gujarath – Peepal Media

Breaking news : ವಡೋದರ ದೋಣಿ ದುರಂತ : 12 ಮಕ್ಕಳ ದುರ್ಮರಣ
ಗುಜರಾತಿನ ವಡೋದರಾ ಜಿಲ್ಲೆಯಲ್ಲಿ ದೋಣಿಯೊಂದು ಮುಳುಗಿ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ. ಗುರುವಾರ ಮಧ್ಯಾಹ್ನ ಹರ್ನಿ ಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಅಪಘಾತ ಸಂಭವಿಸಿದಾಗ ದೋಣಿಯಲ್ಲಿ ಇರುವ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಮೃತರಲ್ಲಿ ಕನಿಷ್ಠ ಹತ್ತು ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದ್ದಾರೆ. ದೋಣಿಯಲ್ಲಿದ್ದ ಇತರ 15 ಜನರನ್ನ ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ.

ದೋಣಿಯಲ್ಲಿ ಶಾಲಾ ಮಕ್ಕಳ ತಂಡವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿ 23 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಇದ್ದರು. ಸಮತೋಲನ ತಪ್ಪಿ ಬೋಟ್ ಪಲ್ಟಿಯಾಗಿದೆ. ಯಾವ ಮಕ್ಕಳೂ ಲೈಫ್ ಜಾಕೆಟ್ ಧರಿಸಿರಲಿಲ್ಲ. ಮಕ್ಕಳಿಗೆ ಈಜು ಬಾರದೇ ಇದ್ದುದರಿಂದ ನೀರಿನಲ್ಲಿ ಮುಳುಗತೊಡಗಿದರು. ಸ್ಥಳದಲ್ಲಿದ್ದವರು ಮಕ್ಕಳನ್ನ ರಕ್ಷಿಸಲು ಹರಸಾಹಸ ಪಟ್ಟರು. ಅಷ್ಟರಲ್ಲಿ ಆಡಳಿತ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಬಳಿಕ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ರಕ್ಷಣಾ ಕಾರ್ಯ ಆರಂಭಿಸಿದ್ದಾರೆ. ಮಕ್ಕಳನ್ನು ಆಸ್ಪತ್ರೆಗೆ ಕಳುಹಿಸಲು ಪ್ರಾರಂಭಿಸಿದರು.

ವಡೋದರ ಜಿಲ್ಲೆಯ ಸನ್‌ರೈಸ್ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನ ಗುರುವಾರ ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಲಾಗಿತ್ತು. ಪಿಕ್ನಿಕ್’ಗೆ ತೆರಳಿದ ಬಾಲಕಿ ನ್ಯಾನ್ಸಿಯ ತಾಯಿ ನಿರಾಲಿಬೆನ್ ಮಾಚಿ, ತನ್ನ ಮಗಳು 2ನೇ ತರಗತಿಯಲ್ಲಿ ಓದುತ್ತಿದ್ದಾಳೆ ಎಂದು ತಿಳಿಸಿದ್ದಾರೆ. ಶಾಲಾ ವಿಹಾರಕ್ಕೆಂದು ಇತರ ಮಕ್ಕಳೊಂದಿಗೆ ಹರಣಿ ವಾಟರ್ ಪಾರ್ಕ್ ಮತ್ತು ಕೆರೆಗೆ ಬೆಳಗ್ಗೆ 8 ಗಂಟೆಗೆ ತೆರಳಿದ್ದರು. ಸಂಜೆ ಮಕ್ಕಳ ಮನೆಗೆ ಬರುವಾಗ ಅಪಘಾತ ಸಂಭವಿಸಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಖತ್ನಾ ಎನ್ನುವ ಬಾಲಕಿಯರ ಪಾಲಿನ ನರಕ!: ಮೋದಿಯವರ ತವರು ರಾಜ್ಯವೇ ಭಾರತದಲ್ಲಿ ಇದರ ತವರು!
ಹೆಣ್ಣಿಗೆ ಲೈಂಗಿಕತೆ ಆನಂದ ನೀಡುವಂತಿರಬಾರದು ಎಂದು ಈಗಲೂ ಚಾಲ್ತಿಯಲ್ಲಿರುವ ಸ್ತ್ರೀ ಜನನಾಂಗ ವಿರೂಪಗೊಳಿಸುವಿಕೆಯಂತ ಘಾತುಕ ಆಚರಣೆಗಳನ್ನು, ಸಂಪ್ರದಾಯಗಳನ್ನು ಕೈಬಿಟ್ಟು ಅವಳನ್ನು ಕೂಡಾ ತಮ್ಮಂತೆಯೇ ಒಂದು ಜೀವಿ ಎಂದು ಪರಿಗಣಿಸುವಂತೆ ಆಗಬೇಕೆನ್ನುವುದು ಪೀಪಲ್‌ ಮೀಡಿಯಾ ಕಾಳಜಿ. ಈ ನಿಟ್ಟಿನಲ್ಲಿ ವಿದ್ಯಾವಂತ ಯುವ ಮನಸ್ಸುಗಳು ಬದಲಾವಣೆಗೆ ತೆರೆದುಕೊಳ್ಳಬೇಕೆಂಬುದು ಈ ಲೇಖನದ ಆಶಯ

ಇದೊಂದು ನರಕದಂತಹ ಆಚರಣೆ. ಹೀಗೆ ಸುಮ್ಮನೆ ಕಲ್ಪಿಸಿಕೊಳ್ಳಿ… ಏನೂ ಅರಿಯದ ಆರೇಳು ವರ್ಷದ ಬಾಲಕಿಯೊಬ್ಬಳನ್ನು ಅವಳ ಅಮ್ಮನೋ, ಅಜ್ಜಿಯೋ ಬಾ ತಿಂಡಿ ಕೊಡಿಸುತ್ತೇನೆ ಎಂದು ಕರೆದೊಯ್ಯುತ್ತಾಳೆ. ಹಾಗೆ ಕರೆದೊಯ್ದವರು ಅವಳನ್ನು ಒಂದು ಕತ್ತಲೆಯ ಕೂಪದಂತಹ ಕಟ್ಟಡಕ್ಕೆ ಕರೆದೊಯ್ಯುತ್ತಾರೆ. ಅಲ್ಲೊಬ್ಬಳು ಯಾವುದೇ ತರಬೇತಿಯಿಲ್ಲ ಸೂಲಗಿತ್ತಿ ಹೆಂಗಸು ಆ ಪುಟ್ಟ ಬಾಲಕಿಯ ಕೆಳ ಭಾಗದ ಬಟ್ಟೆ ಕಳಚಿ ಆಕೆಯ ಜನನಾಂಗದ ಮೇಲ್ಭಾಗದ ತುದಿಯನ್ನು (ಕ್ಲಿಟೊರಿಯಸ್) ಕಾದ ಚಾಕುವನ್ನು ಬಳಸಿ ಕತ್ತರಿಸಿ ತೆಗೆಯುತ್ತಾಳೆ! ಹುಡುಗಿ ನೋವಿನಿಂದ ಕಿರುಚುತ್ತಾಳೆ… ಆ ಸೂಲಗಿತ್ತಿ ಗಾಯಕ್ಕೆ ಒಂದಿಷ್ಟು ಕಪ್ಪು ಪುಡಿ ಹಾಕಿ ಕಳಿಸುತ್ತಾಳೆ. ಹೌದು, ಆಫ್ರಿಕಾ ಖಂಡದ ಸುಮಾರು ಮೂವತ್ತು ದೇಶಗಳಲ್ಲಿ ಇದನ್ನು ಆಚರಿಸಲಾಗುತ್ತದೆ. ಈ ಕುರಿತು 2012ರ ಆಸುಪಾಸಿನಲ್ಲಿ ನೀವೂ ಟಿವಿ, ಪತ್ರಿಕೆಗಳಲ್ಲಿ ಚರ್ಚೆಯಾಗಿರುವುದನ್ನು ಗಮನಿಸಿರಬಹುದು. ಇದೊಂದು ಅಮಾನವಿಯ ಆಚರಣೆಯಾಗಿದ್ದು ಇದನ್ನು 2030ರ ವೇಳೆಗೆ ಸಂಪೂರ್ಣವಾಗಿ ಇಲ್ಲವಾಗಿಸಲು ವಿಶ್ವಸಂಸ್ಥೆ ಪಣ ತೊಟ್ಟಿದೆ. ಈ ಪದ್ಧತಿಯ ಸಂಪೂರ್ಣ ಅಸಹಿಸ್ಣುತತೆಯನ್ನು ತೋರಿಸಬೇಕೆಂದು ಅದು ಆಗ್ರಹಿದೆ.

ಭಾರತದಲ್ಲೂ ಇದೆ ಈ ಕ್ರೂರ ಪದ್ಧತಿ…!

ಹೌದು, ನೀವು ಸರಿಯಾಗಿಯೇ ಓದುತ್ತಿದ್ದೀರಿ! ಈ ಅಮಾನವೀಯ ಪದ್ಧತಿ ಭಾರತದಲ್ಲಿ ಇಂದಿಗೂ ಜೀವಂತವಿದೆ. ಅದೂ ಕೂಡಾ ಮುಂಬಯಿಯಂತಹ ಮಹಾನಗರಿಯ ಒಳಗೇ! ಹೌದು ಭಾರತ ವಿಶ್ವಸಂಸ್ಥೆಯ ಸಭೆಗಳಲ್ಲಿ ಇಂತಹ ಅಮಾನವೀಯ ಪದ್ಧತಿಯ ಕೊನೆಗೆ ಕರೆ ನೀಡಿದೆ. ಇದನ್ನು ಕೊನೆಗಾಣಿಸಲು ಸಲಹೆಗಳನ್ನೂ ನೀಡಿದೆ. ಆದರೆ ನಾವು ನಮ್ಮ ದೇಶದ ವಿಷಯ ಬಂದಾಗ ಅಂತಹದ್ದೊಂದು ಆಚರಣೆ ನಮ್ಮಲ್ಲಿದೆಯೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಖತ್ನಾ ಎನ್ನುವ ಆಚರಣೆ ಭಾರತದಲ್ಲಿ ನಡೆಯುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಸರ್ಕಾರ ಇದುವರೆಗೆ ನಿರಾಕರಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸಂಸತ್ತಿನಲ್ಲಿ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಎಫ್‌ಜಿಎಂ (female genital mutilation / ಯೋನಿ ಛೇದನ) ಅಸ್ತಿತ್ವವನ್ನು ನಿರಾಕರಿಸಿದೆ.

