gauri lankesh – Peepal Media

ಗೌರಿ ಲಂಕೇಶ್ ಹತ್ಯೆ: ಕಸ್ಟಡಿಯಲ್ಲಿರುವ ಕೊನೆಯ ಆರೋಪಿಗೆ ಜಾಮೀನು ಮಂಜೂರು
ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಕೊನೆಯ ಆರೋಪಿ ಶರದ್ ಭೌಸಾಹೇಬ್ ಕಲಾಸ್ಕರ್‌ಗೆ ಬೆಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪತ್ರಕರ್ತೆ ಮತ್ತು ಬಲಪಂಥೀಯ ವಿಚಾರಧಾರೆಗಳ ನಿಷ್ಠುರ ವಿಮರ್ಶಕಿಯಾಗಿದ್ದ ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 2017 ರಲ್ಲಿ ಅವರ ಬೆಂಗಳೂರಿನ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. ಆರೋಪಿಗಳಿಗೂ ʼಹಿಂದೂ ರಾಷ್ಟ್ರʼ ಸ್ಥಾಪಿಸುವ ಗುರಿಯನ್ನು ಹೊಂದಿರುವ ರಹಸ್ಯ ಸಂಘಟನೆಗೂ ಸಂಬಂಧ ಇರುವ ಹಲವಾರು ಸಾಕ್ಷಿಗಳು ಮತ್ತು ವ್ಯಾಪಕ ಸಾಕ್ಷ್ಯಗಳನ್ನು ಒಳಗೊಂಡಿರುವ ಈ ಪ್ರಕರಣವು ರಾಷ್ಟ್ರವ್ಯಾಪಿ ಗಮನ ಸೆಳೆದಿತ್ತು.

ಜನವರಿ 8 ರ ಬುಧವಾರದಂದು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಮುರಳೀಧರ ಪೈ ಬಿ ಅವರು ಇತ್ತೀಚಿನ ಆದೇಶವನ್ನು ಹೊರಡಿಸಿದ್ದು, ಕಠಿಣ ಷರತ್ತುಗಳೊಂದಿಗೆ ವೈಯಕ್ತಿಕ ಬಾಂಡ್‌ನ ಮೂಲಕ ಕಲಾಸ್ಕರ್ ನನ್ನು ಬಿಡುಗಡೆಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ .

ಸೆಪ್ಟೆಂಬರ್ 4, 2018 ರಿಂದ ಬಂಧನದಲ್ಲಿರುವ ಆರೋಪಿಗಳು ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 439 ರ ಅಡಿಯಲ್ಲಿ ನಿಯಮಿತ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ 16 ಸಹ ಆರೋಪಿಗಳ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದನ್ನು ಉಲ್ಲೇಖಿಸಿ ಕಲಾಸ್ಕರ್ ಅವರ ಸುದೀರ್ಘ ಬಂಧನವು ನ್ಯಾಯಸಮ್ಮತವಲ್ಲ ಎಂದು ಪ್ರತಿವಾದಿಸಿದರು.‌

ಸೆಪ್ಟೆಂಬರ್ 5, 2017 ರಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಕಾರಣವಾದ ಸಂಘಟಿತ ಅಪರಾಧಿ ಸಂಘಟನೆಯ ಭಾಗವೆಂದು ಆರೋಪಿಸಲಾದ 18 ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕಲಾಸ್ಕರ್, ಇತರ ಆರೋಪಿಗಳಿಗೆ ಶಸ್ತ್ರಾಸ್ತ್ರ ನಿರ್ವಹಣೆ ಮತ್ತು ಬಾಂಬ್ ತಯಾರಿಕೆಯಲ್ಲಿ ತರಬೇತಿ ನೀಡುವಲ್ಲಿ ಭಾಗಿಯಾಗಿದ್ದರು ಎಂದು ಪ್ರಾಸಿಕ್ಯೂಷನ್ ಹೇಳಿಕೊಂಡಿದೆ.

ನ್ಯಾಯಾಲಯದ ಅವಲೋಕನಗಳು

ಜಾಮೀನು ನೀಡುವಾಗ, ಕಲಾಸ್ಕರ್ ಅವರ ಪಾತ್ರವು ನೇರವಾಗಿ ಕೊಲೆಯ ಕೃತ್ಯಕ್ಕೆ ಸಂಬಂಧಿಸಿಲ್ಲ ಮತ್ತು ಸಮಾನತೆಯ ತತ್ವವನ್ನು ಒತ್ತಿಹೇಳಿತು, ಏಕೆಂದರೆ 18 ಸಹ ಆರೋಪಿಗಳಲ್ಲಿ 16 ಮಂದಿ ಈಗಾಗಲೇ ಜಾಮೀನಿನ ಮೇಲೆ ಹೊರಗಿದ್ದಾರೆ. ಇನ್ನೋರ್ವ ಆರೋಪಿ ವಿಕಾಸ್ ಪಾಟೀಲ್ ತಲೆಮರೆಸಿಕೊಂಡಿದ್ದು , ಇನ್ನಷ್ಟೇ ಬಂಧಿಸಬೇಕಿದೆ.

ನ್ಯಾಯಾಲಯವು ಆರೋಪಿಗಳು ಎದುರಿಸುತ್ತಿರುವ ಜೈಲುವಾಸದ ವಿಸ್ತೃತ ಅವಧಿಯನ್ನು ಎತ್ತಿ ತೋರಿಸಿದೆ ಮತ್ತು ತ್ವರಿತ ವಿಚಾರಣೆಗೆ ಸಾಂವಿಧಾನಿಕ ಹಕ್ಕನ್ನು ಒತ್ತಿಹೇಳಿತು. ದೀರ್ಘಾವಧಿಯ ಪೂರ್ವಭಾವಿ ಬಂಧನವು ನ್ಯಾಯದ ನ್ಯಾಯೋಚಿತತೆಯನ್ನು ದುರ್ಬಲಗೊಳಿಸುತ್ತದೆ ಎಂದು ಪೈ ಹೇಳಿದರು.

ಸಾಕ್ಷಿಗಳ ಗುರುತನ್ನು ಮರೆಮಾಚಲಾಗಿದೆ ಮತ್ತು ಗಣನೀಯ ಸಂಖ್ಯೆಯ ಸಾಕ್ಷ್ಯಗಳನ್ನು ಈಗಾಗಲೇ ದಾಖಲಿಸಲಾಗಿದೆ ಎಂದು ಹೇಳಿದ ನ್ಯಾಯಾಲಯ, ಸಾಕ್ಷಿಗಳಿಗೆ ಸಂಭವನೀಯ ಬೆದರಿಕೆಗಳ ಬಗ್ಗೆ ಪ್ರಾಸಿಕ್ಯೂಷನ್ ಎತ್ತಿದ ಕಳವಳವನ್ನು ತಳ್ಳಿಹಾಕಿತು.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಪ್ರಶ್ನೆಗಳಿಂದ ಕೂಡಿದೆ. ಕಳೆದ ವರ್ಷ, ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರು ಪ್ರತಿಕೂಲವಾಗಿ ತಿರುಗಿ , ತಪ್ಪೊಪ್ಪಿಗೆ ಹೇಳಿಕೆ ನೀಡುವಂತೆ ಪೊಲೀಸರು ಒತ್ತಾಯಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಗೌರಿ ಲಂಕೇಶ್ ಹತ್ಯೆಯ ಹಿಂದೆ ಇದ್ದ ಅದೇ ಗುಂಪಿನವರು ವಿಚಾರವಾದಿಗಳಾದ ಎಂಎಂ ಕಲಬುರ್ಗಿ ಮತ್ತು ನರೇಂದ್ರ ದಾಭೋಲ್ಕರ್ ಅವರ ಹತ್ಯೆಯ ಹಿಂದೆಯೂ ಇದ್ದಾರೆ.

ಜಾಮೀನು ಷರತ್ತುಗಳು

ಕಲಾಸ್ಕರ್ ಅವರ ಜಾಮೀನು ಈ ಕೆಳಗಿನ ಷರತ್ತುಗಳೊಂದಿಗೆ ಮಂಜೂರಾಗಿದೆ:

2,00,000 ರೂ.ಗಳ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಇಬ್ಬರ ಶ್ಯೂರಿಟಿ.

ಮಾನ್ಯ ಕಾರಣಗಳಿಗಾಗಿ ವಿನಾಯಿತಿಯ ಹೊರತು ಎಲ್ಲಾ ವಿಚಾರಣೆಯ ದಿನಾಂಕಗಳಲ್ಲಿ ನ್ಯಾಯಾಲಯದಲ್ಲಿ ಕಡ್ಡಾಯವಾಗಿ ಹಾಜರಾಗುವುದು.

ಸಾಕ್ಷಿಗಳನ್ನು ಬೆದರಿಸುವ ಅಥವಾ ಹಾಳುಮಾಡುವ ನಿಷೇಧ.

ಭವಿಷ್ಯದಲ್ಲಿ ಇದೇ ರೀತಿಯ ಅಪರಾಧಗಳಲ್ಲಿ ತೊಡಗಿಸಿಕೊಳ್ಳಲು ನಿಷೇಧ.

ವಸತಿ ವಿವರಗಳು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು.

ಪೂರ್ವಾನುಮತಿ ಇಲ್ಲದೆ ನ್ಯಾಯಾಲಯದ ವ್ಯಾಪ್ತಿಯನ್ನು ತೊರೆಯುವ ನಿರ್ಬಂಧ.

ಈ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದತಿಗೆ ಕಾರಣವಾಗುತ್ತದೆ ಎಂದೂ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಪ್ರೊ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ : ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ
ಸಾಹಿತಿ ಹಾಗೂ ಹಿರಿಯ ಸಂಶೋಧಕ ಪ್ರೊ.ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಹಾಗೂ ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ಸಂಬಂಧ ಪತ್ರದ ಮೂಲಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದು, ವಿಳಂಬವಾಗಿರುವ ಈ ಎರಡೂ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ನೋಡಬೇಕು ಎಂದು ತಮ್ಮ ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ.

