gay – Peepal Media

LGBTQ+ ಗಳನ್ನು ಮಾನಸಿಕ ರೋಗಿಗಳೆಂದು ಅವಮಾನಿಸಲು ಮೆಟಾ ಅನುಮತಿ!
ಬೆಂಗಳೂರು: ಮೆಟಾದ ಹೊಸ ಮಾರ್ಗಸೂಚಿಯಲ್ಲಿ ( Guideline)  ಬಳಕೆದಾರರಿಗೆ ಅವರ ಲೈಂಗಿಕತೆ ಅಥವಾ ಲಿಂಗ ಗುರುತನ್ನು ಆಧರಿಸಿ ಮಾನಸಿಕ ಅಸ್ವಸ್ಥರೆಂದು ಕರೆಯಲು ಅನುವು ಮಾಡಿಕೊಡುತ್ತದೆ.

ಮಂಗಳವಾರದಂದು ನವೀಕರಿಸಲಾದ ಮಾರ್ಗಸೂಚಿಗಳು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಥ್ರೆಡ್‌ಗಳ ಬಳಕೆದಾರರಿಗೆ ಅವರ ಮಾನಸಿಕ ಆರೋಗ್ಯದ ಆಧಾರದ ಮೇಲೆ ಜನರನ್ನು ಅವಮಾನಿಸಲು ಇನ್ನೂ ಅನುಮತಿಸುವುದಿಲ್ಲ. “ಆದರೆ ಲಿಂಗ ಮತ್ತು ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಒಬ್ಬರನ್ನು ಮಾನಸಿಕ ರೋಗಿ ಅಥವಾ ಅಸಹಜ/ಅನೈಸರ್ಗಿಕ ಎಂದು ಕರೆಯುವುದು, ಸಮಲೈಂಗಿಕತೆ ಮತ್ತು ಟ್ರಾನ್ಸ್‌ಜೆಂಡರಿಸಂ ಬಗ್ಗೆ ರಾಜಕೀಯ ಮತ್ತು ಧಾರ್ಮಿಕ ಚರ್ಚೆ ಮಾಡಲು, ಅವರನ್ನು ʼವಿಲಕ್ಷಣ- weird’ ಎಂದು ಕರೆಯಲು ಅನುಮತಿ ನೀಡುತ್ತೇವೆ,” ಎಂದು ಮೆಟಾ ಹೇಳಿದೆ.

ತನ್ನ ಪರಿಷ್ಕೃತ ಮಾರ್ಗಸೂಚಿಯಲ್ಲಿ ಹೀಗೆ ಹೇಳಿದೆ:

Mental characteristics, including, but not limited to, allegations of stupidity, intellectual capacity and mental illness, and unsupported comparisons between PC groups on the basis of inherent intellectual capacity. We do allow allegations of mental illness or abnormality when based on gender or sexual orientation, given political and religious discourse about transgenderism and homosexuality and common non-serious usage of words such as “weird”.

ದ್ವೇಷದ ಭಾಷಣದ ಸುತ್ತಲಿನ ಹೊಸ ಮಾರ್ಗಸೂಚಿಗಳಲ್ಲಿ ಮೆಟಾ ಪ್ರಮುಖ ಬದಲಾವಣೆಗಳನ್ನು ತಂದಿದೆ.  ಮಂಗಳವಾರ, CEO ಮಾರ್ಕ್ ಜುಕರ್‌ಬರ್ಗ್ ಅವರು ಮೆಟಾದಲ್ಲಿರುವ ಸತ್ಯ-ಪರಿಶೀಲನಾ ವಿಭಾಗವನ್ನು ತೆಗೆದು ಹಾಕುವುದಾಗಿ ಹೇಳಿದ್ದರು. ಈ ವ್ಯವಸ್ಥೆಯನ್ನು ಕೆಲವು ವಿಶ್ವಾಸಾರ್ಹ ಸಂಸ್ಥೆಗಳ ಸಹಯೋಗದಿಂದ ನಡೆಸಲಾಗುತ್ತಿತ್ತು.  X ನ ಸಮುದಾಯ ಮಾರ್ಗಸೂಚಿಗಳಂತೆ ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕಿಂಗ್‌ ಸೇವೆಯನ್ನು ಮೆಟಾ ತೆಗೆದು ಹಾಕಿದೆ.

X ತನ್ನ ಬಳಕೆದಾರರಿಗೆ ಇತರರ ವಿಚಾರದ ಮೇಲೆ ಸೂಚಿಸಲಾದ “ಟಿಪ್ಪಣಿಗಳನ್ನು” ಪೋಸ್ಟ್‌ ಮಾಡಲು ಅನುಮತಿ ನೀಡುತ್ತದೆ. ಇದರಲ್ಲಿ. ಈ ಟಿಪ್ಪಣಿಯನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಲು ಅನುಮತಿ ನೀಡಬೇಕೆ, ಅಥವಾ ಬೇಡವೇ ಎಂಬ ಬಗ್ಗೆ ವೋಟಿಂಗ್‌ ಮಾಡುವ ವ್ಯವಸ್ಥೆ ಇದೆ.

ಇದರಿಂದಾಗಿ, ಯಾವುದೇ ಬಳಕೆದಾರನಿಗೆ ಸುಲಭವಾಗಿ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಲು ಸಾಧ್ಯವಾಗುತ್ತದೆ. ಈ ಸುಳ್ಳನ್ನು ಬೆಂಬಲಿಸುವವರು ಈ ಸುದ್ದಿಯನ್ನು ಸಾರ್ವಜನಿಕವಾಗಿ ಪ್ರಚಾರ ಮಾಡಲು ಪ್ರೋತ್ಸಾಹ ನೀಡುತ್ತಾರೆ.

ಇದರ ಬೆನ್ನಲ್ಲೇ, ಮೆಟಾ ತನ್ನ ಹೊಸ ಮಾರ್ಗಸೂಚಿಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಮಾನಸಿಕ ರೋಗಿಗಳು ಎಂದು ಕರೆಯಲು ಅನುಮತಿ ನೀಡಿರುವುದು ಜಾಗತಿಕ ವಿರೋಧಕ್ಕೆ ಕಾರಣವಾಗಿದೆ. ಇದರಿಂದ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಪ್ರಪಂಚದಾದ್ಯಂತ ನಡೆಯುತ್ತಿರುವ ಹೋರಾಟಗಳನ್ನು ಹತ್ತಿಕ್ಕಲು ಯತ್ನಿಸಿದಂತಾಗುತ್ತದೆ.

ಟ್ರಾನ್ಸ್ಜೆಂಡರ್ ಹಕ್ಕುಗಳು, ವಲಸೆ ಅಥವಾ ಸಮಲೈಂಗಿಕತೆಯ ಬಗ್ಗೆ  ರಾಜಕೀಯ ಅಥವಾ ಧಾರ್ಮಿಕ ವಿಚಾರಗಳನ್ನು ಚರ್ಚಿಸುವ ಸಂದರ್ಭದಲ್ಲಿ ಅವರನ್ನು ಅಂಚಿಗೆ  ತಳ್ಳುತ್ತಾರೆ ಅಥವಾ ಅವಮಾನಕರ ಭಾಷೆಯನ್ನು ಬಳಸುತ್ತಾರೆ. ಕೆಲವೊಮ್ಮೆ ಜನರು ಪ್ರೇಮ ಸಂಬಂಧ ಮುರಿದಾಗ (ಬ್ರೇಕಪ್) ಲಿಂಗತ್ವವನ್ನು ಶಪಿಸುತ್ತಾರೆ. ಈ ರೀತಿಯ ಭಾಷಣಕ್ಕೆ ಅವಕಾಶ ನೀಡುವಂತೆ ನಮ್ಮ ನೀತಿಗಳನ್ನು ವಿನ್ಯಾಸಗೊಳಿಸಲಾಗಿದೆ,” ಎಂದು ಮೆಟಾ ಹೇಳಿದೆ.

They call for exclusion or use insulting language in the context of discussing political or religious topics, such as when discussing transgender rights, immigration or homosexuality. Finally, sometimes people curse at a gender in the context of a romantic break-up. Our policies are designed to allow room for these types of speech.

ಇದರಿಂದ, ಜಾಗತಿಕವಾಗಿ ವಲಸಿಗರ, ಲೈಂಗಿಕ ಅಲ್ಪಸಂಖ್ಯಾತರನ್ನು ಅವಮಾನಿಸುವ, ಅವರ ವಿರುದ್ಧ ದ್ವೇಷ ಹರಡುವವರಿಗೆ ತಮ್ಮ ಕೃತ್ಯವನ್ನು ಎಸಗಲು ಗ್ರೀನ್‌ ಸಿಗ್ನಲ್‌ ಸಿಕ್ಕಿದಂತಾಗಿದೆ.

ಟೆಕ್ ಕಂಪನಿಗಳು ಮತ್ತು ಇತರ ಕಂಪನಿಗಳ ಸಿಇಒಗಳು ಮತ್ತು ಉದ್ಯಮಿಗಳು ಅಮೇರಿಕಾದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅನ್ನು ಓಲೈಸಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸುತ್ತಿವೆ. ಇದರಲ್ಲಿ ಅಮೆಜಾನ್, ಆಪಲ್ ಸಿಇಒ ಟಿಮ್ ಕುಕ್ ಮತ್ತು ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್‌ಮ್ಯಾನ್ ಜೊತೆಗೆ ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ಹಲವಾರು ಟೆಕ್ ಕಂಪನಿಗಳು ಮತ್ತು ಸಿಇಒಗಳು ಇದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ಇವರೆಲ್ಲಾ ಸೇರಿ ಟ್ರಂಪ್‌ರ ಎರಡನೇ ಉದ್ಘಾಟನಾ ನಿಧಿಗೆ 1 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದರು. ಟ್ರಂಪ್ ಬೆಂಬಲಿಗ ಯುಎಫ್‌ಸಿಯ ಡಾನಾ ವೈಟ್‌ ಅನ್ನು  ತನ್ನ ಮಂಡಳಿಗೆ ಸೇರಿಸಿರುವುದಾಗಿ ಮೆಟಾ ಜೂನ್‌ 6, 2025  ಮಂಗಳವಾರ ಘೋಷಿಸಿತ್ತು.

LGBTQIA+ಮಕ್ಕಳು: ಮನೆಯಿಂದಲೇ ಬದಲಾವಣೆ ಆರಂಭ
LGBTQIA+ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಪ್ರೀತಿ ಕಾಳಜಿಯಿಂದ ಅವರು ಇರುವಂತೆಯೇ ಅವರನ್ನು ಸ್ವೀಕರಿಸಿ ಆಧಾರವಾಗಿ, ಹೆಗಲಾಗಿ ನಿಂತು ಅವರು ಎಲ್ಲರಂತೆ ನಿರ್ಭೀತಿಯಿಂದ ಮನೆಯಲ್ಲಿ ಬದುಕುವ ಅವಕಾಶ ಕಲ್ಪಿಸಿಕೊಟ್ಟರೆ ಸಮಾಜದಲ್ಲಿಯೂ ಅವರಿಗೆ ಬದುಕುವ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ಲೇಖಕಿ ರುಕ್ಮಿಣಿ ಎಸ್‌ ನಾಯರ್ ರವರ ಈ ಲೇಖನ ಓದಿ

ವಿಭಿನ್ನ ಲೈಂಗಿಕ ಅಭಿವ್ಯಕ್ತಿಯು ಬಹಳ ಸಂಕೀರ್ಣವಾದದ್ದು. ಈ ವಿಷಯವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದರ ಬಗ್ಗೆ ಪೋಷಕರಲ್ಲಿ ಅರಿವು ಮೂಡಬೇಕಿದೆ. ಏಕೆಂದರೆ ನಮ್ಮ ಭಾವನೆಗಳು ಹಾಗೂ ಲೈಂಗಿಕತೆಗಿಂತ ಮತ್ತು ಕೆಲವೊಮ್ಮೆ ಲೈಂಗಿಕ ಅವಯವಯಗಳ ರಚನೆ LGBTQIA+ಮಕ್ಕಳಲ್ಲಿ ಭಿನ್ನವಾಗಿರುತ್ತದೆ. ಕೆಲ ಮಕ್ಕಳು ಸಾಧಾರಣವಾಗಿರುವಂತೆ ಕಂಡರೂ ಕೂಡಾ ಅವರ ಬಯಕೆ ಹಾಗೂ ಭಾವನೆಗಳು ಹದಿಹರಯಕ್ಕೆ ಬಂದಾಗ ಉದ್ಭವಿಸುವುದು ಅವರ ವಿರುದ್ಧವಾಗಿರುತ್ತವೆ. ಇದು ಬಲವಂತದಿಂದ ಉಂಟಾದ ಮಾರ್ಪಾಡು ಆಗಿರುವುದಿಲ್ಲ ಎನ್ನುವ ವಿಚಾರವನ್ನು ಪೋಷಕರು ಸ್ವೀಕರಿಸಬೇಕಾಗುತ್ತದೆ.

ತಾವು ಇತರರಿಗಿಂತ ಭಿನ್ನವಾಗಿ ಇರುವುದನ್ನು ಅರಿತ ಮಕ್ಕಳು ಮಾನಸಿಕವಾಗಿ ಕೀಳರಿಮೆ ಹೊಂದಿರುವಂತಹ ಸಂದರ್ಭದಲ್ಲಿ ಅವರಿಗೆ ಆಸರೆಯಾಗಿ ನಿಂತು ನಾವು ಜೊತೆಗೆ ಇದ್ದೇವೆ ಎನ್ನುವ ಭರವಸೆಯನ್ನು ತುಂಬಬೇಕಾಗುತ್ತದೆ. ಹಾಗಿಲ್ಲದಿದ್ದರೆ ಮಕ್ಕಳು ಏನು ಮಾಡಬೇಕು ಎಂದು ತಿಳಿಯದೇ, ತಮ್ಮಂತೆ ಇರುವ ಇತರರಿಗೆ ಆಗುತ್ತಿರುವ ಭೀತಿ ಹುಟ್ಟಿಸುವ ಅನುಭವಗಳನ್ನು ಕಂಡು ಹೆದರಿ ಪೋಷಕರಿಗೆ ತಿಳಿಯದಂತೆ ಸ್ವತಃ ತಾವೇ ಮನೆ ಬಿಟ್ಟು ಹೊರಹೋಗುವ ಸಾಧ್ಯತೆಗಳು ಇರುತ್ತವೆ.

ವಿದ್ಯೆ ಕಲಿತು ಉದ್ಯೋಗಸ್ಥರಾಗಿ ಸಬಲರಾಗುವವರೆಗೂ ಹಾಗೂ ಅದರ ನಂತರವೂ ಮಕ್ಕಳಿಗೆ ಪೋಷಕರ ಆಶ್ರಯದ ಅಗತ್ಯವಿರುತ್ತದೆ. ಹಾಗೆಯೇ ಕಾಯಿಲೆಗೆ ಬಿದ್ದಾಗ ವೃದ್ಧಾಪ್ಯದಲ್ಲಿ ಪೋಷಕರಿಗೆ ಮಕ್ಕಳು ಕೂಡ ಊರಗೋಲಾಗಿ ಇರಬೇಕಾಗುತ್ತದೆ. ದುಡುಕಿ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ, ಅದರ ಪರಿಣಾಮ ಭೀಕರವಾಗಿರುತ್ತದೆ. ಮನೆ ಬಿಟ್ಟು ಹೋದ ಅಥವಾ ಮನೆಯಿಂದ ಹೊರ ಹಾಕಿದ LGBTQIA+ಮಕ್ಕಳು ನಾನಾ ತರದ ತೊಂದರೆಗೆ ಹಾಗೂ ಶೋಷಣೆಗೆ ಒಳಗಾಗುತ್ತಾರೆ. ಇದರಿಂದ ಅವರು ನೊಂದು ಕುಗ್ಗಿಹೋಗಿ ಕೊನೆಗೆ ಬದುಕಲಾರದೆ ತಮ್ಮ ಜೀವವನ್ನು ತಾವೇ ತೆಗೆದುಕೊಳ್ಳುವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಪೋಷಕರೂ ಕೂಡ ಮಾನಸಿಕವಾಗಿ ನೋವಿಗೊಳಗಾಗುತ್ತಾರೆ. ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ ಇಲ್ಲದೆ ಶಾರೀರಿಕವಾಗಿ ಮಾನಸಿಕವಾಗಿ ನರಳಿ ಮರಣ ಸಮಯದಲ್ಲಿ ಮಕ್ಕಳು ಜೊತೆ ಇಲ್ಲದೇ ಪ್ರಾಣ ಬಿಡುವ ಪರಿಸ್ಥಿತಿ ಉಂಟಾಗುತ್ತದೆ.

ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ: LGBTQ+ ಮಕ್ಕಳ ತೊಳಲಾಟಗಳು!

ಯಾವುದೇ ಭಾವನೆಗಳನ್ನು ಕೃತಕವಾಗಿ ಮೂಡಿಸುವುದು ಸಾಧ್ಯವಿಲ್ಲ. ಹಾಗಾಗಿಯೇ ಪೋಷಕರಿಗೂ ಮಕ್ಕಳ ಭಿನ್ನ ಭಾವನೆಗಳನ್ನು ಸ್ವೀಕರಿಸುವುದು ಕೂಡ ಕಷ್ಟವಾಗುತ್ತದೆ. ಆದರೆ ಯಾರೂ ಬೇಕೆಂದು ವಿಭಿನ್ನ ಭಾವನೆಗಳನ್ನು ಬೆಳೆಸಿಕೊಳ್ಳುವುದಿಲ್ಲ. ತಮ್ಮ ಅಭಿವ್ಯಕ್ತಿಯು ಕುಟುಂಬ ಹಾಗೂ ಸಮಾಜ ವಿರೋಧಿ ಎನಿಸಿದರೂ ಅದನ್ನು ಬದಲಾವಣೆ ಮಾಡಿಕೊಳ್ಳಲು ಈ ಮಕ್ಕಳು ಆದಷ್ಟು ಪ್ರಯತ್ನಪಟ್ಟು ಸಾಧ್ಯವಾಗದೆ ಹೋದಾಗ ವಿಧಿಯಿಲ್ಲದೇ ತಮ್ಮ ಭಿನ್ನತೆಯನ್ನು ಒಪ್ಪಿಕೊಂಡು ಅದರೊಂದಿಗೇ ಜೀವನ ಸಾಗಿಸಲು ನಿರ್ಧರಿಸುತ್ತಾರೆ. ಆ ಮಕ್ಕಳಿಗೂ ತಂದೆ ತಾಯಿ ಹಾಗೂ ಕುಟುಂಬದ ಇನ್ನಿತರ ಸದಸ್ಯರ ಬಗ್ಗೆ ಗೌರವ ಇರುತ್ತದೆ. ಆದರೆ ಅವರ ಮನಸ್ಸಿನ ಕೂಗನ್ನು ತಿರಸ್ಕರಿಸಿ ಬದುಕಲು ಕೂಡ ಅವರಿಂದ ಸಾಧ್ಯವಾಗುವುದಿಲ್ಲ. ಹಾಗಾಗಿ ಅಂತಹ ಮಕ್ಕಳನ್ನು ಹಾಗೂ ಅವರ ಭಾವನೆಗಳನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯ.

ಇಲ್ಲಿ ಹೆತ್ತವರಿಗಿಂತ ಹೆಚ್ಚು ಪಟ್ಟು ನೋವಿಗೆ ಒಳಪಡುವುದು LGBTQIA+ಮಕ್ಕಳೇನೆ. ಇತ್ತ ಮನೆಯಲ್ಲಿ ಆಶ್ರಯವಿಲ್ಲದೆ, ತಂದೆ ತಾಯಿಯ ಪ್ರೀತಿ ಕಾಣದೇ ನೆರೆಹೊರೆ ಹಾಗೂ ಸಮಾಜದ ತಿರಸ್ಕಾರಕ್ಕೆ ಒಳಗಾಗಿ ಬದುಕಲು ದಾರಿ ಇಲ್ಲದೆ ಶೋಷಣೆಗೆ ಒಳಗಾಗಿ ಹೆಣಗಾಡುವ ಪರಿಸ್ಥಿತಿ ಈ ಮಕ್ಕಳದು. ಈ ಮಕ್ಕಳ ವಿಭನ್ನತೆಯು ಸಮಾಜಕ್ಕೆ ತಿಳಿದರೆ ವಿದ್ಯಾಭ್ಯಾಸ, ಕಚೇರಿಗಳಲ್ಲಿ ಉತ್ತಮ ಕೆಲಸ ಹುದ್ದೆ ಕೊನೆಗೆ ಸಮಾಜದಲ್ಲಿ ಉತ್ತಮ ಬದುಕನ್ನು ಸಾಗಿಸುವುದರಿಂದಲೂ ವಂಚಿತವಾಗುತ್ತಾರೆ ಎನ್ನುವ ಭಯ ಅವರನ್ನು ಹಗಲು ರಾತ್ರಿ ಕಾಡುತ್ತಿರುತ್ತದೆ.

ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ: ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ

ನಮ್ಮ ಮನೆಗಳಿಂದಲೇ ಮೊದಲು ಬದಲಾವಣೆ ಪ್ರಾರಂಭವಾಗಬೇಕು. ನಮ್ಮ ಮಕ್ಕಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವಲ್ಲದೆ ಅವರಿಗೆ ಇನ್ಯಾರಿದ್ದಾರೆ. ಪೋಷಕರಿಂದ ದೂರಾಗಿ ಬದುಕುವ ಆಸೆ ಆ ಮಕ್ಕಳಿಗೆ ಖಂಡಿತ ಇರದು. LGBTQIA+ಮಕ್ಕಳನ್ನು ಹೊಂದಿರುವ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಪ್ರೀತಿ ಕಾಳಜಿಯಿಂದ ಅವರು ಇರುವಂತೆಯೇ ಅವರನ್ನು ಸ್ವೀಕರಿಸಿ ಆಧಾರವಾಗಿ, ಹೆಗಲಾಗಿ ನಿಂತು ಅವರು ಎಲ್ಲರಂತೆ ನಿರ್ಭೀತಿಯಿಂದ ಮನೆಯಲ್ಲಿ ಬದುಕುವ ಅವಕಾಶ ಕಲ್ಪಿಸಿಕೊಟ್ಟರೆ ಸಮಾಜದಲ್ಲಿಯೂ ಅವರಿಗೆ ಬದುಕುವ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗುತ್ತದೆ. ನಮ್ಮ ಮಕ್ಕಳ ಮೇಲೆ ನಮಗೆ ಕರುಣೆ ಇರಲಿ. ಅವರು ನಮ್ಮ ಕುಟುಂಬದ ಅವಿಭಾಜ್ಯ ಅಂಗ ಎನ್ನುವುದನ್ನು ನಾವು ಮನಗಂಡು ಪರಿಗಣಿಸಬೇಕು. ಈ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಹಾಗೆಯೇ LGBTQIA+ ಮಕ್ಕಳು ಅವರ ಅಭಿವ್ಯಕ್ತಿಯಂತೆ ಬದುಕುವ ಹಕ್ಕನ್ನು ನಾವು ಕಸಿದುಕೊಳ್ಳದೆ ಅವರನ್ನು ಮಾನವರಾಗಿ ಕಾಣೋಣ. ನಮ್ಮ ಮಕ್ಕಳು ನಮ್ಮವರು. ಪೋಷಕರಿಗೆ ಮಕ್ಕಳಿಲ್ಲದೆ ಹೇಗೆ ಬದುಕುವುದು ಕಷ್ಟ ಸಾಧ್ಯವೋ ಹಾಗೆ ಮಕ್ಕಳಿಗೂ ಕೂಡ. ಮಕ್ಕಳು ಹೇಗಿರುವರೋ ಹಾಗೆ ಅವರನ್ನು ಆಲಂಗಿಸೋಣ. ಸುಖ, ಸಂತೋಷದಿಂದ, ನೆಮ್ಮದಿಯಿಂದ ಬಾಳುವ ಸದವಕಾಶವನ್ನು ನಾವು ಪೋಷಕರು ನಮ್ಮ ಕರುಳ ಕುಡಿಗಳಿಗೆ ಒದಗಿಸಿ ಕೊಡೋಣ.

ಸಂಬಂಧಗಳು

ಋತುಗಳಿಗನುಗುಣವಾಗಿ
ಮರಗಳಿಂದೆಲೆಗಳು
ಉದುರಿ ಹೋಗುವ ತೆರದಿ
ಕಾಲಕ್ಕನುಗುಣವಾಗಿ
ಬದಲಾಗುವ ಸ್ನೇಹಗಳು
ಹೂಹಣ್ಣುಗಳ ಭಾರದಿ
ರೆಂಬೆಕೊಂಬೆಗಳು
ಮುರಿದು ಬೀಳುವ ತೆರದಿ
ಜವಾಬ್ದಾರಿಗಳಿಗಂಜಿ
ತೊರೆವ ಸಂಬಂಧಗಳು
ಹವಾಮಾನ ವೈಪರೀತ್ಯದಿ
ಬಿರುಗಾಳಿಯಬ್ಬರಕೆ
ಬುಡಮೇಲಾದ ವೃಕ್ಷದ ತೆರದಿ
ಭದ್ರತೆಯ ಕಳಚಿ
ಬೇರ್ಪಟ್ಟ ಅನುಬಂಧಗಳು
ಋತುಗಳು ಬದಲಾಗಲಿ
ಹೊರೆಯಾದರಾಗಲಿ
ಕಷ್ಟನಷ್ಟಗಳೇನೇ ಬರಲಿ
ನಿನ್ನೊಂದಿಗಿರುವೆನೆಂಬ
ಭರವಸೆಯೀವ ಜೀವಗಳು
ಬೇಕಿದೀಬಾಳನೌಕೆಗೆ
ಹುಟ್ಟಾಗಿ ಜೀಕಿ
ಸುಳಿಸೆಳೆತದಿಂಕಾಪಾಡಿ
ದಡಕೆ ಹೊತ್ತೊಯ್ಯುವ
ಮಾನವೀಯ ಹೃದಯಗಳು

ಲೇಖನ: ರುಕ್ಮಿಣಿ.ಎಸ್.ನಾಯರ್

ಬೆಂಗಳೂರು

LGBTQIA+ ಮಕ್ಕಳ ಪೋಷಕರ ಜವಾಬ್ದಾರಿಗಳು

LGBTQIA+ ಮಕ್ಕಳ ಪೋಷಕರ ಜವಾಬ್ದಾರಿಗಳು
ಮಾನಸಿಕವಾಗಿ ಖಿನ್ನತೆಯನ್ನು ಅನುಭವಿಸುತ್ತಾ, ಒಳಗೊಳಗೆ ತಮ್ಮ ಲಿಂಗತ್ವವನ್ನು ಬಚ್ಚಿಟ್ಟುಕೊಂಡು ಬದುಕುವ LGBTQ+ ಮಕ್ಕಳಿಗೆ ದೊಡ್ಡ ಧೈರ್ಯವೆಂದರೆ ಅವರ ಹೆತ್ತವರು. ಆದರೆ, ಹೆತ್ತವರೇ ತಮ್ಮ ಮಗುವಿನ ಲೈಂಗಿಕ ಭಿನ್ನತೆಯನ್ನು ಒಪ್ಪದೆ, ಆ ಮಗುವಿಗೆ ಹಿಂಸೆ ನೀಡಿದರೆ ಅದರ ಕೈ ಹಿಡಿಯುವವರು ಯಾರು? ಜಗತ್ತಿನಲ್ಲಿ ಕೋಟ್ಯಾಂತರ ಮಂದಿ LGBTQ+ ಮಕ್ಕಳು ತಮ್ಮ ಮನೆಯನ್ನು ತೊರೆದು, ಕುಟುಂಬದಿಂದ ದೂರವಾಗಿ ಬದುಕುತ್ತಾರೆ. ಮಕ್ಕಳ ಪೋಷಕರು ತಮ್ಮ ಮಗು ಗೇ, ಲೆಸ್ಬಿಯನ್‌, ಟ್ರಾನ್ಸ್‌ಜೆಂಡರ್‌ ಇತ್ಯಾದಿಗಳಲ್ಲಿ ಒಂದು ಎಂದು ಅರಿತೂ, ಅವರನ್ನು ಒಪ್ಪದೆ, ತಮಗೆ ಬೇಕಾದಂತೆ ಅವರು ಬದುಕಲು ಒತ್ತಡ ಹೇರುತ್ತಾರೆ. ಹೀಗಾಗಿ, ಮಾನಸಿಕ ಖಿನ್ನತೆಯಿಂದ ಈ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ, ಮನೆ ಬಿಟ್ಟು ಹೋಗುತ್ತಾರೆ. LGBTQ+ ಮಕ್ಕಳ ತಂದೆ ತಾಯಿಯ ಜವಾಬ್ದಾರಿಗಳ ಬಗ್ಗೆ ಬರೆಯುತ್ತಾರೆ ಲೇಖಕಿ ರುಕ್ಮಿಣಿ ಎಸ್ ನಾಯರ್

LGBTQIA+ ಸಮುದಾಯದ ಮಕ್ಕಳ ಪೋಷಕರು ಕೂಡ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಮಗೆ ಹುಟ್ಟಿದ ಮಗು ಗಂಡು ಅಥವಾ ಹೆಣ್ಣು ಎನ್ನುವುದನ್ನು ಮಗುವಿನ ಜನ್ಮ ಸಮಯದಲ್ಲಿ ಪೋಷಕರು ಅರಿತಿರುತ್ತಾರೆ.

ತಮ್ಮ ಬಯಕೆಯಂತೆ ಮಗು ಹುಟ್ಟಿದಾಗ ಸಂಭ್ರಮಿಸುತ್ತಾರೆ. ಮಗುವಿನ ಆಗಮನದಿಂದ ಮನೆಯು ನಂದಗೋಕುಲವಾಗುತ್ತದೆ. ತಮ್ಮ ಮಗುವಿನ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಮಾತಾಪಿತರು ಕಂಡಿರುತ್ತಾರೆ. ಅದಕ್ಕಾಗಿ ಎಲ್ಲ ರೀತಿಯ ಪರಿಶ್ರಮಗಳನ್ನು ಪಡುತ್ತಾರೆ. ಮಗುವಿನ ಮುಂದಿನ ಜೀವನವು ಹಸನಾಗಿರಲೆಂದು ಹಗಲಿರುಳೂ ದೇವರನ್ನು ಪ್ರಾರ್ಥಿಸುತ್ತಾರೆ. ತಮ್ಮ ಸುಖ ಸಂತೋಷಗಳನ್ನು ಮಗುವಿನ ಯೋಗಕ್ಷೇಮಕ್ಕಾಗಿ ತ್ಯಾಗ ಮಾಡುತ್ತಾರೆ. ಸಣ್ಣ ಪುಟ್ಟ ಆಸೆಗಳನ್ನು ಕೂಡಾ ಬದಿಗೊತ್ತಿ ಮಕ್ಕಳಿಗಾಗಿ ಉತ್ತಮ ಜೀವನವನ್ನು ರೂಪಿಸುವತ್ತ ಗಮನ ಹರಿಸುತ್ತಾರೆ. ಹಗಲಿರುಳು ಮಕ್ಕಳಿಗಾಗಿ ದುಡಿಯುತ್ತಾರೆ ಅವರ ಉಡುಗೆ ತೊಡುಗೆ, ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ರೀತಿಯ ಖರ್ಚು ವೆಚ್ಚಕ್ಕಾಗಿ ಒಂದೊಂದು ರೂಪಾಯಿಯನ್ನು ಶೇಖರಿಸಿ ಇಡುತ್ತಾರೆ. ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಲೆಂದು ಪ್ರತಿಷ್ಠಿತ ಶಾಲೆಗಳನ್ನು ಹುಡುಕಿ ತಮ್ಮ ವರಮಾನಕ್ಕೂ ಮೀರಿದ ಖರ್ಚು ವೆಚ್ಚಗಳನ್ನು ಭರಿಸಿ ಸೇರಿಸುತ್ತಾರೆ. ಮಕ್ಕಳು ಬೆಳೆದು ಮುಂದೊಂದು ದಿನ ಶ್ರೇಷ್ಠ ವ್ಯಕ್ತಿಯಾಗಲೆಂದು ಬಯಸುತ್ತಾರೆ. ತಮಗೆಷ್ಟೇ ನೋವುಗಳು ತೊಂದರೆಗಳು ಇದ್ದರೂ ಮಕ್ಕಳ ಮೊಗದಲ್ಲಿ ಕಿರುನಗೆಯನ್ನು ಕಾಣಲು ಬಯಸುತ್ತಾರೆ.

image: VectorStock.com/46119393

ಮಕ್ಕಳ ಬಾಲಲೀಲೆಗಳನ್ನು ನೋಡುತ್ತಾ ಅವರ ಆಟ ಪಾಠಗಳ ಜೊತೆಗೂಡುತ್ತಾರೆ. ಮಗುವು ಹೊರಳಿ, ತೆವಳಿ, ಅಂಬೆಗಾಲಿಟ್ಟು, ಬಿದ್ದು ಎದ್ದು ನಿಂತು ತಡವರಿಸಿ ಹೆಜ್ಜೆ ಇಟ್ಟು ನಡೆವಾಗ ತಮ್ಮ ಮಗು ಏನೋ ಸಾಧಿಸಿದ ಹೆಮ್ಮೆ ಮಾತಾಪಿತರಿಗೆ. ಮಗುವಿನ ಕಿಲಕಿಲ ನಗು ಮನೆಯ ತುಂಬಾ ಮಾರ್ದನಿಸುವಾಗ ಅಪ್ಪ ಅಮ್ಮನ ಮನದಲ್ಲಿಯೂ ಆ ನಗುವಿನ ಅಲೆಗಳು ಸಂತೋಷವನ್ನು ತುಂಬುತ್ತದೆ. ಮನೆಯ ಮೂಲೆ ಮೂಲೆಯಲ್ಲೂ ಮಗುವಿನ ಹೆಜ್ಜೆಯ ಗೆಜ್ಜೆ ಸದ್ದು ತುಂಬಿದಾಗ ಹಿರಿಹಿರಿ ಹಿಗ್ಗಿ ಮನೆಮಂದಿಯೆಲ್ಲಾ ಸಂತಸದಿಂದ ಉಬ್ಬಿ ಹೋಗುತ್ತಾರೆ. ಅಜ್ಜಿ ತಾತರಿಗಂತೂ ತಮ್ಮ ಮೊಮ್ಮಕ್ಕಳಿಗೆ ದೃಷ್ಟಿ ತೆಗೆದು ಎಷ್ಟು ನಿವಾಳಿಸಿದರೂ ಸಾಲದು. ಮಗುವಿನ ತಲೆಗೂದಲನ್ನು ಬಾಚಿ ಜುಟ್ಟು, ಜಡೆ ಕಟ್ಟಿ, ಪುಟ್ಟ ಫ್ರಾಕ್, ಲಂಗ ರವಿಕೆ,ಅಂಗಿ ಚಡ್ಡಿ, ದೋತಿ ತೊಡಿಸಿ ಕಣ್ಣಿಗೆ ಹುಬ್ಬಿಗೆ ಕಾಡಿಗೆ ಹಚ್ಚಿ, ಕೆನ್ನೆಗೆ ಗಲ್ಲಕ್ಕೆ ಕಪ್ಪಾದ ದೃಷ್ಟಿ ಬೊಟ್ಟು ಇಟ್ಟು, ಮುದ್ದಾಗಿ ಕಾಣುವ ಮಗುವನ್ನು ಮುದ್ದಿಸಿ, ಲಾಲಿಸಿ ಸಂಭ್ರಮಿಸುವರು ಮನೆ ಮಂದಿಯೆಲ್ಲಾ. ಸಣ್ಣ ಮಗುವಾಗಿದ್ದಾಗ ಹೆಣ್ಣು ಗಂಡು ಎಂಬ ಬೇಧ ಭಾವ ತೋರದೇ ಎಲ್ಲಾ ರೀತಿಯ ಬಟ್ಟೆಗಳನ್ನು ತೊಡಿಸಿ ಸಿಂಗರಿಸಿ ಖುಷಿಪಡುವ ಮನೆ ಮಂದಿ ಮಗು ದೊಡ್ಡದಾಗುತ್ತಾ ಬಂದಂತೆ ಹೆಣ್ಣು ಅಥವಾ ಗಂಡು ಎನ್ನುವ ವ್ಯತ್ಯಾಸಕ್ಕೆ ಅನುಗುಣವಾಗಿ ವಸ್ತ್ರಗಳನ್ನು ತೊಡಿಸಲು ಪ್ರಾರಂಭಿಸುತ್ತಾರೆ. ಆಗಿನಿಂದಲೇ ತಾನು ನಿರ್ದಿಷ್ಟ ಲಿಂಗಕ್ಕೆ ಸೇರಿದವನು/ವಳು ಎಂದು ಮಗುವಿನ ಮನಸ್ಸಿಗೆ ಮನದಟ್ಟು ಆಗುವಂತೆ ನಡೆದುಕೊಳ್ಳುತ್ತಾರೆ.

ತಾನು ಸಣ್ಣ ಮಗುವಿದ್ದಾಗ ಯಾವ ರೀತಿಯ ಉಡುಗೆ ತೊಡುಗೆ ತೊಡಿಸಿ ಪಾಲಕರು, ಪೋಷಕರು ತನ್ನನ್ನು ಅಲಂಕರಿಸಿದ್ದರು ಎನ್ನುವುದು ಕೂಡಾ ಆ ಕಂದನ ನೆನಪಿನಲ್ಲಿ ಉಳಿದಿರುವುದಿಲ್ಲ. ಆದರೂ ಬೆಳೆದಂತೆ ಕಾಲಕ್ರಮೇಣ ತನ್ನ ಇಷ್ಟದ ಅನುಸಾರವಾಗಿ ಆರಾಮದಾಯಕ ಎನಿಸುವ ಬಟ್ಟೆಯನ್ನು ತೊಡಲು ಬಯಸುತ್ತದೆ. ಆಗ ಪೋಷಕರಲ್ಲಿ ಗೊಂದಲ ಉಂಟಾಗುತ್ತದೆ. ತನ್ನ ಇಷ್ಟದ ಆಭರಣಗಳನ್ನು ಧರಿಸಲು ಬಯಸುತ್ತದೆ. ತನಗೆ ಪ್ರಿಯವೆನಿಸುವ ರೀತಿಯಲ್ಲಿ ಅಲಂಕರಿಸಿಕೊಳ್ಳಲು ಆಸೆಪಡುತ್ತದೆ. ಇದೆಲ್ಲವೂ ಪೋಷಕರ ಗಮನಕ್ಕೆ ಬಂದಾಗ ಹೌಹಾರಿ ಹೋಗುತ್ತಾರೆ.

ತಮ್ಮ ಮಗುವಿನಲ್ಲಿ ಏಕೆ ಇಂತಹ ತದ್ವಿರುದ್ಧ ಬಯಕೆಗಳು ಎಂದು ಚಿಂತಾಕ್ರಾಂತರಾಗುತ್ತಾರೆ. ಕುಟುಂಬದ ಇತರ ಸದಸ್ಯರು ಹಾಗೂ ನೆರೆಹೊರೆಯವರು ಏನೆಂದುಕೊಳ್ಳುತ್ತಾರೆ ಎನ್ನುವ ಅಂಜಿಕೆ ಪೋಷಕರ ಮನದಲ್ಲಿ ಮೂಡುತ್ತದೆ. ತಮ್ಮ ಮಗುವಿನಲ್ಲಿ ಸಹಜವಾಗಿ ಕಾಣಿಸಿಕೊಳ್ಳುವ ಭಾವನೆಗಳ ಬದಲಾವಣೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುವ ಇವರು ಮಗುವನ್ನು ಗದರಿಸಿ ಮಗುವು ತನ್ನ ಇಷ್ಟದ ಹಾಗೆ ನಡೆದುಕೊಳ್ಳುವುದನ್ನು ವಿರೋಧಿಸುತ್ತಾರೆ. ಇದರಿಂದ ಆ ಪುಟ್ಟ ಮನಸ್ಸಿಗೆ ಎಷ್ಟು ಆಘಾತವಾಗುತ್ತದೆ ಎನ್ನುವುದನ್ನು ಮನಗಾಣದಾಗುತ್ತಾರೆ.

ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ: ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ

ಬಲವಂತವಾಗಿ ಮಗುವನ್ನು ಅದರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ನಿರ್ಬಂಧವನ್ನು ಹೇರುತ್ತಾರೆ. ಮಗುವಿಗೆ ತನ್ನ ತಪ್ಪು ಏನೆಂದು ಕೂಡಾ ಇಲ್ಲಿ ತಿಳಿದಿರುವುದಿಲ್ಲ. ತನಗೇನು ಅನಿಸುತ್ತದೆ ಅದನ್ನೇ ಮಾಡಲು ಹಾಗೂ ಹಾಗೆ ನಡೆದುಕೊಳ್ಳಲು ಮಗುವು ಇಚ್ಚಿಸುತ್ತದೆ. ಆದರೆ ತನ್ನ ಇಷ್ಟಾನಿಷ್ಟಗಳಿಗೆ ಅಪ್ಪ ಅಮ್ಮನ ವಿರೋಧ ಕಂಡಾಗ ಮಗು ಒಳಗೊಳಗೇ ಕೊರಗಲು ಪ್ರಾರಂಭಿಸುತ್ತದೆ. ಮಗುವಲ್ಲವೇ ಅದಕ್ಕೇನು ತಿಳಿಯುತ್ತದೆ? ತಿಳಿಯದೇ ಮಾಡಿದ್ದನ್ನು ನಾವು ಸರಿಪಡಿಸಿದರೆ ಆಯಿತು ಎಂದುಕೊಳ್ಳುವ ಪೋಷಕರು ಆ ಪುಟ್ಟ ಮನಸ್ಸಿಗೆ ಆಗುವ ಆಘಾತವನ್ನು ಊಹಿಸದಾಗುತ್ತಾರೆ.

ಬಾಲ್ಯದಿಂದ ಹದಿಹರೆಯಕ್ಕೆ ಕಾಲಿಟ್ಟಾಗ ಅವರಲ್ಲಿ ಆಗುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು ಮಕ್ಕಳನ್ನು ಕುತೂಹಲಕ್ಕೆ ಹಾಗೂ ಮುಜುಗರಕ್ಕೆ ಒಳಪಡಿಸುತ್ತದೆ. ಅಂತಹಾ ಸಮಯದಲ್ಲಿ ಮಕ್ಕಳು ಕೇಳುವ ಸಂಶಯಭರಿತ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರವನ್ನು ಹೇಳಲು ಪೋಷಕರು ಅಸಮರ್ಥರಾಗುತ್ತಾರೆ. ಈ ವಯಸ್ಸಿನಲ್ಲಿ ಮಕ್ಕಳು ಮನೆಗಿಂತ ಹೆಚ್ಚಾಗಿ ಹೊರಗೆ ಅಂದರೆ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಾರೆ ಹಾಗಾಗಿ ಇವರ ಮೇಲೆ ಹೆಚ್ಚು ಗಮನ ಕೊಡಲು ಕೂಡಾ ಪೋಷಕರಿಗೆ ಅಸಾಧ್ಯವಾಗುತ್ತದೆ.

