Government – Peepal Media

ದೇವನಹಳ್ಳಿ ಭೂ ಸ್ವಾಧೀನ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟ ಆಹೋರಾತ್ರಿ ಧರಣಿ ಘೋಷಣೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ, ಹೋಬಳಿಯ ಹದಿಮೂರು ಹಳ್ಳಿಗಳ ರೈತರು ತಮ್ಮ ಭೂಮಿಗಾಗಿ ನಡೆಸುತ್ತಿರುವ ಹೋರಾಟ ನಿರ್ಣಾಯಕ ಹಂತಕ್ಕೆ ತಲುಪಿದೆ.

ಈ ರೈತರ 1,777 ಎಕರೆ ಭೂಮಿಯನ್ನು ವಶಪಡಿಸಿಕೊಂಡು, ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿರುವ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ, 2025 ಜೂನ್ 26ರಿಂದ ಫ್ರೀಡಂ ಪಾರ್ಕಿನಲ್ಲಿ ಅನಿರ್ಧಿಷ್ಟ ಆಹೋರಾತ್ರಿ ಧರಣಿಗೆ ಕರೆ ನೀಡಿದೆ.

ರೈತರು ಕಳೆದ 1,180 ದಿನಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಜೂನ್ 25, ಬುಧವಾರ ‘ದೇವನಹಳ್ಳಿ ಚಲೋ’ ಹಮ್ಮಿಕೊಳ್ಳುವ ಮೂಲಕ ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದ ಹೋರಾಟಗಾರರನ್ನು ಬುಧವಾರ ಪೊಲೀಸರು ಬಂಧಿಸಿದರು.

ಗುರುವಾರ ನಟ ಪ್ರಕಾಶ್ ರಾಜ್, ಹಿರಿಯ ಪತ್ರಕರ್ತೆ ವಿಜಯಾ, ಕೆ. ಎಸ್. ವಿಮಲಾ, ಸಿರಿಮನೆ ನಾಗರಾಜ್, ತಾರಾ, ಸುಷ್ಮಾ ಮತ್ತಿತರರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ತೆರಳಿದ್ದರು, ಈ ವೇಳೆ ಮೊದಲು ಅವರನ್ನು ಪೊಲೀಸರು ತಡೆದಿದ್ದು, ಆನಂತರದಲ್ಲಿ ಮುಖ್ಯಮಂತ್ರಿಗಳ ಭೇಟಿಗೆೆ ಅವಕಾಶ ಮಾಡಿಕೊಟ್ಟಿದ್ದಾರೆ.

ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ರೈತ ಮುಖಂಡರ ಜೊತೆ ಮಾತುಕತೆ ನಡೆಸಿದ ಮುಖ್ಯಮಂತ್ರಿಗಳು ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

ಈ ವೇಳೆ ಮುಖ್ಯಮಂತ್ರಿಗಳು ಸಭೆ ನಡೆಸಿ, ರೈತರ ಭೂಮಿಯನ್ನು ಸ್ವಾದೀನ ಪಡಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳುವವರೆಗೂ ನಾವು ಸುಮ್ಮನೆ ಕೂರುವುದಿಲ್ಲ, ಫ್ರೀಡಂ ಪಾರ್ಕಿನಲ್ಲಿ ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಜೂನ್ 26 ಮಧ್ಯಾಹ್ನ 1:30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಸಂಯುಕ್ತ ಹೋರಾಟ ಕರ್ನಾಟಕ ಅನಿರ್ದಿಷ್ಟ ಆಹೋರಾತ್ರಿ ಧರಣಿಗೆ ಕರೆ ನೀಡಿದೆ.

ಮನುಷ್ಯ, ಆನೆ ಮತ್ತು ಇತರ ಜೀವಿಗಳು: ಸಹಬಾಳ್ವೆಯ ಪ್ರಶ್ನೆ
ಪ್ರಕೃತಿಯ ನಿರಂತರ ಶೋಷಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದರಿಂದ ಉಂಟಾದ ಮತ್ತು ಆಗುತ್ತಿರುವ ಪ್ರಾಕೃತಿಕ ಅಸಮತೋಲನ ಹಾಗೂ ವಿನಾಶಗಳಿಗೂ ಮತ್ತು ಇಂದಿನ ಮಾನವ ಪ್ರಾಣಿ ಸಂಘರ್ಷಕ್ಕೂ ನೇರವಾದ ಸಂಬಂಧವಿದೆ ಎನ್ನುತ್ತಾರೆ ರಂಗಕರ್ಮಿ ಪ್ರಸಾದ್‌ ರಕ್ಷಿದಿ. ಈ ಹಿನ್ನೆಲೆಯಲ್ಲಿ ಅವರು ಮಾನವ ಮತ್ತು ಪ್ರಾಣಿ ಸಂಘರ್ಷವನ್ನು ವಿಶ್ಲೇ಼ಷಿಸುವ ಪ್ರಯತ್ನ ಮಾಡಿದ್ದಾರೆ. ಪ್ರತಿ ಶುಕ್ರವಾರ ಅವರ ಅಂಕಣ ʼಕಾಡು ಹೆಜ್ಜೆಯ ಜಾಡು ಹಿಡಿದುʼ ಓದಿ ನಿಮ್ಮ ಅಭಿಪ್ರಾಯ ಬರೆಯಿರಿ.

ಮಾನವ ಮತ್ತು ಪ್ರಾಣಿ ಸಂಘರ್ಷ

ಎಲ್ಲಾ ಕಡೆಗಳಲ್ಲಿ ಕಾಡಾನೆಗಳಿಂದ, ಇತರ ಪ್ರಾಣಿಗಳಿಂದ ಧಾಳಿಗೊಳಗಾಗುತ್ತಿರುವವರ ಸಂಖ್ಯೆ ಏರುತ್ತಲೇ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳು ಆನೆಗಳ ಉಪಟಳದಿಂದ ತೊಂದರೆಗೆ ಒಳಗಾಗಿವೆ. ಹಾಸನ ಜಿಲ್ಲೆಯೊಂದರಲ್ಲೇ ಇದುವರೆಗೆ ಆನೆಗಳಿಂದ ಹತರಾದವರ ಸಂಖ್ಯೆ ಎಪ್ಪತ್ತೈದನ್ನು ದಾಟಿದೆ. ಪ್ರತಿ ಸಲ ಯಾರಾದರೂ ಸತ್ತಾಗ ಜನರು ಪ್ರತಿಭಟನೆ ಮಾಡುತ್ತಾರೆ. ಆಗ ಸ್ಥಳಕ್ಕೆ ಓಡಿಬರುವ ರಾಜಕಾರಣಿಗಳು, ಅಧಿಕಾರಿಗಳು ಮಾಮೂಲಾಗಿ ಒಂದಷ್ಟು ಹೇಳಿಕೆ, ಆಶ್ವಾಸನೆಗಳನ್ನು ನೀಡುತ್ತಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಮೃತರ ಕುಟುಂಬದವರಿಗೆ ಸ್ಥಳದಲ್ಲೇ ಒಂದಷ್ಟು ಪರಿಹಾರ ನೀಡಿ ಧಾರಾಳವಾಗಿ ಅನುಕಂಪ ತೋರಲಾಗುತ್ತದೆ ಮತ್ತು ಭರವಸೆಗಳನ್ನು ನೀಡಲಾಗುತ್ತದೆ. ಯಥಾಪ್ರಕಾರ ರಾಜಕಾರಣಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಆದೇಶ ನೀಡುತ್ತಾರೆ. ಮತ್ತು ಸ್ಥಳದಿಂದ ಹೊರಡುವ ವೇಳೆಗೇ ಆ ಆದೇಶಗಳು ಏನೆಂಬುದು ಅವರಿಗೇ ಮರೆತು ಹೋಗಿರುತ್ತದೆ !

ಇತ್ತೀಚೆಗೆ ಸಕಲೇಶಪುರ ತಾಲ್ಲೂಕಿನಲ್ಲಿ ಹಾನಿಗೊಳಗಾದ ರೈತರು ಪ್ರತಿಭಟನೆ ಮಾಡಿದರು. ಅಲ್ಲಿಗೆ ಬಂದ ಮಾಜಿ ಮತ್ತು ಹಾಲಿ ಶಾಸಕರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಅವೆಲ್ಲ ಪರಸ್ಪರ ಟೀಕೆ ಟಿಪ್ಪಣಿಗಳಲ್ಲಿ, ಮತ್ತು ವಿಷಯಕ್ಕೆ ಸಂಬಂಧಿಸದ ಶಾಸಕರ ಸಂಬಳ ಸಾರಿಗೆಗಳ ವಿಚಾರದಲ್ಲಿ ವಾಗ್ವಾದಗಳಿಗೆ ಸೀಮಿತವಾಯಿತೇ ವಿನಃ, ಪ್ರಸ್ತುತ ಸಮಸ್ಯೆಯ ವಿಚಾರಕ್ಕೆ ಅವರು ಬರಲೇ ಇಲ್ಲ. ತಮ್ಮ ತಮ್ಮ ಅಧಿಕಾರದ ಅವಧಿಯಿಂದ ಹಿಡಿದು ಸ್ಥಳಾಂತರಿಸಿದ ಆನೆಗಳ ಸಂಖ್ಯೆ, ಸತ್ತವರ ಕುಟುಂಬಕ್ಕೆ ಕೊಡಿಸಿದ ಪರಿಹಾರದ ಹಣ, ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸಾಧನೆಗಳೆಂಬಂತೆ ಬಿಂಬಿಸಿದರೇ ಹೊರತು, ಹಾಗೆ ಸ್ಥಳಾಂತರಿಸಿದ ಆನೆಗಳು ಏನಾಗಿವೆ? ಎಲ್ಲಿವೆ? ಎನ್ನುವ ಸಂಗತಿಯನ್ನು ವಿವರಿಸಲಿಲ್ಲ. ಈ ಮಾನವ ಪ್ರಾಣಿ ಸಂಘರ್ಷಕ್ಕೆ ತಾವೂ ಅಷ್ಟೇ ಹೊಣೆಗಾರರು ಎನ್ನುವ ವಿಚಾರವನ್ನೇ ಬಹಳ ನಾಜೂಕಾಗಿ ಪಕ್ಕಕ್ಕೆ ಸರಿಸಿ ಮಾತನಾಡಿದರು.

ನಗರ ಪ್ರದೇಶಕ್ಕೆ ಆನೆಗಳು ಅಥವಾ ಇನ್ನಾವುದೇ ಪ್ರಾಣಿಗಳು ಬಂದು ತೊಂದರೆ ಮಾಡಿದಾಗ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ಪ್ರಚಾರ, ಹಳ್ಳಿಗಳಲ್ಲಿ ರೈತರು, ಕೂಲಿ ಕಾರ್ಮಿಕರು ಸತ್ತಾಗಲಾಗಲೀ, ರೈತರ ಬೆಳೆ ನಾಶವಾದಾಗಲಾಗಲೀ ಸಿಕ್ಕುವುದಿಲ್ಲ. ಬದಲಿಗೆ ಇದೊಂದು ಮಾಮೂಲಿ ಸಂಗತಿಯಾಗಿ ಸುದ್ದಿಯಾಗುತ್ತದೆ ಅಷ್ಟೆ.  ಇಂತಹ ವಿದ್ಯಮಾನ ನಮ್ಮ ಬದುಕಿನ ಎಲ್ಲಾ ಸಂಗತಿಗಳ ವಿಚಾರಕ್ಕೂ ಅನ್ವಯಿಸುತ್ತದೆ.