2015 ರ ಜುಲೈ 8 ರಂದು ಅಪರಿಚಿತ ವ್ಯಕ್ತಿಗಳಿಂದ ಹತ್ಯೆಯಾದ ಪ್ರೊ.ಎಂ.ಎಂ.ಕಲಬುರ್ಗಿ ಅವರ ಪ್ರಕರಣದ ತನಿಖೆ ಕೂಡಾ ವಿಳಂಬವಾಗಿದ್ದು, ಅಪರಾಧಿಗಳ ವಿಚಾರಣೆ ವಿಳಂಬವಾಗಿದೆ. 2018-19 ರಲ್ಲೇ ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಬಗ್ಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಈ ಬಗ್ಗೆ ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ಹಸ್ತಾಂತರ ಮಾಡಬೇಕು ಎಂದು ಎಂ.ಎಂ.ಕಲಬುರ್ಗಿ ಅವರ ಪತ್ನಿ ಉಮಾದೇವಿಯವರು ಕೋರಿದ್ದು, ಈ ಬಗ್ಗೆ ತುರ್ತು ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಹಾಗೆಯೇ 2017 ಸೆಪ್ಟೆಂಬರ್ 5 ರಂದು ಹತ್ಯೆಯಾದ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಸಂಬಂಧವೂ ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ 18 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 1200 ಪುರಾವೆ ಹಾಗೂ 500 ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಇದರ ವಿಚಾರಣೆ ವಿಳಂಬವಾಗಿರುವ ಬಗ್ಗೆ ಮೃತರ ಸಹೋದರಿ ಕವಿತಾ ಲಂಕೇಶ್ ಅವರು ಮುಖ್ಯಮಂತ್ರಿಗಳನ್ನು ಮನವಿ ಮಾಡಿದ ಬಳಿಕ ಮುಖ್ಯಮಂತ್ರಿಗಳು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಈ ಎರಡೂ ಹತ್ಯೆ ಪ್ರಕರಣದ ವಿಚಾರಣೆಗೆ ಸಧ್ಯದಲ್ಲೇ ವಿಶೇಷ ನ್ಯಾಯಾಲಯ ರಚನೆಯಾಗಲಿದೆ. ಹಾಗಾಗಿ ಪ್ರಕರಣದ ಹಿನ್ನೆಲೆಯಲ್ಲಿ ಅತಿ ಶೀಘ್ರದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಗೌರಿ ಲಂಕೇಶ್ ಹತ್ಯಾ ಪ್ರಕರಣ: ವಿಚಾರಣೆಯ ಪ್ರತ್ಯಕ್ಷ ವರದಿ
2022 ಡಿಸೆಂಬರ್ ತಿಂಗಳಲ್ಲಿ ಗೌರಿ ಹತ್ಯಾ ಪ್ರಕರಣದ ವಿಚಾರಣೆಯು ಡಿಸೆಂಬರ್ 12 ರಿಂದ 15ರವೆಗೆ ನಾಲ್ಕು ದಿನಗಳು ನಡೆದವು. ಈ ನಾಲ್ಕು ದಿನಗಳಲ್ಲಿ ಐವರು ಸಾಕ್ಷಿಗಳ ಮುಖ್ಯ ವಿಚಾರಣೆ ಹಾಗೂ ಪಾಟಿ ಸವಾಲುಗಳು ಮಾತ್ರ ನಡೆಯಲು ಸಾಧ್ಯವಾಯಿತು.

ರವಿ ನರೋನ್ಹಾ ಎಂಬುವರು ಟಾಟಾ ಡೇಟಾ ಟೆಲಿ ಸರ್ವಿಸಸ್ ನ ಕರ್ನಾಟಕದ ನೋಡಲ್ ಅಧಿಕಾರಿ ಆಗಿರುತ್ತಾರೆ.
ಅವರು ಸಾಕ್ಷ್ಯ ನುಡಿಯುತ್ತಾ :

ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು 21.3.2018 ಮತ್ತು 9.9.2018 ರಂದು ಎರಡು ಕೋರಿಕೆಗಳನ್ನು ಮಾಡಿ ಮೊಬೈಲ್ ಸಂಖ್ಯೆಗಳಾದ 8792143630, 8904755446 ಮತ್ತು 9035377415 ಗಳಿಗೆ ಸಂಬಂಧಪಟ್ಟ ಚಂದಾ ಅರ್ಜಿ, ವಿಳಾಸ ಧೃಢೀಕರಣ ಮತ್ತು ಈ ಮೊಬೈಲ್ ನಂಬರುಗಳಲ್ಲಿ 1.3.2017 ರಿಂದ 18.2.2018 ವರೆಗೆ ನಡೆದ ಕರೆ ವರದಿಗಳನ್ನು ಒದಗಿಸಲು ಕೋರಿದರು.

ಇದರಲ್ಲಿ 9035377415 ಸಂಖ್ಯೆಯ ಚಂದಾದಾರರು ಮದ್ದೂರು ವಿಳಾಸವನ್ನು ಹೊಂದಿದ್ದು ಕೋರಲಾದ ಅವಧಿಗೆ ಸಂಬಂಧಪಟ್ಟ ಕರೆಮಾಹಿತಿಯನ್ನು ಒಳಗೊಂಡ 28 ಪುಟಗಳ ದಾಖಲೆಯ ನ್ನು ನೀಡಲಾಯಿತು.

ಈ ಮೊಬೈಲ್ ನ ಚಂದಾದಾರರು 4.9.2017 ರಿಂದ ಮೊದಲುಗೊಂಡು ಬೆಂಗಳೂರಿನ ಯಶವಂತಪುರದ ಪರಿಧಿಯಲ್ಲಿ ಇದ್ದದ್ದು ಕಂಡುಬರುತ್ತದೆ ಎಂದು ಹೇಳಿದರು…

8792143630 ಮೊಬೈಲ್ ಸಂಖ್ಯೆಯ ಚಂದಾದಾರರು ಸಿಂಧಗಿಯ ವಿಳಾಸವನ್ನು ಕೊಟ್ಟಿದ್ದು ಕೋರಿದ ಕಾಲಾವಧಿಯಲ್ಲಿ ನಡೆದ ಕರೆ ಮಾಹಿತಿಗಳುಳ್ಳ ಆರು ಪುಟಗಳ ದಾಖಲೆಯನ್ನು ನೀಡಲಾಗಿದೆ.

8904755446 ಮೊಬೈಲಿನ ಚಂದಾದಾರರು ಹುಬ್ಬಳಿಯ ವಿಳಾಸವನ್ನು ನೀಡಿದ್ದು ಕೋರಿದ ಕಾಲಾವಧಿಗೆ ಸಂಬಂಧಪಟ್ಟ 112 ಪುಟಗಳ ಕರೆಮಾಹಿತಿಯನ್ನು ನೀಡಲಾಗಿದೆ ಎಂದು ಸಾಕ್ಷ್ಯ ನುಡಿದರು. ಮತ್ತು ಅವನ್ನು ತೋರಿಸಿದಾಗ ಅದೇ ಮಾಹಿತಿ ಎಂದು ಧೃಢೀಕರಿಸಿದರು.

ಅಯಾಜುಲ್ಲಾ ಷರೀಫ್ ಅವರು ಬೆಂಗಳೂರಿನ ಕಲಾಸಿ ಪಾಳ್ಯದಲ್ಲಿರುವ “ಬೆಂಗಳೂರು ಗನ್ ಹೌಸ್'” ನ ಮಾಲೀಕರು. 2018ರ ಮಾರ್ಚ್ 1ರಂದು ಪೊಲೀಸರು ಆರೋಪಿ ನವೀನ್ ಕುಮಾರ್ ಅವರನ್ನು ತಮ್ಮ ಅಂಗಡಿಗೆ ಕರೆದುಕೊಂಡು ಬಂದು ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಬ್ಬೀರ್ ನ ಜೊತೆ ನವೀನ್ ಮಾಡಿರುವ ವ್ಯವಹಾರದ ಬಗ್ಗೆ ಶಬ್ಬೀರನನ್ನು ಕೇಳಿದರು ಎಂದು ಸಾಕ್ಷಿ ನುಡುದರು.

ಅದರಂತೆ ಈಗ್ಗೆ 7-8 ವರ್ಷಗಳ ಕೆಳಗೆ ನವೀನ್ ಕುಮಾರ್ ಎಂಬುವರು 3500ರೂ. ಕೊಟ್ಟು ತಮ್ಮ ಅಂಗಡಿಯಿಂದ ಗನ್ ಒಂದನ್ನು ಖರೀದಿ ಮಾಡಿದ್ದರು. ಅದಾದ ಒಂದು ವಾರಕ್ಕೆ ಮತ್ತೆ ತಮ್ಮ ಅಂಗಡಿಗೆ ಬಂದ ನವೀನ್ ಒಂದು ರಿವಾಲ್ವರ್ ಬೇಕೆಂದು ಕೇಳಿದರು. ಆದರೆ ತಾವು ಲೈಸೆನ್ಸ್ ಇಲ್ಲದೆ ರಿವಾಲ್ವರ್ ನಾಗಲಿ , ಬುಲೆಟ್ಟುಗಳನ್ನಾಗಲಿ ಮಾರುವಿದಿಲ್ಲ ಎಂದು ಹೇಳಿದವೆಂದು ಸಾಕ್ಷಿ ನೋಡಿದರು.

ಆದರೆ ಆ ನಂತರ ಶಬ್ಬೀರ್ ಅವರು ನವೀನ್ ಕುಮಾರ್ ಎಂದ ಮೂರು ಸಾವಿರ ರೂಪಾಯಿ ಪಡೆದುಕೊಂಡು ಅವರ ಕೋರಿಕೆಯ ಮೇರೆಗೆ ಅಮ್ಜದ್ ಎಂಬ ಮತ್ತೊಬ್ಬ ಮನುಷ್ಯನಿಂದ ಹಲವಾರು ವೇಸ್ಟ್ ಬುಲೆಟನ್ನು ಎರಡು ಸಾವಿರ ರೂ.ಗಳಿಗೆ ಖರೀದಿಸಿ ಅದನ್ನು ನವೀನ್ ಕುಮಾರ್ ಗೆ ಕೊಟ್ಟಿದ್ದು ತನಗೆ ನಂತರ ತಿಳಿದು ಬಂದ ಬಗ್ಗೆ ಸಾಕ್ಷ್ಯ ನುಡಿದರು.