ಜೊತೆಗೆ ಇಬ್ಬರೂ ಹೊರಗೆ ದುಡಿಯಲು ತೆರಳುವುದರಿಂದ ಮಕ್ಕಳೊಂದಿಗೆ ಕಳೆಯುವ ಸಮಯವೂ ಕಡಿಮೆ ಇರುತ್ತದೆ. ಹಲವಾರು ರೀತಿಯ ಮಾನಸಿಕ ಒತ್ತಡಕ್ಕೆ ಒಳಗಾಗಿ ಮಕ್ಕಳು ತಮ್ಮ ಜೊತೆ ಮಾತನಾಡಲು ಬಯಸಿದಾಗ ಕೆಲವೊಮ್ಮೆ ಅವರ ಮೇಲೆ ಸಿಡಿಮಿಡಿಗೊಳ್ಳುತ್ತಾರೆ. ಹೀಗಾದಾಗ ತಮ್ಮ ಜಿಜ್ಞಾಸೆಗಳಿಗೆ ಸರಿಯಾದ ಪರಿಹಾರ ದೊರೆಯದೇ ಮಕ್ಕಳು ಪೋಷಕರಿಂದ ದೂರವೇ ಉಳಿದುಬಿಡುತ್ತಾರೆ. ಕೆಲವೊಮ್ಮೆ ತಮ್ಮ ಮಕ್ಕಳು ಏನು ಮಾಡುತ್ತಾರೆ? ಶಾಲೆಗೆ ಹೋದಾಗ ಹೊರಗೆ ಹಾಗೂ ಮನೆಯಲ್ಲಿ ಒಬ್ಬರೇ ಇದ್ದಾಗ ಹೇಗೆ ಇರುತ್ತಾರೆ ಎನ್ನುವುದರ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ತಮಗೆ ತಿಳಿದಂತೆ, ತಮ್ಮ ಅನುಭವದ ಮೇರೆಗೆ ಮಕ್ಕಳಿಗೆ ತಿಳಿಹೇಳಿ ತಮ್ಮ ಮಕ್ಕಳು ಸರಿಯಾದ ರೀತಿಯಲ್ಲಿಯೇ ಬೆಳೆಯುತ್ತಿದ್ದಾರೆ ಎಂದು ತಮ್ಮಲ್ಲಿಯೇ ಅಂದುಕೊಳ್ಳುತ್ತಾರೆ. ಇತ್ತ ಮಾತಾಪಿತರ ಬಳಿ ಮಾತನಾಡಲು ಅವಕಾಶ ಸಿಗದೇ ಗೊಂದಲಕ್ಕೆ ಒಳಗಾದ ಮಕ್ಕಳು ತಮ್ಮ ಮನಸ್ಸಲ್ಲಿ ಮೂಡುವ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಇತರೇ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ.

image: VectorStock.com/50881516

ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವ ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನೆರೆಹೊರೆಯವರಿಂದ, ಪರಿಚಿತರಿಂದ, ಸಂಬಂಧಿಕರಿಂದ ಲೈಂಗಿಕ ಶೋಷಣೆಗೂ ಒಳಗಾಗುತ್ತಾರೆ. ಇದನ್ನು ಪೋಷಕರಲ್ಲಿ ಹೇಳಲು ಅಂಜುತ್ತಾರೆ. ಕೆಲವು ಮನೆಗಳಲ್ಲಿ ಮಕ್ಕಳಿಗೆ ಮುಕ್ತವಾಗಿ ಮಾತನಾಡುವ ಅವಕಾಶಗಳೂ ಇರುವುದಿಲ್ಲ. ಶಾಲೆಯ ಚಟುವಟಿಕೆ ಹಾಗೂ ಇನ್ನಿತರೇ ವಿಷಯಗಳ ಬಗ್ಗೆ ಮಾತನಾಡುವ ಪೋಷಕರು ಮಕ್ಕಳಿಗೆ ಆಗುವ ಇಂತಹಾ ಅಹಿತಕರ ಅನುಭವಗಳ ಬಗ್ಗೆ ಚಿಂತಿಸಿಯೇ ಇರುವುದಿಲ್ಲ. ತಾವು ತಮ್ಮ ಮಕ್ಕಳಿಗೆ ಸಂಪೂರ್ಣ ಸುರಕ್ಷತೆಯನ್ನು ಕೊಟ್ಟಿದ್ದೇವೆ ಎನ್ನುವ ಭ್ರಮೆಯಲ್ಲಿ ಉಳಿದುಬಿಡುತ್ತಾರೆ. ಹಾಗಾಗಿ ಮಕ್ಕಳು ಏನಾದರೂ ಹೇಳಲು ಹತ್ತಿರ ಬಂದರೆ ನಿರ್ಲಕ್ಷ್ಯವನ್ನು ತೋರುತ್ತಾರೆ. ತಮ್ಮ ಓರಗೆಯವರಿಗಿಂತ ತಮ್ಮ ಮಕ್ಕಳು ಭಿನ್ನರು ಎನ್ನುವುದು ಎಷ್ಟೋ ಪಾಲಕರ ಗಮನಕ್ಕೆ ಬಾರದೇ ಹೋಗುತ್ತದೆ. ಹದಿ ಹರೆಯದಲ್ಲಿ ಪೋಷಕರು ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ನಡೆದುಕೊಳ್ಳದೆ ಇರುವುದು ಕೂಡಾ ಇದಕ್ಕೆ ಕಾರಣ. ತಾವು ಹೇಳಿದಂತೆ ಮಕ್ಕಳು ಕೇಳಬೇಕು, ಅವರಿಗೆ ಪ್ರಪಂಚ ಜ್ಞಾನವಿಲ್ಲವೆಂದು ತಿಳಿದು ಮಕ್ಕಳು ಏನಾದರೂ ಸಂಶಯವನ್ನು ಕೇಳಿ ಬಳಿ ಬಂದಾಗ ತಮ್ಮ ಅನುಭವಕ್ಕೆ ಅನುಗುಣವಾಗಿ ಬೋಧಿಸಲು ಪ್ರಾರಂಭಿಸುತ್ತಾರೆ. ತಮ್ಮ ಮಗುವಿನ ಅನುಭವ ತಮಗಿಂತಲೂ ಭಿನ್ನ ಎನ್ನುವುದನ್ನು ಒಪ್ಪಿಕೊಳ್ಳಲು ಪೋಷಕರು ತಯಾರಾಗುವುದೇ ಇಲ್ಲ. ಹೀಗಾದಾಗ ಮಕ್ಕಳು ಪೋಷಕರ ಜೊತೆ ಮಾತನಾಡುವುದನ್ನೇ ಕಡಿಮೆ ಮಾಡಿ ಅಂತರ್ಮುಖಿಯಾಗುತ್ತಾರೆ.

ರುಕ್ಮಿಣಿ ಎಸ್ ನಾಯರ್ ಅವರ ಈ ಲೇಖನ ಓದಿ: LGBTQ+ ಮಕ್ಕಳ ತೊಳಲಾಟಗಳು!

ತಮ್ಮ ಲಿಂಗತ್ವಕ್ಕೆ ವಿಭಿನ್ನವಾದ ನಡವಳಿಕೆ ಮಕ್ಕಳಲ್ಲಿ ಕಂಡುಬಂದರೆ ಅವರನ್ನು ಟೀಕೆಮಾಡಿ, ನಿಂದಿಸಿ, ಗದರಿ ಹಾಗೆಲ್ಲಾ ನಡೆಕೊಳ್ಳದ ಹಾಗೆ ತಾಕೀತು ಮಾಡುತ್ತಾರೆ. ಮನೆಯ ಹೊರಗಿನಿಂದಲೂ ಮಕ್ಕಳು ಅವಹೇಳನಕ್ಕೆ ಒಳಗಾಗುತ್ತಾರೆ. ಹೀಗೆ ಅಪಹಾಸ್ಯಕ್ಕೆ ಒಳಗಾದ ಮಕ್ಕಳು ತಾವು ಏನೋ ದೊಡ್ಡ ತಪ್ಪು ಮಾಡುತ್ತಿದ್ದೇವೆ ಎನ್ನುವ ಕೀಳರಿಮೆಗೆ ಒಳಗಾಗಿ ಖಿನ್ನತೆಗೆ ಜಾರುತ್ತಾರೆ. ತಮ್ಮ ಘನತೆ ಗೌರವ ಮನೆತನದ ಮರ್ಯಾದೆ ಹಾಳಾಗುತ್ತದೆ ಎಂದೆಲ್ಲಾ ಹೆದರುವ ಪಾಲಕರು ತಮ್ಮ ಮಕ್ಕಳ ನಡತೆಯಲ್ಲಿ ಬದಲಾವಣೆ ತರಲು ತಮ್ಮ ಕೈಲಾದ ಪ್ರಯತ್ನಗಳನ್ನು ಮಾಡುತ್ತಾರೆ. ಸಮಾಜದ ಕುಹಕಕ್ಕೆ ಹೆದರಿ ತಮ್ಮ ಮಕ್ಕಳಲ್ಲಿ ಸಹಜವಾಗಿ ಉಂಟಾಗುವ ವಿಭಿನ್ನ ರೀತಿಯ ಬದಲಾವಣೆಯನ್ನು ಪ್ರಾರಂಭದಲ್ಲೇ ಚಿವುಟಿ ಹಾಕುವ ವ್ಯರ್ಥ ಪ್ರಯತ್ನಗಳು ಅವಿರತವಾಗಿ ಪೋಷಕರಿಂದ ನಡೆಯುತ್ತವೆ. ಆಗೆಲ್ಲಾ ಮಕ್ಕಳು ಮಾನಸಿಕವಾಗಿ ಜರ್ಜರಿತರಾಗುವುದನ್ನು ಅರ್ಥಮಾಡಿಕೊಳ್ಳದೇ ಕಾಲಕ್ರಮೇಣ ಸರಿಹೋಗುವರು ಎಂದು ಪೋಷಕರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲಿಯೂ ಪೋಷಕರ ಕಾಳಜಿ ಅತ್ಯಗತ್ಯ. ತಾವು ಸದಾ ಜೊತೆಗಿದ್ದೇವೆ ಎನ್ನುವ ಭರವಸೆ ಮಕ್ಕಳ ಮನಸ್ಸಲ್ಲಿ ಸುರಕ್ಷಿತ ಭಾವನೆ ಮೂಡಿಸುತ್ತದೆ. ಸಣ್ಣ ಮಗುವಾಗಿದ್ದಾಗ ನಾವು ತೋರುವ ಕಾಳಜಿ, ಪ್ರೀತಿ, ಸಹಕಾರ, ಎಲ್ಲವೂ ಸದಾ ಕಾಲವಿರಬೇಕು ಎಂದು ಮಕ್ಕಳು ಬಯಸುತ್ತಾರೆ. ಶಿಸ್ತಿನಿಂದ ಪಾಲನೆ ಪೋಷಣೆ ಮಾಡದಿದ್ದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳು ಹೆಚ್ಚು ಆದರೂ ಅವರಿಗೆ ಅಗತ್ಯವಿದ್ದಾಗ ಏನೇ ಆದರೂ ನಾವು ಜೊತೆಗಿದ್ದೇವೆ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಮೂಡಿಸಬೇಕು. ಹಾಗಾಗಬೇಕಾದರೆ ನಾವು ಸ್ನೇಹಿತರಂತೆ ಅವರ ಜೊತೆ ನಡೆದುಕೊಳ್ಳಬೇಕು.

ಲೇಖನ: ರುಕ್ಮಿಣಿ ಎಸ್ ನಾಯರ್

LGBTQ+ ಮಕ್ಕಳ ತೊಳಲಾಟಗಳು!

LGBTQ+ ಮಕ್ಕಳ ತೊಳಲಾಟಗಳು!
LGBTQIA+ ಮಕ್ಕಳು ತಮ್ಮ ಲೈಂಗಿಕ ಭಾವನೆಗಳಿಗೆ ವಿರುದ್ಧವಾಗಿ ಮದುವೆಯಾಗಿ ತಾವು ಸಹಜವಾಗಿ ಇದ್ದೇವೆ ಎಂದು ಸಮಾಜಕ್ಕೆ ತೋರಿಸಿಕೊಳ್ಳಲು ಒತ್ತಡಕ್ಕೆ ಒಳಗಾಗಿ ಇಂತಹ ಬದುಕನ್ನು ಸ್ವೀಕರಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಗೇ ಹುಡುಗನೊಬ್ಬ ಕುಟುಂಬದ ಮತ್ತು ಸಮಾಜದ ಒತ್ತಡಕ್ಕೆ ಒಳಗಾಗಿ ಹೆಣ್ಣನ್ನು ಮದುವೆಯಾದರೆ, ಇದರಿಂದ ಅವನ ಬದುಕು ಮಾತ್ರವಲ್ಲ, ಆ ಹುಡುಗಿಯ ಬದುಕೂ ನಾಶವಾಗುತ್ತದೆ. ಇದಕ್ಕೆ ಲ್ಯಾವೆಂಡರ್‌ ಮ್ಯಾರೆಜ್‌ ಎಂದು ಕರೆಯುತ್ತಾರೆ.

ಲೇಖನ: ರುಕ್ಮಿಣಿ ಎಸ್ ನಾಯರ್

LGBTQIA+ ಮಕ್ಕಳು ಹುಟ್ಟುವಾಗ ಸಾಮಾನ್ಯವಾಗಿ ಎಲ್ಲಾ ಮಕ್ಕಳಂತೆಯೇ ಇರುತ್ತಾರೆ. ಆದರೆ ಕೆಲವು ಮಕ್ಕಳು ಮಾತ್ರ ಅಪರೂಪಕ್ಕೆ ಭಿನ್ನವಾಗಿ ಹುಟ್ಟುತ್ತಾರೆ. ಆದರೆ ಸಾಮಾನ್ಯವಾಗಿ ನೋಡುವಾಗ ಹೊರನೋಟಕ್ಕೆ ಈ ಮಕ್ಕಳು ಎಲ್ಲರಂತೆ ಇರುತ್ತಾರೆ. ನಮಗೆ ಇವರಲ್ಲಿ ಯಾವ ಬದಲಾವಣೆಯೂ ಕಾಣುವುದಿಲ್ಲ. ಪುಟ್ಟ ಮಗುವಾಗಿರುವಾಗ ನಾವು ನಮ್ಮ ಇಷ್ಟಕ್ಕೆ ಅನುಗುಣವಾಗಿ ಬಟ್ಟೆಗಳನ್ನು ತೊಡಿಸುತ್ತೇವೆ. ಸಿಂಗರಿಸುತ್ತೇವೆ, ಅದನ್ನು ನೋಡಿ ಖುಷಿಯಿಂದ ಸಂಭ್ರಮಿಸುತ್ತೇವೆ. ಮಕ್ಕಳು ಸ್ವಲ್ಪ ಬೆಳೆದಾಗ ತಮ್ಮ ಇಷ್ಟಾನಿಷ್ಟಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸುತ್ತಾರೆ.

ತಮ್ಮನ್ನು ತಾವು ಅರಿಯಲು ಪ್ರಾರಂಭಿಸುತ್ತಾರೆ. ತಮ್ಮ ದೇಹದ ಅಂಗಾಂಗಗಳನ್ನು ಕೌತುಕದಿಂದ ಮುಟ್ಟಿ ನೋಡಿಕೊಳ್ಳುತ್ತಾರೆ. ತಾವು ಕೂಡಾ ಇತರರಂತೆಯೇ ಎನ್ನುವುದನ್ನು ಕೂಡಾ ಗಮನಿಸಲು ಪ್ರಾರಂಭಿಸುತ್ತಾರೆ.

ತಮ್ಮ ಲಿಂಗತ್ವದ ಬಗ್ಗೆ ಸಣ್ಣ ವಯಸ್ಸಿನಿಂದಲೇ ಭಾವನಾತ್ಮಕವಾಗಿ ಪೋಷಕರ ಗಮನಕ್ಕೆ ಬಂದೂ ಬಾರದಂತಹ, ಕಣ್ಣಿಗೆ ಕಂಡೂ ಕಾಣದಂತಹ ಹಲವಾರು ಸೂಚನೆಗಳನ್ನು ನೀಡುತ್ತಾರೆ. ಸ್ವತಃ ಆ ಮಕ್ಕಳಿಗೂ ಕೂಡಾ ತಮ್ಮ ಹಾವಭಾವದಲ್ಲಿ ಉಂಟಾಗುವ ವ್ಯತ್ಯಾಸ ತಿಳಿದಿರುವುದಿಲ್ಲ. ಸಹಜವಾಗಿ ತಮಗೆ ಅನಿಸಿದಂತೆ, ತಮ್ಮ ಇಷ್ಟಕ್ಕೆ ಅನುಗುಣವಾಗಿ ಆಟವಾಡುವ ರೀತಿಯಿಂದ, ವಸ್ತ್ರಗಳನ್ನು ತೊಡುವಾಗ ತೋರುವ ಆಸಕ್ತಿಯಿಂದ, ಅವರ ನಡೆನುಡಿ, ಹಾವಭಾವಗಳಿಂದ ತಮ್ಮಲ್ಲಿನ ನಿಜವಾದ ಆಸಕ್ತಿಯನ್ನು ಹೊರಹಾಕುತ್ತಾರೆ. ನಾವು ಪೋಷಕರು ವಯೋಸಹಜವಾಗಿ ಅವರಲ್ಲಿ ಉಂಟಾಗುವ ಬದಲಾವಣೆಗಳನ್ನು ಅಷ್ಟು ಸೂಕ್ಷ್ಮವಾಗಿ ಗಮನಿಸುವುದಿಲ್ಲ. ಆದರೆ ನಮ್ಮ ಮಕ್ಕಳು ಇತರರಂತೆ ಅಲ್ಲ ಎನ್ನುವುದು ಕಾಲಕ್ರಮೇಣ ನಮ್ಮ ಅರಿವಿಗೆ ಬಂದಂತೆ ನಾವು ಅಧೀರಾಗುತ್ತೇವೆ. ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾಗಿ ವರ್ತಿಸುವುದು ನಿಧಾನವಾಗಿ ಪೋಷಕರ ಗಮನಕ್ಕೆ ಬರುತ್ತದೆ. ಆಗ ಆ ಮಕ್ಕಳನ್ನು ಗದರಿ, ಮೂದಲಿಸಿ ʼನೀನು ಹೀಗೆ ಆಡಬೇಡ, ಮಾತನಾಡಬೇಡ, ವರ್ತಿಸಬೇಡ,ʼ ಎಂದೆಲ್ಲಾ ಹೇಳಿ ಮಕ್ಕಳ ಗುಣದಲ್ಲಿ, ನಡತೆಯಲ್ಲಿ ವ್ಯತ್ಯಾಸವನ್ನು ತರಲು ಪೋಷಕರು ಪ್ರಯತ್ನಿಸುತ್ತಾರೆ. ಮಕ್ಕಳ ಮೇಲೆ ಮಾನಸಿಕವಾಗಿ ಒತ್ತಡ ಹೇರುತ್ತೇವೆ.

ಆದರೆ ಆ ಮಕ್ಕಳು ತಾವು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬ ಗೊಂದಲಕ್ಕೆ ಒಳಗಾಗಿ ಮಂಕಾಗುತ್ತಾರೆ. ಆದರೆ ಎಷ್ಟು ಪ್ರಯತ್ನ ಪಟ್ಟರೂ ತಮ್ಮಲ್ಲಿ ಅಡಗಿರುವ ಸಹಜ ಭಾವನೆಯನ್ನು, ಗುಣವನ್ನು ಆ ಮಕ್ಕಳು ತೋರಿಸುತ್ತಾರೆ. ಮತ್ತೂ ಪೋಷಕರು ಗದರಿ ನಿಂದಿಸಿದಾಗ ಪೋಷಕರ ಮುಂದೆ ನಟಿಸಲು ಅಭ್ಯಾಸ ಮಾಡಿಕೊಳ್ಳುತ್ತಾರೆ. ತಮ್ಮ ಸಹಜ ನಡವಳಿಕೆಯನ್ನು ಬಚ್ಚಿಡಲು ಕಲಿಯುತ್ತಾರೆ. ಹಾಗೂ ಮಾನಸಿಕವಾಗಿ ಒಳಗೊಳಗೇ ಕೊರಗಲು ಪ್ರಾರಂಭಿಸುತ್ತಾರೆ. ತಾನು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಗೊಂದಲದ ನಡುವೆ ಸಿಲುಕಿ ತೊಳಲಾಡುತ್ತಾರೆ. ಆದರೂ ತನ್ನಲ್ಲಿ ಅಡಗಿರುವ ಸಹಜ ಗುಣಗಳನ್ನು ಭಾವಗಳನ್ನು ಭಾವನೆಗಳನ್ನು ಬಚ್ಚಿಡಲು ವಿಫಲ ಪ್ರಯತ್ನ ಮಾಡಿ ಸೋಲುತ್ತಾರೆ. ತಾವು ಒಂಟಿಯಾಗಿರುವಾಗ, ಪೋಷಕರು ಜೊತೆ ಇಲ್ಲದ ಸಮಯದಲ್ಲಿ ಯಾರಿಗೂ ತಿಳಿಯದಂತೆ ತನ್ನಿಷ್ಟದಂತೆ ಇದ್ದು ಖುಷಿ ಪಡುತ್ತಾರೆ. ಕೃತಕವಾಗಿ ನಡವಳಿಕೆಯನ್ನು, ಗುಣವನ್ನು ಪೋಷಕರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ. ತನ್ನ ಸಹಜ ನಡವಳಿಕೆಯನ್ನು, ಗುಣವನ್ನು ಮನಸ್ಸಿನಲ್ಲಿಯೇ ಬಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಾರೆ.

ಇದರಿಂದ ಮಕ್ಕಳು ಮಾನಸಿಕವಾಗಿ ಬಲಹೀನವಾಗುತ್ತಾ ಹೋಗುತ್ತಾರೆ. ಆಟ ಪಾಠಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾ ಮೌನಕ್ಕೆ ಶರಣಾಗುತ್ತಾರೆ. ಪೋಷಕರು ಇತರೇ ಮಕ್ಕಳಿಗೆ ತಮ್ಮ ಮಕ್ಕಳನ್ನು ಹೋಲಿಸುತ್ತಾ ಹೋದಂತೆ ಈ ಮಕ್ಕಳು ಇತರ ಮಕ್ಕಳಿಂದಲೂ ದೂರವಿರಲು ಪ್ರಯತ್ನಿಸುತ್ತಾರೆ. ಬೆಳೆದಂತೆ ಅವರಲ್ಲಿ ಮೌನವೂ ಹೆಚ್ಚಾಗುತ್ತಾ ಹೋಗುತ್ತದೆ. ಆದಷ್ಟೂ ತಮ್ಮಷ್ಟಕ್ಕೆ ತಾನು ಇರಲು ಬಯಸುತ್ತಾರೆ. ಕಾಲಕ್ರಮೇಣ ಹದಿ ಹರೆಯವನ್ನು ತಲುಪಿದಾಗ ಆ ಮಕ್ಕಳ ಸಂಕಷ್ಟ ಇನ್ನೂ ಹೆಚ್ಚಾಗುತ್ತದೆ. ಹದಿ ಹರೆಯದಲ್ಲಿ ತಮ್ಮ ದೇಹದಲ್ಲಿ ಆಗುವ ಮಾರ್ಪಾಡಿನಿಂದಾಗಿ ಗಲಿಬಿಲಿಗೆ ಒಳಗಾಗುತ್ತಾರೆ. ತಮ್ಮ ಓರಗೆಯ ಮಕ್ಕಳ ಜೊತೆ ಬೆರೆತರೂ ತಾವು ಅವರಂತೆ ಇಲ್ಲ ತಾವು ಇವರೆಲ್ಲರಿಗಿಂತ ಭಿನ್ನ ಎನ್ನುವುದನ್ನು ಅರಿತುಕೊಳ್ಳುತ್ತಾರೆ. ಕೆಲವು ಮಕ್ಕಳು ಪೋಷಕರನ್ನು ಕೇಳಿ ತಿಳಿದುಕೊಳ್ಳಲು ಧೈರ್ಯ ಮಾಡುತ್ತಾರೆ. ಆಗ ಪೋಷಕರು ಕೂಡಾ ಅದನ್ನು ಅಷ್ಟು ಮುಖ್ಯ ವಿಷಯವಾಗಿ ತೆಗೆದುಕೊಳ್ಳದೇ, ಆ ಮಕ್ಕಳಿಗೆ ಸಮರ್ಪಕವಾದ ಉತ್ತರ ದೊರೆಯದೇ ತೊಳಲಾಡುತ್ತಾರೆ.

