gandagudi film release – Peepal Media

ಗಂಧದ ಗುಡಿ: ಮೊದಲ ದಿನವೇ ರಾಜ್ಯದಾದ್ಯಂತ ಅದ್ದೂರಿ ಪ್ರದರ್ಶನ
ಬೆಂಗಳೂರು: ಕರ್ನಾಟಕ ರಾಜರತ್ನ ಡಾ. ಪುನೀತ್‌ ರಾಜಕುಮಾರ ಅಭಿನಯದ ಗಂಧದ ಗುಡಿ ಸಿನಿಮಾವು ಇಂದು ರಾಜ್ಯದಾದ್ಯಂತ ಬಿಡುಗಡೆಯಾಗಿದ್ದೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಪುನೀತ್‌ ರಾಜುಕುಮಾರ್‌ ಅವರ ಕೊನೆಯ ಚಿತ್ರವಾದ ಗಂಧದ ಗುಡಿ ಸಿನಿಮಾಗೆ, ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ ಇಂದು ಅವರ ಆಸೆ ನೆರೆವೇರಿದ್ದು, ಕೊನೆಯ ಸಿನಿಮಾದ ಮೂಲಕ ಅಭಿಮಾನಿಗಳು ಅಪ್ಪುನನ್ನು ಕಣ್ಣು ತುಂಬಿಕೊಂಡಿದ್ದಾರೆ.

ಗಂಧದಗುಡಿ ಸಿನಿಮಾ ರಾಜ್ಯದ ಎಲ್ಲ ಕಡೆ ಬೆಳಗ್ಗೆ 6 ಗಂಟೆಗೆಯಿಂದಲೇ ಪ್ರದರ್ಶನ ಕಾಣುತ್ತಿದ್ದು, ಚಿತ್ರವನ್ನು ಅಭಿಮಾನಿಗಳು, ಪ್ರೇಕ್ಷಕರು ಅದ್ದೂರಿಯಾಗಿ ಸ್ವಾಗತಿಸಿದರು.

ಮೊದಲ ದಿನವೇ ರಾಜ್ಯದ್ಯಾಂತ 200 ಚಿತ್ರಮಂದಿರಗಳಲ್ಲಿ 1500 ಶೋ- ಪ್ರದರ್ಶನ ಕಂಡಿರುವ ಈ ಸಿನಿಮಾ, ಪ್ರತಿ ಚಿತ್ರಮಂದಿರದಲ್ಲಿ 6 ರಿಂದ 7 ಶೋ ಪ್ರದರ್ಶನ ಕಂಡಿದೆ. ಬೆಂಗಳೂರಿನಲ್ಲೇ 300ಕ್ಕೂ ಹೆಚ್ಚು ಶೋಗಳ ಪ್ರದರ್ಶನ ಕಂಡಿರುವ ಗಂಧದಗುಡಿ, ರಾಜ್ಯದಲ್ಲಿ ಒಟ್ಟು 175 ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ.

ಸಿನಿಮಾವು ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿರುವ ಸಂತಸಕ್ಕೆ, ಚಿತ್ರಮಂದಿರದ ಮುಂದೆ ಅಭಿಮಾನಿಗಳ ಕುಣಿದು ಕುಪ್ಪಳಿಸಿದ್ದು, ರಾಘವೇಂದ್ರ ರಾಜಕುಮಾರ ಕೂಡ ಜೊತೆ ಹೆಜ್ಜೆ ಹಾಕಿದ್ದಾರೆ.

ಇನ್ನೂ ಅಪ್ಪು ಅಭಿಮಾನಿಗಳು ಸಿನಿಮಾ ತೆರೆಕಂಡಿರುವ ಖುಷಿಗೆ, ಚಿತ್ರಮಂದಿರಗಳ ಮುಂದೆ ಕೇಕ್ ಕತ್ತರಿಸಿದರು. ನಂತರ ಅಭಿಮಾನಿಗಳು ಅಪ್ಪು ಹೆಸರಲ್ಲಿ ಜನರಿಗೆ ಅನ್ನದಾನ ಮಾಡಿದರು. ಒಟ್ಟಾರೆ ನಗುವಿನ ಒಡೆಯನನ್ನು ಕಳೆದುಕೊಂಡ ಕರುನಾಡಿನ ಜನತೆಗೆ, ಗಂಧದಗುಡಿ ಸಿನಿ ಪರದಿಯ ಮೂಲಕ ಅಪ್ಪುವಿನ ನಗುವನ್ನು ಮತ್ತೋಮ್ಮೆ ಕಾಣುವ ಅದೃಷ್ಟ ಅಭಿಮಾನಿಗಳಿಗೆ ದೊರಕಿದಂತಾಗಿದೆ.