German – Peepal Media

2024 ರಲ್ಲಿ ವಿದೇಶದಲ್ಲಿ ಅಧ್ಯಯನ ಮಾಡುವ ಭಾರತೀಯರ ಸಂಖ್ಯೆ 15% ರಷ್ಟು ಕುಸಿತ: ಸರ್ಕಾರಿ ಅಂಕಿಅಂಶಗಳು
ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಸರ್ಕಾರದ ಅಂಕಿಅಂಶಗಳ ಪ್ರಕಾರ, 2024 ರಲ್ಲಿ ವಿದೇಶದಲ್ಲಿ ಅಧ್ಯಯನ ಮಾಡುವ ಭಾರತೀಯರ ಸಂಖ್ಯೆಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 15% ರಷ್ಟು ಕಡಿಮೆಯಾಗಿದೆ, ಕೆನಡಾವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸಂಸದ ಇ.ಟಿ. ಮೊಹಮ್ಮದ್ ಬಶೀರ್ ಅವರ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಖಾತೆ ರಾಜ್ಯ ಸಚಿವೆ ಸುಕಾಂತ ಮಜುಂದಾರ್, 2023 ರಲ್ಲಿ 8,92,989 ಮತ್ತು 2022 ರಲ್ಲಿ 7,50,365 ಕ್ಕೆ ಹೋಲಿಸಿದರೆ  2024 ರಲ್ಲಿ 7,59,064 ಭಾರತೀಯ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ ಎಂಬ ಅಂಕಿಅಂಶ ಮುಂದಿಟ್ಟಿದ್ದಾರೆ.

ಒಂದು ಕಾಲದಲ್ಲಿ ಆದ್ಯತೆಯ ದೇಶವಾಗಿದ್ದ ಕೆನಡಾ, 2023 ರಲ್ಲಿ 2,33,532 ವಿದ್ಯಾರ್ಥಿಗಳಿಂದ 2024 ರಲ್ಲಿ 1,37,608 ಕ್ಕೆ ಶೇ. 41 ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ಕೆನಡಾವು ವಿದ್ಯಾರ್ಥಿ ವೀಸಾ ನಿಯಮಗಳನ್ನು ಬಿಗಿಗೊಳಿಸಿತು, ಇದು ಹೆಚ್ಚಿನ ನಿರಾಕರಣೆ ಸಂಖ್ಯೆ ಮತ್ತು ಅಧ್ಯಯನ ಪರವಾನಗಿಗಳ ರದ್ದತಿಗೆ ಕಾರಣವಾಯಿತು.

ಕಳೆದ ವರ್ಷ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯೂ ಹೆಚ್ಚಾಗಿದೆ. ಅಕ್ಟೋಬರ್ 2023 ರಲ್ಲಿ, ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಬಂಧಿಸಿದ ಗಲಾಟೆಯ ಮಧ್ಯೆ, ಕೆನಡಾ ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಂಡಿತು, ಇದರಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಹೊಸ ಆರೋಪಗಳ ನಂತರ ಎರಡೂ ದೇಶಗಳು ಪರಸ್ಪರ ರಾಜತಾಂತ್ರಿಕರನ್ನು ಹೊರಹಾಕಿದಾಗ ಅಕ್ಟೋಬರ್ 2024 ರಲ್ಲಿ ಪರಿಸ್ಥಿತಿ ಹದಗೆಟ್ಟಿತು.

ಅಮೆರಿಕ, ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾಗಳಲ್ಲಿಯೂ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಅಮೆರಿಕದಲ್ಲಿ, 2023 ರಲ್ಲಿ 2,34,473 ರಷ್ಟಿದ್ದ ಈ ಸಂಖ್ಯೆ 2024 ರಲ್ಲಿ 2,04,058 ಕ್ಕೆ ಇಳಿದಿದೆ. ಯುಕೆಯಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 1,36,921 ರಿಂದ 98,890 ಕ್ಕೆ ಇಳಿದಿದೆ, ಇದು ಸುಮಾರು 28% ರಷ್ಟು ಕಡಿಮೆಯಾಗಿದೆ. ಆಸ್ಟ್ರೇಲಿಯಾದಲ್ಲಿ 2023 ರಲ್ಲಿ 78,093 ವಿದ್ಯಾರ್ಥಿಗಳಿದ್ದು, 2024 ರಲ್ಲಿ 68,572 ಕ್ಕೆ ಇಳಿದಿದೆ.

ಆದಾಗ್ಯೂ, ರಷ್ಯಾಕ್ಕೆ ಹೋಗುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಏರಿತು, 2023 ರಲ್ಲಿ 23,503 ರಿಂದ 2024 ರಲ್ಲಿ 31,444 ಕ್ಕೆ, ಸುಮಾರು 34% ಹೆಚ್ಚಳ ಕಂಡಿದೆ. ಫ್ರಾನ್ಸ್‌ನಲ್ಲಿ ಕೂಡ 2023 ರಲ್ಲಿ 7,484 ವಿದ್ಯಾರ್ಥಿಗಳಿಂದ 2024 ರಲ್ಲಿ 8,536 ಕ್ಕೆ ಏರಿಕೆ ಕಂಡಿತು. ಜರ್ಮನಿಯು 2024 ರಲ್ಲಿ 34,702 ಭಾರತೀಯ ವಿದ್ಯಾರ್ಥಿಗಳನ್ನು ಹೊಂದಿತ್ತು, ಇದು 2022 ರಲ್ಲಿ 20,684 ರಿಂದ ಹೆಚ್ಚಾಗಿದೆ. ನ್ಯೂಜಿಲೆಂಡ್ 2022 ರಲ್ಲಿ 1,605 ಭಾರತೀಯ ವಿದ್ಯಾರ್ಥಿಗಳಿಂದ 2024 ರಲ್ಲಿ 7,297 ಕ್ಕೆ ಜಿಗಿತ ಕಂಡಿತು.

ವಿದೇಶಗಳಲ್ಲಿ ಶಿಕ್ಷಣ ಮತ್ತು ಅರೆಕಾಲಿಕ ಉದ್ಯೋಗಗಳ ಸುಳ್ಳು ಭರವಸೆಗಳನ್ನು ನೀಡುವ ಏಜೆನ್ಸಿಗಳಿಂದ ಭಾರತೀಯ ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ ಎಂದು ಸರ್ಕಾರಕ್ಕೆ ತಿಳಿದಿದೆಯೇ ಎಂದು ಬಶೀರ್ ಕೇಳಿದ್ದರು. ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಕಲ್ಯಾಣ ಯೋಜನೆಗಳು ಮತ್ತು ಮೀಸಲಾದ ಬೆಂಬಲ ಕಾರ್ಯವಿಧಾನಗಳ ಬಗ್ಗೆಯೂ ಅವರು ವಿಚಾರಿಸಿದರು.

“ವಿದೇಶಗಳಲ್ಲಿ ಅಧ್ಯಯನ ಮಾಡುವುದು ವೈಯಕ್ತಿಕ ಇಚ್ಛೆ ಮತ್ತು ಆಯ್ಕೆಯ ವಿಷಯವಾಗಿದೆ. ವಿದೇಶದಲ್ಲಿ ಅಧ್ಯಯನ ಮಾಡುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಮಾಡುವ ಆಕಸ್ಮಿಕ ವೆಚ್ಚವನ್ನು ಪೂರೈಸಲು ವಿದೇಶದಲ್ಲಿರುವ ಎಲ್ಲಾ ಭಾರತೀಯ ಮಿಷನ್‌ಗಳು ಮತ್ತು ಪೋಸ್ಟ್‌ಗಳಲ್ಲಿ ಭಾರತೀಯ ಸಮುದಾಯ ಕಲ್ಯಾಣ ನಿಧಿ (ICWF) ಅನ್ನು ಭಾರತ ಸರ್ಕಾರವು ಸ್ಥಾಪಿಸಿದೆ,” ಎಂದು ಶಿಕ್ಷಣ ಸಚಿವಾಲಯ ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.

