Government employees – Peepal Media

ರಾಜಕೀಯ ಒತ್ತಡ, ಆಮಿಷಗಳು ನಡೆದು ಸೋಲು ಅನುಭವಿಸಬೇಕಾಯಿತು – ಕೆ.ಎಂ. ಶ್ರೀನಿವಾಸ್
ಹಾಸನ: ಪದಾಧಿಕಾರಿಗಳ ಚುನಾವಣೆಯಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ನಾನು ಸ್ವಾಭಿಮಾನಿ ತಂಡದಿಂದ ಸ್ಪರ್ದೆ ಮಾಡಿ ಅಲ್ಪ ಮತಗಳ ಅಂತರದಲ್ಲಿ ಪರಾಜಿತಗೊಂಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕಾರಣಿಗಳ ಒತ್ತಡಗಳು, ಆಮಿಷಗಳು ನಡೆದು ಸೋಲು ಅನುಭವಿಸಬೇಕಾಯಿತು ಎಂದು ಸಂಘದ ಪರಾಜಿತ ಅಭ್ಯರ್ಥಿ ಕೆ.ಎಂ. ಶ್ರೀನಿವಾಸ್ ಬೇಸರದಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ನಮ್ಮ ಎದುರಾಳಿ ಅಭ್ಯರ್ಥಿಯನ್ನೆ ಆಯ್ಕೆ ಮಾಡಬೇಕೆಂದು ಪಣತೊಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಹಾಲಿ ಜೆಡಿಎಸ್ ಶಾಸಕರು ಹಾಗೂ ಮಾಜಿ ಸಚಿವರು ಮತ್ತು ಕಾಂಗ್ರೆಸ್ ಮುಖಂಡರಾದ ಮಂಜೇಗೌಡರ ಜೊತೆ ಸೇರಿ ಒಬ್ಬ ಬಡ ಉಪನ್ಯಾಸಕನ ವಿರುದ್ಧ ದೊಡ್ಡ ಮಟ್ಟದ ರಾಜಕಾರಣದ ಹೋರಾಟ ನಡೆದಿದೆ. ಡಿಸೆಂಬರ್ ೩ರ ವರೆಗೂ ಅನೇಕರು ನಮ್ಮ ಜೊತೆ ಗುರುತಿಸಿಕೊಂಡು ಸಂಘಟನೆಗೆ ಬಂದಂತಹವರು ನಮಗಾಗಿ ದುಡಿದಿದ್ದಾರೆ. ಚುನಾವಣೆ ಹಿಂದಿನ ದಿನ ರಾತ್ರಿಯಲ್ಲಿ ಗಂಟೆ ಗಂಟೆಗೂ ನಡೆದಂತಹ ವ್ಯವಹಾರಗಳು, ನಡೆ ನಮಗೆ ದುಃಖ ತಂದಿದೆ ಎಂದರು. ಈ ಚುನಾವಣೆ ಇತಿಹಾಸ ಸೃಷ್ಟಿಸಿದೆ. ಆತ್ಮೀಯರೇ ಎನಿಸಿಕೊಂಡಿದ್ದ ನಿರ್ದೇಶಕರು ಮೋಸ ಮಾಡಿದರು. ಡಿ. ೩ರ ರಾತ್ರಿಯಿಂದ ಬೆಳಿಗ್ಗೆ ನಡೆದ ವ್ಯವಹಾರದಿಂದ ನಾನು ಸೋಲಬೇಕಾಯಿತು. ರಾಜಕೀಯ ಮುಖಂಡರಾದ ಬಾಗೂರು ಮಂಜೇಗೌಡ, ಹೆಚ್.ಡಿ.ರೇವಣ್ಣ ಒಂದಾಗಿದ್ದರಿಂದ ನಾನು ಅನಾಥನಾದೆ. ಈ ನಡೆ ಭಾರಿ ಬೇಸರ ತರಿಸಿದೆ. ಯಾರೂ ಸಂಘದ ಹಿತದೃಷ್ಟಿಯಿಂದ ಚುನಾವಣೆಯನ್ನು ನೋಡಲಿಲ್ಲ. ಐಪಿಎಲ್ ಮಾದರಿಯಲ್ಲಿ ಈ ಚುನಾವಣೆ ನಡೆದಿದೆ. ಯಾರಾರು ಎಲ್ಲೆಲ್ಲಿ ಒಂದಾದರು ಗೊತ್ತಾಗಲೇ ಇಲ್ಲ.  ಶಿವಸ್ವಾಮಿ ಮತ್ತು ನಾನು ಒಟ್ಟಾದಾಗ ಬೆಂಬಲಿಸಿದವರೇ ನಂತರ ನಮಗೆ ಮೋಸ ಮಾಡಿದರು. ಐದು ವರ್ಷಗಳ ಹಿಂದೆಯೂ ಇದೇ ರೀತಿ ರಾಜಕೀಯ ಮಾಡಿ ನನ್ನ ಸೋಲಿಸಿದರು. ನಮ್ಮ ತಂಡ ಗೆಲ್ಲಬೇಕೆಂಬ ಆಸೆ ಎಲ್ಲರದ್ದಾಗಿತ್ತು ಎಂದು ಹೇಳಿದರು. ರಾಜಕೀಯ ಮುಖಂಡರಾದ ಬಾಗೂರು ಮಂಜೇಗೌಡ, ಹೆಚ್.ಡಿ.ರೇವಣ್ಣ ಒಂದಾಗಿದ್ದರಿಂದ ನಾನು ಅನಾಥನಾದೆ. ಈ ನಡೆ ನನಗೆ ಬೇಸರ ತರಿಸಿದೆ. ಯಾರೂ ಸಂಘದ ಹಿತದೃಷ್ಟಿಯಿಂದ ಚುನಾವಣೆಯನ್ನು ಕಾಣಲಿಲ್ಲ. ನಾವು ಎಲ್ಲಾ ಸರಕಾರಿ ನೌಕರರ ಮನಸ್ಸು ಗೆದ್ದಿದ್ದೇವು. ಮತ ಹಾಕುವುದರಲ್ಲಿ ನಮಗೆ ಮೋಸ ಮಾಡಿದರು. ನಾನು ಇನ್ನೂ ಮುಂದೆ ಯಾವ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದ ಅವರು, ಹಲವಾರು ಆಮಿಷದ ನಡುವೆಯೂ ನನಗೆ ೩೧ ಮತಗಳನ್ನು ನೀಡಿದ ಸಹಕಾರ ಕೊಟ್ಟವರಿಗೆ ಇದೆ ವೇಳೆ ಧನ್ಯವಾದಗಳನ್ನು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪರಿಷತ್ತ್ ನೂತನ ಸದಸ್ಯರಾದ ಟಿ. ರಾಜು, ಖಜಾಂಚಿ ಅಭ್ಯರ್ಥಿ ಮಧು, ಸಂಘದ ನಿರ್ದೇಶಕ ವಿಶ್ವನಾಥ್ ಇತರರು ಉಪಸ್ಥಿತರಿದ್ದರು

