gang rape – Peepal Media

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ABVP ಪದಾಧಿಕಾರಿಗಳು : ಆರೋಪ ತಳ್ಳಿ ಹಾಕಿದ ಸಂಘಟನೆ
ರಾಜಸ್ಥಾನದ ಜೋಧ್‌ಪುರ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದ ಆವರಣದಲ್ಲಿ 17 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳು ಬಿಜೆಪಿಯ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರು ಎಂದು ಪೊಲೀಸರು ಆರೋಪಿಸಿ ರಾಜಸ್ಥಾನದಲ್ಲಿ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ತಾನು ಪ್ರೀತಿಸಿದ ಹುಡುಗನೊಂದಿಗೆ ಅಜ್ಮೀರ್ ಜಿಲ್ಲೆಯ ಬೇವಾರ್‌ನಿಂದ ಓಡಿಹೋಗಿ ಶನಿವಾರ ತಡರಾತ್ರಿ ಜೋಧ್‌ಪುರ ತಲುಪಿದ್ದಾಳೆ. ನಗರದಲ್ಲಿ ವಸತಿಗಾಗಿ ಹುಡುಕಾಡುತ್ತಿದ್ದಾಗ ಮೂವರು ಆರೋಪಿಗಳು ರಾತ್ರಿ ಆಶ್ರಯ ನೀಡುವುದಾಗಿ ಹೇಳಿ ಆಮಿಷ ಒಡ್ಡಿದ್ದಾರೆ.

ನಂತರ ಆರೋಪಿಗಳು ಅವರನ್ನು ವಿಶ್ವವಿದ್ಯಾನಿಲಯದ ಹಾಕಿ ಮೈದಾನಕ್ಕೆ ಕರೆದೊಯ್ದು ಆಕೆಯ ಪ್ರಿಯಕರನನ್ನು ಥಳಿಸಿ ನಂತರ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಪಾದಿತ ಅತ್ಯಾಚಾರಿಗಳನ್ನು ಅಪರಾಧ ನಡೆದ ಎರಡು ಗಂಟೆಗಳ ನಂತರ ಬಂಧಿಸಲಾಗಿದೆ. ಅವರನ್ನು ಧರ್ಮಪಾಲ್ ಸಿಂಗ್, ಸಮಂದರ್ ಸಿಂಗ್ ಭಾಟಿ ಮತ್ತು ಭಟ್ಟಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಎಲ್ಲರೂ 20 ರಿಂದ 22 ವರ್ಷ ವಯಸ್ಸಿನವರಾಗಿದ್ದಾರೆ.

ಪ್ರಕರಣದಲ್ಲಿ ಬಂಧಿತರಾಗಿರುವ ವಿದ್ಯಾರ್ಥಿಗಳು ABVP ಸದಸ್ಯರು ಎಂದು ಪೊಲೀಸರು ಗುರುತಿಸಿದ್ದು, ರಾಜಸ್ಥಾನದ ರಾಜಕೀಯದಲ್ಲಿ ಬಾರೀ ಕೋಲಾಹಲ ಸೃಷ್ಟಿಯಾಗಿದೆ. ಆದರೆ ಪೊಲೀಸರು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ವಿದ್ಯಾರ್ಥಿ ಸಂಘದ ಚುನಾವಣೆಗೆ ಎಬಿವಿಪಿಯಿಂದ ಟಿಕೆಟ್‌ಗಾಗಿ ವಿದ್ಯಾರ್ಥಿ ನಾಯಕನಿಗೆ ಆರೋಪಿಗಳು ಪ್ರಚಾರ ನಡೆಸುತ್ತಿದ್ದರು ಎಂದು ಪೊಲೀಸರು ತನಿಖೆ ಮೂಲಕ ತಿಳಿಸಿದ್ದಾರೆ.

ಆದರೆ ಬಿಜೆಪಿ ಪಕ್ಷ ಮತ್ತು ABVP ಸಂಘಟನೆ ಆರೋಪಿಗಳೊಂದಿಗಿನ ತಮ್ಮ ಸಂಬಂಧವನ್ನು ನಿರಾಕರಿಸಿವೆ. ಇದೇ ವಿಚಾರ ರಾಜಸ್ಥಾನದ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪವಾದಾಗ ಬಿಜೆಪಿ ಶಾಸಕರು ಗದ್ದಲ ಎಬ್ಬಿಸಿದ ಘಟನೆ ನಡೆದಿದೆ. ವಿಧಾನಸಭೆಯಲ್ಲಿ ಪಕ್ಷೇತರ ಶಾಸಕ ಸಂಯಮ್ ಲೋಧಾ ಅವರು ಈ ವಿಚಾರ ಪ್ರಸ್ತಾಪಿಸಿದಾಗ ಬಿಜೆಪಿ ಶಾಸಕರು ಇದನ್ನು ವಿರೋಧಿಸಿ, ಈ ವಿಚಾರವನ್ನು ನಡಾವಳಿಗಳ ದಾಖಲೆಯಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು.