ಇದನ್ನು ಬರಿಯ ಮಾಧ್ಯಮಗಳ ಸಮಸ್ಯೆಯೆಂದು ನೋಡಬಾರದು. ಇದು ನಮ್ಮ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದ ಎಲ್ಲಾ ಚಟುವಟಿಕೆಗಳು ನಗರ ಕೇಂದ್ರಿತವಾಗಿರುವುದರ ಭಾಗವಾಗಿಯೇ ನೋಡಬೇಕು. ನಮ್ಮ ಎಲ್ಲಾ ಚಟುವಟಿಕೆಗಳು ನಗರ ಕೇಂದ್ರಿತವಾಗಿ ಇರುವುದರಿಂದಲೇ, ಪ್ರಕೃತಿಯಲ್ಲಿರುವ ಎಲ್ಲಾ ಸಂಪತ್ತಿನ ಸಿಂಹಪಾಲನ್ನು ನಗರಗಳೇ ಕಬಳಿಸುತ್ತವೆ.  ಅದರಿಂದಾಗಿಯೇ ಪ್ರಕೃತಿಯ ನಿರಂತರ ಶೋಷಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಅದರಿಂದ ಉಂಟಾದ ಮತ್ತು ಆಗುತ್ತಿರುವ ಪ್ರಾಕೃತಿಕ ಅಸಮತೋಲನ ಹಾಗೂ ವಿನಾಶಗಳಿಗೂ ಮತ್ತು ಇಂದಿನ ಮಾನವ ಪ್ರಾಣಿ ಸಂಘರ್ಷಕ್ಕೂ ನೇರವಾದ ಸಂಬಂಧವಿದೆ.

ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಮಾನವ ಪ್ರಾಣಿ ಸಂಘರ್ಷವನ್ನು ನೋಡಬೇಕು.

ಈ ಬರಹಗಳಲ್ಲಿ ಆನೆ  ಮತ್ತು ಮನುಷ್ಯನ ನಡುವಿನ ಸಮಸ್ಯೆಗಳನ್ನು ಪ್ರಮುಖವಾಗಿ ಇಟ್ಟುಕೊಂಡಿದ್ದರೂ ಬೇರೆ ಎಲ್ಲಾ ಪ್ರಾಣಿಗಳಿಗೂ ಬಂದಿರುವ ಆಪತ್ತಿಗೂ  ಮನುಷ್ಯನೇ ಕಾರಣ ಎನ್ನುವುದನ್ನು ಇದರೊಂದಿಗೆ ನಾವು ಗಮನಿಸಬೇಕು.

ದಶಕಗಳ ಹಿಂದೆ

ಸುಮಾರು ಐದು ದಶಕಗಳ ಹಿಂದೆ, ನಮ್ಮಂತವರು ಶಾಲಾ ಬಾಲಕರಾಗಿದ್ದಾಗ ವರ್ಷಕ್ಕೋ ಎರಡು ವರ್ಷಗಳಿಗೋ ಒಮ್ಮೆ ತೋಟಕ್ಕೆ ಆನೆ ಬಂದ ಸುದ್ದಿಯಾಗುತ್ತಿತ್ತು.  ಸಾಮಾನ್ಯವಾಗಿ ಆನೆಯನ್ನು ಯಾರೂ ನೋಡಿರುತ್ತಿರಲಿಲ್ಲ. ತೋಟದಲ್ಲಿ ಮುರಿದಿರುವ ಒಂದೆರಡು ಬೈನೆ ಅಥವಾ ಬಾಳೆ, ಗದ್ದೆಯಲ್ಲಿ ಆನೆಯ ಹೆಜ್ಜೆಗುರುತುಗಳು ಮಾತ್ರ ಕಾಣಸಿಗುತ್ತಿದ್ದವು. ರಾತ್ರಿ ಬೇಕಾದ್ದನ್ನು ತಿಂದು ಹಗಲು ಹೊತ್ತಿನಲ್ಲಿ ಆನೆ ತನ್ನ ವಿಶ್ರಾಂತಿ ಸ್ಥಳವನ್ನು ತಲಪಿರುತ್ತಿತ್ತು. ಇಲ್ಲವೇ ಮುಂದೆ ಎಲ್ಲಿಗೋ ಹೋಗಿರುತ್ತಿತ್ತು.

ಮಾರನೆಯ ದಿನ  ಊರಲ್ಲೆಲ್ಲ  ತೋಟಗಳಿಗೆ ಆನೆ ಬಂದಿರುವ ಸುದ್ದಿಯಾಗುವುದು. ಯಾರ ಯಾರ ತೋಟಕ್ಕೆ ಬಂದಿದೆ? ಏನೇನು ತಿಂದಿದೆ? ಎಷ್ಟು ಆನೆಗಳಿವೆ ? ಅವುಗಳ ಹೆಜ್ಜೆಯ ಗಾತ್ರವೇನು? ಅದು ಎಷ್ಟು ಎತ್ತರ ಇರಬಹುದು ಇತ್ಯಾದಿ ತರ್ಕ, ಪುರಾವೆಗಳಿಂದ ಹಿಡಿದು ಆನೆಯನ್ನು ನೋಡದಿದ್ದರೂ ಕಣ್ಣಾರೆ ನೋಡಿದಂತೆ ವರ್ಣಿಸುವ ಸುದ್ದಿ ವೀರರು ಹುಟ್ಟಿಕೊಳ್ಳುತ್ತಿದ್ದರು. ನಾನೇ ನೋಡಿದೆ ಆನೆ ಎರಡಾಳು ಎತ್ತರವಿತ್ತು ಎನ್ನುವವರೂ ಇದ್ದರು. ಆನೆಯ ಬಗ್ಗೆ, ಆನೆಯ ಶಕ್ತಿಯ ಬಗ್ಗೆ ಉತ್ಪ್ರೇಕ್ಷಿತ ಕತೆಗಳು ಹುಟ್ಟಿಕೊಳ್ಳುತ್ತಿದ್ದವು.

ತಮ್ಮ ತೋಟಗಳಿಗೆ ಆನೆ ಬಂದಿದೆ ಎನ್ನುವುದೇ ರೈತರಿಗೆ ಒಂದು ವಿಶೇಷವಾದ ಖುಷಿಯ ಸಂಗತಿಯಾಗುತ್ತಿತ್ತು. ಇದಕ್ಕೆ ಕಾರಣಗಳಿವೆ.

ಆನೆ ಗಣಪತಿಯ ಪ್ರತಿರೂಪ ಎನ್ನುವ ಧಾರ್ಮಿಕ ಕಾರಣ ಒಂದೆಡೆಯಾದರೆ, ಆನೆ ಮೆಟ್ಟಿದ ನೆಲ ಬಹಳ ಫಲವತ್ತಾದುದು ಎನ್ನುವ ನಂಬಿಕೆ ರೈತರಲ್ಲಿ ವ್ಯಾಪಕವಾಗಿತ್ತು. ತಮ್ಮ ತೋಟಕ್ಕೇ ಆನೆ ಬಾರದಿದ್ದರೂ “ನಮ್ ತೋಟದಲ್ಲೂ ಒಂದು ಬೈನೆ ಮುರಿದಿತ್ತು” ಎಂದು ಹೇಳಿಕೊಳ್ಳುವವರೂ ಇರುತ್ತಿದ್ದರು. ಆನೆ ಬೈನೆ ಮುರಿದ ಜಾಗದಲ್ಲಿ ಕೆಲವು ಸಲ ಆನೆಯ ಬಾಲದ ತುದಿಯ ರೋಮ ಮುರಿದ ಬೈನೆಯ ಸಿಬರಿಗೆ ಸಿಕ್ಕಿಕೊಂಡಿದ್ದು ಅದು ರೈತರಿಗೋ ಕಾರ್ಮಿಕರಿಗೋ ಸಿಗುವುದು. ಅದು ಬಹಳ ಅದೃಷ್ಟದ ಸಂಗತಿ, ಅದನ್ನು ಕೆಲವರು ಉಂಗುರ ಮಾಡಿ ಬೆರಳಲ್ಲಿ ಧರಿಸುವರು, ಆನೆಯ ರೋಮ ಧರಿಸಿದರೆ ಸಂಪತ್ತು ಹೆಚ್ಚುತ್ತದೆ, ಗಂಡಸರಲ್ಲಿ  ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಮುಂತಾದ ನಾನಾ ವೈದ್ಯಕೀಯ ಮತ್ತು ಮಾಂತ್ರಿಕ ಗುಣಗಳು ಆರೋಪಿಸಲ್ಪಟ್ಟಿವೆ. ಅವು ಯಾವುವೂ ನಿಜವಲ್ಲ.

ಆನೆಗಳು ಯಾವಾಗಲೂ ಸಂಚರಿಸುವ ಆನೆದಾರಿಗಳು ಅದಕ್ಕೆ ಮಾತ್ರವಲ್ಲ ಆನೆಗಳೊಂದಿಗೆ ಅದರ ಹಿಂದಿನಿಂದ ಬರುವ ಅನೇಕ ಪ್ರಾಣಿಗಳಿಗೆ ಆಹಾರ ನೀಡುವ ಸ್ಥಳಗಳಾಗಿದ್ದು ಸಹಜವಾಗಿಯೇ ಫಲವತ್ತತೆಯನ್ನು ಹೊಂದಿರುವ ತಾಣಗಳಾಗಿರುತ್ತವೆ. ಆನೆ ತೋಟಕ್ಕೆ ಬಂದು ಹೋದ ಮರುದಿನ ಸಾಮಾನ್ಯವಾಗಿ ಆ ತೋಟದ ಮಾಲೀಕರ ಮನೆಯ ಹಿರಿಯರಿಂದ ಆನೆಯ ಹೆಜ್ಜೆಗೆ ಹಣ್ಣುಕಾಯಿ ಅರ್ಪಿಸಿ, ಊದುಕಡ್ಡಿ ಹಚ್ಚಿ, ಆರತಿ ಬೆಳಗುವ ಕಾರ್ಯಕ್ರಮ ನಡೆಯುವುದು. ಮಕ್ಕಳಿಗೆ ಚರುಪು ಸಿಗುವುದು. ಎಪ್ಪತ್ತರ ದಶಕದಲ್ಲೂ ಈ ವಿದ್ಯಮಾನವನ್ನು ನಾವು ಮಲೆನಾಡಿನಲ್ಲಿ ಕಾಣಬಹುದಿತ್ತು.

