gandada gudi – Peepal Media

ಗಂಧದಗುಡಿ ಚಿತ್ರತಂಡದಿಂದ ಕನ್ನಡಿಗರಿಗೆ ಸಿಹಿ ಸುದ್ದಿ!: ನಾಳೆಯಿಂದ ಗಂಧದಗುಡಿ ರಿಯಾಯಿತಿ ಪ್ರದರ್ಶನ
ಬೆಂಗಳೂರು: ಕರ್ನಾಟಕ ರತ್ನ ಡಾ ಪುನೀತ್‌ ರಾಜಕುಮಾರ್‌ ಅಭಿನಯನದ ʼಗಂಧದಗುಡಿ ಸಿನಿಮಾವನ್ನು ನಾಳೆಯಿಂದ ಗುರುವಾರದ ವರೆಗೆ ರಿಯಾಯಿತಿ ದರದಲ್ಲಿ ಟಾಕೀಸುಗಳಲ್ಲಿ ಕನ್ನಡಿಗರು ನೋಡಬಹುದಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ʼನಾನು ಹಾಗೂ ಚಿತ್ರತಂಡ ಚರ್ಚಿಸಿ ತರಕರು ಹಾಗೂ ಪ್ರದರ್ಶಕರ ಸಹಕಾರದೊಂದಿಗೆ, ʼಗಂಧದಗುಡಿʼ ಸಿನಿಮಾವನ್ನು ದಿನಾಂಕ 7-11-2022 ರಿಂದ 10-11-2022ರ ವರೆಗೆ ರಿಯಾಯಿತಿ ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆʼ ಎಂದು ತಿಳಿಸಿದ್ದಾರೆ.

ಈ ಹಿನ್ನಲೆಯಲ್ಲಿ ದಿನದ ಸಿಂಗಲ್‌ ಸ್ಕ್ರೀನ್‌ ಥೀಯೇಟರ್‌ಗಳಲ್ಲಿ ರೂ. 56 ದರದಲ್ಲಿ ಹಾಗೂ ಮಲ್ಟಿಪ್ಲೆಕ್ಸ್‌ ಗಳಲ್ಲಿ 112 ರೂ. ದರದಲ್ಲಿ ರಾಜ್ಯದಾದ್ಯಂತ ಗಂಧದಗುಡಿ ಸಿನಿಮಾ ಪ್ರದರ್ಶನಗೊಳ್ಳಲಿದೆ.

ʼಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿಯ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಪುನೀತ್‌ ಅವರ ಹಂಬಲ ಈ ಸಿನಿಮಾ ರೂಪಗೊಳ್ಳಲು ಕಾರಣವಾಗಿದ್ದು, ʼಗಂಧದಗುಡಿʼ ಸಿನಿಮಾವನ್ನು ಎಲ್ಲಾ ವಯಸ್ಸಿನವರು ಅದರಲ್ಲೂ ಮಕ್ಕಳು ನೋಡಬೇಕೆಂಬುವುದು ಪುನೀತ್‌ ರಾಜಕುಮಾರ್‌ ಅವರ ಆಸೆಯಾಗಿತ್ತುʼ ಎಂದು ಆಶ್ವಿನಿ ಪುನೀತ್‌ ರಾಜಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ‘ಗಂಧದ ಗುಡಿ’ ವೀಕ್ಷಿಸಿದ ವಿನೋದ್ ಪ್ರಭಾಕರ್ ಮತ್ತು ʼಮಾದೇವʼ ಚಿತ್ರತಂಡ
ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ʼಗಂಧದ ಗುಡಿʼ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು,ಶಿವಮೊಗ್ಗದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ವಿನೋದ್ ಪ್ರಭಾಕರ್ ಮತ್ತು ಮಾಹದೇವ ಚಿತ್ರ ತಂಡದವರು ʼಗಂಧದ ಗುಡಿʼ ಚಿತ್ರವನ್ನು ವೀಕ್ಷಿಸಿದ್ದಾರೆ.