“ಐಸಿಡಬ್ಲ್ಯೂಎಫ್‌ನ ಮುಖ್ಯ ಉದ್ದೇಶವೆಂದರೆ, ಆರ್ಥಿಕವಾಗಿ ಪರೀಕ್ಷಿತ ಆಧಾರದ ಮೇಲೆ ಸ್ಥಳದಲ್ಲೇ ನೆರವನ್ನು ಒದಗಿಸುವುದು. ವಿದೇಶದಲ್ಲಿರುವ ಭಾರತೀಯ ಮಿಷನ್‌ಗಳು / ಹುದ್ದೆಗಳು ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಭಾರತೀಯ ವಿದ್ಯಾರ್ಥಿಗಳು ತಮ್ಮೊಂದಿಗೆ ನೋಂದಾಯಿಸಿಕೊಳ್ಳಲು ಪ್ರೋತ್ಸಾಹಿಸುತ್ತವೆ ಮತ್ತು MADAD ಪೋರ್ಟಲ್‌ನಲ್ಲಿಯೂ ಸಹ ನೋಂದಾಯಿಸಿಕೊಳ್ಳಬಹುದು, ಇದರಿಂದಾಗಿ ಅವರ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ಸಮಯಕ್ಕೆ ಅನುಗುಣವಾಗಿ ಪರಿಹರಿಸಬಹುದು” ಎಂದು ಸಚಿವಾಲಯ ಹೇಳಿದೆ.

ಮ್ಯಾಗ್ಡೆಬರ್ಗ್ ಕ್ರಿಸ್ಮಸ್ ಮಾರ್ಕೆಟ್ ದಾಳಿ: ಮಾಧ್ಯಮಗಳಿಗೆ ಪಾಠ
ಮಾಧ್ಯಮ ಸಾಕ್ಷರತೆ ಮತ್ತು ಮಾಧ್ಯಮಗಳನ್ನು ವಿಮರ್ಶೆ ಮಾಡುವ, ಪ್ರಶ್ನೆ ಮಾಡುವ ಅಗತ್ಯತೆ ಇರುವ ಸಂದರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಸಿದ್ದಾಂತಗಳೂ ಹೇಳುವುದು ಒಂದೇ, ಮಾಧ್ಯಮಗಳು ತಾವು ಏನನ್ನು ಜನರಿಗೆ ಕೊಡಬೇಕು ಎನ್ನುವುದನ್ನು ಜನರ ಅಭಿರುಚಿಯ ಅಧಾರದಲ್ಲಿ ನಿರ್ಧರಿಸುವುದಿಲ್ಲ, ಬದಲಾಗಿ ಜನರು ತಮಗೆ ಏನು ಬೇಕು ಎನ್ನುವುದನ್ನು ಮೊದಲು ಅವರ ತಲೆಗೆ ತುರುಕಿ ಆಮೇಲೆ ಅದಕ್ಕೆ ಪೂರಕವಾದ ಸುದ್ದಿಗಳನ್ನು ನೀಡುತ್ತವೆ

ಡಿಸೆಂಬರ್ 20, 2024 ರಂದು, ಜರ್ಮನಿಯ ಮ್ಯಾಗ್ಡೆಬರ್ಗ್‌ನಲ್ಲಿ ಕ್ರಿಸ್ಮಸ್ ಮಾರ್ಕೆಟ್‌ನಲ್ಲಿ ನಡೆದ ದುರಂತ ದಾಳಿಯಲ್ಲಿ ಐವರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡರು. ಪಾಶ್ಚಿಮಾತ್ಯ ಮಾಧ್ಯಮಗಳು ಇಂತಹ ಘಟನೆಗಳನ್ನು, ಅದರಲ್ಲೂ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಹೇಗೆ ರೂಪಿಸಬೇಕು ಎಂಬುದನ್ನು ತೋರಿಸಿಕೊಟ್ಟಿವೆ.

ದಾಳಿಕೋರ ಸೌದಿ ಅರೇಬಿಯಾ ಮೂಲದ ಮನೋವೈದ್ಯ ತಲೇಬ್ ಅಲ್-ಅಬ್ದುಲ್ಮೊಹ್ಸೆನ್, ಒಬ್ಬ ನಾಸ್ತಿಕ ಮತ್ತು ಇಸ್ಲಾಮಿಕ್ ವಿರೋಧಿ ನಿಲುವಿಗೆ ಹೆಸರಾಗಿದ್ದವನು. ಈ ಘಟನೆಯನ್ನು ಸಾಂಪ್ರದಾಯಿಕ ಮಾಧ್ಯಮಗಳು ಹೇಗೆ ವರದಿ ಮಾಡಿದವು ಎಂಬುದು ಮುಖ್ಯವಾಗುತ್ತದೆ.

ದಾಳಿಕೋರನ ಧರ್ಮ ಮತ್ತು ಸಿದ್ಧಾಂತ

ಸಾಮಾನ್ಯವಾಗಿ ಭಾರತೀಯ ಮಾಧ್ಯಮಗಳು ದಾಳಿಕೋರನ ಧರ್ಮ ಯಾವುದು ಎಂದು ನೋಡುತ್ತವೆ. ಅವನ ಸಿದ್ದಾಂತಗಳ ಮೂಲಕ ತಮ್ಮ ನಿರೂಪಣೆಗಳನ್ನು ಕಟ್ಟುತ್ತವೆ.

ದಾಳಿ ಮಾಡಿದವನು ಮುಸಲ್ಮಾನನಾಗಿದ್ದರೆ, “ರ್ಯಾಡಿಕಲ್‌ ಇಸ್ಲಾಂ, ಜಿಹಾದ್”‌ ನಂತಹ ಪದಗಳನ್ನು ಬಳಸಿ ಹೆಡ್‌ಲೈನ್‌ ಮಾಡುತ್ತವೆ. ಇಡೀ ಘಟನೆ ಇಸ್ಲಾಮಿಗೆ ಸಂಬಂಧ ಹೊಂದದೇ ಇದ್ದರೂ “ಇಸ್ಲಾಮಿಸ್ಟ್‌ ಭಯೋತ್ಪಾದನಾ ದಾಳಿ”ಯಾಗಿ ಬ್ರಾಂಡ್‌ ಮಾಡುತ್ತವೆ. ಲಷ್ಕರ್‌ ಎ ತೊಯೇಬಾ, ತಾಲಿಬಾನ್‌ನಂತಹ ಸಂಘಟನೆಗಳ ದಾಳಿಗಳಿಗೆ ವೈಯಕ್ತಿಕ ಅಪರಾಧಗಳನ್ನು ಸಮೀಕರಿಸಿ ನೋಡುತ್ತವೆ.

ಆದರೆ ಮ್ಯಾಗ್ಡೆಬರ್ಗ್‌ನ ಈ ದಾಳಿ ಇವೆಲ್ಲಕ್ಕೂ ಭಿನ್ನ ನಿರೂಪಣೆಯಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ವರದಿಯಾಗಿದೆ. ಧಾರ್ಮಿಕ ಗುರುತನ್ನು ಮುಂದಿಟ್ಟುಕೊಂಡು ಇಡೀ ಸಮಾಜವನ್ನು ಹೀಗಳೆಯುವ ಭಾರತೀಯ ಮಾಧ್ಯಮಗಳಿಗೆ ಭಿನ್ನವಾಗಿ ಇದರಲ್ಲಿ ಆಕ್ರಮಕಾರನ ವೈಯಕ್ತಿಕ ಮಾನಸಿಕ ಸಮಸ್ಯೆಗಳು, ಆತನ ನಾಸ್ತಿಕ ನಂಬಿಕೆ ಚರ್ಚೆಯ ಕೇಂದ್ರಬಿಂದುವಾಗಿದೆ.

ಪ್ರಾಬಲ್ಯ ಮತ್ತು ಮಾಧ್ಯಮ ನಿರೂಪಣೆಗಳು

ಆಂಟೋನಿಯೊ ಗ್ರಾಂಸ್ಕಿಯ ಅಧೀನತೆಯ ಸಿದ್ಧಾಂತ (theory of hegemony ) ಮಾಧ್ಯಮಗಳು ನಿರ್ದಿಷ್ಟ ಸಂದರ್ಭಗಳಲ್ಲಿ ನಡೆಯುವ ಘಟನೆಗಳನ್ನು ರೂಪಿಸುವ ರೀತಿಯ ಮೂಲಕ ಪ್ರಬಲ ಸಿದ್ಧಾಂತಗಳನ್ನು ಬಲಪಡಿಸುತ್ತದೆ ಎಂದು ಪ್ರತಿಪಾದಿಸುತ್ತದೆ. ಆದರೆ, ಮ್ಯಾಗ್ಡೆಬರ್ಗ್ ದಾಳಿಯು ಮಾದ್ಯಮಗಳು ಮುಸ್ಲಿಂ ಅಪರಾಧಿಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಕಟ್ಟಿರುವ ನಿರೂಪಣೆಗಳಿಂದ ಭಿನ್ನವಾಗಿ ನೋಡಿರುವುದನ್ನು ತೋರಿಸುತ್ತದೆ.