ಇದರ ನಡುವೆ ಆರೋಪಿಗಳಲ್ಲಿ ಒಬ್ಬನಾದ ಧರ್ಮಪಾಲ್ ಸಿಂಗ್ ಅವರು ಸೆಪ್ಟೆಂಬರ್ 21, 2021 ರಿಂದ ಸದಸ್ಯರಾಗಿದ್ದಾರೆ ಎಂದು ತೋರಿಸುವ ಎಬಿವಿಪಿ ಸದಸ್ಯತ್ವದ ರಸೀದಿಯನ್ನು ರಾಜ್ಯ ಸರ್ಕಾರದ ಮೂಲಗಳು ಬುಧವಾರ ಬಿಡುಗಡೆ ಮಾಡಿದೆ. ರಶೀದಿಯಲ್ಲಿ ಎಬಿವಿಪಿ ಜೋಧ್‌ಪುರ ‘ಪ್ರಾಂತ್’ (ಬ್ಲಾಕ್) ಅಧ್ಯಕ್ಷ ಬಲ್ವೀರ್ ಚೌಧರಿ ಸಹಿ ಮಾಡಿದ ದಾಖಲೆ ಕೂಡ ಕಂಡುಬಂದಿದೆ.

ಮೂವರು ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO), ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಡ್ರಾಪ್ ನೆಪದಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ; ಇಬ್ಬರ ಬಂಧನ
ಡ್ರಾಪ್ ಮಾಡುವ ನೆಪದಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಆರೋಪದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಬಳಿ ಗುರುವಾರ ಈ ಘಟನೆ ಸಾಮೂಹಿಕ ಅತ್ಯಾಚಾರದ ಪ್ರಕರಣ ನಡೆದಿದೆ. ಪೊಲೀಸ್ ಮೂಲಗಳ ಪ್ರಕಾರ ಕೇರಳ ಮೂಲದ ಯುವತಿ ಮೇಲೆ ಇಬ್ಬರು ಯುವಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರಿನ ಬಿಟಿಎಂ ಲೇಔಟ್ ನ ಸಂಸ್ಥೆಯೊಂದರಲ್ಲಿ ಫ್ರೀಲ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಸಂತ್ರಸ್ಥ ಯುವತಿ ಶುಕ್ರವಾರ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದಳು. ಬೈಕ್ ನ ಮೂಲಕ ನೀಲಾದ್ರಿ ನಗರಕ್ಕೆ ಬುಕ್ ಮಾಡಿದ್ದ ಯುವತಿ ಮದ್ಯಪಾನ ಮಾಡಿದ್ದಳು ಎಂದು ತಿಳಿದು ಬಂದಿದೆ. ಬೈಕ್ ನಲ್ಲಿ ಡ್ರಾಪ್ ಮಾಡಲು ಬಂದಿದ್ದ ವ್ಯಕ್ತಿ, ಯುವತಿ ಮದ್ಯಪಾನ ಮಾಡಿದ್ದನ್ನು ಗಮನಿಸಿದ್ದಾನೆ. ನಂತರ ಬೈಕ್ ನೀಲಾದ್ರಿ ನಗರ ತಲುಪುವ ವೇಳೆಗಾಗಲೇ ಯುವತಿ ಅರೆ ಪ್ರಜ್ಞಾವಸ್ತೆ ತಲುಪಿದ್ದಾಳೆ.

ನಂತರ ಆತ ಯುವತಿಯನ್ನು ಡ್ರಾಪ್‌ಪಾಯಿಂಟ್‍ಗೆ ಇಳಿಸದೆ ತಮ್ಮ ರೂಂಗೆ ಕರೆದೊಯ್ದಿದ್ದಾನೆ. ಈ ವೇಳೆ ರ‍್ಯಾಪಿಡೋ ಬೈಕ್ ಸವಾರ ಮತ್ತು ಆತನ ಸ್ನೇಹಿತ ಸೇರಿಕೊಂಡು ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ಪ್ರಜ್ಞೆ ಬಂದ ಬಳಿಕ ಆರೋಪಿಗಳು ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಯುವತಿಯನ್ನು ಬಿಟ್ಟು ಕಳುಹಿಸಿದ್ದಾರೆ.

