games – Peepal Media

ಉರಿದ ಸೂರ್ಯ, ಕಂಗೊಳಿಸಿದ ಕೊಹ್ಲಿ
ಭಾರತಕ್ಕೆ ಸರಣಿ

ಹೈದರಾಬಾದ್ ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಕಿಂಗ್ ಕೊಹ್ಲಿ ಅಬ್ಬರದ ಆಟದಿಂದಾಗಿ ಭಾರತ ಆಸ್ಟ್ರೇಲಿಯಾ ವಿರುದ್ಧದ ಟಿ 20 ಕ್ರಿಕೆಟ್ ಸರಣಿಯನ್ನು ಗೆದ್ದುಕೊಂಡಿದೆ.

3 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಪಂದ್ಯ ಗೆದ್ದರೆ ಮಳೆಯಿಂದ ಎಂಟು ಓವರ್ ಗಳಿಗೆ ಸೀಮಿತವಾಗಿದ್ದ ಎರಡನೇ ಪಂದ್ಯದಲ್ಲಿ ಭಾರತ ಗೆದ್ದಿತ್ತು. ಹಾಗಾಗಿ ನಿರ್ಣಾಯಕ ಎನಿಸಿದ್ದ ಮೂರನೇ ಪಂದ್ಯ ಎರಡೂ ತಂಡಗಳಿಗೂ ಅಗ್ನಿಪರೀಕ್ಷೆ ಆಗಿತ್ತು. ಆದರೆ ಇದರಲ್ಲಿ ಭಾರತ ಗೆದ್ದು ಬೀಗಿತು.

ಟಾಸ್ ಗೆದ್ದು ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗಿಗೆ ಇಳಿಸಿದ ಭಾರತ ಕಡಿಮೆ ಮೊತ್ತಕ್ಕೆ ಎದುರಾಳಿಯನ್ನು ಕಟ್ಟಿಹಾಕುವ ಯೋಚನೆ ಮಾಡಿತ್ತು. ಆದರೆ, ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಮತ್ತು ಟಿಮ್ ಡೇವಿಡ್ ಭಾರತದ ಬೋಲರ್ ಗಳನ್ನು ಕಾಡಿ ತ್ವರಿತ ಗತಿಯ ಅರ್ಧಶತಕಗಳನ್ನು ಗಳಿಸಿದರು. ಹಾಗಾಗಿ ಭಾರತಕ್ಕೆ 187 ರನ್ ಗಳ ಗುರಿ ಸಿಕ್ಕಿತ್ತು.

ಈ ಬಾರಿ ರಾಹುಲ್ ಮತ್ತು ರೋಹಿತ್ ಅವರಿಂದ ಹೇಳಿಕೊಳ್ಳುವ ಆರಂಭ ಭಾರತಕ್ಕೆ ಸಿಗಲಿಲ್ಲ. ಆದರೆ ಇವರಿಬ್ಬರ ವಿಕೆಟ್ ಪತನದ ನಂತರ ಅಸಲೀ ಆಟ ಈಗ ಶುರು ಎಂಬಂತೆ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅಬ್ಬರದ ಆಟ ಆಡಿದರು. ಇವರಿಬ್ಬರ ಜೋಡಿ ಭಾರತವನ್ನು ಗೆಲುವಿನ ಸಮೀಪ ಕೊಂಡೊಯ್ಯಿತು.

ತಲಾ ಅರ್ಧ ಶತಕ ಗಳಿಸಿದ ಈ ಇಬ್ಬರೂ ಆಟಗಾರರು ನೆರೆದಿದ್ದ ಪ್ರೇಕ್ಷಕರಿಗೆ ನಿಜವಾದ ಕ್ರಿಕೆಟ್ ನ ಮಜಾ ನೀಡಿದರು. ಬೌಂಡರಿ, ಸಿಕ್ಸರ್ ಗಳ ಮಳೆ ಸುರಿಸಿದ ಈ ಜೋಡಿಯ ಬ್ಯಾಟಿಂಗ್ ಹಬ್ಬ ಕ್ರಿಕೆಟ್ ಪ್ರಿಯರಿಗೆ ಮುದ ನೀಡಿತು. ಅದರಲ್ಲೂ ಆಕ್ರಮಣಕಾರಿಯಾಗಿದ್ದ ಸೂರ್ಯಕುಮಾರ್ ಯಾದವ್ ಕೆಲವು ಮನಮೋಹಕ ಹೊಡೆತಗಳನ್ನು ಬಾರಿಸಿ ವಿಶ್ವಕಪ್ ಪಂದ್ಯಾವಳಿಗೆ ತಾವು ಸಿದ್ದ ಎಂಬ ಮೆಸೇಜ್ ಕೊಟ್ಟರು.

ಇನ್ನು ಸೂರ್ಯ ಕುಮಾರ್ ಯಾದವ್ ಔಟ್ ಆಗುವವರೆಗೂ ಇನ್ನೊಂದು ತುದಿಯಲ್ಲಿ ಕೂಲ್ ಆಗಿ ಆಡುತ್ತಿದ್ದ ಕೊಹ್ಲಿ, ಸೂರ್ಯನ ನಿರ್ಗಮನದ ನಂತರ ಅಗ್ರೆಸಿವ್ ಆದರು. ಜೊತೆಗೆ ಜಂಪಾ ಅವರಿಗೆ ಪದೇ ಪದೇ ಔಟ್ ಆಗುತ್ತಾರೆ ಎಂಬ ಕಳಂಕವನ್ನು ತೊಡೆದು ಹಾಕಲು ತೊಡೆ ತಟ್ಟಿ ಬಂದವರಂತೆ ಆಡಿದ ಕೊಹ್ಲಿ, ಆರಂಭದಿಂದಲೂ ಆಡಂ ಜಂಪಾ ಅವರನ್ನೇ ಗುರಿಯಾಗಿಸಿಕೊಂಡು ರನ್ ಸುರಿಮಳೆಗೈದರು. ಈ ಜೋಡಿಯ ಅಬ್ಬರದ ಆಟದ ಪರಿಣಾಮ, ಸೂರ್ಯ ಔಟ್ ಆದ ಮೇಲೆ ಕೊನೆಯ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 11 ರನ್ ಗಳ ಅಗತ್ಯ ಇತ್ತು. ಆದರೆ ಮೊದಲ ಚೆಂಡನ್ನೇ ಸಿಕ್ಸರ್ ಗೆ ಅಟ್ಟಿದ ಕೊಹ್ಲಿ ಗೆಲುವನ್ನು ಸುಲಭ ಮಾಡಿ, 48 ಬಾಲಿಗೆ 63 ರನ್ ಗಳಿಸಿದರು. ಹಾಗಾಗಿ ಮರು ಎಸೆತದಲ್ಲಿ ಅವರು ಔಟ್ ಆದರೂ ಹಾರ್ದಿಕ್ ಪಾಂಡ್ಯ ಮತ್ತು ದಿನೇಸ್ ಕಾರ್ತಿಕ್ ಅವರಿಗೆ ಗುರಿಮುಟ್ಟಲು ಕಷ್ಟ ಆಗಲಿಲ್ಲ. ಇನ್ನೂ ಒಂದು ಎಸೆತ ಬಾಕಿ ಇರುವಂತೆ ಗುರಿ ತಲುಪಿ 6 ವಿಕೆಟ್ ಗಳ ಗೆಲುವು ಸಾಧಿಸಿತು ಭಾರತ.