ಹ್ಯಾಂಡೆಲ್ಸ್‌ಬ್ಲಾಟ್ (Handelsblatt) ಎಂಬ ಮಾಧ್ಯಮ ದಾಳಿಕೋರ ಆಲ್ಟರ್ನೇಟಿವ್‌ ಫಾರ್‌ ಜರ್ಮನಿ  (AfD) ಪಕ್ಷಕ್ಕೆ ತೋರಿರುವ ಸಹಾನುಭೂತಿ ಮತ್ತು ಆತನ ಇಸ್ಲಾಮಿಕ್ ವಿರೋಧಿ ಸೈದ್ಧಾಂತಿಕತೆಯ ದೃಷ್ಟಿಕೋನದಿಂದ ಘಟನೆಯನ್ನು ನೋಡಿದೆ.

ಡೈ ವೆಲ್ಟ್ (Die Welt) ದ್ವೇಷ ಭಾಷಣದ ಕಾನೂನುಗಳ ಬಗ್ಗೆ ಅಪರಾಧಿ ತೋರಿರುವ ಟೀಕೆಗಳು ಮತ್ತು ಅವನ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೇಲೆ ತನ್ನ ವರದಿಯನ್ನು ಕೇಂದ್ರೀಕರಿಸಿ, ಈ ದಾಳಿಯ ಹಿಂದಿನ ಪ್ರೇರಣೆಗಳನ್ನು  ಸೈದ್ಧಾಂತಿಕ ಚೌಕಟ್ಟಿನೊಳಗೆ ಇಟ್ಟು ವರದಿ ಮಾಡಿದೆ.

ಸಾಂಸ್ಕೃತಿಕ ಸಂಕೇತಗಳು ಮತ್ತು ಸುದ್ದಿ ಮೌಲ್ಯಗಳು

ಸ್ಟುವರ್ಟ್ ಹಾಲ್ ಅವರ ಸಾಂಸ್ಕೃತಿಕ ಸಂಕೇತಗಳ ಸಿದ್ಧಾಂತವು (theory of cultural codes) ಮಾಧ್ಯಮವು ವರದಿಗಳನ್ನು ಮಾಡುವಾಗ ಪ್ರೇಕ್ಷಕರ ಮೌಲ್ಯಗಳು ಮತ್ತು ಗ್ರಹಿಕೆಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಮಾಡುತ್ತವೆ ಎಂದು ಹೇಳುತ್ತದೆ. ದಾಳಿ ಮಾಡಿದವನು ಮುಸ್ಲಿಂ ಆಗಿದ್ದರೆ, ಆತನ ದಾಳಿ ಆತನ ಧಾರ್ಮಿಕ ಕಾರಣಗಳಿಂದ ಅಲ್ಲದೇ ಇದ್ದರೂ ಅದನ್ನು ಧರ್ಮದ ಜೊತೆಗೆ ತಳುಕುಹಾಕಿ ವರದಿ ಮಾಡುವುದು ಇದೇ ಕಾರಣಕ್ಕೆ. ಮೊದಲು ಮಾಧ್ಯಮಗಳು ವೀಕ್ಷಕನ, ಓದುಗನ ಆಲೋಚನೆಯನ್ನು ಬದಲಿಸುವಂತಹ ನಿರೂಪಣೆಗಳನ್ನು ಕಟ್ಟುತ್ತವೆ, ಆ ಮೇಲೆ ವೀಕ್ಷಕ/ಓದುಗ ಮಾಧ್ಯಮಗಳು ಈಗಾಗಲೇ ನೀಡಿರುವ ಕನ್ನಡಕ ಹಾಕಿಕೊಂಡು ಎಲ್ಲಾ ಘಟನೆಗಳನ್ನು ನೋಡುತ್ತಾನೆ. ಆತನ ಗ್ರಹಿಕೆಯನ್ನು ತಾನೇ ನಿರ್ಮಿಸಿ, ಅದನ್ನು ಪೋಷಿಸಲು ಬೇಕಾದ ರೀತಿಯಲ್ಲಿ ವರದಿ ಮಾಡುತ್ತವೆ.

ಒಂದು ವೇಳೆ ಈ ಘಟನೆ ಭಾರತದಲ್ಲಿ ನಡೆದಿದ್ದರೆ, ನಾಸ್ತಿಕ ಮತ್ತು ಕಟ್ಟರ್‌ ಇಸ್ಲಾಂ ವಿರೋಧಿ ದಾಳಿಕೋರನೂ ʼಜಿಹಾದಿʼಯಾಗುತ್ತಾನೆ. ಅದೇ ರೀತಿಯ ದಾಳಿಯನ್ನು ಹಿಂದೂ ಮಾಡಿದ್ದರೆ, ಅದು ಹಿಂದೂ ಧರ್ಮದ ಜೊತೆಗೆ ಚರ್ಚೆಯಾಗುವುದಿಲ್ಲ.

ಭಾರತದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ನಾವು ಈ ಹಿನ್ನಲೆಯಿಂದ ನೋಡಬೇಕು. ಮುಸಲ್ಮಾನ ವ್ಯಕ್ತಿ ತನ್ನ ಪ್ರೇಯಸಿಯನ್ನು ಕೊಂದು ಆಕೆಯ ದೇಹವನ್ನು ಕತ್ತರಿಸಿ ಫ್ರೀಜರ್‌ನಲ್ಲಿ ಇಟ್ಟಿದ್ದು ಇಸ್ಲಾಂ ಬಗೆಗಿನ ಚರ್ಚೆಗೆ ಕಾರಣವಾದರೆ, ಅದೇ ರೀತಿಯ ಕೃತ್ಯ ನಡೆಸಿದ ಹಿಂದೂವಿನ ಈ ಅಪರಾಧ ಧರ್ಮದ ಜೊತೆಗೆ ಚರ್ಚೆಯಾಗುವುದಿಲ್ಲ. ಈ ಪೂರ್ವಾಗ್ರಹಗಳನ್ನು ಮಾಧ್ಯಮಗಳು ನಮಗೆ ನೀಡಿವೆ.

ಫ್ರಾಂಕ್‌ಫರ್ಟರ್ ಆಲ್‌ಗೆಮೈನ್ ಝೈತುಂಗ್ (Frankfurter Allgemeine Zeitung) ಈ ದಾಳಿಯನ್ನು ನಡೆಸಿದವನು ತನ್ನನ್ನು ತಾನು ‘ಇಸ್ಲಾಂನ ಇತಿಹಾಸದಲ್ಲಿಯೇ ಅತ್ಯಂತ ಆಕ್ರಮಣಕಾರಿ ವಿಮರ್ಶಕ’ ಎಂದು ಕರೆಸಿಕೊಂಡಿರುವುದು, ಆತನ ವೈಯಕ್ತಿಕ ಗುಣಕ್ಕೆ ಒತ್ತು ನೀಡುವ ಮೂಲಕ ತಟಸ್ಥ  ವರದಿಯನ್ನು ಮಾಡಿದೆ. ಬಿಬಿಸಿ ನ್ಯೂಸ್‌ ಕೂಡ ಇಸ್ಲಾಮೋಫೋಬಿಯಾದ ಬಗ್ಗೆ ಮರುಚರ್ಚೆಯನ್ನು ಮಾಡಿದರೂ, ಈ ಘಟನೆ ಸಾಮೂಹಿಕವಾಗಿ ನಡೆಯುವ ಇಸ್ಮಾಂನ ಬಗೆಗಿನ ಅಪಾದನೆಗಳಿಗೆ ಭಿನ್ನವಾಗಿ ಈ ಘಟನೆಯನ್ನು ನೋಡುವ ಬಗೆಯನ್ನು ತಿಳಿಸಿತು.

ಮ್ಯಾಗ್ಡೆಬರ್ಗ್‌ ದಾಳಿಯನ್ನು ಪಾಶ್ಚಿಮಾತ್ಯ ಮಾಧ್ಯಮಗಳು ವರದಿ ಮಾಡಿದ ಬಗೆಯನ್ನು ಕೆಲವು ಮಾಧ್ಯಮ ಸಿದ್ಧಾಂತಗಳ ಮೂಲಕ ನೋಡಬಹುದು.