ಅದು ಬೊಹ್ರಾ ಸಮುದಾಯ…

ಭಾರತದಲ್ಲಿ ಈ ಪದ್ದತಿಯನ್ನು ಬೊಹ್ರಾ ಎನ್ನುವ ಮುಸ್ಲಿಮ್‌ ಪಂಗಡವೊಂದು ಆಚರಿಸುತ್ತದೆ. ದಾವೂದಿ ಬೋಹ್ರಾ ಎಂದು ಕರೆಯಲಾಗುವ ಇದು ಶಿಯಾ ಇಸ್ಲಾಂನ ಇಸ್ಮಾಯಿಲಿ ಶಾಖೆಯೊಳಗಿನ ಧಾರ್ಮಿಕ ಪಂಗಡವಾಗಿದೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ, ಪಾಕಿಸ್ತಾನ, ಯೆಮೆನ್, ಪೂರ್ವ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದಲ್ಲಿ ವಾಸಿಸುತ್ತಿದ್ದಾರೆ. ಯುರೋಪ್, ಉತ್ತರ ಅಮೇರಿಕಾ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಾದ್ಯಂತ ಅವರ ಸಮುದಾಯ ಬೆಳವಣಿಗೆ ಹೊಂದುತ್ತಿದೆ. ಇವರ ಸಂಖ್ಯೆ ಭಾರತದಲ್ಲಿ ಸುಮಾರು ಜಗತ್ತಿನ ಇತರೆಡೆಗಳಲ್ಲಿ ಹರಿಡುವವರನ್ನು ಸೇರಿ ಸುಮಾರು 5 ಲಕ್ಷ ಬೊಹ್ರಾಗಳಿದ್ದಾರೆ ಎಂದು ವೆಬ್‌ ಸೈಟ್‌ ಒಂದು ಹೇಳುತ್ತದೆ. ಆದರೆ ದಿ ಪ್ರಿಂಟ್‌ ಮಾಡಿರುವ ವರದಿಯಲ್ಲಿ ಇವರ ಸಂಖ್ಯೆ ಸುಮಾರು 20 ಲಕ್ಷ ಎನ್ನಲಾಗಿದೆ.

ಸರಕಾರ ಆ ಕುರಿತು ತನ್ನ ಬಳಿ ದಾಖಲೆಗಳಿಲ್ಲವೆಂದು ಹೇಳುತ್ತದೆಯಾದರೂ ಹಿಂದೂಸ್ಥಾನ್‌ ಟೈಮ್ಸ್ ಡಾಟ್‌ ಕಾಮ್‌ ಈ ಪದ್ಧತಿ ಜೀವಂತವಿರುವ ಕುರಿತು ದೀರ್ಘವಾದ ಲೇಖನ ಮತ್ತು ಆ ಸಮುದಾಯದ ಹೆಣ್ಣುಮಕ್ಕಳ ಅಭಿಪ್ರಾಯಗಳನ್ನು ಹೊಂದಿರುವ ಡಾರ್ಕ್‌ ಸೀಕ್ರೆಟ್‌ ಎನ್ನುವ ಡಾಕ್ಯುಮೆಂಟರಿಯೊಂದನ್ನು ಸಹ ತನ್ನ ವೆಬ್‌ ಸೈಟಿನಲ್ಲಿ ಪ್ರಕಟಿಸಿದೆ.  ಡಾಕ್ಯುಮೆಂಟರಿಯಲ್ಲಿ ಆ ಹೆಣ್ಣುಮಕ್ಕಳು ಹಂಚಿಕೊಂಡಿರುವ ಅನುಭವಗಳು ಹೃದಯವಿದ್ರಾಯಕವಾಗಿವೆ. ಇದೊಂದು ವ್ಯಾಪಾರಿ ಸಮುದಾಯವಾಗಿದ್ದು ಆರ್ಥಿಕವಾಗಿ ಉತ್ತಮವಾಗಿದ್ದರೂ ಇಂತಹದ್ದೊಂದು ಹೀನಾಯ ಆಚರಣೆಯನ್ನು ಇಂತಹ ಕಾಲದಲ್ಲೂ ಜೀವಂತವಿರಿಸಿಕೊಂಡಿರುವುದು ನಿಜಕ್ಕೂ ದುರಂತ. ಈ ಆಚರಣೆಯಿಂದ ತಪ್ಪಿಸಿಕೊಂಡ ಕೆಲವು ಹೆಣ್ಣುಮಕ್ಕಳೂ ಈ ಕುರಿತು ಮಾತನಾಡಿದ್ದಾರೆ. ಇದೊಂದು ಈ ಕುರಿತು ಆಸಕ್ತಿಯಿರುವವರು ಇದೊಂದು ನೋಡಲೇಬೇಕಾದ ಸಾಕ್ಷ್ಯಚಿತ್ರವಾಗಿದೆ. ಈ ಕುರಿತು ಆಸಕ್ತಿಯಿರುವವರು ಡೆಸರ್ಟ್‌ ಫ್ಲವರ್‌ ಎನ್ನುವ ಇಂಗ್ಲಿಷ್‌ ಪುಸ್ತಕ ಅಥವಾ ಅದರ ಕನ್ನಡ ಅನುವಾದವಾದ ʼಮರುಭೂಮಿಯ ಹೂʼ (ಅನುವಾದ: ಜಗದೀಶ್‌ ಎನ್‌ ಕೊಪ್ಪ) ಪುಸ್ತಕಗಳನ್ನು ಓದಬಹುದು. ಈ ಪುಸ್ತಕಗಳು ಈ ಕ್ರೂರ ಆಚರಣೆಯ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಓಡಿ ಹೋಗಿ ತನ್ನ ಬದುಕು ಕಟ್ಟಿಕೊಂಡ ನಟಿ ವಾರಿಸ್‌ ಅವರ ಕತೆಯನ್ನು ಹೇಳುತ್ತವೆ. ಈ ಕುರಿತು ಬಿಸಿಸಿ “Nomad in Newyork” ಎನ್ನುವ ಸಾಕ್ಷ್ಯಚಿತ್ರವನ್ನೂ ತಯಾರಿಸಿದೆ.

ಕನ್ನಡದಲ್ಲಿ ಈ ಕುರಿತು ಲಭ್ಯವಿರುವ ಪುಸ್ತಕಗಳು

ಈ ಹೀನ ಆಚರಣೆಯ ಹಿಂದಿರುವುದು ಪುರುಷ ಪ್ರಾಧಾನ್ಯತೆಯ ಕರಿನೆರಳು…

ಹೌದು, ಈ ಆಚರಣೆಗೆ ಯಾವುದೇ ವೈದ್ಯಕೀಯ ಸಮರ್ಥನೆಗಳಾಗಲಿ, ಈ ಆಚರಣೆಯಿಂದ ಹೆಣ್ಣಿಗೆ ಪ್ರಯೋಜನಗಳಾಗಲಿ ಇಲ್ಲ ಎಂದು ವಿಶ್ವಸಂಸ್ಥೆ ಸ್ಪಷ್ಟವಾಗಿ ಹೇಳುತ್ತದೆ. ಇದು ಸಾಮಾನ್ಯವಾಗಿ ಸೋಂಕುಗಳು, ನೋವು ಮತ್ತು ರಕ್ತಸ್ರಾವದಂತಹ ತಕ್ಷಣದ ಆರೋಗ್ಯದ ಅಪಾಯಗಳಿಗೆ ಕಾರಣವಾಗುತ್ತದೆ. ದೀರ್ಘಾವಧಿಯಲ್ಲಿ, ಈ ಆಚರಣೆಗೆ ಒಳಗಾಗುವ ಮಹಿಳೆಯರ ಪಾಲಿಗೆ ಲೈಂಗಿಕತೆ ಎನ್ನುವುದು ಎಂದಿಗೂ ಸಂತೋಷದಾಯಕ ಚಟುವಟಿಕೆಯಾಗಿರುವುದಿಲ್ಲ ಎಂದು ಸಮುದಾಯದ ಮಹಿಳೆಯರು ಹೇಳುತ್ತಾರೆ. ಹಾಗೆ ನೋಡಿದರೆ ಖತ್ನಾ ಮಾಡಿಸಿಕೊಂಡ ಮಹಿಳೆಯರು ಮಿಲನದ ಸಮಯದಲ್ಲಿ ತೀವ್ರವಾದ ನೋವನ್ನು ಎದುರಿಸುತ್ತಾರೆ ಮತ್ತು ಲೈಂಗಿಕತೆಯ ಕುರಿತು ಭಯವನ್ನು ಹೊಂದಿರುತ್ತಾರೆ. ಹೆಣ್ಣು ಲೈಂಗಿಕತೆಯ ಉತ್ತುಂಗವನ್ನು ತಲುಪಬಾರದು ಮತ್ತು ಆಕೆ ಹೆಚ್ಚು ಸೆಕ್ಸ್‌ ಕುರಿತು ಯೋಚಿಸಬಾರದು ಎನ್ನುವುದು ಈ ಆಚರಣೆಯ ಹಿಂದಿನ ಉದ್ದೇಶ.