36 ಬಾಲ್ ನಲ್ಲಿ 69 ರನ್ ಗಳಿಸಿ ಅಬ್ಬರದ ಆಟವಾಡಿದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಎನಿಸಿಕೊಂಡರೆ, ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ಫೈನಲ್ ಪಂದ್ಯದಲ್ಲೂ 3 ವಿಕೆಟ್ ಪಡೆದ ಅಕ್ಸರ್ ಪಟೇಲ್ ಸರಣಿ ಶ್ರೇಷ್ಠ ಎನಿಸಿಕೊಂಡರು. ತಂಡದ ಸೀನಿಯರ್ ಪ್ಲೇಯರ್ ಗಳಲ್ಲಿ ಒಬ್ಬರಾಗಿದ್ದರೂ, ಮಾಜಿ ನಾಯಕ ಕೊಹ್ಲಿ ಮೋಸ್ಟ್ ಎನರ್ಜಿಟಿಕ್ ಪ್ಲೇಯರ್ ಪ್ರಶಸ್ತಿ ಗಳಿಸಿದ್ದು ವಿಶೇಷವಾಗಿತ್ತು. ಈಗ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯನ್ನು ಕೂಡಾ ಗೆದ್ದು ವಿಶ್ವಕಪ್ ಟಿ 20ಗೆ ತನ್ನನ್ನು ತಾನು ಸಿದ್ಧ ಮಾಡಿಕೊಳ್ಳುವುದು ಬಾರತ ತಂಡದ ಮುಂದಿನ ಗುರಿ. ಅಂದಹಾಗೆ, ದಕ್ಷಿಣಾ ಆಫ್ರಿಕಾ ವಿರುದ್ದದ ಸರಣಿ ಇದೇ 28ರ ಬುಧವಾರದಿಂದ ಆರಂಭವಾಗಲಿದೆ.

🔶 ಗ್ರೂಪ್ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/GBc6sg7E2FQLuXblEdBxSi

ಇದನ್ನೂ ನೋಡಿ:https://www.facebook.com/watch/?v=396425086012198

ಗ್ರೀನ್, ವೇಡ್ ಮುಂದೆ ಫೇಡ್ ಆದ ಭಾರತ, ಮೊದಲ ಪಂದ್ಯದಲ್ಲಿ ರೋಹಿತ್ ಬಳಗಕ್ಕೆ ಸೋಲು
ಉತ್ತಮ ಬ್ಯಾಟಿಂಗ್ ನ ಹೊರತಾಗಿಯೂ 208 ರನ್ ಗಳ ಸವಾಲಿನ ಮೊತ್ತವನ್ನು ಎದುರಾಳಿ ಆಸೀಸ್ ಮುಂದಿಟ್ಟ ಭಾರತ ತಂಡ ಕೊನೆಗೂ  ಮೊದಲ ಟಿ 20 ಪಂದ್ಯದಲ್ಲಿ ಸೋಲನುಭವಿಸಬೇಕಾಯ್ತು.

ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಕೊಟ್ಟ ಆಸ್ಟ್ರೇಲಿಯಾ ತಂಡ ನಾಯಕ ರೋಹಿತ್ ಅವರನ್ನು ಕೇವಲ 11 ರನ್ ಗೆ ಔಟ್ ಮಾಡಿತು. ಇದಾದ ನಂತರ ಕಳೆದ ಪಂದ್ಯದ ಶತಕ ವೀರ ವಿರಾಟ್ ಕೊಹ್ಲಿ ಕೂಡಾ ಕೇವಲ 2 ರನ್ ಗಳಿಸಿ ನಿರ್ಗಮಿಸಿದರು. ಆದರೆ ನಂತರ ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಮತ್ತು ಶ್ರೇಷ್ಠ  ಪ್ರದರ್ಸನ ತೋರಿದ ಹಾರ್ದಿಕ್ ಪಾಂಡ್ಯ ಅವರ ಬ್ಯಾಟಿಂಗ್ ನೆರವಿನಿಂದ ಭಾರತ 208 ರನ್ ಗಳ ಮೊತ್ತ ಕಲೆ ಹಾಕಿತು. ಇದನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡಕ್ಕೆ ಫಿಂಚ್ ಮತ್ತು ಗ್ರೀನ್ ಅಬ್ಬರದ ಆರಂಭ ಕೊಟ್ಟರು. ಅದರಲ್ಲೂ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೊದಲ ಪಂದ್ಯದಲ್ಲೇ ಕ್ಯಾಮೆರಾನ್ ಗ್ರೀನ್ ಅಬ್ಬರಿಸಿದರು. 30 ಬಾಲುಗಳಲ್ಲಿ 61 ರನ್ ಗಳಿಸಿದ ಅವರು ತಮ್ಮ ತಂಡದ ಗೆಲುವಿನ ರೂವಾರಿ ಎನಿಸಿದರು.

ನಂತರದ ಕೆಲವು ಓವರ್ ಗಳಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಕಳೆದುಕೊಂಡರೂ ಮ್ಯೂಥ್ಯೂ ವೇಡ್ 21 ಬಾಲ್ ಗಲಲ್ಲಿ 45 ರನ್ ಗಳಿಸಿ ತಂಡವನ್ನು ಗೆಲುವನಿನ ದಡ ಮುಟ್ಟಿಸಿದರು. ಈ ಮಧ್ಯೆ ಹಲವು ಕ್ಯಾಚ್ ಗಳನ್ನು ಕೈ ಚೆಲ್ಲಿದ್ದು ಭಾರತ ತಂಡಕ್ಕೆ ದುಬಾರಿ ಆಯಿತು. ಅಲ್ಲದೆ 4 ಓವರ್ ನಲ್ಲಿ 3 ವಿಕೆಟ್ ತೆಗೆದು 17 ರನ್ ಕೊಟ್ಟ ಅಕ್ಸರ್ ಪಟೇಲ್ ಅವರನ್ನು ಬಿಟ್ಟರೆ ಭಾರತದ ಇತರ ಎಲ್ಲಾ ಬೋಲರ್ ಗಳ ಪ್ರದರ್ಶನ ನೀರಸವಾಗಿತ್ತು. ಹಾಗಾಗಿ ಉತ್ತಮ ಮೊತ್ತಮ ಗಳಿಸಿದ ನಂತರವೂ ಭಾರತ ತಂಡ ಸೋಲಿನ ರುಚಿ ಕಾಣಬೇಕಾಯಿತು. ಕ್ಯಾಮರೂನ್ ಗ್ರೀನ್ ಪಂದ್ಯ ಶ್ರೇಷ್ಟ ಎನಿಸಿಕೊಂಡರು.  ಅನುಭವಿ ಬೋಲರ್ ಬುಮ್ರಾ ಅವರ ಕೊರತೆ ಈ ಪಂದ್ಯದಲ್ಲಿ ಎದ್ದು ಕಂಡಿತು. ಜೊತೆಗೆ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಹೇಳುವುದಾದರೆ ಎಡಗೈ, ಬಲಗೈ ಕಾಂಬಿನೇಷನ್ ನೆಪದಲ್ಲಿ ತಂಡದಲ್ಲಿ ದಿನೇಶ್ ಕಾರ್ತಿಕ್ ಇದ್ದರೂ ಅವರಿಗಿಂತ ಮುಂಚೆ ಅಕ್ಸರ್ ಪಟೇಲ್ ಅವರನ್ನು ಬ್ಯಾಟಿಂಗಿಗೆ ಕಳಿಸುವ ನಾಯಕ ರೋಹಿತ್ ಅವರ ಕೆಟ್ಟ ನಿರ್ಧಾರ ಮತ್ತು ಹಲೆಯ ಚಾಳಿ, ಇಲ್ಲೂ ಮುಂದುವರೆಯಿತು. ಹಾಗಾಗಿ ಮುಂದಿನ ಪಂದ್ಯಗಳಲ್ಲಿ ಬೋಲಿಂಗ್, ಫೀಲ್ಡಿಂಗ್ ಮತ್ತು ತಂಡದ ಆಯ್ಕೆಯ ಬಗ್ಗೆ ಭಾರತ ಗಮನಹರಿಸಬೇಕಾಗಿದೆ.

ಭಾರತ ಆಸ್ಟ್ರೇಲಿಯಾ ಟಿ 20 ಸರಣಿ, ಶುಭಾರಂಭದ ನಿರೀಕ್ಷೆಯಲ್ಲಿ ಇತ್ತಂಡಗಳು
ಟಿ 20 ವಿಶ್ವಕಪ್ ಗೆ ಮುಂಚಿನ ತಾಲೀಮು ಪಂದ್ಯಗಳು ಎಂದೇ ಹೆಸರು ಪಡೆದಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗಳು ಭಾರತಕ್ಕೆ ಮಹತ್ವದ ಸರಣಿಗಳು ಎನ್ನಿಸಿವೆ. ಈ ಪೈಕಿ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಟಿ 20 ಸರಣಿ ಆರಂಭವಾಗಲಿದೆ. ಇಂದು ಸಂಜೆ ಮೊಹಾಲಿಯಲ್ಲಿ ಶುರುವಾಗಲಿರುವ ಈ ಪಂದ್ಯ ಎಲ್ಲರ ಕುತೂಹಲ ಕೆರಳಿಸಿದೆ.