ಚೌಕಟ್ಟಿನ ಸಿದ್ಧಾಂತ –Framing theory

ಮಾಧ್ಯಮಗಳು ವರದಿ ಮಾಡುವಾಗ ಒಂದು ಸಾರ್ವಜನಿಕ ಗ್ರಹಿಕೆಯನ್ನು ರೂಪಿಸುತ್ತವೆ. ಮಾಧ್ಯಮಗಳು ವಿಲನ್‌ ಎಂಬಂತೆ ಚಿತ್ರಿಸಿದ ವ್ಯಕ್ತಿ ಸಾರ್ವಜನಿಕರ ಗ್ರಹಿಕೆಯಲ್ಲಿಯೂ ವಿಲನ್‌ ಆಗುತ್ತಾನೆ. ಘಟನೆಯ ಹಿಂದೆ-ಮುಂದೆ ನೋಡಿ ಮಾಧ್ಯಮಗಳ ಸುದ್ದಿ ನಿರೂಪಣೆಯನ್ನು ಜನರು ಒಡೆದು ನೋಡುವುದಿಲ್ಲ ಎಂಬ ಧೈರ್ಯ ಕೂಡ ಮಾಧ್ಯಮಗಳಿಗೆ ಇರುತ್ತದೆ. ಮಾಧ್ಯಮಗಳ ದೃಷ್ಟಿಯಲ್ಲಿ ʼವೀಕ್ಷಕರು ಅವರು ಹೇಳಿದ್ದನ್ನು ಮಾತ್ರ ನಂಬುವ ಜೀವಿಗಳು.ʼ ಹೀಗಾಗಿ, ವೀಕ್ಷಕ ಏನನ್ನು ಯೋಚಿಸಬೇಕು ಎಂಬುದನ್ನು ಮಾಧ್ಯಮಗಳೇ ನಿಯಂತ್ರಿಸುತ್ತವೆ. ದಾಳಿಕೋರ ಮುಸ್ಲೀಂ ಆದರೆ ಆತನ ಅದು ಸಾಮೂಹಿಕ ಬೆದರಿಕೆ, ಮುಸ್ಲಿಮೇತರನಾದರೆ ಆತನ ಅಪರಾಧ ವೈಯಕ್ತಿಕ ಎಂಬಂತೆ ವರದಿ ಮಾಡುತ್ತವೆ.

ಇದರ ಪರಿಣಾಮವಾಗಿ ದಾಳಿ ನಡೆಸಿದವ, ಕಳ್ಳತನ ಮಾಡಿದವ, ಅತ್ಯಾಚಾರ ಮಾಡಿದವನು ಯಾವ ಧರ್ಮದವನು ಎಂದು ಮೊದಲು ನೋಡಿ ಈ ವರದಿಯನ್ನು ನೋಡುವ ಪರಿಪಾಠವನ್ನು ವೀಕ್ಷಕ ಬೆಳೆಸಿಕೊಳ್ಳುವಂತೆ ಮಾಧ್ಯಮಗಳು ಮಾಡಿವೆ.

ಸುದ್ದಿ ಮೌಲ್ಯಗಳ ಸಿದ್ಧಾಂತ – News values theory

ದಾಳಿಕೋರನ ಧರ್ಮ ಯಾವುದು ಎಂಬುದರಿಂದ ಸುದ್ದಿಗೆ  ಹೆಚ್ಚು ಮೌಲ್ಯ ಸಿಗುತ್ತಿದೆ. ಇಲ್ಲಿ ಸಾಂಪ್ರದಾಯಿಕ, ತಟಸ್ಠ ಸುದ್ದಿ ನಿರೂಪಣೆಗಳಿಗೆ ಬೆಲೆ ಇಲ್ಲ. ಪ್ರಕರಣದಲ್ಲಿ ಅಪರಾಧಿಯಾಗಿರುವ ವ್ಯಕ್ತಿಯ ಧರ್ಮದ ಮೇಲೆ ಆ ಸುದ್ದಿ ಹೆಚ್ಚು ಸಮಯ ಓಡುತ್ತದೆ. ಜನರು ಮತ್ತೆ ಮತ್ತೆ ತಮ್ಮ ಒಳಗೆ ಮಾಧ್ಯಮಗಳು ತುಂಬಿರುವ ಆಕ್ರೋಶವನ್ನು ಹೊರಗೆ ಹಾಕಲು ಈ ಸುದ್ದಿಯನ್ನು ಟಿವಿ, ಯೂಟ್ಯೂಬ್‌ಗಳಲ್ಲಿ ಹುಡುಕಿ ನೋಡುತ್ತಾರೆ.

ಅಧಿಕಾರ ಮತ್ತು ಸಿದ್ಧಾಂತ – Hegemony and ideology

ಮಾಧ್ಯಮಗಳು ಸುದ್ದಿಯ ಯಾವ ಅಂಶವನ್ನು ಹೆಚ್ಚು ಹೈಲೈಟ್‌ ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಮೂಲಕ ತಾವು ಈಗಾಗಲೇ ಬಿತ್ತಿರುವ ಪ್ರಬಲ ಸಿದ್ದಾಂತವನ್ನು ಬಲಪಡಿಸುತ್ತವೆ. ಮ್ಯಾಗ್ಡೆಬರ್ಗ್‌ ದಾಳಿಯನ್ನು ಭಾರತೀಯ ಮಾಧ್ಯಮಗಳು ವರದಿ ಮಾಡಿದರೆ, ಆತ ಹುಟ್ಟಿದ ಧರ್ಮ ಇಸ್ಲಾಂಗೆ ಹೆಚ್ಚು ಒತ್ತು ನೀಡಿ ವರದಿ ಮಾಡುತ್ತವೆ, ಆತ ನಾಸ್ತಿಕ ಎಂಬುದನ್ನು ಕಡಿಮೆ ಚರ್ಚೆ ಮಾಡುತ್ತವೆ. ಏಕೆಂದರೆ, ಇಸ್ಲಾಮೋಫೋಬಿಯಾದಿಂದ ಸುದ್ದಿಗೆ ಮೌಲ್ಯ ಹೆಚ್ಚಾಗುತ್ತದೆ, ಸುದ್ದಿ ಚೆನ್ನಾಗಿ ಮಾರಾಟವಾಗುತ್ತದೆ ಮತ್ತು ಒಳ್ಳೆಯ ಆದಾಯ ಬರುತ್ತದೆ.

ಸಾಂಸ್ಕೃತಿಕ ಸಂಕೇತಗಳು –Cultural codes

ಮತ್ತೆ ಇಲ್ಲೂ ದಾಳಿಕೋರನ ಧರ್ಮದ ಮೂಲಕ ಘಟನೆಯನ್ನು ನೋಡಲಾಗುತ್ತದೆ. ಮುಸಲ್ಮಾನ ನಾಸ್ತಿಕ ಮಾಡಿದ ದಾಳಿಯೂ ʼಇಸ್ಲಾಂನಿಂದ ಸಾಮೂಹಿಕ ಬೆದರಿಕೆʼ ಎಂಬುದಾಗಿ ಚಿತ್ರಿಸಲಾಗುತ್ತದೆ, ಮುಸ್ಲಿಮೇತರ ಮಾಡಿದ ದಾಳಿ ವೈಯಕ್ತಿಕವಾಗುತ್ತದೆ. ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಾಂಬು ಇಟ್ಟಿದ್ದಾನೆ ಎಂದು ಆದಿತ್ಯ ರಾವ್‌ ಎಂಬಾತನನ್ನು ಬಂಧಿಸುವಾಗ, ಆತನನ್ನು ಮಾಧ್ಯಮಗಳು ʼಮಾನಸಿಕ ರೋಗಿʼ ಎಂದು ಕರೆಯುತ್ತವೆ ಎಂದು ಕೆಲವು ಜನರು ಟೀಕೆ ಮಾಡಿದ್ದರು. ಈ ಟೀಕೆಯೇ ಸದ್ಯದ ಮಾಧ್ಯಮಗಳ ನಿಜವಾದ ನಡವಳಿಕೆ.

ಸಾಮಾಜಿಕ ನಿರ್ಮಾಣವಾದ – Social constructionism

ಮಾಧ್ಯಮ ಸುದ್ದಿ ನಿರೂಪಣೆಗಳು ಒಂದು ಸಮುದಾಯವನ್ನು ಮತ್ತು ಇತತರನ್ನು ಹೇಗೆ ನೋಡಬೇಕು ಎಂಬುದನ್ನು ರೂಪಿಸುತ್ತವೆ. ಆದರೆ ಜರ್ಮನಿಯ ಈ ಘಟನೆಯಲ್ಲಿ ಪಾಶ್ಚಿಮಾತ್ಯ ಮಾಧ್ಯಮಗಳು ದಾಳಿ ನಡೆಸಿದವನ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿವೆ. ಇಲ್ಲಿ ಸಾಮೂಹಿಕ ಅಭಿಪ್ರಾಯವನ್ನು ಕಟ್ಟಲು ಹೋಗಲಿಲ್ಲ.