ಒಂದು ಹೆಣ್ಣು ಮಗುವಿನ ವಿರುದ್ಧ ಹೆಣ್ಣನ್ನೇ ಬಳಸುವ ವ್ಯವಸ್ಥೆ…

ಇಲ್ಲಿ ಇಡೀ ಪ್ರಕ್ರಿಯೆ ಕೇವಲ ಹೆಂಗಸರನ್ನು ಒಳಗೊಂಡಿದೆ. ಆದರೆ ಧಾರ್ಮಿಕವಾಗಿ ಪಳಗಿಸಲ್ಪಟ್ಟ ಹೆಂಗಸರಿಗೆ ಧರ್ಮ ಎನ್ನುವ ಸಾಂಸ್ಥಿಕ ಚೌಕಟ್ಟಿನ ಒಳಗೆ ತಮ್ಮದೇ ಆದ ನಿರ್ಧಾರವನ್ನು ಕೈಗೊಳ್ಳಲು ಇಲ್ಲಿನ ಪುರುಷಪ್ರಧಾನ ವ್ಯವಸ್ಥೆ ಬಿಡುವುದಿಲ್ಲ. ಸಮುದಾಯದ ಒಂದಿಷ್ಟು ಮಹಿಳೆಯರು ಇದರ ವಿರುದ್ಧ ತಿರುಗಿಬಿದ್ದಿದ್ದು ಈ ಕುರಿತು ಪಿಟಿಷನ್‌ ಒಂದನ್ನು ಆರಂಭಿಸಿದ್ದು ಸುಮಾರು ನಲವತ್ತು ಸಾವಿರ ಸಹಿ ಸಂಗ್ರಹ ಮಾಡಿದ್ದಾರೆ. ಜೊತೆಗೆ ಕೆಲವು ಪುರುಷರೂ ತಮ್ಮ ಹೆಣ್ಣು ಮಕ್ಕಳು ಇಂತಹದ್ದೊಂದು ಕ್ರೂರ ಪದ್ಧತಿಗೆ ಒಳಗಾಗುವುದರ ವಿರುದ್ಧ ಮಾತನಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದೇನೇ ಇದ್ದರೂ 2016 ಮತ್ತು 2017ರಲ್ಲಿ ಸಮುದಾಯದ 80 ಶೇಕಡಾದಷ್ಟು ಮಹಿಳೆಯರು ಈ ಪದ್ಧತಿಯಡಿ ಖತ್ನಾ ಮಾಡಿಸಿಕೊಂಡಿದ್ದಾರೆ ಎಂದು ಅದೇ ಪ್ರಿಂಟ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ. (ಹೆಚ್ಚಿನ ವಿವರಗಳಿಗೆ ಮೇಲಿನ ಪ್ರಿಂಟ್ ವರದಿಯ ಕೊಂಡಿಯನ್ನು ಗಮನಿಸಿ.) ಇದನ್ನು ತೊಡೆದು ಹಾಕುವ ಪ್ರಯತ್ನವಾಗಿ ಈ ಸಮುದಾಯದ ಹಿರಿಯ ಧಾರ್ಮಿಕ ಮುಖಂಡನನ್ನು ತೊಡಗಿಸಿಕೊಳ್ಳಲು ದಿ ಡಾರ್ಕ್‌ ಸೀಕ್ರೆಟ್‌ ಡಾಕ್ಯುಮೆಂಟರಿ ತಯಾರಿಸಿದ ತಂಡ ಪ್ರಯತ್ನಿಸಿತಾದರೂ ಅವರಿಗೆ ಕನಿಷ್ಟ ಆ ವ್ಯಕ್ತಿಯನ್ನು ತಲುಪಲೂ ಸಾಧ್ಯವಾಗಲಿಲ್ಲ.

ಈಗ ಈ ಹೆಣ್ಣು ಮಕ್ಕಳಿಗೆ ರಾಜ್ಯಗಳೇ ದಿಕ್ಕು…

ಕೇಂದ್ರ ಸರಕಾರ ಇಂತಹದ್ದೊಂದು ಆಚರಣೆ ನಮ್ಮಲ್ಲಿದೆಯೆಂದು ಒಪ್ಪಿಕೊಳ್ಳಲೂ ಸಿದ್ಧವಿಲ್ಲದ ಈ ಹೊತ್ತಿನಲ್ಲಿ ರಾಜ್ಯಗಳಷ್ಟೇ ಈ ನತದೃಷ್ಟ ಹೆಣ್ಣುಮಕ್ಕಳನ್ನು ಇಂತಹ ನರಕದಿಂದ ಪಾರುಮಾಡಬೇಕಿದೆ ಎನ್ನುತ್ತದೆ ದಿ ಪ್ರಿಂಟ್‌ ವರದಿ. ರಾಜ್ಯಗಳು ಈ ಕುರಿತು ಕಟ್ಟುನಿಟ್ಟಿನ ಕಾನೂನುಗಳನ್ನು ವಿಶ್ವಸಂಸ್ಥೆಯ ವರದಿಯಡಿ ತರಬೇಕೆಂದು ವರದಿಗಾರ್ತಿ ಹೇಳುತ್ತಾರೆ. ಇತ್ತೀಚೆಗೆ ಮೋದಿಯವರು ಆ ಸಮುದಾಯದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರನ್ನು ಹೊಗಳಿದ್ದಕ್ಕೂ ಸರಕಾರ ಇದನ್ನು ಒಪ್ಪಿಕೊಳ್ಳದಿರುವುದಕ್ಕೂ ಸಂಬಂಧವಿರಬಹುದೇ ಎನ್ನುವ ಅನುಮಾನವೂ ಇಲ್ಲಿ ಕಾಡುತ್ತದೆ.

ಬೊಹ್ರಾ ಸಮುದಾಯವೂ ಮೋದಿಯವರನ್ನು ಉತ್ತಮ ನಾಯಕನೆಂದು ಪರಿಗಣಿಸುತ್ತದೆ ಮತ್ತು ಅವರನ್ನು ತನ್ನ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಕರೆದಿತ್ತು. ಆಗ ಮೋದಿಯವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, “ಬೋಹ್ರಾ ಸಮುದಾಯದೊಂದಿಗಿನ ನನ್ನ ಸಂಬಂಧ ಹಳೆಯದು. ಬೋಹ್ರಾ ಸಮುದಾಯದ ಪ್ರೀತಿಯನ್ನು ಪಡೆದಿರುವುದು ನನ್ನ ಸೌಭಾಗ್ಯ. ಗುಜರಾತಿನಲ್ಲಿ ಬೋಹ್ರಾ ವ್ಯಾಪಾರಿಯನ್ನು ಕಾಣದಿರುವ ಹಳ್ಳಿಯೇ ಇಲ್ಲ. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಮುದಾಯ ನನಗೆ ಸಹಾಯ ಮಾಡಿದೆ. ನಿಮ್ಮ ಮೇಲಿನ ಪ್ರೀತಿಯೇ ಇಂದು ನನ್ನನ್ನು ಇಲ್ಲಿಗೆ ಕರೆತಂದಿದೆ” ಎಂದಿದ್ದರು. ಬಿಜೆಪಿಯಲ್ಲಿ ಇಂತಹ ಗೌರವ ಪಡೆದ ಏಕೈಕ ನಾಯಕನೆಂದರೆ ಅದು ಪ್ರಧಾನಿ ಮೋದಿ ಮಾತ್ರ.

ಇವರ ಮೂಲ ಗುಜರಾತ್‌…

ಮೋದಿಯವರಿಗೂ ಈ ಸಮುದಾಯಕ್ಕೂ ಇನ್ನೊಂದು ಸಂಬಂಧವಿದೆ. ಅದು ಈ ಸಮುದಾಯ ಕೂಡಾ ಮೋದಿಯವರ ತವರು ರಾಜ್ಯವಾದ ಗುಜರಾತಿಗೆ ಸೇರಿದ್ದು. ಈ ಸಮುದಾಯದ ಬಹುತೇಕರು ಗುಜರಾತಿ ಮಾತನಾಡುತ್ತಾರೆ. ಇತರ ಹಲವು ಗುಜರಾತಿಗಳಂತೆ ಇವರೂ ವ್ಯಾಪಾರೋಧ್ಯಮಗಳಲ್ಲಿ ಬಹಳ ಮುಂದಿದ್ದಾರೆ. ಮತ್ತು ಇವರ ವ್ಯವಹಾರದ ಕ್ಯಾಲೆಂಡರ್‌ ಕೂಡಾ ಅಲ್ಲಿನ ಇತರ ವ್ಯಾಪಾರಿಗಳಂತೆ ದೀಪಾವಳಿ ಆಚರಣೆಯೊಂದಿಗೆ ಆರಂಭಗೊಳ್ಳುತ್ತದೆ.

ಇನ್ನಾದರೂ ಬದಲಾಗಲಿ ಹೆಣ್ಣುಮಕ್ಕಳನ್ನು ಬಲಿಪಶುಗಳನ್ನಾಗಿಸುವ ಸಮುದಾಯಗಳ ಆಚರಣೆಗಳು

ಹೌದು ಇನ್ನಾದರೂ ನಮ್ಮ ಸಮಾಜದಲ್ಲಿನ ಹಲವು ಸಮುದಾಯಗಳು ಸಂಪ್ರದಾಯದ ಹೆಸರಿನಲ್ಲಿ ಆಚರಿಸಿಕೊಂಡು ಬಂದಿರುವ ಘಾತುಕ ಆಚರಣೆಗಳನ್ನು ಕೈಬಿಟ್ಟು ಅವಳನ್ನು ಕೂಡಾ ತಮ್ಮಂತೆಯೇ ಒಂದು ಜೀವಿ ಎಂದು ಪರಿಗಣಿಸುವಂತೆ ಆಗಬೇಕೆನ್ನುವುದು ಪೀಪಲ್‌ ಮೀಡಿಯಾ ಕಾಳಜಿ. ಈ ನಿಟ್ಟಿನಲ್ಲಿ ವಿದ್ಯಾವಂತ ಯುವ ಮನಸ್ಸುಗಳು ತಮ್ಮ ಸಮುದಾಯಗಳ ಹಿರಿತನವನ್ನು ವಹಿಸಿಕೊಂಡು ಬದಲಾವಣೆಗಳಿಗೆ ಮುಂದಾಗಬೇಕೆನ್ನುವುದು ಈ ಲೇಖನದ ಆಶಯ. ಬದಲಾವಣೆ ಎನ್ನುವುದು ಆ ಕ್ಷಣಕ್ಕೆ ಯಾತನಾದಾಯಕವಾದರೂ ಅದರ ಮುಂದಿನ ಫಲಿತಾಂಶಗಳು ಉತ್ತಮವಾಗಿರುತ್ತವೆ.