ಇನ್ನು ಆಡುವ ಬಳಗದ ವಿಷಯಕ್ಕೆ ಬಂದರೆ ವಿಶ್ವಕಪ್ ಹತ್ತಿರದಲ್ಲೇ ಇರುವುದರಿಂದ ಭಾರತ ತಂಡ ಈ ಮುಂಚೆ ಏಷ್ಯಾ ಕಪ್ ನಲ್ಲಿ ಮಾಡಿದ ತಪ್ಪುಗಳನ್ನು ರಿಪೀಟ್ ಮಾಡುವುದು ಅನುಮಾನ. ಹಾಗಾಗಿ ಸಮರ್ಥ ಆಟಗಾರರನ್ನು ಒಳಗೊಂಡ ಬಲಿಷ್ಟ ಆಡುವ 11ರ ಬಳಗವನ್ನೇ ಕಣಕ್ಕಿಳಿಸುವ ಎಲ್ಲಾ ಲಕ್ಷಣಗಳಿವೆ.

ಹೇಳಿ ಕೇಳಿ ಆಸ್ಟ್ರೇಲಿಯಾ ಬಲಿಷ್ಟ ತಂಡ ಆದ್ದರಿಂದ ಅವರ ಎದುರು ಪ್ರಯೋಗಗಳನ್ನು ಮಾಡೋದು ತಂಡದ ಹಿತದೃಷ್ಠಿಯಿಂದ ಸಮಂಜಸ ಅಲ್ಲ. ಆದಾಗ್ಯೂ ಈ ಪಂದ್ಯದಲ್ಲಿ ಫಿನಿಷರ್ ಎಂದೇ ಹೆಸರು ಮಾಡಿರುವ ದಿನೇಸ್ ಕಾರ್ತಿಕ್ ಅವರನ್ನು ಹೊರಗಿಡುವ ಸಾಧ್ಯತೆಗಳಿವೆ. ಇದು ತಂಡದ ಮ್ಯಾನೇಜ್ ಮೆಂಟ್ ಮತ್ತು ತಂಡದ ಥಿಂಕ್ ಟ್ಯಾಂಕ್ ನ ಆಲೋಚನೆ. ಆದರೆ, ದಿನೇಶ್ ಕಾರ್ತಿಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡು ಆಡುವ ಅವಕಾಶ ಕೊಡದೇ, ಒಂದು ವೇಳೆ ಕೊಟ್ಟರೂ ಬ್ಯಾಟಿಂಗಿಗೆ ಅವಕಾಶ ಕೊಡದೇ ಅವರ ಪ್ರತಿಭೆಯನ್ನು ಪೋಲು ಮಾಡುತ್ತಿರೋದಂತೂ ಕ್ರಿಕೆಟ್ ಪ್ರೇಮಿಗಳಲ್ಲಿ ಅಸಮಾಧಾನ ಉಂಟು ಮಾಡಿದೆ.

ಕಾರ್ತಿಕ್ ಗೆ ಫಿನಿಷರ್ ಪಟ್ಟ ಕಟ್ಟಿ, ಪಂದ್ಯ ಮುಗಿಯುವ ವೇಳೆಯಲ್ಲಿ ಅವರನ್ನು ಬ್ಯಾಟಿಂಗಿಗೆ ಇಳಿಸಲಾಗುತ್ತಿದೆ. ಹಾಗಾಗಿ ತಮಗೆ ಸಿಕ್ಕ ಎಂಟತ್ತು ಬಾಲುಗಳಲ್ಲೇ ತಮ್ಮ ಪ್ರತಿಭೆ ತೋರಿಸಬೇಕಾದ ಅನಿವಾರ್ಯತೆ ಕಾರ್ತಿಕ್ ಅವರದ್ದು. ಹಾಗಾಗಿ ಅವರನ್ನು 15 ಓವರ್ ಗಳ ಹಂತದಲ್ಲೇ ಕಳಿಸಬೇಕು ಅನ್ನೋದು ಹಲವರ ವಾದ. ಒಂದೊಮ್ಮೆ ಬ್ಯಾಟಿಂಗ್ ಪಿಚ್ ಆಗಿ ಮೇಲಿನ ಕ್ರಮಾಂಕದ ಇಬ್ಬರು, ಮೂವರು ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ತಂಡದಲ್ಲಿದ್ದರೂ ಕಾರ್ತಿಕ್ ಅವರಿಗೆ ಬ್ಯಾಟಿಂಗಿಗೆ ಅವಕಾಶ ಸಿಗೋದಿಲ್ಲ. ಹಾಗಾಗಿ, ದಿನೇಶ್ ಕಾರ್ತಿಕ್ ಅವರನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದು ಒಂದು ಸವಾಲಾಗಿ ಪರಿಣಮಿಸಿದೆ ಅಂದ್ರೆ ತಪ್ಪಿಲ್ಲ. ಒಟ್ಟಿನಲ್ಲಿ ಇಂದಿನ ಪಂದ್ಯ ಇಂತಹ ಸಾಕಷ್ಟು ವಿಷಯಗಳಿಗಾಗಿ ಕುತೂಹಲ ಕೆರಳಿಸಿರೋದಂತೂ ಸತ್ಯ.

ಉಶ್ಶಪ್ಪಾ ಎಂದ ಉತ್ತಪ್ಪ
ಹೊಸ ನೀರು ಬಂದಾದಮೇಲೆ ಹಳೆ ನೀರು ಹೋಗಲೇಬೇಕಂತೆ. ಹಾಗೆ, ಭಾರತ ಕ್ರಿಕೆಟ್ ತಂಡದಲ್ಲಿ ಹೊಸಬರ ಪ್ರವೇಶ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಹಳೆಯ ಬೇರುಗಳು ಒಂದೊಂದಾಗಿ ಮರೆಯಾಗುತ್ತಿವೆ. ಈಗ ಕರ್ನಾಟಕದ ರಾಬಿನ್ ಉತ್ತಪ್ಪ ಅವರ ಸರದಿ.

ವಾಕಿಂಗ್ ಅಸಾಸಿನ್ ಎಂದೇ ಹೆಸರಾಗಿದ್ದ ರಾಬಿನ್ ಉತ್ತಪ್ಪ, ಎಂಥದ್ದೇ ದೊಡ್ಡ ಬೌಲರ್ ಇರಲಿ ಎರಡು ಹೆಜ್ಜೆ ಮುಂದೆ ಬಂದು ಸಿಕ್ಸ್ ಹೊಡೆಯೋ ಸ್ಟೈಲ್ ಎಲ್ಲರಿಗೂ ಇಷ್ಟ ಆಗಿತ್ತು.