ಇಂದಿಗೂ ಆನೆಗಳಿಂದ ಇಷ್ಟೊಂದು ಜನರು ಸಾವಿಗೀಡಾದ ನಂತರವೂ ರೈತರಿಗೆ ಆನೆಗಳ ಬಗ್ಗೆ ಭಯವಿದ್ದರೂ ವಿಶೇಷವಾದ ಪ್ರೀತಿಯೂ ಇದೆ. ಟಿಂಬರ್ ಎಳೆಯುವ ಆನೆಗಳು ಬಂದಾಗಲೂ, ಆನೆ ಮನೆ ಬಾಗಿಲಿಗೆ ಬಂದರೆ ಒಂದು ತೆಂಗಿನ ಕಾಯಿ, ಎರಡಚ್ಚು  ಬೆಲ್ಲ, ಇದ್ದರೆ ಬಾಳೆಗೊನೆಯನ್ನು ತಿನ್ನಲು ಕೊಡುವರು. ಇತ್ತೀಚಿನ ವರ್ಷಗಳಲ್ಲಿ ಟಿಂಬರ್ ಎಳೆಯಲು ಮತ್ತು ಲಾರಿಗೆ ತುಂಬಿಸುವ ಕೆಲಸವನ್ನು ಯಂತ್ರಗಳು ಮಾಡುತ್ತಿವೆ. ಕೆಲಸಗಳಿಗಾಗಿ ಆನೆ ಸಾಕಿದ ಹಲವರು ಆ ಆನೆಗಳನ್ನೂ ಕಾಡಿಗೆ ಬಿಟ್ಟಿದ್ದಾರೆ. ಕೆಲವು ಸಲ ಕಾಡಾನೆಗಳ ಜೊತೆ ಅವೂ ನಾಡಿಗೆ ಬರುತ್ತವೆ.

ರೈತರಿಗೆ ಆನೆಗಳ ಬಗ್ಗೆ ಇರುವಂತಹ ಈ  ಭಾವನಾತ್ಮಕ ಸಂಬಂಧವನ್ನು ಇತರ ಕಾಡು ಪ್ರಾಣಿಗಳ ಜೊತೆ ನಾವು ಅಷ್ಟಾಗಿ ಕಾಣಲಾರೆವು.

ಪ್ರಸಾದ್‌ ರಕ್ಷಿದಿ

ರಂಗಕರ್ಮಿ, ಪರಿಸರ ಲೇಖಕ,

ಮಿತಿಮೀರಿದ ಗೋರಕ್ಷಕರ ಹಾವಳಿ ; ರೈತರ ಗೋಳು ಕೇಳುವುದು ಯಾರು?
ರಾಜ್ಯದಲ್ಲಿ ಇತ್ತೀಚೆಗೆ ಗೋರಕ್ಷಣೆಯ ನೆಪದಲ್ಲಿ ಅನೈತಿಕ ಪೊಲೀಸ್ ಗಿರಿಯವರ ಕಾಟ ತೀರಾ ಹೆಚ್ಚಾಗಿದೆ. ಅದರಲ್ಲೂ ಹಿಂದೂಪರ ಸಂಘಟನೆಯ ಹಣೆಪಟ್ಟಿ ಹೊತ್ತು ಬಂದರೆ ಏನು ಬೇಕಾದರೂ ಮಾಡಬಹುದು ಎಂಬ ‘ಉತ್ತರ ಪ್ರದೇಶ’ ಮಾದರಿಯ ಗೂಂಡಾ ಪ್ರವೃತ್ತಿ ಎಲ್ಲೆಡೆ ಕಂಡು ಬರುತ್ತಿದೆ. ಅದಕ್ಕೆ ಸರಿಯಾಗಿ ಶುಕ್ರವಾರದ ದಿನ ಅರಸೀಕೆರೆ ವ್ಯಾಪ್ತಿಯಲ್ಲಿ ಶಿಕಾರಿಪುರ ಮೂಲದ ರೈತರಿಗೆ ಹಿಂದೂಪರ ಸಂಘಟನೆಯವರು ಹಿಗ್ಗಾಮುಗ್ಗಾ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದು ಈಗ ಎಲ್ಲೆಡೆ ಹಿಂದೂಪರ ಸಂಘಟನೆಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಹಿನ್ನೆಲೆ : ರಾಜ್ಯದ ಕೆಲವು ಕಡೆ ಜಾನುವಾರುಗಳ ಸಾಕಾಣಿಕೆ ಫಾರಂ ಗಳಿದ್ದು, ಜಾನುವಾರುಗಳನ್ನು ಬಿಟ್ಟು ದೊಡ್ಡ ಬಯಲು ಪ್ರದೇಶ, ಹೊಲಗಳಲ್ಲಿ ಮೇವು ಸಂಗ್ರಹ ಮಾಡಿ ಸಾಕಲಾಗುತ್ತದೆ. ಇಂತಹ ಫಾರಂಗಳಲ್ಲಿ ವರ್ಷದಲ್ಲಿ ಒಮ್ಮೆ ನಡೆಯುವ ಹರಾಜು ಪ್ರಕ್ರಿಯೆಗೆ ರಾಜ್ಯದ ನಾನಾ ಭಾಗದ ರೈತ ಸಮುದಾಯಗಳಿಗೆ ಕರೆ ನೀಡಲಾಗುತ್ತದೆ.

ಅದೇ ರೀತಿ ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿ ಇರುವ ಜಾನುವಾರುಗಳ ಫಾರಂನಲ್ಲಿ ಜಾನುವಾರುಗಳ ಹರಾಜು ಮಾಡುವುದಾಗಿ ರೈತ ಸಮುದಾಯಕ್ಕೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲ್ಲೂಕು ಭಾಗದಿಂದಲೂ ಹಲವಷ್ಟು ಮಂದಿ ರೈತರು ವಾಹನಗಳನ್ನು ತಗೆದುಕೊಂಡು ಹರಾಜು ನಡೆಯವ ಊರಿಗೆ ಹೋಗಿದ್ದರು. ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಜಾನುವಾರುಗಳನ್ನು ಕೊಂಡುಕೊಂಡು ತಮ್ಮ ಊರಿಗೆ ಮರಳಿದ್ದಾರೆ.
ಸಧ್ಯ ಶಿಕಾರಿಪುರ ತಾಲ್ಲೂಕಿನ ಬಟ್ಟಿಕೋಟೆ ಎಂಬ ಊರಿನ ರಾಜು ಎಂಬ ಯುವ ರೈತ ಹರಾಜು ಪ್ರಕ್ರಿಯೆ ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅರಸೀಕೆರೆ ಮತ್ತು ಬಾಣಾವರ ನಡುವಿನ ಆಸುಪಾಸಿನ ಊರಿನಲ್ಲಿ ಹಿಂದೂಪರ ಸಂಘಟನೆ ಸೋಗಿನಲ್ಲಿ ಗುರುತಿಸಿಕೊಂಡಿರುವ, ಈ ಹಿಂದೆ ಹೆಣ್ಣು ಮಕ್ಕಳ ಕಳ್ಳಸಾಗಣೆ ನೆಪಜೈಲು ಸೇರಿ ಹೊರಬಂದ ಪುನೀತ್ ಕೆರೆಹಳ್ಳಿ ಎಂಬುವವ ಮತ್ತು ಆತನ ಜೊತೆಗಿನ ಪುಂಡರ ಗುಂಪೊಂದು ಯುವ ರೈತ ರಾಜು ಅವರಿದ್ದ ಜಾನುವಾರು ವಾಹನವನ್ನು ಅಡ್ಡಗಟ್ಟಿದ್ದಾರೆ.

ವಾಹನದಲ್ಲಿ ಇದ್ದ ರಾಜು ಮತ್ತು ಡ್ರೈವರ್ ಹತ್ತಿರ ಬಂದು ನೀನು ಯಾವ ಜಾತಿ ಮತ್ತು ಧರ್ಮದವರು ಕೇಳಿದ್ದಾರೆ. ರಾಜು ತಾನು ಕುರುಬ ಸಮುದಾಯ ಎಂದಿದ್ದಾರೆ. ನಂತರ ಜಾತಿಯ ಹೆಸರನ್ನು ಉಲ್ಲೇಖಿಸಿ ಸೂ.ಮಕ್ಕಳಾ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ನಾನೊಬ್ಬ ರೈತ, ಇದು ನನ್ನ ಕೃಷಿ ಚಟುವಟಿಕೆಗಾಗಿ ಹರಾಜು ಹಿಡಿದು ತಂದ ಜಾನುವಾರುಗಳು, ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ಕಾನೂನು ಪ್ರಕಾರವಾಗಿಯೇ ನಾನು ಇದನ್ನು ಕೊಂಡುಕೊಂಡಿದ್ದೇನೆ ಎಂದು ರಾಜು ಅವರು ಪರಿಪರಿಯಾಗಿ ಬೇಡಿಕೊಂಡರೂ ಪುನೀತ್ ಕೆರೆಹಳ್ಳಿ ನೇತೃತ್ವದ ಪುಂಡರ ಗುಂಪು ಅದನ್ನು ಕಿಂಚಿತ್ ಕೇಳುವ ಸೌಜನ್ಯ ತೋರಿಲ್ಲ.

ಅವರ ಮೇಲೆ ಜಾನುವಾರು ಕಳ್ಳಸಾಗಣೆ ಮಾಡುವ ಆರೋಪ ಹೊರಿಸಿ ಅತ್ಯಂತ ಕೆಟ್ಟ ಶಬ್ದಗಳ ಬೈಗುಳ ಬಳಸಿ ಬೈದಿದ್ದಾರೆ. ರಾಜು ಮತ್ತು ಡ್ರೈವರ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಪೂರ್ಣಿಮಾ ಮನೆಮನೆ ಎಂಬ ಪುಂಡರ ಗುಂಪು, ರಾಜು ಅವರನ್ನು ವಾಹನದ ಮೇಲಿಂದ ಎದೆಯ ಮೇಲೆ ಒದ್ದು ವಾಹನದಿಂದ ಕೆಳಗೆ ಬೀಳಿಸಿದ್ದಾರೆ. ಕಪಾಳಕ್ಕೆ ಹೊಡೆದಿದ್ದಾರೆ. ರಾಜು ಮತ್ತು ವಾಹನದ ಡ್ರೈವರ್ ಇಬ್ಬರಿಗೂ ಆ ಪುಂಡರ ಗುಂಪು ನೆಲದ ಮೇಲೆ ಹಾಕಿ ತುಳಿದಿದ್ದಾರೆ. ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಾಜು ಅವರು ರಸ್ತೆಯಲ್ಲೇ ಏಳಲು ಆಗದ ಸ್ಥಿತಿಯಲ್ಲಿ ಬಿದ್ದು ನರಳುವಂತೆ ಹಲ್ಲೆ ನಡೆಸಿದ್ದಾರೆ.

