grammy – Peepal Media

ಭಾರತದ ಸಂಗೀತ ದಿಗ್ಗಜರ ʼದಿಸ್‌ ಮೊಮೆಂಟ್‌ʼ ಆಲ್ಬಮ್ ಗೆ 66ನೇ ಗ್ರ್ಯಾಮ್ಮಿ ಅವಾರ್ಡ್
ಲಾಸ್ ಎಂಜಲೀಸ್: ಭಾರತದ ಸಂಗೀತ ದಿಗ್ಗಜರು ಎನಿಸಿಕೊಂಡಿರುವ ಜಾಕಿರ್ ಹುಸೇನ್, ಶಂಕರ್ ಮಹದೇವನ್, ಗಣೇಶ್ ರಾಜಗೋಪಾಲನ್, ಸೆಲ್ವಗಣೇಶ್ ವಿನಾಯಕ್‌ರಾಮ್ ಮತ್ತು ಜಾನ್ ಮೆಕ್‌ಲಾಫ್ಲಿನ್ ಅವರ ಸಂಯೋಜನೆಯ ಎಂಟು ಹಾಡುಗಳನ್ನು ಒಳಗೊಂಡಿರುವ ದಿಸ್ ಮೊಮೆಂಟ್ʼ ಎಂಬ ಅಲ್ಬಂ ಸಂಗ್ರಹಕ್ಕೆ ಅತ್ಯುತ್ತಮ ಜಾಗತಿಕ ಸಂಗೀತ ಆಲ್ಬಂ ವಿಭಾಗದಲ್ಲಿ 66 ನೇ ಗ್ರ್ಯಾಮಿ ಪ್ರಶಸ್ತಿ ದೊರಕಿದೆ.
ಇತ್ತೀಚೆಗೆ ಪ್ರಪಂಚದ ವಿವಿಧ ದೇಶಗಳ ಸಂಗೀತಗಾರರಿಂದ ಹೊರಬಂದಿರುವ ಸಂಗೀತ ಸಂಯೋಜನೆಯ ಅತ್ಯುತ್ತಮ ಧ್ವನಿಮುದ್ರಣಗಳು ಹಾಗೂ ಸಂಗೀತ ಕಲಾವಿದರನ್ನು ಗುರುತಿಸಿ ಫೆಬ್ರವರಿ 5 (ಭಾರತದಲ್ಲಿ ಸೋಮವಾರ) ಲಾಸ್ ಏಂಜಲೀಸ್‌ನ ಅರೆನಾದಲ್ಲಿ 66 ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಗಳನ್ನು ನೀಡಲಾಯಿತು. ಭಾರತದ ಸಂಗೀತಗಾರರ ಆಲ್ಬಂ ʼದಿಸ್ ಮೊಮೆಂಟ್‌ʼಗೆ ಗ್ರ್ಯಾಮ್ಮಿ ಪ್ರಶಸ್ತಿ ದಕ್ಕಿದೆ.

ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ ಈ ಅಲ್ಬಂ ಗಿಟಾರ್ ವಾದಕ ಜಾನ್ ಮೆಕ್‌ಲಾಫ್ಲಿನ್, ತಬಲಾ ವಾದಕ ಜಾಕಿರ್ ಹುಸೇನ್, ಗಾಯಕ ಶಂಕರ್ ಮಹದೇವನ್, ಪಿಟೀಲು ವಾದಕ ಗಣೇಶ್ ರಾಜಗೋಪಾಲನ್ ಮತ್ತು ತಾಳ ವಾದಕ ಸೆಲ್ವಗಣೇಶ್ ವಿನಾಯಕ್‌ರಂ ಅವರ ಎಂಟು ಹಾಡುಗಳನ್ನು ಈ ಅಲ್ಬಂ ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹಾದೇವನ್, “ಭಾರತದ ಎಲ್ಲ ಸಂಗೀತ ಪ್ರೇಮಿಗಳಿಗೆ, ಕುಟುಂಬ ವರ್ಗದವರಿಗೆ ಮತ್ತು ನಮ್ಮೆಲ್ಲ ಸ್ನೇಹಿತರಿಗೆ ಧನ್ಯವಾದಗಳು. ಭಾರತದ ಬಗ್ಗೆ ನಮಗೆ ಹೆಮ್ಮೆ ಎನಿಸುತ್ತದೆ. ನಾನು ಈ ಪ್ರಶಸ್ತಿಯನ್ನು ನನ್ನ ಹೆಂಡತಿಗೆ ಅರ್ಪಿಸಲು ಬಯಸುತ್ತೇನೆ ಎಂದು ಭಾವುಕರಾಗಿ ನುಡಿದರು.
ಇದೇ ವೇದಿಕೆಯಲ್ಲಿ ತಬಲಾ ವಾದಕ ಝಾಕಿರ್ ಹುಸೇನ್ ಅವರು ಇನ್ನೆರಡು ಪ್ರಶಸ್ತಿಗಳಲ್ಲಿ ಪಾಲು ಪಡೆದಿದ್ದಾರೆ. ಭಾರತದ ಸಂಗೀತ ಪ್ರೇಮಿಗಳ ಹರ್ಷೋಧ್ಘಾರಕ್ಕೆ ಕಾರಣರಾದರು. ರಾಕೇಶ್ ಚೌರಾಸಿಯಾ ಅವರನ್ನು ಒಳಗೊಂಡ ಬೇಲಾ ಫ್ಲೆಕ್ ಮತ್ತು ಎಡ್ಗರ್ ಮೆಯೆರ್ ಜೊತೆಗೆ ʼಪಾಷ್ಟೋʼ ಮತ್ತು ʼಆಸ್ ವಿ ಸ್ಪೀಕ್‌ʼ ಸಂಗೀತ ಸಂಯೋಜನೆಗಳಿಗೆ ಅತ್ಯುತ್ತಮ ಜಾಗತಿಕ ಸಂಗೀತ ಪ್ರಶಸ್ತಿ ಮತ್ತು ಅತ್ಯುತ್ತಮ ಸಮಕಾಲೀನ ವಾದ್ಯಗಳ ಆಲ್ಬಮ್ ಪ್ರಶಸ್ತಿಯನ್ನು ಜಾಕೀರ್ ಪಡೆದಿದ್ದಾರೆ.