Freedom of Expression Award – Peepal Media

ಫ್ಯಾಕ್ಟ್‌ ಚೆಕರ್‌ ಜುಬೇರ್‌ಗೆ 2023ರ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿ
ಬೆಂಗಳೂರು, ಅಕ್ಡೋಬರ್‌.20:  ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್‌ವರಿಗೆ ಅಕ್ಟೋಬರ್‌ 20, ಶುಕ್ರವಾರದಂದು ಪತ್ರಿಕಾರಂಗದ 2023 ರ Freedom of Expression Award ಘೋಷಣೆಯಾಗಿದೆ. ಈ ಪ್ರಶಸ್ತಿಯನ್ನು Index on Censorship ಸಂಸ್ಥೆ ನೀಡಿದೆ.

“ಆಡಳಿತ ಪಕ್ಷದ ಪ್ರಭಾವಿ ನಾಯಕರು ಹಂಚಿದ ತಪ್ಪು ಮಾಹಿತಿಗಳನ್ನು ಪ್ರಶ್ನಿಸಿ ಜುಬೈರ್  ಬೆದರಿಕೆಗಳನ್ನು ಎದುರಿಸಿದ್ದರು” ಎಂದು ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್ ಹೇಳಿದೆ.

ಲಂಡನ್ ಮೂಲದ Index on Censorship ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕೆಲಸ ಮಾಡುತ್ತಿದೆ. Freedom of Expression ಪ್ರಶಸ್ತಿಗಳನ್ನು ಕಲೆ, ಪ್ರಚಾರ, ಪತ್ರಿಕೋದ್ಯಮ ಮತ್ತು ಟ್ರಸ್ಟಿ – ಎಂಬ ನಾಲ್ಕು ವಿಭಾಗಗಳಲ್ಲಿ ನೀಡಲಾಗಿದೆ. ವಿಜೇತರನ್ನು ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌ನಲ್ಲಿ ಸನ್ಮಾನಿಸಲಾಗುತ್ತದೆ.

“ನನ್ನ ಮೇಲೆ ದಾಳಿಯಾದಾಗ, ನಿಂದಿಸಿದಾಗ ಮತ್ತು ನನ್ನ ಕೆಲಸವನ್ನು ಮಾಡಿದ್ದಕ್ಕಾಗಿ ಜೈಲಿಗೆ ಹಾಕಿದಾಗ ನನ್ನ ಬೆಂಬಲಕ್ಕೆ ನಿಂತ”ವರಿಗೆ ಜುಬೇರ್ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

ಪ್ರಶಸ್ತಿ ಘೋಷಣೆಯಾದ ಹಿನ್ನಲೆಯಲ್ಲಿ ಮೊಹಮ್ಮದ್ ಜುಬೇರ್‌ ಮಾತುಗಳು: ಮೊಹಮ್ಮದ್ ಜುಬೇರ್‌

ಕಳೆದ ವರ್ಷ ಜುಬೈರ್‌ 24 ದಿನಗಳ ಕಾಲ ಜೈಲು ವಾಸದಲ್ಲಿದ್ದು, ಸುಪ್ರೀಂ ಕೋರ್ಟ್‌ ಜಾಮೀನು ಮೇರೆಗೆ ಹೊರಬಂದಿದ್ದರು. ಜುಬೇರ್‌ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಆರು ಮತ್ತು ದೆಹಲಿಯಲ್ಲಿ ಒಂದು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಸೊಮಾಲಿಯಾದ ಮೊದಲ ಮಹಿಳೆಯರೇ ನಡೆಸುವ ಮಾಧ್ಯಮ ಸಂಸ್ಥೆ ಬಿಲಾನ್ ಮೀಡಿಯಾ ಮತ್ತು ಈ ವರ್ಷದ ಜನವರಿಯಲ್ಲಿ ತಾಲಿಬಾನಿಗಳಿಂದ ಬಂಧನಕ್ಕೊಳಗಾದ ಅಫ್ಘಾನ್ ಪತ್ರಕರ್ತ ಮೊರ್ತಜಾ ಬೆಹಬೌಡಿ ಅವರ ಹೆಸರೂ ಪಟ್ಟಿಯಲ್ಲಿತ್ತು.

ಫ್ರೀಡಂ ಆಫ್ ಎಕ್ಸ್‌ಪ್ರೆಶನ್ ಅವಾರ್ಡ್ಸ್‌ ಪ್ರಶಸ್ತಿಗೆ ಈ ಹಿಂದೆ ಪತ್ರಿಕೋದ್ಯಮ ವಿಭಾಗದಿಂದ ತಮ್ಮ MeToo ಚಳವಳಿಯಲ್ಲಿ ವಹಿಸಿದ  ಮಹತ್ವದ ಪಾತ್ರಕ್ಕಾಗಿ 2022 ರಲ್ಲಿ ಚೀನಾದ ಪತ್ರಕರ್ತೆ ಹುವಾಂಗ್ ಕ್ಸುಕಿನ್ ಭಾಜನರಾಗಿದ್ದರು.  ಸೆಪ್ಟೆಂಬರ್ 2021 ರಲ್ಲಿ ಕಣ್ಮರೆಯಾದ ಇವರು ಮತ್ತು ಕಾರ್ಮಿಕಪರ ಹೋರಾಟಗಾರ ವಾಂಗ್ ಜಿಯಾನ್‌ಬಿಂಗ್ ವಿರುದ್ಧ “ದೇಶದ ಅಧಿಕಾರದ ವಿಧ್ವಂಸಕತೆಯನ್ನು ಪ್ರಚೋದಿಸುವ” ಆರೋಪದ ಮೇಲೆ ಚೀನಾ ಸರ್ಕಾರ ಬಂಧಿಸಿತು. ಸದ್ಯ ಇವರು ಬಂಧನದಲ್ಲಿಯೇ ಇದ್ದಾರೆ.

2021 ರಲ್ಲಿ ನೈಜೀರಿಯಾ ಪತ್ರಕರ್ತೆ ಸಮೀರಾ ಸಬೌ ಪ್ರಶಸ್ತಿಯನ್ನು ಗೆದ್ದಿದ್ದರು. 2020 ರಲ್ಲಿ ನಡೆದ ರಕ್ಷಣಾ ಸಚಿವಾಲಯದ ಭ್ರಷ್ಟಾಚಾರವನ್ನು ವರದಿ ಮಾಡಿದ್ದಕ್ಕಾಗಿ 2021 ರಲ್ಲಿ ಅವರನ್ನು ಅನೇಕ ಬಾರಿ ಬಂಧಿಸಿದರು.