ತಮ್ಮ ಓರಗೆಯವರೊಂದಿಗೆ ಮುಜುಗರದಿಂದ ತಮ್ಮ ಮನಸ್ಸಿನ ಸಂದೇಹವನ್ನು ಹಂಚಿಕೊಂಡಾಗ ನಗೆಪಾಟಲಿಗೆ ಗುರಿಯಾಗುತ್ತಾರೆ. ಶಾಲೆಯಲ್ಲಿ ಶಿಕ್ಷಕರೊಂದಿಗೆ ಕೇಳಿ ತಿಳಿದುಕೊಳ್ಳಲು ಅಂಜಿಕೆಯಾದ ಕಾರಣ ಅವರೊಂದಿಗೂ ಕೇಳಿ ತಿಳಿದುಕೊಳ್ಳಲು ಈ ಮಕ್ಕಳು ಹಿಂಜರಿಯುತ್ತಾರೆ. ತಾವು ನಿಜಕ್ಕೂ ಏನು? ಹೆಣ್ಣೇ, ಗಂಡೇ ಅಥವಾ ಎರಡೂ ಅಲ್ಲವೇ ಎನ್ನುವ ಸಂಶಯ LGBTQIA+ ಮಕ್ಕಳಲ್ಲಿ ತಲೆದೋರುತ್ತದೆ. ತಮ್ಮ ದೈಹಿಕ ಬದಲಾವಣೆಗೂ ಮಾನಸಿಕ ಬದಲಾವಣೆಗೂ, ತಮ್ಮಲ್ಲಿ ಉದ್ಭವಿಸುವ ಭಾವನೆಗಳ ಬದಲಾವಣೆಗೂ ತಾಳೆಯಾಗದೇ ಇರುವುದನ್ನು ಅರಿತ ಮಕ್ಕಳು ತಮಗೇನೋ ಆಗಿದೆ ಎಂದು ಹೆದರುತ್ತಾರೆ. ತಮ್ಮ ಲೈಂಗಿಕತೆಯ ಬಗೆಗಿನ ಗೊಂದಲ ಹೆಚ್ಚಾಗಿ ಅವರಿಗೇ ಅರಿವಿಲ್ಲದಂತೆ ಖಿನ್ನತೆಗೆ ಒಳಗಾಗುತ್ತಾರೆ. ಈ ಸಮಾಜದಲ್ಲಿ ತಾವು ಹೇಗೆ ಬದುಕಿದರೆ ಸರಿ ಮತ್ತು ತಾವು ಹೇಗೆ ಬದುಕಿದರೆ ತೊಂದರೆಗೆ ಒಳಗಾಗುತ್ತೇವೆ ಎನ್ನುವ ಪ್ರಶ್ನೆ ಮನಸ್ಸಲ್ಲಿ ಮೂಡಿ, ಆತಂಕಕ್ಕೆ ಒಳಗಾಗುತ್ತಾರೆ. ಅವರು ತಮ್ಮ ಭಾವನೆಗಳನ್ನು ಹೊರಗೆ ತೋರಿಸಿಕೊಳ್ಳಲಾರದೇ ತಮ್ಮಲ್ಲಿಯೇ  ಹತ್ತಿಕ್ಕಿಕೊಳ್ಳುತ್ತಾರೆ.

ಪೋಷಕರಿಗೆ ತಮ್ಮಲ್ಲಿ ಉಂಟಾಗುವ ವಿಭಿನ್ನ ಭಾವನೆಗಳ ಬಗ್ಗೆ ಹೇಳಿಕೊಂಡರೆ ಎಲ್ಲಿ ನಿಂದನೆಗೆ ಒಳಗಾಗುತ್ತೇವೆಯೋ ಎಂದು ಹೆದರಿ ತಮ್ಮಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಗಳನ್ನು ಹೇಳದೆ ಮನಸ್ಸಿನಲ್ಲಿಟ್ಟು ಕೊರಗುತ್ತಾರೆ. ಕೆಲವು ಮಕ್ಕಳು ಸಹಜವಾಗಿ ತಮ್ಮ ವಿರುದ್ಧ ಲಿಂಗಿಗಳ ಕಡೆಗೆ ಆಕರ್ಷಿತರಾಗದೆ, ತಮ್ಮದೇ ಲಿಂಗದವರ ಕಡೆಗೆ ಆಕರ್ಷಿತರಾಗುತ್ತಾರೆ ( ಗೇ ಮತ್ತು ಲೆಸ್ಬಿಯನ್‌) . ಕೆಲವು ಮಕ್ಕಳು ಗಂಡು ಮತ್ತು ಹೆಣ್ಣು ಇಬ್ಬರ ಕಡೆಗೂ ಲೈಂಗಿಕವಾಗಿ ಆಕರ್ಷಿತರಾಗುತ್ತಾರೆ (ಬೈ-ಸೆಕ್ಷಿವಲ್). ಇನ್ನು ಕೆಲವರು ತಾವು ಹೆಣ್ಣೋ ಅಥವಾ ಗಂಡೋ ಎಂದು ಅರ್ಥ ಆಗದೇ ಸಂದೇಹಕ್ಕೆ ಒಳಗಾಗುತ್ತಾರೆ‌ (ಟ್ರಾನ್ಸ್‌ಜೆಂಡರ್). ಅಪರೂಪಕ್ಕೆ ಕೆಲವು ಮಕ್ಕಳಲ್ಲಿ ಲೈಂಗಿಕ ಭಾವನೆಗಳು ಉಂಟಾಗುವುದೇ ಇಲ್ಲ‌ (ಅಸೆಕ್ಷುವಲ್). ಹೊರಗಿನ ಸಮಾಜದಲ್ಲಿ ಕಂಡು ಬರುವ ಸಹಜವಾದ ಲೈಂಗಿಕ ಜೀವನ ಹಾಗೂ ತಮ್ಮಲ್ಲಿ ಉದ್ಭವವಾಗಿರುವ ಭಾವನೆಗಳು ಅಸಹಜವಾಗಿ ಕಂಡಾಗ ಅಧೀರರಾಗುತ್ತಾರೆ. ಇದಕ್ಕೆಲ್ಲಾ ಕಾರಣ ಲೈಂಗಿಕತೆಯ ಬಗ್ಗೆ ತಿಳುವಳಿಕೆ ಇಲ್ಲದೇ ಇರುವುದೇ ಆಗಿದೆ. ‌

ಲೈಂಗಿಕತೆಯ ಬಗ್ಗೆ ತೆರೆದು ಮಾತನಾಡುವುದನ್ನು ಕೆಟ್ಟದಾಗಿ ಹಾಗೂ ತಪ್ಪಾಗಿ ಅಶ್ಲೀಲವಾಗಿ ತಿಳಿಯುವುದೇ ಇದಕ್ಕೆ ಕಾರಣವಾಗಿದೆ. ಮಕ್ಕಳಲ್ಲಿ ಉದ್ಭವವಾಗುವ ಲೈಂಗಿಕತೆಯ ಬಗೆಗಿನ ಸಂದೇಹಗಳನ್ನು ಅಳುಕಿಲ್ಲದೆ ಪರಿಹರಿಸುವ ಮಾರ್ಗವು ದೊರೆಯದೇ ಹೋದಾಗ ಮಕ್ಕಳು ಸಾಮಾಜಿಕ ಜಾಲತಾಣಗಳ ಕಡೆಗೆ ತೆರಳುತ್ತಾರೆ ಅಥವಾ ತಮ್ಮ ಇತರ ಕೆಲವು ಸ್ನೇಹಿತರಲ್ಲಿ ಸಂದೇಹಗಳ ಪರಿಹಾರಕ್ಕೆ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಅವರಿಗೆ ಅಲ್ಲಿ ಸರಿಯಾದ ಮಾಹಿತಿ ದೊರೆಯುವ ಬದಲು ಅವರನ್ನು ಇನ್ನೂ ಗೊಂದಲಕ್ಕೆ ಒಳಪಡಿಸುವ ಮಾಹಿತಿ ಸಿಗುತ್ತದೆ. ಇದರಿಂದ ಮಕ್ಕಳು ಅಡ್ಡದಾರಿಗಳನ್ನು ಹಿಡಿಯುವ ಸಾಧ್ಯತೆಯೂ ಇರುತ್ತದೆ. ಅನಿವಾರ್ಯವಾಗಿ ನೋವನ್ನು ಮರೆಯಲು ಕೆಲವರು ಮಾದಕವಸ್ತು, ಧೂಮಪಾನ, ಮದ್ಯಪಾನ ಇಂಥಹಾ ಅನೇಕ ದುಚ್ಚಟಗಳ ವ್ಯಸನಗಳಿಗೆ ದಾಸರಾಗುತ್ತಾರೆ.

ತಮ್ಮಲ್ಲಿ ಉದ್ಭವಿಸುತ್ತಿರುವ ಭಾವನೆಗಳು ತಪ್ಪು ಹಾಗೂ ತಮಗೇನೋ ಮಾನಸಿಕ ಅಥವಾ ದೈಹಿಕ ಖಾಯಿಲೆ ಬಂದಿದೆ ಎಂಬ ತಪ್ಪು ಕಲ್ಪನೆಗೆ ಒಳಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ತಮ್ಮನ್ನು ಸಮಾಜದಿಂದ, ಹೊರಲೋಕದಿಂದ, ಅಪ್ಪ ಅಮ್ಮನಿಂದ, ಹಾಗೂ ಇತರೇ ಸ್ನೇಹಿತರಿಂದ ಪ್ರತ್ಯೇಕಿಸಿಕೊಂಡು ಒಂಟಿಯಾಗಿ ಇದ್ದು ಬಿಡುತ್ತಾರೆ. ತಾವೇನೋ ತಪ್ಪು ಮಾಡುತ್ತಿದ್ದೇವೆ, ತಮ್ಮ ಲೈಂಗಿಕತೆಯ ಬಗ್ಗೆ ಹೊರಲೋಕ ಅರಿತರೆ ಎಲ್ಲಿ ತಮ್ಮನ್ನು ದೂರ ಮಾಡುವರೋ ಎಂಬ ಭಯಕ್ಕೆ ಒಳಗಾಗುತ್ತಾರೆ. ಇದಕ್ಕೆಲ್ಲಾ ಕಾರಣ ಪೋಷಕರು ಹಾಗೂ ಹೊರ ಪ್ರಪಂಚ ಈ ಮಕ್ಕಳನ್ನು ಅಸಹಜ ಗುಣದವರೆಂದು ಹೀಯಾಳಿಸುವುದರಿಂದ, ನಿಂದಿಸುವುದರಿಂದ, ಇವರೊಂದಿಗೆ ಬೆರೆಯದೇ ಇರುವುದರಿಂದ ಹಾಗೂ ಅವರನ್ನು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳದೇ ಇರುವುದರಿಂದ. ಮಕ್ಕಳೊಂದಿಗೆ ಪೋಷಕರು ಸ್ನೇಹಿತರಂತೆ ನಡೆದುಕೊಳ್ಳದೇ ಮಕ್ಕಳು ತಮ್ಮ ಅಧಿಕಾರ ಎಂದು ತಿಳಿದು ತಮ್ಮ ಇಷ್ಟಾನಿಷ್ಟಗಳನ್ನು ಮಕ್ಕಳ ಮೇಲೆ ಹೇರುವುದರಿಂದ, ಹೆದರುವ ಮಕ್ಕಳು ಎಲ್ಲಿ ತಮ್ಮನ್ನು ಮನೆಯಿಂದ ಆಚೆ ತಳ್ಳುವರೋ ಎಂಬ ಭಯದಿಂದ ತಮ್ಮ ಲಿಂಗತ್ವ ಹಾಗೂ ಲೈಂಗಿಕತೆಯನ್ನು ಬಹಿರಂಗ ಪಡಿಸಲು ಅಥವಾ ತಮ್ಮ ಮಾನಸಿಕ ತುಮುಲಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಆಗದೇ ತಮ್ಮಲ್ಲೇ ತಾವು ಕೊರಗುತ್ತಾ ಖಿನ್ನತೆಗೆ ಒಳಗಾಗಿ ಅದು ಕೆಲವೊಮ್ಮೆ ತೀವ್ರವಾದಾಗ ಆತ್ಮಹತ್ಯೆಗೆ ಶರಣಾಗುತ್ತಾರೆ.

ಲೇಖಕರ ಹಿಂದಿನ ಲೇಖನ: ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ

ಮನೆಗೆ ನೆಂಟರು, ಅತಿಥಿಗಳು ಬರುವಾಗಲೂ ತಾವು ಏನೆಂದು ಅರಿಯಬಾರದು ಎನ್ನುವುದನ್ನು ಮನಗಂಡ ಮಕ್ಕಳು ಅವರು ಉಪಯೋಗಿಸುವಂತಹ ವಸ್ತುಗಳನ್ನು ಬಚ್ಚಿಡುತ್ತಾರೆ. ಪೋಷಕರಿಗಾಗಿ ಮತ್ತು ಸಮಾಜಕ್ಕಾಗಿ ಈ ಮಕ್ಕಳು ತಮ್ಮ ಇಚ್ಚೆ, ಆಸೆ, ಕಾಮನೆ, ಆಕಾಂಕ್ಷೆಗಳನ್ನು ತ್ಯಜಿಸಿ ಬಾಳುವೆ ನಡೆಸುವಂತಹ ಸಂದರ್ಭಗಳೇ ಹೆಚ್ಚು. ತಾವು ಯಾರು ಎಂದು ಸಮಾಜಕ್ಕೆ ಗೊತ್ತಾಗದೇ ಇರುವಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಈ ಮಕ್ಕಳು ಹರಸಾಹಸ ಪಡಬೇಕಾಗುತ್ತದೆ. ಹೊರಜಗತ್ತಿಗೆ ಗೊತ್ತಾದರೆ ಕಲಿಯುವ ಶಾಲೆಯಲ್ಲಿ ಇತರೇ ಮಕ್ಕಳಿಂದ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಸಮಾಜದ ಜನ ಇವರನ್ನು ಕಂಡು ನಗುತ್ತಾರೆ. ಈ ಮಕ್ಕಳು ಮಾಡಿದಂತಹ ತಪ್ಪಾದರೂ ಏನು? ಎಲ್ಲಾ ಜೀವಿಗಳಂತೆ ಈ ಪ್ರಪಂಚದಲ್ಲಿ ಜನ್ಮ ತಾಳಿದ್ದು ಇವರ ತಪ್ಪೇ? ತಮಗೆ ಜನ್ಮ ಕೊಡು ಎಂದು ಈ ಮಕ್ಕಳು ಮಾತಾಪಿತರನ್ನು ಕೇಳಿದರೇ? ತಾವು ಲೈಂಗಿಕ ಅಲ್ಪಸಂಖ್ಯಾತರಾಗಿ ಹುಟ್ಟಬೇಕು ಎಂದು ಇವರು ಬಯಸಿದ್ದರೆ?

ಯಾವ ತಪ್ಪಿಗೆ ಸಮಾಜದಲ್ಲಿ ಕುಟುಂಬದಲ್ಲಿ ಬದುಕಲು ಈ ಮಕ್ಕಳು ಅನರ್ಹರಾಗುತ್ತಾರೆ? ಈ ಲೋಕದಲ್ಲಿ ಬದುಕಲು ಇವರಿಗೂ ಹಕ್ಕಿಲ್ಲವೇ? ತಮ್ಮದಲ್ಲದ ತಪ್ಪಿಗೆ ಈ ಮಕ್ಕಳನ್ನು ಏಕೆ ಅಸಹ್ಯ ಭಾವನೆಯಿಂದ ಕಾಣುವುದು? ಈ ಮಕ್ಕಳು ತಮ್ಮ ಭಾವನೆಗಳನ್ನು ನಿಯಂತ್ರಿಸಿಕೊಂಡು ಸಹಜವಾಗಿ ಇರುವಂತೆ ನಟಿಸಬೇಕಾಗುತ್ತದೆ. ಎಷ್ಟೋ ಪೋಷಕರಿಗೆ ತಮ್ಮ ಮಕ್ಕಳ ಭಿನ್ನ ಲೈಂಗಿಕ ಅಭಿವ್ಯಕ್ತಿ ತಿಳಿದಿರುವುದಿಲ್ಲ. ಲಿಂಗತ್ವ ಹಾಗೂ ಲೈಂಗಿಕ ಮನೋಭಾವಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ ಎನ್ನುವ ಬಗ್ಗೆ ಅರಿವು ಮೂಡಿಸಿ ಈ ಮಕ್ಕಳು ನೆಮ್ಮದಿಯ ಬದುಕನ್ನು ಬಾಳಲು ಅನುವು ಮಾಡಿಕೊಡಬೇಕು.

ಯುವಾವಸ್ಥೆಗೆ ಬಂದಾಗ ಈ ಮಕ್ಕಳು ಅನುಭವಿಸುವ ಸಂಕಷ್ಟ ಇಮ್ಮಡಿಯಾಗುತ್ತದೆ. ಪ್ರಾಥಮಿಕ ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಹಲವಾರು ತ್ಯಾಗಗಳನ್ನು ಮಾಡಿ ಪಡೆದುಕೊಂಡಿರುತ್ತಾರೆ. ಉದ್ಯೋಗ ಗಳಿಸಿ ತಾವು ಸ್ವತಂತ್ರವಾಗಿ ಬದುಕಲು ಕೂಡಾ ಇವರು ತಮ್ಮ ಲೈಂಗಿಕತೆಯನ್ನು ಮರೆಮಾಚಿಕೊಳ್ಳಬೇಕಾಗುತ್ತದೆ. ಇನ್ನು ವೈವಾಹಿಕ ಜೀವನವಂತೂ ದುಸ್ತರವೇ ಸರಿ. ತಮ್ಮ ಲೈಂಗಿಕ ಭಾವನೆಗಳಿಗೆ ವಿರುದ್ಧವಾಗಿ ಮದುವೆಯಾಗಿ ತಾವು ಸಹಜವಾಗಿ ಇದ್ದೇವೆ ಎಂದು ಸಮಾಜಕ್ಕೆ ತೋರಿಸಿಕೊಳ್ಳಲು ಒತ್ತಡಕ್ಕೆ ಒಳಗಾಗಿ ಇಂತಹ ಬದುಕನ್ನು ಸ್ವೀಕರಿಸುವ ಅನಿವಾರ್ಯ ಪರಿಸ್ಥಿತಿ ಉಂಟಾಗುತ್ತದೆ. ಗೇ ಹುಡುಗನೊಬ್ಬ ಕುಟುಂಬದ ಮತ್ತು ಸಮಾಜದ ಒತ್ತಡಕ್ಕೆ ಒಳಗಾಗಿ ಹೆಣ್ಣನ್ನು ಮದುವೆಯಾದರೆ, ಇದರಿಂದ ಅವನ ಬದುಕು ಮಾತ್ರವಲ್ಲ, ಆ ಹುಡುಗಿಯ ಬದುಕೂ ನಾಶವಾಗುತ್ತದೆ. ಇದಕ್ಕೆ ಲ್ಯಾವೆಂಡರ್‌ ಮ್ಯಾರೆಜ್‌ ಎಂದು ಕರೆಯುತ್ತಾರೆ.  ಹೊರನೋಟಕ್ಕೆ ಏನೇ ಬದಲಾವಣೆ ಮಾಡಿಕೊಂಡರೂ ಮನೋಸಹಜ ಭಾವನೆಗಳನ್ನು ಮೆಟ್ಟಿನಿಂತು ಬದುಕುವುದು ದುಸ್ತರವಾಗುತ್ತದೆ. ಆಗ ವೈವಾಹಿಕ ಜೀವನದಲ್ಲಿ ಕೂಡಾ ಬಿರುಕು ಮೂಡುತ್ತದೆ. ಒಬ್ಬರ ಲೈಂಗಿಕತೆಯನ್ನು ಮರೆಮಾಚಲು ಹೋಗಿ ಇಬ್ಬರ ಜೀವನವೂ ಹಾಳಾಗುತ್ತದೆ.

ಈ ಮಕ್ಕಳು ಅನುಭವಿಸುವ ನೋವು ಸಂಕಟಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಒಂದು ಉತ್ತಮ ಪರಿಹಾರ. ಎಲ್ಲರಂತೆ ಈ ಮಕ್ಕಳು ಕೂಡಾ ಉತ್ತಮ ರೀತಿಯಲ್ಲಿ ಬದುಕುವ ಅವಕಾಶ, ಹಕ್ಕು ಇವರಿಗೂ ಇದೆ ಎನ್ನುವುದರ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಪ್ರಕೃತಿಯಲ್ಲಿ ಇವೆಲ್ಲವೂ ಸಹಜವೇ ಎನ್ನುವ ಅರಿವು ಜಾಗೃತವಾಗಬೇಕು. ಆಗಲೇ ಈ ಮಕ್ಕಳು ತಮ್ಮತನವನ್ನು ತ್ಯಾಗ ಮಾಡದೇ, ಮುಜುಗರ, ಅವಮಾನ, ಅವಹೇಳನ, ತಿರಸ್ಕಾರಗಳನ್ನು ಸಹಿಸಿಕೊಂಡು ಒಳಗೊಳಗೇ ನೊಂದು ಬದುಕುವುದನ್ನು ತಡೆಗಟ್ಟಿ, ಅವರು ಕೂಡಾ ಎಲ್ಲರಂತೆ ನಗು ನಗುತ್ತಾ ಬಾಳುವೆ ನಡೆಸಲು ಸಾಧ್ಯವಾಗುತ್ತದೆ.

ರುಕ್ಮಿಣಿ ಎಸ್ ನಾಯರ್
ಬೆಂಗಳೂರು.

ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ

ಬೆಂಗಳೂರು ನಮ್ಮ ಹೆಮ್ಮೆಯ ಮೆರವಣಿಗೆ
LGBTQIA+ ಸಮುದಾಯದ ಮಕ್ಕಳು ಕುಟುಂಬ ವ್ಯವಸ್ಥೆಯಲ್ಲಿ ಅನುಭವಿಸುವ ನೋವು, ತೊಳಲಾಟಗಳು ಅವರ ಮಾನಸಿಕ ಆರೋಗ್ಯದ ಮೇಲೆ ಗಾಢ ಪರಿಣಾಮವನ್ನು ಬೀಡುತ್ತವೆ. ಹೆತ್ತವರಿಗೆ ತಮ್ಮ ಮಗು ಗೇ, ಲೆಸ್ಟಬಿಯನ್‌, ಟ್ರಾನ್ಸ್‌ ಜೆಂಡರ್‌, ಬೈಸೆಕ್ಷುವಲ್, ಇಂಟರ್‌ಸೆಕ್ಷುವಲ್‌ ಮುಂತಾದ ಪ್ರಕೃತಿ ಸಹಜ ಲೈಂಗಿಕತೆಯ ಜೀವವೆಂದು ತಿಳಿದ ಮೇಲೆ ಅವರಿಗೆ ನೀಡಬೇಕಾದ ಪ್ರೀತಿ-ಅಕ್ಕರೆ, ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯಗಳ ಬಗ್ಗೆ, ಮುಖ್ಯವಾಗಿ ಮಗುವಿನ ಗೊಂದಲ, ತೊಳಲಾಟಗಳಿಗೆ, ಭಯಕ್ಕೆ ಧೈರ್ಯವಾಗುವ ಬಗ್ಗೆ ತಾಯಿ ಪ್ರೀತಿಯಲ್ಲಿ ಸರಣಿ ಲೇಖನಗಳನ್ನು ಬರೆಯುತ್ತಾರೆ ರುಕ್ಮಿಣಿ ಎಸ್.ನಾಯರ್

“ನಮ್ಮ ಪ್ರೈಡ್” ಎಂದರೆ ನಮ್ಮ ಹೆಮ್ಮೆ, ನಮ್ಮ ಆತ್ಮಗೌರವ

2024 ರ ನವಂಬರ್24, ಭಾನುವಾರದಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದ ಆವರಣದಿಂದ ಸಾವಿರಾರು ಲೈಂಗಿಕ ಅಲ್ಪಸಂಖ್ಯಾತರು ಕುಣಿಯುತ್ತಾ, ಹಾಡುತ್ತಾ ಮೆರವಣಿಗೆ ಹೊರಟಿದ್ದರು.

ಈ ಮೆರವಣಿಗೆಯನ್ನು ಬೆಂಗಳೂರಿನ “ಸಿಎಸ್‌ಎಮ್‌ಆರ್” (Coalition for Sex Workers and Sexuality Minority Rights) ಎನ್ನುವ ಸರ್ಕಾರೇತರ ಸಂಸ್ಥೆಯೊಂದು ಆಯೋಜಿಸಿತ್ತು. “LGBTQIA+” ….ನ ಸಮುದಾಯದ ಸಾವಿರಾರು ಜನ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಮುದಾಯವನ್ನು ಬೆಂಬಲಿಸುವ ಇತರರೂ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಿಎಸ್‌ಎಮ್‌ಆರ್ ಸಂಸ್ಥೆಯು ನೀಡಿದ ಬ್ಯಾನರ್, ಪ್ರಕಟಣಾ ಪತ್ರ ಹಾಗೂ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ನಡೆದರು.  ಪ್ರತಿಯೊಬ್ಬರಲ್ಲೂ ಶಿಸ್ತು, ಬದ್ಧತೆ ಮನೆಮಾಡಿತ್ತು. ತಮ್ಮ ಮನಸ್ಸಿಗೆ ಹಿಡಿಸಿದ, ತಮ್ಮ ಇಷ್ಟದ ಉಡುಗೆ ತೊಡುಗೆಗಳನ್ನು ಯಾವುದೇ ಅಳುಕಿಲ್ಲದೆ ತೊಟ್ಟಿದ್ದರು. ಎಲ್ಲರೂ ಸುಂದರವಾಗಿ ಹಾಗೂ ಆಕರ್ಷಕವಾಗಿ ಕಾಣುತ್ತಿದ್ದರು. ತಾವು ಯಾವುದೋ ಒಂದು ಹೊಸ ಲೋಕದಲ್ಲಿ ವಿಹರಿಸುತ್ತಿದ್ದಂತೆ ಸಂಭ್ರಮಿಸಿದರು.

ಇಲ್ಲಿ ಯಾರೂ ಒಬ್ಬರನ್ನೊಬ್ಬರು ಅವಹೇಳನ ಮಾಡುತ್ತಿರಲಿಲ್ಲ ಹಾಗೂ ಕೆಟ್ಟ ದೃಷ್ಟಿಯಿಂದ ನೋಡುತ್ತಿರಲಿಲ್ಲ. ಅಲ್ಲಿ ಬಂದಿದ್ದ ಅಷ್ಟೂ ಜನರೂ ಇತರರನ್ನು ಗೌರವಿಸುತ್ತಿದ್ದರು. ತಮ್ಮ ಲೈಂಗಿಕತೆಯ ಅಭಿವ್ಯಕ್ತಿಯ  ಬಗ್ಗೆ ಯಾರಿಗೂ ಯಾವುದೇ ಹಿಂಜರಿಕೆ ಇರಲಿಲ್ಲ. ತಮ್ಮ ಸ್ನೇಹಿತರಗಳ ಜೊತೆ ಹಾಗೂ ಇತರರ ಜೊತೆ ಸಭ್ಯತೆಯಿಂದ ನಡೆದುಕೊಳ್ಳುತ್ತಿದ್ದರು. ಎಲ್ಲರೂ ನಿರ್ಭೆಡೆಯಿಂದ ಹಾಗೂ ನಿರ್ಭೀತಿಯಿಂದ ಸಂತೋಷವಾಗಿದ್ದರು. ವಾದ್ಯಘೋಷಗಳ ಜೊತೆ ಹೆಜ್ಜೆ ಹಾಕುತ್ತಾ ಕುಣಿಯುತ್ತ ತಮ್ಮ ಪ್ರೈಡ್ ಮೆರವಣಿಗೆಯ ಬಗ್ಗೆ ಹೆಮ್ಮೆಯಿಂದ ತಲೆಯೆತ್ತಿ ನಡೆಯುತ್ತಿದ್ದರು. ಕಂಠೀರವ ಕ್ರೀಡಾಂಗಣದಿಂದ ಸಹಸ್ರಾರು ಜನರು ಸುಮಾರು ಎರಡು ಕಿಲೋಮೀಟರ್ಗಳಷ್ಟು ದೂರ ಕಾಲ್ನಡಿಗೆಯಲ್ಲೇ ಕ್ರಮಿಸಿದರು. ಪರಸ್ಪರ ಖುಷಿಯಿಂದ ಮಾತನಾಡುತ್ತಾ, ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ರಸ್ತೆಯ ಸುತ್ತಮುತ್ತಲಿನ ಜನರಿಗೆ, ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರರಿಗೆ ಯಾವುದೇ ಅಡೆತಡೆಗಳನ್ನು ಮಾಡದೆ ಶಿಸ್ತು ಬದ್ಧವಾಗಿ ನಡೆದುಕೊಂಡರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ರಾಜ್ಯದ ಪೊಲೀಸ್ ಪಡೆ ಇವರಿಗೆ ರಕ್ಷಣೆ ನೀಡಿತು. ಈ ಮೆರವಣಿಗೆಯಲ್ಲಿ ದೇಶದ ಹಲವು ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಲೈಂಗಿಕ ಅಲ್ಪಸಂಖ್ಯಾತರು ಪಾಲ್ಗೊಂಡಿದ್ದರು. ಇಲ್ಲಿ ಮೊದಲು ಗಮನಿಸಬೇಕಾದ ಅಂಶವೆಂದರೆ ತಾವು ಒಂಟಿಯಲ್ಲ, ತಮ್ಮಂತೆ ಈ ಸೃಷ್ಟಿಯಲ್ಲಿ, ಈ ಲೋಕದಲ್ಲಿ ಹಲವರು ಇದ್ದಾರೆ ಎನ್ನುವ ಅರಿವು ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಲ್ಲೂ ಮೂಡಿತ್ತು. ಹಾಗಾಗಿ ಎಲ್ಲರ ಮುಖದಲ್ಲೂ ಅಂಜಿಕೆ, ಹೆದರಿಕೆಯ ಬದಲು ಮಂದಹಾಸ ಮೂಡಿತ್ತು. ಕೆಲವರಂತೂ ತುಂಬಾ ಭಾವುಕರಾದರು. ಮನಬಿಚ್ಚಿ ನಕ್ಕರು ಪರಸ್ಪರ ಹಸ್ತಲಾಘವವನ್ನು ಕೊಡುತ್ತಾ ಹೆಮ್ಮೆಯಿಂದ ಒಬ್ಬರ ಬೆನ್ನು ಇನ್ನೊಬ್ಬರು ತಟ್ಟಿದರು. ಮೆರವಣಿಗೆಯು ರಸ್ತೆಯಲ್ಲಿ ಸಾಗುತ್ತಿದ್ದಾಗ ಅಲ್ಲಲ್ಲಿ ರಸ್ತೆ ದಾಟುವುದಿದ್ದರೂ ಕೂಡ ಯಾವುದೇ ತೊಂದರೆಗಳನ್ನು ಕೊಡದೇ ಸಂಸ್ಥೆಯ ಸ್ವಯಂಸೇವಕರುಗಳು ಎಲ್ಲರನ್ನೂ ಮುನ್ನಡೆಸುತ್ತಿದ್ದರು.

ಈ ಮೆರವಣಿಗೆಯು “ಶ್ರೀ ಪುಟ್ಟಣ್ಣ ಚೆಟ್ಟಿ ಪುರಭವನದ” ವರೆಗೆ ಕೊನೆಗೊಂಡಿತು. ಈ ಸಮುದಾಯಕ್ಕೆ ಸಂಬಂಧಪಟ್ಟ ಸದಸ್ಯರುಗಳು ಪುರಭವನದ ಮುಂದಿನ ಮೆಟ್ಟಿಲುಗಳ ಮೇಲೆ ಕುಳಿತು ತಮ್ಮ ಸಮುದಾಯದ ಧ್ವಜಗಳನ್ನು ಹಿಡಿದು ಕೆಲವು ನಿಮಿಷಗಳ ಕಾಲ  ಘೋಷಣೆಗಳನ್ನು ಕೂಗುತ್ತಾ  ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಿತು. ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡವರೆಲ್ಲರೂ ರವೀಂದ್ರ ಕಲಾಕ್ಷೇತ್ರದ ಆವರಣದ “ಸಂಸ ಬಯಲು ರಂಗ ಮಂದಿರ”ದಲ್ಲಿ ಸೇರಿದರು. ಸಂಸ ಬಯಲು ರಂಗಮಂದಿರದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಂಸ ಬಯಲು ರಂಗ ಮಂದಿರದಲ್ಲಿ “ಸಿಎಸ್‌ಎಮ್‌ಆರ್” ಸಂಸ್ಥೆಯ ಸಿಬ್ಬಂದಿಗಳು ತಮ್ಮ ಸಂಸ್ಥೆ ಪ್ರಾರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ನಡೆದ ಬೆಳವಣಿಗೆಗಳ ಬಗ್ಗೆ ಮಾತನಾಡಿದರು.

ಬೆಂಗಳೂರು ನಮ್ಮ ಪ್ರೈಡ್ ಮೆರವಣಿಗೆಯು 2008 ರಲ್ಲಿ ಪ್ರಾರಂಭವಾಯಿತು. 16 ವರ್ಷಗಳಿಂದ ಪ್ರತಿ ವರ್ಷದ ಜೂನ್ ತಿಂಗಳನ್ನು ಪ್ರೈಡ್ ತಿಂಗಳಾಗಿ ಪರಿಗಣಿಸಲಾಗಿದೆ. ಆದರೆ ನವೆಂಬರ್ ತಿಂಗಳ ಕೊನೆಯ ವಾರದಂದು ಫ್ರೈಡ್ ಮೆರವಣಿಗೆಯನ್ನು ನಡೆಸಲಾಗುತ್ತಿದೆ.

“ಸಿಎಸ್‌ಎಮ್‌ಆರ್” ಸಂಸ್ಥೆಯ ಪ್ರಮುಖ ಉದ್ದೇಶವೇನೆಂದರೆ, ಭಾಷೆ, ಸಾಮಾಜಿಕ ಆರ್ಥಿಕ ಹಿನ್ನೆಲೆ, ಲಿಂಗತ್ವ ಗುರುತಿಸುವಿಕೆಯ ದೃಷ್ಟಿಕೋನಗಳನ್ನು ಲೆಕ್ಕಿಸದೆ ಎಲ್ಲಾ ಧ್ವನಿಗಳನ್ನು ಗೌರವಿಸುವುದು.  LGBTQIA+ ಸಮುದಾಯದ ಎಲ್ಲಾ ಸದಸ್ಯರನ್ನು ಬೆಂಬಲಿಸುವ ಏಕೀಕೃತ ಪ್ರೈಡ್ ನಡೆಸುವುದು ಇವರ ಬದ್ಧತೆಯಾಗಿದೆ. ಪ್ರತಿಯೊಂದು ಪ್ರಶ್ನೆಗಳನ್ನು, ಧ್ವನಿಗಳನ್ನು ಚಿಂತನಾಶೀಲವಾಗಿ ಪರಿಗಣಿಸಲು, ಪರಸ್ಪರ ಗೌರವಿಸಲು, ತಿಳುವಳಿಕೆ ಮೂಡಿಸಲು ಒಗ್ಗಟ್ಟಿನ ಮೇಲೆ ನಿರ್ಮಿಸಲಾದ ಚಳುವಳಿಯ ಕಡೆಗೆ ತಮ್ಮೊಂದಿಗೆ ಕೆಲಸ ಮಾಡಲು ಈ ಸಮುದಾಯವು ಕೇಳಿಕೊಳ್ಳುತ್ತದೆ.

ಅಂದಿನ ಸಂಜೆ ಸಿ ಎಸ್ ಎಂ ಆರ್ ಸಂಸ್ಥೆಯು ಆಯೋಜಿಸಿದ್ದ ಹೆಮ್ಮೆಯ ಸಂಜೆ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾಮನಬಿಲ್ಲಿನಂತೆ ಒಬ್ಬೊಬ್ಬರ ಪ್ರತಿಭೆಯೂ ಅಷ್ಟೇ ಕಲರ್‌ಫುಲ್!

“LGBTQIA+ ” ಸಮುದಾಯದವರಿಂದ ಮೊದಲಿಗೆ ಒಂದು ಸೊಗಸಾದ ಶಿವನ ನೃತ್ಯದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಿಕೆಯಲ್ಲಿ ನಡೆದ ತಾಯಿ-ಮಗನ ನಡುವಿನ ಸಂಬಂಧದ ಗಾಢತೆಯನ್ನು ತೋರಿಸುವ ನೃತ್ಯವಂತೂ ಅಲ್ಲಿ ನೆರೆದಿದ್ದ ವೀಕ್ಷಕರ ಕಣ್ಣಂಚಲ್ಲಿ ಕಂಬನಿ ತರಿಸಿತು. ಕೆಲವರಂತೂ ಭಾವಕತೆಯಿಂದ ಗದ್ಗದಿತರಾದರು. ಈ ನೃತ್ಯ ರೂಪಕವು ತಾಯಿ ಹಾಗೂ “LGBTQIA+”  ಸಂತಾನದ ಮಾನಸಿಕ ತೊಳಲಾಟವನ್ನು ಪ್ರತಿಬಿಂಬಿಸಿ, ಅಂತ್ಯದಲ್ಲಿ ತಾಯಿ ಹಾಗೂ ಸಂತಾನದ ಸಮ್ಮಿಲನವನ್ನು ಮನಮುಟ್ಟುವಂತೆ ಅಭಿನಯಿಸಿದ್ದು ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣುಗಳನ್ನೂ ಒದ್ದೆ ಮಾಡಿತ್ತು. ನಂತರ ಹಲವಾರು ಕಲಾಕಾರರು ತಮ್ಮ ಪ್ರತಿಭೆಗಳ ಅನಾವರಣ ಮಾಡಿದರು. ಪ್ರತಿಯೊಂದು ನೃತ್ಯ ರೂಪಕವೂ ಒಂದು ಸಂದೇಶವನ್ನು ಒಳಗೊಂಡಿತ್ತು. ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದ ಸಮುದಾಯದ ಜನರು ಯಾವುದೇ ಅಂಜಿಕೆ ಇಲ್ಲದೆ ಹಾಡಿನ ತಾಳಕ್ಕೆ ತಕ್ಕಂತೆ ಮನ ಬಿಚ್ಚಿ ಸಂತೋಷದಿಂದ ಕುಣಿದು ಕುಪ್ಪಳಿಸಿದರು. ತಮ್ಮ ಮನದಾಳದಲ್ಲಿ ಅಡಗಿಸಿಟ್ಟಿದ್ದ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಖುಷಿಯಿಂದ ಕೇಕೆ ಹಾಕಿದರು. ಮನಸ್ಪೂರ್ತಿಯಾಗಿ ಒಬ್ಬರನ್ನು ಒಬ್ಬರು ಅಭಿನಂದಿಸಿದರು. “ತಮ್ಮ ಜನ್ಮ ಒಂದು ಶಾಪವಲ್ಲ. ನಮಗೂ ಎಲ್ಲರಂತೆ ಬದುಕುವ ಆಸೆ ಹಾಗೂ ಹಕ್ಕು ಇದೆ” ಎಂಬ ನಂಬಿಕೆಯನ್ನು ಮತ್ತೆ ಮತ್ತೆ ಗಟ್ಟಿಗೊಳಿಸಿಕೊಂಡರು.

ಈ ಪ್ರಕೃತಿಯಲ್ಲಿ ಜೀವಿಸುವಂತಹ ಎಲ್ಲಾ ಜೀವಸಂಕುಲಗಳೂ ಸ್ವಾಭಿಮಾನದಿಂದ ಗೌರವಪೂರ್ವಕವಾಗಿ ಬದುಕುವ ಹಕ್ಕು ಇದೆ . ಮಾನವರಲ್ಲಿ ಮಾನವತೆ ಇರಬೇಕು. ಎಲ್ಲರನ್ನೂ ಗೌರವಪೂರ್ವಕವಾಗಿ ಕಾಣಬೇಕು ಹಾಗೂ ಬೇಧಭಾವಗಳು ಸಲ್ಲದು. ಎಲ್ಲರೂ ಒಂದೇ ಎನ್ನುವ ಮನೋಭಾವವಿರಬೇಕು. ಮಾನವ ಹಕ್ಕುಗಳ ಮೇಲೆ ಬೆಳಕು ಚೆಲ್ಲಿ, ಎಲ್ಲರಿಗೂ ಸಮಾಧಾನಕರವಾದ ಜೀವನ ನಡೆಸುವ ಹಕ್ಕು ಇದೆ ಎನ್ನುವ ಅರಿವನ್ನು ಎಲ್ಲರಲ್ಲೂ ಮೂಡಿಸಲು ಪ್ರತೀ ವರ್ಷವೂ ಈ ಹೆಮ್ಮೆಯ ಮೆರವಣಿಗೆಯನ್ನು ಏರ್ಪಡಿಸಿ ಆಚರಿಸಿಕೊಂಡು ಬರಲಾಗಿದೆ.

“LGBTQIA+” ಎಂದರೆ ಏನು?

ಪ್ರತಿಯೊಂದು ಜೀವಿಗೂ ತನ್ನದಾದ ರೀತಿಯಲ್ಲಿ ಬದುಕುವ ಹಕ್ಕನ್ನು ಈ ಪ್ರಕೃತಿಯು ನೀಡಿದೆ. ಇಲ್ಲದಿದ್ದರೆ ವೈವಿಧ್ಯಮಯ ವಿಭಿನ್ನ ಜೀವರಾಶಿಗಳು, ಕ್ರಿಮಿಕೀಟಗಳು, ಕಣ್ಣಿಗೆ ಕಾಣದಂತಹ ಸೂಕ್ಷ್ಮಾಣು ಜೀವಿಗಳು, ಸಸ್ಯರಾಶಿಗಳು, ಜಲಚರಗಳು, ಬಾನಾಡಿಗಳು, ಇತ್ತ ಪ್ರಾಣಿಯೂ ಪಕ್ಷಿಯೂ ಅಲ್ಲದ ಅನೇಕ ಜೀವಿಗಳು, ಭೂಚರ, ಜಲಚರ, ಎರಡೂ ಅಲ್ಲದ ಉಭಯವಾಸಿಗಳು ಹೀಗೆ ಅನೇಕ ಜೀವಸಂಕುಲಗಳು ಈ ಪ್ರಕೃತಿಯಲ್ಲಿ ವೈವಿಧ್ಯಮಯವಾಗಿ ಜೀವಿಸುತ್ತಿರಲಿಲ್ಲ. ಪ್ರಕೃತಿಯೇ ಕೊಟ್ಟ ಜೀವವನ್ನು ಹಾಗೂ ಆ ಜೀವಿ ಬದುಕುತ್ತಿರುವ ರೀತಿಯು ಪ್ರಕೃತಿಗೆ ಇಷ್ಟವಾಗದಿದ್ದಲ್ಲಿ ಅದುವೇ ಅದನ್ನು ನಾಶಪಡಿಸುವತ್ತ ಹೆಜ್ಜೆ ಇಡುತ್ತಿತ್ತು. ನಾವು ಮಾನವರು ಸಂಘ ಜೀವಿಗಳು, ಸಾಮಾಜ ಜೀವಿಗಳು. ಇಡೀ ಭೂಮಂಡಲದಲ್ಲಿ ಇನ್ನಿತರ ಜೀವಿಗಳ ಜೊತೆಗೆ ಈ ಭೂಮಿಯನ್ನು ಹಂಚಿಕೊಂಡು ನಮ್ಮ ಪ್ರಭುತ್ವವನ್ನು ಈ ಭೂಮಿಯ ಮೇಲೆ ಸ್ಥಾಪಿಸಲು ಹವಣಿಸುವ ಏಕೈಕ ಜೀವಿ ಎಂದರೆ ಅದು ಮಾನವ ಮಾತ್ರ.