ನಾನು “ಗಂಧದ ಗುಡಿ” ಚಿತ್ರವನ್ನು ಬಿಡುಗಡೆಯ ದಿನದಂದೇ ಮೊದಲ ಶೋ ವೀಕ್ಷಿಸಬೇಕೆಂದುಕೊಂಡಿದ್ದೆ, ಆದರೆ ಚಿತ್ರೀಕರಣದ ನಿಮಿತ್ತ 27 ನೇ ತಾರೀಖು ಶಿವಮೊಗ್ಗಕ್ಕೆ ಬಂದೆ. ಹೀಗಾಗಿ ನಾನು ಈ ಚಿತ್ರವನ್ನು “ಮಾದೇವ” ಚಿತ್ರತಂಡದ 120 ಸದಸ್ಯರೊಡನೆ ನೋಡಿದೆ ಎಂದು ವಿನೋದ್‌ ಪ್ರಭಾಕರ್‌ ತಿಳಿಸಿದ್ದಾರೆ.

ನಂತರ ಸಿನಿಮಾ ಕುರಿತು ಮಾತನಾಡಿದ ಅವರು, ಮನಸ್ಸಿಗೆ ಹತ್ತಿರವಾದ ಚಿತ್ರವಿದು. ಪುನೀತ್ ಸರ್ ಚಿತ್ರದುದ್ದಕ್ಕೂ ನೀಡಿರುವ ಸಂದೇಶಗಳು ಮನಸ್ಸಿನಲ್ಲಿ ಹಾಗೆ ಇದೆ. ಅಮೋಘವರ್ಷ ಅವರ ನಿರ್ದೇಶನ ಬಹಳ ಅಮೋಘವಾಗಿದೆ. ಈ ಸಿನಿಮಾ ನೋಡುತ್ತಿದ್ದರೆ ನನ್ನ ತಂದೆ ಪ್ರಭಾಕರ್ ಅವರು ಅಣ್ಣವ್ರ ಜೊತೆಯ ಆ “ಗಂಧದ ಗುಡಿ”ಯಲ್ಲಿ ಹಾಗೂ ಶಿವಣ್ಣ ಅವರ ಜೊತೆ ಭಾಗ ಎರಡರಲ್ಲಿ ನಟಿಸಿದ್ದು ನೆನಪಾಯಿತು. ಇಂತಹ ‌ಉತ್ತಮ ಚಿತ್ರ ನಿರ್ಮಿಸಿದ್ದಕ್ಕಾಗಿ ಅಶ್ವಿನಿ‌ ಪುನೀತ್ ರಾಜ್‍ಕುಮಾರ್ ಅವರಿಗೆ ವಿನೋದ್ ಪ್ರಭಾಕರ್ ಅಭಿನಂದನೆ ತಿಳಿಸಿದ್ದಾರೆ.

ಗಂಧದ ಗುಡಿ: ಮೊದಲ ದಿನವೇ ರಾಜ್ಯದಾದ್ಯಂತ ಅದ್ದೂರಿ ಪ್ರದರ್ಶನ
ಬೆಂಗಳೂರು: ಕರ್ನಾಟಕ ರಾಜರತ್ನ ಡಾ. ಪುನೀತ್‌ ರಾಜಕುಮಾರ ಅಭಿನಯದ ಗಂಧದ ಗುಡಿ ಸಿನಿಮಾವು ಇಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಪುನೀತ್‌ ರಾಜುಕುಮಾರ್‌ ಅವರ ಕೊನೆಯ ಚಿತ್ರವಾದ ಗಂಧದ ಗುಡಿ ಸಿನಿಮಾಗೆ, ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಇಂದು ಅವರ ಆಸೆ ನೆರೆವೇರಿದ್ದು, ಕೊನೆಯ ಸಿನಿಮಾದ ಮೂಲಕ ಅಭಿಮಾನಿಗಳು ಅಪ್ಪುನನ್ನು ಕಣ್ಣು ತುಂಬಿಕೊಂಡಿದ್ದಾರೆ.

ಗಂಧದಗುಡಿ ಸಿನಿಮಾ ರಾಜ್ಯದ ಎಲ್ಲ ಕಡೆ ಬೆಳಗ್ಗೆ 6 ಗಂಟೆಗೆಯಿಂದಲೇ ಪ್ರದರ್ಶನ ಕಾಣುತ್ತಿದ್ದು, ಚಿತ್ರವನ್ನು ಅಭಿಮಾನಿಗಳು, ಪ್ರೇಕ್ಷಕರು ಅದ್ದೂರಿಯಾಗಿ ಸ್ವಾಗತಿಸಿದರು.