ಪವರ್ ಡೈನಾಮಿಕ್ಸ್ ಮತ್ತು ಸಾರ್ವಜನಿಕ ಗ್ರಹಿಕೆ – Power dynamics and public perception

ಮೈಕೆಲ್ ಫೌಕಾಲ್ಟ್ ಅವರ ಶಕ್ತಿ ಮತ್ತು ಜ್ಞಾನದ ಸಿದ್ಧಾಂತವು (theory of power and knowledge) ಮಾಧ್ಯಮವು ತನ್ನ ವರದಿಯ ಮೂಲಕ ಸಾಮಾಜಿಕ ನಿಯಂತ್ರಣವನ್ನು ಮಾಡುತ್ತದೆ ಎಂದು ಹೇಳುತ್ತದೆ.  ಮ್ಯಾಗ್ಡೆಬರ್ಗ್ ಪ್ರಕರಣದಲ್ಲಿ, ಆಕ್ರಮಣಕಾರನ ಇಸ್ಲಾಮೋಫೋಬಿಕ್ ಚಿಂತನೆಯನ್ನು ನಿರ್ಲಕ್ಷಿಸುವುದು   ಅಸ್ತಿತ್ವದಲ್ಲಿರುವ ಪವರ್‌ ಡೈನಾಮಿಕ್ಸ್ ಅನ್ನು ತೋರಿಸುತ್ತದೆ.

ಮಾಧ್ಯಮ ಸಾಕ್ಷರತೆ ಮತ್ತು ಮಾಧ್ಯಮಗಳನ್ನು ವಿಮರ್ಶೆ ಮಾಡುವ, ಪ್ರಶ್ನೆ ಮಾಡುವ ಅಗತ್ಯತೆ ಇರುವ ಸಂದರರ್ಭದಲ್ಲಿ ನಾವಿದ್ದೇವೆ. ಈ ಎಲ್ಲಾ ಸಿದ್ದಾಂತಗಳೂ ಹೇಳುವುದು ಒಂದೇ, ಮಾಧ್ಯಮಗಳು ತಾವು ಏನನ್ನು ಜನರಿಗೆ ಕೊಡಬೇಕು ಎನ್ನುವುದನ್ನು ಜನರ ಅಭಿರುಚಿಯ ಅಧಾರದಲ್ಲಿ ನಿರ್ಧರಿಸುವುದಿಲ್ಲ, ಬದಲಾಗಿ ಜನರು ತಮಗೆ ಏನು ಬೇಕು ಎನ್ನುವುದನ್ನು ಮೊದಲು ಅವರ ತಲೆಗೆ ತುರುಕಿ ಆಮೇಲೆ ಅದಕ್ಕೆ ಪೂರಕವಾದ ಸುದ್ದಿಗಳನ್ನು ನೀಡುತ್ತವೆ.

ಉದಾಹರಣೆಗೆ: ಆರಂಭದಲ್ಲಿ ರೀಲ್ಸ್‌ಗಳಲ್ಲಿ ಬರುವ ಜನರ ವೈಯಕ್ತಿಕ ಬದುಕಿನ ಬಗ್ಗೆ ಸಾಮಾನ್ಯ ಜನರಿಗೆ ಆಸಕ್ತಿ ಇರಲಿಲ್ಲ. ಆ ಆಸಕ್ತಿನ್ನು ಮಾಧ್ಯಮಗಳು ಆರಂಭದಲ್ಲಿ ಹುಟ್ಟಿಸಿದವು. ಆ ನಂತರ ಜನರು ಅದನ್ನು ಪದೇ ಪದೇ ಬಯಸುವಂತೆ ಮಾಡಿ, ಅಂತಹ ಕಳಪೆ ಸುದ್ದಿಗಳನ್ನೇ ಜನರಿಗೆ ನೀಡಲು ಆರಂಭಿಸಿದವು.

ಮಾಧ್ಯಮಗಳು ನೀಡುವ ಸುದ್ದಿಗಳ ಬಗ್ಗೆ ಎಚ್ಚರವಾಗಿರೋಣ..

ಬೊಗಸೆಗೆ ದಕ್ಕಿದ್ದು- 44: ಸರ್ವಾಧಿಕಾರಿಗಳ ಕುರಿತು ಬಂಡವಾಳಶಾಹಿ ಕುರುಡುಗಣ್ಣು
ಸರ್ವಾಧಿಕಾರಗಳು ಎಲ್ಲಾ ರೀತಿಯ ನಾಟಕಗಳನ್ನು ನಡೆಸಿಕೊಂಡು ತಮ್ಮನ್ನು ತಾವು ಪ್ರತಿಷ್ಟಾಪಿಸಿವೆ. ಎಲ್ಲವುಗಳ ಹಿಂದೆ ಇರುವ ಶಕ್ತಿಗಳು ಯಾವುವು ಎಂಬುದನ್ನು ನಾವು ಗಮನಿಸಬೇಕು. ಇಷ್ಟೆಲ್ಲಾ ಒಂದು ಪೀಠಿಕೆ ಮಾತ್ರ. ಪ್ರಜಾಪ್ರಭುತ್ವದ ವೇಷದಲ್ಲೂ ಸರ್ವಾಧಿಕಾರ ಬರಬಹುದು. ಹಿಟ್ಲರ್ ಕೂಡಾ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದವನೆಂಬುದು ನಮಗೆ ನೆನಪಿರಲಿ. ಪ್ರತಿಯೊಬ್ಬ ಸರ್ವಾಧಿಕಾರಿ ಜಾತಿ, ಧರ್ಮ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿ, ಬೆಳೆಸಿ, ಬೆಳೆದರೆಂಬುದನ್ನು ನಾವು ಗಮನಿಸಬೇಕು

ನಿಖಿಲ್ ಕೋಲ್ಪೆ

ಹಲವಾರು ದೇಶಗಳಲ್ಲಿ ಸರ್ವಾಧಿಕಾರಿ ಆಡಳಿತಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿರುವುದನ್ನು ಇತಿಹಾಸದ ಉದ್ದಕ್ಕೂ ನಾವು ನೋಡಿದ್ದೇವೆ. ಆದರೆ, ಈ ಸರ್ವಾಧಿಕಾರಗಳ ಕುರಿತು ಪ್ರಜಾಪ್ರಭುತ್ವದ ವಕ್ತಾರರಂತೆ ವರ್ತಿಸುವ ಯುಎಸ್ಎ ಸಹಿತ ಬಂಡವಾಳಶಾಹಿ ಸಿರಿವಂತ ರಾಷ್ಟ್ರಗಳ ನಿಲುವು ಏನು? ಅವು ಕೆಲವು ಕಡೆ ಕುರುಡುಗಣ್ಣು ಬೀರಿದರೆ, ಕೆಲವು ದೇಶಗಳಲ್ಲಿ ಮಿಲಿಟರಿ ಮಧ್ಯಪ್ರವೇಶ ಮಾಡಿ ಕೈಗೊಂಬೆ ಸರಕಾರಗಳನ್ನು ಸ್ಥಾಪಿಸಿವೆ. ಇಲ್ಲವೇ ಅವುಗಳಲ್ಲಿ ಅರಾಜಕತೆಯನ್ನು ಪೋಷಿಸಿವೆ. ಇದಕ್ಕೆ ಇರುವ ಮಾನದಂಡವೇನು? ಮಾನದಂಡ ಮಾವೀಯತೆಯೂ ಅಲ್ಲ, ಪ್ರಜಾಪ್ರಭುತ್ವವೂ ಅಲ್ಲ. ಕೇವಲ ಬಂಡವಾಳಶಾಹಿಗಳ ಲಾಭದ ಚಿಂತನೆ. ಅವುಗಳ ಹಿತಾಸಕ್ತಿಗಳನ್ನು ಕಾಯುವುದು. ಇದೇ ಬಂಡವಾಳವಾದವು ಹಿಂದೆ ಭಾರತವೂ ಸೇರಿದಂತೆ ಬಹುತೇಕ ಇಡೀ ಪ್ರಪಂಚವನ್ನೇ ಹಿಂಡಿ ಹಿಪ್ಪೆಮಾಡಿ ಶ್ರೀಮಂತವಾಗಿ ಬೆಳೆದಿರುವುದು.