ಪ್ರತಿಯೊಂದು  ಕಡೆಯೂ ತನ್ನ ಹಕ್ಕು ಸ್ವಾಮ್ಯತೆಯನ್ನು ಸಾಧಿಸುತ್ತಾ, ತನ್ನಿಷ್ಟದಂತೆಯೇ ಇತರ ಜೀವಿಯು ಜೀವಿಸಬೇಕೆಂದು ಬಯಸುವುದು ಮಾನವ ಮಾತ್ರ. ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ಬಳಸುತ್ತಾ ಬದುಕುತ್ತಿರುವುದು ಕೂಡ ಮಾನವನೇ. ಪ್ರಕೃತಿಯಲ್ಲಿ ಜೀವಿಸುವ ಇತರ ಜೀವರಾಶಿಗಳಲ್ಲಿ ಐಕ್ಯತೆಯನ್ನು ಕಾಣುತ್ತೇವೆ. ಪ್ರಾಣಿ ಪಕ್ಷಿಗಳಲ್ಲೂ ವಿಭಿನ್ನ ರೀತಿಯ ಲೈಂಗಿಕತೆಯನ್ನು ಕಾಣುತ್ತೇವೆ. ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಮಾತ್ರ ಇತರೆ ಜೀವಿಗಳನ್ನು ಕೊಲ್ಲುತ್ತದೆ. ಸಸ್ಯಗಳನ್ನು ತಿನ್ನುತ್ತವೆ. ಹಾಗೆಯೇ ತಮ್ಮ ಸಂತಾನಗಳು ಹೇಗೇ ಇದ್ದರೂ ಏನೇ ಆಗಿದ್ದರೂ, ಅವುಗಳನ್ನು ಒಂದು ಹಂತದ ವರೆಗೆ ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲಹಿ ಆರೈಕೆ ಮಾಡಿ, ಅವು ಸ್ವತಃ ತನ್ನ ಆಹಾರ, ವಸತಿ, ಹಾಗೂ ಜೀವನವನ್ನು ರೂಪಿಸಿಕೊಳ್ಳಲು ಸದೃಢರಾದ ಕೂಡಲೇ ಅವುಗಳನ್ನು ಸ್ವತಂತ್ರವಾಗಿ ಬದುಕಲು ಬಿಡುತ್ತವೆ.

ನಾವು ಮಾನವರು ಕೂಡಾ ನಮ್ಮಿಷ್ಟದಂತೆ ಸಂತಾನಗಳನ್ನು ಪಡೆಯುತ್ತೇವೆ. ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲುಹುತ್ತೇವೆ.

ಆಹಾರ, ಉಡುಗೆ ತೊಡುಗೆ ವಸತಿ ವಿಧ್ಯಾಭ್ಯಾಸ, ಐಷಾರಾಮವಾಗಿ ಬದುಕಲು ಬೇಕಾದ ಸಕಲ ಸೌಲಭ್ಯಗಳನ್ನೂ ಮಾಡಿಕೊಡುತ್ತೇವೆ. ಒಳ್ಳೆಯ ಗುಣ ನಡತೆಗಳನ್ನು ಕೂಡಾ ಕಲಿಸುತ್ತೇವೆ. ಆದರೆ ಸಣ್ಣವಯಸ್ಸಿನಿಂದಲೇ ಅವರಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಹಲವರು ಸೋತು ಹೋಗುತ್ತೇವೆ. ನಮ್ಮ ಸಂತಾನಗಳು ಹದಿಹರೆಯಕ್ಕೆ ಬಂದಾಗ ಅವರಲ್ಲಿ ಉಂಟಾಗುವ ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಬದಲಾವಣೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುವುದರಲ್ಲಿ ಸೋತು ಹೋಗುತ್ತೇವೆ. ಸಹಜವೆನಿಸುವ ಅರಿವನ್ನು ಮಾತ್ರ ಕೊಡುತ್ತೇವೆ. ಅಸಹಜವೆನಿಸುವ ಎಷ್ಟೋ ಸಂಗತಿಗಳು ನಮಗೂ ತಿಳಿದಿರುವುದಿಲ್ಲ ಹಾಗಾಗಿ ನಮ್ಮ ಸಂತಾನಗಳಿಗೆ ಅರಿವನ್ನು ಮೂಡಿಸುವುದು ನಮ್ಮಿಂದ ಸಾಧ್ಯವಾಗುವುದಿಲ್ಲ.

ಹದಿಹರೆಯಕ್ಕೆ ಬಂದಾಗ ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಪ್ರಪಂಚದ ಪ್ರತೀ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಕೌತುಕವಿರುತ್ತದೆ. ತನ್ನ ದೇಹದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಅರಿತುಕೊಳ್ಳುವ ಕುತೂಹಲವಿರುತ್ತದೆ. ಭಾವನಾತ್ಮಕವಾಗಿ ಗೊಂದಲಕ್ಕೆ ಒಳಗಾಗುತ್ತಾರೆ. ಹಾಗೂ ತಮ್ಮದೇ ಓರಗೆಯ ಮಕ್ಕಳೊಂದಿಗೆ ತಮ್ಮನ್ನು ಹೋಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮ್ಮ ಗುಣದಲ್ಲಿ, ರೂಪದಲ್ಲಿ, ದೇಹಾಕೃತಿಯಲ್ಲಿ, ಭಾವನೆಗಳಲ್ಲಿ ವ್ಯತ್ಯಾಸಗಳನ್ನು ಕಂಡರೆ ಆ ಮಕ್ಕಳು ಕುಗ್ಗಿ ಹೋಗುತ್ತಾರೆ. ತಮಗೇನೋ ಆಗಿದೆ. ತಾವು ಎಲ್ಲರಂತೆ ಇಲ್ಲ ಎಂಬ ಕೊರಗು ಅವರನ್ನು ಕಾಡುತ್ತದೆ. ಇತ್ತ ತನ್ನ ಓರಗೆಯವರ ಜೊತೆ ಅಥವಾ ತಮ್ಮ ಪೋಷಕರ ಜೊತೆ ಈ ವಿಷಯಗಳನ್ನು ಹಂಚಿಕೊಳ್ಳಲು ಹೆದರಿ ಹಿಂಜರಿಯುತ್ತಾರೆ. ಇವೆಲ್ಲವೂ ತಮ್ಮ ದೇಹದಲ್ಲಿ ಉಂಟಾಗುವ ರಸದೂತಗಳ ಬದಲಾವಣೆಗಳಿಂದ ಎನ್ನುವುದು ಅವರಿಗೆ ತಿಳಿಯದಾಗುತ್ತದೆ.

ಈ ಪ್ರಾಯದಲ್ಲಿ ಇದ್ದಕ್ಕಿದ್ದಂತೆ ಆಗುವ ಬದಲಾವಣೆಗಳಿಂದ ಮಕ್ಕಳು ಕಂಗೆಡುತ್ತಾರೆ. ತಮ್ಮ ದೇಹಾಕೃತಿಗೆ ಹೊಂದದಂತಹ ಭಾವನೆಗಳು ತಮ್ಮಲ್ಲಿ ಉತ್ಪತ್ತಿಯಾಗುತ್ತಿರುವುದನ್ನು ಅರಿತ ಮಕ್ಕಳು ಗೊಂದಲದಿಂದ ಯೋಚನೆಗೆ ಒಳಗಾಗುತ್ತಾರೆ. ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಉಂಟಾಗುವ ಬದಲಾವಣೆಗಳನ್ನು ಅರಿಯದೇ ಪೋಷಕರಲ್ಲಿ ಹಾಗೂ ಸ್ನೇಹಿತ/  ಸ್ನೇಹಿತೆಯರಲ್ಲಿ ಹೇಳಿಕೊಂಡು ತಮ್ಮ ಸಂದೇಹವನ್ನು ಪರಿಹರಿಸಿಕೊಳ್ಳಲು ಸಂಕೋಚಪಡುತ್ತಾರೆ. ಎಲ್ಲರಂತೆ ನಾನು ಅಲ್ಲ. ನಾನೇಕೆ ವಿಭಿನ್ನವಾಗಿದ್ದೇನೆ ಎನ್ನುವ ಪ್ರಶ್ನೆ ಮನಸ್ಸಲ್ಲಿ ಕಾಡತೊಡಗಿದಾಗ ಆದಷ್ಟೂ ಒಂಟಿಯಾಗಿರಲು ಪ್ರಯತ್ನಿಸುತ್ತಾರೆ. ಯಾರಲ್ಲೂ ಹೆಚ್ಚು ಮಾತನಾಡದೇ ಯಾರೊಂದಿಗೂ ಬೆರೆಯದೇ ಆದಷ್ಟೂ ಮೌನವಾಗಿ ಇರಲು ಪ್ರಯತ್ನಿಸುತ್ತಾರೆ.

ಮುಂದುವರಿಯುತ್ತದೆ…

ಲೇಖನ: ರುಕ್ಮಿಣಿ ಎಸ್.ನಾಯರ್

ನಿಮ್ಮ Gayಳೆಯನ ಕಥೆ!-1 ಗ್ರಿಂಡರ್‌ ದೋಖಾ…!
LGBTQ+ ಸಮುದಾಯಗಳ ಕತೆಗಳನ್ನು ಪೀಪಲ್‌ ನಿಮ್ಮ ಮುಂದೆ ಇಡುತ್ತಿದೆ. ಡೇಟಿಂಗ್‌, ನಿರುದ್ಯೋಗ, ಮನೆಯಿಂದ ತಿರಸ್ಕಾರ, ಪ್ರೇಮ-ಕಾಮ, ಮಾನಸಿಕ ಸಮಸ್ಯೆಗಳು.. ಹೇಗೆ ಸಾಲು ಸಾಲು ಸಮಸ್ಯೆಗಳಿಂದ ನಲುಗಿ ಹೋಗುತ್ತಿರುವ ಗೇ ಸಮುದಾಯ ಅತ್ಯಂತ ಹೆಚ್ಚು ಸೃಜನಶೀಲ ಜನರನ್ನು ಹೊಂದಿದೆ. ಹೆಟರೋಸೆಕ್ಸುವಲ್‌ ಸಮುದಾಯಗಳು ಕಂಡಿರದ ಕಥೆಗಳನ್ನು 'ನಿಮ್ಮ Gayಳೆಯನ ಕಥೆ!' ಎಂಬ ಅಂಕಣದ ಮೂಲಕ ನಿಮ್ಮ ಮುಂದಿಡುತ್ತೇವೆ.

ಲೇಖನ: ಸೂರಜ್‌ ಹೊನಗಂಗಪ್ಪ

2020 ರ ಮಾರ್ಚ್‌ ತಿಂಗಳು,

ಜನರೆಲ್ಲಾ ಕೊರೋನ ಸಾಂಕ್ರಮಿಕ ರೋಗಕ್ಕೆ ಹೆದರಿ ಬೆಂಗಳೂರು ಬಿಡುತ್ತಿದ್ದರೆ, ನಾನು ಬೆಂಗಳೂರಿಗೆ ಬಂದು ಅತ್ತಿಗುಪ್ಪೆಯಲ್ಲೊಂದು ಬಾಡಿಗೆ ಮನೆಯಲ್ಲಿ ಕೂತಿದ್ದೆ.

ಒಂದು ವರ್ಷಗಳ ಕಾಲ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿ, ಕೊನೆಗೆ ಬೆಂಗಳೂರಿಗೆ ಬಂದು ಮುಂದಿನ ಬದುಕನ್ನು ಕಟ್ಟಿಕೊಳ್ಳುವುದೆಂದರೆ ಸಾಗರದಲ್ಲಿ ಈಜಲು ಇಳಿದಂತೆ. ಬೆಂಗಳೂರಿಗೆ ಬರಲು ಉದ್ಯೋಗವೊಂದೇ ಕಾರಣವಾಗಿರಲಿಲ್ಲ. ಬೆಳೆದ ಊರಿನಲ್ಲಿ ʼನನ್ನಂತದ್ದೇʼ ಸ್ನೇಹಿತರನ್ನು ಹುಡುಕಲು ಆಗದಿದ್ದಾಗ ಬೆಂಗಳೂರು ನನ್ನಲ್ಲಿ ಕನಸುಗಳನ್ನು ಬಿತ್ತಿತ್ತು. ಅಲ್ಲಿಗೆ ಹೋದರೆ ʼನನ್ನಂತದ್ದೇʼ ಸ್ನೇಹಿತರನ್ನು ಮಾಡಿಕೊಳ್ಳಬಹುದು, ಸುತ್ತಾಡಬಹುದು, ಸಿನೇಮಾ ನೋಡಬಹುದು, ಓದಬಹುದು ಎಂಬೆಲ್ಲಾ ಯೋಚನೆಗಳು.

ಅದೊಂದು ಭ್ರಮೆಯಷ್ಟೇ!

ಬೆಳೆದ ಊರಿನಲ್ಲಿ ‘ಗೇ’ ಎಂದು ತಮ್ಮನ್ನು ಗುರುತಿಸಿಕೊಂಡವರನ್ನು ಹುಡುಕಿ ಸ್ನೇಹಿತರ ಬಳಗ ಕಟ್ಟಿಕೊಳ್ಳಲು ಸಾಧ್ಯವಿರಲಿಲ್ಲ. ನನ್ನಂತ ಸಾವಿರಾರು ಮಂದಿ ಬೆಂಗಳೂರಿನಲ್ಲಿದ್ದಾರೆ, ಅವರ ಪರಿಚಯವಾಗುವುದು ತುಂಬಾ ಸುಲಭ ಎಂದೆನ್ನಿಸಿತ್ತು.

ಆಗ ಗ್ರಿಂಡರ್‌ ಎಂಬ ಡೇಟಿಂಗ್‌ ಆಪ್‌ ತುಂಬಾ ಬಳಕೆಯಲ್ಲಿತ್ತು. ಸ್ನೇಹಿತರಾಗಲೋ, ಸೆಕ್ಸ್‌ ಮಾಡಲೋ, ಕೊನೆಗೆ ದುಡಿಮೆ ಇಲ್ಲದೆ ನಾಲ್ಕು ಕಾಸು ಮಾಡಲು ಗೇಗಳ ದಂಡೇ ಅಲ್ಲಿರುತ್ತಿತ್ತು.

ಮೊದಲ ಲಾಕ್‌ ಡೌನ್‌ ನಂತರ ಇಡೀ ಬೆಂಗಳೂರು ಖಾಲಿ ಖಾಲಿಯಾಗಿತ್ತು. ರಸ್ತೆಗಳಲ್ಲಿ ನಡೆದು ಹೋಗುವವರನ್ನೂ ಬಿಡದೆ, ಸುಮ್ಮನೆ ಸುತ್ತಾಡುವವರ ಕುಂಡೆಗೆ ಪೊಲೀಸರು ನಿರ್ದಯವಾಗಿ ಭಾರಿಸುತ್ತಿದ್ದರು. ನಾನು ವಾಸವಿದ್ದ ಅಪಾರ್ಟ್‌ಮೆಂಟಿನ ಕೆಳಗೆ ಬೈಕುಗಳಲ್ಲಿ ಬರುವವರನ್ನು ಪೊಲೀಸರು ಬೆಂಡೆತ್ತುತ್ತಿದ್ದರು.

ಒಂದು ಕಡೆ ಸೋಂಕು ಬರಬಹುದು ಎಂಬ ಭಯವಾದರೆ, ಇನ್ನೊಂದು ಕಡೆ ಸ್ಟ್ರಿಕ್ಟ್‌ ನಿಯಮಕ್ಕೆ ಹೆದರಿ ಮನೆಯಿಂದ ಹೊರಬರುತ್ತಿರಲಿಲ್ಲ.

ಹೀಗೆ ಹತ್ತಿರತ್ತಿರ ಒಂದು ತಿಂಗಳೇ ಕಳೆಯಿತು. ಒಂಟಿಯಾಗಿ ಮನೆಯಲ್ಲಿ ದಿನಗಳನ್ನು ದೂಡುತ್ತಿದ್ದೆ. ಮಾತನಾಡಲು ಯಾರೂ ಇಲ್ಲ. ಇಡೀ ಅಪಾರ್ಟ್‌ಮೆಂಟಿನಲ್ಲಿ ಇದ್ದಿದ್ದು ನನ್ನನ್ನು ಬಿಟ್ಟರೆ, ಕೆಳಗಿರುವ ನಂದಿನಿ ಹಾಲಿನಂಗಡಿಯವನು.

ಒಂಟಿತನ ನೆಮ್ಮದಿಯನ್ನು ಕಿತ್ತು ತಿನ್ನುತ್ತಿತ್ತು. ಫೋನಿನಲ್ಲಿ ಮಾತನಾಡಲೂ ಯಾರೂ ಇಲ್ಲ. ಕೊರೋನ ಬಹುತೇಕರ ಮಾನಸಿಕ ಅರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿತ್ತು. ಗ್ರಿಂಡರ್‌ ಓಪನ್‌ ಮಾಡಿದರೆ ನೂರಾರು ಜನ. ಕೆಲವರು ಬೆತ್ತಲೆ ಫೋಟೋ ಕಳಿಸುವವರು, ತುಂಬಾ ಜನಕ್ಕೆ ಮುಖವೇ ಇರಲಿಲ್ಲ. ಯಾವುದೋ ಪಾರ್ನ್‌ ಸ್ಟಾರ್‌, ಸಿನೇಮಾ ನಟರ ಫೋಟೋಗಳನ್ನು ಡಿಪಿ ಹಾಕಿಕೊಂಡಿದ್ದಾರೆ.

ಲಾಕ್‌ಡೌನ್‌ ಕೊಂಚ ಸಡಿಲ ಮಾಡಿದ್ದರು.

ನಾನು ಗ್ರಿಂಡರ್‌ನಲ್ಲಿ ಒಬ್ಬನೊಂದಿಗೆ ಚಾಟ್‌ ಮಾಡುತ್ತಿದ್ದೆ. ಆತ ತನ್ನ ಫೋಟೋವನ್ನು ಕಳುಹಿಸಿದ್ದ, ನಾನೂ ನನ್ನ ಮುಖವನ್ನು ತೋರಿಸಿದ್ದೆ. ಆತನ ಮನೆ ಅಲ್ಲೇ ಹತ್ತಿರದಲ್ಲೇ ಎಲ್ಲೋ.

ಅದೂ ಇದೂ ಅಂತ ಸೆಕ್ಸ್‌ಗೆ ಹೊರತಾದ ಚಾಟ್‌. ಒಂದು ದಿನ ಸಂಜೆ ಕಾಫಿ ಕುಡಿಯಲು ಮನೆಗೆ ಕರೆದೆ. ಯಾರೋ ಒಬ್ಬರ ಜೊತೆಗೆ ಮಾತನಾಡುವುದೆಂದರೆ ಆ ಸ್ಥಿತಿಯಲ್ಲಿ ಅದೇನೋ ಸಂಭ್ರಮ.

“ಸಂಜೆ ಬಾ, ಕಾಫಿ ಕುಡಿಯುತ್ತಾ ಮಾತನಾಡುವ!” ಅಂತ ಮನೆಗೆ ಕರೆದೆ.

ನಾನು ಕಳುಹಿಸಿದ ಲೊಕೇಷನ್‌ ಬಳಸಿ ಅಪಾರ್ಟ್‌ಮೆಂಟಿನ ಕೆಳಗೆ ಬಂದವನನ್ನು ಮೇಲಕ್ಕೆ ಕರೆದೆ. ಕಾಫಿ ಕುಡಿಯುತ್ತಾ ಕಾಲೇಜು, ಕೊರೋನ, ಮನೆ ಹೀಗೆಲ್ಲಾ ಎನೇನೋ ಹದಿನೈದು ನಿಮಿಷ ಮಾತನಾಡಿದೆವು. ನಾನು ಕಾಫಿ ಕಪ್ ತೊಳೆಯಲು ಅಡುಗೆ ಕೋಣೆಗೆ ಹೋಗಿ, ಮತ್ತೆ ಆತನ ಪಕ್ಕ ಬಂದು ಕುಳಿತುಕೊಂಡೆ.

ಆತ ನಿಧಾನವಾಗಿ ನನ್ನ ಭುಜಗಳಿಗೆ ಕೈ ಹಾಕಿ ಸವರ ತೊಡಗಿದೆ. ನನ್ನ ಅಂಗಿಗಳನ್ನು ಕಳಚಿ ನನ್ನ ತೊಡೆಯ ಮೇಲೆ ಕುಳಿತುಕೊಂಡ.

ಇದ್ದಕ್ಕಿದ್ದಂತೆ ಮನೆಯ ಬಾಗಿಲನ್ನು ತೆರೆದು ಇಬ್ಬರು ಹುಡುಗರು ಒಳಬಂದರು. ನನ್ನ ಅಂಗಿಯನ್ನು ಕಸಿದುಕೊಂಡು ವೀಡಿಯೋ ಮಾಡತೊಡಗಿದರು. ಒಬ್ಬ ನನ್ನ ಕೆನ್ನೆಗೆ ಪಟಾರನೆ ಭಾರಿಸಿದ.

ಭಯದಿಂದ ಹೊಟ್ಟೆ ಕಿವುಚಿದಂತಾದರೂ ಧೈರ್ಯ ತಪ್ಪುವಂತಿಲ್ಲ.

“ಕೆಲಸ ಆಯ್ತಲ್ಲಾ, ಕಾಸು ಕೊಡು..ಐದು ಸಾವಿರ!” ಎಂದು ಒಬ್ಬ ಕೇಳಿದ.

“ಅಯ್ಯೋ, ನಾನು ಕಾಸು ಕೊಡುತ್ತೇನೆ ಎಂದು ಇವನನ್ನು ಕರೆದಿಲ್ಲ,” ಎಂದು ಹೇಳಿದರೂ ಕೇಳದೆ, “ಹಣ ಕೊಡದಿದ್ದರೆ ನಾವು ನಿನ್ನ ಈ ವಿಡಿಯೋವನ್ನು ಟ್ರಾನ್ಸ್‌ಜೆಂಡರ್‌ಗಳ ಗ್ರೂಪುಗಳಲ್ಲಿ ಹಾಕುತ್ತೇವೆ!” ಎಂದು ಧಮ್ಕಿ ಹಾಕಿದ. ಇನ್ನೊಬ್ಬ ಟ್ರಾನ್ಸ್‌ಜೆಂಡರ್‌ಗಳಂತೆಯೇ ಚಟಚಟ ಎಂದು ಚಪ್ಪಾಳೆ ಹೊಡೆದ.

ನಾನು ಸಮಧಾನದಿಂದ, “ಕುಳಿತುಕೊಳ್ಳಿ, ,ಮಾತನಾಡುವ. ಹಣ ಕೊಡುತ್ತೇನೆ,” ಎಂದೆ.