(ಮಾಹಿತಿ ಮೂಲ: ವಿವಿಧ ಜಾಲತಾಣಗಳು)

– ಶಂಕರ ಎನ್‌ ಕೆಂಚನೂರು

ಗುಜರಾತ್‌ ಚುನಾವಣೆ: ಆಮ್‌ ಆದ್ಮಿ ಪಾರ್ಟಿ ಪರ ಭಾಸ್ಕರ್‌ ರಾವ್‌ ಪ್ರಚಾರ
ಗುಜರಾತ್: ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ರವರು ಗುಜರಾತ್‌ ಚುನಾವಣೆಯಲ್ಲಿ ಪಕ್ಷದ ಪರ ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದು, ಸೂರತ್‌ ಜಿಲ್ಲೆಯ ಕತಾರ್‌ಗಾಮ್‌ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಗುಜರಾತ್‌ ಎಎಪಿ ರಾಜ್ಯಾಧ್ಯಕ್ಷ ಗೋಪಾಲ್‌ ಇಟಾಲಿಯಾ ಪರ ಭಾಸ್ಕರ್‌ ರಾವ್‌ ಮತಯಾಚನೆ ಮಾಡಿದರು.

ಪ್ರಚಾರದ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಭಾಸ್ಕರ್‌ ರಾವ್‌, ʼದೆಹಲಿ ಹಾಗೂ ಪಂಜಾಬ್‌ ನಂತರ ಇದೀಗ ಗುಜರಾತ್‌ನಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಕಳೆದ 27 ವರ್ಷಗಳಲ್ಲಿ ಬಿಜೆಪಿಯು ಗುಜರಾತ್‌ ರಾಜ್ಯವನ್ನು ಅಭಿವೃದ್ಧಿ ಪಡಿಸುವ ಬದಲು, ಇಲ್ಲಿನ ಸಣ್ಣಪುಟ್ಟ ಯೋಜನೆಗಳಿಗೆ ದೇಶಾದ್ಯಂತ ಸುಳ್ಳು ಪ್ರಚಾರ ಪಡೆಯುವುದಕ್ಕೆ ಆದ್ಯತೆ ನೀಡಿದೆ. ಗುಜರಾತ್‌ ಮಾಡೆಲ್‌ ಎಂಬುದು ಕಳಪೆ ಮಾಡೆಲ್‌ ಎಂಬುದು ಜನರಿಗೆ ಅರ್ಥವಾಗುತ್ತಿದ್ದು, ಗುಣಮಟ್ಟದ ಮೂಲಸೌಕರ್ಯಗಳಿಗಾಗಿ ಅವರು ಆಮ್‌ ಆದ್ಮಿ ಪಾರ್ಟಿಯನ್ನು ಬೆಂಬಲಿಸುತ್ತಿದ್ದಾರೆ. ಬಿಜೆಪಿಯ ಹಣಬಲ ಹಾಗೂ ತೋಳ್ಬಲದ ನಡುವೆಯೂ ಆಮ್‌ ಆದ್ಮಿ ಪಾರ್ಟಿಗೆ ಜನಬೆಂಬಲವು ವ್ಯಾಪಕವಾಗಿ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ವಿವಿಧ ಮಾಧ್ಯಮಗಳ ಇತ್ತೀಚಿನ ಸಮೀಕ್ಷೆಗಳು ಕೂಡ ಇದನ್ನು ದೃಢಪಡಿಸಿವೆʼ ಎಂದು ಹೇಳಿದರು.

ಈ ಸಂದರ್ಭದಲ್ಲಿ, ಆಮ್‌ ಆದ್ಮಿ ಪಾರ್ಟಿಯ ವಲಯ ಉಸ್ತುವಾರಿ ವಿಜಯ್‌ ಶಾಸ್ತ್ರಿಮಠ್‌ ಹಾಗೂ ಪಕ್ಷದ ಮುಖಂಡರಾದ ನಿತ್ಯಾನಂದ ಸಾಹುರವರು ಭಾಸ್ಕರ್‌ ರಾವ್‌ ಜೊತೆಗಿದ್ದರು.

ಗುಜರಾತ್ ಚುನಾವಣೆ: ನವೆಂಬರ್ 22ರಂದು ಚುನಾವಣೆ ಪ್ರಚಾರಕ್ಕೆ ರಾಹುಲ್‌ ಗಾಂಧಿ
ಅಹ್ಮದಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ವಿರಾಮದ ಸಮಯದಲ್ಲಿ ಗುಜರಾತ್ ಗೆ ಭೇಟಿ ನೀಡಲಿದ್ದು, ನವೆಂಬರ್ 22 ರಂದು ಗುಜರಾತ್‌ನಲ್ಲಿ ಚುನಾವಣೆಗೆ ಪ್ರಚಾರ ನಡೆಸಲಿದ್ದಾರೆ.

ಡಿಸೆಂಬರ್ 1 ಮತ್ತು 5 ರಂದು ಗುಜರಾತ್‌ನಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಈಗಾಗಲೇ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದರು, ಕಾಂಗ್ರೆಸ್‌ ಪಕ್ಷವು ಚುನಾವಣೆ ಕುರಿತು ಪ್ರಚಾರ ಮಾಡದ ಕಾರಣ, ಕಾಂಗ್ರೆಸ್‌ ಪಕ್ಷದ ಮಾಜಿ ಅಧ್ಯಕ್ಷರಾದ ರಾಹುಲ್‌ ಗಾಂಧಿಯವರು ಬಿಜೆಪಿ ಪಕ್ಷದವರಿಂದ ಟೀಕೆಗೆ ಒಳಗಾಗಿದ್ದರು.

ಹಿಮಾಚಲದಲ್ಲಿ ಈಗ ಚುನಾವಣೆಗಳು ಮುಗಿದಿರುವುದರಿಂದ ಕಾಂಗ್ರೆಸ್ ಗುಜರಾತ್ ಮೇಲೆ ಕೇಂದ್ರೀಕರಿಸಿದೆ. ಚುನಾವಣೆ ಪ್ರಯುಕ್ತ ಮುಂದಿನ ಕೆಲವು ವಾರಗಳಲ್ಲಿ ಪಕ್ಷದ ಪ್ರಮುಖ ನಾಯಕರ ಹಲವಾರು ಪ್ರಚಾರ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಗುಜರಾತ್ ಚುನಾವಣೆಗೆ ಕಾಂಗ್ರೆಸ್ ತನ್ನ ಆರನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಪಟ್ಟಿಯನ್ನು ಬಿಡುಗಡೆ ಮಾಡುವುದರೊಂದಿಗೆ, ಪಕ್ಷವು ಈಗ ರಾಜ್ಯದ 142 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ನವೆಂಬರ್ 4 ರಂದು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು, ಅದರಲ್ಲಿ 43 ಅಭ್ಯರ್ಥಿಗಳನ್ನು ಹೆಸರಿಸಲಾಗಿತ್ತು. ನವೆಂಬರ್ 10 ರಂದು 46 ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಪ್ರಕಟಿಸಿತು. ಶುಕ್ರವಾರ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಒಬ್ಬ ಅಭ್ಯರ್ಥಿಯು ಬದಲಾಗಿರುವುದು ಕಂಡುಬಂದಿದೆ.

ಈ ಮೂಲಕ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಗುಜರಾತ್‌ನಲ್ಲಿ ಬಿಜೆಪಿಯ 27 ವರ್ಷಗಳ ಆಡಳಿತವನ್ನು ಕೊನೆಗೊಳಿಸುವ ಪ್ರಯತ್ನದಲ್ಲಿವೆ.

ಗುಜರಾತ್ ಚುನಾವಣೆ: ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
ಗುಜರಾತ್‌ : ಮುಂದಿನ ತಿಂಗಳು ನಡೆಯಲಿರುವ ಎರಡು ಹಂತಗಳ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಹೊರಹಾಕಲು ಕಾಂಗ್ರೆಸ್‌ ಪಕ್ಷವು ಪ್ರಯತ್ನಿಸುತ್ತಿದ್ದು, ಗುಜರಾತ್ ವಿಧಾನಸಭಾ ಚುನಾವಣೆಗೆ ಒಂಬತ್ತು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಒಂಬತ್ತು ಅಭ್ಯರ್ಥಿಗಳ ಬಿಡುಗಡೆಯೊಂದಿಗೆ, ಪಕ್ಷವು ಇದುವರೆಗೆ 104 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ನವೆಂಬರ್ 4 ರಂದು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು, ಇದರಲ್ಲಿ 43 ಅಭ್ಯರ್ಥಿಗಳನ್ನು ಘೋಷಿಸಲಾಯಿತು. ನವೆಂಬರ್10 ರಂದು 46ಅಭ್ಯರ್ಥಿಗಳನ್ನು ಒಳಗೊಂಡ ಎರಡನೇ ಪಟ್ಟಿಯನ್ನು ಪ್ರಕಟಿಸಲಾಯಿತು. ಶುಕ್ರವಾರ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಪಕ್ಷದ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಸಹಿ ಮಾಡಿದ ಅಭ್ಯರ್ಥಿಗಳ ಇತ್ತೀಚಿನ ಮತ್ತು ನಾಲ್ಕನೇ ಪಟ್ಟಿಯಲ್ಲಿ, ದ್ವಾರಕಾದಿಂದ ಮಾಲುಭಾಯ್ ಕಂಡೋರಿಯಾ, ತಲಾಲಾದಿಂದ ಮನ್ಸಿನ್ಹ್ ದೊಡಿಯಾ, ಕೋಡಿನಾರ್ ಎಸ್ಸಿಯಿಂದ ಮಹೇಶ್ ಮಕ್ವಾನಾ, ಭಾವನಗರ ಗ್ರಾಮಾಂತರದಿಂದ ರೇವತ್ಸಿನ್ಹ್ ಗೋಹಿಲ್ ಮತ್ತು ಭಾವನಗರ ಪೂರ್ವದಿಂದ ಬಲದೇವ್ ಮಾಜಿಭಾಯ್ ಸೋಲಂಕಿ ಅವರನ್ನು ಕಣಕ್ಕಿಳಿಸಲಾಗಿದೆ.