NPS ವಿರೋಧಿ ಆಂದೋಲನ : ಲಕ್ಷ ಲಕ್ಷ ಸಂಖ್ಯೆಯಲ್ಲಿ ರಾಜಧಾನಿ ಪ್ರವೇಶಿಸಿದ ಸರ್ಕಾರಿ ನೌಕರರು!
ಕೇಂದ್ರ ಸರ್ಕಾರದ NPS (ಹೊಸ ಪಿಂಚಣಿ ಯೋಜನೆ) ಯೋಜನೆಗೆ ಮೊದಲಿನಿಂದಲೂ ದೊಡ್ಡ ಮಟ್ಟದ ವಿರೋಧವಿದ್ದು, ಈಗ ಕರ್ನಾಟಕದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಆಂದೋಲನವೇ ಶುರುವಾಗಿದೆ. ಅದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸರ್ಕಾರಿ ನೌಕರರು ಲಕ್ಷೋಪಾದಿಯಲ್ಲಿ ಬಂದು ಸೇರಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ಭವಿಷ್ಯದಲ್ಲಿ ಆಗುವ ಸಮಸ್ಯೆಗಳನ್ನು ಮನಗಂಡು ಈಗಾಗಲೇ ದೇಶದ ಹಲವು ಕಡೆಗಳಲ್ಲಿ ವಿರೋಧ ವ್ಯಕ್ತವಾಗಿದ್ದು ಹಲವು ರಾಜ್ಯ ಸರ್ಕಾರಗಳು ಈ ಯೋಜನೆಯನ್ನೇ ರದ್ದುಪಡಿಸಿವೆ. ಕಳೆದ ಕೆಲವೇ ದಿನಗಳ ಹಿಂದೆ ಸರ್ಕಾರ ರಚಿಸಿದ ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಕೂಡಾ ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಪಡಿಸುವ ಆಶ್ವಾಸನೆ ಕೊಟ್ಟಿದ್ದು, ಹೊಸ ಸರ್ಕಾರ ರಚನೆಯ ತಕ್ಷಣವೇ ಕೊಟ್ಟ ಭರವಸೆಯಂತೆ ಯೋಜನೆ ರದ್ದುಪಡಿಸಿದೆ.