ಅದರಲ್ಲೊಬ್ಬ ಮನೆಗೆ ಬಂದಿದ್ದ ಹುಡುಗ ಹುಡುಗಿಯಂತೆ ಬಟ್ಟೆ ಧರಿಸಿರುವ ಫೋಟೋವನ್ನು ತೋರಿಸಿ ಅವರೆಲ್ಲರೂ ಪಕ್ಕಾ ಟ್ರಾನ್ಸ್‌ಜೆಂಡರ್ ಸಮುದಾಯದವರು ಎಂದು ನಂಬಿಸಲು ಪ್ರಯತ್ನಿಸುತ್ತಿದ್ದ.

ಎಸ್, ಅವರ್ಯಾರೂ ಟ್ರಾನ್ಸ್‌ಜೆಂಡರ್‌ಗಳಲ್ಲ. ಮನೆಗೆ ಬಂದ ಹುಡುಗ ನನ್ನಂತೆ ಗೇ ಇದ್ದಿರಲೂ ಬಹುದು. ಮೂವರೂ ಗ್ರಿಂಡರ್‌ ಬಳಸಿಕೊಂಡು ಅಸಹಾಯಕರನ್ನು ದರೋಡೆ ಮಾಡುವವರು.

“ನನ್ನಲ್ಲಿ ಹಣ ಇಲ್ಲ, ನಾನು ನನ್ನ ಫ್ರೆಂಡನ್ನು ಕೇಳಿ ಕೊಡ್ತೇನೆ. ಪ್ಲೀಸ್‌ ವಿಡಿಯೋ ಡಿಲಿಟ್ ಮಾಡಿ!” ಎಂದು ಕೇಳಿಕೊಂಡೆ.

“ಮೊದಲು ಕಾಸು ಕೊಡು, ಆಮೇಲೆ ಡಿಲಿಟ್‌ ಮಾಡ್ತೇನೆ.”

ಹೇಗೋ ಏನೋ ಐದು ಸಾವಿರವನ್ನು ಮೂರು ಸಾವಿರಕ್ಕೆ ಇಳಿಸಿದೆ. ಅಪಾರ್ಟ್‌ಮೆಂಟಿನ ಕೆಳಗೆ ಬಂದು ಹಿರಿಯ ಸ್ನೇಹಿತರೊಬ್ಬರಿಗೆ ಫೋನ್‌ ಮಾಡಿ ಮೂರು ಸಾವಿರ ತೆಗೆದುಕೊಂಡು, ಅದನ್ನು ಮೂವರಲ್ಲೊಬ್ಬನ ಗೂಗಲ್‌ಪೇಗೆ ಹಾಕಿದೆ.

ಮೂವರೂ ಒಂದೇ ಸ್ಕೂಟರ್‌ ಹತ್ತಿದರು. ಮನೆಗೆ ಕಾಫಿ ಕುಡಿಯಲು ಬಂದ ಹುಡುಗ ಇಳಿದು ಬಂದು, ಪೆಚ್ಚು ಮೋರೆ ಹಾಕಿ “ಸ್ಸಾರಿ…!” ಎಂದ.

ಆತನ ಬೆನ್ನನ್ನು ಮೆದುವಾಗಿ ತಟ್ಟಿ, “ಇಟ್ಸ್‌ ಓಕೆ!” ಎಂದೆ.

ಸುಪ್ರೀಂ ಕೋರ್ಟ್‌ ತೀರ್ಪು ಸಮಲಿಂಗಿಗಳನ್ನು ಅಪ್ರಾಮಾಣಿಕವಾಗಿ ಬದುಕುವಂತೆ ಮಾಡುತ್ತದೆ: ಮರುಪರಿಶೀಲನಾ ಅರ್ಜಿ
ಬೆಂಗಳೂರು,ಅಕ್ಟೋಬರ್.‌02: ಸಮಲೈಂಗಿಕ ವಿವಾಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಕ್ವೀಯರ್ ಸಮುದಾಯದ ಮೂಲಭೂತ ಹಕ್ಕುಗಳ “ಉದೇಶಪೂರ್ವಕ ಹತ್ತಿಕ್ಕುವಿಕೆ”ಯನ್ನು ತೋರಿಸುತ್ತದೆ ಎಂದು ಸುಪ್ರೀಂ ಕೋರ್ಟಿಇನ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಬುಧವಾರ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.

“ಬಹುಮತದ ತೀರ್ಪು ಪರಿಣಾಮಕಾರಿಯಾಗಿ ಕ್ವೀಯರ್ ಸಮುದಾಯದ ಯುವ ಭಾರತೀಯರನ್ನು ಒಂಟಿಗಳಾಗಿ (closet) ಉಳಿಯಲು ಮತ್ತು ಅವರು ನಿಜವಾದ ಕೌಟುಂಬಿಕ ಸಂತೋಷವನ್ನು ಬಯಸಿದರೂ, ಅಪ್ರಾಮಾಣಿಕ ಜೀವನವನ್ನು ನಡೆಸುವಂತೆ ಮಾಡುತ್ತದೆ” ಎಂದು ಪರಿಶೀಲನಾ ಅರ್ಜಿಯಲ್ಲಿ ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಅವರ ನೇತೃತ್ವದ ಎಸ್.ಕೆ. ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ಒಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ  ಅಕ್ಟೋಬರ್ 17ರಂದು ನೀಡಿದ ತೀರ್ಪಿನಲ್ಲಿ ಮದುವೆಯಾಗುವ ಹಕ್ಕು ಮೂಲಭೂತ ಹಕ್ಕಲ್ಲ ಮತ್ತು ಸಮಲೈಂಗಿಕ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವುದು ವಿಶೇಷ ವಿವಾಹ ಕಾಯಿದೆಯ (Special Marriage Act – SMA)  ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿತ್ತು. ಸಮಲೈಂಗಿಕ ವಿವಾಹವನ್ನು ಅಂಗೀಕರಿಸುವ ವಿಶೇಷ ಹಕ್ಕು ಇರುವುದು ಸಂಸತ್ತಿಗೆ ಎಂದು ತಿಳಿಸಿತ್ತು.

3:2 ಅಭಿಪ್ರಾಯದ ಈ ತೀರ್ಪಿನಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಕ್ವೀರ್ ಸಮುದಾಯದ ಹಕ್ಕನ್ನು ಕೂಡ ಪೀಠವು ನಿರಾಕರಿಸಿತ್ತು. ನ್ಯಾಯಮೂರ್ತಿಗಳಾದ ಭಟ್, ಕೊಹ್ಲಿ ಮತ್ತು ನರಸಿಂಹ ಅವರು ಈ ಅಭಿಪ್ರಾಯಕ್ಕೆ ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಮೂಲ ತೀರ್ಪನ್ನು ನೀಡಿದ ಅದೇ ಪೀಠ ಚೇಂಬರ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಕೂಡ ಆಲಿಸಲಿದೆ. ನ್ಯಾಯಮೂರ್ತಿ ಭಟ್ ಅವರು ನಿವೃತ್ತರಾಗಿರುವ ಕಾರಣ ಸಿಜೆಐ ಪೀಠಕ್ಕೆ ಹೊಸ ಸದಸ್ಯರೊಬ್ಬರನ್ನು ನೇಮಿಸಬೇಕಾಗುತ್ತದೆ. ಒಂದು ವೇಳೆ ಹೊಸ ಸದಸ್ಯರು ಮರುಪರಿಶೀಲನಾ ಅರ್ಜಿಯನ್ನು ಆಲಿಸಲು ಒಪ್ಪಿಕೊಂಡರೆ, ಮುಂದೆ ಮುಕ್ತ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ತೆಗೆದುಕೊಳ್ಳಲಾಗುವುದು.

ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಅವರು ಶಾಸನಬದ್ಧ ಕಾನೂನಾಗಿರುವ ಎಸ್‌ಎಂಎ ಅಡಿಯಲ್ಲಿ ಸಮಲೈಂಗಿಕ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನ್ಯಾಯಾಲಯಕ್ಕೆ ಏಕೆ ಅಧಿಕಾರ ನೀಡಿಲ್ಲ ಎಂಬುದರ ಕುರಿತು ವಿವರವಾದ ಅಭಿಪ್ರಾಯಗಳನ್ನು ಬರೆದಿದ್ದರೂ ಸಹ, ಮರುಪರಿಶೀಲನಾ ಅರ್ಜಿಯು ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯವನ್ನು ವ್ಯಾಪಕವಾಗಿ ಉಲ್ಲೇಖಿಸುತ್ತದೆ.

ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸ ನ್ಯಾಯಾಲಯದ್ದು, ಸರ್ಕಾರದ್ದಲ್ಲ!

ಕ್ವೀಯರ್ ಸಮುದಾಯದ ನಾಲ್ವರು ಸಲ್ಲಿಸಿರುವ ಈ ಅರ್ಜಿಯ ಪ್ರಕಾರ, ಬಹುಮತದ ತೀರ್ಪು ತಪ್ಪಾಗಿದೆ ಏಕೆಂದರೆ ತಾರತಮ್ಯ ಮಾಡುವ ಮೂಲಕ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಒಪ್ಪಿಕೊಂಡರೂ, ತಾರತಮ್ಯವನ್ನು ನಿಲ್ಲಿಸುವಲ್ಲಿ ವಿಫಲವಾಗಿದೆ.

ಬಹುಮತದ ಅಭಿಪ್ರಾಯವು ಸಮಾನತೆ ಮತ್ತು ತಾರತಮ್ಯದ ವಿರುದ್ಧದ ಹಕ್ಕುಗಳನ್ನು ಮೂಲಭೂತ ಹಕ್ಕುಗಳೆಂದು ಹೇಳಿದ್ದರೂ ಸಹ, ತಾರತಮ್ಯವನ್ನು ತಡೆಯುವ ತಾರ್ಕಿಕ ಹೆಜ್ಜೆಯನ್ನು ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದರ ಬದಲಾಗಿ ತಾರತಮ್ಯದ ಪರಿಶೀಲನೆ ನಡೆಸಿ, ಶಿಫಾರಸ್ಸುಗಳನ್ನು ಮಾಡಲು “ಪ್ರತಿವಾದಿಯನ್ನು (ಸರ್ಕಾರ)”ಗೆ ಹೇಳಲಾಗಿದೆ.

“ಇದು ಸ್ಪಷ್ಟವಾದ ದೋಷವಾಗಿದ್ದು, ಗೌರವಾನ್ವಿತ ನ್ಯಾಯಾಲಯ ಸಂವಿಧಾನ ತನಗೆ ವಹಿಸಿದ ಕರ್ತವ್ಯಗಳಿಂದ ಹಿಂದೆ ಸರಿದಿದೆ. ನಾಗರಿಕರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವ ಮೊದಲ ಕೆಲಸ ನ್ಯಾಯಾಲಯದ್ದೇ ಹೊರತು, ಸರ್ಕಾರವನ್ನಲ್ಲ,” ಎಂದು ಈ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಸಲಿಂಗ ವಿವಾಹ | ಅಕ್ಟೋಬರ್ 17ರ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ

ಮರುಪರಿಶೀಲನಾ ಅರ್ಜಿಯಲ್ಲಿ ತೀರ್ಪಿನಲ್ಲಿ ʼಮದುವೆʼಯನ್ನು ಅರ್ಥೈಸುವಲ್ಲಿ ಆಗಿರುವ “ಸ್ವಯಂ-ವಿರೋಧಾಭಾಸʼವನ್ನೂ ಉಲ್ಲೇಖಿಸಲಾಗಿದೆ. ವಿಶೇಷ ವಿವಾಹ ಕಾಯ್ದೆ ಮದುವೆಗೆ ಕಾನೂನಾತ್ಮಕ ಸ್ಥಾನಮಾನವನ್ನು ನೀಡುತ್ತದೆ ಎಂದು ತೀರ್ಪು ಒಪ್ಪಿಕೊಂಡರೂ, ಅದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ನೀಡುತ್ತದೆ ಎಂದು ಅದು ಹೇಳಿದೆ.

ಅರ್ಜಿಯ ಪ್ರಕಾರ, ಮದುವೆಯ ನಿಯಮಗಳನ್ನು ನಿರ್ದೇಶಿಸುವುದು ಸ್ಟೇಟಿನದ್ದಾದರೂ, ಮದುವೆಯ ಸ್ಥಿತಿಯ ಬಗ್ಗೆ ಇನ್ನೂ ರಾಜ್ಯಗಳು ಏನನ್ನೂ ನೀಡಿಲ್ಲ ಎಂಬುದನ್ನು ತೀರ್ಪು ಒಪ್ಪಿಕೊಂಡಿದೆ.

ಬಹುಪಾಲು ತೀರ್ಪು ಮದುವೆಯನ್ನು ಜಾರಿಗೊಳಿಸಬಹುದಾದ ಸಾಮಾಜಿಕ ಒಪ್ಪಂದವಾಗಿದೆ ಎಂದು ಕಡೆಗಣಿಸುತ್ತದೆ. ಅವನು/ಅವಳು/ಅವರ ನಂಬಿಕೆ ಏನೇ ಆಗಿದ್ದರೂ ಅಂತಹ ಒಪ್ಪಂದದ ಹಕ್ಕನ್ನು ಹೊಂದುವ ಸಾಮರ್ಥ್ಯ ವಯಸ್ಕರಿಗಿದೆ.

“ಮದುವೆ ಎಂದರೆ ಏನೆಂದು ಯಾವುದೇ ಗುಂಪಿನ ಜನರು ಇನ್ನೊಂದು ಗುಂಪಿಗೆ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಯಾವುದೇ ಒಪ್ಪಂದ, ಅಥವಾ ಜೈಲು ಶಿಕ್ಷೆಯಂತಹ ಬಲವಂತದ ಕ್ರಮದಿಂದ ಮದುವೆಯಾಗಲು ಬಯಸುವ ವಯಸ್ಕರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ, ”ಎಂದು ಪರಿಶೀಲನಾ ಅರ್ಜಿಯಲ್ಲಿ ವಾದಿಸಲಾಗಿದೆ.

ಅರ್ಜಿಯಲ್ಲಿ ಇರುವ ಇನ್ನೊಂದು ಅಂಶವೆಂದರೆ, 1948 ರಲ್ಲಿ ಭಾರತದ ಅಭಿಪ್ರಾಯಗಳನ್ನೂ ಒಳಗೊಂಡು ರಚನೆಯಾದ  ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (Universal Declaration of Human Rights) ನಿರ್ಲಕ್ಷ್ಯ.

ವಿಶ್ವಸಂಸ್ಥೆಯು ಅಂಗೀಕರಿಸಿದ ಈ ಘೋಷಣೆ ಪ್ರಕಾರ ಪೂರ್ಣ ವಯಸ್ಸಿನ ಪುರುಷರು ಮತ್ತು ಮಹಿಳೆಯರು, ಜನಾಂಗ, ರಾಷ್ಟ್ರೀಯತೆ ಅಥವಾ ಧರ್ಮದ ಯಾವುದೇ ಮಿತಿಯಿಲ್ಲದೆ, ಮದುವೆಯಾಗಲು ಮತ್ತು ಕುಟುಂಬವನ್ನು ಹೊಂದುವ ಹಕ್ಕನ್ನು ಹೊಂದಿದ್ದಾರೆ. ಈ ಘೋಷಣೆಯು ಭಾರತೀಯ ಸಂವಿಧಾನದ ಭಾಗ III ರಲ್ಲಿ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.

ಮರುಪರಿಶೀಲನಾ ಅರ್ಜಿಯ ಪ್ರಕಾರ, ” ಸುಪ್ರೀಂ ಕೋರ್ಟ್ ಭಾರತದ ಸಂವಿಧಾನವು ಮದುವೆಯಾಗಲು, ಕುಟುಂಬವನ್ನು ಕಂಡುಕೊಳ್ಳಲು ಯಾವುದೇ ಮೂಲಭೂತ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂಬ ತಣ್ಣನೆಯ ಘೋಷಣೆಯನ್ನು ಮಾಡುವಾಗ” ಮಾಡಲು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ನಿರ್ಲಕ್ಷಿಸಿದೆ.

ಇದಲ್ಲದೆ, ಬಹುಮತದ ತೀರ್ಪಿನಲ್ಲಿ ಅರ್ಜಿದಾರರ ಬೇಡಿಕೆಯನ್ನು ಓಡಾಡುವ ಹಕ್ಕನ್ನು ಜಾರಿಗೊಳಿಸಲು “ರಸ್ತೆ ನಿರ್ಮಾಣ (construction of road )” ಮಾಡುವ ಮನವಿಗೆ ಮತ್ತು ಕವಿಗೆ ತನ್ನ ಕವಿತೆಗಳನ್ನು ಪ್ರಕಟಿಸಲು ಪ್ಲಾಟ್‌ಫಾರ್ಮ್‌ (platform) ರಚಿಸುವ “ತಪ್ಪಾದ ಹೋಲಿಕೆಯನ್ನು ಮಾಡಲಾಗಿದೆ” ಎಂದು ಮನವಿ ಸೇರಿಸಲಾಗಿದೆ. ಈ ಎರಡೂ ಪದಗಳನ್ನು ಶಾಸಕಾಂಗದ ಫ್ರೇಮ್‌ವರ್ಕ್‌ ಇಲ್ಲದೆ ಸಮಲೈಂಗಿಕ ವಿವಾಹವನ್ನು ಹಕ್ಕನ್ನಾಗಿ ಮಾಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಹೇಳುವಾಗ ಈ ಎರಡು ಪದಗಳನ್ನು ನ್ಯಾಯಮೂರ್ತಿ ಭಟ್‌ ಉಲ್ಲೇಖಿಸಿದ್ದರು.

ನನ್ನ ಸಂಗಾತಿಯನ್ನು ಮದುವೆಯಾಗಲು ಬಯಸಿದ್ದೆ, ಆದರೆ… ಸಮಲಿಂಗ ವಿವಾಹದ ಬಗ್ಗೆ ಸು.ಕೋ ತೀರ್ಪಿಗೆ ದ್ಯುತಿ ಚಂದ್‌ ಅಸಮಧಾನ
ಭಾರತದ ಸರ್ವೋಚ್ಚ ನ್ಯಾಯಾಲಯವು ಅಕ್ಟೋಬರ್‌,18 ಮಂಗಳವಾರ ಸಮಲಿಂಗಿಗಳ ವಿವಾಹದ ಕುರಿತು ತನ್ನ ತೀರ್ಪನ್ನು ಪ್ರಕಟಿಸಿದ್ದು, ಕ್ವೀಯರ್ ಜೋಡಿಗಳ ವಿವಾಹಗಳನ್ನು ಕಾನೂನುಬದ್ಧಗೊಳಿಸಲು ಅಥವಾ ಮಕ್ಕಳನ್ನು ದತ್ತು ಪಡೆಯುವ ಹಕ್ಕನ್ನು ನೀಡಲು ನಿರಾಕರಿಸಿದೆ

ಅನೇಕ ಕ್ವೀಯರ್ ಜೋಡಿಗೆ ಸುಪ್ರೀಂ ಕೋರ್ಟಿನ  ತೀರ್ಪಿಗಾಗಿ ಎದುರು ನೋಡುತ್ತಿದ್ದರು. ಇವರಲ್ಲಿ ಭಾರತದ ಅಥ್ಲೀಟ್ ದ್ಯುತಿ ಚಂದ್ ಕೂಡ ಒಬ್ಬರು. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ದ್ಯುತಿಯವರಿಗೆ ನಿರಾಶೆಯಾಗಿದೆ.

“ನಾನು ನನ್ನ ಬಾಳ ಸಂಗಾತಿ ಮೊನಾಲಿಸಾಳನ್ನು ಮದುವೆಯಾಗಲು ಬಯಸಿದ್ದೆ. ಆದರೆ ಉಚ್ಚ ನ್ಯಾಯಾಲಯದ ತೀರ್ಪು ಎಲ್ಲಾ ಯೋಜನೆಗಳನ್ನೂ ತಡೆದಿದೆ. ನಾನು ಐದು ವರ್ಷಗಳಿಂದ ಮೊನಾಲಿಸಾ ಜೊತೆ ವಾಸಿಸುತ್ತಿದ್ದೇನೆ. ನಾವು ಒಟ್ಟಿಗೆ ಸಂತೋಷವಾಗಿದ್ದೇವೆ ಮತ್ತು ವಯಸ್ಕರಾದ ನಾವು ನಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕುಗಳನ್ನು ಹೊಂದಿದ್ದೇವೆ. ನಾವು ಸಮಲಿಂಗಿ ವಿವಾಹಗಳನ್ನು ಅನುಮತಿಸುವ ಕಾನೂನನ್ನು ಸಂಸತ್ತು ರೂಪಿಸುತ್ತದೆ ಎಂದು ಭಾವಿಸುತ್ತೇವೆ” ಎಂದು ದ್ಯುತಿ ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮೊನಾಲಿಸಾ ಜೊತೆಗಿನ ಸಂಬಂಧದ ವಿರುದ್ಧ ಇರುವ ದ್ಯುತಿಯವರ ಹೆತ್ತವರು ಈ ತೀರ್ಪನ್ನು ಸ್ವಾಗತಿಸಿದ್ದಾರೆ.

ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇರುವಂತೆಯೇ ತಮ್ಮ ಇಷ್ಟದ ವ್ಯಕ್ತಿಯನ್ನು ಮದುವೆಯಾಗುವ ಹಕ್ಕು ಇರಬೇಕು ಎಂದು ದ್ಯುತಿ ಹೇಳಿದ್ದಾರೆ. ಹಲವಾರು ಇತರ ದೇಶಗಳು ಈಗಾಗಲೇ ಸಮಲಿಂಗಿ ವಿವಾಹಗಳನ್ನು ಹೇಗೆ ಕಾನೂನುಬದ್ಧಗೊಳಿಸಿವೆ ಎಂಬುದನ್ನು ಅವರು ವಿವರಿಸಿದ್ದಾರೆ.