ರಾಬಿನ್ ಉತ್ತಪ್ಪ ಅವರ ಅಭಿಮಾನಿಗಳಿಗೆ ಇನ್ನೂ ಚೆನ್ನಾಗಿ ನೆನಪಿದೆ. ಅದು 2006 ಅಲ್ಲಿ ಅಣ್ಣಾವ್ರು, ಅಂದ್ರೆ, ಡಾ. ರಾಜ್ ಕುಮಾರ್ ಅವರು ತೀರಿಹೋದ ನಂತರ ಇಂಡಿಯಾ ಆಡಿದ ಮೊದಲ ಮ್ಯಾಚ್. ಅವತ್ತು ಇಂಗ್ಲೆಂಡ್ ಮೇಲೆ ರಾಹುಲ್ ದ್ರಾವಿಡ್ ರಾಬಿನ್ ಉತ್ತಪ್ಪ, ಈ ಇಬ್ಬರೂ ಕನ್ನಡಿಗರು ಕೈಗೆ ಕಪ್ಪು ಬಟ್ಟೆ ಕಟ್ಟಿ ಒಪನರ್ಸ್ ಆಗಿ ಬಂದು ಅದ್ಬುತ ಆಟ ಆಡಿದ್ದರು. ಹತ್ತಿರ ಹತ್ತಿರ 150 ರನ್ ಜೊತೆಯಾಟ ಆಡಿದ್ದರು. ಉತ್ತಪ್ಪ 86 ರನ್ ಇದ್ದಾಗ ದುರದೃಷ್ಠವಶಾತ್ ರನ್ ಔಟ್ ಆದರು. ಇಲ್ಲದಿದ್ದರೆ ತಮ್ಮ ಮೊದಲ ಮ್ಯಾಚ್ ನಲ್ಲೇ ಶತಕ ಗಳಿಸುತ್ತಿದ್ದರು ಉತ್ತಪ್ಪ. ಮತ್ತೆ ಅದೇ ಇಂಗ್ಲೆಂಡ್ ಮೇಲೆ ಉತ್ತಪ್ಪ ಇಂಗ್ಲೆಂಡ್ನಲ್ಲೇ,  ಚೇಸಿಂಗ್ ನಲ್ಲಿ ಒಂದು ಮ್ಯಾಚ್ ಫಿನಿಶ್ ಮಾಡಿದ್ದು, ಆದ್ರೆ ಓಪನರ್ ಆಗಿದ್ದ ಉತ್ತಪ್ಪ 6th ಡೌನ್ ಅಲ್ಲಿ ಬಂದಾಗ ಅಷ್ಟು ಚೆಂದದ ಆಟ ನೋಡೋಕೆ ಸಿಗಲಿಲ್ಲ. ಓಪನರ್ ಆಗಿದ್ದ ಒಳ್ಳೆ ಆಟಗಾರನನ್ನ 5th, 6th ಪ್ಲೇಸ್ ಅಲ್ಲಿ ಆಡ್ಸಿ ಹಾಳು ಮಾಡಿದ್ರು ಅನ್ನೋದು ಅವರ ಅಭಿಮಾನಿಗಳ ಬೇಸರ.

ರಾಬಿನ್ ಉತ್ತಪ್ಪ ಎಲ್ಲಾ ರೀತಿಯ ಅಂತಾರಾಷ್ಟ್ರೀಯ ಮತ್ತು ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಪರ 46 ODIಗಳು ಮತ್ತು 13 T20I ಗಳಲ್ಲಿ 934 ಮತ್ತು 249 ರನ್ ಗಳಿಸಿದ ಬಲಗೈ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್, 2015 ರ ಜಿಂಬಾಬ್ವೆ ಪ್ರವಾಸದಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

36 ವರ್ಷ ವಯಸ್ಸಿನ ಉತ್ತಪ್ಪ ತಮ್ಮ ಶೋ ಕೇಸ್ ನಲ್ಲಿ ಹಲವಾರು ಟ್ರೋಫಿಗಳನ್ನಿಟ್ಟುಕೊಂಡು ತಮ್ಮ ವೃತ್ತಿಜೀವನವನ್ನು ಮುಗಿಸಿದ್ದಾರೆ. ಆದರೆ ಈ ಕರ್ನಾಟಕದ ಶೋ ಮ್ಯಾನ್ ಆಟಗಾರ ರಾಜ್ಯದ ಪರವಾಗಿ, ರಾಷ್ಟ್ರದ ಪರವಾಗಿ ಇನ್ನು ಮೈದಾನದಲ್ಲಿ ಕಾಣಿಸಿಕೊಳ್ಳೋದಿಲ್ಲ ಅನ್ನೋದು ಬೇಸರದ ಸಂಗತಿ. 2007 ರ ವಿಶ್ವ T20 ಪಂದ್ಯಾವಳಿಯಲ್ಲಿ ಅವರ ಶ್ರೇಷ್ಠ ಪ್ರದರ್ಶನ ಕಂಡುಬಂದಿತ್ತು. ಅವರು ಎರಡು ಐಪಿಎಲ್-ವಿಜೇತ ತಂಡಗಳ ಭಾಗವಾಗಿದ್ದರು (2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್). ಅವರು ಎರಡು ಬಾರಿ (2013-14 ಮತ್ತು 2014-15) ಕರ್ನಾಟಕದ ರಣಜಿ ಟ್ರೋಫಿ ವಿಜೇತ ತಂಡದ ಭಾಗವಾಗಿದ್ದರು. ಇದರ ಜೊತೆಗೆ ವಿಜಯ್ ಹಜಾರೆ ಟ್ರೋಫಿ (2013-14 ಮತ್ತು 2014-15) ಮತ್ತು ಇರಾನಿ ಕಪ್ (2013-14 ಮತ್ತು 2014-15) ಗೆದ್ದಿದ್ದಾರೆ ಉತ್ತಪ್ಪ.

ಅವರು 2014 ರ IPL ಸಮಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ಪರ ಆರೆಂಜ್ ಕ್ಯಾಪ್ ಅನ್ನು ಗೆಲ್ಲುವ ಹಾದಿಯಲ್ಲಿ 660 ರನ್‌ ಗಳಿಸಿದ್ದರು. 205 ಐಪಿಎಲ್ ಪಂದ್ಯಗಳಲ್ಲಿ 4,952 ರನ್ ಗಳಿಸಿರುವ ಉತ್ತಪ್ಪ ಈ ಪಂದ್ಯಾವಳಿಯಲ್ಲಿ ಒಂಬತ್ತನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 2007 ರ ವಿಶ್ವ T20 ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಚೊಚ್ಚಲ T20I ಗೆಲುವಿನಲ್ಲಿ ಅವರು ದೊಡ್ಡ ಪಾತ್ರವನ್ನು ವಹಿಸಿದ್ದರು.  ಟೈನಲ್ಲಿ ಕೊನೆಗೊಂಡ ಆಟದಲ್ಲಿ ನಂತರ ಬೌಲ್ ಔಟ್ ಕ್ಷಣದ ಭಾಗವಾಗುವುದರ ಹೊರತಾಗಿ, ಉತ್ತಪ್ಪ ಅವರು 39 ಎಸೆತಗಳಲ್ಲಿ 50 ರನ್ ಗಳಿಸಿ ಭಾರತ ನಿಗದಿತ 20 ಓವರ್‌ಗಳಲ್ಲಿ 141-9 ಗಳಿಸಲು ಸಹಾಯ ಮಾಡಿದ್ದರು.

142 ಪ್ರಥಮ ದರ್ಜೆ ಪಂದ್ಯಗಳಲ್ಲಿ 9,446 ರನ್ ಗಳಿಸಿದ್ದ ಉತ್ತಪ್ಪ, ಸತತ ಎರಡನೇ ಬಾರಿಗೆ ಕರ್ನಾಟಕ ರಣಜಿ ಟ್ರೋಫಿ ಗೆಲ್ಲುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಅವರು 2014-15 ರ ರಣಜಿ ಋತುವಿನಲ್ಲಿ 11 ಪಂದ್ಯಗಳಲ್ಲಿ 50.66 ರ ಸರಾಸರಿಯಲ್ಲಿ 912 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಮುಗಿಸಿದರು.

2013-14ರ ವಿಜಯ್ ಹಜಾರೆ ಟ್ರೋಫಿಯ ಸಮಯದಲ್ಲಿ ಕರ್ನಾಟಕದ ಈ ಆಟಗಾರ ತನ್ನ ಅತ್ಯುತ್ತಮ ಫಾರ್ಮ್ ನಲ್ಲಿ ಇದ್ದರು. ಪಂದ್ಯಾವಳಿಯ ಎಂಟು ಪಂದ್ಯಗಳಲ್ಲಿ 76.57 ರ ಸರಾಸರಿಯಲ್ಲಿ 536 ರನ್ ಗಳಿಸಿ ಅತಿ ಹೆಚ್ಚು ರನ್ ಕಲೆ ಹಾಕಿದ್ದರು.

