಥಳವಾಗಿದ್ದು ಮಲೇರಿಯಾ, ಕಾಲಾರಗಳಿಂದ ಬಾಧಿತವಾಗಿತ್ತು. ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಾರೆ.

ಕೋಚಣ್ಣ ಭಂಡಾರಿಯವರ ಮೊದಲ ಪತ್ನಿ ಸುಮತಿಯವರು ಅಸ್ಸಾಮಿನಲ್ಲಿ ಮರಣಹೊಂದಿದ ನಂತರ ಅವರು ಮಂಗಳೂರು ಮೂಲದ ‘ಸಾವಿತ್ರಿ ಆಳ್ವ’ರನ್ನು ವಿವಾಹವಾಗುತ್ತಾರೆ. ಸಾವಿತ್ರಿಯವರು ತುಳು ಮೂಲದವರಾದರೂ ಅಸ್ಸಾಮಿ ಕಲಿತು ಅಸ್ಸಾಮಿ ಬಟ್ಟೆ ತೊಡಲು ಆರಂಭಿಸಿದರು. ಹೈನುಗಾರಿಕೆ, ಜೇನು, ಹೂದೋಟ, ತರಕಾರಿ ಮೊದಲಾದವನ್ನು ಬೆಳೆಸುವ ಅರಿವನ್ನು ಇವರು ಅಲ್ಲಿಯ ಮಹಿಳೆಯರಲ್ಲಿ ಮೂಡಿಸಿದರು. ಕೋಚಣ್ಣ ಭಂಡಾರಿಯವರಿಗೆ ಡಾ.ಸುಮನ್, ನಯನ್ ಭಂಡಾರಿ ಶರ್ಮ, ಶೋಭನ್ ಭಂಡಾರಿ ದೇಕಾ ಮತ್ತು ಮಲಯ ಭಂಡಾರಿ ದೇಕಾ ಎಂಬ ಪುತ್ರಿಯರು ಹಾಗೂ ಮೋಹನದಾಸ್ ಎಂಬ ಓರ್ವ ಪುತ್ರ. ಇವರಲ್ಲಿ ಡಾ. ಸುಮನ್ ಮರಣಹೊಂದಿದ್ದು ಉಳಿದವರೆಲ್ಲರೂ ಕುಟುಂಬದೊಂದಿಗೆ ಅಸ್ಸಾಮಿನಲ್ಲೇ ನೆಲೆಸಿದ್ದಾರೆ.

ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಬರಮದಲ್ಲಿ ಆರಂಭಿಸಿದ ಅಸ್ಸಾಂ ಸೇವಾ ಸಂಘ್ ಬಕ್ಸಾ, ಬರಮ ಮೊದಲಾದ ಹಿಂದುಳಿದ ಪ್ರದೇಶಗಳಲ್ಲಿ ಶಾಲೆಗಳು, ವಸತಿ ನಿಲಯಗಳ ಮತ್ತು ಆರೋಗ್ಯ ಕೇಂದ್ರಗಳನ್ನು ಆರಂಭಿಸಿತು. ಭಂಡಾರಿಯವರು ಅಸ್ಸಾಮಿನಲ್ಲಿ ಸೇವೆಯನ್ನು ಆರಂಭಿಸುವಾಗ ಅನೇಕ ಕೊರತೆಗಳಿದ್ದವು. ಸಂಘದ ಕಟ್ಟಡದ ನಿರ್ಮಾಣದ ಕೆಲಸವನ್ನು ಸ್ವತಃ ತಾವೇ ಮಾಡಿದ್ದರು. ಈ ಸಂಘದ ಅಡಿಯಲ್ಲಿ ಗೋರೊ, ಖಾಸಿ ಮೊದಲಾದ ಗಿರಿ ಪ್ರದೇಶಗಳಲ್ಲಿ ಕುಷ್ಠರೋಗಿಗಳ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದರು. ಮಂಗಳೂರಿನ ಬೈಲು ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಜನತೆಯ ಸೇವೆಯನ್ನು ಮಾಡಿ ಅಜರಾಮರರಾಗಿದ್ದಾರೆ.

ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಚರಣ್ ಐವರ್ನಾಡು
ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು.
ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು
ಇವರ ಬರವಣಿಗೆಯ ಕ್ಷೇತ್ರಗಳು

ಸ್ವಾತಂತ್ರ್ಯ ಸತ್ಯಾಗ್ರಹದ ಕಾರ್ನಾಡ ಸದಾಶಿವ ರಾವ್
1881 ರಲ್ಲಿ ರಾಧಾಬಾಯಿ ಮತ್ತು ರಾಮಚಂದ್ರ ರಾವ್ ಅವರ ಏಕೈಕ ಮಗನಾಗಿ ಜನಿಸಿದ ಕಾರ್ನಾಡ ಸದಾಶಿವ ರಾವ್, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನಂತರ ಕಾನೂನು ಅಧ್ಯಯನ ಮಾಡಲು ಬಾಂಬೆಗೆ ಹೋದರು. 1909 ರಲ್ಲಿ  ವಕೀಲರಾಗಿ ಮಂಗಳೂರಿಗೆ ಹಿಂದಿರುಗಿದರು ಮತ್ತು ಬಹುಬೇಗ ಖ್ಯಾತಿ ಪಡೆದರು. 1911 ರಲ್ಲಿ  ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಅವರ ಮುಖ್ಯ ಧ್ಯೇಯ/ಗುರಿ ಮಹಿಳೆಯರ ಅಭ್ಯುದಯವಾಗಿತ್ತು. ಅವರು ತಮ್ಮ ಪತ್ನಿ ಶಾಂತಾಬಾಯಿಯವರ ಸಹಾಯದಿಂದ ಮಹಿಳೆಯರನ್ನು, ತಮ್ಮ ಮನೆಯಿಂದ ಹೊರ ಬರಲು ಪ್ರೋತ್ಸಾಹಿಸಿದ್ದರು ಮತ್ತು ಮಹಿಳಾ ಸಭೆಗಳನ್ನು ಆರಂಭಿಸಿದರು. ಮಹಿಳೆಯರಿಗೆ ಪ್ರಾಥಮಿಕ ಶಿಕ್ಷಣ ನೀಡುವುದರ ಜೊತೆಗೆ ತಮ್ಮ ಪತ್ನಿಯ ಸಹಾಯದಿಂದ ಮಹಿಳೆಯರಿಗೆ ಹೊಲಿಗೆ, ಬುಟ್ಟಿ ತಯಾರಿಕೆ ಮತ್ತು ಇತರ ಉಪಯುಕ್ತ ತರಗತಿಗಳನ್ನು ಪ್ರಾರಂಭಿಸಿದರು. ವಿಧವೆಯ ಸಬಲೀಕರಣದ ಭಾಗವಾಗಿ, ವಿಧವಾ ಸಂಪ್ರದಾಯವನ್ನು ಮುರಿದು ಈ ತರಗತಿಗಳಿಗೆ ಸೇರಲು ಪ್ರೋತ್ಸಾಹಿಸಿದರು.

ಮಂಗಳೂರಿನ ಅಸ್ಪೃಶ್ಯರಲ್ಲಿ ಮತ್ತೊಬ್ಬ ಸಮಾಜ ಸೇವಕ ಕುದ್ಮುಲ್ ರಂಗ ರಾವ್ ರವರೊಂದಿಗೆ ಕೈ ಜೋಡಿಸಿ ಹರಿಜನರ ಉನ್ನತಿಗಾಗಿ ಶ್ರಮಿಸಿದರು. ಮೇಲ್ಜಾತಿಯ ದೇವಾಲಯಗಳು ಅಸ್ಪೃಶ್ಯರಿಗೆ ಪ್ರವೇಶ ನೀಡದ ಕಾರಣ,  ಅಸ್ಪೃಶ್ಯತೆಯನ್ನು ತೊಡೆದುಹಾಕಲು ದೇವಾಲಯದ ಬಳಿ  ಅಸ್ಪೃಶ್ಯರಿಗೆ ಭೋಜನವನ್ನು ಏರ್ಪಡಿಸಿ, ಅವರೊಂದಿಗೆ ಕುಳಿತು ಆಹಾರವನ್ನು ಸೇವಿಸಿದರು.