ನಂತರ ಜಾನುವಾರುಗಳಿದ್ದ ವಾಹನವನ್ನು ಏರಿ, ಹಗ್ಗದಿಂದ ಕಟ್ಟಿದ್ದ ಜಾನುವಾರುಗಳನ್ನು ಬಿಟ್ಟು ಓಡಿಸಿದ್ದಾರೆ. ಅದೇ ಸಂದರ್ಭದಲ್ಲಿ ವಾಹನದಲ್ಲಿ ಇದ್ದ ಲಕ್ಷಕ್ಕೂ ಹೆಚ್ಚು ಬೆಲೆಗೆ ಕೊಂಡಿದ್ದ ಜಾನುವಾರಿಗೆ ಕಾಲಿಗೆ ಪೆಟ್ಟಾಗಿದೆ. ಈ ಸಂದರ್ಭದಲ್ಲಿ ಜಾನುವಾರುಗಳನ್ನು ಕೊಂಡು ಇದ್ದ ಉಳಿಕೆ ಮೂರು ಲಕ್ಷಕ್ಕೂ ಹೆಚ್ಚಿನ ಹಣ, ಕೊರಳಲ್ಲಿ ಇದ್ದ ಚಿನ್ನದ ಸರ ಮತ್ತಿತರ ಬೆಲೆಬಾಳುವ ವಸ್ತುಗಳು ಕಾಣೆಯಾಗಿವೆ ಎಂದು ರಾಜು ಅವರು ಅಳಲು ತೋಡಿಕೊಂಡಿದ್ದಾರೆ.

ನಂತರ ಸ್ಥಳೀಯರ ಸಹಾಯದಿಂದ ಅರಸೀಕೆರೆ ಪೊಲೀಸರ ಸಂಪರ್ಕ ಮಾಡಿದ್ದಾರೆ. ಆದರೆ ಅರಸೀಕೆರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ರಾಜು ಆರೋಪಿಸಿದ್ದಾರೆ. ಎಲ್ಲಾ ದಾಖಲೆಗಳ ಪರಿಶೀಲಿಸಿದ ನಂತರ ಏನೂ ಆಗಿಯೇ ಇಲ್ಲ ಎಂಬಂತೆ ಊರಿಗೆ ಕಳಿಸಿದ್ದಾರೆ. ಯಾರ ಮೇಲೂ ಸಹ ದೂರು ದಾಖಲು ಮಾಡಿಕೊಂಡಿಲ್ಲ. ರೈತ ರಾಜು ಅವರು ದೂರು ದಾಖಲು ಮಾಡದ ಪೊಲೀಸ್ ಕ್ರಮದ ಬಗ್ಗೆ ಕೇಳಿದಾಗ ಗೋರಕ್ಷಕರ ಮೇಲಿನ ಕೇಸುಗಳು ನಿಲ್ಲುವುದಿಲ್ಲ. ಸರ್ಕಾರವೇ ಅವರ ಬೆಂಬಲಕ್ಕೆ ಇದೆ. ಹಾಗಾಗಿ ದೂರು ನೀಡುವುದೂ ವ್ಯರ್ಥ ಎಂಬ ರೀತಿಯ ಪ್ರತಿಕ್ರಿಯೆ ಸ್ಥಳೀಯವಾಗಿ ಕೇಳಿ ಬಂದಿದೆ. ನಂತರ ಶಿಕಾರಿಪುರಕ್ಕೆ ಬಂದ ರಾಜು ಮತ್ತು ಡ್ರೈವರ್ ಆಸ್ಪತ್ರೆಗೆ ದಾಖಲಾಗಿ ಸ್ಥಳೀಯರಿಗೆ ವಿಚಾರ ತಿಳಿಸಿದ್ದಾರೆ.

ಸಾಮಾನ್ಯವಾಗಿ ಅರೆಮಲೆನಾಡು ಭಾಗಗಳಾದ ಶಿಕಾರಿಪುರ, ಸೊರಬ, ಭದ್ರಾವತಿ, ಹೊನ್ನಾಳಿ, ನ್ಯಾಮತಿ, ಹರಿಹರ, ರಾಣೆಬೆನ್ನೂರು ಕಡೆಗಳಲ್ಲಿ ಹಬ್ಬ ಹರಿದಿನದ ಸಂದರ್ಭದಲ್ಲಿ ಜಾನುವಾರುಗಳ ಸಿಂಗರಿಸವುದು, ಕೃಷಿ ಚಟುವಟಿಕೆಗೆ ಬಳಸುವುದು ಸಾಮಾನ್ಯವಾಗಿದೆ. ಇಂತಹ ಜಾನುವಾರುಗಳನ್ನು ದನದ ಜಾತ್ರೆಗಳಲ್ಲಿ ನೋಡಿ ತರಲಾಗುತ್ತದೆ. ಈ ಸಂದರ್ಭದಲ್ಲಿ ಜೋಡೆತ್ತುಗಳು, ಒಂಟಿ ಎತ್ತು, ವಿವಿಧ ತಳಿಯ ದನಗಳು, ಕರುಗಳು ಒಂದೊಂದು ಜಾನುವಾರುಗಳೂ ಅವುಗಳ ತಾಕತ್ತು, ಅವುಗಳ ಗುಣಲಕ್ಷಣಗಳ ಆಧಾರದಲ್ಲಿ ಲಕ್ಷಗಟ್ಟಲೆ ಹಣಕ್ಕೆ ಮಾರಾಟ ಮಾಡಲ್ಪಡುತ್ತವೆ.

ಹೇಳಿಕೇಳಿ ಬಯಲ ಪ್ರದೇಶದಲ್ಲಿ ಹೇಗೆ ಬೇಕೋ ಹಾಗೆ ಅಡ್ಡಾದಿಡ್ಡಿಯಾಗಿ ಬೆಳೆದುಕೊಂಡ ಜಾನುವಾರುಗಳು ಅವು. ಅವುಗಳನ್ನು ರೈತರು ತಮ್ಮ ಹಿಡಿತಕ್ಕೆ ತರಬೇಕೆಂದರೆ ಅವುಗಳನ್ನ ಪಳಗಿಸಬೇಕು. ಅವುಗಳಿಗೆ ಮೂಗುದಾರ ಹಾಕಿ ನಿಯಂತ್ರಣಕ್ಕೆ ತರಬೇಕು. ನಂತರ ಉಳುಮೆ, ಇನ್ನಿತರ ಕೆಲಸಗಳಿಗೆ ಇವು ಉಪಯೋಗಕ್ಕೆ ಬರುವಂತವು. ಹಾಗಿದ್ದರೆ ಮಾತ್ರ ರೈತರಿಗೆ ಜಾನುವಾರುಗಳು ತಂದದ್ದಕ್ಕೂ ಒಂದು ಸಾರ್ಥಕ.

ಹಾಗಾಗಿ ರೈತರು ತಾವು ಆಯ್ಕೆ ಮಾಡಿಕೊಳ್ಳುವ ಜಾನುವಾರುಗಳಿಗೆ ಮಾರಾಟದ ಜಾಗದಲ್ಲೇ ಮೂಗುದಾರ, ಕಾಲಿಗೆ ಹಲ್ಲೆಕಟ್ಟುವುದು ಎಲ್ಲವನ್ನೂ ಮಾಡಿಸಿಯೇ ಜಾನುವಾರು ಜಾತ್ರೆಗಳಿಂದ ಹೊರಡುವುದು. ಆ ಸಂದರ್ಭದಲ್ಲಿ ಜಾನುವಾರುಗಳ ನಿಯಂತ್ರಣಕ್ಕೆ ತರುವಾಗ ಸಣ್ಣಪುಟ್ಟ  ತರಚಿದ ಗಾಯಗಳಾಗುವುದು ಸಹಜ. ಇಂತಹ ಗಾಯಗಳನ್ನೇ ಪುನೀತ್ ಕೆರೆಹಳ್ಳಿಯ ಪುಂಡರ ಗುಂಪು ಜಾನುವಾರುಗಳ ಹಿಂಸಿಸಿದ್ದು ಎಂದು ಆರೋಪಿಸಿದೆ.

ಸರ್ಕಾರ ಸ್ಪಷ್ಟಪಡಿಸಬೇಕು : ರೈತರು ತಮ್ಮ ಕೃಷಿ ಚಟುವಟಿಕೆಗೆ, ಹೈನುಗಾರಿಕೆಗೆ ಅಥವಾ ಸಾಕಾಣಿಕೆಗೆ ಮಾರಾಟ ಮತ್ತು ಕೊಂಡುಕೊಳ್ಳಲು ಜಾನುವಾರುಗಳನ್ನು ಒಂದೂರಿನಿಂದ ಇನ್ನೊಂದೂರಿಗೆ ಸಾಗಿಸಲೇಬೇಕು. ಇಂತಹ ಸಂದರ್ಭದಲ್ಲಿ ಗೋರಕ್ಷಕ ಪುಂಡ ಪೋಕರಿಗಳ ಗುಂಪು ಬಂದು ರೈತರಿಗೆ ಉಪಟಳ ಕೊಡುವುದು ಇತ್ತೀಚೆಗೆ ಜಾಸ್ತಿಯಾಗಿದೆ. ಕಳೆದ ವರ್ಷವೂ ಸಹ ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಕೃಷಿ ಉಪಯೋಗಕ್ಕೆ ಜಾನುವಾರು ತಂದ ವಾಹನವನ್ನು ಇದೇ ಪುನೀತ್ ಕೆರೆಹಳ್ಳಿ ತಂಡ ಅಡ್ಡಗಟ್ಟಿ ಹಲ್ಲೆ ನಡೆಸಿತ್ತು. ಈಗಲೂ ಇದೇ ತಂಡ ರೈತರಿಗೆ ತೊಂದರೆ ನೀಡಿದ್ದಲ್ಲದೆ, ಮಾರಣಾಂತಿಕ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಜಾತಿ ನಿಂದನೆಯನ್ನೂ ಮಾಡಿದೆ.

ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕಿದ್ದ ಸರ್ಕಾರ ನೇರವಾಗಿ ಇಂತಹ ಪುಂಡರ ಗುಂಪನ್ನು ಹಿನ್ನೆಲೆಯಿಂದ ಬೆಂಬಲಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸರ್ಕಾರ ನಿಜಕ್ಕೂ ಯಾರ ಪರವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸದಾ ಇಂತಹ ಅನೈತಿಕ ಪೋಲೀಸ್ ಗಿರಿ ಮಾಡುವವರ ಪರವಾಗಿಯೇ ನಿಲ್ಲುವ ಬಿಜೆಪಿ ಸರ್ಕಾರ ನಿಜವಾಗಿಯೂ ರೈತರ ಪರವಾಗಿಲ್ಲ ಎಂಬುದನ್ನು ನೇರವಾಗಿ ಸ್ಪಷ್ಟಪಡಿಸಲಿ. ಹಾಗೊಂದು ವೇಳೆ ಸ್ಪಷ್ಟಪಡಿಸಿದ್ದಾದರೆ ರೈತರು ಗತಿಯಿಲ್ಲ ಎಂಬಂತೆ ತಮ್ಮ ಕೃಷಿ ಚಟುವಟಿಕೆ, ಹೈನುಗಾರಿಕೆಯನ್ನು ಕೈಬಿಡಬಹುದು. ಇತ್ತ ರೈತಪರ ಎನ್ನುವುದೂ ಇವರೇ.. ಅತ್ತ ಗೋರಕ್ಷಕ ಗುಂಪಿಗೆ ಬೆಂಬಲಿಸಿ ರೈತರಿಗೆ ಉಪಟಳ ಕೊಡುವುದೂ ಇವರೇ ಆಗಿ ಮಗು ಚಿವುಟಿ ತೊಟ್ಟಿಲು ತೂಗುವ ದುರ್ಬುದ್ದಿ ಬಿಡಲಿ.