ಸೋವಿಯತ್ ಒಕ್ಕೂಟವು ಪ್ರಬಲವಾಗಿದ್ದ ಕಾಲವನ್ನು ನೋಡೋಣ. ಆಗ ಇದ್ದ ಮಾನದಂಡ ಒಂದೇ! ಅದೆಂದರೆ, ಕಮ್ಯೂನಿಸ್ಟ್ ಸರಕಾರಗಳು, ಎಡ ಚಿಂತನೆಯ ಸರಕಾರಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು. ಇದ್ದಲ್ಲಿ ಅವುಗಳನ್ನು ಉರುಳಿಸಲು ಪ್ರಚೋದನೆ ಮತ್ತು ಬೆಂಬಲ ನೀಡುವುದು. ಅಂತವರಿಗೆ ಶಸ್ತ್ರಾಸ್ತ್ರ, ತರಬೇತಿ ಮತ್ತು ಹಣಕಾಸು ಒದಗಿಸುವುದು. ಎರಡನೇ ಮಹಾಯುದ್ಧದ ಕಾಲದಲ್ಲೂ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ಬೆಳೆಯುತ್ತಿದ್ದಾಗ, ಯಹೂದಿಗಳೇ ಮುಂತಾದ ಆರ್ಯೇತರ ಎಂದು ಪರಿಗಣಿತರಾದ ಜನಾಂಗಗಳ ದಮನ ಆರಂಭವಾದಾಗ, ಪ್ರಜಾಪ್ರಭುತ್ವದ ಸ್ವಯಂಘೋಷಿತ ವಕ್ತಾರರಾದ ಬ್ರಿಟನ್ ಆಗಲೀ, ಯುಎಸ್ಎ ಆಗಲೀ ಮೊದಲಿಗೆ ಚಕಾರವೆತ್ತಿರಲಿಲ್ಲ. ಆತ ತಮ್ಮ ವಿರೋಧಿಯಾದ ಸೋವಿಯತ್ ಒಕ್ಕೂಟದ ವಿರುದ್ಧ ಒಂದು ಮಗ್ಗುಲ ಮುಳ್ಳಾಗಿರಲಿ ಎಂದು ಕುಶಿಯಿಂದಲೇ ಇದ್ದರು. ಆದರೆ, ಸೋವಿಯತ್ ಒಕ್ಕೂಟದ ಮುಖ್ಯಸ್ಥ ಜೋಸೆಫ್ ಸ್ಟಾಲಿನ್‌- ಹಿಟ್ಲರ್ ಜೊತೆ ಅನಾಕ್ರಮಣ ಒಪ್ಪಂದ ಮಾಡಿಕೊಂಡಾಗ ಮಾತ್ರವೇ ಅವರು ಎಚ್ಚೆತ್ತುಕೊಂಡದ್ದು. ನಂತರ ಹಿಟ್ಲರ್ ಸೋವಿಯತ್ ಒಕ್ಕೂಟದ ಮೇಲೆಯೇ ದಂಡೆತ್ತಿ ಹೋದದ್ದು ಬೇರೆಯೇ ಮಾತು. ನಂತರ ಮೊದಲಿಗೆ ಪೋಲೆಂಡಿನ ಮೇಲೆ ದಾಳಿ ಮಾಡಿದ ಆತ ಫ್ರಾನ್ಸನ್ನು ವಶಪಡಿಸಿಕೊಂಡಾಗ, ಬ್ರಿಟನ್‌ಗೆ ಬೆದರಿಕೆ ಒಡ್ಡಿದಾಗ, ತಮ್ಮ ಹಿತ್ತಲಿಗೆ ಶತ್ರು ಬಂದು ಕುಳಿತಿರುವುದನ್ನು ನೋಡಿ ಬ್ರಿಟನ್, ನಂತರ ಯುಎಸ್ಎ ಕಣಕ್ಕೆ ನುಗ್ಗಿದ್ದು.

ಸಂಪತ್ತಿನ ನಿಯಂತ್ರಣಕ್ಕಾಗಿ ಮತ್ತು ಸ್ವಹಿತಾಸಕ್ತಿಯ ರಕ್ಷಣೆಗಾಗಿ ನೇರ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಂಡವಾಳಶಾಹಿಯು, ತನಗೆ ಲಾಭವಿಲ್ಲದ ಕಡೆಗಳಲ್ಲಿ, ಬಡ ದೇಶಗಳಲ್ಲಿ ಎಂತಹ ದಮನಕಾರಿ ಸರಕಾರಗಳಿದ್ದರೂ ಕಣ್ಣುಮುಚ್ಚಿ ಕುಳಿತಿದೆ. ಆದರೆ, ತೈಲ ಮತ್ತು ಖನಿಜಗಳಿರುವ ನೈಸರ್ಗಿಕವಾಗಿ ಶ್ರೀಮಂತವಾಗಿರುವ ದೇಶಗಳ ಮೇಲೆ ಮಾತ್ರವೇ ಬಂಡವಾಳಶಾಹಿಗಳ ಕಣ್ಣು. ಯುಎಸ್‌ಎಯಂತಹ ದೇಶ ಮತ್ತು ದೊಡ್ಡಣ್ಣನ ತಮ್ಮಂದಿರಂತೆ ವರ್ತಿಸುವ ನ್ಯಾಟೋ ದೇಶಗಳು ಈ ಕಾರಣಕ್ಕಾಗಿ ಮಧ್ಯಪ್ರವೇಶ ಮಾಡದ ದೇಶಗಳೇ ಬಹುತೇಕ ಇಲ್ಲ ಎನ್ನಬಹುದು. ಇಂದು ಅಶಾಂತಿ ಇರುವ ಪ್ರಪಂಚದ ಯಾವುದೇ ದೇಶವನ್ನು ನೋಡಿದರೂ, ಅದರ ಮೂಲದಲ್ಲಿ ಅವುಗಳ ನೇರ ಮತ್ತು ತೆರೆಮರೆಯ ಕೈವಾಡ ಕಂಡೇ ಕಾಣುತ್ತದೆ. ಸೋವಿಯತ್ ಒಕ್ಕೂಟದ ಪತನದ ಬಳಿಕ ಇದು ಭಯೋತ್ಪಾದನೆಯ ವಿರುದ್ಧ ಯುದ್ಧದ ಹೆಸರಿನಲ್ಲಿ ನಡೆಯಿತು.

ಸುಮ್ಮನೇ ಪ್ರಪಂಚದ ಕೆಲವು ದೇಶಗಳನ್ನು ಹೆಸರಿಸಿದರೂ ಸಾಕು- ಅಲ್ಲಿ ದೊಡ್ಡಣ್ಣನ ಮಧ್ಯಪ್ರವೇಶ ನಡೆದಿದೆ; ಹಲವಾರು ಸರ್ವಾಧಿಕಾರಗಳಿಗೆ ಪ್ರಜಾಪ್ರಭುತ್ವದ ರಕ್ಷಕರೆನ್ನುವ ರಾಷ್ಟ್ರಗಳು ಬೆಂಬಲ ನೀಡಿವೆ. ಉದಾಹರಣೆಗೆ ಮಧ್ಯ ಅಮೇರಿಕಾದ ನಿಕರಾಗುವ, ಹೊಂಡುರಾಸ್, ಪನಾಮಾ, ಗ್ವಾಟೆಮಾಲಾ, ಮೆಕ್ಸಿಕೋ, ಎಲ್ ಸಾಲ್ವದೋರ್, ಲ್ಯಾಟಿನ್ ಅಮೇರಿಕಾದ ಚಿಲಿ, ಅರ್ಜೆಂಟೀನಾ, ಕ್ಯೂಬಾ, ಗ್ರೆನೆಡಾ, ಪೆರು, ಬೊಲಿವಿಯಾ, ವೆನಿಜ್ಯುವೆಲಾ… ಆಫ್ರಿಕಾ ಅಂಗೋಲ, ಕಾಂಗೋ, ನಮೀಬಿಯಾ, ಮೊಜಾಂಬಿಕ್, ಈಜಿಪ್ಟ್, ಲಿಬಿಯಾ… ಏಷ್ಯಾದ ವಿಯೆಟ್ನಾಂ, ಕಾಂಬೋಡಿಯ, ಫಿಲಿಪೈನ್ಸ್, ಫಿಜಿ, ಮ್ಯಾನ್ಮಾರ್, ಸಿರಿಯಾ, ಯೆಮೆನ್, ಇರಾನ್, ಇರಾಕ್, ಅಫ್ಘಾನಿಸ್ತಾನ… ಯುರೋಪಿನ ಯುಗೋಸ್ಲಾವಿಯಾ, ಜೆಕೋಸ್ಲಾವಾಕಿಯಾ…. ಹೀಗೆ ಯಾವುದೇ ದೇಶದ ಮಟ್ಟಿಗೆ ನೋಡಿದರೂ ಈ ಮಾತು ಸತ್ಯ.