ಮೊದಲ ದಿನವೇ ರಾಜ್ಯದ್ಯಾಂತ 200 ಚಿತ್ರಮಂದಿರಗಳಲ್ಲಿ 1500 ಶೋ- ಪ್ರದರ್ಶನ ಕಂಡಿರುವ ಈ ಸಿನಿಮಾ, ಪ್ರತಿ ಚಿತ್ರಮಂದಿರದಲ್ಲಿ 6 ರಿಂದ 7 ಶೋ ಪ್ರದರ್ಶನ ಕಂಡಿದೆ. ಬೆಂಗಳೂರಿನಲ್ಲೇ 300ಕ್ಕೂ ಹೆಚ್ಚು ಶೋಗಳ ಪ್ರದರ್ಶನ ಕಂಡಿರುವ ಗಂಧದಗುಡಿ, ರಾಜ್ಯದಲ್ಲಿ ಒಟ್ಟು 175 ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ.

ಸಿನಿಮಾವು ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿರುವ ಸಂತಸಕ್ಕೆ, ಚಿತ್ರಮಂದಿರದ ಮುಂದೆ ಅಭಿಮಾನಿಗಳ ಕುಣಿದು ಕುಪ್ಪಳಿಸಿದ್ದು, ರಾಘವೇಂದ್ರ ರಾಜಕುಮಾರ ಕೂಡ ಜೊತೆ ಹೆಜ್ಜೆ ಹಾಕಿದ್ದಾರೆ.

ಇನ್ನೂ ಅಪ್ಪು ಅಭಿಮಾನಿಗಳು ಸಿನಿಮಾ ತೆರೆಕಂಡಿರುವ ಖುಷಿಗೆ, ಚಿತ್ರಮಂದಿರಗಳ ಮುಂದೆ ಕೇಕ್ ಕತ್ತರಿಸಿದರು. ನಂತರ ಅಭಿಮಾನಿಗಳು ಅಪ್ಪು ಹೆಸರಲ್ಲಿ ಜನರಿಗೆ ಅನ್ನದಾನ ಮಾಡಿದರು. ಒಟ್ಟಾರೆ ನಗುವಿನ ಒಡೆಯನನ್ನು ಕಳೆದುಕೊಂಡ ಕರುನಾಡಿನ ಜನತೆಗೆ, ಗಂಧದಗುಡಿ ಸಿನಿ ಪರದಿಯ ಮೂಲಕ ಅಪ್ಪುವಿನ ನಗುವನ್ನು ಮತ್ತೋಮ್ಮೆ ಕಾಣುವ ಅದೃಷ್ಟ ಅಭಿಮಾನಿಗಳಿಗೆ ದೊರಕಿದಂತಾಗಿದೆ.

‘ಗಂಧದ ಗುಡಿ’ ಮುಂದಿನ ಪೀಳಿಗೆಗೆ ದಂತಕತೆಯಾಗಲಿದೆ: ಸಿಎಂ ಬೊಮ್ಮಾಯಿ
ಬೆಂಗಳೂರು: ನಿನ್ನೆ ಪುನೀತ್ ರಾಜ್ ಕುಮಾರ್ ಅವರ ‘ಗಂಧದ ಗುಡಿ’ ಚಿತ್ರ ಬಿಡುಗಡೆಯ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಅಪ್ಪು ಅವರಂತೆ ಈ ಸಿನೆಮಾ ಮುಂದಿನ ಪೀಳಿಗೆಗೆ ಒಂದು ದಂತಕಥೆಯಾಗಲಿದೆ ಎಂದು  ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ನಾಡು ಮತ್ತು ಗಂಧದ ಗುಡಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಅಂತಹ ವಿಚಾರದೊಂದಿಗೆ, ಕಾಡು, ನಿಸರ್ಗ, ಪ್ರಾಣಿಗಳನ್ನು ಇಟ್ಟುಕೊಂಡು ಅಪ್ಪು ಮಾಡಿದ ಈ ಸಿನೆಮಾ ಅತ್ಯಂತ ಪ್ರಸ್ತುತವಾಗಿದೆ. ನಿಸರ್ಗವನ್ನು ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ಜನಾಂಗದ ಭವಿಷ್ಯದಲ್ಲಿ ಕಳ್ಳತನ ಮಾಡಿದಂತೆ ಎಂದು ಅಭಿಪ್ರಾಯ ಪಟ್ಟರು.