ಬೊಟಾಡ್ ನಿಂದ ರಮೇಶ್ ಮೆರ್, ಜಂಬುಸರ್ ನಿಂದ ಸಂಜಯ್ ಸೋಲಂಕಿ, ಭರೂಚ್ ನಿಂದ ಜಯಕಾಂತ್ ಭಾಯ್ ಬಿ ಪಟೇಲ್ ಮತ್ತು ಧರ್ಮಪುರ ಎಸ್ಟಿಯಿಂದ ಕಿಶನ್ ಭಾಯ್ ವೆಸ್ತಾಭಾಯ್ ಪಟೇಲ್ ಈ ಪಟ್ಟಿಯಲ್ಲಿದ್ದಾರೆ.

ಮಮದ್ಭಾಯಿ ಜಂಗ್ ಜಾಟ್ (ಅಬ್ದಾಸಾ), ರಾಜೇಂದರ್ ಸಿಂಗ್ ಜಡೇಜಾ (ಮಾಂಡ್ವಿ), ಅರ್ಜನ್ ಭಾಯ್ ಭುಜಿಯಾ (ಭುಜ್), ನೌಶಾದ್ ಸೋಲಂಕಿ (ದಸಾದಾ – ಎಸ್ಸಿ), ಕಲ್ಪನಾ ಕರಮ್ಸಿಭಾಯ್ ಮಕ್ವಾನಾ (ಲಿಂಬ್ಡಿ) ಅವರು ಎರಡನೇ ಪಟ್ಟಿಯಲ್ಲಿದ್ದಾರೆ.

ಲಿಂಬಡಿಯ ಕಲ್ಪನಾ ಕರಮ್ಸಿಭಾಯ್ ಮಕ್ವಾನಾ, ದೇಡಿಯಾಪಾಡಾ-ಎಸ್ಟಿಯ ಜೆರ್ಮಾಬೆನ್ ಸುಖ್ಲಾಲ್ ವಾಸವ ಮತ್ತು ಕರಂಜ್ನ ಭಾರತಿ ಪ್ರಕಾಶ್ ಪಟೇಲ್ ಸೇರಿದಂತೆ ಒಟ್ಟು ಮೂವರು ಮಹಿಳಾ ನಾಯಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಡಿಸೆಂಬರ್ 1 ಮತ್ತು 5 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಮೊರ್ಬಿ ತೂಗು ಸೇತುವೆ ಕುಸಿತಕ್ಕೆ ಕಾರಣವಾಯಿತೇ ಅನರ್ಹ ಗುತ್ತಿಗೆದಾರ ಸಂಸ್ಥೆ?
ಮೊರ್ಬಿ: ಗುಜರಾತಿನ ಮೊರ್ಬಿಯಲ್ಲಿನ ತೂಗು ಸೇತುವೆಯ ದುರಸ್ತಿಯನ್ನು ಕೈಗೊಂಡ ಗುತ್ತಿಗೆದಾರರು ಸೇತುವೆ ಕೆಲಸಗಳನ್ನು ನಿರ್ವಹಿಸಲು ಅರ್ಹರಲ್ಲ ಎಂದು ಪ್ರಾಸಿಕ್ಯೂಷನ್ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದೆ.

ಫೋರೆನ್ಸಿಕ್ ವರದಿಯನ್ನು ಉಲ್ಲೇಖದಂತೆ, ಸೇತುವೆ ದುರಸ್ತಿ ಮಾಡುವ ವೇಳೆ, ಸೇತುವೆಯ ನೆಲಹಾಸನ್ನು ಬದಲಾಯಿಸಲಾಗಿದೆ. ಆದರೆ ಅದರ ಕೇಬಲ್ ಅನ್ನು ಬದಲಾಯಿಸಿಲ್ಲ. ಹೀಗಾಗಿ ಹಳೆಯ ಕೇಬಲ್‌ಗೆ ಬದಲಾದ ನೆಲಹಾಸಿನ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲದೆ ಕುಸಿದು ಬಿದ್ದಿದೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

ಸೇತುವೆ ಕುಸಿದು ಬಿದ್ದಿರುವ ಹಿನ್ನಲೆಯಲ್ಲಿ, ಒರೆವಾ ಗ್ರೂಪ್‌ನ ಇಬ್ಬರು ವ್ಯವಸ್ಥಾಪಕರು ಮತ್ತು ಸೇತುವೆಯನ್ನು ದುರಸ್ತಿ ಮಾಡಿದ ಇಬ್ಬರು ಉಪ ಗುತ್ತಿಗೆದಾರರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶನಿವಾರದವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಂ.ಜೆ.ಖಾನ್ ಅವರು ಭದ್ರತಾ ಸಿಬ್ಬಂದಿ ಮತ್ತು ಟಿಕೆಟ್ ಬುಕಿಂಗ್ ಕ್ಲರ್ಕ್‌ಗಳು ಸೇರಿದಂತೆ ಇತರ ಐವರು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ನಂತರ ಪೊಲೀಸರು ಸೋಮವಾರ ಒಂಬತ್ತು ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ನಾಲ್ವರು ಒರೆವಾ ಮ್ಯಾನೇಜರ್‌ಗಳಾದ ದೀಪಕ್ ಪರೇಖ್ ಮತ್ತು ದಿನೇಶ್ ದವೆ ಮತ್ತು ಒರೆವಾ ಗ್ರೂಪ್‌ನಿಂದ ನೇಮಕಗೊಂಡ ರಿಪೇರಿ ಗುತ್ತಿಗೆದಾರರಾದ ಪ್ರಕಾಶ್ ಪರ್ಮಾರ್ ಮತ್ತು ದೇವಾಂಗ್ ಪರ್ಮಾರ್ ಎಂದು ತಿಳಿದು ಬಂದಿದೆ.

ಫೋರೆನ್ಸಿಕ್ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಯನ್ನು ಉಲ್ಲೇಖಿಸಿ, ಸರ್ಕಾರಿ ಅಭಿಯೋಜಕ ಎಚ್.ಎಸ್. ಪಾಂಚಾಲ್ ಅವರು ಹೊಸ ನೆಲಹಾಸಿನ ತೂಕದ ಕಾರಣ ಸೇತುವೆಯ ಮುಖ್ಯ ಕೇಬಲ್ ತುಂಡಾಗಿದೆ ಎಂದು ಫೋರೆನ್ಸಿಕ್ ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಪಾಂಚಾಲ್‌ ಅವರು, ಎಫ್‌ಎಸ್‌ಎಲ್ ವರದಿ ಪ್ರಕಾರ, ಸೇತುವೆ ದುರಸ್ತಿ ಸಂದರ್ಭದಲ್ಲಿ ಸೇತುವೆಯ ಕೇಬಲ್‌ಗಳನ್ನು ಬದಲಾಯಿಸದೆ ಕೇವಲ ನೆಲಹಾಸನ್ನು ಮಾತ್ರ ಬದಲಾಯಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ನಾಲ್ಕು ಕಾರಣದಿಂದ ಸೇತುವೆಯ ತೂಕ ಹೆಚ್ಚಾಗಿದೆ- ನೆಲಹಾಸುವಿಗೆ ಲೇಯರ್ಡ್ ಅಲ್ಯೂಮಿನಿಯಂ ಶೀಟ್‌ಗಳನ್ನು ಬಳಸಿದ್ದು, ಆ ತೂಕದಿಂದಾಗಿ ಕೇಬಲ್ ತುಂಡಾಗಿದೆ ಎಂದು ತಿಳಿಸಿದರು.

ಈ ಹಿನ್ನಲೆಯಲ್ಲಿ ರಿಪೇರಿ ಗುತ್ತಿಗೆದಾರರಿಬ್ಬರೂ ಇಂತಹ ಕಾಮಗಾರಿ ನಡೆಸಲು ಅರ್ಹರಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಇದರ ಹೊರತಾಗಿಯೂ, ಈ ಗುತ್ತಿಗೆದಾರರಿಗೆ ಸೇತುವೆಯ ದುರಸ್ತಿ ಕಾರ್ಯವನ್ನು 2007 ರಲ್ಲಿ ಮತ್ತು ನಂತರ 2022 ರಲ್ಲಿ ನೀಡಲಾಯಿತು. ಆದ್ದರಿಂದ ಅವರನ್ನು ಆಯ್ಕೆ ಮಾಡಲು ಕಾರಣವೇನು ಮತ್ತು ಯಾರ ನಿದರ್ಶನದಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲು ಆರೋಪಿಗಳ ಕಸ್ಟಡಿ ಅಗತ್ಯವಿದೆ ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು.

ತೂಗು ಸೇತುವೆ ದುರಂತ: ನ್ಯಾಯಾಂಗ ತನಿಖೆ ವಿಚಾರಣೆಯನ್ನು ನವೆಂಬರ್‌ 14ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌
ಗುಜರಾತ್‌: ಗುಜರಾತ್‌ನ ಮೋರ್ಬಿ ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ, ವಕೀಲರೊಬ್ಬರು ಸೋಮವಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು, ಸುಪ್ರೀಂ ಕೋರ್ಟ್‌ ನವೆಂಬರ್‌ 14ಕ್ಕೆ ಮುಂದೂಡಿದೆ.