ಒಂದು ಕಡೆ ಪೊಲೀಸರೂ ಇವರ ವಿರುದ್ಧ ದೂರು ತಗೆದುಕೊಳ್ಳುವುದಿಲ್ಲ, ಇನ್ನೊಂದು ಕಡೆ ಸರ್ಕಾರದ ಕಡೆಯಿಂದಲೂ ರೈತರಿಗೆ ರಕ್ಷಣೆ ಇಲ್ಲ. ಸಧ್ಯ ಈ ಗುಂಪು ಘರ್ಷಣೆಯಿಂದ ಶಿಕಾರಿಪುರದ ಯುವ ರೈತ ರಾಜು ಅವರಿಗಾದ ನಷ್ಟ ಭರಿಸಿ ಕೊಡುವವರ್ಯಾರು? ಈಗಾಗಲೇ 3 ಲಕ್ಷಕ್ಕೂ ಮಿಕ್ಕ ಹಣ, ಕೊರಳಲ್ಲಿನ ಚಿನ್ನದ ಸರ ಕಳುವಾಗಿದ್ದು ಅದರ ಹೊಣೆ ಯಾರು ಹೊರಲಿದ್ದಾರೆ.? ಜೊತೆಗೆ ಜಾನುವಾರಿನ ಕಾಲಿಗೂ ಆ ಸಂದರ್ಭದಲ್ಲಿ ಪೆಟ್ಟಾಗಿದೆ ಎಂದು ರಾಜು ಆರೋಪಿಸಿದ್ದಾರೆ. ಈ ನಷ್ಟವನ್ನು ಯಾರು ಭರಿಸುವುದು ಎಂಬುದನ್ನೂ ಪೊಲೀಸರು ಮತ್ತು ಸರ್ಕಾರ ಸ್ಪಷ್ಟಪಡಿಸಬೇಕು.

ಹೊಸದಾಗಿ ದೇವದಾಸಿ ಮಹಿಳೆಯರ ಗಣತಿ ; ಸರ್ಕಾರದ ನಿರ್ಧಾರ ಸ್ವಾಗತಾರ್ಹ : ಹೋರಾಟ ಸಮಿತಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಿಬ್ಬರೂ, ಅಧಿಕಾರಗಳ ಜೊತೆ ನಡೆಸಿದ ಜಂಟಿ ಸಭೆಯಲ್ಲಿ, ಬಿಟ್ಟು ಹೋದ ದೇವದಾಸಿ ಮಹಿಳೆಯರ ಗಣತಿ ಮಾಡಲು ತಗೆದುಕೊಂಡ ನಿರ್ಧಾರ ಸ್ವಾಗತಾರ್ಹವಾದುದಾಗಿದೆ. ಇದು ಕಳೆದ ಒಂದು ದಶಕದಿಂದ ನಾವು ನಡೆಸಿದ ಹೋರಾಟಕ್ಕೆ ದೊರೆತ ಜಯ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಅಭಿಪ್ರಾಯ ಪಟ್ಟಿದೆ.

ರಾಜ್ಯದಾದ್ಯಂತ ಇರುವ ಹತ್ತಾರು ಸಾವಿರಗಟ್ಟಲೆ ದೇವದಾಸಿ ಮಹಿಳೆಯರನ್ನು ದುರುದ್ದೇಶದಿಂದಲೇ ಗಣತಿಯಿಂದ ಹೊರಗಿಡಲಾಗಿತ್ತು. ಇದರಿಂದ ದೇವದಾಸಿ ಮಹಿಳೆಯರು ಅವರ ಮಕ್ಕಳು ಸರಕಾರದ ಯಾವುದೇ ಸೌಲಭ್ಯಗಳು ದೊರೆಯದೇ ಸಂಕಷ್ಠದಲ್ಲಿದ್ದರು. ಇದೀಗ ಈ ಸಭೆಯು ಹೊಸ ಗಣತಿಯನ್ನು ಕೈಗೊಳ್ಳುವಂತೆ, ಅದೂ ಸಹ ಬೆಳಗಾವಿ ವಿಧಾನ ಸಭೆ ಅಧಿವೇಶನದಲ್ಲಿಯೇ ನಿರ್ಣಯಿಸಬೇಕೆಂಬ ಅಭಿಪ್ರಾಯಕ್ಕೆ ಬಂದಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಒಕ್ಕೂಟಗಳು ಬೆಂಬಲಿಸುತ್ತವೆ ಎಂದು ಹೇಳಿದ್ದಾರೆ.

ಇದರ ಜೊತೆಗೆ ದೇವದಾಸಿ ಮಹಿಳೆಯರ ಮಕ್ಕಳ ಉನ್ನತ ಶಿಕ್ಷಣದ ಹಾಗೂ ಹಾಸ್ಟೆಲ್ ಸೌಲಭ್ಯಗಳ ವಿಚಾರದಲ್ಲಿ ಯಾವುದೇ ಅಂಕಗಳು ಮತ್ತು ಪ್ರವೇಶ ಪರಿಕ್ಷೆಗಳ ಸ್ಪರ್ಧೆ ಇಲ್ಲದೇ ಒಳ ಮೀಸಲಾತಿ ಆಧಾರದಲ್ಲಿ ಮತ್ತು ನೇರ ಪ್ರವೇಶಕ್ಕೆ ಕ್ರಮವಹಿಸಲು ಸಚಿವಧ್ವಯರ ಸಭೆ ನಿರ್ಧಾರವು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ‌.

ಹಾಗೆಯೇ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯನ್ನು ಕನಿಷ್ಟ 1500 ರೂಗಳಿಂದ 3,000 ರೂ ಗಳಿಗೆ ಹೆಚ್ಚಿಸಬೇಕು ಮತ್ತು ಎಲ್ಲ ವಯೋಮಾನದ ದೇವದಾಸಿ ಮಹಿಳೆಯರಿಗೂ ಸಹಾಯಧನ ದೊರೆಯುವಂತೆ ವಿಸ್ತರಿಸಬೇಕೆಂಬ ಹಕ್ಕೊತ್ತಾಯಗಳ ಕುರಿತು ಮೌನವಾಗಿರುವುದು ತೀವ್ರ ಖಂಡನೀಯವಾಗಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 30,000 ಕೋಟಿ ರೂಗಳಷ್ಟು ಹಣ ಕೊಳೆಯುತ್ತಾ ಬಿದ್ದಿದ್ದರೂ, ಪ್ರತಿವರ್ಷ ಅದರಲ್ಲಿ ಹಲವು ಸಾವಿರ ಕೋಟಿ ರೂಗಳನ್ನು ಬಳಸದೇ ಬಿಡಲಾಗುತ್ತಿದೆ. ಅದನ್ನು ದೌರ್ಜನ್ಯದ ದೇವದಾಸಿ ಪದ್ಧತಿಗೆ ತುತ್ತಾದ ಈ ಮಹಿಳೆಯರಿಗೆ ನೀಡದೇ ಅವರನ್ನು ದೌರ್ಜನ್ಯ ಅನುಭವಿಸಲು ಬಿಟ್ಟಿರುವುದು ಅಕ್ಷಮ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅದೇ ಸಂದರ್ಭದಲ್ಲಿ ರಾಜ್ಯ ಸರಕಾರವು ದಲಿತ ಕುಟುಂಬಗಳ ಸ್ವಾವಲಂಬಿ ಆದಾಯದ ಸಬಲೀಕರಣಕ್ಕೆ ಕ್ರಮವಹಿಸಬೇಕು. ಈ ಕುರಿತು ಅಗತ್ಯ ಕ್ರಮವಹಿಸಲು ನಮ್ಮ ಸಂಘಟನೆಗಳು ಒತ್ತಾಯಿಸುತ್ತೇವೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ಜಂಟಿಯಾಗಿ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಬೇಜವಾಬ್ದಾರಿತನದಿಂದ ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್ಸ್‌ : ಶಿಕ್ಷಣ ತಜ್ಞರ ಖಂಡನೆ
ಬೆಂಗಳೂರು : ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲೆಗೆ ಕಾಂಡೋಮ್ಸ್‌, ಗರ್ಭಪಾತ ಗುಳಿಗೆ, ನೀರಿನ ಬಾಟಲ್ ಗಳಲ್ಲಿ ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಸಿಕ್ಕಿರುವ ವಿಷಯವನ್ನು ಮಾಧ್ಯಮಗಳು ಮುಖಪುಟದಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳನ್ನು ದೂಷಿಸುತ್ತಿರುವುದರಿಂದ ವಿದ್ಯಾರ್ಥಿಗಳ ಮನಸ್ಸಿನ ಇನ್ನಷ್ಟು ಹಾನಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳ ಇಂತಹ ಬೆಳವಣಿಗೆಗೆ ಎಲ್ಲಾ ರೀತಿಯಲ್ಲೂ ಸರ್ಕಾರವೇ ಕಾರಣವಾಗಿದೆ ಎಂದು ಹಲವು ತಜ್ಞರು ಬುಧವಾರದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್‌ ತರುವ ಬಗ್ಗೆ ಪರಿಶೀಲನೆ ನಡೆಸುವಾಗ ಪುಸ್ತಕಗಳ ಜೊತೆ ಕಾಂಡೋಮ್ಸ್‌, ಗರ್ಭಪಾತ ಗುಳಿಗೆ, ನೀರಿನ ಬಾಟಲ್ ಗಳಲ್ಲಿ ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಸಿಕ್ಕಿರುವ ವಿಷಯವನ್ನು ಮಾಧ್ಯಮಗಳು ಬುಧವಾರದಂದು ಮುಖಪುಟದಲ್ಲಿ ಪ್ರಕಟಿಸಿದ್ದು, ವಿದ್ಯಾರ್ಥಿಗಳನ್ನೇ ಅಪರಾಧಿ ಸ್ಥಾನದಲ್ಲಿ ದೂಷಿಸುತ್ತಿವೆ.

ಈ ವಿರುದ್ಧ ಜಂಟಿ ಪತ್ರಿಕಾ ಹೇಳಿಕೆ ಕೊಟ್ಟಿರುವ ವಿ.ಪಿ ಶಿಕ್ಷಣ ತಜ್ಞರಾದ ಪ್ರೊ.ಡಾ. ನಿರಂಜನಾರಾಧ್ಯ, ಡಾ.ಶ್ರೀನಿವಾಸ ಕಕ್ಕಿಲ್ಲಾಯ(ವೈದ್ಯಕೀಯ ತಜ್ಞರು), ಡಾ. ಜಿ . ರಾಮಕೃಷ್ಣ, ಡಾ. ಕೆ ಎಂ ಮರಳುಸಿದ್ದಪ್ಪ, ಪ್ರೊ. ಎಸ್ ಜಿ  ಸಿದ್ಧರಾಮಯ್ಯ, ಪ್ರೊ.ಕಾಳೇಗೌಡ ನಾಗವಾರ, ಡಾ. ವಸುಂಧರಾ ಭೂಪತಿ, ಬಿ.ಎನ್‌ ಯೋಗಾನಂದ, ಡಾ.ವಿಜಯ ಮತ್ತು ಸುರೇಂದ್ರ ರಾವ್ ಅವರು, “ವಿದ್ಯಾರ್ಥಿಗಳ ಇಂತಹ ಬೆಳವಣಿಗೆಗೆ ಎಲ್ಲಾ ರೀತಿಯಲ್ಲೂ ಸರ್ಕಾರವೇ ಕಾರಣ” ಎಂದು ತಿಳಿಸಿದ್ದಾರೆ.