ತನಗೆ ಲಾಭವಿಲ್ಲದ ದೇಶಗಳಲ್ಲಿ ನಡೆದ ರಕ್ತಪಾತಗಳಿಗೆ ಕುರುಡು, ಕಿವುಡಾಗಿರುವುದಕ್ಕೆ ಉದಾಹರಣೆಯಾಗಿ ಉಗಾಂಡದ ಇದಿ ಅಮೀನನಂತಹ ನರರಾಕ್ಷಸನನ್ನು ಸಹಿಸಿಕೊಂಡು ಕುಳಿತದ್ದನ್ನು ನೆನಪಿಸಬಹುದು. ನಂತರದ ಉದಾಹರಣೆ ಬೇಕೆಂದರೆ, ರುವಾಂಡದ ಹುಟು-ತುತ್ಸಿ ಬುಡಕಟ್ಟುಗಳ ಸಂಘರ್ಷದಲ್ಲಿ ಯುಎಸ್‌ಎ ಮತ್ತು ನ್ಯಾಟೋ ದೇಶಗಳ ಪಾತ್ರವನ್ನು ನೋಡಬಹುದು. ಹಿಂದೆ ಅಲ್ಲಿ ಅಲ್ಪಸಂಖ್ಯಾತ ತುತ್ಸಿಗಳ ಆಡಳಿತವಿತ್ತು. ನಂತರ ಹಲವಾರು ವರ್ಷಗಳ ಸಂಘರ್ಷದ ಬಳಿಕ ಬಹುಸಂಖ್ಯಾತ ಹುಟುಗಳ ಕೈಮೇಲಾಯಿತು. ನೆಪಮಾತ್ರಕ್ಕೆ ನ್ಯಾಟೋ ಒಂದು ಶಾಂತಿಪಾಲನಾ ಪಡೆ ಕಳಿಸಿತು. ಬಡದೇಶವಾದ ರುವಾಂಡದಲ್ಲಿ ಏನೇ ನಡೆದರೂ ಅದಕ್ಕೇನು ದೊಡ್ಡ ಆಸಕ್ತಿ ಇರಲಿಲ್ಲ. ತೊಂಬತ್ತರ ದಶಕದ ಮಧ್ಯ ಭಾಗದಲ್ಲಿ ಹುಟುಗಳು ಯೋಜಿತ ರೀತಿಯಲ್ಲಿ ಸರಕಾರಿ ಪ್ರಾಯೋಜಕತ್ವದಲ್ಲಿ ತುತ್ಸಿಗಳ ಹತ್ಯಾಕಾಂಡ ನಡೆಸಿದರು. ಒಂದೇ ವಾರದಲ್ಲಿ ಹೆಂಗಸರು ಮಕ್ಕಳೆನ್ನದೆ ಸುಮಾರು ಹತ್ತು ಲಕ್ಷದಷ್ಟು ತುತ್ಸಿಗಳನ್ನು ಹಾದಿಬೀದಿಗಳಲ್ಲಿ ಮಚ್ಚುಗಳಿಂದ ಕೊಚ್ಚಿ ಕೊಲ್ಲಲಾಯಿತು. ಇಂತಹ ಹತ್ಯಾಕಾಂಡದ ಪೂರ್ವಸೂಚನೆ ಇದ್ದರೂ ನ್ಯಾಟೋ ಆಗಲೀ ವಿಶ್ವಸಂಸ್ಥೆಯಾಗಲೀ ಏನೂ ಮಾಡದೆ ಮೂಕ ಪ್ರೇಕ್ಷಕರಂತೆ ಕುಳಿತವು. ಯಾವ ಪ್ರಜಾಪ್ರಭುತ್ವದ ಆತ್ಮಸಾಕ್ಷಿಯೂ ಕಲಕಲಿಲ್ಲ! ನಾಝಿಗಳ ಬಳಿಕ ಇಷ್ಟು ದೊಡ್ಡ ಹತ್ಯಾಕಾಂಡ ಬೇರೆ ನಡೆದಿಲ್ಲ! ಈ ಘಟನೆ ಹೆಚ್ಚಿನ ಪ್ರಚಾರಕ್ಕೂ ಬರಲಿಲ್ಲ. ‘ಹೊಟೇಲ್ ರುವಾಂಡ’ ಎಂಬ ಚಿತ್ರದಲ್ಲಿ ಇದರ ಕ್ರೂರ ಚಿತ್ರಣ ಸಿಗುತ್ತದೆ. ಅದರಂತೆ ವಜ್ರಗಳಿಗಾಗಿ ಸಿಯರಾ ಲಿಯೋನ್‌ನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ಲಿಯೊನಾರ್ಡೊ ಡಿ ಕ್ಯಾಪ್ರಿಯೋ ನಟಿಸಿರುವ ‘ಬ್ಲಡ್ ಡೈಮಂಡ್’ ಚಿತ್ರದಲ್ಲಿ ನೋಡಬಹುದು. ಇಲ್ಲಿ ಖಾಸಗಿ ಕಾರ್ಪೋರೇಟ್‌ಗಳು ಖಾಸಗಿ ಸೇನೆಗಳನ್ನು ಸಾಕಿ ಜನರನ್ನು ಗುಲಾಮರಂತೆ ದುಡಿಸುತ್ತಿದ್ದರೂ ಯಾರೂ ಸುದ್ದಿಯೇ ಎತ್ತುವುದಿಲ್ಲ. ಆಫ್ರಿಕಾದ ಬಡ ದೇಶಗಳ ಜನರು ಕಾದಾಡಿ ಸತ್ತರೂ, ಹಸಿವಿನಿಂದ ಸತ್ತರೂ ಕೇಳುವವರೇ ಇಲ್ಲ.

ಅದರೆ, ತನಗೆ ಲಾಭ ಇರುವ ಕಡೆ ಬಂಡವಾಳಶಾಹಿಗಳು ಹೇಗೆ ಮಧ್ಯಪ್ರವೇಶ ಮಾಡುತ್ತಾರೆ ಎಂಬುದನ್ನು ತೈಲಸಂಪನ್ನ ರಾಷ್ಟ್ರಗಳಲ್ಲಿ ನೋಡಬಹುದು. ದಶಕಗಳ ಹಿಂದೆ ಇರಾನಿನ ಲೋಲುಪ ಸರ್ವಾಧಿಕಾರಿ ಶಾನನ್ನು ಪಾಶ್ಚಾತ್ಯರು ತೈಲಕ್ಕಾಗಿ ಬೆಂಬಲಿಸಿದ್ದರು. ಆಗ ಪ್ರಜಾಪ್ರಭುತ್ವ ಅವರಿಗೆ ಮುಖ್ಯವೆನಿಸಲಿಲ್ಲ. ನಂತರ ಅಯಾತೊಲ್ಲಾ ಖೊಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದಾಗ ಮಾತ್ರ ಅದು ನೆನಪಿಗೆ ಬಂತು. ಇದು ಮುಂದೆ ಇರಾಕ್, ಲಿಬಿಯಾ, ಈಜಿಪ್ಟ್, ಯೆಮೆನ್, ಆಫಘಾನಿಸ್ತಾನ ಮುಂತಾದ ದೇಶಗಳಲ್ಲಿ ಮರುಕಳಿಸಿತು. ಇರಾನ್- ಇರಾಕ್ ಯುದ್ಧದಲ್ಲಿ ಯುಎಸ್‌ಎಯ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತು. ಕಾರಣ ಅಥವಾ ನೆಪ ಪ್ರಜಾಪ್ರಭುತ್ವವೂ ಅಲ್ಲ ಸರ್ವಾಧಿಕಾರವೂ ಅಲ್ಲ. ಬದಲಾಗಿ ತೈಲ ಸಂಪತ್ತು.