ಅಮ್ಜದ್ ಎಂಬುವರು “ಬೆಂಗಳೂರು ಆರ್ಮರಿ” ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಅವರು ಸಾಕ್ಷ್ಯ ನುಡಿದು ಶಬ್ಬೀರ್ ಕೋರಿಕೆಯ ಮೇರೆಗೆ ತಮ್ಮ ಅಂಗಡಿಯಲ್ಲಿದ್ದ ವೆಸ್ಟ್ ಬುಲೆಟನ್ನು 2000 ರೂ ಪಡೆದುಕೊಂದು ಶಬ್ಬೀರ್ ಗೆ ಕೊಟ್ಟ ಬಗ್ಗೆ ಸಾಕ್ಷ್ಯ ನುಡಿದರು.

ರಾಜ್ ಕುಮಾರ್ ಎಂಬುವರು ಕಾಟನ್ ಪೇಟೆಯಲ್ಲಿ ವಾಸವಿರುವ ಡ್ರೈವರ್ ವೃತ್ತಿಯವರು.

ಅವರು 2018ರ ಮೇ 20 ರ ರಾತ್ರಿ ಕಾಟನ್ ಪೇಟೆ ಪೊಲೀಸ್ ಅಧಿಕಾರಿಯವರ ಕೋರಿಕೆಯ ಮೇರೆಗೆ ಠಾಣೆಗೆ ತೆರಳಿದಾಗ ಅಲ್ಲಿ ಆರೋಪಿ ಸುಜಿತ್ ಕುಮಾರ್ ಇದ್ದರು. ಸುಜಿತ್ ಕುಮಾರ್ ಅವರು ಇತರ ಆರೋಪಿಗಳನ್ನು ದಾವಣಗೆರೆಯಲ್ಲಿ ತೋರಿಸಿಕೊಡಲಿರುವುದರಿಂದ ತಮ್ಮ ಜೊತೆ ದಾವಣಗೆರೆಗೆ ಬಂದು ಪಂಚರಾಗಿ ಸಹಕರಿಸಬೇಕೆಂದು ಪೊಲೀಸರು ನೋಟೀಸು ಕೊಟ್ಟರು.

ಅದರಂತೆ ಆ ರಾತ್ರಿ ಖಾಸಗಿ ವಾಹನದಲ್ಲಿ ತಾನು ಎಸಐಟಿ ಅಧಿಕಾರಿ ಕುಮಾರಸ್ವಾಮಿ , ಮತ್ತೊಬ್ಬ ಪೊಲೀಸ್, ಲೋಕೇಶ್ ಎಂಬುವರು ಹಾಗೂ ಡ್ರೈವರ್ ಜೊತೆ ಸೇರಿಕೊಂಡು ದಾವಣೆಗೆರೆಗೆ ಹೋದವೆಂದು ಸಾಕ್ಷಿ ನುಡಿದರು. ತಾವು ಅಲ್ಲಿಂದ ಹೊರಡುವ ವೇಳೆಗೆ ಮತ್ತೆರೆಡು ವಾಹನಗಳು ಅಲ್ಲಿದ್ದವೆಂದು ಹೇಳಿದರು.

ದಾವಣಗೆರೆಯನ್ನು ಮೇ 21, ರಂದು ಬೆಳಿಗ್ಗೆ 9.30ಕ್ಕೆ ತಲುಪಿ ದಾವಣಗೆರೆ ಖಾಸಗಿ ಬಸ್ ಸ್ಟಾಂಡಿನ ಬಳಿ ಕಾಯುತ್ತಿದ್ದೆವು. ಆಗ ಸುಜಿತ್ ಕುಮಾರ್ ಅವರು ಅಲ್ಲಿಗೆ ನಡೆದುಕೊಂಡು ಬರುತ್ತಿದ್ದ ಆರೋಪಿಗಳಾದ ಅಮೋಲ್ ಕಾಳೆ ಮತ್ತು ಅಮಿತ್ ದೇಗ್ವೆಕರ್ ಅವರುಗಳನ್ನು ತೋರಿಸಿಕೊಟ್ಟರು. ಅವರನ್ನು ಪೊಲೀಸರು ಬಂಧಿಸಿದರು. ನಂತರ ಬಂಧಿತರು ತೋರಿಸಿದಂತೆ ಅನತಿ ದೂರದಲ್ಲಿದ್ದ ಮಹಾರಾಷ್ಟ್ರ ರಿಜಿಸ್ಟ್ರೇಷನ್ ನಂಬರ್ ಹೊಂದಿದ್ದ ಕೆಂಪು ಬಣ್ಣದ ಇಂಡಿಕಾ ಕಾರಿನಲ್ಲಿ ಕೂತಿದ್ದ ಮನೋಹರ್ ಯಡವೆ ಅವರನ್ನೂ ಕೂಡ ಬಂಧಿಸಿದರು. ನಂತರ ಎಲ್ಲರನ್ನು ಕರೆದುಕೊಂಡು ಪಕ್ಕದಲ್ಲೇ ಇದ್ದ ಗೆಸ್ಟ್ ಹೌಸಿಗೆ ಹೋದವೆಂದು ತಿಳಿಸಿದರು.

ಅಲ್ಲಿ ಪೊಲೀಸರು ತನ್ನ ಸಮಕ್ಷಮದಲ್ಲಿ 168 ವಸ್ತುಗಳನ್ನು ಆ ಮೂವರಿಂದ ವಶಪಡಿಸಿಕೊಂಡು, ಸಿಲ್ ಮಾಡಿ ಅದಕ್ಕೆ ತನ್ನ ಸಹಿ ಪಡೆದರು ಎಂದು ಸಾಕ್ಷಿ ನುಡಿದರು.

ಆ ವಸ್ತುಗಳನ್ನು ಕೋರ್ಟಿನಲ್ಲಿ ಸೀಲ್ ತೆಗೆದು ಹಾಜರು ಪಡಿಸಿ ಒಂದೊಂದನ್ನೇ ತೋರಿಸಿ ಕೇಳಿದಾಗ ವಶಪಡಿಸಿಕೊಂಡ ವಸ್ತುಗಳು ಅವೇ ಎಂದು ಆರೋಪಿ ರಾಜ್ ಕುಮಾರ್ ಗುರುತಿಸಿದರು.

ಅಮೋಲ್ ಕಾಳೆ ಮತ್ತು ಅಮಿತ್ ದೇಗ್ವೆಕರ್ ಹಾಗೂ ಯಡವೆ ಅವರುಗಳಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ:

ಅಮೋಲ್ ಕಾಳೆ ಹೆಸರಿನಲ್ಲಿದ್ದ ಕೆಂಪು ಇಂಡಿಕಾ ಕಾರಿನ MH 14 DF 2749 ಸಂಖ್ಯೆಯ RC ಕಾರ್ಡು ,ಬಿಳಿಯ ಬಣ್ಣದ SATCOMM ಮೊಬೈಲ್ ಫೋನ್,
ಶ್ರೀರಾಮ ಸೇನೆಯ ವಿಸಿಟಿಂಗ್ಸ ಕಾರ್ಡ್, ಹಲವರ ಹೆಸರುಗಳು ಮತ್ತು ಫೋನ್ ನಂಬರ್ ಗಳು, 8 ಪುಟದ ಸನಾತನ ಪ್ರಭಾತ್ ಪತ್ರಿಕೆ, ಡೈರಿ , 20 ಮೊಬೈಲ್ ಫೋನುಗಳು , ಇತ್ಯಾದಿಗಳ ಜೊತೆಗೆ …

ಒಂದು ಪೇಪರಿನಲ್ಲಿ iಇಂಗ್ಲಿಷಿನಲ್ಲಿ ಈ ಕೆಳಗಿನ ಹೆಸರುಗಳು ಇದ್ದವು:

ಗಿರೀಶ್ ಕಾರ್ನಾಡ

ಗೌರಿ ಲಂಕೇಶ್

ಚಂದ್ರಶೇಖರ ಪಾಟೀಲ್

ಬರಗೂರು ರಾಮಚಂದ್ರಪ್ಪ

ಸಿ.ಎಸ. ದ್ವಾರಕಾನಾಥ್

ಬಂಜಗೆರೆ ಜಯಪ್ರಕಾಶ್

ಬಿಟಿ ಲಲಿತಾ ನಾಯಕ್

ನಿಡುಮಾಮಿಡಿ ಸ್ವಾಮೀಜಿ …

ಎಂಬ ಹೆಸರುಗಳಿದ್ದವು.

ಇನ್ನೊಂದು ಹಾಳೆಯಲ್ಲಿ ದೇಶದ ಇತರ ರಾಜ್ಯಗಳಲ್ಲಿರುವ ಕೆಲವು ಮುದ್ರಣಾಲಯ ಹಾಗೂ ಪತ್ರಿಕೆಗಳ ಹೆಸರುಗಳಿದ್ದವು.

ಅಮಿತ್ ದೇಗ್ವೆಕರ್ ಬ್ಯಾಗಿನಲ್ಲಿ ಗೋವಾದ ಪೊಂಡಾದ ಯೂನಿಯನ್ ಬ್ಯಾಂಕಿಗೆ ಸಂದಾಯ ಮಾಡಲಾಗಿದ್ದ 35,000 ರೂ ದುಡ್ಡಿನ ಚೀಟಿಯ ಜೊತೆಗೆ ಪಾನ್ಸರೆ, ಧಾಬೋಲ್ಕರ್ ಅವರಿಗೆ ಸಂಬಂಧಪಟ್ಟ ವರದಿಗಳು, ಸ್ಥಳ ಸನಾತನ ಆಶ್ರಮ , ರಾಮನಾಥಿ , ಗೋವಾ ಎಂಬ ಹಿಂದಿ ಭಾಷೆಯ ಪೇಪರ್ ಮತ್ತು ಹಲವಾರು ಬಾಂಕುಗಳ ಬ್ಯಾಗುಗಳು, ಮಹಾರಾಷ್ಟ್ರ ಗ್ರಾಮೀಣ ಬ್ಯಾಂಕ್ ಹೆಸರಿನಲ್ಲಿ ದೇಗ್ವೆಕರ್ ಹೆಸರಿನಲ್ಲಿ ನೀಡಲಾದ ಐಡಿ ಇತ್ಯಾದಿಗಳು ಸಿಕ್ಕವು .