ʼಇಂದು ಮಕ್ಕಳ ಶಿಕ್ಷಣದ ಕ್ರಮ ಹಾಗೂ ವಿಧಾನಗಳ ಬಗ್ಗೆ ಕುಟುಂಬ, ಸಮಾಜ ಹಾಗೂ ಸರಕಾರಗಳು ಗಂಭೀರವಾಗಿ ಯೋಚಿಸುವುದಕ್ಕೆ ಇದು ಪ್ರಚೋದನೆಯಾಗಬೇಕು ಎನ್ನುವುದು ನಿಜವಾದರೂ, ಈ ಬಗ್ಗೆ ಭಾವೋದ್ರೇಕದಿಂದ ವರದಿ ಮಾಡುವುದು ಮತ್ತು ಮಕ್ಕಳನ್ನೇ ದೂಷಿಸುವುದು ಅಪೇಕ್ಷಣೀಯವಲ್ಲ, ಅದರಿಂದ ಮಕ್ಕಳಿಗೆ ಇನ್ನಷ್ಟು ಹಾನಿಯೇ ಆಗಬಹುದುʼ ಎಂದು ಹೇಳಿದ್ದಾರೆ.

ಹಲವು ರೀತಿಯಲ್ಲಿ ಇಂಥಹ ಬೆಳವಣಿಗೆಗಳಿಗೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಾರಣವಾಗಿರುವ ಸರ್ಕಾರವೇ ಈ  ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಎಲ್ಲಕ್ಕಿಂತ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಮೊದಲನೆಯದಾಗಿ, ʼಕೋವಿಡ್ ಕಾಲದಲ್ಲಿ ಒಂದೆರಡು ವರ್ಷ ಶಾಲೆಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದರಿಂದ ಮಕ್ಕಳ ಮಾನಸಿಕ, ದೈಹಿಕ, ಬೌದ್ಧಿಕ ಆರೋಗ್ಯ ಹಾಗೂ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ ಮತ್ತು ಶಾಲೆಗಳಲ್ಲಿ ಮಕ್ಕಳ ಮೇಲೆ ನಿಗಾವಣೆಯಿಲ್ಲದೆ ಸಮಸ್ಯೆಗಳಾಗುತ್ತವೆ ಎಂದು ನಾವು ಕೆಲವರು ಜೂನ್ 2020ರಿಂದಲೇ ಪದೇ ಪದೇ ಎಚ್ಚರಿಕೆ ನೀಡಿದ್ದೆವು. ಮಕ್ಕಳಿಗೆ ನೇರ ಶಿಕ್ಷಣವಷ್ಟೇ ನೀಡಬೇಕೆಂದೂ, ಮೊಬೈಲ್  ಸಾಧನಗಳ ಮೂಲಕ ಆನ್ ಲೈನ್ ಪಾಠಗಳನ್ನು ಮಾಡುವುದು ಹಲತರದ ತೊಂದರೆಗಳನ್ನುಂಟು ಮಾಡಲಿವೆ ಎಂದೂ ಎಚ್ಚರಿಸಿದ್ದೆವು. ಅವನ್ನೆಲ್ಲ ಕಡೆಗಣಿಸಿ ಮಾಡಬಾರದ್ದನ್ನು ಮಾಡಿದ್ದರ ದುಷ್ಪರಿಣಾಮಗಳನ್ನೇ ಈಗ ಕಾಣುತ್ತಿದ್ದೇವೆ. ಇವುಗಳಿಗೆ ಕಾರಣರಾದ ಆಡಳಿತ, ಶಾಲಾ ವ್ಯವಸ್ಥಾಪಕರು ಮುಂತಾದವರು ಹೊಣೆ ಹೊರಬೇಕಲ್ಲದೆ ಮಕ್ಕಳನ್ನು ದೂಷಿಸಿ ದೊಡ್ಡದಾಗಿ ಚರ್ಚಿಸುವುದು ಅನ್ಯಾಯವಾಗುತ್ತದೆʼ ಎಂದು ಸರ್ಕಾರದ ಬೇಜವಾಬ್ದಾರಿಯ ಬಗ್ಗೆ ತಿಳಿಸಿದ್ದಾರೆ.

ಎರಡನೆಯದಾಗಿ, ಬಹಳ ವರ್ಷಗಳಿಂದಲೂ ಹಲವು ಪ್ರಗತಿಪರರು, ಶಿಕ್ಷಣ ತಜ್ಞರು  ಮತ್ತು ವೈದ್ಯಕೀಯ ಕ್ಷೇತ್ರದ ಗಣ್ಯರು ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಮಕ್ಕಳು ಹದಿಹರಯದಲ್ಲಿ ತಮ್ಮ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ ಯಾವುದೇ ಗೊಂದಲ ಹಾಗು ಆತಂಕಗಳಿಗೆ ಈಡಾಗದೆ ಅವನ್ನು ನಿಭಾಯಿಸಲು ಶಕ್ತರಾಗುತ್ತಾರೆ. ಆದರೆ, ನಮ್ಮ ಸರ್ಕರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗು ಮಡಿವಂತಿಕೆಯ ದೃಷ್ಟಿಯಿಂದ ನೋಡುವ ಮೂಲಕ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ವಿರೋಧಿಸಿದ ಕಾರಣ ಇಂದು ಮಕ್ಕಳು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ  ಗೊಂದಲಕ್ಕೆ ಸಿಲುಕುತ್ತಿರುವುದು ಮತ್ತು ಪ್ರಯೋಗಗಳಿಗೆ ಮುಂದಾಗುವಂತಾಗಿದೆ ಎಂದು ಹೇಳಿದ್ದಾರೆ.

ಸರ್ಕಾರವು ಈಗಲಾಗದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲು ಮುಂದಾಗುವುದು ಸರಿಯಾದ ಕ್ರಮವೆಂದು ನಾವು ಭಾವಿಸುತ್ತೇವೆ. ಈಗಾಗಲೇ ಹಲವು  ದೇಶಗಳಲ್ಲಿ ಇದು ಜಾರಿಯಲ್ಲಿದ್ದು ಅಂತರಾಷ್ಟ್ರೀಯ ಸಂಸ್ಥೆಗಳಾದ ಯುನಿಸೆಫ್‌ ಮತ್ತು ಯುನೆಸ್ಕೊ ಸಂಸ್ಥೆಗಳು ಇದಕ್ಕೆ ಸೂಕ್ತ ಪಠ್ಯಕ್ರಮ ಹಾಗು ಮಾಡ್ಯೂಲ್‌ ಗಳನ್ನು ತಯಾರಿಸಿವೆ, ಅವನ್ನೇ ಇಲ್ಲೂ ಬಳಸಲು ಸಾಧ್ಯವಿದೆ ಎಂದು ಸರ್ಕಾರ ಎಚ್ಚೆತ್ತುಕೊಳ್ಳುವ ಬಗ್ಗೆ ತಿಳಿಸಿದ್ದಾರೆ.

ಮೂರನೆಯದಾಗಿ, ಇಂಥಹ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ಮತ್ತು ತಜ್ಞತೆಯನ್ನು ಹೊಂದಿರುವವರ ಮಾರ್ಗದರ್ಶನದಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕೇ ಹೊರತು ರಜೆ ನೀಡಿ ಕೌನ್ಸಿಲಿಂಗ್‌ ಗೆ ಕಳಿಸುತ್ತೇವೆಂದು ಬಹಿರಂಗವಾಗಿ ಸಾರಿ ಹೇಳುವುದು ಅಥವಾ ಸಲಹೆ ನೀಡುವುದು ಅತ್ಯಂತ ಅವಿವೇಕದ ನಿರ್ಧಾರವಾಗುತ್ತದೆ. ಅಂಥಹ  ಮಕ್ಕಳನ್ನು ಗುರುತಿಸಿ, ಅವರ ಗೌಪ್ಯತೆಯನ್ನು ಕಾಪಾಡಿ ತಜ್ಞರ ಸಹಾಯದಿಂದ ಅವರು ಅದನ್ನು ಅರ್ಥೈಸಿಕೊಳ್ಳಲು ಮತ್ತು ಅವುಗಳಿಂದಾಗಬಹುದಾದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಲು ನೆರವಾಗಬೇಕೇ ಹೊರತು ಅದನ್ನು ಸಾರ್ವಜನಿಕವಾಗಿ ಚರ್ಚಿಸುವುದಾಗಲಿ ಅಥವಾ ಸುದ್ದಿಯಾಗಿ ವೈಭವೀಕರಿಸುವುದಾಗಲಿ ಮಕ್ಕಳ ಮಾನಸಿಕ ಆರೋಗ್ಯಕ್ಕೂ, ಜೀವಕ್ಕೂ ಅಪಾಯ ತಂದೊಡ್ಡುವ ಸಾಧ್ಯತೆಯಿದೆಯೆಂದು ಸಮಾಜ ಹಾಗು ಸರ್ಕಾರ ಅರಿಯಬೇಕಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಸಂವಿಧಾನ ಸಮರ್ಪಣಾ ದಿನ”ವನ್ನು “ವೇದ ಹಾಗೂ ಮನುಸ್ಮೃತಿ ದಿನ” ಮಾಡುವ ಬಿಜೆಪಿ ಹುನ್ನಾರ : ಚಿಂತಕ ಶಿವಸುಂದರ್
ಈ ಬಾರಿ ನ.26 ರ ಸಂವಿಧಾನ ಸಮರ್ಪಣಾ ದಿನವನ್ನು “ಭಾರತ-ಪ್ರಜಾತಂತ್ರದ ಜನನಿ” ಎಂಬ ಹೆಸರಿನಲ್ಲಿ ದೇಶಾದ್ಯಂತ ಆಚರಿಸಬೇಕೆಂದು ಮೋದಿ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ ನವಂಬರ್ 9 ರಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ, ವಿಶ್ವವಿದ್ಯಾಲಯಗಳಿಗೆ ಹಾಗೂ ಕೇಂದ್ರ ಕಚೇರಿಗಳಿಗೆ ಸೂಚನೆಯನ್ನು ಕೊಟ್ಟಿದ್ದಾರೆ.

ಆ ಆಚರಣೆಯ ಒತ್ತು ಏನಿರಬೇಕೆಂಬ ಬಗ್ಗೆ ICHR- Indian Council For Historical Research ತಯಾರಿಸಿದ  ಎರಡು ಪುಟದ ಒಂದು ಪರಿಕಲ್ಪನಾತ್ಮಕ ಟಿಪ್ಪಣಿ (Concept Note) ಯನ್ನು ಕೂಡ ಅದರ ಜೊತೆ ಲಗತ್ತಿಸಲಾಗಿದೆ. (ಅದು ಈ ಲೇಖನದ attachment ನಲ್ಲಿದೆ).