ಪಶ್ಚಿಮ ಗುಜರಾತ್‌ನ ಮೊರ್ಬಿಯಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆಯು ಅಕ್ಟೋಬರ್‌ 30 ಭಾನುವಾರದಂದು ಕುಸಿದಿತ್ತು. ಈ ದುರಂತದಲ್ಲಿ ಕನಿಷ್ಠ 47 ಮಕ್ಕಳು ಸೇರಿದಂತೆ, ಹಲವಾರು ಮಹಿಳೆಯರು ಮತ್ತು ವೃದ್ಧರು ಸೇರಿ ಒಟ್ಟು 135 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು ಎಂದು ಮೂಲಗಳಿಂದ ತಿಳಿದುಬಂದಿತ್ತು.

ಈ ಹಿನ್ನಲೆಯಲ್ಲಿ ಸೇತುವೆ ಕುಸಿತದ ಬಗ್ಗೆ ನ್ಯಾಯಾಂಗ ತನಿಖೆಯಾಗುವಂತೆ ಅರ್ಜಿ ಸಲ್ಲಿಸಲಾಗಿತ್ತು.

ಈ ಕುರಿತು ವಕೀಲರು ಸಲ್ಲಿಸದ ಮನವಿಯಲ್ಲಿ, ಪರಿಸರದ ಕಾರ್ಯಸಾಧ್ಯತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಳೆಯ ಮತ್ತು ಅಪಾಯಕಾರಿ ಸ್ಮಾರಕಗಳು ಮತ್ತು ಸೇತುವೆಗಳ ಸಮೀಕ್ಷೆ ನಡೆಸಲು ಸಮಿತಿಯನ್ನು ರಚಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡುವಂತೆ ಕೂರಲಾಗಿತ್ತು.

ಆದರೆ ಇಂದು ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಕೈಗೆತ್ತಿಕೊಂಡಿದ್ದು, ಅರ್ಜಿಯಲ್ಲಿನ ವಿಚಾರಣೆಯನ್ನು ನವೆಂಬರ್‌ 14ಕ್ಕೆ ನಡೆಸಲಾಗುವುದು ಎಂದು ತಿಳಿಸಿದೆ.

ಗುಜರಾತ್‌ ತೂಗು ಸೇತುವೆ ದುರಂತ: ಪ್ರತಿಪಕ್ಷಗಳ ಟೀಕೆಗೆ ಗುರಿಯಾದ ಪ್ರಧಾನಿ ಭೇಟಿ
ಮೊರ್ಬಿ, ಗುಜರಾತ್: ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬೃಹತ್‌ ಸೇತುವೆ ಕುಸಿತದ ದುರಂತದಲ್ಲಿ ಬದುಕುಳಿದವರ ಯೋಗಕ್ಷೇಮವನನ್ನು ವಿಚಾರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಸ್ಪತ್ರಗಳಿಗೆ ಭೇಟಿನೀಡಲಿರುವ ವಿಷಯ ತಿಳಿದು, ಗುಜರಾತ್‌ನ ಮೊರ್ಬಿಯ ಸಿವಿಲ್ ಆಸ್ಪತ್ರೆಯನ್ನು ರಾತ್ರಿಯಿಡಿ ಸ್ವಚ್ಚಗೊಳಿಸಿ, ಸುಣ್ಣ-ಬಣ್ಣ ಹಚ್ಚಿ ಅಲಂಕಿರಿಸಿರುವುದು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಕೇಬಲ್ ತೂಗು ಸೇತುವೆಯ ಭೀಕರ ಕುಸಿತದಲ್ಲಿ ಸತ್ತ 135 ಜನರಲ್ಲಿ, 47 ಮಕ್ಕಳು. 100 ಕ್ಕೂ ಹೆಚ್ಚು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಹಲವರು ಮೋರ್ಬಿ ಸಿವಿಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ನರೇಂದ್ರ ಮೋದಿಯವರು ಗಾಯಾಳುಗಳು ಚಿಕಿತ್ಸೆಪಡೆಯುತ್ತಿರುವ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದರು.

ವಿಷಯ ತಿಳಿದ ಎನ್‌ಡಿಟಿವಿ ವರದಿಗಾರರು, ರಾತ್ರಿ ವೇಳೆ ಆಸ್ಪತ್ರೆಗೆ ಭೇಟಿನೀಡಿದಾಗ, ಮೋದಿಯವರು ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಕಾರಣ, ಮಧ್ಯರಾತ್ರಿಯಲ್ಲೇ, ಆಸ್ಪತ್ರೆಯಲ್ಲಿ ಸ್ವಚ್ಚಗೊಳಿಸುವ ಕೆಲಸ, ಕೆಲವು ಗೋಡೆಗಳು ಮತ್ತು ಚಾವಣಿಯ ಭಾಗಗಳಿಗೆ ಹೊಸದಾಗಿ ಬಣ್ಣ ಬಳಿಯುವ ಕೆಲಸ ಕಂಡುಬಂದಿದೆ ಎಂದು ವರದಿ ತಿಳಿಸಿದೆ.

ಗುಜರಾತ್‌ನ ಮೊರ್ಬಿಯ ಸಿವಿಲ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ದರಸ್ತಿ ಕೆಲಸ ನಿರ್ವಹಿಸುತ್ತಿರುವ ದೃಶ್ಯ

ಸೇತುವೆ ದುರಂತದಲ್ಲಿ ಗಾಯಗೊಂಡ ಸುಮಾರು 13 ಮಂದಿ ದಾಖಲಾಗಿರುವ ಎರಡು ವಾರ್ಡ್‌ಗಳಲ್ಲಿ, ದುಸ್ಥಿತಿ ಹೊಂದಿರುವ ಬೆಡ್‌ಗಳನ್ನು ಸಹ ತೆಗೆದು, ಹೊಸ ಬೆಡ್‌ಗಳನ್ನು ಬದಲಾಹಿಸಿರುವ ದೃಶ್ಯಗಳನ್ನು ಎನ್‌ಡಿಟಿವಿ ಸೆರೆಹಿಡಿದಿದೆ.

ವರದಿ ತಿಳಿದ ಬಳಿಕ, ಈ ಸುದ್ದಿ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು (ಎಎಪಿ), ಬಿಜೆಪಿಯು ಪ್ರಧಾನಿಯವರ ʼಫೋಟೋಶೂಟ್‌ಗೆʼ ಈ ರೀತಿಯ ಅಭಿವೃದ್ಧಿ ಕೆಲಸದಲ್ಲಿ ನಿರತವಾಗಿದೆ ಎಂದು ಆರೋಪಿಸಿವೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ನಾಳೆ ಪ್ರಧಾನಿ ಮೋದಿ ಅವರು ಮೋರ್ಬಿಯ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮುನ್ನ ಆಸ್ಪತ್ರೆಯಲ್ಲಿ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಹೊಳೆಯುವ ಟೈಲ್ಸ್ ಅಳವಡಿಸಲಾಗುತ್ತಿದೆ. ಯಾಕೆಂದರೆ, ಪ್ರಧಾನಿ ಮೋದಿ ಅವರ ಚಿತ್ರದಲ್ಲಿ ಯಾವುದೇ ಕೊರತೆ ಇರಬಾರದು, ಅದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಟೀಕಿಸಿದೆ.

त्रासदी का इवेंट

कल PM मोदी मोरबी के सिविल अस्पताल जाएंगे। उससे पहले वहां रंगाई-पुताई का काम चल रहा है। चमचमाती टाइल्स लगाई जा रही हैं।

PM मोदी की तस्वीर में कोई कमी न रहे, इसका सारा प्रबंध हो रहा है।

इन्हें शर्म नहीं आती! इतने लोग मर गए और ये इवेंटबाजी में लगे हैं। pic.twitter.com/MHYAUsfaoC
— Congress (@INCIndia) October 31, 2022

ಆಮ್‌ ಆದ್ಮಿ ಪಕ್ಷವು ಕೂಡ ʼಮೋರ್ಬಿ ಸಿವಿಲ್ ಆಸ್ಪತ್ರೆಯಲ್ಲಿನ ದೃಶ್ಯಗಳ ಕುರಿತು ಟ್ವೀಟ್‌ ಮಾಡಿದ್ದು, ನಾಳೆ ಪ್ರಧಾನಿಯವರ ಫೋಟೋಶೂಟ್‌ನಲ್ಲಿ ಯಾವುದೇ ಲೋಪವಾಗದಂತೆ ದುರಸ್ತಿ ಕಾರ್ಯ ನಡೆಯುತ್ತಿದೆ. ಕಳೆದ 27 ವರ್ಷಗಳಲ್ಲಿ ಬಿಜೆಪಿ ಈ ಕೆಲಸ ಮಾಡಿದ್ದರೆ, ಮಧ್ಯರಾತ್ರಿಯಲ್ಲಿ ಆಸ್ಪತ್ರೆಯನ್ನು ಅಲಂಕರಿಸುವ ಅಗತ್ಯವಿರಲಿಲ್ಲ ಎಂದು ವ್ಯಂಗಿಸಿದೆ.

Morbi Civil Hospital का दृश्य…

कल प्रधानमंत्री के Photoshoot में कोई कमी ना रह जाए इसलिए अस्पताल की मरम्मत की जा रही है।

अगर भाजपा ने 27 वर्षों में काम किया होता तो आधी रात को अस्पताल को चमकाने की जरूरत न पड़ती।#BJPCheatsGujarat pic.twitter.com/h83iUmPzKA
— AAP (@AamAadmiParty) October 31, 2022

ಬಿಜೆಪಿ ಬೆಂಬಲಿತ ಅತ್ಯಾಚಾರಿಗಳ ಒಳ್ಳೆಯ ಗುಣ ಮತ್ತು ಅದರಾಚೆಗಿನ ಸತ್ಯಗಳು
2002 ರ ಗುಜರಾತ್ ಗಲಭೆಯಲ್ಲಿ ಗರ್ಭಿಣಿ ಹೆಣ್ಣು ಮಗಳಾಗಿದ್ದ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ಮತ್ತು ಆಕೆಯ ಇಡೀ ಕುಟುಂಬವನ್ನು ಕೊಂದ 11 ಮಂದಿ ಅಪರಾಧಿಗಳನ್ನು “ಸನ್ನಡತೆ” ಆಧಾರದಲ್ಲಿ ಗುಜರಾತ್ ಸರ್ಕಾರ ಬಿಡುಗಡೆ ಮಾಡಿತ್ತು. ವ್ಯಾಪಕ ಟೀಕೆ ಮತ್ತು ಕಾನೂನು ಸಮರಕ್ಕೆ ಕೈ ಇಟ್ಟ ನಂತರ ಅಪರಾಧಿಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ಬಗೆಗಿನ ಆತಂಕಕಾರಿ ವಿಚಾರ ಕೂಡಾ ಹೊರಬಿದ್ದಿತ್ತು.