ಘಟನೆ ಬಳಿಕ ಸಂತ್ರಸ್ತ ಯುವತಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ದೂರು ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಡಿನಲ್ಲಿ ಗ್ಯಾಂಗ್ ರೇಪ್‌ ಪ್ರಯತ್ನ: ಬೆತ್ತಲಾಗಿ ಬಂದ ಹುಡುಗಿಗೆ ಹುಚ್ಚಿಯ ಪಟ್ಟ
ಲಕ್ನೋ : ಕಾಡಿನಲ್ಲಿ 15ರ ಅಪ್ರಾಪ್ತ ಹುಡುಗಿಯನ್ನು ಸಾಮೂಹಿಕ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಾಗ ಹುಡುಗಿ ಅಲ್ಲಿಂದ ಬೆತ್ತಲಾಗಿ ಬರುವ ವೇಳೆ ಅಲ್ಲಿನ ಜನ ಹುಚ್ಚಿ ಎಂಬ ಪಟ್ಟ ಕಟ್ಟಿ ಕಲ್ಲೆಸೆದಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ.

ಹಿನ್ನಲೆ : ಹುಡುಗಿ ತನ್ನ ಸ್ನೇಹಿತರೋಂದಿಗೆ ಪಕ್ಕದ ಊರಿನ ಜಾತ್ರೆಗೆ ಹೋಗಿ ಹಿಂತಿರುಗಿ ಬರುವಾಗ ಸಂಜೆ ಕತ್ತಲಾಗಿ ಸುಮಾರು 8 ಗಂಟೆಯಾಗಿತ್ತು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಕಾಮುಕರು ಹುಡುಗಿಯನ್ನು ಅಪಹರಿಸಿಕೊಂಡು ಹೋಗಿ ಸೈಯದ್ ಪುರ್‌ ಖಾದರ್‌ ಏರಿಯಾದಲ್ಲಿರುವ ಒಂದು ಕಾಡಿಗೆ ಎಳೆದುಕೊಂಡು ಅತ್ಯಾಚಾರ ಕೃತ್ಯವನ್ನು ನಡೆಸಿದ್ದಾರೆ. ಅಲ್ಲಿಂದ ಅವಳು ಬೆತ್ತಲಾಗಿ, ತೀವ್ರ ರಕ್ತಸ್ರಾವದಿಂದ ತಪ್ಪಿಸಿಕೊಂಡು ಬರುತ್ತಿರುವಾಗ ಅಲ್ಲಿನ ಸ್ಥಳೀಯರು ಅವಳನ್ನು ಹುಚ್ಚಿ ಎಂದು ಪರಿಗಣಿಸಿರುವ ದುರಂತ  ಸೆಪ್ಟಂಬರ್‌ 1 ರಂದು ನಡೆದಿದೆ. ಆ ಸ್ಠಿತಿಯಲ್ಲಿ ಮನೆಗೆ ಬಂದ ಯುವತಿ ತನ್ನ ಅಕ್ಕನ ಬಳಿ ನಡೆದುದ್ದರ ಬಗ್ಗೆ ಹೇಳಿಕೊಳ್ಳುತ್ತಾಳೆ. 6 ದಿನದ ನಂತರ ಹುಡುಗಿಯ ಚಿಕ್ಕಪ್ಪ ಪೋಲೀಸರಿಗೆ ದೂರು ದಾಖಲು ಮಾಡಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಅಲ್ಲಿನ ಪೋಲೀಸರು ʼಹುಚ್ಚಿಯ ಪಟ್ಟ ಇರುವುದರಿಂದ ಹುಡುಗಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ರೀತಿಯ ವರದಿಯೂ ಬಂದಿಲ್ಲ. ಅತ್ಯಾಚಾರ ಆಗಿದ್ದು ಸಹ ಸ್ಪಷ್ಟನೆ ಇಲ್ಲ ಆದರೂ ಒಬ್ಬರನ್ನು ಬಂಧಿಸಿದ್ದೇವೆ. ಅತ್ಯಾಚಾರದ ಕುರಿತು ಹೆಚ್ಚು ತನಿಖೆ ನಡೆಯುತ್ತಿದ್ದು, ವೈದ್ಯರಿಂದ ಬಾಲಕಿಯ ಆರೋಗ್ಯ ಸ್ಥಿತಿಯ ವರದಿ ಬಂದ ಆದಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆʼ ಎಂದು ಮಾಹಿತಿ ನೀಡಿದ್ದಾರೆ.

ಹುಡುಗಿ ರಸ್ತೆಯಲ್ಲಿ ಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಯೋಗಿತಾ ಭಯಾನಾ ಎಂಬವವರು ಈ ವೀಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರೆ. 12 ಲಕ್ಷ ಮಂದಿ ವೀಡಿಯೋ ನೋಡಿದ್ದಾರೆ ಎಂದು ತಿಳಿದು ಬಂದಿದೆ.