1919 ರ ಹೊತ್ತಿಗೆ, ಸದಾಶಿವ ರಾವ್‌ ರವರು, ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿ ಕೊಂಡರು. ಗಾಂಧಿಯವರ ಸತ್ಯಾಗ್ರಹ ಚಳುವಳಿಯಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದವರಲ್ಲಿ ಕರ್ನಾಟಕದಿಂದ ಮೊದಲಿಗರಾಗಿದ್ದರು.  ಕಾಂಗ್ರೆಸ್ ಪಕ್ಷದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದ ಸದಾಶಿವ ರಾವ್‌ ರವರಿಗೆ, ಕರ್ನಾಟಕದಲ್ಲಿ ಪಕ್ಷವನ್ನು ವಿಸ್ತರಿಸುವ ಜವಾಬ್ದಾರಿ ನೀಡಲಾಗಿತ್ತು. ಇವರು ಇಡೀ ದಕ್ಷಿಣ ಕೆನರಾ ಜಿಲ್ಲೆಯ ಅಸಹಕಾರ ಚಳವಳಿಯ ಆತ್ಮವಾಗಿದ್ದರು. ಸದಾಶಿವ ರಾವ್ ರವರನ್ನು 1937 ರ ಪ್ರಾಂತೀಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಪರಿಗಣಿಸಲಾಗಿತ್ತು.

1967 ರಲ್ಲಿ ಅಂದಿನ ರಾಷ್ಟ್ರಪತಿಗಳು ಉದ್ಘಾಟಿಸಿದ ಮಂಗಳೂರಿನ ಕೇಂದ್ರ ಗ್ರಂಥಾಲಯಕ್ಕೆ ಕಾರ್ನಾಡ್ ಸದಾಶಿವ ರಾವ್ ರವರ ಹೆಸರನ್ನು ಇಡಲಾಗಿದೆ.

ಭಾರತೀಯ ಕ್ರಾಂತಿಕಾರಿ ಕಲ್ಪನಾ ದತ್ತಾ
ಕಲ್ಪನಾ ದತ್ತಾ ಅವರು ಮಾಸ್ಟರ್ ಡಾ.ಸೂರ್ಯ ಸೇನ್ ಅವರ ಕ್ರಾಂತಿಕಾರಿ ಗುಂಪಿನ ಸದಸ್ಯರಲ್ಲಿ ಒಬ್ಬರು (ಪ್ರಭಾವಿ ಭಾರತೀಯ ಕ್ರಾಂತಿಕಾರಿ). ಈಕೆ ಪ್ರೀತಿಲತಾ ವಡ್ಡೆದಾರ್ ಅವರ ಕೆಲಸವನ್ನು ಮುಂದುವರೆಸಿದ್ದರು. ಛಾತ್ರಿ ಸಂಘಟನೆಯ (ಮಹಿಳೆಯರ ಅರೆ ಕ್ರಾಂತಿಕಾರಿ ಸಂಸ್ಥೆ, ಕೋಲ್ಕತ್ತಾ) ಸದಸ್ಯರಾಗಿದ್ದರು. ಅವರು ಶಸ್ತ್ರಾಗಾರದ ಲೂಟಿ ಮತ್ತು ಪಹರ್ತೋಲಿ ಕ್ಲಬ್ ಅನ್ನು ಸುಡುವ ಮೊದಲ ಪ್ರಯತ್ನ ಮಾಡಿದ ತಂಡದ ಭಾಗವಾಗಿದ್ದರು (ಈ ದಾಳಿಯು ಪ್ರೀತಿಲತಾ ಸಾವಿಗೆ ಕಾರಣವಾಯಿತು). ಕಲ್ಪನಾ ದತ್ತಾ ಮತ್ತು ಮಾಸ್ಟರ್ ದಾ ಮಾಡಿದ ಎರಡನೇ ದಾಳಿಯ ಪ್ರಯತ್ನದಲ್ಲಿ, ಬ್ರಿಟಿಷರು ಮೊದಲೇ ಸಿದ್ಧರಾಗಿದ್ದರು. ಆ ಸಮಯದಲ್ಲಿ ಕಲ್ಪನಾ ದತ್ತಾ ತಪ್ಪಿಸಿಕೊಂಡರು, ಆದರೆ ಮಾಸ್ಟರ್ ದ ರವರು 1933 ರಲ್ಲಿ ಸೆರೆಹಿಡಿಯಲ್ಪಟ್ಟರು.  ಮೂರು ತಿಂಗಳ ನಂತರ, ಚಿತ್ತಗಾಂಗ್ ಶಸ್ತ್ರಾಸ್ತ್ರ ಲೂಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಈಕೆಯನ್ನು ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆರು ವರ್ಷಗಳ ನಂತರ  ಬಿಡುಗಡೆ ಮಾಡಲಾಯಿತು.

ಕಲ್ಪನಾ ದತ್ತಾ ವಿಜ್ಞಾನ ಕಲಿತ ವಿದ್ಯಾರ್ಥಿನಿ. ಖುದಿರಾಮ್ ಬೋಸ್ ಅವರ ಪ್ರಾಣತ್ಯಾಗದಿಂದ  ಪ್ರಭಾವಗೊಂಡಿದ್ದರು. ಚಿತ್ತಗಾಂಗ್‌ ನಲ್ಲಿದ್ದಾಗಲೇ ದೇಶಭಕ್ತಿಯು ಈಕೆಯ ಜೀವನದಲ್ಲಿ ಪ್ರವೇಶ ಮಾಡಿತ್ತು. ಕೋಲ್ಕತ್ತಾದ ಬೆಥೂನ್ ಕಾಲೇಜಿನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾಗ ಇದು ಮತ್ತಷ್ಟು ದೃಢವಾಯಿತು. ಹೋರಾಟದ ಹಾದಿಯಲ್ಲೇ, ಕಲ್ಪನಾ, 1995 ರಲ್ಲಿ ಕೊನೆಯುಸಿರೆಳೆದರು.

ಸ್ವಾತಂತ್ರ್ಯ ಹೋರಾಟಗಾರ ಉಳ್ಳಾಲ ಶ್ರೀನಿವಾಸ ಮಲ್ಯ
1902 ರಲ್ಲಿ ಉಳ್ಳಾಲ ಮಂಜುನಾಥ್ ಮಲ್ಯ ಮತ್ತು ರುಕ್ಮಾ ಬಾಯಿ ದಂಪತಿಗೆ ಜನಿಸಿದ ಉಳ್ಳಾಲ ಶ್ರೀನಿವಾಸ ಮಲ್ಯರವರು ಮಂಗಳೂರಿನಲ್ಲಿ ಜನಿಸಿದರು ಮತ್ತು ಅಲ್ಲಿಯೇ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು.

1920 ರಲ್ಲಿ ಮಂಗಳೂರಿಗೆ ಗಾಂಧೀಜಿಯವರ ಖಿಲಾಫತ್ ಭೇಟಿಯು, ಯುವಕ ಶ್ರೀನಿವಾಸ್ ಮಲ್ಯರ ಮೇಲೆ ಹೆಚ್ಚಿನ ಪ್ರಭಾವ ಬೀರಿತ್ತು.ಆ ವೇಳೆಗಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ನಿರ್ಧರಿಸಿದ್ದರು.  ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ವಯಂಸೇವಕರಾಗಿದ್ದರು. ಮಲ್ಯರಲ್ಲಿದ್ದ ಅಪಾರ ಸಾಮರ್ಥ್ಯಗಳು, ಬುದ್ಧಿಶಕ್ತಿ ಮತ್ತು ನಿಷ್ಠೆಯ ಕೆಲಸದಿಂದಾಗಿ ಅವರನ್ನು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ‍ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ಅವರು, ಮಂಗಳೂರಿನ ಕಲಮಾದೇವಿ ಚಟ್ಟೋಪಾದ್ಯಾಯರಿಂದಲೂ  ಪ್ರಭಾವಿತಗೊಂಡಿದ್ದರು. 1930 ರ ದಶಕದಲ್ಲಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ, ಅನೇಕ ಸಂದರ್ಭಗಳಲ್ಲಿ ಭೂಗತರಾಗಬೇಕಾಯಿತು. ಮಲ್ಯ ರವರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ  ಜೈಲುವಾಸವನ್ನು ಅನುಭವಿಸಿದ್ದರು. ಗಾಂಧೀಜಿಯವರ ಖಾದಿ ಮತ್ತು ಗ್ರಾಮೋದ್ಯೋಗ, ದಲಿತರ ದೇವಾಲಯ ಪ್ರವೇಶ, ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅನುಷ್ಠಾನಗೊಳಿಸುವುದು, ಅಸ್ಪೃಶ್ಯತೆ ನಿರ್ಮೂಲನೆ ಮುಂತಾದ ಕಾರ್ಯಕ್ರಮಗಳನ್ನು ಉತ್ತೇಜಿಸುವಲ್ಲಿ  ಸಕ್ರಿಯವಾಗಿ ಭಾಗವಹಿಸಿದರು.