ಬುಧವಾರ ಭಾರತೀಯ ಕ್ರಿಕೆಟ್‌ನ ಎಲ್ಲಾ ಮಾದರಿಗಳಿಗೆ ನಿವೃತ್ತಿ ಘೋಷಿಸಿರುವ ಉತ್ತಪ್ಪ. “ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವುದು ನನಗೆ ದೊಡ್ಡ ಗೌರವವಾಗಿದೆ. ಹೇಗಾದರೂ, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ಕೃತಜ್ಞತೆಯ ಭಾವದಿಂದ, ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು,” ಎಂದು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ನಾನು ವೃತ್ತಿಪರ ಕ್ರಿಕೆಟ್ ಆಡಲು ಆರಂಭಿಸಿ 20 ವರ್ಷಗಳಾಗಿವೆ ಮತ್ತು ನನ್ನ ದೇಶ ಮತ್ತು ರಾಜ್ಯ, ಕರ್ನಾಟಕವನ್ನು ಪ್ರತಿನಿಧಿಸಿದ್ದು ಅತ್ಯಂತ ದೊಡ್ಡ ಗೌರವವಾಗಿದೆ. ಇದು ಏರಿಳಿತಗಳ ಅದ್ಭುತ ಪ್ರಯಾಣ; ಇದು ಮನುಷ್ಯನಾಗಿ ಬೆಳೆಯಲು ನನಗೆ ಅವಕಾಶ ಮಾಡಿಕೊಟ್ಟಿದೆ. ಹೇಗಾದರೂ, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು, ನಾನು ನನ್ನ ಕುಟುಂಬದೊಂದಿಗೆ ಮಹತ್ವದ ಸಮಯವನ್ನು ಕಳೆಯಲಿದ್ದೇನೆ, ಜೀವನದಲ್ಲಿ ಹೊಸ ಹಂತವನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ಟಿಪ್ಪಣಿಯಲ್ಲಿ ಬರೆದಿದ್ದಾರೆ.

ಅವರು ತಮ್ಮ ಹಿಂದಿನ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪ್ರಸ್ತುತ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಉತ್ತಪ್ಪ.

ಉತ್ತಪ್ಪ ಅವರು ಅವರು ODI ಮತ್ತು T20I ಗಳಲ್ಲಿ ಕ್ರಮವಾಗಿ 934 ಮತ್ತು 249 ರನ್ ಗಳಿಸಿದ್ದಾರೆ. ಅವರು 9446 ಪ್ರಥಮ ದರ್ಜೆ ಮತ್ತು 6534 ಲಿಸ್ಟ್ ಎ ರನ್‌ಗಳನ್ನು ಹೊಂದಿದ್ದಾರೆ.

ಟಿ 20 ವಿಶ್ವಕಪ್ ಗೆ ಭಾರತ ತಂಡ ಪ್ರಕಟ, ಕೆಟ್ಟ ಮೇಲೆ ಬುದ್ಧಿ ಬಂತು
ಏಷ್ಯಾ ಕಪ್ ಸೋಲಿನ ಎಫೆಕ್ಟ್ ಈಗ ಕ್ರಿಕೆಟ್ ತಂಡದ ಆಯ್ಕೆದಾರರಿಗೆ ಗೊತ್ತಾದಂತಿದೆ. ಏಷ್ಯಾ ಕಪ್ ನಲ್ಲಿ ಹಿರಿಯ ಆಟಗಾರರನ್ನು ಕೈ ಬಿಟ್ಟು ಅನಗತ್ಯ ಪ್ರಯೋಗ ಮಾಡಿ ಸೋಲಿನ ರುಚಿ ನೋಡಿದ ಮೇಲೆ ಮತ್ತೆ ಈಗ ಎಲ್ಲ ಹಿರಿಯ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ವಾಪಸ್ ಕರೆಸಲಾಗಿದೆ.

ಆದಾಗ್ಯೂ, ಏಷ್ಯಾಕಪ್‌ನಲ್ಲಿ ಗಾಯಗೊಂಡಿದ್ದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ತಂಡವು ಕಳೆದುಕೊಂಡಿದೆ. ಆದರೆ ವೇಗದ ಬೋಲರ್ ಬುಮ್ರಾ ಜೊತೆಗೆ, ಇನ್ನೊಬ್ಬ ಪ್ರಮುಖ ಬೌಲರ್ ಹರ್ಷಲ್ ಪಟೇಲ್ ಕೂಡ ತಂಡಕ್ಕೆ ಮರಳಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆಗೆ ಅರ್ಷದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ತಂಡದಲ್ಲಿರುವ ಇತರ ಇಬ್ಬರು ವೇಗಿಗಳು. ಇನ್ನು ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್ ಸ್ಪೆಷಲಿಸ್ಟ್ ಸ್ಪಿನ್ನರ್‌ಗಳಾಗಿದ್ದಾರೆ.

ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಸೇರಿದಂತೆ ಬ್ಯಾಟಿಂಗ್ ಲೈನ್ ಅಪ್ ನಿರೀಕ್ಷಿತ ಲೆಕ್ಕದಲ್ಲೇ ಇದೆ.

ವೇಗಿ ಮೊಹಮ್ಮದ್ ಶಮಿ, ಸಹ ವೇಗಿ ದೀಪಕ್ ಚಹಾರ್, ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಬ್ಯಾಟರ್ ಶ್ರೇಯಸ್ ಅಯ್ಯರ್ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರು ಎಂದು ಹೆಸರಿಸಲಾಗಿದೆ.

T20 ವಿಶ್ವಕಪ್ ತಂಡ: ರೋಹಿತ್ ಶರ್ಮಾ (c), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

ಇನ್ನು ವಿಶ್ವಕಪ್  ಟೂರ್ನಮೆಂಟ್‌ಗೆ ಮುಂಚಿತವಾಗಿ, ಭಾರತವು ಮೂರು ಪಂದ್ಯಗಳ T20I ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ ಮತ್ತು ನಂತರ ದಕ್ಷಿಣ ಆಫ್ರಿಕಾ ವಿರುದ್ಧ T20I ಮತ್ತು ODI ಸರಣಿಯಲ್ಲಿ ಸೆಣೆಸಲಿದೆ.

ಭಾರತವು ಎರಡೂ T20I  ಸರಣಿಗಳಿಗೆ ತಮ್ಮ ತಂಡಗಳನ್ನು ಹೆಸರಿಸಿದೆ, ಈ ಸರಣಿಯು ಭಾರತ ತಂಡಕ್ಕೆ ಡ್ರೆಸ್ ರಿಹರ್ಸಲ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದರೆ ತಪ್ಪಿಲ್ಲ.

ಈ ತಂಡದಲ್ಲಿ ಅರ್ಷದೀಪ್‌ಗೆ ವಿಶ್ರಾಂತಿ ನೀಡಿ ಭಾರತವು ಶಮಿ ಮತ್ತು ಚಹಾರ್ ಅವರನ್ನು ಎರಡೂ ಸರಣಿಗಳಿಗೆ ಆಯ್ಕೆ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯಕ್ಕೆ ತಂಡವನ್ನು ಇನ್ನೂ ಪ್ರಕಟಿಸಿಲ್ಲ.

ಆಸ್ಟ್ರೇಲಿಯಾ T20Is ತಂಡ: ರೋಹಿತ್ ಶರ್ಮಾ (c), KL ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್ ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.

ದಕ್ಷಿಣ ಆಫ್ರಿಕಾ T20Is: ರೋಹಿತ್ ಶರ್ಮಾ (c), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.

ಶ್ರೀಲಂಕಾಗೆ ಆರನೇ ಏಷ್ಯಾ ಕಪ್
ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಯಗಳಿಸಿದ್ದ ಶ್ರೀಲಂಕಾ ಫೈನಲ್ ಪಂದ್ಯದಲ್ಲೂ ಅದೇ ರೀತಿಯ ಸ್ಪಿರಿಟ್ ತೋರಿಸಿ ತನ್ನ ಆರನೇ ಏಷ್ಯಾ ಕಪ್ ಅನ್ನು ಗೆದ್ದುಕೊಂಡಿದೆ.

ಘಟಾನುಘಟಿ ತಂಡ, ಕಪ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದ ಭಾರತ ತಂಡ ಪಂದ್ಯಾವಳಿಯಿಂದ ಹೊರಗೆ ಹೋದಮೇಲೆ ಪಾಕಿಸ್ತಾನವೇ ಚಾಂಪಿಯನ್ ಎಂದುಕೊಂಡಿದ್ದ ಎಲ್ಲರ ನಂಬಿಕೆಯನ್ನು ಶ್ರೀಲಂಕಾ ಈ ಮೂಲಕ ಬುಡಮೇಲು ಮಾಡಿದೆ.