ಅಪ್ಪು ನಮ್ಮ ಜೊತೆಗೆ ಇದ್ದಾರೆ. ಪ್ರತಿ ಕ್ಷಣ ನಮ್ಮನ್ನು ನೋಡ್ತಾ ಇರ್ತಾರೆ. ಇರುವಾಗ ಹೊಗಳುವುದು ಸಹಜ. ಇಲ್ಲದೇ ಇರುವಾಗ ನೆನಪು ಮಾಡಿಕೊಳ್ಳುವುದು ದೈವದ ಆಶೀರ್ವಾದ ಇದ್ದರೆ ಮಾತ್ರ ಸಾಧ್ಯ. ಅಂತಹ ಆಶೀರ್ವಾದ ಅಪ್ಪು ಮೇಲಿತ್ತು ಎಂದು ಮುಖ್ಯಮಂತ್ರಿ ಬೊಮ್ಮಾಯಿ ನುಡಿದರು.

ರಾಜ್ ಕುಮಾರ್ ಅವರ ಎಲ್ಲ ಗುಣಧರ್ಮಗಳನ್ನು ನೂರಕ್ಕೆ ನೂರರಷ್ಟು ಹೊಂದಿದವರು ಪುನೀತ್ ರಾಜಕುಮಾರ್, ಎಷ್ಟೇ ದೊಡ್ಡ ಸ್ಟಾರ್ ಆದರೂ ನಯ, ವಿನಯವನ್ನು ಒಂದು ಕ್ಷಣವೂ ಮರೆತಿರಲಿಲ್ಲ. ಅಪ್ಪು ಅತ್ಯಂತ ಸಣ್ಣ ವಯಸ್ಸಿನಲ್ಲೇ ಬಾಲನಟನಾಗಿ ದೊಡ್ಡ ಹೆಸರು ಮಾಡಿದಾಗ ಸಂತೋಷವಾಗಿತ್ತು. ಆದರೆ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋದಾಗ ದುಃಖ ತಡೆಯಲು ಆಗಲಿಲ್ಲ. ಶ್ರೇಷ್ಠ ವ್ಯಕ್ತಿಗಳು ಅಲ್ಪಾಯುಗಳು. ಅಮೂಲ್ಯವಾದುದು ಸ್ವಲ್ಪವೇ ಇರುತ್ತದೆ (Anything precious is very little) ಎಂದರು.

ಅಪ್ಪು ನೆನಪನ್ನು ಇಷ್ಟು ವಿಜೃಂಭಣೆಯಿಂದ ಆಯೋಜಿಸಿರುವ ಡಾ. ರಾಜ್ ಕುಮಾರ್ ಕುಟುಂಬದ ಶ್ರೀಮಂತಿಕೆಯನ್ನು ಕೊಂಡಾಡಿದ ಮುಖ್ಯಮಂತ್ರಿಗಳು ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರನ್ನು ಅಭಿನಂದಿಸಿದರು.

ʼಇದೇ ನವೆಂಬರ್ 1 ರಂದು ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕದ ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದುʼ. ಅಭಿಮಾನಿಗಳು, ನಾಡಿನ ಜನತೆ ಕಾರ್ಯಕ್ರಮದಲ್ಲಿ ಭಾಗ ವಹಿಸುವಂತೆ ಆಹ್ವಾನ ನೀಡಿದರು.

ಅಪ್ಪು ಮೇಲಿನ ಅಭಿಮಾನದ ಕುರಿತು ತಮ್ಮ ಅನುಭವ ಹಂಚಿಕೊಂಡ ಮುಖ್ಯಮಂತ್ರಿಗಳು ತಮ್ಮ ಔರಾದ್ ಪ್ರವಾಸ ಸಂದರ್ಭದಲ್ಲಿ ಯುವಕರು ಅಪ್ಪು ಭಾವಚಿತ್ರದೊಂದಿಗೆ ಬಂದು ತಮ್ಮೊಡನೆ ಚಿತ್ರ ತೆಗೆಸಿಕೊಳ್ಳಲು ಮುಂದಾಗಿದ್ದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ನಟ ಶಿವರಾಜ್ ಕುಮಾರ್, ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಸಚಿವರಾದ ಮುರುಗೇಶ್ ನಿರಾಣಿ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೆ.ಸಿ. ನಾರಾಯಣಗೌಡ, ಆನಂದ್ ಸಿಂಗ್, ಶಾಸಕ ರಾಜೂಗೌಡ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.