ಸಧ್ಯ ಕರ್ನಾಟಕದಲ್ಲೂ ಹಿಂದಿನಿಂದ ಇದಕ್ಕೆ ವಿರೋಧವಿದ್ದು ಇಲ್ಲಿಯವರೆಗೆ ಅಲ್ಲಲ್ಲಿ ಈ ಯೋಜನೆ ವಿರೋಧಿಸಿ, ಪ್ರತಿಭಟನೆ, ಧರಣಿ ನಡೆಯುತ್ತಲೇ ಇತ್ತು. ಆದರೆ ಈಗ ರಾಜ್ಯ ಸರ್ಕಾರಿ ನೌಕರರ ಸಂಘ ಸೇರಿದಂತೆ ನೌಕರರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ದೊಡ್ಡ ಪ್ರಮಾಣದ ಅನಿರ್ಧಿಷ್ಟಾವಧಿ ಮುಷ್ಕರ ಪ್ರಾರಂಭವಾಗಿದೆ.

ರಾಜ್ಯದ ನಾನಾ ಕಡೆಗಳಿಂದ ಸರ್ಕಾರಿ ನೌಕರರು ಫ್ರೀಡಂ ಪಾರ್ಕ್ ಬಳಿ ಸೇರಿದ್ದು ಸಧ್ಯ ಪ್ರೀಡಂ ಪಾರ್ಕ್ ನಲ್ಲಿ ಕಾಲಿಡಲೂ ಜಾಗವಿಲ್ಲದಂತಾಗಿದೆ. ಧರಣಿಯ ಹೆಚ್ಚಿನ ಕಡೆಗಳಲ್ಲಿ ಸರ್ಕಾರಕ್ಕೆ ನೌಕರರು ಎಚ್ಚರಿಕೆ ಕೊಡುತ್ತಿದ್ದು “ಹಿಮಾಚಲ ಪ್ರದೇಶದ ಫಲಿತಾಂಶ ಬೇಕೋ, ಗುಜರಾತ್ ಫಲಿತಾಂಶ ಬೇಕೋ ನೀವೇ ನಿರ್ಧರಿಸಿ” ಎಂಬಂತಹ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾದ ಎಲ್ಲಾ ಸರ್ಕಾರಿ ನೌಕರರು ನೀಲಿ ಟೀ ಶರ್ಟ್, ಗಾಂಧಿ ಟೋಪಿಯ ಸಮವಸ್ತ್ರ ಧರಿಸಿದ್ದು, ರಾಜ್ಯದ ಪ್ರತೀ ತಾಲ್ಲೂಕುಗಳಿಂದ ಫ್ರೀಡಂ ಪಾರ್ಕ್ ಗೆ ಬಂದಿಳಿದಿದ್ದಾರೆ. ಚನ್ನರಾಯಪಟ್ಟಣದಿಂದ ಸರ್ಕಾರಿ ನೌಕರರ ಒಂದು ದೊಡ್ಡ ಗುಂಪು ಸೈಕಲ್ ಜಾತಾ ಮೂಲಕ ಆಗಮಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಸರ್ಕಾರಿ ನೌಕರರೇ ತಿರುಗಿ ಬೀಳುವ ಎಲ್ಲಾ ಮುನ್ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ “ತೊಲಗಲಿ ತೊಲಗಲಿ NPS ತೊಲಗಲಿ, Vote for OPS” ಘೋಷಣೆಗಳು ಮುಗಿಲು ಮುಟ್ಡುತ್ತಿವೆ. ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯನ್ನೇ ನೌಕರರು ಗುರಿಯಾಗಿಟ್ಟುಕೊಂಡು ಸರ್ಕಾರಕ್ಕೆ ಸರಿಯಾದ ಬಿಸಿ ಮುಟ್ಟಿಸಲು ಹೊರಟಿದ್ದಾರೆ.