ಇದಲ್ಲದೆ ಅಮಿತ್ ದೇಗ್ವೆಕರ್ ಬ್ಯಾಗಿನಲ್ಲಿ 1,90,000ರೂ ಮತ್ತು ಕಾಳೆ ಯ ಬ್ಯಾಗಿನಲ್ಲಿ 26,000 ರೂ. ನಗದು ಹಾಗೂ ಅವರ ಜೋಬಿನಲ್ಲಿ 4000 ರೂ ನಗದು ದೊರೆಯಿತು. ತನಿಖಾಧಿಕಾರಿಗಳು ಇಷ್ಟು ಹಣ ಏಕೆಂದು ಪ್ರಶ್ನಿಸಿದಾಗ ದೈವ ಕಾರ್ಯಗಳಿಗೆ ಎಂದು ಉತ್ತರಿಸಿದರು ಎಂದು ರಾಜ್ ಕುಮಾರ್ ಸಾಕ್ಷಿ ಹೇಳಿದರು.

ಇದಲ್ಲದೆ ಆರೋಪಿಗಳ ಬಳಿ ಇದ್ದ ಚೈತನ್ಯ ಲಕ್ಷುರಿ ಹೋಮ್ಸ್ ಹಾಸ್ಪಿಟಾಲಿಟಿ ಸರ್ವಿಸಸ್ ನ ಕಾರ್ಡು, ಹೊಸೂರು ಮತ್ತು ಇತ್ಯಾದಿ ಊರುಗಳ ಹೋಟೆಲ್ ಗಳ ರಸೀದಿ ಮತ್ತು ಕಾರ್ಡ್ ಗಳನ್ನು ಸಹ ವಶಪಡಿಸಿಕೊಂಡರೆಂದು ಸಾಕ್ಷಿ ನುಡಿದರು.

ಪುರುಷೋತ್ತಮ್ ಅವರು ಬೆಂಗಳೂರಿನ ವಿಧಿ ವಿಜ್ಞಾನ ಇಲಾಖೆ (FSL- ಫೋರೆನ್ಸಿಕ್ ಸೈನ್ಸ್ ಲಾಬರೋಟರಿ)ಯಲ್ಲಿ DNA ವಿಜಾನಿಯಾಗಿ 2004 ರಿಂದ ಕೆಲಸ ಮಾಡುತ್ತಿದ್ದಾರೆ. ಅವರು ಈವರೆಗೆ 3500 ಪ್ರಕರಣಗಳ DNA profiling ಮಾಡಿದ್ದಾರೆ. ಹಾಗೂ ಹಲವಾರು ಕ್ರಿಮಿನಲ್ ಕೋರ್ಟುಗಳಲ್ಲಿ ಸಾಕ್ಷ್ಯ ನುಡಿದಿದ್ದಾರೆ ಅವರು ಸಾಕ್ಷ್ಯ ನುಡಿದು:

ಈ ಪ್ರಕರಣದ ಮುಖ್ಯ ತನಿಖಾಧಿಕಾರಿಗಳ ಕೋರಿಕೆಯಂತೆ 2017ರ ಸೆಪ್ಟೆಂಬರ್ 9 ರಂದು ಕಳಿಸಲಾದ swab sample, ರಕ್ತ ಸಿಕ್ತ ಬಟ್ಟೆ , ಬುಲೆಟ್ ಗಳು ಇತ್ಯಾದಿಗಳ ಸಾಂಪಲ್ಲುಗಳನ್ನೂ ರಾಸಾಯನಿಕ ಪರೀಕ್ಷೆ ಮತ್ತು ಆ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿತವಾಗಿರುವ ಪ್ರಕ್ರಿಯೆಗಳ ಮೂಲಕ DNA ಪರೀಕ್ಷೆ ಒಳಪಡಿಸಲಾಯಿತು.

ಗುಂಡಿಗೆ ಹತ್ತಿರುವ ರಕ್ತ ಮತ್ತು ಬಟ್ಟೆಗೆ ಹತ್ತಿರುವ ರಕ್ತ ಹಾಗೂ DNA ಒಬ್ಬರದೇ ಆಗಿದ್ದು ಅದು ವಯಸ್ಕ ಹೆಂಗಸಿನದ್ದು ಎಂಬ ಫಲಿತಾಂಶವನ್ನು ತನಿಖಾಧಿಕಾರಿಗೆ ತಿಳಿಸಲಾಯಿತು.

ಆ ನಂತರ ತಮಿಖಾಧಿಕಾರಿಗಳು . 14.6.2018 ರಂದು ಆರು ಕವರ್ ಗಳಲ್ಲಿ ಆರು ಕೂದಲುಗಳಿರುವ ಸ್ಯಾಂಪಲ್ಲನ್ನು DNA ವಿಭಾಗಕ್ಕೆ ಕಳಿಸಿದರು. ಮತ್ತೊಂದು ಕವರಿನಲ್ಲಿದ್ದ ವ್ಯಾಕ್ಯೂಟೈನರ್ ನಲ್ಲಿ ಅಮೋಲ್ ಕಾಲೆಯವರ ರಕ್ತದ ಸಾಂಪಾಲಿತ್ತು. ಮತ್ತೆ 18.6.2018 ರಂದು ಮತ್ತೊಂದು ವ್ಯಾಕ್ಯೂಟೈನರ್ ನಲ್ಲಿ ಪರಶುರಾಮ್ ವಾಘಮೋರೆಯೇನೆಂಬುವರ ರಕ್ತದ  ಸ್ಯಾಂಪಲ್ಲನ್ನು DNA ತಾಳೆ ಗೆ ಕಳಿಸಲಾಯಿತು

ತಾನು ಆ ಕೂದಲುಗಳ DNA ಪರೀಕ್ಷೆ ಮಾಡಲಾಗಿ ಅವು ವಯಸ್ಕ ಪುರುಷರದ್ದು ಎಂದು ಗೊತ್ತಾಯಿತು.

ಆ ಕೂದಲಿನ DNA ಮತ್ತು ಅಮೋಲ್ ಕಾಳೆಯ DNA ತಾಳೆಯಾಯಿತು.

ಆದರೆ ಆ ಕೂದಲಿನ DNA ವಾಘಮೋರೆಯ DNA ಜೊತೆ ತಾಳೆಯಾಗಲಿಲ್ಲ. ಹೀಗಾಗಿ ಆ ವರದಿಯನ್ನು ಹಾಗೂ DNA ತಾಳೆ ಪರೀಕ್ಷೆಯ ವಿವರಗಳನ್ನು ತನಿಖಾಧಿಕಾರಿಗಳಿಗೆ ಕಳಿಸಿದೆ. ಎಂದು ಹೇಳಿದ ಸಾಕ್ಷಿಯು ಆ ವರದಿಯನ್ನು ಮತ್ತು ಸಹಿಯನ್ನು ಕೋರ್ಟಿನಲ್ಲಿ ಗುರುತಿಸಿದರು. .

ಇದಾದ ನಂತರ 6.8.2018 ರಂದು ತನಿಖಾಧಿಕಾರಿಗಳು ಅಮಿತ್ ಬಡ್ಡಿ, ಗಣೇಶ್ ಮಿಸ್ಕಿನ್ ಮತ್ತು ಎಚ್.ಎಲ್ ಸುರೇಶ್ ಎಂಬುವರ ರಕ್ತದ ಸಾಂಪಲ್ ಕಳಿಸಿ DNA ಪ್ರೊಫೈಲಿಂಗ್ ಮಾಡಲು ಕೋರಿದರು. ಅದಾದ ನಂತರ 10.8.2018 ರಂದು ಐದು ವಸ್ತುಗಳನ್ನು – ಟೂತ್ ಬ್ರಶ್ – ಕಳಿಸಿ ಇದರಲ್ಲಿ ದೊರಕುವ ಎಪಿತೀಲಿಯಲ್ ಸೆಲ್ ಗಳ DNA ಗೂ ಈ ಮೂವರ DNAಗೂ ತಾಳೆಯಾಗುವುದೇ ಎಂದು ಪತ್ತೆ ಹಚ್ಚಲು ಕೋರಿದರು. ಹಾಗೆಯೇ ಮಾಡಲಾಗಿ ಅವು ತಾಳೆಯಾಗಲಿಲ್ಲ. ಅದಕ್ಕೆ ಸಂಬಂಧಪಟ್ಟ ವರದಿಯನ್ನು ನೀಡಲಾಗಿದೆ. ಅದನ್ನು ಕೋರ್ಟು ಮುಂದೆ ತೆರೆದು ತೋರಿಸಿದಾಗ ಸಾಕ್ಷಿಯು ಅದೇ ವರದಿ ಎಂದು ಗುರುತಿಸಿದರು.

ಆ ನಂತರ 16.11.2018 ರಂದು ನನಗೆ DNA comparitive profiling ವರದಿ ದೊರೆಯಿತು.

ಅದರ ಪ್ರಕಾರ 10.8.2018 ರಂದು ಕಳಿಸಲಾದ tooth brush ನಲ್ಲಿ ಸಿಕ್ಕ ಎಪಿತೀಲಿಯಲ್ ಸೆಲ್ಲಿನ DNA ಮತ್ತು ಪರಶುರಾಮ್ ವಾಘಮೋರೆಯ DNA ತಾಳೆಯಾಯಿತು.

ಇದಕ್ಕೆ ಸಂಬಂಧಪಟ್ಟಂತೆ ಕೊಟ್ಟ ವರದಿಯನ್ನು ಕೋರ್ಟಿನಲ್ಲಿ ಸಾಕ್ಷಿಯು ಗುರುತಿಸಿದರು.

ಪಾಟಿ ಸವಾಲು :

ಆರೋಪಿ ಪರ ವಕೀಲರುಗಳು ಸಾಕ್ಷಿದಾರರಾದ ರಾಜ್ ಕುಮಾರ್ ಅವರ ಪಾಟಿ ಸವಾಲನ್ನು ಇನ್ನು ಮುಗಿಸಿಲ್ಲ.