ಆ ಟಿಪ್ಪಣಿಯ ಕೆಲವು ಭಾಗಗಳು ಹೀಗಿವೆ:
●  ವೇದಗಳ ಕಾಲದಲ್ಲೇ ಭಾರತದಲ್ಲಿ ಪ್ರಜಾತಂತ್ರವಿತ್ತು.
●  ವೇದಗಳ ಕಾಲದಿಂದಲೂ ಗ್ರಾಮಗಳಲ್ಲಿ  ಸಮುದಾಯ ಆಧಾರಿತ ಆಡಳಿತವಿತ್ತು. ಅದು ಪಂಚಾಯತಿ ಮತ್ತು ಖಾಪ್ ಪಂಚಾಯತಿ ರೂಪದಲ್ಲಿತ್ತು.
(ಆರ್ಥಾತ್ ಜಾತಿ ವ್ಯವಸ್ಥೆಯನ್ನು ಪ್ರಜಾತಾಂತ್ರಿಕ ಗ್ರಾಮ ವ್ಯವಸ್ಥೆಯೆಂದು ಬಣ್ಣಿಸಲಾಗುತ್ತಿದೆ!)
●  ಈ ಕಾರಣದಿಂದಾಗಿಯೇ  ಭಾರತವು 2000  ವರ್ಷಗಳಿಂದಲೂ ವಿದೇಶಿಯರ ದಾಳಿಗೆ ತುತ್ತಾಗುತ್ತಲೇ ಬಂದಿದ್ದರೂ ಹಿಂದೂ ಸಂಸ್ಕೃತಿ ಮತ್ತು ನಾಗರಿಕತೆ ಉಳಿದುಕೊಂಡು ಬಂದಿದೆ.
(ಇದು ಆರೆಸ್ಸೆಸ್ ಸರಸಂಘಚಾಲಕ ಗೋಲ್ವಾಲ್ಕರ್  ಪ್ರತಿಪಾದನೆ. ಜಾತಿ ವ್ಯವಸ್ಥೆಯೇ ಈ ದೇಶದ ಅಸ್ಮಿತೆ. ಅದು ಸಡಿಲವಾಗಿದ್ದರಿಂದಲೇ ಭಾರತದ ಈಶಾನ್ಯ ಮತ್ತು ವಾಯುವ್ಯ  ಪ್ರಾಂತ್ಯಗಳಲ್ಲಿ ಪರದೇಸಿ ಧರ್ಮಗಳು ನೆಲಸುವಂತಾಯಿತು ಎಂದು ಅವರ Bunch Of Thoughts ನಲ್ಲಿ ಬರೆದುಕೊಂಡಿದ್ದಾರೆ. ಈಗ ಮೋದಿ ಸರ್ಕಾರ ಯಥಾವತ್ ಅದೇ ಮಾತನ್ನು ಸಂವಿಧಾನ ದಿನದಂದು ಪ್ರಚಾರ ಮಾಡುತ್ತಿದೆ)
●  ಇತ್ತೀಚಿಗೆ ರಾಖಿಗರಿ ಸಂಶೋಧನೆಯಲ್ಲೂ ಭಾರತದ ವೈದಿಕ ನಾಗರೀಕತೆ 5000 ವರ್ಷಗಳಷ್ಟು ಹಿಂದಿನದ್ದೆಂದೂ, ಆ ಕಾಲದಲ್ಲೂ ಪ್ರಜಾತಾಂತ್ರಿಕ ವ್ಯವಸ್ಥೆ ಇತ್ತೆಂದು ಸಾಬೀತಾಗಿದೆ.
(ಇದು ಮತ್ತೊಂದು ಮಹಾ ಸುಳ್ಳು. ರಾಖಿಗರಿ ಸಂಶೋಧನೆಯು  ಹರಪ್ಪಾ ನಾಗರಿಕತೆಗೂ ಆರ್ಯರಿಗೂ ಸಂಬಂಧವಿಲ್ಲ. ಅದು ದ್ರಾವಿಡ ನಾಗರೀಕತೆ ಹೊರತು ಆರ್ಯ ನಾಗರೀಕತೆಯಲ್ಲ ಅರ್ಥಾತ್ ವೇದ ನಾಗರಿಕತೆಯಲ್ಲ ಎಂಬುದುನ್ನು ರಾಖಿಗರಿ ಸಂಶೋಧನೆ ಸಾಬೀತು ಮಾಡಿದೆ)

●  ಭಗವದ್ಗೀತೆಯು ಈ ವೇದ ಪ್ರಣೀತ ಪ್ರಜಾತಾಂತ್ರಿಕತೆಯ ಭಾಗವಾಗಿ ಮಾನವನ ನಡತೆಯಲ್ಲಿ ಜ್ಞಾನ, ಶ್ರದ್ಧೆ , ಕ್ರಿಯೆ ಮತ್ತು ಗುಣಗಳು ವ್ಯಕ್ತವಾಗಬೇಕು ಎಂದು ಪ್ರತಿಪಾದಿಸುತ್ತದೆ.
(ಆದರೆ ಅಂಬೇಡ್ಕರ್ ಅವರು ಸ್ಪಷ್ಟಪಡಿಸುವಂತೆ, ಭಗವದ್ಗೀತೆಯು  ಜಾತಿ ಆಧಾರಿತ ಶ್ರೇಣೀಕರಣವನ್ನು ಪ್ರತಿಪಾದಿಸುವ ಮನುಸ್ಮೃತಿಯ ತಾತ್ವಿಕ ಸಮರ್ಥನೆಯಾಗಿದ್ದು, ಅದರಲ್ಲಿ ಭೋಧಿಸಲಾಗಿರುವ ಜ್ಞಾನ, ಗುಣ ಮತ್ತು ಕ್ರಿಯೆಗಳೆಲ್ಲವೂ ಹುಟ್ಟಿನಿಂದಲೇ ತೀರ್ಮಾನವಾಗಿರುತ್ತದೆ ಎಂಬ ಜಾತಿ ಶ್ರೇಣೀಕರಣದ ತಾರತಮ್ಯ ತತ್ವವನ್ನೇ ಹೇಳುತ್ತದೆ. ಆದರೆ ಮೋದಿ ಸರ್ಕಾರ ಅದನ್ನು ಭಾರತದ ಸನಾತನ ಪ್ರಜಾತಂತ್ರ ಎಂದು ಆಚರಿಸಲು ಆದೇಶಿಸುತ್ತಿದೆ )

●  ಇದಲ್ಲದೆ, ಜಗತ್ತಿನ ಇತರ ಪ್ರಾಚೀನ ಪ್ರಜಾತಂತ್ರಗಳಾದ ಗ್ರೀಸ್ ಮತ್ತು ರೋಮನ್ ಪ್ರಜಾತಂತ್ರಕ್ಕೂ ಮತ್ತು ಭಾರತದ ವೈದಿಕ ಪ್ರಜಾತಂತ್ರಕ್ಕೂ ಇದ್ದ ದೊಡ್ಡ ವ್ಯತ್ಯಾಸವೇನೆಂದರೆ ಭಾರತದಲ್ಲಿ ಹುಟ್ಟಿನ ಆಧಾರದಲ್ಲಿ ಸಂಪತ್ತು, ಜ್ಞಾನ ಮತ್ತು ರಾಜ್ಯಅಧಿಕಾರಗಳು ಒಂದೆಡೆ ಕೇಂದ್ರೀಕರಣಗೊಂಡು ನಿರಂಕುಶ ಸಾಮ್ರಾಜ್ಯಗಳು ರೂಪುಗೊಳ್ಳಲಿಲ್ಲ.
(ಇದಕ್ಕಿಂತ ದೊಡ್ಡ ಸುಳ್ಳು ಮತ್ತೊಂದು ಇರಬಹುದೇ??? ಜಗತ್ತಿನಲ್ಲಿ ಬೇರೆಲ್ಲೂ ಇಲ್ಲದ ಹುಟ್ಟಿನ ಆಧಾರದ ಜಾತಿ ವ್ಯವಸ್ಥೆ, ಜಾತಿ ತಾರತಮ್ಯ ಇರುವುದು ಭಾರತದ ಬ್ರಾಹ್ಮಣಿಯ ಸಾಮಾಜಿಕ  ವ್ಯವಸ್ಥೆಯಲ್ಲಿ ಮಾತ್ರ. ಸಂಪತ್ತು, ಅಧಿಕಾರ ಮತ್ತು ಜ್ಞಾನ ವನ್ನು ವೇದಗಳ ಪ್ರಮಾಣಡ್ಮದಲೇ ದಲಿತರಿಂದ ಮತ್ತು ಶೂದ್ರರಿಂದ, ಮಹಿಳೆಯರಿಂದ ಕಸಿದು ಕೇವಲ ಬ್ರಾಹ್ಮಣಿಯ ಮೇಲ್ಜಾತಿಗಳ ಖಾಸಗಿ ಆಸ್ತಿಯನ್ನಾಗಿ ಮಾಡಿದ್ದು ಭಾರತದ ವೇದ -ಪುರಾಣ -ಶಾಸ್ತ್ರ -ಸ್ಮೃತಿ -ಶ್ರುತಿಗಳನ್ನಾಧರಿಸಿದ ಈ ದೇಶದ ಹಿಂದೂ ಬ್ರಾಹ್ಮಣಿಯ ಜಾತಿ ವ್ಯವಸ್ಥೆ.

ಆದ್ದರಿಂದಲೇ ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಪ್ರಜಾತಂತ್ರ, ಸ್ವಾತಂತ್ರ್ಯ-ಸಮಾನತೆ-ಭ್ರಾತ್ತ್ರುತ್ವ ಇಲ್ಲವೇ ಇಲ್ಲ. ಏಕೆಂದರೆ ಅದು ತಾರತಮ್ಯವನ್ನೇ ಆಧರಿಸಿದ ವೇದ-ಪುರಾಣಗಳನ್ನು ಅನುಸರಿಸುತ್ತದೆ. ಆದ್ದರಿಂದ ಹಿಂದೂ ರಾಷ್ಟ್ರವೆಂಬುದು ಭಾರತಕ್ಕೆ ಒದಗಬಹುದಾದ ಅತಿ ದೊಡ್ಡ ವಿಪತ್ತು ಎಂದು ಎಚ್ಚರಿಸಿದ್ದರು.

ಆದರೆ ಮೋದಿ ಸರ್ಕಾರ ಸಂವಿಧಾನ ದಿನದಂದು ಅದೇ ವೇದ-ಪುರಾಣ ಆಧರಿಸಿದ ಜಾತಿ ವ್ಯವಸ್ಥೆಯನ್ನೇ ಭಾರತದ ಹಿರಿಮೆ ಎಂದು ಆಚರಿಸಲು ಆದೇಶಿಸಿದ್ದಾರೆ)

ಹಾಗೆ ನೋಡಿದರೆ, 1949  ರ ನವಂಬರ್ 25 ರಂದು ಭಾರತಕ್ಕೆ ಸಂವಿಧಾನವನ್ನು ಸಮರ್ಪಣೆ ಮಾಡುತ್ತಾ ಅಂಬೇಡ್ಕರ್ ಅವರು ಮಾಡಿದ ಭಾಷಣದಲ್ಲಿ ಕೂಡ ಪ್ರಾಚೀನ ಭಾರತದಲ್ಲಿ ಪ್ರಜಾತಂತ್ರವಿತ್ತು ಎಂದು ಹೇಳಿದ್ದಾರೆ.