ಪಂದ್ಯಾವಳಿ ಶುರುವಾದಾಗ ಶ್ರೀಲಂಕಾ ತಂಡವನ್ನು ಯಾರೂ ಫೇವರಿಟ್ ತಂಡಗಳ ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಹಾಗೆ ನೋಡಿದರೆ ಲೀಗ್ ಹಂತದಲ್ಲಿ ನಿರ್ಗಮಿಸುವ ತಂಡ ಎಂದೇ ಭಾವಿಸಲಾಗಿತ್ತು. ಶ್ರೀಲಂಕಾ ತಂಡದ ಇತ್ತೀಚಿನ ಪ್ರದರ್ಶನ ಅದಕ್ಕೆ ಕಾರಣವಾಗಿತ್ತು. ತಂಡದಲ್ಲಿ ಪ್ರತಿಭಾವಂತರು ಸಾಕಷ್ಟಿದ್ದರೂ ಒಂದು ತಂಡವಾಗಿ ಗೆಲ್ಲುವ ಪ್ರದರ್ಶನ ಅವರಿಂದ ಬಂದಿರಲಿಲ್ಲ. ಆದರೆ ತಮ್ಮಲ್ಲಿ ಕೇವಲ ಪ್ರತಿಭೆ ಅಷ್ಟೇ ಅಲ್ಲ ಸಮಯಕ್ಕೆ ತಕ್ಕಂತೆ ಆಡುವ ಸಾಮರ್ಥ್ಯ ಕೂಡಾ ಇದೆ ಎಂದು ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಆಟಗಾರರು ಪ್ರೂವ್ ಮಾಡಿದರು.

ಫೈನಲ್ ಪಂದ್ಯ ಕೂಡಾ ಶ್ರೀಲಂಕಾ ಆಟಗಾರರಿಗೆ ಸುಲಭದ ಮಾತಾಗಿರಲಿಲ್ಲ. ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾಗೆ ಉತ್ತಮ ಆರಂಭವೇನೂ ಸಿಗಲಿಲ್ಲ. ಬೇಗನೆ ಎರಡು ವಿಕೆಟ್ ಕಳೆದುಕೊಂಡು ನಿಧಾನಗತಿಯಲ್ಲಿ ಸಾಗುತ್ತಿದ್ದ ತಂಡಕ್ಕೆ ಮತ್ತಷ್ಟು ಆಘಾತ ಕಾದಿತ್ತು. ತಂಡದ ಮೊತ್ತ 58 ಆಗುವಷ್ಟರಲ್ಲಿ ತಂಡದ ನಾಯಕ ಶಾನಕ ಸೇರಿದಂತೆ 5 ಆಟಗಾರರನ್ನು ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು ಶ್ರೀಲಂಕಾ. ಆದರೆ ಆರನೇ ವಿಕೆಟ್ಟಿಗೆ ಎಡಗೈ ಬ್ಯಾಟ್ಸ್ ಮನ್ ರಾಜಪಕ್ಸ ಮತ್ತು ಆಲ್ ರೌಂಡರ್ ಹಸರಂಗ 58 ರನ್ ಕಲೆ ಹಾಕಿ ಪಂದ್ಯದ ಗತಿ ಬದಲಿಸಿದರು. ನಂತರ ರಾಜಪಕ್ಸ ವೈಯಕ್ತಿಕ 71 ರನ್ ಗಳಿಸಿ ತಂಡದ ಮೊತ್ತವನ್ನು 170ಕ್ಕೇರಿಸಿದರು. ಈ ಮೊತ್ತವನ್ನು ಹಿಂಬಾಲಿಸಿದ ಪಾಕ್ ತಂಡಕ್ಕೆ ಮೊದಲ ಓವರ್ ಬೋನಸ್ ಆಗಿ ಪರಿಣಮಿಸಿತು.

ಪಂದ್ಯದ ಮೊದಲ ಓವರ್ ನಲ್ಲಿ ಒಂದೂ ಲೀಗಲ್ ಬಾಲ್ ಮಾಡದೆ ಒಂಭತ್ತು ರನ್ ಗಳ ಗಿಫ್ಟ್ ಕೊಟ್ಟಿದ್ದರು ಶ್ರೀಲಂಕಾ ಬೋಲರ್ ಮಧುಶಂಕಾ. ಆದರೆ ಇದ್ದಕ್ಕಿದ್ದಂತೆ ನಾಯಕ ಬಾಬರ್ ಅಜಮ್ ಮತ್ತು ಫಖರ್ ಜಮಾನ್ ತಮ್ಮ ವಿಕೆಟ್ ಒಪ್ಪಿಸಿದರು. ಇದಾದ ನಂತರ ಮೊಹಮ್ಮದ್ ರಿಜ್ವಾನ್ ಇನ್ನಿಂಗ್ಸ್ ಗೆ ಲಂಗರು ಹಾಕಿ ಇಫ್ತಿಕಾರ್ ಅವರೊಂದಿಗೆ ಹೋರಾಟ ಮುಂದುವರಿಸಿದರು.

ಆದರೆ ಇವರಿಬ್ಬರ ಜೊತೆಯಾಟದಲ್ಲಿ ರನ್ ರೇಟ್ ಸೊರಗಿತ್ತು. ಹಾಗಾಗಿ ಮುಂದಿನ ಬ್ಯಾಟ್ಸ್ ಮನ್ ಗಳಿಗೆ ವೇಗವಾಗಿ ರನ್ ಗಳಿಸುವ ಸವಾಲು ಎದುರಾಗಿತ್ತು. ಇದರ ಪರಿಣಾಮವಾಗಿ 93 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಪಾಕ್ 125 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ನಲುಗಿತು. ಬೋಲಿಂಗ್ ನಲ್ಲೂ ಮಿಂಚಿದ ಹಸರಂಗ ಒಂದೇ ಓವರ್ ನಲಲ್ 3 ವಿಕೆಟ್ ಕಬಳಿಸಿ ಶ್ರೀಲಂಕಾ ಪರ ಮಿಂಚಿದರು.

ಕೊನೆಗೆ 147 ರನ್ ಗಳಿಗೆ ಪಂದ್ಯದ ಕೊನೆಯ ಬಾಲಿನಲ್ಲಿ ಆಲೌಟ್ ಆಗುವುದರೊಂದಿಗೆ ಶ್ರೀಲಂಕಾ ಈ ಬಾರಿಯ ಏಷ್ಯಾ ಕಪ್ ವಿನ್ನರ್ ಆಯಿತು. 71 ರನ್ ಗಳಿಸಿದ ರಾಜಪಕ್ಸ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಉತ್ತಮ ಆಲ್ ರೌಂಡ್ ಪ್ರದರ್ಶನ ತೋರಿ 66 ರನ್ ಗಳಿಸಿ 9 ವಿಕೆಟ್ ಕಿತ್ತ ಹಸರಂಗ ಸರಣಿ ಶ್ರೇಷ್ಟ ಎನಿಸಿಕೊಂಡರು. ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ತನ್ನ ಹಳೆಯ ಖದರ್ ಕಳೆದುಕೊಂಡಿದ್ದ ಶ್ರೀಲಂಕಾ ತಂಡಕ್ಕೆ ಈ ಗೆಲುವು ಮಹತ್ತರವಾದದ್ದು ಎಂದರೆ ತಪ್ಪಿಲ್ಲ.

ಭಾರತಕ್ಕೆ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ
ನೆಟ್ ಪ್ರಾಕ್ಟೀಸ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲು

ಭಾರತ ಕ್ರಿಕೆಟ್ ತಂಡ ಮೂರು ದಿನಗಳ ಹಿಂದೆ ಶ್ರೀಲಂಕಾ ವಿರುದ್ಧ ಸೋತು, ಏಷ್ಯಾ ಕಪ್ ನಿಂದ ಹೊರಹೋಗುವ ಭೀತಿಯಲ್ಲಿದ್ದಾಗ, ಇನ್ನೇನಿದ್ದರೂ ಪವಾಡ ನಡೆದರೆ ಮಾತ್ರ ಭಾರತ ಫೈನಲ್ ಗೆ ಹೋಗಬಹುದು ಎಂದು ಭಾರತೀಯ ಅಭಿಮಾನಿಗಳು ನಿರಾಸೆ ಇದ್ದರೂ ಕಾದು ಕುಳಿತಿದ್ದರು. ಆದರೆ ಕಳೆದ ಎರಡು ದಿನಗಳ ಬೆಳವಣಿಗೆಗಳನ್ನು ನೋಡಿದರೆ ಆ ಪವಾಡ ಬಹುತೇಕ ನಡೆದು ಹೋಗಿತ್ತು.