ಈವರೆಗೆ ನಡೆದಿರುವ ಪಾಟಿ ಸವಾಲಿನಲ್ಲಿ ರಾಜ್ ಕುಮಾರ್ ಅವರ ವೃತ್ತಿಯ ಸ್ವರೂಪ, ದಾವಣಗೆರೆಗೆ ಈ ಹಿಂದೆ ಭೇಟಿ ಕೊಟ್ಟಿದ್ದರ , ಬೆಂಗಳೂರಿಂದ ದಾವಣಗೆರೆ ಗೆ ಹೋಗುವಾಗ ಯಾವ ವಾಹನ, ಯಾವ ಮಾರ್ಗ, ಪ್ರಯಾಣದ ರೀತಿ, ಜೊತೆಗಿದ್ದವರ ವಿವರ, ದಾವಣಗೆರೆಯಲ್ಲಿ ವಾಹನವನ್ನು ನಿಲ್ಲಿಸಿದ ರೀತಿ, ಆರೋಪಿಗಳನ್ನು ಪೊಲೀಸರು ಬಂಧಿಸಿದಾಗ ಅವರ ಹಾಕಿದ್ದ ದಿರಿಸಿನ ವಿವರ, ವಶಪಡಿಸಿಕೊಳ್ಳಲಾದ ಕರೆನ್ಸಿಯ ಮೇಲಿದ್ದ ಸಂಖ್ಯೆಗಳನ್ನು ಬರೆದುಕೊಂಡರೆ ..ಇನ್ನಿತ್ಯಾದಿ ಸವಾಲುಗಳನ್ನು ಕೇಳಿದ್ದಾರೆ. ಈ ಸಾಕ್ಷಿಯ ಪಾಟಿ ಸವಾಲು ಮುಂದುವರೆಯಬೇಕಿದೆ .

ಸಾಕ್ಷಿದಾರರಾದ ಪುರುಷೋತ್ತಮ್ ಅವರನ್ನು ಕೇಳಬೇಕಿರುವ ಪ್ರಶ್ನೆಗಳು ಮುಂದೆ ಬರಲಿರುವ ಸಾಕ್ಷಿಗಳಿಗೂ ಸಂಬಂಧ ಪಟ್ಟಿರುತ್ತದೆ. ಈಗಲೇ ನಾವು ಆ ಪ್ರಶ್ನೆಗಳನ್ನು ಕೇಳಿ ಬಿಟ್ಟರೆ ಉಳಿದ ಸಾಕ್ಷ್ಯಗಳು ಎಚ್ಚೆತ್ತುಕೊಳ್ಳುವ ಸಾಧ್ಯತೆಗಳಿವೆ, ಆದ್ದರಿಂದ ಆ ನಿರ್ದಿಷ್ಟ ಸಾಕ್ಷಿಗಳ ವಿಚಾರಣೆಯಾದ ನಂತರವೇ ಪುರುಷೋತ್ತಮ್ ಅವರನ್ನು ಪ್ರಶ್ನಿಸಲು ಅವಕಾಶ ಮಾಡಿಕೊಡಬೇಕೆಂದು ಆರೋಪಿ ಪರ ವಕೀಲರಾದ ಕೃಷ್ಣಮೂರ್ತಿಯವರು ನ್ಯಾಯಾಲಯವನ್ನು ಕೋರಿದರು. .

ಆದರೆ ಅದಕ್ಕೆ ಸರ್ಕಾರಿ ವಕೀಲರಾದ ಬಾಲನ್ ಅವರು ಆಕ್ಷೇಪಣೆ ಮಾಡಿದರು. ಈ ಸಾಕ್ಷಿಯು ಕೇವಲ DNA ಬಗೆಗಿನ ಪರಿಣಿತ ಸಾಕ್ಷಿ . ಅವರಿಗೂ ಇತರ ಸಾಕ್ಷಿಗಳಿಗೂ ಯಾವುದೇ ಸಂಬಂಧವಿಲ್ಲ. ಸಾಕ್ಷಿಯು ತನಿಖಾಧಿಕಾರಿಯಾಗಿದ್ದರೆ ಈಬಗೆಯ ಕೋರಿಕೆಯು ಮನ್ನಾ. ಆದರೆ ಪರಿಣಿತ ಸಾಕ್ಷಿಯ ವಿಚಾರಣೆಗೆ ಈ ರೀತಿಯ ಕೋರಿಕೆ ಮಾನ್ಯ ಅಲ್ಲ ಎಂದು ವಾದಿಸಿದರು.

ಆದರೆ ಕೋರ್ಟು ಆರೋಪಿ ಪರ ವಕೀಲರ ಮನಸ್ಸಿನಲ್ಲಿ ಬೇರೆ ಯಾವುದೋ ಪ್ರಶ್ನೆಗಳಿರುತ್ತವೆ. ಅದನ್ನು ಆಧರಿಸಿ ಅವರು ತಮ್ಮ ವಾದವನ್ನು ರೂಪಿಸಿಕೊಳ್ಳಬೇಕಿರುತ್ತದೆ. ಹೀಗಾಗಿ ಆರೋಪಿ ಪರ ವಕೀಲರಿಗೆ ಈ ಸಾಕ್ಷಿಯನ್ನು ನಂತರ ಪ್ರಶ್ನಿಸಲು ಅವಕಾಶ ಕೊಡುವುದರಲ್ಲಿ ತಪ್ಪಿಲ್ಲ ಎಂದು ತಿಳಿಸಿದರು. ಅದರಂತೆ ಸಾಕ್ಷಿಗೆ ನಂತರ ಕರೆ ಬಂದಾಗ ಪಾಟಿ ಸವಾಲಿಗೆ ಹಾಜರಾಗಲು ತಿಳಿಸಿದರು.

ಆರೋಪಿ ಪರ ವಕೀಲರು ರವಿ ನೊರೊನ್ಹಾ ಅವರಿಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಯೊಂದಕ್ಕೆ ಉತ್ತರ ಕೊಡುತ್ತಾ ರವಿ ನರೋನ್ಹಾ ರವರು ಟಾಟಾ ಟೆಲಿ ಸರ್ವಿಸಸ ಕಂಪನಿಯು ತನ್ನ ಎಲ್ಲಾ ಕರೆ ಮಾಹಿತಿಗಳನ್ನು ಹೈದರಾಬಾದಿನಲ್ಲಿರುವ ಸರ್ವರ್ ನಲ್ಲಿ ದಾಖಲಿಸಿಡುತ್ತದೆಂದು, ಕರೆ ಮಾಹಿತಿಯನ್ನು ಅಲ್ಲಿಂದಲೇ ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆಂದೂ , ನೋಡಲ್ ಆಫೀಸರ್ ಆದ ತನಗೆ ಅದನ್ನು ಡೌನ್ಲೋ ಡ್ ಮಾಡಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಅಗತ್ಯವಿಲ್ಲವೆಂದೂ ತಿಳಿಸಿದರು. ಹಾಗೆಯೇ GSM ತಂತ್ರಜ್ಞಾನದ ಮೊಬೈಲ್ ಟವರ್ ಒಂದರ ತಲುಪುವ ವಿಸ್ತೀರ್ಣ 700-1000 ಮೀಟರ್ ಇರುತ್ತದೆಂದು ತಿಳಿಸಿದರು. ಅತ್ಯಂತ ಮುಖ್ಯವಾಗಿ ಕಾಲ್ ರೆಕಾರ್ಡ್ ಮಾಹಿತಿಯು 1.3.2017 ರಿಂದ 18.2.2018 ವರೆಗೆ ಮಾತ್ರವಲ್ಲದೆ 28-3-2018ರ ವರೆಗೆ ಇರುವುದು ಒಂದು ವರ್ಷದ ಅವಧಿಯ ಕಾಲ್ ರೆಕಾರ್ಡ್ ಮಾಹಿತಿಯನ್ನು ಸಂಗ್ರಹಿಸಡಬೇಕು ಎಂಬ ಕಾನೂನಿನ ಉಲ್ಲಂಘನೆಯಲ್ಲವೇ ಎಂದು ಆರೋಪಿ ಪರ ವಕೀಲರಾದ ಕೃಷ್ಮಮೂರ್ತಿಯವರು ಪ್ರಶ್ನಿಸಿದರು.

ಅದಕ್ಕೆ ನರೋನ್ಹಾ ಅವರು ತಮಗೆ ನೀಡಲಾಗಿರುವ ಲೈಸೆನ್ಸ್ ಷರತ್ತಿನ ಪ್ರಕಾರ ಪೋಲಿಸ್ ಅಧಿಕಾರಿಗಳು ಕೋರಿಕೊಂಡರೆ ಅವರು ಕೇಳುವ ಮಾಹಿತಿಯನ್ನು ಕೊಡಬೇಕಾಗುತ್ತದೆ ಎಂದು ಉತ್ತರಿಸಿದರು. ಆರೀತಿ ನಿರ್ದಿಷ್ಟ ಕೋರಿಕೆಯನ್ನು ತನಿಖಾಧಿಕಾರಿಗೆ ಯಾವಾಗ ಮತ್ತು ಹೇಗೆ ಮಾಡಿದರು ಎಂದು ಕೇಳಿದಾಗ ಅದರ ಬಗ್ಗೆ ತಮಗೆ ನೆನಪಿಲ್ಲ ಎಂದು ಉತ್ತರಿಸಿದರು.

ಹಾಗೆಯೇ ಅವರು ಕೊಟ್ಟಿರುವ ದಾಖಲೆಗಳಲ್ಲಿ ಪುಟದ ಕೊನೆಯಲ್ಲಿ ಪುಟ ಸಂಖ್ಯೆಯು 169/518 ಎಂದಿದೆ. ಎಂದರೆ ನೀವು 518 ಪುಟಗಳಷ್ಟು ಮಾಹಿತಿ ಕೊಟ್ಟಿದ್ದರೂ ಬರಿ 28 ಪುಟಗಳ ಮಾಹಿ ಎಂದು ಹೇಳುತ್ತಿರುವುದು ಸುಳ್ಳಲ್ಲವೆ ಎಂದು ಪ್ರಶ್ನಿಸಿದರು, ಆದ್ದರಿಂದ ನೀವು ಪೊಲೀಸರಿಗೆ ಅನುಕೊಲವಾಗುವ ಮಾಹಿತಿಯನ್ನು ಮಾತ್ರ ಸೃಷ್ಟಿಸಿ ಕೊಟ್ಟಿದ್ದೀರಿ ಎಂದು ಆರೋಪಿಸಿದರು.