ಆದರೆ ಅಪರಾಧಿಗಳ “ಸನ್ನಡತೆ”ಯ ಬಿಡುಗಡೆಗೂ ಮುನ್ನ ಪ್ರಕರಣ ವಿಚಾರಣೆ ಹಂತದಲ್ಲಿದ್ದಾಗ ಪೆರೋಲ್‌ನಲ್ಲಿರುವಾಗಲೇ ಅಪರಾಧಿಗಳು ಈ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಮತ್ತು ಕಿರುಕುಳ ನೀಡಿದ ದೂರುಗಳ ಬಗೆಗಿನ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇದು “ಸನ್ನಡತೆ”ಯ ಸಮರ್ಥನೆಗೆ ವಿರುದ್ಧವಾಗಿದೆ. ಈ ನಡುವೆ ಅಪರಾಧಿಗಳು ಶಿಕ್ಷೆ ಅನುಭವಿಸುತ್ತಿರುವಾಗ ಅವರು ಯಾವುದೇ ತಪ್ಪು ಎಸಗಿಲ್ಲ, ಜೊತೆಗೆ ಈ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಗುಜರಾತ್ ಸರ್ಕಾರ ಈಗಾಗಲೇ ಹೇಳಿಕೊಂಡಿತ್ತು.

ಆದರೆ 2017 ರಿಂದ 2021 ರ ನಡುವೆ, ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ವಿರುದ್ಧ ಪ್ರಕರಣದ ಸಾಕ್ಷಿಗಳು ದೂರುಗಳನ್ನು ನೀಡಿದ್ದು ಮತ್ತು ಈ ಬಗ್ಗೆ ಎಫ್‌ಐಆರ್‌ ಕೂಡಾ ದಾಖಲಿಸಿದ್ದು ಗುಜರಾತ್ ಪೊಲೀಸ್ ಇಲಾಖೆಯ ಕಡತಗಳಲ್ಲೇ ಇನ್ನೂ ಜೀವಂತವಾಗಿದೆ.

ಜುಲೈ 6, 2020 ರಂದು ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್ ಶಾ ಮತ್ತು ಮಿತೇಶ್‌ಭಾಯ್ ಭಟ್ ವಿರುದ್ಧ ಬಿಲ್ಕಿಸ್ ಬಾನೋ ಪ್ರಕರಣದ ಪ್ರಮುಖ ಸಾಕ್ಷಿಗಳಾದ ಪಿಂಟುಭಾಯ್ ದೂರು ನೀಡಿದ್ದರು. ಈ ಬಗ್ಗೆ ಐಪಿಸಿ ಸೆಕ್ಷನ್‌ 354 (ಹಲ್ಲೆ ಅಥವಾ ಕ್ರಿಮಿನಲ್‌ ಹಿನ್ನೆಲೆ), 504 (ಬೆದರಿಕೆ), 506 (2) (ಕೊಲೆ ಬೆದರಿಕೆ) ಮತ್ತು 114 (ಪ್ರಚೋದನೆ) ಅಡಿಯಲ್ಲಿ ದಾಹೋದ್‌ನ ರಾಧಿಕಪುರ ಪೊಲೀಸ್ ಠಾಣೆಯಲ್ಲಿ ಅಪರಾಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇಬ್ಬರು ಅಪರಾಧಿಗಳಾದ ರಾಧೇಶ್ಯಾಮ್, ಮಿಥೇಶ್ ಭಾಯ್ ಭಟ್ ಮತ್ತು ಮತ್ತೊಬ್ಬ ಆರೋಪಿ ಆಶಿಶ್ ಸೇರಿದಂತೆ ಮೂವರು ವ್ಯಕ್ತಿಗಳು, ಸಬೆರಾಬೆನ್ ಮತ್ತು ಆಕೆಯ ಮಗಳು ಅರ್ಫಾ ಮತ್ತು ಸಾಕ್ಷಿ ಪಿಂಟೂಭಾಯ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಈಗ ಬೆಳಕಿಗೆ ಬಂದ ಎಫ್‌ಐಆರ್ ಹೇಳುತ್ತದೆ. ಮತ್ತೊಬ್ಬ ಸಾಕ್ಷಿಯಾದ ಮನ್ಸೂರಿ ಅಬ್ದುಲ್ ರಜಾಕ್, ಅಬ್ದುಲ್ ಮಜೀದ್ ಅವರು ಜನವರಿ 1, 2021 ರಂದು ಸೈಲೇಶ್ ಚಿಮ್ಮನ್‌ಲಾಲ್ ಭಟ್ ವಿರುದ್ಧ ದಾಹೋದ್ ಪೊಲೀಸರಿಗೆ ದೂರು ಸಲ್ಲಿಸಿದರು. ಅವರು ಪೆರೋಲ್‌ನಲ್ಲಿ ಹೊರಬಂದ ಅಪರಾಧಿಯಿಂದ ಬೆದರಿಕೆ ಬಂದಿದೆ ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಸೈಲೇಶ್ ಚಿಮ್ಮನಲಾಲ್ ಭಟ್ ಕೂಡಾ ಬಿಲ್ಕೀಸ್ ಬಾನೋ ಪ್ರಕರಣದ ಪ್ರಮುಖ ಅಪರಾಧಿ.

ಈ ನಡುವೆ ಪೆರೋಲ್ ನಲ್ಲಿ ಇದ್ದ ಸಮಯದಲ್ಲೇ ಲಿಮ್ಖೇಡಾ ಶಾಸಕ ಸೈಲೇಶ್ ಭಾಯ್ ಬಾಭೋರ್ ಮತ್ತು ಸಂಸದ ಜಸ್ವಂತ್ ಸಿಂಗ್ ಬಾಭೋರ್ ಅವರು ಅಪರಾಧಿ ಸೈಲೇಶ್ ಚಿಮ್ಮನ್‌ಲಾಲ್ ಭಟ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದ ಮತ್ತು ಅವರನ್ನು ಸನ್ಮಾನಿಸಿದ ಬಗ್ಗೆಯೂ ದೂರಿನಲ್ಲಿ ದಾಖಲಾಗಿದೆ‌‌. ಇಬ್ಬರು ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿರುವ ಫೋಟೋವನ್ನು ದೂರಿನಲ್ಲಿ ಲಗತ್ತಿಸಲಾಗಿದೆ. ಆದರೆ ದೂರಿನಲ್ಲಿ ಬಿಜೆಪಿ ಜನಪ್ರತಿನಿಧಿಗಳು ಇದ್ದ ಕಾರಣಕ್ಕೋ ಏನೋ, ಈ ಬಗ್ಗೆ ಎಫ್ಐಆರ್ ದಾಖಲಾಗಿಲ್ಲ.

ಪ್ರಕರಣದ ಇತರ ಇಬ್ಬರು ಸಾಕ್ಷಿಗಳಾದ ಘಾಂಚಿ ಆದಂಭೈ ಇಸ್ಮಾಯಿಲ್‌ಭಾಯ್ ಮತ್ತು ಘಾಂಚಿ ಇಮ್ತಿಯಾಜ್‌ಭಾಯ್ ಯೂಸುಫ್‌ಭಾಯ್ ಅವರು ಅಪರಾಧಿಗಳಲ್ಲಿ ಒಬ್ಬರಾದ ಗೋವಿಂದ್ ನಾಯ್ ವಿರುದ್ಧ ಜುಲೈ 28, 2017 ರಂದು ದೂರು ದಾಖಲಿಸಿದ್ದಾರೆ. “ರಾಜಿ ಮಾಡಿಕೊಳ್ಳಲು ಒಪ್ಪದಿದ್ದರೆ ಆರೋಪಿಗಳು ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ” ಎಂದು ಅರ್ಜಿದಾರರು ಗುಜರಾತ್ ಪೊಲೀಸರಿಗೆ ದೂರು ದಾಖಲಿಸಿದ್ದರು. ಈ ದೂರು ಕೂಡಾ ಎಫ್‌ಐಆರ್ ಆಗಿ ಬದಲಾಗಲೇ ಇಲ್ಲ.

ಆಗಸ್ಟ್ 15 ರ ಸ್ವಾತಂತ್ರ್ಯ ದಿನದಂದು “ಉತ್ತಮ ನಡವಳಿಕೆ” ಅಡಿಯಲ್ಲಿ ಮೇಲೆ ಉಲ್ಲೇಖಿಸಿದ ಅಪರಾಧಿಗಳೂ ಸೇರಿದಂತೆ ಒಟ್ಟು 11 ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡಲಾಯಿತು. ಬಿಜೆಪಿ ಪಕ್ಷದ ಮುಖಂಡರು ಗುಜರಾತ್‌ನ ಜೈಲಿನ ಹೊರಗೆ ನಿಂತು ಅವರನ್ನು ವೀರರಂತೆ ಹೂಮಾಲೆ ಮತ್ತು ಸಿಹಿತಿಂಡಿಗಳೊಂದಿಗೆ ಸ್ವಾಗತಿಸಿದ್ದರು. ಅಪರಾಧಿಗಳನ್ನು ಏಕೆ ಬಿಡುಗಡೆ ಮಾಡಲಾಯಿತು ಎಂಬುದಕ್ಕೆ ಗುಜರಾತ್‌ ಸರ್ಕಾರ ಉತ್ತರವಾಗಿ ಸರಣಿ ತೀರ್ಪುಗಳನ್ನು ಉಲ್ಲೇಖಿಸಿದೆ.