ಭಾನುವಾರ ಪೈನಲ್ ಆಡಲಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಿನ್ನೆ ನಡೆದ ಕೊನೆಯ ಪಂದ್ಯ, ಪೈನಲ್ ಗೆ ಮುಂಚಿನ ನೆಟ್ ಪ್ರಾಕ್ಟೀಸ್ ರೀತಿಯಲ್ಲಿತ್ತು. ಆದರೆ ಈ ಪಂದ್ಯದಲ್ಲಿ ಶ್ರೀಲಂಕಾ ಸಂಪೂರ್ಣ ಮೇಲುಗೈ ಸಾಧಿಸಿ ಗೆದ್ದಿದೆ. ಟಾಸ್ ಗೆದ್ದು ಪಾಕ್ ಗೆ ಬ್ಯಾಟಿಂಗ್ ನೀಡಿ ಅವರನ್ನು ಕೇವಲ 121 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ಶ್ರೀಲಂಕಾ ನಂತರ ಆ ಗುರಿಯನ್ನು ಸುಲಭವಾಗಿ ತಲುಪಿತು. 3 ವಿಕೆಟ್ ಕಿತ್ತ ಹಸರಂಗ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಆದರೆ, ಈ ಫಲಿತಾಂಶ ನೋಡಿ , ಕೈ ಬಂದಿದ್ದು ಬಾಯಿಗೆ ಬರಲಿಲ್ಲವಲ್ಲ ಎಂದು ಬೇಸರ ಮಾಡಿಕೊಂಡಿದ್ದು ಮಾತ್ರ ಭಾರತೀಯ ಅಭಿಮಾನಿಗಳು ನಿನ್ನೆಯ ಪಂದ್ಯದಲ್ಲಿ ಶ್ರೀಲಂಕಾ ಪಾಕ್ ಅನ್ನು ಮಣಿಸಿದಾಗ ಎಲ್ಲರೂ ನೆನಪಿಸಿಕೊಂಡಿದ್ದು ಪಾಕಿಸ್ತಾನ ಮತ್ತು ಆಫ್ಗಾನಿಸ್ತಾನದ ನಡುವಿನ ಪಂದ್ಯವನ್ನು. ಆ ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್ ಕಳೆದುಕೊಂಡು, ಕೊನೆಯ ಓವರ್ ನಲ್ಲಿ ಗೆಲ್ಲಲು 11 ರನ್ ಗಳಿಸಬೇಕಿದ್ದಾಗ, ಆಫ್ಗನ್ ಬೋಲರ್ ಫಾರೂಖಿ ಎರಡು ಸತತ ಫುಲ್ ಟಾಸ್ ಹಾಕಿ ನಸೀಮ್ ಶಾ ಅವರಂಥ ನಂಬರ್ 11 ಬ್ಯಾಟ್ಸ್ ಮನ್ ಕೈಯಲ್ಲಿ ಎರಡು ಸತತ ಸಿಕ್ಸರ್ ಹೊಡೆಸಿಕೊಳ್ಳದೇ ಇದ್ದಿದ್ದರೆ ಭಾನುವಾರದ ಫೈನಲ್ ನಲ್ಲಿ ಭಾರತಕ್ಕೆ ಆಡುವ ಅವಕಾಶ ಸಿಗುತ್ತಿತ್ತು ಎಂದು ಅಭಿಮಾನಿಗಳು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ.

ಭಾರತೀಯ ತಂಡಕ್ಕೆ ಫೈನಲ್ ಪ್ರವೇಶಿಸಲು ಏನೇನು ಬೇಕಿತ್ತೋ ಅದೆಲ್ಲ ಹೆಚ್ಚು ಕಡಿಮೆ ಆಗಿ ಹೋಗಿತ್ತು. ಆಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಶತಕ ಮತ್ತು ಭುವನೇಶ್ವರ್ ಅವರ ಮಾರಕ ಬೋಲಿಂಗ್ ನಿಂದ ಭಾರೀ ಅಂತರದಿಂದ ಗೆದ್ದು ಎಲ್ಲಾ ತಂಡಗಳಿಗಿಂತ ಹೆಚ್ಚು ರನ್ ರೇಟ್ ಅನ್ನು ಗಳಿಸಿತ್ತು. ನಿನ್ನೆ ಶ್ರೀಲಂಕಾ ಕೂಡಾ ಪಾಕಿಸ್ತಾನವನ್ನು ಸೋಲಿಸಿತು. ಹಾಗಾಗಿ, ಅಂದಿನ ಆಫ್ಘಾನಿಸ್ತಾನ, ಪಾಕಿಸ್ತಾನದ ಪಂದ್ಯದಲ್ಲಿ ಫಾರೂಖಿ ಕೊನೆಯ ಓವರ್ ನಲ್ಲಿ ಕೊಂಚ ಸಂಯಮ ತೋರಿ ಗೆದ್ದಿದ್ದರೆ, ಭಾರತಕ್ಕೆ ಅದೃಷ್ಠ ಲಕ್ಷ್ಮಿ ಒಲಿಯುತ್ತಿತ್ತು ಅನ್ನೋದು ಭಾರತೀಯ ಅಭಿಮಾನಿಗಳ ಬೇಸರ.

ಆಸಿಫ್, ಫರೀದ್ ಅಹ್ಮದ್ ಗೆ ದಂಡ ಹಾಕಿದ ಐಸಿಸಿ
ಮೊನ್ನೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದ ವೇಳೆ ಮೈದಾನದಲ್ಲಿ ನಡೆದ ಘರ್ಷಣೆಯಲ್ಲಿ ಐಸಿಸಿ ನೀತಿ ಸಂಹಿತೆಯ ಹಂತ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ  ಪಾಕಿಸ್ತಾನದ ಆಸಿಫ್ ಅಲಿ ಮತ್ತು ಅಫ್ಘಾನಿಸ್ತಾನದ ಫರೀದ್ ಅಹ್ಮದ್ ಅವರಿಗೆ ಶಿಕ್ಷೆ ವಿಧಿಸಲಾಗಿದೆ. 19ನೇ ಓವರ್‌ನ ಐದನೇ ಎಸೆತದ ನಂತರ ನಡೆದ ವಾಗ್ವಾದಕ್ಕಾಗಿ ಈ ಜೋಡಿಗೆ ಪಂದ್ಯದ ಶುಲ್ಕದ 25% ಅನ್ನು ದಂಡ ವಿಧಿಸಲಾಗಿದೆ.

ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ರೂಪಿಸಲಾಗಿರುವ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.6 ಅನ್ನು ಆಸಿಫ್ ಉಲ್ಲಂಘಿಸಿದ್ದರು. ಇದು ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಅವಮಾನಕರವಾದ ಗೆಸ್ಚರ್ ಅನ್ನು ಬಳಸುವುದಕ್ಕೆ ಸಂಬಂಧಿಸಿದೆ. ಆದರೆ ಫರೀದ್ ಆರ್ಟಿಕಲ್ 2.1.12 ಅನ್ನು ಉಲ್ಲಂಘಿಸಿರುವುದು ಕಂಡುಬಂದಿತ್ತು.

ಅಂತರರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಆಟಗಾರ, ಆಟಗಾರನ ಬೆಂಬಲ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಯಾವುದೇ ಇತರ ವ್ಯಕ್ತಿಯೊಂದಿಗೆ (ವೀಕ್ಷಕರನ್ನು ಒಳಗೊಂಡಂತೆ) ಅನುಚಿತ ದೈಹಿಕ ಸಂಪರ್ಕಕ್ಕೆ ಸಂಬಂಧಿಸಿದಂತೆ ಮಾಡಲಾಗಿರುವ ನಿಯಮ ಇದು. ಇದೀಗ ಇಬ್ಬರೂ ಆಟಗಾರರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪ್ರಸ್ತಾಪಿಸಿದ ನಿರ್ಬಂಧಗಳಿಗೆ ತಲೆ ಆಡಿಸಿದ್ದಾರೆ. ಪಂದ್ಯದ ವೇಳೆ ಈ ಜೋಡಿಯ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಮೈದಾನದಲ್ಲಿ ಘರ್ಷಣೆ ತೀವ್ರವಾಗಿತ್ತು.