ರವಿ ನರೋನ್ಹಾ ಅವರು ಪುಟದ ಕೊನೆಯಲ್ಲಿ ಆ ರೀತಿ ಸಂಖ್ಯೆಗಳು ಇರುವುದು ನಿಜವಾದರೂ ಅದರ ಅರ್ಥ ತಾನು ಪೊಲೀಸರಿಗೆ ಬೇಕಿರುವಷ್ಟು ಮಾಹಿತಿಯನ್ನು ಸೃಷ್ಟಿಸಿ ಕೊಟ್ಟಿದ್ದೇನೆಂದು ಎಂದಾಗುವುದಿಲ್ಲ ಎಂದು ಉತ್ತರಿಸಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಕರೆ ಮಾಹಿತಿ ದಾಖಲೆಗಳಲ್ಲಿ ಮೊಬೈಲ್ ಸ್ವಿಚ್ ಆಫ್ ಆದ ಮಾಹಿತಿ ಇರುವುದಿಲ್ಲವೆಂದು ಹೇಳಿದರು .

ಆರೋಪಿ ಪರ ವಕೀಲರು ಸಾಕ್ಷಿಗಳಾದ ಅಯಾಜುಲ್ಲಾ ಷರೀಫ್ ಮತ್ತು ಅಮ್ಜದ್ ಅವರಿಗೆ ಪ್ರಧಾನವಾಗಿ ವೆಸ್ಟ್ ಬುಲೆಟಗಳನ್ನು ಕೊಟ್ಟಿರುವ ಬಗ್ಗೆ ಹಾಗೂ ಗನ್ ರಿಪೇರಿ ಮಾರಾಟದ ಬಗ್ಗೆ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಾದ ರಿಜಿಸ್ಟ್ರಿಯನ್ನು ಅಂಗಡಿಯಲ್ಲಿ ಇಟ್ಟುಕೊಳ್ಳಲಾಗಿದೆಯೇ ಮತ್ತು ನವೀನ್ ಕುಮಾರ್ ಗೆ ಕೊಟ್ಟ ವೆಸ್ಟ್ ಬುಲೆಟ್ಗಳು ರಿಜಿಸ್ಟ್ರಿಯಲ್ಲಿ ಯಾಕೆ ನಮೂದಾಗಿಲ್ಲ ಎಂಬ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಅಯಾಜುಲಾ ಅವರು ರಿಜಿಸ್ಟ್ರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ಉತ್ತರಿಸಿದರು. ನವೀನ್ ಕುಮಾರ್ ಜೊತೆ ನಡೆದ ವ್ಯವಹಾರದ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿಲ್ಲವೆಂದು ಉತ್ತರಿಸಿದರು. ಅಮ್ಜದ್ ಅವರು ತಾನು ಕೊಟ್ಟಿದ್ದು ಕೊಟ್ಟು ಕೆಲವೇ ವೆಸ್ಟ್ ಬುಲೆಟ್ ಗಳಾದ್ದರಿಂದ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿ ಕೊಟ್ಟೆನೆಂದು ಉತ್ತರಿಸಿದರು. ಮತ್ತು ವೆಸ್ಟ್ ಬುಲೆಟ್ ಗಳನ್ನೂ ಫೈರ್ ಮಾಡಲೂ ಆಗುವುದಿಲ್ಲ, ಗುಜರಿಯಲ್ಲೂ ಅದಕ್ಕೆ ಬೆಲೆ ಇರುವುದಿಲ್ಲ ಎಂದು ಉತ್ತರಿಸಿದರು. ಪೊಲೀಸರೊಂದಿಗೆ ಒಳ್ಳೆ ಸಂಬಂಧ ಇಟ್ಟುಕೊಳ್ಳುವ ಸಲುವಾಗಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೀರೆಂದು ಆರೋಪಿ ಪರ ವಕೀಲರು ಆರೋಪಿಸಿದರು . ಅದನ್ನು ಸಾಕ್ಷಿಗಳು ನಿರಾಕರಿಸಿದರು.

ಮುಂದಿನ ವಿಚಾರಣೆ 2023ರ ಜನವರಿ 16 ರಿಂದ 21 ರವರೆಗೆ ನಡೆಯಲಿದೆ.

– ಶಿವಸುಂದರ್

ಚಿಂತಕರು

ಚಿತ್ರ ವಿಶೇಷ| ʼಪೀಪಲ್‌ʼ ಕಣ್ಣಿಗೆ ಅರುಂಧತಿ ರಾಯ್‌ ಕಂಡಿದ್ದು ಹೀಗೆ…
ಪೀಪಲ್ ಗಾಗಿ  ಫೋಟೋ ತೆಗೆದವರು: ಚರಣ್‌ ಐವರ್ನಾಡ್‌

ಚಿತ್ರಸುದ್ದಿ| ಗೌರಿ ಲಂಕೇಶ್‌ ಪುಣ್ಯಸ್ಮರಣೆಗೆ ಅರುಂಧತಿ ರಾಯ್‌ ಸೇರಿದಂತೆ ಗಣ್ಯರಿಂದ ನಮನ
ಗ್ಯಾಲರಿ ನೋಡಲು ಫೋಟೋ ಮೇಲೆ ಕ್ಲಿಕ್‌ ಮಾಡಿ.

ಬಹುಭಾಷ ನಟ ಪ್ರಕಾಶ್‌ ರೈ ಅವರಿಂದ ಪುಷ್ಪ ನಮನ

ಲೇಖಕಿ ಅರುಂಧತಿ ರಾಯ್‌ ಮತ್ತು ಲೈಂಗಿಕ ಅಲ್ಪಸಂಖ್ಯಾತ ಹೋರಾಟಗಾರ್ತಿ ಅಕೈ ಪದ್ಮಶಾಲಿ ಅವರಿಂದ ನಮನ

ತಾಯಿ ಇಂದಿರಾ ಲಂಕೇಶ್‌ ಅವರಿಂದ ಮಗಳು ಗೌರಿಗೆ ಭಾವನಮನ

ಗೌರಿ ಲಂಕೇಶ್‌ ನಮನದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌

ಗೌರಿ ಅಕ್ಕ ಪಕ್ಕದಲ್ಲಿ ಅಕ್ಕಯ್‌ ಮತ್ತು ಅರುಂಧತಿ ರಾಯ್

ಗೌರಿಯ ನೆನಪೇ ಒಂದು ಸ್ಫೂರ್ತಿ
ಅವರು ಗೌರಿಯನ್ನು ಇಲ್ಲವಾಗಿಸಿ ನಾಳೆಗೆ (ಸೆ.೫) ಐದು ವರ್ಷಗಳು. ಆದರೆ ಗೌರಿ ಸಾಯಲಿಲ್ಲ. ಸಂವೇದನಾಶೀಲರೆಲ್ಲರ ಮನದಲ್ಲಿ ಅವರು ಶಾಶ್ವತವಾಗಿದ್ದಾರೆ. ಧೈರ್ಯ, ಸಾಹಸ, ಪ್ರಾಮಾಣಿಕತೆ, ಪರೋಪಕಾರ, ಸಮಾಜಪರ ಚಿಂತನೆ, ಸ್ತ್ರೀವಾದಿ ಚಿಂತನೆ, ನೊಂದವರ ಬಗ್ಗೆ ಅಪಾರ ಕಾಳಜಿ, ಪ್ರಜಾತಾಂತ್ರಿಕ ತತ್ವಗಳಲ್ಲಿ ನಂಬಿಕೆ, ತಾಯಿ ಮನಸು ಇತ್ಯಾದಿ ಒಂದೆಡೆ ಸೇರಿದ ಅಸಾಧಾರಣ ಮಾದರಿಯ ಆಕೆಯ ನೆನಪೇ ಒಂದು ಸ್ಫೂರ್ತಿ. ಶ್ರೀನಿವಾಸ ಕಾರ್ಕಳ ಅವರು ಹತ್ತಿರದಿಂದ ಕಂಡು ಹರಟಿದ ಗೌರಿಯನ್ನು ಪೀಪಲ್‌ ಮೀಡಿಯಾದ ʼಗೌರಿ ನೆನಪಿಗಾಗಿʼ ಆಪ್ತವಾಗಿ ಕಟ್ಟಿ ಕೊಟ್ಟಿದ್ದಾರೆ.