ಆದರೆ ಗುಜರಾತ್ ಸರ್ಕಾರ ಸುಪ್ರೀಂಕೋರ್ಟ್ ಗೆ ಕೊಟ್ಟ “ಉತ್ತಮ ನಡವಳಿಕೆ”ಯ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ನಿನ್ನೆ ಟೀಕಿಸಿದೆ. “ತೀರ್ಪುಗಳ ಸರಣಿಯನ್ನು ಉಲ್ಲೇಖಿಸಿರುವ ಕೌಂಟರ್ ಅಫಿಡವಿಟ್ ಅನ್ನು ನಾನು ನೋಡಿಲ್ಲ. ಗುಜರಾತ್ ಸರ್ಕಾರದ ಈ ಅಭಿಪ್ರಾಯದಲ್ಲಿ ಹಲವಷ್ಟು ಲೋಪಗಳಿವೆ” ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ಅಪರಾಧಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅವರ ಉತ್ತಮ ನಡವಳಿಕೆಯನ್ನು ಉಲ್ಲೇಖಿಸಿದ್ದಾರೆ. “ಸರ್ಕಾರ ಮತ್ತು ಸಂಬಂಧಪಟ್ಟವರು ಈ ನಿರ್ಧಾರವನ್ನು ತೆಗೆದುಕೊಂಡಾಗ, ಇದು ಕಾನೂನಿನ ಪ್ರಕ್ರಿಯೆಯಾಗಿರುವುದರಿಂದ ನನಗೆ ಅದರಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಕರಣದ ಒಟ್ಟು 11 ಮಂದಿ ಅಪರಾಧಿಗಳಲ್ಲಿ 7 ಜನರ ವಿರುದ್ಧ ಆರೋಪ ಕೇಳಿ ಬಂದಿದೆ. ಅದರಲ್ಲಿ 5 ಮಂದಿಯ ಮೇಲೆ ಕೇಸು ದಾಖಲಾದರೆ, 3 ಜನರ ಮೇಲಷ್ಟೇ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಇಷ್ಟೂ ಜನ ಬಿಜೆಪಿ ಹಿನ್ನೆಲೆಯವರಾಗಿದ್ದು, ಅಪರಾಧ ನಡೆದ ನಂತರ ಬಿಜೆಪಿ ಪಕ್ಷದ ಚುನಾಯಿತ ಶಾಸಕರು, ಸಂಸದರ ಕಡೆಯಿಂದಲೇ ಸನ್ಮಾನಿತರಾದವರು ಎಂಬುದು ಗಮನಾರ್ಹ ಅಂಶ.

ದೂರು ದಾಖಲು ಮಾಡಲು ಮತ್ತು ಮುಂದಿನ ಪ್ರಕ್ರಿಯೆಯಲ್ಲಿ ಎಫ್ಐಆರ್ ದಾಖಲಾಗಲು ಈ ಶಾಸಕ ಮತ್ತು ಸಂಸದರು ಮುಖ್ಯವಾಗಿ ಅಡ್ಡಗಾಲು ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಷ್ಟಾದರೂ ಬಿಜೆಪಿ ಪಕ್ಷ ಇವರಿಗೆ “ಒಳ್ಳೆಯ ನಡತೆ” ಪ್ರಮಾಣ ಪತ್ರ ನೀಡಿದ್ದು ದುರಂತ. ಈ ಘಟನೆಯಿಂದ ಒಂದಂತೂ ಸ್ಪಷ್ಟ, ಅಪರಾಧಿಯೊಬ್ಬ ಅತ್ಯಾಚಾರ, ಕೊಲೆ, ಗುಂಪುಗಲಭೆಯಂತಹ ಎಂತಹ ಕ್ರಿಮಿನಲ್ ಪ್ರಕರಣದಲ್ಲಿ ಇದ್ದರೂ ಬಿಜೆಪಿ ಪಕ್ಷದ ಹಿನ್ನೆಲೆ ಇದ್ದರೆ ಇಂದಲ್ಲ ನಾಳೆ ಖಂಡಿತ ಎಲ್ಲಾ ಪ್ರಕರಣಗಳಿಂದ ಮುಕ್ತ ಆಗಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ಕೊಟ್ಟಂತಾಗುತ್ತದೆ.

ಸಧ್ಯ ಈ ಬಿಡುಗಡೆ ಪ್ರಕರಣಕ್ಕೆ ತಡೆ ಹಿಡಿಯಬೇಕು ಎಂದು ಸಲ್ಲಿಸಿರುವ ಅರ್ಜಿ ಈಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಟಿಎಂಸಿ ಸಂಸದೆ ಮೊಹುವಾ ಮೋಯಿತ್ರಾ ಸೇರಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆ ಅಪರಾಧಿಗಳ ವಿರುದ್ಧದ ದೂರು, ಎಫ್ಐಆರ್ ಕೂಡಾ ಈಗ ಬೆಳಕಿಗೆ ಬಂದಿರುವುದು, ಅಪರಾಧಿಗಳು ಮತ್ತೆ ಜೈಲು ಸೇರಬಹುದು ಎಂದೇ ಅಂದಾಜಿಸಲಾಗುತ್ತಿದೆ.

ಎಎಪಿ ಅಧಿಕಾರಕ್ಕೆ ಬಂದರೆ ಎಂಟು ನಗರಗಳಲ್ಲಿ ಪ್ರತಿ 4 ಕಿ. ಮೀ ಗೆ ಒಂದು ಶಾಲೆ: ಸಿಸೋಡಿಯಾ
ಅಹಮದಾಬಾದ್: ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೆ ಬಂದರೆ ಎಂಟು ನಗರಗಳಲ್ಲಿ ಪ್ರತಿ 4 ಕಿ.ಮೀಗೆ ಒಂದು ಸರ್ಕಾರಿ ಶಾಲೆ ನಿರ್ಮಿಸುವುದಾಗಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಗುಜರಾತ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ‘ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಿಬಿಐ 9 ತಾಸುಗಳ ಕಾಲ ನನ್ನನ್ನು ವಿಚಾರಣೆ ನಡೆಸಿದೆ. ನಾನು ಎಲ್ಲದಕ್ಕೂ ಸಿದ್ಧನಾಗಿದ್ದೇನೆ. ಹೀಗಾಗಿ ಜೈಲಿಗೆ ಹೋಗುವುದಕ್ಕೂ ನಾನು ಹೆದರುವುದಿಲ್ಲ ಆದರೆ, ಗುಜರಾತ್‌ನಲ್ಲಿ ಶಾಲೆಗಳ ನಿರ್ಮಾಣ ಮಾತ್ರ ನಿಲ್ಲುವುದಿಲ್ಲ’ ಎಂದು ಹೇಳಿದ್ದಾರೆ.

ಗುಜರಾತ್‌ನ ಜನರು ಈಗಾಗಲೇ ತಮ್ಮ ಮಕ್ಕಳಿಗಾಗಿ ಶಾಲೆಗಳನ್ನು ನಿರ್ಮಿಸಲು ತೀರ್ಮಾನ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಶಾಲೆಗಳನ್ನು ನಿರ್ಮಿಸುವ ಪಕ್ಷವನ್ನೇ ಅವರು ಆಯ್ಕೆ ಮಾಡಲಿದ್ದಾರೆ ಎಂದು ಸಿಸೋಡಿಯಾ ತಿಳಿಸಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇ.ಡಿ. ಹಾಗೂ ಸಿಬಿಐಯನ್ನು ದುರುಪಯೋಗ ಪಡಿಸಿಕೊಳ್ಳಬಹುದು. ಆದರೆ, ಶಾಲೆ ನಿರ್ಮಿಸುವವರನ್ನು ಅವರು ಜೈಲಿಗೆ ಹಾಕಲಾರರು ಎಂದು ಹೇಳಿದ್ದಾರೆ.

ಎಎಪಿ ತಂಡ ನಡೆಸಿದ ಸಮೀಕ್ಷೆಯ ಪ್ರಕಾರ, ಗುಜರಾತ್‌ನ ಒಟ್ಟು 48,000 ಸರ್ಕಾರಿ ಶಾಲೆಗಳಲ್ಲಿ 32,000 ಶಾಲೆಗಳು ಕೆಟ್ಟ ಸ್ಥಿತಿಯಲ್ಲಿವೆ ಎಂದು ತಿಳಿದುಬಂದಿದೆ. ಎಎಪಿ ಸರ್ಕಾರವು ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ, ಅಹಮದಾಬಾದ್, ಸೂರತ್, ವಡೋದರಾ, ಜಾಮ್‌ನಗರ, ರಾಜಕೋಟ, ಭಾವನಗರ, ಗಾಂಧಿನಗರ ಮತ್ತು ಜುನಾಗಢಗಳಲ್ಲಿ ಪ್ರತಿ 4 ಕಿ.ಮೀಗೆ ಒಂದು ಸರ್ಕಾರಿ ಶಾಲೆಯನ್ನು ನಿರ್ಮಿಸಲಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

‘ಅಧಿಕಾರಕ್ಕೆ ಬಂದ ಬಳಿಕ ಒಂದು ವರ್ಷದೊಳಗೆ, ಪ್ರತಿ 4 ಕಿ.ಮೀಗೆ ಒಂದು ಭವ್ಯವಾದ ಸರ್ಕಾರಿ ಶಾಲೆಯನ್ನು ನಿರ್ಮಿಸುತ್ತೇವೆ. ಆ ಶಾಲೆಗಳು ಖಾಸಗಿ ಸರ್ಕಾರಿ ಶಾಲೆಗಳು ಉತ್ತಮವಾಗಿರುತ್ತವೆ’ ಎಂದು ತಿಳಿಸಿದ್ದಾರೆ.