ಪುಣ್ಯಕೋಟಿ ಯೋಜನೆಗೆ ದಯವಿಟ್ಟು ನನ್ನ ಸಂಬಳ ಕಟಾವು ಮಾಡಬೇಡಿ: ಸರ್ಕಾರಕ್ಕೆ ನೌಕರರ ಮನವಿಪತ್ರ
ಬೆಂಗಳೂರು: ʼಪುಣ್ಯಕೋಟಿʼ ಯೋಜನೆಗೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕುರಿತು ಸರ್ಕಾರಿ ನೌಕರರೊಬ್ಬರು ಮನವಿಪತ್ರ ಸಲ್ಲಿಸಿದ್ದು, ಯೋಜನೆಗೆ ನನ್ನ ಸಂಬಳ ಕಟಾವು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿನ ಗೋವುಗಳ ರಕ್ಷಣೆಗಾಗಿ, ರಾಜ್ಯ ಸರ್ಕಾರವು ʼಪುಣ್ಯಕೋಟಿʼ ಯೋಜನೆಯನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಸರ್ಕಾರಿ ನೌಕರರು, ತಮ್ಮ ಒಂದು ತಿಂಗಳ ಸಂಬಳದ ಹಣವನ್ನು ಈ ಯೋಜನೆಗೆ ಮೀಸಲಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದೇಶ ಹೊರಡಿಸಿದ್ದರು. ಆದರೆ ಇದಕ್ಕೆ ನೌಕರರ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನೌಕರರೊಬ್ಬರು ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರವು ಪೀಪಲ್‌ ಮೀಡಿಯಾಕ್ಕೆ ಲಭ್ಯವಾಗಿದೆ.

ನೌಕರರು ಸಲ್ಲಿಸಿರುವ ಮನವಿ ಪತ್ರದಲ್ಲಿ ಏನಿದೆ?