‘ಗೌರಿ, ನಿನ್ನೆಯ ನಿಮ್ಮ ಫೇಸ್ ಬುಕ್ ಪೋಸ್ಟ್ ನೋಡಿದಿರಾ?’
ಇನ್ ಬಾಕ್ಸ್ ನಲ್ಲಿ ಕೇಳಿದೆ.
‘ಅಯ್ಯೋ, ನಾನು ಪೋಸ್ಟ್ ಹಾಕಿದ ಮೇಲೆ ಆ ಕಡೆ ತಿರುಗಿ ನೋಡೋದು ಕಡಿಮೆ. ಇರ್ಲಿ, ಏನಾಯಿತು?’
ಯಾವ ಉದ್ವೇಗವೂ ಇಲ್ಲದೆ ಮರು ಪ್ರಶ್ನಿಸಿದಳು ಗೌರಿ.
‘ಅವನ್ಯಾವನೋ ಒಬ್ಬ, ನೀವು ಸತ್ರೆ ಪಟಾಕಿ ಹೊಡೆದು ಸಿಹಿ ಹಂಚಿ ಸಂಭ್ರಮಿಸ್ತೀನಿ ಅಂತ ಬರೆದಿದ್ದಾನೆ, ನೋಡಿ’ ಅಂದೆ.
‘ಹೌದಾ?’ ಎಂದು ಗಹ ಗಹಿಸಿ ನಗುವ ಇಮೋಜಿ ಹಾಕಿದಳು.
ಮಾರನೇ ದಿನ ನೋಡುತ್ತೇನೆ, ಗೌರಿ ಒಂದು ಪ್ರತ್ಯೇಕ ಪೋಸ್ಟ್ ಹಾಕಿ ಅದರಲ್ಲಿ ಆ ಯುವಕನನ್ನು ಉದ್ದೇಶಿಸಿ, ‘ನೋಡು, ನಾನು ಸತ್ರೆ ನೀನು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸುತ್ತೇನೆ ಅಂದಿದ್ದಿ. ನಿನ್ನ ಮೇಲೆ ನನಗೆ ಯಾವ ಸಿಟ್ಟೂ ಇಲ್ಲ. ನೀನು ನನಗೆ ಮಗನಿದ್ದಂತೆ. ನೀನು ಒಳ್ಳೆಯವನು. ದಾರಿ ತಪ್ಪಿದ್ದಿ ಅಷ್ಟೇ. ಅಂದ ಹಾಗೆ, ನಾನು ಸತ್ತಾಗ ಪಟಾಕಿ ಸಿಡಿಸಲು, ಸಿಹಿ ಹಂಚಲು ನೀನು ಹಣಕ್ಕೇನು ಮಾಡುತ್ತಿ? ನಿನ್ನ ಕಿಸೆಯಿಂದ ಖರ್ಚು ಮಾಡುವುದು ಬೇಡ. ನಿನ್ನ ವಿಳಾಸ ತಿಳಿಸು. ನಾನೇ ಅದಕ್ಕೆ ಅಗತ್ಯವಿರುವಷ್ಟು ಹಣ ಕಳಿಸುತ್ತೇನೆ, ಭಯಪಡಬೇಡ…’ ಎಂದು ಬರೆದಳು. ಅದಕ್ಕೆ ಗೌರಿಯ ಅಭಿಮಾನಿಗಳು ಅಲ್ಲಿ ನಾನಾ ರೀತಿಯ ಕಮೆಂಟ್ ಬರೆದು, ಆ ಯುವಕನನ್ನು ತರಾಟೆಗೆ ತೆಗೆದುಕೊಂಡರು ಅದು ಬೇರೆ ವಿಚಾರ. ಆದರೆ ಗೌರಿ ಅತನ ಬಗ್ಗೆ ಬೆದರಿಕೆಯ, ನಿಂದನೆಯ ಒಂದೇ ಒಂದು ಸಾಲು ಬರೆಯಲಿಲ್ಲ.

ಗೌರಿ ಲಂಕೇಶ್‌ ಜೊತೆ ಶ್ರೀನಿವಾಸ್‌ ಕಾರ್ಕಳ ಮತ್ತು ಗುಲಾಬಿ ಬಿಳಿಮಲೆ

ಬದಲಾಯಿಸುವ ವಿಶ್ವಾಸ

ಗೌರಿ ಲಂಕೇಶ್

ಈ ಬಗ್ಗೆ ಮತ್ತೆ ನಾವು ಇನ್ ಬಾಕ್ಸ್ ನಲ್ಲಿ ಚರ್ಚಿಸಿದೆವು. ‘ನೀವು ಆತನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳಬೇಕಿತ್ತು, ಅಷ್ಟು ಸಮಾಧಾನದಿಂದ ಬರೆಯುವ ಅಗತ್ಯವಿರಲಿಲ್ಲ, ತಾವು ಇಷ್ಟಪಡದವರ ಸಾವನ್ನು ಬಯಸುವ, ಸಾವನ್ನು ಸಂಭ್ರಮಿಸುವ ಇಂತಹ ಅನೇಕ ಹುಡುಗರು ಇದ್ದಾರೆ. ಇವರನ್ನು ಸುಮ್ಮನೆ ಬಿಡಬಾರದು’ ಎಂದು ನಾನು ಹೇಳಿದೆ. ಆದರೆ ಗೌರಿ ನನ್ನ ಮಾತನ್ನು ಒಪ್ಪಲಿಲ್ಲ. ನನ್ನ ಆಲೋಚನಾ ವೈಖರಿಯನ್ನು ಬದಲಾಯಿಸಲು ನಯವಾಗಿ ಯತ್ನಿಸುತ್ತ, ‘ಹಾಗಲ್ಲ, ಶ್ರೀನಿವಾಸ್, ಇವರೆಲ್ಲ ಒಳ್ಳೆಯ ಹುಡುಗರು. ಸಹವಾಸ ದೋಷದಿಂದ ದಾರಿ ತಪ್ಪಿದ್ದಾರೆ ಅಷ್ಟೇ. ಅವರ ಮೇಲೆ ಮಾತಿನ ದಾಳಿ ಮಾಡಿದರೆ, ಅವರೊಡನೆ ಕೆಟ್ಟದಾಗಿ ನಡೆದುಕೊಂಡರೆ, ಅವರು ಆ ಕಡೆಗೆ ಹೋಗಿ ಅಲ್ಲಿ ಪರ್ಮನೆಂಟ್ ಆಗಿ ಬಿದ್ದು ಬಿಡುತ್ತಾರೆ. ಅವರೊಡನೆ ಸಮಾಧಾನದಿಂದ ಮಾತನಾಡಬೇಕು. ಅವರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ಅವರನ್ನು ನಮ್ಮತ್ತ ಒಲಿಸಿಕೊಳ್ಳಬೇಕು. ನೋಡಿ ನನ್ನ ಫೇಸ್ ಬುಕ್ ನಲ್ಲಿ ಇಂಥ ಅನೇಕ ಹುಡುಗರು ಇದ್ದಾರೆ. ನಾನು ಏನೇ ಬರೆಯಲಿ ವಿಚಾರಕ್ಕೆ ಪ್ರತಿಕ್ರಿಯಿಸುವುದನ್ನು ಬಿಟ್ಟು ನನ್ನನ್ನು ವೈಯಕ್ತಿಕವಾಗಿ ನಿಂದನೆ ಮಾಡುತ್ತಾರೆ. ಎಷ್ಟು ಕೆಟ್ಟದಾಗಿ ಬರೆಯುತ್ತಾರೆ ಎಂದರೆ ನನಗೆ ಒಮ್ಮೊಮ್ಮೆ ಬೇಸರವಾಗುವುದಿದೆ. ಅವರನ್ನೆಲ್ಲ ಬ್ಲಾಕ್ ಮಾಡಿಬಿಡಿ, ಯಾಕೆ ನಿಮ್ಮ ಫ್ರೆಂಡ್ ಲಿಸ್ಟ್ ನಲ್ಲಿ ಇಟ್ಟುಕೊಂಡಿದ್ದೀರಾ? ಎಂದು ಅನೇಕರು ಸಲಹೆ ನೀಡುವುದೂ ಇದೆ. ಆದರೆ ನಾನು ಅವರನ್ನು ಬ್ಲಾಕ್ ಮಾಡಲಾರೆ. ಅವರು ಏನೇ ಹೇಳಲಿ ನಾನು ಅವರೊಡನೆ ಸಮಾಧಾನದಿಂದಲೇ ಚರ್ಚಿಸುತ್ತೇನೆ. ಸಂವಾದ ನಡೆಸುತ್ತೇನೆ. ಒಂದಲ್ಲ ಒಂದು ದಿನ ಅವರು ಬದಲಾಗುವುದು ಖಂಡಿತ. ಅವರನ್ನೆಲ್ಲ ಬ್ಲಾಕ್ ಮಾಡಿದರೆ ಮತ್ತೆ ನಾವು ನಾವೇ ಮಾತಾಡಿಕೊಳ್ಳಬೇಕು. ಆಗ ಅದು ಇಕೋ ಚೇಂಬರ್ ಆಗಿಬಿಡುತ್ತದೆ. ಅದರಿಂದ ಯಾವ ಉಪಯೋಗವೂ ಇಲ್ಲ. ಅದು ನನಗೆ ಇಷ್ಟವಿಲ್ಲ’ ಎಂದು ಗೌರಿ ಹೇಳಿದಳು.

ಪ್ರಜಾತಾಂತ್ರಿಕ ಸಂವಾದದಲ್ಲಿ ಅಪಾರ ವಿಶ್ವಾಸ

ಇದು ಗೌರಿ. ಈ ಒಂದೇ ಒಂದು ಘಟನೆ ಆಕೆಯ ಇಡಿಯ ವ್ಯಕ್ತಿತ್ವದ ಒಂದು ಝಲಕ್ ಒದಗಿಸುತ್ತದೆ. ಆಕೆಗೆ ಪ್ರಜಾತಾಂತ್ರಿಕ ವಾಗ್ವಾದದಲ್ಲಿ, ಸಂವಾದದಲ್ಲಿ ಅಪಾರ ನಂಬಿಕೆ. ಸೈದ್ಧಾಂತಿಕ ವಿರೋಧಗಳಿದ್ದವೇ ಹೊರತು, ಯಾರೊಂದಿಗೂ ಆಕೆಗೆ ವೈಯಕ್ತಿಕ ದ್ವೇಷವಿರಲಿಲ್ಲ. ಆಕೆಯ ಫೇಸ್ ಬುಕ್ ಪೋಸ್ಟ್ ನಲ್ಲಿ ಚಕ್ರತೀರ್ಥ, ಮಾವಿನಕಾಡು ಮೊದಲಾದ ಉಗ್ರ ಬಲಪಂಥೀಯರೊಡನೆಯೂ ಆಕೆ ಸಂವಾದ ನಡೆಸುತ್ತಿದ್ದಳು. ಅವರಾದರೋ ಆಕೆಯನ್ನು ಅತ್ಯಂತ ಹೀನವಾಗಿ ನಿಂದಿಸುತ್ತಿದ್ದರು, ಕೆಣಕುತ್ತಿದ್ದರು. ಗೌರಿ ಕೆಲವರನ್ನು ತನ್ನ ಮಗನಿದ್ದಂತೆ ಎಂದು ಹೇಳುತ್ತಿದ್ದ ಬಗ್ಗೆ ಆಕೆಯ ಚಾರಿತ್ರ್ಯವನ್ನು ಪ್ರಶ್ನಿಸಿ ಕುಹಕದ ಮಾತು ಆಡುತ್ತಿದ್ದರು. ಆದರೆ ಗೌರಿ ಎಂದೂ ಸಹನೆ ಕಳೆದುಕೊಳ್ಳುತ್ತಿರಲಿಲ್ಲ, ಸಭ್ಯತೆಯ ಗೆರೆ ದಾಟುತ್ತಿರಲಿಲ್ಲ. ಅವರ ಪ್ರಶ್ನೆಗಳಿಗೆ ಸಮಾಧಾನದಿಂದ ಮತ್ತು ಗೌರವದಿಂದಲೇ ಉತ್ತರ ನೀಡುತ್ತಿದ್ದಳು. ಅವರನ್ನು ಬದಲಾಯಿಸಲು ನಿರಂತರ ಯತ್ನಿಸುತ್ತಿದ್ದಳು.

ವ್ಯಕ್ತಿ ನಿಂದನೆಗೆ ಅವಕಾಶ ಇಲ್ಲ

ನಮ್ಮ ಹುಡುಗರು ಬಿಸಿ ರಕ್ತದ ಆವೇಶದ ಭರದಲ್ಲಿ ವಿರೋಧಿಗಳ ವೈಯಕ್ತಿಕ ನಿಂದನೆಗಿಳಿದರೆ ಆಕೆ ಮಧ್ಯಪ್ರವೇಶಿಸಿ, ‘ಅದನ್ನು ಮಾಡಕೂಡದು, ನಮ್ಮ ವಿರೋಧ ಏನಿದ್ದರೂ ಅದು ವಿಚಾರದ ಬಗ್ಗೆ ಮಾತ್ರ, ವ್ಯಕ್ತಿಯ ಬಗ್ಗೆ ಅಲ್ಲ‘ ಎನ್ನುತ್ತಿದ್ದಳು. ಗೌರಿ ಗಮನಿಸುತ್ತಿದ್ದಾಳೆ ಎಂಬ ಕಾರಣಕ್ಕೇ ಫೇಸ್ ಬುಕ್ ನಲ್ಲಿ ಬರೆಯುವಾಗ ನಾವು ಅನೇಕರು ಎಚ್ಚರದಿಂದಿರುತ್ತಿದ್ದೆವು. ಮಿಸೋಜಿನಿಸ್ಟಿಕ್, ಸೆಕ್ಸಿಸ್ಟ್ ಟಿಪ್ಪಣಿಗಳನ್ನು ಮಾಡಲು ಭಯಪಡುತ್ತಿದ್ದೆವು.

ಯಾಕ್ರೋ ಹಂಗಂತೀರಾ?…

ರಾಜ್ಯದ ನಾನಾ ಊರುಗಳಲ್ಲಿ ಆಕೆಯ ಮೇಲೆ ಕೇಸು ದಾಖಲಿಸಿದ್ದರು. ಈ ಕಾರಣಕ್ಕಾಗಿ ವರ್ಷವಿಡೀ ಆಕೆ ಊರೂರು ಅಲೆಯಬೇಕಾಗುತ್ತಿತ್ತು. ಅವನ್ನೆಲ್ಲ ಒಂದೆಡೆಗೆ, ಅಂದರೆ ಬೆಂಗಳೂರಿಗೆ ವರ್ಗಾಯಿಸುವಂತೆ ಆಕೆ ಕೋರ್ಟ್ ನ ಮೊರೆ ಹೋಗಬಹುದಿತ್ತು. ನಾವು ಅನೇಕರು ಈ ಸಲಹೆಯನ್ನೇ ಕೊಟ್ಟಿದ್ದೆವು ಕೂಡಾ. ಆದರೆ ಆಕೆ ಕೇಳುತ್ತಿರಲಿಲ್ಲ. ‘ಯಾಕ್ರೋ ಹಂಗಂತೀರಾ? ಈ ಕಾರಣಕ್ಕಾದರೂ ನಾವು ನಿಮ್ಮ ಊರಿಗೆ ಬರಬಹುದು, ನಿಮ್ಮನ್ನೆಲ್ಲ ಮಾತಾಡಿಸಬಹುದು ಅಲ್ವಾ?’ ಎಂದು ಹೇಳಿ ಜೋರಾಗಿ ನಗುತ್ತಿದ್ದಳು.

ಅಸಾಧಾರಣ ಧೈರ್ಯ

ಗೌರಿಯ ಹೃದಯ, ಆತ್ಮಸಾಕ್ಷಿ ಸ್ವಚ್ಛವಿತ್ತು. ಆಕೆ ಎಲ್ಲೂ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡವಳಲ್ಲ. ರಾಜಕಾರಣಿಗಳೊಂದಿಗಿನ ಸಂಪರ್ಕವನ್ನು ತನ್ನ ಲಾಭಕ್ಕೆ ಬಳಸಿಕೊಂಡವಳಲ್ಲ. ಪ್ರಶಸ್ತಿ, ಸ್ಥಾನಮಾನದ ಹಿಂದೆ ಹೋದವಳಲ್ಲ. ಯಾರ ಹಂಗಿನಲ್ಲೂ ಇದ್ದವಳಲ್ಲ. ಇದೇ ಅಕೆಗೆ ಅಸಾಧಾರಣವಾದ ಒಂದು ಧೈರ್ಯವನ್ನು ನೀಡಿತ್ತು ಅನಿಸುತ್ತದೆ. ಅದು ಒಂದು ತೆರನ ಗಾಂಧಿಯ ಧೈರ್ಯ.

ದಕ್ಷಿಣ ಕನ್ನಡದ ಒಂದು ಕೋರ್ಟ್ ಗೆ ಕೇಸಿನ ಸಂಬಂಧ ಆಕೆ ಹಾಜರಾದಾಗ ತನ್ನ ಎದುರಾಳಿಗಳ ಬಳಿಗೇ ಹೋಗಿ ಅವರನ್ನು ದಿಟ್ಟವಾಗಿ ಮಾತನಾಡಿಸಿದ್ದಳು. ಅವರಿಗೆ ಸತ್ಯದ ಬಗ್ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಳು. ಆಕೆಯ ಈ ಧೈರ್ಯ ಮಾತ್ರ ನಿಜಕ್ಕೂ ಒಂದು ಬೆರಗು. ಈ ಧೈರ್ಯದ ಕಾರಣಕ್ಕಾಗಿಯೇ ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ನೇರವಾಗಿ ಎದುರಿಸಲು ಯಾರಿಗೂ ಧೈರ್ಯವಿರುತ್ತಿರಲಿಲ್ಲ.

ಜೀವ ಭಯ ಆಕೆಯ ಪದಕೋಶದಲ್ಲಿಯೇ ಇರಲಿಲ್ಲ

ಆಕೆಯ ಇಂತಹ ದಿಟ್ಟತನದ ನಡೆಗಳಂತೂ ನಮ್ಮಲ್ಲಿ ದಿಗಿಲು ಹುಟ್ಟಿಸುತ್ತಿತ್ತು. ಯಾಕೆಂದರೆ, ನಮಗೆ ಆಕೆ ಎಂತಹ ಅಪಾಯದಲ್ಲಿದ್ದಾಳೆ ಎಂಬ ಸ್ಪಷ್ಟ ಅರಿವಿತ್ತು. ಆದರೆ ಆಕೆ ತನ್ನ ಬಗ್ಗೆ ಯಾವತ್ತೂ ಯೋಚಿಸಿದವಳಲ್ಲ. ಅಕೆಯನ್ನು ಕೊಲ್ಲಲು ಸರಿ ಸುಮಾರು ಒಂದು ವರ್ಷ ಪ್ಲಾನ್ ನಡೆದಿತ್ತು. ಆ ಎಲ್ಲ ದಿನಗಳಲ್ಲಿಯೂ ಆಕೆ ಏಕಾಂಗಿಯಾಗಿ ಬೆಂಗಳೂರು ಮಂಗಳೂರು ನಡುವೆ ಸಂಚರಿಸುತ್ತಿದ್ದಳು. ರಾತ್ರಿಯ ಹೊತ್ತು ಮಂಗಳೂರು ತಲಪುತ್ತಿದ್ದ ಗೌರಿ, ಅಲ್ಲಿನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ರಸ್ತೆ ಬಳಿ ನಿಂತು ನಮಗೆ ಫೋನ್ ಮಾಡಿ, ‘ನಾನು ಇಲ್ಲಿ ನಿಂತಿದ್ದೇನೆ, ನಿಮ್ಮ ಮನೆಗೆ ಹೇಗೆ ಬರಬೇಕು?’ ಎಂದು ಕೇಳುತ್ತಿದ್ದಳು.

ಆಕೆಯ ಒಳ್ಳೆಯತನಗಳ ಬಗ್ಗೆ ಬರೆದರೆ ಪುಟಗಟ್ಟಲೆ ಬರೆಯಬಹುದು, ಗಂಟೆ ಗಟ್ಟಲೆ ಮಾತನಾಡಬಹುದು. ಧೈರ್ಯ, ಸಾಹಸ, ಪ್ರಾಮಾಣಿಕತೆ, ಪರೋಪಕಾರ, ಸಮಾಜಪರ ಚಿಂತನೆ, ಸ್ತ್ರೀವಾದಿ ಚಿಂತನೆ, ನೊಂದವರ ಬಗ್ಗೆ ಅಪಾರ ಕಾಳಜಿ, ಪ್ರಜಾತಾಂತ್ರಿಕ ತತ್ವಗಳಲ್ಲಿ ನಂಬಿಕೆ, ಎಲ್ಲರನ್ನೂ ತನ್ನ ಮಕ್ಕಳಂತೆ ನೋಡಿಕೊಳ್ಳುವ ತಾಯಿ ಮನಸು ಇತ್ಯಾದಿ ಒಂದೆಡೆ ಸೇರಿದ ಅಸಾಧಾರಣ ಮಾದರಿಯಾಗಿದ್ದಳು ಗೌರಿ. ಆಕೆಯ ನೆನಪೇ ಒಂದು ಸ್ಫೂರ್ತಿ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಶ್ರೀನಿವಾಸ ಕಾರ್ಕಳ
ಚಿಂತಕರು