ಅಹ್ಮದ್ ಬೌಲಿಂಗ್ ಮಾಡಿದ ನಿಧಾನಗತಿಯ ಬೌನ್ಸರ್ ನಲ್ಲಿ ಆಸಿಫ್ ಅಲಿ ಶಾರ್ಟ್ ಫೈನ್ ಲೆಗ್‌ನಲ್ಲಿ ಕ್ಯಾಚ್ ನೀಡಿದರು. ಆಗ ಅಲಿ ಪೆವಿಲಿಯನ್‌ಗೆ ತೆರಳುತ್ತಿದ್ದಾಗ ಅಹ್ಮದ್ ವಿಕೆಟ್‌ ಪಡೆದ ಸಂಭ್ರಮದಲ್ಲಿ ಆಸಿಫ್ ಅವರ ಮೇಲೇರಿ ಹೋಗಿದ್ದರು. ಇದಕ್ಕೆ ಆಸಿಫ್ ಕೂಡಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಆದರೆ ಇದು ಕೇವಲ ಆಟಗಾರರಿಗೆ ಸಂಬಂಧ ಪಡದೆ, ಮೈದಾನದ ಹೊರಗೆ ಪಾಕ್ ಮತ್ತು ಆಫ್ಗನ್ ಅಭಿಮಾನಿಗಳು ಕೂಡಾ ಇದರಿಂದಾಗಿ ರಂಪಾಟ ಮಾಡಿಕೊಂಡು ಸ್ಟೇಡಿಯಂನ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಿದ್ದರು.

ಬಂದೇ ಬಿಡ್ತು ಕಿಂಗ್ ಕೊಹ್ಲಿ 71ನೇ ಶತಕ
ಭಾರತೀಯ ಕ್ರಿಕೆಟ್ ಪ್ರೇಮಿಗಳು ಬಹುದಿನಗಳಿಂದ ಕಾಯುತ್ತಿದ್ದ ಆ ಅದ್ಭುತ ಕ್ಷಣ ಕೊನೆಗೂ ಮೂರು ವರ್ಷಗಳ ನಂತರ ಬಂದೇ ಬಿಡ್ತು. ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಅವರ ಶತಕಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಕನಸು ನನಸಾದ ದಿನ. ಏಷ್ಯಾಕಪ್ ನಿಂದ ಹೊರಬಿದ್ದಿದ್ದರೂ ಆಫ್ಗಾನಿಸ್ಥಾನದ ಮೇಲೆ ಔಪಚಾರಿಕ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶನ ಬಂದಿದ್ದು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಂದ. ಕೊನೆಗೂ ಅವರ ಬ್ಯಾಟಿನಿಂದ ಶತಕ ಸಿಡಿದಿದ್ದನ್ನು ನೋಡಿ ಭಾರತೀಯ ಅಭಿಮಾನಿಗಳು ಸಂತಸದ ಅಲೆಯಲ್ಲಿ ತೇಲುತ್ತಿದ್ದಾರೆ. ಏಷ್ಯಾಕಪ್ ನಿಂದ ಹೊರಬಿದ್ದೆವು ಎನ್ನುವ ಬೇಸರವನ್ನು ಕೊಹ್ಲಿ ಗಳಿಸಿದ ಶತಕ ತಕ್ಕ ಮಟ್ಟಿಗೆ ಕಡಿಮೆ ಮಾಡಿದೆ. ಈ ಸಾಧನೆಯಿಂದಾಗಿ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ನಂತರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಟಾಸ್ ಗೆದ್ದು ಭಾರತಕ್ಕೆ ಬ್ಯಾಟಿಂಗ್ ಕೊಟ್ಟ ಆಫ್ಗನ್ನರಿಗೆ ಮುಟ್ಟಿ ನೋಡಿಕೊಳ್ಳುವಂಥ ಬ್ಯಾಟಿಂಗ್ ಪ್ರದರ್ಶನ ತೋರಿಸಿದ ಕೊಹ್ಲಿ 200 ರ ಶತಕ ಗಳಿಸಿದ್ದಲ್ಲದೆ 200ರ ಸ್ಟ್ರೈಕ್ ರೇಟ್ ನಲ್ಲಿ 61 ಬಾಲ್ ಗಳಲ್ಲಿ 122 ರನ್ ಗಳಿಸಿ ಅದ್ಭುತ ರೀತಿಯಲ್ಲಿ ನಾನು ಫಾರ್ಮ್ ನಲ್ಲಿದ್ದೇನೆ ಎಂಬುದನ್ನು ಸಾಬೀತು ಪಡಿಸಿದರು. ರೋಹಿತ್ ಶರ್ಮಾ ಅಲಭ್ಯತೆಯ ಕಾರಣ ಆರಂಭಿಕರಾಗಿ ಕಣಕ್ಕಿಳಿದಿದ್ದ ಕೊಹ್ಲಿ ಕೊನೆಯವರೆಗೂ ನಾಟ್ ಔಟ್ ಆಗಿ ಉಳಿದರು. ಕೊಹ್ಲಿ ಅವರ ಈ ಆಟದಿಂದಾಗಿ ಭಾರತ 20 ಓವರ್ ಗಳಲ್ಲಿ 212 ರನ್ ಗಳ ಮೊತ್ತ ಕಲೆ ಹಾಕಿದೆ.ಆಫ್ಗನ್ನರ ವಿರುದ್ಧ ವಿರಾಟ್ ಆಟ

ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯ ಟಿಪಿಎಲ್ ಕಪ್ ಮುಡಿಗೇರಿಸಿಕೊಂಡ ಭಜರಂಗಿ ಲಯನ್ಸ್
ಎನ್ 1 ಅಕಾಡೆಮಿ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿದ್ದ ಕಿರುತೆರೆ ಕಲಾವಿದರ ಕ್ರಿಕೆಟ್ ಪಂದ್ಯಾವಳಿ ಮುಕ್ತಾಯಗೊಂಡಿದೆ. ಒಂದೊಳ್ಳೆ ಧ್ಯೇಯ ಇಟ್ಟುಕೊಂಡು ಈ ಟೂರ್ನಿಯನ್ನು ಏರ್ಪಡಿಲಾಗಿತ್ತು. ಹಿರಿಯ ಕಲಾವಿದರಿಗೆ ಈ ಪಂದ್ಯಾವಳಿಯಿಂದ ಸಹಾಯ ಮಾಡುವುದಾಗಿ ಆಯೋಜಕ ಸುನಿಲ್ ಕುಮಾರ್ ಬಿ ಆರ್ ತಿಳಿಸಿದ್ದರು. ಅದರಂತೆ ಟಿವಿ ಧಾರಾವಾಹಿಗಳ ಪ್ರೊಡಕ್ಷನ್ ಮ್ಯಾನೇಜರ್ ಪಾರ್ಥ ಎಂಬುವವರಿಗೆ ಆರ್ಥಿಕ ನೆರವು ಒದಗಿಸಲಾಗಿದೆ. ಎರಡು ಕಿಡ್ನಿ ಕಳೆದುಕೊಂಡಿದ್ದ ಅವರಿಗೆ ಧನ ಸಹಾಯ ಮಾಡಲಾಗಿದೆ ಎಂದು ಸುನಿಲ್ ಹೇಳಿದ್ದಾರೆ.

ಇದೇ 18 ರಿಂದ 20ರವರೆಗೆ ನಡೆದ ಮೂರು ದಿನದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಂಜಿತ್ ಕುಮಾರ್ ನಾಯಕತ್ವದ ಭಜರಂಗಿ ಲಯನ್ಸ್ ಟಿಪಿಎಲ್ ಕಪ್ ಗೆ ಮುತ್ತಿಟ್ಟಿದೆ. ಹರ್ಷ ಸಿಎಂ ಗೌಡ ನಾಯಕತ್ವದ ಎಂಜಲ್ XI ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿದೆ. ಒಟ್ಟು ಆರು ತಂಡಗಳು ಈ ಟೂರ್ನಮೆಂಟ್ ನಲ್ಲಿ ಭಾಗಿಯಾಗಿದ್ದವು.