“ನಾವು ನಮ್ಮೊಂದಿಗೆ ಸಂಬಂಧ ಮಾಡಿಕೊಳ್ಳಲು ಯಾರನ್ನೂ ಒತ್ತಾಯಿಸುವುದಿಲ್ಲ. ನಾವು  ನಮ್ಮ ಆಯ್ಕೆಯಂತೆ ಅದನ್ನು ಮಾಡುತ್ತೇವೆ. ನಮ್ಮ ಆಯ್ಕೆಯ ಪ್ರಕಾರ ಜೀವನವನ್ನು ನಡೆಸಲು ನಮಗೂ ಅವಕಾಶ. ನಾವೇಕೆ (ಗೇ, ಲೆಸ್ಬಿಯನ್..) ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯವಿಲ್ಲ? ಹಲವಾರು ದೇಶಗಳು ಸಮಲಿಂಗೀಯ ವಿವಾಹಕ್ಕೆ ಮಾನ್ಯತೆ ನೀಡಿವೆ. ಭಾರತದಲ್ಲಿ ಕಾನೂನುಬದ್ಧಗೊಳಿಸಲು ಏನು ಸಮಸ್ಯೆ?” ಎಂದು ಪ್ರಶ್ನಿಸಿದ್ದಾರೆ.

“ಕ್ವೀಯರ್‌ ಸಮುದಾಯ ಮತದಾನದ ಹಕ್ಕನ್ನು ಹೊಂದಿರುವಂತೆ, ಅವರ ಇಷ್ಟದ ವ್ಯಕ್ತಿಯನ್ನು ಮದುವೆಯಾಗಲು ಅವರಿಗೆ ಅವಕಾಶ ನೀಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

“ವಿಲಕ್ಷಣ ಜನರ ಹಕ್ಕುಗಳು ಮತ್ತು ವಿಲಕ್ಷಣ ದಂಪತಿಗಳಿಗೆ ಸುರಕ್ಷಿತ ಮನೆಗಳನ್ನು ರಚಿಸುವ ನಿರ್ಧಾರದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸುಪ್ರೀಂ ಕೋರ್ಟ್ ನಿರ್ದೇಶನವನ್ನು ನಾನು ಸ್ವಾಗತಿಸುತ್ತೇನೆ” ಎಂದು ಅವರು ಹೇಳಿದರು.

ಸಮಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ!- ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಏನಿದೆ?
ಬೆಂಗಳೂರು,ಅಕ್ಟೋಬರ್‌.17: ಇಂದು ಸುಪ್ರೀಂ ಕೋರ್ಟ್ ಭಾರತದಲ್ಲಿ ಕ್ವೀರ್ (ಸಮಲಿಂಗಿ) ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಆದಾಗ್ಯೂ, ಪೀಠದ ಎಲ್ಲಾ ನ್ಯಾಯಾಧೀಶರು ಕ್ವೀರ್  ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಈ ಸಂಬಂಧವನ್ನು “ಮದುವೆ” ಎಂದು ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಏಪ್ರಿಲ್ 18, 2023 ರಂದು ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತ್ತು. ಚರ್ಚೆಯ ನಂತರ, ಪೀಠವು ಮೇ 11, 2023 ರಂದು ತೀರ್ಪನ್ನು  ಕಾದಿರಿಸಿತ್ತು.

ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ನಾಲ್ಕು ತೀರ್ಪುಗಳನ್ನು ಪ್ರಕಟಿಸಿತು- ಕ್ರಮವಾಗಿ ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಎಸ್‌ಕೆ ಕೌಲ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ತೀರ್ಪನ್ನು ಬರೆದಿದ್ದಾರೆ.

ಕೆಲವು ಅಂಶಗಳಲ್ಲಿ ಈ ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯಗಳಿವೆ.

ಕೇಸ್‌ ಮಾಹಿತಿ: Supriyo v. Union of India | Writ Petition (Civil) No. 1011 of 2022 + connected matters

ನ್ಯಾಯಾದೀಶರ ಆಭಿಪ್ರಾಯಗಳೇನು?

ಸಿಜೆಐ ಡಿವೈ ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ, “ಸಾಂಸ್ಥಿಕ ಮಿತಿಗಳ” ಕಾರಣದಿಂದಾಗಿ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳನ್ನು ನ್ಯಾಯಾಲಯವು ರದ್ದುಗೊಳಿಸಲು ಅಥವಾ ರೀಡ್‌ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅದು ಸಂಸತ್ತು ಮತ್ತು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ. ಆದಾಗ್ಯೂ, ಕ್ವಿಯರ್  ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ನಿರ್ಧರಿಸಲು ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸಬೇಕು ಎಂದು ಒಕ್ಕೂಟದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ದಾಖಲಿಸಿದ್ದಾರೆ. ತಮ್ಮ ತೀರ್ಪಿನಲ್ಲಿ, ಸಿಜೆಐ ಭಿನ್ನಲಿಂಗೀಯ ಸಂಬಂಧದಲ್ಲಿರುವ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ಉದಾ.ಟ್ರಾನ್ಸ್‌ಜೆಂಡರ್‌ ಹೆಣ್ಣು- ಪುರುಷ) ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಕ್ವೀರ್ ದಂಪತಿಗಳು ಸೇರಿದಂತೆ ಅವಿವಾಹಿತ ದಂಪತಿಗಳು ಜಂಟಿಯಾಗಿ ಮಗುವನ್ನು ದತ್ತು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ, ಸಿಜೆಐ ಸಿಎಆರ್‌ಎ ನಿಯಮಾವಳಿಗಳ 5(3) ನಿಬಂಧನೆಯು (Regulation 5(3) of the CARA Regulations), ಅವಿವಾಹಿತರು ಮತ್ತು LGBTQ+ ಜೋಡಿಗಳು ದತ್ತು ತೆಗೆದುಕೊಳ್ಳುವುದನ್ನು ನಿಷೇಧಿಸುವುದು, ಸಂವಿಧಾನದ 15 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ನ್ಯಾಯಮೂರ್ತಿ ಎಸ್‌ಕೆ ಕೌಲ್ ಅವರು ಸಿಜೆಐ ಅವರ ತೀರ್ಪಿಗೆ ಸಮ್ಮತಿಸಿ, ಕ್ವೀರ್ ಸಂಬಂಧಗಳನ್ನು “ಸಂಗಾತಿಗಾಗಿ ಮತ್ತು ಪ್ರೀತಿಗಾಗಿ ಒಂದಾಗಿರುವುದು – Are to be recognised as a union to give partnership and love” ಎಂದು ಪರಿಗಣಿಸುತ್ತಾ, ವಿಶೇಷ ವಿವಾಹ ಕಾಯಿದೆಯು (Special marriage act) ಸಂವಿಧಾನದ ಆರ್ಟಿಕಲ್ 14 ಅನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಸಂಬಂಧವನ್ನು ವಿಶೇಷ ವಿವಾಹ ಕಾಯಿದೆಯ ಅಡಿಯಲ್ಲಿ ತರಲು ನ್ಯಾಯಾಲಕ್ಕೆ ಮಿತಿಗಳಿವೆ ಎಂದು ನ್ಯಾಯಮೂರ್ತಿ ಕೌಲ್ ಕೂಡ ಅಭಿಪ್ರಾಯ ತಿಳಿಸಿದ್ದಾರೆ. ಸಂಸತ್ತಿನ ಅಭಿಪ್ರಾಯವೂ ಇದೇ ಆಗಿದೆ.

ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು ಸಿಜೆಐ ತೀರ್ಪನ್ನು ವಿರೋಧಿಸಿ, ವಿವಾಹದ ಕಾನೂನಾತ್ಮಕ ಅರ್ಹತೆಯು ಜಾರಿಯಲ್ಲಿ ಇರುವ ಕಾನೂನಿನ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಸಾಲಿಸಿಟರ್ ಜನರಲ್ ಅವರು

ನ್ಯಾಯಾಲಯಕ್ಕೆ ನೀಡಿದ ಹೇಳಿಕೆಗೆ ಅನುಗುಣವಾಗಿ, ಜಸ್ಟೀಸ್ ಭಟ್ ಕೂಡ ಒಕ್ಕೂಟವು LGBTQ+ ದಂಪತಿಗಳಿಗೆ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಲು ಉನ್ನತ ಅಧಿಕಾರದ ಸಮಿತಿಯನ್ನು ಸ್ಥಾಪಿಸಬೇಕು ಎಂದು ತೀರ್ಮಾನಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಕಾನೂನು  ರಚಿಸುವ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಕ್ವೀರ್ ಹಕ್ಕುಗಳಿಗೆ ಸಂಬಂಧಿಸಿದ ಹಿಂದಿನ ಪ್ರಕರಣಗಳಿಂದ ಪ್ರಸ್ತುತ ಪ್ರಕರಣವನ್ನು ಪ್ರತ್ಯೇಕಿಸಿದ ಅವರು, ನಾಗರಿಕರ ಹಕ್ಕನ್ನು ರಕ್ಷಿಸುವ ಸರ್ಕಾರದ ಕರ್ತವ್ಯದ ಆಧಾರದ ಮೇಲೆ ನ್ಯಾಯಾಲಯವು ಕ್ವಿಯರ್ ವ್ಯಕ್ತಿಗಳನ್ನು ಹಿಂಸಾಚಾರ ಅಥವಾ ಅಪರಾಧಿಗಳನ್ನಾಗಿ ಮಾಡುವುದರಿಂದ ರಕ್ಷಿಸಿದ ನಿದರ್ಶನಗಳಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಿತ್ತು ಎಂದು ಹೇಳಿದ್ದಾರೆ. ಆದರೂ, ಈ ಪ್ರಕರಣ ಆ ರೀತಿ ಇಲ್ಲ. ವಿವಾಹವು “ಸಾಮಾಜಿಕ ಸಂಸ್ಥೆ”ಯಾಗಿದೆ ಎಂದು ಅವರು ಪ್ರತಿಪಾದಿಸಿ “ಮದುವೆ ಒಂದು ಸಾಮಾಜಿಕ ಸಂಸ್ಥೆ (Social institute) ಎಂದು ಒಪ್ಪಿಕೊಂಡರೆ, ಅಂತಹ ಸಂಸ್ಥೆಯನ್ನು ರಚಿಸಲು ಬಯಸುವ ಸಮಾಜದ ಯಾವುದೇ ವರ್ಗವು ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಪರಿಹಾರವನ್ನು ಪಡೆಯಬಹುದೇ?” ಎಂದು ಅವರು ಹೇಳಿದ್ದಾರೆ.

ಜಸ್ಟಿಸ್ ಎಸ್ ರವೀಂದ್ರ ಭಟ್ ಅವರು ಕ್ವಿರ್ ದಂಪತಿಗಳಿಗೆ ನ್ಯಾಯಾಲಯವು ಕಾನೂನನ್ನು ರಚಿಸಲು ಸಾಧ್ಯವಿಲ್ಲ ಮತ್ತು ನೀತಿಗೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಅದನ್ನು ಶಾಸಕಾಂಗ ಮಾಡಬೇಕೆಂದು ಹೇಳಿದ್ದಾರೆ. ಆದರೂ, ಗೇ-ಲೆಸ್ಬಿಯನ್ ದಂಪತಿಗಳು ಸಂಬಂಧಗಳ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಪುನರುಚ್ಚರಿಸಿದರು. ನ್ಯಾಯಮೂರ್ತಿ ಭಟ್ ತಮ್ಮ ತೀರ್ಪಿನಲ್ಲಿ, “ಪ್ರತಿಯೊಬ್ಬ ಕ್ವೀಯರ್ ವ್ಯಕ್ತಿಗೂ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ. ಆದರೆ ಅಂತಹ ಸಂಬಂಧವನ್ನು ಕಡಿದುಕೊಳ್ಳುವ ಹಕ್ಕುಗಳನ್ನು ಗುರುತಿಸುವುದಲ್ಲಿ ಸರ್ಕಾರದ ಪಾತ್ರವಿರುವುದಿಲ್ಲ. ಈ ಅಂಶದಲ್ಲಿ ನಾವು ಸಿಜೆಐ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದೇವೆ,” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ, ವಿಶೇಷ ವಿವಾಹ ಕಾಯಿದೆಯ ಜೆಂಡರ್‌ ನ್ಯೂಟ್ರಲ್ ವ್ಯಾಖ್ಯಾನವು ಎಲ್ಲರಿಗೂ ಸಮಾನವಾಗಿರುವುದಿಲ್ಲ, ಮಹಿಳೆಯರು ಉದ್ದೇಶಪೂರ್ವಕವಲ್ಲದೆಯೂ  ದುರ್ಬಲತೆಗೆ ಒಡ್ಡಿಕೊಳ್ಳಬಹುದಾದ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ. ಕ್ವೀಯರ್ ಜೋಡಿಗೆ ಪಿಎಫ್, ಇಎಸ್‌ಐ, ಪಿಂಚಣಿ ಮುಂತಾದ ಪ್ರಯೋಜನಗಳ ನಿರಾಕರಣೆ ತಾರತಮ್ಯವಾಗಿದೆ ಎಂದು ಗುರುತಿಸಿದ ನ್ಯಾಯಮೂರ್ತಿ ಭಟ್, ಈ ಸಮಸ್ಯೆಗಳನ್ನು ಪರಿಹರಿಸುವುದು ಹಲವಾರು ಕಾನೂನುಗಳನ್ನು ಜಾರಿಗೊಳಿಸಬೇಕು ಮತ್ತು ಉನ್ನತ ಸಮಿತಿಯನ್ನು ರಚಿಸಬೇಕೆಂದು ಹೇಳಿದ್ದಾರೆ.

ಇದಲ್ಲದೇ, ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಮದುವೆಯಾಗಲು ತೃತೀಯಲಿಂಗಿಗಳಿಗೆ ಇರುವ ಹಕ್ಕುಗಳ ಬಗ್ಗೆ  ನ್ಯಾಯಮೂರ್ತಿ ಭಟ್ ಅವರು ಸಿಜೆಐ ಜೊತೆ ಒಪ್ಪಿಗೆ ಸೂಚಿಸಿದ್ದಾರೆ. ಅವರು ಕ್ವಿಯರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ಬಗ್ಗೆ ಸಿಜೆಐ ಜೊತೆಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. CARA ನಿಯಂತ್ರಣದ 5 (3) ನಿಯಮವನ್ನು ಅಸಂವಿಧಾನಿಕವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಸ್ಟಿಸ್ ಹಿಮಾ ಕೊಹ್ಲಿ ಅವರು ಜಸ್ಟೀಸ್ ಭಟ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಜಸ್ಟಿಸ್ ಭಟ್ ಅವರ ಮಾತಿಗೆ ಸಮ್ಮತಿಸಿದ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಮದುವೆಯಾಗಲು ಯಾವುದೇ ಅನರ್ಹ ಹಕ್ಕು ಇಲ್ಲ ಮತ್ತು ವಿವಾಹದ ಹಕ್ಕು ಶಾಸನಬದ್ಧ ಹಕ್ಕು, ಇಲ್ಲವೇ ಅದೊಂದು ಸಂಪ್ರದಾಯಿಕವಾಗಿ ಬಂದ ರಿವಾಜು ಎಂದು ಹೇಳಿದ್ದಾರೆ. CARA ನಿಯಮಗಳು ಮತ್ತು ಕ್ವಿರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ವಿಚಾರದಲ್ಲಿ ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯವನ್ನು ಅವರು ಒಪ್ಪಿಕೊಂಡಿದ್ದಾರೆ. CARA ನಿಯಮಾವಳಿಗಳನ್ನು ಅಸಾಂವಿಧಾನಿಕವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಪಿಂಚಣಿ, ಪಿಎಫ್, ಗ್ರಾಚ್ಯುಟಿ, ವಿಮೆ ಇತ್ಯಾದಿಗಳಿಂದ ಕ್ವೀಯರ್ ದಂಪತಿಗಳನ್ನು ಹೊರಗಿಡುವ ಶಾಸಕಾಂಗದ ಯೋಜನೆಗಳ ಪರಿಶೀಲನೆಯನ್ನು ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ನರಸಿಂಹ ಹೇಳಿದ್ದಾರೆ.

ಈ  ತೀರ್ಪಿನ ವಿಚಾರಣೆಯ ಬ್ಯಾಚ್ ಸಲಿಂಗ ದಂಪತಿಗಳು, ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು LGBTQIA+ ಕಾರ್ಯಕರ್ತರು ಸಲ್ಲಿಸಿದ ಇಪ್ಪತ್ತು ಅರ್ಜಿಗಳಿದ್ದವು. ಈ ಅರ್ಜಿಗಳು ಸಾಮೂಹಿಕವಾಗಿ ವಿಶೇಷ ವಿವಾಹ ಕಾಯಿದೆ 1954, ಹಿಂದೂ ವಿವಾಹ ಕಾಯಿದೆ 1955, ಮತ್ತು ವಿದೇಶಿ ವಿವಾಹ ಕಾಯಿದೆ 1969 ಗಳು ಮಾಡುವ ನಿಯಂತ್ರಣಗಳನ್ನು ಪ್ರಶ್ನಿಸಿವೆ. ನಿರ್ದಿಷ್ಟವಾಗಿ, ಈ ಶಾಸನಗಳು ಸದ್ಯ ಭಿನ್ನಲಿಂಗೀಯವಲ್ಲದ ವಿವಾಹಗಳನ್ನು ಪರಿಗಣಿಸುವುದಿಲ್ಲ. ಹೀಗಾಗಿ LGBTQIA+ ಸಮುದಾಯದ ವಿರುದ್ದದ ತಾರತಮ್ಯ ಎಂದೆಂದಿಗೂ ಇರುತ್ತದೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ, ಪೀಠವು ಸವಾಲನ್ನು ವಿಶೇಷ ವಿವಾಹ ಕಾಯ್ದೆಗೆ ಮಾತ್ರ ಸೀಮಿತಗೊಳಿಸುತ್ತದೆ ಮತ್ತು ವೈಯಕ್ತಿಕ ಕಾನೂನುಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.  ಹೀಗಾಗಿ, ಹಿಂದೂ ವಿವಾಹ ಕಾಯ್ದೆಗೆ ಸಂಬಂಧಿಸಿದ ಸವಾಲನ್ನು ಸ್ವೀಕರಿಸಲಿಲ್ಲ.

ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಈ ಸಂಬಂಧವನ್ನು “ಮದುವೆ” ಎಂದು ಕಾನೂನಾತ್ಮಕವಾಗಿ ಮಾನ್ಯ ಮಾಡದೆ ಸಮಲಿಂಗ ಮತ್ತು ಕ್ವಿಯರ್ ದಂಪತಿಗಳಿಗೆ ಕೆಲವು ಕಾನೂನು ಹಕ್ಕುಗಳನ್ನು ನೀಡಬಹುದೇ ಎಂಬುದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಸಲಿಂಗ ಮತ್ತು ಕ್ವೀಯರ್ ದಂಪತಿಗಳು ಸರ್ಕಾರದ ಯೋಜನೆಗಳನ್ನು ಮತ್ತು ಸಾಮಾಜಿಕ ಭದ್ರತೆಯನ್ನು‌, ಜಂಟಿ ಬ್ಯಾಂಕ್ ಖಾತೆ, ಜೀವ ವಿಮಾ ಪಾಲಿಸಿಗಳು, ಪಿಎಫ್, ಪಿಂಚಣಿ ಇತ್ಯಾದಿಗಳಲ್ಲಿ ನಾಮಿನಿ ಹೊಂದಲು ಸಾಧ್ಯವಾಗುವಂತೆ ಕ್ರಮಗಳನ್ನು ತರಲು ಸೂಚನೆ ನೀಡಲಾಗಿದೆ.

ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಡಾ.ಅಭಿಷೇಕ್ ಮನು ಸಿಂಘ್ವಿ, ರಾಜು ರಾಮಚಂದ್ರನ್ ಕೆ.ವಿ.ವಿಶ್ವನಾಥನ್, ಡಾ.ಮೇನಕಾ ಗುರುಸ್ವಾಮಿ, ಜಯನಾ ಕೊಠಾರಿ, ಸೌರಭ್ ಕಿರ್ಪಾಲ್, ಆನಂದ್ ಗ್ರೋವರ್, ಗೀತಾ ಲೂತ್ರಾ, ವಕೀಲರಾದ ಅರುಂಧತಿ ಕಟ್ಜು, ವೃಂದಾ ಗ್ರೋವರ್, ಕರುಣಾ ನಂದಿ ಮುಂತಾದವರು ಅರ್ಜಿ ಸಲ್ಲಿಸಿದ್ದರು. . ಕೇಂದ್ರ ಸರ್ಕಾರದ ಪರವಾಗಿಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಅರ್ಜಿಗಳನ್ನು ವಿರೋಧಿಸಿ ಮಧ್ಯಪ್ರದೇಶ ರಾಜ್ಯದ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದ ಮಂಡಿಸಿದರು. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅರವಿಂದ್ ದಾತಾರ್ ಕೂಡ ಅರ್ಜಿಗಳನ್ನು ವಿರೋಧಿಸಿ ವಾದ ಮಂಡಿಸಿದರು.

ಗೇ ಸೇರಿದಂತೆ ಪ್ರತಿಯೊಬ್ಬರಿಗೂ ನೈತಿಕವಾಗಿ ಬದುಕುವ ಹಕ್ಕಿದೆ – ಸುಪ್ರೀಂ ಕೋರ್ಟ್
ಬೆಂಗಳೂರು,ಅಕ್ಟೋಬರ್.‌17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. ಇದು ಹಿಂದೂ ವಿವಾಹ ಕಾಯ್ದೆ ಅಥವಾ ವೈಯಕ್ತಿಕ ಕಾನೂನುಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.

ಕ್ವೀರ್‌ (ಗೇ-ಲೆಸ್ಬಿಯನ್….)‌ ಎಂಬುದು ನಗರ ಕೇಂದ್ರಿತ ಇಲೀಟ್‌ನೆಸ್‌ ಅಲ್ಲ. ಸಲಿಂಗಕಾಮ ಅಥವಾ ಕ್ವೆರ್ನೆಸ್ ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಉನ್ನತ ವರ್ಗಗಳಿಗೆ ಸೀಮಿತವಾಗಿಲ್ಲ – ಸುಪ್ರೀಂ ಕೋರ್ಟ್‌

ಗೇ – ಕ್ವೀರ್‌ ವ್ಯಕ್ತಿ ಸೇರಿದಂತೆ ಪ್ರತಿಯೊಬ್ಬನಿಗೂ ತನ್ನ ಜೀವನದ ನೈತಿಕ ಗುಣಮಟ್ಟವನ್ನು ಪ್ರಶ್ನಿಸುವ ಹಕ್ಕಿದೆ – ಸಿಜೆಐ ಡಿವೈ ಚಂದ್ರಚೂಡ್

ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನ ಕ್ರಮದ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಆರ್ಟಿಕಲ್ 21 ರ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಬರುತ್ತದೆ – ಸರ್ವೋಚ್ಚ ನ್ಯಾಯಾಲಯ