ಆದರೆ ಅದು ವೇದ ಭಾರತದಲ್ಲಲ್ಲ
ವೇದವನ್ನು ನಿರಾಕರಿಸುತ್ತಾ ಸಮತೆ, ಮಮತೆಯ ಮೌಲ್ಯಗಳ ಆಧಾರದಲ್ಲಿ ಹುಟ್ಟಿಕೊಂಡದ್ದು ಬುದ್ಧ ಕಾಲದ ಭಾರತದಲ್ಲಿ. ಬುದ್ಧ ಸಂಘಗಳಲ್ಲಿ.

ಇಂಥಾ ನೈಜ ಪ್ರಜಾತಂತ್ರವನ್ನು ಪುಷ್ಯ ಶೃಂಗ ನೇತೃತ್ವದಲ್ಲಿ ಬ್ರಾಹ್ಮಣರು ಪ್ರತಿಕ್ರಾಂತಿ ಮಾಡಿ ಸರ್ವನಾಶ ಮಾಡಿದರು. ಬ್ರಾಹ್ಮಣ್ಯದ ದಿಗ್ವಿಜಯದೊಂದಿಗೆ ಭಾರತದ ಸ್ವದೇಶಿ ಪ್ರಜಾತಂತ್ರ ಪತನಗೊಂಡಿತ್ತು. ಈಗ ಮತ್ತೊಮ್ಮೆ ಪ್ರಜಾತಂತ್ರ ಸಾಧಿಸಿದ್ದೇವೆ. ಆದರೆ ಅದು ಕೂಡ ಸರ್ವಾಧಿಕಾರದ ಹಾದಿ ಹಿಡಿಯುವ ಸಾಧ್ಯತೆ ಇದೆಯೆಂದು ಅಂಬೆಡ್ಕರ್ ಸಂವಿಧಾನ ಸಮರ್ಪಣಾ ದಿನದಂದೇ ಎಚ್ಚರಿಸಿದ್ದರು.

ಈಗ ಮೋದಿ ಸರ್ಕಾರ ಅಂಬೇಡ್ಕರ್ ನೇತೃತ್ವದಲ್ಲಿ ನಡೆದ ಜನಕ್ರಾಂತಿಯನ್ನು-ಸಂವಿಧಾನವನ್ನು ನಾಶಗೊಳಿಸಿ ಮತ್ತೆ  ವೇದಕಾಲದ ವರ್ಣಾಶ್ರಮವನ್ನೇ ಪ್ರಜಾತಂತ್ರ ಎಂದು ಪ್ರತಿಕ್ರಾಂತಿ ಮಾಡುತ್ತಿದ್ದಾರೆ.

ಈ ಪ್ರಜಾತಂತ್ರ ವಿರೋಧಿ ಬ್ರಾಹ್ಮಣಿಯ  ಸರ್ವಾಧಿಕಾರಿ ತತ್ವವನ್ನು ಅಧಿಕೃತಗೊಳಿಸಲು ನವಂಬರ್ 26ರ ಸಂವಿಧಾನ ಸಮರ್ಪಣಾ ದಿನವನ್ನೇ ಬಳಸಿಕೊಳ್ಳುತ್ತಿದ್ದಾರೆ.

ಇದನ್ನು ಭಾರತದ ಜನತೆ ತಿರಸ್ಕರಿಸಬೇಕು.
ಅದರ ಅರ್ಥ ಪ್ರಾಚಿನ ಭಾರತದಲ್ಲಿ ಪ್ರಜಾತಂತ್ರವಿರಲಿಲ್ಲ ಎಂದೇನಲ್ಲ. ಅಂಬೇಡ್ಕರ್ ಸ್ಪಷ್ಟಪಡಿಸಿರುವಂತೆ ಬೌದ್ಧ ಸಂಘಗಳಲ್ಲಿ ಇಂದಿನ ಆಧುನಿಕ ಸಂಸದೀಯ ಪ್ರಜಾತಂತ್ರದ ಎಲ್ಲಾ ರಿವಾಜುಗಳೂ ಇದ್ದವು. ಮತ್ತು ಬೌದ್ಧ ಸಂಘದ ಮೌಲ್ಯ ಸಮತೆ ಮತ್ತು ಮಮತೆಗಳಾಗಿದ್ದವು. ಹಾಗೆಯೇ ಬಸವ ಕ್ರಾಂತಿಯ ಅನುಭವ ಮಂಟಪವೂ ಕೂಡ. ನಮ್ಮ ಇತಿಹಾಸದಲ್ಲಿ ನಾವು ಹೆಮ್ಮೆ ಪಡಬೇಕಾದದ್ದು, ಮಾರ್ಗದರ್ಶಿಯಾಗಬೇಕಿರುವುದು ಬುದ್ಧ, ಬಸವರೇ ವಿನಾ ವೇದ-ಪುರಾಣ- ಗೀತಗಳಲ್ಲ.

ಆದರೆ ICHR ತಯಾರು ಮಾಡಿರುವ Concept Note ನಲ್ಲಿ ಬುದ್ಧನ ಬಗ್ಗೆಯಾಗಲೀ, ಅಪ್ಪಟ  ಭಾರತೀಯ  ಅವೈದಿಕ ಹಾಗೂ ಬ್ರಾಹ್ಮಣ ವಿರೋಧಿ  ಪ್ರಜಾತಾಂತ್ರಿಕ ಜ್ಞಾನ ದರ್ಶನಗಳ  ಬಗ್ಗೆ ಒಂದೇ ಒಂದು ಪದವೂ ಉಲ್ಲೇಖವಾಗಿಲ್ಲ.

ಬ್ರಾಹ್ಮಣೀಕರಣವೇ ಭಾರತೀಕರಣ ಎಂಬ ಸಂಘಿ ಹುನ್ನಾರ ಇದರಲ್ಲೂ ಎದ್ದು ಕಾಣುತ್ತಿದೆ. ಶೋಷಕರ ಇತಿಹಾಸವನ್ನು ನಿರಾಕರಿಸಿ ಶೋಷಿತರ ಪ್ರಜಾತಾಂತ್ರಿಕ ಇತಿಹಾಸವನ್ನು ಈ ನವಂಬರ್ 26 ರಂದೂ ಎತ್ತಿ ಹಿಡಿಯುವ ಜವಾಬ್ದಾರಿ ನಮ್ಮಮೇಲಿದೆ.
ಅಲ್ಲವೇ?

– ಶಿವಸುಂದರ್

ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ; ನಟ ಕಿಶೋರ್ ಕುಮಾರ್ ಆಕ್ಷೇಪ
ಇತ್ತೀಚಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಆಡಳಿತ ಪಕ್ಷಗಳು ಎಸಗುವ ತಪ್ಪು ನಿರ್ಧಾರಗಳನ್ನು ಟೀಕಿಸುವವರಲ್ಲಿ ನಟ ಕಿಶೋರ್ ಕುಮಾರ್ ಗಮನಾರ್ಹರು. ಸಧ್ಯ ರಾಜ್ಯ ಸರ್ಕಾರದ ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಹೊಡೆಯುವ ನಿರ್ಧಾರದ ಬಗ್ಗೆಯೂ ಕಿಶೋರ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೇರಿ ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಹೊಡೆಯುವ ನಿರ್ಧಾರವನ್ನು ಪ್ರಸ್ತಾಪಿಸಿದ್ದರು. ಸ್ವಾಮಿ ವಿವೇಕಾನಂದರ ಹೆಸರು ಮುಂದಿಟ್ಟುಕೊಂಡು ರೂಪಿಸಲಾದ ಇಂತಹ ರಾಜಕೀಯ ಪ್ರೇರಿತ ನಿರ್ಧಾರಕ್ಕೆ ಎಲ್ಲಾ ಕಡೆಗಳಿಂದ ವಿರೋಧ ವ್ಯಕ್ತವಾಗಿತ್ತು.

ಆದರೆ ಬಿಜೆಪಿ ಪಕ್ಷದ ಪ್ರಮುಖರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ‘ಕೇಸರಿ ಕಂಡರೆ ಯಾಕೆ ಇವರಿಗೆ ವಿರೋಧ, ರಾಷ್ಟ್ರಧ್ವಜದಲ್ಲೂ ಕೇಸರಿ ಇಲ್ಲವೇ..’ ಎಂಬ ರೀತಿಯಾಗಿ ತಮ್ಮ ವಾದ ಮಂಡಿಸಿದ್ದರು. ಹೀಗೆ ಸರ್ಕಾರದ ಇಂತಹ ರಾಜಕೀಯ ಪ್ರೇರಿತ  ನಿರ್ಧಾರಕ್ಕೆ ಎಲ್ಲೆಡೆ ಪರ ವಿರೋಧಗಳು ವ್ಯಕ್ತವಾಗಿದ್ದವು.

ಸಧ್ಯ ಸರ್ಕಾರದ ಈ ನಿಲುವಿನ ಬಗ್ಗೆ ನಟ ಕಿಶೋರ್ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ಇಂತಹ ನಿರ್ಧಾರದ ಬಗ್ಗೆ ನಟ ಕಿಶೋರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
“ಜ್ಞಾನದ ದೇಗುಲ, ಶಾಲೆಗಳನ್ನೂ ಬಿಡದ ಹೊಲಸು ರಾಜಕೀಯ. ಧರ್ಮದ ಹೆಸರಿನಲ್ಲಿ ವಿವೇಕಾನಂದರ ಉದಾತ್ತ ಚಿಂತನೆಗಳ ಅವಹೇಳನ, ಅವಿವೇಕತನ.
ಕೇವಲ ಯಾರದ್ದೊ ಓಟು, ಅಧಿಕಾರದ ದಾಹಕ್ಕಾಗಿ ನಮ್ಮ ಮಕ್ಕಳೂ, ಅವರ ಭವಿಷ್ಯವೂ, ದೇಶವೂ ಬಲಿಯಾಗಬೇಕಾದೀತು. ಏಳಿ ಎದ್ದೇಳಿ ಪ್ರತಿಭಟಿಸಿ.” ಎನ್ನುತ್ತಾ ಜನರನ್ನು ಎಚ್ಚರಿಸುವ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.

ಸಧ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ಮೊದಲು ಶಾಲೆಗಳ ಮೂಲಭೂತ ವ್ಯವಸ್ಥೆ ಕಲ್ಪಿಸಿ ನಂತರ ಬಣ್ಣದ ಬಗ್ಗೆ ಯೋಚಿಸಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತ ಸರ್ಕಾರ ತನ್ನ ಮೊಂಡು ಹಠ ಬಿಡದೇ ಬಣ್ಣ ಹೊಡೆದೇ ತೀರುವ ನಿರ್ಧಾರಕ್ಕೆ ಬಂದಂತಿದೆ.