ಶ್ರೀನಿವಾಸ್ ಮಲ್ಯರವರನ್ನು ದೆಹಲಿ ಸಮಿತಿಯ ಸಂವಿಧಾನ ಸಭೆಯ ಸದಸ್ಯರನ್ನಾಗಿ ನೇಮಿಸಲಾಯಿತು. 1948 ರಿಂದ ಅವರ ಮರಣದವರೆಗೂ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದರು. 1952 ರಲ್ಲಿ ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿಯವರೊಂದಿಗೆ ಪಕ್ಷದ ‍ಕಾರ್ಯದರ್ಶಿಯಾಗಿ ನೇಮಕಗೊಂಡರು. ನಂತರ ಅವರು ಮಂಗಳೂರು ಉತ್ತರ ಕ್ಷೇತ್ರಕ್ಕೆ ಸಂಸದರಾಗಿ ನೇಮಕವಾದರು.

ಮಲ್ಯರವರು ತಮ್ಮ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದರು. ಅವರನ್ನು “ಆಧುನಿಕ ದಕ್ಷಿಣ ಕನ್ನಡ ಜಿಲ್ಲೆಯ ಪಿತಾಮಹ” ಎಂದು ಕರೆಯಲಾಗುತ್ತದೆ.

ಸ್ವಾತಂತ್ರ್ಯ ಸತ್ಯಾಗ್ರಹದ ದಕ್ಷ ಸತ್ಯಾಗ್ರಹಿ ಸ್ನೇಹಲತಾ ವರ್ಮಾ
ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಾಣಿಕ್ಯಲಾಲ್ ವರ್ಮಾರವರ ಪುತ್ರಿ ಶ್ರೀಮತಿ. ಸ್ನೇಹಲತಾ ವರ್ಮಾಅವರು ತಮ್ಮ ಅಜ್ಜಿಯೊಂದಿಗೆ, ತಂದೆಯವರ ನೇತೃತ್ವದ ಬಿಜೋಲಿಯಾ ರೈತ ಚಳವಳಿಯಲ್ಲಿ ಭಾಗವಹಿಸಿದ್ದರು. ತಮ್ಮ ತಂದೆಯ ದಾರಿಯಲ್ಲಿಯೇ ಸಾಗಿದ ಸ್ನೇಹಲತಾರವರು, ಇದೇ ಕಾರಣಕ್ಕಾಗಿ ಎಷ್ಟೋ ಬಾರಿ ದೌರ್ಜನ್ಯವನ್ನು ಎದುರಿಸಬೇಕಾಯಿತು. ಆಕೆಯ ಈ ಪ್ರಯತ್ನಕ್ಕೆ, ಪತಿ ಶ್ರೀ ಹರೀಶ್ ಚಂದ್ರ ಪ್ರವಾಸಿಯವರ ಸಂಪೂರ್ಣ ಸಹಕಾರವಿತ್ತು. ಉದಯಪುರದಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು. ಅವರ ತಾಯಿ ‘ಮಹಿಳಾ ಸಂಘಟನೆ’ಯನ್ನು ಸ್ಥಾಪಿಸಿದರು. ಮುಂದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಲು ಸ್ನೇಹಲತಾ ವರ್ಮಾರವರು ಈ ಸಂಘಟನೆಯನ್ನು ಹೋರಾಟದ ವೇದಿಕೆಯನ್ನಾಗಿ ಮಾಡಿಕೊಂಡರು. ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಕಾರ್ಯಗಳನ್ನು ನಿರ್ವಹಿಸಿದರು.  ಸ್ವಾತಂತ್ರ್ಯದ ಅಗತ್ಯದ ಬಗ್ಗೆ ಮತ್ತು ಮೇವಾರದ ಅಭಿವೃದ್ಧಿಯ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.