ಬೆಂಗಳೂರಿನಲ್ಲಿ 10ನೇ ಮುಖ್ಯ ಮಹಾದಂಡಾದಿಕಾರಿಗಳ ನ್ಯಾಯಾಲಯದಲ್ಲಿ ಶಿ ರಸ್ತೇದಾರರಾಗಿ ನೌಕರಿ ಮಾಡುತ್ತಿರುವ ಮೋಹನ್‌ ಕುಮಾರ್‌ ಹೆಚ್‌. ಎಂಬುವರು ಸರ್ಕಾರಕ್ಕೆ ಮನವಿ ಪತ್ರಸಲ್ಲಿಸಿರುವ ಈ ಪತ್ರದಲ್ಲಿ, ʼಸರ್ಕಾರ ತಂದಿರುವ ಹೊಸ ಪಿಂಚಣಿ ಯೋಜನೆ NPS (New Pension Scheme)  ನನಗೆ ಅನ್ವಯವಾಗುತ್ತಿದ್ದು, ನಿವೃತ್ತಿ ನಂತರ ನನ್ನ ಬದುಕಿಗೇ ನಿರ್ದಿಷ್ಟ ಹಾಗೂ ಸುಭದ್ರ ವ್ಯವಸ್ಥೆ ಇಲ್ಲದಿರುವಾಗ ಪುಣ್ಯಕೋಟಿಗಳಾದ ಗೋವುಗಳ ನಿರ್ವಹಣೆಗೆ ಹಣ ಒದಗಿಸುವುದು ಸಾದುವಲ್ಲʼ ಎಂದು ತಿಳಿಸಿದ್ದಾರೆ. ಈ ಕಾರಣದಿಂದ ತಮ್ಮ ಸಂಬಳದಿಂದ ಸರ್ಕಾರದ ಪುಣ್ಯಕೋಟಿ ಯೋಜನೆಗೆ ʼಹಣ ಕಟಾವು ಮಾಡಿಕೊಳ್ಳದಂತೆʼ ಸರ್ಕಾರವನ್ನು ಕೋರಿಕೊಂಡಿದ್ದಾರೆ.

ಇದೇ ಪತ್ರದಲ್ಲಿ ಈಗಿರುವ NPS ಯೋಜನೆಗೆ ಬದಲು ಹಳೆಯ OPS ಪಿಂಚಣಿ ವ್ಯವಸ್ಥೆಯನ್ನೇ ಜಾರಿಗೊಳಿಸಲು ಕೇಳಿಕೊಂಡಿರುವ ಮೋಹನ್‌ಕುಮಾರ್‌, ʼನನಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದರೆ ನನ್ನ ನಿವೃತ್ತಿಯವರೆಗೂ ಈ ಯೋಜನೆಗೆ ಇಂತಿಷ್ಟು ಎಂದು ಹಣ ನೀಡುತ್ತೇನೆʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪುಣ್ಯಕೋಟಿ ಯೋಜನೆಗಾಗಿ ಸರ್ಕಾರಿ ನೌಕರರ ಜೇಬಿಗೆ ಕತ್ತರಿ

ರಾಜ್ಯದ ಸರ್ಕಾರಿ ನೌಕರರು ಹೀಗೆ ಸರ್ಕಾರದ ಮಹತ್ವಾಕಾಂಕ್ಷೆಯ ಪುಣ್ಯಕೋಟಿ ಯೋಜನೆಗೆ ಒಬ್ಬೊಬ್ಬರಾಗಿ ಅಸಮ್ಮತಿ ವ್ಯಕ್ತಪಡಿಸುತ್ತಿರುವುದನ್ನು ಗಮನಿಸಬಹುದಾಗಿದೆ. ಈಗ ನೌಕರರು ಹೊಸ ಪಿಂಚಣಿ ಯೋಜನೆ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದು ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಬೃಹತ್‌ ಪಾದಯಾತ್ರೆ ನಡೆಸಿದ್ದಾರೆ. ಇದೀಗ ಹಳೆಯ ಪಿಂಚಣಿ ಜಾರಿಗೊಳಿಸುವವರೆಗೂ ಪುಣ್ಯಕೋಟಿ ಯೋಜನೆಗೆ ಹಣ ಕೊಡಲು ನಿರಾಕರಿಸುತ್ತಿರುವುದು NPS ವಿರೋದಿ ಹೋರಾಟಕ್ಕೆ ಹೊಸ ಕಳೆ ಬಂದಿದೆ.

ಇದನ್ನೂ ಓದಿ: ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ ಹಣ ; ಯಡವಟ್ಟಿನ ನಿರ್ಧಾರಕ್ಕೆ ವಿರೋಧ