ಈ ರೀತಿಯಾಗಿ ದೊಡ್ಡಣ್ಣನ ಮೂಗು ತೂರಿಸುವ ಕೆಲಸವೇ ಜಾಗತಿಕ ಭಯೋತ್ಪಾದನೆಗೆ ಮೂಲಕಾರಣ ಎಂದು ಎಲ್ಲರಿಗೂ ಗೊತ್ತು. ಈಗ ಶ್ರೀಮಂತ ದೇಶವಾಗಿರುವ ಸೌದಿ ಅರೇಬಿಯಾದಲ್ಲಿ ತೈಲ ಪತ್ತೆಯಾಗುವ ತನಕ ಅದು ಬಡ ರಾಷ್ಟ್ರವೇ ಆಗಿತ್ತು. ಯುಎಇ, ಬಹ್ರೈನ್ ಮುಂತಾದವುಗಳ ಕತೆಯೂ ಅಷ್ಟೇ. ಆಗ ಲಾಭಕ್ಕಾಗಿ ತನ್ನ ತಂತ್ರಜ್ಞಾನದ ಬಲ ಉಪಯೋಗಿಸಿದ ಯುಎಸ್‌ಎ ಅಲ್ಲಿ ಜಂಟಿಯ ಬಹುರಾಷ್ಟ್ರೀಯ ಕಂಪೆನಿ ‘ಅರಾರ್ಮ್ಕೊ’ವನ್ನು (ARab-AM-COmpany) ಸ್ಥಾಪಿಸಿತು. ಇಂತಹ ವ್ಯಾಪಾರಿ ಹಿತಾಸಕ್ತಿಗಳಿಗಾಗಿಯೇ ಪ್ರಜಾಪ್ರಭುತ್ವ ಇರಲಿ, ಸರ್ವಾಧಿಕಾರ ಇರಲಿ, ರಾಜಸತ್ತೆಯೇ ಇರಲಿ ಎಲ್ಲಾ ಪ್ರಭುತ್ವಗಳನ್ನು ಬಂಡವಾಳಶಾಹಿಯೇ ನಿಯಂತ್ರಿಸುತ್ತಾ ಬಂದಿದೆ. ಇದೇ ಸ್ವಯಂಘೋಷಿತ ಪ್ರಜಾಪ್ರಭುತ್ವದ ಕಾವಲುನಾಯಿಗಳು (ವಾಚ್ ಡಾಗ್ ಎಂಬುದು ಅವರದ್ದೇ ಪದ!) ಕೊಲ್ಲಿ ರಾಷ್ಟ್ರಗಳಲ್ಲಿ ರಾಜಸತ್ತೆಗಳನ್ನು ಬೆಂಬಲಿಸುತ್ತಾ ಬಂದಿಲ್ಲವೇ? ಇಂತಹ ಸಂಘರ್ಷಗಳ ಕಾರಣದಿಂದಲೇ ಸೌದಿ ಸಂಜಾತ ಒಸಾಮಾ ಬಿನ್ ಲಾದೆನ್‌ನಂತಹ ಸರ್ವಾಧಿಕಾರಿ ಭಯೋತ್ಪಾದಕನ ಹುಟ್ಟಿಗೆ ಕಾರಣವಾಯಿತು ಎಂಬುದು ಸತ್ಯವಲ್ಲವೇ?

ಲಿಬಿಯಾದ ಸರ್ವಾಧಿಕಾರಿ ಮುಹಮ್ಮದ್ ಗದ್ದಾಫಿ, ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಇವರನ್ನು ಅಷ್ಟೇ ಏಕೆ, ವೆನೆಜುವೆಲಾದಂತಹ ತೈಲ ಸಂಪನ್ನ ರಾಷ್ಟ್ರವನ್ನೇ ಕೊಂದವರು ಯಾರು? ಪ್ತಾಲೆಸ್ತೀನ್ ಸಮಸ್ಯೆಗಳಿಗೆ ಕಾರಣರು ಯಾರು? ಇಸ್ರೇಲಿನಂತಹ ದೇಶಗಳನ್ನು ಬೆಂಬಲಿಸುತ್ತಾ ಬಂದಿರುವವರು ಯಾರು? ಇಸ್ರೇಲಿನಂತೆಯೇ ಕಾಶ್ಮೀರದ ಸಮಸ್ಯೆಯನ್ನು ಸೃಷ್ಟಿಸಿದವರು ಯಾರು? ತಾವೇ ಭಯೋತ್ಪಾದಕ ಎಂದು ಕರೆದ ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಶನ್ ನಾಯಕ ಯಾಸರ್ ಅರಾಫತ್ ಅವರಿಗೆ ಮತ್ತು ಇಸ್ರೇಲ್ ವಿದೇಶ ಮಂತ್ರಿಯಾಗಿದ್ದ ಇಸಾಕ್ ರಬಿನ್ ಅವರಿಗೆ ನೋಬೆಲ್ ‘ಶಾಂತಿ’ ಪ್ರಶಸ್ತಿ ಕೊಟ್ಟವರು ಯಾರು?

ಕರಿಯರ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಅಧಿಕಾರ ಸ್ಥಾಪಿಸಿದ ಬಿಳಿಯ ಡಚ್ಚರ ವಿರುದ್ಧ ಬಿಳಿಯ ಬ್ರಿಟಿಷರೇ ಯುದ್ಧ ನಡೆಸಿದ್ದೇಕೆ? ಸಂಪತ್ತಿನ ಸ್ವಧೀನಕ್ಕಾಗಿ. ಆಂಗ್ಲೋ- ಬೋಯೆರ್ ವಾರ್ ಎಂದು ಕುಖ್ಯಾತವಾದ ಯುದ್ಧ ಏಕೆ ನಡೆಯಿತು? ಅಲ್ಲಿಯ ಮೂಲ ನಿವಾಸಿಗಳನ್ನೇ ಏಕೆ ಗುಲಾಮರನ್ನಾಗಿ, ಎರಡನೇ ದರ್ಜೆ ಪ್ರಜೆಗಳಾಗಿ ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದವರನ್ನು ಬೆಂಬಲಿಸುತ್ತಾ, ಸಹಿಸುತ್ತಾ, ಪೋಷಿಸುತ್ತಾ ಬಂದವರು ಯಾರು? ನೆಲ್ಸನ್ ಮಂಡೇಲಾರನ್ನು ಅಷ್ಟು ವರ್ಷ ಜೈಲಿಗೆ ತಳ್ಳಿದವರು ಯಾರು? ನಂತರ ವರ್ಣಭೇದ ನೀತಿ ತೊಲಗಿದ ಬಳಿಕ ಮಂಡೇಲಾರ ಜೊತೆಗೇ ದಮನಕಾರಿ ಪಿಕ್ ಬೋಥಾ ಅವರಿಗೆ ಜಂಟಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಿದವರು ಯಾರು?

ಸರ್ವಾಧಿಕಾರಗಳು ಎಲ್ಲಾ ರೀತಿಯ ನಾಟಕಗಳನ್ನು ನಡೆಸಿಕೊಂಡು ತಮ್ಮನ್ನು ತಾವು ಪ್ರತಿಷ್ಟಾಪಿಸಿವೆ. ಎಲ್ಲವುಗಳ ಹಿಂದೆ ಇರುವ ಶಕ್ತಿಗಳು ಯಾವುವು ಎಂಬುದನ್ನು ನಾವು ಗಮನಿಸಬೇಕು. ಇಷ್ಟೆಲ್ಲಾ ಒಂದು ಪೀಠಿಕೆ ಮಾತ್ರ. ಪ್ರಜಾಪ್ರಭುತ್ವದ ವೇಷದಲ್ಲೂ ಸರ್ವಾಧಿಕಾರ ಬರಬಹುದು. ಹಿಟ್ಲರ್ ಕೂಡಾ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದವನೆಂಬುದು ನಮಗೆ ನೆನಪಿರಲಿ. ಪ್ರತಿಯೊಬ್ಬ ಸರ್ವಾಧಿಕಾರಿ ಜಾತಿ, ಧರ್ಮ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿ, ಬೆಳೆಸಿ, ಬೆಳೆದರೆಂಬುದನ್ನು ನಾವು ಗಮನಿಸಬೇಕು. ನಮ್ಮಲ್ಲಿ, ನಮ್ಮ ಭಾರತದಲ್ಲಿ ಇದು ನಡೆಯುತ್ತಿದೆಯೇ? ಏನಾದರೂ ಸಾಮ್ಯವಿದೆಯೇ? ಇಲ್ಲಿ ಬೆರಳೆಣಿಕೆಯ ಬಂಡವಾಳಶಾಹಿಗಳಿಗೆ ಯಾಕೆ ರಾಜಗೌರವ ಮತ್ತು ಕಾನೂನಿನಿಂದ ರಕ್ಷಣೆ ನೀಡಲಾಗುತ್ತಿದೆ? ನಾವೇನಾದರೂ ಎಚ್ಚರಿಕೆ ವಹಿಸಬೇಕೆ? ವ್ಯವಸ್ಥಿತ ಸಂಚಿಗೆ ವ್ಯವಸ್ಥಿತ ಪ್ರತಿಹೋರಾಟ ಅಗತ್ಯವಿದೆಯೇ, ಇದನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕಾಗಿದೆ.